Tag: Kartarpur Corridor

  • ಭಾರತ- ಪಾಕಿಸ್ತಾನ ನಡುವಿನ ಕರ್ತಾರ್‌ಪುರ ಕಾರಿಡಾರ್ ಒಪ್ಪಂದ 5 ವರ್ಷ ವಿಸ್ತರಣೆ; ಒಪ್ಪಂದ ಯಾಕೆ?

    ಭಾರತ- ಪಾಕಿಸ್ತಾನ ನಡುವಿನ ಕರ್ತಾರ್‌ಪುರ ಕಾರಿಡಾರ್ ಒಪ್ಪಂದ 5 ವರ್ಷ ವಿಸ್ತರಣೆ; ಒಪ್ಪಂದ ಯಾಕೆ?

    ಭಾರತದಿಂದ ಪಾಕಿಸ್ತಾನದ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ತೆರಳುವ ಯಾತ್ರಿಕರಿಗೆ ಯಾವುದೇ ಅಡೆತಡೆಯಿಲ್ಲದ ಪ್ರಯಾಣ ಮಾಡಲು ಕರ್ತಾರ್‌ಪುರ ಕಾರಿಡಾರ್‌ನ ಒಪ್ಪಂದದ (Kartarpur Corrodor Agreement) ಮಾನ್ಯತೆಯನ್ನು ಐದು ವರ್ಷಗಳವರೆಗೆ ವಿಸ್ತರಿಸಲು ಭಾರತ (India) ಮತ್ತು ಪಾಕಿಸ್ತಾನ (Pakistan) ಒಪ್ಪಿಕೊಂಡಿವೆ. ಈ ಒಪ್ಪಂದದ ಮಾನ್ಯತೆ ವಿಸ್ತರಣೆಯಿಂದ ಪಾಕಿಸ್ತಾನದ ಪವಿತ್ರ ಗುರುದ್ವಾರಕ್ಕೆ (Gurudwar) ಭೇಟಿ ನೀಡಲು ಭಾರತದ ಯಾತ್ರಾರ್ಥಿಗಳಿಗೆ ಮತ್ತಷ್ಟು ಅನುಕೂಲವಾಗಲಿದೆ. ಹಾಗಿದ್ರೆ ಕರ್ತಾರ್‌ಪುರ ಒಪ್ಪಂದ ಏನು? ಗುರುದ್ವಾರಕ್ಕೆ ತೆರಳಲು ಈ ಒಪ್ಪಂದ ಏಕೆ ಬೇಕು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.

    ಏನಿದು ಕರ್ತಾರ್‌ಪುರ ಕಾರಿಡಾರ್‌ ಒಪ್ಪಂದ?
    ಗುರುದ್ವಾರ ದರ್ಬಾರ್ ಸಾಹಿಬ್ ಕರ್ತಾರ್‌ಪುರ ಸಿಖ್ಖರ ಅತ್ಯಂತ ಪೂಜ್ಯ ಸ್ಥಳಗಳಲ್ಲಿ ಒಂದಾಗಿದೆ. ಗುರುನಾನಕ್ ದೇವ್ 1521 ರಿಂದ 1539 ರವರೆಗೆ ತಮ್ಮ ಅಂತಿಮ ದಿನಗಳನ್ನು ಕರ್ತಾರ್‌ಪುರ ಸಾಹಿಬ್‌ನಲ್ಲಿ ಕಳೆದರು ಎಂದು ನಂಬಲಾಗಿದೆ. ಪಾಕ್‌ನ ಪಂಜಾಬ್‌ ಪ್ರಾಂತ್ಯದ ಶಾಕಾರ್‌ಗಢದಲ್ಲಿ ಕರ್ತಾರ್‌ಪುರ ಇದೆ. ಸಿಖ್‌ ಧರ್ಮವನ್ನು ಸಂಸ್ಥಾಪನೆ ಮಾಡಿದ ಗುರು ನಾನಕರು ಇಲ್ಲಿ 18 ವರ್ಷ ವಾಸಿಸಿದ್ದರು. ಹೀಗಾಗಿ ಈ ದೇಗುಲ ಸಿಖ್ಖರಿಗೆ ಅತ್ಯಂತ ಮಹತ್ವದ ಸ್ಥಳವಾಗಿದೆ.ಅಂತಾರಾಷ್ಟ್ರೀಯ ಗಡಿಯಿಂದ ಕೇವಲ 3 ಕಿ.ಮೀ ದೂರದಲ್ಲಿ ಈ ಸ್ಥಳವಿದೆ.

    ಸಿಖ್ ಸಮುದಾಯವು ಕಾರಿಡಾರ್‌ಗೆ ಪ್ರವೇಶವನ್ನು ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿದೆ. ದೇಗುಲ ಪ್ರವೇಶದ ವಿಷಯವು ಭಾರತ ಮತ್ತು ಪಾಕಿಸ್ತಾನದ ನಡುವೆ ಮೊದಲು 1998ರಲ್ಲಿ ಮತ್ತು ನಂತರ 2004 ರಲ್ಲಿ ಮತ್ತೆ ಚರ್ಚೆಯಾಯಿತು. 2008 ರಲ್ಲಿ, ಆಗಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕಾರಿಡಾರ್ ವಿಷಯವನ್ನು ಪ್ರಸ್ತಾಪಿಸಿತು. ಆದರೆ ರಾಜಕೀಯ ಉದ್ವಿಗ್ನತೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯಿಂದಾಗಿ ಯೋಜನೆಯು ಕಾರ್ಯರೂಪಕ್ಕೆ ಬರಲಿಲ್ಲ. ಹೀಗಾಗಿ ಭಾರತೀಯ ಭಕ್ತರು ಗುರುದ್ವಾರವನ್ನು ತಲುಪಲು ಲಾಹೋರ್‌ ಮುಖಾಂತರ ಹೋಗಬೇಕಾಗಿತ್ತು. ಗುರುದ್ವಾರ ಭಾರತ-ಪಾಕಿಸ್ತಾನ ಗಡಿಯಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿದ್ದರೂ 125 ಕಿ.ಮೀ. ಸುತ್ತಿಕೊಂಡು ಹೋಗಬೇಕಾಗಿತ್ತು.

    2018 ರ ನವೆಂಬರ್‌ನಲ್ಲಿ ಕರ್ತಾರ್‌ಪುರ ಕಾರಿಡಾರ್‌ನ ಅಭಿವೃದ್ಧಿಗೆ ಕೇಂದ್ರ ಕ್ಯಾಬಿನೆಟ್ ಅನುಮೋದನೆ ನೀಡಿತು. ಸಿಖ್ ಧರ್ಮದ ಸ್ಥಾಪಕ ಗುರುನಾನಕ್ ದೇವ್ ಅವರ 550ನೇ ಜನ್ಮದಿನವನ್ನು ಗುರುತಿಸಲು ಭಾರತ ಮತ್ತು ಪಾಕಿಸ್ತಾನದ ನಡುವಿನ ಕರ್ತಾರ್‌ಪುರ ಕಾರಿಡಾರ್ ಅನ್ನು ನವೆಂಬರ್ 9, 2019 ರಂದು ಉದ್ಘಾಟಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಕಾರಿಡಾರ್ ಅನ್ನು ಅನಾವರಣಗೊಳಿಸಿದರು ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಆಗಿನ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸೇರಿದಂತೆ 500 ಕ್ಕೂ ಹೆಚ್ಚು ಭಾರತೀಯ ಯಾತ್ರಾರ್ಥಿಗಳ ಮೊದಲ ಬ್ಯಾಚ್ ಅನ್ನು ಗುರುದ್ವಾರಕ್ಕೆ ಕಳುಹಿಸಲಾಯಿತು. ಆಗಿನ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಗಡಿಯಲ್ಲಿ ನಡೆದ ಸಮಾರಂಭದಲ್ಲಿ ಕರ್ತಾರ್‌ಪುರ ಕಾರಿಡಾರ್ ಅನ್ನು ಉದ್ಘಾಟಿಸಿ ಭಾರತೀಯ ಯಾತ್ರಾರ್ಥಿಗಳಿಗೆ ಪವಿತ್ರ ದೇಗುಲಕ್ಕೆ ಭೇಟಿ ನೀಡಲು ದಾರಿ ಮಾಡಿಕೊಟ್ಟರು.

    ಈ ಒಪ್ಪಂದವು ಕರ್ತಾರ್‌ಪುರ ಸಾಹಿಬ್ ಗುರುದ್ವಾರದಲ್ಲಿ ನಮನ ಸಲ್ಲಿಸಲು ಪಾಕಿಸ್ತಾನಕ್ಕೆ ಭಾರತೀಯ ಯಾತ್ರಾರ್ಥಿಗಳು ಮತ್ತು ಭಾರತದ ಸಾಗರೋತ್ತರ ನಾಗರಿಕ (OCI) ಕಾರ್ಡ್‌ದಾರರಿಗೆ ವೀಸಾ-ಮುಕ್ತ ಪ್ರಯಾಣವನ್ನು ಅನುಮತಿಸುತ್ತದೆ. ಕರ್ತಾರ್‌ಪುರ ಸಾಹಿಬ್ ಕಾರಿಡಾರ್ ಮೂಲಕ ಸುಮಾರು 5,000 ಪ್ರವಾಸಿಗರು ಪವಿತ್ರ ದೇಗುಲಕ್ಕೆ ಭೇಟಿ ನೀಡಬಹುದು. ಭಾರತ ಮತ್ತು ಪಾಕಿಸ್ತಾನದ ಅಧಿಕಾರಿಗಳು ಉಭಯ ದೇಶಗಳ ನಡುವಿನ ಅಂತಾರಾಷ್ಟ್ರೀಯ ಗಡಿಯಾದ ಝೀರೋ ಪಾಯಿಂಟ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದರು.

    ಸಿಖ್ಬರು ಪಾಕಿಸ್ತಾನದಲ್ಲಿರುವ ದರ್ಬಾರ್‌ ಸಾಹಿಬ್‌ ಗುರುದ್ವಾರಕ್ಕೆ ತೆರಳಲು ಅನುಕೂಲ ಕಲ್ಪಿಸುವ ಕರ್ತಾರ್‌ಪುರ ಕಾರಿಡಾರ್‌ ನಿರ್ಮಾಣಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಪಂಜಾಬ್‌ ಮುಖ್ಯ ಮಂತ್ರಿ ಅಮರಿಂದರ್‌ ಸಿಂಗ್‌ ಶಂಕುಸ್ಥಾಪನೆ ಮಾಡಿದ್ದಾರೆ.

    ಕರ್ತಾರ್‌ಪುರ ಸಾಹಿಬ್ ಕಾರಿಡಾರ್‌ನ ಒಪ್ಪಂದದ ಮಾನ್ಯತೆಯನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಲು ರಾಜತಾಂತ್ರಿಕ ಮಾರ್ಗಗಳ ಮೂಲಕ ಭಾರತ ಮತ್ತು ಪಾಕಿಸ್ತಾನದ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಅಲ್ಲದೇ ಗುರುದ್ವಾರಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ಭಾರತೀಯ ಯಾತ್ರಾರ್ಥಿಗಳ ಮೇಲೆ ವಿಧಿಸುವ 20 ಅಮೆರಿಕನ್ ಡಾಲರ್ ಸೇವಾ ಶುಲ್ಕವನ್ನು ಪಾಕಿಸ್ತಾನ ರದ್ದು ಮಾಡುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮನವಿ ಮಾಡಿದೆ.

    ಪ್ರವಾಹದಿಂದ ನಾಶವಾದ ನಂತರ ಗುರುದ್ವಾರ ದರ್ಬಾರ್ ಸಾಹಿಬ್ ಕರ್ತಾರ್‌ಪುರ ದೇಗುಲವನ್ನು 1925ರಲ್ಲಿ ಮರು ನಿರ್ಮಿಸಲಾಯಿತು. ಇದನ್ನು ಪಟಿಯಾಲದ ಮಹಾರಾಜ ಮತ್ತು ಬಿಜೆಪಿ ನಾಯಕ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಅಜ್ಜ ಭೂಪಿಂದರ್ ಸಿಂಗ್ ನಿರ್ಮಿಸಿದ್ದಾರೆ.

    ಭಾರತ ಸರ್ಕಾರದ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ ಕರ್ತಾರ್‌ಪುರ ಸಾಹಿಬ್ ಕಾರಿಡಾರ್ ಮೂಲಕ ಭಾರತದಿಂದ 1.92 ಲಕ್ಷ ಭಕ್ತರು ಪಾಕಿಸ್ತಾನದ ಗುರುದ್ವಾರಕ್ಕೆ ಭೇಟಿ ನೀಡಿದ್ದಾರೆ. 2021ರಲ್ಲಿ ಭಾರತದಿಂದ ಒಟ್ಟು 10, 025 ಯಾತ್ರಿಕರು ಕರ್ತಾರ್ ಪುರ ಕಾರಿಡಾರ್ ಮೂಲಕ ಗುರದ್ವಾರಕ್ಕೆ ತೆರಳಿದ್ದರೆ, 2022 ರಲ್ಲಿ 86, 097 ಮತ್ತು 2023ರಲ್ಲಿ 96,555 ಯಾತ್ರಿಕರು ತೆರಳಿದ್ದಾರೆ.. ಕೋವಿಡ್ ಸಾಂಕ್ರಾಮಿಕ ಅವಧಿಯಲ್ಲಿ ಮುಚ್ಚಲಾಗಿದ್ದ ಕಾರಿಡಾರ್ ಒಂದೂವರೆ ವರ್ಷಗಳ ನಂತರ ನವೆಂಬರ್ 2021ರಲ್ಲಿ ಮತ್ತೆ ಕಾರ್ಯಾರಂಭ ಮಾಡಿತು.

  • 74 ವರ್ಷಗಳ ಬಳಿಕ ಮತ್ತೆ ಒಂದಾದ ಸಹೋದರರು – ಭಾವನಾತ್ಮಕ ವೀಡಿಯೋ ವೈರಲ್

    74 ವರ್ಷಗಳ ಬಳಿಕ ಮತ್ತೆ ಒಂದಾದ ಸಹೋದರರು – ಭಾವನಾತ್ಮಕ ವೀಡಿಯೋ ವೈರಲ್

    ಇಸ್ಲಾಮಾಬಾದ್: ಭಾರತ ಹಾಗೂ ಪಾಕಿಸ್ತಾನ ವಿಭಜನೆ ವೇಳೆ ದೂರ ಆಗಿದ್ದ ಸಹೋದರರು ಮತ್ತೆ 74 ವರ್ಷಗಳ ಬಳಿಕ ಒಂದಾದ ಭಾವನಾತ್ಮಕವಾದ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    1947ರಲ್ಲಿ ಭಾರತ ಹಾಗೂ ಪಾಕಿಸ್ತಾನ ವಿಭಜನೆ ಸಂದರ್ಭದಲ್ಲಿ ಮೊಹಮ್ಮದ್ ಸಿದ್ದಿಕ್ ಮತ್ತು ಅವರ ಹಿರಿಯ ಸಹೋದರ ಹಬೀಬ್ ಬೇರೆ ಆಗಿದ್ದರು. ಈ ವೇಳೆ ಇನ್ನೂ ಮಗುವಾಗಿದ್ದ ಮೊಹಮ್ಮದ್ ಸಿದ್ದಿಕ್ ಪಾಕಿಸ್ತಾನದಲ್ಲಿಯೇ ಉಳಿದುಕೊಂಡರು. ಆದರೆ ಹಬೀಬ್ ಅವರು ಭಾರತದಲ್ಲಿಯೇ ವಾಸಿಸುತ್ತಾ ಬೆಳೆದರು. ಇದನ್ನೂ ಓದಿ: ಕಾಂಗ್ರೆಸ್ ದೇಶದ ಕ್ಷಮೆ ಕೇಳಬೇಕು: ಯೋಗಿ ಆದಿತ್ಯನಾಥ್

    ಎರಡು ದೇಶಗಳ ಮಧ್ಯೆ ಹಂಚಿ ಹೋಗಿದ್ದ ಈ ಇಬ್ಬರು ಸಹೋದರರು ಪಾಕಿಸ್ತಾನದ ಗುರುದ್ವಾರ ದರ್ಬಾರ್ ಸಾಹಿಬ್‍ನಿಂದ ಭಾರತಕ್ಕೆ ಸಂಪರ್ಕ ಕಲ್ಪಿಸುವ ಕರ್ತಾರ್‌ಪುರ ಕಾರಿಡಾರ್‌ ನಲ್ಲಿ ಮತ್ತೆ ಒಂದಾಗಿದ್ದಾರೆ. 74 ವರ್ಷಗಳ ಬಳಿ ಒಬ್ಬರನ್ನೊಬ್ಬರು ನೋಡಿದ ಸಹೋದರರು ಬಿಗಿದಪ್ಪಿಕೊಂಡು ಆನಂದದಿಂದ ಕಣ್ಣೀರು ಸುರಿಸಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ನಾನು ಖುಷಿಯಾಗಿದ್ದೇನೆ, ಅವರಿಗೆ ದೇವರು ಒಳ್ಳೆಯದು ಮಾಡಲಿ: ಸೈನಾ ನೆಹ್ವಾಲ್

    ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ಹೃದಯಸ್ಪರ್ಶಿ ವೀಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ನಾಳೆಯಿಂದ ಕರ್ತಾರ್‌ಪುರ ಕಾರಿಡಾರ್‌ ಪುನಾರಂಭ: ಅಮಿತ್ ಶಾ

    ನಾಳೆಯಿಂದ ಕರ್ತಾರ್‌ಪುರ ಕಾರಿಡಾರ್‌ ಪುನಾರಂಭ: ಅಮಿತ್ ಶಾ

    ನವದೆಹಲಿ: ಕರ್ತಾರ್‌ಪುರ ಕಾರಿಡಾರ್‌ ಅನ್ನು ಬುಧವಾರದಿಂದ ಮತ್ತೆ ತೆರೆಯಲಾಗುವುದಾಗಿ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

    ಈ ಕುರಿತಂತೆ ಅಮಿತ್ ಶಾ ಅವರು, ತಮ್ಮ ಟ್ವಿಟ್ಟರ್‌ನಲ್ಲಿ, ಸಾಕಷ್ಟು ಮಂದಿ ಸಿಖ್ ಯಾತ್ರಾರ್ಥಿಗಳಿಗೆ ಅನುಕೂಲವಾಗಲೆಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ನಾಳೆ ಅಂದರೆ ನವೆಂಬರ್ 17ರಿಂದ ಕರ್ತಾರ್‌ಪುರ ಸಾಹಿಬ್ ಕಾರಿಡಾರ್ ಅನ್ನು ಪುನಃ ತೆರೆಯಲು ನಿರ್ಧರಿಸಿದೆ. ಈ ನಿರ್ಧಾರವು ಶ್ರೀ ಗುರುನಾನಕ್ ದೇವ್ ಜಿ ಮತ್ತು ನಮ್ಮ ಸಿಖ್ ರಾಷ್ಟ್ರದ ಬಗ್ಗೆ ಮೋದಿ ಸರ್ಕಾರ ಹೊಂದಿರುವ ಅಪಾರ ಭಕ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಪ್ರಧಾನಿ, ಗೃಹ ಸಚಿವರ ಕಾರ್ಯಕ್ರಮಕ್ಕೆ ಸಾರ್ವಜನಿಕರ ಹಣ: ಪ್ರಿಯಾಂಕಾ ಗಾಂಧಿ

    ಶುಕ್ರವಾರ ಸಿಖ್ ಧರ್ಮಗುರು ಗುರುನಾನಕ್ ಜಯಂತಿಗೂ ಮುನ್ನವೇ ಸರ್ಕಾರದಿಂದ ಈ ಪ್ರಕಟನೆ ಹೊರಬಿದ್ದಿದೆ. ಕೋವಿಡ್-19 ಹಿನ್ನೆಲೆ ಪಾಕಿಸ್ತಾನದ ಕರ್ತಾರ್‌ಪುರ ಕಾರಿಡಾರ್‌ ಅನ್ನು 2020ರ ಮಾರ್ಚ್‍ನಲ್ಲಿ ಮುಚ್ಚಲಾಯಿತು. ಆದರೆ 11 ನಾಯಕರನ್ನು ಒಳಗೊಂಡ ಪಂಜಾಬ್ ಬಿಜೆಪಿ ನಾಯಕರ ನಿಯೋಗವು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಗುರುಪೂರ್ಣಿಮೆಗೂ ಮುನ್ನ ಕರ್ತಾರ್‌ಪುರ ಕಾರಿಡಾರ್‌ ಅನ್ನು ಪುರ್ನ ತೆರೆಯುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆ ಇದೀಗ ಈ ನಿರ್ಧಾರ ಹೊರಬಿದ್ದಿದೆ. ಅಟ್ಟಾರಿ-ವಾಘಾ ಗಡಿಯ ಮೂಲಕ ಕರ್ತಾರ್‌ಪುರ ಗುರುದ್ವಾರಕ್ಕೆ ತೆರಳಲು ಸಿಖ್ ಯಾತ್ರಿಗಳಿಗೆ ಈಗಾಗಲೇ ಅವಕಾಶ ಕಲ್ಪಿಸಲಾಗಿದೆ.

    ಕರ್ತಾರ್‌ಪುರ ಸಾಹಿಬ್ ಕಾರಿಡಾರ್ ಅನ್ನು 2019ರ ನವೆಂಬರ್ 19ರಂದು ಉದ್ಘಾಟಿಸಲಾಯಿತು. ಈ ಬಾರಿ ಅದರ ಎರಡನೇ ವಾರ್ಷಿಕೋತ್ಸವವಾಗಿದ್ದು, ಗುರುನಾನಕ್ ದೇವ್ ಅವರ 550 ನೇ ಜನ್ಮ ವಾರ್ಷಿಕೋತ್ಸವಕ್ಕೂ ಮುನ್ನ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಕಾರಿಡಾರ್ ಅನ್ನು ಉದ್ಘಾಟಿಸಿದ್ದಾರೆ.

    ಕರ್ತಾರ್‌ಪುರ ಗ್ರಾಮವು ರವಿ ನದಿಯ ಪಶ್ಚಿಮ ದಂಡೆಯಲ್ಲಿದೆ. ಇಲ್ಲಿ ಶ್ರೀ ಗುರುನಾನಕ್ ದೇವ್ ತಮ್ಮ ಜೀವನದ ಕೊನೆಯ 18 ವರ್ಷಗಳನ್ನು ಕಳೆದರು. ಗುರುದ್ವಾರ ಶ್ರೀ ಕರ್ತಾರ್ಪುರ್ ಸಾಹಿಬ್ ಪಾಕಿಸ್ತಾನದ ನರೋವಾಲ್ ಜಿಲ್ಲೆಯಲ್ಲಿ ಸುಮಾರು 4.5 ಕಿಮೀ ದೂರದಲ್ಲಿದೆ. ಇದನ್ನೂ ಓದಿ:  ದಲಿತರೊಂದಿಗೆ ಚಹಾ ಸೇವಿಸಿ, ಬಿಜೆಪಿಗೆ ಮತ ಹಾಕುವಂತೆ ಮನವೊಲಿಸಿ: ಸ್ವತಂತ್ರ ದೇವ್

  • ಆನಂದಭಾಷ್ಪ ಹರಿಸಿ ಸಿಖ್ಖರನ್ನು ಸ್ವಾಗತಿಸಿದ ಪಾಕ್ ಬಸ್ ಚಾಲಕ – ವಿಡಿಯೋ ನೋಡಿ

    ಆನಂದಭಾಷ್ಪ ಹರಿಸಿ ಸಿಖ್ಖರನ್ನು ಸ್ವಾಗತಿಸಿದ ಪಾಕ್ ಬಸ್ ಚಾಲಕ – ವಿಡಿಯೋ ನೋಡಿ

    – ಕರ್ತಾರ್‍ಪುರ ಕಾರಿಡಾರ್ ನಲ್ಲೊಂದು ಮನಕಲುಕುವ ಘಟನೆ

    ನವದೆಹಲಿ: ಭಾರತೀಯ ಪತ್ರಕರ್ತರೊಬ್ಬರು ಪಾಕಿಸ್ತಾನದ ಶೆಟಲ್ ಬಸ್ ಚಾಲಕನೊಂದಿಗೆ ನಡೆಸಿರುವ ಸಂಭಾಷಣೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಕರ್ತಾರ್‍ಪುರ ಕಾರಿಡಾರ್ ಪ್ರಾರಂಭವಾಗಿ ಕೆಲವೇ ದಿನಗಳಲ್ಲಿ ಭಾರತೀಯ ಹಾಗೂ ಪಾಕಿಸ್ತಾನದ ಡ್ರೈವರ್ ಮಧ್ಯೆ ನಡೆದ ಈ ಸಂಭಾಷಣೆ ಇದೀಗ ನೆಟ್ಟಿಗರ ಮನ ಗೆದ್ದಿದೆ.

    ಗುರುನಾನಕ್ ಅವರ 550ನೇ ಜನ್ಮ ದಿನಾಚರಣೆಯನ್ನು ಸಿಖ್ ಧರ್ಮದ ಸಂಸ್ಥಾಪಕರ ಅಂತಿಮ ವಿಶ್ರಾಂತಿ ಸ್ಥಳವಾದ ಗುರುದ್ವಾರ ದರ್ಬಾರ್ ಸಾಹಿಬ್‍ನಲ್ಲಿ ಆಚರಿಸಲಾಗುತ್ತಿದೆ. ಭಾರತೀಯ ಯಾತ್ರಿಕರ ಮೊದಲ ಬ್ಯಾಚ್ ಕರ್ತಾರ್‍ಪುರ ಕಾರಿಡಾರ್ ಮೂಲಕ ಪಾಕಿಸ್ತಾನಕ್ಕೆ ಈಗಾಗಲೇ ಪ್ರವೇಶಿಸಿದೆ.

    ನವೆಂಬರ್ 9ರಂದು ಈ ಕಾರಿಡಾರ್ ತೆರೆಯಲಾಗಿದ್ದು, ಪಂಜಾಬ್‍ನ ಗುರುದಾಸ್‍ಪುರದ ಡೇರಾ ಬಾಬಾ ನಾನಕ್ ದೇವಾಲಯವನ್ನು ಪಾಕಿಸ್ತಾನದ ಪಂಜಾಬ್ ಜಿಲ್ಲೆಯ ಕರ್ತಾರ್‍ಪುರದ ಗುರುದ್ವಾರ ದರ್ಬಾರ್ ಸಾಹಿಬ್‍ಗೆ ಜೋಡಿಸಲಾಗಿದೆ. ಈ ಕಾರಿಡಾರ್ ಎರಡು ನೆರೆಯ ರಾಷ್ಟ್ರಗಳ ನಡುವೆ ರಾಜತಾಂತ್ರಿಕತೆಯ ಹೊಸ ಅಧ್ಯಾಯವನ್ನು ತೆರೆದಂತಾಗಿದೆ.

    ಇದರ ಮಧ್ಯೆ ಒಂದು ಅಪರೂಪದ ಘಟನೆ ನಡೆದಿದೆ. ಇಂಡೋ-ಪಾಕ್ ಗಡಿಯಿಂದ ಗುರುದ್ವಾರ ದರ್ಬಾರ್ ಸಾಹಿಬ್‍ಗೆ ಭಾರತೀಯ ಭಕ್ತರನ್ನು ಕರೆದೊಯ್ಯಲು ಶೆಟಲ್ ವಾಹನದ ವ್ಯವಸ್ಥೆಯನ್ನು ಮಾಡಲಾಗಿದೆ. ಈ ವಾಹನ ಓಡಿಸುವ ಜವಾಬ್ದಾರಿಯನ್ನು ಚಾಲಕ ಸದಮ್ ಹುಸೇನ್‍ಗೆ ನೀಡಲಾಗಿದೆ. ಈ ಚಾಲಕನನ್ನು ಭಾರತೀಯ ಪತ್ರಕರ್ತ ರವೀಂದರ್ ಸಿಂಗ್ ರಾಬಿನ್ ಮುಕ್ತವಾಗಿ ಮಾತನಾಡಿಸಿದ್ದಾರೆ. ಕಾರಿಡಾರ್ ತೆರೆದಿರುವುದು ಸಂತೋಷವನ್ನು ತಂದಿದೆ. ಇದೊಂದು ಅದ್ಭುತವಾಗಿದ್ದು, ಭಾರತೀಯ ಯಾತ್ರಿಕರು ತಮ್ಮ ಧಾರ್ಮಿಕ ಗುರುಗಳಿಗೆ ಗೌರವ ನೆಪದಲ್ಲಾದರೂ ಪಾಕಿಸ್ತಾನಕ್ಕೆ ಬರುತ್ತಿದ್ದಾರೆ. ಈ ಘಳಿಗೆಯಿಂದ ನೀವು ನನ್ನಷ್ಟು ಸಂತೋಷವಾಗಿದ್ದೀರಿ ಎಂದು ನಾನು ಭಾವಿಸುತ್ತೇನೆ ಎಂದು ಮನದಾಳವನ್ನು ಹಂಚಿಕೊಂಡಿದ್ದಾನೆ.

    ಈ ಬೆಳವಣಿಗೆಯಿಂದಾಗಿ ನಿನಗೆ ಸಂತೋಷವಾಗಿದೆಯೇ ಎಂದು ಪತ್ರಕರ್ತ ರಾಬಿನ್ ಕೇಳಿದಾಗ ಹುಸೇನ್ ಉತ್ತರಿಸಿ, ನನ್ನ ಕಣ್ಣುಗಳು ಕಣ್ಣೀರಿನೊಂದಿಗೆ ಸ್ವಾಗತಿಸಿವೆ. ನನಗೆ ತುಂಬಾ ಸಂತೋಷವಾಗಿದೆ ಎಂದು ಉತ್ತರಿಸಿದ್ದಾನೆ. ಮುಸ್ಲಿಮರು ಹಜ್‍ಗಾಗಿ ಮೆಕ್ಕಾಗೆ ಭೇಟಿ ನೀಡಿದಂತೆ, ಭಾರತೀಯರು ತೀರ್ಥಯಾತ್ರೆಗೆ ಪಾಕಿಸ್ತಾನಕ್ಕೆ ಬರುತ್ತಾರೆ. ಈ ಹಿಂದೆ ನಾನು ಮಧ್ಯಪ್ರಾಚ್ಯದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ನನಗೆ ಸಾಕಷ್ಟು ಸಿಖ್ ಸ್ನೇಹಿತರಿದ್ದರು ಎಂದು ತನ್ನ ಭಾವನೆಯನ್ನು ಹಂಚಿಕೊಂಡಿದ್ದಾನೆ.

    ಈ ಸಂವಾದದ ವಿಡಿಯೋವನ್ನು ರಾಬಿನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.

  • ಒಳ್ಳೆಯ ವ್ಯಕ್ತಿತ್ವ ಇರೋ ಮನುಷ್ಯ- ಮನಮೋಹನ್ ಸಿಂಗ್‍ರನ್ನು ಹೊಗಳಿದ ಖುರೇಷಿ

    ಒಳ್ಳೆಯ ವ್ಯಕ್ತಿತ್ವ ಇರೋ ಮನುಷ್ಯ- ಮನಮೋಹನ್ ಸಿಂಗ್‍ರನ್ನು ಹೊಗಳಿದ ಖುರೇಷಿ

    ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಒಳ್ಳೆಯ ವ್ಯಕ್ತಿತ್ವ ಇರುವ ಮನುಷ್ಯ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಹಾಡಿ ಹೊಗಳಿದ್ದಾರೆ.

    ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೊಂದಿಗೆ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಸಂಭಾಷಣೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಖುರೇಷಿ ಅವರು ಸಿಂಗ್ ಅವರ ನಿವಾಸಕ್ಕೆ ಭೇಟಿ ನೀಡಿದ ಸಮಯದಲ್ಲಿ ಚಹಾ ನೀಡಿದ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ.

    ನಾನು ನಿಮ್ಮ ಮನೆಗೆ ಭೇಟಿ ನೀಡಿದ್ದೆ. ನಿಮ್ಮ ಪತ್ನಿ ಚಹಾ ತಯಾರಿಸಿದ್ದರು. ಸ್ವತಃ ಮನಮೋಹನ್ ಸಿಂಗ್ ಅವರೇ ಚಹಾವನ್ನು ತಂದುಕೊಟ್ಟಿದ್ದರು. ನಾನು ಮರಳಿ ಬಂದ ನಂತರ ಜನರಿಗೆ ಈ ಕಥೆಯನ್ನು ವಿವರಿಸಿದೆ. ಎಂತಹ ದೊಡ್ಡ ಮನುಷ್ಯ ಅವರು ಎಂದು ಹೇಳಿದೆ ಎಂದು ಖುರೇಷಿ ಮನಮೋಹನ್ ಸಿಂಗ್ ಅವರೊಂದಿಗೆ ಸಂಭಾಷಣೆ ನಡೆಸುತ್ತಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

    ಈ ಘಟನೆಯು 90 ದಶಕದಲ್ಲಿ ಸಂಭವಿಸಿದೆ ಎಂದು ಖುರೇಷಿ ವಿಡಿಯೋದಲ್ಲಿ ನೆನಪಿಸಿಕೊಳ್ಳುತ್ತಾರೆ. ಇದರಲ್ಲಿ ಅವರು ಪ್ರಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಅವರ ಪತ್ನಿ ಗುರ್ಷರನ್ ಕೌರ್ ಅವರೊಂದಿಗೆ ಕುಳಿತಿದ್ದಾರೆ.

    ಸಿಖ್ ಪವಿತ್ರ ಮಂದಿರದ ಉದ್ಘಾಟನಾ ಸಮಾರಂಭಕ್ಕಾಗಿ ಪಾಕಿಸ್ತಾನದ ಕಡೆಗೆ ತೆರಳಿದ ಭಾರತೀಯ ಯಾತ್ರಿಕರ ಮೊದಲ ಬ್ಯಾಚ್‍ನಲ್ಲಿ ಮನಮೋಹನ್ ಸಿಂಗ್ ಭಾಗವಹಿಸಿದ್ದರು.

    ಮೊದಲ ಬ್ಯಾಚ್‍ನಲ್ಲಿ ಅಕಲ್ ತಖ್ತ್ ಜತೇದರ್ ಹರ್ಪೀತ್ ಸಿಂಗ್, ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ಸುಖ್ಖೀರ್ ಸಿಂಗ್ ಬಾದಲ್, ಹರ್ಸಿಮ್ರತ್ ಕೌರ್ ಬಾದಲ್, ಕ್ರಿಕೆಟಿಗ, ರಾಜಕಾರಣಿ ನವಜೋತ್ ಸಿಂಗ್ ಸಿಧು ಹಾಗೂ ಬಿಜೆಪಿ ಸಂಸದ ಸನ್ನಿ ಡಿಯೋಲ್ ತೆರಳಿದ್ದಾರೆ.

  • ಇಮ್ರಾನ್ ಖಾನ್ ಕಿಂಗ್ ಆಫ್ ಹಾರ್ಟ್ಸ್ ಎಂದ ಸಿಧು

    ಇಮ್ರಾನ್ ಖಾನ್ ಕಿಂಗ್ ಆಫ್ ಹಾರ್ಟ್ಸ್ ಎಂದ ಸಿಧು

    ನವದೆಹಲಿ: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಕಿಂಗ್ ಆಫ್ ಹಾರ್ಟ್ಸ್ ಎಂದು ಕಾಂಗ್ರೆಸ್ ಶಾಸಕ ನವಜೋತ್ ಸಿಂಗ್ ಸಿಧು ಹಾಡಿ ಹೊಗಳಿದ್ದಾರೆ.

    ಪಾಕಿಸ್ತಾನದ ಗಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಕಿಂಗ್ ಆಫ್ ಹಾರ್ಟ್ಸ್, ನಿಮಗೆ ಧನ್ಯವಾದಗಳು. ಸಿಕಂದರ್(ಅಲೆಕ್ಸಾಂಡರ್) ಭಯದಿಂದ ಜಗತ್ತನ್ನು ಗೆದ್ದರೆ, ನೀವು ಪ್ರಪಂಚದಾದ್ಯಂತ ಹೃದಯಗಳನ್ನು ಗೆದ್ದಿದ್ದೀರಿ ಎಂದು ಹಾಡಿ ಹೊಗಳಿದರು.

    ವಿಭಜನೆಯ ಸಂದರ್ಭದಲ್ಲಿ ಪಂಜಾಬ್‍ನ ಎರಡೂ ಕಡೆಯವರು ರಕ್ತದೋಕುಳಿ ಆಡಿದ್ದಾರೆ. ಇಂತಹ ಸಂದರ್ಭದಲ್ಲಿ ನೀವು ಹಾಗೂ ಪ್ರಧಾನಿ ನರೇಂದ್ರ ಮೋದಿ ಇಬ್ಬರೂ ಸೇರಿ ಜನರ ಗಾಯಗಳಿಗೆ ಕರ್ತಾರ್‍ಪುರ ಕಾರಿಡಾರ್ ಮೂಲಕ ಮುಲಾಮನ್ನು ಹಚ್ಚಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಇದೇ ಸಂದರ್ಭದಲ್ಲಿ ನವಜೋತ್ ಸಿಂಗ್ ಸಿಧು ವಿಭಿನ್ನವಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಡಿ ಹೊಗಳಿದ್ದು, ಕರ್ತಾರ್‍ಪುರ ಕಾರಿಡಾರ್ ಯೋಜನೆ ಸ್ಥಾಪಿಸಿ, ಸಿಖ್ಖರಿಗೆ ದರ್ಬಾರ್ ಸಾಹಿಬ್ ಪ್ರವೇಶಿಸಲು ಸಹಾಯ ಮಾಡಿದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ಧನ್ಯವಾದಗಳು. ಮುನ್ನಾಭಾಯ್ ಎಂಬಿಬಿಎಸ್ ಶೈಲಿಯ ಅಪ್ಪುಗೆಯನ್ನು ಕಳಿಹಿಸುವುದಾಗಿ ಹೇಳಿದ್ದಾರೆ. ನಾನು ಮೋದಿಯವರಿಗೆ ಧನ್ಯವಾದ ಹೇಳುತ್ತೇನೆ. ನಮ್ಮ ನಡುವೆ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ, ನನ್ನ ಜೀವನ ಗಾಂಧಿ ಕುಟುಂಬಕ್ಕೆ ಸಮರ್ಪಿತವಾಗಿದ್ದರೂ ಪರವಾಗಿಲ್ಲ. ನಿಮಗೆ ಮುನ್ನಾಭಾಯ್ ಎಂಬಿಬಿಎಸ್ ಶೈಲಿಯ ಅಪ್ಪುಗೆಯನ್ನು ಕಳುಹಿಸುತ್ತೇನೆ ಎಂದು ಕರ್ತಾರ್‍ಪುರ್ ಕಾರಿಡಾರ್‍ಗಾಗಿ ಧನ್ಯವಾದ ತಿಳಿಸಿದರು.

    ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರೊಂದಿಗೆ ದೀರ್ಘಕಾಲದಿಂದ ಜಗಳ ನಡೆಯುತ್ತಿರುವುದರ ನಡುವೆ ಸಿಧು ಈ ಹೇಳಿಕೆ ನೀಡಿದ್ದಾರೆ. ಸಿಧು ಕರ್ತಾರ್‍ಪುರಕ್ಕೆ ಪ್ರಯಾಣಿಸಿದ ನಿಯೋಗದಲ್ಲಿ ಇವರೂ ಒಬ್ಬರಾಗಿದ್ದಾರೆ. ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ನಂತರ ಕ್ಯಾಪ್ಟರ್ ಸಿಂಗ್ ಹಾಗೂ ಸಿಧು ನಡುವಿನ ದ್ವೇಷ ಇನ್ನೂ ಹೆಚ್ಚಾಗಿದೆ. ಪಂಜಾಬ್ ಸರ್ಕಾರದಲ್ಲಿ ಕ್ಯಾಬಿನೆಟ್ ಸ್ಥಾನದಿಂದ ಹೊರಗುಳಿದ ಸಿಧು, ದುಃಖಿತರಾಗಿ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.

    ಈ ಸಮಾರಂಭದಲ್ಲಿ ಸಿಧು ಭಾಗವಹಿಸುವಿಕೆ ಪ್ರಾರಂಭದಲ್ಲಿ ಅನುಮಾನವಿತ್ತು. 1980ರ ದಶಕದಲ್ಲಿ ಕ್ರಿಕೆಟ್ ಮೈದಾನದಲ್ಲಿ ಅವರ ಸಮಕಾಲೀನರಾಗಿದ್ದ ಪ್ರಧಾನಿ ಖಾನ್, ಸಿಧು ಅವರಿಗೆ ಆಹ್ವಾನ ನೀಡಿದ್ದರು. ಇಂತಹ ಎಲ್ಲ ಆಮಂತ್ರಣಗಳಿಗೆ ರಾಜಕೀಯ ಅನುಮತಿಯನ್ನು ಪಡೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಆದೇಶಿಸಿತ್ತು. ಇದಾದ ನಂತರ ಸಿಧು ಸಮಾರಂಭಕ್ಕೆ ತೆರಳಿದ್ದಾರೆ.

  • ಕರ್ತಾರ್‍ಪುರ್ ಕಾರಿಡಾರ್ ಉದ್ಘಾಟನೆ – ಕನ್ನಡವನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ

    ಕರ್ತಾರ್‍ಪುರ್ ಕಾರಿಡಾರ್ ಉದ್ಘಾಟನೆ – ಕನ್ನಡವನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ

    ನವದೆಹಲಿ: ಕರ್ತಾರ್‍ಪುರ್ ಕಾರಿಡಾರ್‍ಗೆ ತೆರಳುವಾಗ ನಿಮಗೆ ಯಾವ ರೀತಿ ಭಾವನೆಗಳು ಮೂಡುತ್ತವೆಯೋ ಅದೇ ರೀತಿ ನನಗೂ ಆಗುತ್ತದೆ. ಈ ಪುರಸ್ಕಾರ, ಈ ಸನ್ಮಾನ ನಮ್ಮ ಸಂತ ಪರಂಪರೆಯ ಪ್ರಸಾದವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾವನಾತ್ಮಕವಾಗಿ ನುಡಿದಿದ್ದಾರೆ.

    ಕರ್ತಾರ್‍ಪುರ್ ಕಾರಿಡಾರ್ ಉದ್ಘಾಟಿಸಿ ಮಾತನಾಡಿದ ಅವರು, ಈ ಸನ್ಮಾನವನ್ನು ಗುರುನಾನಕ್ ಅವರ ಚರಣಗಳಿಗೆ ಸಮರ್ಪಿಸುತ್ತೇನೆ. ಸೇವಾ ಭಾವವನ್ನು ಇನ್ನೂ ಹೆಚ್ಚು ದಿನಗಳ ಕಾಲ ನೀಡು ಎಂದು ಬೇಡುತ್ತೇನೆ. ನೀವು ಸಹ ಸೇವೆಯನ್ನು ಮಾಡಲು ಅನುಮತಿ ನೀಡಿ. ಕರ್ತಾರ್‍ಪುರ್ ಚೆಕ್‍ಪೋಸ್ಟ್ ಕಾರ್ತಿಕ ಪೂರ್ಣಿಮೆಯ ಪರ್ವದಲ್ಲಿ ತೆರೆಯುತ್ತಿದೆ. ಇದರಿಂದ ದೀಪಾವಳಿ ಇನ್ನೂ ಜಗಮಗಿಸುವಂತಾಗಿದೆ ಎಂದರು.

    ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಭಾರತದ ಯಾತ್ರಾರ್ಥಿಗಳ ಭಾವನೆಯನ್ನು ಗೌರವಿಸಿದ್ದಕ್ಕಾಗಿ ಧನ್ಯವಾದ ಅರ್ಪಿಸುತ್ತೇನೆ. ಅಲ್ಲದೆ ಪಾಕಿಸ್ತಾನದ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

    ಸಣ್ಣ, ದೊಡ್ಡ ಎಂಬ ಬೇಧವಿಲ್ಲದೆ, ಎಲ್ಲರೂ ಒಂದಾಗಿ ಪ್ರಗತಿ ಸಾಧಿಸಲು ಸಾಧ್ಯ ಎಂದು ಗುರುನಾನಕ್ ಅವರು ಹೇಳಿದ್ದಾರೆ. ಗುರುನಾನಕ್ ಅವರ ಜನನ ಕೇವಲ ಮಾನವರ ಉದ್ದಾರಕ್ಕಾಗಿ ಮಾತ್ರವಲ್ಲ, ಕರ್ತಾರ್‍ಪುದಲ್ಲಿ ಜೀವನ ಕಳೆಯುವ ಮೂಲಕ ಪ್ರಕೃತಿಯೊಂದಿಗೆ ಜೀವನ ಸಾಗಿಸಿದ್ದಾರೆ. ಪ್ರಕೃತಿ, ಪರ್ಯಾವರಣ್, ಪ್ರದೂಶಣದ ಮೂಲಕ ಗುರುನಾನಕ್ ಅವರು ಬದುಕಿದ್ದಾರೆ ಎಂದರು.

    ಪ್ರಕೃತಿ ಪರ್ಯಾವರಣವನ್ನು ನಾವು ಇಂದು ಮರೆತಿದ್ದೇವೆ. ಈ ಸಂದರ್ಭದಲ್ಲಿ ಗುರುನಾನಕ್ ಅವರ ಮಾರ್ಗದರ್ಶನಗಳನ್ನು ನೆನೆಯಬೇಕಿದೆ. ಪಂಜಾಬ್ ಪಂಚ ನದಿಗಳ ತಾಣವಾಗಿದೆ. ನೀರು, ಪ್ರಕೃತಿ ವಿಚಾರದಲ್ಲಿ ಗುರುನಾನಕ್ ಅವರನ್ನು ಮಾದರಿಯಾಗಿಸಿಕೊಳ್ಳಬೇಕಿದೆ. ದೇಶ, ವಿದೇಶಗಳಲ್ಲಿ ಕೀರ್ತನೆ, ಪ್ರಾರ್ಥನೆಗಳನ್ನು ನಡೆಸುವ ಮೂಲಕ ಸಿಖ್ ಧರ್ಮದ ಕುರಿತು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಯುನೆಸ್ಕೊಗೆ ಧನ್ಯವಾದ ಸಲ್ಲಿಸುತ್ತೇನೆ. ಗುರುನಾನಕ್ ಅವರ ಪುಸ್ತಕಗಳನ್ನು ವಿವಿಧ ಭಾಷೆಗಳಲ್ಲಿ ಭಾಷಾಂತರವಾಗುತ್ತಿದೆ. ಕನ್ನಡದಲ್ಲಿಯೂ ಅನುವಾದವಾಗುತ್ತಿವೆ. ಇದರಿಂದ ಅವರ ವಿಚಾರಗಳನ್ನು ತಿಳಿಯಲು ಇನ್ನೂ ಪ್ರೋತ್ಸಾಹ ಸಿಕ್ಕಂತಾಗಿದೆ ಎಂದರು.

    ಹೆರಿಟೇಜ್ ಕಾಂಪ್ಲೆಕ್ಸ್, ಮ್ಯೂಸಿಯಂ ನಿರ್ಮಾಣ ಹಾಗೂ ವಿಶೇಷ ರೈಲನ್ನು ಬಿಡುವ ಕುರಿತು ಸಹ ನಿರ್ಧರಿಸಲಾಗುತ್ತಿದೆ. ಇನ್ನೂ ಅನೇಕ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

    ಕರ್ತಾರ್‍ಪುರ್ ಕಾರಿಡಾರ್‍ಗೆ ಮೊದಲ ಹಂತದ ಯಾತ್ರಾರ್ಥಿಗಳು ಪಾಕಿಸ್ತಾನ ತಲುಪುತ್ತಿದ್ದು, ಮೊದಲ ಹಂತದಲ್ಲಿ 5,000 ಜನರು ಪವಿತ್ರ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ.

    ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನರೋವಾಲ್ ಜಿಲ್ಲೆಯಲ್ಲಿನ ಅಂತರಾಷ್ಟ್ರೀಯ ಗಡಿಯಿಂದ ಕೇವಲ ನಾಲ್ಕು ಕಿ.ಮೀ.ದೂರದಲ್ಲಿ ಕರ್ತಾರ್‍ಪುರದ ದರ್ಬಾರ್ ಸಾಹಿಬ್ ಇದೆ. ಈ ಕಾರಿಡಾರ್ ಪಂಜಾಬ್‍ನ ಡೇರಾ ಬಾಬಾ ನಾನಕ್ ದೇಗುಲವನ್ನು ಸಂಪರ್ಕಿಸುತ್ತದೆ. ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ದೇವ್ ಅವರ ಜೀವನದ ಕೊನೆಯ 18 ವರ್ಷಗಳನ್ನು ಈ ಸ್ಥಳದಲ್ಲಿ ಕಳೆದಿದ್ದಾರೆ ಎಂಬ ನಂಬಿಕೆ ಇದೆ.

  • ಕರ್ತಾರ್‌ಪುರ್ ಕಾರಿಡಾರ್ – ಯಾತ್ರಿಗಳ ಎರಡು ಪ್ರಮುಖ ಬೇಡಿಕೆ ಈಡೇರಿಸಿದ ಇಮ್ರಾನ್ ಖಾನ್

    ಕರ್ತಾರ್‌ಪುರ್ ಕಾರಿಡಾರ್ – ಯಾತ್ರಿಗಳ ಎರಡು ಪ್ರಮುಖ ಬೇಡಿಕೆ ಈಡೇರಿಸಿದ ಇಮ್ರಾನ್ ಖಾನ್

    ಇಸ್ಲಾಮಾಬಾದ್: ಕರ್ತಾರ್‌ಪುರ್ ಕಾರಿಡಾರ್ ಮೂಲಕ ಪವಿತ್ರ ಸಾಹಿಬ್ ಭೇಟಿ ನೀಡು ಸಿಖ್ ಯಾತ್ರಿಗಳ ಪ್ರಮುಖ ಎರಡು ಬೇಡಿಕೆಯನ್ನು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಈಡೇರಿಸಿದ್ದಾರೆ.

    ಸಿಖ್ ಯಾತ್ರಾರ್ಥಿಗಳು ಪಾಸ್‍ಪೋರ್ಟ್ ಹೊಂದುವ ಅಗತ್ಯವಿಲ್ಲ, ಅಲ್ಲದೆ 10 ದಿನ ಮುಂಚಿತವಾಗಿ ನೋಂದಾಯಿಸಿಕೊಳ್ಳಬೇಕಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ.

    ನವೆಂಬರ್ 8ರಂದು ನಡೆಯಲಿರುವ ಕರ್ತಾರ್‌ಪುರ್ ಕಾರಿಡಾರ್ ಪ್ರಾರಂಭದ ದಿನದಂದು ಭಾರತೀಯ ಯಾತ್ರಾರ್ಥಿಗಳಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ. ಅಲ್ಲದೆ ಪಾಸ್‍ಪೋರ್ಟ್ ಅಗತ್ಯ ಸಹ ಇಲ್ಲ ಎಂದು ಟ್ವೀಟ್ ಮಾಡುವ ಮೂಲಕ ಸ್ಪಷ್ಟಪಡಿಸಿದ್ದಾರೆ.

    ಭಾರತದಿಂದ ಕರ್ತಾರ್‌ಪುರಕ್ಕೆ ತೀರ್ಥಯಾತ್ರೆಗೆ ಬರುವ ಸಿಖ್ ಪಂಗಡದ ಎರಡು ಪ್ರಮುಖ ಬೇಡಿಕೆಯನ್ನು ಈಡೇರಿಸಿದ್ದೇನೆ. ಯಾತ್ರಾರ್ಥಿಗಳಿಗೆ ಪಾಸ್‍ಪೋರ್ಟ್ ಅಗತ್ಯವಿಲ್ಲ, ಕೇವಲ ಮಾನ್ಯತೆ ಇರುವ ಗುರುತಿನ ಚೀಟಿ ಇದ್ದರೆ ಸಾಕು. ಇನ್ನು ಮುಂದೆ 10 ದಿನ ಮುಂಚಿತವಾಗಿ ನೋಂದಾಯಿಸಿಕೊಳ್ಳಬೇಕಿಲ್ಲ. ಅಲ್ಲದೆ ಗುರೂಜಿಯ 550ನೇ ಜನ್ಮ ದಿನಾಚರಣೆ ಅಂಗವಾಗಿ ಉದ್ಘಾಟನಾ ದಿನದಂದು ಭೇಟಿ ನೀಡುವ ಯಾತ್ರಿಗಳಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ.

    ಕರ್ತಾರ್‌ಪುರ್ ಕಾರಿಡಾರ್ ಪಾಕಿಸ್ತಾನದ ಗುರುದ್ವಾರ ಕರ್ತಾರ್‌ಪುರ್ ಸಾಹಿಬ್ ಅನ್ನು ಗುರುದಾಸ್‍ಪುರದ ಡೇರಾ ಬಾಬಾ ನಾನಕ್ ದೇವಾಲಯದೊಂದಿಗೆ ಸಂಪರ್ಕಿಸುತ್ತದೆ.

    ಪ್ರಧಾನಿ ನರೇಂದ್ರ ಮೋದಿ ನವೆಂಬರ್ 8ರಂದು ಗುರುದಾಸ್‍ಪುರದ ಕಾರಿಡಾರ್ ಉದ್ಘಾಟಿಸಲಿದ್ದಾರೆ. ಅಲ್ಲದೆ ಪ್ರಯಾಣಿಕರ ತಂಗುವ ಕಟ್ಟಡವನ್ನು ಸಹ ಉದ್ಘಾಟನೆ ಮಾಡಲಿದ್ದಾರೆ. ಅತ್ತ ಇಮ್ರಾನ್ ಖಾನ್ ಸಹ ಕರ್ತಾರ್ ಪುರ್ ಕಾರಿಡಾರ್ ಪಾಕ್‍ನಲ್ಲಿ ಉದ್ಘಾಟಿಸಲಿದ್ದಾರೆ.

    ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನರೋವಾಲ್ ಜಿಲ್ಲೆಯಲ್ಲಿನ ಅಂತರಾಷ್ಟ್ರೀಯ ಗಡಿಯಿಂದ ಕೇವಲ ನಾಲ್ಕು ಕಿ.ಮೀ.ದೂರದಲ್ಲಿ ಕರ್ತಾರ್‌ಪುರದ ದರ್ಬಾರ್ ಸಾಹಿಬ್ ಇದೆ. ಈ ಕಾರಿಡಾರ್ ಪಂಜಾಬ್‍ನ ಡೇರಾ ಬಾಬಾ ನಾನಕ್ ದೇಗುಲವನ್ನು ಸಂಪರ್ಕಿಸುತ್ತದೆ. ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ದೇವ್ ಅವರ ಜೀವನದ ಕೊನೆಯ 18 ವರ್ಷಗಳನ್ನು ಈ ಸ್ಥಳದಲ್ಲಿ ಕಳೆದಿದ್ದಾರೆ ಎಂಬ ನಂಬಿಕೆ ಇದೆ.

    ಸಿಖ್ ಯಾತ್ರಾರ್ಥಿಗಳ ಮೇಲೆ ಪಾಕಿಸ್ತಾನ 20 ಡಾಲರ್(1,400 ರೂ.) ಸೇವಾ ಶುಲ್ಕ ವಿಧಿಸುತ್ತಿರುವುದನ್ನು ಭಾರತ ಆಕ್ಷೇಪಿಸಿದೆ. ಈ ಕುರಿತು ಭಿನ್ನಾಭಿಪ್ರಾಯ ವ್ಯಕ್ತವಾದ ಹಿನ್ನೆಲೆ ಆನ್‍ಲೈನ್ ನೋಂದಣಿ ಕಾರ್ಯ ಸಹ ತಡವಾಗಿ ಪ್ರಾರಂಭವಾಯಿತು.

    ಇದೀಗ ಮೊದಲ ದಿನ ಶುಲ್ಕವನ್ನು ಪಡೆಯದಿರಲು ಪಾಕ್ ನಿರ್ಧರಿಸಿದೆ. ಪ್ರತಿ ಯಾತ್ರಾರ್ಥಿಗಳಿಗೆ 1,400 ರೂ. ಶುಲ್ಕವನ್ನು ಪಾಕಿಸ್ತಾನ ನಿಗದಿ ಪಡಿಸಿದೆ. ಅಂತಿಮ ಒಪ್ಪಂದದ ಪ್ರಕಾರ ವೀಸಾ ಇಲ್ಲದೆ ಪ್ರತಿ ದಿನ 5 ಸಾವಿರ ಯಾತ್ರಾರ್ಥಿಗಳನ್ನು ಗುರುದ್ವಾರಕ್ಕೆ ಬಿಡಲು ನಿರ್ಧರಿಸಲಾಗಿದೆ. ಬೆಳಗ್ಗೆ ಭೇಟಿ ನೀಡಿ, ಸಂಜೆ ಮರಳಿ ಬರಬಹುದಾಗಿದೆ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಯಾತ್ರಾರ್ಥಿಗಳು ಗರಿಷ್ಠ 11 ಸಾವಿರ ರೂ. ಕೊಂಡೊಯ್ಯಬಹುದು. 7 ಕೆ.ಜಿ. ಲಗೇಜ್ ತೆಗೆದುಕೊಂಡು ಹೋಗಲು ಅನುಮತಿ ಸಿಕ್ಕಿದೆ.

  • ಕರ್ತಾರ್ ಪುರ ಕಾರಿಡಾರ್ ಒಪ್ಪಂದಕ್ಕೆ ಸಹಿ ಹಾಕಿದ ಭಾರತ- ಪಾಕಿಸ್ತಾನ

    ಕರ್ತಾರ್ ಪುರ ಕಾರಿಡಾರ್ ಒಪ್ಪಂದಕ್ಕೆ ಸಹಿ ಹಾಕಿದ ಭಾರತ- ಪಾಕಿಸ್ತಾನ

    ಗುರ್ದಾಸ್‍ಪುರ: ಭಾರತ ಹಾಗೂ ಪಾಕಿಸ್ತಾನ ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಇದೆ. ಈ ನಡುವೆಯೂ ಕರ್ತಾರ್ ಪುರ ಕಾರಿಡಾರ್ ನ ಕಾರ್ಯಾಚರಣೆಯ ವಿಧಾನಗಳ ಕುರಿತಾದ ಒಪ್ಪಂದಕ್ಕೆ ಭಾರತ ಹಾಗೂ ಪಾಕಿಸ್ತಾನ ಇಂದು ಸಹಿ ಹಾಕಿದೆ.

    ಭಾರತದ ಪರವಾಗಿ ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಎಸ್.ಸಿ.ಎಲ್ ದಾಸ್ ಒಪ್ಪಂದಕ್ಕೆ ಸಹಿ ಹಾಕಿದರೆ. ಅತ್ತ ಪಾಕಿಸ್ತಾನ ವಿದೇಶಾಂಗ ಕಚೇರಿ ವಕ್ತಾರ ಮೊಹಮ್ಮದ್ ಫೈಸಲ್ ಅವರು ಪಾಕಿಸ್ತಾನದ ಕಡೆಯಿಂದ ಒಪ್ಪಂದಕ್ಕೆ ಸಹಿ ಹಾಕಿದರು. ಈ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ, ಭಾರತೀಯ ಯಾತ್ರಿಕರು ಹಾಗೂ ವ್ಯಕ್ತಿಗಳಿಗೆ ಕಾರಿಡಾರ್ ಬಳಕೆ ಮಾಡುವ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ಈ ಮೂಲಕ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನರೋವಾಲ್ ಜಿಲ್ಲೆಯಲ್ಲಿರುವ ಅಂತರರಾಷ್ಟ್ರೀಯ ಗಡಿಯಿಂದ ಕೇವಲ ನಾಲ್ಕು ಕಿ.ಮೀ ದೂರದಲ್ಲಿರುವ ಕರ್ತಾರ್ ಪುರದ ದರ್ಬಾರ್ ಸಾಹಿಬ್ ಹಾಗೂ ಪಂಜಾಬ್‍ನ ಡೇರಾ ಬಾಬಾ ನಾನಕ್ ದೇಗುಲ ಯಾತ್ರೆ ವೀಸಾ ಮುಕ್ತವಾಗಿರಲಿದೆ.

    2018ರ ನವೆಂಬರ್ 22ರಂದು ಸಂಪುಟ ಸಭೆಯಲ್ಲಿ ಗುರು ನಾನಕ್ ದೇವ್ ಅವರ 550ನೇ ಜಯಂತೋತ್ಸವವನ್ನು ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿತ್ತು. ಅಲ್ಲದೆ ಭಾರತೀಯ ಯಾತ್ರಿಕರಿಗೆ ಕರ್ತಾರ್ ಪುರದ ಗುರುದ್ವಾರ ದರ್ಬಾರ್ ಸಾಹಿಬ್‍ಗೆ ಭೇಟಿ ನೀಡಲು ಅನುಕೂಲವಾಗುವಂತೆ ದೇರಾ ಬಾಬಾ ನಾನಕ್ ದೇಗುಲದಿಂದ ಅಂತಾರಾಷ್ಟ್ರೀಯ ಗಡಿಯಲ್ಲಿ ಕರ್ತಾರ್ ಪುರ ಸಾಹಿಬ್ ಕಾರಿಡಾರ್ ನಿರ್ಮಿಸಲು ನಿರ್ಧರಿಸಲಾಗಿತ್ತು.

    ಆದರೆ, ಪಾಕಿಸ್ತಾನ ಪ್ರತಿ ಯಾತ್ರಿಕರಿಗೆ 20 ಡಾಲರ್ ಸೇವಾ ಶುಲ್ಕ ಹಾಕುವುದಾಗಿ ಹೇಳಿದ್ದು, ಪಾಕಿನ ಕ್ರಮಕ್ಕೆ ಭಾರತ ತೀವ್ರ ಅಸಮಾಧಾನ ಹೊರಹಾಕಿದೆ. ಪಾಕಿಸ್ತಾನ ಸೇವಾ ಶುಲ್ಕದ ಪ್ರಸ್ತಾವನೆಯನ್ನು ಮರುಪರಿಶೀಲಿಸಿ, ಅದನ್ನು ಕಡಿಮೆ ಮಾಡುವಂತೆ ಭಾರತ ಪಾಕ್ ಗೆ ಮನವಿ ಮಾಡಿದೆ.

    ವೀಸಾ ಮುಕ್ತವಾಗಿರುವ ಕಾರಣಕ್ಕೆ ಈ ಯಾತ್ರೆಗೆ ಹೋಗುವ ಯಾತ್ರಿಕರು ಸೂಕ್ತ ಪಾಸ್ ಪೋರ್ಟ್ ಮಾತ್ರ ಕೊಂಡೊಯ್ಯಬೇಕು. ಭಾರತೀಯ ಮೂಲದ ಯಾತ್ರಿಕರು ಪಾಸ್‍ಪೋರ್ಟ್ ನೊಂದಿಗೆ ಒಇಸಿ ಅನ್ನು (ಸಾಗರೋತ್ತರ ಪೌರತ್ವ ಕಾರ್ಡ್) ಕೂಡ ಕೊಂಡೊಯ್ಯಬೇಕಾಗುತ್ತದೆ. ಈ ಕಾರಿಡಾರ್ ಮುಂಜಾನೆಯಿಂದ ರಾತ್ರಿಯವರೆಗೆ ತೆರೆದಿರುತ್ತದೆ. ಹೀಗಾಗಿ ಬೆಳಗ್ಗೆ ಯಾತ್ರೆಗೆ ತೆರಳಿದ ಯಾತ್ರಿಕರು ಅದೇ ದಿನ ರಾತ್ರಿಯೊಳಗೆ ಹಿಂದಿರುಗಬೇಕಿದೆ.

    ಪಾಕಿಸ್ತಾನ ಬಾಬಾ ನಾನಕ್ ಅವರ ದರ್ಶನ ಹಾಗೂ ಪ್ರಸಾದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ. ಹಾಗೆಯೆ ಯಾತ್ರಿಕರು ಆನ್‍ಲೈನ್ ಮೂಲಕ ಯಾತ್ರೆಗೆ ನೋಂದಣಿ ಮಾಡಿಕೊಳ್ಳಬಹುದಾದ ವ್ಯವಸ್ಥೆಯನ್ನು ಕೂಡ ಕೇಂದ್ರ ಸರ್ಕಾರ ಮಾಡಿದ್ದು, https://mha.gov.in/ ಮೂಲಕ ನೊಂದಣಿ ಆಗಬಹುದಾಗಿದೆ.

  • ಪ್ರಧಾನಿ ಮೋದಿಯಿಂದ ಪಾಕಿಸ್ತಾನದ ಕರ್ತಾರ್‌ಪುರ್ ಕಾರಿಡಾರ್ ಉದ್ಘಾಟನೆ

    ಪ್ರಧಾನಿ ಮೋದಿಯಿಂದ ಪಾಕಿಸ್ತಾನದ ಕರ್ತಾರ್‌ಪುರ್ ಕಾರಿಡಾರ್ ಉದ್ಘಾಟನೆ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದ ಬೃಹತ್ ಯೋಜನೆ ದಿ  ಕರ್ತಾರ್‌ಪುರ್ ಕಾರಿಡಾರ್ ಉದ್ಘಾಟನೆ ಮಾಡಲಿದ್ದಾರೆ ಎಂದು ಕೇಂದ್ರ ಸಚಿವೆ ಹರ್​ಸಿಮ್ರತ್​ ಕೌರ್​ ತಿಳಿಸಿದ್ದಾರೆ.

    ಈ ಕುರಿತು ಟ್ವೀಟ್ ಹರ್​ಸಿಮ್ರತ್​ ಕೌರ್​, ಗುರು ನಾನಕ್ ದೇವ್ ಅವರ ಆಶೀರ್ವಾದದಿಂದ ನವೆಂಬರ್ 8ರಂದು ಕರ್ತಾರ್‌ಪುರ್ ಕಾರಿಡಾರ್ ಯೋಜನೆ ಉದ್ಘಾಟನೆಯಾಗಲಿದ್ದು, ಈ ಮೂಲಕ ಅವರು ಹೊಸ ಇತಿಹಾಸ ಸೃಷ್ಟಿ ಮಾಡಲಿದ್ದಾರೆ. ಈ ಯೋಜನೆಯು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಳ್ಳಲಿದೆ ಎಂದು ಹೇಳಿದ್ದಾರೆ.

    ಮತ್ತೊಂದು ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್‍ನಿಂದ ಕಳೆದ 72 ವರ್ಷಗಳಲ್ಲಿ ಮಾಡಲು ಸಾಧ್ಯವಾಗದ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಈ ಕಾರಿಡಾರ್ ಪಂಜಾಬ್​ನ ಗುರುದಾಸ್​ಪುರದಿಂದ ಪಾಕಿಸ್ತಾನದಲ್ಲಿರುವ ಸಿಖ್​ ತೀರ್ಥಕ್ಷೇತ್ರ ಕರ್ತಾರ್​ಪುರ್​ ಸಾಹಿಬ್​ಗೆ ಸಂಪರ್ಕ ಕಲ್ಪಿಸಲಿದೆ.

    ಕರ್ತಾರ್‌ಪುರ್ ಕಾರಿಡಾರ್ ಪಾಕಿಸ್ತಾನದ ಬೃಹತ್ ಯೋಜನೆಯಾಗಿದೆ. ಈ ಯೋಜನೆ ಉದ್ಘಾಟನೆಗೆ ಮುಖ್ಯ ಅತಿಥಿಯನ್ನಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಆಹ್ವಾನಿಸಲಾಗಿತ್ತು. ಅಲ್ಲದೆ ಗುರುನಾನಕ್ ಅವರ 550ನೇ ಜನ್ಮ ದಿನಾಚರಣೆಗಾಗಿ ಕರ್ತಾರ್ಪುರಕ್ಕೆ ಆಗಮಿಸುತ್ತಿರುವ ಸಿಖ್ ಯಾತ್ರಾರ್ಥಿಗಳನ್ನು ಸ್ವಾಗತಿಸಲು ತುಂಬಾ ಸಂತೋಷವಾಗುತ್ತಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ತಿಳಿಸಿತ್ತು.

    ಪಾಕಿಸ್ತಾನದಲ್ಲಿರುವ ಗುರುನಾನಕ್ ಅವರ ಅಂತಿಮ ವಿಶ್ರಾಂತಿ ಸ್ಥಳವಾದ ದರ್ಬಾರ್ ಸಾಹಿಬ್‍ಗೆ ಸಂಪರ್ಕ ಕಲ್ಪಿಸಲು  ಕರ್ತಾರ್‌ಪುರ್ ಕಾರಿಡಾರ್ ಯೋಜನೆಯನ್ನು ಪಾಕಿಸ್ತಾನ ಆರಂಭಿಸಿದೆ. ಇದಕ್ಕಾಗಿ ಪಾಕಿಸ್ತಾನ ದೊಡ್ಡ ರೀತಿಯಲ್ಲಿ ತಯಾರಿ ನಡೆಸುತ್ತಿದೆ. ಮನಮೋಹನ್ ಸಿಂಗ್ ಅವರು ಸಿಖ್ ಸಮುದಾಯವನ್ನು ಪ್ರತಿನಿಧಿಸುವುದರಿಂದ ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಲು ನಾವು ನಿರ್ಧರಿಸಿದ್ದೇವೆ. ನಾವು ಶೀಘ್ರದಲ್ಲೇ ಅವರಿಗೆ ಆಹ್ವಾನ ಪತ್ರವನ್ನು ಕಳುಹಿಸುತ್ತೇವೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದರು.

    ಈ ಆಹ್ವಾನವನ್ನು ಕಾಂಗ್ರೆಸ್ ತಿರಸ್ಕರಿಸಿತ್ತು. ಮನಮೋಹನ್ ಸಿಂಗ್ ಅವರು ಪಾಕ್ ಆಹ್ವಾನವನ್ನು ಸ್ವೀಕರಿಸುವುದಿಲ್ಲ. ಅಷ್ಟೇ ಅಲ್ಲದೆ ಕಾರ್ಯಕ್ರಮದ ಉದ್ಘಾಟನೆಗೂ ತೆರಳುವುದಿಲ್ಲ ಎಂದು ಕಾಂಗ್ರೆಸ್ ಹೇಳಿತ್ತು.