Tag: karntaka elections2018

  • ಜನಪರ ಯೋಜನೆಗಳು ಜಾರಿಗೆ ಬರಲು ಹೆಚ್‍ಡಿಕೆ ಸಿಎಂ ಆಗ್ಬೇಕು- ಗೀತಾ ಶಿವರಾಜ್ ಕುಮಾರ್

    ಜನಪರ ಯೋಜನೆಗಳು ಜಾರಿಗೆ ಬರಲು ಹೆಚ್‍ಡಿಕೆ ಸಿಎಂ ಆಗ್ಬೇಕು- ಗೀತಾ ಶಿವರಾಜ್ ಕುಮಾರ್

    ಚಿಕ್ಕಮಗಳೂರು: ಬೇರೆ ಪಕ್ಷ ಅಧಿಕಾರಕ್ಕೆ ಬಂದ್ರೆ ಜೆಡಿಎಸ್ ಶಾಸಕರು ಅವರ ಮನೆ ಮುಂದೆ ನಿಲ್ಲುವಂತಹ ಸ್ಥಿತಿ ಬರುತ್ತೆ, ಆಗ ಅಭಿವೃದ್ಧಿಯೂ ಕುಂಠಿತಗೊಳ್ಳುತ್ತೆ ಅದಕ್ಕೆ ಜೆಡಿಎಸ್‍ಗೆ ಮತ ನೀಡಿ ಜೆಡಿಎಸ್ ಅಭ್ಯರ್ಥಿಯನ್ನ ಗೆಲ್ಲಿಸಿ ಎಂದು ನಟ ಶಿವರಾಜ್‍ಕುಮಾರ್ ಪತ್ನಿ ಗೀತಾ ಶಿವರಾಜ್‍ಕುಮಾರ್ ಹೇಳಿದ್ರು.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಆಲ್ದೂರು ಹೋಬಳಿಯಲ್ಲಿ ರೋಡ್ ಶೋ ಮೂಲಕ ಜೆಡಿಎಸ್ ಅಭ್ಯರ್ಥಿ ಬಿ.ಬಿ.ನಿಂಗಯ್ಯ ಪರ ಮತಯಾಚಿಸಿದ ಅವರು, ಜೆಡಿಎಸ್ ರೈತ ಪರ ಸರ್ಕಾರ, ಕುಮಾರಸ್ವಾಮಿಯ ಜನಪರ ಯೋಜನೆಗಳು ಜಾರಿಗೆ ಬರಬೇಕಾದ್ರೆ ಅವರು ಸಿಎಂ ಆಗಬೇಕು. ಆದ್ದರಿಂದ ಜೆಡಿಎಸ್‍ಗೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡರು.

    ಇದೇ ವೇಳೆ, ಮಾತನಾಡಿದ ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಬಿ.ಬಿ.ನಿಂಗಯ್ಯ ಪ್ರಧಾನಿ ಮೋದಿ ಪರ ಬ್ಯಾಟ್ ಬೀಸಿದ್ದಾರೆ. ದೇಶದ ಪ್ರಧಾನಿ ಕೂಡ ಇದು 10 ಪರ್ಸೆಂಟ್ ಸರ್ಕಾರ ಅಂತಾರೆ. ಅವರು ಓರ್ವ ಪ್ರಧಾನಿ ಹಗುರವಾಗಿ ಮಾತನಾಡಲು ಆಗುವುದಿಲ್ಲ. ಅವರಿಗಿರುವ ಮಾಹಿತಿಯನ್ನ ಆಧರಿಸಿ ಮಾತನಾಡಿರಬಹುದು ಎಂದು ಬಿಜೆಪಿ ಪರ ಮೃದು ಧೋರಣೆ ತಾಳಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

  • ದೇವಸ್ಥಾನದೊಳಗೆ ಬಂದ್ರೆ ನೀತಿ ಸಂಹಿತೆ ಉಲ್ಲಂಘನೆಯಾಗುತ್ತೆ ಅಂದ್ರು ಸ್ಮೃತಿ ಇರಾನಿ!

    ದೇವಸ್ಥಾನದೊಳಗೆ ಬಂದ್ರೆ ನೀತಿ ಸಂಹಿತೆ ಉಲ್ಲಂಘನೆಯಾಗುತ್ತೆ ಅಂದ್ರು ಸ್ಮೃತಿ ಇರಾನಿ!

    ಬಳ್ಳಾರಿ: ಬಿಜೆಪಿ ನಾಯಕರು ಒಂದೆಡೆ ಟೆಂಪಲ್ ರನ್ ಮಾಡತ್ತಿದ್ದರೆ, ಮತ್ತೊಂದೆಡೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ದೇವಾಲಯದೊಳಗೆ ಪ್ರವೇಶ ಮಾಡೋದು ಅಕ್ರಮ ಅನ್ನೋ ಹೇಳಿಕೆ ನೀಡಿದ್ದಾರೆ.

    ಸಂಡೂರಿನಲ್ಲಿಂದು ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಪರವಾಗಿ ಪ್ರಚಾರಕ್ಕೆ ಆಗಮಿಸಿದ್ದ ಸ್ಮೃತಿ ಇರಾನಿಯವರನ್ನು ಪಕ್ಷದ ಮುಖಂಡರು ಸಂಡೂರಿನ ವಿರಕ್ತ ಮಠಕ್ಕೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ದೇವಾಲಯದೊಳಗೆ ಪ್ರವೇಶ ಮಾಡಲು ನಿರಾಕರಿಸಿದ ಸೃತಿ ಇರಾನಿ, ಹೊರಗಡೆಯಿಂದಲೇ ಕೈ ಮುಗಿದು ರೋಡ್ ಶೋ ನಡೆಸಲು ಮುಂದಾದ್ರು.

    ಕಾರ್ಯಕರ್ತರ ಮಠದೊಳಗೆ ಆಗಮಿಸುವಂತೆ ಮನವಿ ಮಾಡಿದಾಗ ದೇವಾಲಯದೊಳಗೆ ಪ್ರವೇಶ ಮಾಡಿದ್ರೆ ನೀತಿ ಸಂಹಿತೆ ಉಲ್ಲಂಘನೆಯಾಗುತ್ತೆ. ಹೀಗಾಗಿ ನಾನು ಬರಲ್ಲವೆಂದು ಹೊರಗಡೆಯಿಂದಲೇ ಕೈ ಮುಗಿದು ರೋಡ್ ಶೋ ಮೂಲಕ ಪ್ರಚಾರ ನಡೆಸಿದರು.

    ಬಳಿಕ ಮಾತನಾಡಿದ ಸ್ಮೃತಿ ಇರಾನಿ, ಬಿಜೆಪಿ ಸರ್ಕಾರ ರೈತರ ಸಾಲ ಮನ್ನಾ ಮಾಡಲಿದೆ. ಹೀಗಾಗಿ ಎಲ್ಲಾ ಮತದಾರರು ಬಿಜೆಪಿಗೆ ಮತ ಹಾಕಿ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡಬೇಕೆಂದು ಮನವಿ ಮಾಡಿದರು. ಇದೇ ವೇಳೆ ಮಾತನಾಡಿದ ಅಭ್ಯರ್ಥಿ ರಾಘವೇಂದ್ರ ಸಹ ಈ ಭಾರೀ ಸಂಡೂರಿನಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದೆ. ಪ್ರಧಾನಿ ಮೋದಿ ಬಳ್ಳಾರಿ ಪ್ರವಾಸ ಮಾಡಿದ ನಂತರ ಜಿಲ್ಲೆಯ ರಾಜಕೀಯ ಚಿತ್ರಣವೇ ಬದಲಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದರು.