Tag: karntaka elections 2018

  • ರಾಜ್ಯದಲ್ಲಿ ಅತಂತ್ರ ಸರ್ಕಾರ ನಿರ್ಮಾಣ- ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ

    ರಾಜ್ಯದಲ್ಲಿ ಅತಂತ್ರ ಸರ್ಕಾರ ನಿರ್ಮಾಣ- ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ

    ಉಡುಪಿ: ಈ ಬಾರಿಯ ಚುನಾವಣಾ ಫಲಿತಾಂಶ ಕಬ್ಬಿಣದ ಕಡಲೆಯಾಗಿದೆ. ರಾಜ್ಯದಲ್ಲಿ ಅತಂತ್ರ ಸರ್ಕಾರ ಬರುತ್ತದೆ ಎಂದು ಕಾಪು ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ ನುಡಿದಿದ್ದಾರೆ.

    ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ನಾನೇ ಮುಂದಿನ ಸಿಎಂ ಅಂತ ಹೇಳುತ್ತಿದ್ದರು. ಈಗ ಸಿಎಂ ತನ್ನ ಪ್ಲೇಟ್ ಚೇಂಜ್ ಮಾಡಿದ್ದಾರೆ ಅಂತ ಹೇಳಿದ್ದಾರೆ.

    ಕುಮಾರಸ್ವಾಮಿ ಸಾಯುವ ಮಾತನಾಡುತ್ತಾರೆ ಯಡಿಯೂರಪ್ಪ ಪ್ರಮಾಣ ವಚನ ದಿನಾಂಕ ಫಿಕ್ಸ್ ಮಾಡಿದ್ದಾರೆ. ಗೃಹಗತಿಯ ಪ್ರಕಾರ ಬಿಜೆಪಿ ನೂರರ ಗಡಿ ದಾಟುತ್ತದೆ, ಬಿಜೆಪಿಗೆ 105 ಸೀಟು ಸಿಗುತ್ತದೆ ಎಂದು ಅಮ್ಮಣ್ಣಾಯ ಜಾತಕ ಪುಸ್ತಕ ನೋಡಿ ಹೇಳಿದ್ರು.

    ಸರ್ಕಾರ ರಚನೆಗೆ ಮಾಜಿ ಸಿಎಂ ಕುಮಾರಸ್ವಾಮಿ ಬೇಕೇ ಬೇಕು. ಕುಮಾರಸ್ವಾಮಿಗೆ ಮುಖ್ಯಮಂತ್ರಿಯಾಗುವ ಯೋಗವಿದೆ. ಅವರ ಲಾಭ ಸ್ಥಾನದಲ್ಲಿ ಗುರುವಿದ್ದಾನೆ. ಸಮ್ಮಿಶ್ರ ಸರ್ಕಾರಕ್ಕೆ ಬಾಳಿಕೆ ಬಹಳ ಕಡಿಮೆ. ಈ ಚುನಾವಣೆ ನಂತರ ಕಾಂಗ್ರೆಸ್ ಪತನದ ಹಾದಿ ಹಿಡಿಯುತ್ತದೆ. 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬಹಳ ಹಿನ್ನಡೆಯಾಗುತ್ತದೆ ಅಂತ ಪ್ರಕಾಶ್ ಅಮ್ಮಣ್ಣಾಯ ಶಾಕ್ ಕೊಟ್ಟಿದ್ದಾರೆ.

  • ಚುನಾವಣಾಧಿಕಾರಿಗಳಿಂದ ಮತದಾರರಿಗೆ ಹಂಚುತ್ತಿದ್ದ ಕೋಳಿಗಳು ವಶ!

    ಚುನಾವಣಾಧಿಕಾರಿಗಳಿಂದ ಮತದಾರರಿಗೆ ಹಂಚುತ್ತಿದ್ದ ಕೋಳಿಗಳು ವಶ!

    ಮಂಡ್ಯ: ಮತದಾರರಿಗೆ ಹಂಚುತ್ತಿದ್ದ ಕೋಳಿಗಳನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಮಲ್ಲೇಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಲಗೇಜ್ ಆಟೋದಲ್ಲಿ ಕೋಳಿ ತಂದು ಮನೆ ಮನೆಗೆ ಹಂಚಲಾಗುತ್ತಿತ್ತು. ಇದನ್ನು ತಿಳಿದು ಸ್ಥಳೀಯರಲ್ಲೇ ಒಬ್ಬರು ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿಷ್ಯ ತಿಳಿದು ಸ್ಥಳಕ್ಕೆ ಆಗಮಿಸಿದ ಚುನಾವಣಾ ಅಧಿಕಾರಿಗಳು ಲಗೇಜ್ ಆಟೋ ಸಹಿತ ಕೋಳಿಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಮತದಾರರಿಗೆ ಹಂಚಿಕೆ ಮಾಡಲು ಸಂಗ್ರಹಿಸಿದ್ದ ಗೃಹೋಪಯೋಗಿ ವಸ್ತುಗಳು ವಶ

    ಅಷ್ಟೇ ಅಲ್ಲದೆ ಈಗಾಗಲೇ ಕೋಳಿಗಳನ್ನು ಪಡೆದಿದ್ದವರಿಂದಲೂ ಅವುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇನ್ನು ಕೋಳಿ ಹಂಚಲು ಹೇಳಿದ್ದು ಯಾರು.? ಯಾವ ಪಕ್ಷದ ಅಭ್ಯರ್ಥಿ ಕೋಳಿ ಹಂಚಲು ಸೂಚಿಸಿದ್ದು ಎಂಬ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.

  • ಉಡುಪಿಗೆ ಪ್ರಧಾನಿ ಭೇಟಿ – ಕೃಷ್ಣ ಮಠ, ದೇವಸ್ಥಾನಕ್ಕೆ ಹೋಗಲ್ಲ ಅಂದ್ರು ಮೋದಿ

    ಉಡುಪಿಗೆ ಪ್ರಧಾನಿ ಭೇಟಿ – ಕೃಷ್ಣ ಮಠ, ದೇವಸ್ಥಾನಕ್ಕೆ ಹೋಗಲ್ಲ ಅಂದ್ರು ಮೋದಿ

    ಉಡುಪಿ: ಬಿಜೆಪಿ ಸಮಾವೇಶಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ ಶ್ರೀಕೃಷ್ಣಮಠ ಮಠ ಮತ್ತು ದೇವಾಲಯಕ್ಕೆ ಹೋಗುವುದಿಲ್ಲ ಎಂದು ತಿಳಿಸಿದ್ದಾರೆ.

    ರಾಜಕೀಯ ಪ್ರವಾಸ ಜೊತೆ ಧಾರ್ಮಿಕ ಪ್ರವಾಸವನ್ನು ಮೋದಿ ಮಾಡುವುದಿಲ್ಲ ಎನ್ನುವ ಸಂದೇಶ ಪ್ರಧಾನಿ ಕಚೇರಿಯಿಂದ ರಾಜ್ಯ ಮತ್ತು ಜಿಲ್ಲಾ ಬಿಜೆಪಿಗೆ ಸಂದೇಶ ರವಾನೆಯಾಗಿದೆ.

    ಪ್ರಧಾನಿ ಮೋದಿ ಮಠಕ್ಕೆ ಬರಬೇಕೆಂದು ನಾವು ಅಪೇಕ್ಷಿಸಿದ್ದೆವು, ಅಧಿಕೃತ ಪಟ್ಟಿಯಲ್ಲಿ ಮೋದಿ ಮಠ ಭೇಟಿ ಕಾರ್ಯಕ್ರಮ ಇಲ್ಲ. ಪ್ರಧಾನಿ ಕಾರ್ಯಾಲಯದ ತೀರ್ಮಾನವೇ ಅಂತಿಮ ಎಂದು ಉಡುಪಿ ಕಾರ್ಯಕ್ರಮದ ಉಸ್ತುವಾರಿ ಉದಯಕುಮಾರ್ ಶೆಟ್ಟಿ ಹೇಳಿದ್ದಾರೆ.

    ಪ್ರಚಾರ ಸಂದರ್ಭ ಚುನಾವಣಾ ಪ್ರಚಾರ ಮಾತ್ರ ಮಾಡ್ತಾರೆ, ಮಠದ ಭೇಟಿಗೆ ಇನ್ನೊಂದು ದಿನ ಫಿಕ್ಸ್ ಮಾಡುತ್ತೇವೆ ಅಂತ ಹೇಳಿದ್ದಾರೆ. ಈ ನಡುವೆ ಪ್ರಧಾನಿ ಮೋದಿ ಮಠ ಭೇಟಿಯ ಕಾರ್ಯಕ್ರಮ ದಿಢೀರ್ ಫಿಕ್ಸ್ ಆಗ್ಬಹುದು ಎಂಬ ಹಿನ್ನೆಲೆಯಲ್ಲಿ ಕೃಷ್ಣಮಠಕ್ಕೆ ಟೈಟ್ ಸೆಕ್ಯೂರಿಟಿ ಕೊಡಲಾಗಿದೆ. ಪ್ರಧಾನಿ ಮಠ ಭೇಟಿ ಫಿಕ್ಸ್ ಆದ್ರೆ  ರಥಬೀದಿ ಪ್ರವೇಶ ಬಂದ್ ಮಾಡಲಾಗುವುದು ಅಂತ ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

    ರಥಬೀದಿಯಲ್ಲಿ ಬಿಎಸ್‍ಎಫ್, ಎಸ್‍ಎಸ್‍ಎಫ್ ಸಿಬ್ಬಂದಿ ಭಾರೀ ಭದ್ರತೆ ನಿಯೋಜಿಸಿದ್ದು, ರಾಜ್ಯ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿಕೊಂಡಿದ್ದಾರೆ.