Tag: Karnatkaka

  • ಕೇಂದ್ರದಿಂದ ಯೂಟರ್ನ್‌ – ಅಮೆರಿಕ ಭೇಟಿಗೆ ಅವಕಾಶ ಸಿಕ್ಕಿದ ಬೆನ್ನಲ್ಲೇ MEA ವಿರುದ್ಧ ಪ್ರಿಯಾಂಕ್‌ ಖರ್ಗೆ ಕೆಂಡಾಮಂಡಲ

    ಕೇಂದ್ರದಿಂದ ಯೂಟರ್ನ್‌ – ಅಮೆರಿಕ ಭೇಟಿಗೆ ಅವಕಾಶ ಸಿಕ್ಕಿದ ಬೆನ್ನಲ್ಲೇ MEA ವಿರುದ್ಧ ಪ್ರಿಯಾಂಕ್‌ ಖರ್ಗೆ ಕೆಂಡಾಮಂಡಲ

    – ವಿದೇಶಾಂಗ ಇಲಾಖೆಗೆ ಸರಣಿ ಪ್ರಶ್ನೆ ಕೇಳಿದ ಪ್ರಿಯಾಂಕ್‌
    – ಕೇಂದ್ರ ಸರ್ಕಾರ ದೊಡ್ಡ ದೊಡ್ಡ ವಿಷನ್‌ ಹಾಕುತ್ತದೆ
    – ವಿಷನ್‌ ಸಾಕಾರಗೊಳಿಸಲು ಅನುಮತಿ ನೀಡದೇ ನಿರ್ಬಂಧಿಸುತ್ತದೆ

    ಬೆಂಗಳೂರು: ಕೇಂದ್ರ ಸರ್ಕಾರ ತನ್ನ ಹಿಂದಿನ ನಿರ್ಧಾರಗಳನ್ನು ರದ್ದುಗೊಳಿಸಿ ಅಮೆರಿಕ (USA) ಭೇಟಿಗೆ ನನಗೆ ಅನುಮತಿ ನೀಡಲು ನಿರ್ಧರಿಸಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಹೇಳಿದ್ದಾರೆ.

    ಅಮೆರಿಕ ಭೇಟಿಗೆ ಅನುಮತಿ ನೀಡಿದ ಬೆನ್ನಲ್ಲೇ ಎಕ್ಸ್‌ನಲ್ಲಿ ದೀರ್ಘ ಪೋಸ್ಟ್‌ ಹಾಕಿ ಕೇಂದ್ರ ಸರ್ಕಾರಕ್ಕೆ ಪ್ರಿಯಾಂಕ್‌ ಖರ್ಗೆ (Union Govt) ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?
    ಜೂನ್ 14 ರಿಂದ 27 ರವರೆಗೆ ಕರ್ನಾಟಕ ಸರ್ಕಾರವನ್ನು ಎರಡು ಪ್ರಮುಖ ಜಾಗತಿಕ ವೇದಿಕೆಗಳಲ್ಲಿ ಪ್ರತಿನಿಧಿಸಲು ಮತ್ತು ಸಹಯೋಗ ಮತ್ತು ಹೂಡಿಕೆಗಳಿಗಾಗಿ ಉನ್ನತ ಕಂಪನಿಗಳು, ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳೊಂದಿಗೆ 25ಕ್ಕೂ ಹೆಚ್ಚು ಅಧಿಕೃತ ಸಭೆಗಳನ್ನು ನಡೆಸಲು ನಾನು ಮೇ 15 ರಂದು ವಿದೇಶಾಂಗ ಇಲಾಖೆಯ ಬಳಿ ಅನುಮತಿ ಕೋರಿದ್ದೆ.

    ಸಚಿವರು + ಅಧಿಕಾರಿಗಳ ನಿಯೋಗಕ್ಕಾಗಿ ಮೇ 15 ರಂದು ಸಲ್ಲಿಸಿದ್ದ ಅರ್ಜಿಯನ್ನು ಜೂನ್ 4 ರಂದು ತಿರಸ್ಕರಿಸಲಾಗಿತ್ತು. ಸಚಿವರಿಲ್ಲದೆ ಅಧಿಕಾರಿಗಳ ನಿಯೋಗಕ್ಕಾಗಿ ಜೂನ್ 6 ರಂದು ಹಾಕಿದ ಅರ್ಜಗೆ ಜೂನ್ 11 ರಂದು ಅನುಮತಿ ನೀಡಲಾಗಿತ್ತು. ಜೂನ್‌ 12 ರಂದು ಹಾಕಿದ್ದ ಕಿಯೋನಿಕ್ಸ್ ಅಧ್ಯಕ್ಷರ ಅರ್ಜಿಗೆ ಜೂನ್ 14 ರಂದು ಅನುಮತಿ ಸಿಕ್ಕಿತ್ತು. ಆದರೆ ಯಾವುದೇ ಅಧಿಕೃತ ವಿವರಣೆ ನೀಡದೇ ನನ್ನ ಅರ್ಜಿಯನ್ನು ನಿರಾಕರಿಸಲಾಗಿತ್ತು. ಇದನ್ನೂ ಓದಿ: ಅಮೆರಿಕಗೆ ತೆರಳಲು ನೋ ಕ್ಲಿಯರೆನ್ಸ್ – ಪ್ರಿಯಾಂಕ್ ಖರ್ಗೆಗೆ ಬಿಗ್‌ ಶಾಕ್‌

     

    ಜೂನ್ 19 ರಂದು ನಾನು ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ಸರ್ಕಾರದ ನಡೆಯನ್ನು ಪ್ರಶ್ನಿಸಿ ರಾಜಕೀಯ ಹಸ್ತಕ್ಷೇಪದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದೆ. ಈ ವಿಷಯ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಕಟವಾಯಿತು. ಅದೇ ದಿನದ ಸಂಜೆಯ ವೇಳೆಗೆ ವಿದೇಶಾಂಗ ಸಚಿವಾಲಯವು ತನ್ನ ಹಿಂದಿನ ನಿರಾಕರಣೆಯನ್ನು ರದ್ದುಗೊಳಿಸಿ ಜೂನ್ 19 ರಂದು ನಿರಾಕ್ಷೇಪಣಾ ಅನುಮತಿಯನ್ನು ನೀಡಿದೆ.

    ನನ್ನ ಮೂಲ ಅರ್ಜಿಯ 36 ದಿನಗಳ ನಂತರ ಅಧಿಕೃತ ನಿರಾಕರಣೆಯ 15 ದಿನಗಳ ಬಳಿಕ ಮತ್ತು ನಾನು ನಿಗದಿತ ನಿರ್ಗಮನದ 5 ದಿನಗಳ ನಂತರ ವಿದೇಶಾಂಗ ಇಲಾಖೆ ತನ್ನ ನಿರ್ಧಾರವನ್ನು ರದ್ದುಗೊಳಿಸಿದೆ. ಈ ನಿರ್ಧಾರ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

    ಮೊದಲನೆಯದಾಗಿ ಅನುಮತಿಯನ್ನು ನಿರಾಕರಿಸಿದ್ದು ಯಾಕೆ? ವಿಷಯವು ಸಾರ್ವಜನಿಕವಾಗಿ ಬಹಿರಂಗವಾದ ನಂತರ ಹೊಣೆಗಾರಿಕೆಯನ್ನು ತಪ್ಪಿಸಲು ಹಿಂದಿನ ಆದೇಶವನ್ನು ಈಗ ರದ್ದುಗೊಳಿಸಲಾಗಿದೆಯೇ? ಮುಖ್ಯ ಕಾರ್ಯಕ್ರಮಗಳು ಮುಗಿದ ನಂತರ ಅಥವಾ ಪೂರ್ಣಗೊಳ್ಳುವ ಹಂತದಲ್ಲಿದ್ದ ನಂತರ ಅನುಮತಿ ನೀಡುವುದರ ಅರ್ಥವೇನು? ತಡವಾಗಿ ಅನುಮೋದನೆಯನ್ನು ತೋರಿಸುವ ಮೂಲಕ ವಿದೇಶಾಂಗ ಸಚಿವಾಲಯವು ಈಗ ಮೂಲ ನಿರ್ಧಾರವನ್ನು ವಿವರಿಸುವುದನ್ನು ತಪ್ಪಿಸುತ್ತದೆಯೇ? ಇದನ್ನೂ ಓದಿ: ವಿದೇಶದಿಂದ ಸಚಿವ ಪ್ರಿಯಾಂಕ್ ಖರ್ಗೆ ಬೆಂಗಳೂರಿಗೆ ವಾಪಸ್ – ಬರ್ತಿದ್ದಂತೆ ಕೇಂದ್ರದ ವಿರುದ್ಧ ವಾಗ್ದಾಳಿ

    ಕೇಂದ್ರವು ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ನ್ಯಾಷನಲ್ ಕ್ವಾಂಟಮ್ ಮಿಷನ್ ಮತ್ತು ಇಂಡಿಯಾ ಎಐ ಮಿಷನ್ ನಂತಹ ಘೋಷಣೆಗಳನ್ನು ನಮಗೆ ನೀಡುತ್ತಿದ್ದರೂ ಈ ಆಕಾಂಕ್ಷೆಗಳನ್ನು ಸಾಕಾರಗೊಳಿಸುವ ನಿಜವಾದ ಕೆಲಸ ಕರ್ನಾಟಕದಲ್ಲಿ ನಡೆಯುತ್ತಿದೆ. ಕೇಂದ್ರ ಸರ್ಕಾರ ದೊಡ್ಡ ದೊಡ್ಡ ವಿಷನ್‌ಗಳನ್ನು ಪ್ರಕಟಿಸುತ್ತದೆ. ಆದರೆ ನಾವು ಹೂಡಿಕೆಗಳನ್ನು ತರಲು ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ಭಾರತವನ್ನು ಜಾಗತಿಕ ನಾಯಕನಾಗಿ ರೂಪಿಸಲು ಕೆಲಸ ಮಾಡಲು ಮುಂದಾದಾಗ ನಮ್ಮನ್ನು ನಿರ್ಬಂಧಿಸಲಾಗುತ್ತದೆ.

    ಪ್ರಧಾನಿ ಒಮ್ಮೆ MAGA + MIGA = MEGA ಎಂದು ಹೇಳಿದ್ದರು. ಆದರೆ ಭಾರತದ ತಂತ್ರಜ್ಞಾನ ಮತ್ತು ನಾವೀನ್ಯತೆ ಎಂಜಿನ್ ಅನ್ನು ಚಾಲನೆ ಮಾಡುವ ರಾಜ್ಯಕ್ಕೆ ಅಗತ್ಯವಿರುವ ಬೆಂಬಲ ನಿರಾಕರಿಸಲ್ಪಟ್ಟಾಗ ಈ ವಿಷನ್‌ಗಳ ಅರ್ಥವೇನು? ಈ ಪ್ರಶ್ನೆಗಳಿಗೆ ತುರ್ತು ಪ್ರತಿಕ್ರಿಯೆ ಬೇಕು. ಕರ್ನಾಟಕವು ಉತ್ತರಗಳಿಗೆ ಅರ್ಹವಾಗಿದೆ.