Tag: karnatka

  • 772 ಪಾಸಿಟಿವ್‌, 7 ಮಂದಿ ಬಲಿ – 1,261 ಡಿಸ್ಚಾರ್ಜ್‌

    772 ಪಾಸಿಟಿವ್‌, 7 ಮಂದಿ ಬಲಿ – 1,261 ಡಿಸ್ಚಾರ್ಜ್‌

    ಬೆಂಗಳೂರು: ಇಂದು ಕರ್ನಾಟಕದಲ್ಲಿ 772 ಮಂದಿಗೆ ಕೊರೊನಾ ಬಂದಿದ್ದು, ಆಸ್ಪತ್ರೆಯಿಂದ 1,261 ಡಿಸ್ಚಾರ್ಜ್‌ ಆಗಿದ್ದಾರೆ. ಒಟ್ಟು 7 ಮಂದಿ ಸಾವನ್ನಪ್ಪಿದ್ದಾರೆ.

    ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 9,10,241ಕ್ಕೆ ಏರಿಕೆ ಆಗಿದೆ. ಈ ಪೈಕಿ 8,84,205 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 14,001 ಸಕ್ರಿಯ ಪ್ರಕರಣಗಳಿವೆ.

    ಇಲ್ಲಿಯವರೆಗೆ ಒಟ್ಟು 12, 016 ಮಂದಿ ಕೊರೊನಾಗೆ ಬಲಿಯಾಗಿದ್ದು, ಸದ್ಯ 219 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇಂದು 4,358 ಆಂಟಿಜನ್‌ ಟೆಸ್ಟ್‌, 69,293 ಆರ್‌ಟಿ ಪಿಸಿಆರ್‌ ಸೇರಿದಂತೆ 73,651 ಪರೀಕ್ಷೆ ಮಾಡಲಾಗಿದೆ. ಒಟ್ಟು ರಾಜ್ಯದಲ್ಲಿ ಇಲ್ಲಿಯವರೆಗೆ 1,31,21,419
    ಕೊರೊನಾ ಪರೀಕ್ಷೆ ಮಾಡಲಾಗಿದೆ.

    ಎಂದಿನಂತೆ ಬೆಂಗಳೂರು ನಗರದಲ್ಲಿ 363 ಮಂದಿಗೆ ಸೋಂಕು ಬಂದಿದ್ದು 5 ಮಂದಿ ಮೃತಪಟ್ಟಿದ್ದಾರೆ. ಉಳಿದಂತೆ ಮೈಸೂರು 40, ಬಳ್ಳಾರಿ 36, ಹಾಸನ 32, ಕೋಲಾರ 31, ಮಂದಿಗೆ ಸೋಂಕು ಬಂದಿದೆ.

    ಐಸಿಯುನಲ್ಲಿಒಟ್ಟು 219 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಬೆಂಗಳೂರು ನಗರದಲ್ಲಿ 102, ತುಮಕೂರು 12, ಕಲಬುರಗಿಯಲ್ಲಿ 15 ಮಂದಿ ಇದ್ದಾರೆ.

     

  • 50 ಸಾವಿರಕ್ಕೆ ನನ್ನನ್ನು ಖರೀದಿಸಲು ಯತ್ನಿಸಿದ್ದರು: ಬಿಜೆಪಿ ಮಾಜಿ ಸಚಿವರ ವಿರುದ್ಧ ಮಹಿಳೆ ಆರೋಪ

    50 ಸಾವಿರಕ್ಕೆ ನನ್ನನ್ನು ಖರೀದಿಸಲು ಯತ್ನಿಸಿದ್ದರು: ಬಿಜೆಪಿ ಮಾಜಿ ಸಚಿವರ ವಿರುದ್ಧ ಮಹಿಳೆ ಆರೋಪ

    ಬೆಂಗಳೂರು: ದೇಶದಲ್ಲಿ ಸಾಕಷ್ಟು ಸುದ್ದಿ ಮಾಡಿದ್ದ ಮೀಟೂ ಈಗ ರಾಜ್ಯ ರಾಜಕೀಯದಲ್ಲೂ ಸದ್ದು ಮಾಡಿದ್ದು, ಬಿಜೆಪಿ ಮುಖಂಡ, ಮಾಜಿ ಸಚಿವ ಶಿವಾನಂದ ನಾಯ್ಕ್ ವಿರುದ್ಧ ಆರೋಪ ಕೇಳಿ ಬಂದಿದೆ.

    ಈ ಹಿಂದೆ ರಾಜ್ಯ ಬಿಜೆಪಿಯಲ್ಲಿ ಕೆಲಸ ಮಾಡಿದ್ದ ಮಾಧುರಿ ಎಂಬವರು ತಮ್ಮ ಫೇಸ್‍ಬುಕ್ ನಲ್ಲಿ ಭಟ್ಕಳ ಮಾಜಿ ಶಾಸಕ ಶಿವಾನಂದ ನಾಯಕ್ ಮೇಲೆ ಆರೋಪ ಮಾಡಿದ್ದಾರೆ.

    ಸಾರ್ವಜನಿಕ ಸಭೆಯಲ್ಲಿ ಶಿವಾನಂದ ನಾಯಕ್ ಅವರ ಪರಿಚಯವಾಯಿತು. ಬಳಿಕ ಅವರ ಖಾಸಗಿ ಫೋನ್ ನಂಬರ್ ಪಡೆದು, ತನ್ನನ್ನು ಲೈಂಗಿಕವಾಗಿ ಬಳಕೆ ಮಾಡಿಕೊಳ್ಳಲು ಯತ್ನಿಸಿದ್ದರು. ತಮಗೆ 100ಕ್ಕೂ ಹೆಚ್ಚು ಬಾರಿ ಕರೆ ಮಾಡಿದ್ದು, ಊಟ, ಕಾಪಿಗೆ ಬಂದು ತಮ್ಮೊಂದಿಗೆ ರಾತ್ರಿ ಪೂರ್ಣ ಕಾಲ ಕಳೆಯುವಂತೆ ಹೇಳಿದ್ದರು ಎಂದು ಆರೋಪಿಸಿದ್ದಾರೆ.

    ಎಫ್‍ಬಿ ಪೋಸ್ಟ್ ನಲ್ಲಿ ಏನಿದೆ?
    ನಾನು ಕೆಲ ಮುಖಂಡರಿಗೆ ಫೋನ್ ನಂಬರ್ ನೀಡಿದ್ದನ್ನು ಅವರು ಗ್ರೀನ್ ಸಿಗ್ನಲ್ ಎಂದೇ ಭಾವಿಸಿದ್ದರು. ನನ್ನನ್ನು ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ಕಾಫಿಗಾಗಿ ಕರೆದಿದ್ದರು. ಕಾಫಿ ಕುಡಿಯುವಾಗ ಯಾವ ರೂಮ್ ಬುಕ್ ಮಾಡಲಿ ಎಂದು ಕೇಳಿದ್ದರು. ಯಾಕೆ ಎಂದು ಕೇಳಿದಾಗ ನಿಮ್ಮ ಪ್ರಿಫರೆನ್ಸ್ ನೋಡಬೇಕು ವಿತ್ ಟಬ್ ಆರ್ ವಿಥೌಟ್ ಟಬ್ ಎಂದಿದ್ದರು. ನಾನು ಕೂಡಲೇ ಕಾಫಿಯನ್ನು ಅವರ ಮುಖದ ಮೇಲೆ ಎಸೆದಿದ್ದೆ. ಆಗ ನನಗೆ 500 ರೂ.ಗಳ ಬಂಡಲ್ ಹಣ ಕೊಡಲು ಬಂದಿದ್ರು. ನನ್ನ ಕೈ ಹಿಡಿದು ಎಳೆದಾಡಿದರು. ಅವರು 50 ಸಾವಿರ ರೂ.ಗೆ ನನ್ನನ್ನು ಖರೀದಿಸಬಹುದು ಎಂದುಕೊಂಡಿದ್ದರು. ಇದಕ್ಕೆ ನಾನು, ನೀವು ಇಲ್ಲಿಂದ ಹೊರಗಡೆ ಹೋಗ್ತೀರಾ ಅಥವಾ ಹೊಡೆಯಬೇಕೇ ಎಂದು ಪ್ರಶ್ನಿಸಿದೆ. ಕೂಡಲೇ ಅವರು ಹೊರಟು ಹೋದರು. ಈ ಘಟನೆಯಾದ ಬಳಿಕ 100 ಬಾರಿ ನನಗೆ ಕರೆ ಮಾಡಿದ್ದು ನನಗೆ ನೆನಪಿದೆ. ಆ ಸಮಯದಲ್ಲಿ ಮೊಬೈಲ್ ನಲ್ಲಿ ಯಾವುದೇ ಬ್ಲಾಕ್ ಆಯ್ಕೆಗಳು ಇರಲಿಲ್ಲ ಎಂದು ಬರೆದುಕೊಂಡಿದ್ದಾರೆ..

    ಈ ಕುರಿತು ಪ್ರತಿಕ್ರಿಯಿಸಿರುವ ಶಿವಾನಂದ್ ನಾಯ್ಕ್, ವೈಯಕ್ತಿಕವಾಗಿ ಅವರ ಪರಿಚಯ ನನಗಿಲ್ಲ. ಅವರು ಯಾರೆಂಬುದೇ ನನಗೆ ಗೊತ್ತಿಲ್ಲ. ಅಂತಹ ಯಾವುದೇ ಆರೋಪವನ್ನು ಅವರು ಸಾಬೀತು ಪಡಿಸಲಿ, ನಾನು ಯಾವುದೇ ಹೆಣ್ಣು ಮಕ್ಕಳ ಜೊತೆ ಆ ರೀತಿ ನಡೆದುಕೊಂಡಿಲ್ಲ. ಸಾರ್ವಜನಿಕ ಕ್ಷೇತ್ರದಲ್ಲಿ ಉತ್ತಮ ಹೆಸರು ಗಳಿಸಿದ್ದೇನೆ. ಅವರ ಹೇಳಿಕೆಗಳು ಸುಳ್ಳು, ನನ್ನನ್ನು ಮುಂದಿನ ಲೋಕಸಭಾ ಅಭ್ಯರ್ಥಿಯನ್ನಾಗಿ ಘೋಷಿಸುವ ಸಾಧ್ಯತೆ ಇದ್ದು, ಇದನ್ನು ತಪ್ಪಿಸಲು ಉದ್ದೇಶ ಪೂರ್ವಕವಾಗಿ ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ನಾನು ದೂರನ್ನು ದಾಖಲಿಸುತ್ತೇನೆ ಎಂದು ತಿಳಿಸಿದರು.

    ಫೇಸ್‍ಬುಕ್ ನಲ್ಲಿ ಬಿಜೆಪಿ ನಾಯಕರ ಬಗ್ಗೆ ಹೇಳಿಕೊಂಡಿದ್ದ ಮಾಧುರಿ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆ ಈ ಹಿಂದೆ ಪ್ರಕಟಿಸಿದ್ದ ಪೋಸ್ಟನ್ನು ಡಿಲೀಟ್ ಮಾಡಿದ್ದಾರೆ. ಇದನ್ನೂ ಓದಿ: #MeToo ಸುಳಿಯಲ್ಲಿ ಕೇಂದ್ರ ಸಚಿವ ಸದಾನಂದಗೌಡ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಕಲಿ ಪಾಸ್‍ಪೋರ್ಟ್ ಕೇಸ್: ಚೋಟಾ ರಾಜನ್‍ಗೆ 7ವರ್ಷ ಜೈಲು ಶಿಕ್ಷೆ

    ನಕಲಿ ಪಾಸ್‍ಪೋರ್ಟ್ ಕೇಸ್: ಚೋಟಾ ರಾಜನ್‍ಗೆ 7ವರ್ಷ ಜೈಲು ಶಿಕ್ಷೆ

    ನವದೆಹಲಿ: ನಕಲಿ ಪಾಸ್‍ಪೋರ್ಟ್  ಪ್ರಕರಣದ ಅಪರಾಧಿ ಭೂಗತ ಪಾತಕಿ 55 ವರ್ಷದ ರಾಜೇಂದ್ರ ಸಹದೇವ್ ನಿಖಲ್ಜೆ ಅಲಿಯಾಸ್ ಚೋಟಾ ರಾಜನ್‍ಗೆ ಸಿಬಿಐ ವಿಶೇಷ ಕೋರ್ಟ್ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

    ಸೋಮವಾರ ತೀರ್ಪು ನೀಡಿದ್ದ ನ್ಯಾಯಾಧೀಶ ವೀರೇಂದ್ರ ಕುಮಾರ್ ಗೋಯಲ್ ಇಂದು ರಾಜನ್ ಸೇರಿ ಒಟ್ಟು ನಾಲ್ವರು ಅಪರಾಧಿಗಳಿಗೆ 7 ವರ್ಷ ಜೈಲು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು.

    ಏನಿದು ಪ್ರಕರಣ?
    3 ಮಂದಿ ಸರ್ಕಾರಿ ಅಧಿಕಾರಿಗಳ ನೆರವಿನಿಂದ ಮೋಹನ್ ಕುಮಾರ್ ಎಂಬ ಹೆಸರಿನ ನಕಲಿ ಪಾಸ್‍ಪೋರ್ಟ್ ಅನ್ನು ಹೊಂದಿದ್ದ ಆರೋಪ ಚೋಟಾ ರಾಜನ್ ಮೇಲಿತ್ತು. ಈ ಕೇಸ್ ಬಗ್ಗೆ ಸಿಬಿಐ ತಂಡ ತನಿಖೆ ನಡೆಸಿ ಚೋಟಾ ಹಾಗೂ ಮೂವರು ನಿವೃತ್ತ ಸರ್ಕಾರಿ ಅಧಿಕಾರಿಗಳ ಮೇಲೆ ಆರೋಪ ಪಟ್ಟಿ ಸಲ್ಲಿಸಿದ್ದರು. 2016ರ ಜೂನ್ 8ರಂದು ಈ ಸಂಬಂಧ ಪಾಸ್‍ಪೋರ್ಟ್ ಅಧಿಕಾರಿಗಳಾದ ಜಯಶ್ರೀ ದತ್ತಾತ್ರೇಯ ರಹಾಟೆ, ದೀಪಕ್ ನಟವರ್‍ಲಾಲ್ ಷಹಾ ಹಾಗೂ ಲಲಿತಾ ಲಕ್ಷ್ಮಣ್ ಮತ್ತು ಚೋಟಾರಾಜನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಪಾಸ್‍ಪೋರ್ಟ್ ಕಾಯಿದೆ ಅನ್ವಯ ಮೌಲ್ಯಯುತ ಭದ್ರತಾ ದಾಖಲೆಗಳ ನಕಲು, ಕ್ರಿಮಿನಲ್ ಪ್ರಕರಣ ಹಾಗೂ ಪಿತೂರಿ ಪ್ರಕರಣವೆಂದು ಪರಿಗಣಿಸಿ ಆರೋಪಿಸಲಾಗಿತ್ತು.

    ಚೋಟಾರಾಜನ್‌ಗೆ ಮೋಹನ್‌ಕುಮಾರ್‌ ಎಂಬ ಹೆಸರಿನಲ್ಲಿ ಜಯಶ್ರೀ, ಷಹಾ ಹಾಗೂ ಲಕ್ಷ್ಮಣ್ 1998–99ರಲ್ಲಿ ಬೆಂಗಳೂರಿನಲ್ಲಿ ಪಾಸ್‍ಪೋರ್ಟ್ ನೀಡಿದ್ದಾರೆ ಎಂದು ವಿರುದ್ಧ ಸಿಬಿಐ ತನ್ನ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿತ್ತು.

    ರಾಜನ್ ಬೆಂಗಳೂರಿನ ಪ್ರಾದೇಶಿಕ ಪಾಸ್‍ಪೋರ್ಟ್ ಕಚೇರಿಯಿಂದ ಮೋಹನ್ ಕುಮಾರ್ ಹೆಸರಿನಲ್ಲಿ ಪಾಸ್‍ಪೋರ್ಟ್ ಪಡೆದಿದ್ದರೆ, ಇನ್ನೊಂದು ಪಾಸ್‍ಪೋರ್ಟನ್ನು ಸಿಡ್ನಿಯ ಭಾರತೀಯ ದೂತಾವಾಸ ಕೇಂದ್ರದಿಂದ ಪಡೆದುಕೊಂಡಿದ್ದ.

    ಚೋಟಾ ರಾಜನ್ ವಿರುದ್ಧ ಮಹಾರಾಷ್ಟ್ರ, ದೆಹಲಿ, ಉತ್ತರಪ್ರದೇಶ ಹಾಗೂ ಗುಜರಾತ್ ರಾಜ್ಯಗಳು ಸೇರಿದಂತೆ ಸುಮಾರು 70 ಪ್ರಕರಣಗಳನ್ನು ಸಿಬಿಐ ದಾಖಲಿಸಿತ್ತು. ಪ್ರಸ್ತುತ ಈಗ ಚೋಟಾ ರಾಜನ್ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.

    ಮಂಡ್ಯ ಪಾಸ್‍ಪೋರ್ಟ್: ಚೋಟಾ ರಾಜನ್ ತನಿಖಾ ಸಂಸ್ಥೆಗಳ ಕಣ್ತಪ್ಪಿಸುವ ಉದ್ದೇಶದಿಂದ ನಕಲಿ ಪಾಸ್‍ಪೋರ್ಟ್ ಗಳನ್ನು ಬಳಸಿ ವ್ಯವಹಾರ ನಡೆಸುತ್ತಿದ್ದ. ಇಂಡೋನೇಷಿಯಾದಲ್ಲಿ ಬಂಧನದ ವೇಳೆ ಕರ್ನಾಟಕದ ಮಂಡ್ಯ ಜಿಲ್ಲೆಯ ಹೆಸರುಳ್ಳ ನಕಲಿ ಪಾಸ್‍ಪೋರ್ಟ್ ಈತನ ಬಳಿಯಿತ್ತು. ಆಸ್ಟ್ರೇಲಿಯಾದ ಸಿಡ್ನಿಯಿಂದ ಇಂಡೋನೇಷಿಯಾಗೆ ಚೋಟಾ ರಾಜನ್ ತೆರಳುತ್ತಿರುವ ಬಗ್ಗೆ ತನಿಖಾ ಸಂಸ್ಥೆಗಳಿಗೆ ಖಚಿತ ಮಾಹಿತಿ ಸಿಕ್ಕಿತ್ತು. ಆದರೆ ಪಾಸ್ ಪೋರ್ಟ್ ಪರಿಶೀಲನೆ ವೇಳೆ ಮೋಹನ್ ಕುಮಾರ್ ಎಂಬ ಹೆಸರಿನ ವ್ಯಕ್ತಿಯನ್ನು ಬಾಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಇದರಿಂದಾಗಿ ಆರಂಭದಲ್ಲಿ ತನಿಖಾ ಸಂಸ್ಥೆಗಳಲ್ಲಿ ಗೊಂದಲ ಹುಟ್ಟಿಸಿತ್ತು. ಅಂತಿಮವಾಗಿ 2015ರ ಅಕ್ಟೋಬರ್‍ನಲ್ಲಿ ಚೋಟಾ ರಾಜನನ್ನು ಬಾಲಿ ಪೊಲೀಸರು ಬಂಧಿಸಿದರು.