Tag: karnatakabudget 2017

  • 2017-18ರ ರಾಜ್ಯ ಬಜೆಟ್‍ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಿಕ್ಕಿದ್ದೇನು?

    2017-18ರ ರಾಜ್ಯ ಬಜೆಟ್‍ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಿಕ್ಕಿದ್ದೇನು?

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಬಜೆಟ್‍ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ 424 ಕೋಟಿ ರೂ. ಅನುದಾನವನ್ನು ಪ್ರಕಟಿಸಿದ್ದಾರೆ. ಇಲಾಖೆಗೆ ಸಂಬಂಧಿಸಿದಂತೆ ಬಜೆಟ್‍ನಲ್ಲಿ ಘೋಷಣೆಯಾದ ಪ್ರಮುಖ ಅಂಶಗಳು ಇಲ್ಲಿದೆ.

    • ವಿಶ್ವಕನ್ನಡ ಸಮ್ಮೇಳಕ್ಕೆ 20 ಕೋಟಿ ಅನುದಾನ.
    • 3 ಕೋಟಿ ವೆಚ್ಚದಲ್ಲಿ ರಂಗನಾಟಕ ರಚಿಸಲು ವೇದಿಕೆ.
    • ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ 3 ಕೋಟಿ ರೂ. ಅನುದಾನ.
    • ಉತ್ತರ ಕರ್ನಾಟಕದಲ್ಲಿ ಬಯಲು ಅಕಾಡೆಮಿ ಸ್ಥಾಪನೆ.
    • ಜವಹಾರ್ ಲಾಲ್ ನೆಹರು ವಿವಿಯಲ್ಲಿ ಕನ್ನಡ ಅಧ್ಯಯನ ಪೀಠ ನಿರ್ವಹಣೆಗೆ 5 ಕೋಟಿ ರೂ. ಅನುದಾನ.
    • 20 ಕೋಟಿ ಅನುದಾನದಲ್ಲಿ ಹೊಸ ಜಿಲ್ಲೆಗಳಲ್ಲಿ ಸಭಾಂಗಣ ನಿರ್ಮಾಣ.
    • 2 ಕೋಟಿ ವೆಚ್ಚದಲ್ಲಿ ಕೆ.ಸಿ ರೆಡ್ಡಿಯವರ ಸ್ಮಾರಕ ಸ್ಥಾಪನೆ.
    • ಗಡಿ ಪ್ರದೇಶ ಅಭಿವೃದ್ಧಿ ಮಂಡಳಿಗೆ 50 ಕೋಟಿ ರೂ. ಅನುದಾನ.
    • ಶಹಾಜಿ ಮಹಾರಾಜರ ಸಮಾಧಿ ಅಭಿವೃದ್ಧಿಗೆ 2 ಕೋಟಿ ರೂ. ಅನುದಾನ.