Tag: Karnataka Working Journalists Association

  • ಪಬ್ಲಿಕ್ ಟಿವಿಯ ರವೀಶ್‌ಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ

    ಪಬ್ಲಿಕ್ ಟಿವಿಯ ರವೀಶ್‌ಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ

    ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ) ಪ್ರತಿ ವರ್ಷ ನೀಡುವ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟ ಮಾಡಿದ್ದು ಪಬ್ಲಿಕ್ ಟಿವಿಯ ರವೀಶ್ ಅವರಿಗೆ ಪ್ರಶಸ್ತಿ ಸಿಕ್ಕಿದೆ.

    ವಿಜಯಪುರದಲ್ಲಿ ನಡೆಯುವ 37 ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.

    ಪ್ರಶಸ್ತಿಗಳ ವಿವರ:
    1. ಜಿ.ನಾರಾಯಣ ಸ್ವಾಮಿ ಪ್ರಶಸ್ತಿ (ಅತ್ಯುತ್ತಮ ಗ್ರಾಮಾಂತರ ವರದಿ):
    ಮಂಜುನಾಥ ಜೂಟಿ, ವಿಜಯ ಕರ್ನಾಟಕ, ಕಲಬುರಗಿ
    ಕಲಾವತಿ ಬೈಚಬಾಳ, ಪ್ರಜಾವಾಣಿ, ಧಾರವಾಡ.

    2. ಖಾದ್ರಿ ಶಾಮಣ್ಣ ಪ್ರಶಸ್ತಿ (ಅತ್ಯುತ್ತಮ ರಾಜಕೀಯ ವಿಮರ್ಶೆ):
    ವೈ.ಗ.ಜಗದೀಶ್, ಪ್ರಜಾವಾಣಿ, ಬೆಂಗಳೂರು.
    ಕೂಡ್ಲಿ ಗುರುರಾಜ್, ಉದಯವಾಣಿ, ಮೈಸೂರು.

    3. ಪಟೇಲ್ ಭೈರಹನುಮಯ್ಯ ಪ್ರಶಸ್ತಿ (ಅತ್ಯುತ್ತಮ ಮಾನವೀಯ ವರದಿ):
    ಕೆ.ಓಂಕಾರಮೂರ್ತಿ, ಪ್ರಜಾವಾಣಿ, ಕೋಲಾರ.
    ಜಿ.ವಿ.ಸುಬ್ಬರಾವ್, ಬಳ್ಳಾರಿ ಬೆಳಗಾಯಿತು ಪತ್ರಿಕೆ, ವಿಜಯನಗರ ಜಿಲ್ಲೆ.

    4. ಬಿ.ಎಸ್.ವೆಂಕಟರಾಂ ಪ್ರಶಸ್ತಿ (ಅತ್ಯುತ್ತಮ ಸ್ಕೂಪ್ ವರದಿ):
    ವಿಜಯಲಕ್ಷ್ಮಿ ಶಿಬರೂರು, ವಿಜಯ ಟೈಮ್ಸ್, ಬೆಂಗಳೂರು.
    ಎಲ್.ಎಸ್.ಶ್ರೀಕಾಂತ್, ಕನ್ನಡಪ್ರಭ, ಮೈಸೂರು.

    5. ಗಿರಿಧರ್ ಪ್ರಶಸ್ತಿ (ಅತ್ಯುತ್ತಮ ಅಪರಾಧ ವರದಿ):
    ಇಬ್ರಾಹಿಂ ಖಲೀಬ್, ಸುದ್ದಿ ಬಿಡುಗಡೆ, ಪುತ್ತೂರು.
    ಎಚ್.ಟಿ.ಪ್ರಸನ್ನ, ಪೊಲೀಸ್ ಬೇಟೆ, ಹಿರಿಯೂರು.

    6. ಮಂಗಳ ಎಂ.ಸಿ. ವರ್ಗೀಸ್ ಪ್ರಶಸ್ತಿ (ವಾರಪತ್ರಿಕೆ ವಿಭಾಗ):
    ಡಾ.ಯು.ಬಿ.ರಾಜಲಕ್ಷ್ಮಿ, ಸಂಪಾದಕರು, ತರಂಗ, ಮಣಿಪಾಲ್.
    ಶ್ರಿಮತಿ ಎಚ್.ಜಿ.ಶೋಭ, ಸಂಪಾದಕರು, ಸ್ತ್ರೀ ಜಾಗೃತಿ ಪತ್ರಿಕೆ

    7. ನೆಟ್ಟಕಲ್ಲಪ್ಪ ಪ್ರಶಸ್ತಿ, (ಅತ್ಯುತ್ತಮ ಕ್ರೀಡಾ ವರದಿ):
    ಅವಿನಾಶ್ ಜೈನಹಳ್ಳಿ, ವಿಜಯವಾಣಿ, ಮೈಸೂರು.
    ಸ್ಪಂದನ್ ಕೆ. ಕನ್ನಡ ಪ್ರಭ, ಬೆಂಗಳೂರು.

    8. ಬಂಡಾಪುರ ಮುನಿರಾಜು ಪ್ರಶಸ್ತಿ (ಅತ್ಯುತ್ತಮ ಸುದ್ದಿ ಚಿತ್ರ):
    ಎಂ.ಎನ್.ಲಕ್ಷ್ಮೀನಾರಾಯಣ ಯಾದವ್, ಸ್ಟಾರ್ ಆಫ್ ಮೈಸೂರು.
    ಕೆ.ಎಸ್.ಶ್ರೀಧರ್, ವಿಜಯ ಕರ್ನಾಟಕ.
    ಆರ್.ನಾಗರಾಜ್, ತುಮಕೂರು.

    9. ಆರ್.ಎಲ್.ವಾಸುದೇವರಾವ್ ಪ್ರಶಸ್ತಿ (ಅರಣ್ಯ ಕುರಿತ ವರದಿಗೆ):
    ಎಸ್.ಎಸ್.ಸಚ್ಛಿತ್, ಹುಣಸೂರು.
    ಶ್ರೀನಿವಾಸ.ಪಿ.ಎ., ಹಾಸನ.

    10. ಆರ್.ಎಲ್.ವಾಸುದೇವ ರಾವ್ ಪ್ರಶಸ್ತಿ (ವನ್ಯಪ್ರಾಣಿಗಳ ಅತ್ಯುತ್ತಮ ವರದಿಗೆ):
    ನಿರಂಜನ ಕಗ್ಗೆರೆ, ಟೈಮ್ಸ್ ಆಫ್ ಇಂಡಿಯಾ.
    ಇಮ್ರಾನ್ ವುಲ್ಲಾ, ಪಾವಗಡ, ತುಮಕೂರು.
    ಗುರುದತ್ ಭಟ್, ವಿಜಯ ಕರ್ನಾಟಕ, ಬೆಳಗಾವಿ.

    11. ಬಿ.ಜಿ.ತಿಮ್ಮಪ್ಪಯ್ಯ ಪ್ರಶಸ್ತಿ (ಆರ್ಥಿಕ ದುರ್ಬಲ ವರ್ಗದ ಅತ್ಯುತ್ತಮ ವರದಿಗೆ):
    ಕೆ.ಬಿ.ಜಗದೀಶ್ ಜೇಡುಬೀಟೆ, ಗೋಣಿಕೊಪ್ಪ, ಕೊಡಗು.
    ಅಶೋಕ ಸಾಲವಡಗಿ, ಪ್ರಜಾವಾಣಿ, ಯಾದಗಿರಿ.
    ಕೆ.ಎಸ್.ಸೋಮಶೇಖರ, ಇಂದುಸಂಜೆ, ಬೆಂಗಳೂರು.

    12. ಮಂಡಿಬೆಲೆ ಶಾಮಣ್ಣ ಪ್ರಶಸ್ತಿ (ಗ್ರಾಮೀಣ ವಿಭಾಗ):
    ಎಚ್.ಆರ್.ದೇವರಾಜ್, ಕಡೂರು, ಚಿಕ್ಕಮಗಳೂರು ಜಿಲ್ಲೆ. ರಾಘವೇಂದ್ರ ವೆಂಕಟರಾವ್ ಗುಮಾಸ್ತೆ, ಸಂಯುಕ್ತ ಕರ್ನಾಟಕ, ಮುದಗಲ್. ರಾಯಚೂರು ಜಿಲ್ಲೆ. ಸದಾಶಿವ ರಾಮಪ್ಪ ಬಡಿಗೇರ, ರಾಯಬಾಗ, ಬೆಳಗಾವಿ ಜಿಲ್ಲೆ.

    13. ನಾಡಪ್ರಭು ಕೆಂಪೇಗೌಡ ಪ್ರಶಸ್ತಿ:
    ಎನ್.ಬಿ.ನಾರಾಯಣ, ಮಂಗಳ ಪತ್ರಿಕೆ
    ಆರ್.ಜಿ.ಹಳ್ಳಿ ನಾಗರಾಜ್, ಬೆಂಗಳೂರು. ಗಂಗಾಧರ ಕುಷ್ಟಗಿ, ಲಂಕೇಶ್ ಪತ್ರಿಕೆ.
    ಪುಟ್ಟಸ್ವಾಮರಾಧ್ಯ, ಬೆಂಗಳೂರು.

    14. ಯಜಮಾನ್ ಟಿ.ನಾರಾಯಣಪ್ಪ ಪ್ರಶಸ್ತಿ (ಅತ್ಯುತ್ತಮ ಕೃಷಿ ವರದಿ):
    ರಾಜು ಖಾರ್ವಿ, ಉದಯವಾಣಿ, ಬೆಂಗಳೂರು.
    ಕೆ.ಪ್ರಕಾಶ್, ವಿಜಯ ಕರ್ನಾಟಕ, ಮುಳಬಾಗಿಲು.

    15. ನಾಡಿಗೇರ ಕೃಷ್ಣರಾಯರ ಪ್ರಶಸ್ತಿ (ಅತ್ಯುತ್ತಮ ಲೇಖನ):
    ಬಿ.ಎನ್.ಮಲ್ಲೇಶ್, ನಗರವಾಣಿ, ದಾವಣಗೆರೆ.
    ಪಿ.ಎಸ್.ಗುರು, ಪ್ರಜಾವಾಣಿ.

    16. ಅತ್ಯುತ್ತಮ ಪುಟ ವಿನ್ಯಾಸಗಾರರು: ಹರೀಶ್ ಕುಮಾರ್. ಆರ್. ವಿಜಯವಾಣಿ.
    ಎಸ್.ಆರ್.ರೋಹಿತ್, ನಾವಿಕ ಪತ್ರಿಕೆ, ಶಿವಮೊಗ್ಗ.

    17. ನ್ಯಾಯಾಲಯ ವಿಭಾಗ:
    ಪಿ.ರಾಜೇಂದ್ರ, ಹೊಸದಿಗಂತ.
    ಜಗನ್ .ಆರ್., ವಿಜಯವಾಣಿ

    18. ಸಣ್ಣುವಂಡ ಶ್ರೀನಿವಾಸ ಚಂಗಪ್ಪ ಪ್ರಶಸ್ತಿ (ಅತ್ಯುತ್ತಮ ವರದಿ):
    ಪಿ.ಪಿ.ಕಾಳಯ್ಯ, ಶಕ್ತಿ ದಿನಪತ್ರಿಕೆ, ಕೊಡಗು.
    ಬಸವರಾಜ ಭೋಗಾವತಿ, ಮಾನ್ವಿ, ಪ್ರಜಾವಾಣಿ, ರಾಯಚೂರು.

    19. ಕೆ.ಎನ್.ಸುಬ್ರಹ್ಮಣ್ಯ ಪ್ರಶಸ್ತಿ (ಇಂಗ್ಲಿಷ್ ಪತ್ರಿಕೆ ಅತ್ಯುತ್ತಮ ವರದಿ):
    ರಶ್ಮಿ ಬಿ.ಎಸ್. (ಬೇಲೂರು ರಶ್ಮಿ), ಡೆಕ್ಕನ್ ಹೆರಾಲ್ಡ್.
    ಪ್ರವೀಣ್ ಎಚ್.ಪರ,
    ದಿ ಹಿಂದೂ, ಕಲಬುರಗಿ.
    ಚೇತನ ಬೆಳಗೆರೆ, ಬೆಂಗಳೂರು.

    20. ಅತ್ಯುತ್ತಮ ತನಿಖಾ ವರದಿ:
    ಆನಂದ ಸೌದಿ, ಕನ್ನಡ ಪ್ರಭ, ಯಾದಗಿರಿ ಜಿಲ್ಲೆ.
    ಜಿ.ಮಹಾಂತೇಶ್, ದಿ ಫೈಲ್ಸ್

    21. ಅತ್ಯುತ್ತಮ ಡೆಸ್ಕ್ (ಸಂಪಾದಕೀಯ) ನಿರ್ವಹಣೆ:
    ನಾಗರಾಜ ಭಟ್, ವಿಜಯವಾಣಿ
    ರಾಧಾಕೃಷ್ಣ ಬಡ್ತಿ, ವಿಶ್ವವಾಣಿ
    ಶಶಿಧರ್ ಸಂಯುಕ್ತ ಕರ್ನಾಟಕ
    ಡಿ.ಜಿ.ಮಮತಾ, ಉದಯಕಾಲ

    ವಿದ್ಯುನ್ಮಾನ ವಿಭಾಗ:
    ಅಜಿತ್ ಹನುಮಕ್ಕನವರ, ಸುವರ್ಣ ಟಿವಿ.
    ಸಿದ್ದುಕಾಳೋಜಿ, ದಿಗ್ವಿಜಯ ಟಿವಿ.
    ಸುಕನ್ಯ, ಟಿವಿ 9

    ವಿದ್ಯುನ್ಮಾನ ವಿಭಾಗ(ವರದಿ):
    ರವೀಶ್, ಪಬ್ಲಿಕ್ ಟಿವಿ
    ವಿನಾಯಕ ಗಂಗೊಳ್ಳಿ, ಫಸ್ಟ್ ನ್ಯೂಸ್
    ಮಾರುತಿ ಪಾವಗಡ, ವಿಸ್ತಾರ ನ್ಯೂಸ್.
    ಎಸ್.ಚಂದ್ರಶೇಖರ್ ಡಿಡಿ1 ಚಂದನ ಟಿವಿ, ಕೋಲಾರ
    ಕೆಪಿಎಸ್ ಪ್ರಮೋದ್, ಪ್ರಜಾ ಟಿವಿ.,
    ಎಚ್.ಜಿ.ಶಾಂತಿನಾಥ, ಈ ಟಿವಿ ಭಾರತ್, ತುಮಕೂರು.
    ಕೆ.ಎಸ್.ದೀಪ, ಕಸ್ತೂರಿ ಟಿವಿ
    ಸಿದ್ದುಬಿರಾದರ್, ಪವರ್ ಟಿವಿ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಲಬುರಗಿಯಲ್ಲಿ 36ನೇ ಪತ್ರಕರ್ತರ ರಾಜ್ಯ ಸಮ್ಮೇಳನ

    ಕಲಬುರಗಿಯಲ್ಲಿ 36ನೇ ಪತ್ರಕರ್ತರ ರಾಜ್ಯ ಸಮ್ಮೇಳನ

    ಕಲಬುರಗಿ: 25 ವರ್ಷಗಳ ನಂತರ ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರ ಕಲಬುರಗಿಯಲ್ಲಿ ಕರ್ನಾಟಕ ರಾಜ್ಯ 36ನೆಯ ಪತ್ರಕರ್ತರ ಸಮ್ಮೇಳನ ನಡೆಸಲು ಸಿದ್ಧತೆಗಳನ್ನು ಆರಂಭಿಸಲಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನ ಉದ್ಘಾಟನೆ ನೆರವೇರಿಸುವಂತೆ ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಲಾಗಿದೆ. ಈ ವಾರದೊಳಗೆ ದಿನಾಂಕ ನಿಗದಿ ಮಾಡಲಾಗುವುದು. ಅಕ್ಟೋಬರ್ ಕೊನೆ ವಾರ ಇಲ್ಲವೇ ನವೆಂಬರ್ ಎರಡನೇ ವಾರದಲ್ಲಿ ಸಮ್ಮೇಳನ ನಡೆಯುವ ಸಾಧ್ಯತೆಗಳಿವೆ ಎಂದರು. ಇದನ್ನೂ ಓದಿ:  ನೈಸ್ ರಸ್ತೆಯಲ್ಲಿ ಕಾರು ಪಲ್ಟಿ – ಪಾರ್ಟಿಯಿಂದ ಬರುವಾಗ ಅಪಘಾತ?

    Karnataka administered 29.5 Lakh covid vaccine doses in a single day CM Bommai Thanks Modi

    ಈ ಹಿಂದೆ 1996ರಲ್ಲಿ ಕಲಬುರಗಿಯಲ್ಲಿ 20ನೇ ರಾಜ್ಯ ಸಮ್ಮೇಳನ ನಡೆದಿತ್ತು. ಆಗಿನ ಕಾಲಕ್ಕೂ ಈಗಿನ ಕಾಲಕ್ಕೂ ಸಾಕಷ್ಟು ಬದಲಾವಣೆಗಳಾಗಿವೆ. ಆಗ ವಿದ್ಯುನ್ಮಾನ ಮಾಧ್ಯಮಗಳು ಕಡಿಮೆ ಇದ್ದವು. ಈಗ ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಈ ಸಮ್ಮೇಳನದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಡೆಸಲಾಗುವುದು. ವೃತ್ತಿ ಆಧಾರಿತ ಮೇಲೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಸಮ್ಮೇಳನ ಸಂಘಟಿಸಲಾಗುತ್ತಿದೆ ಎಂದು ತಿಳಿಸಿದರು.

    ಮೊದಲನೇಯದಾಗಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಹಾಗೂ ಶರಣಬಸವೇಶ್ವರರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶರಣಬಸವೇಶ್ವರರ ಮಹಾದಾಸೋಹಿ ಸಂಸ್ಥಾನದ ಅಧ್ಯಕ್ಷರಾದ ಶರಣಬಸವಪ್ಪ ಅವರ ಸಾನಿಧ್ಯದಲ್ಲಿ ಸ್ವಾಗತ ಸಮಿತಿ ರಚಿಸಲಾಗುವುದು ಎಂದು ವಿವರಿಸಿದರು. ಇದನ್ನೂ ಓದಿ:  ಜಯಮೃತ್ಯುಂಜಯ ಸ್ವಾಮೀಜಿ ಶಾಪದಿಂದಲೇ ಯಡಿಯೂರಪ್ಪ ಅಧಿಕಾರ ಹೋಗಿದೆ: ವಿಜಯಾನಂದ ಕಾಶಪ್ಪನವರ್

    ಕೋವಿಡ್ ಸೋಂಕು ಆತಂಕದ ಹಿನ್ನೆಲೆಯಲ್ಲಿ ಸಮ್ಮೇಳನ ಎರಡು ದಿನದ ಬದಲು ಒಂದು ದಿನ ಮಾತ್ರ ಆಯೋಜಿಸಲು ಉದ್ದೇಶಿಸಲಾಗಿದೆ. ಬೆಳಿಗ್ಗೆ ಉದ್ಘಾಟನೆ, ತದನಂತರ ಗೋಷ್ಠಿ, ಸಂಜೆ ಸಮಾರೋಪ ನಡೆಸಲು ಉದ್ದೇಶಿಸಲಾಗಿದೆ. ಸಮ್ಮೇಳನ ಅಂಗವಾಗಿ ಅರ್ಥಪೂರ್ಣ ಲೇಖನಗಳನ್ನು ಒಳಗೊಂಡ ಸ್ಮರಣ ಸಂಚಿಕೆ ಹೊರಲಾಗುವುದು. ಒಟ್ಟಾರೆ ಸಮ್ಮೇಳನ ಯಶಸ್ವಿಗೆ ವಿವಿಧ ಸಮಿತಿಗಳನ್ನು ರಚಿಸಲಾಗುವುದು ಎಂದು ತಿಳಿಸಿದರು.

    ಕೆಯುಡಬ್ಲ್ಯೂಜೆ ಪ್ರಶಸ್ತಿ: ಸಮ್ಮೇಳನ ಸಮಾರೋಪದಲ್ಲಿ ಸಂಘದಿಂದ 19 ವಾರ್ಷಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ. 2 ವರ್ಷ ಸಂಘದಿಂದ ವಾರ್ಷಿಕ ಪ್ರಶಸ್ತಿ ನೀಡಿಲ್ಲ. ಈಗ ಕಲಬುರಗಿ ಸಮ್ಮೇಳನದಲ್ಲಿ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಹೀಗಾಗಿ ಪತ್ರಕರ್ತರು ತಮ್ಮ ಸಾಮಾಜಿಕ ಪರಿಣಾಮದ ಜತೆಗೆ ಇತರ ವೈವಿಧ್ಯಮಯವಾದ ವಿಶೇಷ ವರದಿಗಳ ಪ್ರತಿಯನ್ನು ಹಾಗೂ ತಮ್ಮ ಸೇವೆಯ ವಿಶಿಷ್ಟತೆಯನ್ನು ಒಳಗೊಂಡಂತೆ ಕುರಿತ ಅರ್ಜಿಯನ್ನು ಪತ್ರಕರ್ತರು ಇದೇ ಸೆ.30ರೊಳಗೆ ಸಲ್ಲಿಸಬೇಕೆಂದು ಪ್ರಕಟಿಸಿದರು. ಇದನ್ನೂ ಓದಿ:  ಹಿಂದೂಗಳ ಭಾವನೆಗೆ ಧಕ್ಕೆ ಬಾರದಂತೆ ಕಾನೂನು: ಅಶೋಕ್

    ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಭವಾನಿಸಿಂಗ್ ಠಾಕೂರ್ ಮಾತನಾಡಿ, ಸಮ್ಮೇಳನವನ್ನು ಎಲ್ಲರೂ ಒಗ್ಗೂಡಿ ಕನ್ನಡ ಸಾಹಿತ್ಯ ಸಮ್ಮೇಳನದಂತೆ ಯಶಸ್ವಿಗೊಳಿಸೋಣ, ಕಲಬುರಗಿಗೆ ಕೀರ್ತಿ ತರೋಣ ಎಂದರು.

    ಖಜಾಂಚಿ ರಾಜು ದೇಶಮುಖ ಸಂಘದ ಪ್ರಧಾನ ರಾಜ್ಯ ಸಮಿತಿ ಸದಸ್ಯರಾದ ಹಣಮಂತರಾವ ಭೈರಾಮಡಗಿ, ದೇವಿಂದ್ರಪ್ಪ ಕಪನೂರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.