Tag: Karnataka Temple

  • ರಾಹುಗ್ರಸ್ತ ರಕ್ತ ಚಂದ್ರಗ್ರಹಣಕ್ಕೆ ಕ್ಷಣಗಣನೆ – ರಾಜ್ಯದ ಪ್ರಸಿದ್ಧ ದೇವಾಲಯಗಳು ಬಂದ್

    ರಾಹುಗ್ರಸ್ತ ರಕ್ತ ಚಂದ್ರಗ್ರಹಣಕ್ಕೆ ಕ್ಷಣಗಣನೆ – ರಾಜ್ಯದ ಪ್ರಸಿದ್ಧ ದೇವಾಲಯಗಳು ಬಂದ್

    – ಗ್ರಹಣ ದಿನ ದೇವರಿಗೂ `ದರ್ಬೆ’ ದಿಗ್ಬಂಧನ

    ಬೆಂಗಳೂರು: ನಾಳೆ (ಸೆ.7ರ) ರಾತ್ರಿ ನಭೋ ಮಂಡಲದಲ್ಲಿ ಖಗೋಳ ಕೌತುಕ ಸಂಭವಿಸಲಿದೆ. ಈ ವರ್ಷದ 2ನೇ ಮತ್ತು ಕೊನೆಯ ಚಂದ್ರಗ್ರಹಣ (Lunar Eclipse) ನಡೆಯುತ್ತಿದೆ. ಸುದೀರ್ಘ ಮೂರೂವರೆ ಗಂಟೆಗಳ ಕಾಲ ನಡೆಯುವ ಭೂಮಿ (Earth), ಸೂರ್ಯ ಚಂದ್ರನ ನಡುವಿನ ನೆರಳಿನಾಟಕ್ಕೆ ಭಾರತ ಕೂಡ ಸಾಕ್ಷಿಯಾಗಲಿದೆ. ಗ್ರಹಣದ ವೇಳೆ ನಮ್ಮಲ್ಲಿ ಗ್ರಹಗತಿಗಳ ಬದಲಾವಣೆ ಆಗುತ್ತೆ ಅನ್ನೋ ನಂಬಿಕೆ ದಟ್ಟವಾಗಿದೆ. ಅದೇ ರೀತಿ ಗ್ರಹಣದ ದಿನ ದೇವರಿಗೂ ದರ್ಬೆಯಿಂದ ದಿಗ್ಬಂಧನ ಮಾಡಲಾಗುತ್ತದೆ.

    ಚಂದ್ರಗ್ರಹಣದ ಪ್ರಭಾವ ದೇವಾಲಯದ (Famous Temples) ಮೇಲೆ ಬೀರಬಾರದು ಎಂಬ ಕಾರಣಕ್ಕೆ ಪ್ರಸಿದ್ಧ ದೇವಾಲಯಗಳ ದರ್ಶನದ ಅವಧಿ ಬದಲಾಗಲಿದೆ. ಗ್ರಹಣ ಆರಂಭಕ್ಕೂ ಮುನ್ನವೇ ಬೆಂಗಳೂರಿನ ಬಹುತೇಕ ದೇವಾಲಯಗಳ (Bengaluru Temples) ಬಾಗಿಲು ಮುಚ್ಚಲಾಗುತ್ತದೆ. ಯಾವ್ಯಾವ ದೇಗುಲಗಳು ಯಾವ ಸಮಯಕ್ಕೆ ಬಂದ್ ಆಗಲಿದೆ ಎಂಬ ಬಗ್ಗೆ ಸಂಪೂರ್ಣ ವಿವರ ತಿಳಿಯಲು ಮುಂದೆ ಓದಿ…

    ಯಾವ ದೇವಸ್ಥಾನ ಎಷ್ಟು ಗಂಟೆಗೆ ಬಂದ್?‌
    ಗಾಳಿ ಆಂಜನೇಯ (ಬೆಂಗಳೂರು)
    ಮಧ್ಯಾಹ್ನ 3.00 ಗಂಟೆ

    ಬನಶಂಕರಿ (ಬೆಂಗಳೂರು)
    ಸಂಜೆ 6.00 ಗಂಟೆ

    ಕಾಡುಮಲ್ಲೇಶ್ವರ (ಮಲ್ಲೇಶ್ವರಂ)
    ಮಧ್ಯಾಹ್ನ – 12.20 ಗಂಟೆ

    ಗವಿಗಂಗಾಧರ (ಗವಿಪುರಂ)
    ಬೆಳಗ್ಗೆ- 11.00

    ಅಣ್ಣಮ್ಮ ದೇವಾಲಯ (ಮೆಜೆಸ್ಟಿಕ್)
    ಸಂಜೆ- 08.00 ಗಂಟೆ

    ಬಂಡೆ ಮಹಾಕಾಳಿ (ಚಾಮರಾಜಪೇಟೆ)
    ಸಂಜೆ – 07.30 ಗಂಟೆ

    ರಾಜರಾಜೇಶ್ವರಿ (ಆರ್.ಆರ್ ನಗರ)
    ಸಂಜೆ – 08.00 ಗಂಟೆ

    ಇಸ್ಕಾನ್ (ರಾಜಾಜಿನಗರ)
    ರಾತ್ರಿ – 9:00 ಗಂಟೆಗೆ ಬಂದ್‌ ಆಗಲಿದೆ. ಇನ್ನು ಬಂಡೆ ಮಹಾಕಾಳಿ ದೇವಾಲಯದ ದರ್ಶನದ ಅವಧಿಯಲ್ಲಿ ಯಾವುದೇ ಬದಲಾವಣೆಯಿಲ್ಲ. ಎಂದಿನಂತೆ ಭಕ್ತರಿಗೆ ದರ್ಶನ ಭಾಗ್ಯ ಇರಲಿದೆ.

    ಚಾಮುಂಡಿ ದೇಗುಲ, ಘಾಟಿ ಸುಬ್ರಹ್ಮಣ್ಯವೂ ಬಂದ್..!
    ಗ್ರಹಣ ಹಿನ್ನೆಲೆ ಬೆಂಗಳೂರಿನ ಬಹುತೇಕ ದೇಗುಲಗಳಿಗೆ ಗ್ರಹಣದ ದಿನ ದಿಗ್ಬಂಧನ ಏರ್ಪಟ್ಟರೆ. ಜಿಲ್ಲಾವಾರು ಇರುವ ಪ್ರಸಿದ್ಧ ಶಕ್ತಿ ದೇವತೆಗಳು, ಶಕ್ತಿ ದೇವಾಲಯಗಳಿಗೂ ಬೀಗ ಹಾಕಲಾಗ್ತಿದೆ.

    ಚಾಮುಂಡಿ ದೇಗುಲ (ಮೈಸೂರು)
    ರಾತ್ರಿ 9.30 ಗಂಟೆಗೆ ಬಂದ್‌

    ಕುಕ್ಕೆ ಸುಬ್ರಹ್ಮಣ್ಯ (ದ.ಕನ್ನಡ)
    ಸಂಜೆ 5 ಗಂಟೆಗೆ ಬಂದ್‌

    ಧರ್ಮಸ್ಥಳ ದೇಗುಲ (ದ.ಕನ್ನಡ)
    ಸಂಜೆ 7 ಗಂಟೆಗೆ ಬಂದ್‌

    ಕುದ್ರೋಳಿ ದೇಗುಲ (ಮಂಗಳೂರು)
    ರಾತ್ರಿ 8 ಗಂಟೆಗೆ ಬಂದ್‌

    ಕದ್ರಿ ದೇಗುಲ (ಮಂಗಳೂರು)
    ಸಂಜೆ 6.30 ಗಂಟೆಗೆ ಬಂದ್‌

    ಘಾಟಿ ಸುಬ್ರಹ್ಮಣ್ಯ (ಚಿಕ್ಕಬಳ್ಳಾಪುರ)
    ಸಂಜೆ 4.00 ಗಂಟೆಗೆ ಬಂದ್‌

    ಮಹಾಬಲೇಶ್ವರ ದೇವಸ್ಥಾನ (ಗೋಕರ್ಣ)
    ಮಧ್ಯಾಹ್ನ 12.30 ಗಂಟೆಗೆ ಬಂದ್‌

    ಹುಲಗೆಮ್ಮ ದೇಗುಲ (ಕೊಪ್ಪಳ)
    ಸಂಜೆ 5.00 ಗಂಟೆಗೆ ಬಂದ್‌

    ಅಂಜನಾದ್ರಿ ಬೆಟ್ಟ (ಗಂಗಾವತಿ)
    ಸಂಜೆ 5.00 ಗಂಟೆಗೆ ಬಂದ್‌

    ಚನ್ನಕೇಶವ ದೇಗುಲ (ಬೇಲೂರು)
    ಮಧ್ಯಾಹ್ನ 3 ಗಂಟೆಗೆ ಬಂದ್‌

    ಚಲುವನಾರಾಯಣಸ್ವಾಮಿ, (ಮೇಲುಕೋಟೆ)
    ಮಧ್ಯಾಹ್ನ 1:00 ಗಂಟೆಗೆ ಬಂದ್‌

    ನಿಮಿಷಾಂಭ ದೇಗುಲ (ಶ್ರೀರಂಗಪಟ್ಟಣ)
    ಮಧ್ಯಾಹ್ನ 12:00 ಗಂಟೆಗೆ ಬಂದ್‌

    ಶ್ರೀರಂಗನಾಥ ದೇಗುಲ (ಶ್ರೀರಂಗಪಟ್ಟಣ)
    ಸಂಜೆ 5:00 ಗಂಟೆಗೆ ಬಂದ್‌

    ಶ್ರೀಕೃಷ್ಣ ಮಠದಲ್ಲಿ ಗ್ರಹಣ ಶಾಂತಿ ಹೋಮ
    ಈ ಎಲ್ಲ ದೇಗುಲಗಳಿಗೆ ಗ್ರಹಣ ವೇಳೆ ಬೀಗ ಹಾಕಿದ್ರೆ. ಇನ್ನುಳಿದಂತೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ಗ್ರಹಣ ಕಾಲದಲ್ಲಿ ಗ್ರಹಣ ಶಾಂತಿ ಹೋಮ ನಡೆಸಲಾಗುತ್ತದೆ. ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದ ದೇಗುಲದಲ್ಲಿ ಗ್ರಹಣದ ವೇಳೆ ಯಾವುದೇ, ಪೂಜೆ ಪುನಸ್ಕಾರಗಳಿಲ್ಲ. ಎಂದಿನಂತೆ ಭಕ್ತರಿಗೆ ದರ್ಶನ ಭಾಗ್ಯ ಕಲ್ಪಿಸಲಾಗುತ್ತದೆ. ಶೃಂಗೇರಿ ಶಾರದಾ ದೇಗುಲ, ಬೆಳಗಾವಿ ಸವದತ್ತಿ ಯಲ್ಲಮ್ಮ ದೇಗುಲದಲ್ಲಿ ಎಂದಿನಂತೆ ಪೂಜೆ ಇರಲಿದೆ.

    ಇನ್ನು ಯುಪಿಯ ಅಯೋಧ್ಯೆಯ ರಾಮಮಂದಿರ ನಾಳೆ ಮಧ್ಯಾಹ್ನ 12:30ಕ್ಕೆ ಬಂದ್ ಆದರೆ, ಆಂಧ್ರಪ್ರದೇಶದ ತಿರುಪತಿ ದೇಗುಲ ನಾಳೆ ಮಧ್ಯಾಹ್ನದಿಂದ ಸೋಮವಾರ ಬೆಳಗ್ಗೆ 3 ಗಂಟೆ ವರೆಗೆ ಬಂದ್ ಆಗಲಿದೆ. ಸೋಮವಾರ ಬೆಳಗ್ಗೆ 8 ಗಂಟೆಯಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

  • ಮುಜರಾಯಿ ಇಲಾಖೆಯಿಂದ ಗುಡ್‌ನ್ಯೂಸ್ – ಇನ್ಮುಂದೆ ವೈಬ್‌ಸೈಟ್‌ನಲ್ಲಿ ದೇಗುಲದ ರೂಮ್‌ಗಳ ಮಾಹಿತಿ!

    ಮುಜರಾಯಿ ಇಲಾಖೆಯಿಂದ ಗುಡ್‌ನ್ಯೂಸ್ – ಇನ್ಮುಂದೆ ವೈಬ್‌ಸೈಟ್‌ನಲ್ಲಿ ದೇಗುಲದ ರೂಮ್‌ಗಳ ಮಾಹಿತಿ!

    -ರಾಜ್ಯದ 400 ಸೇರಿ ಹೊರರಾಜ್ಯದ 3,500 ದೇವಾಲಯಗಳ ಮಾಹಿತಿ ಲಭ್ಯ

    ಬೆಂಗಳೂರು: ರಾಜ್ಯ ಹಾಗೂ ಬೇರೆ ರಾಜ್ಯಗಳ ದೇವಾಲಯಕ್ಕೆ ತೆರಳುವವರಿಗೆ ಮುಜರಾಯಿ ಇಲಾಖೆ (Muzrai Department) ಗುಡ್‌ನ್ಯೂಸ್ ನೀಡಿದ್ದು, ಇನ್ಮುಂದೆ ದೇಗುಲದ ರೂಮ್‌ಗಳ ಮಾಹಿತಿ ವೈಬ್‌ಸೈಟ್‌ನಲ್ಲಿ ಲಭ್ಯವಾಗಲಿದೆ.

    ಹೌದು, ಸಾಮಾನ್ಯವಾಗಿ ಹಬ್ಬ, ಹರಿದಿನದಂದು ಬಹುತೇಕ ಜನ ದೇವಾಲಯಗಳಿಗೆ ತೆರಳುತ್ತಾರೆ. ಈ ವೇಳೆ ದೇವಸ್ಥಾನಗಳ ಜೊತೆಗೆ ಅಲ್ಲಿನ ರೂಮ್‌ಗಳು ಕೂಡ ತುಂಬಾ ರಷ್ ಇರುತ್ತವೆ. ಈ ಸಮಯದಲ್ಲಿ ಉಳಿದುಕೊಳ್ಳಲು ಭಕ್ತಾದಿಗಳು ಪರದಾಡುತ್ತಾರೆ ಜೊತೆಗೆ ದುಪ್ಪಟ್ಟು ಹಣ ಕೊಟ್ಟು ರೂಮ್ ಮಾಡಲೇಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಇದಕ್ಕೆಲ್ಲಾ ಬ್ರೇಕ್ ಹಾಕುವ ನಿಟ್ಟಿನಲ್ಲಿ, ರಾಜ್ಯ ಹಾಗೂ ಹೊರರಾಜ್ಯದ ದೇಗುಲಕ್ಕೆ ಹೋಗುವ ಭಕ್ತಾದಿಗಳಿಗೆ ಮುಜರಾಯಿ ಇಲಾಖೆ ಗುಡ್‌ನ್ಯೂಸ್ ನೀಡಿದೆ.ಇದನ್ನೂ ಓದಿ: ದಿನ ಭವಿಷ್ಯ 13-03-2025

    ಈ ಬಾರಿಯ ಕರ್ನಾಟಕ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯನವರು ವಿವಿಧ ಕ್ಷೇತ್ರಗಳಿಗೆ ಹಣ ಮಂಜೂರು ಮಾಡಿದ್ದಾರೆ. ಅದರಂತೆ ಮುಜರಾಯಿ ಹಾಗೂ ಧಾರ್ಮಿಕ ಧತ್ತಿ ಇಲಾಖೆಗೆ ಸಂಬಂಧಿಸಿದಂತೆ ಹೊಸ ಯೋಜನೆಗಳನ್ನು ಘೋಷಿಸಿದೆ. ಅದರಲ್ಲಿ ರಾಜ್ಯದ ಭಕ್ತಾದಿಗಳಿಗೆ ಅನುಕೂಲವಾಗಲು ಕರ್ನಾಟಕ ದೇವಾಲಯಗಳ ವಸತಿ ಕೋಶವನ್ನು ನೀಡಲು ಧಾರ್ಮಿಕ ಧತ್ತಿ ಇಲಾಖೆ ಮುಂದಾಗಿದೆ. ಈ ಕೋಶದಂತೆ ವೆಬ್‌ಸೈಟ್‌ನಲ್ಲಿ ರಾಜ್ಯದ 400 ದೇವಾಲಯದ ಹಾಗೂ ಹೊರರಾಜ್ಯದ ಛತ್ರಗಳ ಅಂದಾಜು 3,500 ರೂಮ್‌ಗಳ ಬುಕ್ಕಿಂಗ್ ಮಾಹಿತಿ ಆನ್‌ಲೈನ್‌ನಲ್ಲಿ ಲಭ್ಯವಾಗಲಿದೆ.

    ಇನ್ನೂ ಕರ್ನಾಟಕ ಟೆಂಪಲ್ಸ್ ಅಕಾಮಡೇಷನ್ ಡಾಟ್ ಕಾಮ್ (https://karnatakatemplesaccommodation.com) ವೆಬ್‌ಸೈಟ್‌ನಲ್ಲಿ ಭಕ್ತಾದಿಗಳು ದೇವಾಲಯದ ರೂಮ್‌ಗಳನ್ನು ಬುಕ್ ಮಾಡಬಹುದಾಗಿದೆ. ಈ ವೆಬ್‌ಸೈಟ್ ಕ್ಲಿಕ್ ಮಾಡಿದರೆ ದೇವಾಲಯದ ರೂಮ್‌ಗಳ ಮಾಹಿತಿ ದೊರೆಯಲಿದೆ. ಈಗಾಗಲೇ ಈ ವೆಬ್‌ಸೈಟ್‌ನಲ್ಲಿ ಕೆಲ ದೇವಾಲಯಗಳ ರೂಮ್‌ಗಳ ಮಾಹಿತಿ ಲಭ್ಯವಿದೆ. ಕೇವಲ ರಾಜ್ಯ ಮಾತ್ರವಲ್ಲ ಹೊರರಾಜ್ಯಗಳಾದ ತಿರುಪತಿ, ಶ್ರೀಶೈಲ, ಮಂತ್ರಾಲಯ ಸೇರಿದಂತೆ ರಾಜ್ಯದ ಮುಜರಾಯಿ ಛತ್ರಗಳಿರುವ ಕಡೆ ಬುಕ್ ಮಾಡಬಹುದಾಗಿದೆ. ಇದರಿಂದ ದೇವಾಲಯಗಳ ಆದಾಯ ಹೆಚ್ಚಳವಾಗಲಿದೆ.

    ಒಟ್ಟಿನಲ್ಲಿ ಮುಜರಾಯಿ ಇಲಾಖೆಯ ಈ ವಸತಿ ಕೋಶದಿಂದ ಒಂದೆಡೆ ದೇವಾಲಯಗಳ ಆದಾಯ ಹೆಚ್ಚಳವಾದರೆ, ಮತ್ತೊಂದೆಡೆ ಭಕ್ತಾದಿಗಳಿಗೆ ಅನುಕೂಲವಾಗಲಿದೆ.ಇದನ್ನೂ ಓದಿ: ನನಗೆ 7ರಿಂದ 8 ಭಾಷೆಗಳು ಗೊತ್ತು: ತ್ರಿಭಾಷಾ ಸೂತ್ರಕ್ಕೆ ಸುಧಾ ಮೂರ್ತಿ ಬೆಂಬಲ