Tag: Karnataka State government

  • ಕುಂಭಮೇಳ ಕಾಲ್ತುಳಿತ ದುರಂತ – ಕನ್ನಡಿಗರ ನೆರವಿಗೆ ರಾಜ್ಯ ಸರ್ಕಾರದಿಂದ ಸಹಾಯವಾಣಿ ಆರಂಭ

    ಕುಂಭಮೇಳ ಕಾಲ್ತುಳಿತ ದುರಂತ – ಕನ್ನಡಿಗರ ನೆರವಿಗೆ ರಾಜ್ಯ ಸರ್ಕಾರದಿಂದ ಸಹಾಯವಾಣಿ ಆರಂಭ

    ಬೆಂಗಳೂರು: ಪ್ರಯಾಗ್‌ರಾಜ್‌ನ (Prayagraj) ಮಹಾ ಕುಂಭಮೇಳದಲ್ಲಿ (Mahakumbhamela) ಬುಧವಾರ ಸಂಭವಿಸಿದ ಕಾಲ್ತುಳಿತ (Prayagraj Stampade) ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರ (Karnataka State Government) ಕನ್ನಡಿಗರ ನೆರವಿಗೆ ಸಹಾಯವಾಣಿಯನ್ನು ಆರಂಭಿಸಿದೆ.

    ಮಹಾ ಕುಂಭಮೇಳಕ್ಕೆ ತೆರಳಿರುವ ನಿಮ್ಮ ಕುಟುಂಬಸ್ಥರು ಸಂಪರ್ಕಕ್ಕೆ ಸಿಗುತ್ತಿಲ್ಲವಾದರೆ, 080-22340676 ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದ್ದು, ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.ಇದನ್ನೂ ಓದಿ: ಸಂತರ ಹಿಂದೂ ರಾಷ್ಟ್ರ ಘೋಷಣೆಗೆ ಸಾಣೆಹಳ್ಳಿ ಶ್ರೀ ಆತಂಕ

    ಮೌನಿ ಅಮಾವಾಸ್ಯೆ ಹಿನ್ನೆಲೆ ಬುಧವಾರ ಬೆಳಿಗ್ಗೆ ಕೋಟ್ಯಂತರ ಭಕ್ತರು ಪವಿತ್ರ ಸ್ನಾನ ಮಾಡಲು ಪ್ರಯಾಗ್‌ರಾಜ್‌ಗೆ ಬರುತ್ತಿದ್ದರು. ಈ ವೇಳೆ ನೂಕು ನುಗ್ಗಲು ಸಂಭವಿಸಿ ಕಾಲ್ತುಳಿತ ಉಂಟಾದ ಪರಿಣಾಮ 30ಕ್ಕೂ ಅಧಿಕ ಭಕ್ತರು ಸಾವನ್ನಪ್ಪಿದ್ದಾರೆ. ಈ ಪೈಕಿ ಕರ್ನಾಟಕದವರು ನಾಲ್ವರು ಸಾವನ್ನಪ್ಪಿದ್ದಾರೆ.

    ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದು, ಗಾಯಗೊಂಡವರನ್ನು ಸೆಕ್ಟರ್ 2ರಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಹಲವಾರು ಜನರು ಕುಟುಂಬಸ್ಥರಿಂದ ಬೇರ್ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಇದನ್ನೂ ಓದಿ:ಮಹಾ ಕುಂಭಮೇಳದಲ್ಲಿ ಕಾಲ್ತುಳಿತ – ಮೃತರ ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರ ಘೋಷಿಸಿದ ಸಿಎಂ ಯೋಗಿ

     

  • ಬಿಜೆಪಿ ಕಾರ್ಯಕರ್ತರ ಮೇಲಿನ ಕೇಸ್ ವಾಪಸ್‌ಗೆ ಸರ್ಕಾರ ಪ್ಲ್ಯಾನ್‌

    ಬಿಜೆಪಿ ಕಾರ್ಯಕರ್ತರ ಮೇಲಿನ ಕೇಸ್ ವಾಪಸ್‌ಗೆ ಸರ್ಕಾರ ಪ್ಲ್ಯಾನ್‌

    ಬೆಂಗಳೂರು: ಬಿಜೆಪಿ ಮತ್ತು ಹಿಂದೂ ಪರ ಕಾರ್ಯಕರ್ತರ ಆಕ್ರೋಶ ತಣ್ಣಗಾಗಿಸಲು ಸರ್ಕಾರ ಮುಂದಾಗಿದೆ.

    ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರ ಮೇಲಿನ ಸಣ್ಣ ಪುಟ್ಟ ಗಲಾಟೆ ಕೇಸ್‌ಗಳನ್ನು ವಾಪಸ್ ಪಡೆಯಲು ಸರ್ಕಾರ ಪ್ಲ್ಯಾನ್‌ ಮಾಡಿದೆ. ಇದನ್ನೂ ಓದಿ: ಆಗಸ್ಟ್ 15ರ ನಂತ್ರ ಸರ್ಕಾರ, ಪಕ್ಷದಲ್ಲಿ ಬದಲಾವಣೆ – ಸಂಪುಟ ಸಭೆಯಲ್ಲಿ ಬೊಮ್ಮಾಯಿ ಸುಳಿವು

    ಸಂಪುಟ ಸಭೆ ಬಳಿಕ ಮಾತನಾಡಿದ ಸಚಿವ ಮಾಧುಸ್ವಾಮಿ, 2019ರಿಂದ ದಾಖಲಾಗಿರುವ ಕೇಸ್‌ಗಳನ್ನು ವಾಪಸ್ ಪಡೆಯಲು ಸರ್ಕಾರಕ್ಕೆ ಸಂಪುಟ ಉಪಸಮಿತಿಯಿಂದ ಶಿಫಾರಸು ಮಾಡ್ತೇವೆ. ಆದರೆ ವೈಯಕ್ತಿಕ ವಿಚಾರಕ್ಕಾಗಿ ಮಾಡಿದ ಕೊಲೆ, ಹೆಚ್ಚು ಸಾರ್ವಜನಿಕ ಆಸ್ತಿ ಹಾನಿ ಮಾಡಿರುವ ಪ್ರಕರಣಗಳನ್ನು ಇದಕ್ಕೆ ಪರಿಗಣಿಸಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಇದೇ ವೇಳೆ ಆರ್‌ಎಸ್‌ಎಸ್ ಅಂಗಸಂಸ್ಥೆ ಜನಸೇವಾ ಟ್ರಸ್ಟ್‌ಗೆ ಆನೇಕಲ್ ಬಳಿಕ ಕುರುಬರಹಳ್ಳಿಯಲ್ಲಿ 35.33 ಎಕರೆ ಜಮೀನನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಮಂಜೂರು ಮಾಡಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಇದನ್ನೂ ಓದಿ: ಮೋದಿ ಚೀನಾದೊಂದಿಗೆ `ರಾಷ್ಟ್ರಧ್ವಜ ಒಪ್ಪಂದ’ ಮಾಡ್ಕೊಂಡಿದ್ದಾರೆ – ರಾಹುಲ್ ಗಾಂಧಿ ಆರೋಪ

    ಇನ್ನು, ಕಮ್ಮಸಂದ್ರದಲ್ಲಿ ಉತ್ತರ ಕರ್ನಾಟಕ ಸಂಘಸಂಸ್ಥೆಗಳ ಮಹಾ ಸಂಸ್ಥೆಗೆ 3.24 ಎಕರೆ ಜಮೀನು ಮಂಜೂರು ಮಾಡಲು ಕೂಡ ಸಂಪುಟ ಒಪ್ಪಿಗೆ ಸೂಚಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿಗೆ ಆಗ್ರಹಿಸಿ ಹೋರಾಟ – ಜಯಮೃತ್ಯುಂಜಯ ಸ್ವಾಮೀಜಿ ಕರೆ

    ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿಗೆ ಆಗ್ರಹಿಸಿ ಹೋರಾಟ – ಜಯಮೃತ್ಯುಂಜಯ ಸ್ವಾಮೀಜಿ ಕರೆ

    ಶಿವಮೊಗ್ಗ: ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸಬೇಕೆಂದು ಆಗ್ರಹಿಸಿ, ಶಿವಮೊಗ್ಗ ಜಿಲ್ಲೆಯಿಂದ ಹೋರಾಟ ಆರಂಭಿಸಲಾಗುವುದು ಎಂದು ಕೂಡಲ ಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

    ಶಿವಮೊಗ್ಗದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯವನ್ನು 2ಎ ಮೀಸಲಾತಿಗೆ ಸೇರಿಸಿ ಎಂದು ಜೂನ್ 22 ರಂದು ಸಿಎಂ ಬೊಮ್ಮಾಯಿ ಅವರ ಮನೆ ಮುಂದೆ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದಾಗ ಶಾಸಕ ಯತ್ನಾಳ್ ಮತ್ತು ಸಚಿವ ಸಿ.ಸಿ ಪಾಟೀಲ್ ಸಿಎಂ ಎದುರು ಸಂಧಾನ ನಡೆಸಿ ಸಮಯಾವಕಾಶ ಕೇಳಿದ್ದರು. ಅದರಂತೆ ಆ.22 ರಂದು ಸರ್ಕಾರಕ್ಕೆ ನೀಡಿದ ಗಡುವು ಮುಕ್ತಾಯಗೊಳ್ಳಲಿದೆ, ಅಲ್ಲಿಯವರೆಗೆ ಸುಮ್ಮನೆ ಕೂರೋದು ಬೇಡವೆಂದು ಜ್ಞಾಪಕ ಪತ್ರ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹರ್ ಘರ್ ತಿರಂಗಾ ಅಭಿಯಾನ- ಎಲ್ಲರ ಮನೆ ಮೇಲೆ ತಿರಂಗಾ ಹಾರಿಸುವಂತೆ ಸಿಎಂ ಮನವಿ

    ಆ.24ರಂದು ಬೆಳಗ್ಗೆ 10 ಗಂಟೆಗೆ ಶಿವಮೊಗ್ಗದ ಶಿವಪ್ಪನಾಯಕ ವೃತ್ತದಿಂದ ವಿನೋಬಾನಗರದಲ್ಲಿರುವ ಬಿ.ಎಸ್.ಯಡಿಯೂರಪ್ಪ ಅವರ ಮನೆಯವರೆಗೆ ಎಚ್ಚರಿಕೆಯ ಪ್ರತಿಭಟನಾ ಮೆರವಣಿಗೆ ನಡೆಸಲಾಗುತ್ತಿದೆ. ಅಂದು ಬಿಎಸ್‌ವೈ ಮನೆಗೆ ತೆರಳಿ ಜ್ಞಾಪನಾಪತ್ರ ನೀಡಲಾಗುವುದು. ಒಂದು ವೇಳೆ ಬಿಎಸ್‌ವೈ ಊರಲ್ಲಿ ಇಲ್ಲವೆಂದರೆ ಸಂಸದ ರಾಘವೇಂದ್ರ ಅವರಿಗೆ ನೀಡುತ್ತೇವೆ. ಅವರೂ ಇಲ್ಲವೆಂದರೆ ಜಿಲ್ಲಾಧಿಕಾರಿಗಳಿಗೆ ನೀಡಲಿದ್ದೇವೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಇದನ್ನೂ ಓದಿ: ರಾಜೀವ್‌ ಗಾಂಧಿ ಹತ್ಯೆ ಪ್ರಕರಣ – ಬಿಡುಗಡೆ ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ನಳಿನಿ

    ಜ್ಞಾಪಕ ಪತ್ರ ಮೆರವಣಿಗೆಯ ಭಾಗವಾಗಿ ಪ್ರತಿ ತಾಲೂಕಿನಲ್ಲಿ ಪ್ರತಿಜ್ಞಾ ಪಂಚಾಯಿತಿ ನಡೆಸಲಾಗುತ್ತಿದೆ. ಸರ್ಕಾರ ನಮ್ಮ ಮನವಿಗೆ ಸ್ಪಂದಿಸಲಿದೆ. ನಮಗೆ ಮೀಸಲಾತಿ ದೊರೆಯುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • BBMP 243 ವಾರ್ಡ್‌ಗಳ ಮೀಸಲಾತಿ ಪ್ರಕಟ – ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

    BBMP 243 ವಾರ್ಡ್‌ಗಳ ಮೀಸಲಾತಿ ಪ್ರಕಟ – ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

    ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶದಂತೆ ಒಂದು ವಾರದೊಳಗೆ ಬಿಬಿಎಂಪಿಯ 243 ವಾರ್ಡ್‌ಗಳ ಮೀಸಲಾತಿ ಪಟ್ಟಿಯನ್ನು ಅಂತಿಮಗೊಳಿಸಿರುವ ರಾಜ್ಯ ಸರ್ಕಾರ ಬುಧವಾರ ತಡರಾತ್ರಿಯೇ ಕರಡು ಪಟ್ಟಿಯನ್ನು ಪ್ರಕಟಿಸಿದೆ.

    ಕಳೆದ ವಾರ ಬಿಬಿಎಂಪಿ ಚುನಾವಣೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎ.ಎಂ.ಖಾನಿಲ್ಕರ್ ಪೀಠ 8 ವಾರಗಳಲ್ಲಿ ಚುನಾವಣೆ ನಡೆಸಲು ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿತ್ತು. ಇದಕ್ಕೆ ಉತ್ತರಿಸಿದ್ದ ರಾಜ್ಯ ಸರ್ಕಾರದ ಪರ ವಕೀಲರು, ಮೀಸಲಾತಿ ಸಂಬಂಧ ರಚಿಸಲಾಗಿದ್ದ ಭಕ್ತ ವತ್ಸಲ ಸಮಿತಿ ವರದಿಯನ್ನು ವಿಳಂಬವಾಗಿ ನೀಡಿದೆ. ಆದ್ದರಿಂದ ಮೀಸಲಾತಿ ಪ್ರಕಟಿಸಲು ಸಾಧ್ಯವಾಗಿಲ್ಲ ಎಂದು ಉತ್ತರ ನೀಡಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಒಂದು ವಾರದೊಳಗೆ 243 ವಾರ್ಡ್‌ಗಳ ಮೀಸಲಾತಿ ಅಂತಿಮಗೊಳಿಸುವಂತೆ ಗಡುವು ನೀಡಿತ್ತು. ಅದರಂತೆ ಬಿಬಿಎಂಪಿ ಮೀಸಲು ಪ್ರಕಟ ಮಾಡಿದೆ. ಇದನ್ನೂ ಓದಿ: ಖಾದಿ ಕಾರ್ಮಿಕರ ಹಣ ದೊಡ್ಡವರ ಜೇಬಿಗೆ: ಬಿಜೆಪಿ ವಿರುದ್ಧ ರಾಹುಲ್‌ ವಾಗ್ದಾಳಿ

    ಕೆಂಪೇಗೌಡ ವಾರ್ಡ್ – ಸಾಮಾನ್ಯ, ಚೌಡೇಶ್ವರಿ ವಾರ್ಡ್ – ಹಿಂದುಳಿದ ವರ್ಗ ಎ, ಸೋಮಶೇಶ್ವರ ವಾರ್ಡ್ – ಸಾಮಾನ್ಯ, ಅಟ್ಟೂರು ಲೇಔಟ್ – ಹಿಂದುಳಿದ ವರ್ಗ ಎ (ಮಹಿಳೆ),  ಯಲಹಂಕ ಸ್ಯಾಟಿಲೈಟ್ ಟೌನ್- ಸಾಮಾನ್ಯ (ಮಹಿಳೆ), ಕೋಗಿಲು – ಸಾಮಾನ್ಯ (ಮಹಿಳೆ), ಥಣಿಸಂದ್ರ – ಹಿಂದುಳಿದ ವರ್ಗ ಎ(ಮಹಿಳೆ), ಜಕ್ಕೂರು – ಸಾಮಾನ್ಯ, ಅಮೃತಹಳ್ಳಿ – ಸಾಮಾನ್ಯ (ಮಹಿಳೆ)
    ಕೆಂಪಾಪುರ – ಸಾಮಾನ್ಯ, ಬ್ಯಾಟರಾಯನಪುರ – ಹಿಂದುಳಿದ ವರ್ಗ-ಎ, ಕೋಡಿಗೆಹಳ್ಳಿ – ಸಾಮಾನ್ಯ, ದೊಡ್ಡ ಬೊಮ್ಮಸಂದ್ರ – ಸಾಮಾನ್ಯ (ಮಹಿಳೆ), ವಿದ್ಯಾರಣ್ಯಪುರ – ಸಾಮಾನ್ಯ (ಮಹಿಳೆ), ಕುವೆಂಪುನಗರ – ಎಸ್‌ಸಿ (ಮಹಿಳೆ), ಕಮ್ಮಗೊಂಡನಹಳ್ಳಿ – ಎಸ್‌ಸಿ, ಶೆಟ್ಟಿಹಳ್ಳಿ – ಸಾಮಾನ್ಯ (ಮಹಿಳೆ), ಬಾಗಲಗುಂಟೆ – ಹಿಂದುಳಿದ ವರ್ಗ-ಎ (ಮಹಿಳೆ), ಡೆಫೆನ್ ಕಾಲೋನಿ – ಸಾಮಾನ್ಯ (ಮಹಿಳೆ), ಮಲ್ಲಸಂದ್ರ – ಹಿಂದುಳಿದ ವರ್ಗ (ಮಹಿಳೆ), ಟಿ ದಾಸರಹಳ್ಳಿ – ಹಿಂದುಳಿದ ವರ್ಗಎ (ಮಹಿಳೆ), ಚೊಕ್ಕಸಂದ್ರ – ಸಾಮಾನ್ಯ (ಮಹಿಳೆ), ನೆಲಗದೆರನಹಳ್ಳಿ – ಸಾಮಾನ್ಯ (ಮಹಿಳೆ), ರಾಜಗೋಪಾಲನಗರ – ಸಾಮಾನ್ಯ, ರಾಜೇಶ್ವರಿನಗರ – ಹಿಂದುಳಿದವರ್ಗ ಎ (ಮಹಿಳೆ), ಹೆಗ್ಗನಹಳ್ಳಿ – ಸಾಮಾನ್ಯ, ಸುಂಕದಕಟ್ಟೆ – ಸಾಮಾನ್ಯ (ಮಹಿಳೆ), ದೊಡ್ಡಬಿದರಕಲ್ಲು – ಎಸ್‌ಟಿ (ಮಹಿಳೆ), ವಿದ್ಯಾಮಾನ್ಯನಗರ – ಸಾಮಾನ್ಯ, ಹೇರೋಹಳ್ಳಿ – ಹಿಂದುಳಿದ ವರ್ಗ ಎ (ಮಹಿಳೆ), ದೊಡ್ಡಗೊಲ್ಲರಹಟ್ಟಿ – ಹಿಂದುಳಿದ ವರ್ಗ ಎ
    ಉಳ್ಳಾಲ – ಸಾಮಾನ್ಯ (ಮಹಿಳೆ), ಕೆಂಗೇರಿ – ಸಾಮಾನ್ಯ, ಬಂಡೆ ಮಠ- ಹಿಂದುಳಿದ ವರ್ಗ ಎ (ಮಹಿಳೆ), ಹೆಮ್ಮಿಗೆಪುರ – ಹಿಂದುಳಿದ ವರ್ಗ, ಛತ್ರಪತಿ ಶಿವಾಜಿ – ಸಾಮಾನ್ಯ (ಮಹಿಳೆ), ಚಾಣಕ್ಯ – ಹಿಂದುಳಿದ ವರ್ಗ, ಜೆಪಿ ಪಾರ್ಕ್ ಹಿಂದುಳಿದ ವರ್ಗ ಬಿ (ಮಹಿಳೆ), ಕನ್ನೇಶ್ವರ ರಾಮ – ಸಾಮಾನ್ಯ(ಮಹಿಳೆ), ವೀರಮದಕರಿ – ಎಸ್‌ಸಿ, ಪೀಣ್ಯ – ಹಿಂದುಳಿದ ವರ್ಗ ಎ, ಲಕ್ಷ್ಮೀದೇವಿನಗರ – ಎಸ್‌ಸಿ, ರಣಧೀರಕಂಠೀರವ – ಹಿಂದುಳಿದವರ್ಗ ಎ ಮಹಿಳೆ, ವೀರ ಸಿಂಧೂರಲಕ್ಷ್ಮಣ – ಸಾಮಾನ್ಯ, ವಿಜಯನಗರ ಕೃಷ್ಣದೇವರಾಯ- ಹಿಂದುಳಿದವರ್ಗ ಎ, ಸರ್ ಎಂ.ವಿಶ್ವೇಶ್ವರಯ್ಯ- ಹಿಂದುಳಿದ ವರ್ಗ, ನಾಲ್ವಡಿ ಕೃಷ್ಣರಾಜ ಒಡೆಯರ್ ಪಾರ್ಕ್- ಸಾಮಾನ್ಯ (ಮಹಿಳೆ), ಜ್ಞಾನಭಾರತಿ – ಸಾಮಾನ್ಯ, ರಾಜರಾಜೇಶ್ವರಿ ನಗರ – ಹಿಂದುಳಿದ ವರ್ಗ-ಎ, ಮಾರಪ್ಪನಪಾಳ್ಯ – ಹಿಂದುಳಿದವರ್ಗ ಎ(ಮಹಿಳೆ), ನಾಗಪುರ – ಹಿಂದುಳಿದವರ್ಗ, ಮಹಾಲಕ್ಷ್ಮೀಪುರ – ಸಾಮಾನ್ಯ (ಮಹಿಳೆ), ನಂದಿನಿ ಲೇಔಟ್ – ಸಾಮಾನ್ಯ (ಮಹಿಳೆ), ಜೈಮಾರುತಿ ನಗರ – ಹಿಂದುಳಿದ ವರ್ಗ ಎ (ಮಹಿಳೆ), ಪುನೀತ್‌ರಾಜ್‌ಕುಮಾರ್ – ಹಿಂದುಳಿದ ವರ್ಗ ಬಿ (ಮಹಿಳೆ), ಶಂಕರಮಠ – ಪರಿಶಿಷ್ಠ ಜಾತಿ, ಶಕ್ತಿಗಣಪತಿ ನಗರ – ಸಾಮಾನ್ಯ (ಮಹಿಳೆ), ವೃಷಭಾವತಿ ನಗರ – ಸಾಮಾನ್ಯ, ಮತ್ತಿಕರೆ- ಹಿಂದುಳಿದ ವರ್ಗ ಎ, ಅರಮನೆ ನಗರ – ಸಾಮಾನ್ಯ, ಮಲ್ಲೇಶ್ವರ – ಸಾಮಾನ್ಯ, ಸುಬ್ರಹ್ಮಣ್ಯನಗರ – ಹಿಂದುಳಿದವರ್ಗ-ಬಿ, ಗಾಯಿತ್ರಿನಗರ – ಹಿಂದುಳಿದವರ್ಗ- ಎ, ಕಾಡುಮಲ್ಲೇಶ್ವರ – ಹಿಂದುಳಿದವರ್ಗ – ಎ, ರಾಜಮಹಲ್ ಗುಟ್ಟಹಳ್ಳಿ -= ಸಾಮಾನ್ಯ (ಮಹಿಳೆ), ರಾಧಾಕೃಷ್ಣ ದೇವಸ್ಥಾನ -ಹಿಂದುಳಿದವರ್ಗ ಎ, ಸಂಜಯನಗರ – ಸಾಮಾನ್ಯ, ವಿಶ್ವನಾಥ ನಾಗೇನಹಳ್ಳಿ – ಸಾಮಾನ್ಯ
    ಮನೋರಾಯನಪಾಳ್ಯ – ಹಿಂದುಳಿದ ವರ್ಗ ಎ (ಮಹಿಳೆ), ಹೆಬ್ಬಾಳ – ಹಿಂದುಳಿದವರ್ಗ, ಚಾಮುಂಡಿನಗರ – ಸಾಮಾನ್ಯ, ಗಂಗಾನಗರ – ಹಿಂದುಳಿದವರ್ಗ, ಗಂಗಾನಗರ – ಹಿಂದುಳಿದ ವರ್ಗ (ಮಹಿಳೆ), ಜಯಚಾಮರಾಜೇಂದ್ರ ನಗರ – ಸಾಮಾನ್ಯ, ಕಾವಲ್ ಭೈರಸಂದ್ರ – ಸಾಮಾನ್ಯ(ಮಹಿಳೆ), ಕುಶಾಲ್ ನಗರ – ಹಿಂದುಳಿದ ವರ್ಗ(ಮಹಿಳೆ), ಮುನೇಶ್ವರ ನಗರ- ಹಿಂದುಳಿದ ವರ್ಗ (ಮಹಿಳೆ), ದೇವರಜೀವನಹಳ್ಳಿ – ಹಿಂದುಳಿದವರ್ಗ (ಮಹಿಳೆ), ಎಸ್‌ಕೆ ಗಾರ್ಡನ್ – ಪರಿಶಿಷ್ಟ ಜಾತಿ (ಮಹಿಳೆ), ಸಗಾಯರಪುರಂ -ಪರಿಶಿಷ್ಟ ಜಾತಿ, ಪುಲಕೇಶಿನಗರ 0- ಹಿಂದುಳಿದ ವರ್ಗ (ಮಹಿಳೆ), ಹೊರಮಾವು – ಹಿಂದುಳಿದ ವರ್ಗ, ಬಾಬುಸಾಬ್ ಪಾಳ್ಯ – ಸಾಮಾನ್ಯ, ಕಲ್ಕೆರೆ – ಹಿಂದುಳಿದ ವರ್ಗ (ಮಹಿಳೆ), ರಾಮಮೂರ್ತಿನಗರ – ಸಾಮಾನ್ಯ, ವಿಜಿನಾಪುರ – ಪರಿಶಿಷ್ಟ ಜಾತಿ, ಕೆಆರ್ ಪುರ – ಸಾಮಾನ್ಯ, ಮೇಡಹಳ್ಳಿ – ಹಿಂದುಳಿದ ವರ್ಗ, ಬಸವನಪುರ – ಪರಿಶಿಷ್ಟ ಜಾತಿ, ದೇವಸಂದ್ರ – ಸಾಮಾನ್ಯ, ಮಹದೇವಪುರ – ಹಿಂದುಳಿದ ವರ್ಗ, ಎ ನಾರಾಯಣಪುರ – ಸಾಮಾನ್ಯ, ವಿಜ್ಞಾನನಗರ – ಸಾಮಾನ್ಯ (ಮಹಿಳೆ), ಹೆಚ್‌ಎಎಲ್ ವಿಮಾನ ನಿಲ್ದಾಣ- ಸಾಮಾನ್ಯ, ಹೆಣ್ಣೂರು – ಹಿಂದುಳಿದವರ್ಗ (ಮಹಿಳೆ), ನಾಗವಾರ – ಹಿಂದುಳಿದವರ್ಗ, ಕಾಡುಗೊಂಡನಹಳ್ಳಿ -ಪರಿಶಿಷ್ಟ ಪಂಗಡ (ಮಹಿಳೆ), ವೆಂಕಟೇಶಪುರ – ಹಿಂದುಳಿದ ವರ್ಗ (ಮಹಿಳೆ), ಕಾಚರಕನಹಳ್ಳಿ – ಸಾಮಾನ್ಯ (ಮಹಿಳೆ), ಹೆಚ್‌ಆರ್‌ಬಿಆರ್ ಲೇಔಟ್ – ಸಾಮಾನ್ಯ, ಬಾಣಸವಾಡಿ – ಸಾಮಾನ್ಯ, ಕಮ್ಮನಹಳ್ಳಿ- ಹಿಂದುಳಿದ ವರ್ಗ, ಲಿಂಗರಾಪುರ – ಪರಿಶಿಷ್ಟ ಜಾತಿ, ಮಾರುತಿಸೇವಾನಗರ – ಪರಿಶಿಷ್ಟ ಜಾತಿ (ಮಹಿಳೆ), ಕಾಡುಗೋಡಿ – ಹಿಮದುಳಿದವರ್ಗ, ಬೆಳತ್ತೂರು – ಪರಿಶಿಷ್ಟ ಜಾತಿ, ಹೂಡಿ – ಹಿಂದುಳಿದ ವರ್ಗ, ಗರುಡಾಚಾರ್ ಪಾಳ್ಯ -ಸಾಮಾನ್ಯ, ದೊಡ್ಡನೆಕ್ಕುಂದಿ – ಸಾಮಾನ್ಯ, ಎಇಸಿಎಸ್ ಬಡಾವಣೆ – ಹಿಂದುಳಿದ ವರ್ಗ
    ವೈಟ್‌ಫೀಲ್ಡ್ – ಸಾಮಾನ್ಯ, ಹಗದೂರು – ಸಾಮಾನ್ಯ (ಮಹಿಳೆ), ವರ್ತೂರು – ಹಿಂದುಳಿದವರ್ಗ, ಮುನ್ನೆಕೊಳ್ಳಾಲ – ಸಾಮಾನ್ಯ, ಮಾರತಹಳ್ಳಿ – ಹಿಂದುಳಿದವರ್ಗ (ಮಹಿಳೆ), ಬೆಳ್ಳಂದೂರು – ಸಾಮಾನ್ಯ, ದೊಡ್ಡಕನಹಳ್ಳಿ – ಸಾಮಾನ್ಯ, ಸಿವಿ ರಾಮನ್ ನಗರ – ಸಾಮಾನ್ಯ, ಲಾಲ್ ಬಹದ್ದೂರ್ ನಗರ – ಪರಿಶಿಷ್ಟ ಜಾತಿ, ಹೊಸ ಬೈಯಪ್ಪನಹಳ್ಳಿ – ಪರಿಶಿಷ್ಟ ಜಾತಿ (ಮಹಿಳೆ), ಹೊಯ್ಸಳ ನಗರ – ಪರಿಶಿಷ್ಟ ಜಾತಿ (ಮಹಿಳೆ), ಹಳೆ ತಿಪ್ಪಸಂದ್ರ – ಸಾಮಾನ್ಯ, ಹೊಸತಿಪ್ಪಸಂದ್ರ – ಸಾಮಾನ್ಯ, ಜಲಕಂಠೇಶ್ವರನಗರ – ಸಾಮಾನ್ಯ (ಮಹಿಳೆ), ಜೀವನಭೀಮನಗರ – ಪರಿಶಿಷ್ಠ ಜಾತಿ, ಕೋನೇನ ಅಗ್ರಹಾರ – ಸಾಮಾನ್ಯ (ಮಹಿಳೆ), ರಾಮಸ್ವಾಮಿ ಪಾಳ್ಯ – ಪರಿಶಿಷ್ಟ ಜಾತಿ (ಮಹಿಳೆ), ಜಯಮಹಲ್ -ಸಾಮಾನ್ಯ (ಮಹಿಳೆ), ವಸಂತನಗರ – ಹಿಂದುಳಿದವರ್ಗ(ಮಹಿಳೆ), ಸಂಪಂಗಿರಾಮನಗರ – ಹಿಂದುಳಿದವರ್ಗ, ಭಾರತಿನಗರ – ಹಿಂದುಳಿದವರ್ಗ (ಮಹಿಳೆ), ಹಲಸೂರು – ಪರಿಶಿಷ್ಟ ಜಾತಿ, ದತ್ತಾತ್ರೇಯ ದೇವಸ್ಥಾನ – ಸಾಮಾನ್ಯ (ಮಹಿಳೆ), ಗಾಂಧಿನಗರ – ಹಿಂದುಳಿದ ವರ್ಗ (ಮಹಿಳೆ), ಸುಭಾಷ್ ನಗರ ಪರಿಶಿಷ್ಟ ಜಾತಿ (ಮಹಿಳೆ), ಓಕಳಿಪುರಂ – ಪರಿಶಿಷ್ಟ ಜಾತಿ (ಮಹಿಳೆ), ಬಿನ್ನಿಪೇಟೆ – ಸಾಮಾನ್ಯ (ಮಹಿಳೆ), ಕಾಟನ್‌ಪೇಟೆ -ಸಾಮಾನ್ಯ (ಮಹಿಳೆ), ಚಿಕ್ಕಪೇಟೆ- ಸಾಮಾನ್ಯ (ಮಹಿಳೆ), ದಯಾನಂದನಗರ – ಪರಿಶಿಷ್ಟ ಜಾತಿ, ಪ್ರಕಾಶ್ ನಗರ- ಹಿಂದುಳಿದ ವರ್ಗ (ಮಹಿಳೆ), ರಾಜಾಜಿನಗರ – ಸಾಮಾನ್ಯ (ಮಹಿಳೆ), ಶ್ರೀರಾಮಮಂದಿರ – ಸಾಮಾನ್ಯ, ಶಿವನಗರ – ಸಾಮಾನ್ಯ, ಬಸವೇಶ್ವರನಗರ – ಹಿಂದುಳಿದ ವರ್ಗ, ಕಾಮಾಕ್ಷಿಪಾಳ್ಯ – ಸಾಮಾನ್ಯ. ಇದನ್ನೂ ಓದಿ: ಫಸ್ಟ್‌ ಟೈಂ ಬಯಲುಸೀಮೆ ಕೋಲಾರದ ಏಕೈಕ ಜಲಾಶಯ ಯರಗೋಳ್ ಡ್ಯಾಂ ಭರ್ತಿ

    ಡಾ.ರಾಜ್ ಕುಮಾರ್ ವಾರ್ಡ್ -ಸಾಮಾನ್ಯ ಮಹಿಳೆ, ಅಗ್ರಹಾರ ದಾಸರಹಳ್ಳಿ – ಸಾಮಾನ್ಯ, ಗೋವಿಂದರಾಜ ನಗರ – ಹಿಂದುಳಿದ ವರ್ಗ-ಎ, ಕಾವೇರಿಪುರ – ಸಾಮಾನ್ಯ ಮಹಿಳೆ, ಮಾರೇನಹಳ್ಳಿ – ಹಿಂದುಳಿದ ವರ್ಗ-ಎ, ಮಾರುತಿ ಮಂದಿರ ವಾರ್ಡ್ – ಸಾಮಾನ್ಯ, ಮೂಡಲಪಾಳ್ಯ – ಹಿಂದುಳಿದ ವರ್ಗ-ಎ ಮಹಿಳೆ, ನಾಗರಭಾವಿ – ಹಿಂದುಳಿದ ವರ್ಗ-ಬಿ ಮಹಿಳೆ, ಚಂದ್ರಾಲೇಔಟ್ – ಸಾಮಾನ್ಯ, ನಾಯಂಡಹಳ್ಳಿ – ಸಾಮಾನ್ಯ, ಕೆಂಪಾಪುರ ಅಗ್ರಹಾರ – ಪರಿಶಿಷ್ಟ ಪಂಗಡ, ವಿಜಯನಗರ – ಸಾಮಾನ್ಯ, ಹೊಸಹಳ್ಳಿ – ಹಿಂದುಳಿದ ವರ್ಗ-ಎ ಮಹಿಳೆ, ಹಂಪಿನಗರ – ಸಾಮಾನ್ಯ, ಬಾಪೂಜಿ ನಗರ – ಸಾಮಾನ್ಯ ಮಹಿಳೆ, ಅತ್ತಿಗುಪ್ಪೆ – ಸಾಮಾನ್ಯ, ಗಾಳಿ ಆಂಜನೇಯ, ದೇವಸ್ಥಾನ ವಾರ್ಡ್- ಸಾಮಾನ್ಯ ಮಹಿಳೆ, ವೀರಭದ್ರ ನಗರ – ಸಾಮಾನ್ಯ ಮಹಿಳೆ, ಆವಲಹಳ್ಳಿ – ಹಿಂದುಳಿದ ವರ್ಗ-ಎ ಮಹಿಳೆ, ಚಾಮರಾಜಪೇಟೆ – ಸಾಮಾನ್ಯ ಮಹಿಳೆ, ಚಲವಾದಿಪಾಳ್ಯ – ಪರಿಶಿಷ್ಟ ಜಾತಿ ಮಹಿಳೆ, ಜಗಜೀವನರಾಮ್ ನಗರ – ಪರಿಶಿಷ್ಟ ಜಾತಿ ಮಹಿಳೆ, ಪಾದರಾಯನಪುರ – ಸಾಮ್ಯಾನ ಮಹಿಳೆ, ದೇವರಾಜ್ ಅರಸ ನಗರ – ಸಾಮಾನ್ಯ ಮಹಿಳೆ, ಅಜಾದ್ ನಗರ – ಪರಿಶಿಷ್ಟ ಪಂಗಡ, ಸುಧಾಮ ನಗರ – ಪರಿಶಿಷ್ಟ ಜಾತಿ, ಧರ್ಮರಾಯ ಸ್ವಾಮಿ ದೇವಸ್ಥಾನ ವಾರ್ಡ್- ಸಾಮಾನ್ಯ, ಸುಂಕೇನಹಳ್ಳಿ – ಹಿಂದುಳಿದ ವರ್ಗ-ಎ, ವಿಶ್ಬೇಶ್ವರ ಪುರಂ – ಸಾಮಾನ್ಯ, ಆಶೋಕ ಸ್ತಂಭ – ಸಾಮಾನ್ಯ, ಸೋಮೇಶ್ವರ ನಗರ – ಹಿಂದುಳಿದ ವರ್ಗ-ಎ, ಹೊಂಬೇಗೌಡ ನಗರ – ಸಾಮಾನ್ಯ, ದೊಮ್ಮಲೂರು – ಪರಿಶಿಷ್ಟ ಜಾತಿ, ಜೋಗುಪಾಳ್ಯ – ಸಾಮಾನ್ಯ ಮಹಿಳೆ, ಅಗರಂ – ಪರಿಶಿಷ್ಟ ಜಾತಿ ಮಹಿಳೆ, ಶಾಂತಲಾ ನಗರ – ಹಿಂದುಳಿದ ವರ್ಗ-ಎ, ನೀಲಸಂದ್ರ – ಸಾಮಾನ್ಯ ಮಹಿಳೆ, ವನ್ನಾರ ಪೇಟೆ – ಪರಿಶಿಷ್ಟ ಜಾತಿ ಮಹಿಳೆ, ಈಜೀಪುರ – ಸಾಮಾನ್ಯ ಮಹಿಳೆ, ಕೋರಮಂಗಲ – ಸಾಮಾನ್ಯ ಮಹಿಳೆ, ಅಡುಗೋಡಿ – ಸಾಮಾನ್ಯ ಮಹಿಳೆ, ಲಕ್ಕಸಂದ್ರ – ಪರಿಶಿಷ್ಟ ಜಾತಿ ಮಹಿಳೆ, ಸುದ್ದಗುಂಟೆ ಪಾಳ್ಯ – ಸಾಮಾನ್ಯ, ಮಡಿವಾಳ – ಸಾಮಾನ್ಯ ಮಹಿಳೆ, ಜಕ್ಕಸಂದ್ರ – ಸಾಮಾನ್ಯ ಮಹಿಳೆ, ಬಿಟಿಎಂ ಲೇಔಟ್ – ಹಿಂದುಳಿದ ವರ್ಗ-ಎ ಮಹಿಳೆ, ಎನ್‌ಎಸ್ ಪಾಳ್ಯ – ಹಿಂದುಳಿದ ವರ್ಗ-ಎ ಮಹಿಳೆ, ಗುರಪ್ಪನ ಪಾಳ್ಯ – ಸಾಮಾನ್ಯ ಮಹಿಳೆ, ತಿಲಕ ನಗರ – ಹಿಂದುಳಿದ ವರ್ಗ-ಎ ಮಹಿಳೆ, ಬೈರಸಂದ್ರ – ಸಾಮಾನ್ಯ ಮಹಿಳೆ, ಶಾಂಕ್ಮಾಂಬರಿ ನಗರ- ಸಾಮಾನ್ಯ ಮಹಿಳೆ, ಜೆಪಿ ನನರ- ಸಾಮಾನ್ಯ, ಸಾರಕ್ಕಿ ಸಾಮಾನ್ಯ ಮಹಿಳೆ, ಯಡಿಯೂರ್ ಸಾಮ್ಯಾನ ಮಹಿಳೆ, ಉಮಾಹೇಶ್ವರಿ ಹಿಂದುಳಿದ ವರ್ಗ(ಎ)ಮಹಿಳೆ, ಗಣೇಶ್ ಮಂದಿರ ವಾರ್ಡ್- ಹಿಂದುಳಿದ ವರ್ಗ(ಬಿ)ಮಹಿಳೆ, ಬನಶಂಕರಿ ಟೆಂಪಲ್ ವಾರ್ಡ್- ಸಾಮಾನ್ಯ, ಕುಮಾರಸ್ವಾಮಿ ಲೇಔಟ್- ಹಿಂದುಳಿದ ವರ್ಗ(ಎ)ಮಹಿಳೆ, ವಿಕ್ರಂ ನಗರ್ – ಸಾಮಾನ್ಯ, ಪದ್ಮನಾಭ ನಗರ – ಸಾಮ್ಯಾನ, ಕಾಮಕ್ಯ ನಗರ – ಸಾಮ್ಯಾನ, ದೀನ್‌ದಯಾಳು ವಾರ್ಡ- ಹಿಂದುಳಿದ ವರ್ಗ(ಎ), ಹೊಸಕೇರೆ ಹಳ್ಳಿ – ಸಾಮ್ಯಾನ, ಬಸವನಗುಡಿ – ಸಾಮಾನ್ಯ ಮಹಿಳೆ, ಹನುಮಂತ ನಗರ – ಸಾಮಾನ್ಯ ಮಹಿಳೆ, ಶ್ರೀನಿವಾಸ್ ನಗರ – ಹಿಂದುಳಿದ ವರ್ಗ(ಎ) ಶ್ರೀನಗರ – ಹಿಂದುಳಿದ ವರ್ಗ(ಬಿ), ಗಿರಿನಗರ – ಸಾಮಾನ್ಯ,  ಕತ್ರಿಗುಪ್ಪೆ – ಸಾಮಾನ್ಯ, ವಿದ್ಯಾಪೀಠ ವಾರ್ಡ್ – ಹಿಂದುಳಿದ ವರ್ಗ(ಎ), ಉತ್ತರಹಳ್ಳಿ – ಹಿಂದುಳಿದ ವರ್ಗ(ಎ), ಸುಬ್ರಮಣ್ಯಪುರ – ಸಾಮಾನ್ಯ, ವಸಂತಪುರ – ಹಿಂದುಳಿದ ವರ್ಗ(ಎ)ಮಹಿಳೆ, ಯಲಚೇನಹಳ್ಳಿ – ಸಾಮಾನ್ಯ, ಕೋಣನಕುಂಟೆ – ಸಾಮ್ಯಾನ, ಆರ್‌ಬಿಐ ಲೇಔಟ್ – ಸಾಮ್ಯಾನ ಮಹಿಳೆ, ಚುಂಚಘಟ್ಟ – ಸಾಮಾನ್ಯ, ಅಂಜನಾಪುರ – ಹಿಂದುಳಿದ ವರ್ಗ(ಎ), ಗೊಟ್ಟಿಗೆರೆ – ಸಾಮಾನ್ಯ, ಕಾಳೇನ ಅಗ್ರಹಾರ – ಸಾಮಾನ್ಯ ಮಹಿಳೆ, ಬೇಗುರು – ಹಿಂದುಳಿದ ವರ್ಗ(ಎ), ನಾಗನಾಥಪುರ – ಸಾಮಾನ್ಯ ಮಹಿಳೆ, ಇಬ್ಲೂರು – ಸಾಮಾನ್ಯ ಮಹಿಳೆ, ಅಗರ – ಹಿಂದುಳಿದ ವರ್ಗ(ಎ), ಮಂಗಮ್ಮನ ಪಾಳ್ಯ – ಹಿಂದುಳಿದ ವರ್ಗ(ಎ), ಎಚ್‌ಎಸ್‌ಆರ್-ಸಿಂಗಸಂದ್ರ- ಸಾಮಾನ್ಯ ಮಹಿಳೆ, ರೂಪೇನ ಅಗ್ರಹಾರ – ಸಾಮಾನ್ಯ,  ಹೊಂಗಸಂದ್ರ – ಹಿಂದುಳಿದ ವರ್ಗ(ಬಿ), ಬೊಮ್ಮನಹಳ್ಳಿ – ಸಾಮಾನ್ಯ ಮಹಿಳೆ, ದೇವರಚಿಕ್ಕನಹಳ್ಳಿ – ಸಾಮಾನ್ಯ ಮಹಿಳೆ, ಬಿಳೇಕಹಳ್ಳಿ – ಸಾಮಾನ್ಯ ಮಹಿಳೆ, ಅರಕೆರೆ – ಸಾಮಾನ್ಯ ಮಹಿಳೆ, ಹುಳಿಮಾವು – ಸಾಮಾನ್ಯ, ವಿನಾಯಕ ನಗರ – ಹಿಂದುಳಿದ ವರ್ಗ(ಎ) ಮಹಿಳೆ, ಪುಟ್ಟೇನಹಳ್ಳಿ-ಸಾರಕ್ಕಿ ಲೇಕ್ – ಹಿಂದುಳಿದ ವರ್ಗ(ಎ), ಜರಗನಹಳ್ಳಿ – ಸಾಮಾನ್ಯ ಮಹಿಳೆ, ಕೂಡ್ಲು – ಸಾಮಾನ್ಯ ಮಹಿಳೆ.

    Live Tv
    [brid partner=56869869 player=32851 video=960834 autoplay=true]

  • BBMP 243 ವಾರ್ಡ್ ವಿಂಗಡಣೆಗೆ ಸರ್ಕಾರ ಗ್ರೀನ್ ಸಿಗ್ನಲ್ – 40ಕ್ಕೂ ಹೆಚ್ಚು ವಾರ್ಡ್‌ಗಳ ಸೇರ್ಪಡೆ

    BBMP 243 ವಾರ್ಡ್ ವಿಂಗಡಣೆಗೆ ಸರ್ಕಾರ ಗ್ರೀನ್ ಸಿಗ್ನಲ್ – 40ಕ್ಕೂ ಹೆಚ್ಚು ವಾರ್ಡ್‌ಗಳ ಸೇರ್ಪಡೆ

    ಬೆಂಗಳೂರು: ರಾಜ್ಯ ಗೆಜೆಟ್‌ನಲ್ಲಿ ಕರಡು ಅಧಿಸೂಚನೆ ಹೊರಡಿಸಿರುವ ಸರ್ಕಾರ ಬಿಬಿಎಂಪಿಯ 243 ವಾರ್ಡ್ ವಿಂಗಡಣೆ ಪೂರ್ಣಗೊಳಿಸಿ ಗ್ರೀನ್ ಸಿಗ್ನಲ್ ನೀಡಿದೆ. ಈ ಮೂಲಕ 40ಕ್ಕೂ ಹೆಚ್ಚು ವಾರ್ಡ್‌ಗಳು ಸೇರ್ಪಡೆಯಾಗಿವೆ.

    243 ವಾರ್ಡ್‌ಗಳ ಹೆಸರು, ವ್ಯಾಪ್ತಿ, ಗಡಿ ನಿಗದಿಗೊಳಿಸಿದ್ದು, ಸಾರ್ವಜನಿಕ ಆಕ್ಷೇಪಣೆಗೆ ಸಲ್ಲಿಕೆಗೆ 15 ದಿನ ಕಾಲಾವಕಾಶ ನೀಡಿದೆ. ಇದನ್ನೂ ಓದಿ: ಭಾರತೀಯ ಸಶಸ್ತ್ರ ಪಡೆಗಳಿಗೆ ಸೇರಲು ಮುಸ್ಲಿಂ ಯುವಕರಿಗೆ ಉತ್ತೇಜನ – ವಿಶೇಷ ಅಭಿಯಾನ

    ಜೂನ್ 9ರಂದು ಬಿಬಿಎಂಪಿ ಸಲ್ಲಿಸಿದ್ದ ಡಿ ಲಿಮಿಟೇಷನ್ ವರದಿಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಹೊಸ ರಚನಾ ವರದಿಯ ಕರಡನ್ನು ಪ್ರಕಟಿಸಿದೆ. ಇದರಿಂದ 198 ಇದ್ದ ವಾರ್ಡ್ 243ಕ್ಕೆ ಅಧಿಕೃತವಾಗಿ ಏರಿಕೆಯಾಗಿದೆ. ಹೊಸ ವಾರ್ಡ್ ರಚನೆ ಕುರಿತು ಸಾರ್ವಜನಿಕ ಆಕ್ಷೇಪಣೆಗಳಿದ್ದಲ್ಲಿ 15 ದಿನಗಳ ಒಳಗೆ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆ ಸೂಚಿಸಿದೆ.

    BBMP

    ಈಗಾಗಲೇ 243 ವಾರ್ಡ್‌ಗಳ ನಕ್ಷೆ, ಚೆಕ್ ಬಂದಿ ಸಹಿತ ವಾರ್ಡ್ ವಿವರವನ್ನು ಬಿಡುಗಡೆ ಮಾಡಿದೆ. ಆಕ್ಷೇಪಣೆ ಪರಿಶೀಲನೆ, ಬದಲಾವಣೆಗಳ ನಂತರ ಅಂತಿಮ ವರದಿ ಪ್ರಕಟಿಸಲಾಗುತ್ತದೆ ಎಂದು ಇಲಾಖೆ ಹೇಳಿದೆ. ಇದನ್ನೂ ಓದಿ: ಮೊದಲ ದಲಿತ, ಮುಸ್ಲಿಂ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಿದ್ದು ಬಿಜೆಪಿ- ಟ್ವೀಟ್ ಮಾಡಿ ಮುಜುಗರಕ್ಕೀಡಾದ ಕೋಟಾ

    ವಾರ್ಡ್ ವಿಂಗಡಣೆಯಿಂದಾಗಿ ಪಾಲಿಕೆ ಚುನಾವಣೆಗೆ ತೊಡಕಾಗಿದ್ದ ಡಿ ಲಿಮಿಟೇಷನ್ ವಿಘ್ನವೂ ನಿವಾರಣೆಯಾದಂತಾಗಿದೆ.

    Live Tv

  • ಇಡಿ, ಐಟಿ ಬೆನ್ನಲ್ಲೇ ‘ಕನಕಪುರ ಬಂಡೆಗೆ’ ಮತ್ತೊಂದು ಸಂಕಷ್ಟ

    ಇಡಿ, ಐಟಿ ಬೆನ್ನಲ್ಲೇ ‘ಕನಕಪುರ ಬಂಡೆಗೆ’ ಮತ್ತೊಂದು ಸಂಕಷ್ಟ

    ಬೆಂಗಳೂರು: ಅಕ್ರಮ ಹಣಕಾಸು ವ್ಯವಹಾರ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

    ಆದಾಯ ತೆರಿಗೆ ಇಲಾಖೆ ದಾಳಿ ವೇಳೆ ಮಾಜಿ ಸಚಿವರ ನಿವಾಸದಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾಗಿತ್ತು. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ.

    ಡಿ.ಕೆ.ಶಿವಕುಮಾರ್ ಅವರ ಮನೆಯಲ್ಲಿ ಸಿಕ್ಕ ಹಣವು ಭ್ರಷ್ಟಾಚಾರದಿಂದ ಬಂದಿದ್ದಾ ಎನ್ನುವ ಅನುಮಾನ ಶುರುವಾಗಿದೆ. ಹೀಗಾಗಿ ಇದನ್ನು ಪತ್ತೆಹಚ್ಚಲು ಜಾರಿ ನಿರ್ದೇಶನಾಲಯ ಸಿಬಿಐ ನೆರವನ್ನು ಕೋರಿತ್ತು. ಇಡಿ ಮನವಿಯನ್ನು ಪರಿಗಣಿಸಿದ ಸಿಬಿಐ, ತನಿಖೆ ನಡೆಸಲು ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೆ ಪತ್ರಕ್ಕೆ ಬರೆದಿತ್ತು. ಸಿಬಿಐ ಮನವಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರದ ಗೃಹ ಇಲಾಖೆಯು ಮಾಜಿ ಸಚಿವರ ಮೇಲೆ ತನಿಖೆಗೆ ಅನುಮತಿಯನ್ನು ನೀಡಿದೆ. ಈ ಮೂಲಕ ಸಿಬಿಐ ಮೊದಲಿಗೆ ಪ್ರಾಥಮಿಕ ತನಿಖೆ ನಡೆಸಲಿದೆ ಎಂದು ತಿಳಿದು ಬಂದಿದೆ.

    ಇಡಿ ಬಂಧನಕ್ಕೆ ಒಳಗಾಗಿರುವ ಡಿ.ಕೆ.ಶಿವಕುಮಾರ್ ಅವರು ಸದ್ಯ ತಿಹಾರ್ ಜೈಲಿನಲ್ಲಿದ್ದಾರೆ. ಮಾಜಿ ಸಚಿವರ ನ್ಯಾಯಾಂಗ ಬಂಧನದ ಅಕ್ಟೋಬರ್ 1ರಂದು ಮುಕ್ತಾಯವಾಗಿತ್ತು. ಹೀಗಾಗಿ ಅಂದು ಅವರನ್ನು ಕೋರ್ಟಿಗೆ ಕರೆತರಲಾಗಿತ್ತು. ಕೋರ್ಟಿನಲ್ಲಿ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳು ಅಕ್ಟೋಬರ್ 15 ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಆದೇಶ ನೀಡಿದ್ದಾರೆ. ಅಕ್ಟೋಬರ್ 14ಕ್ಕೆ ದೆಹಲಿಯ ಹೈಕೊರ್ಟಿನಲ್ಲಿ ಡಿಕೆಶಿ ಜಾಮೀನು ಅರ್ಜಿ ವಿಚಾರಣೆಗೆ ನಡೆಯಲಿದೆ.