Tag: Karnataka State Budget 2024

  • ಬಜೆಟ್‌ಗೆ ಇನ್ನೆರಡು ತಿಂಗಳು ಬಾಕಿ – ಕಳೆದ ವರ್ಷದ ಬಜೆಟ್ ಹಣವನ್ನೇ ರಿಲೀಸ್ ಮಾಡದ ಸರ್ಕಾರ!

    ಬಜೆಟ್‌ಗೆ ಇನ್ನೆರಡು ತಿಂಗಳು ಬಾಕಿ – ಕಳೆದ ವರ್ಷದ ಬಜೆಟ್ ಹಣವನ್ನೇ ರಿಲೀಸ್ ಮಾಡದ ಸರ್ಕಾರ!

    – ಅನುದಾನದಲ್ಲಿ 80% ಇಲಾಖೆಗಳಿಗೆ 50% ಹಣ ನೀಡಿದ ಸರ್ಕಾರ

    ಬೆಂಗಳೂರು: ಹೊಸ ಬಜೆಟ್‌ಗೆ ಇನ್ನೆರಡು ತಿಂಗಳು ಬಾಕಿಯಿದೆ. ಆದರೆ ಕಳೆದ ವರ್ಷ ಘೋಷಣೆ ಮಾಡಿದ್ದ ಅನುದಾನ ಹಣವನ್ನೇ ಸರ್ಕಾರ ಇನ್ನೂ ಬಿಡುಗಡೆ ಮಾಡಿಲ್ಲ. ಹೀಗಾಗಿ ಸರ್ಕಾರಕ್ಕೆ ಹಣದ ಸಮಸ್ಯೆ ಶುರುವಾಗಿದೆಯಾ ಎನ್ನುವ ಪ್ರಶ್ನೆ ಮೂಡಿದೆ.

    2024-25ನೇ ಸಾಲಿನ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಎಲ್ಲಾ ಇಲಾಖೆಗೂ 3,10,248 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದರು. ಈ ಪೈಕಿ ಇಲ್ಲಿಯವರೆಗೂ 1,81,785 ಲಕ್ಷ ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಹಂಚಿಕೆಯಾದ ಅನುದಾನದಲ್ಲಿ 80% ಇಲಾಖೆಗಳಿಗೆ 50% ಹಣವನ್ನು ಸರ್ಕಾರ ನೀಡಿದೆ. ಆದರೆ ಎಲ್ಲಾ ಇಲಾಖೆಗಳಿಗೂ ಸರಿಯಾಗಿ ಅನುದಾನ ಬಿಡುಗಡೆಯಾಗಿಲ್ಲ. ಹೀಗಾಗಿ ಗ್ಯಾರಂಟಿ ಯೋಜನೆಗಳಿಂದಾಗಿ ಸರ್ಕಾರಿ ಇಲಾಖೆಗಳಿಗೆ ಹೊಡೆತ ಬೀಳುತ್ತಿದೆ. ಹಂಚಿಕೆ ಮಾಡಿದ್ದ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಹಣದ ಕೊರತೆ ಕಾಡ್ತಿದೆಯಾ? ಸರ್ಕಾರದ ಖಜಾನೆ ಬರಿದಾಗಿದೆಯಾ? ಎನ್ನುವಂತಾಗಿದೆ.ಇದನ್ನೂ ಓದಿ: ಬೆಂಗಳೂರು | ದರ್ಶನಕ್ಕೆ ಪಾಸ್‌ ಸಿಗದಿದ್ದಕ್ಕೆ ತಿರುಪತಿ ತಿಮ್ಮಪ್ಪನನ್ನೇ ಮನೆಗೆ ಕರೆಸಿದ ಭಕ್ತ!

    2024-25ನೇ ಸಾಲಿನಲ್ಲಿ ಹಾಗಾದರೆ ಯಾವ ಯಾವ ಇಲಾಖೆಗೆ ಸಿಎಂ ಎಷ್ಟು ಬಜೆಟ್ ಮೀಸಲಿಟ್ಟಿದ್ದರು? ಈವರೆಗೂ ಎಷ್ಟು ಹಣ ಬಿಡುಗಡೆ ಆಗಿದೆ ಎನ್ನುವ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಈ ಕುರಿತು ಸರ್ಕಾರವೇ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ.

    ಪ್ರಮುಖ ಇಲಾಖೆಗಳಿಗೆ ಬಿಡುಗಡೆ ಆದ ಅನುದಾನ ಎಷ್ಟು?
    ಕೃಷಿ ಇಲಾಖೆ
    ನಿಗದಿಯಾದ ಅನುದಾನ-4,991 ಕೋಟಿ ರೂ.
    ಬಿಡುಗಡೆಯಾದ ಅನುದಾನ- 2,351 ಕೋಟಿ ರೂ.

    ನಗರಾಭಿವೃದ್ಧಿ ಇಲಾಖೆ
    ನಿಗದಿಯಾದ ಅನುದಾನ-14,935 ಕೋಟಿ ರೂ.
    ಬಿಡುಗಡೆಯಾದ ಅನುದಾನ-7,372 ಕೋಟಿ ರೂ.

    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
    ನಿಗದಿಯಾದ ಅನುದಾನ- 34,439 ಕೋಟಿ ರೂ.
    ಬಿಡುಗಡೆಯಾದ ಅನುದಾನ-18,646 ಕೋಟಿ ರೂ.

    ಅರೋಗ್ಯ ಇಲಾಖೆ
    ನಿಗದಿಯಾದ ಅನುದಾನ- 10,697 ಕೋಟಿ ರೂ.
    ಬಿಡುಗಡೆಯಾದ ಅನುದಾನ-6,299 ಕೋಟಿ ರೂ.

    ಆಹಾರ ಇಲಾಖೆ
    ನಿಗದಿಯಾದ ಅನುದಾನ- 99,48 ಕೋಟಿ ರೂ.
    ಬಿಡುಗಡೆಯಾದ ಅನುದಾನ-4,082 ಕೋಟಿ ರೂ.

    ಇಂಧನ ಇಲಾಖೆ
    ನಿಗದಿಯಾದ ಅನುದಾನ-23,173 ಕೋಟಿ ರೂ.
    ಬಿಡುಗಡೆಯಾದ ಅನುದಾನ-14,892 ಕೋಟಿ ರೂ.

    ಜಲಸಂಪನ್ಮೂಲ ಇಲಾಖೆ
    ನಿಗದಿಯಾದ ಅನುದಾನ-16,809 ಕೋಟಿ ರೂ.
    ಬಿಡುಗಡೆಯಾದ ಅನುದಾನ-7,587 ಕೋಟಿ ರೂ.

    ಗ್ರಾಮೀಣಾಭಿವೃದ್ಧಿ ಇಲಾಖೆ
    ನಿಗದಿಯಾದ ಅನುದಾನ-21,512 ಕೋಟಿ ರೂ.
    ಬಿಡುಗಡೆಯಾದ ಅನುದಾನ-70,95 ಕೋಟಿ ರೂ.

    ಲೋಕೋಪಯೋಗಿ ಇಲಾಖೆ
    ನಿಗದಿಯಾದ ಅನುದಾನ-10,176 ಕೋಟಿ ರೂ.
    ಬಿಡುಗಡೆಯಾದ ಅನುದಾನ-5,684 ಕೋಟಿ ರೂ.

    ವಸತಿ ಇಲಾಖೆ
    ನಿಗದಿಯಾದ ಅನುದಾನ-3,067 ಕೋಟಿ ರೂ.
    ಬಿಡುಗಡೆಯಾದ ಅನುದಾನ-1,606 ಕೋಟಿ ರೂ.

    ಶಾಲಾ ಶಿಕ್ಷಣ ಇಲಾಖೆ
    ನಿಗದಿಯಾದ ಅನುದಾನ- 37,055 ಕೋಟಿ ರೂ.
    ಬಿಡುಗಡೆಯಾದ ಅನುದಾನ-22,932 ಕೋಟಿ ರೂ.

    ಸಾರಿಗೆ ಇಲಾಖೆ
    ನಿಗದಿಯಾದ ಅನುದಾನ-65,34 ಕೋಟಿ ರೂ.
    ಬಿಡುಗಡೆಯಾದ ಅನುದಾನ-4,023 ಕೋಟಿ ರೂ.

    ಸಮಾಜ ಕಲ್ಯಾಣ ಇಲಾಖೆ
    ನಿಗದಿಯಾದ ಅನುದಾನ-5,095 ಕೋಟಿ ರೂ.
    ಬಿಡುಗಡೆಯಾದ ಅನುದಾನ-3,028 ಕೋಟಿ ರೂ.

    ಯೋಜನೆ ಇಲಾಖೆ
    ನಿಗದಿಯಾದ ಅನುದಾನ- 3,841 ಕೋಟಿ ರೂ.
    ಬಿಡುಗಡೆಯಾದ ಅನುದಾನ-429 ಕೋಟಿ ರೂ.

    ವೈದ್ಯಕೀಯ ಶಿಕ್ಷಣ ಇಲಾಖೆ
    ನಿಗದಿಯಾದ ಅನುದಾನ-4,331 ಕೋಟಿ ರೂ.
    ಬಿಡುಗಡೆಯಾದ ಅನುದಾನ- 3,062 ಕೋಟಿ ರೂ.

    ಆರ್ಥಿಕ ಇಲಾಖೆ
    ನಿಗದಿಯಾದ ಅನುದಾನ- 34,167 ಕೋಟಿ ರೂ.
    ಬಿಡುಗಡೆಯಾದ ಅನುದಾನ-26,340 ಕೋಟಿ ರೂ.ಇದನ್ನೂ ಓದಿ: ಬೆಳ್ಳಂಬೆಳಗ್ಗೆ ದೆಹಲಿಯಲ್ಲಿ ದಟ್ಟ ಮಂಜು – 100ಕ್ಕೂ ಅಧಿಕ ವಿಮಾನ ಕಾರ್ಯಾಚರಣೆಯಲ್ಲಿ ವ್ಯತ್ಯಯ

     

  • ಬೆಂಗಳೂರು ಸೇರಿ ಈ 11 ನಗರಗಳಲ್ಲಿ ರಾತ್ರಿ 1 ಗಂಟೆವರೆಗೆ ವ್ಯಾಪಾರ ವಹಿವಾಟು

    ಬೆಂಗಳೂರು ಸೇರಿ ಈ 11 ನಗರಗಳಲ್ಲಿ ರಾತ್ರಿ 1 ಗಂಟೆವರೆಗೆ ವ್ಯಾಪಾರ ವಹಿವಾಟು

    ಬೆಂಗಳೂರು: ರಾಜ್ಯದಲ್ಲಿ ನೈಟ್‍ಲೈಫ್ ಮತ್ತಷ್ಟು ರಂಗೇರಲಿದೆ. ಇದರ ಮುನ್ಸೂಚನೆಯನ್ನು ಸಿಎಂ ಸಿದ್ದರಾಮಯ್ಯ (Siddaramaiah) ಅವರು ಇಂದು ಮಂಡಿಸಿದ ರಾಜ್ಯ ಬಜೆಟ್‍ನಲ್ಲಿ (Karnataka Budget 2024) ನೀಡಿದ್ದಾರೆ.

    ಬೆಂಗಳೂರು (Bengaluru) ಹಾಗೂ 10 ಮಹಾನಗರ ಪಾಲಿಕೆಗಳಲ್ಲಿ ವಾಣಿಜ್ಯ ಮತ್ತು ವ್ಯಾಪಾರದ ದೃಷ್ಟಿಯಿಂದ ರಾತ್ರಿಯ ವೇಳೆ ವ್ಯಾಪಾರ ವಹಿವಾಟಿನ ಸಮಯವನ್ನು ಹೆಚ್ಚಿಸಲಾಗಿದೆ. ರಾತ್ರಿಯ ವೇಳೆ ವ್ಯಾಪಾರ ವಹಿವಾಟಿನ ನಿಬರ್ಂಧವನ್ನು ಬೆಳಗಿನ ಜಾವ 1:00 ಗಂಟೆಯವರೆಗೆ ವಿಸ್ತರಿಸುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಇದನ್ನೂ ಓದಿ: Karnataka Budget 2024 – ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜ್‍ಗಳನ್ನು ಐಐಟಿಯಂತೆ ಅಭಿವೃದ್ಧಿ

    ಬಿಬಿಎಂಪಿ (BBMP) ಸೇರಿ ರಾಜ್ಯದಲ್ಲಿ ಬಳ್ಳಾರಿ, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ (Shivamogga), ತುಮಕೂರು, ವಿಜಯಪುರ ಮಹಾನಗರಪಾಲಿಕೆಗಳಿವೆ. ಈ ಎಲ್ಲಾ ಮಹಾನಗರ ವ್ಯಾಪ್ತಿಗಳಲ್ಲಿ ಇನ್ನೂ ಮುಂದೆ ರಾತ್ರಿ 1:00 ಗಂಟೆಯವರೆಗೆ ವ್ಯಾಪಾರ ವಹಿವಾಟು ನಡೆಯಲಿದೆ. ಇದನ್ನೂ ಓದಿ: ನಾವು ಮನುಜರು ಹೆಸರಿನಲ್ಲಿ ವಾರಕ್ಕೆ ಎರಡು ಗಂಟೆ ಶಾಲಾ ಕಾಲೇಜುಗಳಲ್ಲಿ ವಿಮರ್ಶೆ, ಸಂವಾದ – ಶಿಕ್ಷಣಕ್ಕೆ ಸಿಕ್ಕಿದ್ದೇನು?

  • Karnataka Budget 2024 – ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜ್‍ಗಳನ್ನು ಐಐಟಿಯಂತೆ ಅಭಿವೃದ್ಧಿ

    Karnataka Budget 2024 – ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜ್‍ಗಳನ್ನು ಐಐಟಿಯಂತೆ ಅಭಿವೃದ್ಧಿ

    ಬೆಂಗಳೂರು: ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜ್‍ಗಳನ್ನು ಐಐಟಿಯಂತೆ (IIT) ಅಭಿವೃದ್ಧಿ ಪಡಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಬಜೆಟ್‍ನಲ್ಲಿ ಘೋಷಿಸಿದ್ದಾರೆ.

    ರಾಜ್ಯದ 30 ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜುಗಳು ಮತ್ತು ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‍ಗಳ ಉನ್ನತೀಕರಣಕ್ಕೆ ಒಟ್ಟು 30 ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ಘೋಷಿಸಲಾಗಿದೆ. ಇದನ್ನೂ ಓದಿ: GST ಸಂಗ್ರಹಣೆ 18% ಹೆಚ್ಚಳ – 2.8 ಶತಕೋಟಿ ಡಾಲರ್‌ FDI ಹೂಡಿಕೆ

    ಬಜೆಟ್ ಘೋಷಣೆಗಳು
    ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯವನ್ನು (UVCE) 500 ಕೋಟಿ ರೂ. ವೆಚ್ಚದಲ್ಲಿ ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಇದಕ್ಕಾಗಿ ಸರ್ಕಾರದಿಂದ 100 ಕೋಟಿ ರೂ. ಅನುದಾನ ಒದಗಿಸಲಾಗುವುದು. ಜೊತೆಗೆ ಸಿ.ಎಸ್.ಆರ್. ನಿಧಿ ಮತ್ತು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು ನೀಡುವ ದೇಣಿಗೆಯಿಂದ ವಿಶ್ವವಿದ್ಯಾಲಯದ ಅಭಿವೃದ್ಧಿಗಾಗಿ ಸಂಪನ್ಮೂಲಗಳನ್ನು ಸಂಗ್ರಹಿಸಲು ನಿರ್ಧರಿಸಲಾಗಿದೆ. 2024-25ನೇ ಸಾಲಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳ ಕಾಮಗಾರಿಗಳಿಗೆ 250 ಕೋಟಿ ರೂ. ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳ ಕಾಮಗಾರಿಗಳಿಗೆ 120 ಕೋಟಿ ರೂ. ಅನುದಾನ ಒದಗಿಸಲು ಸರ್ಕಾರ ತೀರ್ಮಾನಿಸಿದೆ.

    ಖಾಲಿಯಿರುವ ಶಿಕ್ಷಕರ ಹುದ್ದೆಗಳನ್ನು ಆಗತ್ಯತೆಗನುಗುಣವಾಗಿ ತುಂಬಲಾಗುವುದು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಗೆ ಕ್ರಮವಹಿಸಲಾಗುವುದು. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ವತಿಯಿಂದ ಕೊಪ್ಪಳ, ಬೀದರ್, ಯಾದಗಿರಿ, ರಾಯಚೂರು ಮತ್ತು ಕಲಬುರಗಿಯಲ್ಲಿ ವಿಶ್ವವಿದ್ಯಾಲಯಗಳ ಘಟಕ ಕಾಲೇಜನ್ನು ಅವಶ್ಯವಿರುವ ಜಿಲ್ಲಾ/ ತಾಲ್ಲೂಕು ಕೇಂದ್ರಗಳಲ್ಲಿ ಸ್ಥಾಪಿಸಲಾಗುವುದು.

    ಹಳೆಯ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಸರ್ಕಾರಿ ಉನ್ನತ ಶಿಕ್ಷಣ ವಿನೂತನ ಸಂಸ್ಥೆಗಳನ್ನು ಅಭಿವೃದ್ಧಿಗೊಳಿಸಲು ಬೇರು-ಚಿಗುರು ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಉನ್ನತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ತಮ್ಮ ಆವಿಷ್ಕಾರಗಳಿಗೆ ಪೇಟೆಂಟ್ ಪಡೆದುಕೊಳ್ಳಲು ಅಗತ್ಯವಾದ ತಾಂತ್ರಿಕ ಮತ್ತು ಆರ್ಥಿಕ ನೆರವು ನೀಡಲು 10 ಕೋಟಿ ರೂ.ಗಳ ನಿಧಿ ಸ್ಥಾಪಿಸಲಾಗುತ್ತದೆ. ವಿಷಯ ತಜ್ಞರು, ನಾಗರಿಕ ಸೇವಾ ಅಧಿಕಾರಿಗಳು ಮತ್ತು ಉದ್ಯಮಿಗಳಿಂದ ಸರ್ಕಾರಿ ಪಾಲಿಟೆಕ್ನಿಕ್ ಹಾಗೂ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರೇರಣಾ ಎಂಬ ಕಾರ್ಯಕ್ರಮದಡಿ ಮಾರ್ಗದರ್ಶನವನ್ನು ನೀಡಲಾಗುತ್ತದೆ ಎಂದು ಬಜೆಟ್‍ನಲ್ಲಿ ಘೋಷಿಸಲಾಗಿದೆ.

    ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಕಟ್ಟಡವನ್ನು 54 ಕೋಟಿ ರೂ. ವೆಚ್ಚದಲ್ಲಿ ಹಾಗೂ ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜು ಹಾಸ್ಟೆಲ್ ಕಟ್ಟಡ ನಿರ್ಮಾಣವನ್ನು 116 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ವೇಳೆ ತಿಳಿಸಿದ್ದಾರೆ. ಇದನ್ನೂ ಓದಿ: Karnataka State Budget 2024- ರಾಜ್ಯ ಬಜೆಟ್ ನಲ್ಲಿ ಬಸವಣ್ಣ: ಸಾಂಸ್ಕೃತಿಕ ನಾಯಕನಿಗೆ ಜೈಕಾರ

  • Karnataka State Budget 2024- ರಾಜ್ಯ ಬಜೆಟ್ ನಲ್ಲಿ ಬಸವಣ್ಣ: ಸಾಂಸ್ಕೃತಿಕ ನಾಯಕನಿಗೆ ಜೈಕಾರ

    Karnataka State Budget 2024- ರಾಜ್ಯ ಬಜೆಟ್ ನಲ್ಲಿ ಬಸವಣ್ಣ: ಸಾಂಸ್ಕೃತಿಕ ನಾಯಕನಿಗೆ ಜೈಕಾರ

    ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿರುವ 2024-25ನೇ ಸಾಲಿನ ಬಜೆಟ್ (Karnataka State Budget 2024) ನಲ್ಲಿ ವಿಶ್ವಗುರು ಬಸವಣ್ಣ (Basavanna)ನವರ ಹೆಸರಿನಲ್ಲಿ ಹಲವಾರು ಯೋಜನೆಗಳನ್ನು ಘೋಷಿಸಲಾಗಿದೆ. ಈಗಾಗಲೇ ಕರ್ನಾಟಕ ಸರ್ಕಾರವು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವ ಬೆನ್ನಲ್ಲೇ ಅವರ ಹೆಸರಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

    12ನೇ ಶತಮಾನದಲ್ಲಿ ಸಾಮಾಜಿಕ ಮತ್ತು ಲಿಂಗ ಸಮಾನತೆಗಾಗಿ ಮತ್ತು ವರ್ಗಬೇಧ ಹಾಗೂ ವರ್ಣಬೇಧ ವಿರುದ್ಧವಾಗಿ ಶೋಷಿತ ವರ್ಗದ ಜನರಲ್ಲಿ ಆತ್ಮಸ್ಥೈರ್ಯವನ್ನು ತುಂಬಿ, ಸಮಾಜೋಧಾರ್ಮಿಕ ಕ್ರಾಂತಿಯನ್ನು ಮಾಡಿದ ಶ್ರೇಯಸ್ಸು ವಿಶ್ವಗುರು ಬಸವಣ್ಣನವರಿಗೆ ಸಲ್ಲುತ್ತದೆ. ಜಗತ್ತಿನಲ್ಲಿ ಪ್ರಜಾ ಪ್ರಭುತ್ವಕ್ಕೆ ಅನುಭವ ಮಂಟಪ ಸ್ಥಾಪನೆ ಮೂಲಕ ಬುನಾದಿಯನ್ನು ಶ್ರೀ ಬಸವೇಶ್ವರರು ಹಾಕಿರುವುದು ಕನ್ನಡಿಗರು ಮತ್ತು ಭಾರತೀಯರಿಗೆ ಹೆಮ್ಮೆಯಾಗಿದೆ. ಇಂತಹ ಅಪೂರ್ವ ವ್ಯಕ್ತಿತ್ವದ ವಿಶ್ವಗುರು ಜಗಜ್ಯೋತಿ ಬಸವೇಶ್ವರನವರನ್ನು ಕರ್ನಾಟಕ ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಎಲ್ಲಾ ಸರ್ಕಾರಿ ಕಛೇರಿಗಳಲ್ಲಿರುವ ವಿಶ್ವಗುರು ಜಗಜ್ಯೋತಿ ಬಸವಣ್ಣನವರ ಭಾವಚಿತ್ರದಲ್ಲಿ ವಿಶ್ವಗುರು ಬಸವಣ್ಣ- ಸಾಂಸ್ಕೃತಿಕ ನಾಯಕ ಎಂದು ಮುದ್ರಿಸಲಾಗುವುದು.

    12ನೇ ಶತಮಾನದಲ್ಲಿ ಬಸವಾದಿ ಶರಣರು ಸಮ ಸಮಾಜದ ನಿರ್ಮಾಣಕ್ಕೆ ಬುನಾದಿ ಹಾಕಿದವರು. ಇವರು ತಮ್ಮ ವಚನ ಸಾಹಿತ್ಯದ ಮೂಲಕ ಕಾಯಕ –ದಾಸೋಹದ ತತ್ವವನ್ನು ಪ್ರಸಾರ ಮಾಡಿದವರು. ಈ ಹಿನ್ನೆಲೆಯಲ್ಲಿ ಶರಣರ ಜೀವನ ಚರಿತ್ರೆ, ಅವರು ನಡೆದು ಬಂದ ದಾರಿ ಮತ್ತು ವಚನ ಸಾಹಿತ್ಯ ಕುರಿತು ರಾಜ್ಯದ ಎಲ್ಲ ವಿಶ್ವ ವಿದ್ಯಾಲಯಗಳಲ್ಲಿ ಮತ್ತು ಕಾಲೇಜುಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.

    ಬಸವಣ್ಣನವರ ಬದುಕು, ಸಂದೇಶ, ಚಿಂತನೆಯನ್ನು ವ್ಯಾಪಕವಾಗಿ ಪ್ರಚುರಪಡಿಸುವ ನಿಟ್ಟಿನಲ್ಲಿ ಸರ್ವ ಧರ್ಮ ಸಂಸತ್ತನ್ನು ಬಸವ ಜಯಂತಿಯಂದು ಆಯೋಜಿಸಲಾಗುವುದು. ಬಸವಣ್ಣನವರ ಜನ್ಮಸ್ಥಳವಾದ ಬಸವನಬಾಗೇವಾಡಿಯ ಅಭಿವೃದ್ಧಿಗೆ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗುವುದು. ಬಸವಣ್ಣ ಹಾಗೂ ಇತರ ಶರಣರ ವಚನಗಳನ್ನು ವಿಶ್ವಕ್ಕೆ ಪರಿಚಯಿಸುವ ವಚನ ಸಂಗ್ರಹಾಲಯ/ ವಚನ ಮಂಟಪವನ್ನು ಕಲಬುರಗಿಯಲ್ಲಿ ಸ್ಥಾಪಿಸಲಾಗುವುದು.

    ಬಸವಣ್ಣನವರ ಹೆಸರಿನಲ್ಲಿ ಇಷ್ಟೆಲ್ಲ ಆಯೋಜನೆಗಳನ್ನು ಈ ಬಾರಿಯ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ.