Tag: karnataka state budget

  • ವೀರಪ್ಪ ಮೊಯ್ಲಿ ಹೇಳಿಕೆಗಿಂತಲೂ ಹೈಕಮಾಂಡ್ ಹೇಳಿಕೆ ಮುಖ್ಯ : ಸಿಎಂ

    ವೀರಪ್ಪ ಮೊಯ್ಲಿ ಹೇಳಿಕೆಗಿಂತಲೂ ಹೈಕಮಾಂಡ್ ಹೇಳಿಕೆ ಮುಖ್ಯ : ಸಿಎಂ

    – ಗುತ್ತಿಗೆದಾರರಿಗೆ ಏಪ್ರಿಲ್‌ನಲ್ಲಿ ಹಣ ಬಿಡುಗಡೆ ಮಾಡ್ತೀನಿ

    ಬೆಂಗಳೂರು: ವೀರಪ್ಪ ಮೊಯ್ಲಿ (Veerappa Moily) ಅಥವಾ ಬೇರೆಯವರು ಸಿಎಂ ಬದಲಾವಣೆ ವಿಚಾರ ಹೇಳುವುದು ಮುಖ್ಯವಲ್ಲ. ಹೈಕಮಾಂಡ್ ಏನು ಹೇಳುತ್ತಾರೋ ಅದು ಮುಖ್ಯ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದರು.

    ಡಿಕೆಶಿ ಸಿಎಂ ಆಗೇ ಆಗ್ತಾರೆ ಎಂಬ ವೀರಪ್ಪ ಮೊಯ್ಲಿ ಹೇಳಿಕೆ ವಿಚಾರವಾಗಿ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ಹೈಕಮಾಂಡ್ ತೀರ್ಮಾನವೇ ಅಂತಿಮ ತೀರ್ಮಾನ. ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ಬೇರೆ ಅವರು ಮಾತನಾಡಿದರೆ ನಾನೇನು ಮಾತನಾಡಲಿ. ನಾನು ಹೈಕಮಾಂಡ್ ನಿರ್ದೇಶನದಂತೆ ಹೋಗುತ್ತೇನೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆ ಖಚಿತ – ಬಿ.ವೈ.ವಿಜಯೇಂದ್ರ

    ಗುತ್ತಿಗೆದಾರರಿಗೆ ಏಪ್ರಿಲ್‌ನಲ್ಲಿ ಹಣ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದೇನೆ. 30 ಸಾವಿರ ಕೋಟಿ ರೂ. ಬಾಕಿ ಇದೆ. 15 ಸಾವಿರ ಕೋಟಿ ರೂ. ಕೊಡಬೇಕು ಎಂದು ಹೇಳಿದ್ದಾರೆ. ಆದರೆ ಅಷ್ಟೆಲ್ಲಾ ಕೊಡಲು ಆಗುವುದಿಲ್ಲ. ಎಷ್ಟು ಸಾಧ್ಯವೋ ಅಷ್ಟು ಕೊಡುತ್ತೇವೆ ಎಂದರು.

    ಹೈಕಮಾಂಡ್ ದೂರು ನೀಡುತ್ತೇವೆ ಎಂಬ ಗುತ್ತಿಗೆದಾರರ ಸಂಘದವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಲಿ ಯಾರು ಬೇಡ ಅಂದರು. ನಾವು ಹಣಕಾಸು ಪರಿಸ್ಥಿತಿ ನೋಡಿಕೊಂಡು ಹಣ ಬಿಡುಗಡೆ ಮಾಡುತ್ತೇವೆ. ಹಣ ಬಾಕಿ ಉಳಿದಿದ್ದು ಯಾರಿಂದ? ಬಜೆಟ್‌ನಲ್ಲಿ ಹಣ ಇಡದೇ ಟೆಂಡರ್ ಕರೆದು ಕೆಲಸ ಶುರು ಮಾಡಿದರು. ಅದಕ್ಕೆ ನಾವು ಹೊಣೆನಾ? ಗುತ್ತಿಗೆದಾರರು ಯಾರಿಗಾದರೂ ದೂರು ಕೊಡಲಿ. ನಾವು ಹಣಕಾಸು ಪರಿಸ್ಥಿತಿ ನೋಡಿಕೊಂಡು ಹಣ ಬಿಡುಗಡೆ ಮಾಡುವುದು ಎಂದು ಖಡಕ್ ಉತ್ತರ ನೀಡಿದರು. ಇದನ್ನೂ ಓದಿ: ಓಲಾದ 1 ಸಾವಿರ ಉದ್ಯೋಗಿಗಳು ಮನೆಗೆ

    ಅಧಿಕಾರಿಗಳು ಕಮಿಷನ್ ಕೇಳುತ್ತಾರೆ ಎಂಬ ಆರೋಪ ಕುರಿತು ಮಾತನಾಡಿ, ಅಧಿಕಾರಿಗಳು ಕಮಿಷನ್ ಕೇಳಿದರೆ ಕೊಡುವುದು ಬೇಡ. ಯಾಕೆ ಕಮಿಷನ್ ಕೊಡುತ್ತೀರಾ. ಲಂಚ ತೆಗೆದುಕೊಳ್ಳುವುದು ಅಪರಾಧ. ಅದೇ ರೀತಿ ಲಂಚ ಕೊಡುವವನು ಅಪರಾಧಿನೇ. ಕಮಿಷನ್ ಯಾರು ಕೊಡಬಾರದು. ನಾನು ಇದೂವರೆಗೂ ಹಣ ಬಿಡುಗಡೆಗೆ ದುಡ್ಡು ಕೇಳಿಲ್ಲ ಎಂದು ಹೇಳಿದರು.

    ಬಜೆಟ್ ನಿರೀಕ್ಷೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಮಾ. 7ರಂದು ಬಜೆಟ್ ಮಂಡನೆ ಮಾಡುತ್ತೇವೆ. ಬಜೆಟ್ ಮಂಡನೆ ಆದ ಮೇಲೆ ನೋಡಿ. ಬಜೆಟ್ ಮಂಡನೆ ಮಾಡೋವರೆಗೂ ಅದು ಸೀಕ್ರೆಟ್ ಡಾಕ್ಯುಮೆಂಟ್ ಆಗಿರುತ್ತದೆ. ಅದರಲ್ಲಿ ಏನಿದೆ ಅಂತ ಹೇಳಲು ಆಗುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಡಿಕೆ ಸಾಹೇಬ್ರು ಹೇಳಿರೋದ್ರಲ್ಲಿ ತಪ್ಪೇನಿಲ್ಲ, ಎಲ್ಲರೂ ಬರಲಿ ಅನ್ನೋದಷ್ಟೇ ಅವರ ಉದ್ದೇಶ – ಸಾಧು ಕೋಕಿಲ

  • ದಾಖಲೆಯ ಬಜೆಟ್‌ ಮಂಡನೆ – ಸಿದ್ದರಾಮಯ್ಯಗೆ ಟಗರು ಗಿಫ್ಟ್‌

    ದಾಖಲೆಯ ಬಜೆಟ್‌ ಮಂಡನೆ – ಸಿದ್ದರಾಮಯ್ಯಗೆ ಟಗರು ಗಿಫ್ಟ್‌

    ಬೆಂಗಳೂರು: 14ನೇ ಬಜೆಟ್‌ (Karnataka Budget) ಮಂಡಿಸಿ ದಾಖಲೆ ಬರೆಯಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸಾಧನೆ ಅವರಿಗೆ ಟಗರು ಸ್ಪೆಷಲ್‌ ಗಿಫ್ಟ್‌ ಕೊಡಲು ತಂಡವೊಂದು ಮುಂದಾಗಿದೆ.

    ದಾಖಲೆಯ ಬಜೆಟ್ ಮಂಡಿಸಿದ ಸಿದ್ದುಗೆ ಟಗರು ಉಡುಗೊರೆ ಕೊಡಲು ಯತೀಂದ್ರ ಬ್ರಿಗೇಡ್ ತಂಡ ರೆಡಿಯಾಗಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ ಮಂಡಿಸಲಿದ್ದಾರೆ. ಇದನ್ನೂ ಓದಿ: ಗ್ಯಾರಂಟಿಗಳ ಜಾರಿ ನಡುವೆ ಹೊಸ ಭರವಸೆ ಹುಟ್ಟಿಸುತ್ತಾ ರಾಜ್ಯ ಸರ್ಕಾರದ ಬಜೆಟ್?

    ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿಯಾಗಿ ಏಳು ಬಜೆಟ್‌ಗಳನ್ನು ಮಂಡಿಸಿದ್ದಾರೆ. ಕಾಂಗ್ರೆಸ್-ಜೆಡಿ(ಎಸ್) ಸಮ್ಮಿಶ್ರ ಸರ್ಕಾರದಲ್ಲಿ 2005-07 ಮತ್ತು ಆಗಿನ ಜೆಡಿ ಸರ್ಕಾರದಲ್ಲಿ 1995-2000 ವರೆಗೆ. 1995 ಮತ್ತು 1996 ರಲ್ಲಿ ಹೆಚ್‌.ಡಿ. ದೇವೇಗೌಡರ ಅಡಿಯಲ್ಲಿ ಎರಡು ಬಾರಿ. 1997, 1998 ಮತ್ತು 1999 ರಲ್ಲಿ ಜೆ.ಹೆಚ್. ಪಟೇಲ್ ಅವರ ಅಡಿಯಲ್ಲಿ ಮೂರು ಬಾರಿ. 2005 ಮತ್ತು 2006 ರಲ್ಲಿ ಎನ್. ಧರಂ ಸಿಂಗ್ ನೇತೃತ್ವದಲ್ಲಿ ಬಜೆಟ್ ಮಂಡಿಸಿದ್ದಾರೆ.

    2013ರಲ್ಲಿ ಕಾಂಗ್ರೆಸ್‌ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಾಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದರು. ಆಗ ಹಣಕಾಸು ಖಾತೆಯನ್ನೂ ಹೊಂದಿದ್ದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಸತತ 6 ಬಜೆಟ್ ಮಂಡಿಸಿದ್ದಾರೆ. ಇದನ್ನೂ ಓದಿ: ಇಂದು 14ನೇ ಬಜೆಟ್ ಮಂಡಿಸಲಿರುವ ಸಿಎಂ- ಗ್ಯಾರಂಟಿ ಮಧ್ಯೆ ಹೆಚ್ಚಿದ ನಿರೀಕ್ಷೆ

    ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿರುವ ಸಿದ್ದರಾಮಯ್ಯ, ಇಂದು ತಮ್ಮ 14ನೇ ಬಜೆಟ್‌ ಮಂಡಿಸಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟ್ಯಾಬ್ಲೋ ಡ್ಯಾಮೇಜ್ ಕಂಟ್ರೋಲ್ – ನಾರಾಯಣ ಗುರು ಹೆಸರಿನಲ್ಲಿ ಶಾಲೆ ಆರಂಭ

    ಟ್ಯಾಬ್ಲೋ ಡ್ಯಾಮೇಜ್ ಕಂಟ್ರೋಲ್ – ನಾರಾಯಣ ಗುರು ಹೆಸರಿನಲ್ಲಿ ಶಾಲೆ ಆರಂಭ

    ಬೆಂಗಳೂರು: ಗಣರಾಜ್ಯೋತ್ಸವದ ವೇಳೆ ಕೇರಳದ ಟ್ಯಾಬ್ಲೋವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿ ಬಿಜೆಪಿ ಟೀಕೆಗೆ ಗುರಿಯಾಗಿತ್ತು. ಈಗ ಡ್ಯಾಮೇಜ್ ಕಂಟ್ರೋಲ್ ಮಾಡಲು ಕರ್ನಾಟಕ ಸರ್ಕಾರ ನಾರಾಯಣ ಗುರುಗಳ ಹೆಸರಿನಲ್ಲಿ ಶಾಲೆ ಆರಂಭಿಸಲು ಮುಂದಾಗಿದೆ.

    ಮಾನವೀಯತೆ, ಸಮಾನತೆ ಹರಿಕಾರ, ಶ್ರೀನಾರಾಯಣ ಗುರುವರರರ ಸ್ಮರಣಾರ್ಥಕ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ತಲಾ ಒಂದು ಶ್ರೀ ನಾರಾಯಣ ಗುರು ವಸತಿ ಶಾಲೆಯನ್ನು ಪ್ರಾಂಭಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

    ಬಜೆಟ್‍ನಲ್ಲಿ ಏನಿದೆ?
    ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿ ವಿವಿಧ ಸಮುದಾಯಗಳ ಅಭಿವೃದ್ಧಿಗಾಗಿ ಸ್ಥಾಪಿಸಲಾಗಿರುವ ನಿಗಮಗಳ ಮೂಲಕ 400 ಕೋಟಿ ರೂಪಾಯಿ ಮೊತ್ತದಲ್ಲಿ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗುವುದು.

    ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿ ವಿವಿಧ ಸಮುದಾಯಗಳ ಅಭಿವೃದ್ಧಿಗಾಗಿ ಸ್ಥಾಪಿಸಲಾಗಿರುವ ನಿಗಮಗಳ ಮೂಲಕ 400 ಕೋಟಿ ರೂಪಾಯಿ ಮೊತ್ತದಲ್ಲಿ ಈ ಯೋಜನೆಯಮನ್ನು ಹಮ್ಮಿಕೊಳ್ಳಲಾಗುವುದು. ದೇವರಾಜ ಅರಸು ಅಭಿವೃದ್ಧಿ ನಿಗಮದ ಮೂಲಕ ಹಿಂದುಳಿದ ಹಾಗೂ ಅತೀ ಹಿಂದುಳಿದ ಸಮುದಾಯಗಳಾದ ತಿಗಳ, ಮಾಳಿ, ಮಾಳಿ ಮಾಲಗಾg, ಕುಂಬಾರ, ಯಾದವ, ದೇವಾಡಿಗ, ಸಿಂಪಿ, ಕ್ಷತ್ರಿಯ, ಮೇದಾರ, ಕಂಚಿ, ಕುರ್ಮ, ಪಿಂಜಾರ/ ನದಾಫ್, ಕುರುಬ, ಬಲಿಜ, ಈಡಿಗ, ಹಡಪ ಹಾಗೂ ಇತರ ಜನಾಂಗದ ಅಭಿವೃದ್ಧಿಗೆ 400 ಕೋಟಿ ರೂಪಾಯಿ ಮೊತ್ತದಲ್ಲಿ ಕಾರ್ಯಕ್ರಮ ರೂಪಿಸಲಾಗುವುದು.

    ಎಸ್.ಸಿ/ಎಸ್.ಟಿ ಮಹಿಳೆಯಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಇಲಾಖೆಗಳ ಅಡಿಯಲ್ಲಿರುವ ಎಲ್ಲಾ ಅಭಿವೃದ್ಧಿ ನಿಗಮಗಳ ಸ್ವಯಂ ಉದ್ಯೋಗ ಮತ್ತು ಇತರೆ ಕಾರ್ಯಕ್ರಮಗಳಲ್ಲಿನ ಗುರಿಯಲ್ಲಿ ಎಸ್.ಟಿ/ಎಸ್/ಟಿ ಮಹಿಳೆಯರಿಗೆ ಶೇ.25 ರಷ್ಟು ಕಾಯ್ದಿರಿಸಲಿದೆ. ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಳೆಗಳ ವ್ಯಾಪ್ತಿಗೆ ಬರುವ ವಿವಿಧ ಅಭಿವೃದ್ಧಿ ನಿಗಮಗಳಿಂದ ಒಟ್ಟಾರೆ 800 ಕೋಟಿ ರೂಪಾಯಿಗಳ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು

    ದುರ್ಬಲ ವರ್ಗಗಳ ಸಬಲೀಕರಣ:
    • ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಅಭಿವೃದ್ಧಿ ನಿಗಮಗಳ ಯೋಜನೆಗಳಿಗೆ 800 ಕೋಟಿ ರೂ.
    • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಇತರೆ ವರ್ಗದ ಮಕ್ಕಳಿಗಾಗಿ 250 ಕೋಟಿ ರೂ. ವೆಚ್ಚದಲ್ಲಿ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮಂಗಳೂರು ಮತ್ತು ಮೈಸೂರಿನಲ್ಲಿ ತಲಾ 1000 ಸಾಮಥ್ರ್ಯದ ಬಹುಮಹಡಿಯ ದೀನ್‍ದಯಾಳ್ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿ ನಿಲಯ ಸಮುಚ್ಛಯ ನಿರ್ಮಾಣ.
    • ಪ್ರತಿ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಒಂದು ಶಾಲೆಯನ್ನು ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆಯಾಗಿ ಮರುನಾಮಕರಣ; ಪದವಿ ಪೂರ್ವ ತರಗತಿ ಪ್ರಾರಂಭ: ಸಿಬಿಎಸ್‍ಇ ಮಾನ್ಯತೆ ಪಡೆಯಲು ಕ್ರಮ. 25 ಕೋಟಿ ರೂ. ಅನುದಾನ.
    • ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ತಲಾ ಒಂದು ಶ್ರೀ ನಾರಾಯಣ ಗುರು ವಸತಿ ಶಾಲೆ ಪ್ರಾರಂಭ.


    • ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗಳ ಅಡಿಯಲ್ಲಿರುವ ಎಲ್ಲಾ ಅಭಿವೃದ್ಧಿ ನಿಗಮಗಳ ಸ್ವಯಂ ಉದ್ಯೋಗ ಮತ್ತು ಇತರೆ ಕಾರ್ಯಕ್ರಮಗಳ ಗುರಿಯಲ್ಲಿ ಶೇ.25ರಷ್ಟು ಮಹಿಳೆಯರಿಗೆ ಮೀಸಲು.
    • ಗಂಗಾ ಕಲ್ಯಾಣ ಯೋಜನೆಯಲ್ಲಿ ಸುಧಾರಣೆ; ಬೋರ್ ವೆಲ್ ಕೊರೆಯಲು ಡಿ.ಬಿ.ಟಿ. ಮೂಲಕ ಹಣ ವರ್ಗಾವಣೆ; ವಿದ್ಯುದೀಕರಣ ಶುಲ್ಕ ಸರ್ಕಾರದಿಂದ ಪಾವತಿ. 2022-23ರಲ್ಲಿ ಒಟ್ಟಾರೆ 1,115 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನ.
    • ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿವಿಧ ಸಮುದಾಯಗಳ ನಿಗಮಗಳಡಿ 400 ಕೋಟಿ ರೂ. ಅಭಿವೃದ್ಧಿ ಯೋಜನೆ. ದೇವರಾಜ ಅರಸು ಅಭಿವೃದ್ಧಿ ನಿಗಮದಡಿ ಬರುವ ಇತರ ಹಿಂದುಳಿದ ಸಮುದಾಯಗಳಿಗೆ 400 ಕೋಟಿ ರೂ. ಯೋಜನೆ
    • ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಹಾಗೂ ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ ತಲಾ 100 ಕೋಟಿ ರೂ. ಯೋಜನೆ.
    • ಮರಾಠಾ ಅಭಿವೃದ್ಧಿ ನಿಗಮದ ಕಾರ್ಯಕ್ರಮಗಳಿಗೆ 50 ಕೋಟಿ ರೂ.
    • ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ 50 ಕೋಟಿ ರೂ. ಯೋಜನೆ ಹಾಗೂ ಜೈನ, ಸಿಖ್ ಮತ್ತು ಬೌದ್ಧ ಸಮುದಾಯಗಳ ಅಭಿವೃದ್ಧಿಗೆ 50 ಕೋಟಿ ರೂ. ಯೋಜನೆ.