Tag: Karnataka Rajyotsava

  • ರಾಜ್ಯೋತ್ಸವದಂದು ಕರಾಳ ದಿನ ಆಚರಿಸಿದ ಎಂಇಎಸ್ ಪುಂಡರ ವಿರುದ್ಧ ಕೇಸ್

    ರಾಜ್ಯೋತ್ಸವದಂದು ಕರಾಳ ದಿನ ಆಚರಿಸಿದ ಎಂಇಎಸ್ ಪುಂಡರ ವಿರುದ್ಧ ಕೇಸ್

    ಬೆಳಗಾವಿ: ಕರ್ನಾಟಕ ರಾಜ್ಯೋತ್ಸವಕ್ಕೆ (Karnataka Rajyotsava) ಪ್ರತಿಯಾಗಿ ಎಂಇಎಸ್ (MES) ನಡೆಸಿದ ಕರಾಳ ದಿನಾಚರಣೆ ಸಂಬಂಧ 45ಕ್ಕೂ ಹೆಚ್ಚು ಎಂಇಎಸ್ ನಾಯಕರು ಹಾಗೂ ಕಾರ್ಯಕರ್ತರ ವಿರುದ್ಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಜಿಲ್ಲಾಡಳಿತ ಕರಾಳ ದಿನಾಚರಣೆಗೆ ಅನುಮತಿ ನೀಡದಿದ್ದರೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ಮನವಿಗೆ ಸ್ಪಂದಿಸಿ ಕಾರ್ಯಕರ್ತರು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದ್ದರು.  ಇದನ್ನೂ ಓದಿ: ನಾಲ್ಕು ಅನುಮಾನಗಳಿಗೆ ಕಾರಣವಾದ ಗುರುಪ್ರಸಾದ್ ಸಾವು!

    ಕರ್ನಾಟಕ ಸರ್ಕಾರವು ಕಾಲಕಾಲಕ್ಕೆ ನಾಯಕರು ಮತ್ತು ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮೂಲಕ ಗಡಿ ಒಡೆಯಲು ಪ್ರಯತ್ನಿಸುತ್ತಿದೆ. ಆದರೆ ಕರ್ನಾಟಕ ಸರ್ಕಾರವು ಈ ಬಾರಿ ಮರಾಠಿ ಭಾಷಿಕ ಪತ್ರಕರ್ತರು ಮತ್ತು ವಕೀಲರ ವಿರುದ್ಧವೂ ಪ್ರಕರಣಗಳನ್ನು ದಾಖಲಿಸಿದೆ ಎಂದು ಸಮಿತಿ ಈಗ ಆರೋಪ ಮಾಡಿದೆ.

     

    ಮಾಜಿ ಶಾಸಕ ಮನೋಹರ ಕಿಣೇಕರ, ಮಾಜಿ ಮೇಯರ್ ಮಾಲೋಜಿ ಅಷ್ಟೇಕರ, ಪ್ರಕಾಶ ಮರಗಾಳೆ, ರಮಾಕಾಂತ ಕೊಂಡುಸ್ಕರ್, ರಂಜಿತ್ ಚವ್ಹಾಣ, ಅಮರ ಯಳೂರಕರ, ಗಜಾನನ ಪಾಟೀಲ, ನೇತಾಜಿ ಜಾಧವ, ಅಂಕುಶ ಕೇಸರಕರ, ವಿಕಾಸ ಕಲಘಟಗಿ, ಮದನ ಬಾಮನೆ, ಸಚಿನ ಕೇಳೇಕರ, ಪ್ರಶಾಂತ ಭಾಮನೆ, ಪ್ರಶಾಂತ್, ಕಿರಣ್ ಗಾವಡೆ, ಮಹಾದೇವ ಪಾಟೀಲ, ಶುಭಂ ಶೆಲ್ಕೆ, ರೇಣು ಕಿಲ್ಲೇಕರ್, ಸರಸ್ವತಿ ಪಾಟೀಲ, ಸರಿತಾ ಪಾಟೀಲ, ಕಿರಣ ಹುದ್ದಾರ್, ದತ್ತಾ ಉಘಾಡೆ, ಶ್ರೀಕಾಂತ ಕದಂ, ಚಂದ್ರಕಾಂತ ಕೊಂಡುಸ್ಕರ, ಸಂತೋಷ ಕೃಷ್ಣಾಚೆ, ಗುಂಡು ಕದಂ, ಸುನೀಲ ಬಾಳೇಕುಂದ್ರಿ, ಗಣೇಶ ದಡ್ಡಿಕರ, ಪ್ರಕಾಶ ಶಿರೋಲ್ಕರ್, ಆರ್. ಎಂ. ಚೌಗುಲೆ, ಸುಧೀರ ಚವ್ಹಾಣ, ಮಲ್ಲಪ್ಪ ಪಾಟೀಲ, ನಾಗೇಶ ಪಾಟೀಲ, ಸೂರಜ್ ಯಳ್ಳೂರಕರ, ಶ್ರೀಕಾಂತ ಚವ್ಹಾಣ, ಸದಾ ಚವ್ಹಾಣ, ಕಿರಣ ಮೋದಗೇಕರ, ಶಿವಾಜಿ ಮಂಡೋಳಕರ ಸೇರಿದಂತೆ ಹಲವು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:ಆತ್ಮಹತ್ಯೆ ಮಾಡಿಕೊಂಡ ಪತಿ ಗುರುಪ್ರಸಾದ್‌ ನೋಡಲು ಕಣ್ಣೀರಿಡುತ್ತಲೇ ಧಾವಿಸಿದ 2ನೇ ಪತ್ನಿ

     

  • ಕಲ್ಯಾಣ ಕರ್ನಾಟಕ ಪ್ರತ್ಯೇಕ ಧ್ವಜಾರೋಹಣಕ್ಕೆ ಯತ್ನ – 20ಕ್ಕೂ ಅಧಿಕ ಹೋರಾಟಗಾರರು ಪೊಲೀಸರ ವಶಕ್ಕೆ

    ಕಲ್ಯಾಣ ಕರ್ನಾಟಕ ಪ್ರತ್ಯೇಕ ಧ್ವಜಾರೋಹಣಕ್ಕೆ ಯತ್ನ – 20ಕ್ಕೂ ಅಧಿಕ ಹೋರಾಟಗಾರರು ಪೊಲೀಸರ ವಶಕ್ಕೆ

    ಕಲಬುರಗಿ: ತೆಲಂಗಾಣ(Telangana) ಮಾದರಿಯಲ್ಲಿ ಕಲ್ಯಾಣ ಕರ್ನಾಟಕ(Kalyana Karnataka) ಪ್ರದೇಶಕ್ಕೆ ಪ್ರತ್ಯೇಕ ರಾಜ್ಯ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯೂ ಪ್ರತ್ಯೇಕ ಧ್ವಜಾರೋಹಣ ಮಾಡಲು ಯತ್ನಿಸಿದ ಘಟನೆ ಮಂಗಳವಾರ ನಡೆದಿದೆ.

    ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಮುಂದಾದ ಹಲವು ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದರು. ಮಾಜಿ ಸಚಿವ ದಿ. ಉಮೇಶ ಕತ್ತಿ ಹಾಗೂ ವೈಜನಾಥ ಪಾಟೀಲ್‌ರ ಭಾವಚಿತ್ರ ಮತ್ತು ಪ್ರತ್ಯೇಕ ರಾಜ್ಯದ ಧ್ವಜ ಹಿಡಿದು ಎಂ‌.ಎಸ್ ಪಾಟೀಲ್ ನರಿಬೋಳ ನೇತೃತ್ವದಲ್ಲಿ ನೂರಾರು ಜನ ಸೇರಿ ಹೋರಾಟ ನಡೆಸಿದರು.

    ನಗರದ ಕೋರ್ಟ್ ಮಾರ್ಗವಾಗಿ ಪಟೇಲ್ ವೃತ್ತಕ್ಕೆ ಧ್ವಜಾರೋಹಣ ಮಾಡಲು ಬರುವಾಗ ಮಾರ್ಗಮದ್ಯೆ ಅಡ್ಡಗಟ್ಟಿದ ಪೊಲೀಸರು ಎಲ್ಲರನ್ನು ವಶಕ್ಕೆ ಪಡೆದರು.

    ನಂತರ ಮಾತನಾಡಿದ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್.ಪಾಟೀಲ ನರಿಬೊಳ, ಕರ್ನಾಟಕ ಸಮಗ್ರ ಅಭಿವೃದ್ಧಿಗಾಗಿ 371 ಜೆ ಜಾರಿಯಾಗಿದ್ದರೂ ರಾಜಕೀಯ ಇಚ್ಛಾಶಕ್ತಿ ಕೊರತೆಯಾಗಿದೆ. ರಾಜ್ಯ ಸರ್ಕಾರದ ಮಲತಾಯಿ ಧೋರಣೆಯಿಂದ ಈ ಭಾಗದ ಪ್ರತಿಯೊಂದು ಕ್ಷೇತ್ರಕ್ಕೂ ಅನ್ಯಾಯ ಮುಂದುವರೆದಿದೆ. ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮೀಸಲಿಟ್ಟ ಹಣ ಪಕ್ಕದ ಜಿಲ್ಲೆಗಳಿಗೆ ಬಳಕೆ ಮಾಡಲಾಗುತ್ತಿದೆ ಎಂದು ದೂರಿದರು. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಕೇಸ್ – ನಾಲ್ವರು ಆರೋಪಿಗಳ ಸುಳಿವು ನೀಡಿದವರಿಗೆ ಭಾರೀ ಬಹುಮಾನ ಘೋಷಣೆ

    ಈ ಭಾಗವನ್ನು ಉದ್ಯೋಗ ನೇಮಕಾತಿ, ಮೀಸಲಾತಿ, ಮುಂಬಡ್ತಿ ವಿಷಯದಲ್ಲಿ ಕಡೆಗಣನೆ ಮಾಡಲಾಗುತ್ತಿದೆ. ರಾಜ್ಯೋತ್ಸವ ಪ್ರಶಸ್ತಿ ಪ್ರದಾನದಲ್ಲಿಯೂ ಈ ಭಾಗಕ್ಕೆ ಅನ್ಯಾಯವಾಗಿದೆ. ಪದೆ ಪದೇ ಈ ಭಾಗಕ್ಕೆ ರಾಜ್ಯ ಸರ್ಕಾರ ದ್ರೋಹ ಬಗೆಯುತ್ತಿದೆ. ನಮ್ಮ ಭಾಗದ ಸಮಗ್ರ ಅಭಿವೃದ್ಧಿಗಾಗಿ ತೆಲಂಗಾಣ ಮಾದರಿಯಲ್ಲಿ ಪ್ರತ್ಯೇಕ ರಾಜ್ಯ ನೀಡಬೇಕೆದು ಆಗ್ರಹಿಸಿದರು.

    ಈ ರಸ್ತೆಯಲ್ಲಿ ಹೋರಾಟಕ್ಕಿಳಿದಿದ್ದೇವೆ. ಮುಂಬರುವ ವಿಧಾನಸಬಾ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕದ ಕ್ಷೇತ್ರಗಳಲ್ಲಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅಭಿವೃದ್ಧಿಗೆ ಮತ ನೀಡಿ ಎಂದು ಜನತೆಯ ಬಳಿ ತೆರಳುತ್ತೇವೆ. ಮತದಾರರು ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವನ್ನು ನಾವು ಹೊಂದಿದ್ದೇವೆ  ಎಂದರು.

    ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷರಾದ ಶ್ರವಣಕುಮಾರ ಡಿ ನಾಯಕ, ಚಂದ್ರಶೇಖರ ಹೀರೆಮಠ ಹುಲ್ಲುರ ಶರಣಗೌಡ ಪೊಲೀಸ್‌ ಪಾಟೀಲ ನರಿಬೋಳ, ತಾತಾಗೌಡ ಪಾಟೀಲ ಲಕ್ಮೀಕಾಂತ ಸ್ವಾದಿ, ನಂದಕುಮಾರ ನಾಯಕ, ಸಿದ್ದಣ್ಣ ನೀರಲಕೋಡ, ಶಿವಾನಿ, ಲತಾ ಮಹಾದೇವಿ ಸೇರಿದಂತೆ ಹಲವಾರು ಹೋರಾಟಗಾರರು ಭಾಗವಹಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಖಾಲಿಯಿರುವ 1 ಲಕ್ಷ ಸರ್ಕಾರಿ ಹುದ್ದೆಗಳು ಈ ವರ್ಷ ಭರ್ತಿ: ಬೊಮ್ಮಾಯಿ

    ಖಾಲಿಯಿರುವ 1 ಲಕ್ಷ ಸರ್ಕಾರಿ ಹುದ್ದೆಗಳು ಈ ವರ್ಷ ಭರ್ತಿ: ಬೊಮ್ಮಾಯಿ

    ಬೆಂಗಳೂರು: ಖಾಲಿಯಿರುವ ಒಂದು ಲಕ್ಷ ಸರ್ಕಾರಿ ಹುದ್ದೆಗಳನ್ನು(Government Jobs) ಈ ವರ್ಷ ಭರ್ತಿ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ(CM Basavaraj Bommai) ಘೋಷಿಸಿದ್ದಾರೆ.

    ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯ ಸರ್ಕಾರದ ವತಿಯಿಂದ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ(Karnataka Rajyotsava) ಸಮಾರಂಭದಲ್ಲಿ ಸಿಎಂ ಬೊಮ್ಮಾಯಿ ತಾಯಿ ಭುವನೇಶ್ವರಿಗೆ ಪುಷ್ಪನಮನ ಮಾಡಿ, ಧ್ವಜಾರೋಹಣ ನೆರವೇರಿಸಿದರು. ಇದನ್ನೂ ಓದಿ: ನಕ್ಷತ್ರದ ಕಣ್ಣುಗಳಿರುವ ಅಪ್ಪು ದೇವರ ಮಗು ಎಂದು ಹಾಡಿ ಹೊಗಳಿದ ರಜನಿಕಾಂತ್

    ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕನ್ನಡ ನಾಡು ಪುಣ್ಯದ ಬೀಡು, ಕರುನಾಡಲ್ಲಿ ಹುಟ್ಟಬೇಕಾದ ಏಳೇಳು ಜನ್ಮಗಳ ಪುಣ್ಯ ಮಾಡಿರಬೇಕು ಎಂದು ಬಣ್ಣಿಸಿದರು. ಈ ವರ್ಷ ಖಾಲಿಯಿರುವ ಒಂದು ಲಕ್ಷ ಸರ್ಕಾರಿ ಹುದ್ದೆಗಳನ್ನು ತುಂಬುತ್ತೇವೆ ಎಂದು ಘೋಷಿಸಿದರು. ಡಿಸೆಂಬರ್ ಅಧಿವೇಶನದಲ್ಲಿ ಕನ್ನಡ ಕಡ್ಡಾಯ ಬಳಕೆ ಕಾಯ್ದೆಗೆ ಅನುಮೋದನೆ ಪಡೆದು ಜಾರಿ ಮಾಡೋದಾಗಿ ಸಿಎಂ ಪ್ರಕಟಿಸಿದರು

    ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ 67 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸಿಎಂ ಬೊಮ್ಮಾಯಿ ಗೌರವಿಸಿದರು. ಮೈಸೂರಿನ ರಾಮಕೃಷ್ಣ ಆಶ್ರಮ, ಇಸ್ರೋ ಮಾಜಿ ಅಧ್ಯಕ್ಷ ಕೆ ಶಿವನ್, ನಿವೃತ್ತ ಐಎಎಸ್ ಅಧಿಕಾರಿ ಮದನ್‍ಗೋಪಾಲ್, ಹಿರಿಯ ನಟರಾದ ದತ್ತಣ್ಣ, ಅವಿನಾಶ್, ಸಿಹಿಕಹಿ ಚಂದ್ರು, ಸಾಹಿತಿ ಅ.ರಾ. ಮಿತ್ರ ಸೇರಿ 67 ಗಣ್ಯರು ಪ್ರಶಸ್ತಿಗೆ ಭಾಜನರಾದರು.

    Live Tv
    [brid partner=56869869 player=32851 video=960834 autoplay=true]

  • ಬೆಳಗಾವಿ ಸುವರ್ಣಸೌಧ ಮುಂದೆ ಮಾತಾಡ್ ಮಾತಾಡ್ ಕನ್ನಡ ಗೀತೆಗಳ ಕಲರವ

    ಬೆಳಗಾವಿ ಸುವರ್ಣಸೌಧ ಮುಂದೆ ಮಾತಾಡ್ ಮಾತಾಡ್ ಕನ್ನಡ ಗೀತೆಗಳ ಕಲರವ

    ಬೆಳಗಾವಿ: ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ವಿಶ್ವದಾದ್ಯಂತ ಏಕಕಾಲದಲ್ಲಿ ಲಕ್ಷ ಕಂಠಗಳಲ್ಲಿ ಕನ್ನಡ ಗೀತ ಗಾಯನ ವಿಶೇಷ ಅಭಿಯಾನ ಹಮ್ಮಿಕೊಂಡ ಹಿನ್ನೆಲೆಯಲ್ಲಿ ಬೆಳಗಾವಿಯ ಸುವರ್ಣಸೌಧದಲ್ಲೂ ಗೀತಾ ಗಾಯನ ನಡೆಯಿತು.

    ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವಕ್ಕೆ ಕ್ಷಣಗಣನೇ ಶುರುವಾಗಿದೆ. ಅದಕ್ಕೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ವಿಶೇಷವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಬೇಕು ಎಂಬ ಸದುದ್ದೇಶದಿಂದ ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಮಾತಾಡ್ ಮಾತಾಡ್ ಕನ್ನಡ, ಕನ್ನಡಕ್ಕಾಗಿ ನಾವು ಎಂಬ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯೋತ್ಸವ ಅಭಿಯಾನ ನಿಮಿತ್ತ ವಿಶ್ವದ್ಯಾಂತ ಏಕಕಾಲದಲ್ಲಿ ಕನ್ನಡ ಗೀತ ಗಾಯನ ನಡೆಸಲಾಯಿತು. ಇದನ್ನೂ ಓದಿ: ಜಮೀನು ವಿವಾದ ಎರಡು ಗ್ರಾಮಗಳ ನಡುವೆ ಮಾರಾಮಾರಿ

    ಬೆಳಗಾವಿಯ ಸುವರ್ಣಸೌಧದ ಮುಂಭಾಗದ ಆರಂಭದಲ್ಲಿ ಕನ್ನಡ ಗೀತ ಗಾಯನಕ್ಕೆ ಸಂಸದೆ ಮಂಗಲ ಅಂಗಡಿ, ಜಿಲ್ಲಾಧಿಕಾರಿ ಮಹಾಂತೇಶ್ ಹಿರೇಮಠ, ಜಿ.ಪಂ.ಸಿಇಓ ದರ್ಶನ್ ಸೇರಿದಂತೆ ಹಲವು ಅಧಿಕಾರಿಗಳು ಹಳದಿ-ಕೆಂಪು ಬಣ್ಣದ ಬಲೂನ್‍ಗಳನ್ನು ಹಾರಿಸುವ ಮೂಲಕ ಚಾಲನೆ ನೀಡಿದರು.

    ಇದೇ ವೇಳೆ ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ನಾನು ಕನ್ನಡದಲ್ಲೇ ಮಾತನಾಡುತ್ತೇನೆ. ಕನ್ನಡದಲ್ಲೇ ಬರೆಯುತ್ತೇನೆ. ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇನೆ ಎಂಬ ಪಣ ತೊಡುತ್ತೇನೆ. ಕನ್ನಡ ನಾಡಿನಲ್ಲಿ ವಾಸವಾಗಿರುವ ಕನ್ನಡೇತರ ಬಂಧುಗಳಿಗೆ ಪ್ರೀತಿಯಿಂದ ಕನ್ನಡ ಕಲಿಸುತ್ತೇನೆ. ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಲು ಕಟಿಬದ್ಧನಾಗಿರುತ್ತೇನೆ ಎಂದು ಅಲ್ಲಿ ನೆರೆದಿದ್ದವರು ಸಂಕಲ್ಪ ಮಾಡಿದರು. ಇದನ್ನೂ ಓದಿ:  ಸೌಂದರ್ಯ ಜಗದೀಶ್ ಕುಟುಂಬದಿಂದ ಹಲ್ಲೆ ಪ್ರಕರಣ – ಇಬ್ಬರ ಹೆಸರು ಕೈಬಿಡುವಂತೆ ದೂರುದಾರೆ ಮನವಿ

  • ಅಣ್ತಮ್ಮಾ.. ಗಡಿಗಳನ್ನ ಮೀರಿ ಕನ್ನಡ ಗರಿಗೆದರಬೇಕು: ಯಶ್

    ಅಣ್ತಮ್ಮಾ.. ಗಡಿಗಳನ್ನ ಮೀರಿ ಕನ್ನಡ ಗರಿಗೆದರಬೇಕು: ಯಶ್

    ಬೆಂಗಳೂರು: ರಾಜ್ಯದಲ್ಲಿ ಇಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಹೀಗಾಗಿ ಎಲ್ಲಾ ಸ್ಟಾರ್ ನಟ-ನಟಿಯರು, ಸೆಲೆಬ್ರೆಟಿಗಳು ಕೂಡ ಕನ್ನಡಿಗರಿಗೆ ಶುಭಾಶಯವನ್ನು ತಿಳಿಸುತ್ತಿದ್ದಾರೆ. ಆದರೆ ರಾಕಿಂಗ್ ಸ್ಟಾರ್ ಯಶ್ ವಿಭಿನ್ನವಾಗಿ ಕನ್ನಡ ರಾಜ್ಯೋತ್ಸವಕ್ಕೆ ವಿಶ್ ಮಾಡಿದ್ದಾರೆ.

    ಯಶ್ ತಮ್ಮ ಫೇಸ್‍ಬುಕ್ ಖಾತೆಯಲ್ಲಿ “ಅಣ್ತಮ್ಮಾ.. ಎದೆ ಉಸಿರಂಗೆ ಇರೋ ಕನ್ನಡ ಭಾಷೆ ಕಂಪು ದೇಶ ಪೂರ ಹರಡಬೇಕು. ಗಡಿಗಳನ್ನ ಮೀರಿ ಗರಿಗೆದರಬೇಕು. ಸಾಗರದಾಚೆಗೂ ಚಾಚಿ ನಿಲ್ಲಬೇಕು. ಕನ್ನಡ ಅಂದರೆ ಮೈ ರೋಮ ಎದ್ದೇಳಬೇಕು. ಕನ್ನಡಿಗರು ಅಂದರೆ ಎದೆ ಉಬ್ಬಿಸಿ ನಿಲ್ಲಬೇಕು. ಕನ್ನಡ ಉಳಿಸಿ ಬೆಳಸಿ ಅಂತ ಬೇಡಿಕೊಳ್ಳುವ ಕಾಲ ಹೋಯಿತು. ಈಗೇನಿದ್ದರೂ ಕನ್ನಡ ಕಲಿತು, ಕಲಿಸಿ, ಬಳಸಿ. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ” ಎಂದು ಶುಭ ಕೋರಿದ್ದಾರೆ. ಇದನ್ನೂ ಓದಿ: ಕನ್ನಡ ರಾಜ್ಯೋತ್ಸವಕ್ಕೆ ‘ಒಡೆಯ’ನ ಗಿಫ್ಟ್- ಟೀಸರ್ ರಿಲೀಸ್

    ರಾಕಿಂಗ್ ಸ್ಟಾರ್ ಶುಭಕೋರಿದ ಒಂದು ಗಂಟೆಯಲ್ಲಿ 14 ಸಾವಿರಕ್ಕೂ ಅಧಿಕ ಜನರು ಲೈಕ್ ಮಾಡಿದ್ದು, 2,800ಕ್ಕೂ ಹೆಚ್ಚು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಈ ಮೂಲಕ ನೆಚ್ಚಿನ ನಾಯಕನಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರುತ್ತಿದ್ದಾರೆ. ಯಶ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಯಾಕೆಂದರೆ ಎರಡು ದಿನಗಳ ಹಿಂದೆ ರಾಧಿಕಾ ಪಂಡಿತ್ ಅವರು ಜೂನಿಯರ್ ಯಶ್‍ಗೆ ಜನ್ಮ ನೀಡಿದ್ದಾರೆ. ಇದನ್ನೂ ಓದಿ: ತಮ್ಮನಿಗೆ ಐರಾ ವಿಶ್- ರಾಕಿಭಾಯ್ ಫುಲ್ ಖುಷ್

  • ಪೋತಿಸ್ ಮಳಿಗೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

    ಪೋತಿಸ್ ಮಳಿಗೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

    ಬೆಂಗಳೂರು: ದಕ್ಷಿಣ ಭಾರತದ ಜವಳಿ ಮಾರಾಟ ಸಂಸ್ಥೆ ಪೋತಿಸ್ ಸಂಸ್ಥೆ ನಗರದಲ್ಲಿ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದೆ.

    ಪೋತಿಸ್ ಮಳಿಗೆಯನ್ನು ಕೆಂಪು ಮತ್ತು ಹಳದಿ ಬಣ್ಣದಿಂದ ಶೃಂಗರಿಸಿ ಬಟ್ಟೆ ಖರೀದಿಗೆ ಆಗಮಿಸಿದ ಎಲ್ಲ ಗ್ರಾಹಕರಿಗೆ ಸಿಹಿ ನೀಡಿ ಸಂಂಭ್ರಮಾಚರಣೆ ಮಾಡಿದೆ. ಅಷ್ಟೇ ಅಲ್ಲದೇ ಮಧ್ಯಾಹ್ನ 1,500 ಮಂದಿಗೆ ಅನ್ನದಾನ ಸಹ ನಡೆಸಿ ವಿಶಿಷ್ಟವಾಗಿ ರಾಜೋತ್ಸವ ಆಚರಿಸಿದೆ. ಮಳಿಗೆಗೆ ಆಗಮಿಸಿದ ಗ್ರಾಹಕರಿಗೆ ಒಂದು ಸ್ವೀಟ್ ಬಾಕ್ಸ್ ಉಡುಗೊರೆ ನೀಡಿದ್ದು, ಇಡೀ ದಿನ ಮಳಿಗೆಯಲ್ಲಿ ಕನ್ನಡದ ಹಾಡುಗಳನ್ನು ಹಾಕುವ ಮೂಲಕ ಕನ್ನಡ ವಾತಾವರಣವನ್ನು ಸೃಷ್ಟಿಮಾಡಿತ್ತು.

    2018ರ ಫೆಬ್ರವರಿಯಲ್ಲಿ ಕೆಂಪೇಗೌಡ ರಸ್ತೆಯಲ್ಲಿ ಮಳಿಗೆ ಉದ್ಘಾಟನೆ ಮಾಡಿತ್ತು. ಅಲ್ಲದೇ ಸಂಸ್ಥೆಯ ರಾಯಭಾರಿಯಾಗಿ ನಟ ಪುನೀತ್ ರಾಜ್‍ಕುಮಾರ್ ಹಾಗೂ ನಟಿ ತಮನ್ನಾ ಅವರನ್ನ ನೇಮಕ ಮಾಡಿತ್ತು. 95 ವರ್ಷಗಳಿಂದ ಜವಳಿ ಉದ್ಯಮದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಪೋತಿಸ್, ಮಯೂರಿ, ವಸುಂಧರ, ಪರಂಪರಾ, ವಸ್ತ್ರಕಲಾ ಹಾಗೂ ಕಲಾಕ್ಷೇತ್ರದಂತಹ ಬ್ರ್ಯಾಂಡೆಡ್ ರೇಷ್ಮೆ ವಸ್ತ್ರಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅಲ್ಲದೇ ಕಾಂಚೀಪುರಂ, ಧರ್ಮವರಂ, ಬನಾರಸ್ ರೇಷ್ಮೆ ಉಡುಪುಗಳು, ಫ್ಯಾನ್ಸಿ ಹಾಗೂ ಡಿಸೈನರ್ ಸೀರೆಗಳು ಸೇರಿದಂತೆ ಸಿದ್ದ ಉಡುಪುಗಳನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಾ ವಿಶ್ವಾಸಗಳಿಸಿದೆ.

    ಪೋತಿಸ್ ಶಾಖೆಯಲ್ಲಿ ಕುಟುಂಬದ ಎಲ್ಲಾ ಸದಸ್ಯರಿಗೂ ಒಂದೇ ಕಡೆ ಉಡುಪುಗಳನ್ನು ಖರೀದಿಬಹುದಾಗಿದ್ದ ಮಳಿಗೆಯಾಗಿದ್ದು, ಎಲ್ಲಾ ಸಮಾರಂಭಗಳಿಗೂ ಸೂಕ್ತ ಎನಿಸುವಂಥ ಅತ್ಯುತ್ತಮ ಗುಣಮಟ್ಟದ ವೈವಿಧ್ಯಮಯ ವಸ್ತ್ರಗಳನ್ನು ಒಳಗೊಂಡಿದೆ.

    ಕೆಂಪೇಗೌಡ ರಸ್ತೆಯಲ್ಲಿರುವ ಮಳಿಗೆ ಒಂದು ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಹಾಗೂ ಎಂಟು ಅಂತಸ್ತಿನ ಕಟ್ಟದಲ್ಲಿ ನಿರ್ಮಾಣವಾಗಿದ್ದು, ಕುಟುಂಬದ ಎಲ್ಲಾ ಸದಸ್ಯರಿಗೂ ಬೇಕಾದ ವಸ್ತ್ರಗಳನ್ನು ಪ್ರತ್ಯೇಕ ವಿಭಾಗಗಳಲ್ಲಿ ಮಾರಾಟ ಮಾಡುತ್ತಿದೆ. ಅಲ್ಲದೇ ತಮ್ಮ ಮಾರಾಟ ಮಳಿಗೆಗೆ ಬರುವ ಗ್ರಾಹಕರಿಗೆ ಶುಲ್ಕ ರಹಿತ ವಾಹನ ಪಾರ್ಕಿಂಕ್ ವ್ಯವಸ್ಥೆಯನ್ನು ಮಾಡಿದ್ದು, ರಾಷ್ಟ್ರೀಯ ಹಬ್ಬಗಳು ಸೇರಿ ವಿವಿಧ ವಿಶೇಷ ಸನ್ನಿವೇಶದಲ್ಲಿ ರಿಯಾಯಿತಿ ಮಾರಾಟವನ್ನು ಏರ್ಪಡಿಸುತ್ತಾ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಲಬುರಗಿಯಲ್ಲಿ ಪ್ರತ್ಯೇಕ ಧ್ವಜಾರೋಹಣಕ್ಕೆ ಯತ್ನಿಸಿದವರ ಬಂಧನ

    ಕಲಬುರಗಿಯಲ್ಲಿ ಪ್ರತ್ಯೇಕ ಧ್ವಜಾರೋಹಣಕ್ಕೆ ಯತ್ನಿಸಿದವರ ಬಂಧನ

    ಕಲಬುರಗಿ: ರಾಜ್ಯಾದ್ಯಂತ 63ನೇ ಕರ್ನಾಟಕ ರಾಜ್ಯೋತ್ಸವ ಸಂಭ್ರಮಾಚರಣೆ ನಡೆಯುತ್ತಿದೆ. ಆದರೆ ಕಲಬುರಗಿಯಲ್ಲಿ ಪ್ರತ್ಯೇಕ ಧ್ವಜಾರೋಹಣಕ್ಕೆ ಯತ್ನಿಸಿ ಪ್ರತ್ಯೇಕ ದಿನಾಚರಣೆ ಮಾಡಲು ಕೆಲವರು ಮುಂದಾಗಿದ್ದು, ಇದಕ್ಕೆ ಪೊಲೀಸರು ಅಡ್ಡಪಡಿಸಿ ವಶಕ್ಕೆ ಪಡೆದಿದ್ದಾರೆ.

    ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಪ್ರತ್ಯೇಕ ಧ್ವಜಾರೋಹಣಕ್ಕೆ ಯತ್ನ ಮಾಡಿದ ಕೆಲ ಮಠಾಧೀಶರು ಮತ್ತು 50 ಕ್ಕೂ ಅಧಿಕ ಹೋರಾಟಗಾರರ ಬಂಧನವಾಗಿದೆ. ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್ ಪಾಟೀಲ್ ನೇತೃತ್ವದಲ್ಲಿ ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಪ್ರತ್ಯೇಕ ಧ್ವಜಾರೋಹಣಕ್ಕೆ ಮುಂದಾಗಿದ್ದರು. ಆದರೆ ಮಾರ್ಗ ಮಧ್ಯೆ ಹೋರಾಟಗಾರರನ್ನ ತಡೆದ ಸ್ಟೇಷನ್ ಬಜಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಪ್ರತ್ಯೇಕ ಧ್ವಜರೋಹರಣಕ್ಕೆ ಯತ್ನಿಸಿದ ಹಿನ್ನೆಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಮುನ್ನೇಚ್ಚರಿಕೆ ಕೈಗೊಂಡಿರುವ ಪೊಲೀಸರು ಪಟೇಲ್ ವೃತ್ತದಲ್ಲಿ ಬಿಗಿ ಪೊಲೀಸ್ ವ್ಯವಸ್ಥೆ ಮಾಡಿದ್ದಾರೆ. ಹೋರಾಟಗಾರರು ಪ್ರತ್ಯೇಕ ಧ್ವಜರೋಹರಣಕ್ಕೆ ಯತ್ನಿಸಿದ ವೇಳೆ ತಡೆದ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಪರ ಘೋಷಣೆ ಕೂಗಿದ್ದಾರೆ. ಅಲ್ಲದೇ ಹೈದರಾಬಾದ್ ಕರ್ನಾಟಕಕ್ಕೆ ನೀಡಿರುವ ಸಂವಿಧಾನದ 371 ಜೆ ಅಡಿ ಸರಿಯಾದ ಮೀಸಲಾತಿ ಸಿಗುತ್ತಿಲ್ಲ ಎಂದು ಹೋರಾಟಗಾರರು ಆಗ್ರಹಿಸಿದ್ದರು. ಆದರೆ ಈ ಹೋರಾಟಕ್ಕೆ ಸ್ಥಳೀಯ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದು, ವರ್ಷಕ್ಕೆ ಒಂದು ದಿನ ಮಾಧ್ಯಮದಲ್ಲಿ ಪ್ರಚಾರ ಪಡೆಯಲು ಇಂತಹ ಹೋರಾಟ ಮಾಡುತ್ತಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv