Tag: Karnataka Rains

  • ಮೂಡಬಿದಿರೆ | ಎರುಗುಂಡಿ ಫಾಲ್ಸ್ ಬಳಿ ಏಕಾಏಕಿ ನುಗ್ಗಿದ ನೀರು -ಹಗ್ಗ ಕಟ್ಟಿ ಕೊಚ್ಚಿ ಹೋಗಲಿದ್ದ ಐವರ ರಕ್ಷಣೆ

    ಮೂಡಬಿದಿರೆ | ಎರುಗುಂಡಿ ಫಾಲ್ಸ್ ಬಳಿ ಏಕಾಏಕಿ ನುಗ್ಗಿದ ನೀರು -ಹಗ್ಗ ಕಟ್ಟಿ ಕೊಚ್ಚಿ ಹೋಗಲಿದ್ದ ಐವರ ರಕ್ಷಣೆ

    ಮಂಗಳೂರು: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಮೂಡಬಿದಿರೆ (Mudbidri) ಬಳಿಯ ಎರುಗುಂಡಿ ಫಾಲ್ಸ್‌ನಲ್ಲಿ (Erugundi Falls) ಅಪಾಯಕ್ಕೆ ಸಿಲುಕಿದ್ದ ಪ್ರವಾಸಿಗರನ್ನು ಸ್ಥಳೀಯರು ರಕ್ಷಿಸಿದ್ದಾರೆ.

    ಸ್ಥಳೀಯರ ಮಾತು ಕೇಳದೆ ತುಂಬಿ ಹರಿಯುತ್ತಿರುವ ಫಾಲ್ಸ್‌ನ ಮೇಲೆ ಐವರು ಪ್ರವಾಸಿಗರು ತೆರಳಿದ್ದರು. ಈ ವೇಳೆ ಏಕಾಏಕಿ ನೀರು ನುಗ್ಗಿದೆ. ಇದರಿಂದ ಐವರು ಬಂಡೆಗಳ ನಡುವೆ ಸಿಲುಕಿದ್ದಾರೆ. ನೀರಿನಲ್ಲಿ ಕೊಚ್ಚಿಕೊಂಡು ಹೋಗಲಿದ್ದ ಐವರನ್ನು ಸ್ಥಳೀಯರು ರೋಪ್ ಹಾಕಿ ರಕ್ಷಿಸಿದ್ದಾರೆ. ಸ್ಥಳೀಯರ ಸಮಯಪ್ರಜ್ಞೆಯಿಂದ ಐವರ ಜೀವ ಉಳಿದಂತಾಗಿದೆ. ಇದನ್ನೂ ಓದಿ: ರಾಜ್ಯದ 6 ಜಿಲ್ಲೆಗಳಿಗೆ 5 ದಿನ ರೆಡ್‌ ಅಲರ್ಟ್‌, ಎಲ್ಲಿ ಅತಿಹೆಚ್ಚು ಮಳೆ?

    ದಕ್ಷಿಣ ಕನ್ನಡ ಜಿಲ್ಲೆಯ ಪುತ್ತಿಗೆ ಗ್ರಾಮದಲ್ಲಿ ಎರುಗುಂಡಿ ಫಾಲ್ಸ್ ಇದೆ. ಮುಂಗಾರು ಮಳೆಯ ಅಬ್ಬರಕ್ಕೆ ಫಾಲ್ಸ್ ಮೈದುಂಬಿ ಹರಿಯುತ್ತಿದೆ. ಇನ್ನೂ ರಕ್ಷಣೆಗೊಳಗಾದ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.

    ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಮಳೆ ಮುಂದುವರೆಯಲಿದೆ. ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಿಗೆ ಐದು ದಿನ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಭಾಗಗಳಲ್ಲಿ ಜನ ಸುರಕ್ಷತೆಯಿಂದ ಇರುವಂತೆ ಎಚ್ಚರಿಕೆ ನೀಡಲಾಗಿದೆ. ಇದನ್ನೂ ಓದಿ: ಬೆಳಗಾವಿ | ಭಾರೀ ಮಳೆಗೆ ಮನೆ ಗೋಡೆ ಕುಸಿತ – ಮೂರು ವರ್ಷದ ಮಗು ದುರ್ಮರಣ

  • ರಾಜ್ಯದ ಹವಾಮಾನ ವರದಿ 18-05-2025

    ರಾಜ್ಯದ ಹವಾಮಾನ ವರದಿ 18-05-2025

    ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಳೆಯ ಆರ್ಭಟ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಮಂಗಳೂರು, ಬೆಳಗಾವಿ, ಶಿವಮೊಗ್ಗ, ಚಿತ್ರದುರ್ಗ, ಹಾವೇರಿ, ಬಳ್ಳಾರಿ, ಗದಗ, ರಾಯಚೂರು, ಯಾದಗಿರಿ, ವಿಜಯಪುರ, ಬೀದರ್, ಕಲಬುರಗಿ, ಬಾಗಲಕೋಟೆ, ಚಿಕ್ಕಮಗಳೂರು, ಶಿವಮೊಗ್ಗ, ಕೋಲಾರ, ಮೈಸೂರು, ಮಂಡ್ಯ, ತುಮಕೂರು, ಚಾಮರಾಜನಗರ ಸೇರಿ ಹಲವು ಜಿಲ್ಲೆಗಳಲ್ಲಿ ಬಿಸಿಲು ಮಳೆ ಆಟ ಮುಂದುವರಿಯಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಇನ್ನೂ ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 27-21
    ಮಂಗಳೂರು: 29-24
    ಶಿವಮೊಗ್ಗ: 28-22
    ಬೆಳಗಾವಿ: 29-22
    ಮೈಸೂರು: 30-22

    ಮಂಡ್ಯ: 27-22
    ಮಡಿಕೇರಿ: 27-20
    ರಾಮನಗರ: 28-22
    ಹಾಸನ: 26-20
    ಚಾಮರಾಜನಗರ: 29-22
    ಚಿಕ್ಕಬಳ್ಳಾಪುರ: 27-21

    ಕೋಲಾರ: 27-22
    ತುಮಕೂರು: 27-22
    ಉಡುಪಿ: 30-24
    ಕಾರವಾರ: 32-27
    ಚಿಕ್ಕಮಗಳೂರು: 28-19
    ದಾವಣಗೆರೆ: 29-23

    weather

    ಹುಬ್ಬಳ್ಳಿ: 30-23
    ಚಿತ್ರದುರ್ಗ: 28-22
    ಹಾವೇರಿ: 31-23
    ಬಳ್ಳಾರಿ: 33-24
    ಗದಗ: 31-23
    ಕೊಪ್ಪಳ: 32-24

    weather

    ರಾಯಚೂರು: 35-26
    ಯಾದಗಿರಿ: 34-24
    ವಿಜಯಪುರ: 33-24
    ಬೀದರ್: 34-24
    ಕಲಬುರಗಿ: 34-25
    ಬಾಗಲಕೋಟೆ: 32-24

  • ರಾಜ್ಯದ ಹವಾಮಾನ ವರದಿ 14-05-2025

    ರಾಜ್ಯದ ಹವಾಮಾನ ವರದಿ 14-05-2025

    ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ಕಳೆದ ಕೆಲವು ದಿನಗಳಿಂದ ಅಲ್ಲಲ್ಲಿ ಮಳೆಯಾಗುತ್ತಿದೆ. ಮೇ 16ರವರೆಗೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಚಿಕ್ಕಮಗಳೂರು, ಶಿವಮೊಗ್ಗ, ಕೋಲಾರ, ಮೈಸೂರು, ಮಂಡ್ಯ, ತುಮಕೂರು, ಚಾಮರಾಜನಗರ ಹಾಗೂ ಹಾವೇರಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆಲು ಭಾಗಗಳಲ್ಲಿ ಹಗುರ ಮಳೆಯಾಗಲಿದೆ ಎಂದು ಇಲಾಖೆ ವರದಿ ಮಾಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಇನ್ನೂ ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 31-22
    ಮಂಗಳೂರು: 31-24
    ಶಿವಮೊಗ್ಗ: 31-22
    ಬೆಳಗಾವಿ: 32-22
    ಮೈಸೂರು: 34-22

    ಮಂಡ್ಯ: 33-22
    ಮಡಿಕೇರಿ: 29-19
    ರಾಮನಗರ: 32-22
    ಹಾಸನ: 29-19
    ಚಾಮರಾಜನಗರ: 33-22
    ಚಿಕ್ಕಬಳ್ಳಾಪುರ: 31-22

    ಕೋಲಾರ: 31-23
    ತುಮಕೂರು: 31-22
    ಉಡುಪಿ: 31-25
    ಕಾರವಾರ: 33-28
    ಚಿಕ್ಕಮಗಳೂರು: 27-18
    ದಾವಣಗೆರೆ: 32-23

    ಹುಬ್ಬಳ್ಳಿ: 34-23
    ಚಿತ್ರದುರ್ಗ: 31-22
    ಹಾವೇರಿ: 33-23
    ಬಳ್ಳಾರಿ: 36-25
    ಗದಗ: 33-23
    ಕೊಪ್ಪಳ: 34-24

    ರಾಯಚೂರು: 38-28
    ಯಾದಗಿರಿ: 37-28
    ವಿಜಯಪುರ: 37-24
    ಬೀದರ್: 36-27
    ಕಲಬುರಗಿ: 38-28
    ಬಾಗಲಕೋಟೆ: 36-24

  • ರಾಜ್ಯದ ಹವಾಮಾನ ವರದಿ 13-05-2025

    ರಾಜ್ಯದ ಹವಾಮಾನ ವರದಿ 13-05-2025

    ರಾಜ್ಯದ ಹಲವೆಡೆ ಕಳೆದ ಕೆಲವು ದಿನಗಳಿಂದ ಅಲ್ಲಲ್ಲಿ ಮಳೆಯಾಗುತ್ತಿದೆ. ಇಂದಿನಿಂದ ಮೇ 16ರವರೆಗೆ ಮಳೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಚಿಕ್ಕಮಗಳೂರು, ಶಿವಮೊಗ್ಗ, ಕೋಲಾರ, ಮೈಸೂರು, ಮಂಡ್ಯ, ತುಮಕೂರು, ಚಾಮರಾಜನಗರ ಹಾಗೂ ಹಾವೇರಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆಲು ಭಾಗಗಳಲ್ಲಿ ಹಗುರ ಮಳೆಯಾಗಲಿದೆ ಎಂದು ಇಲಾಖೆ ವರದಿ ಮಾಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಇನ್ನೂ ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 31-22
    ಮಂಗಳೂರು: 31-24
    ಶಿವಮೊಗ್ಗ: 31-22
    ಬೆಳಗಾವಿ: 32-22
    ಮೈಸೂರು: 34-22

    ಮಂಡ್ಯ: 33-22
    ಮಡಿಕೇರಿ: 29-19
    ರಾಮನಗರ: 32-22
    ಹಾಸನ: 29-19
    ಚಾಮರಾಜನಗರ: 33-22
    ಚಿಕ್ಕಬಳ್ಳಾಪುರ: 31-22

    ಕೋಲಾರ: 31-23
    ತುಮಕೂರು: 31-22
    ಉಡುಪಿ: 31-25
    ಕಾರವಾರ: 33-28
    ಚಿಕ್ಕಮಗಳೂರು: 27-18
    ದಾವಣಗೆರೆ: 32-23

    ಹುಬ್ಬಳ್ಳಿ: 34-23
    ಚಿತ್ರದುರ್ಗ: 31-22
    ಹಾವೇರಿ: 33-23
    ಬಳ್ಳಾರಿ: 36-25
    ಗದಗ: 33-23
    ಕೊಪ್ಪಳ: 34-24

    ರಾಯಚೂರು: 38-28
    ಯಾದಗಿರಿ: 37-28
    ವಿಜಯಪುರ: 37-24
    ಬೀದರ್: 36-27
    ಕಲಬುರಗಿ: 38-28
    ಬಾಗಲಕೋಟೆ: 36-24

  • ರಾಜ್ಯದ ಹವಾಮಾನ ವರದಿ 12-05-2025

    ರಾಜ್ಯದ ಹವಾಮಾನ ವರದಿ 12-05-2025

    ರಾಜ್ಯದ ಹಲವೆಡೆ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದೆ. ಇಂದಿನಿಂದ ಮಳೆ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ದಕ್ಷಿಣ ಕನ್ನಡ, ಬೆಳಗಾವಿ, ಮಡಿಕೇರಿ, ಚಿತ್ರದುರ್ಗ, ಗದಗ, ಬೆಂಗಳೂರು, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಮಳೆಯಾಗಲಿದ್ದು, ಉಳಿದ ಜಿಲ್ಲೆಗಳಲ್ಲಿ ಬಿಸಿಲು ಮತ್ತು ಒಣಹವೆಯ ವಾತಾವರಣ ಇರಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಇನ್ನೂ ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 31-22
    ಮಂಗಳೂರು: 31-24
    ಶಿವಮೊಗ್ಗ: 31-22
    ಬೆಳಗಾವಿ: 32-22
    ಮೈಸೂರು: 34-22

    ಮಂಡ್ಯ: 33-22
    ಮಡಿಕೇರಿ: 29-19
    ರಾಮನಗರ: 32-22
    ಹಾಸನ: 29-19
    ಚಾಮರಾಜನಗರ: 33-22
    ಚಿಕ್ಕಬಳ್ಳಾಪುರ: 31-22

    ಕೋಲಾರ: 31-23
    ತುಮಕೂರು: 31-22
    ಉಡುಪಿ: 31-25
    ಕಾರವಾರ: 33-28
    ಚಿಕ್ಕಮಗಳೂರು: 27-18
    ದಾವಣಗೆರೆ: 32-23

    ಹುಬ್ಬಳ್ಳಿ: 34-23
    ಚಿತ್ರದುರ್ಗ: 31-22
    ಹಾವೇರಿ: 33-23
    ಬಳ್ಳಾರಿ: 36-25
    ಗದಗ: 33-23
    ಕೊಪ್ಪಳ: 34-24

    ರಾಯಚೂರು: 38-28
    ಯಾದಗಿರಿ: 37-28
    ವಿಜಯಪುರ: 37-24
    ಬೀದರ್: 36-27
    ಕಲಬುರಗಿ: 38-28
    ಬಾಗಲಕೋಟೆ: 36-24

  • ರಾಜ್ಯದ ಹವಾಮಾನ ವರದಿ 11-05-2025

    ರಾಜ್ಯದ ಹವಾಮಾನ ವರದಿ 11-05-2025

    ರಾಜ್ಯದಲ್ಲಿ ಬಿರು ಬಿಸಿಲಿನ ನಡುವೆಯು ಕೆಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಮೇ 12ರ ಬಳಿಕ ರಾಜ್ಯಾದ್ಯಂತ ಮಳೆ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ.

    ಅದರಂತೆ ಇಂದೂ ಸಹ ರಾಜ್ಯದ ವಿವಿಧ ಜಿಲ್ಲೆಗಳಲಿ ಬಿಸಿಲು ಮಳೆಯ ಆಟ ಮುಂದುವರಿಲಿದೆ. ದಕ್ಷಿಣ ಕನ್ನಡ, ಬೆಳಗಾವಿ, ಮಡಿಕೇರಿ, ಚಿತ್ರದುರ್ಗ, ಗದಗ ಜಿಲ್ಲೆಗಳಲ್ಲಿ ಜೋರು ಮಳೆಯಾಗಲಿದ್ದು, ಉಳಿದ ಜಿಲ್ಲೆಗಳಲ್ಲಿ ಬಿಸಿಲು ಮತ್ತು ಒಣಹವೆಯ ವಾತಾವರಣ ಇರಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಇನ್ನೂ ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 31-22
    ಮಂಗಳೂರು: 31-24
    ಶಿವಮೊಗ್ಗ: 31-22
    ಬೆಳಗಾವಿ: 32-22
    ಮೈಸೂರು: 34-22

    ಮಂಡ್ಯ: 33-22
    ಮಡಿಕೇರಿ: 29-19
    ರಾಮನಗರ: 32-22
    ಹಾಸನ: 29-19
    ಚಾಮರಾಜನಗರ: 33-22
    ಚಿಕ್ಕಬಳ್ಳಾಪುರ: 31-22

    ಕೋಲಾರ: 31-23
    ತುಮಕೂರು: 31-22
    ಉಡುಪಿ: 31-25
    ಕಾರವಾರ: 33-28
    ಚಿಕ್ಕಮಗಳೂರು: 27-18
    ದಾವಣಗೆರೆ: 32-23

    ಹುಬ್ಬಳ್ಳಿ: 34-23
    ಚಿತ್ರದುರ್ಗ: 31-22
    ಹಾವೇರಿ: 33-23
    ಬಳ್ಳಾರಿ: 36-25
    ಗದಗ: 33-23
    ಕೊಪ್ಪಳ: 34-24

    ರಾಯಚೂರು: 38-28
    ಯಾದಗಿರಿ: 37-28
    ವಿಜಯಪುರ: 37-24
    ಬೀದರ್: 36-27
    ಕಲಬುರಗಿ: 38-28
    ಬಾಗಲಕೋಟೆ: 36-24

  • ಮುಂಗಾರು ವಿಳಂಬವಾದರೆ 6,319 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಬಹುದು: ಸಿಎಂ

    ಮುಂಗಾರು ವಿಳಂಬವಾದರೆ 6,319 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಬಹುದು: ಸಿಎಂ

    – ಪ್ರಸ್ತುತ 551 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ
    – 123 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ; ಸಿಎಂ ಮಾಹಿತಿ

    ಬೆಂಗಳೂರು: ಈ ವರ್ಷ ವಾಡಿಕೆಗಿಂತ ಹೆಚ್ಚು ಮುಂಗಾರು (Monsoon) ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದ್ರೆ ಮಾನ್ಸೂನ್ ವಿಳಂಬವಾದರೆ 6,319 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಬಹುದು ಎಂದು ಗುರುತಿಸಿರುವುದಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

    ವಿಧಾನಸೌಧದಲ್ಲಿಂದು ನಗರ ಮತ್ತು ಗ್ರಾಮೀಣ ಭಾಗದ ಕುಡಿಯುವ ನೀರಿನ (Drinking Water) ಸಮಸ್ಯೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಬಗ್ಗೆ ಸಭೆ ನಡೆಸಿದರು. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಡಿಸಿ ಹಾಗೂ ಸಿಇಓಗಳು ಪಾಲ್ಗೊಂಡಿದ್ದರು. ಇದನ್ನೂ ಓದಿ: ಅಯ್ಯೋ ನನಗೆ ಹೊಟ್ಟೆ ಬಂದಿದೆ ಎಂದಿದ್ದ ನಟಿ ರಿತಿಕಾ ಸಿಂಗ್ ಸೊಂಟ ಬಳ್ಳಿಯಂತಾಗಿದ್ದು ಹೇಗೆ ಗೊತ್ತಾ?

    ಸಭೆಯಲ್ಲಿ ಮಾತನಾಡಿದ ಸಿಎಂ, ಶುದ್ಧ ಕುಡಿಯುವ ನೀರಿಗೆ ರಾಜ್ಯದ ಒಂದೇ ಒಂದು ಗ್ರಾಮದಲ್ಲೂ ಸಮಸ್ಯೆ ಆಗಬಾರದು ಜಿಲ್ಲಾಧಿಕಾರಿಗಳಿಗೆ-ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಸಿಎಂ ಸ್ಪಷ್ಟ ಸೂಚನೆ ನೀಡಿದರು. ಇದನ್ನೂ ಓದಿ: Sonu Nigam | ಕನ್ನಡಿಗರ ಆಕ್ರೋಶಕ್ಕೆ ಮಣಿದ ಗಾಯಕ – ಕ್ಷಮೆಯಾಚಿಸಿದ ಸೋನು ನಿಗಮ್

    ರಾಜ್ಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದ್ರೆ ವಾಡಿಕೆಗಿಂತ ಶೇ.55ರಷ್ಟು ಮಾನ್ಸೂನ್ ಪೂರ್ವ ಹೆಚ್ಚು ಮಳೆಯಾಗಿದೆ. 27 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ, ಎಲ್ಲಾ ಜಲಾಶಯಗಳಲ್ಲಿ ಶೇ.50ರಿಂದ ಶೇ.60 ರಷ್ಟು ಹೆಚ್ಚಿನ ನೀರಿನ ಸಂಗ್ರಹವಿದೆ. ಈ ವರ್ಷವೂ ವಾಡಿಕೆಗಿಂತ ಹೆಚ್ಚು ಮುಂಗಾರು ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಒಂದು ವೇಳೆ ಮಾನ್ಸೂನ್ ವಿಳಂಬವಾದರೆ 6,319 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಬಹುದು ಎಂದು ಗುರುತಿಸಲಾಗಿದೆ. ಪ್ರಸ್ತುತ 551 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, 123 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಅಗತ್ಯ ಸಂದರ್ಭದಲ್ಲಿ ನೀರು ಪಡೆಯಲು ಈಗಾಗಲೇ 3 ಸಾವಿರ ಖಾಸಗಿ ಬೋರ್‌ವೆಲ್‌ ಗುರುತಿಸಲಾಗಿದ್ದು, 480 ಬೋರ್‌ವೆಲ್‌ಗಳನ್ನ ಖಾಸಗಿಯವರಿಂದ ಬಾಡಿಗೆ ಪಡೆದು ನೀರು ಒದಗಿಸಲಾಗುತ್ತಿದೆ ಎಂದು ವಿವರಿಸಿದರು.

    ಹಣ ಕಾಸಿನ ಕೊರತೆ ಇಲ್ಲ. ಎಷ್ಟು ಬೇಕಾದರೂ ಹಣ ಕೊಡುತ್ತೇವೆ. ರಾಜ್ಯದಲ್ಲಿ ಎಲ್ಲಿಯೂ ಕುಡಿಯುವ ನೀರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಬಾರದು. ಕುಡಿಯುವ ನೀರಿನ ನಿರ್ವಹಣೆಗೆ ಯಾವುದೇ ಹಣಕಾಸಿನ ಕೊರತೆ ಇರುವುದಿಲ್ಲ. ಪಂಚಾಯತ್ ರಾಜ್ ಇಲಾಖೆಗೆ 60 ಕೋಟಿ ರೂ. ಈಗಾಗಲೇ ಬಿಡುಗಡೆ ಮಾಡಲಾಗಿದೆ. ಜಿಲ್ಲೆಗಳಲ್ಲಿ ತುರ್ತು ಕುಡಿಯುವ ನೀರಿನ ಪೂರೈಕೆಗೆ ಜಿಲ್ಲಾಧಿಕಾರಿಗಳು ಕ್ರಿಯಾ ಯೋಜನೆ ರೂಪಿಸಿ, ಟಾಸ್ಕ್ ಫೋರ್ಸ್‌ನಿಂದ ಅನುಮೋದನೆ ಪಡೆದುಕೊಂಡು ಅನುಷ್ಠಾನಗೊಳಿಸಬೇಕು ಎಂದು ತಾಕೀತು ಮಾಡಿದರು.

    ಪ್ರತಿ ವರ್ಷ ಕುಡಿಯುವ ನೀರಿನ ತೊಂದರೆ ಎದುರಿಸುತ್ತಿರುವ ಗ್ರಾಮಗಳಲ್ಲಿ ಸಮಸ್ಯೆಯನ್ನು ಶಾಶ್ವತವಾಗಿ ನೀಗಿಸಲು ಯೋಜನೆ ರೂಪಿಸಬೇಕು. ಅಗತ್ಯಬಿದ್ದರೆ ಮಾತ್ರ ಬೋರ್‌ವೆಲ್‌ಗಳನ್ನ ಕೊರೆಯಬೇಕು. ಯಾವುದೇ ಕಾರಣಕ್ಕೂ ಅನಗತ್ಯವಾಗಿ ಬೋರ್‌ವೆಲ್‌ ಕೊರೆದು ವೆಚ್ಚ ದುರುಪಯೋಗ ಮಾಡಬಾರದು ಅಂತ ಡಿಸಿಗಳಿಗೆ ನಿರ್ದೇಶನ ನೀಡಿದರು. ಇದನ್ನೂ ಓದಿ: ಮಹದೇವಪ್ಪ ರಾಂಪುರೆ ಮೆಡಿಕಲ್ ಕಾಲೇಜ್​ ಸ್ಟೈಫಂಡ್ ಹಗರಣ – 81.21 ಕೋಟಿ ದುರುಪಯೋಗ ಸಾಬೀತು

  • ಬಿರು ಬೇಸಿಗೆಯಲ್ಲೂ ರಾಜ್ಯದಲ್ಲಿ ಮಳೆ ಅಬ್ಬರ – ಬೆಂಗ್ಳೂರು ರಸ್ತೆಗಳು ಜಲಮಯ

    ಬಿರು ಬೇಸಿಗೆಯಲ್ಲೂ ರಾಜ್ಯದಲ್ಲಿ ಮಳೆ ಅಬ್ಬರ – ಬೆಂಗ್ಳೂರು ರಸ್ತೆಗಳು ಜಲಮಯ

    – ಹಾಸನ, ಹಾವೇರಿ ಸೇರಿ ವಿವಿಧೆಡೆ ಅವಾಂತರ

    ಬೆಂಗಳೂರು: ನಗರದ ವಾತಾವರಣ ದಿಢೀರ್ ಬದಲಾಗಿದೆ. ಇದು ಬೇಸಿಗೆಯೋ ಮಳೆಗಾಲವೋ ಎನ್ನುವ ರೀತಿ ಸಿಲಿಕಾನ್ ಸಿಟಿಯಲ್ಲಿ ಮಳೆ ಸುರಿದಿದೆ.

    ಕೆ.ಆರ್ ಪುರಂ, ಮಹದೇವಪುರ, ಸರ್ಜಾಪುರ, ವೈಟ್‌ಫೀಲ್ಡ್, ಹೆಚ್‌ಎಎಲ್ (HAL), ಈಜಿಪುರ ರಸ್ತೆಗಳು ಜಲಾವೃತವಾಗಿ ಸವಾರರು ಪರದಾಡಿದ್ರು. ಬಿಟಿಎಂ ಲೇಔಟ್, ತಾವರೆಕೆರೆ, ಗೊರಗುಂಟೆ ಪಾಳ್ಯದಲ್ಲೂ ಇದೇ ಸ್ಥಿತಿ ಕಂಡುಬಂದಿತು. ಅಂಡರ್‌ಪಾಸ್‌ಗಳು ತುಂಬಿದ್ವು. ಈಜಿಪುರ, ಕಸವನಹಳ್ಳಿಯ ಮನೆಗಳಿಗೆ ನೀರು ನುಗ್ಗಿತ್ತು. ರಾಜಾಜೀನಗರದಲ್ಲಿ ಮರ ಬಿದ್ದು ಎರಡು ಕಾರು ಜಖಂ ಆದ್ವು. ಸಿಕ್ಕ ಸಿಕ್ಕಲ್ಲಿ ರಸ್ತೆ ಅಗೆದಿರೋದು. ಅರೆಬರೆ ಕಾಮಗಾರಿ ನಡೆದಿರೋದು. ಕಾಲುವೆಗಳನ್ನು ಸ್ವಚ್ಛಗೊಳಿಸದೇ ಇರೋದು. ವೈಟ್‌ಟಾಪಿಂಗ್ ಕಾಮಗಾರಿ ಯಡವಟ್ಟುಗಳಿಂದ ಇಷ್ಟೆಲ್ಲಾ ಸಮಸ್ಯೆ ಆಗಿದೆ.

    ಇದೇ ವೇಳೆ, ಚಿಕ್ಕಮಗಳೂರು, ಹಾಸನದಲ್ಲಿ ಭಾರೀ ಮಳೆ (Rain) ಆಗಿದ್ದು, ರಸ್ತೆಗಳ ಮೇಲೆ ನೀರು ಹರಿದಿದೆ. ಅಂಗಡಿಗಳಿಗೆ ನೀರು ನುಗ್ಗಿದೆ. ಬೆಳಗಾವಿಯ ಚಿಕ್ಕೋಡಿ, ಚಿತ್ರದುರ್ಗ, ಕೋಲಾರ, ಹೊಸಪೇಟೆಯಲ್ಲೂ ಮಳೆಯಾಗಿದೆ. ಹಾವೇರಿಯಲ್ಲಿ ಬ್ಯಾಡಗಿ ಮೆಣಸಿನಕಾಯಿ ಮಾರ್ಕೆಟ್‌ನಲ್ಲಿ ತಮ್ಮ ಉತ್ಪನ್ನ ರಕ್ಷಿಸಿಕೊಳ್ಳಲು ರೈತರು ಒದ್ದಾಡಿದ್ರು. ಅಂದ ಹಾಗೇ, ಬಂಗಾಳಕೊಲ್ಲಿಯಲ್ಲಿ ಚಂಡ ಮಾರುತಗಳು ಚುರುಕುಗೊಂಡ ಕಾರಣ ಮುಂದಿನ ಒಂದು ವಾರ ರಾಜ್ಯದಲ್ಲಿ ಗಾಳಿ ಸಹಿತ ಜೋರು ಮಳೆ ಆಗಲಿದೆ. ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಪ್ರಕಟಿಸಲಾಗಿದೆ. ಇದನ್ನೂ ಓದಿ: 25 ಸಾವಿರ ಶಿಕ್ಷಕರ ವಜಾ – ಜಡ್ಜ್‌ಗಳ ಮನೆಯಲ್ಲಿ ಹಣ ಪತ್ತೆಯಾದ್ರೆ ವರ್ಗಾವಣೆ, ಶಿಕ್ಷಕರ ವಜಾ ಯಾಕೆ? – ಮಮತಾ ಬ್ಯಾನರ್ಜಿ ಪ್ರಶ್ನೆ

    ಚಿಕ್ಕಬಳ್ಳಾಪುರದ ಹಲವಡೆ ಮೊದಲ ಮಳೆ
    ಚಿಕ್ಕಬಳ್ಳಾಪುರ ಸೇರಿ ಜಿಲ್ಲೆಯ ಹಲವು ಕಡೆ ಇಂದು ಮೊದಲ ಮಳೆ ಭರ್ಜರಿಯಾಗಿ ಅಬ್ಬರಿಸಿದೆ. ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಕ್ರಾಸ್, ಚದಲಪುರ ಸುತ್ತಮುತ್ತಲೂ ಭರ್ಜರಿ ಮಳೆಯಾಗಿದೆ. ಜಿಲ್ಲೆಯ ಗೌರಿಬಿದನೂರು ಭಾಗದಲ್ಲೂ ಮಳೆಯಾಗಿದೆ. ಧಾರಕಾರ ಮಳೆಗೆ ಬಿಸಿಲಿನಿಂದ ಬಸವಳಿದ್ದ ಜನರಿಗೆ ತಂಪೆರೆದಂತಾಗಿದೆ. ರೈತರಿಗೂ ಸಹ ಮೊದಲ ಮಳೆ ಖುಷಿ ತಂದಿದೆ. ಚದಲಪುರ ವೃತ್ತದ ಬಳಿ ಹೆದ್ದಾರಿ ಮೇಲೆ ಮಳೆ ನೀರು ನಿಂತು ವಾಹನ ಸವಾರರು ಸಹ ಪರದಾಡುವಂತಾಗಿತ್ತು. ಇದನ್ನೂ ಓದಿ: ರಣ ಬಿಸಿಲಿಗೆ ಕಂಗೆಟ್ಟಿದ್ದ ಬೀದರ್‌ಗೆ ತಂಪೆರೆದ ಅಕಾಲಿಕ ಮಳೆ

    ತುಮಕೂರಿನಲ್ಲೂ ಧಾರಾಕಾರ ಮಳೆ:
    ಕಲ್ಪತರು ನಾಡು ತುಮಕೂರು ನಗರ ಸೇರಿದಂತೆ ಹಲವೆಡೆ ಗುರುವಾರ ಮಧ್ಯಾಹ್ನ ಭರ್ಜರಿ ಮಳೆ ಸುರಿಯಿತು. ಗುರುವಾರ ಬೆಳಿಗ್ಗೆಯಿಂದಲೇ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನದ ವೇಳೆಗೆ ಮಳೆಯ ಸಿಂಚನವಾಯಿತು. ಮಧ್ಯಾಹ್ನ 2:30ಕ್ಕೆ ಆರಂಭವಾದ ಮಳೆ 3 ಗಂಟೆಯವರೆಗೂ ಸುರಿಯಿತು. ಬಿಸಿಲಿನ ಬೇಗೆಗೆ ಕಂಗೆಟ್ಟಿದ್ದ ಜನರಿಗೆ ಮಳೆಯ ಸಿಂಚನದಿಂದಾಗಿ ಕೊಂಚ ನಿರಾಳರಾದರು. ಒಂದೇ ಸುರಿದ ಮಳೆಯಿಂದಾಗಿ ಜಿಲ್ಲೆಯ ವಾತಾವರಣ ತಂಪಾಯಿತು. ಇದನ್ನೂ ಓದಿ: ಚಿತ್ರದುರ್ಗದಲ್ಲಿ ಮೊದಲ ವರ್ಷಧಾರೆ – ಜನರಲ್ಲಿ ಮಂದಹಾಸ

    ಬೀದರ್‌ಗೆ ತಂಪೆರೆದ ಅಕಾಲಿಕ ಮಳೆ
    ರಣ ಬಿಸಿಲಿನಿಂದ ಕಂಗೆಟ್ಟಿದ್ದ ಬೀದರ್ (Bidar) ಜನರಿಗೆ ಅಕಾಲಿಕ ಮಳೆ ಇಂದು ತಂಪೆರೆದಿದೆ. ಇಂದು ಜಿಲ್ಲೆಯಲ್ಲಿ ಗುಡುಗು, ಸಿಡಿಲು ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿದಿದೆ. ಬೀದರ್ ನಗರ ಸೇರಿ ಜಿಲ್ಲೆಯಾದ್ಯಂತ ಕೆಲಕಾಲ ವರುಣ ಅಬ್ಬರಿಸಿದ್ದಾನೆ.

  • ಚಿಕ್ಕಬಳ್ಳಾಪುರ | ರಾಜ್ಯಕ್ಕೂ ತಟ್ಟಿದ ಸೈಕ್ಲೋನ್ ಎಫೆಕ್ಟ್ – ಚುಮುಚುಮು ಚಳಿಯೊಂದಿಗೆ ತುಂತುರು ಮಳೆ!

    ಚಿಕ್ಕಬಳ್ಳಾಪುರ | ರಾಜ್ಯಕ್ಕೂ ತಟ್ಟಿದ ಸೈಕ್ಲೋನ್ ಎಫೆಕ್ಟ್ – ಚುಮುಚುಮು ಚಳಿಯೊಂದಿಗೆ ತುಂತುರು ಮಳೆ!

    – ಪ್ರವಾಸಿಗರ ಮನಸೆಳೆದ ನಂದಿಬೆಟ್ಟದ ಮಂಜು

    ಚಿಕ್ಕಬಳ್ಳಾಪುರ: ಬಂಗಾಳಕೊಲ್ಲಿಯಲ್ಲಿ (Bay of Bengal) ವಾಯುಭಾರ ಕುಸಿತ ಉಂಟಾದ ಪರಿಣಾಮ ರಾಜ್ಯದಲ್ಲಿ ನಿನ್ನೆ ಹಲವೆಡೆ ಭಾರೀ ಮಳೆಯಾಗಿದ್ರೆ.. ಮತ್ತೆ ಕೆಲವೆಡೆ ತುಂತುರು ಮಳೆಯಾಗಿದೆ. ಇನ್ನು ನಿನ್ನೆ ಮುಂಜಾನೆಯಿಂದ ಮೋಡ ಕವಿದ ವಾತಾವರಣ ಉಂಟಾಗಿ, ಚಳಿಯ ಜೊತೆ ತುಂತುರ ಹನಿಯಲ್ಲಿ ಜನರು ಗಡಗಡ ನಡುಗಿದ್ದಾರೆ.

    ಅತ್ತ ನಂದಿ ಬೆಟ್ಟದಲ್ಲಿ ಮಂಜುಮುಸುಕಿದ ವಾತಾವರಣ ಪ್ರವಾಸಿಗರ ಚಿತ್ತಾಕರ್ಷಿಸಿದೆ. ಇತ್ತ ಕಾಫಿನಾಡು ಚಿಕ್ಕಮಗಳೂರಲ್ಲಿ ಚುಮುಚುಮು ಚಳಿಯ ನಡುವೆ ದತ್ತಪೀಠದಲ್ಲಿ ನಡೆಯುತ್ತಿರುವ ಉತ್ಸವದಲ್ಲಿ ಭಕ್ತರು ಪಾಲ್ಗೊಂಡು ಪೂಜೆ ಪುನಸ್ಕಾರ ನೆರವೇರಿಸಿದ್ರು. ಇದನ್ನೂ ಓದಿ: ರಾಜ್ಯದಲ್ಲಿ ಅಪರಾಧಿಗಳಿಗೆ ಜಾಗವಿಲ್ಲ – ಹರಿಯಾಣ ಸಿಎಂ ಖಡಕ್ ವಾರ್ನಿಂಗ್

    ಮಂಜಿನಿಂದ ಆವೃತವಾಗಿರುವ ವಿಶ್ವವಿಖ್ಯಾತ ನಂದಿಗಿರಿಧಾಮ, ಎದುರಗಡೆ ಇರೋ ವ್ಯಕ್ತಿಯೂ ಕಣ್ಣಿಗೆ ಕಾಣದಷ್ಟು ಮೈಗೆ ಹೊದ್ದುಕೊಂಡಿರೋ ಮಂಜು, ಮಂಜಿನ ನಡುವೆಯೇ ಪ್ರೇಮಿಗಳ ಕಲರವ, ಅರಳಿ ನಿಂತ ಹೂಗಳು, ಹಚ್ಚು ಹಸುರಾಗಿ ಸಂಭ್ರಮಿಸುತ್ತಿರೋ ಗಿಡ ಮರಗಳು, ತೊಟಕ್ ತೊಟಕ್ ಅಂತ ಮರ ಗಿಡಗಳಿಂದ ಜಾರಿ ಬೀಳುವ ಇಬ್ಬನಿಯ ಹನಿಗಳ ಸದ್ದು, ಇದರ ನಡುವೆಯೇ ಪ್ರೇಮಿಗಳ ಪಿಸುಮಾತು ಅಬ್ಬಬ್ಬಾ ನಂದಿಬೆಟ್ಟ ಕೇವಲ ಬೆಟ್ಟವಲ್ಲ ಅದೊಂದು ನಿಸರ್ಗದ ಗಣಿ, ಪ್ರಕೃತಿಯ ಸೌಂದರ್ಯಕ್ಕೆ ಸಾಟಿಯೇ ಇಲ್ಲ ಎನ್ನುವಂತ ಸ್ವರ್ಗಧಾಮ..

    ಹೌದು. ಚಳಿಗಾಲ ಆರಂಭವಾಗುತ್ತಿದ್ದಂತೆ ನಂದಿಬೆಟ್ಟಕ್ಕೆ ಮಂಜು ಆವೃತವಾಗಲು ಆರಂಭವಾಗುತ್ತದೆ, ಅದ್ರಲ್ಲೂ ಚಳಿಗಾಲದಲ್ಲಿ ಹೆಚ್ಚಾಗಿ ಪ್ರವಾಸಿಗರು, ಚಾರಣಿಗರು, ಪ್ರಕೃತಿ ಪ್ರಿಯರು ನಂದಿಬೆಟ್ಟಕ್ಕೆ ಆಗಮಿಸ್ತಾರೆ. ಅದ್ರಲ್ಲೂ ಈಗ ಸೈಕ್ಲೋನ್ ಬೇರೆ ಇದ್ರಿಂದ ವಿಶ್ವವಿವಿಖ್ಯಾತ ನಂದಿಗಿರಿಧಾಮ ಮಂಜನ್ನೇ ಹೊದ್ದುಕೊಂಡು ಮಲಗಿದಂತೆ ಭಾಸವಾಗುತ್ತಿದ್ದು, ಮಂಜಿನ ನಡುವೆಯೇ ಪ್ರವಾಸಿಗರು ಕುಣಿದು ಕುಪ್ಪಳಿಸುತ್ತಿದ್ದಾರೆ. ಪೋಟೋ, ಸೆಲ್ಫಿ ತಗೊಂಡು ಸಖತ್ ಎಂಜಾಯ್ ಮಾಡ್ತಿದ್ದು, ನಂದಿಬೆಟ್ಟದ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ. ಇದನ್ನೂ ಓದಿ: ಚಾಮುಂಡಿ ದೇವಿಗೆ ಕೊಟ್ಟ ಹರಕೆ ಸೀರೆ ಕಾಳಸಂತೆಯಲ್ಲಿ ಮಾರಾಟ ಆರೋಪ – ಸ್ನೇಹಮಯಿ ಕಷ್ಣ ದೂರು

    ದತ್ತಪೀಠದಲ್ಲಿ ಮಂಜು.. ತುಂತುರು ಮಳೆ:
    ಅತ್ತ, ಕಾಫಿನಾಡು ಚಿಕ್ಕಮಗಳೂರಿಗೂ ಚಂಡಮಾರುತದ ಎಫೆಕ್ಟ್ ತಟ್ಟಿದೆ. ದಟ್ಟ ಮಂಜಿನ ನಡುವೆ ತುಂತುರು ಮಳೆ ದತ್ತಭಕ್ತರನ್ನು ಗಢಗಢ ನಡುಗುವಂತೆ ಮಾಡಿದೆ. ದತ್ತಜಯಂತಿ ಅಂಗವಾಗಿ ಅನುಸೂಯ ದೇವಿ ದರ್ಶನ ಪಡೆಯಲು ಆಗಮಿಸಿದ ಸಾವಿರಾರು ಮಹಿಳೆಯರು.. ಚಳಿ ಮಳೆಯಲ್ಲಿ ನಡುಗುತ್ತಲೇ ದೇವಿ ದರ್ಶನ ಪಡೆದಿದ್ದಾರೆ. ಇದನ್ನೂ ಓದಿ: ಇಂದಿನಿಂದ ಮಹಾಕುಂಭ ಮೇಳ – 5,500 ಕೋಟಿ ಮೊತ್ತದ ಯೋಜನೆಗಳಿಗೆ ಪ್ರಧಾನಿ ಮೋದಿಯಿಂದ ಚಾಲನೆ

  • Rain Alert | ಆಲಮಟ್ಟಿ ಡ್ಯಾಂನಿಂದ 1.76 ಲಕ್ಷ, ನಾರಾಯಣಪುರ ಜಲಾಶಯದಿಂದ 1.90 ಲಕ್ಷ ಕ್ಯುಸೆಕ್‌ ನೀರು ನದಿಗೆ

    Rain Alert | ಆಲಮಟ್ಟಿ ಡ್ಯಾಂನಿಂದ 1.76 ಲಕ್ಷ, ನಾರಾಯಣಪುರ ಜಲಾಶಯದಿಂದ 1.90 ಲಕ್ಷ ಕ್ಯುಸೆಕ್‌ ನೀರು ನದಿಗೆ

    – ಗುಜರಾತ್‌ಗೆ ಈಗ ಚಂಡಮಾರುತ ಭೀತಿ
    – ಬಾಗಲಕೋಟೆ, ರಾಯಚೂರಿಗೆ ಪ್ರವಾಹ ಭೀತಿ

    ಬೆಂಗಳೂರು: ಮಹಾರಾಷ್ಟ್ರದಲ್ಲಿ ಭಾರೀ ಮಳೆ (Heavy Rain In Maharashtra) ಕಾರಣ ಬೆಳಗಾವಿ ಭಾಗದ ನದಿಗಳೆಲ್ಲಾ ಉಕ್ಕಿಹರಿಯುತ್ತಿವೆ. ಈ ಬೆನ್ನಲ್ಲೇ ಆಲಮಟ್ಟಿ ಜಲಾಶಯದಿಂದ ಇನ್ನೂ ಹೆಚ್ಚಿನ ನೀರನ್ನು ಬಿಡುವಂತೆ ಮಹಾರಾಷ್ಟ್ರ ನೀರಾವರಿ ಇಲಾಖೆ ಮನವಿ ಮಾಡಿದೆ.

    ಮಹಾರಾಷ್ಟ್ರ ಮನವಿ ಮಾಡಿರುವ ಕಾರಣ, ಕೃಷ್ಣಾ ನದಿ (Krishna River) ಪಾತ್ರದಲ್ಲಿ 5 ದಿನ ಆರೆಂಜ್‌ ಅಲರ್ಟ್ ಘೋಷಣೆ ಮಾಡಲಾಗಿದೆ. ಸದ್ಯ ಆಲಮಟ್ಟಿ ಜಲಾಶಯದಿಂದ (Almatti Dam) 1.76 ಲಕ್ಷ ಕ್ಯುಸೆಕ್‌ ನೀರು, ನಾರಾಯಣಪುರ ಡ್ಯಾಂನಿಂದ (Narayanapura Dam) 1.90 ಲಕ್ಷ ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇದನ್ನೂ ಓದಿ: ಯುಜಿ ನೀಟ್ & ಯುಜಿ ಸಿಇಟಿ-24 | ಮೊದಲ ಸುತ್ತಿನ ಅಂತಿಮ ಸೀಟು ಹಂಚಿಕೆ ಫಲಿತಾಂಶ ಪ್ರಕಟ – ಆ.31 ರಿಂದ ʻಚಾಯ್ಸ್ʼ ಆಯ್ಕೆ!

    ನಿರಂತರ ಮಳೆ ಹಿನ್ನೆಲೆ ಬಾಗಲಕೋಟೆ, ರಾಯಚೂರು ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಾಗಿದೆ. ಯಾದಗಿರಿಯ ಗುರುಸಣಗಿ ಬ್ಯಾರೇಜ್‌ನಿಂದ ಭೀಮಾನದಿಗೆ 1 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿದೆ. ಇದರಿಂದ ಭೀಮಾತೀರದ ವೀರಾಂಜನೇಯ, ಕಂಗಳೇಶ್ವರ ದೇವಾಲಯಗಳು ಮುಳುಗಡೆ ಆಗಿವೆ.

    ಅಲ್ಲದೇ ಅಫಜಲಪುರದ ಘತ್ತರಗಾ ಸೇತುವೆ ಜಲಾವೃತವಾಗಿವೆ. ಹಾಸನದ ಸಕಲೇಶಪುರ ಭಾಗದಲ್ಲಿ ಮತ್ತೆ ಗುಡ್ಡಕುಸಿತದ ಭೀತಿ ಆವರಿಸಿದೆ. ಇನ್ನೂ ಶುಕ್ರವಾರ ಸಂಜೆ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲೂ ಮಳೆಯಾಗಿದ್ದು, ವಾಹನ ಸವಾರರು ಪರದಾಡಿದ್ದಾರೆ. ಇದನ್ನೂ ಓದಿ: `ಕರಿಯಾ’ ಸಿನಿಮಾ ರೀ ರಿಲೀಸ್ ವೇಳೆ ಪುಂಡಾಟಿಕೆ – ಬೆಂಗಳೂರಲ್ಲಿ ಕೆಲ ಅಭಿಮಾನಿಗಳಿಗೆ ಲಾಠಿ ರುಚಿ ತೋರಿಸಿದ ಪೊಲೀಸ್!

    ಅತ್ತ, ಪ್ರವಾಹದಿಂದ (Gujarat floods) ತತ್ತರಿಸಿರುವ ಗುಜರಾತ್‌ಗೆ ಈಗ ಚಂಡಮಾರುತ ಭೀತಿ ಎದುರಾಗಿದೆ. ಅರಬ್ಬಿ ಸಮುದ್ರದಲ್ಲಿ ರೂಪುಗೊಳ್ತಿರುವ ಚಂಡಮಾರುತ ಮುಂದಿನ 12 ಗಂಟೆಯಲ್ಲಿ ಕಛ್ ತೀರಕ್ಕೆ ಅಪ್ಪಳಿಸುವ ಸಂಭವ ಇದೆ. ಹೀಗಾಗಿ ತೀರ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗ್ತಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಉತ್ಸವವನ್ನು ಜನೋತ್ಸವವನ್ನಾಗಿ ಆಚರಿಸಿ: ಪ್ರಿಯಾಂಕ್‌ ಖರ್ಗೆ