Tag: Karnataka Public TV

  • ಕೇಸ್ ಇಳಿಕೆ – ಇಂದು 1,189 ಪಾಸಿಟಿವ್, 22 ಸಾವು

    ಕೇಸ್ ಇಳಿಕೆ – ಇಂದು 1,189 ಪಾಸಿಟಿವ್, 22 ಸಾವು

    ಬೆಂಗಳೂರು: ರಾಜ್ಯದಲ್ಲಿ ನಿನ್ನೆಗಿಂತ ಇಂದು ಕೊರೊನಾ ಪಾಸಿಟಿವ್ ಪ್ರಕರಣ ಇಳಿಕೆ ಕಂಡಿದೆ. ಇಂದು 1,189 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ. 22 ಮಂದಿ ಸಾವನ್ನಪ್ಪಿದ್ದು, 1,456 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲಾವಾರು ವರದಿಯಲ್ಲಿ ದಕ್ಷಿಣ ಕನ್ನಡ 286 ಕೇಸ್‍ಗಳೊಂದಿಗೆ ಮೊದಲ ಸ್ಥಾನದಲ್ಲಿ ಮುಂದುವರೆದಿದೆ. ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಶೇ.0.94ರಷ್ಟಿದೆ.

    ರಾಜ್ಯದಲ್ಲಿ ಒಟ್ಟು 20,556 ಸಕ್ರಿಯ ಪ್ರಕರಣಗಳು ಇದ್ದು, ಈವರೆಗೆ ರಾಜ್ಯದಲ್ಲಿ ಒಟ್ಟು 29,38,616 ಮಂದಿಗೆ ಕೊರೊನಾ ಬಂದಿದೆ. 28,80,889 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕೋವಿಡ್-19 ಮರಣ ಪ್ರಮಾಣ ಶೇ.1.85ರಷ್ಟಿದೆ. ಇದನ್ನೂ ಓದಿ: ಅವನ್ಯಾರೋ ಎಂಪಿ ಬಹಳ ಬುದ್ದಿವಂತ, ಅವನಷ್ಟು ನಾವು ಓದಿಲ್ಲ – ತೇಜಸ್ವಿ ಸೂರ್ಯಗೆ ಡಿಕೆಶಿ ಟಾಂಗ್

    ಇಂದು ರಾಜ್ಯದಲ್ಲಿ ಒಟ್ಟು 1,25,158 ಸ್ಯಾಂಪಲ್ (ಆರ್‍ಟಿ ಪಿಸಿಆರ್ 92,842 + 32,316 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಬೆಂಗಳೂರಿನಲ್ಲಿ ಇಂದು 267 ಮಂದಿಗೆ ಕೊರೊನಾ ಸೋಂಕು ತಗುಲಿದೆ. 300 ಜನ ಇಂದು ಡಿಸ್ಚಾರ್ಜ್ ಆಗಿದ್ದಾರೆ. 2 ಮಂದಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿಗಳು ಒತ್ತಾಯಪೂರ್ವಕವಾಗಿ ಶಾಲೆಗೆ ಬರಬೇಕೆಂದಿಲ್ಲ: ಬಿ.ಸಿ.ನಾಗೇಶ್

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಕಲಬುರಗಿಯಲ್ಲಿ ಶೂನ್ಯ ಪ್ರಕರಣ, ಬಾಗಲಕೋಟೆ 4, ಬಳ್ಳಾರಿ 5, ಬೆಳಗಾವಿ 34, ಬೆಂಗಳೂರು ಗ್ರಾಮಾಂತರ 12, ಬೆಂಗಳೂರು ನಗರ 267, ಬೀದರ್ 3, ಚಾಮರಾಜನಗರ 8, ಚಿಕ್ಕಬಳ್ಳಾಪುರ 1, ಚಿಕ್ಕಮಗಳೂರು 50, ಚಿತ್ರದುರ್ಗ 10, ದಕ್ಷಿಣ ಕನ್ನಡ 286, ದಾವಣಗೆರೆ 19, ಧಾರವಾಡ 4, ಗದಗ 2, ಹಾಸನ 75, ಹಾವೇರಿ 1, ಕೊಡಗು 55, ಕೋಲಾರ 8, ಕೊಪ್ಪಳ 1, ಮಂಡ್ಯ 19, ಮೈಸೂರು 79, ರಾಯಚೂರು 1, ರಾಮನಗರ 5, ಶಿವಮೊಗ್ಗ 24, ತುಮಕೂರು 39, ಉಡುಪಿ 132, ಉತ್ತರ ಕನ್ನಡ 40, ವಿಜಯಪುರ 2, ಮತ್ತು ಯಾದಗಿರಿಯಲ್ಲಿ 3 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

  • ಮೋದಿ ರಾಜ್ಯಕ್ಕೆ ಸ್ಪಂದಿಸಿಲ್ಲ, ಇಲ್ಲಿಯ ಸಂಸದರು ಅನ್ಯಾಯವಾದಾಗ ತುಟಿ ಪಿಟಿಕ್ ಎನ್ನಲಿಲ್ಲ: ಎಸ್.ಆರ್ ಪಾಟೀಲ್

    ಮೋದಿ ರಾಜ್ಯಕ್ಕೆ ಸ್ಪಂದಿಸಿಲ್ಲ, ಇಲ್ಲಿಯ ಸಂಸದರು ಅನ್ಯಾಯವಾದಾಗ ತುಟಿ ಪಿಟಿಕ್ ಎನ್ನಲಿಲ್ಲ: ಎಸ್.ಆರ್ ಪಾಟೀಲ್

    ಧಾರವಾಡ: ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ ಇದೆ ಅನ್ನೋ ಕಲ್ಪನೆ ಪ್ರಧಾನಿ ನರೇಂದ್ರ ಮೋದಿಗಿಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್ ಪಾಟೀಲ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

    ಧಾರವಾಡದಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯಕ್ಕೆ ಪ್ರವಾಹದ ನಂತರ ಮೋದಿ ಎರಡನೇ ಸಲ ಬಂದಿದ್ದರು. ಈ ಸಲ ಬಂದಿದ್ರು ರಾಜ್ಯದ ಬಗ್ಗೆ ಏನು ಕೇಳಲಿಲ್ಲ. ರಾಜ್ಯದ ಸಿಎಂ ಅವರೇ ನಮ್ಮ ಮನವಿಗೆ ಸ್ಪಂದಿಸಿಲ್ಲ ಎಂದು ಹೇಳಿದ್ದಾರೆ. ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ ಇದೆಯಾ ಅನ್ನೋ ಕಲ್ಪನೆ ಪ್ರಧಾನಿಗಿಲ್ಲ ಎಂದರು. ಸಿದ್ಧಗಂಗಾ ಮಠದಲ್ಲಿ ಮೋದಿ ಭಾಷಣ ವಿಚಾರವಾಗಿ ಮಾತನಾಡಿದ ಎಸ್.ಆರ್ ಪಾಟೀಲ್ ಮಕ್ಕಳು ದೇವರು ಸಮಾನ ಅವರಲ್ಲಿ ಕಲ್ಮಶ ಇರುವುದಿಲ್ಲ. ಅಂತಹ ಮಕ್ಕಳ ಮುಂದೆ ಭಾವೈಕ್ಯತೆ ವಿಷಯ ಹೇಳಬೇಕು. ಅದರಲ್ಲಿಯೂ ಸಿದ್ದಗಂಗಾ ಮಠ ತ್ರಿವಿಧ ದಾಸೋಹದ ಮಠ, ಅಲ್ಲಿ ಯಾವ ಜಾತಿ ಧರ್ಮ ಕೇಳುವುದಿಲ್ಲ ಎಂದು ತಿಳಿಸಿದರು.

    ಮಠಕ್ಕೆ ಬಂದು ಮಕ್ಕಳ ಮುಂದೆ ರಾಜಕೀಯ ಮಾತನಾಡಬಾರದಿತ್ತು ಎಂದ ಅವರು, ಸಿದ್ದಗಂಗಾ ಶ್ರೀಗಳಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಘೋಷಿಸಬಹುದು ಎಂದು ಜನ ಭಾವಿಸಿದ್ದರು. ಆದರೆ ಅವರು ದ್ವೇಷ, ಅಸೂಯೆ ಮಾತು ಆಡಿದ್ದಾರೆ ಎಂದರು. ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿ, ಎಲ್ಲ ಖಾತೆ ಸಿಎಂ ಒಬ್ಬರೇ ನಿಭಾಯಿಸಲು ಸಾಧ್ಯವಿಲ್ಲ. ಆದಷ್ಟು ಬೇಗ ಸಚಿವ ಸಂಪುಟ ವಿಸ್ತರಣೆಯಾಗಬೇಕು. ಸಂಪುಟ ವಿಸ್ತರಣೆ ಮಾಡಿದ ಬಳಿಕ ಈ ಸರ್ಕಾರದ ನಿಜ ಬಣ್ಣ ಬಯಲಾಗಲಿದೆ ಎಂದು ಹೇಳಿದರು.

    ಮಹದಾಯಿ ಇತ್ಯರ್ಥ ವಿಳಂಬ ವಿಚಾರವಾಗಿ ಮಾತನಾಡಿದ ಪಾಟೀಲ್, ಗೋವಾ ಮಹದಾಯಿ ನೀರನ್ನು ಕಳುವು ಮಾಡಿಕೊಂಡು ಹೋಗಿದೆ. ಕಳವು ಮಾಡಿದ್ದನ್ನು ಗೋವಾ ಸಿಎಂ ಒಪ್ಪಿಕೊಂಡಿದ್ದಾರೆ. ಈ ಭಾಗದಲ್ಲಿ ಇಬ್ಬರು ಕೇಂದ್ರ ಮಂತ್ರಿಗಳಿದ್ದಾರೆ. ಸುಮಲತಾ ಸೇರಿ 26 ಜನ ಸಂಸದರು ಬಿಜೆಪಿಯಿಂದ ಇದ್ದಾರೆ. 117 ಜನ ಬಿಜೆಪಿ ಶಾಸಕರು ಇದಾರೆ. ರಾಜ್ಯಕ್ಕೆ ಅನ್ಯಾಯವಾದಾಗ ಇವರು ತುಟಿ ಪಿಟಕ್ ಎನ್ನುವುದಿಲ್ಲ ಎಂದು ಕಿಡಿಕಾರಿದರು. ಮಹದಾಯಿ ವಿಷಯದಲ್ಲಿ ಗೋವಾ ರಾಜ್ಯದ ವಿರೋಧ ಪಕ್ಷದ ಒಪ್ಪಿಗೆ ತೆಗೆದುಕೊಂಡು ಬನ್ನಿ ಎಂದು ಪ್ರಧಾನಿ ಹೇಳಿದ್ದಾರೆ. ದೇಶದ ಇತಿಹಾಸದಲ್ಲೇ ಓರ್ವ ಪ್ರಧಾನಿ ಈ ರೀತಿ ಹೇಳಿದ್ದು ಶೇಮ್ ಶೇಮ್ ಎಂದು ಪಾಟೀಲ್ ವ್ಯಂಗ್ಯವಾಡಿದರು.