Tag: Karnataka Pollution Control Board

  • ಕರ್ನಾಟಕದ 12 ನದಿಗಳ ನೀರು ಕುಡಿಯಲು ಅನ್‌ಸೇಫ್

    ಕರ್ನಾಟಕದ 12 ನದಿಗಳ ನೀರು ಕುಡಿಯಲು ಅನ್‌ಸೇಫ್

    ಬೆಂಗಳೂರು: ರಾಜ್ಯದಲ್ಲಿರುವ ನದಿಗಳ ನೀರಿನ ಕಲುಷಿತ ವಾತಾವರಣ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ (Pollution Control Board) ವರದಿಯೊಂದನ್ನು ಸಿದ್ಧಪಡಿಸಿದೆ. ಈ ವರದಿಯಲ್ಲಿ ರಾಜ್ಯದ 12 ನದಿಗಳ ನೀರು ಕುಡಿಯಲು ಸುರಕ್ಷಿತವಲ್ಲ ಎಂಬ ಮಾಹಿತಿ ನೀಡಿದೆ.

    ಸೆಪ್ಟೆಂಬರ್‌ನಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ರಾಜ್ಯದ 12 ಪ್ರಮುಖ ನದಿಗಳ ನೀರಿನ್ನು 32 ಕಡೆಗಳಲ್ಲಿ ಪರಿಶೀಲನೆ ನಡೆಸಿದ್ದು, 12 ನದಿಗಳ ನೀರು ಕುಡಿಯಲು ಯೋಗ್ಯವಲ್ಲ ಎಂದು ವರದಿ ನೀಡಿದೆ. 12 ನದಿಗಳ ನೀರಲ್ಲಿ ಆಮ್ಲಜನಕದ ಕೊರತೆ ಇರೋದು ಪತ್ತೆಯಾಗಿದ್ದು, ಪರೀಕ್ಷೆಗೆ ಒಳಪಟ್ಟ ನದಿಗಳ ಪೈಕಿ ಒಂದೂ ನದಿಗೂ `ಎ’ ದರ್ಜೆ ಸಿಕಿಲ್ಲ. ಹೀಗಾಗಿ ಯಾವುದೇ ನದಿ ನೀರನ್ನು ನೇರವಾಗಿ ಕುಡಿಯಲು ಬಳಕೆ ಮಾಡಬಾರದು. ನದಿಗಳ ನೀರಿನಲ್ಲಿ ಆಮ್ಲಜನಕದ ಕೊರತೆ, ಬಯೋಕೆಮಿಕಲ್ ಆಕ್ಸಿಜನ್, ಕೋಲಿಫಾರ್ಮ್ ಬ್ಯಾಕ್ಟೀರಿಯಾ, ಫೆಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.ಇದನ್ನೂ ಓದಿ: ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆ – ಮಂಡ್ಯದ ಅರ್ಪಿತ ಸಾಧನೆ

    ಜೀವನದಿ ಕಾವೇರಿಯೂ ಸೇರಿ 12 ನದಿ ನೀರು ಕಲುಷಿತವಾಗಿದೆ. ನೇತ್ರಾವತಿ ನದಿಗೆ ಮಾತ್ರ ಬಿ ದರ್ಜೆ ಸಿಕ್ಕಿದ್ದು, ಸ್ನಾನ ಹಾಗೂ ಗೃಹಬಳಕೆಗೆ ನೇತ್ರಾವತಿ ನದಿ ಯೋಗ್ಯ ಎನ್ನಲಾಗಿದೆ. ಇನ್ನುಳಿದಂತೆ 8 ನದಿಗಳಿಗೆ ಸಿ ಹಾಗೂ 3 ನದಿಗಳಿಗೆ ಡಿ ದರ್ಜೆ ಸಿಕ್ಕಿದೆ. ‘ಸಿ’ ದರ್ಜೆ ಹೊಂದಿರುವ ನದಿ ನೀರನ್ನು ಸಂಸ್ಕರಿಸಿ ಬಳಸಬಹುದಾಗಿದ್ದು, ಆ ದರ್ಜೆಯ ನೀರನ್ನು ಮೀನುಗಾರಿಕೆ ಸೇರಿ ಇನ್ನಿತರ ಚಟುವಟಿಕೆಗೆ ಬಳಸಬಹುದಾಗಿದೆ ಎಂದು ಪರೀಕ್ಷೆಯಲ್ಲಿ ತಿಳಿದುಬಂದಿದೆ.

    ಯಾವ್ಯಾವ ನದಿಗಳ ಯಾವ ದರ್ಜೆ?
    ಬಿ ದರ್ಜೆ: ನೇತ್ರಾವತಿ
    ಸಿ ದರ್ಜೆ: ಲಕ್ಷ್ಮಣತೀರ್ಥ, ತುಂಗಾಭದ್ರ, ಕಾವೇರಿ, ಕಬಿನಿ, ಕೃಷ್ಣಾ, ಶಿಂಷಾ
    ಡಿ ದರ್ಜೆ: ಭೀಮಾನದಿ, ಕಾಗಿಣಾ, ಅರ್ಕಾವತಿ

    ರಾಜ್ಯದಲ್ಲಿ ಕಾವೇರಿ, ಕೃಷ್ಣ ಸೇರಿ 7 ಪ್ರಮುಖ ನದಿಗಳು, ಅವುಗಳನ್ನು ಸಂಧಿಸುವ 20ಕ್ಕೂ ಹೆಚ್ಚಿನ ಉಪನದಿಗಳಿವೆ. ಆ ಪೈಕಿ ಶೇ.80ಕ್ಕೂ ಹೆಚ್ಚಿನನದಿಗಳು ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಹುಟ್ಟುತ್ತವೆ. ಈ ನದಿಗಳಲ್ಲಿ ಸುಮಾರು 3,700 ಟಿಎಂಸಿಗೂ ಹೆಚ್ಚಿನ ನೀರು ಹರಿಯುತ್ತವೆ. ಆದರೆ, ಕೈಗಾರಿಕೆ, ಗೃಹಬಳಕೆ ತ್ಯಾಜ್ಯ ನೀರು ನದಿಗಳಿಗೆ ಸೇರಿ ನೀರು ಕಲುಷಿತವಾಗಿ ಬಳಕೆಗೆ ಯೋಗ್ಯವಲ್ಲದಂತಾಗಿದೆ.ಇದನ್ನೂ ಓದಿ: `ದೀಪದ ಬೆಳಕಲ್ಲಿ ಬದುಕಿನ ಪ್ರತಿರೂಪ’ – ಪ್ರತಿದಿನವೂ ಹಬ್ಬವೇ

  • ನಿತ್ಯ 2 ಗಂಟೆ ಮಾತ್ರ ಪಟಾಕಿ ಸಿಡಿಸಲು ಅವಕಾಶ; ದೀಪಾವಳಿಗೆ ಟಫ್‌ ರೂಲ್ಸ್‌

    ನಿತ್ಯ 2 ಗಂಟೆ ಮಾತ್ರ ಪಟಾಕಿ ಸಿಡಿಸಲು ಅವಕಾಶ; ದೀಪಾವಳಿಗೆ ಟಫ್‌ ರೂಲ್ಸ್‌

    – ಹಸಿರು ಪಟಾಕಿ ಮಾತ್ರ ಬಳಸಲು ಸೂಚನೆ

    ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ (Deepavali) ಸಮೀಪಿಸುತ್ತಿದೆ. ಪರಿಸರ ಮತ್ತು ಶಬ್ದಮಾಲಿನ್ಯ ತಡೆಗಟ್ಟುವ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ (Karnataka State Pollution Control Board) ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ.

    ರಾಜ್ಯದಲ್ಲಿ ದೀಪಾವಳಿ ಹಬ್ಬವನ್ನು ನ.11 ರಿಂದ 15 ರ ವರೆಗೆ ಆಚರಿಸಲಿದ್ದು, ಸುಪ್ರೀಂ ಕೋರ್ಟ್‌ (Supreme Court) ಆದೇಶವನ್ನು ಯಥಾಸ್ಥಿತಿ ಪಾಲನೆ ಮಾಡಲು ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ನೀಡಿದೆ. ಇದನ್ನೂ ಓದಿ: 5 ವರ್ಷ ಸಿಎಂ ಆಗಿ ಮುಂದುವರಿಯೋ ವಿಚಾರ ಗೊತ್ತಿರೋದು ಸಿದ್ದರಾಮಯ್ಯ, ಡಿಸಿಎಂಗೆ ಮಾತ್ರ: ಪರಂ

    ನಿಯಮಗಳೇನು?
    ಪಟಾಕಿಯನ್ನು ರಾತ್ರಿ 8 ರಿಂದ 10 ಗಂಟೆ ವರೆಗೆ ಮಾತ್ರ ಹೊಡೆಯಲು ಅವಕಾಶ ಇರಲಿದೆ. ಅಧಿಕಾರಿಗಳು ಪರಿಶೀಲನೆ ವೇಳೆ ಹಸಿರು ಪಟಾಕಿ ಹೊರತುಪಡಿಸಿ ಬೇರೆ ಪಟಾಕಿ ಮಾರುತ್ತಿದ್ದರೆ ಇಡೀ ಗೋದಾಮು ವಶಕ್ಕೆ ಪಡೆಯಬೇಕು. ಸಂಬಂಧಿತ ವ್ಯಕ್ತಿಗಳ ಮೇಲೆ ಕ್ರಿಮಿನಲ್‌ ಮೊಕದ್ದಮೆ ಹೂಡಬೇಕು.

    ಹಸಿರು ಪಟಾಕಿ ಕ್ಯೂಆರ್‌ ಕೋಡ್‌ ಚಿಹ್ನೆ ಇಲ್ಲದ ಪಟಾಕಿಗಳನ್ನು ವಶಕ್ಕೆ ಪಡೆಯಬೇಕು. ಹಬ್ಬದ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು. ಇವುಗಳನ್ನು ಬಳಸುವಾಗ ಯಾವುದೇ ಪ್ರಾಣಿ, ಪಕ್ಷಿಗಳು, ಮಕ್ಕಳು ಹಾಗೂ ವೃದ್ಧರಿಗೆ ತೊಂದರೆಯಾಗದಂತೆ ಬಳಸಬೇಕು. ಇದನ್ನೂ ಓದಿ: ಹೈಕಮಾಂಡ್ ನೀನು ಸಿಎಂ ಆಗು ಅಂದ್ರೆ ನಾನು ಸಿದ್ಧ: ಪ್ರಿಯಾಂಕ್ ಖರ್ಗೆ

    ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು, ನಿಷೇಧಿತ ಸ್ಥಳಗಳಲ್ಲಿ ಪಟಾಕಿ ಹೊಡೆಯುವಂತಿಲ್ಲ. ಇದನ್ನು ಎಲ್ಲಾ ಸ್ಥಳೀಯ ಸಂಸ್ಥೆಗಳು ಹಾಗೂ ಪೊಲೀಸ್‌ ಇಲಾಖೆಗಳು ಕಡ್ಡಾಯವಾಗಿ ಪಾಲಿಸಬೇಕು.

    ನವೆಂಬರ್‌ 5 ರಿಂದ 20 ರ ವರೆಗೆ ನಿರಂತರ ವಾಯುಮಾಲಿನ್ಯ ಪರೀಕ್ಷೆ ಮಾಡಬೇಕು. ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಮಾಪನದ ಮೂಲಕ ಪರೀಕ್ಷೆ ಮಾಡಬೇಕು. ಹೊರ ರಾಜ್ಯದ ಅನಧಿಕೃತ ಪಟಾಕಿಗಳಿಗೆ ನಿಷೇಧ ವಿಧಿಸಲಾಗಿದೆ. ಆಯಾಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಪೊಲೀಸರ ಮೂಲಕ ನಿಯಮ ಪಾಲನೆಯ ಬಗ್ಗೆ ಕ್ರಮ ವಹಿಸಬೇಕು ಎಂದು ಮಂಡಳಿ ತಿಳಿಸಿದೆ. ಇದನ್ನೂ ಓದಿ: ಹಾಸನಾಂಬೆ ಸಾರ್ವಜನಿಕ ದರ್ಶನೋತ್ಸವ ಇಂದಿನಿಂದ ಆರಂಭ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಬ್ಲಿಕ್ ಟಿವಿ ಕ್ಯಾಮೆರಾ ಕಂಡೊಡನೆ ಸರ್ಕಾರಿ ಕಚೇರಿಯಿಂದ ರಸ್ತೆಯಲ್ಲಿ 2 ಕಿ.ಮೀ ಓಡಿದ ಟಾಪ್ ಅಧಿಕಾರಿ!

    ಪಬ್ಲಿಕ್ ಟಿವಿ ಕ್ಯಾಮೆರಾ ಕಂಡೊಡನೆ ಸರ್ಕಾರಿ ಕಚೇರಿಯಿಂದ ರಸ್ತೆಯಲ್ಲಿ 2 ಕಿ.ಮೀ ಓಡಿದ ಟಾಪ್ ಅಧಿಕಾರಿ!

    – ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಯ ಹುಚ್ಚಾಟ
    – ಪ್ರಶ್ನೆಗೆ ಹೆದರಿ ಓಡಿ ಹೋದ ಐಟಿ ಮುಖ್ಯಸ್ಥ ಸೂರಿ ಪಾಯಲ್
    – ಈತನಿಗೆ ತಿಂಗಳಿಗೆ ಒಂದೂವರೆ ಲಕ್ಷ ಸಂಬಳ

    -ಪವಿತ್ರ ಕಡ್ತಲ
    ಬೆಂಗಳೂರು: ತಿಂಗಳಿಗೆ ಒಂದೂವರೆ ಲಕ್ಷ ಸಂಪಾದನೆ ಮಾಡೋ ಅಧಿಕಾರಿಯೊಬ್ಬ ಪಬ್ಲಿಕ್ ಟಿವಿ ಕ್ಯಾಮೆರಾ ಕಂಡೊಡನೆ ಸರ್ಕಾರಿ ಕಚೇರಿಯ ಚೇಂಬರ್ ನಿಂದ ಹುಚ್ಚನಂತೆ 2 ಕಿ.ಮೀ ಓಡಿದ್ದಾನೆ. ಓಡಿದ್ದು ಮಾತ್ರವಲ್ಲದೇ ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಳ್ಳಲು ಹೋಗಿ ಕ್ಯಾಮೆರಾಮೆನ್ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ.

    ರಸ್ತೆಯಲ್ಲಿ ಹುಚ್ಚರಂತೆ ಓಡಿದ್ದು ಬೇರೆ ಯಾರು ಅಲ್ಲ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಐಟಿ ಹೆಡ್ ಸೂರಿ ಪಾಯಲ್ ಪಬ್ಲಿಕ್ ಟಿವಿಯ ಪ್ರಶ್ನೆಗೆ ಉತ್ತರ ನೀಡದೇ ರಸ್ತೆಯಲ್ಲೇ ಓಡಿದ್ದಾನೆ.

    ಯಾರು ಈ ಅಧಿಕಾರಿ?
    ಆಂಧ್ರ ಮೂಲದ ಪಾಯಲ್ ಸಿದ್ದರಾಮಯ್ಯ ಸೊಸೆಗೆ ಸೋದರ ಸಂಬಂಧಿಯಾಗಿದ್ದಾನೆ. ಸೊಸೆ ಸಂಬಂಧಿಗಾಗಿ ಹುದ್ದೆ ಕೊಡಿಸಲು ಸಿದ್ದರಾಮಯ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಲಕ್ಷ್ಮಣ್ ಮೂಲಕ ಪಾಯಲ್ ಗೆ ಕೆಲಸ ಕೊಡಿಸಿದ್ದಾರೆ. ಕೇವಲ 5 ತಿಂಗಳಲ್ಲಿಯೇ ಈತನ ನೇಮಕಾತಿ ಮುಗಿದಿದ್ದು ಅಷ್ಟರಲ್ಲಿಯೇ ಶಿಸ್ತಾಗಿ ಹುದ್ದೆಗೆ ಹಾಜರಾಗಿದ್ದಾನೆ. ಈ ವಿಚಾರ ಪಬ್ಲಿಕ್ ಟಿವಿಗೆ ಗೊತ್ತಾಗುತ್ತಿದ್ದಂತೆ ಸೂರಿ ಪಾಯಲ್‍ನನ್ನು ಪ್ರಶ್ನಿಸಲು ತೆರಳಿದೆ. ಆದರೆ ಕ್ಯಾಮೆರಾ ಕಂಡೊಡನೆ ಈತನಿಗೆ ಭಯ ಶುರುವಾಗಿ ಚರ್ಚ್ ಸ್ಟ್ರೀಟ್ ನಿಂದ ಎಂಜಿ ರೋಡ್, ಚಿನ್ನಸ್ವಾಮಿ ಸ್ಟೇಡಿಯಂ ಗಲ್ಲಿ ಗಲ್ಲಿಯಲ್ಲಿ ಓಡಿದ್ದಾನೆ.

    ಉದ್ಯೋಗ ಸಿಕ್ಕಿದ್ದು ಹೇಗೆ?
    ಸೂರಿ ಪಾಯಲ್ ಸಾಮಾನ್ಯ ವ್ಯಕ್ತಿಯಲ್ಲ. ಈತನಿಗೆ ಈ ಹುದ್ದೆ ಕೊಡಿಸಬೇಕಾದರೆ ರಾಜಕೀಯ ವಲಯದಲ್ಲೇ ದೊಡ್ಡ ಬಿರುಗಾಳಿ ಎದ್ದಿತ್ತು. ರಾಜಕೀಯ ಮುಖಂಡರು ತಲೆ ಕೆಡಿಸಿಕೊಂಡು ಈತನಿಗೆ ಹುದ್ದೆ ಕೊಡಿಸಿದ್ದರು. ಹಿಂದೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ(ಕೆಐಎಡಿಬಿ) ಈತನಿಗೆ ಸರ್ಕಾರಿ ಹುದ್ದೆ ಕೊಡಿಸಲು ಪ್ರಯತ್ನ ನಡೆದಿತ್ತು. ಆದರೆ ಸಕ್ಸಸ್ ಆಗದೇ ಇದ್ದಾಗ ಸಿದ್ದರಾಮಯ್ಯನವರು ಮಾಸ್ಟರ್ ಪ್ಲಾನ್ ರೂಪಿಸಿ, 6 ತಿಂಗಳು ಕಷ್ಟಪಟ್ಟ ನಂತರ ಮಾಲಿನ್ಯ ನಿಯಂತ್ರಣ ಇತಿಹಾಸವನ್ನೇ ಬದಲಾಯಿಸಿ ಐಟಿ ಹೆಡ್ ಅನ್ನೋ ಹುದ್ದೆ ಕರುಣಿಸಿದ್ದಾರೆ. ಗೊತ್ತು ಗುರಿ ಇಲ್ಲದ ಈ ಸೂರಿ ಪಾಯಲ್‍ಗಾಗಿ ಎಲ್ಲ ನಿಯಮಾವಳಿಗಳನ್ನು ಕೈಬಿಡಲಾಗಿದೆ. ಈತನ ನೇಮಕಕ್ಕೆ ಕಮಿಟಿ ರಚನೆ ಮಾಡಿ ಕೆಪಿಎಸ್ಸಿ ಮೂಲಕ ಆಯ್ಕೆ ಆಗುವಂತೆ ಮಾಡಲಾಗಿದೆ.

    ಚೇಸಿಂಗ್ ಆಗಿದ್ದು ಹೀಗೆ:
    ಪಬ್ಲಿಕ್ ಟಿವಿ ಪರಿಸರ ಭವನದಲ್ಲಿರುವ ಸೂರಿ ಪಾಯಲ್ ಹೊಸ ಚೇಂಬರ್ ಗೆ ಎಂಟ್ರಿ ಕೊಟ್ಟಿದೆ. ಎಂಟ್ರಿಯಾಗುತ್ತಿದ್ದಂತೆ ಸೂರಿಗೆ ಅಕ್ಕ-ಪಕ್ಕದ ಅಧಿಕಾರಿಗಳು ಕಚೇರಿ ಬಿಟ್ಟು ಬೇರೆ ಕಚೇರಿಗೆ ಪರಾರಿಯಾಗುವಂತೆ ಮಾಹಿತಿ ನೀಡಿದ್ದಾರೆ. ಪಬ್ಲಿಕ್ ಟಿವಿ ಫಾಲೋ ಮಾಡುತ್ತಿರುವ ವಿಚಾರ ಗೊತ್ತಾಗುತ್ತಿದ್ದಂತೆ ಸೂರಿ ಪರಿಸರ ಭವನದಿಂದ ರಸ್ತೆಗಿಳಿದು ಚರ್ಚ್ ಸ್ಟ್ರೀಟ್ ರಸ್ತೆ ದಾಟಿ ಮುಂದೆ ಹೋಗಿದ್ದಾನೆ.

    ಅಲ್ಲೇ ಪಕ್ಕದ ಮೋರಿ ಲೆಕ್ಕಿಸದೇ ಹಿಂದೆ ತಿರುಗದೇ ಬಡ ಬಡ ಅಂತ ವೇಗವಾಗಿ ನಡೆದುಕೊಂಡು ಹೋಗಿದ್ದಾನೆ. ಪಬ್ಲಿಕ್ ಟಿವಿ ಆತನನ್ನೇ ಹಿಂಬಾಲಿಸಿಕೊಂಡು ಹೋದಾಗ ಈ ಮಧ್ಯೆ ಕ್ಯಾಮೆರಾಮನ್ ಮೇಲೆ ಹಲ್ಲೆ ಮಾಡುವುದಕ್ಕೆ ಮುಂದಾಗಿದ್ದಾನೆ.

    ಕೊನೆಗೆ ಲೋಗೋ ಹಿಡಿದು ಮಾತನಾಡಿಸಬೇಕು ಅನ್ನುವಷ್ಟರಲ್ಲಿ ಎದುರಿನಿಂದ ಜನ ಬಂದರೂ ಲೆಕ್ಕಿಸದೇ ಓಡುವುದಕ್ಕೆ ಶುರು ಮಾಡಿದ್ದಾನೆ. ಬಳಿಕ ಚರ್ಚ್ ಸ್ಟ್ರೀಟ್ ನಿಂದ ಎಂಜಿ ರೋಡ್‍ ಗೆ ಓಡಿ ಹೋಗಿದ್ದಾನೆ. ಅಲ್ಲಿಂದ ಎತ್ತರದ ಡಿವೈಡರ್ ಇದ್ದರೂ ಲೆಕ್ಕಿಸದೇ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿದ್ದಾನೆ. ಅಲ್ಲಿ ಆತನನ್ನು ಮಾತನಾಡಿಸಿದಾಗ, ನೀವು ಗೂಂಡಾಗಳು ನನ್ನ ಹೊಡೆಯಲು ಜನ ಕರಕೊಂಡು ಬಂದಿದ್ದೀರಿ ಅದಕ್ಕೆ ಓಡಿ ಬಂದೆ ಅಂತ ಕಥೆ ಕಟ್ಟಿದ್ದಾನೆ.

    ಬಳಿಕ ಈ ಹುದ್ದೆ ಹೇಗೆ ಸಿಕ್ತು? ಮೇಲಾಧಿಕಾರಿಗಳು ಪರಿಚಯ ಇದ್ದಾರಾ ಎಂದು ಕೇಳಿದಾಗ, ನನಗೆ ಯಾವ ಸಿದ್ದರಾಮಯ್ಯನೂ ಪರಿಚಯ ಇಲ್ಲ. ನಿಮ್ಮ ಮೇಲೆಯೇ ದೂರು ನೀಡ್ತೀನಿ ಅಂತ ಹೇಳಿ ವಾಪಸ್ ಹೋಗಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv