ಬೆಂಗಳೂರು: ರಾಜ್ಯದ ಪೊಲೀಸ್ ಕಾನ್‌ಸ್ಟೆಬಲ್ ಹಾಗೂ ಹೆಡ್ ಕಾನ್‌ಸ್ಟೆಬಲ್‌ಗಳು ಧರಿಸುತ್ತಿದ್ದ ‘ಸ್ಲೋಚ್ ಹ್ಯಾಟ್’ ಬದಲಿಗೆ ‘ಪಿ-ಕ್ಯಾಪ್’ಗಳನ್ನು (P-Cap) ವಿತರಣೆ ಮಾಡಲಾಗುತ್ತಿದೆ. ಹೊಸ ಟೋಪಿಗಳು ಇಂದಿನಿಂದಲೇ ಪೊಲೀಸರ ಕೈಸೇರಲಿವೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮಂಗಳವಾರ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ.ಪರಮೇಶ್ವರ ಅವರು ಹೊಸ ಕ್ಯಾಪ್‌ಗಳನ್ನು ವಿತರಣೆ ಮಾಡಲಿದ್ದಾರೆ. ನಂತರ, ಹಂತಹಂತವಾಗಿ ವಿವಿಧ ಜಿಲ್ಲೆಗಳ ಕಾನ್‌ಸ್ಟೆಬಲ್ ಹಾಗೂ ಹೆಡ್‌ಕಾನ್‌ಸ್ಟೆಬಲ್‌ಗಳಿಗ ಹೊಸ ಕ್ಯಾಪ್ ವಿತರಣೆ ನಡೆಯಲಿದೆ.
ಜೂನ್‌ನಲ್ಲಿ ನಡೆದಿದ್ದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಹೊಸ ಕ್ಯಾಪ್ ವಿತರಣೆಗೆ ನಿರ್ಧರಿಸಲಾಗಿತ್ತು. ಅದಾದ ಮೇಲೆ ತೆಲಂಗಾಣ ಪೊಲೀಸರು ಧರಿಸುತ್ತಿರುವ ತೆಳುವಾದ ‘ಪಿ ಕ್ಯಾಪ್’ ವಿತರಣೆ ಮಾಡಲು ರಾಜ್ಯ ಸರ್ಕಾರವು ಒಪ್ಪಿಗೆ ಸೂಚಿಸಿತ್ತು.
ಆ.7 ರಂದು ನಡೆದಿದ್ದ ಕಿಟ್ ನಿರ್ದಿಷ್ಟಿತಾ ಸಮಿತಿ ಸಭೆಯಲ್ಲಿ ಟೆಂಡರ್ ಅಂತಿಮಗೊಳಿಸಲಾಗಿತ್ತು. ಇದೀಗ ಹೊಸ ಟೋಪಿಗಳು ಸಿದ್ಧಗೊಂಡಿದ್ದು, ಮೊದಲ ಹಂತದಲ್ಲಿ ಪೊಲೀಸರಿಗೆ ‘ಪಿ ಕ್ಯಾಪ್’ ವಿತರಣೆ ನಡೆಯಲಿದೆ.
– ನಿವೃತ್ತ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳ ಸೇವಾ ನಿಧಿಗೆ 10 ಕೋಟಿ; ಸಿಎಂ ಘೋಷಣೆ
ಬೆಂಗಳೂರು: ರಾಜ್ಯದಲ್ಲಿ ಕೋಮು ಹತ್ಯೆ, ಹಿಂಸಾಚಾರ, ಪ್ರಚೋದನಕಾರಿ ಭಾಷಣ (Provocative speech) ಹಾಗೂ ನೈತಿಕ ಪೊಲೀಸ್ ಗಿರಿಯಂತಹ ಪ್ರಕರಣಗಳನ್ನ ಹತ್ತಿಕ್ಕಲು ಸ್ಪೆಷಲ್ ಆಕ್ಷನ್ ಫೋರ್ಸ್ ರಚನೆ ಮಾಡಿದ್ದೇವೆಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದರು.
ರಾಜ್ಯದ ಘನತೆ, ಅಭಿವೃದ್ಧಿ ಮತ್ತು ಪ್ರಗತಿಗೆ ಕಂಟಕವಾಗಿದ್ದ ಸಂವಿಧಾನ ವಿರೋಧಿ ಅನೈತಿಕ ಪೊಲೀಸ್‌ಗಿರಿಗೆ ರಾಜ್ಯದಲ್ಲಿ ಕಡಿವಾಣ ಬಿದ್ದಿದೆ. ಇದರ ಶ್ರೇಯಸ್ಸು ಪೊಲೀಸ್ ಇಲಾಖೆಗೆ ಸಲ್ಲಬೇಕು.
ಪೊಲೀಸ್ ಇಲಾಖೆ ಶಾಂತಿ-ಸುವ್ಯವಸ್ಥೆ ಕಾಪಾಡಿದರೆ ರಾಜ್ಯದ ಅಭಿವೃದ್ಧಿ ಸಾಧ್ಯವಾಗುತ್ತದೆ. ಹೀಗಾಗಿ
ಅನೈತಿಕ ಪೊಲೀಸ್ ಗಿರಿಗೆ ಕಡಿವಾಣ ಬಿದ್ದಿರುವುದು… pic.twitter.com/JWrmB6IdhW
ಬಳಿಕ ಮಾತನಾಡಿ, ರಾಜ್ಯದ ಘನತೆ, ಅಭಿವೃದ್ಧಿ ಮತ್ತು ಪ್ರಗತಿಗೆ ಕಂಟಕವಾಗಿದ್ದ ಸಂವಿಧಾನ ವಿರೋಧಿ ಅನೈತಿಕ ಪೊಲೀಸ್‌ಗಿರಿಗೆ ರಾಜ್ಯದಲ್ಲಿ ಕಡಿವಾಣ ಬಿದ್ದಿದೆ. ಇದರ ಶ್ರೇಯಸ್ಸು ಪೊಲೀಸ್ ಇಲಾಖೆಗೆ ಸಲ್ಲಬೇಕು. ಪೊಲೀಸ್ ಇಲಾಖೆ ಶಾಂತಿ-ಸುವ್ಯವಸ್ಥೆ ಕಾಪಾಡಿದರೆ ರಾಜ್ಯದ ಅಭಿವೃದ್ಧಿ ಸಾಧ್ಯವಾಗುತ್ತದೆ. ಹೀಗಾಗಿ ಅನೈತಿಕ ಪೊಲೀಸ್ ಗಿರಿಗೆ ಕಡಿವಾಣ ಬಿದ್ದಿರುವುದು ಉತ್ತಮ ಕೆಲಸ. ಹಾಗೆಯೇ ಮಾದಕ ವಸ್ತು ಹಾವಳಿಗೂ ಬ್ರೇಕ್ ಬಿದ್ದಿದ್ದು ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಬೇಕಿದೆ. ಈ ಎಲ್ಲಾ ಸಾಧನೆಗಳ ಶ್ರೇಯ ಪೊಲೀಸ್ ಇಲಾಖೆಗೆ ಸಲ್ಲಬೇಕು. ರಾಜ್ಯದಲ್ಲಿ ಪರಿಶಿಷ್ಠ ಜಾತಿ ಹಾಗೂ ವರ್ಗದವರ ಮೇಲಿನ ದೌರ್ಜನ್ಯ ತಡೆಗೆ ಡಿಸಿಆರ್‌ಇ ಪೊಲೀಸ್ ಠಾಣೆಗಳನ್ನು ಕಾರ್ಯೋನ್ಮುಖಗೊಳಿಸಿದ್ದೇವೆ. ಇವು ಪರಿಣಾಮಕಾರಿಯಾಗಿ ಕೆಲಸ ಮಾಡುವ ಮೂಲಕ ಸಾಂವಿಧಾನಿಕ ಹಕ್ಕು ಮತ್ತು ಮೌಲ್ಯಗಳನ್ನು ಕಾಪಾಡುವ ಕೆಲಸ ಮಾಡಬೇಕು.
ಒಂದು ವರ್ಷದಲ್ಲಿ ರಾಜ್ಯದ 8 ಮಂದಿ ಸೇರಿ ದೇಶದಲ್ಲಿ 191 ಮಂದಿ ಕರ್ತವ್ಯ ನಿರ್ವಹಣೆ ವೇಳೆ ಪ್ರಾಣ ತ್ಯಾಗ ಮಾಡುವ ಮೂಲಕ ಹುತಾತ್ಮರಾಗಿದ್ದಾರೆ. ಇವರ ತ್ಯಾಗ, ಬಲಿದಾನಕ್ಕೆ ಬೆಲೆ ಕಟ್ಟಲಾಗದು. ಇವರನ್ನು ಸ್ಮರಿಸಿ, ನಮಿಸುವುದು ಪ್ರತಿಯೊಬ್ಬರ ಕರ್ತವ್ಯ. ಸಂವಿಧಾನದಲ್ಲಿ ಜನರಿಗೆ ಕೊಟ್ಟಿರುವ ಹಕ್ಕುಗಳನ್ನು ಕಾಪಾಡುವ ಜವಾಬ್ದಾರಿಯನ್ನೂ ಪೊಲೀಸ್ ಇಲಾಖೆ ನಿರ್ವಹಿಸುತ್ತಿದೆ. ನಿವೃತ್ತ ಪೊಲೀಸ್ ಆರೋಗ್ಯ ಯೋಜನೆಯ ವೈದ್ಯಕೀಯ ಮರು ಪಾವತಿ ವೆಚ್ಚವನ್ನು ವಾರ್ಷಿಕ 1 ಲಕ್ಷ ರೂ.ಗಳಿಂದ 1.50 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಎಲ್ಲಾ ಪೊಲೀಸ್ ಸಿಬ್ಬಂದಿಯ ಆರೋಗ್ಯ ತಪಾಸಣಾ ವೆಚ್ಚವನ್ನು 1,000 ರೂ.ಗಳಿಂದ 1,500 ರೂ.ಗೆ ಹೆಚ್ಚಿಸಲಾಗಿದೆ ಎಂದು ವಿವರಿಸಿದರು.
ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ಮೇಲೆ ರಾಜ್ಯದ ಅಭಿವೃದ್ಧಿ ಕಾಣುತ್ತೆ. ರಾಜ್ಯಕ್ಕೆ ಬಂಡವಾಳ ಹರಿದುಬರುವಲ್ಲೂ ಪೊಲೀಸರ ಪಾತ್ರವಿದೆ. ಪ್ರಾಣತ್ಯಾಗದ ಜೊತೆಗೆ ಹಲವರು ಗಾಯಗೊಂಡಿರುತ್ತಾರೆ. ಅವರೆಲ್ಲರ ಜೊತೆಗೆ ಸರ್ಕಾರ ಇರುತ್ತೆ. ಕೋಮು ಹತ್ಯೆ, ದ್ವೇಷ ಭಾಷಣ, ನೈತಿಕ ಪೊಲೀಸ್ ಗಿರಿ ಹೆಚ್ಚಾಗಿ ಉಡುಪಿ, ದಕ್ಷಿಣ ಕನ್ನಡದಲ್ಲಿ ಆಗುತ್ತೆ. ಹೀಗಾಗಿ ಇಂತಹ ಪ್ರಕರಣಗಳನ್ನ ಹತ್ತಿಕ್ಕಲು ಸ್ಪೆಷಲ್ ಆಕ್ಷನ್ ಫೋರ್ಸ್ ಶುರು ಮಾಡಿದ್ದೇವೆ ಎಂದು ತಿಳಿಸಿದರು.
ಜನರ ರಕ್ಷಣೆಗೆ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ತಂದಿದ್ದೇವೆ. ಬೇರೆ ರಾಜ್ಯ, ದೇಶಗಳಿಂದ ಬಂದ ಜನರಿಗೆ ಸುರಕ್ಷತೆ ನೀಡುವ ಕೆಲಸವನ್ನೂ ಮಾಡಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಹೋಗಿದ್ದೆ. ಮೊದಲು ಕಾನೂನು ಸುವ್ಯವಸ್ಥೆ ಹಾಳಾಗಿತ್ತು. ಆದ್ರೆ ಇತ್ತೀಚೆಗೆ ಕಾನೂನು ಸುವ್ಯವಸ್ಥೆ ಸರಿದಾರಿಯಲ್ಲಿದೆ. ಇದಕ್ಕೆ ಶ್ರಮಿಸಿದ ಪೊಲೀಸ್ ಇಲಾಖೆಗೆ ಧನ್ಯವಾದ ಸಲ್ಲಿಸುತ್ತೇನೆಂದರು. ಇದನ್ನೂ ಓದಿ: ಇದಾನಲ್ಲ ಅಮವಾಸ್ಯೆ ತೇಜಸ್ವಿ ಸೂರ್ಯ ಕೇಂದ್ರದಿಂದ ಹಣ ತರಲ್ಲ – ಸಿಎಂ
ಅಲ್ಲದೇ ಕೋಮುಹತ್ಯೆ, ಹಿಂಸಾಚಾರ, ಪ್ರಚೋದನಕಾರಿ ಭಾಷಣ ನೈತಿಕ ಪೊಲೀಸ್ ಗಿರಿಯಂತಹ ಪ್ರಕರಣಗಳನ್ನ ತಡೆಯಲು ರಾಜ್ಯದಲ್ಲಿ ಸ್ಪೆಷಲ್ ಆಕ್ಷನ್ ಫೋರ್ಸ್ ರಚನೆ ಮಾಡಿದ್ದೇವೆ. ಮಾದಕ ದ್ರವ್ಯಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ. ನಂದಿಬೆಟ್ಟದಲ್ಲಿ 2 ಭಾರತೀಯ ಮೀಸಲು ಪಡೆ ಆರಂಭಕ್ಕೆ ಒಪ್ಪಿಗೆ ನೀಡಲಾಗಿದೆ. ಹೊಸದಾಗಿ ಎರಡು ಬಾಂಬ್ ಸ್ಕ್ಯಾಡ್ ಮಾಡಲಾಗಿದೆ. ನಾಗರಿಕರಿಗಾಗಿ ಮನೆ ಮನೆಗೆ ಪೊಲೀಸ್ ವ್ಯವಸ್ಥೆ ಜಾರಿ ಮಾಡಿದ್ದೇವೆ. ಎಸ್ಸಿ-ಎಸ್ಟಿ ಜನರ ರಕ್ಷಣೆಗೆ ಡಿಸಿಆರ್-ಎ ಠಾಣೆ ತಂದಿದ್ದೇವೆ.
ಬೆಂಗಳೂರು: ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ (DG-IGP) ಐಪಿಎಸ್ ಅಧಿಕಾರಿ ಎಂ.ಎ ಸಲೀಂ (MA Saleem) ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ (Karnataka Police) ಇಂದು (ಶನಿವಾರ) ಅಧಿಸೂಚನೆ ಹೊರಡಿಸಿದೆ.
ಬೆಂಗಳೂರು: ರಾಜ್ಯವನ್ನು ಶಾಂತಿಯಿಂದ ಇಡುವುದರಲ್ಲಿ ಪೊಲೀಸ್ ಇಲಾಖೆಯು (Police Department) ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ವಿಶೇಷವಾಗಿ ಜನಸಮುದಾಯದ ನಿರೀಕ್ಷೆಯಲ್ಲಿ ತನ್ನ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ (G Parameshwara) ಅವರು ಹೇಳಿದರು.
ರಾಜಭವನದ ಗಾಜಿನ ಮನೆಯಲ್ಲಿ ನಡೆದ ಕರ್ನಾಟಕ ರಾಜ್ಯ ಗೃಹ ಇಲಾಖೆಯಲ್ಲಿ (Home Department) ವಿಶಿಷ್ಟ ಹಾಗೂ ಅಗ್ರಗಣ್ಯ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಾನ್ಯ ಗೌರವಾನ್ವಿತ ರಾಜ್ಯಪಾಲ ರವರಿಂದ ʻರಾಷ್ಟ್ರಪತಿಗಳ ಪೊಲೀಸ್ ಪದಕ ಪ್ರದಾನʼ ಹಾಗೂ ʻಕೇಂದ್ರ ಗೃಹ ಮಂತ್ರಿಗಳ ಪದಕ ಪ್ರದಾನʼ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇದನ್ನೂ ಓದಿ: ಪೊಲೀಸರ ಸಾಮಾಜಿಕ ಬದ್ದತೆಯಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ – ಸಿದ್ದರಾಮಯ್ಯ
ಪ್ರಶಸ್ತಿ ಎಂಬುದು ಬರೀ ಪದಕವಲ್ಲ. ಅದರ ಹಿಂದೆ ಶ್ರಮ, ಪ್ರಾಮಾಣಿಕತೆ, ಸಮಾಜದ ಸೇವೆ ಮತ್ತು ಮುಂದಿನ ಪೀಳಿಗೆಗೆ ಆದರ್ಶ ಇದೆ. ಕರ್ನಾಟಕ ಪೊಲೀಸ್ ಇಡೀ ರಾಷ್ಟ್ರದಲ್ಲಿ ಪ್ರಖ್ಯಾತಿಯನ್ನು ಪಡೆದಿದೆ. ಪೊಲೀಸ್ ಇಲಾಖೆಯನ್ನು ನಡೆಸುವುದಕ್ಕೆ ನನಗೆ ಬಹಳ ಹೆಮ್ಮೆಯಿದೆ. ಪೊಲೀಸ್ ಕಾನ್‌ಸ್ಟೇಬಲ್‌ನಿಂದ ಅನುಯಾಯಿಗು ಕೂಡ ಪ್ರಶಸ್ತಿ ಸಿಕ್ಕಿದೆ. ಅನುಯಾಯಿಯಿಂದ ಡಿಜಿಪಿವರೆಗೆ ನಮ್ಮ ಪೊಲೀಸ್ ಇಲಾಖೆ ರಾಜ್ಯವನ್ನು ಶಾಂತಿಯಿಂದ ಇಡುವುದರಲ್ಲಿ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ವಿಶೇಷವಾಗಿ ಜನಸಮುದಾಯದ ನಿರೀಕ್ಷೆಯಲ್ಲಿ ತನ್ನ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದೆ ಎಂದು ಹೇಳಿದರು.
ರಾಜ್ಯದ ಅಭಿವೃದ್ಧಿಯಾಗಬೇಕಾದರೆ ಸಮಾಜ ಶಾಂತಿಯಿಂದ ಇರಬೇಕಾಗುತ್ತದೆ. ನಾಗರಿಕ ಸಮಾಜ ಶಾಂತಿಯಿಂದ ಇರಬೇಕಾಗುತ್ತದೆ. ಇತ್ತೀಚೆಗೆ ನಾವು ಗಮನಿಸಿದಾಗ, ಗ್ಲೋಬಲ್ ಇನ್‌ವೆಸ್ಟರ್ಸ್ ಮೀಟ್‌ನಲ್ಲಿ 10,500 ಲಕ್ಷ ಕೋಟಿ ರೂ.ಗಿಂತಲೂ ಹೆಚ್ಚು ಬಂಡಾವಾಳ ಹೂಡುತ್ತೇವೆ ಎಂದು ಪ್ರಪಂಚದಾದ್ಯಂತ ನೂರಾರು ಕಂಪನಿಗಳು ಬಂದವು. ಮುಖ್ಯಮಂತ್ರಿಗಳು, ಕೈಗಾರಿಕಾ ಸಚಿವರು ಹಲವು ಒಡಂಬಡಿಕೆಗಳಿಗೆ ಸಹಿ ಹಾಕಿದರು. ಅದಕ್ಕೆ ಮೂಲ ಕಾರಣ, ಯಾವುದೇ ಒಂದು ಕಂಪನಿ ರಾಜ್ಯದಲ್ಲಿ ಅಥವಾ ರಾಷ್ಟ್ರದಲ್ಲಿ ಬಂಡಾವಾಳ ಹೂಡಬೇಕಾದ್ರೆ ಆ ರಾಜ್ಯದ ಸಮಾಜವನ್ನು ನೋಡುತ್ತಾರೆ. ರಾಜಕೀಯ ಇಚ್ಛಾಶಕ್ತಿ, ಆ ಸಮಾಜದಲ್ಲಿ ಶಾಂತಿ ಇದೆಯಾ? ಎಂಬುದನ್ನು ಕಂಪನಿಗಳು ನೋಡುತ್ತವೆ. ಕರ್ನಾಟಕದ ಮಟ್ಟಿಗೆ 10 ಲಕ್ಷ ಕೋಟಿ ರೂ.ಗೂ ಹೆಚ್ಚು ಹೂಡಿಕೆ ಬರುತ್ತದೆ ಅಂದರೆ ಕರ್ನಾಟಕದಲ್ಲಿ ಶಾಂತಿ ಇದೆ. ನೆಮ್ಮದಿ, ತೃಪ್ತಿ ಇದೆ. ಯಾವುದೇ ತೊಂದರೆಗಳು ಆಗುವುದಿಲ್ಲ ಎಂಬುದನ್ನು ಗಮನಿಸಿಯೇ ಬಂಡಾವಾಳ ಹೂಡುತ್ತಾರೆ. ಇದಕ್ಕೆ ನಮ್ಮ ಪೊಲೀಸ್ ಇಲಾಖೆಯೂ ಕಾರಣ ಎಂದು ಶ್ಲಾಘಿಸಿದರು.
ರಾಜ್ಯ ಪೊಲೀಸ್ ಆಧುನೀಕರಣಗೊಳ್ಳುತ್ತಿದೆ. ಆಧುನೀಕರಣ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಸೈಬರ್ ಅಪರಾಧಗಳು ಬಹಳ ಹೆಚ್ಚಾಗುತ್ತಿವೆ. ಸೈಬರ್ ಅಪರಾಧಗಳನ್ನು ಮಟ್ಟ ಹಾಕದೇ ಹೋದರೆ ಜನರಿಗೆ ಕೋಟ್ಯಂತರ ರೂ. ನಷ್ಟ ಉಂಟಾಗುತ್ತದೆ. ಅದಕ್ಕಾಗಿಯೇ ದೇಶದಲ್ಲೆ ಮೊದಲ ಬಾರಿಗೆ ರಾಜ್ಯದಲ್ಲಿ ಸೈಬರ್ ಪೊಲೀಸ್ ಠಾಣೆಯನ್ನು ಸ್ಥಾಪಿಸಲಾಯಿತು. ಇಂದು ಸೈಬರ್ ಅಪರಾಧಗಳಿಗಾಗಿಯೇ 45ಕ್ಕೂ ಹೆಚ್ಚು ಪೊಲೀಸ್ ಠಾಣೆಗಳನ್ನು ರಾಜ್ಯದಲ್ಲಿ ಸ್ಥಾಪಿಸಲಾಗಿದೆ. ಯಾವುದೇ ಪೊಲೀಸ್ ಠಾಣೆಯಲ್ಲಿಯೂ ಸೈಬರ್ ಅಪರಾಧಕ್ಕೆ ಸಂಬಂಧಿಸಿದ ದೂರುಗಳನ್ನು ದಾಖಲಿಸಬಹುದು ಎಂಬ ಆದೇಶವನ್ನು ಹೊರಡಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಧರ್ಮಸ್ಥಳ ಕೇಸ್‌ಲ್ಲಿ SIT ತನಿಖೆಗೆ ಸಮಯ ನಿಗದಿ ಮಾಡಿಲ್ಲ: ಪರಮೇಶ್ವರ್
ಇತ್ತೀಚೆಗೆ ಸಮಾಜವನ್ನು ಕೆಡಿಸುವಂಥ ಅನೇಕ ಪ್ರಯತ್ನಗಳು ನಡೆಯುತ್ತಿವೆ. ಧಾರ್ಮಿಕವಾಗಿ, ರಾಜಕೀಯವಾಗಿ ಬೇರೆ ರೀತಿಯಲ್ಲಿ ಸಮಾಜದ ಶಾಂತಿಯನ್ನು ಕೆಡಿಸುವಂತದ್ದನ್ನು ಗಮನಿಸುತ್ತಿದ್ದೇವೆ. ಕರ್ನಾಟಕ ಪೊಲೀಸ್ ಪ್ರತಿಯೊಂದು ಸಂದರ್ಭದಲ್ಲಿ ಯಶಸ್ವಿಯಾಗುತ್ತಿದೆ. ಯಾವುದೇ ತನಿಖೆ, ಅಪರಾಧ, ಕೊಲೆ ಪ್ರಕರಣಗಳನ್ನು ಪತ್ತೆ ಹಚ್ಚುವುದರಲ್ಲಿ ರಾಜ್ಯ ಪೊಲೀಸ್ ಯಶಸ್ವಿಯಾಗಿದೆ. ಇಂತಹ ಸೂಕ್ಷ್ಮ ಇಲಾಖೆ ಸ್ವಾಭಾವಿಕವಾಗಿ ಹಲವು ಟೀಕೆ ಟಿಪ್ಪಣಿಗಳಿಗೆ ಗುರಿಯಾಗುತ್ತದೆ. ಟೀಕೆಗಳನ್ನು ಮೀರಿ ಇಲಾಖೆಯ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ನಾವು ಯಾವುದೇ ಟೀಕೆಗಳನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ. ಸಲಹೆಗಳ ರೂಪದಲ್ಲಿ ತೆಗೆದುಕೊಳ್ಳುತ್ತೇವೆ. ಆ ಕೆಲಸಗಳನ್ನು ಮಾಡಲು ಪ್ರಯತ್ನ ಮಾಡುತ್ತೇವೆ ಎಂದರು.
ಪೊಲೀಸ್ ಕಾನ್‌ಸ್ಟೇಬಲ್‌ಗಳ ಪ್ರಾಮಾಣಿಕ ಪ್ರಯತ್ನಗಳು ಆಗದೇ ಹೋದರೆ ನಾವು ಅಪರಾಧಗಳನ್ನು ಮಟ್ಟಹಾಕಲು ಕಷ್ಟವಾದೀತು. ಅವರು ಮಾಡುವ ಸೇವೆಗಳನ್ನು ನಾವು ಗಮನ ಹರಿಸಬೇಕಾಗುತ್ತದೆ. ಎರಡು ವರ್ಷಗಳ ಹಿಂದೆ ಮೈಸೂರು ರಸ್ತೆಯಲ್ಲಿ ರಸ್ತೆ ದಾಟಲು ಸಾಧ್ಯವಾಗದ ಸ್ಥಿತಿಯಲ್ಲಿದ್ದ ತುಂಬು ಗರ್ಭಿಣಿಗೆ ಹೆರಿಗೆ ಮಾಡಿಸಿ, ಸುರಕ್ಷಿತವಾಗಿ ಮನೆಗೆ ತಲುಪಿಸುವ ಕೆಲಸ ಮಾಡುತ್ತಾನೆ. ಒಬ್ಬ ಕಾನ್‌ಸ್ಟೇಬಲ್‌ಗೆ ಎಂತಹ ಮನಸ್ಥಿತಿ ಇರುತ್ತದೆ ಎಂದು ಯೋಚಿಸಬೇಕಿದೆ. ಕರ್ತವ್ಯದ ವೇಳೆ ಎದುರಾಗುವ ಸಮಸ್ಯೆಗಳನ್ನು ನಿಭಾಯಿಸುವ ಕೆಲಸಗಳನ್ನು ಇಲಾಖೆಯ ಸಿಬ್ಬಂದಿ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅನೇಕ ಸಂದರ್ಭಗಳಲ್ಲಿ ಕರ್ತವ್ಯದ ವೇಳೆ ಅಧಿಕಾರಿ ಮತ್ತು ಸಿಬ್ಬಂದಿ ಪ್ರಾಣ ಕಳೆದು ಕೊಂಡಿದ್ದಾರೆ. ಅವರಿಗೆ ಸಾಂತ್ವನ ಹೇಳಬಯಸುತ್ತೇನೆ. ಕರ್ತವ್ಯದ ವೇಳೆ ಅಪರಾಧಿ ಯಾವ ರೀತಿ ಪ್ರತಿಕ್ರಿಯಿಸುತ್ತಾನೆ ಎಂಬುದು ಗೊತ್ತಿರುವುದಿಲ್ಲ. ಪೊಲೀಸರು ಪ್ರಾಣ ಪಣಕ್ಕಿಟ್ಟು ಕೆಲಸ ಮಾಡುವ ಸಂದರ್ಭಗಳನ್ನು ನೋಡಿದ್ದೇವೆ.
ಪೊಲೀಸರ ನಿಸ್ವಾರ್ಥ ಸೇವೆ ಬೇರೆಯವರಿಗೆ ಸ್ಫೋರ್ತಿಯಾಗಲಿ. ಇಂದು ತೆಗೆದುಕೊಂಡಿರುವ ಪದಕಗಳು ಅತ್ಯಂತ ಶ್ಲಾಘನೀಯ. ಮುಂದಿನ ಪೀಳಿಗೆಗೆ ಆದರ್ಶವಾಗಲಿ. ನಿಮ್ಮಂತೆ ಸೇವೆ ಮಾಡಿ ರಾಜ್ಯಕ್ಕೆ ಮತ್ತು ಇಲಾಖೆಗೆ ಕೀರ್ತಿಯನ್ನು ತರಲಿ ಎಂದು ಹೇಳಿದರು.
ಬೆಂಗಳೂರು: ರಾಜ್ಯದಲ್ಲಿ ಜಾತಿ ವ್ಯವಸ್ಥೆಯಿದ್ದು, ಅನೇಕ ದುರ್ಬಲ ವರ್ಗದವರು ಜಾತಿ ತಾರತಮ್ಯವನ್ನು ಅನುಭವಿಸುತ್ತಿದ್ದಾರೆ. ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ದೌರ್ಜನ್ಯಗಳನ್ನು ತಡೆಗಟ್ಟಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.
ಸರ್ಕಾರವು ಪ್ರತಿ ಜಿಲ್ಲೆಯಲ್ಲಿ ಡಿಸಿಆರ್‌ಇ ಪೊಲೀಸ್ ಠಾಣೆಗಳನ್ನು ಸ್ಥಾಪಿಸಿದೆ. ನಾನು ಇತ್ತೀಚೆಗೆ ನಡೆಸಿದ ಪರಿಶೀಲನಾ ಸಭೆಯಲ್ಲಿ ಡಿಸಿಆರ್‌ಇ ಪೊಲೀಸ್ ಠಾಣೆಗಳ ಕಾರ್ಯ ಮತ್ತು ಪ್ರಗತಿ ತೃಪ್ತಿದಾಯಕವಿಲ್ಲ ಎಂಬುದನ್ನು ಗಮನಿಸಿದ್ದೇನೆ. ಇದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ದುರ್ಬಲ ವರ್ಗದವರಿಗೆ ಸುರಕ್ಷತೆ ಒದಗಿಸುವ ಸರ್ಕಾರದ ಉದ್ದೇಶ ಸಫಲವಾಗಬೇಕು. ಇತರೆ ರಾಜ್ಯಗಳಿಗೆ ಹೋಲಿಸಿದರೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಠ ಪಂಗಡಗಳ ಮೇಲಿನ ದೌರ್ಜನ್ಯ ಪ್ರಕರಣಗಳ ವಿರುದ್ಧ ಶಿಕ್ಷೆಯ ಪ್ರಮಾಣ ಬಹಳ ಕಡಿಮೆಯಿದೆ. ಈ ಬಗ್ಗೆ ಪೊಲೀಸರು ಗಮನಹರಿಸಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ವಿಶಿಷ್ಠ ಸೇವೆ ಸಲ್ಲಿಸಿರುವ ಪೊಲೀಸರಿಗೆ ನೀಡಿದ ಸೇವಾಪದಕದ ಹಿಂದೆ ಅವರ ಸೇವಾ ಮನೋಭಾವ, ಪ್ರಮಾಣಿಕತೆ ಹಾಗೂ ಪರಿಶ್ರಮವಿರುತ್ತದೆ. ಸಾಮಾಜಿಕ ಕಳಕಳಿಯೊಂದಿಗೆ ಸೇವೆ ಸಲ್ಲಿಸಿದಾಗ ಮಾತ್ರ ಇಂತಹ ಸಾಧನೆ ಸಾಧ್ಯವಾಗುತ್ತದೆ. ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆಗೆ ಜನರ ಆಸ್ತಿಪಾಸ್ತಿ ಸಂರಕ್ಷಿಸುವುದು ಪೊಲೀಸರ ಜವಾಬ್ದಾರಿ. ದೇಶದಲ್ಲಿ ಶಾಂತಿ, ನೆಮ್ಮದಿ ನೆಲೆಸುವಲ್ಲಿ ಪೊಲೀಸರ ಪಾತ್ರ ಅತ್ಯಂತ ಮಹತ್ವವಾದುದು. ಸಮಾಜದಲ್ಲಿ ನಡೆಯುವ ಅಪರಾಧಗಳನ್ನು ತಡೆಗಟ್ಟುವ ಜವಾಬ್ದಾರಿ ಸರ್ಕಾರ ಹಾಗೂ ಪೊಲೀಸರದ್ದಾಗಿದೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಬಹಳಷ್ಟು ಅಪರಾಧಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಇದನ್ನೂ ಓದಿ: 7 ವರ್ಷಗಳ ನಂತರ ಚೀನಾಗೆ ಪ್ರಧಾನಿ ಮೋದಿ ಭೇಟಿ
Today at Raj Bhavan, I participated in the President’s Police Medal Award Ceremony organised by the State Home Department. Hon’ble Governor Shri Thaawarchand Gehlot felicitated officers for their exceptional and distinguished service. I had the honour of congratulating the… pic.twitter.com/UVgqODzcvR
ಪೊಲೀಸರಿಗೆ ಸಾಮಾಜಿಕ ಬದ್ದತೆಯಿದ್ದರೆ, ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ. ಸಮಾಜದಲ್ಲಿನ ಅಸಮಾನತೆಯನ್ನು ತೊಡೆದು ಸಂವಿಧಾನ ನೀಡುವ ರಕ್ಷಣೆಯನ್ನು ಜಾರಿಗೊಳಿಸುವಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿದೆ. ಬಲಾಢ್ಯರ ಕೈಯಲ್ಲಿ ಅಧಿಕಾರವಿದ್ದರೆ, ದುರ್ಬಲ ವರ್ಗದವರ ಜೀವನ ದುಸ್ತರವಾಗುತ್ತದೆ ಎಂದು ಡಾ.ಬಿ.ಆರ್. ಅಂಬೇಡ್ಕರ್ ಅವರು ತಿಳಿಸಿದ್ದರು. ದುರ್ಬಲ ವರ್ಗಗಳ ಮೇಲಾಗುವ ದೌಜರ್ನ್ಯಗಳನ್ನು ಪೊಲೀಸರು ತಡೆಗಟ್ಟಬೇಕಿದೆ. ಸಾಮಾನ್ಯ ಜನರಿಗೆ ನ್ಯಾಯ ದೊರಕಿಸಿಕೊಡಬೇಕು. ಪೊಲೀಸರ ಸಂಖ್ಯೆಯ ಬಗ್ಗೆ ಗಮನಹರಿಸದೇ, ಅವರು ತಡೆಗಟ್ಟಿರುವ ಅಪರಾಧಗಳೆಷ್ಟು ಎಂದು ಪರಿಗಣಿಸಬೇಕಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿಜೇತರ ಸಾಧನೆ ಶ್ಲಾಘನೀಯವಾಗಿದ್ದು, ಇತರರಿಗೆ ಮಾದರಿಯಾಗಬೇಕು. ಸಮಾಜದಲ್ಲಿನ ನ್ಯೂನ್ಯತೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಪೊಲೀಸ್ ಇಲಾಖೆಯ ಅಧಿಕಾರಿ, ಸಿಬ್ಬಂದಿ ವರ್ಗದವರು ಆತ್ಮವಿಮರ್ಶೆ ಮಾಡಿಕೊಂಡು ಉತ್ತಮ ಸೇವೆ ಸಲ್ಲಿಸಬೇಕು ಎಂದು ಹೇಳಿದರು.ಇದನ್ನೂ ಓದಿ: ಇನ್ಮುಂದೆ ಎಲ್ಲ ಯುದ್ಧ ನೌಕೆಗಳನ್ನು ಭಾರತದಲ್ಲೇ ತಯಾರಿಸಲಾಗುತ್ತದೆ: ರಾಜನಾಥ್ ಸಿಂಗ್
ಇತ್ತೀಚಿಗಷ್ಟೇ ಆ.14ರಂದು ನಟ ದರ್ಶನ್, ಪವಿತ್ರಾ ಗೌಡ ಸೇರಿ ಏಳು ಜನರಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗಳಿಸಿದೆ. ಇದರ ಬೆನ್ನಲ್ಲೇ ಕರ್ನಾಟಕ ಪೊಲೀಸರು ಮತ್ತೆ 5 ಆರೋಪಿಗಳ ಜಾಮೀನು ರದ್ದು ಮಾಡೋದಕ್ಕೆ ಮೇಲ್ಮನವಿ ಸಲ್ಲಿಸಲು ಸರ್ಕಾರಕ್ಕೆ ಪೂರ್ವಾನುಮತಿ ಕೇಳಿದ್ದರು. ಅದರಂತೆ ಸರ್ಕಾರ ಅನುಮತಿ ನೀಡಿದೆ.
ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ (Police Department) ಅತ್ಯುತ್ತಮ ಸೇವೆಗಾಗಿ ರಾಜ್ಯದ ಪೊಲೀಸ್ ವರಿಷ್ಠಾಧಿಕಾರಿ ಎಸ್. ಬದರಿನಾಥ್ ಅವರಿಗೆ ರಾಷ್ಟ್ರಪತಿ ಪದಕ (President Medal) ಲಭಿಸಿದೆ. ಅಲ್ಲದೇ 16 ಪೊಲೀಸರಿಗೆ ಮತ್ತು ಮೂವರು ಅಗ್ನಿಶಾಮಕ ದಳದ (Fire Service) ಸಿಬ್ಬಂದಿಗೆ ಸಹ ಶ್ಲಾಘನೀಯ ಸೇವಾ ಪದಕ ಲಭಿಸಿದೆ.
79ನೇ ಸ್ವಾತಂತ್ರ್ಯ ದಿನೋತ್ಸವದ ಮುನ್ನಾ ದಿನವಾದ ಇಂದು (ಗುರುವಾರ) ಪದಕ ವಿಜೇತರ ಹೆಸರುಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಇದರಲ್ಲಿ 233 ಸಿಬ್ಬಂದಿಗೆ ವಿಶಿಷ್ಟ ಸೇವಾ ಪದಕ, 99 ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಹಾಗೂ 758 ಸಿಬ್ಬಂದಿಗೆ ಶ್ಲಾಘನೀಯ ಸೇವಾ ಪದಕ ಘೋಷಣೆಯಾಗಿದೆ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ರಹಸ್ಯ| ಇದೊಂದು ಖಾಲಿ ಡಬ್ಬ, ದೊಡ್ಡ ಷಡ್ಯಂತ್ರ ನಡೆದಿದೆ: ಡಿಕೆಶಿ
ಪದಕ ಘೋಷಣೆಯಾದ ರಾಜ್ಯದ ಅಧಿಕಾರಿಗಳು
ಡಾ.ಚಂದ್ರಗುಪ್ತ, ಐಜಿಪಿ
ಡಾ.ರಾಮಕೃಷ್ಣ ಮುದ್ದೆಪಾಲ್, ಕಮಾಂಡಂಟ್
ಕೆ.ಎಂ. ಶಾಂತರಾಜು, ಎಸ್‌ಪಿ
ಕಲಾ ಕೃಷ್ಣಸ್ವಾಮಿ, ಎಸ್‌ಪಿ
ವೆಂಕಟೇಶ ನಾರಾಯಣಪ್ಪ, ಎಸ್.ಪಿ
ಝಾನ್ಸಿ ರಾಣಿ, ಎಸ್‌ಐ
ಪ್ರವೀಣ ಬಾಬು ಗುರುಸಿದ್ದಯ್ಯ. ಇನ್‌ಸ್ಪೆಕ್ಟರ್
ಪ್ರಕಾಶ್ ರಾಥೋಡ್, ಎಸಿಪಿ
ಎಡ್ರಿನ್ ಪ್ರದೀಪ್ ಸ್ಯಾಮ್ರನ್. ಇನ್‌ಸ್ಪೆಕ್ಟರ್
ಸತೀಶ್ ಸದಾಶಿವಯ್ಯ ಬೆಟ್ಟಹಳ್ಳಿ, ಇನ್‌ಸ್ಪೆಕ್ಟರ್
ಶಾಂತಾರಾಮ, ಇನ್‌ಸ್ಪೆಕ್ಟರ್
ಸುಜನ ಶೆಟ್ಟಿ, ಎಎಸ್‌ಐ
ಗುರುರಾಜ ಮಹಾದೇವಪ್ಪ ಬೂದಿಹಾಳ, ಎಎಸ್‌ಐ
ರಾಕೇಶ್ ಎಂ.ಜಿ., ಹೆಡ್ ಕಾನ್‌ಸ್ಟೆಬಲ್
ಶಂಶುದ್ದೀನ್, ಹೆಡ್ ಕಾನ್‌ಸ್ಟೆಬಲ್
ವೈ. ಶಂಕರ್, ಹೆಡ್ ಕಾನ್‌ಸ್ಟೆಬಲ್
ಅಲಂಕಾರ ರಾಕೇಶ್, ಹೆಡ್ ಕಾನ್‌ಸ್ಟೆಬಲ್
ರವಿ .ಎಲ್ ಹೆಡ್ ಕಾನ್ ಸ್ಟೆಬಲ್
– `ಡಿ’ ಗ್ಯಾಂಗ್‌ನ ಏಳು ಆರೋಪಿಗಳ ಜಾಮೀನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ಆದೇಶ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿಗಳಾದ ನಟ ದರ್ಶನ್ (Actor Darshan) ಸೇರಿ ಏಳು ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನು ರದ್ದು ಕೋರಿ ಕರ್ನಾಟಕ ಪೊಲೀಸರು (Karnataka Police) ಸಲ್ಲಿಸಿದ್ದ ಅರ್ಜಿ ಭವಿಷ್ಯ ಇಂದು (ಆ.14) ಹೊರಬೀಳಲಿದೆ.
ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸುತ್ತಾ? ಅಥವಾ ಮುಂದುವರೆಯುತ್ತಾ ಎಂಬ ಕುತೂಹಲಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಜೊತೆಗೆ ನಟ ದರ್ಶನ್ ಕೂಡ ಜಾಮೀನು ಮುಂದುವರೆಯುವ ನಿರೀಕ್ಷೆಯಲ್ಲಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣದ ಎ2 ದರ್ಶನ್ ಹಾಗೂ `ಡಿ’ ಗ್ಯಾಂಗ್‌ಗೆ ಹೈಕೋರ್ಟ್ ಜಾಮೀನು ನೀಡಿತ್ತು. ರಾಜ್ಯ ಪೊಲೀಸ್ ಇಲಾಖೆ ನಟ ದರ್ಶನ್‌ಗೆ ಹೈಕೋರ್ಟ್ ನೀಡಿರುವ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ವಾದ-ಪ್ರತಿವಾದ ಆಲಿಸಿ, ಆದೇಶವನ್ನು ಕಾಯ್ದಿರಿಸಿತ್ತು. ಗುರುವಾರ ದರ್ಶನ್, ಪವಿತ್ರಾ ಸೇರಿದಂತೆ ಏಳು ಜನರ ಬೇಲ್ ಭವಿಷ್ಯ ಹೊರಬೇಳಲಿದೆ.
ಇನ್ನೂ ಈ ಹಿಂದೆ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಾದ-ಪ್ರತಿವಾದದ ಸಂದರ್ಭದಲ್ಲಿ ದರ್ಶನ್ ಹಾಗೂ ಪವಿತ್ರಾ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ಜಾಮೀನು ಮುಂದುವರೆಸುವಂತೆ ಮನವಿ ಮಾಡಿಕೊಂಡಿದ್ದರು.
ಬಂಧನಕ್ಕೆ ಸಂಜೆ 6:30ವರೆಗೆ ಲಿಖಿತ ಕಾರಣ ತಿಳಿಸಿಲ್ಲ, ಇದು ಕಾನೂನು ಉಲ್ಲಂಘನೆ
ಜಾಮೀನು ರದ್ದುಪಡಿಸೋದು ಕಠಿಣ ಕ್ರಮವಾಗಲಿದೆ
ಯಾವುದೇ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿಲ್ಲ
ಅಪಹರಣದಲ್ಲಿ ಇವರ ಪಾತ್ರ, ಸೂಚನೆಗೆ ಸಾಕ್ಷಿ, ಆಧಾರಗಳಿಲ್ಲ
ದರ್ಶನ್ & ಎ-3 ಪವನ್ ಮಧ್ಯೆ ಮಾತುಕತೆ ನಡೆದಿಲ್ಲ
ವಾಟ್ಸಾಪ್ ಸಂದೇಶ ವಿನಿಮಯವಾಗಿಲ್ಲ
ಸಾಕ್ಷಿಗಳ ಹೇಳಿಕೆಗಳಲ್ಲೇ ಅನುಮಾನವಿದೆ
ಪವಿತ್ರಾಗೌಡ ಹೇಳಿದ್ದೇನು?
ನಾನು ಒಬ್ಬಂಟಿ ಪೋಷಕಳಾಗಿದ್ದೇನೆ ನನಗೆ ಒಬ್ಬಳೇ ಒಬ್ಬಳು ಮಗಳಿದ್ದಾಳೆ
ವಯಸ್ಸಾದ ಪೋಷಕರನ್ನೂ ನೋಡಿಕೊಳ್ಳಬೇಕಿದೆ
ನನಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ
ಮಹಿಳೆ ಆಗಿರೋದ್ರಿಂದ ಜಾಮೀನು ರದ್ದು ಕಠಿಣ ಕ್ರಮವಾಗಲಿದೆ
ಇದೆಲ್ಲದರ ಮಧ್ಯೆ ಸರ್ಕಾರಿ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ಕೆಲವು ಮಾಹಿತಿಗಳನ್ನು ನೀಡಿದ್ದರು.
ಮೃತ ರೇಣುಕಾಸ್ವಾಮಿ ದರ್ಶನ್ ಅಭಿಮಾನಿಯಾಗಿದ್ದ.
ದರ್ಶನ್-ಪವಿತ್ರಗೌಡ ಲಿವ್-ಇನ್ ಸಂಬಂಧದಲ್ಲಿದ್ದರು.
ಪವಿತ್ರಾಗೌಡಗೆ ರೇಣುಕಾಸ್ವಾಮಿ ಅವಹೇಳನಕಾರಿ ಸಂದೇಶ ಕಳುಹಿಸಿದ್ದ
ಇದರಿಂದಾಗಿ ಪಟ್ಟಣಗೆರೆ ಶೆಡ್‌ನಲ್ಲಿ ಕೊಲೆ ಮಾಡಲಾಯ್ತು
ಆರೋಪಿಗಳು ಕಿಡ್ನ್ಯಾಪ್, ಕೊಲೆಯಾದ ಸ್ಥಳದಲ್ಲಿದ್ದರು ಅನ್ನೋದು ತನಿಖೆಯಿಂದ ಬಯಲು
ಪಟ್ಟಣಗೆರೆ ಶೆಡ್‌ಗೆ ಪ್ರವೇಶ ಮಾಡೋದನ್ನು ಐವರು ಸಾಕ್ಷಿಗಳು ನೋಡಿದ್ದಾರೆ
ಘಟನಾ ಸ್ಥಳದಿಂದ ಸಂಗ್ರಹಿಸಲಾದ ಮಣ್ಣಿನ ಮಾದರಿ ದೃಢಪಟ್ಟಿದೆ
ಕೊಲೆ ವೇಳೆ ಎ-1 ಪವಿತ್ರಾ, ಎ-2 ದರ್ಶನ್ ಸಕ್ರಿಯ
ರೇಣುಕಾಸ್ವಾಮಿ ರಕ್ತದ ಕಲೆಗಳು ಆರೋಪಿ ಬಟ್ಟೆ ಮೇಲೆ ಕಂಡುಬಂದಿದೆ
ಕೊಲೆ ಮಾಡಲು ಬಳಸಿದ ಆಯುಧಗಳು ಮಾರಕವಲ್ಲ ಅಂತ ಹೈಕೋರ್ಟ್ ಹೇಳಿರುವುದು
ತಪ್ಪು ಸಾಕ್ಷಿ ಪುನೀತ್ ಹೇಳಿಕೆ ತಡವಾಗಿ ದಾಖಲಿಸಿರೋದಕ್ಕೆ ಸೂಕ್ತ ಕಾರಣ ನೀಡಲಾಗಿದೆ
ವಿಧಿವಿಜ್ಞಾನ, ಎಲೆಕ್ಟ್ರಾನಿಕ್ ಮತ್ತು ಸಿಡಿಆರ್ ಪುರಾವೆಗಳನ್ನು ಹೈಕೋರ್ಟ್ ಪರಿಗಣಿಸಿಲ್ಲ
ಎ-2 ದರ್ಶನ್‌ಗೆ ಅಪರಾಧದ ಹಿನ್ನೆಲೆ ಇದೆ
ಬೆನ್ನು ನೋವು ಅಂತ ವಿನಾಯ್ತಿ ಪಡೆದು ಮರುದಿನವೇ ಶೂಟಿಂಗ್‌ಗೆ ಹೋಗಿದ್ದಾರೆ
ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡಿರುವ ಸುಪ್ರೀಂಕೋರ್ಟ್ನ ದ್ವಿಸದಸ್ಯ ಪೀಠ ಮಹತ್ವದ ತೀರ್ಪನ್ನು ನೀಡುವ ಸಾಧ್ಯತೆ ಇದೆ. ಇದರ ಜೊತೆಗೆ ವಿಶೇಷ ಅಂದ್ರೆ `ಇದ್ರೆ ನೆಮ್ದಿಯಾಗ್ ಇರ್ಬೇಕ್’ ಅನ್ನೋ ಸಾಲುಗಳಲ್ಲಿ ಡೆವಿಲ್ ಸಿನಿಮಾ ಹಾಡು ಶುಕ್ರವಾರ (ಆ.15) ರಿಲೀಸ್ ಆಗಲಿದೆ.
ಬೆಂಗಳೂರು: ದ್ವೇಷ ಭಾಷಣ ಮಾಡುವವರ ವಿರುದ್ಧ, ಜನರ-ರಾಜ್ಯದ ನೆಮ್ಮದಿ ಕೇಡಿಸುವವರ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸೂಚನೆ ಕೊಟ್ಟಿದ್ದಾರೆ.
ತೆಲಂಗಾಣ ಮಾದರಿಯ ಟೋಪಿಗೆ ಸಿಎಂ ಅನುಮತಿ
ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕ ಪೊಲೀಸರಿಗೆ ಹೊಸ ಮಾದರಿಯ ಟೋಪಿಗೆ ಸಮ್ಮತಿ ಸೂಚಿಸಿದ್ದಾರೆ. ಐದಾರು ರಾಜ್ಯದ ಟೋಪಿಗಳನ್ನು ಪರಿಶೀಲನೆ ಮಾಡಿದ ಸಿಎಂ ತೆಲಂಗಾಣ ರಾಜ್ಯದ ಟೋಪಿಯನ್ನು ಆಯ್ಕೆ ಮಾಡಿದ್ದಾರೆ. ತೆಲಂಗಾಣ ರಾಜ್ಯದ ಟೋಪಿಯನ್ನ ಹೆಡ್‌ಕಾನ್ಸ್ಟೇಬಲ್‌ಗೆ ಹಾಕಿಸಿ, ಪರಿಶೀಲನೆ ಮಾಡಿ ಅಂತಿಮಗೊಳಿಸಿದ್ದಾರೆ. ಇದನ್ನೂ ಓದಿ: ಜುಲೈ 1 ರಿಂದ ವಿದ್ಯುತ್ ಸಂಪರ್ಕಕ್ಕೆ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯ – ಗ್ರಾಹಕರಿಗೆ ಏನು ಅನುಕೂಲ?
ಕಳೆದ ಅಧಿವೇಶನದಲ್ಲಿ ಶಾಸಕ ಸಿ.ಎನ್ ಮಂಜೇಗೌಡ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಒಂದೇ ರೀತಿಯ ಟೋಪಿ ನೀಡಬೇಕೆಂದು ಪ್ರಶ್ನೆ ಮಾಡಿದ್ದರು. ಇದನ್ನು ಪರಿಶೀಲನೆ ನಡೆಸಿ ವರದಿ ನೀಡುವಂತೆ ಗೃಹ ಸಚಿವ ಡಾ.ಪರಮೇಶ್ವರ್ ಅಂದಿನ ಡಿಜಿಐಜಿಪಿ ಅಲೋಕ್ ಮೋಹನ್‌ಗೆ ಸೂಚಿಸಿದ್ದರು. ಕೆಎಸ್‌ಆರ್‌ಪಿ ಉಮೇಶ್ ಕುಮಾರ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಟೋಪಿ ಬದಲಾವಣೆ ಕುರಿತು ಸಿವಿಲ್, ಕೆಎಸ್‌ಆರ್‌ಪಿ, ಸಿಎಆರ್, ಡಿಎಆರ್, ಹಾಗೂ ಐಎಸ್‌ಡಿ ಸೇರಿ ಪೊಲೀಸ್ ಇಲಾಖೆಯ ಎಲ್ಲಾ ವಿಭಾಗಗಳ ಹೆಡ್‌ಕಾನ್ಸಟೇಬಲ್ ಹಾಗೂ ಕಾನ್ಸಟೇಬಲ್‌ಗಳಿಂದ ಸಮಿತಿ ಅಭಿಪ್ರಾಯ ಸಂಗ್ರಹಿಸಿತ್ತು, ಅಲ್ಲದೆ ಕೇರಳ, ಮಹಾರಾಷ್ಟ್ರ, ಆಂದ್ರಪ್ರದೇಶ, ತಮಿಳುನಾಡು ಸೇರಿ ಹೊರ ರಾಜ್ಯದ ಪೊಲೀಸರ ಟೋಪಿ ಕುರಿತು ಮಾಹಿತಿ ಕಲೆ ಹಾಕಲಾಗಿತ್ತು.
ಈ ಎಲ್ಲಾ ಅಭಿಪ್ರಾಯ ಬಳಿಕ ಮೂರು ಬಾರಿ ಸಭೆ ಸೇರಿ, ಸಮಾಲೋಚನೆ ನಡೆಸಿ ಅಂತಿಮವಾಗಿ ತೆಲಂಗಾಣ ರಾಜ್ಯದ ಟೋಪಿಯನ್ನು ಸಿಎಂ ಸಿದ್ದರಾಮಯ್ಯ ಅಂತಿಮಗೊಳಿಸಿದ್ದಾರೆ.
ಬೆಂಗಳೂರು: ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿಯಿಂದ ಸ್ಪರ್ಧೆ ಮಾಡಿ ಸೋಲನುಭವಿಸಿದ್ದ ಬಿಜೆಪಿ ಅಭ್ಯರ್ಥಿ ಮಣಿಕಂಡ ರಾಥೋಡ್ ವಿರುದ್ಧ ಸರಿಯಾಗಿ ಒಂದು ಕೇಸ್ ಹಾಕೋದಕ್ಕೆ ಆಗ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ನೃಪತುಂಗ ರಸ್ತೆಯಲ್ಲಿರುವ ಡಿ.ಜಿ.ಐಜಿಪಿ ಕಚೇರಿಯಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಕಲಬುರಗಿ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಮಾತನಾಡಿ, ಮಣಿಕಂಠ ರಾಥೋಡ್ ಬಹಿರಂಗವಾಗಿ ಅವರನ್ನು ಕೊಲೆ ಮಾಡುತ್ತೇನೆ, ಇವರನ್ನು ಕೊಲೆ ಮಾಡುತ್ತೇನೆ ಎಂದು ಹೇಳಿ ವಿಡಿಯೋ ಮಾಡಿ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಮಾಡಿದ್ದ. ಆತನ ವಿರುದ್ಧ ಕೇಸ್ ಹಾಕೋದಕ್ಕೆ ನಿಮಗೆ ಸಾಧ್ಯವಾಗ್ತಿಲ್ಲ ಎಂದಿದ್ದಾರೆ.ಇದನ್ನೂ ಓದಿ: ಹೊಸ ಆದಾಯ ತೆರಿಗೆ ನಿಯಮ ಜಾರಿ – ಸುಳ್ಳು ಮಾಹಿತಿ ನೀಡಿದ್ರೆ 200% ದಂಡ, ಜೈಲು
ಅಂಥವನ ಮೇಲೆ ನೀವು ಕಠಿಣ ಕ್ರಮಕೈಗೊಳ್ಳದೇ ಹೋದರೆ, ಬೇರೆಯವರಿಗೆ ಅವನು ಪ್ರೇರಣೆಯಾಗುತ್ತಾನೆ. ಅವನ ರೀತಿ ಮತ್ತಷ್ಟು ಮಂದಿ ಹುಟ್ಟಿಕೊಳ್ಳುತ್ತಾರೆ, ಹಾಗಾಗಿ ಮತ್ತೆ ಹಾಗೇನಾದರೂ ಮಾಡಿದ್ದು ಕಂಡುಬಂದರೆ ಕಠಿಣ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕ ಪೊಲೀಸರಿಗೆ ಹೊಸ ಮಾದರಿಯ ಟೋಪಿಗೆ ಸಮ್ಮತಿ ಸೂಚಿಸಿದ್ದಾರೆ. ಐದಾರು ರಾಜ್ಯದ ಟೋಪಿಗಳನ್ನು ಪರಿಶೀಲನೆ ಮಾಡಿದ ಸಿಎಂ ತೆಲಂಗಾಣ ರಾಜ್ಯದ ಟೋಪಿಯನ್ನು ಆಯ್ಕೆ ಮಾಡಿದ್ದಾರೆ. ತೆಲಂಗಾಣ ರಾಜ್ಯದ ಟೋಪಿಯನ್ನ ಹೆಡ್ ಕಾನ್ಸಟೇಬಲ್‌ಗೆ ಹಾಕಿಸಿ, ಪರಿಶೀಲನೆ ಮಾಡಿ ಅಂತಿಮಗೊಳಿಸಿದ್ದಾರೆ.
ರಾಜ್ಯದಲ್ಲಿ ಅಪರಾಧಗಳ ಪ್ರಮಾಣ ಕಡಿಮೆ ಆಗಿರುವುದು ಸಮಾಧಾನದ ಸಂಗತಿಯಾದರೂ ಪೊಲೀಸರ ತನಿಖೆಯ ಗುಣಮಟ್ಟ ಕಡಿಮೆಯಾಗಿದ್ದು ಇದನ್ನು ಕೂಡ ಹೆಚ್ಚಿಸಬೇಕಿದೆ.
ಬೀದರ್ ನಲ್ಲಿ ನಡೆದ ದರೋಡೆ ಪ್ರಕರಣದ ಆರೋಪಿ ಯಾರು ಎಂದು ಗೊತ್ತಾಗಿದ್ದರೂ 5 ತಿಂಗಳುಗಳಿಂದ ಆತನನ್ನು ಬಂಧಿಸಲು ಸಾಧ್ಯವಾಗಲಿಲ್ಲ ಎನ್ನುವುದನ್ನು ಒಪ್ಪಲು ಸಾಧ್ಯವಿಲ್ಲ.
ಕಳೆದ ಅಧಿವೇಶನದಲ್ಲಿ ಶಾಸಕ ಸಿ.ಎನ್ ಮಂಜೇಗೌಡ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಒಂದೇ ರೀತಿಯ ಟೋಪಿ ನೀಡಬೇಕೆಂದು ಪ್ರಶ್ನೆ ಮಾಡಿದ್ದರು. ಇದನ್ನು ಪರಿಶೀಲನೆ ನಡೆಸಿ ವರದಿ ನೀಡುವಂತೆ ಗೃಹ ಸಚಿವ ಡಾ.ಪರಮೇಶ್ವರ್ ಅಂದಿನ ಡಿಜಿಐಜಿಪಿ ಅಲೋಕ್ ಮೋಹನ್‌ಗೆ ಸೂಚಿಸಿದ್ದರು. ಕೆಎಸ್‌ಆರ್‌ಪಿ ಉಮೇಶ್ ಕುಮಾರ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಟೋಪಿ ಬದಲಾವಣೆ ಕುರಿತು ಸಿವಿಲ್, ಕೆಎಸ್‌ಆರ್‌ಪಿ, ಸಿಎಆರ್, ಡಿಎಆರ್, ಹಾಗೂ ಐಎಸ್‌ಡಿ ಸೇರಿ ಪೊಲೀಸ್ ಇಲಾಖೆಯ ಎಲ್ಲಾ ವಿಭಾಗಗಳ ಹೆಡ್‌ಕಾನ್ಸಟೇಬಲ್ ಹಾಗೂ ಕಾನ್ಸಟೇಬಲ್‌ಗಳಿಂದ ಸಮಿತಿ ಅಭಿಪ್ರಾಯ ಸಂಗ್ರಹಿಸಿತ್ತು, ಅಲ್ಲದೆ ಕೇರಳ, ಮಹಾರಾಷ್ಟ್ರ, ಆಂದ್ರಪ್ರದೇಶ, ತಮಿಳುನಾಡು ಸೇರಿ ಹೊರ ರಾಜ್ಯದ ಪೊಲೀಸರ ಟೋಪಿ ಕುರಿತು ಮಾಹಿತಿ ಕಲೆ ಹಾಕಲಾಗಿತ್ತು.