Tag: Karnataka Music

  • ಅಭಿಮಾನ ಆವೇಶವಾಗಬಾರದು, ಅಭಿಮಾನ ಹಾಡಿನಂತಿರಬೇಕು: ಪತ್ರ ಬರೆದ ಹಂಸಲೇಖ

    ಅಭಿಮಾನ ಆವೇಶವಾಗಬಾರದು, ಅಭಿಮಾನ ಹಾಡಿನಂತಿರಬೇಕು: ಪತ್ರ ಬರೆದ ಹಂಸಲೇಖ

    ಬೆಂಗಳೂರು: ಇತ್ತೀಚೆಗಷ್ಟೇ ಪೇಜಾವರ ಶ್ರೀಗಳ ಬಗ್ಗೆ ಅವಹೇಳನಕಾರಿ ಹೇಳಿಕೆಯೊಂದನ್ನು ನೀಡಿದ ಬಳಿಕ ಕ್ಷಮೆ ಕೇಳಿದ್ದ ಹಂಸಲೇಖ ಅವರು ತಮ್ಮ ಆರೋಗ್ಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವದಂತಿ ಕುರಿತು ಸ್ಪಷ್ಟನೆ ನೀಡಿದ್ದಾರೆ.

    ತಮ್ಮ ಆರೋಗ್ಯ ಕ್ಷೇಮವಾಗಿದ್ದು, ಯಾರು ಭಯ ಪಡುವ ಅಗತ್ಯವಿಲ್ಲ. ಸರ್ಕಾರ ಎಲ್ಲ ರೀತಿಯ ಭದ್ರತೆಯನ್ನು ನೀಡಿದೆ ಹಾಗೂ ಲಕ್ಷಾಂತರ ಅಭಿಮಾನಿಗಳು ನನಗೆ ಧೈರ್ಯ ತುಂಬಿದ್ದಾರೆ ಎಂದು ನಾದ ಬ್ರಹ್ಮ ಹಂಸಲೇಖ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಕೇಳಲಿದೆ ಜೆಸಿಬಿ ಸದ್ದು – ಶೀಘ್ರವೇ ರಾಜಕಾಲುವೆ ಒತ್ತುವರಿ ತೆರವು

    ಪೋಸ್ಟ್‌ನಲ್ಲಿ ಏನಿದೆ?
    ಪೂಜ್ಯ ಕರ್ನಾಟಕವೇ.. ನಾನು ಆರೋಗ್ಯವಾಗಿದ್ದೇನೆ. ನನಗೆ ಆರೋಗ್ಯ ತಪ್ಪಿದೆ ಎಂದು ಇಡೀ ಕರ್ನಾಟಕದಿಂದ ಕರೆಗಳು ಬರುತ್ತಿವೆ. ಎಲ್ಲರೂ ಆರೋಗ್ಯದ ಕುರಿತು ವಿಚಾರಿಸುತ್ತಿದ್ದಾರೆ. ನನಗೆ ಗೊತ್ತಾಗಿದೆ ನಿಮ್ಮ ಪ್ರೀತಿ ಎಷ್ಟು ವಿಶಾಲವಾಗಿದೆ ಎಂದು. ಈ ಪ್ರೀತಿಯನ್ನು ಪಡೆಯೋಕೆ ನಾನು ತುಂಬಾನೇ ಸವೆದಿದ್ದೀನಿ. ಸಹಿಸಿದ್ದೀನಿ. ಇದರ ಸುಖ ಇವತ್ತು ಅನುಭವಿಸುತ್ತಿದ್ದೀನಿ.

    ನಾನು ಕೇಳದೆ ನನ್ನ ಮನೆಗೆ ಸರ್ಕಾರ ಭದ್ರತೆಯನ್ನು ಕೊಟ್ಟಿದೆ. ಇಡೀ ಕರ್ನಾಟಕದ ಲಕ್ಷಾಂತರ ಜನ ಅಭಿಮಾನಿಗಳು ನನ್ನ ಪರವಾಗಿ ಮಾತನಾಡುತ್ತಿದ್ದಾರೆ. ನನ್ನ ಉದ್ಯಮದ ಆತ್ಮೀಯರು ನನಗೆ ಧೈರ್ಯ ತೋರಿದ್ದಾರೆ. ಈಗ ಇಡೀ ಕರ್ನಾಟಕವೇ ನನ್ನನ್ನು ಪ್ರೀತಿಯಲ್ಲಿ ಮುಳುಗಿಸಿ ಅಭಿಮಾನದಲ್ಲಿ ತೇಲಿಸಿದ್ದಾರೆ. ಇದನ್ನೂ ಓದಿ: ಇಳಕಲ್ ಸೀರೆಯುಟ್ಟು ಹಾಟ್ ಪೋಸ್ ಕೊಟ್ಟ ರಾಗಿಣಿ

    ಅಭಿಮಾನ ಆವೇಶವಾಗಬಾರದು, ಆವೇಶ ಅವಗಢಗಳಿಗೆ ಕಾರಣವಾಗಬಾರದು. ಅಭಿಮಾನ ಹಾಡಿನಂತಿರಬೇಕು. ಹಾಡು ಕೇಳಿಸುತ್ತದೆ. ಹಾಡು ಮುಟ್ಟುಸುತ್ತದೆ ಎಂದು ಹಂಸಲೇಖ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಪೋಸ್ಟ್‌ ಅನ್ನು ಹಂಚಿಕೊಂಡಿದ್ದಾರೆ.

  • ಪುರಂದರಗಡ ಅಲ್ಲ, ತೀರ್ಥಹಳ್ಳಿ ತಾಲೂಕಿನ ಆರಗ ಪುರಂದರ ದಾಸರ ಜನ್ಮಸ್ಥಳ!

    ಪುರಂದರಗಡ ಅಲ್ಲ, ತೀರ್ಥಹಳ್ಳಿ ತಾಲೂಕಿನ ಆರಗ ಪುರಂದರ ದಾಸರ ಜನ್ಮಸ್ಥಳ!

    ಶಿವಮೊಗ್ಗ: ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹ ಎಂದೇ ಖ್ಯಾತಿಗಳಿಸಿರುವ ಪುರಂದರದಾಸರ ಮೂಲ ಸ್ಥಳ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆರಗ ಪ್ರದೇಶ ಎಂದು ಸಂಶೋಧಕರು ಗುರುತಿಸಿದ್ದಾರೆ.

    ಇದೂವರೆಗೂ ಮಹಾರಾಷ್ಟ್ರದ ಪುರಂದರಘಡ ಇವರ ಮೂಲಸ್ಥಾನ ಎಂದು ಗುರುತಿಸಿಲಾಗಿತ್ತು. ಆದರೆ, ಪುರಂದರಗಡದಲ್ಲಿ ಪುರಂದರ ಎಂಬ ಹೆಸರನ್ನು ಬಿಟ್ಟರೆ ಬೇರೆ ಯಾವುದೇ ಸಂಬಂಧ ಇಲ್ಲ ಎಂಬುದನ್ನು ಇತಿಹಾಸಕಾರರು ಪತ್ತೆ ಹಚ್ಚಿದ್ದಾರೆ. 2016ರಲ್ಲಿ ಪುರಂದರದಾಸರ ಹುಟ್ಟೂರಿನ ಬಗ್ಗೆ ಸಂಶೋಧನೆ ನಡೆಸಿ, ವರದಿ ಸಲ್ಲಿಸಲು ಸರ್ಕಾರ ಪದ್ಮಭೂಷಣ ಆರ್.ಕೆ.ಪದ್ಮನಾಭ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿತ್ತು.

    ಈ ಸಮಿತಿ ತನ್ನ ವರದಿಯನ್ನು ಸಲ್ಲಿಸಿದ್ದು, ಪುರಂದರದಾಸರ ಮೂಲಸ್ಥಳ ಆರಗ ಎಂದು ದೃಢಪಡಿಸಿದೆ. 1484ರಲ್ಲಿ ಜನಿಸಿದ್ದ ಪುರಂದರದಾಸರು 1564ರಲ್ಲಿ ಕಾಲವಾದರು. ಐದು ಲಕ್ಷ ಕೀರ್ತನೆ ಬರೆಯುವ ಗುರಿ ಇಟ್ಟುಕೊಂಡಿದ್ದ ಪುರಂದರದಾಸರು 4 ಲಕ್ಷದ 75 ಸಾವಿರ ಕೀರ್ತನೆಗಳನ್ನು ಬರೆದಿದ್ದಾರೆ. ಇವರ ಮೂಲಕವೇ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಭದ್ರ ಬುನಾದಿ ಹಾಕಿದ್ದರು,

    ಸಂಗೀತ ಪಿತಾಮಹಾರ ಮೂಲಕ ಕರ್ನಾಟಕ ಅದರಲ್ಲೂ ಮಲೆನಾಡಿನ ತೀರ್ಥಹಳ್ಳಿ ಎಂಬ ವಿಷಯ ಸಂಗೀತಾಸಕ್ತರು ಹಾಗೂ ಇತಿಹಾಸ ಪ್ರೇಮಿಗಳಲ್ಲಿ ರೋಮಾಂಚನ ಮೂಡಿಸಿದೆ. ರಾಜ್ಯ ಸರ್ಕಾರ ಪ್ರದೇಶವನ್ನು ವಿಶೇಷ ಸ್ಮಾರಕವನ್ನಾಗಿ ಘೋಷಣೆ ಮಾಡಬೇಕೆಂಬ ಬೇಡಿಕೆ ಈಗ ಸಂಗೀತಾ ಪ್ರೇಮಿಗಳಿಂದ ವ್ಯಕ್ತವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ https://www.instagram.com/publictvnews/