Tag: Karnataka HighCourt

  • ಹೈಕೋರ್ಟ್‌ ಆದೇಶ ಉಲ್ಲಂಘನೆ – ವಿಶ್ವ ಹಿಂದೂ ಪರಿಷತ್​ ಮುಖಂಡ ಶರಣ್ ಪಂಪ್ ವೆಲ್‌ಗೆ 2 ಲಕ್ಷ ದಂಡ

    ಹೈಕೋರ್ಟ್‌ ಆದೇಶ ಉಲ್ಲಂಘನೆ – ವಿಶ್ವ ಹಿಂದೂ ಪರಿಷತ್​ ಮುಖಂಡ ಶರಣ್ ಪಂಪ್ ವೆಲ್‌ಗೆ 2 ಲಕ್ಷ ದಂಡ

    ಚಿತ್ರದುರ್ಗ: ಹೈಕೋರ್ಟ್‌ ಆದೇಶ ಉಲ್ಲಂಘನೆ ಹಿನ್ನೆಲೆ ವಿಶ್ವ ಹಿಂದೂ ಪರಿಷತ್​​ ಸಹ ಕಾರ್ಯದರ್ಶಿ ಶರಣ್ ಪಂಪ್​​ವೆಲ್​​ಗೆ (Sharan Pumpwell) ಹೈಕೋರ್ಟ್ 2 ಲಕ್ಷ ರೂ. ದಂಡ (Court Fine) ವಿಧಿಸಿದೆ.

    ರಾಜ್ಯ ಲೀಗಲ್ ಸರ್ವೀಸ್ ಅಥಾರಿಟಿಗೆ 1 ಲಕ್ಷ ರೂ, ಮತ್ತು ಪೊಲೀಸ್ ಕ್ಷೇಮಾಭಿವೃದ್ಧಿ ನಿಧಿಗೆ 1 ಲಕ್ಷ ರೂ ನೀಡಲು ಬುಧವಾರ ಕೋರ್ಟ್‌ (Karnataka Highcourt) ಆದೇಶ ಹೊರಡಿಸಲಾಗಿದೆ. ಇದನ್ನೂ ಓದಿ: ಗೆಳೆಯನ ಬರ್ತ್‌ಡೇ ಸಂಭ್ರಮದಲ್ಲಿದ್ದ ಯುವಕ ಹೊಳೆಗೆ ಕಾಲುಜಾರಿ ಬಿದ್ದು ನೀರುಪಾಲು 

    ಇತ್ತೀಚೆಗೆ ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಹಿನ್ನಲೆ ಜಿಲ್ಲೆ ಪ್ರವೇಶಿಸದಂತೆ ಜಿಲ್ಲಾಡಳಿತ ಶರಣ್ ಪಂಪ್​​ವೆಲ್​​ಗೆ ನಿರ್ಬಂಧ ವಿಧಿಸಿತ್ತು. ಈ ನಿರ್ಬಂಧ ಪ್ರಶ್ನಸಿ ಶರಣ್ ಪಂಪ್​​ವೆಲ್​​ ಹೈಕೋರ್ಟ್ ಮೊರೆ ಹೋಗಿದ್ದರು. ಬಳಿಕ ಕೆಲ ಷರತ್ತು ವಿಧಿಸಿ ಜಿಲ್ಲಾಡಳಿತದ ನಿರ್ಬಂಧವನ್ನು ಹೈಕೋರ್ಟ್ ತೆರವುಗೊಳಿಸಿತ್ತು. ಇದನ್ನೂ ಓದಿ: `ಬಿಗ್ ಬಾಸ್’ಗೆ ರಿಲೀಫ್ ಕೊಡುತ್ತಾ ಸರ್ಕಾರ? – ಜಿಲ್ಲಾಡಳಿತಕ್ಕೆ ಜಾಲಿವುಡ್ ಕೊಟ್ಟ ಅರ್ಜಿಯಲ್ಲಿ ಏನಿದೆ..?

    ಸೆ.13ರಂದು ಮಹಾಗಣಪತಿ ಶೋಭಾಯಾತ್ರೆ ವೇಳೆ ದರ್ಶನಕ್ಕೆ ಅವಕಾಶ ಕಲ್ಪಿಸಿತ್ತು. ಅಂದು ಬೆಳಗ್ಗೆ 10:30 ರಿಂದ 12:30ರ ವರೆಗೆ ದರ್ಶನಕ್ಕೆ ಕೋರ್ಟ್‌ ಅವಕಾಶ ಕಲ್ಪಿಸಿತ್ತು. ಆದ್ರೆ ಪಂಪ್‌ವೆಲ್‌ 12:45ರ ವರೆಗೆ ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದರು. ಅಲ್ಲದೇ ಶೋಭಾಯಾತ್ರೆಯಲ್ಲಿ ಭಾಷಣ ಕೂಡ ಮಾಡಿದ್ದರು. ಇದರಿಂದ ಆದೇಶ ಉಲ್ಲಂಘನೆ ಬಗ್ಗೆ ಪೊಲೀಸರು ಹೈಕೋರ್ಟ್‌ ಗಮನಕ್ಕೆ ತಂದಿದ್ದರು. ಬಳಿಕ ಆದೇಶ ಉಲ್ಲಂಘಿಸಿದ್ದಕ್ಕೆ ಹೈಕೋರ್ಟ್ ದಂಡ ವಿಧಿಸಿ ಆದೇಶ ಹೊರಡಿಸಿತು. ಇದನ್ನೂ ಓದಿ: ಬಿಗ್‌ ಬಾಸ್‌ ತಂಡಕ್ಕೆ ಮತ್ತೆ ಶಾಕ್‌ – ಕೆಲವೇ ಹೊತ್ತಲ್ಲಿ ಈಗಲ್‌ಟನ್ ರೆಸಾರ್ಟ್‌ನಿಂದ 17 ಸ್ಪರ್ಧಿಗಳು ಶಿಫ್ಟ್ ಬೇರೆಡೆಗೆ ಶಿಫ್ಟ್‌

  • ಬೆಂಗಳೂರಿನಲ್ಲಿರೊ ಇಸ್ರೇಲ್ ರಾಯಭಾರ ಕಚೇರಿ, ಹೈಕೋರ್ಟ್‌ಗೆ RDX ಇಟ್ಟಿರೋದಾಗಿ ಇ-ಮೇಲ್‌ ಬೆದರಿಕೆ

    ಬೆಂಗಳೂರಿನಲ್ಲಿರೊ ಇಸ್ರೇಲ್ ರಾಯಭಾರ ಕಚೇರಿ, ಹೈಕೋರ್ಟ್‌ಗೆ RDX ಇಟ್ಟಿರೋದಾಗಿ ಇ-ಮೇಲ್‌ ಬೆದರಿಕೆ

    ಬೆಂಗಳೂರು: ನಗರದಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಗೆ ಹಾಗೂ ಹೈಕೋರ್ಟ್‌ಗೆ RDX ಇಟ್ಟಿರೋದಾಗಿ ಇ-ಮೇಲ್‌ ಮೂಲಕ ಬೆದರಿಕೆ ಸಂದೇಶ ಬಂದಿದೆ. ಶುಕ್ರವಾರ ಪ್ರಾರ್ಥನೆ ವೇಳೆ ಸ್ಫೋಟ ಆಗುತ್ತೆ ಎಂದೂ ಸಹ ಮೇಲ್​ನಲ್ಲಿ ತಿಳಿಸಲಾಗಿದೆ.

    ಸೆ.22 ರಂದು Cho_ramaswamy@hotmail ಎಂಬ ಐಡಿಯಿಂದ ಮೇಲ್ ಕಳಿಸಲಾಗಿದೆ. ಕೂಡಲೆ ಕಾರ್ಯಪ್ರವೃತ್ತರಾದ ಪೊಲೀಸರು ರಿಸ್ಕ್ ತೆಗೆದುಕೊಳ್ಳದೇ ಮೇಲ್ ಬಂದ ಬಳಿಕ ಸರ್ಚ್ ಆಪರೇಷನ್ ಕೈಗೊಂಡಿದ್ದಾರೆ. ತೀವ್ರ ತಪಾಸಣೆ ಬಳಿಕ ಇದು ಹುಸಿ ಬೆದರಿಕೆ ಮೇಲ್ ಎಂಬುದು ದೃಢವಾಗಿದೆ. IP ಅಡ್ರೆಸ್ ಮೂಲಕ ಆರೋಪಿ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

    ಪದೇ ಪದೇ ರಾಮಸ್ವಾಮಿ ಎಂಬ ಇ.ಮೇಲ್ ಐಡಿಯಿಂದ ಬೆದರಿಕೆ ಇ-ಮೇಲ್ ಬರುತ್ತಿದ್ದರಿಂದ ರಾಮಸ್ವಾಮಿ ಎಂಬ ಇ-ಮೇಲ್ ಐಡಿ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಅಜ್ಞಾತ ಸ್ಥಳದಿಂದ ಬೆದರಿಕೆ ಇ.ಮೇಲ್ ಮಾಡಿ ಬೆದರಿಕೆ ಹಾಕುತ್ತಿರುವುದರಿಂದ ಬೆಂಗಳೂರು ಪೊಲೀಸರಿಗೆ ಕಿಡಿಗೇಡಿಯನ್ನ ಪತ್ತೆ ಹಚ್ಚುವುದು ದೊಡ್ಡ‌ ಸವಾಲಾಗಿದೆ. ನಿರಂತರವಾಗಿ Cho_ramaswamy@hotmail ಎಂಬ ಮೇಲ್ ಐಡಿ ಹಿಂದೆ ಬಿದ್ದಿದ್ದರು ಪೊಲೀಸರಿಗೆ ಸಿಗದೇ ಚಳ್ಳೆಹಣ್ಣು ತಿನ್ನಿಸುತ್ತಿದ್ದಾನೆ.

    ಸದ್ಯ ಪೊಲೀಸರು ಹಾಟ್ ಮೇಲ್‌ಗೆ ಪತ್ರ ಬರೆದು ಮಾಹಿತಿ ಕೇಳಿದ್ದು, ಹಾಟ್ ಮೇಲ್ ನಿಂದ ಯಾವುದೇ ರೆಸ್ಪಾನ್ಸ್ ಸಿಕ್ಕಿಲ್ಲ. ಹೀಗಾಗಿ IP ಅಡ್ರೆಸ್ ಮೂಲಕ ಆರೋಪಿ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಘಟನೆ ಬಗ್ಗೆ ವಿಧಾನಸೌಧ ಹಾಗು ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿದ್ದು, 10 ತಂಡಗಳನ್ನ ಮಾಡಿ ಆರೋಪಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

  • ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ಗೆ ಆಹ್ವಾನ ವಿಚಾರ – ಇಂದು ಹೈಕೋರ್ಟ್‌ನಲ್ಲಿ ಮೂರು ಅರ್ಜಿಗಳ ವಿಚಾರಣೆ

    ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ಗೆ ಆಹ್ವಾನ ವಿಚಾರ – ಇಂದು ಹೈಕೋರ್ಟ್‌ನಲ್ಲಿ ಮೂರು ಅರ್ಜಿಗಳ ವಿಚಾರಣೆ

    ಬೆಂಗಳೂರು/ಮೈಸೂರು: ನಾಡಹಬ್ಬ ದಸರಾ ಉದ್ಘಾಟಕರಾಗಿ ಬಾನು ಮುಷ್ತಾಕ್‌ (Banu Mushtaq) ಆಯ್ಕೆ ವಿರೋಧಿಸಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಮೂರು ಪಿಐಎಲ್ (ಸಾರ್ವಜನಿಕ ಹಿತಾಸಕ್ತಿ ಅರ್ಜಿ) ಅರ್ಜಿಗಳ ವಿಚಾರಣೆ ನಡೆಯಲಿದೆ. ಸರ್ಕಾರದ ಕ್ರಮ ಪ್ರಶ್ನಿಸಿ ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha), ಗಿರೀಶ್ ಕುಮಾರ್ ಮತ್ತು ಗೌರವ್‌ ಎಂಬವರಿಂದ ಪಿಐಎಲ್ ಸಲ್ಲಿಕೆಯಾಗಿದ್ದು, ಹೈಕೋರ್ಟ್ ಮುಖ್ಯ ನ್ಯಾ. ವಿಭು ಬಕ್ರು ನೇತೃತ್ವದ ವಿಭಾಗೀಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ.

    ದಸರಾ (Mysuru Dasara) ಉದ್ಘಾಟನೆ ವೇಳೆ ಚಾಮುಂಡೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಬೇಕು, ವೇದ ಮಂತ್ರ, ಧಾರ್ಮಿಕ ಆಚರಣೆಗಳೊಂದಿಗೆ ಉದ್ಘಾಟನೆ ಮಾಡುವ ಸಂಪ್ರದಾಯವಿದೆ. ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ಭಾನು ಮುಷ್ತಾಕ್ ಅವರ ಆಯ್ಕೆ ಮಾಡಿದ್ದು ಸರ್ಕಾರದ ನಿರ್ಧಾರದಿಂದ ಹಿಂದೂಗಳ ಭಾವನೆಗೆ ಘಾಸಿ ಉಂಟಾಗಿದೆ. ಹೀಗಾಗಿ ಬಾನು ಮುಷ್ತಾಕ್ ರಿಗೆ ನೀಡಿದ ಆಹ್ವಾನ ಹಿಂಪಡೆಯಲು ನಿರ್ದೇಶನ ನೀಡಬೇಕು ಅನ್ನೋದು ಅರ್ಜಿದಾರರ ಮನವಿ ಆಗಿದೆ. ಇದನ್ನೂ ಓದಿ: ಪ್ರಮೋದಾ ದೇವಿ ಒಡೆಯರ್‌ಗೆ ದಸರಾಗೆ ಅಧಿಕೃತ ಆಹ್ವಾನ ನೀಡಿದ ಹೆಚ್‌.ಸಿ ಮಹದೇವಪ್ಪ

    ದಸರಾ ಹಿಂದೂ ಧಾರ್ಮಿಕ ಸಂಪ್ರದಾಯ ಅವಿಭಾಜ್ಯ ಭಾಗವಾಗಿದ್ದು, ಹಿಂದೂ ಆಗಮಿಕ ಪದ್ದತಿ ಪ್ರಕಾರ ಕಟ್ಟುನಿಟ್ಟಾಗಿ ದಸರಾ ಉದ್ಘಾಟನೆ ನಡೆಸಲು ನಿರ್ದೇಶನ ಕೋರಿ ಅರ್ಜಿ ಸಲ್ಲಿಸಲಾಗಿದೆ.

    ಮೂರು ಪ್ರತ್ಯೇಕ ಪಿಐಎಲ್ ಗಳ ಮೂಲಕ ಮನವಿ ಸಲ್ಲಿಸಲಾಗಿದ್ದು, ಇಂದು ಹೈಕೋರ್ಟ್ ನಲ್ಲಿ ದಸರಾ ಉದ್ಘಾಟನೆ ವಿವಾದ ಇತ್ಯರ್ಥವಾಗಲಿದೆ. ಇದನ್ನೂ ಓದಿ: ಮೈಸೂರು | ಬಿಜೆಪಿಗೂ ಮುನ್ನವೇ ಹಿಂದೂ ಜಾಗರಣ ವೇದಿಕೆಯಿಂದ ʻಚಾಮುಂಡಿ ಬೆಟ್ಟ ಚಲೋ’ ಯಾತ್ರೆ

    Banu Mushtaq Dasara inauguration Matter Three PLI petitions to be heard in the High Court today

  • ಕೋರ್ಟ್‌ಗೆ ಹಾಜರಾಗಲು ಮತ್ತೆ ಸಮಯ ಕೇಳಿದ ಪ್ರಭು ಚೌಹಾಣ್ – 1 ಲಕ್ಷ ದಂಡ ವಿಧಿಸಿದ ಕಲಬುರಗಿ ಪೀಠ

    ಕೋರ್ಟ್‌ಗೆ ಹಾಜರಾಗಲು ಮತ್ತೆ ಸಮಯ ಕೇಳಿದ ಪ್ರಭು ಚೌಹಾಣ್ – 1 ಲಕ್ಷ ದಂಡ ವಿಧಿಸಿದ ಕಲಬುರಗಿ ಪೀಠ

    ಬೀದರ್: ಕೋರ್ಟ್‌ಗೆ ಹಾಜರಾಗಲು ಪದೇ ಪದೇ ಸಮಯ ಕೇಳುತ್ತಿರುವ ಹಿನ್ನೆಲೆ ಕರ್ನಾಟಕ ಹೈಕೋರ್ಟ್‌ನ (Karnataka Highcourt) ಕಲಬುರಗಿ ಪೀಠ (Kalaburagi Bench) ಔರಾದ್ (Aurad) ಶಾಸಕ ಪ್ರಭು ಚೌಹಾಣ್‌ಗೆ  (Prabhu Chauhan) 1 ಲಕ್ಷ ರೂ. ದಂಡ ವಿಧಿಸಿದೆ.

    ಶಾಸಕ ಪ್ರಭು ಚೌಹಾಣ್ ವಿರುದ್ಧ ಜಾತಿ ವಿವಾದಕ್ಕೆ ಸಂಬಂಧಿಸಿದಂತೆ ಕಲಬುರಗಿ ಪೀಠದಲ್ಲಿ ವ್ಯಕ್ತಿಯೊಬ್ಬರು ದಾವೆ ಹೂಡಿದ್ದರು. ಈ ಸಂಬಂಧ ಕೋರ್ಟ್‌ಗೆ ಹಾಜರಾಗಲು ಚೌಹಾಣ್ ಪರ ವಕೀಲರು ಪದೇ ಪದೇ ಸಮಯ ಕೇಳುತ್ತಿರುವ ಹಿನ್ನೆಲೆ ದಂಡ ವಿಧಿಸಲಾಗಿದೆ.ಇದನ್ನೂ ಓದಿ: ಜಪಾನ್‌ನ ಹೈ-ಸ್ಪೀಡ್ ಬುಲೆಟ್ ರೈಲಿನಲ್ಲಿ ಮೋದಿ ಸವಾರಿ

    ಕಳೆದ ಬಾರಿಯೂ ಕೋರ್ಟ್‌ಗೆ ಹಾಜರಾಗದೆ ಚೌಹಾಣ್ ಪರ ವಕೀಲರು ಸಮಯ ಕೇಳಿದ್ದರು. ಈ ಬಾರಿಯೂ ಮತ್ತೆ ಸಮಯ ಕೇಳಿದ್ದಕ್ಕೆ 1 ಲಕ್ಷ ದಂಡ ರೂ. ವಿಧಿಸಿ, ಸೆ.8ಕ್ಕೆ ವಿಚಾರಣೆಯನ್ನು ಮುಂದೂಡಿದೆ.

    ಬೀದರ್‌ನ (Bidar) ಕಮಲ ನಗರ ತಾಲೂಕಿನ ನಿವಾಸಿ ನರಸಿಂಗ್ ಎಂಬುವವರು ಶಾಸಕ ಪ್ರಭು ಚೌಹಾಣ್ ಪರಿಶಿಷ್ಟ ಜಾತಿಯವರಲ್ಲ, ಅವರು ಪರಿಶಿಷ್ಟ ಪಂಗಡದವರು ಎಂದು ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠದಲ್ಲಿ ದಾವೆ ಹೂಡಿದ್ದರು.

    ಚೌಹಾಣ್ ಅವರು ಮೂಲತಃ ಮಹಾರಾಷ್ಟ್ರದಲ್ಲಿ (Maharashtra) ಜನಿಸಿದ್ದು, ಕರ್ನಾಟಕ (Karnataka) ನಿವಾಸಿಯಲ್ಲ. ಅವರು ಮಹಾರಾಷ್ಟ್ರದಲ್ಲಿ ಲಂಬಾಣಿ ಪರಿಶಿಷ್ಟ ಪಂಗಡಕ್ಕೆ (ST) ಸೇರಿದವರಾಗಿದ್ದಾರೆ. ಹೀಗಾಗಿ ಶಾಸಕ ಚೌಹಾಣ್ ಅವರ ಎಸ್ಸಿ (SC) ಜಾತಿ ಪ್ರಮಾಣ ಪತ್ರ ರದ್ದುಗೊಳಿಸಬೇಕು ಎಂದು ಉಲ್ಲೇಖಿಸಿದ್ದರು.ಇದನ್ನೂ ಓದಿ: ನಟ ದರ್ಶನ್ ಬಳ್ಳಾರಿ ಜೈಲಿನ ಶಿಫ್ಟ್ ಭವಿಷ್ಯ ಇಂದು ನಿರ್ಧಾರ

     

  • ಅತ್ಯಾಚಾರ ಆರೋಪ ಕೇಸ್ – ಬಿಜೆಪಿ ಶಾಸಕ ಪ್ರಭು ಚೌಹಾಣ್ ಪುತ್ರನಿಗೆ ಮಧ್ಯಂತರ ಜಾಮೀನು ಮಂಜೂರು

    ಅತ್ಯಾಚಾರ ಆರೋಪ ಕೇಸ್ – ಬಿಜೆಪಿ ಶಾಸಕ ಪ್ರಭು ಚೌಹಾಣ್ ಪುತ್ರನಿಗೆ ಮಧ್ಯಂತರ ಜಾಮೀನು ಮಂಜೂರು

    ಬೀದರ್: ಅತ್ಯಾಚಾರ ಆರೋಪ ಹೊತ್ತು ಬಂಧನ ಭೀತಿಯಲ್ಲಿದ್ದ ಬಿಜೆಪಿ ಶಾಸಕ ಪ್ರಭು ಚೌಹಾಣ್ (Prabhu Chauhan) ಪುತ್ರನಿಗೆ ಹೈಕೋರ್ಟ್ (High Court) ಜಾಮೀನು ಮಂಜೂರು ಮಾಡಿದೆ.

    ಬೀದರ್ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಪ್ರತೀಕ್ ಚೌಹಾಣ್ ಪರ ವಕೀಲರು ಹೈಕೋರ್ಟ್ ಮೊರೆ ಹೋಗಿದ್ದರು. ವಾದ-ಪ್ರತಿವಾದವನ್ನು ಆಲಿಸಿದ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು, 2 ಲಕ್ಷ ರೂ. ಬಾಂಡ್ ಶ್ಯೂರಿಟಿ ಹಾಗೂ ಸಾಕ್ಷಿಗಳಿಗೆ ಬೆದರಿಕೆ ಹಾಕದಂತೆ ಷರತ್ತು ವಿಧಿಸಿದೆ. ಜೊತೆಗೆ ಪೊಲೀಸರು ಪ್ರಭು ಚೌಹಾಣ್ ಪುತ್ರನನ್ನು ಬಂಧನ ಮಾಡುವಂತಿಲ್ಲ ಎಂದು ಸೂಚಿಸಿದೆ.ಇದನ್ನೂ ಓದಿ: ಭಾರೀ ಮಳೆಗೆ ವಿದ್ಯುತ್ ಸಮಸ್ಯೆ – ಮಾರ್ಗ ಮಧ್ಯದಲ್ಲೇ ನಿಂತ ಮೋನೋ ರೈಲು

    ಇನ್ನೂ ಈಗಾಗಲೇ ಬೀದರ್‌ನ ಮಹಿಳಾ ಠಾಣೆಯಿಂದ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಅತ್ಯಾಚಾರ ಕೇಸ್ ವರ್ಗಾವಣೆ ಮಾಡಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

    ಬಿಜೆಪಿ ಶಾಸಕರ ಪುತ್ರನ ವಿರುದ್ಧ ಯುವತಿಯೊಬ್ಬಳು ಅತ್ಯಾಚಾರ ಕೇಸ್ ದಾಖಲಿಸಿದ್ದರು. ಮದುವೆಯಾಗುವುದಾಗಿ ನಂಬಿಸಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಗಂಭೀರ ಆರೋಪ ಮಾಡಿದ್ದರು.ಇದನ್ನೂ ಓದಿ: ಏರ್‌ಪೋರ್ಟ್ ಮಾದರಿಯಲ್ಲೇ ಇನ್ಮುಂದೆ ರೈಲಿಗೂ ಲಗೇಜ್ ಪಾಲಿಸಿ

  • ಸಿನಿಮಾ ಗೆಲ್ಲಲು ಸ್ಟಾರ್ ನಟರೇ ಬೇಕಿಲ್ಲ: ರಮ್ಯಾ

    ಸಿನಿಮಾ ಗೆಲ್ಲಲು ಸ್ಟಾರ್ ನಟರೇ ಬೇಕಿಲ್ಲ: ರಮ್ಯಾ

    ದುಬಾರಿ ಬಜೆಟ್, ಸ್ಟಾರ್ ನಟರು ಇಲ್ಲದೇ ಸಿನಿಮಾ ಗೆಲ್ಲಿಸಬಹುದು ಎನ್ನುವುದಕ್ಕೆ ಸು ಫ್ರಂ ಸೋ ಸಿನಿಮಾ ಸಾಕ್ಷಿ ಎಂದಿದ್ದಾರೆ ನಟಿ ರಮ್ಯಾ. ದರ್ಶನ್ ರೀತಿಯ ಸ್ಟಾರ್ ನಟರು ಜೈಲಿಗೆ ಹೋದಾಗ, ಸಿನಿಮಾ ರಂಗ ಪಾತಾಳಕ್ಕೆ ಬೀಳುತ್ತದೆ. ಸ್ಟಾರ್ ನಟರು ಸಿನಿಮಾ ಮಾಡದೇ ಇದ್ದರೆ ಸಿನಿಮಾ ರಂಗಕ್ಕೆ ನಷ್ಟಕ್ಕೆ ತಿರುಗುತ್ತಾ? ಎಂದು ಕೇಳಲಾದ ಪ್ರಶ್ನೆಗೆ ರಮ್ಯಾ ಖಡಕ್ ಆಗಿಯೇ ಉತ್ತರ ನೀಡಿದ್ದಾರೆ. ಸು ಫ್ರಂ ಸೋನಲ್ಲಿ ಯಾವ ಸ್ಟಾರ್ ನಟರು ಇದ್ದಾರೆ?.. ಕಂಟೆಂಟ್ ಚೆನ್ನಾಗಿದ್ದರೆ ಸಿನಿಮಾ ಗೆಲ್ಲುತ್ತದೆ ಅಂದಿದ್ದಾರೆ ರಮ್ಯಾ.

    ದರ್ಶನ್ ಬಗ್ಗೆ ರಮ್ಯಾ ಹೇಳಿದ್ದೇನು?
    ದರ್ಶನ್ (Darshan) ಲೈಟ್ಬಾಯ್ ಆಗಿ ಬಂದ್ರೂ ಕಷ್ಟಪಟ್ಟು ಮೇಲೆ ಬಂದಿದ್ರು. ಆದ್ರೆ ಜೀವನ ಹಾಳುಮಾಡಿಕೊಂಡ್ರು ಅಂತ ನಟಿ ರಮ್ಯಾ (Actress Ramya) ಕೊಲೆ ಆರೋಪಿ ದಚ್ಚು ಬಗ್ಗೆ ಸಾಫ್ಟ್ ಕಾರ್ನರ್ ತೋರಿದ್ದಾರೆ. ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ, ನಾನು ಹೇಳಬೇಕಾದ್ದನ್ನೆಲ್ಲ ಹೇಳಿದ್ದೀನಿ. ದೂರು ಕೊಟ್ಮೇಲೆ ಬ್ಯಾಡ್ ಕಾಮೆಂಟ್ಸ್ ಬರ್ತಿಲ್ಲ. ಎಷ್ಟೋ ಜನ ಪೋನ್ ಸ್ವಿಚ್ ಆಫ್ ಮಾಡಿ ಮನೆ ಬಿಟ್ಟಿದ್ದಾರೆ. ಇನ್ನಷ್ಟು ಮಂದಿ ಅರೆಸ್ಟ್ ಆಗಿದ್ದಾರೆ. ದರ್ಶನ್ ಲೈಟ್ ಬಾಯ್ ಆಗಿ ಚಿತ್ರರಂಗಕ್ಕೆ ಬಂದವರಾಗಿದ್ದರೂ ಕಷ್ಟಪಟ್ಟು ಈ ಹಂತಕ್ಕೆ ಬಂದಿದ್ರು. ಆದ್ರೆ ಜೀವನ ಹಾಳು ಮಾಡಿಕೊಂಡ್ರು. ಹೀಗೆ ಆಗದೇ ಇದ್ದಿದ್ದರೇ ಇನ್ನಷ್ಟು ದೊಡ್ಡ ಮಟ್ಟಕ್ಕೆ ಬೆಳಿಯಬಹುದಿತ್ತು ಎಂದರಲ್ಲದೇ ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಿಸುವುದಾಗಿ ಹೇಳಿದರು.

    ಮುಂದುವರಿದು… ಸುಪ್ರೀಂ ತೀರ್ಪಿನಿಂದ ರೇಣುಕಾಸ್ವಾಮಿ ಹೆಂಡತಿ ಮಗುವಿಗೆ ನ್ಯಾಯ ಸಿಕ್ಕಿದೆ. ಈ ಬೆಳವಣಿಗೆಯಿಂದ ಹೆಣ್ಣುಮಕ್ಕಳಿಗೆ ಧೈರ್ಯ ಬಂದಿದೆ. ಎಲ್ಲ ಒಳ್ಳೆಯದಾಗಿದೆ ಅಂದುಕೊಳ್ತೀನಿ ಅಂತ ಹೇಳಿದ್ದಾರೆ. ಇನ್ನೂ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಸೋಶಿಯಲ್ ಮೀಡಿಯಾ ಹ್ಯಾಂಡಲ್ ಜವಾಬ್ದಾರಿ ಹೊತ್ತ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ನಡೆಯನ್ನು ಸ್ವಾಗತಿಸುತ್ತೀನಿ ಅಂದರು. ಇದು ಒಳ್ಳೆ ಬೆಳವಣಿಗೆ, ಅಭಿಮಾನಿಗಳಿಗೆ ವಿಜಯಲಕ್ಷ್ಮಿ ಈ ಮೂಲಕ ಒಳ್ಳೆ ಸಂದೇಶ ಕೊಡಬಹುದು. ಅವರು ಸಹ ಹೆಣ್ಣು, ಹೀಗಾಗಿ ಇದು ಒಳ್ಳೆ ಬೆಳವಣಿಗೆ ಅಂತಿನಿ ಅಂದರು.

  • ದರ್ಶನ್ ಜೈಲಿಗೆ ಹೋಗಿದ್ದು ಬೇಸರ ತಂದಿದೆ, ಅಕ್ಕಪಕ್ಕದವ್ರ ಸಹವಾಸ ಬಿಡ್ಬೇಕು – ರಮ್ಯಾ ಸಾಫ್ಟ್ ಕಾರ್ನರ್

    ದರ್ಶನ್ ಜೈಲಿಗೆ ಹೋಗಿದ್ದು ಬೇಸರ ತಂದಿದೆ, ಅಕ್ಕಪಕ್ಕದವ್ರ ಸಹವಾಸ ಬಿಡ್ಬೇಕು – ರಮ್ಯಾ ಸಾಫ್ಟ್ ಕಾರ್ನರ್

    – ಪವಿತ್ರಾ ಗೌಡಗೆ ಈ ಸ್ಥಿತಿ ಬರಬಾರದಿತ್ತು ಎಂದ ನಟಿ

    ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ಲ್ಲಿ (Renukaswamy Case) ಸುಪ್ರೀಂ (Supreme Court) ಆದೇಶದ ಬೆನ್ನಲ್ಲೇ ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಬಗ್ಗೆ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ (Actress Ramya) ಸಾಫ್ಟ್ ಕಾರ್ನರ್ ತೋರಿಸಿದ್ದಾರೆ.

    ದರ್ಶನ್ ಜೈಲುಪಾಲಾಗಿರುವ ಬಗ್ಗೆ `ಪಬ್ಲಿಕ್ ಟಿವಿ’ ಜೊತೆ ಮಾತನಾಡಿರುವ ಅವರು, ನಟ ದರ್ಶನ್ ಜೊತೆ ನಾನು ಸಿನಿಮಾ ಮಾಡಿದ್ದೇನೆ. ಸಿನಿಮಾ ಶೂಟಿಂಗ್ ವೇಳೆ ತಾವು ನಡೆದುಕೊಂಡು ಬಂದ ಹಾದಿ ಬಗ್ಗೆ ನನ್ನ ಬಳಿ ಹಂಚಿಕೊಂಡಿದ್ದರು. ನನಗೆ ಹೆಮ್ಮೆ ಅನಿಸಿತ್ತು. ಲೈಟ್ ಬಾಯ್ ಆಗಿ ಕೆಲಸ ಮಾಡಿ ಈ ಮಟ್ಟಕ್ಕೆ ಬೆಳೆದಿದ್ದಾರೆ. ಆದರೆ ಇತ್ತೀಚಿಗೆ ಅವರ ನಡವಳಿಕೆಯಿಂದ ತುಂಬಾ ಬೇಜಾರಾಗಿತ್ತು. ಎಲ್ಲೋ ಒಂದು ಕಡೆ ಅವರು ತಮ್ಮ ಜೀವನ ಹಾಳು ಮಾಡಿಕೊಂಡರು. ಈ ಮಟ್ಟಕ್ಕೆ ಬೆಳೆದ ಮೇಲೆ ಜವಾಬ್ದಾರಿ ಇರುತ್ತದೆ. ಅವರ ಅಕ್ಕಪಕ್ಕ ಯಾರು ಒಳ್ಳೆಯವರಿಲ್ಲ ಅನಿಸುತ್ತೆ ಗೊತ್ತಿಲ್ಲ. ತಮ್ಮ ಸುತ್ತಮುತ್ತ ಒಳ್ಳೆಯವರನ್ನು ಇಟ್ಟುಕೊಂಡು ಒಳ್ಳೆಯ ದಾರಿಯಲ್ಲಿ ಕರೆದುಕೊಂಡು ಹೋಗಬಹುದಿತ್ತು. ಮೊದಲು ಅಕ್ಕಪಕ್ಕದವರ ಸಹವಾಸ ಬಿಡಬೇಕು ಕಿವಿಮಾತು ಹೇಳಿದ್ದಾರೆ.ಇದನ್ನೂ ಓದಿ: ಬೆಂಗಳೂರು | ನಿಗೂಢ ಸ್ಫೋಟ – ಬಾಲಕ ಸಾವು, 8 ಜನರಿಗೆ ಗಾಯ, ಮೂವರ ಸ್ಥಿತಿ ಗಂಭೀರ

    ಇನ್ನೊಂದು ಕಡೆ ಜಡ್ಜ್ಮೆಂಟ್ ಕೇಳಿದಾಗ ರಿಲೀಫ್ ಅಂತಾ ಅನಿಸಿದೆ. ಈಗ ನಾವು ಹೋಗುತ್ತಿರುವ ಸಮಾಜ ಕೆಟ್ಟ ದಾರಿಯಲ್ಲಿದೆ. ಹೆಣ್ಣುಮಕ್ಕಳ ರಕ್ಷಣೆ, ಗೌರವ ವಿಷಯದಲ್ಲಿ ಸುಪ್ರೀಂ ಕೋರ್ಟ್ ಆರ್ಡರ್ ಬಂದಾಗ ನಾನು ಮಾಡಿದ ಪೋಸ್ಟ್ಗೆ ಕೆಟ್ಟದಾಗಿ ಕಾಮೆಂಟ್ ಹಾಕುತ್ತಿದ್ದರು. ನಾವೇ ಕಾನೂನು ಕೈಗೆತ್ತಿಕೊಂಡರೆ ಈ ರೀತಿಯ ಕೆಟ್ಟ ಕೆಲಸಗಳು ಆಗುತ್ತವೆ. ಜಡ್ಜ್ಮೆಂಟ್‌ನಿಂದ ಸಮಾಜಕ್ಕೆ ಒಳ್ಳೆಯದಾಗುತ್ತೆ. ಸಮಾಜಕ್ಕೆ ಒಂದೊಳ್ಳೆ ಮೆಸೇಜ್ ಹೋಗಿದೆ. ಯಾರೇ ಆಗಿರಲಿ ಎಲ್ಲರೂ ಸಮಾನರು. ದೊಡ್ಡವರೇ ಆಗ್ಲಿ ಚಿಕ್ಕವರೇ ಆಗ್ಲಿ ಎಲ್ಲರೂ ಕಾನೂನಿನ ಮುಂದೆ ಒಂದೇ ಎಂದು ತಿಳಿಸಿದ್ದಾರೆ.

    ಪವಿತ್ರಾ ಗೌಡ ಯಾರು ಅಂತಾ ನನಗೆ ಮೊದಲು ಗೊತ್ತಿರಲಿಲ್ಲ. ಆಕೆಗೆ ಈ ಸ್ಥಿತಿ ಬರಬಾರದಿತ್ತು. ಒಂದು ಕಡೆ ನನಗೆ ಬೇಜಾರಾಗುತ್ತೆ. ಯಾಕಂದ್ರೆ ಪವಿತ್ರಾ ಗೌಡ ಒಬ್ಬ ತಾಯಿ, ಅವರಿಗೆ ಮಗಳಿದ್ದಾಳೆ. ಕಾನೂನು ಕೈಗೆ ತೆಗೆದುಕೊಳ್ಳದೇ ನಾವು ನಿಯಮಗಳ ಪ್ರಕಾರ ನಡೆದುಕೊಂಡಿದ್ರೆ ಇದೆಲ್ಲಾ ಆಗುತ್ತಿರಲಿಲ್ಲ. ನಾವು ಏನಾದರೂ ಮಾಡುವ ಮುಂಚೆ ಯೋಚನೆ ಮಾಡಬೇಕು. ಕೋಪ ಬರೋದು ಸಾಮಾನ್ಯ, ಆದರೆ ಎಲ್ಲರ ಜೀವನದಲ್ಲಿ ಒಳ್ಳೆಯದೇ ಆಗಲ್ಲ. ಕೆಲವೊಂದು ಘಟನೆಗಳು ನಡೆಯುತ್ತವೆ. ಹಾಗಂತ ನಾವು ಕಾನೂನನ್ನ ಕೈಗೆತ್ತಿಕೊಳ್ಳಬಾರದು. ಕಾನೂನು ಪ್ರಕಾರವೇ ನಡೆದುಕೊಂಡು ಬರಬೇಕು. ಮತ್ತೇನಾದರೂ ಆದರೆ ಅಂತ ಜೀವನ ಹಾಳು ಮಾಡಿಕೊಳ್ತೀರಾ? ಅದೇ ರೀತಿ ಬೇರೆಯವರು ಶುರು ಮಾಡ್ಕೊಂಡ್ರೆ ಸಮಾಜ ಹೇಗೆ ಬದಲಾಗುತ್ತೆ? ಎಲ್ಲದಕ್ಕೂ ಒಂದು ಲಿಮಿಟ್ ಇರುತ್ತೆ. ಆದರೆ ಕಾನೂನಿಂದ ನಾವ್ಯಾರು ಎಸ್ಕೇಪ್ ಆಗೋಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    ಇದೇ ವೇಳೆ ರೇಣುಕಾಸ್ವಾಮಿ ಕುಟುಂಬದ ಬಗ್ಗೆ ಮಾತನಾಡಿ, ಅವರದ್ದು ಬಡಕುಟುಂಬ. ಅವರಿಗೆ ಎಲ್ಲೋ ಒಂದು ಕಡೆ ಸುಪ್ರೀಂ ತೀರ್ಪಿನಿಂದ ನ್ಯಾಯ ಸಿಕ್ಕಂತಾಗಿದೆ ಅನಿಸುತ್ತದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ದೇಶದ ಜನತೆಗೆ ಮೋದಿ ದೀಪಾವಳಿ ಡಬಲ್‌ ಗಿಫ್ಟ್‌ – ತೆರಿಗೆ ಇಳಿಕೆ, ಯುವಜನತೆಗೆ ವಿಕಸಿತ ಭಾರತ ರೋಜ್‌ಗಾರ್‌ ಯೋಜನೆ

  • ಕಾನೂನಿನ ಮುಂದೆ ಎಲ್ಲರೂ ಒಂದೇ – ದರ್ಶನ್ ಬೇಲ್ ರದ್ದು ಬಗ್ಗೆ ನಟಿ ರಮ್ಯಾ ಪೋಸ್ಟ್

    ಕಾನೂನಿನ ಮುಂದೆ ಎಲ್ಲರೂ ಒಂದೇ – ದರ್ಶನ್ ಬೇಲ್ ರದ್ದು ಬಗ್ಗೆ ನಟಿ ರಮ್ಯಾ ಪೋಸ್ಟ್

    – ಕಾನೂನು ಕೈಗೆ ತೆಗೆದುಕೊಳ್ಳಬೇಡಿ ಎಂದ ನಟಿ

    ರೇಣುಕಾಸ್ವಾಮಿ ಕೇಸ್‌ಲ್ಲಿ ನಟ ದರ್ಶನ್ ಸೇರಿ ಏಳು ಆರೋಪಿಗಳ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಬೆನ್ನಲ್ಲೇ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಸ್ಟೋರಿ ಹಂಚಿಕೊಂಡಿದ್ದಾರೆ.ಇದನ್ನೂ ಓದಿ: ದರ್ಶನ್‌ ಜಾಮೀನು ರದ್ದು | ಕಾನೂನು ಎಲ್ಲರಿಗೂ ಒಂದೇ ಎಂಬ ಸಂದೇಶ ಸಾರಿದ ಸುಪ್ರೀಂ: ವಕೀಲ ಚಿದಾನಂದ್

    ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿಕೊಂಡಿರುವ ಅವರು, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಇತರರಿಗೆ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪು ಇಂದು ಬಲವಾದ ಸಂದೇಶವನ್ನು ರವಾನಿಸಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು. ಎಲ್ಲರಿಗೂ ನಾನು ಹೇಳುವುದೇನೆಂದರೆ ನ್ಯಾಯಯುತ ಪ್ರಕ್ರಿಯೆಯನ್ನು ಅನುಸರಿಸಿ, ಕಾನೂನು ವ್ಯವಸ್ಥೆಯಲ್ಲಿ ನಂಬಿಕೆ ಇರಿಸಿ. ಕಾನೂನನ್ನು ನಿಮ್ಮ ಕೈಗೆ ತೆಗೆದುಕೊಳ್ಳಬೇಡಿ, ಎಲ್ಲರಿಗೂ ನ್ಯಾಯ ಸಿಕ್ಕೇ ಸಿಗುತ್ತದೆ ಎಂದು ಬರೆದುಕೊಂಡಿದ್ದಾರೆ.

    ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ ಎಲ್ಲಾ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿತ್ತು. ಈ ಜಾಮೀನು ಆದೇಶವನ್ನು ಪ್ರಶ್ನಿಸಿ ರಾಜ್ಯ ಪೊಲೀಸ್ ಇಲಾಖೆ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ವಾದ-ಪ್ರತಿವಾದ ಆಲಿಸಿದ ಸುಪ್ರೀಂ ಗುರುವಾರ (ಆ.14) ಜಾಮೀನು ಅರ್ಜಿಯನ್ನು ರದ್ದುಗೊಳಿಸಿ, ಕೂಡಲೇ ಎಲ್ಲಾ 7 ಆರೋಪಿಗಳು ಸರೆಂಡರ್ ಆಗಬೇಕೆಂದು ಸೂಚನೆ ನೀಡಿತ್ತು.ಇದನ್ನೂ ಓದಿ: ದರ್ಶನ್ ಜಾಮೀನು ರದ್ದು; ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ: ರೇಣುಕಾಸ್ವಾಮಿ ಪತ್ನಿ

  • ಸತ್ಯ ಎಲ್ಲಕ್ಕಿಂತ ಶಕ್ತಿಶಾಲಿ, ಅದು ನ್ಯಾಯ ಕೊಡುತ್ತೆ – ತೀರ್ಪಿಗೂ ಮುನ್ನ ಪವಿತ್ರಾ ಗೌಡ ಪೋಸ್ಟ್

    ಸತ್ಯ ಎಲ್ಲಕ್ಕಿಂತ ಶಕ್ತಿಶಾಲಿ, ಅದು ನ್ಯಾಯ ಕೊಡುತ್ತೆ – ತೀರ್ಪಿಗೂ ಮುನ್ನ ಪವಿತ್ರಾ ಗೌಡ ಪೋಸ್ಟ್

    ರೇಣುಕಾಸ್ವಾಮಿ ಕೊಲೆ (Renukaswamy Case) ಕೇಸಲ್ಲಿ ಆರೋಪಿಗಳಾದ ನಟ ದರ್ಶನ್ (Actor Darshan)  ಸೇರಿ ಏಳು ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ಭವಿಷ್ಯ ಇಂದು (ಆ.14) ಹೊರಬೀಳಲಿದೆ. ಈ ಹಿನ್ನೆಲೆ ಆರೋಪಿ ಪವಿತ್ರಾ ಗೌಡ (Pavitra Gowda) ಪೋಸ್ಟ್‌ವೊಂದನ್ನು ಹಾಕಿಕೊಂಡಿದ್ದಾರೆ.

    ಜಾಮೀನು ಮುಂದುವರೆಯುವ ನಿರೀಕ್ಷೆಯಲ್ಲಿರುವ ಪವಿತ್ರಾ ಗೌಡ ಇನ್ಸ್‌ಸ್ಟಾಗ್ರಾಂ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಪೋಸ್ಟ್ನಲ್ಲಿ, ಸತ್ಯವು ಎಲ್ಲಕ್ಕಿಂತ ಹೆಚ್ಚು ಶಕ್ತಿಶಾಲಿ. ಅದು ಯಾವಾಗಲೂ ನ್ಯಾಯವನ್ನು ಕೊಡುತ್ತದೆ. ಈ ಜಗತ್ತಿನಲ್ಲಿರುವ ಎಲ್ಲಕ್ಕಿಂತ ಹೆಚ್ಚಿನ ಶಕ್ತಿಯನ್ನು ಸತ್ಯ ಹೊಂದಿರುತ್ತದೆ. ಎಷ್ಟೇ ಸಮಯ ತೆಗೆದುಕೊಂಡರೂ, ನ್ಯಾಯವು ಯಾವಾಗಲೂ ತನ್ನ ದಾರಿಯನ್ನು ಕಂಡುಕೊಳ್ಳುತ್ತದೆ ಎಂದು ಬರೆದುಕೊಂಡಿದ್ದಾರೆ.ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣ ಮಾನಸಿಕ ಸ್ಥಿತಿ ಕುಗ್ಗಿತಾ?- ಅತ್ಯಾಚಾರ ಕೇಸ್‌ ಅಪರಾಧಿಗೆ ಜೈಲಿನಲ್ಲೇ ಕೌನ್ಸಿಲಿಂಗ್

    ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಆರೋಪಕ್ಕೆ ಸಂಬಂಸಿದಂತೆ ಪ್ರಕರಣದ ಎ1 ಪವಿತ್ರಾ ಗೌಡ, ಎ2 ದರ್ಶನ್ ಹಾಗೂ `ಡಿ’ ಗ್ಯಾಂಗ್‌ಗೆ ಹೈಕೋರ್ಟ್ ಜಾಮೀನು ನೀಡಿತ್ತು. ರಾಜ್ಯ ಪೊಲೀಸ್ ಇಲಾಖೆ ನಟ ದರ್ಶನ್‌ಗೆ ಹೈಕೋರ್ಟ್ ನೀಡಿರುವ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ವಾದ-ಪ್ರತಿವಾದ ಆಲಿಸಿ, ಆದೇಶವನ್ನು ಕಾಯ್ದಿರಿಸಿತ್ತು. ಗುರುವಾರ ದರ್ಶನ್, ಪವಿತ್ರಾ ಸೇರಿದಂತೆ ಏಳು ಜನರ ಬೇಲ್ ಭವಿಷ್ಯ ನಿರ್ಧಾರವಾಗಲಿದೆ.

    ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸುತ್ತಾ? ಅಥವಾ ಮುಂದುವರೆಯುತ್ತಾ ಎಂಬ ಕುತೂಹಲಕ್ಕೆ ಕೌಂಟ್‌ಡೌನ್ ಶುರುವಾಗಿದ್ದು, ಪವಿತ್ರಾ ಗೌಡ ಜಾಮೀನು ಮುಂದುವರೆಯುವ ನಿರೀಕ್ಷೆಯಲ್ಲಿದ್ದಾರೆ.ಇದನ್ನೂ ಓದಿ: 2.5 ಲಕ್ಷಕ್ಕೆ ನವಜಾತ ಶಿಶುವನ್ನೇ ಮಾರಿದ ತಾಯಿ – ಹಣ ಖರ್ಚಾದ ಬಳಿಕ ಮಗು ವಾಪಸ್ಸಿಗಾಗಿ ದೂರು

  • ದರ್ಶನ್ ಜಾಮೀನು ಭವಿಷ್ಯಕ್ಕೆ ಕೌಂಟ್‌ಡೌನ್ – ನಟನಿಗೆ ಜೈಲಾ? ಬೇಲಾ?

    ದರ್ಶನ್ ಜಾಮೀನು ಭವಿಷ್ಯಕ್ಕೆ ಕೌಂಟ್‌ಡೌನ್ – ನಟನಿಗೆ ಜೈಲಾ? ಬೇಲಾ?

    – `ಡಿ’ ಗ್ಯಾಂಗ್‌ನ ಏಳು ಆರೋಪಿಗಳ ಜಾಮೀನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ಆದೇಶ

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿಗಳಾದ ನಟ ದರ್ಶನ್ (Actor Darshan) ಸೇರಿ ಏಳು ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನು ರದ್ದು ಕೋರಿ ಕರ್ನಾಟಕ ಪೊಲೀಸರು (Karnataka Police) ಸಲ್ಲಿಸಿದ್ದ ಅರ್ಜಿ ಭವಿಷ್ಯ ಇಂದು (ಆ.14) ಹೊರಬೀಳಲಿದೆ.

    ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸುತ್ತಾ? ಅಥವಾ ಮುಂದುವರೆಯುತ್ತಾ ಎಂಬ ಕುತೂಹಲಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಜೊತೆಗೆ ನಟ ದರ್ಶನ್ ಕೂಡ ಜಾಮೀನು ಮುಂದುವರೆಯುವ ನಿರೀಕ್ಷೆಯಲ್ಲಿದ್ದಾರೆ.

    ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣದ ಎ2 ದರ್ಶನ್ ಹಾಗೂ `ಡಿ’ ಗ್ಯಾಂಗ್‌ಗೆ ಹೈಕೋರ್ಟ್ ಜಾಮೀನು ನೀಡಿತ್ತು. ರಾಜ್ಯ ಪೊಲೀಸ್ ಇಲಾಖೆ ನಟ ದರ್ಶನ್‌ಗೆ ಹೈಕೋರ್ಟ್ ನೀಡಿರುವ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ವಾದ-ಪ್ರತಿವಾದ ಆಲಿಸಿ, ಆದೇಶವನ್ನು ಕಾಯ್ದಿರಿಸಿತ್ತು. ಗುರುವಾರ ದರ್ಶನ್, ಪವಿತ್ರಾ ಸೇರಿದಂತೆ ಏಳು ಜನರ ಬೇಲ್ ಭವಿಷ್ಯ ಹೊರಬೇಳಲಿದೆ.

    ಇನ್ನೂ ಈ ಹಿಂದೆ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಾದ-ಪ್ರತಿವಾದದ ಸಂದರ್ಭದಲ್ಲಿ ದರ್ಶನ್ ಹಾಗೂ ಪವಿತ್ರಾ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ಜಾಮೀನು ಮುಂದುವರೆಸುವಂತೆ ಮನವಿ ಮಾಡಿಕೊಂಡಿದ್ದರು.

    ದರ್ಶನ್ ಹೇಳಿದ್ದೇನು?

    •  ಮೈಸೂರಿನಲ್ಲಿ ಬಂಧಿಸಿ, ಬೆಂಗಳೂರಲ್ಲಿ ಎಫ್‌ಐಆರ್ ಹಾಕಿದ್ದಾರೆ
    • ಬಂಧನಕ್ಕೆ ಸಂಜೆ 6:30ವರೆಗೆ ಲಿಖಿತ ಕಾರಣ ತಿಳಿಸಿಲ್ಲ, ಇದು ಕಾನೂನು ಉಲ್ಲಂಘನೆ
    • ಜಾಮೀನು ರದ್ದುಪಡಿಸೋದು ಕಠಿಣ ಕ್ರಮವಾಗಲಿದೆ
    •  ಯಾವುದೇ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿಲ್ಲ
    • ಅಪಹರಣದಲ್ಲಿ ಇವರ ಪಾತ್ರ, ಸೂಚನೆಗೆ ಸಾಕ್ಷಿ, ಆಧಾರಗಳಿಲ್ಲ
    • ದರ್ಶನ್ & ಎ-3 ಪವನ್ ಮಧ್ಯೆ ಮಾತುಕತೆ ನಡೆದಿಲ್ಲ
    •  ವಾಟ್ಸಾಪ್ ಸಂದೇಶ ವಿನಿಮಯವಾಗಿಲ್ಲ
    • ಸಾಕ್ಷಿಗಳ ಹೇಳಿಕೆಗಳಲ್ಲೇ ಅನುಮಾನವಿದೆ

    ಪವಿತ್ರಾಗೌಡ ಹೇಳಿದ್ದೇನು?

    •  ನಾನು ಒಬ್ಬಂಟಿ ಪೋಷಕಳಾಗಿದ್ದೇನೆ ನನಗೆ ಒಬ್ಬಳೇ ಒಬ್ಬಳು ಮಗಳಿದ್ದಾಳೆ
    •  ವಯಸ್ಸಾದ ಪೋಷಕರನ್ನೂ ನೋಡಿಕೊಳ್ಳಬೇಕಿದೆ
    • ನನಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ
    • ಮಹಿಳೆ ಆಗಿರೋದ್ರಿಂದ ಜಾಮೀನು ರದ್ದು ಕಠಿಣ ಕ್ರಮವಾಗಲಿದೆ

    ಇದೆಲ್ಲದರ ಮಧ್ಯೆ ಸರ್ಕಾರಿ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ಕೆಲವು ಮಾಹಿತಿಗಳನ್ನು ನೀಡಿದ್ದರು.

    •  ಮೃತ ರೇಣುಕಾಸ್ವಾಮಿ ದರ್ಶನ್ ಅಭಿಮಾನಿಯಾಗಿದ್ದ.
    •  ದರ್ಶನ್-ಪವಿತ್ರಗೌಡ ಲಿವ್-ಇನ್ ಸಂಬಂಧದಲ್ಲಿದ್ದರು.
    •  ಪವಿತ್ರಾಗೌಡಗೆ ರೇಣುಕಾಸ್ವಾಮಿ ಅವಹೇಳನಕಾರಿ ಸಂದೇಶ ಕಳುಹಿಸಿದ್ದ
    • ಇದರಿಂದಾಗಿ ಪಟ್ಟಣಗೆರೆ ಶೆಡ್‌ನಲ್ಲಿ ಕೊಲೆ ಮಾಡಲಾಯ್ತು
    • ಆರೋಪಿಗಳು ಕಿಡ್ನ್ಯಾಪ್‌, ಕೊಲೆಯಾದ ಸ್ಥಳದಲ್ಲಿದ್ದರು ಅನ್ನೋದು ತನಿಖೆಯಿಂದ ಬಯಲು
    • ಪಟ್ಟಣಗೆರೆ ಶೆಡ್‌ಗೆ ಪ್ರವೇಶ ಮಾಡೋದನ್ನು ಐವರು ಸಾಕ್ಷಿಗಳು ನೋಡಿದ್ದಾರೆ
    • ಘಟನಾ ಸ್ಥಳದಿಂದ ಸಂಗ್ರಹಿಸಲಾದ ಮಣ್ಣಿನ ಮಾದರಿ ದೃಢಪಟ್ಟಿದೆ
    • ಕೊಲೆ ವೇಳೆ ಎ-1 ಪವಿತ್ರಾ, ಎ-2 ದರ್ಶನ್ ಸಕ್ರಿಯ
    • ರೇಣುಕಾಸ್ವಾಮಿ ರಕ್ತದ ಕಲೆಗಳು ಆರೋಪಿ ಬಟ್ಟೆ ಮೇಲೆ ಕಂಡುಬಂದಿದೆ
    • ಕೊಲೆ ಮಾಡಲು ಬಳಸಿದ ಆಯುಧಗಳು ಮಾರಕವಲ್ಲ ಅಂತ ಹೈಕೋರ್ಟ್ ಹೇಳಿರುವುದು
    • ತಪ್ಪು ಸಾಕ್ಷಿ ಪುನೀತ್ ಹೇಳಿಕೆ ತಡವಾಗಿ ದಾಖಲಿಸಿರೋದಕ್ಕೆ ಸೂಕ್ತ ಕಾರಣ ನೀಡಲಾಗಿದೆ
    •  ವಿಧಿವಿಜ್ಞಾನ, ಎಲೆಕ್ಟ್ರಾನಿಕ್ ಮತ್ತು ಸಿಡಿಆರ್ ಪುರಾವೆಗಳನ್ನು ಹೈಕೋರ್ಟ್ ಪರಿಗಣಿಸಿಲ್ಲ
    • ಎ-2 ದರ್ಶನ್‌ಗೆ ಅಪರಾಧದ ಹಿನ್ನೆಲೆ ಇದೆ
    • ಬೆನ್ನು ನೋವು ಅಂತ ವಿನಾಯ್ತಿ ಪಡೆದು ಮರುದಿನವೇ ಶೂಟಿಂಗ್‌ಗೆ ಹೋಗಿದ್ದಾರೆ

    ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡಿರುವ ಸುಪ್ರೀಂಕೋರ್ಟ್ನ ದ್ವಿಸದಸ್ಯ ಪೀಠ ಮಹತ್ವದ ತೀರ್ಪನ್ನು ನೀಡುವ ಸಾಧ್ಯತೆ ಇದೆ. ಇದರ ಜೊತೆಗೆ ವಿಶೇಷ ಅಂದ್ರೆ `ಇದ್ರೆ ನೆಮ್ದಿಯಾಗ್ ಇರ್ಬೇಕ್’ ಅನ್ನೋ ಸಾಲುಗಳಲ್ಲಿ ಡೆವಿಲ್ ಸಿನಿಮಾ ಹಾಡು ಶುಕ್ರವಾರ (ಆ.15) ರಿಲೀಸ್ ಆಗಲಿದೆ.