ಬೆಂಗಳೂರು: ಈ ವರ್ಷಾಂತ್ಯದ ಒಳಗಡೆ ಬಿಬಿಎಂಪಿ (BBMP) ಚುನಾವಣೆ (Election) ನಡೆಸಿ ಎಂದು ಸರ್ಕಾರಕ್ಕೆ ಹೈಕೋರ್ಟ್ (Karnataka High Court) ಆದೇಶಿಸಿದೆ.
ಮೀಸಲಾತಿ (Reservation) ಸರಿಪಡಿಸಲು 16 ವಾರ ಬೇಕೆಂದ ಸರ್ಕಾರದ ವಿರುದ್ಧ ಗರಂ ಆದ ಕೋರ್ಟ್ ಇಷ್ಟು ಸಮಯ ಕೇಳಿದರೆ ತಕ್ಷಣ ಚುನಾವಣೆಗೆ ಆದೇಶಿಸಬೇಕಾದೀತು ಎಂದು ಚಾಟಿ ಬೀಸಿದೆ. ಇದನ್ನೂ ಓದಿ: ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರ ಸಿದ್ಧವಿದೆ- ಆರ್.ಅಶೋಕ್
ಬಿಬಿಎಂಪಿ ಮೀಸಲಾತಿ ವಿಚಾರವಾಗಿ ಮೀಸಲಾತಿ ಸರಿಪಡಿಸಲು 4 ತಿಂಗಳು ಕಾಲಾವಕಾಶ ಬೇಕೆಂದು ಸರ್ಕಾರ ಕೋರ್ಟ್‍ಗೆ ಮನವಿ ಸಲ್ಲಿಸಿತ್ತು. ಬಿಬಿಎಂಪಿ ಮೀಸಲಾತಿ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ.ಹೇಮಂತ್ ಚಂದನ್ ಗೌಡರ್ ಅವರ ಪೀಠ, ಇಷ್ಟು ಸಮಯ ಕೇಳಿದರೆ ತಕ್ಷಣ ಚುನಾವಣೆಗೆ ಆದೇಶಿಸಬೇಕಾದೀತು ಎಂದು ಅಸಮಾಧಾನ ಹೊರಹಾಕಿ ಪ್ರಮಾಣಪತ್ರಕ್ಕೆ ಪ್ರತಿಕ್ರಿಯೆ ನೀಡಲು ಅರ್ಜಿದಾರರಿಗೆ ಹೈಕೋರ್ಟ್ ಸೂಚಿಸಿದ್ದು, 2 ತಿಂಗಳ ಒಳಗಾಗಿ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿ ಎಂದು ಆದೇಶಿಸಿದೆ.
ಡಿಸೆಂಬರ್ 31ರೊಳಗೆ ಚುನಾವಣೆ ನಡೆಸಬೇಕು. ನವೆಂಬರ್ 30ರೊಳಗೆ ಮೀಸಲಾತಿ ಪಟ್ಟಿ ಸರಿಪಡಿಸಿಕೊಳ್ಳಲು ಅವಕಾಶ ನೀಡಬೇಕು. ನವೆಂಬರ್ 30 ಮೀಸಲಾತಿ ಪಟ್ಟಿ ಬಿಡುಗಡೆ ಮಾಡಬೇಕು. ನವೆಂಬರ್ 30 ರಿಂದ ಡಿಸೆಂಬರ್ 31 ರವರೆಗೆ ಚುನಾವಣೆ ಪ್ರಕ್ರಿಯೆ ಮುಗಿಯಬೇಕು. ಚುನಾವಣಾ ಪ್ರಕ್ರಿಯೆಗೆ 30 ದಿನ ಕಾಲಾವಕಾಶ ನೀಡಬೇಕು. ವರ್ಷದ ಅಂತ್ಯದ ಒಳಗೆ ಚುನಾವಣೆ ಮುಕ್ತಾಯಗೊಳಿಸಿ ಎಂದು ಸರ್ಕಾರಕ್ಕೆ ಡೆಡ್‍ಲೈನ್ ನೀಡಿದೆ. ಇದನ್ನೂ ಓದಿ: ಸಿದ್ದು, ಡಿಕೆಶಿ ಮಧ್ಯೆ ಮುಸುಕಿನ ಗುದ್ದಾಟ – ರಾಹುಲ್ ಎದುರೇ ಒಬ್ಬರಿಗೊಬ್ಬರು ಠಕ್ಕರ್
ಗುರುವಾರ ಒಬಿಸಿ ಅಂಕಿ ಅಂಶ ಒದಗಿಸಿ ಹೊಸದಾಗಿ ಮೀಸಲು ನಿಗದಿ ಸಾಧ್ಯವೇ? ಹೊಸದಾಗಿ ಮೀಸಲು ನಿಗದಿಪಡಿಸಲು ಎಷ್ಟು ಕಾಲಾವಕಾಶ ಬೇಕು? ಎಂಬ ಬಗ್ಗೆ ನಿಲುವು ತಿಳಿಸಿ ಪ್ರಮಾಣಪತ್ರ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ಇಂದಿಗೆ ಮುಂದೂಡಿತ್ತು. ಇಂದು ಈ ಬಗ್ಗೆ ವಿಚಾರಣೆ ಮುಂದುವರಿಸಿ 2 ತಿಂಗಳ ಒಳಗಾಗಿ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿ ಎಂದು ಸರ್ಕಾರಕ್ಕೆ ಆದೇಶಿಸಿದೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಮಠದ ಹಣಕಾಸಿನ ವ್ಯವಹಾರಗಳಿಗೆ ಸಹಿ ಮಾಡಲು ಅವಕಾಶ ಕೋರಿ ಮುರುಘಾ ಶ್ರೀಗಳು (Murugha Shri) ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಮಠದ ಆರ್ಥಿಕ ಚಟುವಟಿಕೆಗಳು ಸಂಪೂರ್ಣ ಸ್ತಬ್ಧವಾಗಿದೆ. ಉದ್ಯೋಗಿಗಳಿಗೆ ತಿಂಗಳ ಸಂಬಳವನ್ನು ನೀಡಲು ಆಗುತ್ತಿಲ್ಲ. ಹೀಗಾಗಿ ಜೈಲಿನಲ್ಲೇ ಇದ್ದುಕೊಂಡು ಹಣಕಾಸಿನ ವ್ಯವಹಾರಕ್ಕೆ ಸಹಿ ಹಾಕಲು ಅವಕಾಶ ಕಲ್ಪಿಸುವಂತೆ ಕೋರ್ಟ್‌ಗೆ (Karnataka High Court) ಮನವಿ ಮಾಡಿದ್ದಾರೆ. ಇದನ್ನೂ ಓದಿ: ಹೃದಯದ ಸಮಸ್ಯೆ- ಮೆಗ್ಗಾನ್ ಆಸ್ಪತ್ರೆಗೆ ಮುರುಘಾ ಶ್ರೀ ಶಿಫ್ಟ್
ಈ ಹಿಂದೆ ಜೈಲಧಿಕಾರಿಗಳು ಮನವಿ ತಿರಸ್ಕಾರ ಮಾಡಿದ್ದರು. ಅಲ್ಲದೇ ಚಿತ್ರದುರ್ಗದ (Chitradurga) ನ್ಯಾಯಾಲಯ ಕೂಡ ಅರ್ಜಿ ವಜಾ ಮಾಡಿತ್ತು. ಹೀಗಾಗಿ ಮುರುಘಾ ಶ್ರೀಗಳು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಬಂಧನಕ್ಕೊಳಗಾಗಿರುವ ಮುರುಘಾ ಶ್ರೀಗಳ ನ್ಯಾಯಾಂಗ ಬಂಧನ ಅವಧಿಯನ್ನು ಮತ್ತೆ 14 ದಿನಗಳ ವರೆಗೆ ವಿಸ್ತರಿಸಿ ಚಿತ್ರದುರ್ಗದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಮಠದ ಹಣಕಾಸಿನ ವ್ಯವಹಾರದ ವಿಚಾರವಾಗಿ ಶ್ರೀಗಳು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇದನ್ನೂ ಓದಿ: ಮುರುಘಾ ಮಠದಿಂದ ಇಬ್ಬರು ಬಾಲಕರು ನಾಪತ್ತೆ
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಸಾಮಾನ್ಯ ಪ್ರವೇಶ ಪರೀಕ್ಷೆ (CET)ಗೆ ಸಂಬಂಧಿಸಿದಂತೆ ಸರ್ಕಾರದ ಸಮನ್ವಯ ಸೂತ್ರಕ್ಕೆ ಹೈಕೋರ್ಟ್ (Karnataka High Court) ಗ್ರೀನ್ ಸಿಗ್ನಲ್ ನೀಡಿದ್ದು, ಈ ಮೂಲಕ ಬಿಕ್ಕಟ್ಟು ಶಮನಗೊಂಡಿದೆ.
ಹೈಕೋರ್ಟ್ ಗ್ರೀನ್ ಸಿಗ್ನಲ್ ಹಿನ್ನೆಲೆಯಲ್ಲಿ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸಿದೆ. ಸೆಪ್ಟೆಂಬರ್ 29ಕ್ಕೆ ಸಿಇಟಿ ಪರಿಷ್ಕೃತ ರಾಂಕಿಂಗ್ ಪಟ್ಟಿ ಕೆಇಎ ಬಿಡುಗಡೆ ಮಾಡಲಿದೆ. ಅಕ್ಟೋಬರ್ 3 ರಿಂದ ಮೊದಲ ಹಂತದ ಸೀಟು ಹಂಚಿಕೆ ಪ್ರಕ್ರಿಯೆ ಪ್ರಾರಂಭ ಮಾಡುವುದಾಗಿ ಉನ್ನತ ಶಿಕ್ಷಣ ಸಚಿವ ಅಶ್ವಥ್‍ನಾರಾಯಣ್ (Ashwath Narayan) ತಿಳಿಸಿದ್ದಾರೆ. ಇದನ್ನೂ ಓದಿ: ಗ್ರಾಹಕರಿಗೆ ಕರೆಂಟ್ ಶಾಕ್ – ಅಕ್ಟೋಬರ್‌ನಿಂದ 43 ಪೈಸೆ ಏರಿಕೆ
ಪುನಾರಾವರ್ತಿತರ 2021ನೇ ಸಾಲಿನ ಪಿಯುಸಿ ಅಂಕಗಳನ್ನು 2022ನೇ ಸಾಲಿನ ಸಿಇಟಿಗೆ ಪರಿಗಣಿಸುವ ವಿಚಾರದಲ್ಲಿ ಸಮಸ್ಯೆಯಾಗಿತ್ತು. ಈ ಕುರಿತು ಸಿಇಟಿ ರ್‍ಯಾಂಕಿಂಗ್‌ನಲ್ಲಿ ಪುನರಾವರ್ತಿತ ವಿದ್ಯಾರ್ಥಿಗಳ ಪಿಯುಸಿ ಅಂಕ ಪರಿಗಣಿಸಲ್ಲವೆಂದು ಸರ್ಕಾರ ಜುಲೈ 30 ರಂದು ಆದೇಶ ಹೊರಡಿಸಿತ್ತು. ರಾಜ್ಯ ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ಪುನರಾವರ್ತಿತ ವಿದ್ಯಾರ್ಥಿಗಳು ಹೈಕೋರ್ಟ್‍ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಪುನರಾವರ್ತಿತ ವಿದ್ಯಾರ್ಥಿಗಳ ಪಿಯುಸಿ ಅಂಕವನ್ನು ಪರಿಗಣಿಸುವಂತೆ ಆದೇಶ ನೀಡಿತ್ತು. ಇದನ್ನೂ ಓದಿ: ಕಾಂಗ್ರೆಸ್‍ನ PayCM ಅಸ್ತ್ರಕ್ಕೆ ಬಿಜೆಪಿಯಿಂದ KaiPe ಪ್ರತ್ಯಸ್ತ್ರ
ಹೈಕೋರ್ಟ್ 2020-21ನೇ ಸಾಲಿನ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾಗಿದ್ದ, ಸಿಇಟಿ ಪರೀಕ್ಷೆಗೆ ಪುನರಾವರ್ತಿತರಾಗಿರುವ ಅಭ್ಯರ್ಥಿಗಳಿಗೆ ವೃತ್ತಿಪರ ಕೋರ್ಸ್‍ಗಳ ಸೀಟು ಹಂಚಿಕೆ ಮಾಡುವಾಗ ದ್ವಿತೀಯ ಪಿಯುಸಿಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳನ್ನು ಸಹ ಪರಿಗಣಿಸಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಹೈಕೋರ್ಟ್ ಆದೇಶ ನೀಡಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸರ್ಕಾರ ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಲು ಮುಂದಾಗಿತ್ತು. ಸರ್ಕಾರದ ಈ ನಿರ್ಧಾರಕ್ಕೆ ಪುನರಾವರ್ತಿತ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಸಂಬಂಧ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಬಿ. ತಿಮ್ಮೇಗೌಡ ಅಧ್ಯಕ್ಷತೆಯಲ್ಲಿ ಐವರ ಸಮಿತಿಯನ್ನು ರಚಿಸಿತ್ತು. ಸಮಿತಿ ವರದಿಯನ್ನು ಸಿದ್ದಪಡಿಸಿತ್ತು. ವರದಿಯನ್ನು ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ಇಂದು ಹೈಕೋರ್ಟ್‍ಗೆ ವರದಿಯನ್ನು ನೀಡಿದರು. ಈ ವರದಿಯನ್ನು ಹೈಕೋರ್ಟ್ ಪುರಸ್ಕರಿಸಿದೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ರಾಜಕಾಲುವೆ ಒತ್ತುವರಿ (Rajkaluve Occupy) ತೆರವಿಗೆ ಬಿಬಿಎಂಪಿ ಕೈಗೊಂಡಿರುವ `ಆಪರೇಷನ್ ಬುಲ್ಡೋಜರ್’ (Operation Bulldozer)ಆರಂಭದಲ್ಲೇ ವಿಘ್ನ ಉಂಟಾಗಿದೆ. ಚಲ್ಲಘಟ್ಟದಲ್ಲಿ ರಾಜಕಾಲುವೆ ಒತ್ತುವರಿ ತೆರವು ಪ್ರಕರಣದಲ್ಲಿ ನಲಪಾಡ್ ಅಕಾಡೆಮಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಅಕಾಡೆಮಿ ತೆರವುಗಳಿಸುವ ಕಾರ್ಯಕ್ಕೆ ಬ್ರೇಕ್ ಬಿದ್ದಿದೆ.
ನಲಪಾಡ್ ಅಕಾಡೆಮಿ (Nalapad Academy) ಒತ್ತುವರಿ ತೆರವುಗೊಳಿಸುವ ವಿಚಾರದಲ್ಲಿ ವಾರದ ಮಟ್ಟಿಗೆ ಪಡೆದಿದ್ದ ಹೈಕೋರ್ಟ್ ತಡೆಯಾಜ್ಞೆ ಸೆಪ್ಟೆಂಬರ್ 23ರ ವರೆಗೂ ವಿಸ್ತರಣೆಯಾಗಿದೆ. ಹೈಕೋರ್ಟ್ (Karnataka HighCourt) ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರಿದ್ದ ಏಕಸದಸ್ಯ ಪೀಠವು ಸೆಪ್ಟೆಂಬರ್ 23ರ ವರೆಗೂ ತಡೆಯಾಜ್ಞೆ ವಿಸ್ತರಿಸಿ ಆದೇಶ ಹೊರಡಿಸಿದೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ನಲಪಾಡ್ ಅಕಾಡೆಮಿಗೆ ಜೆಸಿಬಿ ಗುನ್ನಾ!
ಹಿನ್ನೆಲೆ ಏನು?
ಚಲ್ಲಘಟ್ಟದ ಎಂಬೆಸಿ ಗಾಲ್ಫ್ ಲಿಂಕ್ ಬಿಸಿನೆಸ್ ಪಾರ್ಕ್ ಬಳಿ ನಲಪಾಡ್ ಅಕಾಡೆಮಿ ಸ್ಥಾಪನೆಯಾಗಿದೆ. ಒತ್ತುವರಿ ಮಾಡಿ ಅಕಾಡೆಮಿಯ ಕಾಪೌಂಡ್ ಕಟ್ಟಿದ ಹಿನ್ನೆಲೆಯಲ್ಲಿ ಮಂಗಳವಾರ ಜೆಸಿಬಿ ಜೊತೆ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು. ಜೆಸಿಬಿ ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ (MLA Haris) ಅವರ ಪಿಎ, ನೋಟಿಸ್ ನೀಡಿಲ್ಲ. ಹೇಗೆ ತೆರವು ಮಾಡುತ್ತೀರಾ ಎಂದು ಅವಾಜ್ ಹಾಕಿದ್ದರು ಜೆಸಿಬಿ (JCB) ಕಾರ್ಯಾಚರಣೆ ನಡೆಸುತ್ತಿದ್ದಂತೆ ಸ್ಥಗಿತಕ್ಕೆ ಸೂಚನೆ ನೀಡಿದರು. ಬಿಬಿಎಂಪಿ (BBMP) ಅಧಿಕಾರಿಗಳಿಗೆ ಗೇಟು ತೆಗೆಯಲು ಕೂಡ ಅವಕಾಶ ಕೊಡಲಿಲ್ಲ. ಹೀಗಾಗಿ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಇದನ್ನೂ ಓದಿ:
ನಲಪಾಡ್ ಅಕಾಡೆಮಿ ರಾಜಕಾಲುವೆ ಆಪರೇಷನ್ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ್ದ ಕೋರ್ಟ್ ಕಾರ್ಯಾಚರಣೆ ನಡೆಸದಂತೆ ಒಂದು ವಾರದ ಮಟ್ಟಿಗೆ ತಡೆಯಾಜ್ಞೆ ನೀಡಿತ್ತು. ಇದರಿಂದ ಒತ್ತುವರಿ ಕಾರ್ಯ ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಸೆಪ್ಟೆಂಬರ್ 23ರ ವರೆಗೆ ಹೈಕೋರ್ಟ್ ತಡೆಯಾಜ್ಞೆ ವಿಸ್ತರಿಸಿದ್ದು, ನಲಪಾಡ್ ಅಕಾಡೆಮಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
Live Tv
[brid partner=56869869 player=32851 video=960834 autoplay=true]
ಚುನಾವಣೆಯಲ್ಲಿ ಸ್ಪರ್ಧೆ ಕುರಿತು ಮಾತನಾಡಿದ ಅವರು, ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದಕ್ಕಾಗಿಯೇ ನಾವು ಇಲ್ಲಿದ್ದೇವೆ. ನಾವು ರಾಜ್ಯದಲ್ಲಿ ನಮ್ಮ ಪಕ್ಷದ ಕೆಲಸವನ್ನು ಮೌಲ್ಯಮಾಪನ ಮಾಡುತ್ತೇವೆ. ರಾಜಸ್ಥಾನ(Rajasthan) ಚುನಾವಣೆಗಳಿಗೆ ಪ್ರತಿಕ್ರಿಯೆಯನ್ನು ತೆಗೆದುಕೊಳ್ಳುತ್ತೇವೆ. ಮಹಿಳಾ ಅಭ್ಯರ್ಥಿಗಳಿಗೆ ಸಮಾನ ಪ್ರಾತಿನಿಧ್ಯ ನೀಡಲಾಗುವುದು ಎಂದು ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ರಾಜ್ಯದಲ್ಲಿ ಎಸಿಬಿ (ACB) ರದ್ದು ಮಾಡಿ ತೀರ್ಪು ನೀಡಿದ್ದ ಹೈಕೋರ್ಟಿನ (High Court) ಆದೇಶದಂತೆ ಎಸಿಬಿ ರದ್ದನ್ನು ಅನುಷ್ಠಾನ ಮಾಡಿ ಸರ್ಕಾರದಿಂದ ಆದೇಶ ಹೊರಬಿದ್ದಿದೆ.
ಈ ಕುರಿತು ಇಂದು ಅನುಷ್ಠಾನ ಆದೇಶ ನೀಡಿದ ಸರ್ಕಾರ ಲೋಕಾಯುಕ್ತಕ್ಕೆ (Lokayukta) ಎಸಿಬಿಯ ಎಲ್ಲ ಪ್ರಕರಣಗಳೂ ವರ್ಗಾಯಿಸಿ ಆದೇಶ ಹೊರಡಿಸಿದ್ದು, ಎಸಿಬಿಗೆ ನೀಡಿದ್ದ ತನಿಖಾಧಿಕಾರವನ್ನು ಸರ್ಕಾರ ವಾಪಸ್ ಪಡೆದಿದೆ. ಆಗಸ್ಟ್ 11 ರಂದು ಎಸಿಬಿ ರದ್ದು ಮಾಡಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಇದೀಗ ಹೈಕೋರ್ಟಿನ ತೀರ್ಪನ್ನು ಸರ್ಕಾರ ಅನುಷ್ಠಾನಗೊಳಿಸಿದೆ. ಈ ಮೂಲಕ ಇದೀಗ ಎಸಿಬಿ ಇತಿಹಾಸ ಪುಟ ಸೇರಿದೆ. ರಾಜ್ಯದಲ್ಲಿ ಆರು ವರ್ಷಕ್ಕೂ ಹೆಚ್ಚು ಕಾಲದಿಂದ ಎಸಿಬಿ ಕಾರ್ಯಚರಣೆ ಮಾಡುತ್ತಿತ್ತು. 2016ರ ಮಾರ್ಚ್ 19 ರಂದು ಎಸಿಬಿಯನ್ನು ಸಿದ್ದರಾಮಯ್ಯ (Siddaramaiah) ಸರ್ಕಾರ ರಚಿಸಿತ್ತು. ಇದನ್ನೂ ಓದಿ: ಮಹಿಳೆಯೊಬ್ಬರ ಮಗುವನ್ನು ಮುಸ್ಲಿಂ ದಂಪತಿಗೆ ನೀಡಿದ್ದಕ್ಕೆ ಹಿಂದೂ ಸಂಘಟನೆಯಿಂದ ಪ್ರತಿಭಟನೆ – ಆಸ್ಪತ್ರೆ ಸೀಲ್
ಉಚ್ಚ ನ್ಯಾಯಾಲಯದ ಆದೇಶದನ್ವಯ ಸರ್ಕಾರದ ಅಧಿಸೂಚನೆ ಪ್ರಕಾರ ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಭ್ರಷ್ಟಾಚಾರ ತಡೆ ಅಧಿನಿಯಮ 1988ರ ಉಪಬಂಧಗಳಡಿ ನೀಡಲಾಗಿದ್ದ ತನಿಖಾಧಿಕಾರವನ್ನು ಹಾಗೂ ದಂಡ ಪ್ರಕ್ರಿಯಾ ಸಂಹಿತೆ 1973ರ ಉಪಬಂಧ 2(ಎಸ್)ರನ್ವಯ ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ, ಪೊಲೀಸ್ ಠಾಣಾಧಿಕಾರವನ್ನು ನೀಡಿ ಆದೇಶಿಸಿದ, ಸರ್ಕಾರದ ಅಧಿಸೂಚನೆಗಳನ್ನು ಪುನರುಜ್ಜೀವನಗೊಳಿಸಿ ಆದೇಶಿಸಿದೆ.
ಭ್ರಷ್ಟಾಚಾರ ನಿಗ್ರಹ ದಳವನ್ನು ರದ್ದುಗೊಳಿಸಿರುವುದರಿಂದ ಭ್ರಷ್ಟಾಚಾರ ನಿಗ್ರಹ ದಳಕ್ಕೆ ನೀಡಲಾಗಿದ್ದ ತನಿಖಾಧಿಕಾರ, ಪೊಲೀಸ್ ಠಾಣೆಗಳೆಂದು ಘೋಷಿಸಿ ರಾಜ್ಯವ್ಯಾಪ್ತಿ ಅಧಿಕಾರ ನೀಡಿರುವ ಆದೇಶಗಳನ್ನು ಹಿಂಪಡೆದಿರುವುದರಿಂದ ಭಷ್ಟಾಚಾರ ನಿಗ್ರಹ ದಳದಲ್ಲಿ ಪ್ರಸ್ತುತ ಬಾಕಿಯಿರುವ ತನಿಖೆಗಳು, ವಿಚಾರಣೆಗಳು, ಇತರ ಶಿಸ್ತು ಪ್ರಕರಣಗಳು ಹಾಗೂ ಖಾಸಗಿ ದೂರುದಾರರ ಪ್ರಕರಣಗಳನ್ನು ಸಂಪೂರ್ಣವಾಗಿ ಲೋಕಾಯುಕ್ತ ಸಂಸ್ಥೆಗೆ ವರ್ಗಾಯಿಸುವುದು ಎಂದು ಸರ್ಕಾರ ಆದೇಶದಲ್ಲಿ ಸ್ಪಷ್ಟಪಡಿಸಿದೆ.
Live Tv
[brid partner=56869869 player=32851 video=960834 autoplay=true]
ನವದೆಹಲಿ: ಕೇಸರಿ ಶಾಲು (Saffron Shawl) ಧರಿಸುವುದು ನಂಬಿಕೆಯ ಮುಗ್ಧ ಅಭಿವ್ಯಕ್ತಿಯಲ್ಲ, ಕೇಸರಿ ಶಾಲು ಧರಿಸುವುದು ನಂಬಿಕೆಯ ಆಕ್ರಮಣಕಾರಿ ಪ್ರದರ್ಶನವಾಗಿದೆ. ರುದ್ರಾಕ್ಷಿ, ನಾಮ, ಇತ್ಯಾದಿಗಳು ನಂಬಿಕೆಗಳಿಗೆ ಮುಗ್ಧ ಅಭಿವ್ಯಕ್ತಿಗಳಿಗೆ ಸಂವಿಧಾನದ 25ನೇ ವಿಧಿಯಡಿ ರಕ್ಷಣೆ ಇದೆ. ಕೇಸರಿ ಶಾಲು ಧರಿಸುವುದಕ್ಕಿಲ್ಲ ಎಂದು ಹಿರಿಯ ವಕೀಲ ದೇವದತ್ ಕಾಮತ್ (Devadatt Kamat) ವಾದ ಮಂಡಿಸಿದ್ದಾರೆ.
ಎರಡನೇ ದಿನದ ವಾದ ಮಂಡಿಸಿದ ವಕೀಲ ದೇವದತ್ ಕಾಮತ್, ಭಾರತೀಯ ಸಂವಿಧಾನದ 25 ನೇ ವಿಧಿಯ ಪ್ರಕಾರ ನಾನು ನನ್ನ ಹಕ್ಕನ್ನು ಚಲಾಯಿಸುವ ವಾತಾವರಣವನ್ನು ಸೃಷ್ಟಿಸುವುದು ನಿಮ್ಮ ಕರ್ತವ್ಯ. ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಲು ಒತ್ತಾಯಿಸಿದ ನಂತರ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಆ ಹಿನ್ನೆಲೆಯಲ್ಲಿ ನಿಷೇಧ ಹೇರಲಾಗಿದೆ ಎಂದು ಕರ್ನಾಟಕ ಅಡ್ವೊಕೇಟ್ ಜನರಲ್ ಹೇಳಿದ್ದರು. ಹೀಗೆ ಒತ್ತಡಕ್ಕೆ ಒಳಗಾಗಿ ಸರ್ಕಾರ ಆದೇಶಗಳನ್ನು ಮಾಡಬಹುದೇ ಎಂದು ಪ್ರಶ್ನಿಸಿದರು.
ಸಾರ್ವಜನಿಕ ಸುವ್ಯವಸ್ಥೆಯನ್ನು ಉಲ್ಲಂಘಿಸುವ ಆತಂಕವಿದ್ದ ಮಾತ್ರಕ್ಕೆ ಹಿಜಬ್ ಅನ್ನು ಹೇಗೆ ನಿಷೇಧಿಸಬಹುದು. ಕೆಲವು ಚಲನಚಿತ್ರಗಳ ವಿರುದ್ಧ ಆಕ್ಷೇಪ ಕೇಳಿ ಬಂದಾಗ ‘ಹೆಕ್ಲರ್ಸ್ ವೀಟೋ’ ಜಾರಿಗೊಳಿಸುವುದಿಲ್ಲ ಎಂದು ಈ ಹಿಂದೆ ಸುಪ್ರೀಂಕೋರ್ಟ್ ಹೇಳಿದೆ. ಹಿಜಬ್ ಧರಿಸಿದ ಹುಡುಗಿಯರಿಗೆ ಪ್ರವೇಶವನ್ನು ನಿರಾಕರಿಸಲಾಗಿದೆ ಎಂದು ವಾದಿಸಿದರು.
ಇದಕ್ಕೆ ಮಧ್ಯಪ್ರದೇಶ ಮಾಡಿದ ನ್ಯಾ.ಹೇಮಂತ್ ಗುಪ್ತಾ
ಹಿಜಬ್ ಧರಿಸಿದ ಕಾರಣಕ್ಕೆ ಪ್ರವೇಶ ನಿರಾಕರಿಸಿದ್ದಕ್ಕೆ ಶಾಲೆಗಳಿಂದ ಲಿಖಿತ ಆದೇಶ ಇದಿಯೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ವಕೀಲ ಕಾಮತ್ ಯಾವುದೇ ಲಿಖಿತ ಆದೇಶಗಳಿಲ್ಲ. ಏಕತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಹಿತದೃಷ್ಟಿಯಿಂದ ಸಮವಸ್ತ್ರವನ್ನು ಧರಿಸಿ ಎಂದು ಸರ್ಕಾರ ಹೇಳುತ್ತದೆ ಎಂದರು. ಇದಕ್ಕೆ ನಿಮ್ಮ ಸಮಸ್ಯೆ ಏನು ಎಂದು ನ್ಯಾ. ಧುಲಿಯಾ ಪ್ರಶ್ನಿಸಿದರು. ಇದಕ್ಕೆ ಪೂರಕ ಪ್ರಶ್ನೆ ಇಟ್ಟ ನ್ಯಾ. ಹೇಮಂತ್ ಗುಪ್ತಾ, ಸರ್ಕಾರ ಸ್ಕಾರ್ಫ್ ನಿಷೇಧವು ಆರ್ಟಿಕಲ್ 25 ರ ಉಲ್ಲಂಘನೆಯಲ್ಲ ಎಂದು ಹೇಳುತ್ತದೆ. ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದರು. ಇದನ್ನೂ ಓದಿ: Hijab Row: ಪರೀಕ್ಷೆ ವಂಚಿತರಾದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಲ್ಲ ಎಂದ ಶಿಕ್ಷಣ ಸಚಿವರ ನಿಲುವು ಖಂಡನೀಯ: ಕ್ಯಾಂಪಸ್ ಫ್ರಂಟ್
ಇದಕ್ಕೆ ಉತ್ತರಿಸಿ ದೇವದತ್ ಕಾಮತ್, ಕೇಸರಿ ಶಾಲು ಧರಿಸುವುದು ನಂಬಿಕೆಯ ಮುಗ್ದ ಪ್ರದರ್ಶನವಲ್ಲ. ರುದ್ರಾಕ್ಷಿ, ನಾಮ ಇತ್ಯಾದಿಗಳು ನಂಬಿಕೆಯ ಮುಗ್ಧ ಪ್ರದರ್ಶನವಾಗಿದೆ. ಆತ್ಮಸಾಕ್ಷಿಯ ಸ್ವಾತಂತ್ರ್ಯ ಮತ್ತು ಧರ್ಮದ ಸ್ವಾತಂತ್ರ್ಯ ಪರಸ್ಪರ ಹೊರಗಿಡುವುದು ಎಂದು ಹೈಕೋರ್ಟ್ ಹೇಳಿದೆ. ಕಾನೂನಿನಡಿಯಲ್ಲಿ ತಲೆ ಸ್ಕಾರ್ಫ್ ಧರಿಸಲು ನಿರ್ಬಂಧವಿದೆಯೇ ಎಂದರೇ ಅಂತಹ ಯಾವುದೇ ನಿಯಮಗಳಿಲ್ಲ.
ಸರ್ಕಾರದ ಸಾರ್ವಜನಿಕ ಆದೇಶಗಳು ನೈಜವಾಗಿರಬೇಕು ಅಥವಾ ನೈಜತೆಗೆ ಸಮೀಪದಲ್ಲಿರಬೇಕು, ದೂರವಿರಬಾರದು. ಸರ್ಕಾರ ಆದೇಶ ಗಂಗಾಜಲದಂತೆ ಸ್ಪಷ್ಟವಾಗಿದೆ ಎಂದು ಹೈಕೋರ್ಟ್ ಹೇಳಿದೆ. ಆದರೆ ಅದು ಸಂಪೂರ್ಣವಾಗಿ ಕೆಸರುಮಯವಾಗಿದೆ ಎಂದು ನಾನು ಹೇಳುತ್ತೇನೆ. ಹಿಂದೂ ಧರ್ಮದಲ್ಲಿ ನಾವು ದೇವತೆಗಳನ್ನು ಪೂಜಿಸುತ್ತೇವೆ. ಜೇಬಿನಲ್ಲಿ ಕೃಷ್ಣ ಅಥವಾ ರಾಮನ ಫೋಟೋವನ್ನು ಇಟ್ಟುಕೊಂಡಿರುತ್ತಾರೆ. ಫೋಟೋವನ್ನು ತೆಗೆದುಕೊಂಡು ಹೋಗುತ್ತಿದ್ದರೇ ಅದು ನನಗೆ ಭದ್ರತೆಯನ್ನು ನೀಡಿತು ಎನ್ನುವುದು ನಂಬಿಕೆ. ಇದು ಧಾರ್ಮಿಕ ಸ್ವಾತಂತ್ರ್ಯ, ನಂಬಿಕೆ ಅಥವಾ ಆತ್ಮಸಾಕ್ಷಿಯಾಗಿದೆ. ಇದನ್ನೂ ಓದಿ: Hijab Row: ಅನ್ಯ ಧರ್ಮೀಯರು ಜಾತ್ರೆಯಲ್ಲಿ ವ್ಯಾಪಾರ ಮಾಡಬಾರದು – ಕಾಪು ಮಾರಿಗುಡಿಗೆ ಪತ್ರ
ಅಲ್ಲದೇ ಸರ್ಕಾರ ಶಾಲಾ ಆಡಳಿತ ಮಂಡಳಿಗೆ ಸಮವಸ್ತ್ರ ನಿರ್ಧರಿಸುವ ಅಧಿಕಾರ ನೀಡಿದೆ. ಆಡಳಿತ ಮಂಡಳಿಯಲ್ಲಿ ಯಾರಿದ್ದಾರೆ? ಆಡಳಿತ ಮಂಡಳಿಯಲ್ಲಿ ಸ್ಥಳೀಯ ಶಾಸಕರಿದ್ದಾರೆ. ಪೋಷಕರು, ಇತರೆ ಪ್ರಮುಖರು ಸದಸ್ಯರಾದರು, ಸ್ಥಳೀಯ ಶಾಸಕರು ಅಧ್ಯಕ್ಷರಾಗಿದ್ದಾರೆ. ಇದರ ಪರಿಣಾಮಗಳೇನು ಎಂದು ದಯವಿಟ್ಟು ನ್ಯಾಯಾಲಯ ಅರ್ಥ ಮಾಡಿಕೊಳ್ಳಬೇಕು ಎಂದರು. ಇದಕ್ಕೆ ಮರು ಪ್ರಶ್ನೆ ಮಾಡಿದ ನ್ಯಾ.ಹೇಮಂತ್ ಗುಪ್ತಾ, ಹಾಗಾದರೆ ಅಲ್ಲಿ ಜನಪ್ರತಿನಿಧಿಗಳು ಇರುವುದು ನಿಮಗೆ ಇಷ್ಟವಿಲ್ಲವೇ ಎಂದು ಕೇಳಿದರು.
ಇದಕ್ಕೆ ಉತ್ತರಿಸಿದ ಕಾಮತ್, ಶಾಸಕರು ರಾಜ್ಯ ಸರ್ಕಾರದ ಅಧೀನದ ಅಧಿಕಾರವಲ್ಲ ಎಂದು ಈ ಹಿಂದೆ ನ್ಯಾಯಾಲಯ ಹೇಳಿದೆ. ಈ ಶಾಸಕರು ಯಾವುದು ನೈತಿಕತೆ ಎಂಬುದನ್ನು ನಿರ್ಧರಿಸಬಹುದೇ? ಸಂಪೂರ್ಣ ಕಾನೂನು ಬಾಹಿರವಾದ ಇಂತಹ ನಿರ್ಧಾರಗಳ ಅಗಾಧತೆಯನ್ನು ಕೋರ್ಟ್ ಅರ್ಥ ಮಾಡಿಕೊಳ್ಳಬೇಕು. ಇಡೀ ಪ್ರಕರಣದಲ್ಲಿ ಇನ್ನು ಹಲವು ಮಹತ್ವದ ಅಂಶಗಳಿದ್ದು, ಇದನ್ನು ಐದು ನ್ಯಾಯಾಧೀಶರ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕು ಎಂದು ಮನವಿ ಮಾಡಿ ವಾದ ಅಂತ್ಯಗೊಳಿಸಿದರು.
Live Tv
[brid partner=56869869 player=32851 video=960834 autoplay=true]
ನವದೆಹಲಿ: ಶಾಲಾ ವಿದ್ಯಾರ್ಥಿಗಳನ್ನು ಕರ್ನಾಟಕ ಹೈಕೋರ್ಟ್ (Karnataka High Court) ಕೈದಿಗಳಿಗೆ ಹೋಲಿಸಿದೆ. ಜೈಲಿನಲ್ಲಿ ಕೈದಿಗಳಿಗೆ ಯಾವುದೇ ಹಕ್ಕುಗಳು ಇರುವುದಿಲ್ಲ, ಅದೇ ರೀತಿ ಶಾಲೆಗಳಿಗೆ ತೆರಳಿದಾಗ ಮಕ್ಕಳು ಶಿಕ್ಷಕರ ಕಸ್ಟಡಿಯಲ್ಲಿ ಇರುತ್ತಾರೆ. ಅವರಿಗೂ ಹಕ್ಕುಗಳು ಇರುವುದಿಲ್ಲ ಎಂದು ಹೇಳಿದೆ. ಇದನ್ನು ಕೇಳಿ ನನಗೆ ಆಶ್ಚರ್ಯವಾಗಿದೆ. ಒಂದು ನ್ಯಾಯಾಂಗ ಸಂಸ್ಥೆಯಾಗಿ ಹೈಕೋರ್ಟ್ ಇದನ್ನೆಲ್ಲ ಹೇಗೆ ಹೇಳುತ್ತದೆ? ಎಂದು ಹಿರಿಯ ವಕೀಲ ದೇವದತ್ ಕಾಮತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಲಾ-ಕಾಲೇಜುಗಳ ತರಗತಿಗಳಲ್ಲಿ ಹಿಜಬ್ (Hijab Row) ನಿಷೇಧಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗಳ ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ದೇವದತ್ ಕಾಮತ್ ಹಲವು ಪ್ರಶ್ನೆಗಳನ್ನು ಸುಪ್ರೀಂಕೋರ್ಟ್ (Supreme Court) ಮುಂದಿಟ್ಟರು. ನ್ಯಾ. ಹೇಮಂತ್ ಗುಪ್ತಾ ನೇತೃತ್ವದ ದ್ವಿ ಸದಸ್ಯ ಪೀಠದಲ್ಲಿ ಎರಡನೇ ದಿನದ ವಿಚಾರಣೆ ನಡೆಯಿತು. ವಕೀಲ ಕಾಮತ್ ಎರಡು ಗಂಟೆಗಳ ಕಾಲ ಸುದೀರ್ಘ ವಾದ ಮಂಡಿಸಿದರು. ಇದನ್ನೂ ಓದಿ: Hijab Row: ಪರೀಕ್ಷೆ ವಂಚಿತರಾದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಲ್ಲ ಎಂದ ಶಿಕ್ಷಣ ಸಚಿವರ ನಿಲುವು ಖಂಡನೀಯ: ಕ್ಯಾಂಪಸ್ ಫ್ರಂಟ್
ಬುರ್ಖಾ ಅಲ್ಲ, ಹಿಜಬ್ ಧರಿಸುತ್ತಿದ್ದಾರೆ
ವಿದ್ಯಾರ್ಥಿನಿಯರು ತರಗತಿಗಳಲ್ಲಿ ಧರಿಸುತ್ತಿರುವುದು ಬುರ್ಕಾ ಅಲ್ಲ, ಅವರು ಹಿಜಬ್ ಧರಿಸುತ್ತಿದ್ದಾರೆ. ಹಿಜಬ್ (Hijab) ಅಂದ್ರೆ ತಲೆಗೆ ಸುತ್ತಿಕೊಳ್ಳುವ ಒಂದು ಬಟ್ಟೆಯಾಗಿದೆ. ಇದು ಕಪ್ಪು ಸೇರಿ ಬೇರೆ ಬೇರೆ ಬಣ್ಣಗಳಲ್ಲಿ ಇರುತ್ತದೆ. ವಿದ್ಯಾರ್ಥಿನಿಯರು ಶಾಲೆಯಲ್ಲಿ ಸಮವಸ್ತ್ರ ಬಟ್ಟೆಯ ಬಣ್ಣದೇ ಹಿಜಬ್ ಧರಿಸುತ್ತಿದ್ದಾರೆ. ಅವರು ಸಮವಸ್ತ್ರ ಬಣ್ಣ ಬಿಟ್ಟು ಬೇರೆ ಬಣ್ಣದ ಬಟ್ಟೆ ಧರಿಸುತ್ತಿಲ್ವಲ್ಲ. ಇದರಲ್ಲಿ ನಿಯಮಗಳ ಉಲ್ಲಂಘನೆ ಏನಿದೆ ಎಂದು ಪ್ರಶ್ನಿಸಿದರು.
ಹಿಜಬ್ ವಿಚಾರದಲ್ಲಿ ಸರ್ಕಾರ ತನ್ನ ಕರ್ತವ್ಯ ಮರೆತಿದೆ. ವಿದ್ಯಾರ್ಥಿನಿಯರು ಜೀನ್ಸ್ ಪ್ಯಾಂಟ್ ಹಾಕಿ ಕಾಲೇಜಿಗೆ ಬಂದಿರಲಿಲ್ಲ. ಯೂನಿಫಾರಂ ಹಾಕದೇ ಬಂದಿರಲಿಲ್ಲ. ಅಥವಾ ಬುರ್ಕಾ ಹಾಕಿ ತರಗತಿಗೆ ಹಾಜರಾಗಿರಲಿಲ್ಲ. ಕೇವಲ ಹೆಡ್ ಸ್ಕಾರ್ಫ್ ಹಾಕಿಕೊಂಡು ಬಂದಿದ್ದರು. ಇದನ್ನೇ ದೊಡ್ಡ ಅಪರಾಧವೆನ್ನುವಂತೆ ಸರ್ಕಾರ ಬಿಂಬಿಸಿದೆ. ವಿದ್ಯಾರ್ಥಿನಿಯರ ಶಿಕ್ಷಣದ ಹಕ್ಕು ಕಸಿದುಕೊಂಡಿದ್ದಾರೆ. ಸಮವಸ್ತ್ರದ ಮಾದರಿಯ ಹೆಡ್ ಸ್ಕಾಫ್ ಹಾಕಿದ್ರೆ ತಪ್ಪೇನು ಎಂದು ಕೇಳಿದರು.
ಕೇಂದ್ರಿಯ ವಿದ್ಯಾಲಯಗಳಲ್ಲಿ ಹಿಜಬ್‌ಗೆ ಅವಕಾಶ
ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿರುವ ಕೇಂದ್ರಿಯ ವಿದ್ಯಾಲಯಗಳಲ್ಲಿ ಹಿಜಬ್‌ಗೆ ಅವಕಾಶ ನೀಡಿದೆ. ಈವರೆಗೂ ಕೇಂದ್ರೀಯ ವಿದ್ಯಾನಿಲಯಗಳಲ್ಲಿ ನಿಯಮ ಬದಲಿಸಿಲ್ಲ. ಸಿಖ್‌ರಿಗೆ ಸಮವಸ್ತ್ರದ ಬಣ್ಣ ಟರ್ಬೈನ್‌ಗೆ ಅವಕಾಶ ನೀಡಿದೆ. ಅದೇ ರೀತಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಸಮವಸ್ತ್ರ ಬಣ್ಣದ ಹಿಜಬ್ ಧರಿಸಲು ಅವಕಾಶ ನೀಡಿದೆ. ರಾಜ್ಯಗಳಲ್ಲಿ ಮಾತ್ರ ಹಿಜಬ್‌ಗೆ ಅವಕಾಶ ಯಾಕಿಲ್ಲ ಎಂದರು. ಇದನ್ನೂ ಓದಿ: Hijab Row: ಅನ್ಯ ಧರ್ಮೀಯರು ಜಾತ್ರೆಯಲ್ಲಿ ವ್ಯಾಪಾರ ಮಾಡಬಾರದು – ಕಾಪು ಮಾರಿಗುಡಿಗೆ ಪತ್ರ
ಇದಕ್ಕೆ ಪೂರಕವಾಗಿ ಹಳೆ ಸುಪ್ರೀಂಕೋರ್ಟ್ ಕೋರ್ಟ್ ಆದೇಶವನ್ನು ಉಲ್ಲೇಖಿಸಿದ ಕಾಮತ್, ಬಿಜೋಯ್ ಇಮ್ಯಾನುವೆಲ್ ಪ್ರಕರಣದಲ್ಲಿ ವಿದ್ಯಾರ್ಥಿಗಳು ಧರ್ಮವನ್ನು ಮನೆಯಲ್ಲಿಯೇ ಬಿಟ್ಟು ಶಾಲೆಗೆ ಹೋಗಬೇಕು ಎಂಬ ವಾದವನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಲು ಇಷ್ಟಪಡದ ಬಗ್ಗೆ ವಿಚಾರಣೆ ನಡೆಸಿದ್ದ ಕೋರ್ಟ್ ಈ ಆದೇಶ ನೀಡಿತ್ತು. ರಾಷ್ಟ್ರಗೀತೆ ಹಾಡದಿದ್ದರೇ ದೇಶದ್ರೋಹವಲ್ಲ, ಆದರೆ ರಾಷ್ಟ್ರಗೀತೆಯ ವೇಳೆ ಎದ್ದು ನಿಲ್ಲಬೇಕು ಎಂದು ಕೋರ್ಟ್ ಹೇಳಿತ್ತು. ಈ ಆದೇಶ ಪ್ರಕಾರ ಧಾರ್ಮಿಕ ನಂಬಿಕೆಗಳನ್ನು ಶಾಲೆಯಲ್ಲಿ ಪಾಲಿಸಬಹುದು. ಈ ಆದೇಶದ ಅನ್ವಯ ಶಾಲೆಯಲ್ಲಿ ವಿದ್ಯಾರ್ಥಿನಿಯರು ಧಾರ್ಮಿಕ ನಂಬಿಕೆ ಪಾಲಿಸಬಹುದು ಎಂದರು.
ದಕ್ಷಿಣ ಆಫ್ರಿಕಾ ಕೋರ್ಟ್ ಮೂಗುತಿಗೆ ಅವಕಾಶ ಕೊಟ್ಟಿತ್ತು
ದಕ್ಷಿಣ ಆಫ್ರಿಕಾದ ಕೋರ್ಟ್ ಆದೇಶವನ್ನು ಉಲ್ಲೇಖಿಸಿ, ಶಾಲಾ ನಿಯಮಗಳಿಗೆ ವಿರುದ್ಧವಾಗಿ ಶಾಲೆಯಲ್ಲಿ ಮೂಗುತಿ ಧರಿಸಲು ತಮಿಳು ಹಿಂದೂ ವಿದ್ಯಾರ್ಥಿನಿಗೆ ದಕ್ಷಿಣ ಆಫ್ರಿಕಾದಲ್ಲಿ ನಿರಾಕರಿಸಲಾಗಿತ್ತು. ಆ ವಿದ್ಯಾರ್ಥಿನಿ ಕೋರ್ಟ್ ಮೆಟ್ಟಿಲೇರಿದ್ದಳು. ಆಕೆಗೆ ದಕ್ಷಿಣ ಆಫ್ರಿಕಾದ ಸಂವಿಧಾನದ ಪ್ರಕಾರ ಮೂಗುತಿ ಧರಿಸಲು ಕೋರ್ಟ್ ಅವಕಾಶ ನೀಡಿತು. ಅಲ್ಲದೆ ಅಮೆರಿಕಾ, ಕೆನಡಾ ಸೇರಿದಂತೆ ಹಲವು ದೇಶದ ಪೂರಕ ಆದೇಶಗಳನ್ನು ಪ್ರಸುತ್ತ ಪಡಿಸಿದರು.
ಸಾಮಾನ್ಯವಾಗಿ ಮಹಿಳೆಯರು ಸ್ಕಾಫ್ ಹಾಕಿಕೊಳ್ಳುತ್ತಾರೆ ಈ ರೀತಿಯ ಸಮಸ್ಯೆಗಳು ಎದುರಾದಾಗ ನ್ಯಾಯಾಲಯವು ಹೇಗೆ ವ್ಯವಹರಿಸುತ್ತದೆ ಎಂಬುದಕ್ಕೆ ಸ್ಪಷ್ಟವಾದ ಆದೇಶಗಳಿದೆ. ಇದು ಸಮುದಾಯದ ನಂಬಿಕೆಯಾಗಿದ್ದರೆ, ಒಬ್ಬ ಜಾತ್ಯತೀತ ನ್ಯಾಯಾಧೀಶರು ನಂಬಿಕೆಯನ್ನು ಒಪ್ಪಿಕೊಳ್ಳಲು ಬದ್ಧರಾಗಿರುತ್ತಾರೆ. ಅವರಿಗೆ ಈ ಬಗ್ಗೆ ತೀರ್ಪು ನೀಡುವ ಯಾವುದೇ ಹಕ್ಕಿಲ್ಲ.
ಬಿಂದಿ, ಮೂಗುತಿ ಕೂಡಾ ಒಂದು ಧಾರ್ಮಿಕ ಗುರುತು. ಮಹಿಳೆಯರು ಉತ್ತಮ ಸದ್ಗುಣಗಳನ್ನು ವೃದ್ಧಿಪಡಿಸಲು ಮತ್ತು ಸಮೃದ್ಧಿ ತರಲು ಮೂಗುತಿಯನ್ನು ಧರಿಸುತ್ತಾರೆ ಎನ್ನುವ ಧಾರ್ಮಿಕ ನಂಬಿಕೆಗಳಿವೆ. ಈ ನಂಬಿಕೆ ಸರಿ ತಪ್ಪು ಎನ್ನುವುದು ಬೇರೆ ಚರ್ಚೆ. ಅದೇ ರೀತಿ ಹಿಜಬ್ ಕೂಡಾ ಒಂದು ಧಾರ್ಮಿಕ ನಂಬಿಕೆಯಾಗಿದೆ.
ಓಲೆ, ಮೂಗುತಿ ಧಾರ್ಮಿಕತೆಯ ಭಾಗವೇ?
ದೇವದತ್ ಕಾಮತ್ ವಾದದ ವೇಳೆ ಮಧ್ಯಪ್ರದೇಶ ಮಾಡಿದ ನ್ಯಾ. ಹೇಮಂತ್ ಗುಪ್ತಾ, ಭಾರತ ಮಾತ್ರವಲ್ಲ ಪ್ರಪಂಚದಾದ್ಯಂತ ಮಹಿಳೆಯರು ಇಯರ್ ರಿಂಗ್ ಧರಿಸುತ್ತಾರೆ, ಮೂಗುತಿಯನ್ನು ಸಹ ಧರಿಸುತ್ತಾರೆ. ಆದರೆ ಇದು ಧಾರ್ಮಿಕ ಭಾಗವೇ? ನನಗೆ ತಿಳಿದ ಮಟ್ಟಿಗೆ ಮೂಗುತಿ ಧಾರ್ಮಿಕ ನಂಬಿಕೆಯ ಭಾಗವಲ್ಲ ಇದು ಫ್ಯಾಷನ್ ಆಗಿ ಬದಲಾಗಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: Hijab Row: ನಾವು ಯಾವ ದೇಶದಲ್ಲಿ ಇರುತ್ತೇವೆಯೋ ಆ ದೇಶದ ನಿಯಮಗಳನ್ನು ಪಾಲಿಸಬೇಕು: ಅಬ್ದುಲ್ ಖಾದರ್ ನಡುಕಟ್ಟಿನ್
ಇದಕ್ಕೆ ಪ್ರತಿಯಾಗಿ ಮತ್ತೆ ವಾದ ಮಂಡಿಸಿದ ದೇವದತ್ ಕಾಮತ್, ವಿದ್ಯಾರ್ಥಿಗಳ ಸಮವಸ್ತ್ರ ಹೊರತಾಗಿ ಹಲವು ಧಾರ್ಮಿಕ ಗುರುತುಗಳೊಂದಿಗೆ ಶಾಲೆಗೆ ತೆರಳುತ್ತಾರೆ. ಹಣೆ ಮೇಲೆ ನಾಮ ಹಾಕಲಾಗುತ್ತೆ, ರುದ್ರಾಕ್ಷಿ ಧರಿಸಲಾಗುತ್ತೆ, ಕ್ರಿಶ್ಚಿಯನ್ ಕೊರಳಲ್ಲಿ ಕ್ರಾಸ್ ಹಾಕಿಕೊಳ್ತಾರೆ. ಇವು ಎಲ್ಲವೂ ಧಾರ್ಮಿಕ ಗುರುತುಗಳು ಎಂದರು. ಇದಕ್ಕೆ ಮತ್ತೆ ಪ್ರಶ್ನೆ ಮಾಡಿದ ನ್ಯಾಯಾಧೀಶರು, ರುದ್ರಾಕ್ಷಿ, ಕ್ರಾಸ್ ಯೂನಿಫಾರಂ ಒಳಗಿರುತ್ತದೆ. ಅದನ್ನು ಗುರುತಿಸಲು ಇಲ್ಲಿ ಯಾರೂ ಶರ್ಟ್ ತೆಗೆಯುತ್ತಿಲ್ಲ. ಅದು ಹೇಗೆ ಸಮವಸ್ತ್ರ ನಿಯಮ ಉಲ್ಲಂಘನೆಯಾಗುತ್ತದೆ ಎಂದರು.
ಬಟ್ಟೆ ಬಿಚ್ಚುವ ಹಕ್ಕು ಕೂಡ ಮೂಲಭೂತ ಹಕ್ಕು?
ಮುಂದುವರಿದು, ನಾವು ಇದನ್ನು ತರ್ಕಬದ್ಧವಲ್ಲದ ತುದಿಗಳಿಗೆ ಕೊಂಡೊಯ್ಯಲು ಸಾಧ್ಯವಿಲ್ಲ. ನೀವು ಬಟ್ಟೆ ಧರಿಸುವುದು ಮೂಲಭೂತ ಹಕ್ಕು ಎಂದು ಹೇಳಿದರೆ, ಬಟ್ಟೆ ಬಿಚ್ಚುವ ಹಕ್ಕು ಕೂಡ ಮೂಲಭೂತ ಹಕ್ಕು ಆಗುತ್ತದೆ. ಆರ್ಟಿಕಲ್ 19 (1)a ರ ಭಾಗವಾಗಿ ಉಡುಗೆ ಮೂಲಭೂತ ಹಕ್ಕು ಎಂದು ಎಲ್ಲಿದೆ ಎಂಬುದನ್ನು ನಮಗೆ ತೋರಿಸಿ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ವಕೀಲ ದೇವದತ್ ಕಾಮತ್, ನಾನು ಕ್ಲೀಷೆ ವಾದಗಳನ್ನು ಮಾಡಲು ಇಲ್ಲಿಗೆ ಬಂದಿಲ್ಲ. ನಾನು ಒಂದು ಅಂಶವನ್ನು ಸಾಬೀತುಪಡಿಸುತ್ತಿದ್ದೇನೆ. ವಿದ್ಯಾರ್ಥಿನಿಯರು ಸಮವಸ್ತ್ರವನ್ನು ಧರಿಸುವುದಿಲ್ಲ ಎಂದು ನಾನು ಹೇಳುತ್ತಿಲ್ಲ. ಆದರೆ ಸಮವಸ್ತ್ರದ ಜೊತೆಗೆ ನಾನು ಸ್ಕಾರ್ಫ್ ಅನ್ನು ಧರಿಸಲು ಕೇಳುತ್ತಿದ್ದೇನೆ. ಅದು ಡ್ರೆಸ್ ಕೋಡ್ ಅನ್ನು ಉಲ್ಲಂಘಿಸುತ್ತದೆಯೇ? ಹಿಜಬ್ ಧರಿಸುವುದನ್ನು ಆರ್ಟಿಕಲ್ 19 ರ ಆಧಾರದ ಮೇಲೆ ನಿರ್ಬಂಧಿಸಬಹುದೇ ಎಂದು ಮರು ಪ್ರಶ್ನಿಸಿದರು. ಇದನ್ನೂ ಓದಿ: Hijab Row – ಮಂಡ್ಯ ವಿದ್ಯಾರ್ಥಿನಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿದ ಜಮಾತೆ ಉಲೆಮಾ ಹಿಂದ್
ಕೋರ್ಟ್ ಸಮಯ ಅಂತ್ಯವಾದ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ 11:30 ಕ್ಕೆ ವಿಚಾರಣೆ ಮುಂದೂಡಲಾಯಿತು. ಈ ವೇಳೆ ಮಧ್ಯಪ್ರವೇಶ ಮಾಡಿದ ಮತ್ತೋರ್ವ ವಕೀಲರು ಶಾಲೆ-ಕಾಲೇಜುಗಳ ತರಗತಿಗಳಲ್ಲಿ ಹಿಜಬ್ ನಿಷೇಧಿಸಿದ ಆದೇಶದ ಬಗ್ಗೆ ವಾದಿಸಲು ಮುಸ್ಲಿಂ ವಿದ್ವಾಂಸರೊಬ್ಬರು ಇಚ್ಛಿಸಿದ್ದಾರೆ, ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಅದಕ್ಕೆ ಕೋರ್ಟ್ ಅನುಮತಿ ನೀಡಿದೆ.
Live Tv
[brid partner=56869869 player=32851 video=960834 autoplay=true]
ನವದೆಹಲಿ: ಶಾಲಾ ಮತ್ತು ಕಾಲೇಜು ತರಗತಿಗಳಲ್ಲಿ ಹಿಜಬ್ ನಿಷೇಧಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆ ನಡೆಸಲಿದೆ.
ಈ ಹಿಂದೆ, ಆಗಿನ ಸಿಜೆಐ ಎನ್.ವಿ.ರಮಣ ನೇತೃತ್ವದ ಪೀಠದ ಮುಂದೆ ಹಲವಾರು ಸಂದರ್ಭಗಳಲ್ಲಿ ತುರ್ತು ವಿಚಾರಣೆಗಾಗಿ ಅರ್ಜಿಗಳನ್ನು ಉಲ್ಲೇಖಿಸಲಾಗಿತ್ತು. ಆದರೆ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡಿರಲಿಲ್ಲ.
ಶಾಲಾ-ಕಾಲೇಜುಗಳ ಏಕರೂಪ ಸಮವಸ್ತ್ರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಿರ್ದೇಶಿಸಿದ ಕರ್ನಾಟಕ ಸರ್ಕಾರದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿತ್ತು. ಹಿಜಬ್ ಧರಿಸುವುದು ಅಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಹೈಕೋರ್ಟ್ ತೀರ್ಪಿನಲ್ಲಿ ಹೇಳಿತ್ತು. ಹಿಜಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಇದನ್ನೂ ಓದಿ: ರಾಷ್ಟ್ರಕ್ಕಾಗಿ ಖಾದಿ, ಆದ್ರೆ ರಾಷ್ಟ್ರಧ್ವಜಕ್ಕೆ ಚೈನೀಸ್ ಪಾಲಿಸ್ಟರ್ : ಮೋದಿ ವಿರುದ್ಧ ರಾಹುಲ್ ಟೀಕೆ
ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಮೇಲ್ಮನವಿಯೊಂದರಲ್ಲಿ, ʻಸರ್ಕಾರಿ ಅಧಿಕಾರಿಗಳ ಮಲತಾಯಿ ಧೋರಣೆಯು ವಿದ್ಯಾರ್ಥಿಗಳ ನಂಬಿಕೆಗಳಿಗೆ ಅಡ್ಡಿಪಡಿಸಿದೆ. ಅನಪೇಕ್ಷಿತ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಗೆ ಕಾರಣವಾಗಿದೆʼ ಎಂದು ಆರೋಪಿಸಲಾಗಿದೆ.
ಹಿಜಬ್ ಅಥವಾ ಸ್ಕಾರ್ಫ್ ಧರಿಸುವುದು ಇಸ್ಲಾಂ ಧರ್ಮದ ಅತ್ಯಗತ್ಯ ಆಚರಣೆ ಎಂದು ಮೇಲ್ಮನವಿಯಲ್ಲಿ ಉಲ್ಲೇಖಿಸಲಾಗಿದೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ನಡೆಯೋದು ಬಹುತೇಕ ಖಚಿತವಾಗಿದೆ. ಹೈಕೋರ್ಟ್ ಏಕಸದಸ್ಯ ಪೀಠದ ಮಧ್ಯಂತರ ತೀರ್ಪನ್ನು ಮಾರ್ಪಾಡು ಮಾಡಿರುವ ವಿಭಾಗೀಯ ಪೀಠ, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ನಿರ್ಧಾರವನ್ನು ಸರ್ಕಾರಕ್ಕೆ ಬಿಟ್ಟಿದೆ.
ಆಗಸ್ಟ್ 31ರಿಂದ ನಿರ್ದಿಷ್ಟ ಅವಧಿಗೆ ಧಾರ್ಮಿಕ ಕಾರ್ಯಕ್ರಮಕ್ಕೆ ಅವಕಾಶ ನೀಡಬಹುದು. ಗಣೇಶೋತ್ಸವ ಮಾಡಬಹುದು. ಆದರೆ ಈ ಬಗ್ಗೆ ಅನುಮತಿ ನೀಡೋದು ಬಿಡೋದು ಸರ್ಕಾರದ ವಿವೇಚನೆಗೆ ಬಿಟ್ಟಿದ್ದೇವೆ ಎಂದು ಹೈಕೋರ್ಟ್ ಆದೇಶ ನೀಡಿದೆ. ಗಣೇಶೋತ್ಸವಕ್ಕೆ ಒಂದು ದಿನ ಮಾತ್ರ ಅವಕಾಶ ನೀಡಬಹುದು ಎಂದು ಪೊಲೀಸ್ ಇಲಾಖೆ ಶಿಫಾರಸ್ಸು ಮಾಡಿದೆ. ಕೋರ್ಟ್ ಕೂಡ ಇದೇ ವಿಚಾರವನ್ನು ಪ್ರಸ್ತಾಪ ಮಾಡಿದೆ. ಇದನ್ನೂ ಓದಿ: ಈದ್ಗಾದಲ್ಲಿ ಗಣೇಶೋತ್ಸವಕ್ಕೆ ಬ್ರೇಕ್- ಹೈಕೋರ್ಟ್ ಆದೇಶದ ಬೆನ್ನಲ್ಲೇ ಕಣ್ಣೀರಿಟ್ಟ ಯಶವಂತ್
ಪಾರ್ಟಿದಾರರು ಸುಪ್ರೀಂಕೋರ್ಟ್ ಮೊರೆ ಹೋಗಬಹುದು ಎಂದು ಕೂಡ ಹೈಕೋರ್ಟ್ ತಿಳಿಸಿದೆ. ಆದರೆ ನಾಳೆಯಿಂದ ಗುರುವಾರದವರೆಗೆ ಕೋರ್ಟ್ ರಜೆ ಇರುವ ಕಾರಣ, ವಕ್ಫ್ ಬೋರ್ಡ್ ಮೇಲ್ಮನವಿ ಸಲ್ಲಿಸುವ ಸಾಧ್ಯತೆಗಳು ಕಡಿಮೆ ಇವೆ. ಚಾಮರಾಜಪೇಟೆ ಮೈದಾನ ಮಾಲೀಕತ್ವ ವಿಚಾರವಾಗಿ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ವಿಭಾಗೀಯ ಪೀಠದ ಮೊರೆ ಹೋಗಿತ್ತು.ಇದನ್ನೂ ಓದಿ: ಹೆಚ್‌ಡಿಕೆ ರಾಜಕೀಯ ಸ್ಟಂಟ್ ಮಾಡಿದರೆ ಉಪಯೋಗವೇನು – ಸಚಿವ ಸುಧಾಕರ್ ಪ್ರಶ್ನೆ
ಒಂದು ದಿನದ ಮಟ್ಟಿಗಾದ್ರೂ ಗಣೇಶೋತ್ಸವಕ್ಕೆ ಅನುಮತಿಸಿ. ಈ ಬಗ್ಗೆ ಅರ್ಜಿಗಳು ಬರುತ್ತಿವೆ. ಅವುಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಎಲ್ಲಾ ಸಮುದಾಯಗಳನ್ನು ಸಮಾನವಾಗಿ ಕಾಣಬೇಕಿದೆ. ಎರಡು ಸಮುದಾಯಗಳ ಹಿತಾಸಕ್ತಿ ಪರಿಗಣಿಸಿ ತೀರ್ಪು ನೀಡಬೇಕು ಎಂದು ಎಜಿ ಪ್ರಭುಲಿಂಗ ನಾವಡಗಿ ವಾದ ಮಂಡಿಸಿದ್ರು. ಇದಕ್ಕೆ ಹೈಕೋರ್ಟ್ ಕೂಡ ಸ್ಪಂದಿಸಿತು. ಹೈಕೋರ್ಟ್ ತೀರ್ಪಿಗೆ ಸಚಿವ ಅಶೋಕ್ ಸಂತಸ ವ್ಯಕ್ತಪಡಿಸಿದ್ದಾರೆ. ಕೋರ್ಟ್ ತೀರ್ಪು ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ನಾಳೆ ಸಿಎಂ ಬೊಮ್ಮಾಯಿ ಸಭೆ ನಡೆಸಿ, ಕಾನೂನು ಸುವ್ಯವಸ್ಥೆಗೆ ಅನುಗುಣವಾಗಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಸರ್ಕಾರ ಒಂದು ದಿನದ ಮಟ್ಟಿಗೆ ಗಣೇಶೋತ್ಸವಕ್ಕೆ ಅನುಮತಿ ನೀಡುವ ಸಾಧ್ಯತೆಗಳು ಹೆಚ್ಚಿವೆ. ಚಾಮರಾಜಪೇಟೆ ನಾಗರೀಕರ ಒಕ್ಕೂಟ ಮತ್ತು ಹಿಂದೂ ಸಂಘಟನೆಗಳು ಈ ಬೆಳವಣಿಗೆಯಿಂದ ಖುಷಿ ಆಗಿವೆ. ಕೋರ್ಟ್ ಆದೇಶ ಪೊಲೀಸ್ ಆಯುಕ್ತರು ಈದ್ಗಾ ಮೈದಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Live Tv
[brid partner=56869869 player=32851 video=960834 autoplay=true]