Tag: Karnataka High Court

  • ಬಿಎಸ್‌ವೈ ವಿರುದ್ಧ ಪೋಕ್ಸೊ ಕೇಸ್‌; ಸೆ.27 ಕ್ಕೆ ವಿಚಾರಣೆ ಮುಂದೂಡಿಕೆ

    ಬಿಎಸ್‌ವೈ ವಿರುದ್ಧ ಪೋಕ್ಸೊ ಕೇಸ್‌; ಸೆ.27 ಕ್ಕೆ ವಿಚಾರಣೆ ಮುಂದೂಡಿಕೆ

    ಬೆಂಗಳೂರು: ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ (B.S.Yediyurappa) ವಿರುದ್ಧ ದಾಖಲಾಗಿರುವ ಪೋಕ್ಸೊ ಪ್ರಕರಣದ ವಿಚಾರಣೆಯನ್ನು ಸೆ.27ಕ್ಕೆ ಹೈಕೋರ್ಟ್‌ ಮುಂದೂಡಿದೆ.

    ಸಿಐಡಿ ಸಲ್ಲಿಸಿದ್ದ ಚಾರ್ಜ್‌ಶೀಟ್ ರದ್ದು ಮಾಡುವಂತೆ ಕೋರಿ ಹೈಕೋರ್ಟ್‌ಗೆ ಯಡಿಯೂರಪ್ಪ ಮನವಿ ಸಲ್ಲಿಸಿದ್ದರು. ಸಮಯದ ಅಭಾವದ ಹಿನ್ನೆಲೆ ವಿಚಾರಣೆ‌ ಮುಂದೂಡಿಕೆ ಮಾಡಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಹಿಟ್ಲರ್ ಆಗಿದ್ದಾರೆ – ಬಿಜೆಪಿ ನಾಯಕರನ್ನು ಹತ್ತಿಕ್ಕುವ ಕೆಲಸ ಮಾಡ್ತಿದ್ದಾರೆ: ಶೋಭಾ ಕರಂದ್ಲಾಜೆ

    ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಆದೇಶ ಹೊರಡಿಸಿದ್ದಾರೆ. ಅಲ್ಲಿವರೆಗೂ ಹೈಕೋರ್ಟ್‌ನಿಂದ ಮಧ್ಯಂತರ ರಕ್ಷಣೆ ಮುಂದೂಡಿಕೆಯಾಗಿದೆ.

    ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಪೋಕ್ಸೊ (POCSO) ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಜಾಮೀನಿನ ವಾದ-ಪ್ರತಿವಾದ ಮುಕ್ತಾಯ; ಆದೇಶ ಕಾಯ್ದಿರಿಸಿದ ನ್ಯಾಯಾಧೀಶರು

  • ಪ್ರಜ್ವಲ್ ರೇವಣ್ಣ ಜಾಮೀನಿನ ವಾದ-ಪ್ರತಿವಾದ ಮುಕ್ತಾಯ; ಆದೇಶ ಕಾಯ್ದಿರಿಸಿದ ನ್ಯಾಯಾಧೀಶರು

    ಪ್ರಜ್ವಲ್ ರೇವಣ್ಣ ಜಾಮೀನಿನ ವಾದ-ಪ್ರತಿವಾದ ಮುಕ್ತಾಯ; ಆದೇಶ ಕಾಯ್ದಿರಿಸಿದ ನ್ಯಾಯಾಧೀಶರು

    – ಹೆಚ್‌.ಡಿ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಸೆ.26ಕ್ಕೆ ಮುಂದೂಡಿಕೆ

    ಬೆಂಗಳೂರು: ಅತ್ಯಾಚಾರ ಆರೋಪ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಜಾಮೀನೀನ ಅರ್ಜಿಯ ವಾದ ಪ್ರತಿವಾದ ಮುಗಿದಿದ್ದು, ಆದೇಶ ಕಾಯ್ದಿರಿಸಲಾಗಿದೆ.

    ಹೈಕೋರ್ಟ್‌ನ (Karnataka High Court) ಜನಪ್ರತಿನಿಧಿಗಳ ಪೀಠದಲ್ಲಿ ಎರಡು ಕೇಸ್ ಗಳಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಹಾಗೂ ಒಂದು ಅತ್ಯಾಚಾರ ಪ್ರಕರಣದಲ್ಲಿ ಜಾಮೀನಿಗಾಗಿ ಪ್ರಜ್ವಲ್ ಅರ್ಜಿ ಸಲ್ಲಿಸಿದ್ದರು. ಪ್ರಜ್ವಲ್ ಪರ ಹಿರಿಯ ವಕೀಲ ಪ್ರಭುಲಿಂಗ ನಾವಡಗಿ ವಾದ ಮಂಡಿಸಿ, ಇದೊಂದು ರಾಜಕೀಯ ಷಡ್ಯಂತ್ರ್ಯವಾಗಿದ್ದು, 3-4 ವರ್ಷಗಳ ಹಿಂದೆ ಅತ್ಯಾಚಾರವಾಗಿದ್ದ ಬಗ್ಗೆ ಉಲ್ಲೇಖಿಸಿದ್ದಾರೆ. ಅತ್ಯಾಚಾರ ನಡೆದಿದೆ ಅನ್ನೋದಾದ್ರೆ ಆಗಲೇ ಯಾಕೆ ದೂರು ನೀಡಿರಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: J&K ಚುನಾವಣೆಯಲ್ಲಿ ಕಾಂಗ್ರೆಸ್‌-ಎನ್‌ಸಿ ಮೈತ್ರಿಕೂಟ ಗೆಲ್ಲುವ ಸಾಧ್ಯತೆ ಹೆಚ್ಚಿದೆ: ಪಾಕ್‌ ರಕ್ಷಣಾ ಸಚಿವ

    ಪ್ರಜ್ವಲ್‌ ವಿರುದ್ಧ ದೂರು ದಾಖಲಾಗಿರುವುದು ದುರುದ್ದೇಶಪೂರಕ. ತನಿಖೆಗೆ ಸ್ಪಂದಿಸಿ, ಕಳೆದ 4 ತಿಂಗಳಿಂದ ಜೈಲಲಿದ್ದಾರೆ. ಹೀಗಾಗಿ ಜಾಮೀನು ನೀಡುವಂತೆ ವಾದ ಮಂಡಿಸಿದ್ರು. ಇದಕ್ಕೆ ಪರತಿವಾದ ಸಲ್ಲಿಸಿದ್ದ ಎಸ್‌ಪಿಪಿ ಪ್ರೊ.ರವಿವರ್ಮಕುಮಾರ್, ಆರೋಪಿ ಸಾಕ್ಷಿನಾಶ ಪಡಿಸಿದ್ದು, ಈವರೆಗೂ ತನಿಖೆಗೆ ಮೊಬೈಲ್ ಕೊಟ್ಟಿಲ್ಲ. ಎಫ್‌ಐಆರ್‌ ದಾಖಲಾಗ್ತಿದ್ದಂತೆ ವಿದೇಶಕ್ಕೆ ಹಾರಿ ತಲೆ ಮರೆಸಿಕೊಂಡಿದ್ರು. ಪ್ರಭಾವಿಯಾಗಿದ್ದು ಜಾಮೀನಿನ ಮೇಲೆ ಹೊರ ಬಂದ್ರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರ್ತಾರೆ. ಹೀಗಾಗಿ ಜಾಮೀನು ನೀಡಬಾರದು ಅಂತ ಪ್ರತಿವಾದ ಮಂಡಿಸಿದ್ರು. ವಾದ-ಪ್ರತಿ ವಾದ ಆಲಿಸಿದ ಮಾನ್ಯ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಆದೇಶವನ್ನ ಕಾಯ್ದಿರಿಸಿದ್ದಾರೆ. ಇದನ್ನೂ ಓದಿ: ಹೊರಗೆ ಹೋದ್ಮೇಲೆ ರೇಣುಕಾಸ್ವಾಮಿ ಕುಟುಂಬಕ್ಕೆ ಸಹಾಯ ಮಾಡ್ತೀನಿ – ದರ್ಶನ್ ಪಶ್ಚಾತ್ತಾಪದ ಮಾತು

    ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಸೆ.26ಕ್ಕೆ ಮುಂದೂಡಿಕೆ:
    ಇನ್ನೂ ಕೆ.ಆರ್‌ ನಗರ ಸಂತ್ರಸ್ತೆ ಪ್ರಕರಣ ರದ್ದು ಕೋರಿ ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಏಕಸದಸ್ಯ ಪೀಠವು ಸೆ.26ಕ್ಕೆ ಮುಂದೂಡಿದೆ. ಇದನ್ನೂ ಓದಿ: ದರ್ಶನ್ ಬಿಡುಗಡೆಗಾಗಿ ದೇವಿ ಮೊರೆ ಹೋದ ಫ್ಯಾನ್ಸ್‌- ಬೂದುಕುಂಬಳಕಾಯಿ ದೀಪ ಬೆಳಗಿಸಿ ವಿಶೇಷ ಪೂಜೆ

  • HSRP ನಂಬರ್‌ ಪ್ಲೇಟ್‌ ಅಳವಡಿಕೆ – ನ.20 ರವರೆಗೆ ಅವಧಿ ವಿಸ್ತರಣೆ

    ಬೆಂಗಳೂರು: ಅತಿ ಸುರಕ್ಷಿತ ನೋಂದಣಿ ಫಲಕ (HSRP) ಅಳವಡಿಸದ ವಾಹನ ಸವಾರರಿಗೆ ಕೊಂಚ ರಿಲೀಫ್‌ ಸಿಕ್ಕಿದೆ. ಹೆಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಕೆಗೆ ನ.20 ರವರೆಗೆ ಅವಧಿ ವಿಸ್ತರಿಸಿ ಹೈಕೋರ್ಟ್‌ ಆದೇಶ ಹೊರಡಿಸಿದೆ.

    ನಂಬರ್ ಪ್ಲೇಟ್ ಅಳವಡಿಕೆಗೆ ಕಾಲಾವಕಾಶ ಕೋರಿ ಹಿರಿಯ ವಕೀಲ ದೇವದತ್ ಕಾಮತ್ ಅವರು ಹೈಕೋರ್ಟ್‌ ಮನವಿ ಸಲ್ಲಿಸಿದ್ದರು. ಮನವಿ ಪರಿಗಣಿಸಿದ ನ್ಯಾಯಾಲಯ ವಿಚಾರಣೆ ಮುಂದೂಡಿಕೆ ಮಾಡಿದೆ.

    ನವೆಂಬರ್ 20 ಕ್ಕೆ ಅರ್ಜಿ ವಿಚಾರಣೆ ಮುಂದೂಡಿಕೆ ಮಾಡಲಾಗಿದೆ. ಇದರಿಂದ ವಾಹನ ಸವಾರರಿಗೆ ಸದ್ಯಕ್ಕೆ ದಂಡದ ಟೆನ್ಷನ್‌ ತಪ್ಪಿದೆ.

  • MUDA Case: ಸಿಎಂ ಸಿದ್ದರಾಮಯ್ಯಗೆ ಮತ್ತೆ ರಿಲೀಫ್‌ – ಅನಿರ್ಧಿಷ್ಟಾವಧಿ ವರೆಗೆ ತೀರ್ಪು ಕಾಯ್ದಿರಿಸಿದ ಕೋರ್ಟ್‌

    MUDA Case: ಸಿಎಂ ಸಿದ್ದರಾಮಯ್ಯಗೆ ಮತ್ತೆ ರಿಲೀಫ್‌ – ಅನಿರ್ಧಿಷ್ಟಾವಧಿ ವರೆಗೆ ತೀರ್ಪು ಕಾಯ್ದಿರಿಸಿದ ಕೋರ್ಟ್‌

    ಬೆಂಗಳೂರು: ಮುಡಾ ಹಗರಣ (MUDA Scam) ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯಗೆ (Siddaramaiah) ಮತ್ತೆ ರಿಲೀಫ್‌ ಸಿಕ್ಕಿದೆ. ಅನಿರ್ಧಿಷ್ಟಾವಧಿ ವರೆಗೆ ತೀರ್ಪು ಕಾಯ್ದಿರಿಸಿ ಹೈಕೋರ್ಟ್‌ ಆದೇಶ ಹೊರಡಿಸಿದೆ.

    ಇಂದು ನಡೆದ ವಿಚಾರಣೆಯಲ್ಲಿ ವಾದ-ಪ್ರತಿವಾದ ಆಲಿಸಿದ ನ್ಯಾ.ನಾಗಪ್ರಸನ್ನ ತೀರ್ಪು ಕಾಯ್ದಿರಿಸಿ ಆದೇಶಿಸಿದ್ದಾರೆ. ಮುಂದಿನ ತೀರ್ಪು ಬರುವವರೆಗೂ ಮಧ್ಯಂತರ ಆದೇಶ ಮುಂದುವರಿಯಲಿದೆ. ಇದನ್ನೂ ಓದಿ: ಮೀಸಲಾತಿ ರದ್ದು ಹೇಳಿಕೆ ವಿವಾದ – ರಾಹುಲ್ ಗಾಂಧಿ ಪರ ನಿಂತ ಸಿಎಂ

    ಮುಡಾ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ಕ್ರಿಮಿನಲ್‌ ಪ್ರಕರಣದ ತನಿಖೆಗೆ ರಾಜ್ಯಪಾಲರು ನೀಡಿರುವ ಆದೇಶವನ್ನು ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ಗುರುವಾರ ಹೈಕೋರ್ಟ್‌ನಲ್ಲಿ ನಡೆಯಿತು.

  • MUDA Scam | ಸೋಮವಾರ ಸಿಎಂ ಅರ್ಜಿ ಮತ್ತೆ ವಿಚಾರಣೆ

    MUDA Scam | ಸೋಮವಾರ ಸಿಎಂ ಅರ್ಜಿ ಮತ್ತೆ ವಿಚಾರಣೆ

    ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಕೇಸಲ್ಲಿ (MUDA Case) ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿರೋ ರಿಟ್ ಅರ್ಜಿ ವಿಚಾರಣೆ ಸೋಮವಾರ ಹೈಕೋರ್ಟ್‌ನಲ್ಲಿ (Karnataka High Court) ನಡೆಯಲಿದೆ.

    ಸರ್ಕಾರದ ಪರ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಲಿದ್ದಾರೆ. ಇದಲ್ಲದೇ, ಸೆಪ್ಟೆಂಬರ್ 12ರಂದು ಕೂಡ ವಾದ ಸರಣಿ ಮುಂದುವರೆಯಲಿದೆ. ಅಂದು ಸಿಎಂ ಪರ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಲಿದ್ದಾರೆ. ಇದನ್ನೂ ಓದಿ: MUDA Scam | ವೈಟ್ನರ್‌ ಹಿಂದಿರುವ ಅಕ್ಷರಗಳೇನು? – ವೀಡಿಯೋ ಸಮೇತ ಸಾಕ್ಷಿ ನೀಡಿದ ಸಿದ್ದರಾಮಯ್ಯ

    ಹೀಗಾಗಿ ಸೋಮವಾರ ಹೈಕೋರ್ಟ್ ಆದೇಶ ನೀಡುವ ಸಾಧ್ಯತೆ ಕಡಿಮೆ ಇದೆ. ಈ ಮಧ್ಯೆ, ಮುಡಾ ಟೆನ್ಶನ್‌ನಲ್ಲಿಯೋ ಏನೋ ಸಚಿವ ಬೈರತಿ ಸುರೇಶ್ ಟೆಂಪಲ್ ರನ್ ಮಾಡಿದ್ದಾರೆ. ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ ಮತ್ತು ನಂಜನಗೂಡಿನ ಶ್ರೀಕಂಠೇಶ್ವರನ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: MUDA Scam | ಕೋರ್ಟ್ ತೀರ್ಮಾನದ ಮೇಲೆ ಸಿಎಂ ಭವಿಷ್ಯ – ಕೋವಿಡ್ ಹಗರಣ ವರದಿಗೆ ಉತ್ತರ ಕೊಡ್ತೇವೆ: ಬೊಮ್ಮಾಯಿ  

    ಈ ಮಧ್ಯೆ, ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಪಾತ್ರ ಇಲ್ಲ. ಹೀಗಾಗಿ ಕೋರ್ಟ್ನಲ್ಲಿ ಅವರಿಗೆ ನ್ಯಾಯ ಸಿಗಲಿದೆ ಎಂಬ ವಿಶ್ವಾಸವನ್ನು ಸಚಿವ ಎಂಬಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: MUDA Scam Case | ಸಿಎಂ ಪತ್ನಿ ವಿರುದ್ಧ ದೂರು ದಾಖಲು

    ರಾಜ್ಯಪಾಲರ ಆದೇಶ ವಜಾಗೊಳಿಸಬೇಕು ಎಂದು ಸಿಎಂ ಸಲ್ಲಿಸಿದ್ದ ಅರ್ಜಿಯನ್ನು ಇದೇ ಸೆಪ್ಟೆಂಬರ್‌ 2ರಂದು ವಿಚಾರಣೆ ನಡೆಸಿದ್ದ ಕೋರ್ಟ್‌ 2ನೇ ಬಾರಿಗೆ ಮುಂದೂಡಿಕೆ ಮಾಡಿತ್ತು. ಗಣೇಶ ಹಬ್ಬದ ಬಳಿಕ ಸೆಪ್ಟೆಂಬರ್‌ 9 ರಂದು ಮಧ್ಯಾಹ್ನ 2:30ಕ್ಕೆ ಹೈಕೋರ್ಟ್‌ (Karnataka High Court) ವಿಚಾರಣೆ ನಡೆಸುವುದಾಗಿ ತಿಳಿಸಿತ್ತು. ಇದನ್ನೂ ಓದಿ: MUDA Scam | ಸಿಎಂ ಸಿದ್ದರಾಮಯ್ಯಗೆ ಮಧ್ಯಂತರ ರಿಲೀಫ್ –‌ ಸೆ.9ಕ್ಕೆ ಮತ್ತೆ ವಿಚಾರಣೆ ಮುಂದೂಡಿಕೆ!

  • MUDA Scam | ಸಿಎಂ ಸಿದ್ದರಾಮಯ್ಯಗೆ ಮಧ್ಯಂತರ ರಿಲೀಫ್ –‌ ಸೆ.9ಕ್ಕೆ ಮತ್ತೆ ವಿಚಾರಣೆ ಮುಂದೂಡಿಕೆ!

    MUDA Scam | ಸಿಎಂ ಸಿದ್ದರಾಮಯ್ಯಗೆ ಮಧ್ಯಂತರ ರಿಲೀಫ್ –‌ ಸೆ.9ಕ್ಕೆ ಮತ್ತೆ ವಿಚಾರಣೆ ಮುಂದೂಡಿಕೆ!

    ಬೆಂಗಳೂರು: ತಮ್ಮ ವಿರುದ್ಧ ರಾಜ್ಯಪಾಲರು ತನಿಖೆಗೆ ಒಪ್ಪಿಗೆ ಸೂಚಿಸಿ ಆದೇಶ ಹೊರಡಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯಗೆ (Siddaramaiah) ಹೈಕೋರ್ಟ್‌ನಲ್ಲಿ ಒಂದು ವಾರಗಳ ಬಳಿಕ ಮಧ್ಯಂತರ ರಿಲೀಫ್‌ ಸಿಕ್ಕಿದೆ.

    ರಾಜ್ಯಪಾಲರ ಆದೇಶ ವಜಾಗೊಳಿಸಬೇಕು ಎಂದು ಸಿಎಂ ಸಲ್ಲಿಸಿದ್ದ ಅರ್ಜಿ ವಿಚಾರಣೆ 2ನೇ ಬಾರಿಗೆ ಮುಂದೂಡಿಕೆಯಾಗಿದೆ. ಗಣೇಶ ಹಬ್ಬದ ಬಳಿಕ ಸೆಪ್ಟೆಂಬರ್‌ 9 ರಂದು ಮಧ್ಯಾಹ್ನ 2:30ಕ್ಕೆ ಹೈಕೋರ್ಟ್‌ (Karnataka High Court) ವಿಚಾರಣೆ ನಡೆಸಲಿದೆ.

    ವಿಚಾರಣೆ ಆರಂಭವಾಗುತ್ತಿದ್ದಂತೆ, ದೂರುದಾರ ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲಯ ರಾಘವನ್ ವಾದ ಮಂಡನೆ ಮಾಡಿದರು. ಆರಂಭದಲ್ಲೇ ಜಡ್ಜ್‌ ಈಗಾಗಲೇ ಮಣೀಂದರ್ ಸಿಂಗ್ ವಾದ ಮಂಡಿಸಿದ್ದಾರೆ, ಕನ್ನಡದಲ್ಲಿ ಇರುವ ಮಾಹಿತಿ ಏನಾದ್ರೂ ಇದ್ರೆ ಹೇಳಿ ಎಂದು ಕೇಳಿದರು.

    ನಂತರ ವಾದ ಆರಂಭಿಸಿದ ರಾಘವನ್‌, ನಾನು ಮೂರು ವಿಷಯಗಳ ಮೇಲೆ ವಾದ ಮಂಡನೆ ಮಾಡ್ತಾ ಇದ್ದೀನಿ, 17ಎ ಅನ್ವಯ ಪ್ರಾಸಿಕ್ಯೂಷನ್ ಅನುಮತಿ ಪಡೆದುಕೊಳ್ಳುವುದು ಅನಿವಾರ್ಯ. ನನ್ನ ಬಳಿ ಈ ಪ್ರಕರಣಕ್ಕೆ ಸಂಬಂಧಿಸಿದ ಸಾಕಷ್ಟು ಸತ್ಯಾಂಶಗಳು ಇದ್ದಾವೆ. ಇದನ್ನ ಕೋರ್ಟ್‌ ಗಮನಕ್ಕೆ ತರುತ್ತಾ ಇದ್ದೇನೆ ಎಂದು ವಾದ ಆರಂಭಿಸಿದರು. ಈ ವೇಳೆ ಹಲವು ಅಂಶಗಳನ್ನು ಕೋರ್ಟ್‌ ಗಮನಕ್ಕೆ ತಂದರು.

    ಆರೋಪಗಳೆಲ್ಲವೂ ತನಿಖೆ ಬಳಿಕ ಕ್ಲೀನ್‌ ಚಿಟ್‌ ಆಗಬಹುದು:
    ನಾವು ಈಗ ಮಾಡುತ್ತಿರುವ ಆರೋಪಗಳೆಲ್ಲವೂ ತನಿಖೆ ಬಳಿಕ ಕ್ಲೀನ್‌ ಚಿಟ್‌ ಆಗಬಹುದು. ಯಾವುದೇ ಆರೋಪ ಹೊರಗೆ ಬರದೇ ಇರಬಹುದು. ತನಿಖೆಯೇ ನಡೆಯದೇ ಕ್ಲೀನ್ ಅಂತ ಹೇಳೋಕೆ ಆಗೋದಿಲ್ಲ. ಈ ಹಂತದಲ್ಲಿಯೇ ಕ್ಲೀನ್ ಅನ್ನಬಾರದು. ತನಿಖೆ ನಡೆದರೆ ಸತ್ಯಾಂಶ ಬರಲಿದೆ. ಸಿದ್ದರಾಮಯ್ಯ ಅವರು 1996 ರಿಂದ 1999ರ ವರೆಗೂ ಉಪ ಮುಖ್ಯಮಂತ್ರಿ, 2004 ರಿಂದ 2005ರ ವರೆಗೂ ಉಪಮುಖ್ಯಮಂತ್ರಿ, 2013 ರಿಂದ 2018ರ ವರೆಗೆ ಮುಖ್ಯಮಂತ್ರಿ ಹಾಗೂ 2023 ರಿಂದ ಈಗ ಮತ್ತೆ ಮುಖ್ಯಮಂತ್ರಿ. ಮಲ್ಲಯ್ಯ ಮತ್ತು ದೇವರಾಜು ಸಹೋದರರು, ಮೈಲಾರಾಯ್ಯಗೆ ಕೆಸರೆ ಭೂಮಿಯ ಎಲ್ಲಾ ಅಧಿಕಾರ ಇತ್ತು. ದೇವರಾಜುಗೆ ಯಾವುದೇ ಅಧಿಕಾರ ಇರೋದಿಲ್ಲ. ನಿಂಗ ಎಂಬುವವರಿಗೆ ಜಮೀನು ಗ್ರಾಂಟ್ ಸಿಕ್ಕಿತ್ತು. ಮೈಲಾರಯ್ಯ ಅವರಿಗೆ ದೇವರಾಜ ಮತ್ತು ಅವರ ಸಹೋದರ ಜಾಮೀನನ್ನು ಮಾರಾಟ ಮಾಡಿದ್ದರು. ಇದರಲ್ಲಿ ಹಕ್ಕು ಖುಲಾಸೆಯೂ ಆಗಿದೆ. ದೇವರಾಜು ಮೈಲಾರಯ್ಯಗೆ ಡಿನೋಟಿಫೈ ಆಗುವ ಮುನ್ನ ಮಾರಾಟ ಮಾಡಿದ್ದಾರೆ. ಡಿನೋಟಿಫೈ ಆಗುವ ಮುನ್ನ ಮಾರಾಟ ಮಾಡಿರೋದ್ರಿಂದ ಅಧಿಕಾರ ಖುಲಾಸೆ ಆಗಿದೆ ಎಂದು ವಾದಿಸಿದರು.

    ಎರಡು ಸೈಟಿಗಷ್ಟೇ ಅವಕಾಶವಿತ್ತು:
    ಈ ವೇಳೆ ಮಧ್ಯಪ್ರವೇಶಿಸಿದ ಜಡ್ಜ್‌ ಇದೊಂದೇ ಜಮೀನಾ ಡಿನೋಟಿಫೈ ಆಗಿರೋದು.? ಬೇರೆ ಜಮೀನು ಡಿನೋಟಿಫೈ ಆಗಿದ್ಯಾ? ಎಂದು ಪ್ರಶ್ನೆ ಮಾಡಿದರು. ಬಳಿಕ ಡಿಸಿ ಅವರು ಡಿನೋಟಿಫೈ ಮಾಡಿದ ವರದಿಯನ್ನು ಓದಿದರು. 2004ರಲ್ಲಿ ಸಿದ್ದರಾಮಯ್ಯ ಅವರ ಭಾವಮೈದುನ ಬಿ.ಎಂ ಮಲ್ಲಿಕಾರ್ಜುನ ಸ್ವಾಮಿ ದೇವರಾಜು ಆಕ್ಷೇಪಾರ್ಹವಾದ ಭೂಮಿ ಮಾರಾಟ ಮಾಡುತ್ತಾರೆ. ಈಗಾಗಲೇ ಅಭಿವೃದ್ಧಿ ಆಗುತ್ತಾ ಇದ್ದ ಏರಿಯಾವನ್ನು ಮತ್ತೆ ಕೃಷಿ ಭೂಮಿ ಮಾಡ್ತಾರೆ. ನಿಂಗ ಎಂಬುವರಿಗೆ ಈ ಜಮೀನು ಮಂಜೂರಾಗಿತ್ತು. ನಿಂಗ ಅವರಿಗೆ ಮೂವರು ಮಕ್ಕಳು, ಮಲ್ಲಯ್ಯ, ಮೈಲಾರಯ್ಯ, ದೇವರಾಜು. ಮಲ್ಲಯ್ಯ, ದೇವರಾಜು ತಮ್ಮ ಹಕ್ಕನ್ನು ಮೈಲಾರಪ್ಪನಿಗೆ ಬಿಡುಗಡೆ ಮಾಡಿದ್ದರು. ಹೀಗಾಗಿ ದೇವರಾಜುವಿಗೆ ಈ ಜಮೀನಿನ ಮೇಲೆ ಹಕ್ಕಿರಲಿಲ್ಲ. ಮೂರು ಎಕರೆಗಿಂತ ಹೆಚ್ಚಿನ ಭೂಮಿ ಸ್ವಾಧೀನವಾದರೆ 4,800 ಚದರಡಿ ಪರಿಹಾರ ಇರುತ್ತದೆ. 1994ರ ನಿಯಮದ ಪ್ರಕಾರ ಎರಡು ಸೈಟಿಗಷ್ಟೇ ಅವಕಾಶವಿತ್ತು ಎಂದು ಭೂಪರಿವರ್ತನೆ ದಾಖಲೆಗಳನ್ನು ಕೋರ್ಟ್ ಗಮನಕ್ಕೆ ರಾಘವನ್‌ ತಂದರು.

    ಮುಡಾ ಭೂಮಿ ವಶಪಡಿಸಿಕೊಂಡ ಮೇಲೆ ದೇವರಾಜು ಹೇಗೆ ಮಲ್ಲಿಕಾರ್ಜುನ ಸ್ವಾಮಿಗೆ ಭೂಮಿ ಮಾರಾಟ ಮಾಡುತ್ತಾರೆ? ಸರಳವಾದ ತನಿಖೆ ನಡೆಯಬೇಕಾದ ಈ ಪ್ರಕರಣಕ್ಕೆ ನ್ಯಾಯಾಲಯದ ಇಷ್ಟು ಸಮಯ ತೆಗೆದುಕೊಳ್ಳುವ ಅಗತ್ಯವೇನಿದೆ? ಇದೆಲ್ಲಾ ತನಿಖೆಯೂ ನಡೆಯಬೇಕು. ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಡ್ಜ್‌, ನೀವು ಹೇಳ್ತಾ ಇರೋದು ಏನೋ ಸಂಶಯ ನಡೆದಿದೆ ಅಂತಾನಾ? ಅಂತ ಕೇಳಿದರು. ಅದಕ್ಕೆ ರಾಘವನ್‌, ಹೌದು, ಎಲ್ಲಿ ನಡೆದಿದೆ ಮಾಡಿದ್ದು ಯಾರು ಗೊತ್ತಾಗಬೇಕು? ಆಡಳಿತಾಧಿಕಾರಿಗಳ ಯಾರು ಅಂತ ಗೊತ್ತಾಗಬೇಕು? ಅಂತ ಪಟ್ಟು ಹಿಡಿದರು. ದೇವರಾಜು ಭೂಮಿಯ ಅಸಲಿ ಮಾಲೀಕನೇ ಅಲ್ಲ. ದೇವರಾಜು ಮಲ್ಲಿಕಾರ್ಜುನಗೆ ಹೇಗೆ ಕೊಟ್ಟರು? ಮಲ್ಲಿಕಾರ್ಜುನ ಸಹೋದರಿಗೆ ಧಾನಪತ್ರ ಯಾಕೆ ಕೊಟ್ಟರು. ಈ ಬಗ್ಗೆ ತನಿಖೆ ಆಗಬೇಕಾಗಿದೆ ಎಂದು ಪ್ರಬಲ ವಾದ ಮಂಡನೆ ಮಾಡಿದರು.

    ಪಾರ್ವತಿ ಅವರು ನಿಜವಾದ ಮಾಲೀಕರೇ ಅಲ್ಲ:
    ಭೂಮಿ ಪರಭಾರೆ ಮಾಡಿಕೊಳ್ಳವಾಗಲೇ ಸಾಕಷ್ಟು ಅಕ್ರಮ ಆಗಿದೆ. ಪಾರ್ವತಿ ಅವರು ಮುಡಾಗೆ ಪರಿಹಾರ ಕೇಳುತ್ತಾರೆ. ಅವರು ಹೇಗೆ ಪರಿಹಾರ ಕೇಳ್ತಾರೆ? ಅವರು ನಿಜವಾದ ಮಾಲೀಕರೆ ಅಲ್ಲ. 2015 ರಲ್ಲಿ 50:50 ಅನುಪಾತವನ್ನು ತರ್ತಾರೆ. ಆಗಲೇ ಮತ್ತಷ್ಟು ಅನುಮಾನ ಪ್ರಾರಂಭವಾಗುತ್ತೆ. 2004ರಲ್ಲಿಯೇ ಮುಡಾ ಭೂಮಿ ವಶಕ್ಕೆ ಪಡೆದುಕೊಂಡಿತ್ತು. 2019ರ ತನಕ ಯಾಕೆ ಪರಿಹಾರ ಕೇಳಲಿಲ್ಲ? ಎಂದು ವಾದಿಸಿದಾಗ 60:40 ಪರಿಹಾರಕ್ಕೆ ಅವರು ಒಪ್ಪಲಾಗಿತ್ತಾ? ಎಂದು ಜಡ್ಜ್ ಪ್ರಶ್ನಿಸಿದರು.

    ಪಾರ್ವತಿ ಅವರಲ್ಲದೇ ಬೇರೆ ಇದೇ ಯಾರಾದರೂ ಸ್ಥಾನದಲ್ಲಿದ್ದರೇ ಅವರು ನ್ಯಾಯಾಲಯದ ಆದೇಶ ಪಡೆದು ಮುಡಾ ಸಂಪರ್ಕಿಸಬೇಕಿತ್ತು? ಇಲ್ಲಿ ಪಾವತಿ ಅವರಾಗಿರುವುದರಿಂದ ಅದ್ಯಾವುದೂ ನಡೆದಿಲ್ಲ. ಪಾರ್ವತಿ ಅವರು ಕೋರ್ಟ್‌ಗೆ ಬರುವ ಪ್ರಯತ್ನವನ್ನೇ ಮಾಡಲಿಲ್ಲ. ಮಲ್ಲಿಕಾರ್ಜುನ ಸ್ವಾಮಿ ಪಾರ್ವತಿ ಅವರಿಗೆ ದಾನ ಮಾಡಲಾಗಿದೆ. 23/06/2015 ಬದಲಿ ಸೈಟ್ ಗೆ ಮನವಿ ಮಾಡಲಾಗಿದೆ. ಸಾಮಾನ್ಯ ಜನ ಮಾಡಿದ್ರೆ ಈ ರೀತಿ ಅದೇಶ ಆಗುತ್ತಾ? ಎಂದು ಪಟ್ಟಿನ ಮೇಲೆ ಪಟ್ಟು ಹಾಕಿದರು.

    ಈ ಹಗರಣದಲ್ಲಿ ಸಿಎಂ ಅವರ ಪಾತ್ರ ಇದೆ ಅಂತ ಎಲ್ಲರೂ ಪ್ರಶ್ನೆ ಮಾಡ್ತಾ ಇದ್ದರು. 2015 ರಿಂದ ನಿರಂತರವಾಗಿ ಪ್ರಕ್ರಿಯೆಗಳು ಪ್ರಾರಂಭ ಆಯ್ತು. 50:50 ಅನುಪಾತವೂ ಬಂದಿದ್ದು ಇವರದ್ದೆ ಅಧಿಕಾರ ಸಮಯದಲ್ಲಿ. ಆಸ್ತಿಯ ಮೌಲ್ಯಕ್ಕೆ ಸಂಬಂಧಿಸಿದಂತೆ ಮುಡಾ ವಿವೇಚನೆ ಬಳಸಿಲ್ಲ. ಎಲ್ಲಾ ವಿಚಾರಗಳನ್ನ ಗಾಳಿಗೆ ತೂರಿರುವುದರಿಂದ ತನಿಖೆ ನಡೆಯಬೇಕು. 2017-21ರಿಂದ ಯಾವುದೇ ಬೆಳವಣಿಗೆಯಾಗಿಲ್ಲ. 2021ರ ಡಿಸೆಂಬರ್‌ನಲ್ಲಿ 38 ಸಾವಿರ ಚದರ ಅಡಿ ಜಾಗವನ್ನು ಪಾರ್ವತಿ ಅವರಿಗೆ ಮುಡಾ ಹಂಚಿಕೆ ಮಾಡುತ್ತದೆ. 2017ರ ನಿರ್ಣಯ ಪ್ರಮುಖವಾದ ಕೊಂಡಿಯಾಗಿದೆ. 2017-21ರಿಂದ ಯಾವುದೇ ಬೆಳವಣಿಗೆಯಾಗಿರುವುದಿಲ್ಲ. 2021ರ ಡಿಸೆಂಬರ್‌ನಲ್ಲಿ 38 ಸಾವಿರ ಚದರ ಅಡಿ ಜಾಗವನ್ನು ಪಾರ್ವತಿ ಅವರಿಗೆ ಮುಡಾ ಹಂಚಿಕೆ ಮಾಡುತ್ತದೆ. 2017ರ ನಿರ್ಣಯ ಪ್ರಮುಖವಾದ ಕೊಂಡಿಯಾಗಿದೆ ಎಂದರು. ಈ ವೇಳೆ 2023ರಲ್ಲಿ ಪಾರ್ವತಿ ಅವರಿಗೆ ಮಾತ್ರ ನಿವೇಶನ ನೀಡಲಾಗಿದ್ಯಾ? ಎಂದು ಜಡ್ಜ್‌ ಪ್ರಶ್ನಿಸಿದಾಗ ವಕೀಲ ರಾಘವನ್‌ ಗೊತ್ತಿಲ್ಲ ಎಂದರು.

    ಸಿದ್ದರಾಮಯ್ಯ ಅವರು 2004ರಲ್ಲಿ ಮಂತ್ರಿ ಆಗಿದ್ದರು. ಮೈಸೂರಿನ ಉಸ್ತುವಾರಿ ಸಚಿವರು ಆಗಿದ್ರು. 2017ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ರು. ಎಲ್ಲಾ ಬದಲಾವಣೆಗಳು ಆಗಲೇ ನಡೆದಿದೆ. ಈಗಾಗಲೇ ಸರ್ಕಾರ ತನಿಖೆಗೆ ಆದೇಶ ಮಾಡಿದೆ. ನಿವೃತ್ತ ನ್ಯಾಯಾಧೀಶರ ಮೂಲಕ ತನಿಖದ ಆಗ್ತಾ ಇದೆ. ಇದರಿಂದ ಇದರಲ್ಲಿ ಅಕ್ರಮ ಇದೆ ಅಂತ ಪರೋಕ್ಷವಾಗಿ ಒಪ್ಪಿಕೊಳ್ಳುತ್ತಾ ಇದೆ. ರಾಜ್ಯಪಾಲರು ಆದೇಶವನ್ನು ಮಾಡುವಾಗ ಇದೆಲ್ಲವನ್ನೂ ಪರಿಗಣನೆಗೆ ತೆಗೆದುಕೊಂಡಿದ್ದಾರೆ ಎಂದು ವಾದ ಮಂಡನೆ ಮಾಡಿದರು.

    ಬಳಿಕ ವಾದ ಮಂಡಿಸಿದ ಸಿಎಂ ಪರ ವಕೀಲ ಮನು ಸಿಂಘ್ವಿ, ಕ್ಯಾಬಿನೆಟ್ ನಿರ್ಧಾರ ಎಲ್ಲಾ ಎಜಿ ಅವರ ವರದಿ ಮೇಲೆ ಇದೆ. ಆದ್ದರಿಂದ ಸೆಪ್ಟೆಂಬರ್‌ 12ಕ್ಕೆ ವಿಚಾರಣೆ ಮುಂದೂಡುವಂತೆ ಸಿಂಘ್ವಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಡ್ಜ್‌, ಗುರುವಾರದ ಒಳಗೆ ವಿಚಾರಣೆ ಮುಗಿಸಬೇಕಿದೆ. ಸೋಮವಾರದ ಒಳಗೆ ಇತ್ಯರ್ಥ ಆಗಬೇಕು ಎಂದು ಹೇಳಿ, ಸೆಪ್ಟೆಂಬರ್‌ 9ರ ಮಧ್ಯಾಹ್ನ 2:30ಕ್ಕೆ ವಿಚಾರಣೆ ಮುಂದೂಡಿದರು.

  • MUDA Scam | ಸಿಎಂ ಸಿದ್ದರಾಮಯ್ಯಗೆ ಮತ್ತೆ ರಿಲೀಫ್‌ – ಸೋಮವಾರಕ್ಕೆ ವಿಚಾರಣೆ ಮುಂದೂಡಿಕೆ!

    MUDA Scam | ಸಿಎಂ ಸಿದ್ದರಾಮಯ್ಯಗೆ ಮತ್ತೆ ರಿಲೀಫ್‌ – ಸೋಮವಾರಕ್ಕೆ ವಿಚಾರಣೆ ಮುಂದೂಡಿಕೆ!

    ಬೆಂಗಳೂರು: ತಮ್ಮ ವಿರುದ್ಧ ರಾಜ್ಯಪಾಲರು ತನಿಖೆಗೆ ಒಪ್ಪಿಗೆ ಸೂಚಿಸಿ ಆದೇಶ ಹೊರಡಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ (Siddaramaiah) ಹೈಕೋರ್ಟ್‌ನಲ್ಲಿ ಇನ್ನೆರಡು ದಿನಗಳ ಕಾಲ ತಾತ್ಕಾಲಿಕ ರಿಲೀಫ್‌ ಸಿಕ್ಕಿದೆ. ರಾಜ್ಯಪಾಲರ ಆದೇಶ ವಜಾಗೊಳಿಸಬೇಕು ಎಂದು ಸಿಎಂ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸೋಮವಾರ ಸೆಪ್ಟೆಂಬರ್‌ 2ಕ್ಕೆ ಹೈಕೋರ್ಟ್‌ (Karnataka High Court )ಮುಂದೂಡಿದೆ.

    ಸೋಮವಾರ ಮಧ್ಯಾಹ್ನ 2:30ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಲಾಗಿದೆ. ಆ ಮೂಲಕ ಹಿಂದಿನ ಮಧ್ಯಂತರ ಆದೇಶವನ್ನು ಹೈಕೋರ್ಟ್‌ ಮುಂದುವರಿಸಿದೆ.

    ದೂರುದಾರ ಟಿ.ಜೆ.ಅಬ್ರಹಾಂ ಪರ ಹಿರಿಯ ವಕೀಲ ರಂಗನಾಥ್ ರೆಡ್ಡಿ ವಾದ ಮುಗಿಸುತ್ತಿದ್ದಂತೆ ಮತ್ತಷ್ಟು ವಕೀಲರಿಂದ ವಾದ ಮಂಡನೆಗೆ ಮನವಿ ಮಾಡಲಾಯಿತು. ಇದಕ್ಕೆ ಇಡೀ ದಿನ ವಾದ ಮಂಡನೆಗೆ ಅವಕಾಶ ಕೊಟ್ಟಿದ್ದೀನಿ ಎಂದು ಗರಂ ಆದರು.

    ಈ ವೇಳೆ ಮಧ್ಯಪ್ರವೇಶಿಸಿದ ಅಬ್ರಹಾಂ ಪರ ವಕೀಲರಾದ ರಂಗನಾಥ್‌ ರೆಡ್ಡಿ, ರಾಜ್ಯಪಾಲರ ಮುಂದೆ ಯಾವುದೇ ಜನಪ್ರತಿನಿಧಿಗಳ ಪ್ರಾಸಿಕ್ಯೂಷನ್ ಅನುಮತಿ ಬಾಕಿ ಇಲ್ಲ ಎಂದು ಹೇಳಿದರು. ಅದಕ್ಕೆ ನಿಮಗೆ ಹೇಗೆ ಗೊತ್ತಾಯ್ತು? ಅಂತ ಜಡ್ಜ್‌ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ರಂಗನಾಥ್‌ ರೆಡ್ಡಿ ಅವರು ಆರ್‌ಟಿಐ ಮೂಲಕ ಮಾಹಿತಿ ಪಡೆದುಕೊಳ್ಳಲಾಗಿದೆ. ಎಲ್ಲಾ ಅರ್ಜಿಗಳನ್ನ ವಿಲೇವಾರಿ ಮಾಡಲಾಗಿದೆ. ರಾಜ್ಯಪಾಲರ ಮುಂದೆ ಸದ್ಯ ಯಾವುದೇ ಪ್ರಾಸಿಕ್ಯೂಷನ್ ಮನವಿ ಅರ್ಜಿ ಬಾಕಿ ಇಲ್ಲ ಎಂದು ವಾದ ಮಂಡಿಸಿದರು.

    ಈ ವೇಳೆ ಎ.ಜಿ ಶಶಿಕಿರಣ್ ಶೆಟ್ಟಿ ಅವರಿಂದ ವಾದಕ್ಕೆ ಮನವಿ ಮಾಡಲಾಯಿತು. ಇದಕ್ಕೆ ಜಡ್ಜ್‌ ದಿನ ಬೇಕಿದ್ರೆ 3:30ಕ್ಕೆ ವಿಚಾರಣೆಗೆ ತೆಗೆದುಕೊಳ್ತೀನಿ, ಅದಕ್ಕೂ ಮೊದಲು ಸಾಧ್ಯವಿಲ್ಲ ಎಂದರು. ಈ ವೇಳೆ ಪ್ರತಿವಾದಿಗಳ ವಾದಕ್ಕೆ ಉತ್ತರ ಕೊಡಲು ಸಿಎಂ ಪರ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಸಮಯಾವಕಾಶ ನೀಡುವಂತೆ ಕೋರಿದರು. ನಂತರ ಕೋರ್ಟ್‌, ಸೋಮವಾರಕ್ಕೆ (ಸೆ.2) ವಿಚಾರಣೆ ಮುಂದೂಡಿತು.

    ಪ್ರಭುಲಿಂಗ ನಾವದಗಿ ಪ್ರಬಲ ವಾದ ಮಂಡನೆ:
    ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಾಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಅನುಮತಿ ನೀಡಿದ್ದರು. ತಮ್ಮ ವಿರುದ್ಧ ತನಿಖೆಗೆ ಒಪ್ಪಿಗೆ ಸೂಚಿಸಿರುವ ರಾಜ್ಯಪಾಲರ ಆದೇಶ ವಜಾಗೊಳಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಕುರಿತು ವಿಚಾರಣೆ ಶನಿವಾರ ಮುಂದುವರಿಯಿತು.

    ತುಷಾರ್ ಮೆಹ್ತಾ ಮತ್ತು ಸಿಂಗ್ ವಾದ ಮುಕ್ತಾಯಗೊಳಿಸುತ್ತಿದ್ದಂತೆ ಪ್ರಭುಲಿಂಗ ನಾವದಗಿ ಅವರು ದೂರುದಾರ ಪ್ರದೀಪ್ ಕುಮಾರ್ ಪರ ವಾದ ಮಂಡಿಸಿದರು. ಈ ವೇಳೆ ಜಡ್ಜ್‌ ತುಂಬಾ ಜನ ವಾದ ಮಂಡನೆ ಮಾಡಿದ್ದೀರಿ, ಈ ಕೇಸ್‌ನಲ್ಲಿ ಸಿಎಂ ಪಾತ್ರದ ಬಗ್ಗೆ ಹೇಳಿ – ಅವರು ಈ ಪ್ರಕರಣದಲ್ಲಿ ಹೇಗೆ ಇದ್ದಾರೆ? ಅಂತ ಪ್ರಶ್ನೆ ಮಾಡಿದರು. ಈ ವೇಳೆ ಪ್ರಕರಣದಲ್ಲಿ ಸಿಎಂ ಪಾತ್ರವಿಲ್ಲ ಎಂದು ಎಜಿ ಶಶಿಕಿರಣ್ ಶೆಟ್ಟಿ ವಾದಿಸಿದರು.

    ಸಿಎಂ ವಿರುದ್ದ ಆರೋಪ ಇದ್ದಾಗ ರಾಜ್ಯಪಾಲರು ಸ್ವತಂತ್ರವಾಗಿ ನಿರ್ಧರಿಸಬಹುದು:
    ಆದಾಗ್ಯೂ ಪ್ರಭುಲಿಂಗ್ ವಾದ ಮುಂದುವರಿಸಿದರು. ಮುಖ್ಯಮಂತ್ರಿಗಳ ಪಾತ್ರ, ಕ್ಯಾಬಿನೆಟ್ ನಿರ್ಣಯದ ಬಗ್ಗೆ ವಾದ ಮಂಡಿಸುತ್ತೇನೆ ಎಂದರು. ಕೆಲಸ ಸಂದರ್ಭಗಳಲ್ಲಿ ಕ್ಯಾಬಿನೆಟ್ ರಾಜ್ಯಪಾಲರಿಗೆ ಸಲಹೆ ನೀಡುವ ಅರ್ಹತೆ ಕಳೆದುಕೊಳ್ಳುತ್ತದೆ ಎಂದು ಆರ್.ಎಸ್ ನಾಯಕ್ ಪ್ರಕರಣ ಉಲ್ಲೇಖಿಸಿದರು. ತಮಗಿರುವ ಆಸಕ್ತಿಯ ಕಾರಣಕ್ಕೆ ಸಂಪುಟದ ಸಚಿವರು ಪ್ರಕರಣದಲ್ಲಿ ಪಕ್ಷಪಾತಿಗಳಾಗುವ ಕಾರಣದಿಂದಾಗಿ ರಾಜ್ಯಪಾಲರಿಗೆ ಸಲಹೆ ನೀಡುವ ಅಧಿಕಾರದಿಂದ ವಂಚಿತರಾಗುತ್ತಾರೆ ಎನ್ನುವ ಪೂರ್ವ ತೀರ್ಪೊಂದನ್ನು ಉಲ್ಲೇಖಿಸಿದರು. ರಾಜ್ಯಪಾಲರು ಕ್ಯಾಬಿನೆಟ್ ಸಲಹೆ ಪರಿಗಣಿಸುವ ವಿಚಾರವೇ ಇಲ್ಲ. ಸಿಎಂ ವಿರುದ್ದ ಆರೋಪ ಇದ್ದಾಗ ರಾಜ್ಯಪಾಲರು ಸ್ವತಂತ್ರವಾಗಿ ನಿರ್ಧಾರ ಮಾಡಬಹುದು ಎಂದು ಸುಪ್ರೀಂ ಕೋರ್ಟ್‌ನ ಎರಡು ತೀರ್ಪು ಗಳಿವೆ ಎಂದು ಕೋರ್ಟ್‌ ಗಮನಕ್ಕೆ ತಂದರು.

    ಸಿಎಂ ಪ್ರಾಸಿಕ್ಯೂಷನ್ ವಿಚಾರದಲ್ಲಿ ಕ್ಯಾಬಿನೆಟ್ ನಿರ್ಧಾರ ಸಮಂಜಸವಲ್ಲ. ಇದರಿಂದ ಮೇಲ್ನೋಟಕ್ಕೆ ಪಕ್ಷಪಾತದ ಭಾವನೆ ಬರಲಿದೆ ಅಂತ ಸುಪ್ರೀಂ ಕೋರ್ಟ್‌ನ ಎ.ಕೆ.ಕ್ರೈಪಾಕ್ ಕೇಸ್ ಉಲ್ಲೇಖಿಸಿ ವಾದಮಂಡನೆ ಮಾಡಿದರು. ಸಂವಿಧಾನದ ವಿಧಿ 163 ಅಡಿಯಲ್ಲಿ ಸಿಎಂ ಕೂಡಾ ಕ್ಯಾಬಿನೆಟ್‌ನ ಭಾಗ. ಹೀಗಾಗಿ ಸಿಎಂ ಹೊರತಾದ ಕ್ಯಾಬಿನೆಟ್ ಇರಲು ಸಾಧ್ಯವಿಲ್ಲ. ಆದ್ದರಿಂದ ಕ್ಯಾಬಿನೆಟ್ ನಿರ್ಣಯವನ್ನು ರಾಜ್ಯಪಾಲರು ಪರಿಗಣಿಸಬೇಕಿಲ್ಲ ಎಂದು ವಾದಿಸಿದರು.

    ರಾಜ್ಯಪಾಲರ ಕ್ರಮ ಪ್ರಶ್ನಿಸಲು ಆರೋಪಿಗೆ ಅವಕಾಶವಿಲ್ಲ:
    ಮುಂದುವರಿದು, 2018 ರಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯ ಸೆ.17 ಎ ಮತ್ತು 19 ತಿದ್ದುಪಡಿ ಮಾಡಲಾಗಿದೆ. ಆದರೆ ಸೆ.17 ಎ ನಲ್ಲಿ ಆರೋಪಿಗೆ ನೋಟಿಸ್ ನೀಡಲು ಅವಕಾಶವಿಲ್ಲ. ಸೆ.19 ಅಡಿಯಲ್ಲಿ ನೋಟಿಸ್ ನೀಡಲು ಅವಕಾಶವಿದೆ. ಆರೋಪಿಗೆ ನೋಟಿಸ್ ನೀಡಿ ತನಿಖೆಗೆ ಅವಕಾಶ ನೀಡಬಾರದು. ನೋಟಿಸ್ ನೀಡಿದರೆ ತನಿಖೆಯೇ ಪೂರ್ವಾಗ್ರಹಕ್ಕೊಳಗಾಗಲಿದೆ. 17 ಎ ಹಂತದಲ್ಲಿ ರಾಜ್ಯಪಾಲರ ಕ್ರಮ ಪ್ರಶ್ನಿಸಲು ಆರೋಪಿಗೆ ಅವಕಾಶವಿಲ್ಲ. ಎಫ್‌ಐಆರ್ ದಾಖಲಾದ ಬಳಿಕವಷ್ಟೇ ಆರೋಪಿಗೆ ಅದನ್ನು ಪ್ರಶ್ನಿಸುವ ಹಕ್ಕು ಬರಲಿದೆ ಎಂದು ಪ್ರಬಲ ವಾದ ಮಂಡನೆ ಮಾಡಿದರು.

    ತನಿಖೆಗೆ ಕೊಟ್ಟ ಆದೇಶದಲ್ಲೇ ರಾಜ್ಯಪಾಲರು ಉಲ್ಲೇಖ ಮಾಡಿದ್ದಾರೆ. ಮೇಲ್ನೋಟಕ್ಕೆ ಇದರಲ್ಲಿ ಅಕ್ರಮ ನಡೆದಿದೆ ಅಂತ, ಆದೇಶ ಪ್ರತಿಯಲ್ಲಿ ಉಲ್ಲೇಖ ಮಾಡಿದ್ದಾರೆ. ಸರ್ಕಾರಕ್ಕೆ ತನಿಖೆಯ ಅವಶ್ಯಕತೆ ಇದೆ ಅನಿಸಿದೆ. ಹೀಗಾಗಿ ನ್ಯಾಯಾಂಗ ತನಿಖಗೆ ಆದೇಶವನ್ನು ನೀಡಿದ್ದಾರೆ. ನಿವೃತ್ತ ನ್ಯಾಯಾಧೀಶ ದೇಸಾಯಿ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಾ ಇದೆ ಎಂದರು. ಇದೇ ವೇಳೆ ಮುಡಾ ಅಕ್ರಮ ತನಿಖೆಗಾಗಿ ನೇಮಿಸಲಾಗಿರುವ ಏಕಸದಸ್ಯ ಆಯೋಗ ಮತ್ತು ತನಿಖಾ ತಂಡದ ಕಾರ್ಯವ್ಯಾಪ್ತಿಯಲ್ಲಿ ನಿಯಮ 6,7,8ರ ಬಗ್ಗೆ ಆಕ್ಷೇಪಣೆಗಳ ಬಗ್ಗೆ ನಾವದಗಿ ನ್ಯಾಯಾಲಯದ ಗಮನಸೆಳೆದರು. ಮೇಲ್ನೋಟಕ್ಕೆ ಅಕ್ರಮವನ್ನು ಪರಿಗಣಿಸಲಾಗಿದೆ ಎನ್ನುವ ಅಂಶ ಸರ್ಕಾರದ ಆದೇಶಗಳಲ್ಲಿ ಇರುವ ಬಗ್ಗೆಯೂ ನ್ಯಾಯಾಧೀಶರ ಗಮನಕ್ಕೆ ತಂದರು.

    ರಾಜ್ಯಪಾಲರು ಕಾರ್ಯವಿಧಾನ ಅನುಸರಿಸಿಲ್ಲ ಎನ್ನುವುದು ಬೇರೆ, ಅದರೆ ವಿವೇಚನೆ ಬಳಸಿಲ್ಲ ಎನ್ನಲಾಗದು. ತನಿಖೆಗೆ ನೇಮಿಸಿರುವ ಸರ್ಕಾರದ ಆದೇಶಗಳನ್ನು ರಾಜ್ಯಪಾಲರು ಗಮನಿಸಿದ್ದಾರೆ, ಹಾಗಾಗಿ ಅವರು ವಿವೇಚನೆ ಬಳಸಿಲ್ಲ ಎನ್ನಲಾಗದು ಎಂದು ವಾದಿಸಿದರು. ನಾವದಗಿ ಅವರ ಬಳಿಕ ದೂರುದಾರ ಟಿ.ಜೆ.ಅಬ್ರಹಾಂ ಪರ ಹಿರಿಯ ವಕೀಲ ರಂಗನಾಥ್ ರೆಡ್ಡಿ ವಾದ ಮಂಡಿಸಿದರು.

  • MUDA Scam; ಸಿಎಂ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್‌ – ಆ.31 ಕ್ಕೆ ವಿಚಾರಣೆ ಮುಂದೂಡಿಕೆ

    – ವಿಚಾರಣೆಗೆ ಒಳಪಡಿಸಲು ಅನುಮತಿ ನೀಡುವ ಬಗ್ಗೆ ರಾಜ್ಯಪಾಲರು ಸ್ವಯಂ ಪ್ರೇರಣೆಯಿಂದ ವರ್ತಿಸಬಹುದು: ಕೋರ್ಟ್‌

    ಬೆಂಗಳೂರು: ತಮ್ಮ ವಿರುದ್ಧ ರಾಜ್ಯಪಾಲರು ತನಿಖೆಗೆ ಆದೇಶ ಹೊರಡಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್‌ನಲ್ಲಿ ತಾತ್ಕಾಲಿಕ ರಿಲೀಫ್‌ ಸಿಕ್ಕಿದೆ. ರಾಜ್ಯಪಾಲರ ಆದೇಶ ವಜಾಗೊಳಿಸಬೇಕು ಎಂದು ಸಿಎಂ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಆ.31 ಕ್ಕೆ ಹೈಕೋರ್ಟ್‌ ಮುಂದೂಡಿದೆ.

    ಶನಿವಾರ ಬೆಳಗ್ಗೆ 10:30 ಕ್ಕೆ ವಿಚಾರಣೆಯನ್ನು ನಿಗದಿಪಡಿಸಲಾಗಿದೆ. ಆ ಮೂಲಕ ಹಿಂದಿನ ಮಧ್ಯಂತರ ಆದೇಶವನ್ನು ಹೈಕೋರ್ಟ್‌ ಮುಂದುವರಿಸಿದೆ. ವಿಚಾರಣೆ ಮುಂದೂಡುವಂತೆ ಜನಪ್ರತಿನಿಧಿಗಳ ಕೋರ್ಟ್‌ಗೆ ಸೂಚನೆ ನೀಡಿದೆ.

    ಆಪಾದಿತ ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಚಾರಣೆಗೆ ಒಳಪಡಿಸಲು ಅನುಮತಿ ನೀಡುವ ಬಗ್ಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಸ್ವಯಂ ಪ್ರೇರಣೆಯಿಂದ ವರ್ತಿಸಬಹುದು ಎಂದು ಕರ್ನಾಟಕ ಹೈಕೋರ್ಟ್ ಸೂಚಿಸಿದೆ. ಈ ಸಂದರ್ಭದಲ್ಲಿ ಅವರು ಸಂಪುಟದ ಇಚ್ಛೆಗೆ ಒಳಪಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

    ರಾಜ್ಯಪಾಲರ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಮುಖ್ಯಮಂತ್ರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ವಿಷಯ ತಿಳಿಸಿದೆ. ರಾಜ್ಯ ಸಚಿವ ಸಂಪುಟದ ಅನುಮತಿಯಿಲ್ಲದೆ ರಾಜ್ಯಪಾಲರು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲದಿರುವುದರಿಂದ ರಾಜ್ಯಪಾಲರ ಕ್ರಮ ಕಾನೂನುಬಾಹಿರ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದ್ದರು.

    ಮುಖ್ಯಮಂತ್ರಿ ಪರ ವಾದ ಮಂಡಿಸಿದ ಹಿರಿಯ ವಕೀಲ ಹಾಗೂ ಸಂಸದ ಅಭಿಷೇಕ್ ಮನುಸಿಂಘ್ವಿ ಅವರು, ಅಕ್ರಮ ಭೂಮಿ ಮಂಜೂರಾತಿಗೆ ಸಂಬAಧಿಸಿದAತೆ ಸಿದ್ದರಾಮಯ್ಯ ಎಲ್ಲಿಯೂ ಯಾವುದೇ ನಿರ್ಧಾರ ಅಥವಾ ಶಿಫಾರಸು ಮಾಡಿಲ್ಲ ಎಂದು ತಿಳಿಸಿದರು.

    ಕೆಲ ಪ್ರತಿವಾದಿಗಳು ಮಾತ್ರ ಆಕ್ಷೇಪಣೆ ಸಲ್ಲಿಕೆ ಮಾಡಿದ್ದಾರೆ. ಎಲ್ಲಾ ದೂರುದಾರರು ಆಕ್ಷೇಪಣೆ ಸಲ್ಲಿಕೆ ಮಾಡಿಲ್ಲ. ರಾಜ್ಯಪಾಲರ ಪರವಾಗಿ ಈಗಲೂ ಆಕ್ಷೇಪಣೆ ಸಲ್ಲಿಸಿ ವಾದ ಮಾಡಲಿ ಎಂದರು. ರಾಜ್ಯಪಾಲರ ಪರ ವಕೀಲರು ವಾದಿಸಿ, ರಾಜ್ಯಪಾಲರು ಯಾವುದೇ ಆಕ್ಷೇಪಣೆ ಸಲ್ಲಿಕೆ ಮಾಡುವುದಿಲ್ಲ. ಅವಶ್ಯಕತೆ ಇರುವ ದಾಖಲಾತಿ ಸಲ್ಲಿಕೆ ಮಾಡಲಿದ್ದಾರೆ ಅಷ್ಟೇ. ಆಕ್ಷೇಪಣೆ ಸಲ್ಲಿಕೆ ಮಾಡುವುದಿಲ್ಲ ಎಂದು ಸಿಂಘ್ವಿ ತಿಳಿಸಿದರು. ದೂರುದಾರ ಪ್ರದೀಪ್ ಪರ ವಕೀಲ ಪ್ರಭುಲಿಂಗ ನಾವದಗಿ ಹೇಳಿಕೆಯನ್ನು ಹೈಕೋರ್ಟ್ ದಾಖಲಿಸಿತು.

    ಕಳೆದ ಬಾರಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಬಗ್ಗೆ ವಾದ ಮಂಡನೆ ಮಾಡಿದ್ದೆ. 17ಎ ಬಗ್ಗೆ ಉಲ್ಲೇಖಿಸಿ ವಾದ ಮಂಡನೆ ಮಾಡಿದ್ದೆ. 17ಎ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಕೆಲಸ ಮಾಡುತ್ತದೆ ಎಂಬುದನ್ನು ಉಲ್ಲೇಖಿಸಿ ವಾದಿಸಿದರು. 17ಎ ಅನುಮತಿಯನ್ನು ತನಿಖಾ ಸಂಸ್ಥೆ ಪಡೆಯೋದು. ರಾಜ್ಯಪಾಲರಿಗೆ ಈ ಬಗ್ಗೆ ಅಧಿಕಾರ ಇರುವುದಿಲ್ಲ ಎಂದು ಅಭಿಷೇಕ್ ಮನುಸಿಂಘ್ವಿ, ಸುಪ್ರೀಂ ಕೋರ್ಟ್ನ ಕೆಲವು ಆದೇಶಗಳನ್ನು ಉಲ್ಲೇಖಿಸಿ ವಾದ ಮಂಡಿಸಿದರು.

    ದೂರುದಾರರು 17ಎ ಅಲ್ಲಿ ಅನುಮತಿಯನ್ನು ಪಡೆದುಕೊಳ್ಳಲು ಸಾಧ್ಯವೇ ಇಲ್ಲ. ಜೊತೆಗೆ ರಾಜ್ಯಪಾಲರಿಗೂ ಕೂಡ ಇದನ್ನ ಪರಿಶೀಲನೆ ಮಾಡಲು ಅವಕಾಶ ಇಲ್ಲ. ಪೂರ್ವಾನುಮತಿ ಬೇಕಿಲ್ಲ ಎಂದು ಹೇಳಿದ್ದಾರೆ. ಟಿಜೆ ಅಬ್ರಹಾಂ ದೂರು ನೀಡುವಾಗ ಉಲ್ಲೇಖ ಆಗಿದೆ. ಹೈಕೋರ್ಟ್, ಸುಪ್ರೀಂ ಕೋರ್ಟ್ನ ಆದೇಶವನ್ನು ಉಲ್ಲೇಖಿಸಿ ದೂರು ನೀಡಿದ್ದಾರೆ. ಸುಳ್ಳು ಮಾಹಿತಿ ನೀಡಿರೋ ಅಬ್ರಹಾಂಗೆ ರಾಜ್ಯಪಾಲರು ದಂಡ ವಿಧಿಸಬೇಕಿತ್ತು. ಅದನ್ನು ಬಿಟ್ಟು ದೂರುದಾರರಿಗೆ ಅವಕಾಶ ನೀಡಿದ್ದಾರೆ. ಸಮಯ ವ್ಯರ್ಥ ಮಾಡುತ್ತಿರುವುದಕ್ಕೆ ಅಬ್ರಹಾಂಗೆ ದಂಡ ವಿಧಿಸಬೇಕು. ಅಬ್ರಹಾಂಗೆ ಅರ್ಜಿ ಹಿಂಪಡೆಯಲು ಸೂಚಿಸಿ, ರಾಜ್ಯಪಾಲರು ದಂಡ ವಿಧಿಸಬೇಕು. ಆನಂತರ ಈ ನ್ಯಾಯಾಲಯ ದಂಡ ವಿಧಿಸಬೇಕು. ಲೋಕಾಯುಕ್ತರಿಗೂ ಅಬ್ರಹಾಂ ದೂರು ನೀಡಿದ್ದಾರೆ. ಲೋಕಾಯುಕ್ತ ದೂರಿನಲ್ಲಿ ಅಬ್ರಹಾಂ ಸೆಕ್ಷನ್ 17ಎ ಬಗ್ಗೆ ಮಾತನಾಡಿಲ್ಲ. ಸುಪ್ರೀಂ ಕೋರ್ಟ್, ಕರ್ನಾಟಕ ಹೈಕೋರ್ಟ್ನ ಆದೇಶಗಳಿವೆ. ಈ ಬಗ್ಗೆ ನಾನು ವಾದ ಮಂಡಿಸಲಿದ್ದೇನೆ. ಟಿಜೆ ಅಬ್ರಹಾಂ ಸಲ್ಲಿಸಿರುವ ಆಕ್ಷೇಪಣೆ ಗಮನಿಸಬೇಕು. 17ಎ ಅಡಿ ಪೂರ್ವಾನುಮತಿ ಬೇಕಿಲ್ಲವೆಂದು ಹೇಳಿದ್ದಾರೆ. ಇವೆಲ್ಲ ಕೇವಲ ಪ್ರಕ್ರಿಯೆಗಳಷ್ಟೆ ಎಂದು ಹೇಳಿದ್ದಾರೆ. ಹೀಗಿದ್ದಾಗ ರಾಜ್ಯಪಾಲರು ಅಬ್ರಹಾಂಗೆ ದಂಡ ವಿಧಿಸಿ ದೂರು ವಜಾಗೊಳಿಸಬೇಕು. ಪ್ರಾಸಿಕ್ಯೂಷನ್‌ಗೆ ನೀಡಿರುವ ಅನುಮತಿಯನ್ನು ಹಿಂಪಡೆಯಬೇಕು ಎಂದು ವಾದಿಸಿದರು.

    ಉಳಿದ ಇಬ್ಬರ ದೂರುಗಳಿಗೆ ಸಂಬಂಧಿಸಿ ಶೋಕಾಸ್ ನೋಟಿಸ್ ನೀಡಿಲ್ಲ. ತರಾತುರಿಯಲ್ಲಿ ವಿವೇಚನೆ ಬಳಸದೇ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ದೂರುದಾರರು ತಮ್ಮ ಪ್ರಮಾಣಪತ್ರದಲ್ಲಿ 17ಎ ಬೇಕಿಲ್ಲ ಎಂದು ಕೆಲವೊಂದು ಕಾರಣಗಳನ್ನು ನೀಡಿದ್ದಾರೆ. ಸಿಎಂ ಆದೇಶ ಅಥವಾ ಶಿಫಾರಸು ಮಾಡಿಲ್ಲ ಎಂದಿರುವುದರಿಂದ 17ಎ ಬೇಕಿಲ್ಲ ಎಂದಿದ್ದಾರೆ. 10-15 ವರ್ಷದ ಹಳೆಯ ಘಟನೆಗಳಿಗೆ ಈಗಿನ ಕಾನೂನು ಅನ್ವಯಿಸಲಾಗ್ತಿದೆ. ಬಿಎನ್‌ಎಸ್‌ನಲ್ಲಿ ನೋಟಿಸ್ ನೀಡಿದ್ದಾರೆ. ಆದರೇ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ನಿರಾಣಿ ಅವರ ಪ್ರಾಸಿಕ್ಯೂಷನ್ ಪರ್ಮಿಷನ್ ಆಗಿಲ್ಲ. ರಾಜ್ಯಪಾಲರು ಆ ಬಗ್ಗೆ ಗಮನವೇ ಹರಿಸುತ್ತಿಲ್ಲ ಎಂದು ಸಿಂಘ್ವಿ ತಿಳಿಸಿದರು. ಇದಕ್ಕೆ ನ್ಯಾಯಾಧೀಶರು, ಅವೆಲ್ಲಾ ತನಿಖೆ ಮುಕ್ತಾಯ ಆಗಿದ್ಯಾ ಎಂದು ಪ್ರಶ್ನಿಸಿದರು.

    ರಾಜ್ಯಪಾಲರು ಯಾವುದೇ ಒಂದೇ ಒಂದು ಅಂಶದಲ್ಲೂ ಕೂಡ ತಮ್ಮ ವಿವೇಚನೆ ಬಳಸಿಲ್ಲ. ಪ್ರಾಸಿಕ್ಯೂಷನ್ ಪರ್ಮಿಷನ್ ಕೊಡುವಾಗ ಬಳಸಿಲ್ಲ. ಕ್ಯಾಬಿನೆಟ್‌ನ ಸಲಹೆಯನ್ನು ಕೂಡ ಬಳಸಿಕೊಂಡಿಲ್ಲ. ಕ್ಯಾಬಿನೆಟ್ ಸಲಹೆಯು ಕೆಲವೊಂದು ನ್ಯಾಯಾಲಯ ಆದೇಶ ಉಲ್ಲೇಖ ಮಾಡಲಾಗಿತ್ತು. ಇತರೆ ವಿಚಾರಕ್ಕೆ ಕ್ಯಾಬಿನೆಟ್ ಸೂಚನೆ ಪಡೆಯಬೇಕು. ಆದರೆ ಸಿಎಂ ವಿರುದ್ಧದ ದೂರಿಗೆ ಕ್ಯಾಬಿನೆಟ್ ಸಲಹೆ ಸೂಚನೆಯನ್ನು ಪಡೆದಿಲ್ಲ ಎಂದು ಸಿಂಘ್ವಿ ವಾದಿಸಿದರು.

    ಸಂಪುಟದ ತೀರ್ಮಾನದ ಪ್ರಕಾರ ರಾಜ್ಯಪಾಲರು ನಡೆಯಬೇಕಿಲ್ಲ. ಅದು ಅವರ ವಿವೇಚನೆಗೆ ಬಿಟ್ಟ ವಿಚಾರ ಎಂದು ಇದೇ ವೇಳೆ ಜಡ್ಜ್ ಸ್ಪಷ್ಟಪಡಿಸಿದರು.

    ಜನರು ಆಯ್ಕೆ ಮಾಡಿರುವ ಸರ್ಕಾರವನ್ನು ರಾಜ್ಯಪಾಲರ ಇಂತಹ ಆದೇಶ ಕ್ರಮದಿಂದ ಹಾಳು ಮಾಡಲು ಸಾಧ್ಯವಿಲ್ಲ. ಜನರ ಬಹುಮತದ ಮೂಲಕ ಸರ್ಕಾರ ಆಯ್ಕೆ ಆಗಿದೆ. ಜನರು ಆಯ್ಕೆ ಮಾಡಿರುವ ಸರ್ಕಾರವನ್ನು ರಾಜ್ಯಪಾಲರು ಇಂತಹ ಕ್ರಮಗಳಿಂದ ಬದಲಿಸಲಾಗದು. ಹೀಗಾಗಿಯೇ ರಾಜ್ಯಪಾಲರ ಅಧಿಕಾರಗಳಿಗೆ ನಿರ್ಬಂಧಗಳಿವೆ. ರಾಜ್ಯಪಾಲರೂ ಸಹಜ ನ್ಯಾಯದ ಪ್ರಕ್ರಿಯೆ ಪಾಲಿಸಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿ ಸಿಂಘ್ವಿ ವಾದ ಮಾಡಿದರು.

  • ಸಿಎಂ ಪಾಲಿಗೆ ಗುರುವಾರ ಬಿಗ್‌ಡೇ – ಮುಡಾ ಕೇಸಲ್ಲಿ ತಾತ್ಕಾಲಿಕ ತಡೆ ವಿಸ್ತರಣೆ ಆಗುತ್ತಾ?

    – ಡಿಕೆಶಿ ಅಕ್ರಮ ಆಸ್ತಿ ಕೇಸ್; ಆ.29 ರಂದು ಹೈಕೋರ್ಟ್ ತೀರ್ಪು

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧದ ಪ್ರಾಸಿಕ್ಯೂಷನ್ ರದ್ದತಿ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಾಳೆ ಹೈಕೋರ್ಟ್‌ನಲ್ಲಿ (High Court) ಬರಲಿದೆ.

    ನ್ಯಾ.ನಾಗಪ್ರಸನ್ನ ಅವರ ಪೀಠದಲ್ಲಿ ಈ ಪ್ರಕರಣದ ವಿಚಾರಣೆ ನಡೆಯಲಿದ್ದು, ಎಲ್ಲರ ಚಿತ್ತ ಹೈಕೋರ್ಟ್‌ನತ್ತ ನೆಟ್ಟಿದೆ. ಸಿಎಂ ಸಿದ್ದರಾಮಯ್ಯ ಪರ ಹಿರಿಯ ನ್ಯಾಯವಾದಿ ಅಭಿಷೇಕ್ ಮನುಸಿಂಘ್ವಿ, ರಾಜ್ಯಪಾಲರ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮುಂದುವರೆಸಲಿದ್ದಾರೆ. ಇದನ್ನೂ ಓದಿ: ರಾಜ್ಯಕ್ಕಾಗಿರುವ ಅನ್ಯಾಯ ಸರಿಪಡಿಸುವ ವಿಶ್ವಾಸವಿದೆ: ಸಿದ್ದರಾಮಯ್ಯ

    ಏ.19ರ ವಿಚಾರಣೆ ವೇಳೆ, ಆ.29 ರವರೆಗೂ ಸಿದ್ದರಾಮಯ್ಯ ವಿರುದ್ಧ ಯಾವುದೇ ಕ್ರಮಕ್ಕೆ ಸೂಚಿಸದಂತೆ ಕೆಳಹಂತದ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚಿಸಿತ್ತು. ಈ ಮೂಲಕ ತಾತ್ಕಾಲಿಕ ರಿಲೀಫ್ ಕೊಟ್ಟಿತ್ತು. ನಾಳೆ ಕೋರ್ಟ್‌ನ ಮುಂದಿನ ನಡೆ ಭಾರೀ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

    ಕೋರ್ಟ್ ತೀರ್ಪಿನ ಮೇಲೆ ಮುಂದಿನ ರಾಜಕೀಯ ಹಾಗೂ ಕಾನೂನು ಆಗುಹೋಗುಗಳು ನಿರ್ಧಾರ ಆಗಲಿವೆ. ಕೋರ್ಟ್ ತೀರ್ಪು ಏನೇ ಬಂದರೂ ಸಿಎಂ ಪರವಾಗಿ ಹೈಕಮಾಂಡ್ ನಿಲ್ಲಲಿದೆ ಎಂದು ಗೃಹ ಸಚಿವ ಪರಮೇಶ್ವರ್ ಸ್ಪಷ್ಟಪಡಿಸಿದರು. ಇದನ್ನೂ ಓದಿ: ನಮ್ಮ ಆಸ್ತಿ ಬಗ್ಗೆ ದಾಖಲೆ ಇದ್ದರೆ ಬಹಿರಂಗ ಪಡಿಸಲಿ: ಛಲವಾದಿ ಮಾತಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು

    ಈ ಮಧ್ಯೆ, ಡಿಕೆ ಶಿವಕುಮಾರ್ ಪ್ರಕರಣದಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ವಾಪಸ್ ಪ್ರಶ್ನಿಸಿ ಸಿಬಿಐ, ಯತ್ನಾಳ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಗಿಸಿರುವ ಹೈಕೋರ್ಟ್, ನಾಳೆಯೇ ಆದೇಶ ನೀಡಲಿದೆ. ಯತ್ನಾಳ್ ಸಲ್ಲಿಸಿದ್ದ ಅರ್ಜಿಯೂ ನಾಳೆಯೇ ಇತ್ಯರ್ಥವಾಗುವ ನಿರೀಕ್ಷೆ ಇದೆ. ಇದು ತೀವ್ರ ಕುತೂಹಲ ಕೆರಳಿಸಿದೆ. ಇಂದು ಡಿಸಿಎಂ ನಿವಾಸಕ್ಕೆ ಹಲವು ಶಾಸಕರು ಭೇಟಿ ನೀಡಿ ಚರ್ಚೆ ನಡೆಸಿದ್ದರು.

  • ಮತ್ತೆ ಮುನ್ನೆಲೆಗೆ ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದ – ನಾಳೆ ಹೈಕೋರ್ಟ್‌ನಲ್ಲಿ ವಿಚಾರಣೆ

    ಮತ್ತೆ ಮುನ್ನೆಲೆಗೆ ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದ – ನಾಳೆ ಹೈಕೋರ್ಟ್‌ನಲ್ಲಿ ವಿಚಾರಣೆ

    ಮಂಡ್ಯ: ಸಕ್ಕರೆ ನಾಡು ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿನ ಜಾಮಿಯಾ ಮಸೀದಿಯ (Jamia Mosque) ವಿವಾದ ಹಲವು ವರ್ಷಗಳಿಂದ‌ ಕೇಳಿ ಬರುತ್ತಿದೆ. ಟಿಪ್ಪು ಸುಲ್ತಾನ್ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇಗುಲ ಕೆಡವಿ ಜಾಮಿಯಾ ಮಸೀದಿ ನಿರ್ಮಾಣ ಮಾಡಿದ್ದಾನೆ. ಮತ್ತೆ ಮಸೀದಿ ಜಾಗದಲ್ಲಿ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇಗುಲ ನಿರ್ಮಾಣ ಮಾಡಬೇಕೆಂದು ಹಲವು ವರ್ಷಗಳಿಂದ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಹನುಮಂತ ಭಕ್ತರು ಪ್ರತಿಭಟನೆ ಹಾಗೂ ಬೃಹತ್ ಹನುಮ ಸಂಕೀರ್ತನಾ ಯಾತ್ರೆಯ ಮೂಲಕ ಹೋರಾಟ ಮಾಡಿದ್ದರು. ಇದೀಗ ಭಜರಂಗ ಸೇನೆ 101 ಹನುಮ ಭಕ್ತರ ಮೂಲಕ ಹೈಕೋರ್ಟ್‌ನಲ್ಲಿ ದಾವೆ ಹೂಡಿದೆ.

    ಇಷ್ಟು ದಿನಗಳ ಕಾಲ ಪ್ರತಿಭಟನೆಗಳ ಮೂಲಕ‌ ಹೋರಾಟ ನಡೆಸುತ್ತಿದ್ದ ಹಿಂದೂ ಸಂಘಟನೆಗಳ ಕಾರ್ಯಕರ್ತರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಪಾರಂಪರಿಕ ಕಟ್ಟದಲ್ಲಿ ಮದರಸವನ್ನು ನಡೆಸಲಾಗುತ್ತಿದೆ. ಅಲ್ಲದೇ ಜಾಮಿಯಾ ಒಂದು ಮಸೀದಿಯಲ್ಲ. ಇದು ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ. ಟಿಪ್ಪು ಸುಲ್ತಾನ್ ದೇವಸ್ಥಾನ ಕೆಡವಿ ಜಾಮಿಯಾ ಮಸೀದಿಯನ್ನು ನಿರ್ಮಾಣ ಮಾಡಿದ್ದಾನೆ. ಇದು ದೇವಸ್ಥಾನ ಎನ್ನಲು ಇಲ್ಲಿನ ಗೋಡೆಗಳಲ್ಲಿ ಇರುವ ಹಿಂದೂ ದೇವಸ್ಥಾನ ಕಲ್ಲುಗಳು, ಕೆತ್ತನೆಗಳು. ಅಲ್ಲದೇ ಮಸೀದಿಯ ಒಳ ಭಾಗದಲ್ಲಿಯೇ ಹಿಂದೂ ದೇವಸ್ಥಾನದ ಕಲ್ಯಾಣಿ ಹಾಗೂ ಗೋಪುರದಲ್ಲಿ ಕಳಶ ಇದೆ. ಇವುಗಳು ಇದು ಮಸೀದಿಯಲ್ಲ ಮಂದಿರ ಎಂದು ನಿರೂಪಿಸುತ್ತವೆ. ಹೀಗಾಗಿ ಜಾಮಿಯಾ ಮಸೀದಿಯ ಜಾಗದಲ್ಲಿ ಮೊದಲು ಇದ್ದ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ ಸ್ಥಾಪನೆಗೆ ಸರ್ವೇ ನಡೆಸಿ ಅವಕಾಶ ಕಲ್ಪಿಸಿಕೊಡಬೇಕೆಂದು ಭಜರಂಗ ಸೇನೆ ಹೈಕೋರ್ಟ್‌ಗೆ ದಾವೆ ಹೂಡಿದೆ. ಇದನ್ನೂ ಓದಿ: ಪ್ರಸಿದ್ಧ ವಿಭೂತಿ ಫಾಲ್ಸ್‌ಗೆ ಪ್ರವಾಸಿಗರಿಗೆ ನಿರ್ಬಂಧ

    ಕೇಸ್‌ನ್ನು ಹೈಕೋರ್ಟ್ ಫೈಲ್ ಮಾಡಿಕೊಂಡಿದೆ. ಈಗಾಗಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಮಂಡ್ಯ ಡಿಸಿ, ವಕ್ಫ್ ಹಾಗೂ ಧಾರ್ಮಿಕ ದತ್ತಿ ಇಲಾಖೆಗಳಿಗೆ ಕೋರ್ಟ್ ನೋಟೀಸ್ ನೀಡಿದೆ. ಈ ಕೇಸ್‌ ಸಂಬಂಧ ಮೊದಲ ವಾದ-ಪ್ರತಿವಾದಗಳು ಜು.11 (ನಾಳೆ) ರಂದು ನಡೆಯಲಿದೆ. ಅಂದು ನೋಟಿಸ್ ನೀಡಿರುವ ಎಲ್ಲಾ ಇಲಾಖೆಯ ಮುಖ್ಯಸ್ಥರು ಕೋರ್ಟ್‌ಗೆ ಬರುವಂತೆ ನ್ಯಾಯಾಧೀಶರು ಕೋರಿದ್ದಾರೆ.

    ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಸಂಬಂಧ ಇಷ್ಟು ದಿನಗಳ ಕಾಲ ಪ್ರತಿಭಟನೆ ಮೂಲಕ ಹೋರಾಟ ನಡೆಸುತ್ತಿದ್ದ ಹಿಂದೂ ಸಂಘಟನೆಗಳು ಇದೀಗ ನ್ಯಾಯಾಲಯದ ಮೊರೆ ಹೋಗಿವೆ. ಇದನ್ನೂ ಓದಿ: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಕೇಸ್; ಕಾಂಗ್ರೆಸ್‌ ಮಾಜಿ ಸಚಿವ ನಾಗೇಂದ್ರ ಇಡಿ ವಶಕ್ಕೆ!