Tag: Karnataka High Court

  • ಆಜಾನ್ ವೇಳೆ ಧ್ವನಿವರ್ಧಕ ಬಳಕೆ ನಿಷೇಧಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

    ಆಜಾನ್ ವೇಳೆ ಧ್ವನಿವರ್ಧಕ ಬಳಕೆ ನಿಷೇಧಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

    ಬೆಂಗಳೂರು: ರಾಜ್ಯದ ಮಸೀದಿಗಳಲ್ಲಿ ಆಜಾನ್ ಕೂಗಲು ಧ್ವನಿವರ್ಧಕ ಬಳಸುವುದನ್ನು ನಿಲ್ಲಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ.

    ಆಜಾನ್‌ನಲ್ಲಿ ಇತರ ಧಾರ್ಮಿಕ ಸಮುದಾಯಗಳ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವ ಪದಗಳಿವೆ ಎಂಬ ಅರ್ಜಿದಾರರ ವಾದವನ್ನು ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರ ವಿಭಾಗೀಯ ಪೀಠ ತಿರಸ್ಕರಿಸಿತು. ಇದನ್ನೂ ಓದಿ: ಉತ್ತರ ಪ್ರದೇಶ ಮಾದರಿಯಲ್ಲಿ ಕರ್ನಾಟಕದಲ್ಲೂ ಜಾರಿಯಾಗುತ್ತಾ ಮದರಸಾ ಶಿಕ್ಷಣ ಮಂಡಳಿ?

    MOSQUE

    ಭಾರತದ ಸಂವಿಧಾನದ 25 ಮತ್ತು 26ನೇ ವಿಧಿಗಳು ಭಾರತೀಯ ನಾಗರಿಕತೆಯ ವಿಶಿಷ್ಟವಾದ ಧಾರ್ಮಿಕ ಸಹಿಷ್ಣುತೆಯ ತತ್ವಗಳನ್ನು ಒಳಗೊಂಡಿವೆ ಎಂದು ಪೀಠವು ಉಲ್ಲೇಖಿಸಿದೆ.

    ಆಜಾನ್‌ನಲ್ಲಿ ಇತರ ಧಾರ್ಮಿಕ ಸಮುದಾಯಗಳ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಪದಗಳಿವೆ. ಆದ್ದರಿಂದ ಮಸೀದಿಗಳಲ್ಲಿ ಆಜಾನ್ ಕೂಗುವಾಗ ಧ್ವನಿವರ್ಧಕಗಳನ್ನು ಬಳಸದಂತೆ ನಿರ್ದೇಶನ ನೀಡಬೇಕು ಎಂದು ಆರ್.ಚಂದ್ರಶೇಖರ್ ಎಂಬವರು ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ಇದನ್ನೂ ಓದಿ: 10 ಮಹಾನಗರ ಪಾಲಿಕೆಗಳ ಮೇಯರ್, ಉಪಮೇಯರ್ ಮೀಸಲಾತಿ ಪ್ರಕಟ – ನಿಮ್ಮ ನಗರಕ್ಕೆ ಯಾರು?

    mosque-loudspeakers
    ಸಾಂದರ್ಭಿಕ ಚಿತ್ರ

    ಸಂವಿಧಾನದ 25 (1)ನೇ ವಿಧಿಯು ಯಾವುದೇ ವ್ಯಕ್ತಿ ತಮ್ಮ ಸ್ವಂತ ಧರ್ಮವನ್ನು ಮುಕ್ತವಾಗಿ ಪ್ರತಿಪಾದಿಸಲು, ಆಚರಣೆ ಮತ್ತು ಪ್ರಚಾರ ಮಾಡಲು ಮೂಲಭೂತ ಹಕ್ಕನ್ನು ನೀಡುತ್ತದೆ ಎಂದು ನ್ಯಾಯಾಲಯವು ತೀರ್ಪಿನಲ್ಲಿ ಉಲ್ಲೇಖಿಸಿದೆ.

    ಮೇಲೆ ಹೇಳಿದ ಹಕ್ಕು, ಸಂಪೂರ್ಣ ಹಕ್ಕಲ್ಲ. ಆದರೆ ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ, ಆರೋಗ್ಯ ಮತ್ತು ಸಂವಿಧಾನದ ಇತರ ನಿಬಂಧನೆಗಳ ಆಧಾರದ ಮೇಲೆ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ ಎಂದು ನ್ಯಾಯಾಲಯವು ಹೇಳಿದೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದ ಸಿ.ಟಿ ರವಿ ದಂಪತಿ

    ನಿಸ್ಸಂದೇಹವಾಗಿ ಅರ್ಜಿದಾರರು ಮತ್ತು ಇತರ ನಂಬಿಕೆಗಳ ಭಕ್ತರು ತಮ್ಮ ಧರ್ಮವನ್ನು ಆಚರಿಸುವ ಹಕ್ಕನ್ನು ಹೊಂದಿದ್ದಾರೆ. ಆಜಾನ್ ಮುಸ್ಲಿಮರಿಗೆ ಪ್ರಾರ್ಥನೆ ಸಲ್ಲಿಸುವ ಕರೆಯಾಗಿದೆ. ರಿಟ್ ಅರ್ಜಿಯ ಪ್ಯಾರಾ 6 (ಬಿ) ನಲ್ಲಿ ಅರ್ಜಿದಾರರು ಸ್ವತಃ, ಆಜಾನ್ ಇಸ್ಲಾಂ ಧರ್ಮಕ್ಕೆ ಸೇರಿದ ವ್ಯಕ್ತಿಗಳ ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿದೆ ಎಂದು ಉಲ್ಲೇಖಿಸಿದ್ದಾರೆ. ಆಜಾನ್‌ನಲ್ಲಿ ಇತರ ಸಮುದಾಯಗಳ ಭಾವನೆಗಳಿಗೆ ಧಕ್ಕೆ ತರುವಂತಹ ಯಾವುದೇ ಪದಗಳಿಲ್ಲ ಎಂದು ಪೀಠವು ಅಭಿಪ್ರಾಯಪಟ್ಟಿದೆ.

    Live Tv
    [brid partner=56869869 player=32851 video=960834 autoplay=true]

  • ಎಸಿಬಿ ರದ್ದು; ಹೈಕೋರ್ಟ್‌ ಆದೇಶ ಪಾಲಿಸ್ತೀವಿ, ಸುಪ್ರೀಂಗೆ ಹೋಗಲ್ಲ – ಸಿಎಂ

    ಎಸಿಬಿ ರದ್ದು; ಹೈಕೋರ್ಟ್‌ ಆದೇಶ ಪಾಲಿಸ್ತೀವಿ, ಸುಪ್ರೀಂಗೆ ಹೋಗಲ್ಲ – ಸಿಎಂ

    ಚಿಕ್ಕಬಳ್ಳಾಪುರ: ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರದ್ದು ಸಂಬಂಧ ಹೈಕೋರ್ಟ್‌ ಆದೇಶ ಪಾಲಿಸುತ್ತೇವೆಯೇ ಹೊರತು ಸುಪ್ರೀಂ ಕೋರ್ಟ್‌ ಮೊರೆ ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಮಾತನಾಡಿದ ಅವರು, ಎಸಿಬಿ ರದ್ದು ಸಂಬಂಧ ಹೈಕೋರ್ಟ್‌ ಆದೇಶ ಪಾಲಿಸುತ್ತೇವೆ. ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಎಸಿಬಿ ರದ್ದು – ಹೈ ಆದೇಶಕ್ಕೆ ತಡೆ ಕೋರಿ ಸುಪ್ರೀಂನಲ್ಲಿ ಅರ್ಜಿ

    ಎಸಿಬಿ ವಿಚಾರವಾಗಿ ಹೈಕೋರ್ಟ್ ಆದೇಶ ಪಾಲನೆ ಪ್ರಕ್ರಿಯೆ ಆರಂಭ ಆಗಿದೆ. ಸರ್ಕಾರದಿಂದ ಸುಪ್ರೀಂ ಮೊರೆ ಹೋಗಿಲ್ಲ. ಖಾಸಗಿ ವ್ಯಕ್ತಿ ಮೇಲ್ಮನವಿ ಹೋಗಿರೋದಕ್ಕೂ ನಮಗೂ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.

    ನಾವು ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಮಾತಿಗೆ ಬದ್ಧರಾಗಿದ್ದೇವೆ. ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಹೋಗದಿರಲು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಿದ್ದೇವೆ. ಅದಕ್ಕೆ ನಾವು ಬದ್ಧ ಎಂದಿದ್ದಾರೆ. ಇದನ್ನೂ ಓದಿ: ಆಗಸ್ಟ್‌ 26ಕ್ಕೆ ಮಡಿಕೇರಿ ಚಲೋ ಇಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

    ಭ್ರಷ್ಟಾಚಾರ ನಿಗ್ರಹ ದಳವನ್ನು(ಎಸಿಬಿ) ರದ್ದುಗೊಳಿಸಿದ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಖಾಸಗಿ ಅರ್ಜಿ ಸಲ್ಲಿಸಲಾಗಿದೆ. ಇದರ ಬೆನ್ನಲ್ಲೇ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹೈಕೋರ್ಟ್‌ನ ಐವರು ಹೆಚ್ಚುವರಿ ನ್ಯಾಯಾಧೀಶರಿಗೆ ಪ್ರಮಾಣವಚನ ಬೋಧಿಸಿದ ರಾಜ್ಯಪಾಲರು

    ಹೈಕೋರ್ಟ್‌ನ ಐವರು ಹೆಚ್ಚುವರಿ ನ್ಯಾಯಾಧೀಶರಿಗೆ ಪ್ರಮಾಣವಚನ ಬೋಧಿಸಿದ ರಾಜ್ಯಪಾಲರು

    ಬೆಂಗಳೂರು: ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಕರ್ನಾಟಕ ಹೈಕೋರ್ಟ್‌ನ ನೂತನ ಐವರು ಹೆಚ್ಚುವರಿ ನ್ಯಾಯಾಧೀಶರಿಗೆ ಮಂಗಳವಾರ ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣವಚನ ಬೋಧಿಸಿದರು.

    ನ್ಯಾ. ಅನಿಲ್ ಭೀಮಸೇನ ಕಟ್ಟಿ, ನ್ಯಾ. ಗುರುಸಿದ್ದಯ್ಯ ಬಸವರಾಜ, ನ್ಯಾ. ಚಂದ್ರಶೇಖರ ಮೃತ್ಯುಂಜಯ ಜೋಶಿ, ನ್ಯಾ. ಉಮೇಶ್ ಮಂಜುನಾಥ್ ಭಟ್ ಅಡಿಗ ಮತ್ತು ನ್ಯಾ. ತಲಕಾಡ್ ಗಿರಿಗೌಡ ಶಿವಶಂಕರೇಗೌಡ ಅವರು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದರು. ಇದನ್ನೂ ಓದಿ: ಸಿಎಂ ಹೇಳಿದರೆ ರಾಜೀನಾಮೆ ನೀಡುತ್ತೇನೆ: ಮಾಧುಸ್ವಾಮಿ

    ಈ ಸಂದರ್ಭದಲ್ಲಿ ಕರ್ನಾಟಕ ಹೈಕೋರ್ಟ್‌ನ ಹಂಗಾಮಿ ನ್ಯಾಯಾಧೀಶರಾದ ಅಲೋಕ್ ಆರಾಧೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್, ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ, ಸಚಿವರಾದ ಡಾ.ಕೆ.ಸುಧಾಕರ್, ನಾಗೇಶ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಸಿ.ಟಿ ರವಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಬಿಜೆಪಿ ಮುಖಂಡರಾದ ಜಗದೀಶ್ ಶೆಟ್ಟರ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಇದನ್ನೂ ಓದಿ: ಬಿಳಿಗಿರಿರಂಗನ ಬೆಟ್ಟದ ಪ್ರಣವಾನಂದ ಸ್ವಾಮೀಜಿ ನಿಧನ

    Live Tv
    [brid partner=56869869 player=32851 video=960834 autoplay=true]

  • ಲೈಂಗಿಕ ಸುಖಕ್ಕಾಗಿ ವೇಶ್ಯಾಗೃಹಕ್ಕೆ ಹೋಗುವವರು ಅಪರಾಧಿಗಳಾಗಲ್ಲ: ಹೈಕೋರ್ಟ್

    ಲೈಂಗಿಕ ಸುಖಕ್ಕಾಗಿ ವೇಶ್ಯಾಗೃಹಕ್ಕೆ ಹೋಗುವವರು ಅಪರಾಧಿಗಳಾಗಲ್ಲ: ಹೈಕೋರ್ಟ್

    ಕೋಲ್ಕತ್ತಾ: ಲೈಂಗಿಕ ಸುಖಕ್ಕಾಗಿ ವೇಶ್ಯಾವಾಟಿಕೆ ಗೃಹಕ್ಕೆ ಭೇಟಿ ನೀಡುವ ಗ್ರಾಹಕರನ್ನು ಅನೈತಿಕ ಸಂಚಾರ ಎಂದು ಅನೈತಿಕ ಸಂಚಾರ (ಪಿಐಟಿಎ) ಕಾಯ್ದೆ ಅಡಿಯಲ್ಲಿ ಅಪರಾಧಗಳನ್ನಾಗಿ ಹೊಣೆ ಮಾಡಲಾಗುವುದಿಲ್ಲ ಎಂದು ಕೋಲ್ಕತ್ತಾ ಹೈಕೋರ್ಟ್ ತೀರ್ಪು ನೀಡಿದೆ.

    ಇತ್ತೀಚೆಗೆ ಅರ್ಜಿಯೊಂದನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಜೋಯ್ ಕುಮಾರ್ ಅವರಿದ್ದ ಏಕ ಸದಸ್ಯ ಪೀಠವು ಈ ತೀರ್ಪು ನೀಡಿದೆ. ಅಲ್ಲದೆ ಗ್ರಾಹಕರಾಗಿ ಲೈಂಗಿಕ ಕಾರ್ಯಕರ್ತೆಯರ ಮನೆಗೆ ಭೇಟಿ ನೀಡುವುದು ಲೈಂಗಿಕ ಸುಖಕ್ಕಾಗಿಯೇ ಅಲ್ಲ. ಯಾವುದೋ ಸಂದರ್ಭದಲ್ಲಿ ಅವರು ಭೇಟಿ ನೀಡಿರುತ್ತಾರೆ ಎಂಬ ಅಂಶವನ್ನೂ ನ್ಯಾಯಾಲಯ ಉಲ್ಲೇಖಿಸಿದೆ. ಇದನ್ನೂ ಓದಿ: ಮೆಟ್ರೋ ಸಂಚಾರ ರಾತ್ರಿ 1.30ರ ವರೆಗೂ ವಿಸ್ತರಣೆ – ಯಾಕೆ ಗೊತ್ತೇ? 

    2019ರ ಜನವರಿ 4 ರಂದು ಪೊಲೀಸ್ ದಾಳಿ ವೇಳೆ ಬಂಧಿಸಲ್ಪಟ್ಟ ಎನ್‌ಆರ್‌ಐ ಉದ್ಯಮಿ ಸುರೇಶ್ ಬಾಬು ಪ್ರಕರಣವನ್ನು ವಿಚಾರಣೆ ನಡೆಸಿದ ಕೋರ್ಟ್ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಿದೆ.

    ಬಾಬು ಅವರನ್ನು ಸ್ಥಳೀಯ ದೇಹದ ಮಸಾಜ್ ಸೆಂಟರ್‌ನಿಂದ 8 ಮಹಿಳೆಯರು ಮತ್ತು ಒಬ್ಬ ಪುರುಷನೊಂದಿಗೆ ಬಂಧಿಸಿ ಕರೆದೊಯ್ಯಲಾಯಿತು. ಅವರಲ್ಲಿ ಲೈಂಗಿಕ ಕಾರ್ಯಕರ್ತೆಯರು ಹಾಗೂ ಪಿಂಪ್ ಸಹ ಇದ್ದನು. ಮತ್ತೊಬ್ಬ ಮಸಾಜ್ ಸೆಂಟರ್ ನಡೆಸುವ ನೆಪದಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದನು. ಅವರೆಲ್ಲರನ್ನು ಪೊಲೀಸರು ಬಂಧಿಸಿ ಪಿಐಟಿಎ ಅಡಿಯಲ್ಲಿ ಕೇಸ್ ದಾಖಲಿಸಿದ್ದರು. ಇದನ್ನೂ ಓದಿ: ಸೋನಿಯಾ ಗಾಂಧಿಗೆ ಮನೆ ಬೇಕಿದ್ರೆ ಇಂದೇ ಅರ್ಜಿ ಸಲ್ಲಿಸಿ: ಡಿಕೆಶಿಗೆ ಬಿಜೆಪಿ ಟಾಂಗ್

    karnataka highcourt

    ಪಿಐಟಿಎ ಅಡಿಯಲ್ಲಿನ ನಿಬಂಧನೆಗಳು ವಾಣಿಜ್ಯ ಉದ್ದೇಶಕ್ಕಾಗಿ ವ್ಯಕ್ತಿಯ ಲೈಂಗಿಕ ಶೋಷಣೆ ಅಥವಾ ನಿಂದನೆಯನ್ನು ಶಿಕ್ಷಿಸುತ್ತವೆ. ಆದರೆ ಅರ್ಜಿದಾರರ ವಿರುದ್ಧ ಅದು ಅಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ. ಆದ್ದರಿಂದ ನ್ಯಾಯಾಲಯವು ಅರ್ಜಿದಾರರ ವಿರುದ್ಧ ಪ್ರಾರಂಭಿಸಲಾದ ಆರೋಪಪಟ್ಟಿ ಮತ್ತು ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಿದೆ.

    ಇತ್ತೀಚೆಗಷ್ಟೇ ಕರ್ನಾಟಕ ಹೈಕೋರ್ಟ್ ಕೂಡ ವೇಶ್ಯಾಗೃಹದಲ್ಲಿ ಪತ್ತೆಯಾದ ಗ್ರಾಹಕನನ್ನು ಅನೈತಿಕ ಕಳ್ಳಸಾಗಾಣಿಕೆ ಅಪರಾಧಗಳಿಗಾಗಿ ಕಾನೂನು ಕ್ರಮ ಜರುಗಿಸುವಂತಿಲ್ಲ ಎಂದು ತೀರ್ಪು ನೀಡಿತ್ತು. ಇದನ್ನೂ ಓದಿ: ವೇಶ್ಯಾವಾಟಿಕೆ ಅಡ್ಡೆ ಮೇಲಿನ ದಾಳಿಯಲ್ಲಿ ಸಿಕ್ಕಿಬೀಳುವ ಗ್ರಾಹಕರನ್ನು ಬಂಧಿಸುವಂತಿಲ್ಲ: ಹೈಕೋರ್ಟ್‌ 

    ಅರ್ಜಿದಾರರ ಪರ ವಕೀಲರಾದ ತುಷರ್ ಮುಖರ್ಜಿ ಮತ್ತು ಅಬು ಅಬ್ಬಾಸ್ ಉದ್ದೀನ್ ವಾದ ಮಂಡಿಸಿದರು.

    Live Tv

  • ಎರಡು ದಿನ ಕಾಯಿರಿ  – ಹಿಜಬ್‌ ವಿದ್ಯಾರ್ಥಿನಿಯರಿಗೆ ಸುಪ್ರೀಂ ಸೂಚನೆ

    ಎರಡು ದಿನ ಕಾಯಿರಿ – ಹಿಜಬ್‌ ವಿದ್ಯಾರ್ಥಿನಿಯರಿಗೆ ಸುಪ್ರೀಂ ಸೂಚನೆ

    ನವದೆಹಲಿ: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧವನ್ನು ಎತ್ತಿ ಹಿಡಿದಿರುವ ಕರ್ನಾಟಕ ಹೈಕೋರ್ಟ್ ಆದೇಶದ ವಿರುದ್ಧದ ಮೇಲ್ಮನವಿಗಳನ್ನು ಶೀಘ್ರದಲ್ಲಿ ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ಮಂಗಳವಾರ ಒಪ್ಪಿಗೆ ನೀಡಿದೆ.

    SUPREME COURT

    ಕರ್ನಾಟಕ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಮೇಲ್ಮನವಿ ಕುರಿತು ಹಿರಿಯ ವಕೀಲರಾದ ಮೀನಾಕ್ಷಿ ಅರೋರಾ ಮಂಗಳವಾರ ಸಿಜೆಐ ಪೀಠದ ಮುಂದೆ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು, ದಯವಿಟ್ಟು ಎರಡು ದಿನ ಕಾಯಿರಿ. ನಾನು ಪಟ್ಟಿ ಮಾಡುತ್ತೇನೆ ಎಂದು ಮೀನಾಕ್ಷಿ ಅರೋರಾ ಅವರಿಗೆ ತಿಳಿಸಿದ್ದಾರೆ. ಅವರು ವಿದ್ಯಾರ್ಥಿಗಳ ಪರವಾಗಿ ಪ್ರಕರಣದ ಆರಂಭಿಕ ವಿಚಾರಣೆಗೆ ಮೌಖಿಕವಾಗಿ ಪ್ರಸ್ತಾಪಿಸಿದರು. ಇದನ್ನೂ ಓದಿ: ವಿಭೂತಿ ಹಾಕಿದ್ದಕ್ಕೆ ಕತ್ತೆ ಅಂದ್ರು, ಬಲವಂತವಾಗಿ ಮತಾಂತರಿಸಲು ಯತ್ನಿಸಿದ್ರು – ಶಿಕ್ಷಕಿ ವಿರುದ್ಧ ವಿದ್ಯಾರ್ಥಿನಿ ಆರೋಪ

    ಹಿಜಬ್‌ ಇಸ್ಲಾಂ ಧಾರ್ಮಿಕ ಆಚರಣೆಯ ಅಗತ್ಯ ಭಾಗವಲ್ಲ. ಶಾಲಾ-ಕಾಲೇಜುಗಳ ಸಮವಸ್ತ್ರದ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಿರ್ದೇಶಿಸುವ ಕರ್ನಾಟಕ ಸರ್ಕಾರದ ಆದೇಶವನ್ನು ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದಾರೆ.

    ಅರ್ಜಿದಾರರಲ್ಲಿ ಒಬ್ಬರಾದ ನಿಬಾ ನಾಜ್, ಹೈಕೋರ್ಟಿನ ತೀರ್ಮಾನವನ್ನು ವಿರೋಧಿಸಿ, ʻಭಾರತೀಯ ಕಾನೂನು ವ್ಯವಸ್ಥೆಯು ಧಾರ್ಮಿಕ ಚಿಹ್ನೆಗಳನ್ನು ಧರಿಸುವುದನ್ನು, ಒಯ್ಯುವುದನ್ನು ಸ್ಪಷ್ಟವಾಗಿ ಗುರುತಿಸುತ್ತದೆ. ಮೋಟಾರು ವಾಹನ ಕಾಯ್ದೆಯು ಪೇಟ ಧರಿಸುವ ಸಿಖ್‌ರಿಗೆ ಹೆಲ್ಮೆಟ್ ಧರಿಸುವುದರಿಂದ ವಿನಾಯಿತಿ ನೀಡುತ್ತದೆ. ಸಿಖ್‌ರಿಗೆ ಕಿರ್ಪಾನ್‌ಗಳನ್ನು ವಿಮಾನದಲ್ಲಿ ಸಾಗಿಸಲು ಅನುಮತಿಸಲಾಗಿದೆ. ಆದರೆ ಮುಸ್ಲಿಂ ಹೆಣ್ಣುಮಕ್ಕಳಿಗೆ ಶಿಕ್ಷಣ ಪಡೆಯಲು ನಿರಾಕರಿಸುವುದು ಮತ್ತು ಕಾಲೇಜಿಗೆ ಹಿಜಬ್ ಧರಿಸಿದ್ದಕ್ಕಾಗಿ ಶಿಕ್ಷೆ ವಿಧಿಸುವುದು ಅವರ ಖಾಸಗಿತನದ ಹಕ್ಕನ್ನು ಉಲ್ಲಂಘಿಸಿದಂತೆʼ ಎಂದು ಮೇಲ್ಮನವಿಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಧ್ವನಿವರ್ಧಕಗಳನ್ನು ತೆಗೆದು ಹಾಕಿ : ಯುಪಿ ಸರ್ಕಾರ ಆದೇಶ

  • ವೇಶ್ಯಾವಾಟಿಕೆ ಅಡ್ಡೆ ಮೇಲಿನ ದಾಳಿಯಲ್ಲಿ ಸಿಕ್ಕಿಬೀಳುವ ಗ್ರಾಹಕರನ್ನು ಬಂಧಿಸುವಂತಿಲ್ಲ: ಹೈಕೋರ್ಟ್‌

    ವೇಶ್ಯಾವಾಟಿಕೆ ಅಡ್ಡೆ ಮೇಲಿನ ದಾಳಿಯಲ್ಲಿ ಸಿಕ್ಕಿಬೀಳುವ ಗ್ರಾಹಕರನ್ನು ಬಂಧಿಸುವಂತಿಲ್ಲ: ಹೈಕೋರ್ಟ್‌

    ಬೆಂಗಳೂರು: ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಸಿಕ್ಕಿಬೀಳುವ ಗ್ರಾಹಕರ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮ ಜರುಗಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಪುನರುಚ್ಚರಿಸಿದೆ.

    ನ್ಯಾಯಮೂರ್ತಿ ಎಂ.ನಾಗರಪಸಣ್ಣ ಅವರಿದ್ದ ಏಕಸದಸ್ಯ ಪೀಠವು ಬಾಬು ಎಸ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ಅಂಗೀಕರಿಸಿತು. ಅಲ್ಲದೇ ಅವರ ವಿರುದ್ಧದ ಅನೈತಿಕ ಸಂಚಾರ ತಡೆ ಕಾಯ್ದೆ, 1956ರ ಸೆಕ್ಷನ್ 3, 4, 5, 6 ಮತ್ತು ಸೆಕ್ಷನ್ 370 (ವ್ಯಕ್ತಿ ಕಳ್ಳಸಾಗಣೆ) ಅಡಿಯಲ್ಲಿ ಬಾಕಿ ಉಳಿದಿರುವ ಪ್ರಕ್ರಿಯೆಗಳನ್ನು ರದ್ದುಗೊಳಿಸಿತು. ಇದನ್ನೂ ಓದಿ: ಮುಖಾಮುಖಿ ಭೇಟಿಯಾದ ನಂತರವಷ್ಟೇ ಈಶ್ವರಪ್ಪ ರಾಜೀನಾಮೆ ನಿರ್ಧಾರ: ಬೊಮ್ಮಾಯಿ

    ಪೊಲೀಸರು ಶೋಧ ನಡೆಸಿದಾಗ ಅರ್ಜಿದಾರರು ವೇಶ್ಯಾವಾಟಿಕೆಯಲ್ಲಿ ಗ್ರಾಹಕರು ಎಂಬುದು ವಿವಾದವಾಗಿಲ್ಲ. ವೇಶ್ಯಾಗೃಹದಲ್ಲಿರುವ ಗ್ರಾಹಕನನ್ನು ಕ್ರಿಮಿನಲ್ ಮೊಕದ್ದಮೆಗಳಿಗೆ ಎಳೆಯಲಾಗುವುದಿಲ್ಲ ಎಂಬುದು ಈ ನ್ಯಾಯಾಲಯವು ಹಲವಾರು ಪ್ರಕರಣಗಳಲ್ಲಿ ತೆಗೆದುಕೊಂಡ ಸ್ಥಿರವಾದ ದೃಷ್ಟಿಕೋನವಾಗಿದೆ ಎಂದು ಪೀಠವು ಸ್ಪಷ್ಟಪಡಿಸಿದೆ.

    ಕಾಯಿದೆಯ ಸೆಕ್ಷನ್ 3, ವೇಶ್ಯಾಗೃಹವನ್ನು ಇಟ್ಟುಕೊಳ್ಳುವುದಕ್ಕೆ ಅಥವಾ ಆವರಣವನ್ನು ವೇಶ್ಯಾಗೃಹವಾಗಿ ಬಳಸಲು ಅನುಮತಿಸುವುದಕ್ಕೆ ಶಿಕ್ಷೆ ವಿಧಿಸುತ್ತದೆ. ಸೆಕ್ಷನ್ 4, ವೇಶ್ಯಾವಾಟಿಕೆಯ ಗಳಿಕೆಯ ಮೇಲೆ ಬದುಕುವುದಕ್ಕೆ ಶಿಕ್ಷೆ ನೀಡುತ್ತದೆ. ಸೆಕ್ಷನ್ 5, ವೇಶ್ಯಾವಾಟಿಕೆಗಾಗಿ ವ್ಯಕ್ತಿ ಸಾಗಣೆ, ಪ್ರೇರೇಪಿಸುವುದು ಅಥವಾ ಕರೆದೊಯ್ಯುವುದಕ್ಕೆ ಶಿಕ್ಷೆ ವಿಧಿಸುವುದಕ್ಕೆ ಸಂಬಂಧಿಸಿದ್ದಾಗಿದೆ. ಸೆಕ್ಷನ್ 6, ವೇಶ್ಯಾವಾಟಿಕೆ ನಡೆಸುತ್ತಾ ಸ್ಥಳದಲ್ಲಿ ಬಂಧನಕ್ಕೊಳಗಾದವರನ್ನು ಶಿಕ್ಷಿಸುವುದಾಗಿದೆ. ಆದರೆ ಈ ಯಾವುದೇ ಚಟುವಟಿಕೆಗಳು ಗ್ರಾಹಕರಿಗೆ ಕಾರಣವಾಗುವುದಿಲ್ಲ. ಇದನ್ನೂ ಓದಿ:

  • ಎಲ್ಲಾ ಸಮುದಾಯಗಳು ಕರ್ನಾಟಕ ಹೈಕೋರ್ಟ್‌ ಆದೇಶ ಪಾಲಿಸಬೇಕು: ಖರ್ಗೆ

    ಎಲ್ಲಾ ಸಮುದಾಯಗಳು ಕರ್ನಾಟಕ ಹೈಕೋರ್ಟ್‌ ಆದೇಶ ಪಾಲಿಸಬೇಕು: ಖರ್ಗೆ

    ನವದೆಹಲಿ: ಧಾರ್ಮಿಕ ಕಟ್ಟಡಗಳಲ್ಲಿ ಧ್ವನಿವರ್ಧಕಗಳ ಬಳಕೆಗೆ ಸಂಬಂಧಿಸಿದಂತೆ ಎಲ್ಲಾ ಸಮುದಾಯಗಳು ಕರ್ನಾಟಕ ಹೈಕೋರ್ಟ್‌ನ ಆದೇಶ ಪಾಲಿಸಬೇಕು ಎಂದು ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

    ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇಂತಹ ವಿಷಯಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯಬೇಕು ಎಂದು ಖರ್ಗೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಹಿಜಬ್, ಹಲಾಲ್‍ನಿಂದಾಗಿ ಬೆಲೆ ಏರಿಕೆಯ ಗಮನ ದೂರವಾಗಿದೆ: ಶಶಿ ತರೂರ್

    ಪ್ರತಿಯೊಬ್ಬರೂ ಹೈಕೋರ್ಟ್‌ನ ಆದೇಶವನ್ನು ಪಾಲಿಸಬೇಕು. ಆದರೆ ಸಮಾಜದಲ್ಲಿ ಕೋಮು ಬಿರುಕುಗಳನ್ನು ಸೃಷ್ಟಿಸುವಾಗ ಕೇವಲ ಧ್ರುವೀಕರಣದ ರಾಜಕೀಯ ಉದ್ದೇಶಕ್ಕಾಗಿ ಇಂತಹ ಸಮಸ್ಯೆಗಳನ್ನು (ಆಜಾನ್ ಸಮಸ್ಯೆ) ತಂದು ಗದ್ದಲ ಎಬ್ಬಿಸಲಾಗಿದೆ. ಇದು ಸಾಮಾಜಿಕ ಮತ್ತು ಆರ್ಥಿಕವಾಗಿ ಪ್ರತಿಕೂಲವಾಗಿರುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಯಂತ್ರಣ ಸಾಧಿಸಿ, ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಬೇಕು ಎಂದು ತಿಳಿಸಿದ್ದಾರೆ.

    ಹಿಜಬ್‌ ವಿಚಾರವಾಗಿ ಅಲ್‌ಖೈದಾ ಸಂಘಟನೆ ವ್ಯಕ್ತಿಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರಚೋದಿಸಲು ಪ್ರಯತ್ನಿಸುವ ಜನರ ವಿರುದ್ಧ ಸರ್ಕಾರ ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಎಲ್ಲ PIL ಗಳನ್ನು ನಾವೇ ವಿಚಾರಣೆ ನಡೆಸುವುದಾದರೆ ಜನ ಸರ್ಕಾರವನ್ನು ಆಯ್ಕೆ ಮಾಡಿರುವುದ್ಯಾಕೆ? – ಸುಪ್ರೀಂಕೋರ್ಟ್ ಗರಂ

    muskhan

    ಯಾರಾದರೂ ತಪ್ಪು ಕೆಲಸಗಳಲ್ಲಿ ತೊಡಗಿದರೆ, ಜನರು ಅವರನ್ನು ಬೆಂಬಲಿಸಬಾರದು. ಯಾರಾದರೂ ಪ್ರಚೋದಿಸಲು ಪ್ರಯತ್ನಿಸಿದರೆ, ನೀವು ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ವರ್ತಿಸಬೇಕು ಎಂದು ಕಿವಿಮಾತು ಹೇಳಿದ್ದಾರೆ.

  • ಡ್ರೀಮ್ ಇಲೆವೆನ್ ಗೇಮಿಂಗ್ ಆ್ಯಪ್ ಸಂಸ್ಥಾಪಕರ ವಿರುದ್ಧದ ಕೇಸ್ ರದ್ದು

    ಡ್ರೀಮ್ ಇಲೆವೆನ್ ಗೇಮಿಂಗ್ ಆ್ಯಪ್ ಸಂಸ್ಥಾಪಕರ ವಿರುದ್ಧದ ಕೇಸ್ ರದ್ದು

    ಬೆಂಗಳೂರು: ರಾಜ್ಯದಲ್ಲಿ ಆನ್‍ಲೈನ್ ಗೇಮಿಂಗ್ ನಿಷೇಧಿಸಿದ ಬಳಿಕ ಡ್ರೀಮ್ 11 ಗೇಮಿಂಗ್ ಆ್ಯಪ್‍ನ ಸಂಸ್ಥಾಕರ ವಿರುದ್ಧ ದಾಖಲಾಗಿದ್ದ ಕೇಸ್‍ನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.

    ರಾಜ್ಯ ಸರ್ಕಾರ ಆನ್‍ಲೈನ್ ಗೇಮಿಂಗ್ ನಿಷೇಧಿಸಿದ್ದ ಬಳಿಕ ಮುಂಬೈ ಮೂಲದ ಡ್ರೀಮ್ 11 ಗೇಮಿಂಗ್ ಆ್ಯಪ್‍ನ ಸಂಸ್ಥಾಪಕರಾದ ಭವಿತ್ ಸೇಠ್ ಮತ್ತು ಹರ್ಷ್ ಜೈನ್ ವಿರುದ್ಧ ಬೆಂಗಳೂರಿನ ಅನ್ನಪೂರ್ಣೇಶ್ವರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ವಿಚಾರಣೆಗೆ ನಡೆಸಿ ನ್ಯಾ. ಎಮ್ ನಾಗಪ್ರಸನ್ನ ತೀರ್ಪು ನೀಡಿದ್ದು, ಸರ್ಕಾರದ ನಿಷೇಧ ಆದೇಶವನ್ನು ಕೆಲದಿನಗಳ ಹಿಂದೆ ಹೈಕೋರ್ಟ್ ವಿಭಾಗೀಯ ಪೀಠ ರದ್ದುಪಡಿಸಿತ್ತು. ಇದರ ಅನ್ವಯ ಡ್ರೀಮ್ 11 ಗೇಮಿಂಗ್ ಆ್ಯಪ್‍ನ ಸಂಸ್ಥಾಕರಾದ ಭವಿತ್ ಸೇಠ್ ಮತ್ತು ಹರ್ಷ ಜೈನ್ ವಿರುದ್ಧ ದಾಖಲಾಗಿದ್ದ ಕೇಸ್ ರದ್ದು ಪಡಿಸಲಾಗಿದೆ ಎಂದು ತೀರ್ಪು ಪ್ರಕಟಿಸಿದರು. ಇದನ್ನೂ ಓದಿ: ಆನ್‍ಲೈನ್ ಗೇಮಿಂಗ್ ನಿಷೇಧ – ಸರ್ಕಾರದ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್

    ರಾಜ್ಯದಲ್ಲಿ ಈ ಹಿಂದೆ ಆನ್‍ಲೈನ್ ಗೇಮಿಂಗ್ ನಿಷೇಧಿಸಿದ ಬಳಿಕ ಬೆಂಗಳೂರಿನ ನಾಗರಬಾವಿ ನಿವಾಸಿಯಾಗಿರುವ ಮಂಜುನಾಥ್ ಎಂಬವರು ಅಕ್ಟೋಬರ್ 7ರಂದು ಡ್ರೀಮ್ 11 ಮಾಲೀಕರ ವಿರುದ್ಧ ದೂರು ಸಲ್ಲಿಸಿದ್ದರು. ಆನ್‍ಲೈನ್ ಗ್ಯಾಂಬ್ಲಿಂಗ್ ನಿಷೇಧದ ಕುರಿತಾದ ವರದಿಗಳನ್ನು ಪತ್ರಿಕೆಯಲ್ಲಿ ಓದಿದ ಬಳಿಕ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಪರಿಶೀಲಿಸಲಾಗಿತ್ತು. ಅನೇಕ ಕಂಪನಿಗಳು ತಮ್ಮ ಆನ್‍ಲೈನ್ ಗೇಮ್‍ಗಳಿಗೆ ಸಂಬಂಧಿಸಿದ ಆ್ಯಪ್‍ಗಳನ್ನು ಡೌನ್‍ಲೋಡ್ ಮಾಡಿಕೊಳ್ಳುವುದರಿಂದ ಬ್ಲಾಕ್ ಮಾಡಿದ್ದವು. ಆದರೆ ಡ್ರೀಮ್ 11 ಮಾಡಿರಲಿಲ್ಲ ಎಂದು ಅನ್ನಪೂರ್ಣೇಶ್ವರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಕೆಲದಿನಗಳ ಹಿಂದೆ ಹೈಕೋರ್ಟ್ ಸರ್ಕಾರದ ಕ್ರಮ ಸಂವಿಧಾನಬದ್ಧವಾಗಿಲ್ಲ. ಆನ್‍ಲೈನ್ ಗೇಮಿಂಗ್ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವಂತಿಲ್ಲ. ಸಂವಿಧಾನಬದ್ಧವಾದ ಶಾಸನ ರೂಪಿಸಲು ಸರ್ಕಾರ ಸ್ವತಂತ್ರವಿದೆ ಎಂದು ಹೈಕೋರ್ಟ್ ವಿಭಾಗೀಯ ಪೀಠ ಆದೇಶ ನೀಡಿತ್ತು. ಇದನ್ನೂ ಓದಿ: ಸ್ಕೂಲ್ ಬಳಿ ಬಂದು ಸಮಸ್ಯೆ ಕ್ಲೀಯರ್ ಮಾಡಿ- ಠಾಣೆ ಮೆಟ್ಟಿಲೇರಿದ ಪುಟಾಣಿ

    ಈ ಮೊದಲು ಕರ್ನಾಟಕ ಪೊಲೀಸ್ ಕಾಯ್ದೆ ತಿದ್ದುಪಡಿ ಮಾಡಿ ಆನ್‍ಲೈನ್ ಗೇಮಿಂಗ್‍ಗೆ ಸರ್ಕಾರ ನಿಷೇಧ ಹೇರಿತ್ತು. ವಿಧಾನಸಭೆಯಲ್ಲಿ ಆನ್‍ಲೈನ್ ಬೆಟ್ಟಿಂಗ್ ಪ್ರತಿಬಂಧಕ ಕಾಯ್ದೆಯ ವಿಧೇಯಕವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಮಂಡಿಸಿದ್ದರು.

  • ಹಿಜಬ್‌ ತೀರ್ಪು- ಹೈಕೋರ್ಟ್‌ ಜಡ್ಜ್‌ಗಳಿಗೆ ʼವೈʼ ಭದ್ರತೆ

    ಹಿಜಬ್‌ ತೀರ್ಪು- ಹೈಕೋರ್ಟ್‌ ಜಡ್ಜ್‌ಗಳಿಗೆ ʼವೈʼ ಭದ್ರತೆ

    ಬೆಂಗಳೂರು: ಹಿಜಬ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದ ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ ಜೀವ ಬೆದರಿಕೆ ಎದುರಾಗಿರುವ ಹಿನ್ನೆಲೆಯಲ್ಲಿ ಅವರಿಗೆ ʼವೈʼ ಶ್ರೇಣಿಯ ಭದ್ರತೆ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

    ಹಿಜಾಬ್ ತೀರ್ಪು ನೀಡಿದ ಮೂವರೂ ನ್ಯಾಯಮೂರ್ತಿಗಳಿಗೆ ʻವೈʼ ಶ್ರೇಣಿ ಭದ್ರತೆ ನೀಡಲು ನಿರ್ಧರಿಸಿದ್ದೇವೆ. ನ್ಯಾಯಮೂರ್ತಿಗಳಿಗೆ ಕೆಲವರು ಜೀವ ಬೆದರಿಕೆ ಹಾಕಿರುವ ಕುರಿತು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುವಂತೆ ಪೊಲೀಸ್‌ ಮಹಾನಿರ್ದೇಶಕರು ಹಾಗೂ ಐಜಿ ಅವರಿಗೆ ಸೂಚಿಸಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ಜಡ್ಜ್‌ಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿ ಅರೆಸ್ಟ್

    ಮೂವರು ನ್ಯಾಯಮೂರ್ತಿಗಳಲ್ಲಿ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಕೂಡ ಸೇರಿದ್ದಾರೆ. ಹಿಜಬ್‌ ಬಗ್ಗೆ ತೀರ್ಪು ನೀಡಿದ ತ್ರಿಸದಸ್ಯ ಪೀಠದಲ್ಲಿ ನ್ಯಾಯಮೂರ್ತಿಗಳಾದ ಕೃಷ್ಣ ದೀಕ್ಷಿತ್ ಮತ್ತು ಖಾಝಿ ಎಂ ಜೈಬುನ್ನಿಸಾ ಅವರೂ ಇದ್ದರು.

    ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕಿರುವ ಮೂವರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬೊಮ್ಮಾಯಿ ಒತ್ತಾಯಿಸಿದರು.

    ಸಮುದಾಯದ ಪರವಾಗಿರುವುದು ಜಾತ್ಯತೀತತೆ ಅಲ್ಲ, ಅದು ಕೋಮುವಾದ. ನಾನು ಇದನ್ನು ಖಂಡಿಸುತ್ತೇನೆ. ನಾವೆಲ್ಲರೂ ಒಟ್ಟಾಗಿ ನಿಲ್ಲಬೇಕು. ಇದನ್ನು ಸರ್ಕಾರ ಖಂಡಿಸುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿಜಬ್‌ ತೀರ್ಪು ಪ್ರಕಟಿಸಿದ ಜಡ್ಜ್‌ಗಳಿಗೆ ಕೊಲೆ ಬೆದರಿಕೆ – ಕೇಸ್‌ ದಾಖಲು

    ಹಿಜಬ್‌ ತೀರ್ಪು ಪ್ರಕಟಿಸಿದ ಹೈಕೋರ್ಟ್‌ ನ್ಯಾಯಾಧೀಶರಿಗೆ ತಮಿಳುನಾಡು ಮೂಲದ ಮತೀಯ ಸಂಘಟನೆಯೊಂದು ಕೊಲೆ ಬೆದರಿಕೆ ಹಾಕಿದೆ. ತೌಹೀದ್‌ ಜಮಾತ್‌ ಸಂಘಟನೆ ಬೆದರಿಕೆ ಹಾಕಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವಿಡಿಯೋ ವೈರಲ್‌ ಬೆನ್ನಲೇ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಸಂಘಟನೆ ವಿರುದ್ಧ ಪ್ರಕರಣ ದಾಖಲಾಗಿದೆ.

    ತರಗತಿಗಳಲ್ಲಿ ಹಿಜಬ್‌ ಧರಿಸಿ ಹೋಗುವಂತಿಲ್ಲ. ಸಮವಸ್ತ್ರ ನಿಯಮ ಪಾಲನೆ ಮಾಡಬೇಕು ಎಂದು ಈಚೆಗೆ ತೀರ್ಪು ನೀಡಿದ್ದ ಹೈಕೋರ್ಟ್‌, ಹಿಜಬ್‌ ಪರವಾಗಿ ಸಲ್ಲಿಕೆಯಾಗಿದ್ದ ಎಲ್ಲಾ ಅರ್ಜಿಗಳನ್ನು ತಿರಸ್ಕರಿಸಿತ್ತು. ಇದನ್ನೂ ಓದಿ: ಭಗವದ್ಗೀತೆ ಹೊಟ್ಟೆ ತುಂಬಿಸುವುದಿಲ್ಲ, ತಲೆಯನ್ನು ತುಂಬಿಸುತ್ತದೆ: ಪ್ರತಾಪ್‍ಸಿಂಹ

    ವೈ ಶ್ರೇಣಿ ಭದ್ರತೆ ಹೇಗಿರುತ್ತೆ?
    ವೈ ಶ್ರೇಣಿಯಲ್ಲಿ ಒಬ್ಬರು ಅಥವಾ ಇಬ್ಬರು ಕಮಾಂಡೋಗಳು ಮತ್ತು ಪೊಲೀಸ್ ಸಿಬ್ಬಂದಿ ಸೇರಿದಂತೆ 8 ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗುವುದು.

  • ಕೋರ್ಟ್ ಆದೇಶಕ್ಕೂ ಮುನ್ನ ಹಿಜಬ್ ಗೊಂದಲದಿಂದ ಪರೀಕ್ಷೆಗೆ ಗೈರಾದವರಿಗೆ ಮತ್ತೆ ಅವಕಾಶ ಕೊಡಿ: ರಘುಪತಿ ಭಟ್‌

    ಕೋರ್ಟ್ ಆದೇಶಕ್ಕೂ ಮುನ್ನ ಹಿಜಬ್ ಗೊಂದಲದಿಂದ ಪರೀಕ್ಷೆಗೆ ಗೈರಾದವರಿಗೆ ಮತ್ತೆ ಅವಕಾಶ ಕೊಡಿ: ರಘುಪತಿ ಭಟ್‌

    ಬೆಂಗಳೂರು: ಹೈಕೋರ್ಟ್‌ ಆದೇಶಕ್ಕೂ ಮುನ್ನ ಹಿಜಬ್‌ ಗೊಂದಲದಿಂದ ಪರೀಕ್ಷೆಗೆ ಗೈರಾದವರಿಗೆ ಮತ್ತೆ ಅವಕಾಶ ಕೊಡಿ ಎಂದು ಬಿಜೆಪಿ ಶಾಸಕ ರಘುಪತಿ ಭಟ್‌ ಮನವಿ ಮಾಡಿದರು.

    ವಿಧಾನಸಭೆ ಶೂನ್ಯವೇಳೆಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ಆದೇಶ ಬಂದ ನಂತರ ಅದನ್ನು ಧಿಕ್ಕರಿಸಿ ಪ್ರತಿಭಟನೆ ಮಾಡುತ್ತಿರುವವರ ಮೇಲೆ ಕ್ರಮ ಆಗಬೇಕು. ಜತೆಗೆ ಕಳೆದ ಬಾರಿ ಪರೀಕ್ಷೆಗೆ ಅನೇಕ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಈಗ ಹಿಜಬ್ ತೆಗೆದಿಟ್ಟು ಹೋಗಲು ಮುಂದಾಗುವ ವಿದ್ಯಾರ್ಥಿನಿಯರಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಬುರ್ಕಾ ಮಾನಸಿಕ ಗುಲಾಮಗಿರಿ ಸಂಕೇತ ಅಂತ ಅಂಬೇಡ್ಕರ್ ಹೇಳಿದ್ದಾರೆ: ಸಿ.ಟಿ.ರವಿ

    ರಘುಪತಿ ಭಟ್ ಅವರನ್ನು ಸಮರ್ಥಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕೋರ್ಟ್ ತೀರ್ಪಿನ ವಿರುದ್ಧ ಪ್ರತಿಭಟನೆ, ಬಂದ್ ಮಾಡುವುದು ಸರಿಯಲ್ಲ ಎಂದರು. ಈ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರತಿಭಟನಾಕಾರರನ್ನು ಸಮರ್ಥಿಸಿಕೊಂಡರು.

    ಕೋರ್ಟ್ ತೀರ್ಪಿನ ಬಗ್ಗೆ ಅಸಮಾಧಾನ ಇದ್ದರೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಅದರ ಜೊತೆಗೆ ಶಾಂತಿಯುತವಾಗಿ ಬಂದ್, ಪ್ರತಿಭಟನೆ ಮಾಡುವುದು ಅವರ ಸಂವಿಧಾನಾತ್ಮಕ ಹಕ್ಕು. ಅದನ್ನು ಸರ್ಕಾರ ಹೇಗೆ ತಡೆಯಲು ಸಾಧ್ಯ? ಬಂದ್, ಪ್ರತಿಭಟನೆ ಮಾಡಲು ಬಿಡಿ ಎಂದು ಸಿದ್ದರಾಮಯ್ಯ ಹೇಳಿದರು. ಇದನ್ನೂ ಓದಿ: ಹಿಜಬ್‌ ನಿಷೇಧಿಸಿ ಕರ್ನಾಟಕ ಹೈಕೋರ್ಟ್‌ ಇಸ್ಲಾಂ ಬಗ್ಗೆ ಭೀತಿ ಹುಟ್ಟುವಂತೆ ಮಾಡಿದೆ: ಇಮ್ರಾನ್‌ ಖಾನ್‌

    ಇನ್ನೊಂದೆಡೆ ವಿಪಕ್ಷ ಉಪನಾಯಕ ಯು.ಟಿ‌.ಖಾದರ್ ಮಧ್ಯಪ್ರವೇಶಿಸಿ, ನ್ಯಾಯಾಲಯಕ್ಕೆ ಅಗೌರವ ತೋರಿಸಬೇಕು ಎಂಬ ಕಾರಣಕ್ಕೆ ಬಂದ್‌ಗೆ ಕರೆ ಕೊಟ್ಟಿಲ್ಲ. ಅಸಮಾಧಾನದ ಕಾರಣಕ್ಕೆ ಧಾರ್ಮಿಕ ಮುಖಂಡರು ಬಂದ್‌ಗೆ ಕರೆ ಕೊಟ್ಟಿದ್ದಾರೆ ಎಂದರು.‌ ಈ ವೇಳೆ ಮಾತನಾಡಿದ ಸಿ.ಟಿ.ರವಿ, ಇದರಲ್ಲಿ ವೋಟ್ ಬ್ಯಾಂಕ್ ರಾಜಕಾರಣ ಮಾಡುವುದು ಮಹಾ ಪಾಪದ ಕೆಲಸ‌. ಶಾಲೆಗಳಲ್ಲಿ ಸಮವಸ್ತ್ರ ಏಕೆ ಇರಬೇಕು‌ ಎಂಬುದರ ಬಗ್ಗೆ ಕೋರ್ಟ್‌ನಲ್ಲಿ ಹತ್ತು ದಿನ ವಿವರವಾದ ವಿಚಾರಣೆ ನಡೆದು ಬಳಿಕ ತೀರ್ಪು ಕೊಡಲಾಗಿದೆ. ಅದನ್ನು ಧಿಕ್ಕರಿಸಿ ಪ್ರತಿಭಟನೆ, ಬಂದ್ ಮಾಡೋದು ಎಷ್ಟು ಸರಿ ಎಂದು ಪ್ರಶ್ನಿಸಿದರು.

    ಶಾಸಕ ರಘುಪತಿ ಭಟ್‌ ಮನವಿ ಕುರಿತು ಪ್ರತಿಕ್ರಿಯಿಸಿದ ಸಚಿವ ಮಾಧುಸ್ವಾಮಿ, ಹಿಜಬ್ ಗೊಂದಲದಿಂದಾಗಿ ಹೈಕೋರ್ಟ್ ಆದೇಶಕ್ಕೂ ಮುನ್ನ ವಿದ್ಯಾರ್ಥಿನಿಯರು ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ. ಆ ವಿದ್ಯಾರ್ಥಿಗಳಿಗೆ ಅವಕಾಶ ಕೊಡುವ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಲಿದೆ ಎಂದು ಹೇಳಿದರು. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ ಹಾಗೂ ಜೇಮ್ಸ್ ನಡುವೆ ಹೋಲಿಕೆ ಮಾಡಿ ತಂದು ಹಾಕ್ಬೇಡಿ: ಸಿ.ಟಿ.ರವಿ

    ಕೋರ್ಟ್ ಆದೇಶದ ಬಳಿಕ‌ವೂ ಪರೀಕ್ಷೆಗೆ ಗೈರು ಹಾಜರಾದರೆ ಅವಕಾಶ ಕೊಡುವುದು ಹೇಗೆ? ಕೋರ್ಟ್ ಆದೇಶ ಪಾಲಿಸಬೇಕು. ನಾವು ಈ ಪರಿಪಾಠವನ್ನೇ ಬೆಳೆಸಿಕೊಂಡು‌ ಹೋದರೆ ಮುಂದೆ ಬೇರೆ ರೀತಿಯ ಪರಿಣಾಮ ಆಗುತ್ತವೆ. ಯಾರು ಯಾವಾಗ ಬೇಕಾದಾಗಲೆಲ್ಲಾ ಪರೀಕ್ಷೆ ಬರೆಯಲು ಅವಕಾಶ ಕೇಳಿದರೆ ಹೇಗೆ? ಅದಕ್ಕೆ ಅವಕಾಶ ನೀಡುತ್ತಾ ಹೋದರೆ ಪರೀಕ್ಷಾ ವ್ಯವಸ್ಥೆ ಉಳಿಯುತ್ತಾ ಎಂದು ಪ್ರಶ್ನಿಸಿದರು.