ಬೆಂಗಳೂರು: ಮನೆ ಮನೆಯಿಂದ ಕಸ ಸಂಗ್ರಹಿಸಲು ಶುಲ್ಕ ವಸೂಲಿಗೆ ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ. 46 ಲಕ್ಷ ಮನೆಗಳಿಂದ 2025 ರಿಂದ ಶುಲ್ಕ ವಸೂಲಿ ಆರಂಭಿಸಲು ಚಿಂತನೆ ನಡೆಸಿದೆ.
46 ಲಕ್ಷ ಮನೆಗಳಿಂದ ಪ್ರತಿ ತಿಂಗಳು 200 ರಿಂದ 400 ರೂಪಾಯಿ ಶುಲ್ಕ ನಿಗದಿ ಮಾಡುವ ಪ್ರಸ್ತಾವನೆ ಇದಾಗಿದೆ. ಆಸ್ತಿ ತೆರಿಗೆ ಜೊತೆಗೆ ಕಸದ ಶುಲ್ಕವನ್ನ ಸಂಗ್ರಹ ಮಾಡೋದರ ಬಗ್ಗೆ ಬಿಬಿಎಂಪಿ ಚಿಂತನೆ ನಡೆಸಿದೆ. ಈಗಾಗಲೇ ತ್ಯಾಜ್ಯ ವಿಲೇವಾರಿಗೆ ಬಿಬಿಎಂಪಿ ಟೆಂಡರ್ ಕರೆದಿದೆ. ತ್ಯಾಜ್ಯ ವಿಲೇವಾರಿಯಲ್ಲಿ ಹೊಸ ವ್ಯವಸ್ಥೆ ಜಾರಿಗೆ ತರುವ ಸಂಬಂಧ ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ನಿಗಮ ಟೆಂಡರ್ ಕರೆದಿದೆ.
ಮನೆ ಮನೆಯಿಂದ ಕಸ ಸಂಗ್ರಹ, ದ್ವಿತೀಯ ಹಂತದ ವರ್ಗಾವಣೆ ಕೇಂದ್ರಗಳಿಗೆ ಸಾಗಣೆ, ಈ ಕೇಂದ್ರಗಳಿಂದ ಸಂಸ್ಕರಣ ಘಟಕಗಳಿಗೆ ದ್ವಿತೀಯ ಹಂತದ ಸಾಗಣೆ ಒಳಗೊಂಡ ಪ್ಯಾಕೇಜ್ ಇದಾಗಿದೆ. ಪ್ರತಿ ಮನೆಯಿಂದ ಕಸ ಸಂಗ್ರಹದ ಶುಲ್ಕ ವಸೂಲಿ ಮಾಡುವುದರಿಂದ ಬ್ಲಾಕ್ ಸ್ಪಾಟ್‌ಗಳ ಸಂಖ್ಯೆ ಇಳಿಮುಖ ಆಗಲಿದೆ ಎನ್ನಲಾಗಿದೆ. ಇದನ್ನೂ ಓದಿ: ಸುಪ್ರೀಂ ಕೋರ್ಟ್ನಲ್ಲೂ ಪ್ರಜ್ವಲ್ ರೇವಣ್ಣಗೆ ಸಿಗಲಿಲ್ಲ ಜಾಮೀನು!
ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ 545 ಪಿಎಸ್‌ಐ ಹುದ್ದೆಗಳ (PSI Post) ನೇಮಕಾತಿಗೆ ತಾತ್ಕಾಲಿಕ ಪಟ್ಟಿಯನ್ನು ರಾಜ್ಯ ಗೃಹ ಇಲಾಖೆ ಸೋಮವಾರ ಪ್ರಕಟಿಸಿದೆ. ಮೂಲಕ ಹುದ್ದೆ ಆಕಾಂಕ್ಷಿಗಳಿಗೆ ದೀಪಾವಳಿಗೂ ಮುನ್ನವೇ ಭರ್ಜರಿ ಉಡುಗೊರೆ ಸಿಕ್ಕಿದೆ.
ಈ ಹಿಂದೆ ರಾಜ್ಯದಲ್ಲಿ 545 ಪಿಎಸ್‌ಐ ಹುದ್ದೆಗಳಿಗೆ ನಡೆದಿದ್ದ ನೇಮಕಾತಿ ಪರೀಕ್ಷೆಯಲ್ಲಿ ಆದ ಅಕ್ರಮ ರಾಜ್ಯಾದ್ಯಂತ ಭಾರಿ ಸಂಚಲನ ಸೃಷ್ಟಿಸಿತ್ತು. ಇದಾದ ಬಳಿಕ ಹೈಕೋರ್ಟ್ (Karnataka highcourt) ನೀಡಿದ್ದ ಸೂಚನೆಯ ಅನ್ವಯ ರಾಜ್ಯ ಸರ್ಕಾರ ಮರು ಪರೀಕ್ಷೆ ನಡೆಸಿತ್ತು. ಆದ್ರೆ ಫಲಿತಾಂಶ ವಿಳಂಬವಾಗಿತ್ತು. ಇದರಿಂದ ರೊಚ್ಚಿಗೆದ್ದ ಅಭ್ಯರ್ಥಿಗಳು ಭಿಕ್ಷೆ ಬೇಡುವ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದರು. ರಕ್ತದಲ್ಲಿ ಪತ್ರ ಬರೆದು ಫಲಿತಾಂಶ ಪ್ರಕಟಿಸುಂತೆ ಸರ್ಕಾರಕ್ಕೆ ಒತ್ತಾಯಿಸಿದ್ದರು.
ಇದೀಗ ರಾಜ್ಯ ಸರ್ಕಾರ ಅಕ್ಟೊಬರ್ 21ರಂದು ಪಿಎಸ್‌ಐ ನೇರ ನೇಮಕಾತಿಗಳ 01.01.2023ರ ಸುತ್ತೋಲೆಯ ಅನ್ವಯ ಆಯ್ಕೆ ಪಟ್ಟಿ ತಯಾರಿಸಿ ಪ್ರಕಟಗೊಳಿಸಿದೆ.
ಬೆಂಗಳೂರು: 545 ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಫಲಿತಾಂಶ (PSI Exam Result) ಪ್ರಕಟ ಮಾಡುವಂತೆ ಆಗ್ರಹ ಪೊಲೀಸ್ ಹುದ್ದೆ ಆಕಾಂಕ್ಷಿಗಳು ಇಂದು ಪ್ರತಿಭಟನೆ (Protest) ನಡೆಸಲಿದ್ದಾರೆ.
4 ವರ್ಷ ಕಳೆದರೂ ತಪ್ಪದ ಗೋಳು:
2020ರಲ್ಲಿ 545 ಪಿಎಸ್‌ಐ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. 2021ರ ಅಕ್ಟೋಬರ್ 3ರಂದು ಪರೀಕ್ಷೆ ನಡೆಸಲಾಗಿತ್ತು. 2022ರ ಜನವರಿ 19ರಂದು ಫಲಿತಾಂಶ ಕೂಡ ಪ್ರಕಟವಾಗಿತ್ತು. ಆದ್ರೆ ಅಕ್ರಮ ಕಂಡುಬಂದ ಹಿನ್ನೆಲೆಯಲ್ಲಿ ಅಂದಿನ ಸರ್ಕಾರ ಮರುಪರೀಕ್ಷೆಗೆ ಆದೇಶ ನೀಡಿತ್ತು. ಇದನ್ನು ವಿರೋಧಿಸಿ ಆಯ್ಕೆಯಾದ ವಿದ್ಯಾರ್ಥಿಗಳು ನ್ಯಾಯಾಲಯದ ಕದ ತಟ್ಟಿದ್ದರು. ಇದನ್ನೂ ಓದಿ: ಸೇನಾ ನೆಲೆಯ ಮೇಲೆ ಹಿಜ್ಬುಲ್ಲಾ ಡ್ರೋನ್ ಅಟ್ಯಾಕ್ – 4 ಇಸ್ರೇಲ್ ಸೈನಿಕರು ಬಲಿ
ವಿಚಾರಣೆ ನಡೆಸಿದ್ದ ಕೋರ್ಟ್ 2023ರ ನವೆಂಬರ್ 19ರಂದು ಮರು ಪರೀಕ್ಷೆ ಸೂಕ್ತ ಎಂದು ಹೇಳಿತು. ಮರುಪರೀಕ್ಷೆಗೆ ಆದೇಶ ನೀಡುವಂತೆ ಸರ್ಕಾರಕ್ಕೆ ಸೂಚಿಸಿತ್ತು. ನಂತರ ಸರ್ಕಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಹೆಗಲಿಗೆ ಮರು ಪರೀಕ್ಷೆ ಜವಾಬ್ದಾರಿ ನೀಡಿತ್ತು. ಈ ಹಿನ್ನೆಲೆಯಲ್ಲಿ 2024ರ ಜನವರಿ 23ರಂದು ಪರೀಕ್ಷಾ ಪ್ರಾಧಿಕಾರ ಮರು ಪರೀಕ್ಷೆ ನಡೆಸಿತ್ತು. 2024ರ ಮಾರ್ಚ್ 1ರಂದು ಅಭ್ಯರ್ಥಿಗಳ ಅಂಕ ಪಟ್ಟಿಯನ್ನು ಮುಂದಿನ ಪ್ರಕ್ರಿಯೆಗಾಗಿ ಕೆಎಸ್‌ಪಿ (ಕರ್ನಾಟಕ ರಾಜ್ಯ ಪೊಲೀಸ್)ಗೆ ವರ್ಗಾವಣೆ ಮಾಡಿತ್ತು. ಅದರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸುವ ಯಾವುದೇ ಪ್ರಕ್ರಿಯೆ ನಡೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಸರ್ಕಾರಕ್ಕೆ ತಮ್ಮ ರಕ್ತದಲ್ಲಿಯೂ ಸಹ ಪತ್ರ ಬರೆದು ಮನವಿ ಮಾಡಿದ್ದರು.
ಬೆಂಗಳೂರು: ಸರ್ಕಾರ ವರ್ಸಸ್ ರಾಜಭವನದ ಮಧ್ಯೆ ಪತ್ರ ಸಮರ ನಿಲ್ಲುವ ಸೂಚನೆ ಸದ್ಯಕ್ಕೆ ಕಾಣುತ್ತಿಲ್ಲ. ರಾಜ್ಯಪಾಲರು ಸರ್ಕಾರಕ್ಕೆ ಮಾಹಿತಿ ಕೇಳಿ ಒಟ್ಟು 35 ಪತ್ರಗಳನ್ನು ಬರೆದಿದ್ದಾರೆ.
ಪದೇ ಪದೇ ರಾಜ್ಯಪಾಲರು ಮಾಹಿತಿ ಕೇಳುವುದು ಸರಿಯಿಲ್ಲ, ಅಧಿಕಾರಿಗಳು ನೇರವಾಗಿ ಉತ್ತರಿಸದಂತೆ ಈ ಹಿಂದೆಯೇ ಕ್ಯಾಬಿನೆಟ್‌ನಲ್ಲಿ ತೀರ್ಮಾನಿಸಿದೆ. ಆದರೆ, ಇದನ್ನು ಪರಿಗಣಿಸಲು ಒಪ್ಪದ ರಾಜ್ಯಪಾಲರು ಸರ್ಕಾರಕ್ಕೆ ಮಾಹಿತಿ ಕೇಳಿ ಒಟ್ಟು 35 ಪತ್ರಗಳನ್ನು ಬರೆದಿದ್ದಾರೆ. ಆದ್ರೆ ರಾಜ್ಯಪಾಲರ ಯಾವುದೇ ಪತ್ರಗಳಿಗೂ ಸರ್ಕಾರ ತೆಲೆಕೆಡಿಸಿಕೊಂಡಿಲ್ಲ. ಇದನ್ನೂ ಓದಿ: ಮುಡಾ, ವಾಲ್ಮೀಕಿ ಎರಡು ಕೇಸ್‌ನಲ್ಲಿ ಸಿಎಂ ಅಪರಾಧಿ – ಶೋಭಾ ಕರಂದ್ಲಾಜೆ
ಉತ್ತರ ಕೊಡುವ ಗೋಜಿಗೆ ಹೋಗಿಲ್ಲ. ಆದರೂ, ಪಟ್ಟುಬಿಡದ ರಾಜ್ಯಪಾಲರು ನೆನಪೋಲೆಗಳನ್ನು ಮೇಲಿಂದ ಮೇಲೆ ಸರ್ಕಾರಕ್ಕೆ ರವಾನೆ ಮಾಡುತ್ತಿದ್ದಾರೆ. ಇತ್ತ, ನಮ್ಮನ್ನ ಕೇಳದೆ ಮಾಹಿತಿ ಕೊಡುವ ಹಾಗಿಲ್ಲ ಎಂದು ಅಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿದೆ.
ಹೀಗಾಗಿ, ರಾಜ್ಯಪಾಲರ ಪತ್ರಗಳಿಗೆ ಉತ್ತರಿಸಲಾಗದೇ, ಉನ್ನತ ಅಧಿಕಾರಿಗಳು ಪೀಕಲಾಟಕ್ಕೆ ಸಿಲುಕಿದ್ದಾರೆ. ಅಂದ ಹಾಗೇ, ಇಂದಿನ ಕ್ಯಾಬಿನೆಟ್‌ನಲ್ಲಿ ರಾಜ್ಯಪಾಲರ ಪತ್ರಕ್ಕೆ ಉತ್ತರ ಬಂದಿಲ್ಲ ಎಂಬ ರಾಜಭವನದ ರಿಮೈಂಡ್ ಕಾಪಿ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎನ್ನಲಾಗಿದೆ. ಇದು ಮುಂದೆ ಎಲ್ಲಿಗೆ ಮುಟ್ಟುತ್ತೋ ಎಂಬ ಆತಂಕ, ಕುತೂಹಲ ಮನೆ ಮಾಡಿದೆ. ಇದನ್ನೂ ಓದಿ: ಬಿಜೆಪಿಗೆ ಚನ್ನಪಟ್ಟಣ ಕ್ಷೇತ್ರ ಬಿಟ್ಟುಕೊಡುವ ಒಪ್ಪಂದ ಆಗಿಲ್ಲ: ಹೆಚ್‌ಡಿಕೆ
ಬೆಂಗಳೂರು: ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ (Kannada Rajyotsava Award) ಡಿಮ್ಯಾಂಡ್ ಹೆಚ್ಚಾದಂತೆ ಕಾಣ್ತಿದೆ. ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಪಡೆಯಲು ಸಾವಿರಾರು ಅರ್ಜಿಗಳು ಸಂದಾಯವಾಗಿವೆ.
ರಾಜಕೀಯ ನಾಯಕರು, ಸಂಘ-ಸಂಸ್ಥೆಗಳು, ಪಕ್ಷದ ಪ್ರಮುಖರಿಂದಲೂ ಪ್ರಶಸ್ತಿಗೆ ಹೆಸರುಗಳು ಶಿಫಾರಸು ಬಂದಿದೆ. ಜೊತೆಗೆ ಮಾಜಿ ಸಚಿವರು, ವಿವಿಧ ಕ್ಷೇತ್ರದ ಗಣ್ಯರು, ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಕೊಡುವಂತೆ ಮನವಿಗಳು ಬಂದಿವೆ ಎಂದು ಉನ್ನತ ಮೂಲಗಳು ತಿಳಿಸಿವೆ. ಸರ್ಕಾರದಿಂದ ಪ್ರಶಸ್ತಿಗೆ ಮಾನದಂಡ ಇದ್ದರೂ ಲಾಬಿಗೆ ಮಣೆ ಹಾಕೋದು ಅನ್ನೋ ಮಾತುಗಳು ಸಹ ಕೇಳಿಬರ್ತಿವೆ. ಇದನ್ನೂ ಓದಿ: 70 ವರ್ಷದ ಹೆರಿಗೆ ಆಸ್ಪತ್ರೆಗೆ ಬೀಗ: 3 ವರ್ಷಗಳಿಂದ ದುರಸ್ತಿ ಹೆಸರಿನಲ್ಲಿ ಕಾಮಗಾರಿ ವಿಳಂಬ!
ಮುಖ್ಯಾಂಶಗಳು:
* ಈ ಬಾರಿ 69 ಜನರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಲು ತೀರ್ಮಾನ.
* ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ನೇತೃತ್ವದಲ್ಲಿ ಪ್ರಶಸ್ತಿ ಆಯ್ಕೆ ಸಮಿತಿ ರಚನೆ.
* ಸಮಿತಿಯಿಂದ ಅರ್ಜಿಗಳ ಪರಿಶೀಲನೆ ಮಾಡಿ ಸಾಧಕರಿಗೆ ಪ್ರಶಸ್ತಿ ಕೊಡೋ ಚಾಲೆಂಜ್.
* ಪ್ರಶಸ್ತಿ ಪಡೆಯೋರು 60 ವರ್ಷ ಮೇಲ್ಪಟ್ಟಿರಬೇಕು. ಸಾಧಕರಾಗಿರಬೇಕು ಅನ್ನೋ ನಿಯಮ ಮಾಡಿರೋ ಸರ್ಕಾರ.
* ನಿಯಮದ ಪ್ರಕಾರ, ಪ್ರಾಮಾಣಿಕವಾಗಿ ಪ್ರಶಸ್ತಿ ಘೋಷಣೆ ಮಾಡೋದು ಸರ್ಕಾರಕ್ಕೆ ಚಾಲೆಂಜ್.
ಬೆಂಗಳೂರು: ಲೋಕಾಯುಕ್ತದವರು ರಾಜ್ಯಪಾಲರಿಗೆ ಬರೆದ ರಹಸ್ಯ ಪತ್ರ ಸೋರಿಕೆಯಾದ ಬಗ್ಗೆ ಮಾಹಿತಿ ಕೊಡಿ ಎಂದು ಸರ್ಕಾರಕ್ಕೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ (Thawarchand Gehlot) ಪತ್ರ ಬರೆದಿದ್ದಾರೆ.
ರಾಜ್ಯ ಸರ್ಕಾರಕ್ಕೆ ಮತ್ತೊಂದು ಪತ್ರ ಬರೆಯಲಾಗಿದ್ದು, ಆ.28 ರಂದು ಸರ್ಕಾರದಿಂದ ಸ್ಪಷ್ಟನೆ ಕೇಳಿ ರಾಜ್ಯಪಾಲರು ಪತ್ರ ಬರೆದಿದ್ದಾರೆ. ವಿಪಕ್ಷ ನಾಯಕರ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಕೇಳಿ ಲೋಕಾಯುಕ್ತದಿಂದ (Lokayukta) ರಾಜ್ಯಪಾಲರಿಗೆ ಪತ್ರ ಬರೆಯಲಾಗಿದೆ. ಈ ಪತ್ರದ ಬಗ್ಗೆ ಕ್ಯಾಬಿನೆಟ್ ಸಭೆಯಲ್ಲಿ ನಿರ್ಣಯ ಕೈಗೊಂಡು ರಾಜ್ಯಪಾಲರಿಗೆ ಕ್ಯಾಬಿನೆಟ್ ನಿರ್ಣಯ ಕಳುಹಿಸಿಕೊಡಲಾಗಿದೆ. ಆದರೆ ಲೋಕಾಯಕ್ತದವರು ರಾಜ್ಯಪಾಲರಿಗೆ ಬರೆದ ರಹಸ್ಯ ಪತ್ರದ ಬಗ್ಗೆ ಸರ್ಕಾರಕ್ಕೆ ಹೇಗೆ ಮಾಹಿತಿ ಬಂತು? ಅದರ ಬಗ್ಗೆ ಸ್ಪಷ್ಟನೆ ನೀಡಿ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ತಮ್ಮ ತಪ್ಪುಗಳನ್ನು ಮುಚ್ಚಿಹಾಕಲು ವಿಪಕ್ಷ ನಾಯಕರನ್ನು ಟಾರ್ಗೆಟ್ ಮಾಡಿದ್ದಾರೆ: ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿ
ಕ್ಯಾಬಿನೆಟ್ ನಿರ್ಣಯ ಹಾಗೂ ಪ್ರಾಸಿಕ್ಯೂಷನ್ ಕೇಳಿ ಲೋಕಾಯುಕ್ತ ಬರೆದ ಪತ್ರದ ಬಗೆಗಿನ ನಿರ್ಣಯಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಲೋಕಾಯುಕ್ತ, ಎಸ್‌ಐಟಿಗೂ ಪತ್ರ ಬರೆದಿರುವ ಗವರ್ನರ್ ರಹಸ್ಯ ಮಾಹಿತಿ ಸೋರಿಕೆ ಬಗ್ಗೆ ಮಾಹಿತಿ ಕೇಳಿದ್ದಾರೆ. ತನಿಖೆ ನಡೆಸಿ ವರದಿ ನೀಡಲು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.
ರಾಜ್ಯಪಾಲರ ಪತ್ರದಲ್ಲಿ ಏನಿದೆ?
ಆ.26ನೇ ತಾರೀಕು ಸಂಜೆ 5 ಕ್ಕೆ ರಾಜಭವನಕ್ಕೆ ಸರ್ಕಾರದಿಂದ ಪತ್ರ ಬಂದಿದೆ. ಕ್ಯಾಬಿನೆಟ್ ನಿರ್ಣಯದ ದಾಖಲೆಗಳ ಕುರಿತು ಮುಚ್ಚಿದ ಲಕೋಟೆ ಬಂದಿದೆ. ಆದರೆ ಆ ಲಕೋಟೆಯೊಳಗೆ 16ನೇ ಸಚಿವ ಸಂಪುಟ ಸಭೆಯ ಅಜೆಂಡಾ ಹಾಗೂ 17ನೇ ಸಚಿವ ಸಂಪುಟದ ಹೆಚ್ಚುವರಿ ಅಜೆಂಡಾ ಕಾಪಿ ಮಾತ್ರ ಇತ್ತು. ಸಭೆಯಲ್ಲಿ ಕೈಗೊಂಡಿರುವ ನಿರ್ಣಯದ ಬಗ್ಗೆ ದಾಖಲೆಗಳು ಇರಲಿಲ್ಲ. ಕ್ಯಾಬಿನೆಟ್ ವಿಭಾಗಕ್ಕೆ ದೂರವಾಣಿ ಮೂಲಕ ಕರೆ ಮಾಡಿ ಮಾಹಿತಿ ತಿಳಿಸಲಾಗಿದೆ. ಮಾಹಿತಿ ನೀಡಿದ ಬಳಿಕ 27 ರಂದು ಡಿಸಿಎಂ ಡಿಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಕ್ಯಾಬಿನೆಟ್ ಕೈಗೊಂಡ ನಿರ್ಣಯಗಳ ದಾಖಲೆ ರಾಜಭವನಕ್ಕೆ ಸಲ್ಲಿಸಲಾಗಿದೆ. ಇದನ್ನೂ ಓದಿ: ಮುನಿರತ್ನ, ಹೆಚ್‌ಡಿಕೆ ವಿರುದ್ಧದ ಪ್ರಕರಣಗಳ ತನಿಖೆಗೆ ಒಕ್ಕಲಿಗ ಸಚಿವರು, ಶಾಸಕರ ನಿಯೋಗದಿಂದ ಸಿಎಂಗೆ ಮನವಿ
ಆ ಮಾಹಿತಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್ ಮೀಟಿಂಗ್ ಹೆಚ್ಚುವರಿ ಅಜೆಂಡಾದ ನಿರ್ಣಯಗಳು ನಮಗೆ ಲಭ್ಯವಾಗಿಲ್ಲ. ಆದರೆ 23 ರಂದು ಮಾಧ್ಯಮಗಳಲ್ಲಿ ಹೆಚ್.ಡಿ.ಕುಮಾರಸ್ವಾಮಿ, ಜನಾರ್ದನ ರೆಡ್ಡಿ, ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡಲು ಕ್ಯಾಬಿನೆಟ್ ರಾಜ್ಯಪಾಲರಿಗೆ ಸಲಹೆ ನೀಡಿದೆ ಎಂದು ವರದಿ ಆಗಿದೆ. ಗೌಪ್ಯವಾದ ಮಾಹಿತಿ ಸಚಿವ ಸಂಪುಟ ಸಭೆಯಲ್ಲಿ ಹೇಗೆ ಚರ್ಚಿಸಲಾಯಿತು?
ಕ್ಯಾಬಿನೆಟ್ ನೋಟ್‌ನಲ್ಲಿ ಯಾವ ದಿನಾಂಕದಂದು ಲೋಕಾಯುಕ್ತ ಸಂಸ್ಥೆ ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್ ಅನುಮತಿ ಕೇಳಿದೆ ಎಂಬುದನ್ನ ಉಲ್ಲೇಖಿಸಲಾಗಿದೆ. ನನಗೆ ಈಗ ಕುತೂಹಲ ಹೆಚ್ಚಾಗಿದೆ. ಹೇಗೆ ಲೋಕಾಯುಕ್ತ ವಿಶೇಷ ತನಿಖಾ ತಂಡ ರಾಜ್ಯಪಾಲರಿಗೆ ಬರೆದ ಪತ್ರ ಬಹಿರಂಗವಾಯಿತು? ಲೋಕಾಯುಕ್ತ ಎಂಬುದು ಸ್ವಾಯತ್ತ ತನಿಖಾ ಸಂಸ್ಥೆ, ಲೋಕಾಯುಕ್ತ ಎಸ್‌ಐಟಿ ಗೌಪ್ಯವಾಗಿ ಅಭಿಯೋಜನಾ ಮಂಜೂರಾತಿಯನ್ನ ಕೇಳಿದ ಪತ್ರ ಸರ್ಕಾರ ಹಾಗೂ ಕ್ಯಾಬಿನೆಟ್‌ಗೆ ತಲುಪಿದ್ದು ಹೇಗೆ? ಹೀಗಾಗಿ ಈ ಪತ್ರ ತಲುಪಿದ ಕೂಡಲೇ ಪ್ರಾಮಾಣಿಕವಾಗಿ ರಾಜಭವನಕ್ಕೆ ವರದಿ ನೀಡಿ ಎಂದು ರಾಜ್ಯಪಾಲರು ಸೂಚಿಸಿದ್ದಾರೆ. ಇದನ್ನೂ ಓದಿ: ಮುಡಾ ಹಗರಣಕ್ಕೂ ನನಗೂ ಸಂಬಂಧವೇ ಇಲ್ಲ, ಏಕೆ ರಾಜೀನಾಮೆ ಕೊಡ್ಬೇಕು? – ಹೆಚ್‌ಡಿಕೆ ಗರಂ
ಬೆಂಗಳೂರು: 16ನೇ ಹಣಕಾಸು ಆಯೋಗಕ್ಕೆ ವಿತ್ತೀಯ ಹಂಚಿಕೆ ವಿಷಯಗಳಲ್ಲಿ ರಾಜ್ಯ ಸರ್ಕಾರ ಹಲವು ಶಿಫಾರಸು ಮಾಡಿದೆ. 16ನೇ ಹಣಕಾಸು ಆಯೋಗದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಆಯೋಗದ ಅಧ್ಯಕ್ಷರ ಮುಂದೆ ಶಿಫಾರಸುಗಳನ್ನು ಮಂಡನೆ ಮಾಡಿದರು.
ಹಂಚಿಕೆ ಮಾಡುವ ಬಾಬ್ತಿನಲ್ಲಿ (central divisible pool) ಕನಿಷ್ಟ ಶೇ.50ರಷ್ಟು ಪಾಲನ್ನು ಸಂಬಂಧಿಸಿದ ರಾಜ್ಯಗಳಿಗೆ ನಿಗದಿಪಡಿಸಬೇಕು. ಸೆಸ್ ಮತ್ತು ಸರ್ಚಾರ್ಜ್ ಒಟ್ಟು ತೆರಿಗೆ ಆದಾಯದ ಶೇ.5ಕ್ಕೆ ಮಿತಿಗೊಳಿಸಬೇಕು. ಇದಕ್ಕಿಂತ ಹೆಚ್ಚಾಗುವ ಯಾವುದೇ ಮೊತ್ತವನ್ನು ಹಂಚಿಕೊಳ್ಳುವ ಬಾಬ್ತಿಗೆ ಪರಿಗಣಿಸಬೇಕು. ಇದನ್ನೂ ಓದಿ: 16th Finance Commission | ಬೆಂಗಳೂರು ಅಭಿವೃದ್ಧಿಗೆ 27,000 ಕೋಟಿ ಅನುದಾನ ಬೇಡಿಕೆ ಇಟ್ಟ ಸಿಎಂ
ಕೇಂದ್ರ ಸರ್ಕಾರದ ತೆರಿಗೇತರ ಆದಾಯವನ್ನು ಹಂಚಿಕೊಳ್ಳುವ ತೆರಿಗೆ ಬಾಬ್ತಿನ ವ್ಯಾಪ್ತಿಗೆ ತರುವ ಕುರಿತು ಸಂವಿಧಾನಕ್ಕೆ ಅಗತ್ಯ ತಿದ್ದುಪಡಿ ತರಬೇಕು. ಪಾಲಿನ ಹಂಚಿಕೆ ಸಂದರ್ಭದಲ್ಲಿ ದಕ್ಷತೆ ಮತ್ತು ನಿರ್ವಹಣೆಗೆ ಸೂಕ್ತ ಪುರಸ್ಕಾರ ನೀಡುವ ಬಗ್ಗೆ ಆಯೋಗ ದಿಟ್ಟ ನಿಲುವು ತಳೆಯಬೇಕು ಎಂದು ಸಿಎಂ ಆಯೋಗದ ಶಿಫಾರಸು ಮಾಡಿದರು.
ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬಕ್ಕೆ ರಾಜ್ಯದ ಮಹಿಳೆಯರಿಗೆ, ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಕಳೆದ ಎರಡು ತಿಂಗಳಿಂದ ಸ್ಥಗಿತಗೊಂಡಿದ್ದ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಹಣವನ್ನು ಅರ್ಹ ಫಲಾನುಭವಿಗಳ ಸರ್ಕಾರ (Karnataka Govt.) ಖಾತೆಗೆ ಜಮೆ ಮಾಡಲಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಕಳೆದ ಜೂನ್, ಜುಲೈ ತಿಂಗಳ ಗಣ ಬಂದಿರಲಿಲ್ಲ. ಇದೀಗಾ ಜೂನ್ ತಿಂಗಳ ಹಣ ಎರಡ್ಮೂರು ದಿನದಲ್ಲಿ DBT ಮೂಲಕ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ. ಇನ್ನೂ ಜುಲೈ, ಆಗಸ್ಟ್ ತಿಂಗಳ ಹಣ ಮುಂದಿನ ತಿಂಗಳು ಬಿಡುಗಡೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಇದರಿಂದ ವರಮಹಾಲಕ್ಷ್ಮಿ ಹಬ್ಬಕ್ಕೂ (Varamahalakshmi Festival) ಮುನ್ನವೇ 2 ತಿಂಗಳ ಹಣ ಒಟ್ಟಿಗೇ ಬರುತ್ತೆ ಅಂದುಕೊಂಡಿದ್ದವ್ರಿಗೆ ಕೊಂಚ ನಿರಾಸೆಯಾಗಿದೆ. ಇದನ್ನೂ ಓದಿ: 100 ಕೋಟಿ ವೆಚ್ಚದ ನೂತನ ಬಸ್ ನಿಲ್ದಾಣಕ್ಕೆ ಕತ್ತಲೆ ಭಾಗ್ಯ; ಟಾರ್ಚ್ ಬೆಳಕಲ್ಲೇ ವರ್ತಕರ ವಹಿವಾಟು
ಜೂನ್ ತಿಂಗಳ ಹಣ ಬಿಡುಗಡೆಗೆ ಆರ್ಥಿಕ ಇಲಾಖೆಯಿಂದ ಅನುಮೋದನೆ ಸಿಕ್ಕಿದ್ದು, 1.25 ಕೋಟಿ ಫಲಾನುಭವಿಗಳಿಗೆ ಹಣ ಬಿಡುಗಡೆಯಾಗಲಿದೆ. ಪ್ರತಿ ತಿಂಗಳಿಗೆ ಅಂದಾಜು 2,500 ಕೋಟಿ ರೂ. ಯೋಜನೆ ಮೂಲಕ ಫಲಾನುಭವಿಗಳಿಗೆ ತಲುಪುತಿತ್ತು. ಇದುವರೆಗೆ 10 ಕಂತುಗಳ ಹಣ ಬಿಡುಗಡೆಯಾಗಿದ್ದು, ಜೂನ್, ಜುಲೈ ತಿಂಗಳ ಹಣ ಬಾಕಿಯಿದೆ. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಎರಡು ತಿಂಗಳು ಸ್ಥಗಿತಗೊಂಡಿದ್ದ ಹಣವನ್ನ ಫಲಾನುಭವಿಗಳಿಗೆ ನೀಡಲು ಸರ್ಕಾರ ಮುಂದಾಗಿದೆ.
– ವಿದ್ಯುತ್ ಸಂಪರ್ಕವಿಲ್ಲದೇ ಸಿಬ್ಬಂದಿ, ಪ್ರಯಾಣಿಕರು ಹೈರಾಣು
ತುಮಕೂರು: 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಹೈಟೆಕ್ ಬಸ್ ನಿಲ್ದಾಣಕ್ಕೆ (Tumakuru Bus Stand) ಆರಂಭದಲ್ಲೇ ಗ್ರಹಣ ಹಿಡಿದಿದೆ. ವಿದ್ಯುತ್ (Electricity) ಸಂಪರ್ಕ ಇಲ್ಲದೇ ಕಗ್ಗತ್ತಲು ಕವಿದಿದೆ. ಪ್ರಯಾಣಿಕರು, ಸಿಬ್ಬಂದಿ ಹೈರಾಣಾಗಿದ್ದಾರೆ. ಇದನ್ನೂ ಓದಿ: ಉದ್ಘಾಟನೆ ದಿನವೇ ಬಾಗಿಲು ಮುಚ್ಚಿದ ತುಮಕೂರು KSRTC ಹೈಟೆಕ್ ಬಸ್ ನಿಲ್ದಾಣ!
ಹೌದು. ಸ್ಮಾರ್ಟ್ ಸಿಟಿ ಯೋಜನೆ (Smart City Project) ಅಡಿಯಲ್ಲಿ ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ತುಮಕೂರಿನ ನೂತನ ಬಸ್ ನಿಲ್ದಾಣ ಆರಂಭದಲ್ಲೇ ಮುಗ್ಗರಿಸಿದೆ. ಬಸ್ ನಿಲ್ದಾಣದಲ್ಲಿ ಕಾಮಗಾರಿ ಸಂಪೂರ್ಣವಾಗಿ ಮುಗಿಯದಿದ್ದರೂ ಕೆಎಸ್‌ಆರ್‌ಟಿಸಿ (KSRTC) ನಿಗಮದ ಅಧಿಕಾರಿಗಳು ತರಾತುರಿಯಲ್ಲಿ ಬಸ್ ಸಂಚಾರ ಆರಂಭಿಸಿದ್ದು ಪ್ರಯಾಣಿಕರು ಇನ್ನಿಲ್ಲದಂತೆ ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನೂ ಓದಿ: ಶ್ರಾವಣ ಆದ್ಮೇಲೆ ಬಾಳು ಕೊಡ್ತೀನಿ ಅಂತ ಹೇಳಿ ಆಂಟಿಗೆ ವಂಚನೆ – ಪ್ರಜ್ವಲ್ ವಿರುದ್ಧ ದೂರು
ಕಳೆದ ಆಗಸ್ಟ್ 27ರಂದು ಹೊಸ ಬಸ್ ನಿಲ್ದಾಣ ಆರಂಭವಾಗಿದ್ದು, ಇನ್ನೂ ಬೆಸ್ಕಾಂನಿಂದ ವಿದ್ಯುತ್ ಸಂಪರ್ಕ ಸಿಕ್ಕಿಲ್ಲ. ಇದರಿಂದ ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮೆರಾಗಳು ಅಳವಡಿಕೆಯಾಗಿಲ್ಲ. ಇದು ಜೇಬುಗಳ್ಳರಿಗೆ ವರದಾನವಾಗಿದ್ದು, ನಿತ್ಯ ಹತ್ತಾರು ಮಂದಿ ಪ್ರಯಾಣಿಕರು ತಮ್ಮ ಮೊಬೈಲ್, ಪರ್ಸ್ ಸೇರಿ ಇನ್ನಿತರ ಬೆಳೆಬಾಳುವ ವಸ್ತುಗಳನ್ನ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಸಿಸಿಟಿವಿ ಕಡ್ಡಾಯ – ಬೆಂಗಳೂರು ಪಿಜಿಗಳಿಗೆ ಬಿಡುಗಡೆ ಮಾಡಿದ ಮಾರ್ಗಸೂಚಿಯಲ್ಲಿ ಏನಿದೆ?
ವಿದ್ಯುತ್ ಸಂಪರ್ಕವಿಲ್ಲದ ಕಾರಣ ಬಸ್ ನಿಲ್ದಾಣಕ್ಕೆ ಹೈಟೆಕ್ ಲುಕ್ ನೀಡುವ ಎಸ್ಕ್ಯುಲೇಟರ್‌ಗಳು ಕೆಲಸ ಮಾಡುತ್ತಿಲ್ಲ. ಹಿರಿಯ ನಾಗರಿಕರು ಮೆಟ್ಟಿಲು ಹತ್ತಲು ಹರಸಾಹಸ ಪಡುವಂತಾಗಿದೆ. ಎರಡು ಹೊಸ ಎಟಿಎಂಗಳೂ ಪ್ರಯೋಜನಕ್ಕೆ ಬಾರದಂತಾಗಿವೆ. ಮಹಿಳೆಯರು ವಿಶ್ರಾಂತಿ ಪಡೆಯಲು ನಿರ್ಮಿಸಿರುವ ಸಖಿ ಕೊಠಡಿಯೂ ಸಾರ್ವಜನಿಕ ಬಳಕೆಗೆ ಮುಕ್ತವಾಗಿಲ್ಲ. ಇವೆಲ್ಲದರ ನಡುವೆ ಪ್ರತಿ ತಿಂಗಳು ನಿಗಮಕ್ಕೆ ಲಕ್ಷಾಂತರ ರೂ. ಬಾಡಿಗೆ ಪಾವತಿಸುವ ಅಂಗಡಿ ಮಳಿಗೆಗಳಿಗೂ ವಿದ್ಯುತ್ ಸಂಪರ್ಕ ನೀಡಿಲ್ಲ. ಹೀಗಾಗಿ ಇಲ್ಲಿನ ವರ್ತಕರು ಟಾರ್ಚ್ ಬೆಳಕಿನಲ್ಲಿ ವ್ಯಾಪಾರ ಮಾಡುವಂತಾಗಿದೆ. ಸದ್ಯಕ್ಕೆ ತಾತ್ಕಾಲಿಕ ವಿದ್ಯುತ್ ಸಂಪರ್ಕವೇ ಆಸರೆಯಾಗಿದ್ದು, ರಾತ್ರಿ ಹೊತ್ತು ಮಾತ್ರ ಸೀಮಿತ ಕಡೆಗಳಲ್ಲಿ ಮಂದಗತಿಯ ಲೈಟ್‌ಗಳನ್ನ ಆನ್ ಮಾಡಲಾಗುತ್ತಿದೆ.
ಬೆಂಗಳೂರು: ಸಿಲಿಕಾನ್ ಸಿಟಿ ಅಂದ್ರೆನೇ ಥಟ್ ಅಂತ ಕಣ್ಣೆದುರು ಬರೋದು ವಿಧಾನಸೌಧ (Vidhana Soudha), ಹೈಕೋರ್ಟ್, ಕಬ್ಬನ್ ಪಾರ್ಕ್, ಲಾಲ್‌ಬಾಗ್. ಅದು ಬಿಟ್ರೆ, ವಿಶ್ವೇಶ್ವರಯ್ಯ ಮ್ಯೂಸಿಯಂ, ನೆಹರು ತಾರಾಲಯ. ಆದ್ರೆ ಕಾಲ ಬದಲಾಗಿದೆ. ಜನರ ಆಲೋಚನೆಯೂ ಚೇಂಜ್ ಆಗಿದೆ. ಬೆಂಗಳೂರನ್ನ ಮತ್ತಷ್ಟು ಆಕರ್ಷಿಸಲು ಸರ್ಕಾರ ಮುಂದಾಗಿದೆ. ಪ್ರವಾಸಿಗರನ್ನ ಮತ್ತಷ್ಟು ಸೆಳೆಯಲು ಸಿಲಿಕಾನ್ ಸಿಟಿಯಲ್ಲಿ ಅತಿ ಎತ್ತರದ ಸ್ಕೈ ಡೆಕ್ (Sky Deck) ನಿರ್ಮಾಣ ಆಗಲಿದೆ. ಅದರ ಜೊತೆಗೆ ಬ್ರ್ಯಾಂಡ್ ಬೆಂಗಳೂರಿಗೆ (Brand Bengaluru) ಮತ್ತಷ್ಟು ಪ್ಲ್ಯಾನ್‌ಗಳು ಸಹ ರೆಡಿಯಾಗಿದೆ.
ನೈಸ್ ರಸ್ತೆಯಲ್ಲಿ ಸ್ಕೈ ಡೆಕ್ ತಲೆ ಎತ್ತಲಿದೆ. ಸ್ಕೈ ಡೆಕ್ ನಿರ್ಮಾಣಕ್ಕೆ ಬೆಂಗಳೂರು ಶಾಸಕರು ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಸರ್ಕಾರದಿಂದಲೇ ಸ್ಕೈ ಡೆಕ್ ನಿರ್ಮಾಣವಾಗಲಿದೆ. ಶನಿವಾರ (ಜು.27) ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಬೆಂಗಳೂರು ಶಾಸಕರ ಸಭೆಯಲ್ಲಿ ಸ್ಕೈ ಡೆಕ್ ನಿರ್ಮಾಣಕ್ಕೆ ಎಲ್ಲಾ ಶಾಸಕರು ಒಪ್ಪಿಗೆ ನೀಡಿದ್ದಾರೆ. ನೈಸ್ ರಸ್ತೆಯಲ್ಲಿ ಸ್ಕೈ ಡೆಕ್ ನಿರ್ಮಾಣಕ್ಕೆ ಜಾಗ ಫೈನಲ್ ಮಾಡಲಾಗಿದೆ. 400 – 500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಅಗತ್ಯ ಜಾಗವನ್ನ ನೈಸ್ ಸಂಸ್ಥೆಯಿಂದ ಬಿಡಿಸಿಕೊಳ್ಳಲು ತೀರ್ಮಾನ ಮಾಡಲಾಗಿದೆ.
ಸಭೆಯಲ್ಲಿ ಮಹತ್ವದ ವಿಷಯಗಳ ಚರ್ಚೆ:
ಒಂದೆಡೆ ಸ್ಕೈ ಡೆಕ್ ನಿರ್ಮಾಣಕ್ಕೆ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ಅಲ್ಲದೇ ಬೆಂಗಳೂರಿನಲ್ಲಿ ಟನಲ್ ರೋಡ್ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ. ಮೊದಲ ಹಂತದಲ್ಲಿ ಎಸ್ಟೀಮ್ ಮಾಲ್ ಟು ಸಿಲ್ಕ್ ಬೋರ್ಡ್ ವರೆಗೂ 18.5 ಕಿಮೀ ಟನಲ್ ರೋಡ್ ನಿರ್ಮಾಣ ಮಾಡಲಾಗುತ್ತದೆ. ಟನಲ್ ರೋಡ್‌ಗೆ ಕೆಲವು ಕಡೆ ಭೂಸ್ವಾಧೀನ ಅವಶ್ಯಕತೆ ಇದೆ. ಭೂಸ್ವಾಧೀನಕ್ಕೂ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧರಿಸಲಾಗಿದೆ. ಇದನ್ನೂ ಓದಿ: ನಾಯಿ ಸ್ವಲ್ಪ ಟಚ್ ಆದ್ರೂ ಮಸೀದಿಯೊಳಕ್ಕೆ ಹೋಗಲ್ಲ, ಅಂತಹದ್ದರಲ್ಲಿ ಮಾಂಸ ತರೋಕಾಗುತ್ತಾ? – ಅಬ್ದುಲ್ ರಜಾಕ್
ಪೂರ್ವ ಪಶ್ಚಿಮ ಭಾಗದಲ್ಲಿ 2ನೇ ಹಂತದಲ್ಲಿ ಮತ್ತೊಂದು ಟನಲ್ ರೋಡ್ ನಿರ್ಮಾಣ ಮಾಡಲು ಚರ್ಚೆಯೂ ಸಹ ನಡೆದಿದೆ. ಬೆಂಗಳೂರಿನಲ್ಲಿ ಮೆಟ್ರೋ ಮಾರ್ಗಕ್ಕಾಗಿ ಇನ್ಮುಂದೆ ಭೂಸ್ವಾಧೀನ ಇಲ್ಲ. ಭೂಸ್ವಾಧೀನ ಬದಲಿಗೆ ಡಬಲ್ ಡಕ್ಕರ್ ರಸ್ತೆಗಳನ್ನ ನಿರ್ಮಾಣ ಮಾಡಲು ಆದ್ಯತೆ ನೀಡಲಾಗುತ್ತದೆ. ಪಾಲಿಕೆ ಮತ್ತು ಮೆಟ್ರೋದವರೇ ಈ ಪ್ರಾಜೆಕ್ಟ್‌ಗೆ ಹಣ ಖರ್ಚು ಮಾಡಲಿವೆ. ಇನ್ನು ಸಿಗ್ನಲ್ ಫ್ರೀ ಕಾರಿಡಾರ್‌ಗೆ 100 ಕಿಮೀ ಫ್ಲೈಓವರ್ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ಫ್ಲೈಓವರ್ ನಿರ್ಮಾಣಕ್ಕೆ 12 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತೆ. ಕಸ ಸಮಸ್ಯೆ ನಿವಾರಣೆಗೆ ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮದಲ್ಲಿ 4 ಜಾಗ ಗುರುತಿಸಲಾಗಿದೆ. ಪ್ರತಿ ಭಾಗದಲ್ಲಿ 100 ಎಕರೆ ಜಾಗದಲ್ಲಿ ಕಸ ಡಂಪಿಂಗ್ ಮಾಡುವ ಬಗ್ಗೆಯೂ ಚರ್ಚೆಯಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.