Tag: Karnataka govt

  • RSS ಪಥಸಂಚಲನಕ್ಕೆ ನಿರ್ಬಂಧ; ಸರ್ಕಾರದ ಆದೇಶಕ್ಕೆ ಧಾರವಾಡ ವಿಭಾಗೀಯ ಪೀಠ ತಡೆ

    RSS ಪಥಸಂಚಲನಕ್ಕೆ ನಿರ್ಬಂಧ; ಸರ್ಕಾರದ ಆದೇಶಕ್ಕೆ ಧಾರವಾಡ ವಿಭಾಗೀಯ ಪೀಠ ತಡೆ

    ಧಾರವಾಡ: ಸರ್ಕಾರಿ ಜಾಗಗಳಲ್ಲಿ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ (RSS March) ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದ ಸರ್ಕಾರಕ್ಕೆ ಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ಸರ್ಕಾರದ ಆದೇಶಕ್ಕೆ ಧಾರವಾಡ ವಿಭಾಗೀಯ ಪೀಠ ತಡೆ ನೀಡಿದೆ.

    ಸರ್ಕಾರಿ ಆವರಣದಲ್ಲಿ ಖಾಸಗಿ ಸಂಘಟನೆಗಳು ಅನುಮತಿ ಪಡೆಯಬೇಕೆಂಬ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಧಾರವಾಡ ವಿಭಾಗೀಯ ಪೀಠಕ್ಕೆ ಪುನಶ್ಚೇತನ ಸೇವಾ ಸಂಸ್ಥೆ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಪೀಠವು ಸರ್ಕಾರದ ಆದೇಶಕ್ಕೆ ತಡೆ ನೀಡಿದೆ. ನ.17ಕ್ಕೆ ವಿಚಾರಣೆಯನ್ನು ಮುಂದೂಡಿ ಪೀಠ ಆದೇಶ ಹೊರಡಿಸಿದೆ. ಸರ್ಕಾರದ ಪರ ವಕೀಲರಿಗೆ ನಾಳೆ ತಕರಾರು ಸಲ್ಲಿಸಲು ಸೂಚನೆ ನೀಡಿದೆ. ಇದನ್ನೂ ಓದಿ: ಕೋಲಾರದ ಮಾಲೂರಿನಲ್ಲಿ ಯಶಸ್ವಿ RSS ಶತಾಬ್ದಿ ಪಥಸಂಚಲನ – ಮಹಿಳೆಯರಿಂದ ಗಣ ವೇಷಧಾರಿಗಳ ಮೇಲೆ ಪುಷ್ಪಾರ್ಚನೆ

    ವಿಚಾರಣೆ ವೇಳೆ ಪುನಶ್ಚೇತನ ಸಂಸ್ಥೆಯ ವಕೀಲರಿಂದ ವಾದ ಮಂಡಿಸಿ, ಯಾವುದೇ ಪಾರ್ಕ್ ಮತ್ತು ಸರ್ಕಾರದ ಆಸ್ತಿಯಲ್ಲಿ ಯಾವುದೇ ಸಂಘ ಸಂಸ್ಥೆ ಕಾರ್ಯಕ್ರಮ ನಡೆಸುವಂತಿಲ್ಲ. ಇದಕ್ಕೆ ಅಧಿಕಾರಿಗಳ ಅನುಮತಿ ಪಡೆಯಬೇಕು ಎಂದು ಇದೆ. ಸರ್ಕಾರದ ಆಸ್ತಿ ಎಂದರೆ ರೋಡ್ ಅಂತಾನಾ? 10 ಕ್ಕೂ ಹೆಚ್ಚು ಜನರು ಸೇರಿದರೆ ಅದು ತಪ್ಪಾ ಎಂದು ಕರ್ನಾಟಕ ಪೊಲೀಸ್ ಕಾಯ್ದೆಯ ಬಗ್ಗೆ ಪ್ರಶ್ನಿಸಿದರು.

    ಸ್ಥಳೀಯ ಸಂಸ್ಥೆ ಇದನ್ನ ನೋಡಬೇಕು, ಸರ್ಕಾರ ಅಲ್ಲ. ಯಾರು ಇದನ್ನ ಆದೇಶ ಮಾಡಿದ್ದು ಎಂದ ನ್ಯಾಯಮೂರ್ತಿ ಕೇಳಿದರು. ‘ಕ್ಯಾಬಿನೆಟ್ ಆದೇಶ ಮಾಡಿದೆ. ಸರ್ಕಾರ ಶಾಲಾ-ಕಾಲೇಜು, ಉದ್ಯಾನ ಮತ್ತು ಇತರ ಕಡೆ ಸಾರ್ವಜನಿಕರು ಬಳಸಲು ಇದೆ. ರಾಜ್ಯದ ಹಲವು ಸಂಸ್ಥೆ ಪ್ರಚಾರ ತರಬೇತಿ ಉದ್ದೇಶದಿಂದ ಸರ್ಕಾರದ ಆಸ್ತಿ ಅನುಮತಿ ಪಡೆಯದೇ ಮಾಡೋದು ಅಕ್ರಮ ಎಂದು ಹೇಳ್ತಾರೆ’ ಎಂದು ವಕೀಲರು ವಾದಿಸಿದರು. ಇದನ್ನೂ ಓದಿ: ಚಿತ್ತಾಪುರದಲ್ಲಿ RSS ಪಥಸಂಚಲನ ವಿವಾದ – ಅ.28ಕ್ಕೆ ಶಾಂತಿ ಸಭೆ ನಡೆಸಲು ಕೋರ್ಟ್ ಸೂಚನೆ

  • ದೀಪಾವಳಿ ಹಿನ್ನೆಲೆ ಜಾತಿಗಣತಿ ಸಮೀಕ್ಷೆಗೆ ಅ.23ರವರೆಗೆ ತಾತ್ಕಾಲಿಕ ಬ್ರೇಕ್

    ದೀಪಾವಳಿ ಹಿನ್ನೆಲೆ ಜಾತಿಗಣತಿ ಸಮೀಕ್ಷೆಗೆ ಅ.23ರವರೆಗೆ ತಾತ್ಕಾಲಿಕ ಬ್ರೇಕ್

    ಬೆಂಗಳೂರು: ದೀಪಾವಳಿ (Deepavali) ಹಬ್ಬದ ಹಿನ್ನೆಲೆಯಲ್ಲಿ ಜಾತಿಗಣತಿ (Caste Census) ಸಮೀಕ್ಷೆಗೆ ಅ.23ರ ವರೆಗೆ ತಾತ್ಕಾಲಿಕ ಬ್ರೇಕ್ ನೀಡಲಾಗಿದೆ.

    ಗೃಹ ಕಚೇರಿ ಕೃಷ್ಣದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಜಾತಿಗಣತಿ ಸಮೀಕ್ಷೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆ ಬಳಿಕ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಅ.23ರ ವರೆಗೆ ಸಮೀಕ್ಷೆಗೆ ತಾತ್ಕಾಲಿಕ ಬ್ರೇಕ್ ನೀಡಲಾಗಿದೆ. ಬೆಂಗಳೂರಿನಲ್ಲಿ ಅ.23 ರಿಂದ 31 ರವರೆಗೆ ಸಮೀಕ್ಷೆ ಮುಂದುವರಿಕೆ ಆಗಲಿದೆ ಎಂದು ತಿಳಿಸಿದ್ದಾರೆ.

    ಮುಖ್ಯಮಂತ್ರಿಗಳು ಸಭೆ ಮಾಡಿದರು 27 ಜಿಲ್ಲೆಯಲ್ಲಿ 90% ಜಾಸ್ತಿ ಆಗಿದೆ. ರಾಮನಗರ, ಬೀದರ್, ಬೆಂಗಳೂರು ಅರ್ಬನ್ ಕಡಿಮೆ ಆಗಿದೆ. ಬೆಂಗಳೂರು ಅರ್ಬನ್ 50% ಆಗಿದೆ. ಬೆಂಗಳೂರಿನಲ್ಲಿ ಅ.23 ರಿಂದ 31 ರವರೆಗೆ ಗಣತಿ ಮಾಡಲು ಸೂಚನೆ ನೀಡಲಾಗಿದೆ. ಶಿಕ್ಷಕರಿಗಿಲ್ಲ, ಬೇರೆ ಸ್ಟಾಫ್‌ಗಳ ಕೈಲಿ ಸಮೀಕ್ಷೆ ಮಾಡಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಬೆಂಗಳೂರಿನಲ್ಲಿ ಸಮೀಕ್ಷೆ ಮಂದಗತಿಯಲ್ಲಿ ಸಾಗ್ತಿರೋದಕ್ಕೆ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದ್ದಾರೆ. ನಗರದಲ್ಲಿ ಇಲ್ಲಿವರೆಗೂ ಆಗಿರುವ ಸರ್ವೆ ಮಾಹಿತಿ ಪಡೆದುಕೊಂಡಿದ್ದಾರೆ. ಈ ವೇಳೆ ಯಾಕಿಷ್ಟು ನಿಧಾನ ಆಗ್ತಿದೆ ಎಂದು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸಭೆ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಸಮೀಕ್ಷೆಗೆ ಇನ್ನೂ ಅವಕಾಶ ಕೊಡ್ತಿದ್ದೇವೆ. ಯಾರು ಯಾರು ಭಾಗಹಿಸಲ್ಲವೋ ಅವರು ಎಲ್ಲರೂ ಭಾಗವಹಿಸಬೇಕು. ಎಲ್ಲಾ ಸಮಾಜದವರು ಇರುವ ಅವಕಾಶ ಕಳೆದುಕೊಳ್ಳೋಕೆ ಹೋಗಬೇಡಿ. ಬೆಂಗಳೂರು ದಕ್ಷಿಣ, ಬೀದರ್, ಧಾರವಾಡ ಬಿಟ್ಟು ಉಳಿದ ಕಡೆ ಚೆನ್ನಾಗಿ ಆಗಿದೆ. ಅದಕ್ಕಾಗಿ ಇವಾಗ ಮತ್ತೆ 31 ರವರೆಗೆ ವಿಸ್ತರಣೆ ಮಾಡಿದ್ದೇವೆ. ಅ.21, 22, 23 ಹಬ್ಬದ ರಜೆ ಇದೆ. ಅವತ್ತು ಸಮೀಕ್ಷೆ ಇರಲ್ಲ. ಶಿಕ್ಷಕರು ಇರಲ್ಲ, ಬೇರೆ ನೌಕರರು ಬಳಸಿಕೊಂಡು ಸಮೀಕ್ಷೆ ಮಾಡಬೇಕು. ನಂತರ ಅ.24 ರಿಂದ 31ರವರೆಗೆ ಸಮೀಕ್ಷೆ ಮುಂದುವರಿಯಲಿದೆ. ಎಲ್ಲರು ಕೂಡ ಮಾಹಿತಿ ಕೊಡಬೇಕು ಎಂದು ತಿಳಿಸಿದ್ದಾರೆ.

  • ಸಂಘ ಸಂಸ್ಥೆಗಳು, ಸಂಘಟನೆಗಳ ಚಟುವಟಿಕೆಗಳಿಗೆ ಅನುಮತಿ ಕಡ್ಡಾಯ: ಸರ್ಕಾರ ಆದೇಶ

    ಸಂಘ ಸಂಸ್ಥೆಗಳು, ಸಂಘಟನೆಗಳ ಚಟುವಟಿಕೆಗಳಿಗೆ ಅನುಮತಿ ಕಡ್ಡಾಯ: ಸರ್ಕಾರ ಆದೇಶ

    ಬೆಂಗಳೂರು: ಖಾಸಗಿ ಸಂಘ ಸಂಸ್ಥೆಗಳು, ಸಂಘಟನೆಗಳ ಚಟುವಟಿಕೆಗಳಿಗೆ ಅನುಮತಿ ಕಡ್ಡಾಯ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

    ಸಾರ್ವಜನಿಕ ಆಸ್ತಿ, ಸ್ಥಳದ ಮಾಲೀಕತ್ವ ಹೊಂದಿದ ಸಕ್ಷಮ ಪ್ರಾಧಿಕಾರಗಳಿಂದ ಪೂರ್ವಾನುಮತಿ ಪಡೆಯಬೇಕು ಎಂದು ತಿಳಿಸಲಾಗಿದೆ. ಅ.16 ರಂದು ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ಸರ್ಕಾರ ನಿರ್ಣಯ ಕೈಗೊಂಡಿತ್ತು.

    ಸಂಘ ಸಂಸ್ಥೆಗಳು, ಸಂಘಟನೆಗಳು ಯಾರಿಂದ ಅನುಮತಿ ಪಡೆಯಬೇಕು?
    * ಸರ್ಕಾರದ/ಸರ್ಕಾರಿ ಸಾಮ್ಯದ ಶಾಲಾ-ಕಾಲೇಜುಗಳು, ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಆವರಣ – ಉನ್ನತ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆಯಬೇಕು.
    * ಉದ್ಯಾನಗಳು, ಆಟದ ಮೈದಾನಗಳು, ಇತರೆ ತೆರೆದ ಸ್ಥಳಗಳು – ನಗರಾಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
    * ಸಾರ್ವಜನಿಕ ರಸ್ತೆಗಳು, ಸರ್ಕಾರದ ಇತರೆ ಆಸ್ತಿ/ಸ್ಥಳಗಳು – ಸಂಬಂಧಿಸಿದ ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು/ಪೊಲೀಸ್ ಅಧೀಕ್ಷಕರಿಂದ ಅನುಮತಿ ಪಡೆಬೇಕು.

  • 7 ನಿಗಮ ಮುಚ್ಚಲು, 9 ನಿಗಮ ವಿಲೀನ ಮಾಡಲು ಕರ್ನಾಟಕ ಆಡಳಿತ ಸುಧಾರಣಾ ಆಯೋಗದಿಂದ ಸರ್ಕಾರಕ್ಕೆ ಶಿಫಾರಸು

    7 ನಿಗಮ ಮುಚ್ಚಲು, 9 ನಿಗಮ ವಿಲೀನ ಮಾಡಲು ಕರ್ನಾಟಕ ಆಡಳಿತ ಸುಧಾರಣಾ ಆಯೋಗದಿಂದ ಸರ್ಕಾರಕ್ಕೆ ಶಿಫಾರಸು

    ಬೆಂಗಳೂರು: ಕರ್ನಾಟಕ ಆಡಳಿತ ಸುಧಾರಣಾ ಆಯೋಗ ತನ್ನ 9ನೇ ವರದಿಯನ್ನ ಸಿಎಂ ಸಿದ್ದರಾಮಯ್ಯಗೆ ಸಲ್ಲಿಕೆ ಮಾಡಿದೆ. ವಿಧಾನಸೌಧದ ಸಿಎಂ ಕಚೇರಿಯಲ್ಲಿ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ (R.V.Deshapande) ವರದಿಯನ್ನ ಸಿಎಂಗೆ ಸಲ್ಲಿಕೆ ಮಾಡಿದ್ದಾರೆ.

    9ನೇ ವರದಿಯಲ್ಲಿ 449 ಹೊಸ ಶಿಫಾರಸುಗಳನ್ನು ಮಾಡಲಾಗಿದೆ. 3 ಪ್ರಮುಖ ವಿಷಯಗಳನ್ನು ಇಟ್ಟುಕೊಂಡು ಈ ವರದಿ ನೀಡಲಾಗಿದೆ ಅಂತ ದೇಶಪಾಂಡೆ ತಿಳಿಸಿದರು. ಪ್ರಮುಖವಾಗಿ ಈ ವರದಿಯಲ್ಲಿ 7 ಬೋರ್ಡ್, ಕಾರ್ಪೊರೇಷನ್‌ಗಳನ್ನು ಮುಚ್ಚಲು ಸಲಹೆ ನೀಡಲಾಗಿದೆ. ಅಲ್ಲದೇ, 9 ಬೋರ್ಡ್ ಕಾರ್ಪೊರೇಷನ್‌ಗಳನ್ನ ವಿಲೀನ ಮಾಡಲು ಶಿಫಾರಸು ‌ಮಾಡಲಾಗಿದೆ. ಇದನ್ನೂ ಓದಿ: ರಾಜ್ಯ ಮಾಹಿತಿ ಆಯುಕ್ತರಾಗಿ ಮೂವರು ಪ್ರಮಾಣ ವಚನ ಸ್ವೀಕಾರ

    ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದೇಶಪಾಂಡೆ, ಬೋರ್ಡ್, ಕಾರ್ಪೊರೇಷನ್‌ಗಳಿಗೆ ಈಗಾಗಲೇ ಅಧ್ಯಕ್ಷರನ್ನ ನೇಮಕ ಮಾಡಿದ್ರೆ ನನಗೆ ಗೊತ್ತಿಲ್ಲ. ಜನರ ಹಣ ಇದು. ಆ ಹಣದ ಉಪಯೋಗ ಜನರಿಗೆ ಆಗಬೇಕು. ಇವತ್ತಿನ ಕಾಲದಲ್ಲಿ ಅವಶ್ಯಕತೆ ಇಲ್ಲದ ಬೋರ್ಡ್ ಮುಚ್ಚಲು ಹೇಳಿದ್ದೇವೆ. ನನ್ನ ಜವಾಬ್ದಾರಿ ನಾನು ಮಾಡಿದ್ದೇನೆ. ಸಿಎಂ ಅಂಗೀಕಾರ ಮಾಡೋದಾಗಿ ಹೇಳಿದ್ದಾರೆ. ನೋಡೋಣ ಏನ್ ಮಾಡ್ತಾರೆ ಎಂದು ತಿಳಿಸಿದರು.

    84 ಬೋರ್ಡ್, ಕಾರ್ಪೊರೇಷನ್‌ಗಳ ರಿವ್ಯೂ ಮಾಡಿದ್ದೇವೆ. ಆ ಬೋರ್ಡ್‌ಗಳ A-Z ಮಾಹಿತಿ ನಮ್ಮ ಬಳಿ ಇದೆ. ಇದರಲ್ಲಿ 7 ಮುಚ್ಚಲು, 9 ಮರ್ಜ್ ಮಾಡಲು ಶಿಫಾರಸು ಮಾಡಿದ್ದೇವೆ. ನಮ್ಮ ಜವಾಬ್ದಾರಿ ಮಾಡಿದ್ದೇವೆ. ಮಿಕ್ಕಿದ್ದು ಸರ್ಕಾರ ಮಾಡಬೇಕು. ಮುಚ್ಚಲು ಹೇಳಿರೋ ಬೋರ್ಡ್‌ನಲ್ಲಿ ಕೆಲಸವೇ ಇಲ್ಲ. ಕೆಲವು ಬೋರ್ಡ್‌ಗೆ ಹಣವೇ ಇಲ್ಲ. ಹೀಗಾಗಿ, ಮುಚ್ಚಲು ಶಿಫಾರಸು ಮಾಡಿದ್ದೇವೆ. ಉಳಿದ ಬೋರ್ಡ್, ಕಾರ್ಪೊರೇಷನ್ ಅಭಿವೃದ್ಧಿ, ಸುಧಾರಣೆ ಹೇಗೆ ಮಾಡಬೇಕು ಅಂತ 379 ಶಿಫಾರಸು ಮಾಡಿದ್ದೇವೆ. 15 ಶಿಫಾರಸು ಭೂಸ್ವಾಧೀನ ಮಾಡಿದ್ದೇವೆ. ಸಾಮಾನ್ಯ ಆಡಳಿತಾತ್ಮಕ-ಇ ಸುಧಾರಣೆಗೆ 55 ಶಿಫಾರಸು ಮಾಡಿದ್ದೇವೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರು. ಇದನ್ನೂ ಓದಿ: ದೀಪಾವಳಿ ಕೊಡುಗೆ ನೆಪದಲ್ಲಿ ಜನಕ್ಕೆ ದೋಖಾ, ಎ-ಖಾತಾ ಸೋಗಿನಲ್ಲಿ 15,000 ಕೋಟಿ ಸುಲಿಗೆ: ಹೆಚ್‌ಡಿಕೆ ಬಾಂಬ್‌

    ವಿಲೀನ ಮಾಡಲು ಸೂಚಿಸಿರೋ ನಿಗಮಗಳು

    1.ಕರ್ನಾಟಕ ರಾಜ್ಯ ಏಡ್ಸ್ ತಡೆಗಟ್ಟುವ ಸೊಸೈಟಿ
    (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೋಂದಿಗೆ ವೀಲಿನ)

    2.ಕರ್ನಾಟಕ ರೇಷ್ಮೆ ಕೈಗಾರಿಕೆ ನಿಗಮ ನಿಯಮಿತ
    (ಕರ್ನಾಟಕ ರೇಷ್ಮೆ ಮಾರುಕಟ್ಟೆ ಮಂಡಳಿ ಲಿಮಿಟೆಡ್ ವಿಲೀನ ಮಾಡಬೇಕು)

    3.ಆಹಾರ ಕರ್ನಾಟಕ ಲಿಮಿಟೆಡ್
    (ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ, ಸಂಸ್ಕರಣೆ ಮತ್ತು ರಫ್ತು ನಿಗಮ ನಿಯಮಿತದಲ್ಲಿ ವಿಲೀನ)

    4.ಬೆಂಗಳೂರು ಸಬ್ ಅರ್ಬನ್ ರೈಲ್ವೆ ಕಂಪನಿ ಲಿಮಿಟೆಡ್ (ಬಿ-ರೈಡ್)
    (ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕರ್ನಾಟಕ) ಲಿಮಿಟೆಡ್ (ಕೆ-ರೈಡ್))

    5.ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ
    (ಜವಳಿ ಮೂಲಸೌಕರ್ಯ ಅಭಿವೃದ್ಧಿ ನಿಗಮ)

    6.ಮೈಸೂರು ಕ್ರೋಮ್ ಟ್ಯಾನಿಂಗ್ ಕಂಪನಿ ಲಿಮಿಟೆಡ್
    (ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್‌ನಲ್ಲಿ ವಿಲೀನ)

    7.ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತ
    (ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತ)

    8.ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಕೃಷಿ ವಿಜ್ಞಾನ ವಿಶ್ವವಿದ್ಯಾಲಯ (ಜಿಕೆವಿಕೆ)

    9.ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಸಿಎಡಿಎ)
    (ಸಂಬಂಧಿಸಿದ ನೀರಾವರಿ ನಿಗಮಗಳು)

    ಮುಚ್ಚಲು ಶಿಫಾರಸು ಮಾಡಲಾದ 7 ಬೋರ್ಡ್ ಕಾರ್ಪೋರೇಷನ್‌ಗಳು!?

    1.ಕರ್ನಾಟಕ ರಾಜ್ಯ ಸಮಾಜಕಲ್ಯಾಣ ಮಂಡಳಿ
    2.ಕರ್ನಾಟಕ ರಾಜ್ಯ ಸಂಯಮ ಮಂಡಳಿ
    3.ಕರ್ನಾಟಕ ಸಹಕಾರಿ ಕೋಳಿ ಸಾಕಾಣಿಕೆ ಒಕ್ಕೂಟ
    4.ಕರ್ನಾಟಕ ವುಲ್ಪ್ ವುಡ್ ಲಿಮಿಟೆಡ್
    5.ಕರ್ನಾಟಕ ರಾಜ್ಯ ಅಗ್ರೋ-ಕಾರ್ನ್ ಪ್ರಾಡಕ್ಟ್ ಲಿಮಿಟೆಡ್
    6.ಮೈಸೂರು ಲ್ಯಾಂಪ್ ವರ್ಕ್ಸ್ ಲಿಮಿಟೆಡ್
    7.ಕರ್ನಾಟಕ ಆಗ್ರೋ ಇಂಡಸ್ಟ್ರೀಸ್ ಕಾರ್ಪೋರೇಷನ್ ಲಿಮಿಟೆಡ್

  • ಸಿಎಂ ಬೆಂಗಳೂರಿನಲ್ಲಿ ಕೂತು ಡಿಸಿಗಳಿಗೆ ಹೇಳಿದ್ರೆ ಕೆಲಸ ಮಾಡ್ತಾರಾ?- ಪ್ರವಾಹ ಪರಿಸ್ಥಿತಿಗೆ ಸ್ಪಂದಿಸಲು ಹೆಚ್‌ಡಿಕೆ ಆಗ್ರಹ

    ಸಿಎಂ ಬೆಂಗಳೂರಿನಲ್ಲಿ ಕೂತು ಡಿಸಿಗಳಿಗೆ ಹೇಳಿದ್ರೆ ಕೆಲಸ ಮಾಡ್ತಾರಾ?- ಪ್ರವಾಹ ಪರಿಸ್ಥಿತಿಗೆ ಸ್ಪಂದಿಸಲು ಹೆಚ್‌ಡಿಕೆ ಆಗ್ರಹ

    – ವ್ಯವಸ್ಥೆಯಲ್ಲಿ ನೀವು ಮಾಡಿದ ಕರ್ಮ ತೊಳೆಯಲು ಸಾಧ್ಯವಿಲ್ಲ: ಸರ್ಕಾರದ ವಿರುದ್ಧ ಗುಡುಗು
    – ಕೇಂದ್ರ ಸರ್ಕಾರದ ಜೊತೆಗೆ ಘರ್ಷಣೆಗೆ ಹೋಗಬೇಡಿ: ಸಿಎಂ ಸಿದ್ದರಾಮಯ್ಯಗೆ ಸಲಹೆ

    ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿಗೆ ರಾಜ್ಯ ಸರ್ಕಾರ ಸರಿಯಾಗಿ ಸ್ಪಂದಿಸಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಆಗ್ರಹಿಸಿದ್ದಾರೆ. ಸಿಎಂ ಮನೆಯಲ್ಲಿ ಕೂತು ಡಿಸಿಗಳಿಗೆ ಹೇಳಿದ್ರೆ ಕೆಲಸ ಮಾಡ್ತಾರಾ ಎಂದು ಸಿದ್ದರಾಮಯ್ಯ (Siddaramaiah) ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಹೆಚ್‌ಡಿಕೆ ಮಾತನಾಡಿ, ರಾಜ್ಯ ಸರ್ಕಾರದ ಆಡಳಿತ ಲೋಪಗಳ ಬಗ್ಗೆ ಚರ್ಚೆ ಮಾಡಲು ಸುದ್ದಿಗೋಷ್ಠಿ ಕರೆದಿದ್ದೇನೆ. ಉತ್ತರ ಭಾರತದಲ್ಲಿ ಪ್ರವಾಹ ಪರಿಸ್ಥಿತಿ ನೋಡಿದ್ದೀರಿ. ಈ ವರ್ಷ ರಾಜ್ಯದಲ್ಲಿ ಉತ್ತಮ ಮಳೆ ಪ್ರಾರಂಭವಾಯ್ತು. ಹಲವಾರು ಜಲಾಶಯಗಳು ನಿರೀಕ್ಷೆಗೂ ಮೀರಿ ತುಂಬಿವೆ. ರೈತರು ಸೇರಿ ಎಲ್ಲರೂ ಸಂತೋಷದಲ್ಲಿದ್ದರು. ಕೃಷಿ ಚಟುವಟಿಕೆಗಳು ಆರಂಭವಾಗಿದ್ದವು, ಉತ್ತಮ ಬೆಳೆ ನಿರೀಕ್ಷೆ ಇತ್ತು. ಈಗ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಉಡುಪಿ, ಕಾರವಾರ, ಚಿಕ್ಕಮಗಳೂರು ಕಡೆ ಮೊದಲು ಪ್ರವಾಹ ಆಯ್ತು. ಈಗ ಹೈದ್ರಾಬಾದ್, ಮುಂಬೈ ಕರ್ನಾಟಕದಲ್ಲಿ ನಿರೀಕ್ಷೆ ಮೀರಿ ಮಳೆಯಾಗುತ್ತಿದೆ. ಹಲವಾರು ಹಳ್ಳಿಗಳು ಜಲಾವೃತವಾಗಿವೆ. ಆರು ಜಿಲ್ಲೆಗಳ ಅಧಿಕಾರಿಗಳ ಜೊತೆಗೆ ಪರಿಸ್ಥಿತಿ ಚರ್ಚೆ ಮಾಡಿದ್ದೇನೆ. ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಪ್ರತಿ ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಹೆಕ್ಟೇರ್ ಬೆಳೆ ನಾಶವಾಗಿದೆ. ಭತ್ತ, ಹತ್ತಿ, ತೊಗರಿ ಬೆಳೆ ನಾಶವಾಗಿದೆ. ರೈತ ಚೇತರಿಸಿಕೊಳ್ಳಲು ಆಗುವುದಿಲ್ಲ. ಕಲ್ಯಾಣ ಕರ್ನಾಟಕದ ರೈತರು ನೋವಿನಲ್ಲಿದ್ದಾರೆ. ಮನೆಗಳಿಗೂ ಸಾಕಷ್ಟು ಹಾನಿಯಾಗಿದೆ, 12 ಗೋ ಶಾಲೆಗಳು ಮುಳುಗಿ ಹೋಗಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ನಿಲ್ಲದ ವರುಣಾರ್ಭಟ – ನಿರಂತರ ಮಳೆಗೆ ಕಲ್ಯಾಣ ಕರ್ನಾಟಕ ತತ್ತರ

    ಮಂತ್ರಿಗಳು ಕಾಟಾಚಾರಕ್ಕೆ ಹೋಗಿದ್ದಾರೋ ಬಿಟ್ಟಿದ್ದಾರೋ ನಾನು ಅದನ್ನು ಮಾತನಾಡುವುದಿಲ್ಲ. 36 ಜನರು ಮಂತ್ರಿಗಳಿದ್ದಾರೆ, ಎಲ್ಲೆಲ್ಲಿ ಭೇಟಿ ಕೊಟ್ಟಿದ್ದಾರೆ. ಸಿಎಂ ಬೆಂಗಳೂರಿನಲ್ಲಿ ಕೂತು ಡಿಸಿಗಳಿಗೆ ನಿರ್ದೇಶನ ನೀಡಿದ್ರೆ ಅವರು ಕೆಲಸ ಮಾಡ್ತಾರ? ಚಿಕ್ಕಮಗಳೂರು ಭಾಗದಲ್ಲಿ ಅಡಿಕೆ ನಾಶ ಆಯ್ತು, ಮನೆ ಕುಸಿದವು. ಪ್ರಾಣ ಹೋದ ವ್ಯಕ್ತಿಗೆ ಪರಿಹಾರ ಕೊಟ್ಟಿದ್ದು ಬಿಟ್ಟು ಉಳಿದವರಿಗೆ ಸರ್ಕಾರ ಏನು ನೆರವು ನೀಡಿದೆ ಎಂದು ಪ್ರಶ್ನಿಸಿದ್ದಾರೆ.

    ಯುದ್ದೋಪಾದಿಯಲ್ಲಿ ಪರಿಹಾರ ಕಾರ್ಯಕ್ರಮ ಆಗಬೇಕಿತ್ತು. ಸಮೀಕ್ಷೆ ಪೂರ್ಣಗೊಂಡಿಲ್ಲ, ರೈತರಿಗೆ ಬೆಳೆ ನಾಶದ ಮಾಹಿತಿ ಕೇಳುತ್ತಿದ್ದಾರಂತೆ. ಕೆಲವು ರೈತರು ನನಗೆ ದೂರವಾಣಿ ಮೂಲಕ ಹೇಳುತ್ತಿದ್ದಾರೆ. ನನಗೆ ಆರೋಗ್ಯದ ಸಮಸ್ಯೆ ಇಲ್ಲದಿದ್ದರೆ ಅಲ್ಲೇ ಒಂದು ವಾರ ಕ್ಯಾಂಪ್ ಮಾಡುವೆ. ನಾನು ಆಕಸ್ಮಿಕವಾಗಿ ಮುಖ್ಯಮಂತ್ರಿಯಾಗಿದ್ದಾಗ ಇಂತಹ ಸನ್ನಿವೇಶದಲ್ಲ ಹೇಗೆ ನಿರ್ವಹಿಸಬೇಕು ಕಲಿತಿದ್ದೇನೆ. ಹಿಂದೆ ಸಿಎಂ ಆಗಿದ್ದಾಗ ಪರಿಹಾರ ಕೊಟ್ಟು, ಮನೆಗೆ ಕಟ್ಟಿಸಿಕೊಟ್ಟೆ, ಮನೆ ಕಟ್ಟುವವರೆಗೂ ಬಾಡಿಗೆ ನೀಡಿದೆ. ನಾವು ಈಗ ಮಾತನಾಡಿದರೆ ನೀವು ಏನ್ ಮಾಡಿದ್ರಿ ಅಂತಾ ಕೇಳ್ತಾರೆ. ನೀವು ಪದೇ ಪದೇ ಕೇಂದ್ರ ಸರ್ಕಾರದ ಜೊತೆಗೆ ಘರ್ಷಣೆಗೆ ಹೊಗಬೇಡಿ. ನರೇಂದ್ರ ಮೋದಿ ಅವರ ಮೇಲೆ ವಿಶ್ವಾಸ ನಂಬಿಕೆ ಇದೆ. ಸರಿಯಾದ ರೀತಿಯಲ್ಲಿ ಸೌಜನ್ಯಯುತವಾಗಿ ಬಂದು ನೆರವು ಕೇಳಬೇಕು. ಅಲ್ಲಿ ಬೆಂಗಳೂರಿನಲ್ಲಿ ಕೂತು ಅನ್ಯಾಯ ಆಗಿದೆ ಅಂದರೆ. ನಾನು ಸಿಎಂ ಆಗಿದ್ದಾಗ ಮನಮೋಹನ್ ಸಿಂಗ್ ಸರ್ಕಾರ ಇತ್ತು. ನಾನು ಕೇಂದ್ರ ಸರ್ಕಾರದ ಜೊತೆಗೆ ಘರ್ಷಣೆ ಮಾಡಲಿಲ್ಲ. ಕೊಡಗಿನಲ್ಲಿ ಅನಾಹುತ ಆದಾಗ ಮೋದಿ ಕರೆ ಮಾಡಿದ್ದರು. ಈ ಬಾಂಧವ್ಯ ರಾಜ್ಯ ಸರ್ಕಾರ ಉಳಿಸಿಕೊಂಡು ಹೋಗಬೇಕು. ಈಗಲೂ ಒರಟು ಮಾತುಗಳನ್ನು ಬಿಡಬೇಕು. ರಾಜ್ಯದ ಒಬ್ಬ ಮಂತ್ರಿ ಈ ಸಂಬಂಧ ಕೇಂದ್ರದ ಮಂತ್ರಿಗಳನ್ನು ಭೇಟಿ ಮಾಡಿದ್ದಾರಾ, ಯಾವುದಾದರೂ ನಿಯೋಗ ಬಂದಿದ್ಯಾ? ಅದ್ಯಾವೋದು ಜಾತಿ ಗಣತಿ ಅಂತೆ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆಗೆ ತೆರಳುತ್ತಿದ್ದ ಅಧಿಕಾರಿಗಳು ಮಧ್ಯದಲ್ಲೇ ಲಾಕ್

    ಬೇಕಾದಷ್ಟು ಸಮಸ್ಯೆ ಇದಾವೆ, ಈಗ ಹೊಸ ಸಮಸ್ಯೆ ಹುಟ್ಟು ಹಾಕುತ್ತಿದ್ದಾರೆ. ಎರಡು ವರ್ಷ ಸಿಎಂ ಗಾದಿ ಬಗ್ಗೆ ಚರ್ಚೆ ನಡೆಯಿತು. ಎರಡು ಸಾವಿರ ಕೊಟ್ಟ ತಕ್ಷಣ ಆ ಕುಟುಂಬಗಳು ನೆಮ್ಮದಿಯಿಂದ ಬದುಕಲು ಸಾಧ್ಯವಾ? ನಿನ್ನೆ ರಸ್ತೆ ಗುಂಡಿ ತಪ್ಪಿಸಲು ಹೋಗಿ ಯುವತಿ ಮೃತಪಟ್ಟಳು. ನಿನ್ಮೆ ಸಿಎಂ ಬೆಂಗಳೂರು ಉಸ್ತುವಾರಿ ಬಿಟ್ಟು ನಗರ ಪ್ರದರ್ಕ್ಷಣೆ ಹಾಕಿದರು. ಸಿಎಂ ಪರಿಶೀಲನೆ ಬೆನ್ನಲೆ ರಸ್ತೆ ಕಿತ್ತು ಬಂದ ಉದಾಹರಣೆ ಇದೆ. ಇದು ಆಡಳಿತವಾ, ಅಧಿಕಾರಿಗಳಿಗೆ ಭಯ ಇದಿಯಾ ಎಂದು ಕೇಳಿದ್ದಾರೆ.

    ಉತ್ತರ ಕರ್ನಾಟಕದಲ್ಲಿ ಗಂಜಿ ಕೇಂದ್ರ ತೆಗೆದು ಎರಡು ಊಟ ಹಾಕಿದ್ರಾ ಸಾಕಾ? ಖಾಲಿ ಕೈಯಲ್ಲಿ ಮನೆಯಲ್ಲಿ ಹೋಗಿ ಅವರು ಏನ್ ಮಾಡಬೇಕು. ಪರಿಹಾರ ಏನ್ ಕೊಡಬೇಕು ಅಂದುಕೊಂಡಿದ್ದೀರಿ. ಪಕ್ಕದ ಆಂಧ್ರದಲ್ಲಿ ಈರುಳ್ಳಿ ಬೆಳೆ ನಾಶ ಬೆನ್ನಲೆ ಪರಿಹಾರ ನೀಡಲಾಯಿತು. ಅಧಿಕಾರಿಗಳಿಗೆ ವಿಶೇಷ ಅಧಿಕಾರ ನೀಡಿ ಪರಿಹಾರ ಕೊಡಿಸಲಾಯಿತು. ಗ್ಯಾರಂಟಿ ಕೊಟ್ಟು ಖಜಾನೆ ಖಾಲಿಯಾಗಿದೆ ಎಂದು ನಾನು ಹೇಳಲ್ಲ. ಈಗ ಮೈಸೂರ್‌ಗೆ ಬಸ್ ಪ್ರಯಾಣದ ದರ ಏರಿಕೆ ಮಾಡಿದ್ದೀರಿ. ಬೆಲೆ ಏರಿಕೆಯಲ್ಲಿ ಖಾಸಗಿ ಬಸ್‌ಗಳಗೆ ಪೈಪೊಟಿ ನಡೆಸಿದೆ ಸರ್ಕಾರ. ಯಾವ ಸಚಿವರು ಪ್ರವಾಹ ಪೀಡಿತ ಸ್ಥಳಕ್ಕೆ ಹೋಗಿಲ್ಲ, ಇದ್ಯಾವ ರೀತಿಯ ಸರ್ಕಾರ ಸಿದ್ದರಾಮಯ್ಯ ಅವರೇ ಜನರು ಹೈದ್ರಾಬಾದ್ ಕರ್ನಾಟಕ ಪರಿಸ್ಥಿತಿಯಲ್ಲಿ ಕೆಟ್ಟ ಪರಿಸ್ಥಿತಿ ಇದೆ. ಬೆಂಗಳೂರು ಮೈಸೂರು ರೀತಿ ಕಲಬುರಗಿ ಆದರೆ ಸಾಕು ಎಂದು ಖರ್ಗೆ ಹೇಳ್ತಾರೆ. ಅವರ ಮಂತ್ರಿ ಇದ್ದರು, ಮಗ ಮಂತ್ರಿ ಇದಾರೆ ಏನ್ ಮಾಡಿದರು ಎಂದು ಕೇಳಿದ್ದಾರೆ.

    ನಾನು ಭತ್ತ ಬೆಳೆಯಲು ಪ್ರೊತ್ಸಾಹ ಧನ ನೀಡುತ್ತಿದ್ದೆ, ಆ ಯೋಜನೆ ನಿಲ್ಲಿಸಿದ್ದೀರಿ. ಹತ್ತು ಲಕ್ಷ ಸಾಲ ನೀಡುವ ಭರವಸೆ ನೀಡಿದ್ದೀರಿ, ಎಲ್ಲಿ ಸಾಲ ಕೊಟ್ಟಿದ್ದೀರಿ? ಎಷ್ಟು ಪರ್ಸೆಂಟ್ ರೈತರಿಗೆ ಸಾಲ ನೀಡಿದ್ದೀರಿ? 37% ಇದ್ದಿದ್ದು 17% ಗೆ ಸಾಲ ನೀಡುವುದು ಇಳಿಕೆಯಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಎರಡು ದಿನದ ಹಿಂದೆ ನಾನೇ ಹೋಗಬೇಕು ಎಂದು ಮನಸ್ಸು ಮಾಡಿದೆ. ಇನ್ನು ಮಳೆ ಇದೆ, ಬರಬೇಡಿ ಎಂದು ಡಿಸಿ ಹೇಳಿದರು. ಮನಸ್ಸು ತಡೆಯದೇ ಫೋನ್ ಮಾಡಿದ್ದೆ. ಡಿಸಿಗಳು ಬೇಡ ಅಂದ್ರು ಅದಕ್ಕೆ ಹೋಗಲಿಲ್ಲ. ಏರಿಯಲ್ ಸರ್ವೆ ಮಾಡಿ, ಜಾತಿ ಸಮೀಕ್ಷೆ ಬಗ್ಗೆ ಮಾತನಾಡಿದ್ರೆ ರೈತರ ಕಥೆ ಏನು? ಜಾತಿ ಸಮೀಕ್ಷೆ ಮಾತನಾಡ್ತಾ ಓಡಾಡುತ್ತಿದ್ದಾರೆ. ಸೋಮಾರಿತನ ಬಿಟ್ಟು ಕೂಡಲೇ ಸಿಎಂ ಪರಿಹಾರ ನೀಡುವುದು ಆರಂಭಿಸಬೇಕು. ಗಂಜಿ ಕೇಂದ್ರದಲ್ಲಿ ಸರಿಯಾಗಿ ಊಟನೂ ಹಾಕ್ತಿಲ್ಲ, ಹೊದಿಕೆ ಕೊಡ್ತಿಲ್ಲ. ಐದಾರು ಜಿಲ್ಲೆಗಳಿಗೆ ತಲಾ ಇಬ್ಬರು ಮಂತ್ರಿಗಳನ್ನು ಹಾಕಿ. ಎಸಿ ರೂಂ ಬಿಟ್ಟು, ಅಲ್ಲಿ ಹೋಗಿ ಕ್ಯಾಂಪ್ ಮಾಡ್ಲಿ ಎಂದು ಸವಾಲು ಹಾಕಿದರು.

    ಮಹಾರಾಷ್ಟ್ರದಿಂದ ಹೆಚ್ಚು ನೀರು ಬಿಡುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಸಾಕಷ್ಟು ಹಾನಿಯಾಗುತ್ತಿದೆ. ಸುಮಾರು 8.5 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಹಾನಿಯಾಗದೆ. ನಾನು ಸಿಎಂ ಆಗಿದ್ದಾಗ ಈ ವಿಷಯ ಗೊತ್ತಿರಲಿಲ್ಲ. ನಾನು ನೀರಾವರಿ ಮಂತ್ರಿಯೂ ಆಗಿರಲಿಲ್ಲ. ನಮ್ಮ ದಮ್ ಆಮೇಲೆ ನೋಡೊಣ. ದಮ್ಮು ತಾಕತ್ತಿನ ಬಗ್ಗೆ ಮಾತನಾಡುವವರಿಗೆ ಏನಾಗಿದೆ. ದಿನ ಬೆಳಗ್ಗೆ ಕೇಂದ್ರ ಸರ್ಕಾರ ಬೈದಾಡಿಕೊಂಡು ಓಡಾದ್ರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

    ಅವರು ದಿನಾ ಕೇಂದ್ರ ಸರ್ಕಾರ ಬೈದರೆ ನಾವು ಇಲ್ಲಿ ಮಾತನಾಡುವುದು ಹೇಗೆ? ಮೇಕೆದಾಟು ಬಗ್ಗೆ ಅವರು ಏನ್ ಮಾಡಿದ್ರು. ಎತ್ತಿನಹೊಳೆ ಯೋಜನೆಗೆ ಭೂಮಿ ಪೂಜೆ ಮಾಡಿದ್ದು ಯಾರು? ಸಿದ್ದರಾಮಯ್ಯ ಮೂರು ವರ್ಷದಲ್ಲಿ ನೀರು ಕೊಡ್ತೀನಿ ಅಂದ್ರು. ಎತ್ತಿನಹೊಳೆಯಲ್ಲಿ ಯಾರು ಹಿಡ್ಕೊಂಡ್ರು. ಕೇಂದ್ರ ಸರ್ಕಾರದ ಜೊತೆಗೆ ಉತ್ತಮ ಸಂಬಂಧ ಇಟ್ಟುಕೊಂಡು ಕೆಲಸ ಮಾಡಿದೆ. ನಮ್ಮ ದಮ್ಮು ತಾಕತ್ತು ತೋರಿಸಲು ಬಂದಿಲ್ಲ. ನನ್ನ ಇಲಾಖೆ ಮೂಲಕ ವಿಶ್ವೇಶ್ವರಯ್ಯ ಉಕ್ಕಿನ ಕಾರ್ಖಾನೆ, ಹೆಚ್.ಎಂಟಿಗೂ ಹೊಸ ಕಾಯಕಲ್ಪ ಕೊಡುವ ಬಗ್ಗೆ ಪ್ರಯತ್ನ ಮಾಡುತ್ತಿದ್ದೇನೆ. ರಸ್ತೆಯಲ್ಲಿ ನಿಂತು ಏನ್ ಮಾಡ್ತಿದ್ದೀರಿ ಅಂದ್ರೆ ಎಂದು ಸಿಎಂಗೆ ಟಾಂಗ್ ಕೊಟ್ಟಿದ್ದಾರೆ.

    ಬಿಡದಿ ಟೌನ್ ಶಿಫ್ ಸಣ್ಣ ಪುಟ್ಟವರು ಮಾತನಾಡಿದ್ದಕ್ಕೆ ಉತ್ತರ ಕೊಡುವ ಅಗತ್ಯ ಇಲ್ಲ. 2006 ರಲ್ಲಿ ಐದು ಟೌನ್ ಶಿಫ್ ಮಾಡಲು ನಿರ್ಧರಿಸಿದ್ದೆ. ಮೊದಲ ಯೋಜನೆ ಬಿಡದಿಯಲ್ಲಿ ಮಾಡುವ ಉದ್ದೇಶ ಹೊಂದಿದ್ದೆ. ನಾಲ್ಕೈದು ಸಭೆ ಮಾಡಿದ್ದೆ, ರೈತರ ಜೊತೆಗೆ ಮಾತನಾಡಿದ್ದೇನೆ. ಡಿಕೆ ಶಿವಕುಮಾರ್ ಅವರಿಗೆ ಕೇಳಲು ಬಯಸುತ್ತೇನೆ. ಹೆಚ್.ಕೆ ಪಾಟೀಲ್ ನೇತೃತ್ವದಲ್ಲಿ ಸತ್ಯಶೋಧನ ಸಮಿತಿ ಮಾಡಿದ್ರಲ್ಲ ಅದನ್ನು ತೆಗೆದು ನೋಡಿ. ನಾನು ಬೆಂಗಳೂರು ಭೂಮಿ ಹೊಡೆಯಲು ಪ್ರಯತ್ನ ಮಾಡಿದರು ಅಂದ್ರು. ಈಗ ನನ್ನ ಕನಸಿನ ಯೋಜನೆ ಜಾರಿ ಮಾಡಲು ಹೊರಟಿದ್ದಾರೆ. ನೀವು ಭೂಮಿ ಹೊಡೆಯಲು ಯೋಜನೆ ರೂಪಿಸುತ್ತಿದ್ದೀರಾ. ಎರಡು ವರ್ಷದಲ್ಲಿ ಇದು ಸಾಧ್ಯವಾ? ಭೂಸ್ವಾಧೀನ ಪ್ರಕ್ರಿಯೆ ನಾನು ಮಾಡಿರಲಿಲ್ಲ. ರೈತರನ್ನು ಆರ್ಥಿಕವಾಗಿ ಉಳಿಸಿಕೊಳ್ಳಲು ಸ್ವಾಧೀನ ಮಾಡಿರಲಿಲ್ಲ. ನೀವು 2000-3000 ಎಕರೆ ಏನ್ ಮಾಡಿದ್ದೀರಿ ಗೊತ್ತಿದೆ. ವ್ಯವಸ್ಥೆಯಲ್ಲಿ ನೀವು ಮಾಡಿದ ಕರ್ಮ ತೊಳೆಯಲು ಸಾಧ್ಯವಿಲ್ಲ. ಜನರು ಐದು ವರ್ಷ ಸಮಯ ಕೊಟ್ಟರೆ, ಕರ್ನಾಟಕ ಲೂಟಿ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು. ಹೆಚ್‌ಡಿಡಿ, ಹೆಚ್‌ಡಿಕೆ ಮುಗಿಸಲು ಈ ಸರ್ಕಾರ ಯಾವ ಪ್ರಯತ್ನ ಮಾಡ್ತಿದ್ದಾರೆ ಗೊತ್ತಿದೆ. ದೇವಸ್ಥಾನಕ್ಕೆ ಓಡಾಡಿ ಪೂಜೆ ಮಾಡ್ತರಲ್ಲ ಎದೆ ಮುಟ್ಟಿಕೊಂಡು ಹೇಳಲಿ. ಶಾಂತಿನಗರ ಸೊಸೈಟಿ ದಲಿತರಿಗೆ ಸೈಟ್ ಕೊಡಲು ಮಾಡಿದ್ದರು. ಬೇರೆ ಬೇರೆ ನಗರಗಳಲ್ಲಿ ಸೊಸೈಟಿಗಳ ಭೂಮಿ ಏನಾಗಿದೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರೌದ್ರರೂಪ ತಾಳಿದ ಭೀಮಾ ನದಿ – ಪ್ರವಾಹದಲ್ಲಿ ಸಿಲುಕಿದ್ದ 8 ಜನರ ರಕ್ಷಣೆ

    ದುಡ್ಡಿಗೆ ಸರ್ಕಾರ ಸಾಲ ಮಾಡಬೇಕಿಲ್ಲ. ಬೆಂಗಳೂರಿನಲ್ಲೇ ಸಾಕಷ್ಟು ಸಂಪತ್ತು ಇದೆ. ಇಡೀ ರಾಜ್ಯ ಅಭಿವೃದ್ಧಿ ಮಾಡುವ ಶಕ್ತಿ ಬೆಂಗಳೂರಿಗೆ ಇದೆ. ಆದರೆ, ಇದನ್ನು ಕೆಲವೇ ಕೆಲವು ವ್ಯಕ್ತಿಗಳು ಲೂಟಿ ಮಾಡುತ್ತಿದ್ದಾರೆ. ಈಗ ಸುರಂಗ ಮಾಡುತ್ತೇನೆ ಅನ್ನುತ್ತಾರೆ. ನಾನು ಸಾಕಷ್ಟು ಕೆಲಸ ಮಾಡಿದೆ, ಪ್ರಚಾರ ಪಡೆಯಲಿಲ್ಲ. ವೈಮಾನಿಕ ಸಮೀಕ್ಷೆ ಮಾಡಿ ಕೇಂದ್ರದ ಕಡೆ ಬೊಟ್ಟು ಮಾಡಬೇಡಿ, ನಿಮ್ಮ ಜವಾಬ್ದಾರಿ ಏನು? ಲೋಕಸಭೆಯಲ್ಲಿ ಐದು ಸ್ಥಾನ ಕೊಟ್ಟಿದ್ದಾರೆ ಖುಣ ತೀರಿಸಿ. ಬಡವರ ಉದ್ಧಾರಕ್ಕೆ ಜಾತಿ ಜನಗಣತಿಯೇ ಬೇಕಾ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

    ರಾಜಕೀಯ ತೆವಲಿಗೆ ಜಾತಿಗಣತಿ ಮಾಡಿ, ಜಾತಿ ಜಾತಿಗಳ ನಡುಗೆ ಸಂಘರ್ಷ ಏರ್ಪಡಿಸುತ್ತಿದ್ದಾರೆ. ತಕ್ಷಣ ಪರಿಹಾರ ನೀಡಬೇಕು. ಕುಣಿಗಲ್ ಅಲ್ಲ ಮಂಗಳೂರನ್ನು ಬೆಂಗಳೂರಿಗೆ ಸೇರಿಸ್ತಾರೆ. ಮಾಡೊ ಕೆಲಸ ಬಿಟ್ಟು ಅದನ್ನು ಸೇರಿಸ್ತೀನಿ, ತೆಗಿತೀನಿ ಅಂತಾ ಹೊರಟ್ಟಿದ್ದಾರೆ. ಅಲ್ಲಿ ಸಂಬಂಧಿ ಇದಾರಲ್ಲ ಅವರು ಒತ್ತಾಯ ಮಾಡಿರಬೇಕು. ನಾನು ನಿಮ್ಮ ಜೊತೆಗೆ ಲೂಟಿ ಹೊಡೆಯುತ್ತೇನೆ ಅಂದಿರಬೇಕು. ಬೆಂಗಳೂರು ಸೇರಿದರೆ ಭೂಮಿ ಬೆಲೆ ಬರುತ್ತಂತಲ್ಲ. ಅದಕ್ಕೆ ಬೆಂಗಳೂರಿಗೆ ಸೇರಿಸಲು ಹೊರಟಿರಬೇಕು ಎಂದು ಟಾಂಗ್ ಕೊಟ್ಟಿದ್ದಾರೆ.

  • ಜಾತಿಗಣತಿ ಸಮೀಕ್ಷೆಯಲ್ಲಿ ಜನರು ಭಾಗವಹಿಸಬೇಕೆಂಬ ಒತ್ತಾಯ ಇಲ್ಲ: ಸರ್ಕಾರ ಸ್ಪಷ್ಟನೆ

    ಜಾತಿಗಣತಿ ಸಮೀಕ್ಷೆಯಲ್ಲಿ ಜನರು ಭಾಗವಹಿಸಬೇಕೆಂಬ ಒತ್ತಾಯ ಇಲ್ಲ: ಸರ್ಕಾರ ಸ್ಪಷ್ಟನೆ

    – ಸಮೀಕ್ಷೆಯಲ್ಲಿ ಭಾಗವಹಿಸುವುದು ಕುಟುಂಬ & ಜನರ ಸ್ವ-ಇಚ್ಛೆಗೆ ಬಿಟ್ಟಿದ್ದು

    ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವಿಚಾರವಾಗಿ ರಾಜ್ಯದ ಜನತೆಗೆ ಹಿಂದುಳಿದ ವರ್ಗಗಳ ಆಯೋಗ ಬಿಗ್‌ ಅಪ್ಡೇಟ್‌ ನೀಡಿದೆ.

    ಸಮೀಕ್ಷೆಯಲ್ಲಿ ರಾಜ್ಯದ ಜನರು ಭಾಗವಹಿಸಲು ಒತ್ತಾಯ ಇಲ್ಲ. ಸಮೀಕ್ಷೆಯಲ್ಲಿ ಭಾಗವಹಿಸುವುದು ಕುಟುಂಬ ಮತ್ತು ಜನರ ಸ್ವಇಚ್ಛೆಗೆ ಬಿಟ್ಟಿದ್ದು ಎಂದು ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದೆ.

    ಒತ್ತಾಯವಾಗಿ ಸಮೀಕ್ಷೆಗೆ ಮಾಹಿತಿ ನೀಡಬೇಕು ಎಂದೇನಿಲ್ಲ. ಸಾರ್ವಜನಿಕರು ಸಮೀಕ್ಷೆಗೆ ಮಾಹಿತಿಯನ್ನ ಸ್ವಇಚ್ಛೆಯಿಂದ ನೀಡಬಹುದು ಅಥವಾ ನೀಡದೇನು ಇರಬಹುದು ಎಂದು ಆಯೋಗ ತಿಳಿಸಿದೆ.

    ಜಾತಿಗಣತಿ ಸಮೀಕ್ಷೆಗೆ ಸಂಬಂಧಿಸಿದಂತೆ ಶಿಕ್ಷಕರಿಂದ ಸಾಕಷ್ಟು ದೂರುಗಳು ಕೇಳಿಬರುತ್ತಿವೆ.‌ ಆ್ಯಪ್, ಸರ್ವರ್ ಸಮಸ್ಯೆ ಇದ್ದು, ಸರಿಯಾಗಿ ಸರ್ವೆ ನಡೆಸಲು ಆಗುತ್ತಿಲ್ಲ ಎಂದು ದೂರಿದ್ದಾರೆ.

  • ದಿ ಬಿ.ಸರೋಜಾದೇವಿ ಹೆಸರಿನಲ್ಲಿ `ಅಭಿನಯ ಸರಸ್ವತಿ’ ಪ್ರಶಸ್ತಿ ಘೋಷಿಸಿದ ರಾಜ್ಯ ಸರ್ಕಾರ

    ದಿ ಬಿ.ಸರೋಜಾದೇವಿ ಹೆಸರಿನಲ್ಲಿ `ಅಭಿನಯ ಸರಸ್ವತಿ’ ಪ್ರಶಸ್ತಿ ಘೋಷಿಸಿದ ರಾಜ್ಯ ಸರ್ಕಾರ

    • ಕನ್ನಡ ಚಿತ್ರರಂಗಕ್ಕೆ ಕನಿಷ್ಠ 25 ವರ್ಷಗಳ ಸೇವೆ ಸಲ್ಲಿಸಿರುವ ಸಾಧಕಿಯರಿಗೆ ಪ್ರಶಸ್ತಿ

    ಬೆಂಗಳೂರು: ಹಿರಿಯ ನಟಿ, ಪಂಚಭಾಷಾ ತಾರೆ ದಿವಂಗತ ಬಿ.ಸರೋಜಾದೇವಿ (B.Sarojadevi) ಅವರ ಹೆಸರಿನಲ್ಲಿ `ಅಭಿನಯ ಸರಸ್ವತಿ’ (Abhinaya Saraswati) ಪ್ರಶಸ್ತಿ ನೀಡುವುದಾಗಿ ರಾಜ್ಯ ಸರ್ಕಾರ (State Govt) ಘೋಷಿಸಿದೆ.

    ಕನ್ನಡ ಚಲನಚಿತ್ರ ನಟಿ, ಪಂಚಭಾಷಾ ತಾರೆ, ಪದ್ಮಶ್ರೀ ಹಾಗೂ ಪದ್ಮಭೂಷಣ ವಿಜೇತೆ ದಿವಂಗತ ಬಿ.ಸರೋಜಾದೇವಿ ಅವರು ಪಂಚಭಾಷಾ ತಾರೆಯಾಗಿದ್ದು, ಭಾರತೀಯ ಹಾಗೂ ಕನ್ನಡ ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ. ಅದನ್ನು ಪರಿಗಣಿಸಿ ಅವರು ಪಡೆದಿದ್ದ “ಅಭಿನಯ ಸರಸ್ಕೃತಿ” ಬಿರುದಿನ ಹೆಸರಿನಲ್ಲಿ ಕನ್ನಡ ಚಿತ್ರರಂಗಕ್ಕೆ ಕನಿಷ್ಠ 25 ವರ್ಷಗಳ ಅವಿಸ್ಮರಣೀಯ ಸೇವೆ ಸಲ್ಲಿಸಿರುವ ಮಹಿಳೆಯರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗುವುದು. ಪ್ರಸ್ತುತ ಜಾರಿಯಲ್ಲಿರುವ ಕನ್ನಡ ಚಲನಚಿತ್ರ ನೀತಿ-2011ರಲ್ಲಿನ ವಾರ್ಷಿಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿ ಅನುಬಂಧ-1ರಡಿ ಜಾರಿಗೆ ತರಲಾಗಿದೆ.ಇದನ್ನೂ ಓದಿ: ಸಾಹಸಸಿಂಹ ವಿಷ್ಣುವರ್ಧನ್‌, ಬಿ.ಸರೋಜಾದೇವಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಣೆ

    ಈ ಪ್ರಶಸ್ತಿಯಡಿಯಲ್ಲಿ 1 ಲಕ್ಷ ರೂ. ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

  • ಅಂಜನಾದ್ರಿ ಬೆಟ್ಟ ಸೇರಿ ರಾಜ್ಯದ 11 ಪ್ರವಾಸಿತಾಣಗಳ ರೋಪ್ ವೇಗೆ ಸರ್ಕಾರ ಅನುಮೋದನೆ

    ಅಂಜನಾದ್ರಿ ಬೆಟ್ಟ ಸೇರಿ ರಾಜ್ಯದ 11 ಪ್ರವಾಸಿತಾಣಗಳ ರೋಪ್ ವೇಗೆ ಸರ್ಕಾರ ಅನುಮೋದನೆ

    ಸಿಎಂ ನೇತೃತ್ವದ ಸಭೆಯಲ್ಲಿ ನಿರ್ಧಾರ

    ಬೆಂಗಳೂರು: ಅಂಜನಾದ್ರಿ ಬೆಟ್ಟ (Anjanadri Hill) ಸೇರಿ ರಾಜ್ಯದ 11 ಪ್ರವಾಸಿ ತಾಣಗಳಿಗೆ ರೋಪ್ ವೇ (Rope Way) ನಿರ್ಮಿಸಲು ಸರ್ಕಾರ ಅನುಮೋದನೆ ನೀಡಿದೆ.

    ಅಂಜನಾದ್ರಿ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕಾವೇರಿ ನಿವಾಸದಲ್ಲಿ ಬುಧವಾರ (ಸೆ.3) ಮಹತ್ವದ ಸಭೆ ನಡೆಯಿತು. ಈ ವೇಳೆ ಅಂಜನಾದ್ರಿ ಬೆಟ್ಟ ಸೇರಿ ರಾಜ್ಯದ 11 ಪ್ರವಾಸಿ ತಾಣಗಳಿಗೆ ರೋಪ್ ವೇ ನಿರ್ಮಿಸಲು ಸರ್ಕಾರ ಅನುಮೋದನೆ ನೀಡಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ರೋಪ್ ವೇಗಳನ್ನು ಅಭಿವೃದ್ಧಿಪಡಿಸಲು ಸರ್ಕಾರದ ಅನುಮೋದನೆ ನೀಡಲಾಗಿರುತ್ತದೆ ಎಂದು ಸಿಎಂ ಕಚೇರಿ ಮಾಧ್ಯಮ ಪ್ರಕಟಣೆ ತಿಳಿಸಿದೆ.ಇದನ್ನೂ ಓದಿ: ಕಿಚ್ಚನ ಮಾರ್ಕ್ ಟೈಟಲ್ ಟೀಸರ್‌ಗೆ ಫುಲ್ ಮಾರ್ಕ್ಸ್

    ಅಂಜನಾದ್ರಿ ಬೆಟ್ಟದ ಪ್ರವಾಸೋದ್ಯಮ ಮತ್ತು ಪೌರಾಣಿಕ ಹಾಗೂ ಆಧ್ಯಾತ್ಮಿಕ ಮಹತ್ವವನ್ನು ತಿಳಿಸುವ ರೀತಿಯಲ್ಲಿ ಅಭಿವೃದ್ಧಿಗೊಳಿಸಬೇಕು ಸಿಎಂ ಸೂಚಿಸಿದ್ದಾರೆ. ಅಲ್ಲದೆ ವಯಸ್ಕರು ಬೆಟ್ಟದ ತುದಿಗೆ ತಲುಪಲು ಅಗತ್ಯವಾದ ಸವಲತ್ತುಗಳನ್ನು ಕಲ್ಪಿಸುವುದು ಹಾಗೂ ಇದಕ್ಕಾಗಿ ಪ್ರದಕ್ಷಿಣೆ ಮಾರ್ಗ ನಿರ್ಮಿಸುವ ಬಗ್ಗೆ ಚರ್ಚೆ ನಡೆದಿದೆ.

    ಹನುಮ ಜಯಂತಿ ಸಂದರ್ಭದಲ್ಲಿ ಲಕ್ಷಾಂತರ ಜನರು ಬೆಟ್ಟಕ್ಕೆ ಭೇಟಿ ನೀಡುತ್ತಾರೆ. ಉತ್ತರ ಭಾರತದ ಪ್ರವಾಸಿಗರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಯಾತ್ರಿಕರು ಉಳಿದುಕೊಳ್ಳಲು ವಸತಿ ವ್ಯವಸ್ಥೆ, ಹಿರಿಯ ಭಕ್ತಾಧಿಗಳು ಬೆಟ್ಟವೇರಲು ಅನುಕೂಲವಾಗುವಂತೆ ಮೆಟ್ಟಿಲುಗಳ ವ್ಯವಸ್ಥೆ, ಸಮುದಾಯ ಭವನ ನಿರ್ಮಾಣ ಹಾಗೂ ಇತರ ಪ್ರವಾಸಿ ಸೌಲಭ್ಯಗಳು ಸೇರಿ ಕ್ಷೇತ್ರದ ಸುತ್ತಮುತ್ತ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕಿದೆ ಎಂದು ಸಿಎಂ ತಿಳಿಸಿದ್ದಾರೆ.

    ಸದರಿ ಕ್ಷೇತ್ರಕ್ಕೆ ಹಂತ-1 ಮತ್ತು ಹಂತ-2ರಲ್ಲಿ 200 ಕೋಟಿ ರೂ.ಗಳ ಕಾಮಗಾರಿ ಮಂಜೂರಾಗಿದ್ದು, ಈವರೆಗೆ ಸದರಿ ಕಾಮಗಾರಿಗಳಿಗೆ 10 ಕೋಟಿ ರೂ.ಯನ್ನು ಇಲಾಖೆಯಿಂದ ಬಿಡುಗಡೆ ಮಾಡಲಾಗಿದೆ. ಬಾಕಿ ಅನುದಾನ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯಿಂದ ಹೆಚ್ಚುವರಿ ಅನುದಾನ ಒದಗಿಸಬೇಕು. ಮಂಜೂರಾಗಿರುವ ಬಹುತೇಕ ಕಾಮಗಾರಿಗಳನ್ನು ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವ ಜಮೀನುಗಳಲ್ಲಿ ಕೈಗೊಳ್ಳಬೇಕಿರುವುದರಿಂದ, ಎಲ್ಲಾ ಕಾಮಗಾರಿಗಳನ್ನು ಕೈಗೊಳ್ಳಲು ಅರಣ್ಯ ಇಲಾಖೆಯು ಎನ್‌ಓಸಿ ನೀಡಬೇಕು ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ.

    ಸಭೆಯಲ್ಲಿ ಸಚಿವರಾದ ಹೆಚ್.ಕೆ ಪಾಟೀಲ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಹಾಗೂ ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.ಇದನ್ನೂ ಓದಿ: ಮುಂದಿನ ಮೂರ್ನಾಲ್ಕು ದಿನ ಬೆಂಗ್ಳೂರಿಗೆ ಮಳೆ ಅಲರ್ಟ್‌

  • ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತರ ಸಾಮೂಹಿಕ ಮದುವೆ, ಪ್ರತಿ ಜೋಡಿಗೆ 50 ಸಾವಿರ – ಸರ್ಕಾರದ ಮಂಜೂರಾತಿ

    ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತರ ಸಾಮೂಹಿಕ ಮದುವೆ, ಪ್ರತಿ ಜೋಡಿಗೆ 50 ಸಾವಿರ – ಸರ್ಕಾರದ ಮಂಜೂರಾತಿ

    ಬೆಂಗಳೂರು: ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತ ಸಮುದಾಯದವರ ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡಲು ಪ್ರತಿ ಜೋಡಿಗೆ 50 ಸಾವಿರ ರೂ. ಕೊಡುವ ಕಾರ್ಯಕ್ರಮಕ್ಕೆ ಸರ್ಕಾರದ ಮಂಜೂರಾತಿ ದೊರೆತಿದೆ.ಇದನ್ನೂ ಓದಿ: ಬೆಂಗಳೂರಿಗೆ ಮತ್ತೊಂದು ಟನಲ್‌ ರೋಡ್‌ ಘೋಷಿಸಿದ ಡಿಕೆಶಿ

    ರಾಜ್ಯ ಬಜೆಟ್‌ನಲ್ಲಿ ಈ ಕುರಿತು ಘೋಷಿಸಲಾಗಿತ್ತು. ಇದೀಗ ಸರ್ಕಾರಿ ಆದೇಶ ಹೊರಬಿದ್ದಿದೆ. ಈ ಯೋಜನೆಯಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತ ಸಮುದಾಯದವರ ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡಲು ಸ್ವಯಂಸೇವಾ ಸಂಸ್ಥೆಗಳ ಮೂಲಕ ನಡೆಯುವ ಸಾಮೂಹಿಕ ವಿವಾಹ ವೆಚ್ಚಗಳಿಗಾಗಿ ಪ್ರತಿ ಜೋಡಿಗೆ 50 ಸಾವಿರ ರೂ. ಮತ್ತು ಕಾರ್ಯಕ್ರಮ ಆಯೋಜಿಸುವ ಸಂಸ್ಥೆಗೆ, ಪ್ರತಿ ಜೋಡಿಗೆ 5 ಸಾವಿರ ರೂ. ನೀಡುವ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ. ಜೊತೆಗೆ 5 ಸಾವಿರ ಜೋಡಿ ಮಿತಿವರೆಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ಮಾಡಬಹುದಾಗಿದೆ ಎಂದು ತಿಳಿಸಿದೆ.

    ಇದೇ ಸಂದರ್ಭದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 250 ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಮಾದರಿ ಶಾಲೆಗಳಲ್ಲಿ ಹಂತ ಹಂತವಾಗಿ ಪಬ್ಲಿಕ್ ಶಾಲೆಗಳ ಮಾದರಿಯಲ್ಲಿ ಪೂರ್ವ ಪ್ರಾಥಮಿಕ ಹಂತದಿಂದ ಪಿಯುವರೆಗೆ ತರಗತಿ ಪ್ರಾರಂಭಿಸಲು ಘೋಷಿಸಲಾಗಿತ್ತು. ಪ್ರಸಕ್ತ ವರ್ಷ 100 ಆಜಾದ್ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಮೇಲ್ದರ್ಜೆಗೇರಿಸಲು ಆದೇಶ ಹೊರಡಿಸಲಾಗಿದೆ.ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ | ಕುನ್ಹಾ ಆಯೋಗದ ವರದಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿ – ರಾಜ್ಯಕ್ಕೆ ಹೈಕೋರ್ಟ್ ಸೂಚನೆ

  • ನಾನು ಹೂತಿಟ್ಟ ಶವಗಳಲ್ಲಿ ಮಹಿಳೆಯರದ್ದೇ ಹೆಚ್ಚು.. ನನಗೆ ಪಾಪಪ್ರಜ್ಞೆ ಕಾಡುತ್ತಿದೆ: ದೂರುದಾರ ಹೇಳಿದ್ದೇನು?

    ನಾನು ಹೂತಿಟ್ಟ ಶವಗಳಲ್ಲಿ ಮಹಿಳೆಯರದ್ದೇ ಹೆಚ್ಚು.. ನನಗೆ ಪಾಪಪ್ರಜ್ಞೆ ಕಾಡುತ್ತಿದೆ: ದೂರುದಾರ ಹೇಳಿದ್ದೇನು?

    – ಜೀವ ಭಯದಿಂದ 11 ವರ್ಷಗಳ ಹಿಂದೆ ಧರ್ಮಸ್ಥಳ ತೊರೆದೆ ಎಂದ ಅನಾಮಿಕ ವ್ಯಕ್ತಿ

    ಮಂಗಳೂರು: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಧರ್ಮಸ್ಥಳ (Dharmasthala Mass Burials) ಭಾಗದಲ್ಲಿ ನೂರಾರು ಶವಗಳ ಹೂತಿರುವುದಾಗಿ ಅನಾಮಿಕ ವ್ಯಕ್ತಿ, ದಕ್ಷಿಣ ಕನ್ನಡ ಎಸ್‌ಪಿ ಮುಂದೆ ಹೇಳಿಕೆ ನೀಡಿದ್ದಾರೆ.

    ದೂರುದಾರನ ಹೇಳಿಕೆಯಲ್ಲೇನಿದೆ?
    1995ರಿಂದ 2014ರವರೆಗೆ ಧರ್ಮಸ್ಥಳದ ನೌಕರನಾಗಿದ್ದೆ. ನಾನು ಹಲವು ಶವಗಳನ್ನು ವಿಲೇವಾರಿ ಮಾಡಿದ್ದೇನೆ. ಹೂತಿಟ್ಟ ಶವಗಳಲ್ಲಿ ಮಹಿಳೆಯರದ್ದೇ ಹೆಚ್ಚು. ಇವೆಲ್ಲ ಅನಾಥ ಶವಗಳು ಅಂತ ನಾನು ಭಾವಿಸಿದ್ದೆ. ಆನಂತರ ನನಗೆ ಅನುಮಾನ ಬರಲು ಶುರುವಾಯ್ತು. ಕೆಲ ಮಹಿಳೆಯರ ಶವಗಳು ನಗ್ನ ಸ್ಥಿತಿಯಲ್ಲಿದ್ದವು. ಲೈಂಗಿಕ ಆಕ್ರಮಣ, ಹಿಂಸೆಯ ಕುರುಹುಗಳಿದ್ದವು. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ- ಎಸ್‍ಐಟಿ ರಚಿಸಿದ ಸರ್ಕಾರ

    ನಾನು ಪೊಲೀಸರಿಗೆ ಹೇಳಲು ಮುಂದಾದಾಗ ನನ್ನ ಮೇಲೆ ಹಲ್ಲೆ ಮಾಡಿದರು. ಶವ ಹೂತಿಟ್ಟ ವಿಚಾರ ಬಯಲು ಮಾಡದಂತೆ ಬೆದರಿಸಿದರು. ನಿನ್ನನ್ನೂ ಹೂತು ಹಾಕುತ್ತೇನೆ ಅಂತ ಬೆದರಿಕೆ ಹಾಕಿದರು. ನಾನು ಜೀವ ಭಯದಿಂದ 11 ವರ್ಷಗಳ ಹಿಂದೆ ಧರ್ಮಸ್ಥಳ ತೊರೆದೆ. ಈಗ ನನಗೆ ಪಾಪಪ್ರಜ್ಞೆ ಕಾಡುತ್ತಿದೆ. ಕೊಲೆಪಾತಕರು, ಅತ್ಯಾಚಾರಿಗಳು ಯಾರೆಂದು ಗೊತ್ತಾಗಬೇಕು.

    ಹೂತು ಹಾಕಿರುವ ಸ್ಥಳವನ್ನು ತೋರಿಸಲು ನಾನು ಸಿದ್ಧ. ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿ ಎಂದು ದೂರುದಾರ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಕೇಸ್‌ | ಎಸ್‍ಐಟಿ ತನಿಖೆಗೆ ಸೌಜನ್ಯ ಕೇಸ್‌ ಇಲ್ಲ: ಪರಮೇಶ್ವರ್‌

    ಧರ್ಮಸ್ಥಳ ಭಾಗದಲ್ಲಿ ಅಪರಿಚಿತ ಶವಗಳನ್ನು ಹೂತುಹಾಕಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯ ಸರ್ಕಾರ, ಎಸ್‌ಐಟಿ ರಚಿಸಿದೆ. ಹಿರಿಯ ಐಪಿಎಸ್ ಅಧಿಕಾರಿ ಪ್ರಣಬ್ ಮೊಹಂತಿ ನೇತೃತ್ವದಲ್ಲಿ ಎಸ್‌ಐಟಿ ರಚನೆ ಮಾಡಲಾಗಿದೆ. ಐಪಿಎಸ್ ಅಧಿಕಾರಿಗಳಾದ ಅನುಚೇತ್, ಸೌಮ್ಯಲತಾ ಮತ್ತು ಜಿತೇಂದ್ರ ಕುಮಾರ್ ದಯಾಮಾ ತನಿಖಾ ತಂಡದಲ್ಲಿದ್ದಾರೆ.