ಬೆಂಗಳೂರು: ಅರ್ಕಾವತಿ ಡಿನೋಟಿಫಿಕೇಷನ್, ಮುಡಾ ಸೈಟ್ ಹಗರಣ ವಿವಾದ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ಈಗ ಹೊಸದಾಗಿ 500 ಕೋಟಿ ಮೊತ್ತದ ಕಿಕ್‌ಬ್ಯಾಕ್ ಆರೋಪ ಕೇಳಿ ಬಂದಿದೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಸಾಮಾಜಿಕ ಕಾರ್ಯಕರ್ತ ರಾಮಮೂರ್ತಿಗೌಡ ಪತ್ರ ಬರೆದಿದ್ದಾರೆ.
ಈ ಸಂಬಂಧ ದೂರುದಾರರ ಜೊತೆ ರಾಜ್ಯಪಾಲರು ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ. ದೂರಿನ ಮೇಲೆ ಸಹಿ ಮಾಡಿ ಕಾನೂನು ವಿಭಾಗದ ಅಭಿಪ್ರಾಯಕ್ಕೆ ಕಳಿಸಿದ್ದಾರೆ. ಸಾಲಿಸಿಟರ್ ಜನರಲ್ ಬಳಿ ಚರ್ಚೆ ನಡೆಸಿ ತೀರ್ಮಾನ ಮಾಡುವುದಾಗಿ ತಿಳಿದ್ದಾರೆ. ಅಲ್ಲದೆ, ದಾಖಲೆ ಪರಿಶೀಲಿಸಿ ವರದಿ ನೀಡಲು ಸಾಲಿಸಿಟರ್ ಜನರಲ್‌ಗೆ ತಿಳಿಸಿದ್ದಾರೆ.
ಸಿಎಂ ವಿರುದ್ಧದ ಆರೋಪಗಳೇನು..?
* ಸಿಎಂ ವಿರುದ್ಧ 500 ಕೋಟಿ ಕಿಕ್‌ಬ್ಯಾಕ್ ಆರೋಪ
* ಗಣಿ ಗುತ್ತಿಗೆ ನವೀಕರಣ ಹೆಸರಲ್ಲಿ ಕಿಕ್‌ಬ್ಯಾಕ್ ಆರೋಪ
* 2015ರಲ್ಲಿ 8 ಗಣಿ ಗುತ್ತಿಗೆ ನವೀಕರಣ
* ಹರಾಜು ಮೂಲಕ ಗಣಿ ಹಂಚಿಕೆ ಮಾಡಬೇಕೆಂಬ ಕೇಂದ್ರದ ನೀತಿ ಉಲ್ಲಂಘನೆ
* 2,386 ಎಕರೆ ಭೂಮಿಯನ್ನು 8 ಕಂಪೆನಿಗಳಿಗೆ ಹಂಚಿಕೆ
* ರಾಮಗಡ್ ಮಿನರಲ್ಸ್ ಸೇರಿ 8 ಗಣಿ ಗುತ್ತಿಗೆ ನವೀಕರಣದಲ್ಲಿ ಕಿಕ್‌ಬ್ಯಾಕ್
* ಸಿಬಿಐ ತನಿಖೆ ಎದುರಿಸುತ್ತಿರುವ ರಾಮ್‌ಗಡ ಮಿನರಲ್ಸ್
* ಹರಾಜು ಹಾಕುವ ಬದಲಿಗೆ ನವೀಕರಣ
* ಇದರಿಂದ ಸರ್ಕಾರಕ್ಕೆ 5000 ಕೋಟಿ ನಷ್ಟ
ನವದೆಹಲಿ: ಮೂಡಾ ಭ್ರಷ್ಟಚಾರ ಆರೋಪದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ವಿರುದ್ಧ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರಿಗೆ ದೂರು ನೀಡಲಾಗಿದೆ. ದೆಹಲಿಯಲ್ಲಿ ಅಹಿಂದಾ ಚಳುವಳಿ ಸಂಘಟನೆಯ ರಾಜ್ಯ ಮುಖ್ಯ ಜಂಟಿ ಸಂಚಾಲಕ ಎನ್.ವೆಂಕಟೇಶಗೌಡ (Venkatesh Gowda), ಯುವ ಘಟಕದ ರಾಜ್ಯಧ್ಯಕ್ಷ ಬಿ.ಟಿ.ಮಂಜುನಾಥ್‌ರಿಂದ ದೂರು ನೀಡಲಾಗಿದೆ.
ಖಾಸಗಿ ದೂರಿನ ಮೇರೆಗೆ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಸರಿಯಲ್ಲ. ಬಿಜೆಪಿ-ಜೆಡಿಎಸ್ ಒತ್ತಡಕ್ಕೆ ಮಣಿದು ಅನುಮತಿ ನೀಡಿದೆ. ರಾಜ್ಯಪಾಲರ ಕಚೇರಿ ರಾಜಕೀಯವಾಗಿ ದುರ್ಬಳಕೆಯಾಗುತ್ತಿದ್ದು, ಕೂಡಲೇ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ದೂರಿನ ಪ್ರತಿಯಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ಮೋದಿ ಉತ್ತರಾಧಿಕಾರಿ ಯಾರು? ಅಮಿತ್ ಶಾ, ಗಡ್ಕರಿ, ಯೋಗಿ.. ಯಾರಿಗೆ ಹೆಚ್ಚು ಜನರ ಒಲವು?
ದೂರಿನ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅಹಿಂದಾ ಚಳುವಳಿ ಸಂಘಟನೆಯ ರಾಜ್ಯ ಮುಖ್ಯ ಜಂಟಿ ಸಂಚಾಲಕ ಎನ್.ವೆಂಕಟೇಶಗೌಡ, ಸಿಎಂ ಸಿದ್ದರಾಮಯ್ಯ ದೇಶದಲ್ಲಿ ಮಾದರಿ ಆಡಳಿತ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಓಬಿಸಿ ಜನರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಎರಡನೇ ಅವಧಿಯಲ್ಲಿ ಸಾಕಷ್ಟು ಜನಪ್ರಿಯ ಯೋಜನೆಗಳನ್ನು ಜಾರಿ ಮಾಡಿದ್ದಾರೆ.
ಈ ಅಭಿವೃದ್ಧಿಯನ್ನು ಸಹಿಸದೇ ಬಿಜೆಪಿ ಮತ್ತು ಜೆಡಿಎಸ್ ಸಿದ್ದರಾಮಯ್ಯ ಅವರಿಂದ ಮುಖ್ಯಮಂತ್ರಿ ಸ್ಥಾನ ಕಸಿದುಕೊಳ್ಳುವ ಹುನ್ನಾರ ಮಾಡಿದ್ದು, ಈ ಮೂಲಕ ಬಡ ಸಮುದಾಯಗಳ ಶಕ್ತಿ ಕುಂದಿಸುವ ತಂತ್ರ ಮಾಡಿವೆ. ರಾಜಕೀಯ ಒತ್ತಡಕ್ಕೆ ಮಣಿದು ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಇದು ಕಾನೂನು ಬಾಹಿರ ನಡೆಯಾಗಿದ್ದು, ಕೂಡಲೇ ರಾಷ್ಟ್ರಪತಿಗಳು ರಾಜ್ಯಪಾಲರ ಕಚೇರಿ ದುರ್ಬಳಕೆ ತಡೆಯಬೇಕು ಮತ್ತು ರಾಜ್ಯಪಾಲರನ್ನು ವಾಪಸ್ ಕರೆಸುಕೊಳ್ಳಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: Kolkata Horror | 36 ಗಂಟೆಗಳ ಅಮಾನುಷ ಶಿಫ್ಟ್ ಸರಿಯಲ್ಲ ಎಂದ ಸುಪ್ರೀಂ – ಸುಳ್ಳುಪತ್ತೆ ಪರೀಕ್ಷೆಗೆ ಅಸ್ತು!
ಬೆಂಗಳೂರು: ರಾಜ್ಯಪಾಲರ ಬಗ್ಗೆ ಅಪಮಾನಕರ ಹೇಳಿಕೆಗಳನ್ನು ನೀಡಿರುವ ಕಾಂಗ್ರೆಸ್ ನಾಯಕರ ವಿರುದ್ಧ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಬಿಜೆಪಿ (BJP) ದೂರು ನೀಡಿದೆ.
ಇಂದು ಮಧ್ಯಾಹ್ನ ಬೆಂಗಳೂರಿನ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ಭೇಟಿ ನೀಡಿದ ಸಂಸದ ಗೋವಿಂದ ಕಾರಜೋಳ, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ನಿಯೋಗ ದೂರು ದಾಖಲಿಸಿದೆ. ದಲಿತ ವರ್ಗದ ರಾಜ್ಯಪಾಲರ ಬಗ್ಗೆ ಅವಾಚ್ಯ ಶಬ್ಧ ಬಳಸಿ ನಿಂದನೆ, ಫೋಟೋಗೆ ಚಪ್ಪಲಿಯಲ್ಲಿ ಹೊಡೆದಿದ್ದು, ಬಾಂಗ್ಲಾ ಪ್ರಧಾನಿ ಪರಿಸ್ಥಿತಿ ಬರುವ ಬೆದರಿಕೆ ಹೇಳಿಕೆಗಳ ವಿರುದ್ಧ ದೂರು ಕೊಡಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್‌ನವರದ್ದು ಅಂಬೇಡ್ಕರ್‌ರನ್ನ ಅವಮಾನಿಸಿದ ಸಂಸ್ಕೃತಿ, ರಾಜ್ಯಪಾಲರ ಅಪಮಾನ ಸಹಿಸಲ್ಲ: ಗೋವಿಂದ ಕಾರಜೋಳ
ಸಲೀಂ ಅಹಮದ್, ಜಮೀರ್ ಅಹಮದ್, ಐವಾನ್ ಡಿಸೋಜ, ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ, ಕೆ.ವೈ.ನಂಜೇಗೌಡ ಸೇರಿ ಮತ್ತಿತರ ಜಾತಿ ನಿಂದನೆ ಹಾಗೂ ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸಲು ದೂರಿನಲ್ಲಿ ಮನವಿ ಮಾಡಲಾಗಿದೆ.
ದೂರಿನ ಬಳಿಕ ಮಾತಾಡಿದ ಸಂಸದ ಕಾರಜೋಳ, ನಿನ್ನೆ ರಾಜ್ಯಪಾಲರ ವಿರುದ್ಧ ಸರ್ಕಾರಿ ಪ್ರೇರಿತ ಪ್ರತಿಭಟನೆ ನಡೆಸಲಾಯಿತು. ರಾಜ್ಯಪಾಲರ ವಿರುದ್ಧ ನಿಂದಿಸಲಾಯ್ತು, ಧಮಕಿ ಹಾಕಲಾಯ್ತು. ಫೋಟೋಗೆ ಚಪ್ಪಲಿಯಲ್ಲಿ ಹೊಡೆದರು. ಐವಾನ್ ಡಿಸೋಜಾ ಉಗ್ರರ ರೀತಿ ಬೆದರಿಕೆ ಹಾಕಿದ್ದಾರೆ. ಅವನಿಗೆ ಪಾಕ್ ಉಗ್ರರ ನಂಟಿದೆ. ಕೂಡಲೇ ಗೂಂಡಾ ಕಾಯ್ದೆಯಡಿ ಬಂಧಿಸಬೇಕು. ಎಲ್ಲರ ವಿರುದ್ಧ ಕೇಸ್ ದಾಖಲಿಸುವಂತೆ ಡಿಜಿಪಿಗೆ ದೂರು ಕೊಟ್ಟಿದ್ದೇವೆ ಎಂದರು. ಇದನ್ನೂ ಓದಿ: ಚಾರ್ಜ್‌ಶೀಟ್‌ನಲ್ಲಿ ಹೆಸರಿರುವ ಕುಮಾರಸ್ವಾಮಿ ಕೇಂದ್ರ ಸಚಿವರಾಗಬಹುದಾ: ಪೊನ್ನಣ್ಣ ಪ್ರಶ್ನೆ
ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ದೂರಿನಲ್ಲಿ ಕೆಲವರ ಹೆಸರಿದೆ. ಇನ್ನೂ ಯಾರ‍್ಯಾರು ರಾಜ್ಯಾದ್ಯಂತ ಪ್ರತಿಭಟನೆ ವೇಳೆ ಅವಹೇಳನ ಮಾಡಿದ್ದಾರೋ ಅವರೆಲ್ಲರ ವಿರುದ್ಧ ಕ್ರಮ ಆಗಬೇಕು ಅಂತಾ ಮನವಿ ಮಾಡಿದ್ದೇವೆ. ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡ್ತೇವೆ. ಡಿಜಿಪಿಯವರು ಈ ದೂರನ್ನು ಗಂಭೀರವಾಗಿ ಪರಿಗಣಿಸಬೇಕು. ಅವರೆಲ್ಲರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
– ಕಾಂಗ್ರೆಸ್ ಹೈಕಮಾಂಡ್, ಕ್ಯಾಬಿನೆಟ್ ಸಚಿವರು ನನ್ನ ಪರ ಇದ್ದಾರೆ – ರಾಜೀನಾಮೆ ಕೊಡುವ ತಪ್ಪು ಮಾಡಿಲ್ಲ
ಬೆಂಗಳೂರು: ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ಕೊಟ್ಟಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ (Siddaramaiah) ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ವಿರುದ್ಧ ನಡೆದಿರುವ ದೊಡ್ಡ ಷಡ್ಯಂತ್ರ ಇದು. ಕಾನೂನಿನ ಅಡಿಯಲ್ಲಿ ಹೋರಾಟ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ರಾಜ್ಯಪಾಲರು ದೂರು ಬಂದ ದಿನವೇ ಶೋಕಾಸ್ ನೋಟಿಸ್ ಕೊಡಲು ತಯಾರಿ ಮಾಡ್ಕೊಂಡಿದ್ದರು. ಇದರ ಅರ್ಥ ಏನು? ನಿರಾಣಿ, ಜೊಲ್ಲೆ, ರೆಡ್ಡಿ, ಹೆಚ್ಡಿಕೆ ಮೇಲೆಯೂ ಪ್ರಾಸಿಕ್ಯೂಷನ್‌ಗೆ ಅನುಮತಿ ಬಾಕಿ ಇದೆ. ಅವರೆಲ್ಲರನ್ನೂ ಬಿಟ್ಟು ನನಗೆ ಕೊಟ್ಟಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.
ಇದು ದೊಡ್ಡ ಷಡ್ಯಂತ್ರ. ನನಗೆ ಮೊದಲ ಶೋಕಸ್ ನೋಟಿಸ್ ನೀಡಿದಾಗಲೇ ಇದನ್ನ ನಿರೀಕ್ಷೆ ಮಾಡಿದ್ದೆ. ರಾಜ್ಯಪಾಲರನ್ನ ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ನಾನು ಕಾನೂನಿನ ಅಡಿಯಲ್ಲಿ ಹೋರಾಟ ಮಾಡುತ್ತೇನೆ. ಅನೇಕ ರಾಜ್ಯಗಳಲ್ಲಿ ಸರ್ಕಾರ ತೆಗೆಯುವ ಪ್ರಯತ್ನ ಮಾಡಿದ್ದಾರೆ. ಇಲ್ಲೂ ಹೀಗೇ ಮಾಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಮೋದಿ ಸರ್ಕಾರದಿಂದ ರಾಜಕೀಯ, ವೈಯಕ್ತಿಕ ಸೇಡು: ಸುರ್ಜೇವಾಲ
ರಾಜ್ಯಪಾಲರ ನಿರ್ಧಾರ ಸಂವಿಧಾನಬಾಹಿರ ಕೋರ್ಟ್‌ನಲ್ಲಿ ರಾಜ್ಯಪಾಲರ ನಿರ್ಧಾರ ಪ್ರಶ್ನೆ ಮಾಡ್ತೇವೆ. ಎಲ್ಲರೂ ನನ್ನ ಪರ ಇದ್ದಾರೆ. ಹೈಕಮಾಂಡ್ ನನ್ನ ಪರ ಇದೆ. ರಾಜೀನಾಮೆ ಕೊಡೋ ತಪ್ಪು ಮಾಡಿಲ್ಲ ಎಂದು ತಿಳಿಸಿದ್ದಾರೆ.
ಹೀಗಾಗಿಯೇ ರಾಜಭವನದ ಮೇಲೆ ಸಚಿವರು ಸಂಶಯ ವ್ಯಕ್ತಪಡಿಸಿದ್ದಾರೆ. ಇ.ಡಿ ಜೊತೆಗೆ ರಾಜಭವನದ ದುರುಪಯೋಗ ಆಗ್ತಿದೆ ಅಂತಾ ಆರೋಪಿಸಿ ಗರಂ ಆಗಿದ್ದಾರೆ. ಈ ನಡುವೆ ಮುಡಾ ವಿಚಾರದಲ್ಲಿ ಪ್ರಾಸಿಕ್ಯೂಶನ್‌ಗೆ ಅನುಮತಿ ಕೊಡುವುದರ ವಿರುದ್ಧ ನಾಳೆ ಕ್ಯಾಬಿನೆಟ್‌ನಲ್ಲಿ ವಿರೋಧಿ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಕ್ಯಾಬಿನೆಟ್ ನಿರ್ಣಯದ ವೇಳೆ ಸಿಎಂ ಸಿದ್ದರಾಮಯ್ಯ ಸಭೆಯಿಂದ ಹೊರಗುಳಿಯಲಿದ್ದಾರೆ ಎನ್ನಲಾಗಿದೆ. ಇದೀಗ ಬಿಜೆಪಿಗರು ಪ್ರತಿ ದಾಳಿಗೆ ನಿಂತಿದ್ದಾರೆ. ಆದರೆ ವಾಲ್ಮೀಕಿ ನಿಗಮ ಹಗರಣ ಸಂಬಂಧ ಸಿಎಂ ವಿರುದ್ಧ ಪ್ರಾಸಿಕ್ಯೂಶನ್‌ಗೆ ಈವರೆಗೂ ಇ.ಡಿ ಅನುಮತಿ ಕೇಳಿಲ್ಲ. ಇದನ್ನೂ ಓದಿ: ಆರಗ ಜ್ಞಾನೇಂದ್ರ, ತಂಡದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಹ ಅಧ್ಯಯನ
ಇದರ ಮಧ್ಯೆಯೇ, ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ. ನೀರಾವರಿ ಮತ್ತು ಬೆಂಗಳೂರು ಅಭಿವೃದ್ಧಿ ಸಂಬAಧ ಪ್ರಧಾನಿಗಳ ಜೊತೆ ಡಿಸಿಎಂ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ಉತ್ತಮ ಸಮಾಜ ನಿರ್ಮಾಣದಲ್ಲಿ ವೈದ್ಯರ ಪಾತ್ರ ಪ್ರಮುಖ. ಆರೋಗ್ಯ ಸೇವೆ ದೇವರ ಸೇವೆ. ದೇವರ ಸೇವೆ ಮಾಡಲು ಆರಿಸಿಕೊಂಡ ಮಾರ್ಗ, ಸಮಾಜವನ್ನು ಆರೋಗ್ಯವಾಗಿ ಮತ್ತು ರೋಗ ಮುಕ್ತವಾಗಿಡಬೇಕೆಂಬ ವೈದ್ಯರ ಸಂಕಲ್ಪ ಶ್ಲಾಘನೀಯ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಹೇಳಿದರು.
ಭಾರತೀಯ ಆರ್ಥೊಡಾಂಟಿಕ್ ಸೊಸೈಟಿ ಮತ್ತು ಬೆಂಗಳೂರು ಆರ್ಥೊಡಾಂಟಿಕ್ ಗ್ರೂಪ್ ಸಹಯೋಗದಲ್ಲಿ ದಯಾನಂದ ಸಾಗರ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ಬೆಂಗಳೂರು ವತಿಯಿಂದ ಆಯೋಜಿಸಲಾಗಿದ್ದ ಸೀಳು ಮತ್ತು ಕ್ರಾನಿಯೋಫೇಶಿಯಲ್ ಆರ್ಥೊಡಾಂಟಿಕ್ಸ್ ರಾಷ್ಟ್ರೀಯ ಸಮ್ಮೇಳನ ಮತ್ತು ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಇದನ್ನೂ ಓದಿ: ಸ್ವಂತ ಕಾರು ಇದ್ದವರಿಗೆ BPL Card ಡೌಟ್- ರಾಜ್ಯ ಸರ್ಕಾರ ಗಂಭೀರ ಚಿಂತನೆ
ಹುಟ್ಟಿನಿಂದಲೇ ಸೀಳು ತುಟಿ ಮತ್ತು ಅಂಗುಳಿನ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಲ್ಲಿ ಇದು ದೈಹಿಕ ವೈಪರೀತ್ಯ ಮಾತ್ರವಲ್ಲ, ಇದಕ್ಕಿಂತ ಹೆಚ್ಚಾಗಿ ಈ ಸಮಸ್ಯೆ ಅವರ ಜೀವನದ ಮೇಲೆ ಭಾವನಾತ್ಮಕ, ಸಾಮಾಜಿಕ ಮತ್ತು ಮಾನಸಿಕವಾಗಿ ಪರಿಣಾಮ ಬೀರುತ್ತದೆ. ಭಾರತದಲ್ಲಿ 700 ಮಕ್ಕಳಲ್ಲಿ 1 ಮಗುವಿಗೆ ಸೀಳು ತುಟಿ ಮತ್ತು ಅಂಗುಳಿನ ಸಮಸ್ಯೆ ಹುಟ್ಟುತ್ತದೆ. ನಮ್ಮ ದೇಶದಲ್ಲಿ ಪ್ರತಿ ವರ್ಷ 35 ಸಾವಿರಕ್ಕೂ ಹೆಚ್ಚು ಮಕ್ಕಳು ಸೀಳು ತುಟಿ ಮತ್ತು ಅಂಗುಳಿನ ಸಮಸ್ಯೆಯೊಂದಿಗೆ ಜನಿಸುತ್ತಾರೆ ಎಂದು ತಿಳಿದು ಬಂದಿದೆ ಎಂದರು.
ಜನ್ಮಜಾತ ಸೀಳು ತುಟಿ ಮತ್ತು ಅಂಗುಳಿನ ವಿರೂಪತೆಯನ್ನು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದರೆ ಸಂಪೂರ್ಣವಾಗಿ ಗುಣಪಡಿಸಬಹುದು. ಸೀಳು ತುಟಿ ಮತ್ತು ಅಂಗುಳಿನ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳು ಎದುರಿಸುತ್ತಿರುವ ಪರಿಸ್ಥಿತಿಗಳು ಅವರಿಗೆ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ ಬಹಳ ಗಂಭೀರ ಮತ್ತು ಶಾಶ್ವತ ಸ್ವಭಾವವನ್ನು ಹೊಂದಿರಬಹುದು. ಈ ಸವಾಲುಗಳನ್ನು ಎದುರಿಸಲು ಒಂದು ಸಮಗ್ರ ವಿಧಾನದ ಅಗತ್ಯವಿದೆ. ಬಾಧಿತ ಮಗುವಿಗೆ ತಾಯಿಯ ಸಹಾಯದ ಅಗತ್ಯವಿದೆ. ಆರ್ಥೊಡಾಂಟಿಕ್, ಓರಲ್ ಸರ್ಜನ್, ಪೀಡಿಯಾಟ್ರಿಕ್ ಡೆಂಟಿಸ್ಟ್, ನರ್ಸಿಂಗ್, ಸ್ಪೀಚ್ ಥೆರಪಿಸ್ಟ್ ಮತ್ತು ಸೈಕಲಾಜಿಕಲ್ ಕೌನ್ಸೆಲರ್‌ಗಳ ಬೆಂಬಲವು ಅವನ ಜೀವನಕ್ಕೆ ನಗು ತರುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಆರಗ ಜ್ಞಾನೆಂದ್ರ ತ್ರಿಪುರ ಸುಂದರ ಅಲ್ಲ: ದರ್ಶನಾಪುರ ಲೇವಡಿ
ಈ ಸಮ್ಮೇಳನದಲ್ಲಿ ವಿವಿಧ ವಿಶೇಷತೆಗಳ ತಜ್ಞರು ಅರ್ಥಪೂರ್ಣ ಚರ್ಚೆಯನ್ನು ನಡೆಸುತ್ತಾರೆ. ತಮ್ಮ ಜ್ಞಾನ ಮತ್ತು ಅನುಭವವನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ಇದು ಈ ಮಕ್ಕಳ ಜೀವನದಲ್ಲಿ ನಗುವನ್ನು ತರಲು ಸಹಾಯಕವಾಗುತ್ತದೆ. ಸೀಳು ತುಟಿ ಮತ್ತು ಅಂಗುಳಿನ ಸಮಸ್ಯೆ ನಿರ್ವಹಣಾ ವಲಯದಲ್ಲಿ ಸಾಂಸ್ಥಿಕ ಬದ್ಧತೆ ಮತ್ತು ದೀರ್ಘಾವಧಿಯ ಸಾರ್ವಜನಿಕ-ಖಾಸಗಿ ಸಹಭಾಗಿತ್ವವು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರು.
ಸೀಳು ತುಟಿ ಮತ್ತು ಅಂಗುಳಿನ ಸಮಸ್ಯೆ ಬಾಧಿತವಾಗಿರುವ ಪ್ರತಿಯೊಂದು ಮಗುವೂ ಸಕಾಲಿಕ ಮತ್ತು ಗುಣಮಟ್ಟದ ಚಿಕಿತ್ಸೆ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ವೈದ್ಯಕೀಯ ಸೌಲಭ್ಯಗಳು ಮತ್ತು ಔಟ್‌ರೀಚ್ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಹೂಡಿಕೆ ಮಾಡಬೇಕು ಎಂದು ಸಂಸ್ಥೆಗಳಿಗೆ ಮನವಿ ಮಾಡಿದರು. ಇದನ್ನೂ ಓದಿ: ಒಂದು ಫ್ರಿಡ್ಜ್‌ಗಾಗಿ 7 ತಿಂಗಳ ಗರ್ಭಿಣಿಯ ಜೀವವೇ ಹೋಯ್ತು!
ದಯಾನಂದ ಸಾಗರ್ ಸಂಸ್ಥೆಗಳ ಅಧ್ಯಕ್ಷ ಡಾ. ಡಿ.ಹೇಮಚಂದ್ರ ಸಾಗರ್, ಇಂಡಿಯನ್ ಆರ್ಥೊಡಾಂಟಿಕ್ ಸೊಸೈಟಿಯ ಅಧ್ಯಕ್ಷ ಡಾ. ಬಲ್ವಿಂದರ್ ಸಿಂಗ್ ಠಕ್ಕರ್ ಮತ್ತು ಕಾರ್ಯದರ್ಶಿ ಡಾ. ಸಂಜಯ್ ಲಾಭ್, ದಯಾನಂದ ಸಾಗರ್ ಸಂಸ್ಥೆಗಳ ಕಾರ್ಯದರ್ಶಿ ಗಾಲಿಸ್ವಾಮಿ, ಜಂಟಿ ಕಾರ್ಯದರ್ಶಿ ಟಿಂಟಿಶಾ ಹೆಚ್. ಸಾಗರ್, ಪ್ರಾಂಶುಪಾಲ ಡಾ. ಹೇಮಂತ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಬೆಂಗಳೂರು: ಹೈದರಾಬಾದ್‌ಗೆ (Hyderabad) ತೆರಳಬೇಕಿದ್ದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ (Thawarchand Gehlot) ಅವರು 10 ನಿಮಿಷ ತಡವಾಗಿ ಏರ್‌ಪೋರ್ಟ್‌ಗೆ (Bengaluru Airport) ಆಗಮಿಸಿದ್ದಕ್ಕೆ, ಅವರನ್ನೇ ವಿಮಾನ ಬಿಟ್ಟು ಹೋಗಿರುವ ಘಟನೆ ನಡೆದಿದೆ.
ಗುರುವಾರ ಮಧ್ಯಾಹ್ನ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಘಟನೆ ನಡೆದಿದ್ದು, ರಾಜ್ಯಪಾಲರು (Karnataka Governor) ಗರಂ ಆಗಿದ್ದಾರೆ. ನಾನು ರಾಜ್ಯದ ಪ್ರಥಮ ಪ್ರಜೆ. ನನಗೆ ಅಗೌರವ ಉಂಟಾಗಿದೆ. ನನ್ನ ವಿಚಾರದಲ್ಲಿ ಶಿಷ್ಟಾಚಾರ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಿ. 10 ನಿಮಿಷ ತಡವಾದರೆ, ಕಾಯಬೇಕಿತ್ತು. ಹಾಗಂಥ ನನ್ನ ಬಿಟ್ಟು ಹೋಗ್ತಾರಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸ್ಪಂದಿಸುವುದು ನಿಮ್ಮ ಕರ್ತವ್ಯ, ಎಷ್ಟು ಸಾಧ್ಯವೋ ಅಷ್ಟು ಶಾಸಕರ ಕೆಲಸ ಮಾಡಿಕೊಡಿ: ಸಿದ್ದರಾಮಯ್ಯ
ಗೆಹ್ಲೋಟ್ ಅವರು ಕಾರ್ಯಕ್ರಮದ ನಿಮಿತ್ತ ಬೆಂಗಳೂರಿನಿಂದ ಹೈದರಾಬಾದ್‌ಗೆ ಹೊರಟ್ಟಿದ್ದರು. ಮಧ್ಯಾಹ್ನ 2 ಗಂಟೆಗೆ ಏರ್‌ಏಶಿಯಾ ವಿಮಾನದ ಮೂಲಕ ಹೋಗಬೇಕಿತ್ತು. ಆದರೆ 15 ನಿಮಿಷ ತಡವಾಗಿ ಏರ್‌ಪೋರ್ಟ್ ತಲುಪಿದ್ದಾರೆ.
ಅಷ್ಟರಲ್ಲಿ ವಿಮಾನ ರಾಜ್ಯಪಾಲರ ಬಿಟ್ಟು ಹಾರಾಟ ನಡೆಸಿತ್ತು. ಇದರಿಂದ ಕೋಪಗೊಂಡ ರಾಜ್ಯಪಾಲರು ಅಧಿಕಾರಗಳ ಕರೆಸಿ ಮಾತನಾಡಿದ್ದಾರೆ. ಅಲ್ಲದೇ ಶಿಷ್ಟಾಚಾರ ಉಲ್ಲಂಘನೆ ಮಾಡಿದ ವಿಮಾನ ಕಂಪನಿಯ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರು ಬ್ಲಾಸ್ಟ್ ಪ್ರಕರಣ – ಪ್ರಮುಖ ಆರೋಪಿ ಸಿಸಿಬಿ ವಶಕ್ಕೆ
ಇಷ್ಟೆಲ್ಲಾ ಆದ ಬಳಿಕ 3:30 ರ ವಿಮಾನದಲ್ಲಿ ಹೈದರಾಬಾದ್ ತಲುಪಿದ್ದಾರೆ. ಈ ಬೆಳವಣಿಗೆಯಿಂದ ರಾಜ್ಯಪಾಲರು ಕಾರ್ಯಕ್ರಮದಲ್ಲಿ ತಡವಾಗಿ ಭಾಗಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು: ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮೇಕ್ ಇನ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ, ಸ್ಕಿಲ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾವನ್ನು ಉತ್ತೇಜಿಸುವ ಮೂಲಕ ಸ್ವಾವಲಂಬಿ ಭಾರತವನ್ನು ಕಟ್ಟಲು ಭಾರತೀಯರು ಮುಂದಾಗಬೇಕು ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಕರೆ ನೀಡಿದ್ದಾರೆ.
ಅಮೃತ ಮಹೋತ್ಸವ ಹಬ್ಬವನ್ನು ಭಾರತದ ಜನತೆಗೆ ಸಮರ್ಪಿಸಲಾಗಿದೆ. ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಎಫ್‌ಕೆಸಿಸಿಐ ಮತ್ತು ಅಂಚೆ ಇಲಾಖೆಯಿಂದ ವಿಶೇಷ ಅಂಚೆ ಕವರ್ ಬಿಡುಗಡೆ ಮಾಡಿರುವುದು ಸಂತಸದ ವಿಷಯ ಎಂದು ಹೇಳಿದ್ದಾರೆ.
ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರು ಸ್ಥಾಪಿಸಿದ ಎಫ್‌ಕೆಸಿಸಿಐ ಸಂಸ್ಥೆಗೆ 106 ವರ್ಷ. ಎಫ್‌ಕೆಸಿಸಿಐ ಕರ್ನಾಟಕ ರಾಜ್ಯದಲ್ಲಿ ಉದ್ಯಮ, ವ್ಯಾಪಾರ ಮತ್ತು ಸೇವಾ ವಲಯದಲ್ಲಿ ಸಕ್ರಿಯ ಮತ್ತು ಸಕಾರಾತ್ಮಕ ಪಾತ್ರವನ್ನು ವಹಿಸುತ್ತಿದೆ. ಭಾರತಕ್ಕೆ ಸ್ವಾತಂತ್ರ‍್ಯ ಬಂದು 75 ವರ್ಷಗಳಾದ ಸಂದರ್ಭದಲ್ಲಿ ಎಫ್‌ಕೆಸಿಸಿಐ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಅಡಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ದೇಶದ ಏಕತೆ ಮತ್ತು ಸಮಗ್ರತೆಗಾಗಿ ಶ್ರಮಿಸುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಕನ್ನಡದ ಹಿರಿಯ ಹಾಸ್ಯ ನಟ ಉಮೇಶ್ ಸಿನಿ ಪಯಣಕ್ಕೆ 62ನೇ ಸಂಭ್ರಮ: ವಾಣಿಜ್ಯ ಮಂಡಳಿಯಿಂದ ಅಭಿನಂದನಾ ಕಾರ್ಯಕ್ರಮ
ಸ್ವಾತಂತ್ರ‍್ಯ ಚಳವಳಿಯ ಇತಿಹಾಸದಂತೆ, 75 ವರ್ಷಗಳ ಪ್ರಯಾಣವು ಭಾರತೀಯರ ಕಠಿಣ ಪರಿಶ್ರಮ, ನಾವೀನ್ಯತೆ, ಉದ್ಯಮಶೀಲತೆಯ ಪ್ರತಿಬಿಂಬವಾಗಿದೆ. ಇಂದು ಭಾರತದ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯು ವಿಶ್ವದ ಆಕರ್ಷಣೆಯ ಕೇಂದ್ರವಾಗಿದೆ. ಭಾರತದ ಸಾಮರ್ಥ್ಯ ಮತ್ತು ಭಾರತದ ಪ್ರತಿಭೆ ಪ್ರಪಂಚದ ಪ್ರತಿಯೊಂದು ಹಂತದಲ್ಲೂ ಪ್ರತಿಧ್ವನಿಸುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಆದಾಯ, ವಸತಿ ಮತ್ತು ನೀರು, ಆರೋಗ್ಯ ಸೌಲಭ್ಯಗಳು ಇತ್ಯಾದಿಗಳಿಗೆ ವಿವಿಧ ವಿನೂತನ ಮತ್ತು ಅಂತರ್ಗತ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿವೆ ಮತ್ತು ದೇಶದ ಸರ್ವತೋಮುಖ ಅಭಿವೃದ್ಧಿ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ಉದ್ದೇಶದಿಂದ ಮೂಲ ಸೇವೆಗಳನ್ನು ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯವು ದೇಶದ ಜಿಡಿಪಿಗೆ ಶೇ.8.8 ರಷ್ಟು ಕೊಡುಗೆ ನೀಡುವ ಮೂಲಕ ಭಾರತದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುತ್ತಿದೆ. ಕೈಗಾರಿಕೆ, ಸೇವಾ ಮತ್ತು ಕೃಷಿ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡುತ್ತಿದೆ. ಆದಾಯ ತೆರಿಗೆ ಹಾಗೂ ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕವು ದೇಶದ 2ನೇ ಅತಿದೊಡ್ಡ ರಾಜ್ಯವಾಗಿದೆ. 2024ರ ವೇಳೆಗೆ ದೇಶವು 5 ಟ್ರಿಲಿಯನ್ ಆರ್ಥಿಕತೆಯ ಗುರಿ ಸಾಧಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಮಗೆ ಸ್ವಾತಂತ್ರ‍್ಯ ನೀಡಿದ ಎಲ್ಲ ಮಹಾಪುರುಷರಿಗೆ ನನ್ನ ನಮನ. ಈ ವಿಶೇಷ ಸಂದರ್ಭದಲ್ಲಿ ನಾವು ಒಂದು ಸಂಕಲ್ಪವನ್ನು ತೆಗೆದುಕೊಳ್ಳಬೇಕು. ಸ್ವಾತಂತ್ರ‍್ಯವನ್ನು ಅಖಂಡವಾಗಿ ಉಳಿಸಿಕೊಳ್ಳಲು ಮತ್ತು ದೇಶಭಕ್ತಿಯ ವಾತಾವರಣ ಸೃಷ್ಟಿಸಲು ಒಗ್ಗೂಡಿ ಮುನ್ನಡೆಯಬೇಕಾಗಿದೆ ಎಂದು ಹೇಳಿದ್ದಾರೆ.
ಎಫ್‌ಕೆಸಿಸಿಐ ಅಧ್ಯಕ್ಷ ಡಾ.ಸಿ.ಎ.ಐ.ಎಸ್ ಪ್ರಸಾದ್ ಹಾಗೂ ಅಂಚೆ ಇಲಾಖೆಯ ಮುಖ್ಯ ಪೋಸ್ಟ್ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆಯ ಬೂಸ್ಟರ್ ಡೋಸ್ ಪಡೆದುಕೊಂಡರು.
ನಂತರ ಅವರು ನಾಡಿನ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದರು. ಈ ವೇಳೆ ಮಾತನಾಡಿದ ರಾಜ್ಯಪಾಲರು, ಕೊರೊನಾ ಮಹಾಮಾರಿಯಿಂದ ಮುಕ್ತಿಯಾಗಲು ಲಸಿಕೆ ಅವಶ್ಯಕತೆ ಇದೆ. ಲಸಿಕೆ ಪಡೆಯೋದು ಅವಶ್ಯವಾಗಿದೆ. ರಾಜ್ಯದ ಜನ ಲಸಿಕೆ ಪಡೆಯಬೇಕು. ಕೊರೊನಾದಿಂದ ಮುಕ್ತವಾಗಲು ಲಸಿಕೆ ಮುಖ್ಯ ಎಂದು ಸಲಹೆ ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಲಾಕ್‌ಡೌನ್ ಇಲ್ಲವೇ ಇಲ್ಲ: ಸಚಿವ ಸುಧಾಕರ್ ಸ್ಪಷ್ಟನೆ
ದೆಹಲಿಯಲ್ಲಿ ಕೋವಿಡ್ ಲಸಿಕೆಯ ಎರಡು ಡೋಸ್‌ಗಳನ್ನೂ ಪಡೆದಿದ್ದೇನೆ. ಇಂದು ಬೂಸ್ಡರ್ ಡೋಸ್ ಪಡೆದಿದ್ದೇನೆ. ಪ್ರಮಾಣ ಪತ್ರವನ್ನು ನನಗೆ ನೀಡಿದ್ದಾರೆ. ಇಡೀ ದೇಶದಲ್ಲಿ ಲಸಿಕೆ ಅಭಿಯಾನ ನಡೆಯುತ್ತಿದೆ. ಲಸಿಕಾ ಅಭಿಯಾನದಲ್ಲಿ ಕರ್ನಾಟಕ ಮುಂದಿದೆ. ಈ ಕಾರ್ಯಕ್ಕೆ ಸಿಎಂ ಹಾಗೂ ಆರೋಗ್ಯ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಜನರು ಲಸಿಕೆ ಪಡೆಯಬೇಕು. ಈ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಿಸಬೇಕು ಹೇಳಿದರು.