Tag: Karnataka Government

  • ಕೊನೆಗೂ `ಸಾರಿಗೆ’ ಸೊಪ್ಪು ಹಾಕಿದ ಸರ್ಕಾರ – ಅನಿರ್ದಿಷ್ಟಾವಧಿ ಮುಷ್ಕರ ಮುಂದೂಡಿಕೆ

    ಕೊನೆಗೂ `ಸಾರಿಗೆ’ ಸೊಪ್ಪು ಹಾಕಿದ ಸರ್ಕಾರ – ಅನಿರ್ದಿಷ್ಟಾವಧಿ ಮುಷ್ಕರ ಮುಂದೂಡಿಕೆ

    – ಸಂಕ್ರಾಂತಿ ಬಳಿಕ ಮಾತುಕತೆ ಈಡೇರಿಸುವುದಾಗಿ ಸರ್ಕಾರ ಭರವಸೆ

    ಬೆಂಗಳೂರು: ಡಿ.31ರಂದು ನಡೆಯಬೇಕಿದ್ದ ಅನಿರ್ದಿಷ್ಟಾವಧಿ `ಸಾರಿಗೆ’ ಮುಷ್ಕರಕ್ಕೆ ಕೊನೆಗೂ ಸರ್ಕಾರ `ಸೊಪ್ಪು’ ಹಾಕಿದೆ. ಸಕ್ರಾಂತಿ ಬಳಿಕ ಚರ್ಚಿಸಿ ಸಾರಿಗೆ ನೌಕರರ ಬೇಡಿಕೆ ಈಡೇರಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದರಿಂದ ಮುಷ್ಕರ ಮುಂದೂಡಿಕೆಯಾಗಿದೆ.

    ಮಂಗಳವಾರ ನಡೆಯಬೇಕಿದ್ದ ಅನಿರ್ದಿಷ್ಟಾವಧಿ ಸಾರಿಗೆ ಮುಷ್ಕರವನ್ನು ಮುಂದೂಡಿರುವುದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಜಂಟಿ ಕ್ರಿಯಾ ಸಮಿತಿಯಿಂದ ಆದೇಶ ಪ್ರಕಟಿಸಿದೆ. ಮುಷ್ಕರಕ್ಕೆ ಬೆಂಬಲ ನೀಡಿದ್ದ ಸಂಘಟನೆಗಳೊಂದಿಗೆ ಸಭೆ ನಡೆಸಿದ ಬಳಿಕ ಆದೇಶ ಪ್ರಕಟಿಸಲಾಗಿದೆ. ಸಭೆಗೂ ಮುನ್ನ ವೇತನ ಪರಿಷ್ಕರಣೆಗೆ ಸಿಎಂ 2,000 ಕೋಟಿ ರೂ. ಅನುದಾನ ಬಿಡುಗಡೆ ಮಾಡಿರುವುದಾಗಿ ಹೇಳಿದ್ದರು.

    ಇತ್ತೀಚೆಗೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ನೇತೃತ್ವದಲ್ಲಿ ಸಾರಿಗೆ ಇಲಾಖೆಗಳ ಸ್ಥಿತಿಗತಿ ಕುರಿತು ಸಭೆ ನಡೆದಿತ್ತು. ಈ ಸಭೆಯಲ್ಲಿ ಸಾರಿಗೆ ಇಲಾಖೆಗೆ 3,650 ಕೋಟಿ ರೂ. ಹೊರೆಯಾಗುತ್ತಿದೆ ಎಂದು ಸಾರಿಗೆ ಅಧಿಕಾರಿಗಳು ಅಳಲು ತೋಡಿಕೊಂಡಿದ್ದರು. ನಷ್ಟ ಪರಿಹಾರಕ್ಕೆ ಶೇ.15ರಷ್ಟು ಪ್ರಯಾಣದರ ಹೆಚ್ಚಳಕ್ಕೆ ಸಭೆಯಲ್ಲಿ ಚರ್ಚೆ ನಡೆಸಲಾಗಿತ್ತು. ಅದರಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನ ಮಾಡಲಾಗಿತ್ತು. ಆದರೆ 15% ಪ್ರಮಾಣದಲ್ಲಿ ದರ ಪರಿಷ್ಕರಣೆಯಾದರೂ ನಿಗಮಗಳು ಇನ್ನೂ 1,800 ಕೋಟಿ ನಷ್ಟ ಅನುಭವಿಸುತ್ತವೆ ಎಂಬ ಮಾಹಿತಿ ಅಧಿಕಾರಿಗಳು ನೀಡಿದ್ದರು.

    ರಾಜ್ಯದಲ್ಲಿರುವ ಬಸ್‌ಗಳೆಷ್ಟು?
    * ರಾಜ್ಯದ ಸಾರಿಗೆ ಇಲಾಖೆಯಲ್ಲಿರೋ ಒಟ್ಟು ಬಸ್‌ಗಳ ಸಂಖ್ಯೆ -24,000
    * ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಖ್ಯೆ- 8,116
    * ಬಿಎಂಟಿಸಿ ಬಸ್ ಗಳ ಸಂಖ್ಯೆ-6,688
    * ವಾಯುವ್ಯ ಕರ್ನಾಟಕ ಬಸ್ ಗಳ ಸಂಖ್ಯೆ- 4,858
    * ಕಲ್ಯಾಣ ಕರ್ನಾಟಕ ಬಸ್ ಗಳ ಸಂಖ್ಯೆ-4,327

    ಬಂದ್‌ಗೆ ಬೆಂಬಲಿಸದ್ದ ಸಂಘಟನೆಗಳು
    * ಕೆಎಸ್‌ಆರ್‌ಟಿಸಿ ಸ್ಟಾಫ್ ಆಂಡ್ ವರ್ಕಸ್ ಫೆಡರೇಶನ್
    * ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳ
    * ರಾಜ್ಯ ಸಿಐಟಿಯು
    * ಬಿಎಂಎಸ್
    * ಪರಿಶಿಷ್ಟ ನೌಕರರ ಸಂಘ
    * ಸಾರಿಗೆ ನೌಕರರ ಕ್ಷೇಮಾಭಿವೃದ್ಧಿ ಸಂಘ
    * ರಾಜ್ಯ ಸಾರಿಗೆ ಸಂಸ್ಥೆ ನೌಕರರ ಸಂಘ
    * ಅಖಂಡ ಕರ್ನಾಟಕ ರಾಜ್ಯ ಸಾರಿಗೆ ಕಾರ್ಮಿಕ ಮಹಾಮಂಡಳಿ
    * ರಾಜ್ಯ ರಸ್ತೆ ಸಾರಿಗೆ ನೌಕಕರ ಕೂಟ
    * ಕೆಬಿಎನ್‌ಎನ್ ವರ್ಕರ್ಸ್ ಫೆಡರೇಷನ್
    * ಕೆಎಸ್‌ಆರ್‌ಟಿಸಿ ನಿಗಮಗಳ ಎಸ್‌ಸಿ-ಎಸ್‌ಟಿ ನೌಕಕರ ಕ್ಷೇಮಾಭಿವೃದ್ಧಿ ಸಂಘ
    * ಕರಾರಸಾಸಂಸ್ಥೆ ಎಸ್ಸಿ,ಎಸ್‌ಟಿ ಅಧಿಕಾರಿಗಳ ಮತ್ತು ನೌಕರರ ಸಮನ್ವಯ ಸಮಿತಿ
    * ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ವಿಕಲಚೇತನ ನೌಕರರ ಸಂಘ

    ಸಾರಿಗೆ ನೌಕರರ ಬೇಡಿಕೆಗಳೇನು?
    * 01-01-2020ರಿಂದ ಆಗಿರುವ ಶೇ.15ರಷ್ಟು ವೇತನ ಹೆಚ್ಚಳದ ನಂತರದ 38 ತಿಂಗಳ ಬಾಕಿ ಹಣವನ್ನು ವಿಳಂಬವಿಲ್ಲದೆ ಪಾವತಿಸಬೇಕು
    * ಸದ್ಯ ನೌಕರರು ಪಡೆಯುತ್ತಿರುವ ವಿವಿಧ ಭತ್ಯೆಗಳನ್ನು ಐದು ಪಟ್ಟು ಹೆಚ್ಚಳ ಮಾಡಬೇಕು
    * ಎಲ್ಲಾ ನೌಕರರಿಗೂ ಪ್ರತೀ ತಿಂಗಳೂ ಹೊರ ರೋಗಿ ಚಿಕಿತ್ಸೆ ವೆಚ್ಚಕ್ಕಾಗಿ 2 ಸಾವಿರ ರೂಪಾಯಿ ಜೊತೆಗೆ ಉಚಿತ ಔಷಧಿ ನೀಡಬೇಕು
    * ಇಎಸ್‌ಐ ಮಾದರಿಯಲ್ಲಿ ನೌಕರರ ಮೂಲ ವೇತನದ ಶೇ.4.5 ಹಾಗೂ ನೌಕರರಿಂದ ಶೇ.0.5 ವಂತಿಗೆ ಸಂಗ್ರಹಿಸಿ ಟ್ರಸ್ಟ್ ರಚಿಸಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಕೊಡುವ ಯೋಜನೆ ರೂಪಿಸಬೇಕು
    * ನಿವೃತ್ತ ನೌಕರರು ಮತ್ತು ಅವರ ಪತಿ/ಪತ್ನಿ ಹಾಗೂ ಮಕ್ಕಳಿಗೂ ಆರೋಗ್ಯ ಯೋಜನೆ ನೀಡಬೇಕು
    * ನಗದು ರಹಿತ ಆರೋಗ್ಯ ಚಿಕಿತ್ಸೆ ಯೋಜನೆಯನ್ನು ಏಕಕಾಲದಲ್ಲಿ 4 ನಿಗಮಗಳಲ್ಲಿ ಜಾರಿಗೆ ತರಬೇಕು
    * ವಿದ್ಯುತ್ ಚಾಲಿತ ಬಸ್ಸುಗಳ ನಿರ್ವಹಣೆಯನ್ನು ಖಾಸಗಿ ಗುತ್ತಿಗೆದಾರರಿಗೆ ನೀಡುವ ಪದ್ಧತಿಯನ್ನು ಕೈಬಿಡಬೇಕು
    * ಸಂಸ್ಥೆಯ ನೌಕರರು ಮತ್ತು ಸಿಬ್ಬಂದಿಯೇ ವಿದ್ಯುಚ್ಚಾಲಿತ ಬಸ್ಸುಗಳ ನಿರ್ವಹಣೆ ಮಾಡಬೇಕು
    * ಹೊರ ಗುತ್ತಿಗೆ ಆಧಾರದ ಮೇಲೆ ಚಾಲಕ, ತಾಂತ್ರಿಕ ಮತ್ತು ಭದ್ರತಾ ಸಿಬ್ಬಂದಿ ನೇಮಕಾತಿಯನ್ನು ಕೈಬಿಡಬೇಕು

    ಸರ್ಕಾರ ಏನು ಮಾಡಿದೆ, ಭರವಸೆ ಏನು?
    * 2020ರ ಜನವರಿ 1ರಿಂದ 2023ರ ಫೆಬ್ರುವರಿ 28ರ ವರೆಗೆ ಸಂಸ್ಥೆಗಳಿಂದ ನಿವೃತ್ತರಾದ 11,694 ಜನರಿಗೆ ವಿತರಿಸಲು ಸರ್ಕಾರ 224.05 ಕೋಟಿ ಬಿಡುಗಡೆ ಮಾಡಿದೆ.
    * ಆರ್‌ಟಿಜಿಎಸ್ ಹಾಗೂ ಚೆಕ್ ಮೂಲಕ ಹಿಂಬಾಕಿ ವಿತರಿಸುವ ಕಾರ್ಯ ನಡೆಯುತ್ತಿದೆ.
    * ನಾಲ್ಕೂ ಸಾರಿಗೆ ನಿಗಮಗಳ 1,308 ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿಯ ಅಂತರ ನಿಗಮ ವರ್ಗಾವಣೆಯ ತಾತ್ಕಾಲಿಕ ಪಟ್ಟಿಯನ್ನು ಈಗಾಗಲೇ ಬಿಡುಗಡೆಗೊಳಿಸಲಾಗಿದೆ
    * ಬೇಡಿಕೆಗಳನ್ನು ಹಂತಹಂತವಾಗಿ ಈಡೇರಿಸಲಾಗುವುದು
    * ಸದ್ಯ ಶಕ್ತಿ ಯೋಜನೆಯಿಂದ ನಿಗಮಗಳ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ, ಸರ್ಕಾರದ ಅನುದಾನ ಬರಬೇಕಿದೆ

  • ಕೋಲಾರ, ವಿಜಯಪುರದಲ್ಲಿ KPSC ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯಲ್ಲಿ ಲೋಪ – ಪರೀಕ್ಷಾರ್ಥಿಗಳ ಆಕ್ರೋಶ

    ಕೋಲಾರ, ವಿಜಯಪುರದಲ್ಲಿ KPSC ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯಲ್ಲಿ ಲೋಪ – ಪರೀಕ್ಷಾರ್ಥಿಗಳ ಆಕ್ರೋಶ

    ಕೋಲಾರ: ಕೆಪಿಎಸ್‌ಸಿ ಇಂದು (ಭಾನುವಾರ) ನಡೆಸಿರುವ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯಲ್ಲಿ ಲೋಪ ಕಂಡುಬಂದಿದೆ. ಕೋಲಾರದ (Kolara) ಹಾಗೂ ವಿಜಯಪುರದ ಕೆಲವು ಪರೀಕ್ಷಾ ಕೇಂದ್ರಗಳ ಮುಂದೆ ನಿಂತು ಪರೀಕ್ಷಾರ್ಥಿಗಳು ಸರ್ಕಾರ (Karnataka Government) ಹಾಗೂ ಕೆಪಿಎಸ್‌ಸಿ (KPSC) ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಕೋಲಾರ ನಗರದ ಸರ್ಕಾರಿ ಬಾಲಕರ ಕಾಲೇಜು ಪರೀಕ್ಷಾ ಕೇಂದ್ರ, ಮಹಿಳಾ ಕಾಲೇಜು ಪರೀಕ್ಷಾ ಕೇಂದ್ರ ಸೇರಿದಂತೆ ವಿವಿಧೆಡೆ ದೂರುಗಳು ಕೇಳಿಬಂದಿದೆ. ಕೆಪಿಎಸ್‌ಸಿಯಿಂದ ನೀಡಲಾಗಿದ್ದ ಪ್ರವೇಶ ಪತ್ರದ ಸಂಖ್ಯೆಗೂ ಹಾಗೂ ಓಎಂಆರ್ ನಂಬರಿಗೂ ತಾಳೆಯಾಗದೇ, ಗೊಂದಲ ಸೃಷ್ಟಿಯಾಗಿತ್ತು. ಅಲ್ಲದೇ 10 ಗಂಟೆಗೆ ಆರಂಭವಾಗಬೇಕಾದ ಪರೀಕ್ಷೆ 1 ಗಂಟೆ ತಡವಾಗಿ ಆರಂಭವಾಗಿದೆ. ಈ ವೇಳೆ ಪರೀಕ್ಷಾ ಕೇಂದ್ರದಲ್ಲೇ ಪ್ರಶ್ನೆ ಮಾಡಿದಕ್ಕೆ ಅಧಿಕಾರಿಗಳು ಹಾಗೂ ಮೇಲ್ವಿಚಾರಕರು ಧಮ್ಕಿ ಹಾಕಿದ್ದಾರೆ. ಇದನ್ನೂ ಓದಿ: ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿ – ರೇಸ್‌ನಲ್ಲಿರುವ ನಾಲ್ವರ ಪೈಕಿ ಭಾರತದ ಅರ್ಷ್‌ದೀಪ್‌ಗೆ ಸ್ಥಾನ!

    ಕೆಲ ಕಾಲ ಪರೀಕ್ಷಾರ್ಥಿಗಳು ಕೆಪಿಎಸ್‌ಸ್‌ಯಿಂದ ಈ ಬಾರಿಯೂ ಮತ್ತೆ ಯಾರದೊ ಪರೀಕ್ಷೆಯನ್ನು ಮತ್ತೆ ಯಾರದೊ ಕೈಯಲ್ಲಿ ಬರೆಸುತ್ತಿದ್ದಾರಾ ಅನ್ನೋ ಅನುಮಾನ ಶುರುವಾಗಿದೆ. ಕಾರಣ ಪ್ರವೇಶ ಪತ್ರದಲ್ಲಿರುವ ಸಂಖ್ಯೆ ಪರೀಕ್ಷಾರ್ಥಿಗಳಿಗೆ ನೀಡಲಾಗಿದ್ದ ಓಎಂಆರ್ ಶೀಟ್‌ನಲ್ಲೂ ಇರಬೇಕು. ಆದ್ರೆ ಪ್ರವೇಶ ಪತ್ರದ ಸಂಖ್ಯೆ ಓಎಂಆರ್ ಶ್ರೀಟ್‌ನಲ್ಲಿ ಇರಲಿಲ್ಲ ಇದನ್ನು ಪ್ರಶ್ನೆ ಮಾಡಿದಾಗ ಪರೀಕ್ಷಾ ಕೇಂದ್ರದ ಅಭ್ಯರ್ಥಿಗಳು ಅದನ್ನು ಸರಿಮಾಡಿಕೊಂಡು ಬರೆಯಿರಿ ಇಲ್ಲಾ ಎದ್ದು ಹೋಗಿ ಎಂದು ಧಮ್ಕಿ ಹಾಕಿರುವ ಆರೋಪ ಕೂಡಾ ಕೇಳಿ ಬಂದಿದೆ.

    ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 10 ಗಂಟೆಯಿಂದ 12 ಗಂಟೆವರೆಗೂ ನಡೆದ ಪರೀಕ್ಷೆ ನಂತರ ಪರೀಕ್ಷೆ ನಂತರ ಪರೀಕ್ಷಾ ಕೇಂದ್ರದಿಂದ ಹೊರ ಬಂದ ಪರೀಕ್ಷಾರ್ಥಿಗಳು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಕೆಪಿಎಸ್‌ಸಿ ಈ ಬಾರಿಯೂ ಎಡವಟ್ಟು ಮಾಡಿದ್ದು ಸರಿಯಾದ ಪರೀಕ್ಷೆ ನಡೆಸುವಲ್ಲಿ ವಿಫಲವಾಗಿದೆ. ಇನ್ನು ಕೋಲಾರ ಜಿಲ್ಲೆಯಲ್ಲಿ ಒಟ್ಟು 14 ಪರೀಕ್ಷಾ ಕೇಂದ್ರಗಳಲ್ಲಿ 5,718 ಮಂದಿ ಪರೀಕ್ಷೆ ಬರೆಯುತ್ತಿದ್ದಾರೆ. ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಪ್ರೇಮ – ಬಾಲಕಿ ಮನೆ ಮುಂದೆ ಜಿಲೆಟಿನ್ ಸ್ಫೋಟಿಸಿಕೊಂಡು ಯುವಕ ಆತ್ಮಹತ್ಯೆ

    ಈ ಪೈಕಿ ನಾಲ್ಕೈದು ಪರೀಕ್ಷಾ ಕೇಂದ್ರಗಳಲ್ಲಿ ಇದೇ ಸಮಸ್ಯೆ ಆಗಿದ್ದು ನೂರಾರು ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇನ್ನು ಪರೀಕ್ಷಾರ್ಥಿಗಳ ಸಮಸ್ಯೆಯನ್ನು ಆಲಿಸುವ ಯಾರೊಬ್ಬ ಅಧಿಕಾರಿಗಳು ಇಲ್ಲದ ಕಾರಣ ಪರೀಕ್ಷಾರ್ಥಿಗಳು ನಮಗೆ ಅನ್ಯಾಯವಾಗಿದೆ ಮತ್ತೊಮ್ಮ ಮರು ಪರೀಕ್ಷೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಕೆಪಿಎಸ್ ಸಿ ಹಾಗೂ ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.

    ವಿಜಯಪುರದಲ್ಲೂ ಅವಾಂತರ:
    ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಎಡವಟ್ಟಾದ ಘಟನೆ ವಿಜಯಪುರದಲ್ಲಿ ನಡೆದಿದೆ. ವಿಜಯಪುರ ನಗರದ 4 ಪರೀಕ್ಷಾ ಕೇಂದ್ರಗಳಲ್ಲಿ ಸಮಸ್ಯೆಯಾಗಿದೆ. ಒಎಂಅರ್ ಶೀಟ್‌ನಲ್ಲಿ ನೋಂದಣಿ ಸಂಖ್ಯೆ ಅದಲು ಬದಲಾಗಿ ಸಮಸ್ಯೆ ಉಂಟಾಗಿತ್ತು. ನಗರದ ಸಿಕ್ಯಾಬ್ ಸಂಸ್ಥೆಯ 2 ಕೇಂದ್ರಗಳು, ಮರಾಠಿ ವಿದ್ಯಾಲಯ, ವಿಕಾಸ ವಿದ್ಯಾಲಯದಲ್ಲಿನ 4 ಕೇಂದ್ರಗಳಲ್ಲಿ ಒಎಂಆರ್ ನಂಬರ್ ಹಾಗೂ ನೋಂದಣಿ ನಂಬರ್ ಬದಲಾಗಿ ತೊಂದರೆ ಆಗಿತ್ತು. ಕಾರಣ ಪರೀಕ್ಷಾ ಕೇಂದ್ರಗಳಿಗೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹಾಗೂ ಜಿಲ್ಲಾ ಪಂಚಾಯತಿ ಸಿಇಒ ರಿಶಿ ಆನಂದ ಭೇಟಿ ನೀಡಿದ್ದರು. ಪರೀಕ್ಷಾರ್ಥಿಗಳ ಸಮಸ್ಯೆ ಆಲಿಸಿದ ಅಧಿಕಾರಿಗಳು ಕೆಪಿಎಸ್‌ಸಿ ಅಧಿಕಾರಿಗಳ ಜೊತೆಗೆ ಮಾತನಾಡಿದ ಎಡಿಸಿ ಹಾಗೂ ಜಿಪಂ ಸಿಇಓ ಪರೀಕ್ಷಾರ್ಥಿಗಳ ನೋಂದಣಿ ಸಂಖ್ಯೆಯನ್ನು ಓಎಂಆರ್ ಶೀಟ್‌ನಲ್ಲಿ ಪ್ರತ್ಯೇಕವಾಗಿ ನೋಂದಾಯಿಸಿಲು ಸಲಹೆ ನೀಡಿದ್ದಾರೆ. ಅಲ್ಲದೇ ಪರೀಕ್ಷೆ ಎಷ್ಟು ವಿಳಂಭವಾಗಿದೆಯೋ ಅಷ್ಟು ಹೆಚ್ಚುವರಿ ಸಮಯ ನೀಡೋದಾಗಿ ಹೇಳಿ ಪರೀಕ್ಷಾರ್ಥಿಗಳ ಸಮಸ್ಯೆ ಈ ಮೂಲಕ ಬಗೆಹರಿಸಿ ಪರೀಕ್ಷೆ ಬರೆಯುವಂತೆ ಮನವೋಲಿಕೆ ಮಾಡಿದ್ದಾರೆ. ಇನ್ನು ಅಧಿಕಾರಿಗಳ ಸ್ಪಷ್ಟನೆಗೆ ಒಪ್ಪಿ ಪರೀಕ್ಷೆ ಬರೆಯಲು ಪರೀಕ್ಷಾರ್ಥಿಗಳು ತೆರಳಿದ್ದು, ಸಮಸ್ಯೆ ಬಗೆ ಹರಿದಿದೆ.

  • ವಿಶೇಷ ಚೇತನರ ಅನುದಾನಕ್ಕೂ ಸರ್ಕಾರ ಕೊಕ್ಕೆ – 80% ರಷ್ಟು ಅನುದಾನ ಕಡಿತ ಆರೋಪ!

    ವಿಶೇಷ ಚೇತನರ ಅನುದಾನಕ್ಕೂ ಸರ್ಕಾರ ಕೊಕ್ಕೆ – 80% ರಷ್ಟು ಅನುದಾನ ಕಡಿತ ಆರೋಪ!

    – ಡಿ.2ರಂದು ರಾಜ್ಯವ್ಯಾಪಿ ಹೋರಾಟಕ್ಕೆ ಕರೆ

    ಬೆಂಗಳೂರು: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ (Guarantee Scheme) ಹಣ ನೀಡೋ ಬರದಲ್ಲಿ ಉಳಿದ ಎಲ್ಲ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗಮನವೇ ಹರಿಸುತ್ತಿಲ್ಲ ಅನ್ನೋ ಆರೋಪಗಳು ಮತ್ತೊಮ್ಮೆ ಕೇಳಿಬಂದಿದೆ.

    ಈಗ ಸರ್ಕಾರ ಅಂಗವಿಕಲರ ಅನುದಾನಕ್ಕೂ (Grant for the disabled) ಕೊಕ್ಕೆ ಹಾಕಿದ್ದು ಕಳೆದ ವರ್ಷಕ್ಕಿಂತ 80% ರಷ್ಟು ಅನುದಾನ ಕಡಿತ ಮಾಡಿದೆ ಅಂತಾ ವಿಕಲಚೇತರ ಫೆಡರೇಷನ್‌ ಧ್ವನಿ ಎತ್ತಿದೆ. ನಮ್ಮ ಯೋಜನೆಗಳಿಗೆ ನೀಡಬೇಕಾದ ಅನುದಾನವನ್ನ ನೀಡಿ ಎಂದು ಮನವಿ ಮಾಡಿದ್ದಾರೆ. ಸರ್ಕಾರ ನಮ್ಮ ಮನವಿಯನ್ನ ಪೂರೈಸದೆ ಹೋದ್ರೆ ಇದೇ ಡಿಸೆಂಬರ್ 2ರಿಂದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ಸಹ ನೀಡಿದ್ದಾರೆ. ಇದನ್ನೂ ಓದಿ: ಒಂದೇ ಎನ್‌ಕೌಂಟರ್‌ಗೆ ಕಾಫಿನಾಡ ಕಾಡು ಬಿಟ್ರಾ ನಕ್ಸಲರು? – ಎರಡೇ ತಿಂಗಳಿಗೆ ಕೇರಳಕ್ಕೆ ಎಸ್ಕೇಪ್?

    ಈ ಕುರಿತು ರಾಷ್ಟ್ರೀಯ ವಿಕಲಚೇತನರ ಫೆಡರೇಷನ್ ಕರ್ನಾಟಕ ಶಾಖೆಯ ವ್ಯವಸ್ಥಾಪಕ ಹೇಮಂತ್‌ ʻಪಬ್ಲಿಕ್‌ ಟಿವಿʼಜೊತೆಗೆ ಮಾತನಾಡಿದ್ದಾರೆ. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನ ನೀಡುವ ಬರದಲ್ಲಿ ಅಂಗವಿಕಲರಿಗೆ ಅನ್ಯಾಯ ಮಾಡ್ತಿದೆ. ರಾಜ್ಯದಲ್ಲಿರೋ ಅಂಗವಿಕಲರು ಸೇವಾಸಿಂಧು ಮೂಲಕ ಅನುದಾನಕ್ಕೆ ಅರ್ಜಿ ಹಾಕಿದ್ರೂ ಅನುಕೂಲವಾಗ್ತಿಲ್ಲ, ವ್ಹೀಲ್‌ ಚೇರ್ ಆಗಿರಬಹುದು, ಲ್ಯಾಪ್‌ಟ್ಯಾಪ್ ಆಗಿರಬಹುದು ಹೀಗೆ ಎಲ್ಲ ಸ್ಕೀಮ್‌ಗೂ ತೊಡಕಾಗಿದೆ. ಈ ಬಗ್ಗೆ ಸಿಎಂ, ಡಿಸಿಎಂಗೂ ಮನವಿ ಮಾಡಿದ್ದೇವೆ. ಇದೇ ಡಿಸೆಂಬರ್ 3 ಅಂಗವಿಕಲರ ದಿನಾಚರಣೆ ಇದೆ. ಸರ್ಕಾರ ಡಿಸೆಂಬರ್ 2ರೊಳಗೆ ಅನುದಾನ ನೀಡದೇ ಹೋದ್ರೇ ಅಂದಿನಿಂದಲೇ ಪ್ರತಿಭಟನೆ ಮಾಡುತ್ತೇವೆ ಅಂತಾ ಹೇಳಿದ್ದಾರೆ. ಇದನ್ನೂ ಓದಿ: Davanagere| ವಿದ್ಯುತ್ ಅವಘಡಕ್ಕೆ ಒಂದೂವರೆ ಎಕರೆ ಅಡಿಕೆ ತೋಟ ಸುಟ್ಟು ಕರಕಲು

    ಸರ್ಕಾರ ಕಳೆದ ವರ್ಷ 40 ಕೋಟಿ ರೂ. ಅನುದಾನ ಕೊಟ್ಟಿದೆ. ಆದ್ರೆ ಈ ವರ್ಷ ಕೇವಲ 10 ಕೋಟಿ ರೂ. ಕೊಟ್ಟಿದ್ದು, ಶೇ.80 ರಷ್ಟು ಅನುದಾನ ಕಡಿತಗೊಳಿಸಿದೆ. ಆದ್ರೆ ಗ್ಯಾರಂಟಿಗಳಿಗೆ 58,000 ಕೋಟಿ ರೂ. ಮೀಸಲಿಟ್ಟಿದೆ. ರಾಜ್ಯ ಸರ್ಕಾರ ಯಾವುದೇ ಕಾರಣಗಳನ್ನ ನೀಡುತ್ತಿಲ್ಲ, ಗ್ಯಾರಂಟಿ ಸ್ಕೀಂನಿಂದ ಸರ್ಕಾರಕ್ಕೆ ಹಣದ ಕೊರತೆ ಉಂಟಾಗಿ, ನಮ್ಮ ಯೋಜನೆಗಳಿಗೆ ಕತ್ತರಿ ಹಾಕಿರಬಹುದು. ಕೆಲ ವರ್ಷಗಳಿಂದ ಯೋಜನೆ ಮುಂದುವರಿಸಿಕೊಂಡು ಬರಲಾಗ್ತಿದೆ. ಹೊಸ ಯೋಜನೆಗಳನ್ನ ಘೋಷಿಸಿಲ್ಲ. ಕಳೆದ ವರ್ಷ 54 ಕೋಟಿ ರೂ. ವೆಚ್ಚದಲ್ಲಿ 4 ಸಾವಿರ ವೆಹಿಕಲ್ ನೀಡಿದ್ರು, 400 ಲ್ಯಾಪ್‌ಟಾಪ್ ಅಂಧ ವಿದ್ಯಾರ್ಥಿಗಳಿಗೆ ನೀಡಿದ್ರು. 183 ಬ್ರೈಲ್‌ ಕಿಟ್ ಕೊಟ್ಟಿದ್ದಾರೆ. ಈ ವರ್ಷದ ಅನುದಾನದಲ್ಲಿ 350 ವೆಹಿಕಲ್ ಕೊಡಬಹುದು, 30 ಲ್ಯಾಪ್‌ಟಾಪ್, 130 ಬ್ರೈಲ್‌ ಕಿಟ್‌ ನೀಡಬಹುದು. ಆದ್ರೆ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಎಲ್ಲಾ ಶಾಸಕರಿಗೆ ಮನವಿ ಕೊಟ್ಟಿದ್ದೆ, ಅವರೂ ಸ್ಪಂದಿಸಿಲ್ಲ. ಹಾಗಾಗಿ ಡಿಸೆಂಬರ್‌ 2ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ನಿರ್ಧರಿಸಲಾಗಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲೂ ಪ್ರತಿಭಟನೆ ನಡೆಯಲಿದೆ ಎಂದು ಎಚ್ಚರಿಸಿದ್ದಾರೆ.

    2023-24ರ ವರ್ಷದಲ್ಲಿ ಬಿಡುಗಡೆಯಾದ ಅನುದಾನ?
    ಯೋಜನೆ- ಹಣ ಬಿಡುಗಡೆ- ಫಲಾನುಭವಿಗಳ ಸಂಖ್ಯೆ
    1. ಯಂತ್ರಚಾಲಿತ ದ್ವಿಚಕ್ರವಾಹನ – 3980 ಲಕ್ಷ ರೂ – 4000 ಫಲಾನುಭವಿಗಳು
    2. ಟಾಕಿಂಗ್ ಲ್ಯಾಪ್‌ಟಾಪ್ – 397.43 ಲಕ್ಷ ರೂ. – 411 ಫಲಾನುಭವಿಗಳು
    3. ಬ್ಯಾಟರಿ ಆಪರೇಟಿವ್ ವ್ಹೀಲ್‌ಚೇರ್ – 499.20 ಲಕ್ಷ ರೂ. – 520 ಫಲಾನುಭವಿಗಳು
    4. ಬ್ರೈಲ್‌ಕಿಟ್ – 44.03 ಲಕ್ಷ ರೂ. – 183 ಫಲಾನುಭವಿಗಳು
    5. ಹೊಲಿಗೆ ಯಂತ್ರ – 19.95 ಲಕ್ಷ ರೂ. – 179 ಫಲಾನುಭವಿಗಳು
    6. ಸಾಧನ ಸಲಕರಣೆ – 145.34ಲಕ್ಷ ರೂ. – 266 ಫಲಾನುಭವಿಗಳು

    2024-25ನೇ ಸಾಲಿನಲ್ಲಿ ಸರ್ಕಾರ ಮೀಸಲಿಟ್ಟ ಅನುದಾನ & ಸಲ್ಲಿಕೆಯಾಗಿರುವ ಅರ್ಜಿಗಳು
    1. ಯಂತ್ರಚಾಲಿತ ದ್ವಿಚಕ್ರವಾಹನ – 350 ಲಕ್ಷ ರೂ. – ಅರ್ಜಿಗಳ ಸಂಖ್ಯೆ – 9,744
    2. ಟಾಕಿಂಗ್ ಲ್ಯಾಪ್‌ಟಾಪ್ – 30 ಲಕ್ಷ ರೂ. – ಅರ್ಜಿಗಳ ಸಂಖ್ಯೆ 553
    3. ಬ್ಯಾಟರಿ ಆಪರೇಟೆಡ್ ವ್ಹೀಲ್‌ಚೇರ್ – ಅರ್ಜಿಗಳ ಸಂಖ್ಯೆ 350
    4. ಬ್ರೈಲ್‌ಕಿಟ್ – 35 ಲಕ್ಷ ರೂ. – ಅರ್ಜಿಗಳ ಸಂಖ್ಯೆ 311
    5. ಹೊಲಿಗೆ ಯಂತ್ರ – 25 ಲಕ್ಷ ರೂ. – ಅರ್ಜಿಗಳ ಸಂಖ್ಯೆ 862
    6. ಸಾಧನ ಸಲಕರಣೆ – 100 ಲಕ್ಷ ರೂ. – ಅರ್ಜಿಗಳ ಸಂಖ್ಯೆ 5,173

  • ಅರ್ಹತೆ ಇಲ್ಲದವರಿಗೆ ಬಿಪಿಎಲ್ ಕಾರ್ಡ್ ಸಿಕ್ತಿದೆ, ಸರ್ಕಾರ ಪರಿಷ್ಕರಣೆ ಮಾಡಬೇಕು: ನಟ ಚೇತನ್

    ಅರ್ಹತೆ ಇಲ್ಲದವರಿಗೆ ಬಿಪಿಎಲ್ ಕಾರ್ಡ್ ಸಿಕ್ತಿದೆ, ಸರ್ಕಾರ ಪರಿಷ್ಕರಣೆ ಮಾಡಬೇಕು: ನಟ ಚೇತನ್

    – ರೈತರ ಜಮೀನು ಕಿತ್ಕೊಂಡು ಇನ್ನೊಂದು ಏರ್‌ಪೋರ್ಟ್ ಬೇಕಾ?

    ಬೀದರ್: ಬಿಪಿಎಲ್ ಕಾರ್ಡ್ (BPL Card) ಯಾರಿಗೆ ಸಿಗಬೇಕೊ ಅವರಿಗೆ ಸಿಕ್ಕಿಲ್ಲ, ಅರ್ಹತೆ ಇಲ್ಲದವರಿಗೆ ಬಿಪಿಎಲ್ ಕಾರ್ಡ್ ಸಿಗುತ್ತಿದೆ. ಹೀಗಾಗಿ ಮೊದಲು ಬಿಪಿಎಲ್ ಕಾರ್ಡ್‌ಗಳನ್ನು ಸರ್ಕಾರ ಪರಿಷ್ಕರಣೆ ಮಾಡಬೇಕು ಎಂದು ನಟ ಚೇತನ್ (Actor Darshan) ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

    ಜಿಲ್ಲೆಯಲ್ಲಿ ಮಾತಾನಾಡಿದ ಅವರು, ಒಂದು ತಿಂಗಳ ಹಿಂದೆ ಸರ್ಕಾರ ಬಿಪಿಎಲ್ ಕಾರ್ಡ್‌ಗಳನ್ನು ಪರಿಷ್ಕರಣೆ ಮಾಡುತ್ತಾರೆ ಎಂದಿದ್ದರು. ಆದರೆ ಇನ್ನೂ ಮಾಡಿಲ್ಲ. ಪರಿಷ್ಕರಣೆ ಮಾಡಿದರೆ ರೇಷನ್ ಕಾರ್ಡ್ ವಿಚಾರದಲ್ಲಿ ಏನಾಗಿದೆ ಎಂದು ಗೊತ್ತಾಗುತ್ತದೆ. ಆದರೆ ನಮಗೆ ಸಮಸ್ಯೆಯಾಗುತ್ತಿರುವುದು ಸರ್ಕಾರದ ನಿರಾಸಕ್ತಿ, ಸಮಸ್ಯೆಗೆ ಪರಿಹಾರ ನೀಡಬೇಕು ಎಂಬ ಮನಸ್ಥಿತಿ ಸರ್ಕಾರದಲ್ಲಿ ಇಲ್ಲ ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: BBK 11: ನಾಮಿನೇಷನ್‌ನಲ್ಲಿ ಒಡೆದ ಒಗ್ಗಟ್ಟು- ತ್ರಿವಿಕ್ರಮ್‌ ಮೇಲೆ ಉಗ್ರಂ ಮಂಜು ಕೆಂಡ

    ಇದು ಬಿಟ್ಟು ಬರೀ ವೈಯಕ್ತಿಕ ಟೀಕೆ ಮಾಡುವುದೆ ಆಗಿದೆ. ವೈಯಕ್ತಿಕ ಪ್ರತಿಷ್ಠೆಗಾಗಿ ರಾಜಕೀಯ ಮಾಡಿದರೆ ಉತ್ತಮ ಕೆಲಸಗಳು ಆಗಲ್ಲ. ಉಳ್ಳವರ ಬಳಿ ಬಿಪಿಎಲ್ ಕಾರ್ಡ್‌ಗಳು ಇದ್ದರೆ, ಅದನ್ನು ಕಿತ್ತುಕೊಂಡು ಬಂದು ಇಲ್ಲದವರಿಗೆ ಸರ್ಕಾರ ನೀಡಬೇಕು. ಪರಿಷ್ಕರಣೆ ಜೊತೆಗೆ ರೇಷನ್ ಕಾರ್ಡ್‌ಗಳ ಬಗ್ಗೆ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

    ಇನ್ನೂ ವಕ್ಫ್‌ನಿಂದ ರೈತರ ಜಮೀನು ಪಹಣಿ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ವಕ್ಫ್ ಜಮೀನು ಅಲ್ಲಾಗೆ ಸೇರಿದ್ದು ಎಂದು ಹೇಳುತ್ತಾರೆ. ಯಾವ ಉದ್ದೇಶಕ್ಕಾಗಿ ಜಾಗ ದಾನ ಮಾಡಿರಬಹುದು ಗೊತ್ತಿಲ್ಲ. ಆದರೆ ವಕ್ಫ್ ಜಾಗ ಕೂಡಾ ಸರ್ಕಾರದಾಗಿದ್ದು, ಸರ್ಕಾರದ ಜಾಗ ಅಂದ್ರೆ ಅದು ನಮ್ಮ ಜನರ ಜಾಗ ಎಂದರ್ಥ. ರೈತರ ಭೂಮಿ ಅಂದರೆ ಅದು ಬಹಳ ಸೂಕ್ಷ್ಮವಾದ ವಿಚಾರ. ಬೆಂಗಳೂರಿನಲ್ಲಿ ಎರಡನೇ ಏರ್‌ಪೋರ್ಟ್ ಮಾಡುವುದಕ್ಕೆ 4,500 ಎಕರೆ ರೈತರ ಜಮೀನು ಕಿತ್ತುಕೊಳ್ಳುತ್ತಿದ್ದು, ಬಂಡವಾಳಶಾಹಿ ರಾಜಧಾನಿಯಲ್ಲಿ ತಾಂಡವಾಡುತ್ತಿದೆ. ರೈತರ ಭೂಮಿ ಕಿತ್ತುಕೊಂಡು ಭೂಮಾಫಿಯಾಗಳು ಬೆಳೆಯುತ್ತವೆ. ಆದರೆ ರೈತರ ಜಮೀನು ಕಿತ್ತುಕೊಂಡು ಇನ್ನೊಂದು ಏರ್‌ಪೋರ್ಟ್ ಬೇಕಾ? ಎಂದು ಪ್ರಶ್ನಿಸಿದರು.ಇದನ್ನೂ ಓದಿ: ಅರ್ಹರ ರೇಷನ್‌ ಕಾರ್ಡ್‌ ರದ್ದಾಗಿದ್ರೆ ಮರು ಅರ್ಜಿ ಸಲ್ಲಿಕೆಗೆ ವ್ಯವಸ್ಥೆ ಮಾಡ್ತೀವಿ: ಮುನಿಯಪ್ಪ

  • ಅರ್ಹರಿಗೆ ರೇಷನ್ ಕಾರ್ಡ್ ರದ್ದು ಮಾಡೋಲ್ಲ – ಸಿದ್ದರಾಮಯ್ಯ

    ಅರ್ಹರಿಗೆ ರೇಷನ್ ಕಾರ್ಡ್ ರದ್ದು ಮಾಡೋಲ್ಲ – ಸಿದ್ದರಾಮಯ್ಯ

    ಬೆಂಗಳೂರು: ಯಾವುದೇ ಅರ್ಹರಿಗೆ ರೇಷನ್ ಕಾರ್ಡ್ ರದ್ದು ಮಾಡುವುದಿಲ್ಲ ಎಂದು ಮಾಧ್ಯಮಗಳ ಮೇಲೆಯೇ ಆರೋಪ ಮಾಡಿ ಸಿಎಂ ಸಿದ್ದರಾಮಯ್ಯ (CM Siddaramaiah) ಪುನರುಚ್ಚರಿಸಿದ್ದಾರೆ.

    ರೇಷನ್ ಕಾರ್ಡ್ (Ration Card) ರದ್ದು ಆಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ರೇಷನ್ ಕಾರ್ಡ್ ವಿಚಾರದಲ್ಲಿ ಮಾಧ್ಯಮಗಳು ಗೊಂದಲ ಸೃಷ್ಟಿಸುತ್ತಿವೆ. ಅನರ್ಹರಿಗೆ ಮಾತ್ರ ನಾವು ಕಾರ್ಡ್ ರದ್ದು ಮಾಡೋದು. ಅರ್ಹರಿಗೆ ಯಾರಿಗೂ ತಪ್ಪಿಸುವುದಿಲ್ಲ. ಒಟ್ಟಾರೆ ಬಡವರಿಗೆ ಕೊಡಬೇಕು ಎಂದು ನನ್ನ ಹತ್ರ ಹೇಳುತ್ತೀರಿ. ಆದರೆ ಬರೆಯುವಾಗ, ತೋರಿಸುವಾಗ ಬಿಜೆಪಿ ಅವರು ಹೇಳಿದ ಹಾಗೆ ಬರೆಯುತ್ತೀರಾ? ಎಂದು ಪ್ರಶ್ನೆ ಮಾಡಿದರು.ಇದನ್ನೂ ಓದಿ: ಜಮೀರ್ ಹೇಳಿಕೆಯನ್ನ ಸಮಾಜ ಒಪ್ಪಲ್ಲ : ಬೊಮ್ಮಾಯಿ

    ಬಡವರಿಗೆ ಸಹಾಯ ಮಾಡಲು ಕಾರ್ಡ್ ಕೊಡುತ್ತಿದ್ದೇವೆ. ಅನ್ನಭಾಗ್ಯ ಯೋಜನೆ ಕೊಟ್ಟಿದ್ದು ನಾನು. ಬಿಜೆಪಿ ಅವರು ಅಲ್ಲ. ಬಿಜೆಪಿ, ಜೆಡಿಎಸ್ ಅವರು ಅನ್ನಭಾಗ್ಯ ಯೋಜನೆ ಕೊಟ್ಟಿಲ್ಲ. ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆ ಮಾಡಿದ್ದು. 2017ರಲ್ಲಿ 1 ರೂ.ಗೆ ಅಕ್ಕಿ ಕೊಟ್ಟಿದ್ದು. ಆಮೇಲೆ ಉಚಿತವಾಗಿ ಕೊಟ್ಟೆ. ಇದನ್ನು ಬಿಜೆಪಿಯವರು ಮಾಡಿದ್ದಾರಾ? ಬಿಜೆಪಿ ಅವರು ಮಾತಾಡುತ್ತಾರೆ ಅಷ್ಟೆ. ಬಿಜೆಪಿ ಅಧಿಕಾರದ ಯಾವ ರಾಜ್ಯದಲ್ಲಿ ಉಚಿತ ಅಕ್ಕಿ ಕೊಟ್ಟಿದ್ದಾರೆ. ಗುಜರಾತ್, ಮಧ್ಯಪ್ರದೇಶ, ಯುಪಿ, ಬಿಹಾರ, ಹರಿಯಾಣ ಬಿಜೆಪಿ ಅವರು ಕೊಟ್ಟಿದ್ದಾರಾ? ಎಂದು ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು.

    ಏಕಾಏಕಿ ರೇಷನ್ ಕಾರ್ಡ್ ರದ್ದು ಆಗುತ್ತಿಲ್ಲ. ಅರ್ಹರಿಗೆ ಕಾರ್ಡ್ ತಪ್ಪಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.ಇದನ್ನೂ ಓದಿ: ‘ಎಮರ್ಜೆನ್ಸಿ’ ರಿಲೀಸ್‌ಗೆ ಮುಹೂರ್ತ ಫಿಕ್ಸ್- ಜ.17ಕ್ಕೆ ಕಂಗನಾ ಸಿನಿಮಾ ರಿಲೀಸ್

  • ಮುನಿರತ್ನ ತಪ್ಪು ಮಾಡಿದ್ರೆ ಕಾನೂನು ಪ್ರಕಾರ ತನಿಖೆಯಾಗಿ ಶಿಕ್ಷೆ ಆಗಲಿ – ನಿಖಿಲ್

    ಮುನಿರತ್ನ ತಪ್ಪು ಮಾಡಿದ್ರೆ ಕಾನೂನು ಪ್ರಕಾರ ತನಿಖೆಯಾಗಿ ಶಿಕ್ಷೆ ಆಗಲಿ – ನಿಖಿಲ್

    – ಕಾಂಗ್ರೆಸ್ ಸರ್ಕಾರ ಟಾರ್ಗೆಟ್ ರಾಜಕೀಯ ಮಾಡುತ್ತಿದೆ

    ಬೆಂಗಳೂರು: ಶಾಸಕ ಮುನಿರತ್ನ (Munirathna) ತಪ್ಪು ಮಾಡಿದ್ರೆ ಕಾನೂನು ಪ್ರಕಾರ ತನಿಖೆಯಾಗಿ ಶಿಕ್ಷೆ ಆಗಲಿ. ಆದರೆ ಈ ಸರ್ಕಾರ ತಮ್ಮ ತಪ್ಪು ಮುಚ್ಚಿಕೊಳ್ಳಲು ಟಾರ್ಗೆಟ್ ರಾಜಕೀಯ ಮಾಡ್ತಿದೆ ಎಂದು ಜೆಡಿಎಸ್ (JDS) ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ನಗರದ ಜೆಪಿ ಭವನದಲ್ಲಿ ಮಾತನಾಡಿದ ಅವರು, ಮುನಿರತ್ನ ಕೇಸ್ ವಿಚಾರವಾಗಿ ತನಿಖೆ ಆಗುತ್ತಿದೆ. ತನಿಖೆ ನಡೆಯುವ ಸಮಯದಲ್ಲಿ ಮಾತನಾಡುವುದು ಸರಿಯಲ್ಲ. ತನಿಖೆಯಾಗಲು ಸತ್ಯಾಸತ್ಯತೆ ಹೊರಗೆ ಬರಲಿ. ಕಾನೂನಿಗಿಂತ ಯಾರು ದೊಡ್ಡವರು ಅಲ್ಲ. ನೆಲದ ಕಾನೂನಿಗೆ ಎಲ್ಲರೂ ತಲೆ ಬಾಗಲೇಬೇಕು ಎಂದು ಪ್ರತಿಕ್ರಿಯಿಸಿದರು.ಇದನ್ನೂ ಓದಿ: ತಿರುಪತಿ ಲಡ್ಡು ವಿಚಾರ ತನಿಖೆ ಆಗಲಿ: ಎಂ.ಬಿ ಪಾಟೀಲ್

    ಪರಶುರಾಮ್ ಕೇಸ್‌ನ್ನು ಮುಚ್ಚಿ ಹಾಕಲು ಸರ್ಕಾರ ಹೇಗೆ ಪ್ರಯತ್ನ ಮಾಡಿತ್ತು ಎಂದು ಎಲ್ಲರಿಗೂ ಗೊತ್ತಿದೆ. ವಾಲ್ಮೀಕಿ ಹಗರಣ ಕೇಸ್‌ನಲ್ಲಿ ನಾಗೇಂದ್ರ ವಿಚಾರಕ್ಕೆ ಸಂಬಂಧಿಸಿದಂತೆ ಈ ಸರ್ಕಾರ ಹೇಗೆ ತನಿಖೆ ಮಾಡಿತು ಎಂದು ಜಗಜ್ಜಾಹೀರಾಗಿದೆ. ಮುನಿರತ್ನ ವಿಚಾರದಲ್ಲಿ ಎಫ್‌ಎಸ್‌ಎಲ್ ವರದಿ ಬರಬೇಕು. ಅವರ ಧ್ವನಿಯೋ ಅಲ್ಲವೋ ಎಂದು ತಿಳಿಯಬೇಕು. ಮುನಿರತ್ನ ಅವರನ್ನು ತರಾತುರಿಯಲ್ಲಿ ಬಂಧನ ಮಾಡಿದ್ದಾರೆ. ಇದನ್ನು ನೋಡಿದರೆ ರಾಜ್ಯ ಸರ್ಕಾರ ಟಾರ್ಗೆಟ್ ರಾಜಕೀಯ ಮಾಡುತ್ತಿದೆ ಎಂದು ಅನ್ನಿಸುತ್ತಿದೆ ಎಂದರು.

    ಸರ್ಕಾರ ತಮ್ಮ ತಪ್ಪು ಮುಚ್ಚಿಕೊಳ್ಳಲು ಬೇರೆ ಅವರ ಮೇಲೆ ತಪ್ಪು ಹೊರಿಸುವ ಕೆಲಸ ಮಾಡುತ್ತಿರುವುದು ಜಗಜ್ಜಾಹೀರಾಗಿದೆ. ಸ್ವಾತಂತ್ರ‍್ಯ ಬಂದಾಗಿನಿಂದ ಅನೇಕ ಸರ್ಕಾರಗಳು ಕೆಲಸ ಮಾಡಿವೆ ಆದರೆ ಈ ಸರ್ಕಾರ ಟಾರ್ಗೆಟ್ ರಾಜಕೀಯ ಮಾಡಿಕೊಂಡು, ದ್ವೇಷದ ರಾಜಕೀಯ ಮಾಡಿಕೊಂಡು ಹೊರಟಿದ್ದಾರೆ. ಇದನ್ನು ರಾಜ್ಯದ ಜನರು ಮೆಚ್ಚುವುದಿಲ್ಲ ಎಂದು ಸರ್ಕಾರದ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು.

    ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದಾಗಿನಿಂದ ಜಾತಿ ಆಧಾರದಲ್ಲಿ ರಾಜಕೀಯ ಮಾಡುವ ಪ್ರಯತ್ನ ಮಾಡುತ್ತಿದೆ. ಇಲ್ಲಿ ಒಕ್ಕಲಿಗ ಟ್ಯಾಗ್, ಓಬಿಸಿ ಟ್ಯಾಗ್, ಲಿಂಗಾಯತರ ಟ್ಯಾಗ್, ಮುಸ್ಲಿಂ ಟ್ಯಾಗ್ ಹಾಕಿ ರಾಜಕೀಯ ಮಾಡುವುದು ಸೂಕ್ತ ಅಲ್ಲ. ಯಾವುದೋ ಸಮುದಾಯ ಒಲೈಕೆ ಮಾಡಿಕೊಳ್ಳಲು ಈ ರೀತಿ ಟಾರ್ಗೆಟ್ ರಾಜಕೀಯ ಮಾಡುತ್ತಿದ್ದಾರೆ. ಇವೆಲ್ಲ ಬಿಟ್ಟು ಮೂರು ಮುಕ್ಕಾಲು ವರ್ಷ ಸಮಯ ಇದೆ. ಜನ ಅಧಿಕಾರ ಮಾಡಲು ಅವಕಾಶ ಕೊಟ್ಟಿದ್ದಾರೆ. ಇದರ ಬಗ್ಗೆ ಸರ್ಕಾರ ಗಮನ ಕೊಡಲಿ. ಸರ್ಕಾರ ಬಂದೂ ಇಷ್ಟು ದಿನ ಆದರೂ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ಈ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಶುರುವಾಗಿದೆ. ನಾಳೆ ಚುನಾವಣೆ ನಡೆದರೆ ಕಾಂಗ್ರೆಸ್ ಸರ್ಕಾರವನ್ನ ರಾಜ್ಯದ ಜನ ತಿರಸ್ಕಾರ ಮಾಡುತ್ತಾರೆ. ಆ ಮಟ್ಟದ ವಾತಾವರಣ ಸರ್ಕಾರದ ವಿರುದ್ದ ಇದೆ. ಅವರ ತಪ್ಪು ಮುಚ್ಚಿಕೊಳ್ಳಲು ನಿತ್ಯ ಹಗರಣಗಳು, ಅಕ್ರಮಗಳು ನಡೆಯುತ್ತಿವೆ. ನಾವು ವಿರೋಧ ಪಕ್ಷವಾಗಿ ಪ್ರಜಾಪ್ರಭುತ್ವದಲ್ಲಿ ನಮಗೆ ಹಕ್ಕು ಕೊಟ್ಟಿದ್ದಾರೆ. ಅದನ್ನು ಬಯಲಿಗೆ ಎಳೆಯೋದೇ ತಪ್ಪಾ ಎಂದು ಪ್ರಶ್ನೆ ಮಾಡಿದರು.ಇದನ್ನೂ ಓದಿ: ಬಿಬಿಎಂಪಿ ಅಧಿಕಾರಿಗಳು ಹಗಲು-ರಾತ್ರಿ ಗುಂಡಿ ಮುಚ್ಚೋ ಕೆಲಸ ಮಾಡ್ತಿದ್ದಾರೆ: ಡಿಕೆಶಿ

  • ಕಿಡಿಗೇಡಿಗಳ ಅಟ್ಟಹಾಸಕ್ಕೆ ನಲುಗಿದ ನಾಗಮಂಗಲ – ಬೀದಿ ಪಾಲಾದ ಬದುಕು.. ಒಟ್ಟು 2.66 ಕೋಟಿ ನಷ್ಟ!

    ಕಿಡಿಗೇಡಿಗಳ ಅಟ್ಟಹಾಸಕ್ಕೆ ನಲುಗಿದ ನಾಗಮಂಗಲ – ಬೀದಿ ಪಾಲಾದ ಬದುಕು.. ಒಟ್ಟು 2.66 ಕೋಟಿ ನಷ್ಟ!

    – ನಷ್ಟದ ವರದಿ ಸಿದ್ಧಪಡಿಸಿದ ಜಿಲ್ಲಾಡಳಿತ

    ಮಂಡ್ಯ: ಮಂಡ್ಯ ಜಿಲ್ಲೆಯ ನಾಗಮಂಗಲದ ಗಲಭೆಯಲ್ಲಿ (Nagamangala Violence) ಹಲವು ಅಂಗಡಿಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಇದರಿಂದ ಹಲವರ ಬದುಕು ಬೀದಿಗೆ ಬಂದಿದೆ. ಸದ್ಯ ಇವರಿಗೆ ಸರ್ಕಾರ ಪರಿಹಾರ ನೀಡಲು ಮುಂದಾಗಿದ್ದು, ಮಂಡ್ಯ ಜಿಲ್ಲಾಡಳಿತ ಗಲಭೆಯಿಂದ ನಷ್ಟವಾಗಿರುವ ಆಸ್ತಿ ಮೌಲ್ಯವನ್ಮು ಅಂದಾಜಿಸಿದೆ.

    ಮಂಡ್ಯ (Mandya) ಜಿಲ್ಲೆ ನಾಗಮಂಗಲದ ಗಲಭೆಯಲ್ಲಿ ಕಿಡಿಗೇಡಿಳು ಹಚ್ಚಿದ ಬೆಂಕಿಯಿಂದ ಇಡೀ ಪಟ್ಟಣದಲ್ಲಿ ಅಶಾಂತಿ ಉಂಟಾದರೆ, ಇದರಿಂದ ಹಲವು ಜನರ ಬದುಕು ಬೀದಿಗೆ ಬಂದಿದೆ. ತಮ್ಮ ಬದುಕು ರೂಪಿಸಿಕೊಳ್ಳಲು ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿಕೆ ಮಾಡಿ ತಮಗಿಷ್ಟದ ವ್ಯಾಪಾರ ಮಾಡಿ ಬದುಕು ಕಟ್ಟಿಕೊಂಡಿದ್ದರು ಇಲ್ಲಿನ ಜನ. ಇದೀಗ ಕೋಮು ದಳ್ಳುರಿಗೆ ಗಲಭೆಕೋರರು ಹಚ್ಚಿದ ಬೆಂಕಿಯಿಂದ ಇಲ್ಲಿನ ಹಲವು ವ್ಯಾಪಾರಿಗಳ ಕನಸು ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ. ಇದನ್ನೂ ಓದಿ: Mandya | ನಾಗಮಂಗಲದಲ್ಲಿ ಖಾಕಿ ಹೈ ಅಲರ್ಟ್ – ಈದ್ ಮಿಲಾದ್ ಹಿನ್ನೆಲೆ ಪೊಲೀಸ್ ಸರ್ಪಗಾವಲು

    ಇದರಿಂದ ಈ ವ್ಯಾಪರವನ್ನೇ ನಂಬಿಕೊಂಡಿದ್ದ ಜನರ ಬದುಕು ಬೀದಿಗೆ ಬಂದಿದೆ. ಸದ್ಯ ಈ ಜನರಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ವೈಯಕ್ತಿಕವಾಗಿ ಅವರ ಒಂದಿಷ್ಟು ಪರಿಹಾರ ನೀಡಿದ್ದಾರೆ. ಈ ಬೆನ್ನಲ್ಲೇ ರಾಜ್ಯ ಸರ್ಕಾರವೂ (Karnataka Government) ಹಾನಿಗೊಳಗಾದ ಕಟ್ಟದ ಮಾಲೀಕರು ಹಾಗೂ ವ್ಯಾಪಾರಸ್ಥರಿಗೆ ಪರಿಹಾರ ನೀಡಲು ಮುಂದಾಗಿದೆ. ಈ ಸಂಬಂಧ ಮಂಡ್ಯ ಜಿಲ್ಲಾಡಳಿತ ಸಮೀಕ್ಷೆ ಮಾಡಿ ಹಾನಿಯಾದ ಕಟ್ಟಡ ಹಾಗೂ ವಸ್ತುಗಳಿಗೆ ಮೌಲ್ಯವನ್ನು ಅಂದಾಜು ಮಾಡಿ ವರದಿಯೊಂದನ್ನು ಸಿದ್ಧಪಡಿಸಿದೆ.

    ಈ ಸಂಬಂಧ ನಾಗಮಂಗಲ ತಹಶೀಲ್ದಾರ್ ನೇತೃತ್ವದಲ್ಲಿ ಪಿಡ್ಲ್ಯೂಡಿ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಒಂದು ತಂಡ ರಚನೆ ಮಾಡಲಾಗಿತ್ತು. ಈ ತಂಡ ಎಸ್‌ಆರ್ ರೇಟ್ ಪ್ರಕಾರ ಹಾನಿಯ ಅಂದಾಜನ್ನು ಮಾಡಿದ್ದಾರೆ. ಎಸ್‌ಆರ್ ರೇಟ್ ಪ್ರಕಾರ ಗಲಭೆಯಿಂದ ಹಾನಿಗೆ ಒಳಗಾಗಿರುವ ಕಟ್ಟದ ಪ್ರಮಾಣ ಮೌಲ್ಯ 1.47 ಕೋಟಿ ರೂ. ಹಾಗೂ ಬೆಂಕಿಯ ಕೆನ್ನಾಲೆಗೆ ಸುಟ್ಟು ಕರಕಲಾದ ಸರಕಿನ ಮೌಲ್ಯ 1.18 ಕೋಟಿ ರೂ. ಎಂದು ಅಂದಾಜು ಮಾಡಲಾಗಿದೆ. ಈ ವರದಿಯನ್ನು ಸರ್ಕಾರಕ್ಕೆ ನೀಡಿ, ಸೂಕ್ತ ಪರಿಹಾರ ನೀಡವಂತೆ ಮಂಡ್ಯ ಡಿಸಿ ಡಾ.ಕುಮಾರ್‌ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ನಾಗಮಂಗಲ ಗಲಭೆ; ಕಿಡಿಗೇಡಿಗಳು ಅಂಗಡಿಗೆ ಪೆಟ್ರೋಲ್ ಬಾಂಬ್ ಎಸೆಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ನಾಗಮಂಗಲ ಗಲಭೆಯಿಂದ ಅಪಾರ ಪ್ರಮಾಣ ಕಟ್ಟಡ ಹಾಗೂ ಸರಕುಗಳು ಹಾನಿಯಾಗಿವೆ. ಸರ್ಕಾರ ಈ ವರದಿಯನ್ನು ಆಧರಿಸಿ ಎಷ್ಟು ಪರಿಹಾರವನ್ನು ಘೋಷಣೆ ಮಾಡಲಿದೆಯೇ ಅನ್ನೋದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: Nagamangala Violence | ಪಿಎಫ್‌ಐ ಸಂಘಟನೆಯವರು ಮಾತ್ರವಲ್ಲ, ಅಕ್ರಮ ಬಾಂಗ್ಲಾ ವಲಸಿಗರಿದ್ದಾರೆ – ಸುರೇಶ್‌ಗೌಡ

  • ರಾಜ್ಯದಲ್ಲಿರೋದು ತಾಲಿಬಾನ್ ಸರ್ಕಾರ- ಹಿಂದೂ ಯುವಕರ ಮೇಲೆ ಕೇಸ್ ದಾಖಲಿಸಿದ್ದಕ್ಕೆ ಅಶೋಕ್ ಕಿಡಿ

    ರಾಜ್ಯದಲ್ಲಿರೋದು ತಾಲಿಬಾನ್ ಸರ್ಕಾರ- ಹಿಂದೂ ಯುವಕರ ಮೇಲೆ ಕೇಸ್ ದಾಖಲಿಸಿದ್ದಕ್ಕೆ ಅಶೋಕ್ ಕಿಡಿ

    ಬೆಂಗಳೂರು: ನಾಗಮಂಗಲ ಗಲಭೆ ಪ್ರಕರಣದಲ್ಲಿ ಹಿಂದೂ ಯುವಕರ ಮೇಲೆ ಕೇಸ್ ದಾಖಲಿಸಿದ್ದಕ್ಕೆ, ರಾಜ್ಯದಲ್ಲಿರೋದು ತಾಲಿಬಾನ್ ಸರ್ಕಾರ ಎಂದು ವಿಪಕ್ಷ ನಾಯಕ ಆರ್. ಅಶೋಕ್ (R. Ashok) ಕಿಡಿಕಾರಿದ್ದಾರೆ.

    ಎಕ್ಸ್‌ನಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಅಶೋಕ್, ಕಾಂಗ್ರೆಸ್ (Congress) ಸರ್ಕಾರವು ತಾಲಿಬಾನ್ ಸರ್ಕಾರ ಆಗಿದೆ. ಅಷ್ಟೇ ಅಲ್ಲ ಘಟನೆ ಸಂಬಂಧ ಸರ್ಕಾರಕ್ಕೆ ಸರಣಿ ಪ್ರಶ್ನೆಗಳನ್ನು ಕೇಳಿ ಉತ್ತರಕ್ಕೆ ಆಗ್ರಹಿಸಿದ್ದಾರೆ.ಇದನ್ನೂ ಓದಿ: ಸಿಎಂ, ತುಕಾರಾಂ ರಾಜೀನಾಮೆಗೆ ಒತ್ತಾಯಿಸಿ ಎಸ್ಟಿ ಮೋರ್ಚಾ ರಾಜ್ಯಾದ್ಯಂತ ಹೋರಾಟ- ಬಂಗಾರು ಹನುಮಂತು

    ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದಿರುವ ಕೋಮುಗಲಭೆ ಮತ್ತು ಘಟನೆಯ ನಂತರ ಗೃಹ ಸಚಿವರ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯದ ಹೇಳಿಕೆಗಳನ್ನು ಗಮನಿಸಿ ಮಾತನಾಡಿದ್ದಾರೆ. ರಾಜ್ಯದಲ್ಲಿರುವುದು ಮೂಲಭೂತವಾದಿಗಳಿಗೆ ಬೆಂಬಲ ಕೊಡುವ ತಾಲಿಬಾನ್ ಸರ್ಕಾರ ಎಂಬುದು ಮತ್ತೊಮ್ಮೆ ಸಾಬೀತಾಗಿತ್ತದೆ. ಹಿಂದೂಗಳನ್ನೇ ಗುರಿಯಾಗಿಸಿಕೊಂಡು, ಗಣೇಶ ವಿಸರ್ಜನೆಯ ಮೆರವಣಿಗೆಗೆ ಕಾದು, ಕಲ್ಲುಗಳ ರಾಶಿ, ಪೆಟ್ರೋಲ್ ಬಾಂಬು, ತಲ್ವಾರ್‌ಗಳನ್ನು ಸಂಗ್ರಹಿಸಿಟ್ಟುಕೊಂಡು ಸಂಪೂರ್ಣ ಪೂರ್ವನಿಯೋಜಿತವಾಗಿ ಈ ದುಷ್ಕೃತ್ಯ ನಡೆಸಲಾಗಿದೆ. ಸ್ಪಷ್ಟವಾಗಿ ಕಾಣುತ್ತಿದ್ದರೂ, ಇದೊಂದು ಆಕಸ್ಮಿಕ ಘಟನೆ, ಸಣ್ಣ ಘಟನೆ ಎಂದು ತಿಪ್ಪೆ ಸಾರಿಸುವಂತೆ ಮಾತನಾಡುತ್ತಿದ್ದಾರೆ. ಈ ರೀತಿ ಮಾತನಾಡಿ ಕಾಂಗ್ರೆಸ್ ಸರ್ಕಾರ, ಮುಸ್ಲಿಂ ಮತಾಂಧರನ್ನು ಓಲೈಕೆ ಮಾಡಲು, ಹಿಂದೂಗಳನ್ನು ಬಲಿಕೊಡಲೂ ಸಿದ್ಧ ಎಂದು ನಿರ್ಧಾರ ಮಾಡಿದಂತಿದೆ ಎಂದು ಕಿಡಿಕಾರಿದ್ದಾರೆ.

    ನಾಗಮಂಗಲದ ಘಟನೆಯಿಂದ ಹೀಗಾದರೆ ನಮ್ಮ ಗತಿ ಏನು ಎಂದು ಇಡೀ ಹಿಂದೂ ಸಮಾಜ ಆತಂಕಗೊಂಡಿದೆ. ರಾಜ್ಯದ ಹಿಂದೂಗಳ ಮನಸ್ಸಿನಲ್ಲಿ ಕಾಡುತ್ತಿರುವ ಈ ಪ್ರಶ್ನೆಗಳಿಗೆ ಕಾಂಗ್ರೆಸ್ ಸರ್ಕಾರ ಉತ್ತರ ಕೊಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅಶೋಕ್ ಪ್ರಶ್ನೆಗಳು!?

    1.ಕಳೆದ ವರ್ಷ ಅದೇ ಸ್ಥಳದಲ್ಲೇ ಗಲಭೆ ಆಗಿದ್ದರೂ ಈ ವರ್ಷ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಿಲ್ಲವೇಕೆ?

    2.ಇಂತಹ ಕೃತ್ಯದ ಇತಿಹಾಸವಿದ್ದರೂ ಗುಪ್ತಚರ ವಿಭಾಗದವರು ಇದರ ಬಗ್ಗೆ ಮಾಹಿತಿ ಕೊಡಲಿಲ್ಲವೇಕೆ? ಇದು ಪೊಲೀಸ್ ಇಲಾಖೆಯ ವೈಫಲ್ಯ ಅಲ್ಲವೇ? ಅಥವಾ ಗುಪ್ತಚರ ಮಾಹಿತಿ ಇದ್ದೂ ಸಹ ನಿರ್ಲಕ್ಷ್ಯ ಮಾಡಲಾಯಿತೇ?

    3.ಗಣಪತಿ ಮೆರವಣಿಗೆಗೆ ರೂಟ್ ಮ್ಯಾಪ್ ಹಾಕಿಕೊಟ್ಟು ಅನುಮತಿ ನೀಡಿದ್ದರೂ, ಪೊಲೀಸರು ಮಾರ್ಗದುದ್ದಕ್ಕೂ ಯಾಕೆ ಭದ್ರತೆ ನೀಡಲಿಲ್ಲ?

    4.ಪಟ್ಟಣದಲ್ಲಿ ಇದ್ದ ಡಿಎಆರ್ ವ್ಯಾನ್ ಅನ್ನು ಮೆರವಣಿಗೆ ಆರಂಭವಾದ ಬಳಿಕ ಬೇರೆಡೆ ಕಳುಹಿಸಿದ್ದು ಏಕೆ?

    5.ಬುಧವಾರ ರಾತ್ರಿ ಗಲಭೆ ಆರಂಭವಾಗಿ ಎರಡು ಗಂಟೆ ಕಳೆದರೂ ಕೇವಲ 40ಕಿಮೀ ದೂರದಲ್ಲಿರುವ ಹೆಚ್ಚಿನ ಸಿಬ್ಬಂದಿಯನ್ನು ಏಕೆ ತುರ್ತಾಗಿ ಕರೆಸಿಕೊಳ್ಳಲಿಲ್ಲ?

    6.ಪೊಲೀಸರ ಅನುಮತಿ ಪಡೆದು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದವರನ್ನೇ ಎಫ್‌ಐಆರ್ನಲ್ಲಿ ಎ1 ಮಾಡಿರುವುದೇಕೆ?

    7.ಎ1 ನಿಂದ ಎ23 ವರೆಗೆ ಕೇವಲ ಹಿಂದೂಗಳ ಮೇಲೆ ಎಫ್‌ಐಆರ್ ಮಾಡಿ ನಂತರ ಮುಸ್ಲಿಮರ ಹೆಸರು ಸೇರಿಸಿರುವುದು ಯಾವ ಸೀಮೆ ನ್ಯಾಯ? ಗಲಭೆಕೋರರನನ್ನು ರಕ್ಷಿಸಲು ಸರ್ಕಾರ ಮುಂದಾಗಿರುವುದು ತುಷ್ಟೀಕರಣದ ಪರಮಾವಧಿ ಅಲ್ಲವೇ?

    8.ಇಷ್ಟಕ್ಕೂ ಮಸೀದಿ ಅಥವಾ ದರ್ಗಾ ಮುಂದೆ ಗಣೇಶೋತ್ಸವ ಮೆರವಣಿಗೆ ಹಾದು ಹೋಗಬಾರದು ಎನ್ನುವುದಕ್ಕೆ ಕರ್ನಾಟಕವೇನು ಇಸ್ಲಾಮಿಕ್ ರಿಪಬ್ಲಿಕ್ಕಾ?

    9.ಪೆಟ್ರೋಲ್ ಬಾಂಬ್, ಕಲ್ಲುಗಳ ರಾಶಿ, ತಲ್ವಾರ್ ಹಾಗೂ ಮಾರಾಕಾಸ್ತ್ರಗಳನ್ನು ಮಸೀದಿಯಲ್ಲಿ ಸಂಗ್ರಹಿಸಿ ದಾಂಧಲೆ ಆರಂಭಿಸಿದ್ದನ್ನು ಗಮನಿಸಿದರೆ ಇದು ಪೂರ್ವನಿಯೋಜಿತ ಕೃತ್ಯ ಎನ್ನುವುದು ಸ್ಪಷ್ಟ ಅಲ್ಲವೇ?

    10.ಗಲಭೆಯಲ್ಲಿ ಅಪಾಯಕಾರಿ ವಸ್ತುಗಳ ಬಳಕೆಯಾದರೂ, 25 ಕೋಟಿ ರೂ. ಮೊತ್ತದ ಆಸ್ತಿ-ಪಾಸ್ತಿ ನಷ್ಟ ಸಂಭವಿಸಿದ್ದರೂ, ಗೃಹ ಸಚಿವರಿಗೆ ಇದೊಂದು ಸಣ್ಣ ಘಟನೆ, ಆಕಸ್ಮಿಕ ಘಟನೆ ಅನ್ನಿಸಲು ಕಾರಣ ಏನು? ಅವರಿಗೆ ಆ ರೀತಿ ಮಾಹಿತಿ ನೀಡಿದವರು ಯಾರು? ಅಥವಾ ಈ ರೀತಿ ಹೇಳಲು ಅವರ ಮೇಲೆ ಯಾರದ್ದಾದರೂ ಒತ್ತಡವಿತ್ತೆ? ಅಥವಾ ಕಾಂಗ್ರೆಸ್ ಸರ್ಕಾರ ಯಾರನ್ನಾದರೂ ರಕ್ಷಿಸಲು ಹೊರಟಿದೆಯೇ?

    11.ಇಷ್ಟೆಲ್ಲಾ ಅನಾಹುತ ಆಗಿದ್ದರೂ ಬೆಂಗಳೂರಿನಿಂದ ಕೇವಲ 130 ಕಿಮೀ ದೂರವಿರುವ ನಾಗಮಂಗಲಕ್ಕೆ ಗೃಹ ಸಚಿವರು ಇನ್ನೂ ಭೇಟಿ ನೀಡಿಲ್ಲವೇಕೆ? ಈ ರೀತಿ ತಪ್ಪು ಎಫ್‌ಐಆರ್ ದಾಖಲಿಸಲು ಕಾರಣರಾದ ಪೊಲೀಸರನ್ನು ಈ ಕೂಡಲೇ ಅಮಾನತು ಮಾಡಬೇಕು. ಎಫ್‌ಐಆರ್‌ನಲ್ಲಿ ಕೇವಲ ಹಿಂದೂಗಳನ್ನು ಟಾರ್ಗೆಟ್ ಮಾಡುವ ಈ ಹುನ್ನಾರ ಕೈಬಿಡದಿದ್ದರೆ ಬಿಜೆಪಿ ನಾಗಮಂಗಲದಲ್ಲಿ ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇನೆ ಎಂದಿದ್ದಾರೆ.ಇದನ್ನೂ ಓದಿ: ಬರಲಿದೆ ವಿಜಯ್ ಸೇತುಪತಿ, ತ್ರಿಷಾ ನಟನೆಯ ’96’ ಚಿತ್ರದ ಸೀಕ್ವೆಲ್

  • ಗ್ಯಾರಂಟಿ ಪರಿಷ್ಕರಣೆಗೆ ರಾಜ್ಯ ಸರ್ಕಾರ ಚಿಂತನೆ; ಬಿಪಿಎಲ್ ಮಾನದಂಡ ಫಿಕ್ಸ್?

    ಗ್ಯಾರಂಟಿ ಪರಿಷ್ಕರಣೆಗೆ ರಾಜ್ಯ ಸರ್ಕಾರ ಚಿಂತನೆ; ಬಿಪಿಎಲ್ ಮಾನದಂಡ ಫಿಕ್ಸ್?

    – ವಾರ್ಷಿಕ 20,000 ಕೋಟಿ ರೂ. ಉಳಿತಾಯ ಲೆಕ್ಕಾಚಾರ?
    – 4 ಲಕ್ಷ ಮಹಿಳೆಯರಿಗೆ ʻಗೃಹಲಕ್ಷ್ಮಿʼ ತಲುಪಿಲ್ಲ ಏಕೆ?

    ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದ ಗದ್ದುಗೆ ಹಿಡಿಯಲು ಕಾರಣವಾಗಿದ್ದ ಗ್ಯಾರಂಟಿ ಯೋಜನೆಗಳಲ್ಲಿ (Guarantee Schemes) ಮಾರ್ಪಾಡು ತರಲು ರಾಜ್ಯ ಸರ್ಕಾರ (Karnataka Government) ಚಿಂತನೆ ನಡೆಸಿದೆ. ಪಕ್ಷದ ಕೆಲ ಸಚಿವರೇ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಅರ್ಹ ಬಡವರಿಗೆ ಮಾತ್ರ ಗ್ಯಾರಂಟಿ ಯೋಜನೆ ಮೀಸಲಿಡಲು ಸರ್ಕಾರ ಗಂಭೀರ ಕ್ರಮಕ್ಕೆ ಮುಂದಾಗಿದೆ. ಜೊತೆಗೆ ವಾರ್ಷಿಕ 20 ಸಾವಿರ ಕೋಟಿ ರೂ. ಉಳಿತಾಯದ ಲೆಕ್ಕಾಚಾರವನ್ನೂ ಸರ್ಕಾರ ಇಟ್ಟುಕೊಂಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ಸಂಪುಟದ ಕೆಲ ಸಚಿವರು ಹಾಗೂ ಕಾಂಗ್ರೆಸ್‌ ಹೈಕಮಾಂಡ್‌ (Congress High command) ನಾಯಕರು ಸಹ ಗ್ಯಾರಂಟಿ ಪರಿಷ್ಕರಣೆಗೆ ಒಲವು ತೋರಿದ್ದಾರೆ. ವಾರ್ಷಿಕ 20,000 ಕೋಟಿ ರೂ. ಉಳಿತಾಯ ಲೆಕ್ಕಾಚಾರ ಹಾಕಿಕೊಂಡಿರುವುದರಿಂದ ಬಿಪಿಎಲ್‌ ಮಾನದಂಡ ನಿಗದಿಪಡಿಸುವ ಚಿಂತನೆಯೂ ಸಹ ಸರ್ಕಾರದ ಮುಂದಿಟ್ಟುಕೊಂಡಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಮಂಡ್ಯದಲ್ಲಿ ಮೆಡಿಕಲ್ ಮಾಫಿಯಾ; ಲೋಕಾಯುಕ್ತ ದಾಳಿಯಲ್ಲಿ ಲಕ್ಷಾಂತರ ರೂ. ಮೌಲ್ಯದ ಅವಧಿ ಮುಗಿದ ಮೆಡಿಸಿನ್ ಪತ್ತೆ

    ಗ್ಯಾರಂಟಿ ಯೋಜನೆಗಳಿಗೆ ಪರಿಷ್ಕರಣೆ ಮಾಡುವ ವಿಚಾರ ಕುರಿತು ದೆಹಲಿಯಲ್ಲಿ ಸಚಿವ ಕೆ.ಹೆಚ್‌ ಮುನಿಯಪ್ಪ ಖುದ್ದು ಪ್ರತಿಕ್ರಿಯೆ ನೀಡಿದ್ದಾರೆ. ಶಕ್ತಿ ಯೋಜನೆ ಮತ್ತು ಯುವ ನಿಧಿ ಯೋಜನೆಯಲ್ಲಿ ಪರಿಷ್ಕರಣೆ ಸಾಧ್ಯವಿಲ್ಲ. ಗೃಹ ಲಕ್ಷ್ಮಿ ಮತ್ತು ಅನ್ನ ಭಾಗ್ಯದಲ್ಲಿ ಪರಿಷ್ಕರಣೆ ಸಾಧ್ಯವಿದೆ. ಗೃಹ ಜ್ಯೋತಿಯಲ್ಲಿ 90% ಜನರು 200 ಯುನಿಟ್ ಗಿಂತ ಕಡಿಮೆ ವಿದ್ಯುತ್‌ ಬಳಸುತ್ತಿದ್ದಾರೆ. ಇದರ ಪರಿಷ್ಕರಣೆಯಿಂದ ಏನು ಲಾಭ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಿತ್ರರಂಗದ ಏಳಿಗೆಗಾಗಿ ಪೂಜೆ- ಊಟಕ್ಕೆ ಕುತ್ತು ಬಂದಾಗ ದೇವರ ಮೊರೆ ಹೋಗುತ್ತೀವಿ ಎಂದ ನೆನಪಿರಲಿ ಪ್ರೇಮ್

    ಆ.22ರಂದು ಕ್ಯಾಬಿನೆಟ್‌ ಸಭೆ:
    ಇದೇ ಆಗಸ್ಟ್‌ 22ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramahai) ಅವರು ಸಚಿವ ಸಂಪುಟ ಸಭೆ ಕರೆದಿದ್ದಾರೆ. ಇದೇ ಸಭೆಯಲ್ಲಿ ಗ್ಯಾರಂಟಿಗಳ ಪರಿಷ್ಕರಣೆ ಸಂಬಂಧವೂ ಚರ್ಚೆ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

    ಗೃಹಜ್ಯೋತಿ ಯೋಜನೆ ಪರಿಷ್ಕರಣೆ ಡೌಟ್:
    ಗೃಹ ಜ್ಯೋತಿ ಯೋಜನೆಯಲ್ಲಿ ಎಲ್ಲಾ ವರ್ಗದವರು ಫಲಾನುಭವಿಗಳು ಇದ್ದಾರೆ, ಆದ್ದರಿಂದ ಪರಿಷ್ಕರಣೆ ಸಾಧ್ಯವಿಲ್ಲ ಎನ್ನಲಾಗಿದೆ. ಎಪಿಎಲ್, ಬಿಪಿಎಲ್ ಕಾರ್ಡ್‌ದಾರರು ಫಲಾನುಭವಿಗಳಿದ್ದಾರೆ. ಒಟ್ಟು 1,70,90,681 ಫಲಾನುಭವಿಗಳಿದ್ದು, ಈ ಪೈಕಿ 1,54,08,594 ಫಲಾನುಭವಿಗಳು ಮಾತ್ರ ನೋಂದಣಿಯಾಗಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ್ಯೋತ್ಸವ: ರಾಷ್ಟ್ರಪತಿಗಳ ಪದಕ ಘೋಷಿಸಿದ ಕೇಂದ್ರ – ರಾಜ್ಯದ 19 ಪೊಲೀಸ್ ಸಿಬ್ಬಂದಿಗೆ ಪದಕ

    4 ಲಕ್ಷ ಮಹಿಳೆಯರಿಗೆ ತಲುಪಿಲ್ಲ ಹಣ:
    ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಒಟ್ಟು 1.25 ಕೋಟಿ ಫಲಾನುಭವಿಗಳಿದ್ದಾರೆ. ಈ ಪೈಕಿ ಹಣ ಪಡೆದಿರುವವರ ಸಂಖ್ಯೆ 1.21 ಕೋಟಿ ಇದೆ. 4 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ತಲುಪಿಲ್ಲ. ಏಕೆಂದರೆ 1.78 ಲಕ್ಷ ಮಹಿಳೆಯರು ಐಟಿ, ಜಿಎಸ್‌ಟಿ ಪಾವತಿದಾರರಾಗಿದ್ದಾರೆ. 47 ಸಾವಿರ ಮಹಿಳೆಯರ ಎನ್‌ಪಿಸಿಎಸ್, ಆಧಾರ್ ಅಪ್‌ಡೇಟ್‌ ಆಗಿಲ್ಲ. 57 ಸಾವಿರ ಮಹಿಳೆಯರ ಎನ್‌ಪಿಸಿಐ ಇನ್‌ಆಕ್ಟೀವ್‌ ಆಗಿದೆ. ಈ ಎಲ್ಲ ಕಾರಣಗಳಿಂದ ಗೃಹಲಕ್ಷ್ಮಿ ಯೋಜನೆಯಡಿ 4 ಲಕ್ಷ ಫಲಾನುಭವಿಗಳಿಗೆ ಹಣ ತಲುಪಿಲ್ಲ ಎಂದು ಸಂಬಂಧಪಟ್ಟ ಅಧಿಕಾತಿಗಳು ಮಾಹಿತಿ ನೀಡಿದ್ದಾರೆ.

  • KRS ಡ್ಯಾಂನಲ್ಲೂ ಸ್ಟಾಪ್‌ ಲಾಕ್ ಗೇಟ್ ಇಲ್ಲ – ಈಗಲೇ ಎಚ್ಚೆತ್ತುಕೊಳ್ಳೋದು ಒಳ್ಳೆಯದು: ಹೆಚ್‌ಡಿಕೆ

    KRS ಡ್ಯಾಂನಲ್ಲೂ ಸ್ಟಾಪ್‌ ಲಾಕ್ ಗೇಟ್ ಇಲ್ಲ – ಈಗಲೇ ಎಚ್ಚೆತ್ತುಕೊಳ್ಳೋದು ಒಳ್ಳೆಯದು: ಹೆಚ್‌ಡಿಕೆ

    – ತುಂಗಭದ್ರಾ ಡ್ಯಾಂ ಸಮಸ್ಯೆ ಸರ್ಕಾರದ ನಿರ್ಲಕ್ಷ್ಯ ಅಲ್ಲ ಎಂದ ಕೇಂದ್ರ ಸಚಿವ

    ಮಂಡ್ಯ: ಕೆಆರ್‌ಎಸ್ ಡ್ಯಾಂನಲ್ಲಿ (KRS Dam) ಸ್ಟಾಫ್ ಲಾಕ್ ಗೇಟ್ ಇಲ್ಲ. ಕೆಆರ್‌ಎಸ್ ಡ್ಯಾಂ ಕಟ್ಟುವಾಗ ಸ್ಟಾಪ್‌ ಇಲ್ಲದ ಕಾರಣ ಹಾಕಿಲ್ಲ. ಈಗ ತುಂಗಭದ್ರಾ ಡ್ಯಾಂ ಪರಿಸ್ಥಿತಿ ಗಮನಿಸಿದ್ರೆ, ಎಚ್ಚೆತ್ತುಕೊಳ್ಳುವುದು ಒಳ್ಳೆಯದು. ದೂರ ದೃಷ್ಟಿಯಿಂದ ಕೆಆರ್‌ಎಸ್‌ಗೆ ಸ್ಟಾಪ್‌ ಲಾಕ್ ಹಾಕಬೇಕು ಎಂದು ಕೇಂದ್ರ ಸಚಿವ ಹಾಗೂ ಮಂಡ್ಯದ ಸಂಸದ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಎಚ್ಚರಿಸಿದ್ದಾರೆ.

    ತುಂಗಭದ್ರಾ ಡ್ಯಾಂ (Tungabhadra Dam) ಕ್ರಸ್ಟ್‌ ಗೇಟ್‌ 19ರ ಚೈನ್‌ಲಿಂಕ್‌ ತುಂಡಾದ ವಿಚಾರ ಕುರಿತು ಮಂಡ್ಯದ ಪಾಂಡವಪುರದ ಸೀತಾಪುರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: Video | Tharun Sonal Wedding – ತಾಳಿ ಕಟ್ಟುವ ಶುಭ ವೇಳೆ – ದೃಶ್ಯ ಕಣ್ತುಂಬಿಕೊಳ್ಳಿ!

    ದೊಡ್ಡ ಅನಾಹುತ:
    ತುಂಗಭದ್ರಾ ಜಲಾಶಯದಲ್ಲಿ ದೊಡ್ಡ ಅನಾಹುತವಾಗಿದೆ. 19 ಕ್ರಸ್ಟ್ ಗೇಟ್ ಓಪನ್ ಆಗಿದೆ. ಇದೊಂದೇ 30 ಸಾವಿರ ಕ್ಯೂಸೆಕ್ ನೀರು ಹೋಗ್ತಾ ಇದೆ. ಈ ಅನಾಹುತದಿಂದ ಜಲಾಶಯದ 60 ಟಿಎಂಸಿ ನೀರು ಖಾಲಿಯಾಗುತ್ತೆ. ಇದು ರೈತರ ಬದುಕಿನ ಆಶಾಭಾವನೆಗೆ ಧಕ್ಕೆ ತಂದಿದೆ. 70 ವರ್ಷಗಳ ಹಿಂದೆ ಈ ಜಲಾಶಯ ಕಟ್ಟಿದ್ದಾರೆ. ಹಿಂದೆಯೂ ಅಲ್ಲಿ ಅನೇಕ ಸಮಸ್ಯೆಗಳು ಬೆಳಕಿಗೆ ಬಂದಿದ್ದವು. ನಾರಾಯಣಪುರ, ಆಲಮಟ್ಟಿ ಡ್ಯಾಂನಲ್ಲಿ ಸ್ಟಾಫ್ ಲಾಕ್ ಗೇಟ್ ಅಳವಡಿಸಲಾಗಿದೆ. ತುಂಗಭದ್ರಾ ಡ್ಯಾಂನಲ್ಲಿ ಸ್ಟಾಫ್ ಗೇಟ್ ಅಳವಡಿಕೆ ಮಾಡಿಲ್ಲದ ಕಾರಣ ನೀರು ನಿಲ್ಲಿಸಲು ಸಾಧ್ಯವಾಗಿಲ್ಲ ಎಂದು ಹೆಚ್‌ಡಿಕೆ ಹೇಳಿದ್ದಾರೆ.

    ಇದರಿಂದ ರೈತರ ವಿಚಾರದಲ್ಲಿ ಚೆಲ್ಲಾಟವಾಡಿದಂತೆ ಆಗಿದೆ. ಟಿಬಿ ಡ್ಯಾಂ ಬೋರ್ಡ್ ತಾಂತ್ರಿಕ ವಿಚಾರದಲ್ಲಿ ಕಾಟಚಾರದ ವರದಿ ಕೊಟ್ಟಿದೆ. ಅದಕ್ಕಾಗಿ ಇಂತಹ ಪರಿಸ್ಥಿತಿ ಬಂದಿದೆ. ಇದನ್ನು ಸರಿ ಪಡಿಸಿಕೊಳ್ಳಬೇಕಾಗಿದೆ. ಅಲ್ಲದೇ ಕೆಆರ್‌ಎಸ್‌ ಡ್ಯಾಂ ವಿಚಾರದಲ್ಲಿ ಈಗಲೇ ಎಚ್ಚೇತ್ತುಕೊಳ್ಳೋದು ಒಳ್ಳೆಯದು ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ತರಬೇತಿ ವೈದ್ಯೆ ಮೇಲೆ ಅತ್ಯಾಚಾರ ಕೇಸ್‌ – ವಿಚಾರಣೆ ವೇಳೆ ಕಾಮುಕನ ಮೊಬೈಲ್‌ನಲ್ಲಿ ಸೆಕ್ಸ್‌ ವೀಡಿಯೋಗಳು ಪತ್ತೆ!

    ತುಂಗಭದ್ರಾ ಜಲಾಶಯದ ಸಮಸ್ಯೆ ಸರ್ಕಾರದ ನಿರ್ಲಕ್ಷ್ಯ ಎನ್ನಲು ಆಗಲ್ಲ. ಡ್ಯಾಂಗೆ ಟೆಕ್ನಿಕಲ್ ಕಮಿಟಿ ಇರುತ್ತೆ. ಆ ಕಮಿಟಿ ಪ್ರತಿವರ್ಷ ಸಮಸ್ಯೆಗೆಳನ್ನ ಪರಿಶೀಲನೆ ಮಾಡುತ್ತೆ. ಆಗ ಕಾಟಚಾರಕ್ಕೆ ಪರಿಶೀಲನೆ ಮಾಡಿದ್ದರೇ ಈ ರೀತಿಯ ಅನಾಹುತಗಳು ಆಗುತ್ತವೆ. ಇದನ್ನು ದುರಸ್ಥಿತಿ ಮಾಡೋದು ಸರ್ಕಾರಕ್ಕೆ ಇದು ಕ್ಲಿಷ್ಟಕರ ಪರಿಸ್ಥಿತಿ. ಟೆಕ್ನಿಕಲ್‌ನಲ್ಲಿ ಪರಿಣತಿ ಇರುವವರ ಜೊತೆ ಚರ್ಚೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.