Tag: Karnataka Government

  • PUBLiC TV Exclusive | ರನ್ಯಾ ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ – ಸಿಐಡಿ ವಿಚಾರಣೆ ಆದೇಶ ವಾಪಸ್ ಪಡೆದ ಸರ್ಕಾರ!

    PUBLiC TV Exclusive | ರನ್ಯಾ ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ – ಸಿಐಡಿ ವಿಚಾರಣೆ ಆದೇಶ ವಾಪಸ್ ಪಡೆದ ಸರ್ಕಾರ!

    ಬೆಂಗಳೂರು: ನಟಿ ರನ್ಯಾ ರಾವ್‌ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ (Ranya Rao Gold Smuggling Case) ಸ್ಫೋಟಕ ವಿಚಾರಗಳು ಬಯಲಿಗೆ ಬರ್ತಿವೆ. ಈ ನಡುವೆ ರಾಜ್ಯ ಸರ್ಕಾರವೇ ಸಿಐಡಿ ವಿಚಾರಣೆಗೆ (CID Investigation) ನೀಡಿದ್ದ ಆದೇಶವನ್ನು ವಾಪಸ್‌ ಪಡೆದಿದೆ.

    ಶಿಷ್ಟಾಚಾರ ಉಲ್ಲಂಘಟನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆಗೆ ಆದೇಶ ನೀಡಿದ್ದ ಸರ್ಕಾರ ಒಂದೇ ದಿನದಲ್ಲಿ ಯೂಟರ್ನ್‌ ಹೊಡೆದಿದೆ. ಮೊನ್ನೆ ರಾತ್ರಿ ಆದೇಶ ನೀಡಿ, ನಿನ್ನೆ ರಾತ್ರಿಯೇ ಆದೇಶ ವಾಪಸ್ ಪಡೆದಿದೆ. ಸದ್ಯ ಸರ್ಕಾರದ ದಿಢೀರ್‌ ಯೂಟರ್ನ್‌ ನಿರ್ಧಾರ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ರನ್ಯಾ ರಾವ್ ಪ್ರಕರಣದಲ್ಲಿ ಯಾರ ಒತ್ತಡ ಹೆಚ್ಚಾಗಿತ್ತು..? ಎಂಬ ಪ್ರಶ್ನೆಯೂ ಹುಟ್ಟುಹಾಕಿದೆ. ಇದನ್ನೂ ಓದಿ: ಭೂಸ್ವಾಧೀನ ಪರಿಹಾರ ನೀಡದ ಜಿಲ್ಲಾಡಳಿತ – ಹಾವೇರಿ ಜಿಲ್ಲಾಧಿಕಾರಿ ಕಾರು ಜಪ್ತಿ

    ಸಿಐಡಿ ತನಿಖೆ ಆದೇಶ ಬೆನ್ನಲ್ಲೇ ಐಓ ಆಗಿ ರಾಘವೇಂದ್ರ ಹೆಗ್ಡೆ ಅವರ ನೇಮಕ ಆಗಿತ್ತು. ಆದ್ರೆ ಆದೇಶ ಹಿಂಪಡೆಯಲಾಗಿದ್ದು, ಸಿಐಡಿ ಡಿಜಿಪಿ ತನಿಖಾಧಿಕಾರಿಯನ್ನ ನೇಮಕಗೊಳಿಸಿದ ಬಳಿಕ ಏಕೆ ಸರ್ಕಾರದ ವರಸೆ ಬದಲಾಯ್ತು..? ಎಂಬುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ.

    ಈಗ ಐಎಎಸ್ ಅಧಿಕಾರಿ ಗೌರವ್ ಗುಪ್ತಾ ತನಿಖೆಯಷ್ಟೇ ನಡೆಯಲಿದೆ. ಅದು ಪ್ರೋಟೋಕಾಲ್ ಉಲ್ಲಂಘನೆಗೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ರಾಮಚಂದ್ರರಾವ್ ವಿರುದ್ಧದ ಆರೋಪದ ಬಗ್ಗೆ ತನಿಖೆ ಮಾತ್ರ ನಡೆಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಅಮೆರಿಕದ ಮದ್ಯದ ಮೇಲೆ ಭಾರತ 150%, ಕೃಷಿ ಉತ್ಪನ್ನಗಳ ಮೇಲೆ 100% ತೆರಿಗೆ ವಿಧಿಸುತ್ತಿದೆ: ವೈಟ್‌ಹೌಸ್

    ಬಗೆದಷ್ಟೂ ರಹಸ್ಯ ಬಯಲು:
    ರನ್ಯಾ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸ್ಫೋಟಕ ವಿಚಾರಗಳು ಬಯಲಿಗೆ ಬರ್ತಿವೆ. ಕಳೆದ ವರ್ಷದ ಕೊನೆಯಲ್ಲಿ 2 ಬಾರಿ ದುಬೈನಲ್ಲಿ ಚಿನ್ನ ಖರೀದಿ ಮಾಡಿದ್ದ ರನ್ಯಾರಾವ್, ಅದನ್ನು ಸ್ವಿಟ್ಜರ್‌ಲೆಂಡ್‌ಗೆ ಕೊಂಡೊಯ್ಯೋದಾಗಿ ಹೇಳಿ ಅಲ್ಲಿನ ಕಸ್ಟಮ್ಸ್ ಅಧಿಕಾರಿಗಳನ್ನು ಯಾಮಾರಿಸಿದ್ರು. ಜಿನೇವಾಗೆ ಹೋಗೋದಾಗಿ ಸುಳ್ಳು ಹೇಳಿದ್ದ ರನ್ಯಾರಾವ್ ನೇರವಾಗಿ ಭಾರತಕ್ಕೆ ಬಂದಿದ್ರು ಎಂಬುದು ಆಕೆಯ ಟ್ರಾವೆಲ್ ಹಿಸ್ಟರಿ ಪರಿಶೀಲಿಸಿದಾಗ ಗೊತ್ತಾಗಿದೆ ಎಂದು ಡಿಆರ್‌ಐ, ಅರೆಸ್ಟ್ ಮೆಮೋದಲ್ಲಿ ತಿಳಿಸಿದೆ. ಇದನ್ನೂ ಓದಿ: ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಿಂದ ಶಾಸಕರ ಹಕ್ಕು ಮೊಟಕುಗೊಳಿಸುವ ಕಾರ್ಯ: ರಾಜ್ಯಪಾಲರಿಗೆ ಬಿಜೆಪಿ ದೂರು

    ರನ್ಯಾ ರಾವ್ ನಿರಂತರವಾಗಿ ಚಿನ್ನ ಕಳ್ಳಸಾಗಣೆ ಮಾಡಿದ್ದಾರೆ. ಗೋಲ್ಡ್ ಸ್ಮಗ್ಲಿಂಗ್ ಕಿಂಗ್‌ಪಿನ್ ಆಗಿರುವ ಈಕೆ ಆರು ತಿಂಗಳು ದೇಶದಿಂದ ಹೊರಗೆ ಇರ್ತಿದ್ರು.. ಎಂದಿದೆ. ರನ್ಯಾ ಜಾಮೀನು ಅರ್ಜಿ ವಿಚಾರಣೆ ವೇಳೆ ಈ ಎಲ್ಲಾ ಅಂಶಗಳು ಪ್ರಸ್ತಾಪವಾದ್ವು. ಸರ್ಚ್ ಪ್ರಕ್ರಿಯೆ ಕಾನೂನು ಪ್ರಕಾರ ನಡೆದಿಲ್ಲ. ನಿದ್ದೆ ಮಾಡೋಕೂ ಬಿಡದೇ ವಿಚಾರಣೆ ನಡೆಸಿದ್ದಾರೆ. ನಿದ್ದೆಯ ಹಕ್ಕನ್ನು ಕಿತ್ಕೊಂಡಿದ್ದಾರೆ ಎಂದು ರನ್ಯಾ ಪರ ವಕೀಲರು ವಾದ ಮಂಡಿಸಿದ್ರು. ರನ್ಯಾ ಮದ್ವೆಯಾದ ಮಹಿಳೆ. ಅವರೆಲ್ಲೂ ಹೋಗಲ್ಲ.. ಜಾಮೀನು ನೀಡಿ ಎಂದು ಮನವಿ ಮಾಡಿದ್ರು. ಆದ್ರೆ, ಇದನ್ನು ಡಿಆರ್‌ಐ ಪರ ವಕೀಲರು ಆಕ್ಷೇಪಿಸಿದ್ರು. ರನ್ಯಾಗೆ ಕರೆ ಮಾಡಿದ್ದ ವ್ಯಕ್ತಿಗೆ ಸಮನ್ಸ್ ನೀಡಿ ಹೇಳಿಕೆ ಪಡೆಯಲಾಗಿದೆ. ಯಾವುದೇ ಲೋಪ ಎಸಗಿಲ್ಲ. ಆಕೆ ಬಳಿ ಯುಎಇ ರೆಸಿಡೆನ್ಸಿ ಕಾರ್ಡ್ ಸಿಕ್ಕಿದೆ. ಹೀಗಾಗಿ ಜಾಮೀನು ಕೊಡಬಾರದು ಎಂದು ಪ್ರತಿವಾದ ಮಾಡಿದ್ರು. ಕಡೆಗೆ ಕೋರ್ಟ್ ಮಾರ್ಚ್ 14ಕ್ಕೆ ಆದೇಶ ಕಾಯ್ದಿರಿಸಿತು.

  • ಮತ್ತೆರಡು ವಿಧೇಯಕ ವಾಪಸ್ – ರಾಜ್ಯಪಾಲರು vs ರಾಜ್ಯ ಸರ್ಕಾರದ ನಡುವೆ ಮುಂದುವರಿದ ಜಟಾಪಟಿ

    ಮತ್ತೆರಡು ವಿಧೇಯಕ ವಾಪಸ್ – ರಾಜ್ಯಪಾಲರು vs ರಾಜ್ಯ ಸರ್ಕಾರದ ನಡುವೆ ಮುಂದುವರಿದ ಜಟಾಪಟಿ

    ಬೆಂಗಳೂರು: ಮೈಕ್ರೋ ಫೈನಾನ್ಸ್‌ ಕಂಪನಿಗಳಿಂದ ಕಿರುಕುಳ ತಡೆಗೆ ಸುಗ್ರೀವಾಜ್ಞೆಗೆ ಅಂಕಿತ ಹಾಕಿದ ಬಳಿಕ ಮತ್ತೆ ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರದ (Karnataka Government) ನಡುವಿನ ಜಟಾಪಟಿ ಮುಂದುವರಿದಿದೆ. ರಾಜ್ಯ ಸರ್ಕಾರ ಕಳುಹಿಸಿದ್ದ 2 ವಿಧೇಯಕಗಳನ್ನು ಸ್ಪಷ್ಟನೆ ಕೇಳಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ವಾಪಸ್‌ ಕಳುಹಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿದ್ದ ಕರ್ನಾಟಕ ಸಹಕಾರಿ ಸಂಘಗಳ (ತಿದ್ದುಪಡಿ) ವಿಧೇಯಕ – 2024, ಕರ್ನಾಟಕ ಸೌಹಾರ್ಧ ಸಹಕಾರಿ (ತಿದ್ದುಪಡಿ) ವಿಧೇಯಕ – 2024 ಎರಡೂ ವಿಧೇಯಕಗಳನ್ನ ರಾಜ್ಯಪಾಲರು ವಾಪಸ್ ಕಳಿಸಿದ್ದಾರೆ. ಇದನ್ನೂ ಓದಿ: ಮಾ.1 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ – ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

    ಕರ್ನಾಟಕ ಸಹಕಾರಿ ಸಂಘಗಳ (ತಿದ್ದುಪಡಿ) ವಿಧೇಯಕ – 2024ಕ್ಕೆ ಹಲವು ಆಕ್ಷೇಪಗಳನ್ನು ರಾಜ್ಯಪಾಲರು ಎತ್ತಿದ್ದಾರೆ. ರಾಜ್ಯ ಸರ್ಕಾರ ಈ ವಿಧೇಯಕಲ್ಲಿ ಸಹಕಾರಿ ಸಂಘಗಳಿಗೆ ಮೀಸಲಾತಿ ಆಧಾರದ ಮೇಲೆ ನಾಮನಿರ್ದೇಶನ ಮಾಡುವ ತಿದ್ದುಪಡಿ ತಂದಿತ್ತು. ಈ ತಿದ್ದುಪಡಿ ಅಂಶಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ನೀಡುವುದು ಸರಿಯಾದ ಕ್ರಮವಲ್ಲ. ಇದರಿಂದ ಸಹಕಾರಿ ಸಂಘದ ನಿಯಂತ್ರಣಕ್ಕೆ ಅವಕಾಶ ಕೊಟ್ಟಂತೆ ಆಗುತ್ತದೆ. ಚುನಾಯಿತ ಸದಸ್ಯರ ಹಕ್ಕುಗಳನ್ನು ಹಿಂಬಾಗಿಲಿನ ಮೂಲಕ ಕಸಿದುಕೊಳ್ಳಲಾಗುತ್ತದೆ. ಅಲ್ಲದೇ ಇದು ಸಹಕಾರಿ ಕ್ಷೇತ್ರದ ಸ್ವಾಯತ್ತತೆಯನ್ನು ದುರ್ಬಲಗೊಳಿಸುವ ಹೆಜ್ಜೆಯಾಗಿದೆ ಎಂದು ಆಕ್ಷೇಪಿಸಿದ್ದಾರೆ.

    ಇನ್ನೂ ಕರ್ನಾಟಕ ಸೌಹಾರ್ಧ ಸಹಕಾರಿ (ತಿದ್ದುಪಡಿ) ವಿಧೇಯಕ – 2024ಕ್ಕೂ ಆಕ್ಷೇಪ ವ್ಯಕ್ತಪಡಿಸಿರುವ ರಾಜ್ಯಪಾಲರು, ಈ ವಿಧೇಯಕದಲ್ಲಿ ಸಹಕಾರಿ ಚುನಾವಣಾ ಪ್ರಾಧಿಕಾರ ರದ್ದುಗೊಳಿಸುವುದಾಗಿತ್ತು. ಸಹಕಾರ ಸಂಘಗಳ ಚುನಾವಣೆ ಸ್ವತಂತ್ರ ಮತ್ತು ನ್ಯಾಯಯುತವಾಗಿ ನಡೆಸಲು ಪ್ರಾಧಿಕಾರವಿದೆ. ಆರ್ಥಿಕ ಹೊರೆಯ ಕಾರಣದಿಂದಾಗಿ ಸಹಕಾರಿ ಚುನಾವಣಾ ಪ್ರಾಧಿಕಾರಗಳನ್ನು ರದ್ದುಗೊಳಿಸುವ ಪ್ರಸ್ತಾಪವು ಸೂಕ್ತವಲ್ಲ ಎಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಹಕ್ಕಿ ಜ್ವರ – 2 ದಿನದ ಹಿಂದೆ ಬೆಂಗಳೂರಿಗೆ 10,000 ಫಾರಂ ಕೋಳಿ ಸಾಗಾಟ

  • ತುಮಕೂರು | ಮಧುಗಿರಿ ಪಟ್ಟಣ ಅಭಿವೃದ್ಧಿಗೆ ಸರ್ಕಾರದಿಂದ 25 ಕೋಟಿ‌ ಅನುದಾನ

    ತುಮಕೂರು | ಮಧುಗಿರಿ ಪಟ್ಟಣ ಅಭಿವೃದ್ಧಿಗೆ ಸರ್ಕಾರದಿಂದ 25 ಕೋಟಿ‌ ಅನುದಾನ

    ತುಮಕೂರು: ಮಧುಗಿರಿ ಪಟ್ಟಣದ ರಸ್ತೆ (Madhugiri Town Road) ಮತ್ತು ಚರಂಡಿ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ 25 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಶೀಘ್ರವೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ತಿಳಿಸಿದರು.

    ಪಟ್ಟಣದ ಪ್ರಮುಖ ರಸ್ತೆಗಳಿಗೆ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ತುಮಕೂರು ಗೇಟ್‌ನಿಂದ ಶಿರಾ ರಸ್ತೆವರೆಗೆ, ಗೌರಿಬಿದನೂರು ಬೈಪಾಸ್‌ನಿಂದ ಸಿದ್ದಾಪುರ ಗೇಟ್‌ವರೆಗೆ ಡಬಲ್ ರಸ್ತೆ ಹಾಗೂ ಪಟ್ಟಣದ ಎಲ್ಲಾ ವಾರ್ಡ್‌ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ ಮಾಡಿಸಲಾಗುವುದು ಎಂದರು.

    ಪಟ್ಟಣದ ಪ್ರಮುಖ ವೃತ್ತಗಳನ್ನು ವಿನೂತನವಾಗಿ ಅಭಿವೃದ್ಧಿ ಪಡಿಸಲಾಗುವುದು. ಹೈಟೆಕ್ ತಂಗುದಾಣ ನಿರ್ಮಾಣ, ವೈಜ್ಞಾನಿಕ ಹಂಪ್‌ ಹಾಗೂ ಪ್ರಮುಖ ರಸ್ತೆಗಳಿಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ವಿವರಿಸಿದರು. ಇದನ್ನೂ ಓದಿ: ಇವತ್ತೇ ಚುನಾವಣೆ ನಡೆದರೆ ಕಾಂಗ್ರೆಸ್‌ಗೆ ಕೇವಲ 20 ಸೀಟು ಬರುತ್ತದೆ – ಗೋವಿಂದ ಕಾರಜೋಳ

    ರಾಜೀವ್ ಗಾಂಧಿ ಕ್ರೀಡಾಂಗಣದ ಅಭಿವೃದ್ಧಿಗೆ 5 ಕೋಟಿ ರೂ. ಮಂಜೂರಾಗಿದೆ. ಈ ಅನುದಾನ‌ದಲ್ಲಿ ಕ್ರೀಡಾಪಟುಗಳು ಮತ್ತು ಮಕ್ಕಳಿಗೆ ಅನುಕೂಲವಾಗುವಂತೆ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲಾಗುವುದು ಹೇಳಿದರು. ಇದನ್ನೂ ಓದಿ: ಶಾಸ್ತ್ರೋಕ್ತವಾಗಿ ನೆರವೇರಿದ ರೇಣುಕಾಸ್ವಾಮಿ ಪುತ್ರನ ನಾಮಕರಣ – ಹೆಸರೇನು ಗೊತ್ತಾ?

  • ಮೈಕ್ರೋ ಫೈನಾನ್ಸ್‌ನಿಂದ ಮುಂದುವರಿದ ಕಿರುಕುಳ – ಗ್ರಾಮವನ್ನೇ ತೊರೆದ 7-8 ಕುಟುಂಬಗಳು

    ಮೈಕ್ರೋ ಫೈನಾನ್ಸ್‌ನಿಂದ ಮುಂದುವರಿದ ಕಿರುಕುಳ – ಗ್ರಾಮವನ್ನೇ ತೊರೆದ 7-8 ಕುಟುಂಬಗಳು

    ದಾವಣಗೆರೆ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ (Micro Finance) ಸಿಬ್ಬಂದಿ ಕಿರುಕುಳಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಜಾರಗೊಳಿಸಿದೆ. ಅಲ್ಲದೇ ಅಧಿಕ ಬಡ್ಡಿ ಪಡೆಯುವುದನ್ನ ತಡೆಯುವ ವಿಧೇಯಕ್ಕೆ ತಿದ್ದುಪಡಿ ತರಲು ತಯಾರಿ ನಡೆಸಿದೆ. ಹೀಗಿದ್ದರೂ ಮೈಕ್ರೋ ಫೈನಾನ್ಸ್ ಸಿಬ್ಬಂದಿಯಿಂದ ಕಿರುಕುಳ ಮುಂದುವರಿದಿದೆ.

    ಕಿರುಕುಳದಿಂದ ಬೇಸತ್ತ ಏಳೆಂಟು ಕುಟುಂಬಗಳು ಊರು ಬಿಟ್ಟಿರುವ ಘಟನೆ ದಾವಣಗೆರೆ (Davanagere) ಜಿಲ್ಲೆಯ ಚನ್ನಗಿರಿ ತಾಲೂಕಿನ ಶಿವಗಂಗನಾಳ ಗ್ರಾಮದಲ್ಲಿ ನಡೆದಿದೆ. ಇದನ್ನೂ ಓದಿ: ಹಿಂದೂ ನೌಕರರು ಉಪವಾಸ ಆಚರಣೆಗೆ ಮನವಿ ಮಾಡಿದ್ರೆ ಸರ್ಕಾರಿ ಕಚೇರಿಗಳೇ ಖಾಲಿ ಖಾಲಿ – ಮುತಾಲಿಕ್

    ಗ್ರಾಮದ ಹಲವು ಕುಟುಂಬಗಳಿಗೆ ಸಾಲದ ಕಂತು ಪಾವತಿಸುವಂತೆ ಮೈಕ್ರೋ ಫೈನಾನ್ಸ್‌ ಸಿಬ್ಬಂದಿ ಪದೇ ಪದೇ ಕಿರುಕುಳ ನೀಡುತ್ತಾ ಬಂದಿದ್ದಾರೆ. ನಿಮಗೆ ಸಿಬಿಲ್ ಸ್ಕೋರ್ ಬರದಿದ್ದರೆ ಎಲ್ಲೂ ನಯಾ ಪೈಸೆ ಸಾಲ ಹುಟ್ಟಲ್ಲ ಅಂತ ಹೆದರಿಸಿದ್ದಾರೆ. ಕೆಲವರನ್ನ ಪೊಲೀಸ್‌ ಠಾಣೆಗೆ ಕರೆಸಿ ಬೆದರಿಸುವಂತೆ ಮಾಡಿದ್ದಾರೆ. ಯಾರ ಕೈ-ಕಾಲು ಹಿಡಿದಾದರೂ ಸಾಲ ತಂದುಕೊಡು ಅಂತ ಮಾನಸಿಕ ಹಿಂಸೆ ನೀಡಿದ್ದಾರೆ.

    ಇದರಿಂದ ಬೇಸತ್ತ ಶಿವಗಂಗನಾಳ ಗ್ರಾಮದ ಕುಟುಂಬಗಳು ಮನೆಗೆ ಬೀಗ ಹಾಕಿಕೊಂಡು ಊರು ಬಿಟ್ಟಿವೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೈಕ್ರೋ ಫೈನಾನ್ಸ್‌ನಿಂದ ಸಾಲ ಪಡೆದ ಕುಟುಂಬಳದ್ದೂ ಇದೇ ಪರಿಸ್ಥಿತಿ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಹಬ್ಬದ ಸಂಭ್ರಮದಲ್ಲಿ ಮಾರಕಾಸ್ತ್ರ ಹಿಡಿದು ಮಧ್ಯರಾತ್ರಿ ವ್ಹೀಲಿಂಗ್ ಮಾಡಿದ್ದ ಪುಂಡರು ಅರೆಸ್ಟ್

  • ಮಾರ್ಚ್ 7 ರಂದು 2025-26ನೇ ಸಾಲಿನ ಬಜೆಟ್ ಮಂಡನೆ – ಸಿದ್ದರಾಮಯ್ಯ

    ಮಾರ್ಚ್ 7 ರಂದು 2025-26ನೇ ಸಾಲಿನ ಬಜೆಟ್ ಮಂಡನೆ – ಸಿದ್ದರಾಮಯ್ಯ

    ಬೆಂಗಳೂರು: ಮಾರ್ಚ್ 7 ರಂದು 2025-26ನೇ ಸಾಲಿನ ಬಜೆಟ್ ಮಂಡಿಸೋದಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಘೋಷಣೆ ಮಾಡಿದ್ದಾರೆ.

    ವಿಧಾನಸೌಧದಲ್ಲಿ (Vidhana Soudha) ರೈತ ಮುಖಂಡರ ಜೊತೆ ಪೂರ್ವಭಾವಿ ಸಭೆ ಬಳಿಕ ಮಾತನಾಡಿದ ಅವರು, ಮಾರ್ಚ್ 3 ರಿಂದ ಅಧಿವೇಶನ ಪ್ರಾರಂಭವಾಗಲಿದೆ. ಮಾರ್ಚ್ 3 ರಂದು ರಾಜ್ಯಪಾಲರು ಜಂಟಿ ಸದನವನ್ನ ಉದ್ದೇಶಿ ಮಾತನಾಡಲಿದ್ದಾರೆ. ಮಂಗಳವಾರ, ಬುಧವಾರ ಮತ್ತು ಗುರುವಾರ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ. ಮಾರ್ಚ್ 7 ರಂದು ಬಜೆಟ್ ಮಂಡನೆ ಮಾಡ್ತೀನಿ ಎಂದು ತಿಳಿಸಿದ್ದಾರೆ.

    ಬಜೆಟ್‌ ಮಂಡಿಸಿದ ಬಳಿಕ ಅದರ ಮೇಲೆ ಚರ್ಚೆ ನಡೆದು ಮಾರ್ಚ್ ಕೊನೆಯಲ್ಲಿ ಉತ್ತರ ಕೊಡ್ತೀನಿ. ಅಧಿವೇಶನ ಎಷ್ಟು ದಿನ ನಡೆಯಬೇಕು ಅಂತ ವಿಧಾನಸಭೆ ಕಾರ್ಯಕಲಾಪ ಸಲಹಾ ಸಮಿತಿಯಲ್ಲಿ ಚರ್ಚೆ ಮಾಡಿ ನಿರ್ಧಾರ ಮಾಡ್ತೀವಿ ಎಂದರು. ಇದನ್ನೂ ಓದಿ: ದೆಹಲಿ ರೈಲ್ವೆ ನಿಲ್ದಾಣಗಳಲ್ಲಿ ಜನಸಂದಣಿ, ಬಿಕ್ಕಟ್ಟು ನಿರ್ವಹಣೆಗಾಗಿ ಎಐ ತಂತ್ರಜ್ಞಾನ ಬಳಕೆ

    ಈ ಬಜೆಟ್ ನಲ್ಲಿ ಜನರಿಗೆ ಬೆಲೆ ಏರಿಕೆ ಶಾಕ್ ನಿಂದ ಮುಕ್ತಿ ಸಿಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬೆಲೆ ಏರಿಕೆ ಕೇಂದ್ರ-ರಾಜ್ಯ ಸರ್ಕಾರ ಮಾಡಬೇಕು. ಬೆಲೆ ಏರಿಕೆ ಕೇಂದ್ರ ಸರ್ಕಾರದ ಮೇಲೆ ಹೆಚ್ಚು ಭಾರ ಇರುತ್ತದೆ. ಕೇಂದ್ರ ಸರ್ಕಾರ ಬೆಲೆ ಏರಿಕೆಗೆ ಒತ್ತು ಕೊಡಬೇಕು. ರಾಜ್ಯ ಸರ್ಕಾರ ಎನ್ ಮಾಡಬೇಕೋ ಅದನ್ನ ಮಾಡುತ್ತದೆ ಅಂತ ತಿಳಿಸಿದರು. ಇದನ್ನೂ ಓದಿ: ರೈಲಿನ ಟಾಯ್ಲೆಟ್‌ನಲ್ಲಿ ಖೋಟಾನೋಟು – ಪಶ್ಚಿಮ ಬಂಗಾಳಕ್ಕೆ ತೆರಳಲಿರೋ ಬೆಂಗ್ಳೂರು ಪೊಲೀಸ್ರು

  • ಈಗ ಅಧಿಕಾರದಲ್ಲಿರುವ ಕಾಂಗ್ರೆಸ್‌ ಮುಂದೆ ಸೋಲುತ್ತೆ – ಪ್ರಕಾಶ್‌ ರಾಜ್‌

    ಈಗ ಅಧಿಕಾರದಲ್ಲಿರುವ ಕಾಂಗ್ರೆಸ್‌ ಮುಂದೆ ಸೋಲುತ್ತೆ – ಪ್ರಕಾಶ್‌ ರಾಜ್‌

    – ಲಾಸ್‌ ಆಗಿದೆ ಅನ್ನೋದಕ್ಕೆ ಬಿಸಿನೆಸ್‌ ಮಾಡ್ತಿದ್ದೀರಾ? – ರಾಜ್ಯ ಸರ್ಕಾರಕ್ಕೆ ನಟ ಫುಲ್‌ ಕ್ಲಾಸ್‌

    ಮಂಗಳೂರು: ಚುನಾವಣೆ ಪ್ರಕ್ರಿಯೆ ಮತ್ತು ರಾಜಕಾರಣದಲ್ಲಿ ವಿರೋಧಪಕ್ಷಗಳು ಗೆಲ್ಲಲ್ಲ, ಆದ್ರೆ ಆಳುವ ಪಕ್ಷಗಳು ಸೋಲುತ್ತೆ. ಕಾಂಗ್ರೆಸ್‌ (Congress) ಈಗ ಅಧಿಕಾರದಲ್ಲಿದೆ, ಮುಂದೆ ಸೋಲೋದು ಅವರೇ ಎಂದು ನಟ ಪ್ರಕಾಶ್‌ ರಾಜ್‌ (Prakash Raj) ಭವಿಷ್ಯ ನುಡಿದಿದ್ದಾರೆ.

    ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಹಣದ ಅಭಾವ ವಿಚಾರಕ್ಕೆ ಪ್ರತಿಕ್ರಿಯಿಸಿ ಮಂಗಳೂರಿನಲ್ಲಿ (Mangaluru) ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಇದನ್ನೂ ಓದಿ: ಧಾರ್ಮಿಕ ವಿಚಾರದಲ್ಲೂ ರಾಜಕಾರಣ ಮಾಡುವವರು ನಿಜವಾದ ಹಿಂದೂಗಳಲ್ಲ: ಪ್ರಕಾಶ್‌ ರಾಜ್‌

    ನಾವು ಮೊದಲು ಯೋಚನೆ ಮಾಡಬೇಕು. ಚುನಾವಣೆ ಪ್ರಕ್ರಿಯೆ ಮತ್ತು ರಾಜಕಾರಣದಲ್ಲಿ ವಿರೋಧಪಕ್ಷಗಳು ಗೆಲ್ಲಲ್ಲ, ಆದ್ರೆ ಆಳುವ ಪಕ್ಷಗಳು ಸೋಲುತ್ತೆ. ಕಾಂಗ್ರೆಸ್‌ ಈಗ ಅಧಿಕಾರದಲ್ಲಿದೆ, ಮುಂದೆ ಸೋಲೋದು ಅವರೇ. ಲಾಸ್‌ ಆಗಿದೆ, ಹಣ ಹೊಂದಿಸಲುಆಗುತ್ತಿಲ್ಲ ಅನ್ನೋದಕ್ಕೆ ಏನ್‌ ಬಿಸಿನೆಸ್‌ ಮಾಡ್ತಿದ್ದೀರಾ? ಇದೆಲ್ಲವನ್ನ ಜನ ಗಮನಿಸಬೇಕು, ನಾವು ಎಲ್ಲಿ ತಪ್ಪುತ್ತಿದ್ದೇವೆ ಅನ್ನೋದನ್ನ ಯೋಚಿಸಬೇಕು ಎಂದು ಸಲಹೆ ನೀಡಿದರು.

    ಒಂದು ಸರ್ಕಾರ ಒಂದು ದೇಶ ನಡೆಯೋದು ಪ್ರಜೆಗಳ ದುಡ್ಡಿಂದ. ಒಂದು ದೇವಸ್ಥಾನ ನಡೆಯೋದು ಪ್ರಜೆಗಳು ಹಾಕಿದ ಹುಂಡಿಯ ಹಣದಿಂದ. ಸರ್ಕಾರದಲ್ಲಿ ಯಾಕೆ ಸಾಲ ಆಗ್ತಿದೆ? ಸಾಲ ಮಾಡಿದ ಹಣ ಏನಾಗ್ತಿದೆ ಇದೆಲ್ಲವನ್ನ ನಾವು ಗಮನಿಸಬೇಕು, ಪ್ರಶ್ನಿಸಬೇಕು ಎಂದು ಹೇಳಿದರು.

    ಇನ್ನೂ ಉಚಿತ ಭರವಸೆಗಳ ಬಗ್ಗೆ ಸುಪ್ರೀಂ ಕೋರ್ಟ್‌ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿ, ಸುಪ್ರೀಂ ಕೋರ್ಟ್‌ ಉಚಿತ ಭರವಸೆಗಳು ಪರಾವಲಂಬಿ ವರ್ಗವನ್ನಾಗಿ ಮಾಡುತ್ತೆ ಅಂದಿದೆ. ಬಡವರಿಗೆ ಕೊಡುವ ಫ್ರೀಬಿಸ್‌ ಹೇಗೆ ಪರಾವಲಂಬಿ ಆಗುತ್ತೆ? ಹಾಗಾದರೆ ಕಾರ್ಪೊರೇಟ್ ಕಂಪನಿಗಳ ಸಾಲ ಮನ್ನಾ ಮಾಡೋದು ಪರಾವಲಂಬಿ ಅಲ್ವಾ? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ ರಾಜ್ಯ ಸರ್ಕಾರವೇ ಹೊಣೆ: ಅಶ್ವಿನಿ ವೈಷ್ಣವ್‌

    ಆದ್ದರಿಂದ ಆ ಪಕ್ಷ ಈ ಪಕ್ಷ ಅನ್ನೋದನ್ನ ನೋಡದೆ ನಮ್ಮ ಹಣವನ್ನ ಸರ್ಕಾರಗಳು ಹೇಗೆ ಉಪಯೋಗಿಸುತ್ತಿವೆ? ಎಲ್ಲವನ್ನ ಪ್ರಶ್ನೆ ಮಾಡಬೇಕು. ಧರ್ಮದ ಹಿಂದೆ, ಒಂದು ಬಣ್ಣದ ಹಿಂದೆ ಹೋಗದೇ ಸರ್ಕಾರಗಳನ್ನ ಪ್ರಶ್ನಿಸಬೇಕು. ಏಕೆಂದರೆ ಗೆದ್ದ ತಕ್ಷಣ ಅವರೇನು ಮಹಾರಾಜರಲ್ಲ.. ಪ್ರಜಾ ಸೇವಕರೇ ಎಂದು ಸರ್ಕಾರವನ್ನ ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: Haveri | ಸತ್ತು ಬದುಕಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಸಾವು

  • ಶಿಕ್ಷಣ, ಸಂಶೋಧನೆಗೆ ಒತ್ತು – ಲಿವರ್‌ಪೂಲ್ ವಿಶ್ವವಿದ್ಯಾಲಯದೊಂದಿಗೆ ಒಪ್ಪಂದ ಮಾಡಿಕೊಂಡ ಕರ್ನಾಟಕ

    ಶಿಕ್ಷಣ, ಸಂಶೋಧನೆಗೆ ಒತ್ತು – ಲಿವರ್‌ಪೂಲ್ ವಿಶ್ವವಿದ್ಯಾಲಯದೊಂದಿಗೆ ಒಪ್ಪಂದ ಮಾಡಿಕೊಂಡ ಕರ್ನಾಟಕ

    ಬೆಂಗಳೂರು: ಶಿಕ್ಷಣ ಹಾಗೂ ಸಂಶೋಧನೆಗೆ ಸಂಬಂಧಿಸಿದಂತೆ ಹೆಚ್ಚಿನ ಸಹಭಾಗಿತ್ವ ಉತ್ತೇಜಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ (Karnataka Government) ಮತ್ತು ಲಿವರ್ ಪೂಲ್ ವಿಶ್ವವಿದ್ಯಾಲಯಗಳು (Liverpool University) ಮಹತ್ವದ ಒಡಂಬಡಿಕೆಗೆ ಸಹಿ ಹಾಕಿವೆ.

    ಸಿಎಂ ಸಿದ್ದರಾಮಯ್ಯ (Siddaramaiah), ಭಾರಿ ಮತ್ತು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿಯವರ ಅಧಿಕೃತ ನಿವಾಸ ಕಾವೇರಿಯಲ್ಲಿ ಒಡಂಬಡಿಕೆ ಏರ್ಪಟ್ಟಿತು. ಬ್ರಿಟಿಷ್ ಡೆಪ್ಯುಟಿ ಹೈಕಮಿಷನ್‌ನ ಬ್ರಿಟಿಷ್ ಕೌನ್ಸಿಲ್ ವಿಭಾಗದ ನಿರ್ದೇಶಕ ಜನಕ ಪುಷ್ಪನಾಥನ್, ಮಿಷನ್‌ನ ಉಪ ಮುಖ್ಯಸ್ಥ ಜೇಮ್ಸ್ ಗೋಡ್ಬರ್, ಲಿವರ್ ಪೂಲ್ ವಿ.ವಿ.ಯ ಕುಲಪತಿ ಪ್ರೊ.ಟಿಮ್ ಜೋನ್ಸ್, ಮತ್ತು ಸಮ-ಕುಲಪತಿ ಪ್ರೊ.ತಾರಿಕ್ ಅಲಿ ಅವರು ಅಂಕಿತಕ್ಕೆ ಸಹಿ ಹಾಕಿದರು. ಇದನ್ನೂ ಓದಿ: ಮುಡಾ ಕೇಸ್‌ನಲ್ಲಿ ಹೈಕೋರ್ಟ್ ತೀರ್ಪುನ್ನು ನಾವು ಗೌರವಿಸುತ್ತೇವೆ: ಅಶೋಕ್

    ಆವಿಷ್ಕಾರ ಕಾರ್ಯಕ್ರಮಗಳು ಹಾಗೂ ಶಿಕ್ಷಣ ಸಹಕಾರಕ್ಕೆ ಸಂಬಂಧಿಸಿದ ಸಹಭಾಗಿತ್ವವನ್ನು ಸದೃಢಗೊಳಿಸುವ ಜೊತೆಗೆ, ಅದನ್ನು ಉನ್ನತ ಸ್ತರಕ್ಕೆ ಕೊಂಡೊಯ್ಯಲು ಜಂಟಿ ಕಾರ್ಯತಂಡ ರಚಿಸುವ ಗುರಿಯನ್ನು ಈ ಒಡಂಬಡಿಕೆ ಹೊಂದಿದೆ.

    ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಉನ್ನತ ಶಿಕ್ಷಣ ಪರಿಷತ್‌ನ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಕೆ.ಜಿ.ಚಂದ್ರಶೇಖರ ಸೇರಿದಂತೆ ಇತರರು ಇದ್ದರು. ಇದನ್ನೂ ಓದಿ: ಪೋಕ್ಸೋ ಪ್ರಕರಣದಲ್ಲಿ ಯಡಿಯೂರಪ್ಪಗೆ ತಾತ್ಕಾಲಿಕ ರಿಲೀಫ್ – ಬಂಧನ ಭೀತಿಯಿಂದ ಪಾರು

  • ಕರ್ನಾಟಕದಲ್ಲಿ ದ್ವೇಷ ಭಾಷಣಕ್ಕೆ 3 ವರ್ಷ ಜೈಲು – ಹೊಸ ಬಿಲ್ ತರಲು ರಾಜ್ಯ ಸರ್ಕಾರ ಸಿದ್ಧತೆ?

    ಕರ್ನಾಟಕದಲ್ಲಿ ದ್ವೇಷ ಭಾಷಣಕ್ಕೆ 3 ವರ್ಷ ಜೈಲು – ಹೊಸ ಬಿಲ್ ತರಲು ರಾಜ್ಯ ಸರ್ಕಾರ ಸಿದ್ಧತೆ?

    ಬೆಂಗಳೂರು: ದ್ವೇಷ ಭಾಷಣ (Hate Speech) ಮಾಡಿ ಸಾಬೀತಾದ್ರೆ ಕರ್ನಾಟಕದಲ್ಲಿ ಇನ್ಮೇಲೆ 3 ವರ್ಷ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

    ಹೌದು. ರಾಜ್ಯ ಸರ್ಕಾರದಿಂದ ಮಹತ್ವದ ಮಸೂದೆಯೊಂದನ್ನ ತರಲು ಸಿದ್ಧತೆ ನಡೆಸಿದ್ದು, ಬಜೆಟ್ ಅಧಿವೇಶನದಲ್ಲಿ ಬಿಲ್‌ (Hate Speech Bill) ಮಂಡಿಸುವ ಸಾಧ್ಯತೆ ಇದೆ. ದ್ವೇಷ ಅಪರಾಧಗಳು ಮತ್ತು ದ್ವೇಷ ಭಾಷಣ (ಹೋರಾಟ, ತಡೆಗಟ್ಟುವಿಕೆ ಮತ್ತು ಶಿಕ್ಷೆ) ವಿಧೇಯಕ 2025 ಕರಡನ್ನ ಕಾನೂನು ಇಲಾಖೆ ಸಿದ್ಧಪಡಿಸಿದೆ. ಜಾತಿ, ಧರ್ಮ ಆಧರಿಸಿ ದ್ವೇಷ ಭಾಷಣ ಮಾಡಿದ್ರೆ ಜೈಲು ಗ್ಯಾರಂಟಿ. ಧಾರ್ಮಿಕ, ಜನಾಂಗೀಯ, ಜಾತಿ ಅಥವಾ ಸಮುದಾಯ, ಲಿಂಗ, ಲೈಂಗಿಕ ದೃಷ್ಟಿಕೋನ, ಜನ್ಮ ಸ್ಥಳ, ಭಾಷೆ, ಅಂಗವೈಕಲ್ಯ ಬುಡಕಟ್ಟುವಿನ ಕುರಿತು ದ್ವೇಷ ಭಾಷಣ ಮಾಡುವಂತಿಲ್ಲ ಎಂಬುದನ್ನ ಬಿಲ್ ಕರಡಿನಲ್ಲಿದ್ದು, ವಿಧಾನಸಭೆಯಲ್ಲಿ ಮಂಡನೆಯಾಗಿ ಅಂಗೀಕಾರ ಆಗುತ್ತಾ..? ಕಾದುನೋಡಬೇಕಿದೆ.

    ದ್ವೇಷ ಭಾಷಣಕ್ಕೆ ಬ್ರೇಕ್? – ಮಸೂದೆಯಲ್ಲಿ ಏನಿದೆ?

    >. ಭಾಷೆ, ಧಾರ್ಮಿಕ, ಜನಾಂಗೀಯ, ಜಾತಿ ಅಥವಾ ಸಮುದಾಯ, ಲಿಂಗ, ಲೈಂಗಿಕ ದೃಷ್ಟಿಕೋನ, ಜನ್ಮ ಸ್ಥಳ ವಿಚಾರವಾಗಿ ದ್ವೇಷ ಭಾಷಣ ಮಾಡುವಂತಿಲ್ಲ

    >. ಯಾವುದೇ ವ್ಯಕ್ತಿಗೆ ಹಾನಿ ಮಾಡುವ, ದ್ವೇಷ ಉತ್ತೇಜಿಸುವ, ಅದನ್ನು ಪ್ರಚಾರ ಮಾಡುವ ವ್ಯಕ್ತಿ ಅಥವಾಗುಂಪಿಗೆ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ, 5 ಸಾವಿರ ತನಕ ದಂಡ

    >. ಯಾವುದೇ ಭಾವನಾತ್ಮಕ, ಮಾನಸಿಕ, ದೈಹಿಕ, ಸಾಮಾಜಿಕ ಅಥವಾ ಆರ್ಥಿಕ ಹಾನಿಯೂ ಶಿಕ್ಷೆ ವ್ಯಾಪ್ತಿಗೆ ತರಲು ಕರಡು ಸಿದ್ಧತೆ

    >. ಯಾವುದೇ ದತ್ತಾಂಶ, ಸಂದೇಶ, ಪಠ್ಯ ಚಿತ್ರಗಳು, ಧ್ವನಿ, ಧ್ವನಿ, ಸಂಕೇತಗಳು, ಕಂಪ್ಯೂಟರ್ ಪ್ರೋಗ್ರಾಮ್‌ಗಳು ಸಾಫ್ಟ್‌ವೇರ್ ಮತ್ತು ಡೇಟಾಬೇಸ್‌ಗಳು ಕಾನೂನು ವ್ಯಾಪ್ತಿಗೆ ತಂದು ಕುಣಿಕೆ.

    >. ಇನ್ನೊಬ್ಬ ವ್ಯಕ್ತಿಯ ಪರವಾಗಿ ಆ ದಾಖಲೆಯನ್ನು ಸ್ವೀಕರಿಸುವ, ಸಂಗ್ರಹಿಸುವವರು ಶಿಕ್ಷೆ ವ್ಯಾಪ್ತಿಗೆ ತರಲು ಕರಡು

    . ಯಾವುದೇ ವ್ಯಕ್ತಿ ಮತ್ತು ಪ್ರಸಾರ ಮಾಡುವ ವಾಹಿನಿಗಳು, ಸಾಮಾಜಿಕ ಮಾಧ್ಯಮ ವೇದಿಕೆಗಳು, ಸರ್ಚ್‌ ಇಂಜಿನ್‌ಗಳು ಸೇರಿದಂತೆ ಸೇವೆ ಒದಗಿಸುವ ಎಲ್ಲರೂ ಕಾನೂನು ವ್ಯಾಪ್ತಿಗೆ ತರುವ ಸಿದ್ಧತೆ.

  • ರಾಜ್ಯಕ್ಕೆ ಕಡಿಮೆ ದರದಲ್ಲಿ ಅಕ್ಕಿ ಕೊಡಲು ಕೇಂದ್ರ ಸರ್ಕಾರ ಸಿದ್ಧ – ಜೋಶಿ

    ರಾಜ್ಯಕ್ಕೆ ಕಡಿಮೆ ದರದಲ್ಲಿ ಅಕ್ಕಿ ಕೊಡಲು ಕೇಂದ್ರ ಸರ್ಕಾರ ಸಿದ್ಧ – ಜೋಶಿ

    – ಸಿದ್ದರಾಮಯ್ಯಗೆ ಬಡವರ ಬಗ್ಗೆ ಕಾಳಜಿ ಇದ್ರೆ ಅಕ್ಕಿ ಖರೀದಿಸಲಿ ಎಂದ ಸಚಿವ

    ಹುಬ್ಬಳ್ಳಿ: 10 ಕೆಜಿ ಅಕ್ಕಿ (Rice) ರಾಜ್ಯ ಸರ್ಕಾರ‌‌ ನೀಡುತ್ತಿಲ್ಲ. ದರ ಕಡಿಮೆ ಮಾಡಿ ಅಕ್ಕಿ ನೀಡಲು ಕೇಂದ್ರ ಸರ್ಕಾರ ಸಿದ್ಧವಿದೆ. ಆದ್ರೆ ರಾಜ್ಯ ಸರ್ಕಾರದಿಂದ ಯಾವುದೇ ಆರ್ಡರ್ ಬಂದಿಲ್ಲ. ಎಫ್‌ಸಿಐದಲ್ಲಿ ಅಕ್ಕಿ ಲಭ್ಯವಿದೆ, ರಾಜ್ಯ ಸರ್ಕಾರ ಬೇಕಾದ್ರೆ ಕಡಿಮೆ ದರದಲ್ಲಿ ಅಕ್ಕಿ ಕೊಂಡುಕೊಳ್ಳಬಹದು ಅಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿದ್ದಾರೆ.

    ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕಡಿಮೆ ದರದಲ್ಲಿ ಅಕ್ಕಿ ನೀಡಿದ್ರೆ ರಾಜ್ಯ ಸರ್ಕಾರಕ್ಕೆ ನೂರಾರು ಕೋಟಿ ಹಣ ಉಳಿಯುತ್ತದೆ. ಸಿಎಂ ಸಿದ್ದರಾಮಯ್ಯ ಅವರಿಗೆ ಬಡವರ ಬಗ್ಗೆ ಕಾಳಜಿ ಇದ್ರೆ ನಮ್ಮಿಂದ ಕಡಿಮೆ ದರದಲ್ಲಿ ಅಕ್ಕಿ ತೆಗೆದುಕೊಳ್ಳಬಹದು. ಈ ಹಿಂದೆ ರಾಜ್ಯ ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಎರಡು ಬಾರಿ ಅಕ್ಕಿಗಾಗಿ ಕೇಂದ್ರ ಬಳಿ ಮನವಿ ಮಾಡಿದ್ದಾರೆ. ಹೀಗಾಗಿ ಕಡಿಮೆ ದರದಲ್ಲಿ ಅಕ್ಕಿ ಕೊಡಲು ಕೇಂದ್ರ ಮುಂದಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ – 18 ಟೆಂಟ್‌ಗಳು ಭಸ್ಮ, ಪರಿಸ್ಥಿತಿ ಅವಲೋಕಿಸಿದ ಮೋದಿ

    ಇನ್ನೂ ಸ್ವಾಮಿತ್ವ ಯೋಜನೆ ಕುರಿತು ಮಾತನಾಡಿದ ಸಚಿವರು, ಇದು 100% ಭಾರತ ಸರ್ಕಾರದ ಯೋಜನೆ. ಆದರೆ ಈ ಯೋಜನೆಗೆ ರಾಜ್ಯ ಸರ್ಕಾರದ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ಕೊಟ್ಟಿದ್ದಾರೆ. ಇದು ಪ್ರಧಾನಿಗಳ ಬಹು ಆಕಾಂಕ್ಷೆಯ ಯೋಜನೆ. ಆರಂಭದಲ್ಲಿ ರಾಜ್ಯದಲ್ಲಿ 30,715 ಹಳ್ಳಿಗಳ ಸರ್ವೆ ಕಾರ್ಯ ಈ ಯೋಜನೆಯಡಿ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕುಮಾರಸ್ವಾಮಿ ರಾಜ್ಯದ ಹಿತ ನೋಡಿ‌ ಮಾತನಾಡಲಿ – ಸಚಿವ ಎಂ.ಬಿ ಪಾಟೀಲ್

    ಕೇಂದ್ರ ಸರ್ಕಾರದಿಂದ 560 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. ದೇಶದಲ್ಲಿ 3 ಲಕ್ಷ ಹಳ್ಳಿಗಳ ಸರ್ವೆ ಕಾರ್ಯ ನಡೆದಿದೆ. ಗ್ರಾಮೀಣ ಭಾಗದಲ್ಲಿ ವ್ಯಾಜ್ಯ, ಗಡಿ ಸಮಸ್ಯೆ, ಕಡಿಮೆ ಆಗಿದೆ. ಆದರೆ ನಿನ್ನೆ ಉದ್ಘಾಟನೆ ಮಾಡಿದ ಆಹ್ವಾನ ಪತ್ರದಲ್ಲಿ ಪ್ರಧಾನಿ ಮಂತ್ರಿ ಫೋಟೋ ಇಲ್ಲ. ಇದು ಕರ್ನಾಟಕ ಸರ್ಕಾರದ ಚಿಲ್ಲರೆತನ. ಈ ಚಿಲ್ಲರೆ ರಾಜಕೀಯ ಬಿಡಬೇಕು. ಈ ಯೋಜನೆಗೆ ಡ್ರೋನ್ ಸರ್ವೆ ಮಾಡಿಸಿತ್ತಿರೋದು ಕೇಂದ್ರ ಸರ್ಕಾರ, ಹಣ ನೀಡುತ್ತಿರುವುದು ಕೇಂದ್ರ ಸರ್ಕಾರ, ಇದನ್ನ ಮರೆಮಾಚಿ ರಾಜ್ಯ ಸರ್ಕಾರ ಚಿಲ್ಲರೆ ತನ ತೋರಿಸಿದೆ ಅಂತ ಜೋಶಿ ವಾಗ್ದಾಳಿ ನಡೆಸಿದರು.

  • ಕಡಿಮೆ ಮಕ್ಕಳಿರುವ ಸರ್ಕಾರಿ ಶಾಲೆಗಳನ್ನ ಮುಚ್ಚಲು ಮುಂದಾಯ್ತಾ ರಾಜ್ಯ ಸರ್ಕಾರ?

    ಕಡಿಮೆ ಮಕ್ಕಳಿರುವ ಸರ್ಕಾರಿ ಶಾಲೆಗಳನ್ನ ಮುಚ್ಚಲು ಮುಂದಾಯ್ತಾ ರಾಜ್ಯ ಸರ್ಕಾರ?

    ಬೆಂಗಳೂರು: ಕಡಿಮೆ ಮಕ್ಕಳು ದಾಖಲಾಗಿರುವ ಶಾಲೆಗಳನ್ನು ಮುಚ್ಚಲು ರಾಜ್ಯ ಸರ್ಕಾರ ಮುಂದಾದಂತೆ ಕಾಣುತ್ತಿದೆ. ಕಡಿಮೆ ಮಕ್ಕಳು ಇರುವ ಶಾಲೆಯನ್ನ ಮತ್ತೊಂದು ಶಾಲೆ ಜೊತೆ ಸಂಯೋಜಿಸಿ ನಡೆಸಲು ಸಿದ್ಧತೆ ಶುರು ಮಾಡಿದೆ. ಅದಕ್ಕಾಗಿ ಸಮಿತಿಯೊಂದನ್ನ ರಚನೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ಭಾರೀ ಕಳವಳಕ್ಕೆ ಕಾರಣವಾಗಿದೆ.

    ಈ ಹಿಂದೆ ಬಿಜೆಪಿ ಸರ್ಕಾರ ಕಡಿಮೆ ಮಕ್ಕಳಿರುವ 2-3 ಶಾಲೆಗಳನ್ನು ಸಂಯೋಜಿಸಿ ನಡೆಸಲು ನಿರ್ಧಾರ ಕೈಗೊಂಡಿತ್ತು. ಈ ನಿರ್ಧಾರಕ್ಕೆ ಅಂದು ವಿಪಕ್ಷದಲ್ಲಿದ್ದ ಕಾಂಗ್ರೆಸ್‌ ಭಾರೀ ವಿರೂಧ ವ್ಯಕ್ತಪಡಿಸಿತ್ತು. ಇದೀಗ ಕಾಂಗ್ರೆಸ್‌ ಸರ್ಕಾರ ಮತ್ತೆ ಅದೇ ನಿರ್ಧಾರ ತೆಗೆದುಕೊಂಡಿದೆ.

    ತಾಲೂಕು ಮಟ್ಟದಲ್ಲಿ ಶಾಲಾ-ಕಾಲೇಜುಗಳ ಶಿಕ್ಷಣ ಗುಣಮಟ್ಟದ ಸುಧಾರಿಸಲು ತಾಲೂಕು ಮಟ್ಟದ ಶಿಕ್ಷಣ ಸುಧಾರಣಾ ಸಮಿತಿಯನ್ನ ರಚನೆ ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. 14 ಜನರನ್ನೊಳಗೊಂಡ ಸಮಿತಿ ಇದಾಗಿದೆ. ಪ್ರತಿ ತಾಲೂಕಿನ ಶಾಸಕರು ಸಮಿತಿಯ ಅಧ್ಯಕ್ಷರಾಗಿ ಇರುತ್ತಾರೆ. ತಹಶೀಲ್ದಾರರು, ಬಿಇಓ, ಸರ್ಕಾರದಿಂದ ನಾಮ ನಿರ್ದೇಶನಗೊಂಡ 5 ಜನ ಸದಸ್ಯರು, SDMC ಸದಸ್ಯರು ಸಮಿತಿಯ ಸದಸ್ಯರಾಗಿರುತ್ತಾರೆ.

    ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಸಮಿತಿ ರಚನೆ ಮಾಡಿದ್ದು, ಶಾಲಾ ದಾಖಲಾತಿ, ಗುಣಮಟ್ಟದ ಶಿಕ್ಷಣ, ವಿದ್ಯಾರ್ಥಿಗಳ ಹಾಜರಾತಿ, ಶಾಲೆ ಬಿಟ್ಟ ಮಕ್ಕಳನ್ನ ಶಾಲೆಗೆ ಕರೆತರಲು ಸಮಿತಿ ಕಾರ್ಯ ನಿರ್ವಹಣೆ ಮಾಡಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

    ಸಮಿತಿಯ ಕಾರ್ಯಗಳೇನು?
    1. ತಾಲೂಕಿನಲ್ಲಿನ ಎಲ್ಲಾ ಅರ್ಹ ಮಕ್ಕಳ ಶಾಲಾ ದಾಖಲಾತಿ, ದಾಖಲಾದ ಮಕ್ಕಳ ನಿರಂತರ ಹಾಜರಾತಿ ಹಾಗೂ ಹಾಜರಾಗುವ ಎಲ್ಲಾ ಮಕ್ಕಳ ಕಲಿಕೆಯನ್ನು ವೃದ್ಧಿಸುವ ಮೂಲಕ ಶಿಕ್ಷಣ ಗುಣಮಟ್ಟ ಸುಧಾರಿಸುವುದು.

    2. ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಪದವಿಪೂರ್ವ ಶಿಕ್ಷಣದ ವರೆಗೆ ಶಾಲೆ ಬಿಟ್ಟುಹೋಗುವಿಕೆಯ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವುದು ಹಾಗೂ ಮಕ್ಕಳ ದಾಖಲಾತಿ, ಹಾಜರಾತಿ, ಕಲಿಕೆ ಪ್ರಕ್ರಿಯೆಗಳ ಕುರಿತು ಚರ್ಚಿಸಿ ಸುಧಾರಣಾ ಕ್ರಮ ವಹಿಸುವುದು.

    3. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಮುದಾಯದ ಪಾಲ್ಗೊಳ್ಳುವಿಕೆ ಹಾಗೂ ಸಿಎಸ್‌ಆರ್‌ ಕಾರ್ಯಕ್ರಮದ ಮೂಲಕ ತಾಲೂಕಿನ ಶೈಕ್ಷಣಿಕ ಕ್ಷೇತ್ರಕ್ಕೆ ಬೇಕಾದ ನೆರವು ಪಡೆಯಲು ಕ್ರಮ ವಹಿಸುವುದು.

    4. ಅತೀ ಕಡಿಮೆ ದಾಖಲಾತಿ ಹೊಂದಿರುವ ಸರ್ಕಾರಿ ಶಾಲೆಗಳನ್ನ ಗುರುತಿಸಿ, ಮಕ್ಕಳ ಹಿತಾಸಕ್ತಿಯನ್ನು ಕಾಯ್ದುಕೊಂಡು ಮಗುವಿನ ಸರ್ವತೋಮುಖ ಬೆಳವಣಿಗೆಯ ಹಾಗೂ ಸಾಮಾಜೀಕರಣ ಹಿತದೃಷ್ಟಿಯಿಂದ ʻಸದರಿ ಶಾಲೆಗಳನ್ನು ಹತ್ತಿರದ ಸರ್ಕಾರಿ ಶಾಲೆಗೆ ಸಂಯೋಜಿಸಿʼ ಸಂಯೋಜಿತ ಶಾಲೆಯನ್ನು ʻHub And Spoke Model’ ರೀತಿಯಲ್ಲಿ ಕೇಂದ್ರ ಶಾಲೆಯಾಗಿ ಅಭಿವೃದ್ಧಿಪಡಿಸುವ ಮೂಲಕ ಶಾಲೆಯ ವ್ಯಾಪ್ತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುವಂತೆ ಕ್ರಮವಹಿಸುವುದು.