Tag: Karnataka Government

  • ಹಾವೇರಿ ಹಾಲು ಒಕ್ಕೂಟದಿಂದ ಹಾಲಿನ ದರ ಪರಿಷ್ಕರಣೆ – ಪ್ರತಿ ಲೀಟರ್‌ ಹಾಲಿನ ದರ ಎಷ್ಟು?

    ಹಾವೇರಿ ಹಾಲು ಒಕ್ಕೂಟದಿಂದ ಹಾಲಿನ ದರ ಪರಿಷ್ಕರಣೆ – ಪ್ರತಿ ಲೀಟರ್‌ ಹಾಲಿನ ದರ ಎಷ್ಟು?

    ಹಾವೇರಿ: ಮಾರ್ಚ್ 28 ರಂದು ಹೊರಡಿಸಿದ್ದ ದರ ಪರಿಷ್ಕರಣೆ ಆದೇಶವನ್ನು ಹಾವೇರಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (Haveri Milk Producers Associations) ಹಿಂಪಡೆದು ಏಪ್ರಿಲ್‌ 1 ರಿಂದ ಅನ್ವಯವಾಗುವಂತೆ ಪ್ರತಿ ಲೀಟರ್‌ಗೆ 34.05 ರೂಪಾಯಿ ದರವನ್ನು ನಿಗದಿ ಮಾಡಿ ಆದೇಶ ಹೊರಡಿಸಿದೆ.

    ಈ ಮೊದಲು 31.50 ಪೈಸೆ ದರವಿತ್ತು. ಈಗ ರೈತರಿಗೆ ಎರಡೂವರೆ ರೂಪಾಯಿ ದರ ಹೆಚ್ಚಳ ಮಾಡಲಾಗಿದೆ ಎಂದು ಹಾವೇರಿ ಹಾಲು ಒಕ್ಕೂಟದ ಅಧ್ಯಕ್ಷ ಮಂಜನಗೌಡ ಪಾಟೀಲ್‌ ಅವರು ಹೇಳಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಅಗ್ನಿ ಅವಘಡ | 345 ವಾಹನಗಳು ಭಸ್ಮ – ಬೆಂಕಿ ನಂದಿಸಲು 2ಗಂಟೆ ಕಾಲ ಹರಸಾಹಸ ಪಟ್ಟ ಅಧಿಕಾರಿಗಳು

    ನಗರದ ಒಕ್ಕೂಟದ ಕಚೇರಿಯಲ್ಲಿ ಮಾತನಾಡಿದ ಅವರು, 4 ರೂಪಾಯಿಗೆ ಬದಲಾಗಿ, ಎರಡೂವರೆ ರುಪಾಯಿ ಹೆಚ್ಚಳ ಮಾಡಲಾಗಿದೆ. ಹಾವೇರಿ ಹಾಲು ಒಕ್ಕೂಟ ಅರ್ಥಿಕವಾಗಿ ನಷ್ಟದಲ್ಲಿರುವುದರಿಂದ ಎರಡೂವರೆ ರೂಪಾಯಿ ದರ ಹೆಚ್ಚಳ ಮಾಡಲಾಗಿದೆ. ಇದರಿಂದ ಒಂದು ದಿನಕ್ಕೆ, 2,87,500 ರೂಪಾಯಿ ಕೊಡಬೇಕಾಗುತ್ತದೆ. ಪ್ರತಿ ತಿಂಗಳಿಗೆ 86,25,000 ರೂಪಾಯಿ ನಷ್ಟವಾಗಲಿದ್ದು, ವರ್ಷಕ್ಕೆ 10.35 ಕೋಟಿ ರೂ. ನಷ್ಟವಾಗಲಿದೆ ಎಂದು ಹೇಳಿದರು. ಇದನ್ನೂ ಓದಿ: Bhovi Corporation Scam – ಜನರಲ್ ಮ್ಯಾನೇಜರ್ ನಾಗರಾಜಪ್ಪ 14 ದಿನ ಇಡಿ ಕಸ್ಟಡಿಗೆ

    ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್‌ ಅವರೊಂದಿಗೆ ದರ ಪರಿಷ್ಕರಣೆ ವಿಚಾರವಾಗಿ ಸಭೆ ಮಾಡಲಾಯಿತು. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು ಮಾರುಕಟ್ಟೆ ವ್ಯವಸ್ಥೆ ಮಾಡಿಕೊಡುವುದಾಗಿ ಹೇಳಿದ್ದಾರೆ. ಯುಹೆಚ್‌ಟಿ ಪ್ಲಾಂಟ್‌ನ್ನು ಬೆಂಗಳೂರು ಕೆಎಂಎಫ್‌ಗೆ ವಹಿಸಿಕೊಡುವ ತೀರ್ಮಾನ ಮಾಡಿದ್ದಾರೆ. ಬಾಂಬೆ ಮತ್ತು ಹುಬ್ಬಳ್ಳಿ ಮಾರ್ಕೆಟ್ ಕೊಡಿಸುವುದಾಗಿ ಸಚಿವರು ಹೇಳಿದ್ದಾರೆ. ಬೇರೆ ಮಾರ್ಕೆಟ್ ಕೊಡಿಸಿದರೆ ನಷ್ಟ ಸರಿಯಾಗಲಿದೆ. ಹಾವೇರಿ ಹಾಲು ಒಕ್ಕೂಟವನ್ನು ನಷ್ಟದ ಸುಳಿಯಿಂದ ಪಾರು ಮಾಡಿ ಲಾಭದತ್ತ ತರಲು ಪ್ರಯತ್ನ ಮಾಡಲಾಗುವುದು.

    ಏಪ್ರಿಲ್‌ 12 ರಂದು ಬೆಂಗಳೂರಿನಲ್ಲಿ ಬೆಂಗಳೂರಿನ ಕೆಎಂಎಫ್, ಜಿಲ್ಲೆಯ ಶಾಸಕರ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರ ನೇತೃತ್ವದಲ್ಲಿ ಸಭೆ ನಡೆಸಲಾಗುವುದು. ಅಲ್ಲಿ ಮಾರುಕಟ್ಟೆ ವ್ಯವಸ್ಥೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗುವುದು ಎಂದರು. ಇದನ್ನೂ ಓದಿ: ಅಯ್ಯೋ ವಿಧಿಯೇ… ಕಾಲೇಜಿನಲ್ಲಿ ವಿದಾಯ ಭಾಷಣ ಮಾಡುತ್ತಲೇ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು

  • 6 ವಾರಗಳಲ್ಲಿ ಓಲಾ, ಉಬರ್ ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ಸ್ಥಗಿತಕ್ಕೆ ಹೈಕೋರ್ಟ್ ಆದೇಶ

    6 ವಾರಗಳಲ್ಲಿ ಓಲಾ, ಉಬರ್ ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ಸ್ಥಗಿತಕ್ಕೆ ಹೈಕೋರ್ಟ್ ಆದೇಶ

    -ನಿರ್ಬಂಧಿಸದಂತೆ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್

    ಬೆಂಗಳೂರು: 6 ವಾರಗಳಲ್ಲಿ ಓಲಾ, ಉಬರ್ ಬೈಕ್ (Uber) ಟ್ಯಾಕ್ಸಿ ಸೇವೆಯನ್ನು ಸ್ಥಗಿತಗೊಳಿಸುವಂತೆ ರಾಜ್ಯ ಹೈಕೋರ್ಟ್ (High Court) ಆದೇಶ ಹೊರಡಿಸಿದೆ.

    2022ರಲ್ಲಿ ಮೋಟಾರ್ ಸೈಕಲ್‌ಗಳನ್ನು ಸಾರಿಗೆ ವಾಹನಗಳಾಗಿ ನೋಂದಾಯಿಸಲು ಉಬರ್ ಇಂಡಿಯಾ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್, ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ರಾಜ್ಯ ಸರ್ಕಾರಕ್ಕೆ (State Government) ನಿರ್ದೇಶನ ಕೋರಿ ಅರ್ಜಿ ಸಲ್ಲಿಸಿದ್ದವು. ಈ ಅರ್ಜಿಗಳ ವಿಚಾರಣೆಯ ವೇಳೆ 1988ರ ಮೋಟಾರು ವಾಹನ ಕಾಯ್ದೆ ಹಾಗೂ ಸೆಕ್ಷನ್ 93ರಡಿಯಲ್ಲಿ ಬರುವ ಮಾರ್ಗಸೂಚಿಗಳನ್ನು ಹೊರಡಿಸಿದ ನಂತರ ಅರ್ಜಿದಾರರು ಬೈಕ್ ಟ್ಯಾಕ್ಸಿ ಸೇವೆ ನೀಡಬಹುದು. ಆದರೆ ರಾಜ್ಯ ಸರ್ಕಾರ ಓಲಾ, ಉಬರ್ ಇನ್ನಿತರ ಬೈಕ್ ಟ್ಯಾಕ್ಸಿಗಳಿಗೆ ನಿಯಮ ರೂಪಿಸಿಲ್ಲ. ನಿಯಮಗಳಿಲ್ಲದೇ ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ಮಾಡುವಂತಿಲ್ಲ ಎಂದು ಅಭಿಪ್ರಾಯಪಟ್ಟಿದೆ.ಇದನ್ನೂ ಓದಿ:105 ಮೀಟರ್‌ ಭರ್ಜರಿ ಸಿಕ್ಸರ್‌ – ಈ ಐಪಿಎಲ್‌ನಲ್ಲಿ ಫಿಲ್‌ ಸಾಲ್ಟ್‌ ವಿಶೇಷ ಸಾಧನೆ

    ಈ ಸಂಬಂಧ ಕರ್ನಾಟಕ ಸಾರಿಗೆ ಇಲಾಖೆಗೆ ಮೋಟಾರ್ ಸೈಕಲ್‌ಗಳನ್ನು ಸಾರಿಗೆ ವಾಹನಗಳಾಗಿ ನೋಂದಾಯಿಸಲು ನಿರ್ದೇಶನ ನೀಡಲಾಗುವುದಿಲ್ಲ. ಹೀಗಾಗಿ 3 ತಿಂಗಳಲ್ಲಿ ನಿಯಮ ರೂಪಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ. ಇನ್ನೂ 6 ವಾರಗಳ ಕಾಲಾವಕಾಶ ನೀಡಿದ್ದು, ಬಳಿಕ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ನ್ಯಾ.ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಪೀಠ ಆದೇಶ ಹೊರಡಿಸಿದೆ.

    ಓಲಾ, ಉಬರ್ ಬೈಕ್ ಟ್ಯಾಕ್ಸಿ ಸೇವೆಗೆ ನಿರ್ಬಂಧ ವಿಧಿಸಿದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.ಇದನ್ನೂ ಓದಿ:ರಷ್ಯಾದಲ್ಲಿ ಕೋವಿಡ್ ಮಾದರಿ ನಿಗೂಢ ವೈರಸ್!

  • ಬೆಲೆ ಏರಿಕೆ ಖಂಡಿಸಿ ಶೀಘ್ರವೇ ಜೆಡಿಎಸ್‌ನಿಂದ ಹೋರಾಟ – ನಿಖಿಲ್

    ಬೆಲೆ ಏರಿಕೆ ಖಂಡಿಸಿ ಶೀಘ್ರವೇ ಜೆಡಿಎಸ್‌ನಿಂದ ಹೋರಾಟ – ನಿಖಿಲ್

    -ಗುತ್ತಿಗೆಯಲ್ಲಿ ಮುಸ್ಲಿಂಮರಿಗೆ ಮೀಸಲಾತಿ ಸಂವಿಧಾನ ವಿರೋಧ

    ಬೆಂಗಳೂರು: ರಾಜ್ಯ ಸರ್ಕಾರದ (State Government) ಬೆಲೆ ಏರಿಕೆ (Price Hike) ಖಂಡಿಸಿ ಜೆಡಿಎಸ್‌ನಿಂದ (JDS) ರಾಜ್ಯಾದ್ಯಂತ ಶೀಘ್ರವೇ ಉಗ್ರ ಹೋರಾಟ ಮಾಡುವುದಾಗಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ತಿಳಿಸಿದ್ದಾರೆ.

    ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ (Congress) ಪಕ್ಷ ಅಧಿಕಾರಕ್ಕೆ ಬಂದು 2 ವರ್ಷ ಕಳೆದಿದೆ. ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುವ ಕೆಲಸ ಈ ಸರ್ಕಾರ ಮಾಡುತ್ತಿದೆ. ಜನ ಸಾಮಾನ್ಯರ ಮೇಲೆ ಸರ್ಕಾರ ಬೆಲೆ ಏರಿಕೆಯ ಹೊರೆಹಾಕಿದ್ದಾರೆ. ಬೆಲೆ ಏರಿಕೆ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕಸಕ್ಕೂ ಟ್ಯಾಕ್ಸ್ ಹಾಕುತ್ತಿದ್ದಾರೆ. ಮೆಟ್ರೋ, ಹಾಲು, ನೀರು, ಪೆಟ್ರೋಲ್, ಡಿಸೇಲ್ ಸೇರಿ ಎಲ್ಲಾ ಬೆಲೆ ಏರಿಕೆ ಆಗಿದೆ. ಇದನ್ನು ಖಂಡಿಸಿ ಜೆಡಿಎಸ್ ಪಕ್ಷ ಉಗ್ರ ಪ್ರತಿಭಟನೆ ಮಾಡುತ್ತದೆ. ಈ ವಾರದಲ್ಲಿ ಶಾಸಕರು, ಪದಾಧಿಕಾರಿಗಳು ಸಭೆ ಮಾಡಿ, ಹೋರಾಟದ ರೂಪುರೇಷೆ ಸಿದ್ದತೆ ಮಾಡುವುದಾಗಿ ತಿಳಿಸಿದರು.ಇದನ್ನೂ ಓದಿ:ಹನಿಟ್ರ‍್ಯಾಪ್ ಕೇಸ್‌ನ ಟೀಸರ್‌ನಲ್ಲಿ ಒಂದು, ಸಿನಿಮಾದಲ್ಲಿ ಮತ್ತೊಂದನ್ನು ತೋರಿಸೋ ಕೆಲಸ ಆಗ್ತಿದೆ – ನಿಖಿಲ್ ಕುಮಾರಸ್ವಾಮಿ

    ಬಿಜೆಪಿ (BJP) ಮಾಡುತ್ತಿರುವ ಹೋರಾಟದಲ್ಲಿ ಜೆಡಿಎಸ್ ಭಾಗಿಯಾಗದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬೆಲೆ ಏರಿಕೆ ಖಂಡಿಸಿ ಬಿಜೆಪಿ ಅಹೋರಾತ್ರಿ ಧರಣಿ ಮಾಡುತ್ತಿದೆ. ಅಹೋರಾತ್ರಿ ಧರಣಿ ಜೊತೆಗೆ ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ. ಮಿತ್ರ ಪಕ್ಷವಾಗಿ ಸದನದ ಒಳಗೆ, ಹೊರಗೆ ನಾವು ಒಟ್ಟಾಗಿ ಹೋರಾಟ ಮಾಡುತ್ತೇವೆ. ಬಿಜೆಪಿ ಅವರು ತನ್ನದೇ ಹೋರಾಟವನ್ನು ಮಾಡ್ತಿದ್ದಾರೆ. ಜೆಡಿಎಸ್ ಕೂಡಾ ಬೆಲೆ ಏರಿಕೆ ಬಗ್ಗೆ ಶೀಘ್ರವೇ ಹೋರಾಟ ಮಾಡುತ್ತದೆ ಅಂದರು.

    ಬಿಜೆಪಿ-ಜೆಡಿಎಸ್ ನಡುವೆ ಲೋಕಸಭಾ ಚುನಾವಣೆಯಿಂದ ಸಂಬಂಧ ಬೆಳೆದಿದೆ. ಸಮನ್ವಯ ಮಾಡೋದಕ್ಕೆ ಕಮಿಟಿ ಆಗಬೇಕು. ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಮಾಡಿಕೊಳ್ಳುತ್ತೇವೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಆದರೆ ಸಮನ್ವಯ ಇನ್ನು ಜಾಸ್ತಿ ಆಗಬೇಕು. ಈ ನಿಟ್ಟಿನಲ್ಲಿ ಸಮನ್ವಯ ಸಮಿತಿ ರಾಜ್ಯ ಮಟ್ಟದಲ್ಲಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

    ಮುಸ್ಲಿಂಮರಿಗೆ ಗುತ್ತಿಗೆಯಲ್ಲಿ ಮೀಸಲಾತಿ ಕೊಟ್ಟಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಮಾತನಾಡಿದ ಅವರು, ಒಂದು ಸಮುದಾಯಕ್ಕೆ ಸೀಮಿತವಾಗಿ ಮೀಸಲಾತಿ ಕೊಟ್ಟಿರೋದು ಸರಿಯಲ್ಲ. 2ಬಿ ಮೀಸಲಾತಿಯಲ್ಲಿ ಮುಸ್ಲಿಂಮರು ಬಿಟ್ಟು ಇನ್ಯಾರು ಇಲ್ಲ. ಅವರಿಗೆ ಮೀಸಲಾತಿ ಕೊಟ್ಟಿರೋದು ಸಂವಿಧಾನ ವಿರೋಧ ಎಂದು ಕಿಡಿಕಾರಿದರು.

    ಡಿಸಿಎಂ ಡಿಕೆಶಿವಕುಮಾರ್ (DCM DK Shivakumar) ಅವರು ನನ್ನ ಕೈಗೆ ಪೆನ್ನು ಪೇಪರ್ ಕೊಡಿ ಅಂದರು. ಹಾಗಾದ್ರೆ 136 ಸ್ಥಾನ ಕಾಂಗ್ರೆಸ್‌ಗೆ ಬರಲು ಮುಸ್ಲಿಂಮರು ಮಾತ್ರ ಕಾರಣನಾ? ಬೇರೆ ಸಮುದಾಯ ನಿಮಗೆ ಮತ ಹಾಕಿಲ್ಲವಾ? ಮುಸ್ಲಿಂಮರಿಗೆ ಮೀಸಲಾತಿ ಕೊಡುವ ನಿಮ್ಮ ಅಜೆಂಡಾ ಏನು? 2ಬಿಗೆ ಮೀಸಲಾತಿ ಕೊಟ್ಟಂತೆ 3ಎ, 3ಬಿಗೂ ಮೀಸಲಾತಿ ಕೊಡಿ. ಕಾಂಗ್ರೆಸ್ ಅವರು ಬಿಜೆಪಿ ವಿರುದ್ದ 40% ಕಮಿಷನ್ ಆರೋಪ ಮಾಡಿದರು. ಈಗ ನಿಮ್ಮ ಪಕ್ಷದವರೇ ಕಾಂಗ್ರೆಸ್ ಸರ್ಕಾರದಲ್ಲಿ ಎಷ್ಟು ಕಮಿಷನ್ ಇದೆ ಎಂದು ಕೇಳುತ್ತಿದ್ದಾರೆ. 4% ಮೀಸಲಾತಿ ಕೊಟ್ಟಿರುವ ಮುಸ್ಲಿಂ ಸಮುದಾಯಕ್ಕೆ ಕಮಿಷನ್‌ನಲ್ಲಿ ಡಿಸ್ಕೌಂಟ್ ಇದೆಯಾ ಎಂದು ಪ್ರಶ್ನಿಸಿದರು.

    ಕೇವಲ ಒಂದು ಸಮುದಾಯ ಮೆಚ್ಚಿಸಲು, ಮುಸ್ಲಿಂಮರನ್ನು ಒಲೈಕೆ ಮಾಡಲು ಮೀಸಲಾತಿ ಕೊಟ್ಟಿರೋದು ಸರಿಯಲ್ಲ. ಮುಸ್ಲಿಂಮರಿಗೆ ಮೀಸಲಾತಿ ಕೊಡೋಕೆ ನಮ್ಮ ವಿರೋಧ ಇಲ್ಲ. ಆದರೆ ಒಂದು ಸಮುದಾಯ ಬದಲು ಎಲ್ಲಾ ಸಮುದಾಯಕ್ಕೆ ಮೀಸಲಾತಿ ಕೊಡಿ ಎಂದು ಆಗ್ರಹಿಸಿದರು.ಇದನ್ನೂ ಓದಿ:ಬ್ರೇಕಪ್ ಬೆನ್ನಲ್ಲೇ ಸಂಬಂಧವನ್ನು ಐಸ್‌ಕ್ರೀಮ್‌ನಂತೆ ಆಸ್ವಾದಿಸಬೇಕು ಎಂದ ವಿಜಯ್ ವರ್ಮಾ

  • ನಾಳೆಯಿಂದ ದುನಿಯಾ ದುಬಾರಿ – ಹಾಲು, ಮೊಸರು ದುಬಾರಿ.. ಕಸಕ್ಕೂ ಕಾಸು, ಯಾವುದಕ್ಕೆ ಎಷ್ಟು ದರ ಹೆಚ್ಚಳ?

    ನಾಳೆಯಿಂದ ದುನಿಯಾ ದುಬಾರಿ – ಹಾಲು, ಮೊಸರು ದುಬಾರಿ.. ಕಸಕ್ಕೂ ಕಾಸು, ಯಾವುದಕ್ಕೆ ಎಷ್ಟು ದರ ಹೆಚ್ಚಳ?

    ಬೆಂಗಳೂರು: ಗ್ಯಾರಂಟಿಗಳ (Congress Guarantee) ಭಾರದ ಮಧ್ಯೆ ರಾಜ್ಯದ ಜನತೆಗೆ ಬಸ್, ಮೆಟ್ರೋ ಬಳಿಕ ಹಾಲು, ಮೊಸರು, ವಿದ್ಯುತ್‌ ದರ ದುಬಾರಿಯಾಗಲಿದೆ. ಅಷ್ಟೇ ಅಲ್ಲದೇ ಏಪ್ರಿಲ್‌ 1ರಿಂದ ಕಸಕ್ಕೂ ಸೆಸ್ ಕಟ್ಬೇಕಿದೆ.

    ಇಂಧನ ಇಲಾಖೆ ನೌಕರರ ಪಿಂಚಣಿ ಗ್ರಾಚ್ಯೂಟಿಗಾಗಿ ಯೂನಿಟ್‌ಗೆ 36 ಪೈಸೆ ಹೆಚ್ಚಿಸಿದ್ದ ಸರ್ಕಾರ ಅದೇ ಮಾದರಿಯಲ್ಲಿ ಹಾಲಿನ ದರ (Milk Price) ಹೆಚ್ಚಿಸಿ ರೈತರಿಗೆ ಪ್ರೋತ್ಸಾಹ ಧನ ಕೊಡಲು ಹೊರಟಿದೆ. ಏಪ್ರಿಲ್ 1ರಿಂದ ಅನ್ವಯವಾಗುವಂತೆ ನಂದಿನಿ ಹಾಲು-ಮೊಸರಿನ ಬೆಲೆಯನ್ನು ನಾಲ್ಕು ರೂಪಾಯಿ ಹೆಚ್ಚಿಸಿದೆ. ಹೀಗಾಗಿ ಪ್ರಸಕ್ತ ವರ್ಷ ಏಪ್ರಿಲ್‌ 1ರಿಂದ ದುನಿಯಾ ಮತ್ತಷ್ಟು ದುಬಾರಿಯಾಗಲಿದೆ.

    ಯಾವುದೆಲ್ಲಾ ಏರಿಕೆ?
    ಹಾಲು: ಪ್ರತಿ ಲೀಟರ್‌ಗೆ 4 ರೂ. ಹೆಚ್ಚಳ

    ಮೊಸರು: ಪ್ರತಿ ಲೀಟರ್‌ಗೆ 4 ರೂ. ಹೆಚ್ಚಳವಾಗಿದೆ. ಇದರಿಂದ ಹೋಟೆಲ್‌ನಲ್ಲಿ ಕಾಫಿ, ಟೀ ಸದ್ಯದಲ್ಲೇ ಏರಿಕೆ ಸಾಧ್ಯತೆಯಿದೆ.

    ವಿದ್ಯುತ್‌: ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಳ, ಅಲ್ಲದೇ ಮಾಸಿಕ ಶುಲ್ಕ 20 ರೂ. ಹೆಚ್ಚಳ, ಇದರಿಂದ 120 ರೂ. ಇದ್ದ ನಿಗದಿತ ಶುಲ್ಕ 140 ರೂ.ಗಳಿಗೆ ಏರಿಕೆಯಾಗಿದೆ.

    ಕಸ ಸಂಗ್ರಹ ಸೆಸ್ (ಮಾಸಿಕ)
    ವಸತಿ ಕಟ್ಟಡ:
    600 ಚದರಡಿವರೆಗೆ – 10 ರೂ., 601-1000 ಚದರಡಿ – 50 ರೂ., 1001-2000 ಚದರಡಿ – 100 ರೂ., 2001-3000 ಚದರಡಿ – 150 ರೂ., 3001-4000 ಚದರಡಿ – 200 ರೂ., 4000 ಚದರಡಿ ಮೇಲ್ಪಟ್ಟು – 400 ರೂ.

    ವಾಣಿಜ್ಯ ಕಟ್ಟಡ:
    ನಿತ್ಯ 5ಕೆಜಿವರೆಗೆ – 500 ರೂ. ನಿತ್ಯ 10 ಕೆಜಿವರೆಗೆ – 1400 ರೂ. ನಿತ್ಯ 25 ಕೆಜಿವರೆಗೆ – 3500 ರೂ. ನಿತ್ಯ 50 ಕೆಜಿವರೆಗೆ – 7000 ರೂ., ನಿತ್ಯ 100 ಕೆಜಿವರೆಗೆ – 14000 ರೂ.

    ಹೊಸ ವಾಹನ ಖರೀದಿಗೆ ಹೆಚ್ಚುವರಿ ಸೆಸ್: ಉಕ್ಕು, ಬಿಡಿಭಾಗ ದುಬಾರಿ, ಇದರ ಜೊತೆಗೆ ಬಿಡಿ ಭಾಗ, ಉಕ್ಕುಗಳ ಆಮದು ದರ ಕೂಡ ಏಪ್ರಿಲ್‌ನಿಂದ ಏರಿಕೆಯಾಗುತ್ತಿದೆ. ಇದರ ಪರಿಣಾಮ ಏಪ್ರಿಲ್ 1 ರಿಂದ ವಾಹನ ಬೆಲೆ ದುಬಾರಿಯಾಗುತ್ತಿದೆ.

    ಮುದ್ರಾಂಕ ಶುಲ್ಕ: 50ರೂ.ನಿಂದ 500ರೂ.ಗೆ ಹೆಚ್ಚಳ

    ಅಫಿಡವಿಟ್ ಶುಲ್ಕ: 20 ರೂ.ನಿಂದ 100 ರೂ. ಏರಿಕೆ

    ಮುಂದೆ ಏನೇನು ಏರಿಕೆ?
    ಶೀಘ್ರ ನೀರಿನ ದರ ಏರಿಕೆ:
    ಲೀಟರ್‌ಗೆ ಒಂದು ಪೈಸೆ ಏರಿಕೆ. ಏ.1ರಿಂದ ಜಾರಿ ಆಗುವ ಸಾಧ್ಯತೆಯಿದೆ.

  • ಹಾವೇರಿ ಹಾಲು ಒಕ್ಕೂಟದಿಂದ ಹಾಲಿನ ದರ 3.50 ರೂ. ಇಳಿಕೆ!

    ಹಾವೇರಿ ಹಾಲು ಒಕ್ಕೂಟದಿಂದ ಹಾಲಿನ ದರ 3.50 ರೂ. ಇಳಿಕೆ!

    ಹಾವೇರಿ: ರಾಜ್ಯದಲ್ಲಿ ಸರ್ಕಾರ ಪ್ರತಿ ಲೀಟರ್ ಹಾಲಿಗೆ 4 ರೂ. ಏರಿಕೆ (Milk Price Hike) ಮಾಡಿ ಗ್ರಾಹಕರಿಗೆ ಶಾಕ್ ನೀಡಿತ್ತು. ಆದ್ರೆ ಹಾವೇರಿ ಜಿಲ್ಲಾ ಹಾಲು ಒಕ್ಕೂಟ ಸರ್ಕಾರಕ್ಕೆ ಸೆಡ್ಡು ಹೊಡೆದಿದೆ. ಪ್ರತಿ ಲೀಟರ್ ಹಾಲಿನ ದರ 3.50 ರೂ. ಇಳಿಕೆ ಮಾಡಿದೆ.

    ಮಾರ್ಚ್ 28 ರಿಂದ ಆದೇಶವನ್ನ ಜಾರಿಗೆ ಮಾಡಿದೆ. ಏಪ್ರೀಲ್ 1 ರಿಂದ ಪ್ರತಿ ಲೀಟರ್‌ಗೆ 4 ರೂಪಾಯಿ ಹೆಚ್ಚಿಸಲು ಕೆಎಂಎಫ್ (KMF) ನಿರ್ಧಾರ ಮಾಡಿದೆ. ಆದರೆ ಹಾವೇರಿ ಹಾಲು ಒಕ್ಕೂಟ ಮಾತ್ರ ಲೀಟರ್ ಹಾಲಿಗೆ 3.50 ರೂ.ಪಾಯಿ ಕಡಿಮೆ ಮಾಡಿ ಆದೇಶ ಮಾಡಿದೆ, ಇದು ರೈತರ ಆಕ್ರೋಶ ಕಾರಣವಾಗಿದೆ. ಇದನ್ನೂ ಓದಿ: Milk Price Hike | ಗ್ಯಾರಂಟಿ ಸರ್ಕಾರದ ಬಂದ ಮೇಲೆ ಯಾವುದು ಎಷ್ಟು ಏರಿಕೆ? ಮುಂದೆ ಏನೇನು ಶಾಕ್ ಸಿಗುತ್ತೆ?

    ಎಮ್ಮೆ ಹಾಲಿಗೆ ಲೀಟರ್‌ಗೆ 43 ರೂ. ನೀಡಲಾಗುತ್ತಿತ್ತು. ಹಸುವಿನ ಹಾಲಿಗೆ 30.50 ರೂಪಾಯಿ ನೀಡಲಾಗ್ತಿತ್ತು. ಆದರೆ ಆರ್ಥಿಕ ನಷ್ಟ ಉಂಟಾಗಿದೆ ಎಂಬ ಕಾರಣ ನೀಡಿ 3.50 ರೂಪಾಯಿ ಕಟ್ ಮಾಡಿದೆ. ಮಾರ್ಚ್ 27ರಂದೇ ಹಾವೆಮುಲ್‌ ಆದೇಶ ಮಾಡಿದೆ. ಇದರಿಂದ 43 ರೂ. ಇದ್ದ ಎಮ್ಮೆ ಹಾಲಿನ ದರ 39.50 ರೂ., 30.50 ರೂ. ಇದ್ದ ಹಸುವಿನ ಹಾಲಿನ ದರ 27 ರೂ.ಗಳಿಗೆ ಇಳಿಕೆಯಾಗಿದೆ. ಇದನ್ನೂ ಓದಿ: ರಾಜ್ಯದ ಜನತೆಗೆ ಕರೆಂಟ್‌ ಶಾಕ್‌ – ಫಿಕ್ಸೆಡ್ ಚಾರ್ಜ್ ದರ 25 ರೂ. ಏರಿಕೆ

    ಹಾಲು ಉತ್ಪನ್ನಗಳ ದರ ಕುಸಿತವಾಗಿದೆ. ಹಾಲು ಉತ್ಪಾದಕರಿಗೆ ಹೆಚ್ಚಿನ ದರ ನೀಡಿ ಒಕ್ಕೂಟಕ್ಕೆ ಆರ್ಥಿಕ ನಷ್ಟ ಉಂಟಾಗುತ್ತಿದೆ. ಒಕ್ಕೂಟದ ಆರ್ಥಿಕ ನಷ್ಟ ಕಡಿಮೆ ಮಾಡಲು ದರ ಕಡಿಮೆ ಮಾಡಲಾಗಿದೆ ಎಂದು ಹಾಲು ಒಕ್ಕೂಟ ನಿರ್ದೇಶಕರು ಆದೇಶ ಮಾಡಿದ್ದಾರೆ. ಆದರೆ ಜಿಲ್ಲೆಯ ಹಾಲು ಉತ್ಪಾದಕ ರೈತರು ಗ್ರಾಹಕರಿಗೆ 4 ಏರಿಕೆ ಮಾಡಿದ್ದಾರೆ. ಮೊದಲು ಕೊಡುವ ದರದಲ್ಲಿ ಇಳಿಕೆ ಮಾಡಿದ್ದು ಯಾವ ನ್ಯಾಯ ನಿಮ್ಮದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: Exclusive | ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಸುಪಾರಿ ಕೇಸ್‌ – ಆಡಿಯೋದಲ್ಲಿ ಬಯಲಾಯ್ತು ಸಂಚಿನ ರಹಸ್ಯ

  • ಮನಿ ಕ್ರೈಸಿಸ್ ಇತ್ತು ಈಗ ಹನಿ ಕ್ರೈಸಿಸ್ ಶುರುವಾಗಿದೆ: ಬೊಮ್ಮಾಯಿ

    ಮನಿ ಕ್ರೈಸಿಸ್ ಇತ್ತು ಈಗ ಹನಿ ಕ್ರೈಸಿಸ್ ಶುರುವಾಗಿದೆ: ಬೊಮ್ಮಾಯಿ

    -`ಕೈ’ ಹಾಕಿದ ಕಡೆಯಲ್ಲ ಹಗರಣ, 2 ವರ್ಷಗಳಲ್ಲಿ 10 ಹಗರಣ ಆಚೆ ಬಂದಿದೆ

    ನವದೆಹಲಿ: ಕಾಂಗ್ರೆಸ್ (Congress) ಸಸರ್ಕಾರ ಹಾಕಿದ ಕಡೆಯಲ್ಲ ಹಗರಣ, 2 ವರ್ಷಗಳಲ್ಲಿ 10 ಹಗರಣ ಆಚೆ ಬಂದಿದೆ ಎಂದು ಬಿಜೆಪಿ ಸಂಸದ ಬಸವರಾಜ್ ಬೊಮ್ಮಾಯಿ (Basavaraj Bommai) ಹೇಳಿದರು.

    ನವದೆಹಲಿಯಲ್ಲಿ (New Delhi) ಮಾಧ್ಯಮದವರೊಂದಿಗೆ ಜನಪ್ರತಿನಿಧಿಗಳ ಮೇಲೆ ಹನಿಟ್ರ‍್ಯಾಪ್ ವಿಚಾರವಾಗಿ ಮಾತನಾಡಿದ ಅವರು, ಹನಿಟ್ರ‍್ಯಾಪ್ ಕುಖ್ಯಾತಿ ಕರ್ನಾಟಕದ ಗೌರವವನ್ನು ಕಡಿಮೆ ಮಾಡಿದೆ. ಇದನ್ನು ಬಹಳ ಸೂಕ್ಷ್ಮವಾಗಿ ಹೇಳುತ್ತಿದ್ದೇನೆ. ಕಾಂಗ್ರೆಸ್‌ನ ಅಧಿಕಾರದ ಲಾಲಸ್ಯ ನೈತಿಕತೆಯನ್ನು ಅಧೋಗತಿಗೆ ತೆಗೆದುಕೊಂಡಿದೆ. ಒಂದು ಹಗರಣದಿಂದ ಮತ್ತೊಂದು ಹಗರಣ ಆಗುತ್ತಿದೆ. ಎರಡು ವರ್ಷದಲ್ಲಿ ಹತ್ತು ಹಗರಣ ಆಚೆ ಬಂದಿದೆ. ಕೈ ಹಾಕಿದ ಕಡೆಯಲ್ಲ ಹಗರಣ ಬರುತ್ತಿದೆ ಎಂದರು.ಇದನ್ನೂ ಓದಿ:ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕ ಸಾವು

    ವಿಧಾನಸಭೆಯಲ್ಲಿ ನೈತಿಕ ಅಧಪತನ ನೋಡಿದ್ದೇವೆ. ಮನಿ ಕ್ರೈಸಿಸ್ ಇತ್ತು ಈಗ ಹನಿ ಕ್ರೈಸಿಸ್ ಶುರುವಾಗಿದೆ. ಸರ್ಕಾರ ಆರ್ಥಿಕವಾಗಿ, ನೈತಿಕವಾಗಿ ದಿವಾಳಿಯಾಗಿದೆ. ಕ್ಯಾಬಿನೆಟ್ ಸಚಿವರು ಹಬಿಟ್ರ‍್ಯಾಪ್ ಆಗುತ್ತಿದೆ ಎಂದು ಹೇಳುವ ಪರಿಸ್ಥಿತಿ ಬಂದಿದೆ. ಹದಿನೈದು ದಿನದಿಂದ ವಿಧಾನಸೌಧದ ಮೊಗಸಾಲೆಯಲ್ಲಿ ಚರ್ಚೆಯಾಗುತ್ತಿದೆ. ಇಂತಹ ಕ್ಯಾಬಿನೆಟ್‌ಗೆ ಏನು ಹೇಳಬೇಕು. ಇದು ನೈತಿಕತೆ ಕಳೆದುಕೊಂಡ ಕ್ರಿಮಿನಲ್ ಕ್ಯಾಬಿನೆಟ್. ಸಿಎಂ ನೈತಿಕ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಬೇಕು ಎಂದು ಕಿಡಿಕಾರಿದರು.

    48 ಜನರ ಸಿಡಿ ಎಂದು ರಾಜಣ್ಣ ಹೇಳಿದ್ದಾರೆ, ಅವರಿಗೆ ಮಾಹಿತಿ ಇದ್ದರೆ ಅವರು ಎಲ್ಲ ಮಾಹಿತಿಯನ್ನು ಕೊಡಬೇಕು. ಪೂರ್ಣ ಪ್ರಮಾಣದ ತನಿಖೆಯಾಗಬೇಕು. ಇದನ್ನು ಯಾರೇ ಮಾಡಿದರೂ ಅವರಿಗೆ ಶಿಕ್ಷೆಯಾಗಬೇಕು. ಈಗ ಎಸ್‌ಐಟಿಗಳಿಗೆ ಮಹತ್ವವಿಲ್ಲ. ಹೀಗಾಗಿ ನಿವೃತ್ತ ಅಥವಾ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಬೇಕು ಎಂದು ತಿಳಿಸಿದರು.ಇದನ್ನೂ ಓದಿ:ಸಿಎಂ ಕುರ್ಚಿಗಾಗಿ ಹನಿಟ್ರ‍್ಯಾಪ್ – ಸರ್ಕಾರದಲ್ಲಿ ದಲಿತ ಮಂತ್ರಿಗೆ ರಕ್ಷಣೆ ಇಲ್ಲ: ಅಶೋಕ್‌

  • ಸರ್ಕಾರದ ನಿರ್ಲಕ್ಷ್ಯಕ್ಕೆ ಸರ್ಕಾರಿ ಶಾಲೆಗಳಿಗೆ ಆಪತ್ತು – ಜಿಲ್ಲೆಯಲ್ಲಿ 579 ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ದಾಖಲಾತಿ

    ಸರ್ಕಾರದ ನಿರ್ಲಕ್ಷ್ಯಕ್ಕೆ ಸರ್ಕಾರಿ ಶಾಲೆಗಳಿಗೆ ಆಪತ್ತು – ಜಿಲ್ಲೆಯಲ್ಲಿ 579 ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ದಾಖಲಾತಿ

    ಹಾಸನ: ಸರ್ಕಾರದ ನಿರ್ಲಕ್ಷ್ಯ, ಮೂಲ ಸೌಕರ್ಯಗಳ ಕೊರತೆ, ಪೋಷಕರ ಇಂಗ್ಲೀಷ್ ವ್ಯಾಮೋಹ, ಶಿಕ್ಷಕರ ಕೊರತೆಯಿಂದಾಗಿ ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿರುವ ಪರಿಣಾಮ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿವೆ.

    ಹಾಸನ ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 7 ಸಾವಿರ ಮಕ್ಕಳು ಸರ್ಕಾರಿ ಶಾಲೆಯಿಂದ ಹೊರನಡೆದಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಹಾಸನ ಜಿಲ್ಲೆಯಲ್ಲಿ 35 ಶಾಲೆಗಳನ್ನು ಬಂದ್‌ ಮಾಡಲಾಗಿದೆ. ಪ್ರಸಕ್ತ ವರ್ಷವೂ ಸಹ ಈ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಹಾಸನ ಜಿಲ್ಲೆಯಲ್ಲಿ 1,249 ಕಿರಿಯ ಪ್ರಾಥಮಿಕ ಶಾಲೆ, 969 ಹಿರಿಯ ಪ್ರಾಥಮಿಕ ಶಾಲೆ, 241 ಪ್ರೌಢ ಶಾಲೆ ಸೇರಿ 2,249 ಸರ್ಕಾರಿ ಶಾಲೆಗಳಿವೆ. ಇವುಗಳಲ್ಲಿ 579 ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ಮಕ್ಕಳು ದಾಖಲಾಗಿದ್ದರೆ, 681 ಶಾಲೆಯಲ್ಲಿ 20ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದನ್ನೂ ಓದಿ: 2002ರ ಗುಜರಾತ್‌ ಗಲಭೆಯೇ ದೇಶದ ಅತಿದೊಡ್ಡ ಗಲಭೆಯಲ್ಲ – ರೈಲು ದುರಂತ ಸ್ಮರಿಸಿದ ಮೋದಿ

    2023-24ನೇ ಸಾಲಿನಲ್ಲಿ ಜಿಲ್ಲಾದ್ಯಂತ 86,231 ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿ ಪ್ರವೇಶ ಪಡೆದಿದ್ದಾರೆ. 2024-25ನೇ ಸಾಲಿಗೆ ಮಕ್ಕಳ ಸಂಖ್ಯೆ 79,283ಕ್ಕೆ ಇಳಿಕೆ ಕಂಡಿದ್ದು, ಒಂದು ವರ್ಷದಲ್ಲಿ 6,948 ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕಡಿಮೆಯಾಗಿದೆ. ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದ್ದು ಒಬ್ಬರೇ ಶಿಕ್ಷಕರಿರುವ ಶಾಲೆಗಳ ಸಂಖ್ಯೆ 150ಕ್ಕೂ ಹೆಚ್ಚಿದೆ. ಒಂದರಿಂದ 7ನೇ ತರಗತಿಯವರೆಗೆ ಒಬ್ಬ ಶಿಕ್ಷಕ ಅಥವಾ ಓರ್ವ ಶಿಕ್ಷಕಿ ಪಾಠ ಮಾಡುತ್ತಿದ್ದಾರೆ. ಇದರಿಂದಾಗಿ ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳ ಉಳಿವಿಗಾಗಿ ಸರ್ಕಾರ ಹತ್ತಾರು ಯೋಜನೆ ರೂಪಿಸುತ್ತಿದೆ. ಆದರೂ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಸುಧಾರಣೆಯಾಗದೆ ಜ್ಞಾನ ದೇಗುಲಗಳನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಆರ್‌ಎಸ್‌ಎಸ್‌ಗಿಂತ ದೊಡ್ಡ ಸ್ವಯಂಸೇವ ಸಂಘ ವಿಶ್ವದಲ್ಲಿಲ್ಲ: ಮೋದಿ ಗುಣಗಾನ

    ಕಡಿಮೆ ದಾಖಲಾತಿ ಹೊಂದಿರುವ ಶಾಲೆಗಳ ಪಟ್ಟಿ ಸಿದ್ಧಪಡಿಸಿಕೊಂಡಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಸರ್ಕಾರಕ್ಕೆ ವರದಿ ಸಲ್ಲಿಸಲು ಸಿದ್ಧತೆ ನಡೆಸಿದೆ. ಇದರ‌ ಜೊತೆಗೆ ಅವಶ್ಯವಿರುವ ಕಡೆ ಅಕ್ಕಪಕ್ಕದ ಶಾಲೆಗಳ ಸಂಯೋಜನೆಗೆ ಕ್ರಮ ಕೈಗೊಂಡಿದೆ. ಸರ್ಕಾರಿ ಶಾಲೆಗಳಲ್ಲಿ ಫಲಿತಾಂಶ ಸುಧಾರಣೆ ಹಾಗೂ ಮಕ್ಕಳ ಶೈಕ್ಷಣಿಕ ಪ್ರಗತಿಯಾಗದ ಹಿನ್ನಲೆಯಲ್ಲಿ ಪೋಷಕರು ಕಷ್ಟವಾದರೂ ಸರಿ ಖಾಸಗಿ ಶಾಲೆಯೇ ಉತ್ತಮ ಎನ್ನುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಗೆ ಪಾಠ ಬೋಧನೆ ಮಾತ್ರವಲ್ಲದೇ ಸರ್ಕಾರ ಅವರಿಗೆ ಸಂಬಂಧವಿಲ್ಲದ ಹೆಚ್ಚುವರಿ ಕೆಲಸಗಳನ್ನು ವಹಿಸುವುದರಿಂದ ಪಠ್ಯ ಬೋಧನೆಗೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಕಾಟಾಚಾರಕ್ಕೆ ಎಂಬಂತೆ ಮಕ್ಕಳು ಶಾಲೆಗೆ ಹೋಗುತ್ತಾರೆ. ಆದ್ದರಿಂದ ಪೋಷಕರು ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂಬ ಕಾರಣಕ್ಕೆ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುತ್ತಿದ್ದಾರೆ ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ಇದನ್ನೂ ಓದಿ: ಇಂದಿರಾ ಗಾಂಧಿ ವಿರುದ್ಧ ಘೋಷಣೆ ಕೂಗಿದ್ದಕ್ಕೆ ನನ್ನನ್ನು 7 ದಿನ ಜೈಲಿಗೆ ಹಾಕಿದ್ದರು: ಅಮಿತ್‌ ಶಾ

  • ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿಗೆ ಸಂಪುಟ ಒಪ್ಪಿಗೆ – 1 ಕೋಟಿವರೆಗಿನ ಕಾಮಗಾರಿಗಳಲ್ಲಿ ಮೀಸಲಾತಿ

    ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿಗೆ ಸಂಪುಟ ಒಪ್ಪಿಗೆ – 1 ಕೋಟಿವರೆಗಿನ ಕಾಮಗಾರಿಗಳಲ್ಲಿ ಮೀಸಲಾತಿ

    – ಗ್ರಾಮೀಣ ಭಾಗದಲ್ಲಿ ಇ-ಖಾತಾ ನೀಡಲು ಸಂಪುಟ ಅಸ್ತು
    – ರಾಜ್ಯದ ಯಾವ್ದೇ ವಿಶ್ವವಿದ್ಯಾಲಯ ಮುಚ್ಚಲ್ಲ ಎಂದ ಸಿಎಂ

    ಬೆಂಗಳೂರು: ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ (Muslims Reservation) ನೀಡಲು ಸಂಪುಟ ಒಪ್ಪಿಗೆ ಸೂಚಿಸಿದೆ. ಬಜೆಟ್‌ ಘೋಷಣೆಯಂತೆ ವಿಧೇಯಕ ತರಲು ಸಂಪುಟ ಸೂಚಿಸಿದೆ.

    ಮುಸ್ಲಿಮರಿಗೆ 1 ಕೋಟಿ ರೂ. ವರೆಗಿನ ಕಾಮಗಾರಿಗಳಲ್ಲಿ ಮೀಸಲಾತಿ ನೀಡಲು ಒಪ್ಪಿಗೆ ಸೂಚಿಸಿದ್ದು, ವಿಧೇಯಕವನ್ನು ಇದೇ ಅಧಿವೇಶನದಲ್ಲಿ ಮಂಡಿಸಲು ಸಂಪುಟ ಅನುಮೋದನೆ ನೀಡಿದೆ. ಇದನ್ನೂ ಓದಿ: ಕೇಂದ್ರದ 2 ಸಾವಿರ ಕೋಟಿ ಕಳೆದುಕೊಂಡರೂ ನಾವು ನಮ್ಮ ಸಿದ್ಧಾಂತದಲ್ಲಿ ರಾಜಿಯಾಗಲ್ಲ: ತಮಿಳುನಾಡು

    ಇನ್ನೂ ಎಸ್‌ಸಿ-ಎಸ್‌ಟಿ ಸಮುದಾಯಕ್ಕೆ ಈ ಹಿಂದೆ ಇದ್ದ 1 ಕೋಟಿಯವರೆಗಿನ ಕಾಮಗಾರಿ ಮೊತ್ತವನ್ನ 2 ಕೋಟಿ ರೂ.ವರೆಗೆ ವಿಸ್ತರಿಸಿ ಮೀಸಲಾತಿಗೆ ಅವಕಾಶ ನೀಡಲಾಗಿದೆ. ಈ ಮೂಲಕ ಹಿಂದುಳಿದ, ಇತರೇ ಹಿಂದುಳಿದ ವರ್ಗಗಳಿಗೆ ಮಾತ್ರ ಇದ್ದ ಕಾಮಗಾರಿ ಮೀಸಲಾತಿಯನ್ನ ಇತರ ವರ್ಗಗಳಿಗೂ ವಿಸ್ತರಿಸಿದೆ. ಇದನ್ನೂ ಓದಿ: 2ನೇ ಏರ್‌ಪೋರ್ಟ್‌ ನಿರ್ಮಾಣಕ್ಕೆ ತಮಿಳುನಾಡು ಸರ್ಕಾರಕ್ಕೆ ಗ್ರೀನ್‌ ಸಿಗ್ನಲ್‌ – ಹೊಸೂರು ಬಳಿ 2 ಸ್ಥಳ ಫೈನಲ್‌

    ಅಲ್ಲದೇ ಗ್ರಾಮೀಣ ಭಾಗದಲ್ಲಿ ಇ-ಖಾತಾ ನೀಡಲು ಸಂಪುಟ ಒಪ್ಪಿಗೆ ಸೂಚಿಸಿದೆ. ಜೊತೆಗೆ ಕರ್ನಾಟಕ ಲೋಕಸೇವಾ ಆಯೋಗದ ಸುಧಾರಣಾ ಕ್ರಮಗಳ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚಿಸಿದ್ದು, ಲೋಕಸೇವಾ ಆಯೋಗದ ಪರೀಕ್ಷೆ ಆಡಳಿತ ಸುಧಾರಣೆಗೆ ಪ್ರತ್ಯೇಕ ಸಮಿತಿ ರಚನೆಗೂ ಸಂಪುಟ ಒಪ್ಪಿಗೆ ನೀಡಿದೆ. ಜೊತೆಗೆ ಲೋಕಸೇವಾ ಆಯೋಗದ ಸಮಗ್ರ ಸುಧಾರಣೆಗೆ ಕ್ರಮ ವಹಿಸಲು ಕ್ಯಾಬಿನೆಟ್ ತೀರ್ಮಾನ ಮಾಡಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿರೋದು ಸಿದ್ದರಾಮಯ್ಯನ ಸರ್ಕಾರ… ನಿಮ್ಮಪ್ಪನ ಸರ್ಕಾರ ಅಲ್ಲ – ಬಿಜೆಪಿ ಕಾರ್ಯಕರ್ತರ ವಿರುದ್ಧ ರೊಚ್ಚಿಗೆದ್ದ ಪ್ರದೀಪ್‌ ಈಶ್ವರ್‌

    ರಾಜ್ಯದ ಯಾವ್ದೇ ವಿಶ್ವವಿದ್ಯಾಲಯ ಮುಚ್ಚಲ್ಲ:
    ರಾಜ್ಯದಲ್ಲಿ ಯಾವುದೇ ವಿಶ್ವವಿದ್ಯಾಲಯಗಳನ್ನು ಮುಚ್ಚುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ವಿಧಾನಸಭೆಯಲ್ಲಿ 9 ವಿವಿಗಳ ರದ್ದು ಬಗ್ಗೆ ನಿಲುವಳಿ ಮಂಡನೆಗೆ ಅವಕಾಶ ಕೇಳಿದ ಶಾಸಕ ಅಶ್ವಥ ನಾರಾಯಣಗೆ ಉತ್ತರಿಸಿದ ಸಿಎಂ, ನಾವು ಯಾವ ವಿವಿಯನ್ನೂ ಮುಚ್ಚುತ್ತಿಲ್ಲ. ವಿವಿಗಳನ್ನು ಮುಂದುವರೆಸಬೇಕಾ..? ಬೇಡವಾ..? ಅಂತ ಸಂಪುಟ ಉಪಸಮಿತಿ ರಚಿಸಿ ವರದಿ ಕೇಳಿದ್ದೇವೆ. ವರದಿಯೇ ಬಂದಿಲ್ಲ.. ವರದಿ ಬರುವ ಮೊದಲೇ ಬಿಜೆಪಿಗೆ ಆತಂಕ ಏಕೆ..? ಅಂದ್ರು. ವಿಪಕ್ಷ ನಾಯಕ ಆರ್ ಅಶೋಕ್ ಆಕ್ಷೇಪಿಸಿ ಸಿಎಂ, ಡಿಸಿಎಂ, ಇಲಾಖೆ ಸಚಿವರು ಬೇರೆ ಬೇರೆ ಉತ್ತರ ಕೊಡ್ತಿದ್ದಾರೆ. ಅಂದ್ರು. ಬಿಜೆಪಿಯವರ ನಿಲುವಳಿ ಸೂಚನೆಯನ್ನು ಮುಂದಿನ ವಾರ ಚರ್ಚೆಗೆ ಕೊಡೋದಾಗಿ ಸ್ಪೀಕರ್ ಖಾದರ್ ತಿಳಿಸಿದ್ರು.

  • ಸದ್ದಿಲ್ಲದೇ ಕೊಡಗಿನ 21 ಸರ್ಕಾರಿ ಶಾಲೆಗಳಿಗೆ ಬೀಗ!

    ಸದ್ದಿಲ್ಲದೇ ಕೊಡಗಿನ 21 ಸರ್ಕಾರಿ ಶಾಲೆಗಳಿಗೆ ಬೀಗ!

    ಮಡಿಕೇರಿ: 10ಕ್ಕಿಂತ ಕಡಿಮೆ ದಾಖಲಾತಿ ಹೊಂದಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ದಾಖಲಾತಿ ಹೊಂದಿರುವ ಸಮೀಪದ ಶಾಲೆಗಳಿಗೆ ವಿಲೀನ ಮಾಡುವ ಪ್ರಕ್ರಿಯೆಗೆ ರಾಜ್ಯ ಸರ್ಕಾರ 8 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಚಾಲನೆ ಕೊಟ್ಟಿದೆ. ಈ ನಡುವೆ ಕೊಡಗು (Kodagu) ಜಿಲ್ಲೆಯಲ್ಲಿ ಶೂನ್ಯ ದಾಖಲಾತಿ ಹೊಂದಿದ್ದ 21 ಸರ್ಕಾರಿ ಶಾಲೆಗಳಿಗೆ (Government Schools) ಬೀಗ ಬಿದ್ದಿದೆ.

    ಹೌದು. ಕೊಡಗು ಜಿಲ್ಲೆಯಲ್ಲಿ 2019 ರಿಂದ 2024ರ ವರೆಗಿನ ಅವಧಿಯಲ್ಲಿ ಒಟ್ಟು 21 ಸರ್ಕಾರಿ ಶಾಲೆಗಳಿಗೆ ಬೀಗ ಬಿದ್ದಿದೆ. ಮೂಲ ಸೌಕರ್ಯಗಳ ಕೊರತೆಯಿಂದಾಗಿ ಮಕ್ಕಳು ಶಾಲೆಗಳತ್ತ ಮುಖ ಮಾಡುತ್ತಿಲ್ಲ. ನಿರಂತರ ಮಕ್ಕಳ ಕೊರತೆಯಿಂದಾಗಿ ಮಡಿಕೇರಿ ತಾಲೂಕಿನಲ್ಲಿ 6, ಸೋಮವಾರಪೇಟೆ ತಾಲೂಕಿನಲ್ಲಿ 12 ಹಾಗೂ ವೀರಾಜಪೇಟೆ ತಾಲೂಕಿನಲ್ಲಿ 3 ಸರ್ಕಾರಿ ಶಾಲೆಗಳನ್ನ ಬಂದ್ ಮಾಡಲಾಗಿದೆ. ಇದನ್ನೂ ಓದಿ: ಹಾವೇರಿ ಹಿಂದೂ ಯುವತಿ ಹತ್ಯೆ ಕೇಸ್ – ಬಾಡಿಗೆ ಕಾರು ತಂದು ಸ್ವಾತಿ ಕರೆದೊಯ್ದಿದ್ದ ನಯಾಜ್‌!

    2019 ರಲ್ಲಿ 2, 2022 ರಲ್ಲಿ 9, 2023 ರಲ್ಲಿ 4 ಹಾಗೂ 2024 ರಲ್ಲಿ 6 ಶೂನ್ಯ ದಾಖಲಾತಿ ಹೊಂದಿರುವ ಸರ್ಕಾರಿ ಶಾಲೆಗಳಿಗೆ ಬೀಗ ಬಿದ್ದಿದೆ. ಈಗಾಗಲೇ ಮುಚ್ಚಲ್ಪಟ್ಟಿರುವ ಶಾಲೆಗಳಲ್ಲಿ ವಿದ್ಯಾರ್ಥಿಗಳು ದಾಖಲಾದರೆ ಶಾಲೆಗಳನ್ನು ತೆರೆಯಲಾಗುವುದೆಂದು ಶಿಕ್ಷಣ ಇಲಾಖೆ ಹೇಳುತ್ತಿದೆ.  ಇದನ್ನೂ ಓದಿ: ಬೆಂಗಳೂರು ಕಸ ಅನ್ನೋದು ಮಾಫಿಯಾ, ಶಾಸಕರೇ ಬ್ಲ್ಯಾಕ್‌ಮೇಲ್ ಮಾಡ್ತಿದ್ದಾರೆ: ಡಿ.ಕೆ ಶಿವಕುಮಾರ್

    ಕೊಡಗು ಜಿಲ್ಲೆಯಲ್ಲಿ ಹತ್ತಕ್ಕಿಂತ ಕಡಿಮೆ ದಾಖಲಾತಿ ಹೊಂದಿರುವ 48 ಸರ್ಕಾರಿ ಕಿರಿಯ ಪ್ರಾಥಮಿಕ ಹಾಗೂ 16 ಹಿರಿಯ ಪ್ರಾಥಮಿಕ ಶಾಲೆಗಳಿವೆ. ಒಂದು ಸರ್ಕಾರಿ ಪ್ರೌಢಶಾಲೆ ಇದೆ. ರಾಜ್ಯದ ಹಿಂದಿನ ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವ ಬಿಜೆಪಿ ಸರ್ಕಾರದ ಅವಧಿಯಲ್ಲಿ 10ಕ್ಕಿಂತ ಕಡಿಮೆ ಮಕ್ಕಳಿರುವ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ, ಆದ್ದರಿಂದ ಪಕ್ಕದಲ್ಲಿರುವ ದಾಖಲಾತಿ ಹೊಂದಿರುವ ಶಾಲೆಗಳಿಗೆ ವಿಲೀನ ಮಾಡಬೇಕೆಂದು ಶಾಲಾ ಸುಧಾರಣಾ ಆಯೋಗ ಹಿಂದಿನ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಆಗ ವಿಪಕ್ಷದಲ್ಲಿದ್ದ ಕಾಂಗ್ರೆಸ್ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತಪಡಿಸಿತ್ತು. ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರ ಸದ್ದಿಲ್ಲದೇ, ಹತ್ತಕ್ಕಿಂತ ಕಡಿಮೆ ದಾಖಲಾತಿ ಹೊಂದಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ವಿಲೀನ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಕಡಿಮೆ ದಾಖಲಾತಿ ಹೊಂದಿರುವ ಶಾಲೆಗಳನ್ನು ವಿಲೀನಗೊಳಿಸುವ ಪ್ರಕ್ರಿಯೆ ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಂಡರೆ ಕೊಡಗು ಜಿಲ್ಲೆಯ 64 ಸರ್ಕಾರಿ ಶಾಲೆಗಳಿಗೆ ಬೀಗ ಬೀಳುವುದು ಖಚಿತ ಎಂದು ಹೇಳಲಾಗುತ್ತಿದೆ.

    ನೆಪ ಮಾತ್ರಕ್ಕೆ ಸರ್ಕಾರಿ ಶಾಲೆ ಉಳಿಸಿ ಎಂದು ಬೊಬ್ಬೆ ಹೊಡೆಯುವ ರಾಜ್ಯ ಸರ್ಕಾರ ಈಗ ಸರ್ಕಾರಿ ಶಾಲೆಗಳನ್ನು ಬಂದ್ ಮಾಡುತ್ತಿದೆ. ಈಗಲಾದರೂ ಎಚ್ಚೆತ್ತುಕೊಂಡು ಸೂಕ್ತ ಕ್ರಮ ತೆಗೆದುಕೊಳ್ಳದೆ ಹೋದರೆ ಮುಂಬರುವ ದಿನಗಳಲ್ಲಿ ಸರ್ಕಾರಿ ಶಾಲೆಗಳೇ ಇಲ್ಲದಂತಾಗುವುದು ಪಕ್ಕಾ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.  ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಿ ಸರ್ಕಾರ ಮಾತನ್ನು ಉಳಿಸಿಕೊಂಡಿದೆ: ಹೆಬ್ಬಾಳ್ಕರ್‌

  • ಮುಜರಾಯಿ ಇಲಾಖೆಯಿಂದ ಗುಡ್‌ನ್ಯೂಸ್ – ಇನ್ಮುಂದೆ ವೈಬ್‌ಸೈಟ್‌ನಲ್ಲಿ ದೇಗುಲದ ರೂಮ್‌ಗಳ ಮಾಹಿತಿ!

    ಮುಜರಾಯಿ ಇಲಾಖೆಯಿಂದ ಗುಡ್‌ನ್ಯೂಸ್ – ಇನ್ಮುಂದೆ ವೈಬ್‌ಸೈಟ್‌ನಲ್ಲಿ ದೇಗುಲದ ರೂಮ್‌ಗಳ ಮಾಹಿತಿ!

    -ರಾಜ್ಯದ 400 ಸೇರಿ ಹೊರರಾಜ್ಯದ 3,500 ದೇವಾಲಯಗಳ ಮಾಹಿತಿ ಲಭ್ಯ

    ಬೆಂಗಳೂರು: ರಾಜ್ಯ ಹಾಗೂ ಬೇರೆ ರಾಜ್ಯಗಳ ದೇವಾಲಯಕ್ಕೆ ತೆರಳುವವರಿಗೆ ಮುಜರಾಯಿ ಇಲಾಖೆ (Muzrai Department) ಗುಡ್‌ನ್ಯೂಸ್ ನೀಡಿದ್ದು, ಇನ್ಮುಂದೆ ದೇಗುಲದ ರೂಮ್‌ಗಳ ಮಾಹಿತಿ ವೈಬ್‌ಸೈಟ್‌ನಲ್ಲಿ ಲಭ್ಯವಾಗಲಿದೆ.

    ಹೌದು, ಸಾಮಾನ್ಯವಾಗಿ ಹಬ್ಬ, ಹರಿದಿನದಂದು ಬಹುತೇಕ ಜನ ದೇವಾಲಯಗಳಿಗೆ ತೆರಳುತ್ತಾರೆ. ಈ ವೇಳೆ ದೇವಸ್ಥಾನಗಳ ಜೊತೆಗೆ ಅಲ್ಲಿನ ರೂಮ್‌ಗಳು ಕೂಡ ತುಂಬಾ ರಷ್ ಇರುತ್ತವೆ. ಈ ಸಮಯದಲ್ಲಿ ಉಳಿದುಕೊಳ್ಳಲು ಭಕ್ತಾದಿಗಳು ಪರದಾಡುತ್ತಾರೆ ಜೊತೆಗೆ ದುಪ್ಪಟ್ಟು ಹಣ ಕೊಟ್ಟು ರೂಮ್ ಮಾಡಲೇಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಇದಕ್ಕೆಲ್ಲಾ ಬ್ರೇಕ್ ಹಾಕುವ ನಿಟ್ಟಿನಲ್ಲಿ, ರಾಜ್ಯ ಹಾಗೂ ಹೊರರಾಜ್ಯದ ದೇಗುಲಕ್ಕೆ ಹೋಗುವ ಭಕ್ತಾದಿಗಳಿಗೆ ಮುಜರಾಯಿ ಇಲಾಖೆ ಗುಡ್‌ನ್ಯೂಸ್ ನೀಡಿದೆ.ಇದನ್ನೂ ಓದಿ: ದಿನ ಭವಿಷ್ಯ 13-03-2025

    ಈ ಬಾರಿಯ ಕರ್ನಾಟಕ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯನವರು ವಿವಿಧ ಕ್ಷೇತ್ರಗಳಿಗೆ ಹಣ ಮಂಜೂರು ಮಾಡಿದ್ದಾರೆ. ಅದರಂತೆ ಮುಜರಾಯಿ ಹಾಗೂ ಧಾರ್ಮಿಕ ಧತ್ತಿ ಇಲಾಖೆಗೆ ಸಂಬಂಧಿಸಿದಂತೆ ಹೊಸ ಯೋಜನೆಗಳನ್ನು ಘೋಷಿಸಿದೆ. ಅದರಲ್ಲಿ ರಾಜ್ಯದ ಭಕ್ತಾದಿಗಳಿಗೆ ಅನುಕೂಲವಾಗಲು ಕರ್ನಾಟಕ ದೇವಾಲಯಗಳ ವಸತಿ ಕೋಶವನ್ನು ನೀಡಲು ಧಾರ್ಮಿಕ ಧತ್ತಿ ಇಲಾಖೆ ಮುಂದಾಗಿದೆ. ಈ ಕೋಶದಂತೆ ವೆಬ್‌ಸೈಟ್‌ನಲ್ಲಿ ರಾಜ್ಯದ 400 ದೇವಾಲಯದ ಹಾಗೂ ಹೊರರಾಜ್ಯದ ಛತ್ರಗಳ ಅಂದಾಜು 3,500 ರೂಮ್‌ಗಳ ಬುಕ್ಕಿಂಗ್ ಮಾಹಿತಿ ಆನ್‌ಲೈನ್‌ನಲ್ಲಿ ಲಭ್ಯವಾಗಲಿದೆ.

    ಇನ್ನೂ ಕರ್ನಾಟಕ ಟೆಂಪಲ್ಸ್ ಅಕಾಮಡೇಷನ್ ಡಾಟ್ ಕಾಮ್ (https://karnatakatemplesaccommodation.com) ವೆಬ್‌ಸೈಟ್‌ನಲ್ಲಿ ಭಕ್ತಾದಿಗಳು ದೇವಾಲಯದ ರೂಮ್‌ಗಳನ್ನು ಬುಕ್ ಮಾಡಬಹುದಾಗಿದೆ. ಈ ವೆಬ್‌ಸೈಟ್ ಕ್ಲಿಕ್ ಮಾಡಿದರೆ ದೇವಾಲಯದ ರೂಮ್‌ಗಳ ಮಾಹಿತಿ ದೊರೆಯಲಿದೆ. ಈಗಾಗಲೇ ಈ ವೆಬ್‌ಸೈಟ್‌ನಲ್ಲಿ ಕೆಲ ದೇವಾಲಯಗಳ ರೂಮ್‌ಗಳ ಮಾಹಿತಿ ಲಭ್ಯವಿದೆ. ಕೇವಲ ರಾಜ್ಯ ಮಾತ್ರವಲ್ಲ ಹೊರರಾಜ್ಯಗಳಾದ ತಿರುಪತಿ, ಶ್ರೀಶೈಲ, ಮಂತ್ರಾಲಯ ಸೇರಿದಂತೆ ರಾಜ್ಯದ ಮುಜರಾಯಿ ಛತ್ರಗಳಿರುವ ಕಡೆ ಬುಕ್ ಮಾಡಬಹುದಾಗಿದೆ. ಇದರಿಂದ ದೇವಾಲಯಗಳ ಆದಾಯ ಹೆಚ್ಚಳವಾಗಲಿದೆ.

    ಒಟ್ಟಿನಲ್ಲಿ ಮುಜರಾಯಿ ಇಲಾಖೆಯ ಈ ವಸತಿ ಕೋಶದಿಂದ ಒಂದೆಡೆ ದೇವಾಲಯಗಳ ಆದಾಯ ಹೆಚ್ಚಳವಾದರೆ, ಮತ್ತೊಂದೆಡೆ ಭಕ್ತಾದಿಗಳಿಗೆ ಅನುಕೂಲವಾಗಲಿದೆ.ಇದನ್ನೂ ಓದಿ: ನನಗೆ 7ರಿಂದ 8 ಭಾಷೆಗಳು ಗೊತ್ತು: ತ್ರಿಭಾಷಾ ಸೂತ್ರಕ್ಕೆ ಸುಧಾ ಮೂರ್ತಿ ಬೆಂಬಲ