ಬೆಳಗಾವಿ: ಬಿಜೆಪಿಯಿಂದ ದಾರಿತಪ್ಪಿದವರು ಬಿಟ್ಟು, ಇಡೀ ಜಗತ್ತಿನಲ್ಲಿಯೇ ಹಿಂದೂಗಳು ಒಳ್ಳೆಯ ವ್ಯಕ್ತಿಗಳು. ಹಿಂದೂ ಐಡಿಯಾಲಾಜಿಯನ್ನ ಬಿಜೆಪಿಯವರು ಕಲಿಯಬೇಕು ಎಂದು ಕಾಂಗ್ರೆಸ್‌ನ ಮಾಜಿ ಶಾಸಕ ಫಿರೋಜ್ ಸೇಠ್ ಹೇಳಿದ್ದಾರೆ.
ಬೆಳಗಾವಿಯಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ ಅಷ್ಟೇ ಅಲ್ಲ ಇಡೀ ರಾಷ್ಟ್ರದಲ್ಲಿ ಸರ್ಕಾರ ಫೇಲ್ಯೂರ್ ಆಗಿದೆ. ಇ.ಡಿ, ಐಟಿ ಅಂತಾ ಎಲ್ಲರನ್ನೂ ಹೆದರಿಸಿ ತಮ್ಮತ್ತ ಸೆಳೆಯುವ ಕೆಲಸ ಆಗುತ್ತಿದೆ. ಹಿಂದೂ ಬಹುಸಂಖ್ಯಾತರು ಇರುವಂತಹ ದೇಶ ನಮ್ಮದು. ನಾನು ಅಲ್ಪಸಂಖ್ಯಾತನಿದ್ದೇನೆ. ಜಾತಿಯಿಂದ ನಾನು ಅಲ್ಪಸಂಖ್ಯಾತ ಇದ್ದರೂ, ನನಗೆ ಬೆಂಬಲ ನೀಡಿದ್ದು ಹಿಂದೂ ವ್ಯಕ್ತಿಗಳು ಎಂದು ಸ್ಮರಿಸಿದ್ದಾರೆ. ಇದನ್ನೂ ಓದಿ: ಹೆಣ್ಮಕ್ಕಳ ಮನಸ್ಸು ಅರ್ಥ ಆಗಲ್ಲ ಅನ್ನೋರು ಗೂಗಲ್ ಮಿ ಅಂದ್ರು `ಕನ್ನಡತಿ’ ನಟಿ
ಬಾಲ್ಯದಿಂದಲೂ ನನ್ನನ್ನು ಬೆಂಬಲಿಸಿದವರು ಹಿಂದೂಗಳು, ಹತ್ತು ಮಂದಿ ಕೆಟ್ಟ ಕೆಲಸ ಮಾಡ್ತಾರೆ ಅಂತಾ ಹತ್ತು ಸಾವಿರ ಜನರನ್ನು ನಾನು ದೂಷಿಸಲ್ಲ. ಹಿಂದೂಗಳು ಇಡೀ ಜಗತ್ತಿನಲ್ಲಿಯೇ ಒಳ್ಳೆಯ ವ್ಯಕ್ತಿಗಳು. ಬಿಜೆಪಿಯಿಂದ ದಾರಿತಪ್ಪಿದವರು ಬಿಟ್ಟು, ಎಲ್ಲ ಹಿಂದೂಗಳು ಒಳ್ಳೆಯ ವ್ಯಕ್ತಿಗಳು. ಹಿಂದೂ ಐಡಿಯಾಲಾಜಿಯನ್ನ ಅವರು ಕಲಿಯಬೇಕು. ಅದಕ್ಕೆ ನಾನು ಶಾಲೆ ಓಪನ್ ಮಾಡಬೇಕಾ? ಎಂದು ಸೇಠ್ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಮಸ್ಯೆಗಳನ್ನು ಚರ್ಚಿಸಿ, ಪರಿಹರಿಸದಿದ್ದರೆ ನ್ಯಾಯಾಂಗ ವ್ಯವಸ್ಥೆ ದುರ್ಬಲವಾಗುತ್ತದೆ – CJI
ಸಿಎಂ ಬಸವರಾಜ ಬೊಮ್ಮಾಯಿ ಅವರು ಮೃತ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿದ್ದಾರೆ. ಆದರೆ ಮೃತ ಫಾಝಿಲ್ ಮನೆಗೆ ಭೇಟಿ ನೀಡಿಲ್ಲ ಎಂಬ ಯು.ಟಿ.ಖಾದರ್ ಪ್ರಶ್ನೆಗೆ ಉತ್ತರಿಸಿದ ಅವರು, ಇದು ರಾಜಕಾರಣ. ಅಲ್ಲಿಯೂ ಹೋಗಿ 25 ಲಕ್ಷ ನೀಡಿದ್ರೆ ಅಸಮಾಧಾನಗೊಳ್ಳುತ್ತಾರೆ ಎಂಬ ಭಯವಿದೆ. ಸಿಎಂ ಬಸವರಾಜ ಬೊಮ್ಮಾಯಿ ಅಂಜಿಕೆ ಇಲ್ಲದ ನಾಯಕರಾಗಬೇಕು. ನಾನು ಎಲ್ಲರನ್ನೂ ಪ್ರೀತಿ ಮಾಡ್ತೇನಿ ಎಂಬ ದೃಷ್ಟಿಕೋನದಲ್ಲಿ ಇರಬೇಕು. ನಮ್ಮ ಯೋಚನೆ ಆ ರೀತಿ ಇದ್ರೆ ಮಾತ್ರ ನಾವು ಲೀಡರ್. ಇಲ್ಲ ಅಂದ್ರೆ ಲೀಡರ್ ಅಲ್ಲಾ ಎಂದು ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಡಾ. ಸಿ.ಎನ್.ಮಂಜುನಾಥ್ ಅವರ ಸಾಧನೆ ಮತ್ತು ಆಡಳಿತ ವೈಖರಿ ಪರಿಗಣಿಸಿ ಮುಖ್ಯಮಂತ್ರಿಗಳು ಮುಂದುವರಿಸಿದ್ದಾರೆ. ತಮ್ಮ ಸೇವಾವಧಿ ವಿಸ್ತರಿಸಿದ್ದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಅವರಿಗೆ ಮಂಜುನಾಥ್ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಜಯದೇವ ಆಸ್ಪತ್ರೆ ನಿರ್ದೇಶಕ ಸಿ.ಎನ್.ಮಂಜುನಾಥ್ ಅವರ ಅವಧಿ ಮುಗಿದಿತ್ತು. ಅವರನ್ನೇ ಮುಂದುವರಿಸಬೇಕು ಎಂದು ಸಾರ್ವಜನಿಕ ವಲಯದಲ್ಲಿ ಒತ್ತಾಯ ವ್ಯಕ್ತವಾಗಿತ್ತು. ಮಂಜುನಾಥ್ ಅವರನ್ನು ಮುಂದುವರಿಸುವಂತೆ ಅನೇಕ ಕಡೆ ಪ್ರತಿಭಟನೆಗೂ ಕರೆ ನೀಡಲಾಗಿತ್ತು. ಅಷ್ಟರಲ್ಲೇ ಎಚ್ಚೆತ್ತ ಸರ್ಕಾರ ಸೇವಾವಧಿ ವಿಸ್ತರಿಸಿದೆ. ಇದನ್ನೂ ಓದಿ: ಮಹದಾಯಿ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ- ಸಾಲ ಮರುಪಾವತಿ ಮಾಡಲ್ಲ ಎಂದ ರೈತರು
ಡಾ.ಮಂಜುನಾಥ್ ಅವರ ಸೇವಾವಧಿ 2021ರಲ್ಲೇ ಮುಗಿದಿತ್ತು. ಆಗ ಕೋವಿಡ್ ಸಂದಿಗ್ಧ ಸಂದರ್ಭದಲ್ಲಿ ಸರ್ಕಾರಕ್ಕೆ ಸಾಕಷ್ಟು ಉಪಯುಕ್ತ ಸಲಹೆಗಳನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಸೇವಾವಧಿಯನ್ನು ಆಗಲೂ ವಿಸ್ತರಿಸಲಾಗಿತ್ತು.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ಖಾಸಗಿ ವ್ಯಕ್ತಿಗಳು ಮೊಬೈಲ್ ಬಳಸುವಂತಿಲ್ಲ ಎಂದು ಆದೇಶ ಹೊರಡಿಸಿ ತೀವ್ರ ಟೀಕೆಗಳ ನಂತರ ಆದೇಶವನ್ನು ವಾಪಸ್ ತೆಗೆದುಕೊಂಡು ರಾಜ್ಯ ಸರ್ಕಾರ ಮುಜುಗರಕ್ಕೀಡಾಗಿದೆ. ಈ ಆದೇಶ ಜಾರಿಗೆ ಪ್ರಮುಖ ಕಾರಣ ನಾನೇ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಅವರಿಗೆ ಪತ್ರ ಬರೆದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಸರ್ಕಾರದ ದುರುದ್ದೇಶಪೂರಿತ ಆದೇಶಕ್ಕೆ ನಾನೇ ಕಾರಣ ಎಂದು ಸಭೆಯೊಂದರಲ್ಲಿ ಕೊಚ್ಚಿಕೊಳ್ಳುವ ಮೂಲಕ ನಿಮ್ಮ ತಪ್ಪನ್ನು ಒಪ್ಪಿಕೊಂಡಿದ್ದೀರಿ. ಈ ಆದೇಶದಿಂದ ಆದ ಬೆಳವಣಿಗೆಯಿಂದ ರಾಜ್ಯದ ಲಕ್ಷಾಂತರ ಪ್ರಮಾಣಿಕ ಸರ್ಕಾರಿ ನೌಕರರ ಭಾವನೆಗಳಿಗೆ ಧಕ್ಕೆಯಾಗಿದೆ. ಇದಕ್ಕೆ ಕಾರಣರಾದ ನೀವು ಸರ್ಕಾರಿ ನೌಕರರ ಕ್ಷಮೆಯಾಚಿಸಬೇಕು ಎಂದು ಪತ್ರದಲ್ಲಿ ರವಿ ಕೃಷ್ಣಾರೆಡ್ಡಿ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವೀಡಿಯೋ ಮಾಡುವಂತಿಲ್ಲ
ಪತ್ರದಲ್ಲೇನಿದೆ?
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ,
ನನ್ನ ತಂದೆ ಕೃಷ್ಣಾರೆಡ್ಡಿ ವಿ.ಯವರು 1970-80ರ ದಶಕದಲ್ಲಿ ಸರ್ಕಾರಿ ನೌಕರರಾಗಿದ್ದವರು. ಹಾಗಾಗಿ ಸರ್ಕಾರದ ಹಾಗೂ ಜನರ ತೆರಿಗೆಯ ಹಣದ ಋಣ ನನ್ನ ಮತ್ತು ನನ್ನ ಕುಟುಂಬದ ಮೇಲಿದೆ. ಆ ಹಿನ್ನೆಲೆಯಲ್ಲಿ ನಾನು ಅತ್ಯಂತ ಪ್ರೀತಿ, ನೋವು, ಬೇಸರ, ದುಃಖ, ಕಾಳಜಿ, ಅಸಹನೆಯಿಂದ ಕೂಡಿದ ಮಿಶ್ರಭಾವದಿಂದ ನಿಮಗೆ ಮತ್ತು ನಿಮ್ಮ ಸಂಘದ ಎಲ್ಲಾ ಪದಾಧಿಕಾರಿಗಳಿಗೆ ಈ ಬಹಿರಂಗ ಪತ್ರವನ್ನು ಬರೆಯುತ್ತಿದ್ದೇನೆ.
ನಿಮ್ಮ ದುರಾಲೋಚನೆ, ವ್ಯಾಪ್ತಿ ಮೀರಿದ ನಡವಳಿಕೆ ಮತ್ತು ದುಷ್ಕೃತ್ಯದಿಂದಾಗಿ ನೀವು ರಾಜ್ಯದ ಲಕ್ಷಾಂತರ ಪ್ರಾಮಾಣಿಕ ಸರ್ಕಾರಿ ನೌಕರರ ಘನತೆ ಮತ್ತು ಗೌರವಕ್ಕೆ ಚ್ಯುತಿ ತಂದಿದ್ದೀರಿ. ರಾಜ್ಯದ ಮುಖ್ಯಮಂತ್ರಿಯನ್ನು ಮತ್ತು DPAR ಇಲಾಖೆಯ ಅಯೋಗ್ಯ ಅಧಿಕಾರಿಗಳನ್ನು ದಾರಿ ತಪ್ಪಿಸಿ, ಅವರಿಂದ ಕಾನೂನುಬಾಹಿರ ಮತ್ತು ಜನವಿರೋಧಿ ಆದೇಶವನ್ನು ಹೊರಡಿಸಿ, ತದನಂತರ ಕೇವಲ ಒಂದೇ ದಿನದಲ್ಲಿ ಜನಾಕ್ರೋಶಕ್ಕೆ ಮಣಿದು ಸರ್ಕಾರ ಆ Draconian ಆದೇಶವನ್ನು ಹಿಂಪಡೆಯುವಂತೆ ಆಗಿ, ರಾಜ್ಯ ಸರ್ಕಾರಕ್ಕೆ ಹಾಗೂ ಅದರ ನೌಕರರಿಗೆ ಮುಜುಗರ ಮತ್ತು ಅವಮಾನ ಆಗುವಂತಾಗಲು ನೇರ ಕಾರಣ ಆಗಿದ್ದೀರಿ. ಆ ದುರುದ್ದೇಶಪೂರಿತ ಆದೇಶಕ್ಕೆ ನಾನೇ ಕಾರಣ ಎಂದು ಆಲಮಟ್ಟಿಯಲ್ಲಿ ನಡೆದ ಸಭೆಯಲ್ಲಿ ಕೊಚ್ಚಿಕೊಳ್ಳುವ ಮೂಲಕ ನಿಮ್ಮ ತಪ್ಪನ್ನು ಒಪ್ಪಿಕೊಂಡಿದ್ದೀರಿ. ಇದರಲ್ಲಿ ಯಾವ ಪಾತ್ರವೂ ಇಲ್ಲದ ಮತ್ತು ಈ ಘಟನೆಯ ಕಾರಣಕ್ಕಾಗಿ ತೀವ್ರವಾಗಿ ನೊಂದಿರುವ ರಾಜ್ಯದ ಲಕ್ಷಾಂತರ ಪ್ರಾಮಾಣಿಕ ಸರ್ಕಾರಿ ನೌಕರರ ಭಾವನೆಗಳಿಗೆ ಧಕ್ಕೆ ತಂದಿದ್ದೀರಿ. ಹಾಗಾಗಿ, ಈ ಕೂಡಲೇ ನೀವು ರಾಜ್ಯದ ಎಲ್ಲಾ ಸರ್ಕಾರಿ ನೌಕರರಲ್ಲಿ Unconditional ಕ್ಷಮೆ ಯಾಚಿಸಬೇಕು ಎಂದು ನಾನು ಮೊದಲಿಗೆ ಆಗ್ರಹಿಸುತ್ತೇನೆ.
ಅಂದಹಾಗೆ, ನೀವು ಸರ್ಕಾರಿ ನೌಕರರ ಸ್ವಾಭಿಮಾನದ ಬಗ್ಗೆ ಮಾತನಾಡಿದ್ದೀರಿ. ರಾಜ್ಯದ 6 ಲಕ್ಷ ಸರ್ಕಾರಿ ನೌಕರರಲ್ಲಿ ಕನಿಷ್ಠ ನಾಲ್ಕೈದು ಲಕ್ಷ ಸರ್ಕಾರಿ ನೌಕರರು ಈಗಲೂ ಸ್ವಾಭಿಮಾನ ಮತ್ತು ಘನತೆಯಿಂದ ಬದುಕುತ್ತಿದ್ದಾರೆ. ಯಾಕೆಂದರೆ ಅವರ ಇಲಾಖೆಗಳಲ್ಲಿ ಭ್ರಷ್ಟಾಚಾರ ಮತ್ತು ಲಂಚಕ್ಕೆ ಅವಕಾಶ ಬಹಳ ಕಡಿಮೆ ಇರುತ್ತದೆ. ಲಂಚಗುಳಿತನ ಮತ್ತು ಅಕ್ರಮಗಳಿಗೆ ಅಪಾರ ಅವಕಾಶ ಇರುವ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, RDPR ಇಲಾಖೆ, ಅಬಕಾರಿ ಇಲಾಖೆ, ಕೃಷಿ ಇಲಾಖೆಯಂತಹ ಕೆಲವೇ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇಲ್ಲಿಯೂ ಎಲ್ಲರೂ ಭ್ರಷ್ಟರಲ್ಲ. ಆದರೆ ಭ್ರಷ್ಟರ ಅಟ್ಟಹಾಸ ಮಾತ್ರ ಮಿತಿಮೀರಿದೆ. ತಮ್ಮ ಹಾಗೆ ಎಲ್ಲರೂ ಪರಮಭ್ರಷ್ಟರೇ ಎನ್ನುವ ಸಾರ್ವತ್ರಿಕ ಭಾವನೆಯನ್ನು ಸೃಷ್ಟಿಸಿರುವುದು ಆ ಅಲ್ಪಸಂಖ್ಯಾತ ಭ್ರಷ್ಟರೇ. ಬಹುಸಂಖ್ಯಾತ ಪ್ರಾಮಾಣಿಕ ನೌಕರರು ಹೆದರುಪುಕ್ಕಲರಾಗಿ ಭ್ರಷ್ಟಾಚಾರ ಬೆಳೆಯಲು ಪರೋಕ್ಷವಾಗಿ ಕಾರಣರಾಗಿದ್ದಾರೆ. ಆ ಕಾರಣದಿಂದಾಗಿಯೇ ಅವರೂ ಆರೋಪಗಳಿಗೆ ಗುರಿಯಾಗುತ್ತಿದ್ದಾರೆ.
ನೀವು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ. ಇಂದು ಸರ್ಕಾರಿ ನೌಕರರ ಘನತೆಗೆ ಹೆಚ್ಚು ಚ್ಯುತಿ ಬಂದಿರುವುದು ಈಗಾಗಲೇ ಹೇಳಿದಂತೆ ನಿಮ್ಮಲ್ಲಿಯ ಕೆಲವರು ಮಾಡುವ ಭ್ರಷ್ಟಾಚಾರ, ಲಂಚಕೋರತನ, ಕರ್ತವ್ಯಲೋಪ, ಸಾರ್ವಜನಿಕರೊಂದಿಗಿನ ದುರ್ನಡತೆ ಮುಂತಾದ ಅವಗುಣಗಳ ಕಾರಣಕ್ಕೆ. ಸರ್ಕಾರಿ ನೌಕರರಿಗೆ ತಕ್ಕುದಲ್ಲದ ನಡವಳಿಕೆಯ ಕಾರಣಕ್ಕೆ. ಸಮಾಜದಲ್ಲಿ ಸರ್ಕಾರಿ ನೌಕರರ ಘನತೆ ಮತ್ತು ಗೌರವ ಹೆಚ್ಚಾಗಬೇಕು ಎಂದರೆ ಅವರು ತಮ್ಮ ದುರ್ನಡತೆ, ದುಷ್ಕೃತ್ಯ, ಅಕ್ರಮ ಮತ್ತು ಕಾನೂನುಬಾಹಿರ ಕೆಲಸಗಳನ್ನು ನಿಲ್ಲಿಸಬೇಕು. ಜನರ ವಿಶ್ವಾಸ ಪಡೆಯಬೇಕು.
ಹಾಗಾಗಿ ನೀವು ಸರ್ಕಾರಿ ನೌಕರರ ಯಾವುದೇ ಸಭೆಯಲ್ಲಿ ನಿಮ್ಮ ಸಹನೌಕರರಿಗೆ ಅವರು “ಯಾವುದೇ ಕಾರಣಕ್ಕೂ ಲಂಚ ತೆಗೆದುಕೊಳ್ಳಬಾರದು, ಅಕ್ರಮಗಳನ್ನು ಮಾಡಬಾರದು, ಸಾರ್ವಜನಿಕರನ್ನು ವಿನಾಕಾರಣ ಸತಾಯಿಸಬಾರದು, ಅವರೊಂದಿಗೆ ಸೌಜನ್ಯ ಮತ್ತು ಗೌರವದಿಂದ ನಡೆದುಕೊಳ್ಳಬೇಕು” ಎಂದು ಎಂದಾದರೂ ಹೇಳಿದ್ದೀರಾ? ಇಲ್ಲವಾದಲ್ಲಿ ನೀವು ಎಂತಹ ನೌಕರರ ಸಂಘದ ಅಧ್ಯಕ್ಷ? ನಿಮ್ಮ ಸಂಘದ ಲಕ್ಷಾಂತರ ಸದಸ್ಯರ ಗೌರವ ಮತ್ತು ಘನತೆಯನ್ನು ನೀವು ಇನ್ಯಾವ ರೀತಿ ಕಾಪಾಡುತ್ತೀರಿ, ಹೆಚ್ಚಿಸುತ್ತೀರಿ?
ಬಹುಶಃ, ಮೊನ್ನೆ ಮಾಡಿದ ರೀತಿಯಲ್ಲಿಯೇ ಇರಬೇಕು. ಒಬ್ಬ ಸುಳ್ಳುಗಾರ ಮತ್ತು ಅದಕ್ಷ ಮುಖ್ಯಮಂತ್ರಿಯ ಜೊತೆ ಕಾರಿನಲ್ಲಿ ಖಾಸಗಿಯಾಗಿ ಕುಳಿತು ಅವರಿಂದ ಹೀನ ಮತ್ತು ಜನದ್ರೋಹಿ ಆದೇಶ ಹೊರಡಿಸುವಂತೆ ಮಾಡುವ ಮೂಲಕ ಅಲ್ಲವೇ? ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಫೋಟೋ/ವೀಡಿಯೋ ತೆಗೆಯಬಾರದು ಎಂದು ಸರ್ಕಾರ ಆದೇಶ ಹೊರಡಿಸಿದ ನಂತರ ನಡೆದ ಕ್ಷಿಪ್ರ ಬೆಳವಣಿಗೆಯಲ್ಲಿ ರಾಜ್ಯದ ಸರ್ಕಾರಿ ನೌಕರರ ಮಾನ ಮತ್ತು ಮರ್ಯಾದೆ ಯಾವ ರೀತಿ ಹರಾಜು ಆಗಿದೆ ಎಂದು ನಿಮಗೆ ಗೊತ್ತಿದೆಯೇ?
ಈ ವಿಷಯದಲ್ಲಿ ನಿಮ್ಮ ದುರಾಲೋಚನೆ ಮತ್ತು ಅಹಂಕಾರದ ಏಕೈಕ ಕಾರಣದಿಂದಾಗಿ ತಮಗಾಗಿರುವ ಮಾನಹಾನಿ ಕುರಿತು ಸರ್ಕಾರಿ ನೌಕರರು ಇಷ್ಟೊತ್ತಿಗೆ ನಿಮ್ಮಿಂದ ರಾಜೀನಾಮೆ ಪಡೆಯಬೇಕಿತ್ತು. ಆದರೆ ಅದನ್ನು ಮಾಡದ ಅವರ ಮೌನವೂ ಸಹ ಸರ್ಕಾರಿ ನೌಕರರು ಈಗ ಯಾವ ಮನಸ್ಥಿತಿಗೆ ತಲುಪಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ. ಇದು ದುರಂತ.
ನಮಗೆ ತಿಳಿದು ಬಂದಿರುವ ಹಾಗೆ, ನೀವೂ ಸೇರಿದಂತೆ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾಗಿರುವ ಅನೇಕರು ಸರ್ಕಾರದಲ್ಲಿ ತಮಗೆ ಕೊಟ್ಟಿರುವ ಕೆಲಸ ಮಾಡುವುದನ್ನು ಬಿಟ್ಟು ಇತರೆ ನೌಕರರ ವರ್ಗಾವಣೆ ಮಾಡಿಸುವುದು, ಭ್ರಷ್ಟರನ್ನು ಕಾನೂನಿನ ಪ್ರಕ್ರಿಯೆಗಳಿಂದ ರಕ್ಷಿಸುವುದು, ಕೆಲವು ಭ್ರಷ್ಟ ರಾಜಕಾರಣಿಗಳ ಚೇಲಾಗಳಾಗಿ ವರ್ತಿಸುವುದು, ತಮ್ಮ ಮಾತು ಒಪ್ಪದ ಇತರೆ ಪ್ರಾಮಾಣಿಕ ಸರ್ಕಾರಿ ನೌಕರರ ಮೇಲೆ ದಬ್ಬಾಳಿಕೆ ಮಾಡುವುದೂ ಸೇರಿದಂತೆ ಹಲವು ಕುಕೃತ್ಯ ಮತ್ತು ಸರ್ಕಾರಿ ನೌಕರರಿಗೆ ತಕ್ಕುದಲ್ಲದ ನಡವಳಿಕೆಯಲ್ಲಿ ತೊಡಗಿರುವ ಕುರಿತು ಆರೋಪಗಳಿವೆ. ನೀವಂತೂ KAS/IAS/IPS ಅಧಿಕಾರಿಗಳನ್ನೂ ವರ್ಗಾವಣೆ ಮಾಡಿಸುವಷ್ಟು ಪ್ರಭಾವಶಾಲಿ ಎನ್ನುತ್ತಾರೆ. ನಿಮ್ಮಂತಹವರ ಇಂತಹ ಅನುಚಿತ ಮತ್ತು ವ್ಯಾಪ್ತಿ ಮೀರಿದ ನಡವಳಿಕೆಯೂ ಇವತ್ತಿನ ದುರಾಡಳಿತಕ್ಕೆ ತನ್ನದೇ ಆದ ಕೆಟ್ಟ ಕೊಡುಗೆ ನೀಡಿದೆ.
ಅಂದಹಾಗೆ, ನೀವು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು. ಸಂಘದ ಕೆಲಸ ಕಾರ್ಯಗಳನ್ನು ಕಚೇರಿಯ ಅವಧಿಯ ನಂತರ ಮಾಡಬೇಕೇ ವಿನಃ ದಿನಪೂರ್ತಿ ಅದನ್ನೇ ಮಾಡುವಂತಿಲ್ಲ. ಆ ರೀತಿಯ ವಿಶೇಷ ಹಕ್ಕುಗಳು ನೌಕರರ ಸಂಘದ ಪದಾಧಿಕಾರಿಗಳಿಗೆ ಇಲ್ಲ. ಯಾವ ಕೆಲಸಕ್ಕಾಗಿ ನಿಮಗೆ ಜನರ ತೆರಿಗೆಯ ಹಣವನ್ನು ಸರ್ಕಾರ ಸಂಬಳವಾಗಿ ನೀಡುತ್ತಿದೆಯೋ, ಅದನ್ನು ಮಾಡಿಯೇ ನೀವು ಇತರೆ ಖಾಸಗಿ ಕೆಲಸಗಳನ್ನು ಮಾಡಬೇಕು. ಆದರೆ ನೀವು ನಿಮ್ಮ ದುಷ್ಪ್ರಭಾವ ಬಳಸಿ ನಿಮ್ಮ ಅಧಿಕೃತ ಸರ್ಕಾರಿ ಕೆಲಸವನ್ನೇ ಮಾಡುತ್ತಿಲ್ಲ ಎನ್ನುವ ಮಾಹಿತಿ ಬಂದಿದೆ.
ಇದೆಲ್ಲವೂ ಭ್ರಷ್ಟ J.C.B ಪಕ್ಷಗಳ ಕಾಲದಲ್ಲಿ ನಡೆಯುತ್ತಿತ್ತು. ಈಗ ಜನ ಎಚ್ಚತ್ತಿದ್ದಾರೆ. KRS ಪಕ್ಷದ ನಿರಂತರ ಹೋರಾಟದ ಕಾರಣಕ್ಕೆ ಇಂದು ರಾಜ್ಯದ ಲಕ್ಷಾಂತರ ಜನಸಾಮಾನ್ಯರಲ್ಲಿ ನವಚೈತನ್ಯ ಸಂಚರಿಸುತ್ತಿದೆ. ಅನ್ಯಾಯವನ್ನು ಸಾರ್ವಜನಿಕವಾಗಿ ಪ್ರಶ್ನಿಸುವ ಸ್ಥೈರ್ಯ ಬೆಳೆಸಿಕೊಂಡಿದ್ದಾರೆ. ಹಾಗಾಗಿ ನೀವೂ ಸೇರಿದಂತೆ ಯಾವೆಲ್ಲಾ ಸರ್ಕಾರಿ ನೌಕರರು ತಮ್ಮ ನಿಯೋಜಿತ ಸ್ಥಾನದಲ್ಲಿ ಕರ್ತವ್ಯ ನಿರ್ವಹಣೆ ಮಾಡುವುದನ್ನು ಬಿಟ್ಟು ರಾಜಕಾರಣಿಗಳ ಹಾಗೆ ಊರೂರು ಸುತ್ತಿ ಸರ್ಕಾರಿ ನೌಕರರ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದೀರೋ, ಅದೆಲ್ಲವೂ ಈ ಕೂಡಲೇ ಬಂದ್ ಆಗಬೇಕು. ಇದನ್ನೂ ಓದಿ: ಉಕ್ಕಿ ಹರಿಯುವ ತುಂಗಭದ್ರಾ ನದಿಯಲ್ಲಿ ಪ್ರವಾಸಿಗರ ಮೋಜುಮಸ್ತಿ – ಮಿತಿಮೀರಿದ ಹುಚ್ಚಾಟ
ಇನ್ನು, ನೀವು ಮಾಡಿದ್ದೀರಿ ಎನ್ನಲಾದ ಹಲವು ಕುಕೃತ್ಯಗಳು ಮತ್ತು ಅಕ್ರಮ ಆಸ್ತಿಯ ಬಗ್ಗೆ ನಮಗೆ ಶಿವಮೊಗ್ಗ ಜಿಲ್ಲೆಯ ಹಲವರು ಕೆಲವು ವಿವರಗಳ ಸಹಿತ ಮಾಹಿತಿ ನೀಡಿದ್ದಾರೆ. ಮೇಲ್ನೋಟಕ್ಕೆ ಇವೆಲ್ಲವೂ ಗಂಭೀರ ಆರೋಪಗಳು. ಈ ವಿಚಾರದಲ್ಲಿ ಏನೆಲ್ಲಾ ಕಾನೂನು ಕ್ರಮಗಳನ್ನು ಜರುಗಿಸಬೇಕೋ ಅದನ್ನು ನಾವು ಶೀಘ್ರದಲ್ಲಿಯೇ ಜರುಗಿಸಲಿದ್ದೇವೆ.
ಅದರ ಜೊತೆಗೆ, ನೀವು ಯಾವ ಹುದ್ದೆಯಲ್ಲಿ ಮತ್ತು ಸ್ಥಳದಲ್ಲಿ ಕೆಲಸ ಮಾಡುತ್ತಿದ್ದೀರೋ ಅದೇ ಸ್ಥಳಕ್ಕೆ ಇಷ್ಟರಲ್ಲಿಯೇ KRS ಪಕ್ಷದ ನಿಯೋಗ ಭೇಟಿ ನೀಡಿ, ನಿಮ್ಮ ಅನುಚಿತ ವರ್ತನೆ, ಕೆಲಸದ ಸ್ಥಳದಲ್ಲಿ ಗೈರು ಹಾಜರಿ, ಕರ್ತವ್ಯಲೋಪ ಮುಂತಾದ ವಿಚಾರಗಳ ಕುರಿತು ನಿಮ್ಮ ಮೇಲಧಿಕಾರಿಗೆ ದೂರು ನೀಡಲಿದೆ. ಲೋಕಾಯುಕ್ತದ ಗಮನಕ್ಕೂ ತರಲಿದೆ.
ಸಂಬಳ ನನ್ನ ಹಕ್ಕು, ಗಿಂಬಳ ನನ್ನ ತಾಕತ್ತು, ಕೆಲಸ ನನ್ನ ಮರ್ಜಿ ಎನ್ನುವ ಮನಸ್ಥಿತಿಯ ಕೆಲವು ಭ್ರಷ್ಟ ಸರ್ಕಾರಿ ನೌಕರರಿಗೆ ಅವರ ನೈಜ ಕರ್ತವ್ಯವನ್ನು ನೆನಪಿಸುವ ಕೆಲಸವನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ನಿರಂತರವಾಗಿ ಮಾಡುತ್ತಾ ಬಂದಿದೆ. ಆ ಮೂಲಕ ಲಂಚ ಮುಕ್ತ ಕರ್ನಾಟಕ, ಬಸವಣ್ಣನ ಕಲ್ಯಾಣ ಕರ್ನಾಟಕ, ಕುವೆಂಪುರ ಸರ್ವೋದಯ ಕರ್ನಾಟಕವನ್ನು ಕಟ್ಟಲು ಕಟಿಬದ್ಧವಾಗಿದೆ. ಆ ಹಾದಿಯಲ್ಲಿ ಎದುರಾಗುವ ಎಂತಹ ದುಷ್ಟಶಕ್ತಿಗಳನ್ನೂ ಜನ ಬಲ ಮತ್ತು ಸಂಘ ಬಲದಿಂದ KRS ಪಕ್ಷ ಮೆಟ್ಟಿ ನಿಲ್ಲುತ್ತದೆ. ಇದು ಸತ್ಯ ಮತ್ತು ವಾಸ್ತವ.
ಇದನ್ನು ನೀವೂ ಸೇರಿದಂತೆ ಕರ್ನಾಟಕ ಸರ್ಕಾರಿ ನೌಕರರ ಸಂಘದ ಎಲ್ಲಾ ಪದಾಧಿಕಾರಿಗಳು ನೆನಪಿಡಬೇಕು. ನಾಡು ಕಟ್ಟುವ ಕೆಲಸದಲ್ಲಿ ಪ್ರಾಮಾಣಿಕ ನೌಕರರು ನಮ್ಮೊಡನೆ ಕೈಜೋಡಿಸಬೇಕು ಎಂದು ಮನವಿ ಮಾಡುತ್ತೇವೆ. ಇದೆಲ್ಲವನ್ನೂ ನಾನು ಕರುನಾಡಿನ ಹಿತದೃಷ್ಟಿಯಿಂದ ಹೇಳಿದ್ದೇನೆ. ನೀವೂ ಸೇರಿದಂತೆ ರಾಜ್ಯದ ಎಲ್ಲಾ ಸರ್ಕಾರಿ ನೌಕರರು ಇದನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತಾರೆ ಎನ್ನುವ ವಿಶ್ವಾಸ ನನಗಿದೆ.
ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ. ಶುಭವಾಗಲಿ ಎಂದು ರವಿ ಕೃಷ್ಣಾರೆಡ್ಡಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಭಾರತಕ್ಕೆ ಸ್ವಾತಂತ್ರ್ಯ ಬಂದು ಮುಂದಿನ ಆಗಸ್ಟ್ 15ಕ್ಕೆ 75 ವರ್ಷ ಆಗ್ತಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆ ಕೇಂದ್ರ ಸರ್ಕಾರ `ಹರ್ ಘರ್ ತಿರಂಗಾ’ ಅಭಿಯಾನ ನಡೆಸಲು ಘೋಷಿಸಿದೆ. ಇದರ ಬೆನ್ನಲ್ಲೇ ರಾಜ್ಯದ ಪದವಿ, ಸ್ನಾತಕೋತ್ತರ ಪದವಿ ಕಾಲೇಜುಗಳು, ವಿವಿಗಳಲ್ಲಿ ಕಡ್ಡಾಯವಾಗಿ ತಿರಂಗ ಹಾರಿಸಬೇಕು ಎಂದು ಉನ್ನತ ಶಿಕ್ಷಣ ಇಲಾಖೆ ಆದೇಶಿಸಿದೆ.
ಶಾಲಾ ಶಿಕ್ಷಣ ಇಲಾಖೆ ಕೂಡ ಮಹತ್ವದ ಆದೇಶ ಹೊರಡಿಸಲು ಮುಂದಾಗಿದೆ. ಅಮೃತಮಹೋತ್ಸವ ಹಿನ್ನೆಲೆ ಆಗಸ್ಟ್ 11 ರಿಂದ 17ರ ವರೆಗೆ ರಾಜ್ಯದ ಎಲ್ಲ ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳು, ಪಿಯುಸಿ ಕಾಲೇಜುಗಳು, ಮದರಸಾಗಳ ಮೇಲೂ ಕಡ್ಡಾಯವಾಗಿ ತಿರಂಗಾ ಹಾರಿಸಲೇಬೇಕು ಎಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಪರಿಹಾರದ ಹಣ ಪಡೆಯಲು ಜನರು ಉದ್ದೇಶಪೂರ್ವಕವಾಗಿ ಮನೆ ಬೀಳಿಸುತ್ತಿದ್ದಾರೆ – ತಹಶೀಲ್ದಾರ್ ಪತ್ರ ತಂದ ಅನುಮಾನ
ಸರ್ಕಾರಿ, ಅನುದಾನಿತ, ಅನದಾನ ರಹಿತ ಶಾಲಾ-ಕಾಲೇಜುಗಳು, ಎಲ್ಲಾ ಮದರಸಾಗಳು ಈ ಅದೇಶವನ್ನು ಪಾಲಿಸಬೇಕು. ತ್ರಿವರ್ಣ ಧ್ವಜದ ಜೊತೆಗೆ ಶಾಲೆ, ಕಾಲೇಜು, ಮದರಸಾಗಳಲ್ಲಿ ರಾಷ್ಟ್ರಭಕ್ತಿ ಮೂಡಿಸುವ ಸ್ವಾತಂತ್ರ್ಯದ ತ್ಯಾಗ, ಬಲಿದಾನ ಮೆಲುಕು ಹಾಕುವ ಗೀತ ಗಾಯನ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ನಡೆಸಬೇಕು. ಕ್ವಿಜ್, ಪ್ರಬಂಧ ಸ್ಪರ್ಧೆ, ಸ್ವಾತಂತ್ರ್ಯ ಹೋರಾಟಗಾರರು, ಸ್ವಾತಂತ್ರ್ಯ ಹೋರಾಟದ ಬಗ್ಗೆ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜನೆ ಮಾಡಬೇಕು ಎಂದು ಸೂಚಿಸುವಂತೆ ಹೇಳಿದ್ದಾರೆ. ಮುಖ್ಯವಾಗಿ ಶಾಲಾ-ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವಂತೆ ಸೂಚನೆ ನೀಡಲಾಗುತ್ತಿದೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನವನ್ನು ಜುಲೈ 31ರ ಒಳಗೆ ಸರ್ಕಾರದ ಸ್ವತ್ತೆಂದು ಘೋಷಿಸಬೇಕು. ಮೈದಾನಕ್ಕೆ 10ನೇ ಚಾಮರಾಜ ಒಡೆಯರ್ ಅವರ ಹೆಸರು ನಾಮಕರಣ ಮಾಡಬೇಕು ಎಂದು ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆಯ ಪ್ರಧಾನ ಕಾರ್ಯದರ್ಶಿ ರುಕ್ಮಾಂಗದ ಒತ್ತಾಯಿಸಿದ್ದಾರೆ.
ಚಾಮರಾಜಪೇಟೆ ಜನತಾ ಹೋಟೆಲ್ ಮುಂಭಾಗ, ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನ, ಟಿ.ಆರ್.ಮಿಲ್ ಸರ್ಕಲ್, ಮಕ್ಕಳ ಕೂಟ, ಜಿಂಕೆ ಪಾರ್ಕ್ ಸೇರಿದಂತೆ ಚಾಮರಾಜಪೇಟೆಯ ಒಟ್ಟು 6 ಭಾಗಗಳಲ್ಲಿ ಸಹಿ ಸಂಗ್ರಹ ಅಭಿಯಾನ ಕೈಗೊಳ್ಳಲಾಗಿದೆ. ಸಹಿ ಸಂಗ್ರಹಿಸಿ ಪ್ರಧಾನ ಮಂತ್ರಿಗಳಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಒಂದು ಪ್ರತಿಯನ್ನು ಕಳುಹಿಸುತ್ತೇವೆ. ಸದ್ಯದಲ್ಲೇ ರಾಜ್ಯಪಾಲರನ್ನ ಭೇಟಿ ಮಾಡಿ ಮನವಿ ಮಾಡಲಿದ್ದೇವೆ. ಇದನ್ನು ಆಟದ ಮೈದಾನವಾಗಿಯೇ ಉಳಿಯಬೇಕೆಂದು ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ಈದ್ಗಾ ಮೈದಾನ ಸರ್ಕಾರದ ಸ್ವತ್ತು ಎಂಬುದಕ್ಕೆ ಮತ್ತೊಂದು ದಾಖಲೆ ಬಿಡುಗಡೆ ಮಾಡಿದೆ. ದಾಖಲೆಯಲ್ಲಿ ಇದು ಮೈಸೂರು ಸಂಸ್ಥಾನದ ಅಧೀನಕ್ಕೆ ಒಳಪಡುವ ಸ್ವತ್ತು ಎಂದು ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಡ್ರೋನ್‌ಗೆ ಗುಂಡು -ಸೇನೆಯ ದಾಳಿಗೆ ಮರಳಿ ಪಾಕಿಗೆ ಓಡಿ ಹೋಯ್ತು
1950ರಲ್ಲೇ ಈದ್ಗಾ ಮೈದಾನ ಮೈಸೂರು ಸಂಸ್ಥಾನದ ಅಧೀನಕ್ಕೆ ಒಳಪಟ್ಟಿತ್ತು. ಇದನ್ನು ಯಾವುದೇ ದರ್ಗಾಕ್ಕೆ ನೀಡಿಲ್ಲ ಎಂಬುದರ ಕುರಿತು ದಾಖಲೆಯಲ್ಲಿ ಗಡಿ ಸಮೇತ ಸ್ಪಷ್ಟವಾಗಿ ಉಲ್ಲೇಖವಾಗಿದೆ. 1950ರಲ್ಲಿ ನಡೆದ ಸಿಟಿಎಸ್ ನಲ್ಲಿ ಈ ಮೈದಾನ ಸರ್ಕಾರದ್ದು ಎಂದು ಉಲ್ಲೇಖಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಆರ್‌ಟಿಐ ದಾಖಲೆ ಪ್ರತಿಯನ್ನು ಬಿಬಿಎಂಪಿಗೆ ಸಲ್ಲಿಕೆ ಮಾಡಲಾಗಿದೆ ಎಂದು ನಾಗರಿಕ ಒಕ್ಕೂಟ ವೇದಿಕೆ ಹೇಳಿದೆ.
ಬೆಂಗಳೂರಿಗೆ ಮೊಟ್ಟ ಮೊದಲ ಬಡಾವಣೆ ಆಗಿದ್ದೇ ಚಾಮರಾಜಪೇಟೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತದಲ್ಲಿ ಬಡಾವಣೆ ನಿರ್ಮಾಣವಾಯಿತು. ಹಾಗಾಗಿ ಈಗಿರುವ ಈದ್ಗಾ ಮೈದಾನ 2.10 ಎಕರೆ ಜಾಗದಲ್ಲಿ ಮೊದಲು ಸಂತೆಗೆ ಎಂದು ಮೀಸಲಿರಿಸಲಾಗಿತ್ತು. ಆ ನಂತರ ಇದು ಆಟದ ಮೈದಾನವಾಗಿ ಬಳಕೆಯಾಯಿತು. ಅದಕ್ಕಾಗಿ ಮೈಸೂರು ಅರಸರ ಹೆಸರಿನಲ್ಲಿ ಮೈದಾನಕ್ಕೆ ನಾಮಕರಣ ಮಾಡಬೇಕು ಎಂದು ಚಾಮರಾಜಪೇಟೆ ನಾಗರಿಕ ಒಕ್ಕೂಟದ ಕಾರ್ಯದರ್ಶಿ ರುಕ್ಮಾಂಗದ ಒತ್ತಾಯಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಪಶ್ಚಿಮ ಘಟ್ಟ ಪ್ರದೇಶದಲ್ಲಿ ವಾಸಿಸುವ ಜನತೆಯ ಭವಿಷ್ಯಕ್ಕೆ ಮಾರಕವಾಗುವ ಪಶ್ಚಿಮಘಟ್ಟ ಕುರಿತು, ಕೇಂದ್ರ ಪರಿಸರ ಸಚಿವಾಲಯದ ಅಧಿಸೂಚನೆ ವಿರೋಧಿಸಿ, ಮಲೆನಾಡು ಪ್ರದೇಶವನ್ನು ಪ್ರತಿನಿಧಿಸುವ ಶಾಸಕರ ಜೊತೆಗೆ ಸಭೆ ನಡೆಸಲು ಇದೇ ಜುಲೈ 18 ರಂದು ಗೃಹ ಸಚಿವ ಆರಗ ಜ್ಞಾನೇಂದ್ರರವರು ಕರೆದಿದ್ದಾರೆ.
ಕಳೆದ ವಾರ, ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ, ಕರ್ನಾಟಕ ರಾಜ್ಯವೂ ಒಳಗೊಂಡಂತೆ ಒಟ್ಟು 56,826 ಚದರ ಕಿಲೋ ಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಅಧಿಸೂಚನೆ ಹೊರಡಿಸಿದ್ದು, ಆಕ್ಷೇಪಣೆ ಸಲ್ಲಿಸಲು, ಎರಡು ತಿಂಗಳು ಗಡುವು ನೀಡಲಾಗಿದೆ. ಇದನ್ನೂ ಓದಿ: ಮೂಲಸೌಕರ್ಯಕ್ಕೆ 500 ಕೋಟಿ ರೂ. ಬಿಡುಗಡೆ: ಬೊಮ್ಮಾಯಿ
ಕರ್ನಾಟಕ ಸರ್ಕಾರ ಈ ಹಿಂದೆ ಆಡಿ ಕಸ್ತೂರಿರಂಗನ್ ಸಮಿತಿ ವರದಿಯನ್ನು ತಿರಸ್ಕರಿಸಿದೆ ಹಾಗೂ ತನ್ನ ನಿಲುವಿನ ಬಗ್ಗೆ ಸ್ಪಷ್ಟ ಅಭಿಪ್ರಾಯ ತಿಳಿಸಿದೆ. ಆ ನಿಲುವಿನಲ್ಲಿ ಯಾವುದೇ ಬದಲಾವಣೆ ಮಾಡಬಾರದೆಂಬ ಈ ಭಾಗದ ಶಾಸಕರ ಆಗ್ರಹವಾಗಿದೆ ಎಂದಿರುವ ಸಚಿವರು, ಸೋಮವಾರದ ಸಭೆಯಲ್ಲಿ, ಅಧಿಸೂಚನೆಯನ್ನು ವಿರೋಧಿಸಿ, ಗೊತ್ತುವಳಿಯನ್ನು ಮಂಡನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ರಾಜ್ಯ ಸರ್ಕಾರ 46 ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿಯನ್ನು ವಾಪಸ್ ಪಡೆದಿದೆ. ಶಾಸಕರು, ಮಾಜಿ ಶಾಸಕರು, ಅಧ್ಯಕ್ಷರು ಇರುವ ನಿಗಮ ಮಂಡಳಿ ಬಿಟ್ಟು ಉಳಿದ 46 ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿಯನ್ನು ಹಿಂಪಡೆದಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಈ ಹಿಂದಿನ ನೇಮಕಾತಿಯಲ್ಲಿದ್ದ ಸದಸ್ಯರೇ ಮುಂದುವರಿಯಲಿದ್ದಾರೆ. ಕರ್ನಾಟಕ ಮೃಗಾಲಯ ಪ್ರಾಧಿಕಾರಕ್ಕೆ ಎಲ್.ಆರ್.ಮಹದೇವಸ್ವಾಮಿ, ರವಿ ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿಗೆ ರವಿ ಕುಶಾಲಪ್ಪ, ಕರ್ನಾಟಕ ಗೇರು ಅಭಿವೃದ್ಧಿ ನಿಗಮಕ್ಕೆ ಮಣಿರಾಜ ಶೆಟ್ಟಿ, ಕರ್ನಾಟಕ ಜೀವ ವೈವಿದ್ಯ ಮಂಡಳಿಗೆ ಅನಂತ ಹೆಗಡೆ ಆಶೀಸರ್ ಮೊದಲಾದವರು ಅಧ್ಯಕ್ಷರಾಗಿದ್ದಾರೆ.
ಉಪಾಧ್ಯಕ್ಷರಾಗಿ ಕರ್ನಾಟಕದಲ್ಲಿ ಅರಣ್ಯ ಅಭಿವೃದ್ಧಿ ನಿಗಮಕ್ಕೆ ಕೆ.ರೇವಣ್ಣಪ್ಪ ಕೋಳಗಿ, ಕರ್ನಾಟಕ ಕ್ರೀಡಾ ಪ್ರಾಧಿಕಾರಕ್ಕೆ ಕೆ.ಪಿ.ಪುರುಷೋತ್ತಮ್, ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ (ವಿದ್ಯುತ್ ಮಗ್ಗಗಳ) ಅಭಿವೃದ್ಧಿ ನಿಗಮಕ್ಕೆ ನೀಲಕಂಠ ಬಿ.ಮಾಸ್ತರಮರಡಿ, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮಕ್ಕೆ ಎಸ್.ದತ್ತಾತ್ರಿ ಬಿನ್ ಸೂರ್ಯ ನಾರಾಯಣರಾವ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಎಸ್.ಎನ್.ಈಶ್ವರಪ್ಪ ಹಾಗೂ ಬೆಂಗಳೂರು ಸಾರಿಗೆ ಸಂಸ್ಥೆಗೆ ಎಂ.ಆರ್.ವೆಂಕಟೇಶ್ ಅವರೇ ನಾಮ ನಿರ್ದೇಶಿತರಾಗಿ ಮುಂದುವರಿಯಲಿದ್ದಾರೆ.
Live Tv
[brid partner=56869869 player=32851 video=960834 autoplay=true]
ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರಿಗೆ ಪರಿಸರ ರಾಯಭಾರಿ ಗೌರವ ನೀಡುವ ಜೊತೆಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಲಾಗುವುದು ಎಂದು ಕೆಲದಿನಗಳ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಕಟಿಸಿದ್ದರು.
ತಿಮ್ಮಕ್ಕ ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹೊಸೂರು ಗ್ರಾಮದವರು. ಅವರಿಗೆ ಯಾವುದೇ ಔಪಚಾರಿಕ ಶಿಕ್ಷಣ ಲಭಿಸಲಿಲ್ಲ. ಅನಕ್ಷರಸ್ಥೆಯಾಗಿದ್ದರೂ ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿದ್ದಾರೆ. ತಿಮ್ಮಕ್ಕ ಅವರು ಮಕ್ಕಳಿಲ್ಲದ ಕಾರಣ ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಬೆಳೆಸಿದ ಪರಿಸರವಾದಿ.
ಮುಂದಿನ ಪೀಳಿಗೆ ಹಿತದೃಷ್ಟಿಯನ್ನು ಮನಗಂಡು ಮರಗಳಿಗೆ ನೀರುಣಿಸಿ ಬೆಳೆಸಿದರು ತಿಮ್ಮಕ್ಕ. ಅವರ ಪರಿಸರ ಸಂರಕ್ಷಣೆ ಕಾರ್ಯವನ್ನು ಶ್ಲಾಘಿಸಿ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಗೌರವಿಸಿವೆ. ತಿಮ್ಮಕ್ಕ ಅವರಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳೂ ಲಭಿಸಿವೆ. ಇದನ್ನೂ ಓದಿ: ಹಿಂದೂಗಳಿಗೆ ಕಾನೂನು ನೆರವು ನೀಡಲು ವಿಹೆಚ್‌ಪಿ, ಭಜರಂಗದಳದಿಂದ ಸಹಾಯವಾಣಿ
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ರಾಜ್ಯದಲ್ಲಿ ಪಿಯುಸಿ ಅತಿಥಿ ಉಪನ್ಯಾಸಕರಿಗೆ ರಾಜ್ಯ ಸರ್ಕಾರ ಭರ್ಜರಿ ಗಿಫ್ಟ್ ನೀಡಿದೆ. ಅತಿಥಿ ಉಪನ್ಯಾಸಕರ ಗೌರವ ಧನ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ.
ಈಗ ಪಿಯುಸಿ ಅತಿಥಿ ಉಪನ್ಯಾಸಕರ ಗೌರವಧನ 3 ಸಾವಿರ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈಗಾಗಲೇ ನೇಮಕಗೊಂಡು ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ನೀಡಲಾಗುತ್ತಿದ್ದ ಮಾಸಿಕ ಗೌರವಧನ 9,000 ರೂ.ನ್ನು ಪರಿಷ್ಕರಿಸಿ 12,000 ರೂ.ಗೆ ಹೆಚ್ಚಿಸಲಾಗಿದೆ. ಇದನ್ನೂ ಓದಿ: ಪಿಯು ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಕ್ಕೆ ಸರ್ಕಾರ ಆದೇಶ
ಇತ್ತೀಚೆಗೆಷ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಿಸಿ ಆದೇಶ ಹೊರಡಿಸಲಾಗಿತ್ತು. ಅದರಂತೆ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಗೌರವ ಸಂಭಾವನೆಯನ್ನು 9,000 ರೂ.ನಿಂದ 15,000 ರೂ.ಗೆ ಹೆಚ್ಚಿಸುವಂತೆ ಸರ್ಕಾರಕ್ಕೆ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಮನವಿ ಮಾಡಿ ಪ್ರಸ್ತಾವನೆ ಸಲ್ಲಿಸಿದ್ದರು.
3708 ಅತಿಥಿ ಉಪನ್ಯಾಸಕರ ನೇಮಕಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ. 2022-23ನೇ ಶೈಕ್ಷಣಿಕ ಸಾಲಿನಲ್ಲಿ ಬಡ್ತಿ, ವಯೋನಿವೃತ್ತಿ, ನಿಧನ ಹಾಗೂ ಇತರೆ ಕಾರಣಗಳಿಂದ ತೆರವಾಗಿರುವ ವಿವಿಧ ವಿಷಯಗಳ ಉಪನ್ಯಾಸಕರ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕಕ್ಕೆ ಸೂಚನೆ ನೀಡಿದೆ.
ಖಾಲಿ ಇರುವ ವಿವಿಧ ವಿಷಯಗಳ ಉಪನ್ಯಾಸಕರ ಹುದ್ದೆ-3,271 ಮತ್ತು ಬಡ್ತಿ, ವಯೋನಿವೃತ್ತಿ, ನಿಧನ ಹಾಗೂ ಇತರೆ ಕಾರಣಗಳಿಂದ ತೆರವಾಗಬಹುದಾದ ಉಪನ್ಯಾಸಕರ ಹುದ್ದೆಗಳ ಸಂಖ್ಯೆ-100. ಹೊಸ ಸಂಯೋಜನೆಗಳಿಗೆ ಹುದ್ದೆ ಮಂಜೂರಾಗದ ವಿಷಯಗಳಿಗೆ ನೇಮಕ ಮಾಡಿಕೊಳ್ಳಬೇಕಾದ ಅತಿಥಿ ಉಪನ್ಯಾಸಕರ ಸಂಖ್ಯೆ 337 ಇದೆ. ಇದನ್ನೂ ಓದಿ: ಒಟ್ಟಿಗೆ ಫೈಟರ್ ಜೆಟ್ ಹಾರಿಸಿ ಇತಿಹಾಸ ಸೃಷ್ಟಿದ ತಂದೆ- ಮಗಳು
Live Tv
[brid partner=56869869 player=32851 video=960834 autoplay=true]