Tag: Karnataka Government

  • ರಾಜ್ಯದ 31 ಪ್ರಾಥಮಿಕ, ಹೈಸ್ಕೂಲ್ ಶಿಕ್ಷಕರಿಗೆ `ಉತ್ತಮ ಶಿಕ್ಷಕ’ ಪ್ರಶಸ್ತಿ – ಯಾವ ಜಿಲ್ಲೆಯ ಯಾರಿಗೆ ಪ್ರಶಸ್ತಿ?

    ರಾಜ್ಯದ 31 ಪ್ರಾಥಮಿಕ, ಹೈಸ್ಕೂಲ್ ಶಿಕ್ಷಕರಿಗೆ `ಉತ್ತಮ ಶಿಕ್ಷಕ’ ಪ್ರಶಸ್ತಿ – ಯಾವ ಜಿಲ್ಲೆಯ ಯಾರಿಗೆ ಪ್ರಶಸ್ತಿ?

    ಬೆಂಗಳೂರು: 2022-23ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಿಸಿದೆ.

    ಪ್ರಾಥಮಿಕ ಶಾಲೆಯ 20 ಶಿಕ್ಷಕರು, ಪ್ರೌಢಶಾಲೆಯ 11 (ಒಬ್ಬರು ವಿಶೇಷ ಚೇತನ ಶಿಕ್ಷಕರು ಒಳಗೊಂಡಂತೆ) ಶಿಕ್ಷಕರಿಗೆ ಪ್ರಶಸ್ತಿ ಘೋಷಣೆ ಮಾಡಿ ಇಂದು ಸುತ್ತೋಲೆ ಹೊರಡಿಸಿದೆ. ಸೆಪ್ಟೆಂಬರ್ 5 ರಂದು ನಡೆಯುವ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇದನ್ನೂ ಓದಿ: ಪರ್ಫಾರ್ಮ್ಯಾಕ್ಸ್ ಬ್ರ್ಯಾಂಡ್‌ಗೆ ಜಸ್ಪ್ರೀತ್‌ ಬುಮ್ರಾ ಬ್ರ್ಯಾಂಡ್‌ ಅಂಬಾಸಿಡರ್‌

    2022-23ನೇ ಸಾಲಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕರಿಗೆ `ಅಕ್ಷರ ಮಾತೆ ಸಾವಿತ್ರಿಬಾಯಿ ಫುಲೆ’ ಹೆಸರಿನಲ್ಲಿ ರಾಜ್ಯ ಸರ್ಕಾರ ಪ್ರಶಸ್ತಿ ಪ್ರದಾನ ಮಾಡಲಿದೆ.

    ಜೊತೆಗೆ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶಿಕ್ಷಕರಿಗೆ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಹಾಗೂ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಯಿಂದ ತಲಾ 10 ಸಾವಿರ ರೂ.ಗಳ ನಗದು ಪುರಸ್ಕಾರ ನೀಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಹೆಚ್.ಎಸ್.ಶಿವಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಏಷ್ಯಾಕಪ್ ಟೂರ್ನಿಯಿಂದ ರವೀಂದ್ರ ಜಡೇಜಾ ಔಟ್

    ಪ್ರಾಥಮಿಕ ಶಾಲಾ ವಿಭಾಗ

    • ಮಂಜುನಾಥ ಶಂಕರಪ್ಪ ಮುಂಗೂಣಿ – ಧಾರವಾಡ
    • ಅಮಿತಾನಂದ ಹೆಗ್ಡೆ – ದಕ್ಷಿಣ ಕನ್ನಡ
    • ಹೆಚ್.ಎಲ್.ಚಂದ್ರಶೇಖರ – ಚಿಕ್ಕಬಳ್ಳಾಪುರ
    • ಅಪ್ಪಸಾಹೇಬ ವಸಂತಪ್ಪ ಗಿರೆಣ್ಣವರ – ಚಿಕ್ಕೋಡಿ
    • ಶಿವಾನಂಪ್ಪ ಬಿ. – ಶಿವಮೊಗ್ಗ
    • ಹುಸೇನಸಾಬ್ – ಕಲಬುರಗಿ
    • ಕೆ.ವಿ.ಸುದರ್ಶನ – ಬೆಂಗಳೂರು ಉತ್ತರ
    • ಕೊಟ್ರಪ್ಪ ವಿರೂಪಾಕ್ಷಪ್ಪ ಮೇಲ್ಮುರಿ – ಹಾವೇರಿ
    • ಸಂಜೀವ ದೇವಾಡಿಗ – ಉಡುಪಿ
    • ಫಿರೆಂಗಪ್ಪ ಸಿದ್ದಪ್ಪ ಕಟ್ಟಿಮನಿ – ಬಾಗಲಕೋಟೆ
    • ಚಂದ್ರಕಲಾ – ಯಾದಗಿರಿ
    • ನಿರಂಜನ ಪಿ.ಜೆ – ವಿಜಯನಗರ
    • ಸುಶೀಲಬಾಯಿ – ಬೆಳಗಾವಿ
    • ವಿದ್ಯಾ ಕಂಪಾಪೂರ ಮಠ – ಕೊಪ್ಪಳ
    • ಬಸವರಾಜ ಜಾಡರ – ರಾಯಚೂರು
    • ಗಂಗಾಧರಪ್ಪ ಬಿ.ಆರ್. – ಚಿಕ್ಕಮಗಳೂರು
    • ಚಂದ್ರಶೇಖರ ರೆಡ್ಡಿ – ಮಧುಗಿರಿ ಶೈಕ್ಷಣಿಕ ಜಿಲ್ಲೆ
    • ಸುಧಾಕರ ಗಣಪತಿ – ಶಿರಸಿ
    • ಈಶ್ವರಪ್ಪ ಅಂದಾನಪ್ಪ ರೇವಡಿ – ಗದಗ
    • ಕವಿತಾ ಈ. – ಚಿತ್ರದುರ್ಗ

    ಪ್ರೌಢಶಾಲಾ ವಿಭಾಗ

    • ಮಹೇಶ್.ಕೆ.ಎನ್-ಚಿತ್ರದುರ್ಗ
    • ಇಬ್ರಾಹಿಂ- ಕೊಡಗು
    • ರಘು-ಶಿವಮೊಗ್ಗ
    • ಭೀಮಪ್ಪ- ರಾಯಚೂರು
    • ರಾಧಾಕೃಷ್ಣ- ದಕ್ಷಿಣ ಕನ್ನಡ
    • ನಾರಾಯಣ ಪರಮೇಶ್ವರ- ಶಿರಸಿ
    • ಅರುಣಾ ಜೂಡಿ- ಕೊಪ್ಪಳ
    • ಸುನೀಲ ಪರೀಟ-ಬೆಳಗಾವಿ
    • ಬಾಲಸುಬ್ರಹ್ಮಣ್ಯ- ಮಂಡ್ಯ
    • ಡಾ.ಚೇತನ್ ಬಣಕಾರ್- ವಿಜಯನಗರ
    • ಕೀರ್ತಿ ಬಸಪ್ಪ- ಚಿಕ್ಕಬಳ್ಳಾಪುರ

    Live Tv
    [brid partner=56869869 player=32851 video=960834 autoplay=true]

  • ಹಾಲಿನ ದರ ಪ್ರತಿ ಲೀಟರ್‌ಗೆ 3 ರೂ. ಹೆಚ್ಚಿಸಿ – ಸರ್ಕಾರಕ್ಕೆ ಕೆಎಂಎಫ್‌ ಪ್ರಸ್ತಾವ

    ಹಾಲಿನ ದರ ಪ್ರತಿ ಲೀಟರ್‌ಗೆ 3 ರೂ. ಹೆಚ್ಚಿಸಿ – ಸರ್ಕಾರಕ್ಕೆ ಕೆಎಂಎಫ್‌ ಪ್ರಸ್ತಾವ

    ಬೆಂಗಳೂರು: ಪ್ರತಿ ಲೀಟರ್‌ಗೆ ಹಾಲಿನ ದರ 3 ರೂಪಾಯಿ ಹೆಚ್ಚಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್‌) ಪ್ರಸ್ತಾವ ಸಲ್ಲಿಸಿದೆ.

    15 ಹಾಲು ಒಕ್ಕೂಟಗಳು ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿವೆ. ಕಳೆದ ಮೂರು ವರ್ಷಗಳ ಹಿಂದೆ ಸರ್ಕಾರ ಹಾಲಿನ ದರ ಪ್ರತಿ ಲೀಟರ್‌ಗೆ 2 ರೂ. ‌ಏರಿಕೆ ಮಾಡಿತ್ತು. ಬಳಿಕ ಸರ್ಕಾರ ಹಾಲಿನ ದರವನ್ನು ಏರಿಕೆ ಮಾಡಲೇ ಇಲ್ಲ. ಹಲವು ಬಾರಿ ಸರ್ಕಾರಕ್ಕೆ ದರ ಏರಿಕೆ ಪ್ರಸ್ತಾವ ಸಲ್ಲಿಸಿದ್ದರೂ ಕ್ರಮ ಕೈಗೊಂಡಿರಲಿಲ್ಲ. ಆದರೆ ಈ ಬಾರಿ ದರ ಏರಿಕೆ ಮಾಡಲೇಬೇಕು ಎಂದು ಕೆಎಂಎಫ್‌ ಒತ್ತಾಯಿಸಿದೆ. ಇದನ್ನೂ ಓದಿ: ರಾಜ್ಯದಲ್ಲಿ ಇನ್ನೂ 4 ದಿನ ಮಳೆ ಅಬ್ಬರ – ಕರಾವಳಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

    ಈಗ ಲೀಟರ್‌ಗೆ 37 ರೂಪಾಯಿ ನೀಡುತ್ತಿದ್ದಾರೆ. 3 ರೂಪಾಯಿ ದರ ಏರಿಕೆ ಮಾಡಿದರೆ, 40 ರೂಪಾಯಿ‌ ಏರಿಕೆ ಆಗಲಿದೆ. ಬೇರೆ ರಾಜ್ಯಗಳಲ್ಲಿ ಹೆಚ್ಷಿನ ಬೆಲೆಗೆ ಹಾಲು ಮಾರಾಟ‌ ಮಾಡುತ್ತಾರೆ. ಆದರೆ ನಮ್ಮ ರಾಜ್ಯದಲ್ಲಿ ಕೆಎಂಎಫ್‌ನಿಂದ ಕಡಿಮೆ ಬೆಲೆಗೆ ಹಾಲು ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ದರ ಏರಿಕೆ ಪ್ರಸ್ತಾವವನ್ನು ಸರ್ಕಾರದ ಮುಂದಿಡಲಾಗಿದೆ.

    ಸರ್ಕಾರ ದರ ಏರಿಕೆ ಮಾಡದಿದ್ದರೆ ಪ್ರತಿಭಟನೆ ಮಾಡಲು ಹಾಲು ಒಕ್ಕೂಟದವರು ಚಿಂತನೆ ನಡೆಸಿದ್ದಾರೆ. ಬೆಲೆ ಏರಿಕೆ ಮಧ್ಯೆ ಹಾಲು ಉತ್ಪಾದನೆ, ಹೈನುಗಾರಿಕೆ ಕಷ್ಟ ಆಗುತ್ತಿದೆ. ಉಳಿತಾಯ ಮಾಡುವುದಕ್ಕೆ ಸಾಧ್ಯ ‌ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹಾಲಿನ ದರ ಏರಿಕೆಗೆ ಪ್ರಸ್ತಾವ ಸಲ್ಲಿಸಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಐತಿಹಾಸಿಕ ಮಳೆಗೆ ರೇಷ್ಮೆನಗರಿ ತತ್ತರ – ಮಲೆನಾಡಿನಂತಾದ ಬಯಲು ಸೀಮೆ ರಾಮನಗರ

    Live Tv
    [brid partner=56869869 player=32851 video=960834 autoplay=true]

  • BBMP ಎಲೆಕ್ಷನ್‌ಗೆ ಕರಡು ಪಟ್ಟಿ ಸಿದ್ಧ – 6 ಲಕ್ಷಕ್ಕೂ ಅಧಿಕ ಮತದಾರರ ಸಂಖ್ಯೆ ಹೆಚ್ಚಳ

    BBMP ಎಲೆಕ್ಷನ್‌ಗೆ ಕರಡು ಪಟ್ಟಿ ಸಿದ್ಧ – 6 ಲಕ್ಷಕ್ಕೂ ಅಧಿಕ ಮತದಾರರ ಸಂಖ್ಯೆ ಹೆಚ್ಚಳ

    ಬೆಂಗಳೂರು: ಬಿಬಿಎಂಪಿ ಚುನಾವಣಾ ತಯಾರಿ ಶುರುವಾಗಿದೆ. ಬೆಂಗಳೂರಿನಲ್ಲಿ ಮತದಾರರ ಸಂಖ್ಯೆ 6.33 ಲಕ್ಷ ಹೆಚ್ಚಾಗಿದೆ.

    ಕಳೆದ ಬಾರಿ 71,22,169 ಮತದಾರರಿದ್ದರು. ಸಧ್ಯ 2022ರ ಜುಲೈ 31ರ ವರೆಗಿನ ವಿಧಾನಸಭಾ ಕ್ಷೇತ್ರವಾರು ಮತದಾರರ ಮಾಹಿತಿಯನ್ನು ವಾರ್ಡ್‌ವಾರು ಪುನರ್ ವಿಂಗಡಿಸಿ ಪಾಲಿಕೆಯ ಮತದಾರರ ಪಟ್ಟಿ ಸಿದ್ಧಗೊಳಿಸಲಾಗಿದೆ. ಈ ಬಾರಿ 79, 86 ಸಾವಿರದ 229 ಮಂದಿ ಇದ್ದಾರೆ. 41,09,496 ಪುರುಷರು, 37,97,497 ಮಹಿಳೆಯರು ಹಾಗೂ 1,401 ಇತರೆ ಮತದಾರರಿದ್ದಾರೆ. 243 ವಾರ್ಡ್‌ಗಳಲ್ಲಿ ಕನಿಷ್ಠ 18,604 ಮತ್ತು ಗರಿಷ್ಠ 51,653 ಮತದಾರರಿದ್ದಾರೆ ಅಂತಾ ಚುನಾವಣಾ ಆಯೋಗ ಹೇಳಿದೆ.

    VOTEಸಾಂದರ್ಭಿಕ ಚಿತ್ರ

    ಈ ಸಂಬಂಧ ರಾಜ್ಯ ಚುನಾವಣಾ ಆಯೋಗ ಆಯುಕ್ತ ಬಸವರಾಜು ಮಾತನಾಡಿ, ಬೆಂಗಳೂರು ವ್ಯಾಪ್ತಿಯ ಮತದಾರರು ಹೆಸರು ಬಿಟ್ಟು ಹೋಗಿದ್ದರೆ, ಬದಲಾವಣೆ ಆಗಿದ್ದರೆ ಈಗಲೇ ಸರಿಮಾಡಿಕೊಳ್ಳಿ. ವೋಟರ್ ಹೆಲ್ಪ್‌ಲೈನ್‌ ಆಪ್ ಮೂಲಕ ವಿಧಾನಸಭಾ ಕ್ಷೇತ್ರವಾರು ನೋಂದಣಿ ಪರಿಶೀಲಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಗುತ್ತಿಗೆದಾರರ ಸಂಘ, ಕೆಂಪಣ್ಣ ವಿರುದ್ಧ 50 ಕೋಟಿ ಮಾನನಷ್ಟ ಮೊಕದ್ದಮೆ: ಮುನಿರತ್ನ

    ಸಾಂದರ್ಭಿಕ ಚಿತ್ರ

    ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತಾಡಿ, ಮತದಾರರ ಪಟ್ಟಿ ಆಕ್ಷೇಪಣೆಗೆ 7 ದಿನ ಕಾಲವಕಾಶ ಇದೆ. ಕಾಲವಕಾಶ ಕಡಿಮೆ ಇದ್ದು, ಮತದಾರರ ಕರಡು ಪ್ರಕಟ ಆದ ಮೇಲೆ ಚುನಾವಣೆ ದಿನಾಂಕ ನಿಗದಿಯಾಗಬೇಕಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಒಪ್ಪಿಗೆಯಿಲ್ಲದೇ ಅಪ್ರಾಪ್ತೆಯೊಂದಿಗೆ ಸೆಕ್ಸ್ ನಡೆಸಿದ ವ್ಯಕ್ತಿಗೆ 100 ವರ್ಷ ಜೈಲು!

    ಬಿಬಿಎಂಪಿ ವಾರ್ಡ್ ಮೀಸಲಾತಿ ಸಂಬಂಧ ಸಲ್ಲಿಕೆ ಆಗಿದ್ದ ರಿರ್ಟ್ ಅರ್ಜಿಯನ್ನು ಸೆಪ್ಟೆಂಬರ್ 1ಕ್ಕೆ ಮುಂದೂಡಿರೋ ಹೈಕೋರ್ಟ್, ಸರ್ಕಾರ, ಬಿಬಿಎಂಪಿ, ಚುನಾವಣಾ ಆಯೋಗಕ್ಕೆ ನೋಟಿಸ್ ಕೊಟ್ಟಿದೆ.

    Live Tv
    [brid partner=56869869 player=32851 video=960834 autoplay=true]

  • ಸರ್ಕಾರದಿಂದ ಎಡವಟ್ಟು – ಜೀವಂತ ಇಲ್ಲದವರಿಗೂ ಪ್ರತಿಷ್ಠಾನದ ಸದಸ್ಯ ಸ್ಥಾನ

    ಸರ್ಕಾರದಿಂದ ಎಡವಟ್ಟು – ಜೀವಂತ ಇಲ್ಲದವರಿಗೂ ಪ್ರತಿಷ್ಠಾನದ ಸದಸ್ಯ ಸ್ಥಾನ

    ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಬರುವ ಟ್ರಸ್ಟ್‌ ಮತ್ತು ಪ್ರತಿಷ್ಠಾನಗಳಿಗೆ ಅಧ್ಯಕ್ಷರು ಮತ್ತು ಸದಸ್ಯರ ನೇಮಕ ಮಾಡುವಲ್ಲಿ ಸರ್ಕಾರ ಎಡವಟ್ಟು ಮಾಡಿಕೊಂಡಿದೆ. ಜೀವಂತ ಇಲ್ಲದವರಿಗೂ ಪ್ರತಿಷ್ಠಾನದ ಸದಸ್ಯ ಸ್ಥಾನವನ್ನು ಸರ್ಕಾರ ನೀಡಿದೆ.

    ಹೌದು, ದಿವಂಗತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಪತ್ನಿ ದಿವಂಗತ ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿಗೂ ಸದಸ್ಯ ಸ್ಥಾನ ನೀಡಿ ಸರ್ಕಾರ ಮಹಾ ಎಡವಟ್ಟು ಮಾಡಿದೆ. ಚಿಕ್ಕಮಗಳೂರಿನ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸದಸ್ಯರಾಗಿ ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿ ಹೆಸರನ್ನು ಆಯ್ಕೆ ಮಾಡಲಾಗಿದೆ. ಇದನ್ನೂ ಓದಿ: ನಾಲ್ಕು ಚಕ್ರದ ಸ್ವಂತ ವಾಹನ ಹೊಂದಿದ ಅಂತ್ಯೋದಯ, ಬಿಪಿಎಲ್ ಪಡಿತರದಾರರ ಮೇಲಿನ ಕ್ರಮಕ್ಕೆ ಬ್ರೇಕ್

    ಕಳೆದ ವರ್ಷದ ಡಿಸೆಂಬರ್‌ನಲ್ಲಿ ಹೃದಯಾಘಾತದಿಂದ ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿ ನಿಧನರಾಗಿದ್ದರು. ಆದರೆ ಅವರಿಗೂ ಪ್ರತಿಷ್ಠಾನದ ಸದಸ್ಯ ಸ್ಥಾನ ನೀಡಲಾಗಿದೆ.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಎಡವಟ್ಟಿ‌ನಿಂದ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದೆ. ಇದು ತಪ್ಪಾಗಿ ಸೇರ್ಪಡೆಯಾದ ಹೆಸರಾ ಅಥವಾ ಅದೇ ಹೆಸರಿನ ಬೇರೆಯವರಾ ಎಂಬ ಪ್ರಶ್ನೆ ಕೂಡ ಉದ್ಭವಿಸಿದೆ. ಇದನ್ನೂ ಓದಿ: ಮದರಸಾಗಳಿಗಾಗಿ ವಿಶೇಷ ಮಂಡಳಿ ರಚನೆಗೆ ಪ್ಲಾನ್- ತಜ್ಞರ ವರದಿ ಕೇಳಿದ ಸಚಿವ ನಾಗೇಶ್

    Live Tv
    [brid partner=56869869 player=32851 video=960834 autoplay=true]

  • ಗಣೇಶ ಹಬ್ಬಕ್ಕೆ ಮುನ್ನೆಚ್ಚರಿಕಾ ಕ್ರಮ – ಸರ್ಕಾರದ ಸುತ್ತೋಲೆಯಲ್ಲಿ ಏನಿದೆ?

    ಗಣೇಶ ಹಬ್ಬಕ್ಕೆ ಮುನ್ನೆಚ್ಚರಿಕಾ ಕ್ರಮ – ಸರ್ಕಾರದ ಸುತ್ತೋಲೆಯಲ್ಲಿ ಏನಿದೆ?

    ಬೆಂಗಳೂರು: ಗೌರಿ ಗಣೇಶ ಹಬ್ಬಕ್ಕಾಗಿ ವಿವಿಧ ಇಲಾಖೆಯ ಮಧ್ಯೆ ಸಮನ್ವಯಕ್ಕಾಗಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಉತ್ಸವಕ್ಕೆ ಮುಂಚಿತವಾಗಿಯೇ ಕೋಮು ಸೌಹಾರ್ದ ಸಭೆ ನಡೆಸುವಂತೆ ತಿಳಿಸಿದೆ.

    ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ಪೊಲೀಸ್‌ ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್‌ ಅಧೀಕ್ಷಕರಿಗೂ ಸೇರಿದಂತೆ ಸುತ್ತೋಲೆ ಬಿಡುಗಡೆ ಮಾಡಿದೆ. ಉತ್ಸವಕ್ಕೂ ಮುಂಚೆ ನಾಗರಿಕ ಸಮಿತಿ, ಮೊಹಲ್ಲಾ ಸಮಿತಿ, ಕಾವಲು ಸಮಿತಿ ಸೇರಿದಂತೆ ಎಲ್ಲಾ ಸಂಘ ಸಂಸ್ಥೆಗಳ ಮುಖ್ಯಸ್ಥರನ್ನು ಒಳಗೊಂಡಂತೆ ಸಭೆ ನಡೆಸಲು ಸೂಚನೆ ನೀಡಿದೆ. ಇದನ್ನೂ ಓದಿ: ಮುಸ್ಲಿಂ ಕಾನೂನಿನಲ್ಲಿ ಪೋಷಕರ ಅನುಮತಿಯಿಲ್ಲದೇ ಅಪ್ರಾಪ್ತೆ ವಿವಾಹವಾಗಬಹುದು: ಕೋರ್ಟ್‌

    ಆಗಸ್ಟ್‌ 30ರಿಂದ ಗೌರಿ ಗಣೇಶ ಹಬ್ಬವನ್ನು ರಾಜ್ಯದಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಬ್ಬದ ಹಿನ್ನೆಲೆಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಪ್ರಕ್ರಿಯ ಸಾಮಾನ್ಯವಾಗಿದ್ದು, ಈ ಸಂದರ್ಭದಲ್ಲಿ ಉತ್ಸವವನ್ನು ಆಯೋಜಿಸುವ ಆಯೋಜಕರಿಗೆ ಪರವಾನಗಿ ನೀಡುವುದು ವಿವಿಧ ಇಲಾಖೆಗಳ ಜವಾಬ್ದಾರಿಯಾಗಿರುತ್ತದೆ. ಈ ಕಾರ್ಯವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಮಹಾನಗರಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕ್ರಮ ವಹಿಬೇಕು ಎಂದು ಹೇಳಿದೆ. ಇದನ್ನೂ ಓದಿ:  ಎಲ್ಲರೂ ನೂಪುರ್‌ಗೆ ಕ್ಷಮೆ ಕೇಳುವಂತೆ ಹೇಳಿದರು, ಆದರೆ ನಾನು ಮಾತ್ರ ಬೆಂಬಲ ನೀಡಿದ್ದೇನೆ: ರಾಜ್ ಠಾಕ್ರೆ

    ಸರ್ಕಾರದ ಸುತ್ತೋಲೆಯಲ್ಲಿ ಏನಿದೆ?

    1. ಣೇಶ ಪ್ರತಿಷ್ಠಾಪನೆಗೆ ಅಗತ್ಯವಿರುವ ಸ್ಥಳ, ಪೆಂಡಾಲ್ ವಿದ್ಯುತ್ ಸಂಪರ್ಕ, ಪರವಾನಗಿಗಳನ್ನು ನೀಡಲು ಕಂದಾಯ, ಲೋಕೋಪಯೋಗಿ, ಇಂಧನ ಅಗ್ನಿಶಾಮಕ, ಪೋಲಿಸ್ ಇಲಾಖೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಸಂಯೋಜಿತವಾಗಿ ಪರವಾನಗಿ ನೀಡಲು ಸೂಕ್ತ ಕ್ರಮ ವಹಿಸುವುದು.
    2. ಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಪ್ರತಿ ವಾರ್ಡ್‌ಗಳ ಮಟ್ಟದಲ್ಲಿ ಸಂಬಂಧಿಸಿದ ವಿವಿಧ ಇಲಾಖೆಗಳ ಪ್ರತಿನಿಧಿಗಳನ್ನು ಒಳಗೊಂಡಂತೆ ಏಕಗವಾಕ್ಷಿ ವ್ಯವಸ್ಥೆಯನ್ನು ಸ್ಥಾಪಿಸಿ ಪ್ರಚಾರ ಮಾಡುವುದು.
    3. ಕಾರ್ಯಕ್ರಮದ ಆಯೋಜಕರು ನಿಗಧಿತ ನಮೂನೆಯಲ್ಲಿ ಮುಂಚಿತವಾಗಿಯೇ ಅರ್ಜಿ ಸಲ್ಲಿಸುವುದು ಹಾಗೂ ಆಯೋಜಕರು ಸಲ್ಲಿಸುವ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಗಳು ಜಂಟಿ ತಪಾಸಣೆ ಮಾಡಿ 3 ದಿನಗಳ ಒಳಗೆ ಪರವಾನಗಿ ನೀಡಲು ಕ್ರಮ ವಹಿಸುವುದು.
    4. ರವಾನಿಗೆ ನೀಡುವ ಮುನ್ನ ಆಯೋಜಕರಿಂದ ಸರ್ಕಾರ ಹಾಗೂ ನ್ಯಾಯಾಲಯದ ಆದೇಶಗಳನ್ನು ಪಾಲಿಸುವ ಬಗ್ಗೆ ಮುಚ್ಚಳಿಕೆ ಪಡೆಯುವುದು
    5. ಸಾರ್ವಜನಿಕ ಸುರಕ್ಷತೆ ಹಾಗೂ ಪರಿಸರ ಮಾಲಿನ್ಯ ಉಂಟಾಗದ ರೀತಿ ಕಾರ್ಯಕ್ರಮ ವಹಿಸುವಂತೆ ಆಯೋಜಕರಿಗೆ ಸೂಚಿಸುವುದು.
    6. ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುವಂತೆ ಆಯೋಜಕರಿಗೆ ಸೂಚಿಸುವುದು.
    7. ವಿಶೇಷವಾಗಿ ಹೈ-ಟೆನ್ನನ್ ತಂತಿ ಹಾದು ಹೋಗಿರುವ ಪ್ರದೇಶಗಳಲ್ಲಿ ಯಾವುದೇ ಕಾರಣಕ್ಕೂ ಗಣೇಶ ಮೂರ್ತಿಯನ್ನು ಸ್ಥಾಪಿಸಲು ಅನುಮತಿ ಕೊಡುವಂತಿಲ್ಲ.
    8. ತ್ಸವಕ್ಕೆ ಮುಂಚಿತವಾಗಿ ನಾಗರೀಕ ಸಮಿತಿ, ಮೊಹಲ್ಲಾ ಸಮಿತಿ, ಕಾವಲು ಸಮಿತಿ ಮತ್ತಿತರ ಎಲ್ಲಾ ಸಂಘಸಂಸ್ಥೆಗಳ ಮುಖ್ಯಸ್ಥರನ್ನು ಒಳಗೊಂಡಂತೆ ಕೋಮು ಸೌಹಾರ್ದ ಸಭೆಗಳನ್ನು ಆಯೋಜಿಸಲು ಕ್ರಮ ವಹಿಸುವುದು.

    Live Tv
    [brid partner=56869869 player=32851 video=960834 autoplay=true]

  • BBMP: ವಾರ್ಡ್‌ವಾರು ಮೀಸಲಾತಿ ಅಂತಿಮ ಅಧಿಸೂಚನೆ ಪ್ರಕಟ

    BBMP: ವಾರ್ಡ್‌ವಾರು ಮೀಸಲಾತಿ ಅಂತಿಮ ಅಧಿಸೂಚನೆ ಪ್ರಕಟ

    ಬೆಂಗಳೂರು: ಬಿಬಿಎಂಪಿ ವಾರ್ಡ್‌ವಾರು ಕ್ಷೇತ್ರಗಳನ್ನು ಪುನರ್ ವಿಂಗಡಣೆ ಮಾಡಲಾಗಿದ್ದು, ಮೀಸಲಾತಿಯ ಅಂತಿಮ ಅಧಿಸೂಚನೆ ಪ್ರಕಟಿಸಲಾಗಿದೆ.

    2011ರ ಜನಗಣತಿಯ ಆಧಾರದ ಮೇರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 243 ವಾರ್ಡ್‌ವಾರು ಮೀಸಲಾತಿಯನ್ನು ಅಂತಿಮಗೊಳಿಸಿದೆ. 243 ವಾರ್ಡ್ ಗಳ ಮೀಸಲಾತಿಯಲ್ಲಿ ಯಾವುದೇ ಬದಲಾವಣೆ ಮಾಡದೇ ಆದೇಶ ಹೊರಬಿದ್ದಿದೆ. ಇದನ್ನೂ ಓದಿ: ಕೊರೊನಾದಿಂದ US ಅಧ್ಯಕ್ಷ ಜೋ ಬೈಡನ್ ಗುಣಮುಖ – ಪತ್ನಿಗೆ ಸೋಂಕು

    ಇದರ ಕರಡು ಅಧಿಸೂಚನೆಯನ್ನು ಆಗಸ್ಟ್ 3 ರಂದು ಪ್ರಕಟಿಸಿ, ಆಕ್ಷೇಪಣೆ ಸಲ್ಲಿಸಲು ಒಂದು ವಾರ ಕಾಲಾವಕಾಶ ನೀಡಲಾಗಿತ್ತು. ಬಂದ ಆಕ್ಷೇಪಣಿಗಳನ್ನು ಪರಿಶೀಲಿಸಿ ಈಗ ಅಂತಿಮ ಅಧಿಸೂಚನೆ ಪ್ರಕಟಿಸಲಾಗಿದೆ.

    ಬಿಬಿಎಂಪಿ ಚುನಾವಣೆ ಸಂಬಂಧ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ಈ ಹಿಂದೆ 8 ವಾರಗಳಲ್ಲಿ ಚುನಾವಣೆ ನಡೆಸಲು ಸೂಚನೆ ನೀಡಿತ್ತು. ಇದನ್ನು ಪಾಲಿಸದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಅಲ್ಲದೆ ಒಂದು ವಾರದ ಒಳಗೆ ಮೀಸಲಾತಿ ಪ್ರಕಟಿಸುವಂತೆ ಸೂಚಿಸಿತ್ತು. ಹೀಗಾಗಿ ಆಗಸ್ಟ್ 3ರ ಬುಧವಾರ ಸಂಜೆ ಈ ಮೀಸಲಾತಿಯ ಕರಡು ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಇದರಿಂದಾಗಿ ಚುನಾವಣಾ ಆಯೋಗಕ್ಕೆ ಇದ್ದ ಅಡ್ಡಿ ನಿವಾರಣೆಯಾಗಿತ್ತು. ಇದನ್ನೂ ಓದಿ: 500 ರೂ.ಗಾಗಿ ಸ್ನೇಹಿತನ ಶಿರಚ್ಛೇದ- ತಲೆಯನ್ನು ಪೊಲೀಸ್ ಠಾಣೆಗೆ ತೆಗೆದೊಯ್ದ

    ಅಂತೆಯೇ ಈಗ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಪರಿಶೀಲನಾ ಸಮಿತಿಯು ಮಾಡಿರುವ ಶಿಫಾರಸುಗಳನ್ನು ಸರ್ಕಾರ ಒಪ್ಪಿಕೊಂಡಿದೆ. ಬಿಬಿಎಂಪಿ ಅಧಿನಿಯಮ 2020 ಕಲಂ 8(3)ರಲ್ಲಿ ಪ್ರದತ್ತವಾದ ಅಧಿಕಾರ ಚಲಾಯಿಸಿ, 2011ರ ಜನಗಣತಿಯ ಆಧಾರದ ಮೇರೆಗೆ ಬಿಬಿಎಂಪಿ ವಾರ್ಡ್‌ವಾರು ಮೀಸಲಾತಿಯನ್ನು ಅಂತಿಮಗೊಳಿಸಿ ಅಧಿಸೂಚನೆ ಹೊರಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಚಾಮರಾಜಪೇಟೆ ಮೈದಾನದಲ್ಲಿ ಸರ್ಕಾರದಿಂದಲೇ ಧ್ವಜಾರೋಹಣ – ಅಧಿಕೃತ ಆದೇಶ

    ಚಾಮರಾಜಪೇಟೆ ಮೈದಾನದಲ್ಲಿ ಸರ್ಕಾರದಿಂದಲೇ ಧ್ವಜಾರೋಹಣ – ಅಧಿಕೃತ ಆದೇಶ

    ಬೆಂಗಳೂರು: 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿವಾದಿತ ಚಾಮರಾಜಪೇಟೆ ಆಟದ ಮೈದಾನದಲ್ಲಿ ಸರ್ಕಾರದಿಂದಲೇ ಧ್ವಜಾರೋಹಣ ಮಾಡುವ ಬಗ್ಗೆ ಅಧಿಕೃತ ಆದೇಶ ಹೊರಬಿದ್ದಿದೆ.

    ಸರ್ವೇ ನಂಬರ್ 40, ಗುಟ್ಟಹಳ್ಳಿ, ಚಾಮರಾಜಪೇಟೆ ಬಡಾವಣೆ ಸ್ವತ್ತಿನ ಸಂಖ್ಯೆ 147ರ ಆಟದ ಮೈದಾನದಲ್ಲಿ ಧ್ವಜಾರೋಹಣ ನೆರೆವೇರಿಸಲಾಗುವುದು ಎಂದು ಬೆಂಗಳೂರು ಉತ್ತರ ಉಪವಿಭಾಗದ ಅಧಿಕಾರಿ ಆದೇಶ ಹೊರಡಿಸಿದ್ದಾರೆ. ಚಾಮರಾಜಪೇಟೆ ಮೈದಾನವನ್ನು ಈದ್ಗಾ ಮೈದಾನ ಎಂದು ಸರ್ಕಾರ ಎಲ್ಲಿಯೂ ಉಲ್ಲೇಖಿಸಿಲ್ಲ. ಇದನ್ನೂ ಓದಿ: ರಾಜ್ಯದಲ್ಲಿ ಶುರುವಾಯ್ತು ಹರ್ ಘರ್ ತಿರಂಗಾ ಹವಾ – ತಿರಂಗಾ ನಡೆಗೆ ಚಾಲನೆ ನೀಡಿದ ಪ್ರಹ್ಲಾದ್ ಜೋಶಿ

    ಪ್ರಸ್ತುತ ದಿನಗಳಲ್ಲಿ ಈದ್ಗಾ ಮೈದಾನ ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ಮೈದಾನ ತಮಗೆ ಸೇರಿದ್ದು ಎಂದು ವಕ್ಫ್‌ ಬೋರ್ಡ್‌ ವಾದಿಸುತ್ತಿದೆ. ಆದರೆ ಇದು ಕಂದಾಯ ಇಲಾಖೆಗೆ ಸೇರಿದ್ದು ಎಂದು ಬಿಬಿಎಂಪಿ ಹೇಳುತ್ತಿದೆ.

    ಈದ್ಗಾ ಮೈದಾನ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಹಿಂದೂಪರ ಸಂಘಟನೆಗಳು, ಮೈದಾನದಲ್ಲಿ ಹಿಂದೂ ಹಬ್ಬಗಳ ಆಚರಣೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಪಟ್ಟು ಹಿಡಿದಿವೆ. ಅಲ್ಲದೇ ಸ್ವಾತಂತ್ರ್ಯ ದಿನಾಚರಣೆ ವೇಳೆಯೂ ಧ್ವಜಾರೋಹಣಕ್ಕೆ ಹಿಂದೂ ಸಂಘಟನೆಗಳು ಮನವಿ ಮಾಡಿದ್ದವು. ಇತ್ತ ಮುಸ್ಲಿಮರು ಕೂಡ ನಾವು ಧ್ವಜಾರೋಹಣ ಮಾಡುತ್ತೇವೆ ಎಂದು ಹೇಳಿದ್ದರು. ಇದಕ್ಕೆ ಅವಕಾಶ ಕಲ್ಪಿಸಿದರೆ ಶಾಂತಿಭಂಗವಾಗುವ ಭೀತಿಯಿಂದಾಗಿ ಸರ್ಕಾರದ ನೇತೃತ್ವದಲ್ಲೇ ಧ್ವಜಾರೋಹಣ ನಡೆಸಲು ಕ್ರಮಕೈಗೊಳ್ಳಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯರಿಂದ ನಾವು ರಾಷ್ಟ್ರಭಕ್ತಿ ಪಾಠ ಕಲಿಯೋ ಅವಶ್ಯಕತೆ ಇಲ್ಲ: ಆರಗ ಜ್ಞಾನೇಂದ್ರ

    ವಿವಾದಿತ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ನೋಡಿಕೊಳ್ಳಲು ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸಿದ್ದರಾಮಯ್ಯ ಸರ್ಕಾರ ರಚಿಸಿದ್ದ ಎಸಿಬಿ ರದ್ದು – ಲೋಕಾಯುಕ್ತ ಪೊಲೀಸರಿಗೆ ಹೈಕೋರ್ಟ್ ಮರುಜೀವ

    ಸಿದ್ದರಾಮಯ್ಯ ಸರ್ಕಾರ ರಚಿಸಿದ್ದ ಎಸಿಬಿ ರದ್ದು – ಲೋಕಾಯುಕ್ತ ಪೊಲೀಸರಿಗೆ ಹೈಕೋರ್ಟ್ ಮರುಜೀವ

    ಬೆಂಗಳೂರು/ನವದೆಹಲಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರ ಅವಧಿಯಲ್ಲಿ ಭ್ರಷ್ಟ್ರಾಚಾರ ಪ್ರಕರಣಗಳ ತನಿಖೆಗಾಗಿ ರಚಿಸಿದ್ದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ವನ್ನು ಇಂದು ಕರ್ನಾಟಕ ಹೈಕೋರ್ಟ್ ರದ್ದುಪಡಿಸುವ ಮೂಲಕ ಐತಿಹಾಸಿಕ ತೀರ್ಪು ನೀಡಿದೆ. ಅಲ್ಲದೇ ಎಸಿಬಿ ಮುಂದಿದ್ದ ಎಲ್ಲಾ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡುವಂತೆ ಸೂಚಿಸಿದೆ.

    ಬೆಂಗಳೂರು ವಕೀಲರ ಸಂಘ, ಸಮಾಜ ಪರಿವರ್ತನ ಸಮುದಾಯ ಮತ್ತು ವಕೀಲ ಬಿ.ಜಿ.ಚಿದಾನಂದ ಅರಸ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಬಿ.ವೀರಪ್ಪ ಮತ್ತು ಎಚ್.ಎಸ್.ಹೇಮಲೇಖಾ ಅವರಿದ್ದ ದ್ವೀಸದಸ್ಯ ಪೀಠವು ಎತ್ತಿ ಹಿಡಿದಿದೆ. ಇದನ್ನೂ ಓದಿ: ಬಡವರಿಗೆ ತೆರಿಗೆ ಹೊರೆ; ಶ್ರೀಮಂತರಿಗೆ ಮಾತ್ರ ವಿನಾಯಿತಿ – ಕೇಂದ್ರದ ವಿರುದ್ಧ ಕೇಜ್ರಿವಾಲ್‌ ಕಿಡಿ

    2016ರ ಮಾರ್ಚ್ 14ರಂದು ಎಸಿಬಿ ರಚಿಸಲು ಮಾಡಿರುವ ಕಾರ್ಯಾದೇಶವನ್ನು ರಾಜ್ಯ ಸರ್ಕಾರ ಸರಿಯಾಗಿ ಮಾಡಿಲ್ಲ. ಅಲ್ಲದೆ ಲೋಕಾಯುಕ್ತ ತನಿಖೆಗೆ ಸಂಬಂಧಿಸಿದ ಅಧಿಕಾರವನ್ನು ಲೋಕಾಯುಕ್ತ ಪೊಲೀಸರಿಂದ ಹಿಂಪಡೆದಿರುವ ಸೂಚನೆಯ ಬಗ್ಗೆಯೂ ಸರಿಯಾದ ಕ್ರಮವಿಲ್ಲ. ಹಾಗಾಗಿ ಹಿಂದಿನ ಅಧಿಸೂಚನೆಗಳನ್ನು ಸೂಪರ್ ಸೀಡ್ ಮಾಡಿ ಹೊರಡಿಸಿರುವ ಎಸಿಬಿಯನ್ನು ವಜಾ ಮಾಡಲಾಗಿದೆ ಎಂದು ಪೀಠವು ಆದೇಶದಲ್ಲಿ ಹೇಳಿದೆ. ಇದನ್ನೂ ಓದಿ: ಅದ್ಧೂರಿ ಬರ್ತ್‌ಡೇ ಸೆಲಬ್ರೇಷನ್‌ಗೆ ನೋ ಅಂದ ಅಪ್ಪ, ಅಮ್ಮ – 21ರ ಯುವಕ ಆತ್ಮಹತ್ಯೆ

    ರಾಜ್ಯ ಸರ್ಕಾರದ ಆಕ್ಷೇಪಾರ್ಹ ಆದೇಶಗಳನ್ನು ವಜಾ ಮಾಡಿರುವ ಹಿನ್ನೆಲೆಯಲ್ಲಿ ಎಸಿಬಿ ರದ್ದಾಗಿದೆ. ಆದರೆ ಎಸಿಬಿ ಮುಂದೆ ಬಾಕಿ ಇರುವ ತನಿಖೆ, ವಿಚಾರಣೆ, ಶಿಸ್ತುಕ್ರಮ ಪ್ರಕ್ರಿಯೆಗಳು ಲೋಕಾಯುಕ್ತಕ್ಕೆ ವರ್ಗಾವಣೆಯಾಗಲಿವೆ. ಹೀಗಾಗಿ ಎಸಿಬಿ ಮುಂದಿರುವ ಎಲ್ಲಾ ಪ್ರಕರಣಗಳು ಲೋಕಾಯುಕ್ತಕ್ಕೆ ವರ್ಗವಣೆಯಾಗಿರುವುದರಿಂದ ಆರೋಪಿಗಳು ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದೂ ಹೇಳಿದೆ.

    ಅಲ್ಲದೇ, 1991ರ ಫೆಬ್ರವರಿ 6, 2002ರ ಫೆಬ್ರವರಿ 8, 2002ರ ಮೇ 8, 2002ರ ಡಿಸೆಂಬರ್ 5ರಂದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಲೋಕಾಯುಕ್ತ ಪೊಲೀಸರಿಗೆ ತನಿಖೆ ನಡೆಸುವ ಸಂಬಂಧ ಹೊರಡಿಸಿದ್ದ ಆದೇಶಗಳನ್ನು ಪುನರ್ ಸ್ಥಾಪಿಸಲಾಗಿದೆ ನ್ಯಾಯಪೀಠ ಸ್ಪಷ್ಟವಾಗಿ ಉಲ್ಲೇಖಿಸಿದೆ. ಇದನ್ನೂ ಓದಿ: ಭೇಟಿಗೆಂದು ಕಬ್ಬನ್ ಪಾರ್ಕ್‍ಗೆ ಕರೆಸಿ ಸಂಬಂಧಿ ಯುವತಿ ಮೇಲೆ ಅತ್ಯಾಚಾರ!

    court order law

    ಚಾರಿತ್ರ್ಯವಂತರನ್ನು ನೇಮಿಸಿ- ಖಡಕ್ ಸೂಚನೆ: ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಲೋಕಾಯುಕ್ತ ಕಾಯ್ದೆಗಳನ್ನು ಗಮನದಲ್ಲಿಟ್ಟುಕೊಂಡು ಸೆಕ್ಷನ್ 3(2)ಎ ಮತ್ತು 3(2)ಬಿ ಅಡಿ ಸಮರ್ಥರನ್ನು ನೇಮಕ ಮಾಡಬೇಕು. ಸಾರ್ವಜನಿಕ ಬದುಕಿನಲ್ಲಿಯೂ ಉತ್ತಮ ಹಿನ್ನೆಲೆಯುಳ್ಳವರು, ಪ್ರಾಮಾಣಿಕರು ಹಾಗೂ ನ್ಯಾಯಯುತವಾಗಿ ನಡೆದುಕೊಳ್ಳುವವರನ್ನು ಲೋಕಾಯುಕ್ತ ಹಾಗೂ ಉಪ ಲೋಕಾಯುಕ್ತರ ಹುದ್ದೆಗೆ ನೇಮಕ ಮಾಡಲು ಶಿಫಾರಸು ಮಾಡಬೇಕು ಎಂದು ಸಾಂವಿಧಾನಿಕ ಪ್ರಾಧಿಕಾರಗಳಿಗೆ ಮನವಿ ಮಾಡುತ್ತೇವೆ ಎಂದು ಆದೇಶದಲ್ಲಿ ತಿಳಿಸಿದೆ.

    ರಾಜ್ಯ ಸರ್ಕಾರಕ್ಕೆ ಪೀಠದ ಶಿಫಾರಸ್ಸು:

    • ಕರ್ನಾಟಕ ಲೋಕಾಯುಕ್ತ ಕಾಯ್ದೆ ಸೆಕ್ಷನ್ 12(4)ಕ್ಕೆ ತುರ್ತಾಗಿ ತಿದ್ದುಪಡಿ ಮಾಡುವ ಅಗತ್ಯವಿದೆ.
    • ಉತ್ತಮ ಹಿನ್ನೆಲೆ ಹೊಂದಿರುವ ಪೊಲೀಸ್ ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸ್ ದಳಕ್ಕೆ ನೇಮಕ ಮಾಡುವ ಮೂಲಕ ಅದನ್ನು ಸದೃಢಗೊಳಿಸಬೇಕು.
    • ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ನಿಯೋಜಿಸಿರುವ ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸ್ ದಳಕ್ಕೆ ವರ್ಗಾಯಿಸಬೇಕು. ಎಸಿಬಿಯಲ್ಲಿ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯು ಲೋಕಾಯುಕ್ತದ ಆಡಳಿತಕ್ಕೆ ಒಳಪಡಲಿದ್ದಾರೆ.
    • ಲೋಕಾಯುಕ್ತ ಮತ್ತು ಉಪಲೋಕಾಯುಕ್ತರ ಅನುಮತಿ ಪಡೆಯದೇ ಕನಿಷ್ಠ 3 ವರ್ಷ ಸೇವಾವಧಿ ಪೂರ್ಣಗೊಳಿಸದ ಅಧಿಕಾರಿ ಅಥವಾ ಸಿಬ್ಬಂದಿಯನ್ನು ಲೋಕಾಯುಕ್ತದಿಂದ ವರ್ಗಾಯಿಸುವಂತಿಲ್ಲ.
    • ಒಂದು ಸಾರಿ ತನಿಖೆ ಆರಂಭಿಸಿದ ಬಳಿಕ ನಿರ್ದಿಷ್ಟ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ನ್ಯಾಯಾಲಯದ ಮುಂದಿರುವ ಪ್ರಕರಣಗಳನ್ನು ತುರ್ತಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಲೋಕಾಯುಕ್ತ ಮತ್ತು ಉಪಲೋಕಾಯುಕ್ತರು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯಕ್ಕೆ ಭೇಟಿ ನೀಡಿದ್ದ ಅಮಿತ್‌ ಶಾ ಬಳಿ ನೆರೆ ಪರಿಹಾರ ಕೇಳಲಿಲ್ಲವೇಕೆ – BJP ಸರ್ಕಾರಕ್ಕೆ ಕಾಂಗ್ರೆಸ್‌ ಪ್ರಶ್ನೆ

    ರಾಜ್ಯಕ್ಕೆ ಭೇಟಿ ನೀಡಿದ್ದ ಅಮಿತ್‌ ಶಾ ಬಳಿ ನೆರೆ ಪರಿಹಾರ ಕೇಳಲಿಲ್ಲವೇಕೆ – BJP ಸರ್ಕಾರಕ್ಕೆ ಕಾಂಗ್ರೆಸ್‌ ಪ್ರಶ್ನೆ

    ಬೆಂಗಳೂರು: ನೆರೆ ಹಾವಳಿಯಿಂದ ತತ್ತರಿಸಿರುವ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಪರಿಹಾರ ಕೇಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್‌ ಕಿಡಿಕಾರಿದೆ.

    ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ರಾಜ್ಯಕ್ಕೆ ಭೇಟಿ ನೀಡಿದ್ದ ಅಮಿತ್ ಶಾ ಅವರ ಬಳಿ ಯಾರೊಬ್ಬರೂ ರಾಜ್ಯದ ನೆರೆ ಪರಿಸ್ಥಿತಿಯ ಬಗ್ಗೆ ತುಟಿ ಬಿಚ್ಚಲಿಲ್ಲ, ಪರಿಹಾರ ಕೇಳಲಿಲ್ಲ ಏಕೆ ಎಂದು ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದೆ. ಇದನ್ನೂ ಓದಿ: ನನ್ನನ್ನು ಕಂಡ್ರೆ ಬಿಜೆಪಿಯವರಿಗೆ ಭಯವೋ ಭಯ: ಸಿದ್ದರಾಮಯ್ಯ

    ಟ್ವೀಟ್‌ನಲ್ಲೇನಿದೆ?
    ಮಳೆ ಅಬ್ಬರಕ್ಕೆ ಹಲವು ಮಂದಿ ಜೀವ ಬಿಟ್ಟಿದ್ದಾರೆ, ಅಪಾರ ಬೆಳೆ ಹಾನಿಯಾಗಿದೆ. ಸಿಎಂ ಬೊಮ್ಮಾಯಿ ಅವರೇ, ನೆರೆ ಪರಿಹಾರ ಕೇಳಲು ದೆಹಲಿಗೆ ಹೋಗುವ ಅಗತ್ಯವಿರಲಿಲ್ಲ, NDRF ಮುಖ್ಯಸ್ಥ ಅಮಿತ್ ಶಾ ಅವರೇ ಬಂದಿದ್ದರು. ಪ್ರವಾಹ ವೀಕ್ಷಣೆಗೆ ಕರೆದೊಯ್ಯಲಿಲ್ಲ ಏಕೆ? ಪರಿಹಾರದ ಬಗ್ಗೆ ಮಾತಾಡಲಿಲ್ಲ ಏಕೆ? ಕೇಳಲು ಭಯವೇ, ಪರಿಹಾರ ಸಿಗದು ಎಂಬ ತಾತ್ಸಾರವೇ!?

    ಕರ್ನಾಟಕದಲ್ಲಿ 25 ಬಿಜೆಪಿ ಸಂಸದರಿದ್ದಾರೆ. ಕರ್ನಾಟಕದಿಂದ 6 ಕೇಂದ್ರ ಸಚಿವರಿದ್ದಾರೆ. ಡಬಲ್ ಇಂಜಿನ್ ಸರ್ಕಾರವಿದೆ. ಇಷ್ಟೆಲ್ಲ ಇರುವುದು ‘ಊಟಕ್ಕೆ ಸಿಗದ ಉಪ್ಪಿನಕಾಯಿಯಂತೆ’! ರಾಜ್ಯಕ್ಕೆ ಭೇಟಿ ನೀಡಿದ್ದ ಅಮಿತ್ ಶಾ ಅವರ ಬಳಿ ಯಾರೊಬ್ಬರೂ ರಾಜ್ಯದ ನೆರೆ ಪರಿಸ್ಥಿತಿಯ ಬಗ್ಗೆ ತುಟಿ ಬಿಚ್ಚಲಿಲ್ಲ, ಪರಿಹಾರ ಕೇಳಲಿಲ್ಲ ಏಕೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಇದನ್ನೂ ಓದಿ: ಮಹದಾಯಿ ವಿಷಯದಲ್ಲಿ ಮತ್ತೆ ಗೋವಾ ಕ್ಯಾತೆ – ಕರ್ನಾಟಕದ ವಿರುದ್ಧ ತುರ್ತು ತನಿಖೆಗೆ ಶಾಸಕ ಮನವಿ

    Live Tv
    [brid partner=56869869 player=32851 video=960834 autoplay=true]

  • ಹುಲಿ ಯೋಜನೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಲ್ಲ – ವಿ.ಸೋಮಣ್ಣ

    ಹುಲಿ ಯೋಜನೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಲ್ಲ – ವಿ.ಸೋಮಣ್ಣ

    ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶವನ್ನು ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಣೆ ಮಾಡಲ್ಲ. ಇಲ್ಲಿ ಹುಲಿ ಯೋಜನೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

    ಮಲೆಮಹದೇಶ್ವರ ಬೆಟ್ಟದ ವ್ಯಾಪ್ತಿಯ ಪೊನ್ನಾಚಿಯಲ್ಲಿ ಆಲಂಬಾಡಿ ಮಠದ ಕಟ್ಟಡದ ಭೂಮಿ ಪೂಜೆ ಕಾರ್ಯಕ್ರಮದಲ್ಲಿಂದು ಮಾತನಾಡಿದ ಅವರು, ಮಲೆಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶವನ್ನು ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಣೆ ಮಾಡುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಮುಜರಾಯಿ ದೇಗುಲಗಳಲ್ಲಿ ವರಮಹಾಲಕ್ಷ್ಮಿ ಹಬ್ಬಕ್ಕೆ ಗಿಫ್ಟ್ – ಮಹಿಳೆಯರಿಗೆ ಬಳೆ, ಅರಿಶಿನ-ಕುಂಕುಮ

    ಇಲ್ಲಿ ಹುಲಿ ಯೋಜನೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ. ಮಲೆಮಹದೇಶ್ವರ ಬೆಟ್ಟ ಇತಿಹಾಸ ಪ್ರಸಿದ್ಧ ಕ್ಷೇತ್ರ. ಈ ಭಾಗದಲ್ಲಿ ಕಾಡಂಚಿನ ಗ್ರಾಮಗಳು ಹೆಚ್ಚಾಗಿವೆ. ಕಾಡಿನೊಳಗೂ ಗ್ರಾಮಗಳಿವೆ. ಈ ಭಾಗದ ಜನರಿಗೆ, ಬೆಟ್ಟಕ್ಕೆ ಬರುವ ಭಕ್ತರಿಗೆ ತೊಂದರೆಯಾಗಬಾರದು. ಮಲೆಮಹದೇಶ್ವರ ಬೆಟ್ಟಕ್ಕೆ ಈ ಭಾಗದ ರೈತರೇ ವಾರಸುದಾರರು. ಸರ್ಕಾರ ಅನುಷ್ಠಾನಗೊಳಿಸುವ ಯಾವುದೇ ಯೋಜನೆಗಳು ಜನರಿಗೆ ಅನುಕೂಲವೇಗಬೇಕೇ ಹೊರತು ಅನಾನುಕೂಲವಾಗಬಾರದು ಎಂದರು. ಇದನ್ನೂ ಓದಿ: ಮಾಜಿ ಸಚಿವ ಪಾರ್ಥ ಚಟರ್ಜಿ ಮೇಲೆ ಚಪ್ಪಲಿ ಎಸೆದ ಮಹಿಳೆ 

    ಎಸ್‌ಡಿಪಿಐ, ಪಿಎಫ್‌ಐ ಬ್ಯಾನ್ ಆಗ್ಬೇಕು: ಇದೇ ವೇಳೆ ಎಸ್‌ಡಿಪಿಐ ಸಂಘಟನೆ ವಿಚಾರವಾಗಿ ಮಾತನಾಡಿದ ಸಚಿವ ವಿ.ಸೋಮಣ್ಣ, ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳು ಬ್ಯಾನ್ ಆಗ್ಬೇಕು. ಈ ಸಂಘಟನೆಗಳನ್ನು ನಿಷೇಧಿಸಲು ಸರ್ಕಾರ ಹಂತ-ಹಂತವಾಗಿ ಕ್ರಮ ಕೈಗೊಳ್ಳುತ್ತಿದೆ. ಇದು ಯಾರ ಪಾಪದ ಕೂಸು ಎಂಬುದು ಎಲ್ಲರಿಗೂ ಗೊತ್ತಿದೆ. ಈ ಸಂಘಟನೆಗಳು ಎಲ್ಲರಿಗೂ ತಲೆನೋವಾಗಿದ್ದು, ಇವುಗಳನ್ನು ನಿಷೇಧಿಸಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]