Tag: Karnataka Examination Authority

  • ಸಿಇಟಿ, ಪಿಯುಸಿ ಪರೀಕ್ಷೆ ನಂತರವೂ ದಾಖಲೆ ಪರಿಶೀಲನೆ, ಆತಂಕ ಬೇಡ-ಕೆಇಎ

    ಸಿಇಟಿ, ಪಿಯುಸಿ ಪರೀಕ್ಷೆ ನಂತರವೂ ದಾಖಲೆ ಪರಿಶೀಲನೆ, ಆತಂಕ ಬೇಡ-ಕೆಇಎ

    ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ತೆಗೆದುಕೊಳ್ಳುವ ಅಭ್ಯರ್ಥಿಗಳು ತಮ್ಮ ದಾಖಲೆಗಳನ್ನು ದ್ವಿತೀಯ ಪಿಯುಸಿ ಪರೀಕ್ಷೆ ನಂತರವೂ ತಮ್ಮ ಕಾಲೇಜುಗಳಲ್ಲಿ ಪರಿಶೀಲಿಸಿಕೊಳ್ಳಲು ಅವಕಾಶ ಇರುತ್ತದೆ. ಈ ವಿಷಯದಲ್ಲಿ ಆತಂಕಪಡುವ ಅಗತ್ಯ ಇಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು ಅಭಯ ನೀಡಿದ್ದಾರೆ.

    ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ ಅವರು, ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸುವ ಎಲ್ಲ ಅಭ್ಯರ್ಥಿಗಳಿಗೂ ಪ್ರವೇಶ ಪತ್ರವನ್ನು ನೀಡಲಾಗುತ್ತದೆ. ಕೇವಲ ದಾಖಲೆ ಪರಿಶೀಲನೆ ಮಾಡಿಸಿಕೊಂಡವರಿಗೆ ಮಾತ್ರ ಕೊಡಲಾಗುತ್ತದೆ ಎಂದು ಯಾರೂ ಭಾವಿಸುವುದು ಬೇಡ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಪಿಜಿ ವೈದ್ಯಕೀಯ: ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆ – ಕೆಇಎ

    ಕರ್ನಾಟಕೇತರ ಅಭ್ಯರ್ಥಿಗಳು ಕೇವಲ ಬಿಎಸ್‌ಸಿ (ನರ್ಸಿಂಗ್) ಕೋರ್ಸಿಗೆ ಪ್ರವೇಶಾತಿಗೆ ಅರ್ಹತೆ ಪಡೆಯಲು ಸಿಇಟಿಯ ಭೌತವಿಜ್ಞಾನ, ರಸಾಯನವಿಜ್ಞಾನ ಮತ್ತು ಜೀವವಿಜ್ಞಾನ ವಿಷಯಗಳ ಪರೀಕ್ಷೆಗಳಿಗೆ ಹಾಜರಾಗಬೇಕು. ಆದರೆ, ಎಂಜಿನಿಯರಿAಗ್ ಮುಂತಾದ ಕೋರ್ಸ್ಗಳ ಪ್ರವೇಶಕ್ಕೆ ಅವರು ಅರ್ಹರಾಗುವುದಿಲ್ಲ. ಹಾಗೆಯೇ ಕರ್ನಾಟಕೇತರ ಅಭ್ಯರ್ಥಿಗಳಿಗೆ ಯಾವುದೇ ಮೀಸಲಾತಿಯ ಸವಲತ್ತುಗಳು ಕೂಡ ಇರುವುದಿಲ್ಲ. ಈ ಕುರಿತ ಹೆಚ್ಚಿನ ವಿವರಗಳಿಗೆ 2025ರ ಜನವರಿ 22ರಂದು ಹೊರಡಿಸಿರುವ ಅಧಿಸೂಚನೆಯನ್ನು ಕೆಇಎ ವೆಬ್‌ಸೈಟ್‌ನಲ್ಲಿ ನೋಡಬಹುದು ಎಂದಿದ್ದಾರೆ.

    ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್ಗಳ ಪ್ರವೇಶಕ್ಕೆ ಯುಜಿ ನೀಟ್-25ರಲ್ಲಿ ಅರ್ಹತೆ ಪಡೆಯಬೇಕು ಹಾಗೂ ಕಡ್ಡಾಯವಾಗಿ ಕೆಇಎನಲ್ಲಿ ನೋಂದಣಿ ಮಾಡಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸಿರಬೇಕು ಎಂದು ವಿವರಿಸಿದ್ದಾರೆ.ಇದನ್ನೂ ಓದಿ: ಮೈಕ್ರೋ ಫೈನಾನ್ಸ್‌ನಿಂದ ಮುಂದುವರಿದ ಕಿರುಕುಳ – ಗ್ರಾಮವನ್ನೇ ತೊರೆದ 7-8 ಕುಟುಂಬಗಳು

     

  • ಪಿಜಿ ವೈದ್ಯಕೀಯ: ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆ – ಕೆಇಎ

    ಪಿಜಿ ವೈದ್ಯಕೀಯ: ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆ – ಕೆಇಎ

    ಬೆಂಗಳೂರು: 2024ನೇ ಸಾಲಿನ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆರಂಭವಾಗಿದ್ದು, ಇಚ್ಛೆ/ಆಯ್ಕೆಗಳನ್ನು (ಆಪ್ಷನ್) ದಾಖಲಿಸಲು ಫೆ.24ರವರೆಗೆ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

    ಮಾಪ್ ಅಪ್ ಸುತ್ತಿನ ಸೀಟು ಹಂಚಿಕೆ ನಂತರ ರದ್ದುಪಡಿಸಿಕೊಂಡ ಸೀಟು ಹಾಗೂ ಹಂಚಿಕೆಯಾಗದೆ ಉಳಿದಿರುವ ಸೀಟುಗಳನ್ನು ಸ್ಟ್ರೇ ವೇಕೆನ್ಸಿ ಸುತ್ತಿನಲ್ಲಿ ಹಂಚಿಕೆ ಮಾಡಲಾಗುತ್ತಿದೆ. ಈ ಸುತ್ತಿನಲ್ಲಿ ಭಾಗವಹಿಸಲು ಇಚ್ಛಿಸುವವರು ಮುಂಗಡವಾಗಿ 5 ಲಕ್ಷ ರೂ. (ಕಾಷನ್ ಡೆಪಾಸಿಟ್) ಪಾವತಿಸಬೇಕು. ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಫೆ.24ರ ರಾತ್ರಿ 8ಕ್ಕೆ ಪ್ರಕಟಿಸಲಾಗುತ್ತದೆ. ಫೆ.25ರಂದು ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ಶುಲ್ಕ ಪಾವತಿಸಿ, ಕಾಲೇಜಿಗೆ ವರದಿ ಮಾಡಿಕೊಳ್ಳಲು ಫೆ.28 ಕೊನೆ ದಿನ. ಎಂಸಿಸಿ ಸೂಚನೆ ಅನ್ವಯ ಈ ದಿನಾಂಕ ವಿಸ್ತರಣೆ ಇರುವುದಿಲ್ಲ ಎಂದು ವಿವರಿಸಿದ್ದಾರೆ.ಇದನ್ನೂ ಓದಿ: ಭೀಕರ ಅಪಘಾತ – ಕುಂಭಮೇಳಕ್ಕೆ ಹೋಗಿದ್ದ ಬೀದರ್ ಮೂಲದ 6 ಮಂದಿ ಸಾವು

    ಸೀಟು ಹಂಚಿಕೆ ನಂತರ ಮುಂಗಡ ಹಣವನ್ನು ಶುಲ್ಕದ ಜೊತೆ ಹೊಂದಾಣಿಕೆ ಮಾಡಲಾಗುತ್ತದೆ. ಸೀಟು ಹಂಚಿಕೆ ನಂತರ ಶುಲ್ಕ ಪಾವತಿಸಿ, ಕಾಲೇಜಿಗೆ ಪ್ರವೇಶ ಪಡೆಯದಿದ್ದಲ್ಲಿ ಮುಂಗಡ ಹಣ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಅಲ್ಲದೆ, ದಂಡ ಕೂಡ ವಿಧಿಸಲಾಗುತ್ತದೆ. ಅಂತಹವರನ್ನು ಮುಂದಿನ ವರ್ಷದ ಎಂಸಿಸಿ ಕೌನ್ಸೆಲಿಂಗ್ ಸೇರಿದಂತೆ ಪಿಜಿ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕೆ ನಿರ್ಬಂಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

    ಕೆಇಎ ಅಥವಾ ಎಂಸಿಸಿಯಿಂದ ಅಥವಾ ಇತರೆ ರಾಜ್ಯಗಳಲ್ಲಿ ಮೊದಲ ಅಥವಾ ಎರಡನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟನ್ನು ಇಟ್ಟುಕೊಳ್ಳದೇ ಇರುವವರು ಮತ್ತು ಎಂಸಿಸಿಯ ಮೂರನೇ ಅಥವಾ ಸ್ಟ್ರೇ ವೇಕೆನ್ಸಿ ಸುತ್ತಿನಲ್ಲಿ ಸೀಟು ಹಂಚಿಕೆಯಾಗದಿರುವವರು ಮಾತ್ರ ಈ ಸುತ್ತಿನಲ್ಲಿ ಭಾಗವಹಿಸಬಹುದು. ಕೆಇಎ ಮೂಲಕ ಪ್ರೀ ಕ್ಲಿನಿಕಲ್/ ಪ್ಯಾರಾ ಕ್ಲಿನಿಕಲ್ ಸೀಟು ಪಡೆದವರೂ ಭಾಗವಹಿಸಬಹುದು ಎಂದಿದ್ದಾರೆ.

    ಮಾಪ್ ಅಪ್ ಸುತ್ತಿನಲ್ಲಿ ಹಂಚಿಕೆಯಾದ ಸೀಟಿಗೆ ಶುಲ್ಕ ಪಾವತಿಸಿ, ಕಾಲೇಜಿನಲ್ಲಿ ಪ್ರವೇಶ ಪಡೆದಿರುವ ಮತ್ತು ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆ ಸುತ್ತಿನಲ್ಲಿ ಇನ್ನೂ ಉತ್ತಮ ಸೀಟಿಗೆ ಸೇರಲು ಆಸಕ್ತಿ ಇರುವವರು ತಮ್ಮ ಭಾಗವಹಿಸುವಿಕೆಯನ್ನು ದೃಢೀಕರಿಸಲು ಫೆ.23ರೊಳಗೆ ಮತ್ತೊಮ್ಮೆ 500 ರೂ. ಪಾವತಿಸಿ ಹೊಸದಾಗಿ ನೋಂದಣಿ ಮಾಡಿಕೊಳ್ಳಬೇಕು. ಹೈಕೋರ್ಟ್ ಆದೇಶದಂತೆ ಈ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

    ಮಾಪ್ ಅಪ್ ಸುತ್ತಿನಲ್ಲಿ ಹಂಚಿಕೆಯಾಗಿರುವ ಸೀಟು ಕೊನೆಯ ಇಚ್ಛೆ/ಆಯ್ಕೆ ಆಗಿರುತ್ತದೆ. ಅಭ್ಯರ್ಥಿಗಳು ಹೊಸದಾಗಿ ದಾಖಲಿಸುವ ಮೇಲ್ಪಟ್ಟ ಆದ್ಯತೆಗಳಲ್ಲಿ ಯಾವುದೇ ಸೀಟುಗಳು ಹಂಚಿಕೆಯಾದಲ್ಲಿ, ಹಂಚಿಕೆಯಾಗುವ ಸೀಟಿಗೆ ಪ್ರವೇಶ ಪಡೆಯಬೇಕು ಮತ್ತು ಮಾಪ್ ಅಪ್ ಸುತ್ತಿನ ಪ್ರಸ್ತುತ ಹೊಂದಿರುವ ಸೀಟು ತಂತಾನೆ ರದ್ದಾಗುತ್ತದೆ. ಒಂದು ವೇಳೆ ಯಾವುದೇ ಸೀಟು ಹಂಚಿಕೆಯಾಗದೆ ಇದ್ದಲ್ಲಿ, ಮಾಪ್ ಅಪ್ ಸುತ್ತಿನಲ್ಲಿ ಹಂಚಿಕೆಯಾದ ಸೀಟೇ ಉಳಿಯುತ್ತದೆ ಎಂದು ಹೇಳಿದ್ದಾರೆ.

    ಅಭ್ಯರ್ಥಿಗಳು ಇಚ್ಛೆ/ಆಯ್ಕೆಗಳನ್ನು ಹೊಸದಾಗಿ ಆದ್ಯತಾ ಕ್ರಮದಲ್ಲಿ ದಾಖಲಿಸಬೇಕು. ಈ ಸಂದರ್ಭದಲ್ಲಿ ಶುಲ್ಕದ ವಿನ್ಯಾಸವನ್ನು ಕಡ್ಡಾಯವಾಗಿ ನೋಡಬೇಕು. ಸೀಟು ಹಂಚಿಕೆ ಫಲಿತಾಂಶದ ನಂತರ ಸೀಟು ರದ್ದುಪಡಿಸಿಕೊಂಡರೆ ವಿಧಿಸುವ ದಂಡದ ವಿವರಗಳನ್ನು ಗಮನದಲ್ಲಿ ಇಟ್ಟುಕೊಂಡೇ ಇಚ್ಛೆ/ಆಯ್ಕೆಗಳನ್ನು ನಮೂದಿಸಬೇಕು ಎಂದು ಸಲಹೆ ನೀಡಿದ್ದಾರೆ.ಇದನ್ನೂ ಓದಿ: ಹಬ್ಬದ ಸಂಭ್ರಮದಲ್ಲಿ ಮಾರಕಾಸ್ತ್ರ ಹಿಡಿದು ಮಧ್ಯರಾತ್ರಿ ವ್ಹೀಲಿಂಗ್ ಮಾಡಿದ್ದ ಪುಂಡರು ಅರೆಸ್ಟ್

     

  • ಸಿಇಟಿ ಪರೀಕ್ಷೆ ಪಠ್ಯಕ್ರಮ ಪ್ರಕಟಿಸಿದ ಕೆಇಎ

    ಸಿಇಟಿ ಪರೀಕ್ಷೆ ಪಠ್ಯಕ್ರಮ ಪ್ರಕಟಿಸಿದ ಕೆಇಎ

    ಬೆಂಗಳೂರು: 2025ನೇ ಸಾಲಿನ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (CET) ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination Authority) ಪಠ್ಯಕ್ರಮವನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.ಇದನ್ನೂ ಓದಿ: ಕೇಂದ್ರದಿಂದ ಬಡವರಿಗೆ ಮನೆ ಕಟ್ಟಿಕೊಡುವ ಟಾರ್ಗೆಟ್ ಡಬಲ್, ಅನುದಾನದ ಸದ್ಬಳಕೆಯಾಗ್ತಿಲ್ಲ – ಚೌಹಾಣ್ ಬೇಸರ

    ಈ ಕುರಿತು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ, ಪ್ರಥಮ ಮತ್ತು ದ್ವಿತೀಯ ಪಿಯುಸಿಯ ಭೌತವಿಜ್ಞಾನ, ರಸಾಯನ ವಿಜ್ಞಾನ, ಗಣಿತ ಮತ್ತು ಜೀವವಿಜ್ಞಾನ ವಿಷಯಗಳ ಪಠ್ಯಕ್ರಮವನ್ನು ವೆಬ್‌ಸೈಟ್‌ನಲ್ಲಿ ಹಾಕಿದ್ದು, ಅದನ್ನು ನೋಡಿಕೊಂಡೇ ಪರೀಕ್ಷೆಗೆ ತಯಾರಿ ನಡೆಸಿಕೊಳ್ಳಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಎನ್‌ಸಿಆರ್‌ಟಿಸಿ ಪಠ್ಯಕ್ರಮ ಹಾಗೂ ಶಾಲಾ ಶಿಕ್ಷಣ (PUC) ಇಲಾಖೆ ಪ್ರಕಟಿಸಿರುವ ಪಠ್ಯ ಪುಸ್ತಕಗಳನ್ನು ಆಧಾರವಾಗಿ ಇಟ್ಟುಕೊಂಡೇ ಈ ಪಠ್ಯಕ್ರಮ ರಚಿಸಲಾಗಿದೆ. ಇದನ್ನು ಪಿಯು ಕಾಲೇಜುಗಳ ವಿಷಯ ತಜ್ಞರಿಂದಲೂ ಪರಿಶೀಲನೆ ಮಾಡಿಸಲಾಗಿದೆ ಎಂದು ವಿವರಿಸಿದ್ದಾರೆ.ಇದನ್ನೂ ಓದಿ: ಸೈಫ್‌ ಅಲಿ ಖಾನ್‌ ಚಾಕು ಇರಿತ ಕೇಸ್‌ – ಶಂಕಿತ ದಾಳಿಕೋರ ಅರೆಸ್ಟ್‌

  • ಕೆಇಎನಲ್ಲಿ ಸೀಟ್ ಬ್ಲಾಕಿಂಗ್ ಅಕ್ರಮ – ಸರ್ಕಾರವೇ ತನಿಖೆಗೆ ಸೂಚನೆ ನೀಡಿದೆ: ಸುಧಾಕರ್

    ಕೆಇಎನಲ್ಲಿ ಸೀಟ್ ಬ್ಲಾಕಿಂಗ್ ಅಕ್ರಮ – ಸರ್ಕಾರವೇ ತನಿಖೆಗೆ ಸೂಚನೆ ನೀಡಿದೆ: ಸುಧಾಕರ್

    ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ (Karnataka Examination Authority) ಸೀಟ್ ಬ್ಲಾಕಿಂಗ್ ಅಕ್ರಮ (Seat Blocking) ಆಗಿರುವುದು ಸತ್ಯ. ಅಕ್ರಮ ತನಿಖೆಗೆ ಸರ್ಕಾರವೇ ಕೆಇಎಗೆ (KEA) ಸೂಚನೆ ನೀಡಿ ಪೊಲೀಸರಿಗೆ ದೂರು ನೀಡುವಂತೆ ತಿಳಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.

    ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಸೀಟ್ ಬ್ಲಾಕ್ ಅಕ್ರಮ ಆಗಿರುವ ಬಗ್ಗೆ ಬೆಂಗಳೂರಿನಲ್ಲಿ (Bengaluru) ಪ್ರತಿಕ್ರಿಯೆ ನೀಡಿದ ಅವರು, ಸೀಟ್ ಬ್ಲಾಕ್ ಬಗ್ಗೆ ನಮ್ಮ ಗಮನಕ್ಕೆ ಬಂದ ಕೂಡಲೇ ಅಧಿಕಾರಿಗಳಿಂದ ಮಾಹಿತಿ ಪಡೆದು ದೂರು ನೀಡಿದ್ದೇವೆ. ಯಾವ ರೀತಿ ಅಕ್ರಮ ಆಗಿದೆ? ಈ ವರ್ಷ ಆಗಿದೆಯಾ? ಕಳೆದ ವರ್ಷ ಆಗಿದೆಯಾ? ಎಲ್ಲದರ ಬಗ್ಗೆ ತನಿಖೆಗೆ ಸೂಚನೆ ನೀಡಿದ್ದೇವೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ನಾನಿ ನಿರ್ಮಾಣದ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟ ಮೆಗಾಸ್ಟಾರ್

    ಕಳೆದ ಎರಡು ವರ್ಷಗಳ ಐಪಿ ಅಡ್ರೆಸ್‌ನಲ್ಲಿ ಹೇಗೆ ಆಪ್ಶನ್ ಎಂಟ್ರಿ ಮಾಡಿದ್ದಾರೆ ಎಂದು ತನಿಖೆ ಆಗುತ್ತಿದೆ. ಸೀಟು ಪಡೆಯದ ವಿದ್ಯಾರ್ಥಿಗಳಿಗೆ ನೋಟಿಸ್ ನೀಡಲಾಗಿದೆ. ಕೆಲವು ಕಾಲೇಜುಗಳಲ್ಲಿ ಒಂದೇ ಐಪಿ ಅಡ್ರೆಸ್‌ನಿಂದ ಆಪ್ಶನ್ ಎಂಟ್ರಿ ಆಗಿರುವುದು ಗಮನಕ್ಕೆ ಬಂದಿದೆ. ನಾವೇ ಪ್ರಾಥಮಿಕ ತನಿಖೆ ಮಾಡಿ, ಮಾಹಿತಿ ಸಂಗ್ರಹ ಮಾಡಿ ಪೊಲೀಸರಿಗೆ ತನಿಖೆ ಮಾಡಲು ದೂರು ಕೊಟ್ಟಿದ್ದೇವೆ ಎಂದಿದ್ದಾರೆ.

    ಈ ಅಕ್ರಮ ಜಾಲದ ಪತ್ತೆಗೆ ದೂರು ನೀಡಲಾಗಿದ್ದು, ಪೊಲೀಸರು 10 ಜನರನ್ನು ಬಂಧಿಸಿದ್ದಾರೆ. ಇದಕ್ಕೆ ಯಾರು ಕಿಂಗ್ ಪಿನ್ ಎಂದು ಪತ್ತೆ ಹಚ್ಚಬೇಕು? ಹೆಚ್ಚಿನ ತನಿಖೆ ಆಗುತ್ತಿದೆ. ವರದಿ ಬಂದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುತ್ತೀವಿ. ಕೆಇಎ ಬೋರ್ಡ್ ಇದರಲ್ಲಿ ಶಾಮೀಲು ಆಗಿಲ್ಲ. ಅಲ್ಲಿ ಕೆಲಸ ಮಾಡುತ್ತಿರುವ ಅವಿನಾಶ್ ಎಂಬ ಹುಡುಗ ಮಾಹಿತಿ ಕೊಟ್ಟಿದ್ದಾನೆ. ಇದರ ಬಗ್ಗೆ ತನಿಖೆ ಆಗಬೇಕು. ಪೊಲೀಸರು ಕೊಡುವ ವರದಿ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೀಟ್ ಬ್ಲಾಕ್‌ನಿಂದ ಅನ್ಯಾಯವಾಗಿದೆ. ಇದನ್ನು ನಿಷ್ಪಕ್ಷಪಾತವಾಗಿ ತನಿಖೆ ಮಾಡುತ್ತೇವೆ. ಕಾಲೇಜುಗಳ ಮೇಲೆ ಕ್ರಮಕ್ಕೆ ಪೊಲೀಸರು ವರದಿ ಕೊಡಲಿ. ಪೊಲೀಸರು ವರದಿ ಕೊಟ್ಟ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಅಪರಿಚಿತ ವಾಹನ ಹಿಟ್ ಅಂಡ್ ರನ್ – ತಾಯಿ ಸಾವು, ಮಗು ಸ್ಥಿತಿ ಗಂಭೀರ

  • ಬಿ.ಎಸ್ಸಿ ಅಗ್ರಿ, ವೆಟರ್ನರಿ ಹೊಸ ಕಾಲೇಜು ಆರಂಭ ಆಪ್ಷನ್ ಎಂಟ್ರಿಗೆ ನ.12ರವರೆಗೆ ಅವಕಾಶ – ಕೆಇಎ

    ಬಿ.ಎಸ್ಸಿ ಅಗ್ರಿ, ವೆಟರ್ನರಿ ಹೊಸ ಕಾಲೇಜು ಆರಂಭ ಆಪ್ಷನ್ ಎಂಟ್ರಿಗೆ ನ.12ರವರೆಗೆ ಅವಕಾಶ – ಕೆಇಎ

    ಬೆಂಗಳೂರು: ಬಿ.ಎಸ್ಸಿ ಕೃಷಿ ಮತ್ತು ಪಶು ವೈದ್ಯಕೀಯ ಕೋರ್ಸುಗಳಿಗೆ ಹೊಸದಾಗಿ 120ಕ್ಕೂ ಹೆಚ್ಚು ಸೀಟು ಲಭ್ಯವಿರುವುದರಿಂದ, ಆಸಕ್ತ ಅರ್ಹ ವಿದ್ಯಾರ್ಥಿಗಳಿಗೆ ಆಪ್ಷನ್ ಎಂಟ್ರಿ ದಾಖಲಿಸಲು ನ.12ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ತಿಳಿಸಿದೆ.

    ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಮಾತನಾಡಿ, ಬಿಎಸ್ಸಿ ಅಗ್ರಿಕಲ್ಚರ್‌ಗೆ ಹೊಸದಾಗಿ 72 ಸೀಟುಗಳು ಹಾಗೂ ವೆಟರ್ನರಿ ಕೋರ್ಸ್ಗೆ ಸುಮಾರು 50 ಸೀಟುಗಳು ಲಭ್ಯ ಇವೆ. ಅಲ್ಲದೆ ಹಂಚಿಕೆಯಾಗದೆ ಉಳಿದ ಸೀಟುಗಳೂ ಇದ್ದು, ಅವುಗಳನ್ನೂ ಸೇರಿಸಿ ಹಂಚಿಕೆ ಮಾಡಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗಾಗಿ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರಲ್ಲ; ಹೊಸ ಷರತ್ತು ಮುಂದಿಟ್ಟ ಬಿಸಿಸಿಐ

    ರಾಮನಗರ ಜಿಲ್ಲೆಯ ಕನಕಪುರದಲ್ಲಿ ಎಸ್.ಕರಿಯಪ್ಪ ಕೃಷಿ ಕಾಲೇಜು ಹಾಗೂ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಮಾಯಸಂದ್ರದಲ್ಲಿ ಆದಿಚುಂಚನಗಿರಿ ಕೃಷಿ ಕಾಲೇಜು ಹಾಗೂ ಬೆಳಗಾವಿಯ ಅಥಣಿಯಲ್ಲಿ ಬಾಬುರಾವ್ ದೇಶಪಾಂಡೆ ಪಶು ವೈದ್ಯಕೀಯ ಕಾಲೇಜು ಆರಂಭಿಸಲು ಸರ್ಕಾರ ತೀರ್ಮಾನಿಸಿ, ಸೀಟ್ ಮ್ಯಾಟ್ರಿಕ್ಸ್ ಕೊಟ್ಟಿದೆ. ಆ ಪ್ರಕಾರ ಸೀಟು ಹಂಚಿಕೆ ಮಾಡಲಾಗುವುದು ಎಂದು ವಿವರಿಸಿದರು.

    ಪ್ರಾಧಿಕಾರದಿಂದ ಯಾವುದೇ ಕೋರ್ಸಿಗೆ ಸೀಟು ಹಂಚಿಕೆಯಾಗದ ಅಭ್ಯರ್ಥಿಗಳು ಮಾತ್ರ ಈ ಸುತ್ತಿನಲ್ಲಿ ಭಾಗವಹಿಸಬಹುದು. ಕಾಲೇಜುವಾರು, ಕೋರ್ಸುವಾರು ಮತ್ತು ಪ್ರವರ್ಗವಾರು ಸೀಟ್ ಮ್ಯಾಟ್ರಿಕ್ಸ್‌ನ್ನು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗಿದೆ ಎಂದು ತಿಳಿಸಿದರು.

    ಆಪ್ಷನ್ ಎಂಟ್ರಿ ಮಾಡಲು ನ.8ರ ಸಂಜೆ 6ರಿಂದ ನ.12ರ ಬೆಳಿಗ್ಗೆ 11ರವರೆಗೆ ಅವಕಾಶವಿರುತ್ತದೆ. ವೆರಿಫಿಕೇಶನ್ ಸ್ಲಿಪ್‌ನ್ನು ನ.11ರ ಸಂಜೆ 4ಕ್ಕೆ ಡೌನ್ಲೋಡ್ ಮಾಡಿಕೊಳ್ಳಬಹುದು. ನ.12ರ ಸಂಜೆ 5ಕ್ಕೆ ಸೀಟು ಹಂಚಿಕೆ ಫಲಿತಾಂಶ ಪ್ರಕಟಣೆ ಆಗುತ್ತದೆ. ಸೀಟು ಹಂಚಿಕೆಯಾದ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಸಲು ನ.13 ಮತ್ತು 14ರಂದು ಅವಕಾಶವಿರುತ್ತದೆ. ಅಭ್ಯರ್ಥಿಗಳು ನ.14ರಂದು ಕಾಲೇಜಿಗೆ ವರದಿ ಮಾಡಿಕೊಳ್ಳಬೇಕು ಎಂದು ವಿವರಿಸಲಾಗಿದೆ.ಇದನ್ನೂ ಓದಿ: ಸಂಡೂರು ಅಖಾಡದಲ್ಲಿ ಪ್ರಚಾರ – 15 ದಿನದಲ್ಲಿ ಸಿದ್ದರಾಮಯ್ಯ ರಾಜೀನಾಮೆ : ಬಿಎಸ್‌ವೈ

    ನರ್ಸಿಂಗ್ ಅವಕಾಶ:
    ನರ್ಸಿಂಗ್ ಕೋರ್ಸ್‌ಗೆ ಆಪ್ಷನ್ಸ್ ದಾಖಲಿಸಲು ಮತ್ತೊಮ್ಮೆ ಅವಕಾಶ ನೀಡಲಾಗಿದೆ. ಯುಜಿ ಆಯುಷ್ ಕೋರ್ಸ್ ಸ್ಟ್ರೇ ವೇಕೆನ್ಸಿ ಸುತ್ತಿನಲ್ಲಿ ಭಾಗವಹಿಸಲು ಇಚ್ಛಿಸುವವರು ಹೊಸದಾಗಿಯೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ವಿವರಗಳಿಗೆ ವೆಬ್‌ಸೈಟ್‌ಗೆ ಭೇಟಿ ನೀಡಿ ಎಂದು ತಿಳಿಸಿದ್ದಾರೆ.

  • ಅಕ್ಟೋಬರ್ 3ಕ್ಕೆ ಪಿಎಸ್‌ಐ ಪರೀಕ್ಷೆಗೆ ಮರು ದಿನಾಂಕ ನಿಗದಿ- ಕೆಇಎ

    ಅಕ್ಟೋಬರ್ 3ಕ್ಕೆ ಪಿಎಸ್‌ಐ ಪರೀಕ್ಷೆಗೆ ಮರು ದಿನಾಂಕ ನಿಗದಿ- ಕೆಇಎ

    ಬೆಂಗಳೂರು: ಯುಪಿಎಸ್‌ಸಿ (UPSC) ಪರೀಕ್ಷೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಒತ್ತಾಯದಿಂದ ಎರಡು ಬಾರಿ ಮುಂದೂಡಿಕೆ ಆಗಿದ್ದ 402 ಪಿಎಸ್‌ಐ (PSI) ಹುದ್ದೆಗಳ ಪರೀಕ್ಷೆಗೆ ಹೊಸ ದಿನಾಂಕ ನಿಗದಿಯಾಗಿದೆ. ಅ.3 ರಂದು ಪರೀಕ್ಷೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination Authority) ದಿನಾಂಕ ನಿಗದಿ ಮಾಡಿದೆ. ಬೆಳಗ್ಗೆ 10:30 ರಿಂದ 12:00 ರ ವೆರೆಗೆ ಪತ್ರಿಕೆ-1 ಹಾಗೂ ಮಧ್ಯಾಹ್ನ 12:30 ರಿಂದ 02:00 ರವರೆಗೆ ಪತ್ರಿಕೆ-2 ಪರೀಕ್ಷೆ ನಡೆಯಲಿದೆ ಎಂದು ಕೆಇಎ (KEA) ತಿಳಿಸಿದೆ.ಇದನ್ನೂ ಓದಿ: ದರ್ಶನ್ & ಗ್ಯಾಂಗ್‌ಗೆ ನ್ಯಾಯಾಂಗ ಬಂಧನ ಅವಧಿ ಮತ್ತೆ ವಿಸ್ತರಣೆ – ಇನ್ನೂ 14 ದಿನ ಜೈಲೇ ಗತಿ

    ಪಿಎಸ್‌ಐ ಪರೀಕ್ಷೆ ಜೊತೆಗೆ ವಿವಿಧ ಇಲಾಖೆಗಳ ಪರೀಕ್ಷೆಗಳಿಗೂ ಪರಿಷ್ಕೃತ ವೇಳಾಪಟ್ಟಿಯನ್ನು ಕೆಇಎ ಪ್ರಕಟ ಮಾಡಿದೆ. ಗ್ರಾಮ ಆಡಳಿತಾಧಿಕಾರಿಗಳು ಮತ್ತು ಜಿಟಿಟಿಸಿಯ (GTTC) ವಿವಿಧ ಹುದ್ದೆಗಳಿಗೆ ಸೆ.29 ಮತ್ತು ಅ.26 ಹಾಗೂ ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ಅ.7ರಂದು ಪರೀಕ್ಷೆ ನಡೆಯಲಿದೆ.

    ಕೆ-ಸೆಟ್ (K-Set) ಪರೀಕ್ಷೆ ಸೇರಿದಂತೆ ರಾಯಚೂರು ವಿವಿ (Raichuru) ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನ.24 ರಂದು ಪರೀಕ್ಷೆಗಳು ನಡೆಯಲಿವೆ ಎಂದು ಕೆಇಎ ಮಾಹಿತಿ ನೀಡಿದೆ.ಇದನ್ನೂ ಓದಿ: ಟೊಮೆಟೋ ಬೆಳೆ ಲಾಸ್: ಸಾಲ ತೀರಿಸಲು ಲ್ಯಾಪ್‌ಟಾಪ್ ಕಳ್ಳತನ ಮಾಡಿದ್ದ ಟೆಕ್ಕಿ ಅರೆಸ್ಟ್

  • ಸಿಇಟಿ, ನೀಟ್ 2ನೇ ಸುತ್ತಿನ ಸೀಟು ಹಂಚಿಕೆಗೆ ತಯಾರಿ ಆರಂಭ- ಕೆಇಎ

    ಸಿಇಟಿ, ನೀಟ್ 2ನೇ ಸುತ್ತಿನ ಸೀಟು ಹಂಚಿಕೆಗೆ ತಯಾರಿ ಆರಂಭ- ಕೆಇಎ

    ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆಗೆ ‘ಆಯ್ಕೆ’ಗಳನ್ನು ಬದಲಿಸಿಕೊಳ್ಳಲು, ತೆಗೆದುಹಾಕಲು ಹಾಗೂ ಕ್ರಮಾಂಕ ಬದಲಿಸಿಕೊಳ್ಳಲು ಇದುವರೆಗೂ ನೀಡಿದ್ದ ಅವಕಾಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination Authority) ಶುಕ್ರವಾರ ಕೊನೆಗೊಳಿಸಿದೆ.ಇದನ್ನೂ ಓದಿ: ನಾಗಮಂಗಲ ಗಲಭೆ ಬೆನ್ನಲ್ಲೇ ಗುಪ್ತಚರ ವಿಭಾಗದ ಎಡಿಜಿಪಿ ಶರತ್‌ ಚಂದ್ರ ಎತ್ತಂಗಡಿ

     ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ (H.Prasanna) ಮಾತನಾಡಿ, ಈ ಸಲುವಾಗಿ ತೆರೆದಿದ್ದ ಕೆಇಎ (KEA) ಪೋರ್ಟಲ್ ಅನ್ನು ಸ್ಥಗಿತಗೊಳಿಸಿದ್ದು, ಯಾವ ಬದಲಾವಣೆಗೂ ಅವಕಾಶ ಇರುವುದಿಲ್ಲ. ಈ ಮೂಲಕ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಗೆ ಪೂರ್ವ ತಯಾರಿ ಆರಂಭಿಸಿದಂತಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಇದನ್ನೂ ಓದಿ: ರಾಜ್ಯದಲ್ಲಿರೋದು ತಾಲಿಬಾನ್ ಸರ್ಕಾರ- ಹಿಂದೂ ಯುವಕರ ಮೇಲೆ ಕೇಸ್ ದಾಖಲಿಸಿದ್ದಕ್ಕೆ ಅಶೋಕ್ ಕಿಡಿ

  • ಸಿಇಟಿ, ನೀಟ್ ಆಯ್ಕೆ ಬದಲಾವಣೆಗೆ ಮತ್ತಷ್ಟು ದಿನ ಅವಕಾಶ- ಕೆಇಎ

    ಸಿಇಟಿ, ನೀಟ್ ಆಯ್ಕೆ ಬದಲಾವಣೆಗೆ ಮತ್ತಷ್ಟು ದಿನ ಅವಕಾಶ- ಕೆಇಎ

    ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆಗೆ ‘ಆಯ್ಕೆ’ಗಳನ್ನು ಬದಲಿಸಿಕೊಳ್ಳಲು, ತೆಗೆದುಹಾಕಲು, ಕ್ರಮಾಂಕ ಬದಲಿಸಿಕೊಳ್ಳಲು ಮತ್ತಷ್ಟು ದಿನಗಳ ಅವಕಾಶವಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination Authority) ಮುಂದಿನ ಆದೇಶದವರೆಗೂ ಅವಕಾಶ ನೀಡಿದೆ.ಇದನ್ನೂ ಓದಿ: ಮೋದಿ ರ‍್ಯಾಲಿ ವೇಳೆ ಸ್ಫೋಟ ಪ್ರಕರಣ – ನಾಲ್ವರು ಆರೋಪಿಗಳ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಬದಲಿಸಿದ ಪಾಟ್ನಾ ಹೈಕೋರ್ಟ್

    ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ (H Prasanna) ಮಾತನಾಡಿ, ಈ ಸಲುವಾಗಿ ಕೆಇಎ (KEA) ಪೋರ್ಟಲ್ ತೆರೆದಿರುತ್ತದೆ. ವಿದ್ಯಾರ್ಥಿಗಳು ತಮ್ಮ ಪೋಷಕರ ಜೊತೆ ಕುಳಿತು, ಆಯ್ಕೆಗಳನ್ನು ಬದಲಿಸಿಕೊಳ್ಳುವ ಅಥವಾ ತೆಗೆದು ಹಾಕುವ ಕೆಲಸವನ್ನು ಮಾಡಿಕೊಳ್ಳಬಹುದು. ಎಚ್ಚರಿಕೆಯಿಂದಲೇ ಈ ಕೆಲಸ ಮಾಡಿ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಇದನ್ನೂ ಓದಿ: ವಿಶ್ವದ ಎಲ್ಲ ಸಾಧನಗಳಲ್ಲಿ ಭಾರತ ನಿರ್ಮಿತ ಚಿಪ್ ಇರಬೇಕೆನ್ನುವುದು ನಮ್ಮ ಕನಸು: ಮೋದಿ

  • ಸಿಇಟಿ-ನೀಟ್ ಚಾಯ್ಸ್ ದಾಖಲು ಸೆ.4ರ ಮಧ್ಯಾಹ್ನ 12ಗಂಟೆಗೆ ಕೊನೆ – ಕೆಇಎ

    ಸಿಇಟಿ-ನೀಟ್ ಚಾಯ್ಸ್ ದಾಖಲು ಸೆ.4ರ ಮಧ್ಯಾಹ್ನ 12ಗಂಟೆಗೆ ಕೊನೆ – ಕೆಇಎ

    ಬೆಂಗಳೂರು : ಯುಜಿಸಿಇಟಿ- ನೀಟ್ (UGCET-NEET) ಕೋರ್ಸ್ ಗಳಲ್ಲಿ ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿದೆ. ಸುಮಾರು 15 ಸಾವಿರ ಅಭ್ಯರ್ಥಿಗಳು ಯಾವ ಚಾಯ್ಸ್ ಗಳನ್ನು ದಾಖಲು ಮಾಡಲಿಲ್ಲ. ಈ ಕಾರಣ ಅವರಿಗೆ ಅನುಕೂಲ ಆಗಲಿಯೆಂದು ಚಾಯ್ಸ್ ದಾಖಲು ದಿನಾಂಕವನ್ನು ಸೆ.4ರ ಮಧ್ಯಾಹ್ನ 12ಗಂಟೆವರೆಗೆ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.

    ಚಾಯ್ಸ್ ದಾಖಲಿಗೆ ಸೆ.3ರ ರಾತ್ರಿ 12ಗಂಟೆವರೆಗೂ ಅವಕಾಶ ಇತ್ತು. ಅದನ್ನು ವಿಸ್ತರಿಸಲಾಗಿದೆ. ಹಾಗೆಯೇ ಶುಲ್ಕ ಪಾವತಿಗೆ ನಾಳೆ ಸಂಜೆ 4 ಗಂಟೆವರೆಗೆ ಅವಕಾಶ ಇರಲಿದೆ. ನಿಗದಿತ ಅವಧಿಯೊಳಗೆ ಚಾಯ್ಸ್ ದಾಖಲು ಮಾಡಿಕೊಳ್ಳದಿದ್ದರೆ ಅಂತಹ ಅಭ್ಯರ್ಥಿಗಳ ಸೀಟು ರದ್ದಾಗಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚೆನ್ನೈ ಕಾರ್ಪೊರೇಷನ್ ಸಭೆಯಲ್ಲಿ ಡಿಕೆ ಶಿವಕುಮಾರ್ ಭಾಗಿ

    ಅಭ್ಯರ್ಥಿಗಳು ಕೊನೆ ದಿನಾಂಕದವರೆಗೂ ಕಾಯದೇ ಚಾಯ್ಸ್ ದಾಖಲು ಮಾಡಿ, ನಂತರದ ಪ್ರವೇಶ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದ್ದಾರೆ. ಶುಲ್ಕ ಪಾವತಿ ನಂತರ ಆದೇಶ ಪತ್ರ ಡೌನ್‌ಲೋಡ್ ಮಾಡಿಕೊಂಡು ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು ಎಂದು ಹೇಳಿದರು. ಇದನ್ನೂ ಓದಿ: ಮಾಜಿ ಆಯುಕ್ತ ಅಮಾನತಿನಿಂದ ಮುಡಾ ನಿರ್ಣಯ ತಪ್ಪೆಂದು ಸಾಬೀತು; ಈಗಲಾದ್ರೂ ಸಿಎಂ ರಾಜೀನಾಮೆ ಕೊಡಲಿ: ಎನ್.ರವಿಕುಮಾರ್

    ಇವತ್ತಿನವರೆಗೂ 92 ಸಾವಿರ ಮಂದಿ ತಮ್ಮ ಚಾಯ್ಸ್ ದಾಖಲು ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಗ್ರೀನ್ ಸಿಗ್ನಲ್ – ಷರತ್ತುಗಳು ಅನ್ವಯ

  • ಸೆಪ್ಟೆಂಬರ್ 22ಕ್ಕೆ ಪಿಎಸ್‌ಐ ಪರೀಕ್ಷೆ – 66,000 ಮಂದಿ ಅರ್ಜಿ ಸಲ್ಲಿಕೆ

    ಸೆಪ್ಟೆಂಬರ್ 22ಕ್ಕೆ ಪಿಎಸ್‌ಐ ಪರೀಕ್ಷೆ – 66,000 ಮಂದಿ ಅರ್ಜಿ ಸಲ್ಲಿಕೆ

    ಬೆಂಗಳೂರು: ಸೆಪ್ಟೆಂಬರ್ 22ಕ್ಕೆ ಪಿಎಸ್‌ಐ ಪರೀಕ್ಷೆ ನಡೆಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(Karnataka Examination Authority-KEA)) ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ.

    402 ಪೊಲೀಸ್ ಸಬ್ ಇನ್ಸ್ಪೆಕ್ಟರ್(Police Sub-Inspector-PSI) ಹುದ್ದೆಗಳಿಗೆ ನಡೆಯಲಿರುವ ಪರೀಕ್ಷೆಗೆ ಒಟ್ಟು 66,000 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಪರೀಕ್ಷೆಗೆ ಒಂದು ವಾರ ಮೊದಲು ಪ್ರವೇಶ ಪತ್ರ ಬಿಡುಗಡೆ ಮಾಡಲಾಗುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ಜೈಲಿನಲ್ಲಿ ಬೀಡಿ, ಸಿಗರೇಟಿಗಾಗಿ ಕೈದಿಗಳ ಪ್ರತಿಭಟನೆ

    ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ಕನ್ನಡ ಕಡ್ಡಾಯ ಪರೀಕ್ಷೆ ಸೆ.29ರಂದು ನಡೆಯಲಿದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮಾತ್ರ ಅಕ್ಟೋಬರ್ 27ಕ್ಕೆ ನಡೆಯುವ ಪ್ರಮುಖ ಪರೀಕ್ಷೆಗೆ ಅರ್ಹತೆ ಪಡೆಯಲಿದ್ದಾರೆ. 1000 VAO ಹುದ್ದೆಗಳಿಗೆ 5.7 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದು ಈ ಪರೀಕ್ಷೆಗೂ ತಯಾರಿ‌ ನಡೆಸಲಾಗಿದೆ‌.

    UGNEET24 ಸೀಟು ಪಡೆದ ಕೆಲವು ಅಭ್ಯರ್ಥಿಗಳು ಯೂನಿಯನ್ ಬ್ಯಾಂಕಿನ‌ ಚಲನ್‌ ಡೌನ್‌ಲೋಡ್ ಮಾಡಿಕೊಂಡು ಶುಲ್ಕ ಪಾವತಿಸದೇ ಇದ್ದರೆ ಅಂತಹವರು ಅದೇ ಬ್ಯಾಂಕಿನಲ್ಲಿ ಹಣ ಕಟ್ಟಬಹುದು. ಇತರ ಬ್ಯಾಂಕ್ ಗಳ ಚಲನ್ ಡೌನ್‌ಲೋಡ್ ಮಾಡಿಯೂ ಪಾವತಿಸಬಹುದು. ಗೊಂದಲ ಬೇಡ ಅಂತಹವರಿಗೆಲ್ಲರಿಗೂ ಪ್ರವೇಶ ಪತ್ರ ಡೌನ್‌ಲೋಡ್ ಆಗುತ್ತದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.  ಇದನ್ನೂ ಓದಿ: ರಾಯರ ಆರಾಧನೆಗೆ ಗುರುವಾರ ಬ್ರೇಕ್ ಕೊಡಿ ಅಂದ್ರೆ ಹೇಗಿರುತ್ತೆ? – ಜೋಶಿ