Tag: Karnataka Examination Authority

  • ವೈದ್ಯಕೀಯ 3ನೇ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶ ಪ್ರಕಟ – ಕೆಇಎ

    ವೈದ್ಯಕೀಯ 3ನೇ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶ ಪ್ರಕಟ – ಕೆಇಎ

    ಬೆಂಗಳೂರು: ಪ್ರಸಕ್ತ 2025ನೇ ಸಾಲಿನ ವೈದ್ಯಕೀಯ (Medical) ಮತ್ತು ದಂತವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಮೂರನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಶುಕ್ರವಾರ (ಅ.24) ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಇದಕ್ಕೆ ಯಾವುದೇ ಆಕ್ಷೇಪಣೆಯಿದ್ದಲ್ಲಿ ಅ.25ರ ಬೆಳಿಗ್ಗೆ 10ರೊಳಗೆ ಇಲ್ಲಿನ ಮಲ್ಲೇಶ್ವರದಲ್ಲಿರುವ ಕೆಇಎ ಕಚೇರಿಗೆ ಖುದ್ದು ಬಂದು ಬರೆದು ತಿಳಿಸಬಹುದು ಅಥವಾ keauthority-ka@nic.inಗೆ ಇ-ಮೇಲ್ ಕಳಿಸಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸೂಚಿಸಿದೆ.

    ಅಖಿಲ ಭಾರತ ಕೋಟಾ ಅಡಿಯ ಮೂರನೇ ಸುತ್ತಿನಲ್ಲಿ ಪಾಲ್ಗೊಂಡು ಸೀಟು ಪಡೆಯುವ ಜೊತೆಗೆ ಕೆಇಎ ಮೂರನೇ ಸುತ್ತಿನಲ್ಲಿಯೂ ಸೀಟು ಪಡೆದಿರುವ ಅಭ್ಯರ್ಥಿಗಳು ಕೆಇಎ ಸೀಟು ಉಳಿಸಿಕೊಳ್ಳಲು ಇಚ್ಛಿಸಿದಲ್ಲಿ ಅ.25ರ ಮಧ್ಯಾಹ್ನ 12:30ರೊಳಗೆ ಕೆಇಎ ಕಚೇರಿಗೆ ಬಂದು ಖುದ್ದು ಮನವಿ ನೀಡಬೇಕು ಅಥವಾ ತಾವು ಅರ್ಜಿಯಲ್ಲಿ ನಮೂದಿಸಿದ್ದ ಇ-ಮೇಲ್ ಐ.ಡಿ.ಯಿಂದ keauthority-ka@nic.iಗೆ ಇ-ಮೇಲ್ ಕಳಿಸಬೇಕು. ಇಲ್ಲದಿದ್ದರೆ ಅಂತಹ ಅಭ್ಯರ್ಥಿಗಳನ್ನು 3ನೇ ಸುತ್ತಿನ ಅಂತಿಮ ಸೀಟು ಹಂಚಿಕೆಗೆ ಪರಿಗಣಿಸುವುದಿಲ್ಲ ಹಾಗೂ ಪಾವತಿಸಿರುವ ವೈದ್ಯಕೀಯ ಕೋರ್ಸ್ ಶುಲ್ಕ ಠೇವಣಿಯನ್ನು ಹಿಂದಿರುಗಿಸುವುದಿಲ್ಲ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಮಾಧ್ಯಮ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಜೋರಾದ ಉತ್ತರಾಧಿಕಾರಿ ಕದನ – ಯತೀಂದ್ರ ವಿರುದ್ಧ ಶಿಸ್ತುಕ್ರಮವೋ? ಸಿಎಂ ಪುತ್ರ ಅಂತ ಎಚ್ಚರಿಕೆಯೋ?

    ಮೂರನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಅ.27ರ ಮಧ್ಯಾಹ್ನ 12ರ ನಂತರ ಪ್ರಕಟಿಸಲಾಗುತ್ತದೆ. ಸೀಟು ಪಡೆದವರು ಅ.30ರೊಳಗೆ ಉಳಿದ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಿ, ಸೀಟು ಖಾತರಿ ಚೀಟಿಯನ್ನು ಡೌನ್ ಲೋಡ್ ಮಾಡಿಕೊಂಡು ಆಯಾ ಕಾಲೇಜಿಗೆ ಎಲ್ಲ ಮೂಲದಾಖಲೆಗಳೊಂದಿಗೆ ತೆರಳಿ ಪ್ರವೇಶ ಪಡೆಯಬೇಕು ಎಂದು ತಿಳಿಸಲಾಗಿದೆ.

    ಈ ಸುತ್ತಿನಲ್ಲಿ ಅಂತಿಮ ಸೀಟು ಹಂಚಿಕೆಯಾದ ನಂತರ ಅದರ ರದ್ದತಿಗಾಗಿ ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ. ಹೀಗಾಗಿ, ಕಾಲೇಜಿಗೆ ಪ್ರವೇಶ ಪಡೆಯದಿದ್ದರೆ ಅಥವಾ ಸೀಟು ರದ್ದುಪಡಿಸಲು ಇಚ್ಛೆಪಟ್ಟರೆ ಅಥವಾ ಕಾಲೇಜಿಗೆ ಪ್ರವೇಶ ಪಡೆಯದಿದ್ದರೆ ಅಭ್ಯರ್ಥಿ ಪಾವತಿಸಿರುವ ವೈದ್ಯಕೀಯ ಕೋರ್ಸ್ ಶುಲ್ಕ ಠೇವಣಿಯನ್ನು ನಿಯಮದ ಪ್ರಕಾರ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಇದನ್ನೂ ಓದಿ: ಆಳಂದದಲ್ಲಿ 80 ರೂ.ಗೆ ವೋಟ್ ಡಿಲೀಟ್ ಸಾಕ್ಷಿ ಸಿಕ್ಕಿದೆ, ಚುನಾವಣಾ ಆಯೋಗ ಉತ್ತರಿಸಲಿ: ಪ್ರಿಯಾಂಕ್ ಖರ್ಗೆ, ಎಂ.ಬಿ ಪಾಟೀಲ್ ಆಗ್ರಹ

     

  • DCET-25: ಎರಡನೇ ಸುತ್ತಿನ ತಾತ್ಕಾಲಿಕ ಫಲಿತಾಂಶ ಪ್ರಕಟ – KEA

    DCET-25: ಎರಡನೇ ಸುತ್ತಿನ ತಾತ್ಕಾಲಿಕ ಫಲಿತಾಂಶ ಪ್ರಕಟ – KEA

    ಬೆಂಗಳೂರು: ಡಿಸಿಇಟಿ-25ರ (DCET) ಎರಡನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸೋಮವಾರ ಪ್ರಕಟಿಸಿದೆ.ಇದನ್ನೂ ಓದಿ: ಇಂದು ವಿಶ್ವ ಹುಲಿ ದಿನಾಚರಣೆ – ಚಾಮರಾಜನಗರ ಹುಲಿಗಳ ನಾಡಾಗಿದ್ದು ಹೇಗೆ?

    ಈ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ (H.Prasanna) ಅವರು ಹೇಳಿಕೆ ಬಿಡುಗಡೆಗೊಳಿಸಿದ್ದು, ಜು.29ರ ಮಧ್ಯಾಹ್ನ 3 ಗಂಟೆ ಬಳಿಕ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ಮೊದಲ ಮತ್ತು ಎರಡನೇ ಸುತ್ತಿನ ಕೌನ್ಸ್‌ಲಿಂಗ್‌ನಲ್ಲಿ ಒಟ್ಟು 12,282 ಮಂದಿಗೆ ಸೀಟು ಹಂಚಿಕೆ ಮಾಡಲಾಗಿದೆ ಎಂದಿದ್ದಾರೆ.

    ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶ ಹೊರಬಿದ್ದ ನಂತರ ಪ್ರವೇಶ ಪ್ರಕ್ರಿಯೆಯ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಟಿಬಿ ಡ್ಯಾಂನಿಂದ 1.24 ಲಕ್ಷ ಕ್ಯೂಸೆಕ್ ಹೊರಹರಿವು – ರಾಯರು ತಪ್ಪಸ್ಸು ಮಾಡಿದ್ದ ಜಪದ ಕಟ್ಟೆ ಜಲಾವೃತ

  • D-CET ಶುಲ್ಕ ಪಾವತಿಗೆ ದಿನಾಂಕ ವಿಸ್ತರಣೆ: KEA

    D-CET ಶುಲ್ಕ ಪಾವತಿಗೆ ದಿನಾಂಕ ವಿಸ್ತರಣೆ: KEA

    ಬೆಂಗಳೂರು: ಎರಡನೇ ವರ್ಷ ಅಥವಾ ಮೂರನೇ ಸೆಮಿಸ್ಟರ್‌ನ ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕೆ DCET-25 ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾದವರಿಗೆ ಶುಲ್ಕ ಪಾವತಿಸಿ ಪ್ರವೇಶ ಪಡೆಯಲು ಜು.22ರವರಗೆ ದಿನಾಂಕ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ (H.Prasanna) ತಿಳಿಸಿದ್ದಾರೆ.ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಭಾರೀ ಮಳೆ – ವರುಣಾರ್ಭಟಕ್ಕೆ ಭೂಕುಸಿತ, ಅಲ್ಲಲ್ಲಿ ಅವಾಂತರ

    ಜು.22ರಂದು ಬೆಳಿಗ್ಗೆ 11 ಗಂಟೆಯವರೆಗೆ ಆಯ್ಕೆಗಳನ್ನು ದಾಖಲಿಸಲು ಅವಕಾಶ ನೀಡಲಾಗಿದೆ. ಅದೇ ದಿನ ಮಧ್ಯಾಹ್ನ 2 ಗಂಟೆವರೆಗೆ ಶುಲ್ಕ ಪಾವತಿಗೆ, ಸಂಜೆ 5.30ರೊಳಗೆ ಸೀಟು ಖಾತರಿ ಚೀಟಿ ಡೌನ್‌ಲೋಡ್ ಮಾಡಿಕೊಂಡು ಕಾಲೇಜಿಗೆ ವರದಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂದಿದ್ದಾರೆ.

    ಆಯ್ಕೆ 1 ಮತ್ತು 2 ಮಾಡಿಕೊಂಡವರು ಮಾತ್ರ ಚಲನ್ ಡೌನ್‌ಲೋಡ್ ಮಾಡಿಕೊಂಡು ಶುಲ್ಕ ಪಾವತಿಸಬೇಕು. ಆಯ್ಕೆ-1 ದಾಖಲಿಸಿದವರು ಮಂಗಳವಾರವೇ ಕಾಲೇಜಿಗೆ ವರದಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.ಇದನ್ನೂ ಓದಿ: Breaking | ಉಪರಾಷ್ಟ್ರಪತಿ ಹುದ್ದೆಗೆ ಜಗದೀಪ್‌ ಧನಕರ್‌ ರಾಜೀನಾಮೆ

  • DCET ಜೂ.10ರಿಂದ 13ರವರೆಗೆ ದಾಖಲಾತಿ ಪರಿಶೀಲನೆ – KEA

    DCET ಜೂ.10ರಿಂದ 13ರವರೆಗೆ ದಾಖಲಾತಿ ಪರಿಶೀಲನೆ – KEA

    ಬೆಂಗಳೂರು: ಜೂ.10ರಿಂದ 13ರವರೆಗೆ ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಡಿಸಿಇಟಿ ರ‍್ಯಾಂಕ್ ಪಡೆದ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (Karnataka Examination Authority) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.ಇದನ್ನೂ ಓದಿ: Honeymoon Murder | ಕಾಂಟ್ರ್ಯಾಕ್ಟ್‌ ಕಿಲ್ಲರ್ಸ್‌.. ಫೋನ್‌ಕಾಲ್‌ನಲ್ಲೇ ಪಿನ್‌ ಟು ಪಿನ್‌ ಅಪ್ಡೇಟ್‌ – ಕೊಲೆ ರಹಸ್ಯ ಬಯಲಾಗಿದ್ದೇ ರೋಚಕ

    ಮೂರನೇ ಸೆಮಿಸ್ಟರ್ ಅಥವಾ ಎರಡನೇ ವರ್ಷದ ಇಂಜಿನಿಯರಿಂಗ್ ಕೋರ್ಸುಗಳ ನೇರ ಪ್ರವೇಶಾತಿಗೆ ಹಾಗೂ ಮೊದಲನೇ ವರ್ಷದ ಆರ್ಕಿಟೆಕ್ಚರ್ ಕೋರ್ಸಿಗೆ ಅರ್ಹತೆಯನ್ನು ಪಡೆಯುವುದಕ್ಕಾಗಿ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತದೆ. ದಾಖಲಾತಿ ಪರಿಶೀಲನೆ ನಡೆಯುವ 37 ಕಾಲೇಜುಗಳ ಪಟ್ಟಿಯನ್ನು ಕೆಇಎ (KEA) ವೆಬ್‌ಸೈಟ್‌ನಲ್ಲಿ ಪ್ರಕಟಿಸಿಸಲಾಗಿದೆ. ಅಭ್ಯರ್ಥಿಗಳು ಮುಂಗಡವಾಗಿ ದಿನಾಂಕ ನಿಗದಿ ಮಾಡಿಕೊಂಡು ತಮಗೆ ಹತ್ತಿರವಾಗುವ ಯಾವುದಾದರೊಂದು ಕಾಲೇಜಿಗೆ ಖುದ್ದು ಹೋಗಬೇಕು ಎಂದು ತಿಳಿಸಿದ್ದಾರೆ.

    ಆನ್‌ಲೈನ್ ಅರ್ಜಿ ಸಲ್ಲಿಸುವಾಗ ಕೋರಿರುವ ಕ್ಲೇಮುಗಳಿಗೆ ಪೂರಕವಾದ ಎಲ್ಲಾ ಶೈಕ್ಷಣಿಕ ಮೂಲ ದಾಖಲೆಗಳನ್ನು ಮತ್ತು ವಿಶೇಷ ಪ್ರವರ್ಗದ (ಎನ್‌ಸಿಸಿ, ಕ್ರೀಡೆ, ಸೈನಿಕರು, ಮಾಜಿ ಸೈನಿಕರು, ಸಿಎಪಿಎಫ್, ಮಾಜಿ-ಸಿಎಪಿಎಫ್ ಕ್ಲೇಮ್ ಮಾಡಿದ್ದಲ್ಲಿ ಮಾತ್ರ ಅರ್ಹತೆ) ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು ಎಂದು ವಿವರಿಸಿದ್ದಾರೆ.ಇದನ್ನೂ ಓದಿ: ಮುಂಬೈ ವಿಕ್ಟರಿ ಪರೇಡ್‌ ಉಲ್ಲೇಖಿಸಿ ಕಾಲ್ತುಳಿತಕ್ಕೆ ರಾಜ್ಯ ಸರ್ಕಾರವೇ ಹೊಣೆ ಎಂದ ಡಿಎನ್‌ಎ

  • ಮೇ 24ಕ್ಕೆ UG CET ಫಲಿತಾಂಶ ಪ್ರಕಟ – ಕೆಇಎ

    ಮೇ 24ಕ್ಕೆ UG CET ಫಲಿತಾಂಶ ಪ್ರಕಟ – ಕೆಇಎ

    ಬೆಂಗಳೂರು: ಏ.15, 16, 17ರಂದು ನಡೆದಿದ್ದ ಪ್ರಸಕ್ತ ಸಾಲಿನ UG CET ಪರೀಕ್ಷೆ ಫಲಿತಾಂಶ ಮೇ 24ರಂದು ಪ್ರಕಟಗೊಳ್ಳಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination Authority) ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ.

    ನಾಳೆ ಬೆಳಿಗ್ಗೆ 11:30ಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ಸುದ್ದಿಗೋಷ್ಟಿ ನಡೆಸಲಿದ್ದು, ಫಲಿತಾಂಶ ಪ್ರಕಟಿಸಲಿದ್ದಾರೆ. ಮಧ್ಯಾಹ್ನ 2 ಗಂಟೆ ನಂತರ ಇಲಾಖೆಯ ವೆಬ್ ಸೈಟ್‌ನಲ್ಲಿ ಫಲಿತಾಂಶ ಲಭ್ಯವಾಗಲಿದೆ.ಇದನ್ನೂ ಓದಿ: ಕಾನ್ ಚಿತ್ರೋತ್ಸವದಲ್ಲಿ ಪ್ರಣಿತಾ ಧರಿಸಿದ್ದ ವಾಚ್ ಬೆಲೆ ಎಷ್ಟು ಕೇಳಿ ಫ್ಯಾನ್ಸ್ ಶಾಕ್!

    ಇದೇ ಏ.15,16 ಹಾಗೂ 17 ರಂದು ಪರೀಕ್ಷೆ ನಡೆದಿದ್ದು, ಸುಮಾರು 3.30 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಿಣಿಯಾಗಿದ್ದರು.

    https://cetonline.Karnataka.gov.in/ugcetrank2025/checkresult.aspx ಹಾಗೂ https://karresults.nic.in ಈ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟವಾಗಲಿದೆ.ಇದನ್ನೂ ಓದಿ: ಹಾಸನ | ಕಾಡಾನೆ ದಾಳಿಗೆ ಮಹಿಳೆ ಬಲಿ – ಮೃತರ ಕುಟುಂಬಕ್ಕೆ 20 ಲಕ್ಷ ಪರಿಹಾರ

  • ಸಿಇಟಿ ಬಳಿಕ ಕಾಲೇಜು ಅಡ್ಮಿಷನ್‌ಗೂ QR ಕೋಡ್ ಕಣ್ಗಾವಲು

    ಸಿಇಟಿ ಬಳಿಕ ಕಾಲೇಜು ಅಡ್ಮಿಷನ್‌ಗೂ QR ಕೋಡ್ ಕಣ್ಗಾವಲು

    – ಸೀಟ್ ಬ್ಲಾಕ್ ದಂಧೆ ತಡೆಗೆ ಕೆಇಎಯಿಂದ ಹದ್ದಿನ ಕಣ್ಣು

    ಬೆಂಗಳೂರು: ಇತ್ತೀಚಿಗೆ ನಡೆದ ಸಿಇಟಿ ಪರೀಕ್ಷೆಯಲ್ಲಿ (CET Exam) ಕ್ಯೂಆರ್ ಕೋಡ್ (QR Code) ಕಣ್ಗಾವಲಿನ ಮೂಲಕ ಕೆಇಎ (KEA) ಹದ್ದಿನ ಕಣ್ಣು ಇಟ್ಟಿತ್ತು. ಇದೀಗ ಅದನ್ನೇ ಮುಂದುವರಿಸಿಕೊಂಡು, ಕಾಲೇಜು ಅಡ್ಮಿಷನ್ ಪ್ರಕ್ರಿಯೆಯಲ್ಲಿಯೂ ಕ್ಯೂಆರ್ ಕೋಡ್ ಬಳಸಲು ಮುಂದಾಗಿದೆ.

    ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination Authority) ಇದೀಗ ಮೊದಲ ಬಾರಿಗೆ ಡಿಜಿಟಲ್ ರೂಪದಲ್ಲಿ ಅಡ್ಮಿಷನ್ ಪ್ರಕ್ರಿಯೆ ನಡೆಸಲು ಮುಂದಾಗಿದೆ. ಸೀಟ್ ಬ್ಲಾಕ್ ದಂಧೆ ತಡೆಯೋದಕ್ಕೆ ಕೆಇಎ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿದೆ. ಇದಕ್ಕೂ ಮುನ್ನ ಏ.15,16 ಹಾಗೂ 17ರಂದು ನಡೆದ ಸಿಇಟಿ ಪರೀಕ್ಷೆಯಲ್ಲಿ ಕೆಇಎ ಕ್ಯೂಆರ್ ಕೋಡ್ ತಂತ್ರಜ್ಞಾನ ಬಳಸಿ, ಯಶಸ್ವಿಯಾಗಿತ್ತು.ಇದನ್ನೂ ಓದಿ: ವಿವಾದ ಜೋರಾಗುತ್ತಿದ್ದಂತೆ ಕಾಂಗ್ರೆಸ್‌ ಗಾಯಬ್ ಪೋಸ್ಟರ್‌ ಡಿಲೀಟ್‌ – ಇಲ್ಲಿದೆ ಇನ್‌ಸೈಡ್‌ ಸ್ಟೋರಿ

    ಹಂಚಿಕೆಯಾಗುವ ವೃತ್ತಿಪರ ಕೋರ್ಸ್‌ಗಳಲ್ಲಿ ಒಂದೇ ಒಂದು ಸೀಟು ಅಕ್ರಮ ಆಗದಂತೆ ನೋಡಿಕೊಳ್ಳಲು ಕೆಇಎ ಈ ಮಾಸ್ಟರ್ ಪ್ಲ್ಯಾನ್ ಮಾಡಿದೆ.

    ಕಾಲೇಜ್ ಅಡ್ಮಿಷನ್‌ಗೆ ಕ್ಯೂಆರ್ ಕೋಡ್ ಹೇಗೆ ಬಳಸಲಾಗುತ್ತೆ?
    > ಕೆಇಎಯಿಂದ ಹಂಚಿಕೆ ಆಗುವ ಪ್ರತಿ ಸೀಟುಗಳನ್ನ ಮಾನಿಟರ್ ಮಾಡಲಾಗುತ್ತದೆ.
    > ಕೆಇಎಯಿಂದ ವಿದ್ಯಾರ್ಥಿಗೆ ಸೀಟ್ ಅಲಾಟ್ ಆದ ಮೇಲೆ ಅದಕ್ಕೆ ದಾಖಲಾತಿಯನ್ನು ಕೆಇಎ ಕೊಡುತ್ತದೆ.
    > ದಾಖಲಾತಿ ಪ್ರತಿ ತೆಗೆದುಕೊಂಡ ವಿದ್ಯಾರ್ಥಿ, ಹಂಚಿಕೆ ಆಗಿರುವ ಕಾಲೇಜಿಗೆ ಹೋಗಿ ಅಡ್ಮಿಷನ್ ಮಾಡಿಕೊಳ್ಳಬೇಕು.
    > ಅಡ್ಮಿಷನ್ ಸಮಯದಲ್ಲಿ ಕಾಲೇಜಿಗೆ ಕೆಇಎ ಒಂದು ಆ್ಯಪ್ ಕೊಟ್ಟಿರುತ್ತದೆ. ಆ ಆ್ಯಪ್‌ನಿಂದ ವಿದ್ಯಾರ್ಥಿಯನ್ನು ಕ್ಯೂಆರ್ ಕೋಡ್ ಮೂಲಕ ಸ್ಕ್ಯಾನ್ ಮಾಡಲಾಗುತ್ತದೆ.
    > ಸ್ಕ್ಯಾನ್ ಮಾಡಿದ ಕೂಡಲೇ ವಿದ್ಯಾರ್ಥಿಯ ಸಂಪೂರ್ಣ ಮಾಹಿತಿ ಕೆಇಎಗೆ ತಲುಪುತ್ತದೆ.
    > ಸೀಟು ಹಂಚಿಕೆ ಆಗಿದ್ದು ನಿಜವಾದ ವಿದ್ಯಾರ್ಥಿನಾ? ಪರೀಕ್ಷೆ ಬರೆದಿದ್ದು ಅದೇ ವಿದ್ಯಾರ್ಥಿನಾ? ದಾಖಲಾತಿ ಆಗುತ್ತಿರುವುದು ಅದೇ ವಿದ್ಯಾರ್ಥಿನಾ ಎಂದು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ಕೂಡಲೇ ದೃಢವಾಗಲಿದೆ.
    > ಈ ಮೂಲಕ ಅಕ್ರಮ ತಡೆಗೆ ಕೆಇಎ ಪ್ಲ್ಯಾನ್ ಮಾಡಿದೆ.ಇದನ್ನೂ ಓದಿ: ಚಿತ್ರದುರ್ಗದಲ್ಲಿ ಬಿಸಿಲಿನ ತಾಪ ಹೆಚ್ಚಳ – ಕೆರೆಯಲ್ಲಿ ಕೋತಿಗಳ ನೀರಾಟ

  • PG/DCET: ಅರ್ಜಿ ಸಲ್ಲಿಸಲು ಮೇ 10 ಕೊನೆ ದಿನ – ಕೆಇಎ

    PG/DCET: ಅರ್ಜಿ ಸಲ್ಲಿಸಲು ಮೇ 10 ಕೊನೆ ದಿನ – ಕೆಇಎ

    ಬೆಂಗಳೂರು: 2025-26ನೇ ಸಾಲಿನ ಸ್ನಾತಕೋತ್ತರ ಕೋರ್ಸುಗಳ (ಎಂಬಿಎ, ಎಂಸಿಎ, ಎಂಟೆಕ್, ಎಂಇ) ಪ್ರವೇಶದ ಪಿಜಿಸಿಇಟಿ (PGCET) ಹಾಗೂ ಲ್ಯಾಟರಲ್ ಎಂಟ್ರಿ ಮೂಲಕ ಎಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕೆ ನಡೆಸುವ ಡಿಸಿಇಟಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ.

    ಈ ಎರಡೂ ಪರೀಕ್ಷೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೇ 10 ಕೊನೆ ದಿನವಾಗಿದೆ. ಮೇ 12 ರಂದು ಶುಲ್ಕ ಪಾವತಿಗೆ ಕೊನೆಯ ದಿನ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ (H Prasanna) ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿ-ರಾಜನಾಥ್ ಸಿಂಗ್ ಮಹತ್ವದ ಚರ್ಚೆ; ಉಗ್ರರ ವಿರುದ್ಧ ಮುಂದಿನ ಕ್ರಮಕ್ಕೆ ಮಾಸ್ಟರ್ ಪ್ಲ್ಯಾನ್

    ಪಿಜಿಸಿಇಟಿಯನ್ನು ಮೇ ಕೊನೆಯ ಅಥವಾ ಜೂನ್ ಮೊದಲ ವಾರದಲ್ಲಿ ನಡೆಸಲಾಗುತ್ತದೆ. ಡಿಸಿಇಟಿಯನ್ನು ಮೇ 31ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ. ಇದನ್ನೂ ಓದಿ: 26 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಸಹಿ; ಭಾರತ-ಫ್ರಾನ್ಸ್ ಮಧ್ಯೆ 63,000 ಕೋಟಿ ಮೆಗಾ ಡೀಲ್‌

    ಪಿಜಿ- ಆರ್ಕಿಟೆಕ್ಚರ್ ಕೋರ್ಸ್ ಪ್ರವೇಶಕ್ಕೆ ಕೆಇಎ ಪ್ರವೇಶ ಪರೀಕ್ಷೆ ನಡೆಸುವುದಿಲ್ಲ. ಬದಲಿಗೆ ಆರ್ಕಿಟೆಕ್ಚರ್ ಕೌನ್ಸಿಲ್ ನಡೆಸುವ ರಾಷ್ಟ್ರ ಮಟ್ಟದ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನೇ ಇಲ್ಲಿ ಸೀಟು ಹಂಚಿಕೆಗೆ ಪರಿಗಣಿಸಲಾಗುತ್ತದೆ. ಆದರೆ ಅವರು ಕೂಡ ಈಗ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.

  • ಸಿಇಟಿ ಎಕ್ಸಾಂ QR ಕೋಡ್ ಸ್ಕ್ಯಾನ್ ಯಶಸ್ವಿ – ಹೆಚ್.ಪ್ರಸನ್ನ

    ಸಿಇಟಿ ಎಕ್ಸಾಂ QR ಕೋಡ್ ಸ್ಕ್ಯಾನ್ ಯಶಸ್ವಿ – ಹೆಚ್.ಪ್ರಸನ್ನ

    ಬೆಂಗಳೂರು: ಏ.15 ರಿಂದ ರಾಜ್ಯಾದ್ಯಂತ ನಡೆಯುತ್ತಿರುವ ಸಿಇಟಿ (CET ) ಪರೀಕ್ಷೆಯಲ್ಲಿ ಬಳಸಿದ ಕ್ಯೂಆರ್ ಕೋಡ್ (QR Code) ಸ್ಕ್ಯಾನ್ ಯಶಸ್ವಿಯಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (Karnataka Examination Authority) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ (H Prasanna) ಹೇಳಿದರು.

    ಸಾಮಾನ್ಯ ಪ್ರವೇಶ ಪರೀಕ್ಷೆ (CET) ನಡೆಯುತ್ತಿರುವ ಬೆಂಗಳೂರಿನ (Bengaluru) ಮಲ್ಲೇಶ್ವರದ 18ನೇ ಅಡ್ಡರಸ್ತೆಯ ಸರ್ಕಾರಿ ಪಿಯು ಕಾಲೇಜಿನ ಕೇಂದ್ರಕ್ಕೆ ಹೆಚ್.ಪ್ರಸನ್ನ ಅವರು ಗುರುವಾರ ಭೇಟಿ ನೀಡಿ, ಖುದ್ದು ಪರಿಶೀಲಿಸಿದರು.ಇದನ್ನೂ ಓದಿ: ಬೆಂಗಳೂರಲ್ಲಿ ಮಳೆ ಎಫೆಕ್ಟ್‌; ಕಾರಿನ ಮೇಲೆ ಬಿದ್ದ ಮರದ ಕೊಂಬೆ – ಬೈಕ್‌ ಸವಾರ ಜಸ್ಟ್‌ ಮಿಸ್‌

    ಕೆಇಎ (KEA) ಅಭಿವೃದ್ಧಿಪಡಿಸಿರುವ ಹಾಗೂ ಇದೇ ಮೊದಲ ಬಾರಿಗೆ ಜಾರಿಗೆ ತಂದಿರುವ ಕ್ಯೂಆರ್ ಕೋಡ್ ಮೂಲಕ ಮುಖ ಚಹರೆ ಪತ್ತೆ ವ್ಯವಸ್ಥೆಯನ್ನು ಪರಿಶೀಲಿಸಿದರು. ಸ್ವತಃ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ವಿದ್ಯಾರ್ಥಿಗಳ ಭಾವಚಿತ್ರ ತೆಗೆದು ನೈಜತೆ ತುಲನೆಮಾಡಿದರು.

    ಈ ಕುರಿತು ಮಾತನಾಡಿದ ಅವರು, ಈ ವ್ಯವಸ್ಥೆ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದ್ದು, ಎಲ್ಲ ಅಭ್ಯರ್ಥಿಗಳ ನೈಜತೆಯನ್ನು ಇದರ ಮೂಲಕವೇ ಪರಿಶೀಲಿಸಿ, ಅಭ್ಯರ್ಥಿಗಳನ್ನು ಒಳಗೆ ಬಿಡಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕೆಇಎ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು ಹಾಜರಿದ್ದರು.ಇದನ್ನೂ ಓದಿ: ಖಾಸಗಿ ಶಾಲೆಗಳ ದಾಖಲಾತಿಗೆ ಸರ್ಕಾರದಿಂದ ರೂಲ್ಸ್ – ಪೋಷಕರ ಸಂದರ್ಶನ, ಮನಸೋ ಇಚ್ಛೆ ಫೀಸ್‌ಗೆ ಬ್ರೇಕ್

  • ಇಂದಿನಿಂದ 3 ದಿನ ಸಿಇಟಿ ಪರೀಕ್ಷೆ – ನಕಲಿ ಅಭ್ಯರ್ಥಿಗಳ ಕಡಿವಾಣಕ್ಕೆ ಕ್ಯೂಆರ್ ಸ್ಕ್ಯಾನ್ ಕಣ್ಗಾವಲು

    ಇಂದಿನಿಂದ 3 ದಿನ ಸಿಇಟಿ ಪರೀಕ್ಷೆ – ನಕಲಿ ಅಭ್ಯರ್ಥಿಗಳ ಕಡಿವಾಣಕ್ಕೆ ಕ್ಯೂಆರ್ ಸ್ಕ್ಯಾನ್ ಕಣ್ಗಾವಲು

    -ಇದೇ ಮೊದಲ ಬಾರಿಗೆ ಕ್ಯೂಆರ್ ಸ್ಕ್ಯಾನ್ ತಂತ್ರಜ್ಞಾನ ಬಳಕೆ

    ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ ಮೂರು ದಿನಗಳ ಕಾಲ ಸಿಇಟಿ (CET) ಪರೀಕ್ಷೆ ನಡೆಯಲಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination Authority) ಇದೇ ಮೊದಲ ಬಾರಿಗೆ ನಕಲಿ ಅಭ್ಯರ್ಥಿಗಳ ಕಡಿವಾಣಕ್ಕಾಗಿ ಕ್ಯೂ ಆರ್ ಸ್ಕ್ಯಾನ್ (QR Scan) ಕಣ್ಗಾವಲಿನಲ್ಲಿ ಪರೀಕ್ಷೆ ನಡೆಸಲಿದೆ.

    ಸಿಇಟಿ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಂಡಿರುವ ಕೆಇಎ, ಮೊದಲ ಬಾರಿಗೆ ಪರೀಕ್ಷಾ ಅಕ್ರಮ ತಡೆಗೆ ಹೊಸ ತಂತ್ರಜ್ಞಾನ ಬಳಕೆ ಮಾಡಿಕೊಂಡು ಕ್ರಮಕ್ಕೆ ಮುಂದಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಕ್ಯೂಆರ್ ಸ್ಕ್ಯಾನ್ ಮಾಡಿದ ನಂತರವೇ ವಿದ್ಯಾರ್ಥಿಗಳನ್ನು ಎಕ್ಸಾಂ ಹಾಲ್‌ಗೆ ಕಳುಹಿಸಲಾಗುವುದು. ಈ ಮೂಲಕ ಡೂಪ್ಲಿಕೇಟ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದನ್ನು ತಪ್ಪಿಸಲು ಮಾಸ್ಟರ್ ಪ್ಲ್ಯಾನ್ ಮಾಡಿದೆ.ಇದನ್ನೂ ಓದಿ: ಸ್ನೇಹಿತರ ಕ್ರೆಡಿಟ್ ಕಾರ್ಡ್‍ನಿಂದ ಲಕ್ಷ ಲಕ್ಷ ಸಾಲ – ಲೋನ್ ಕಟ್ಟು ಎಂದ್ರೆ ಲಾಸ್ಟ್ ಆಪ್ಷನ್ ಅಂತ ವಿಷ ಕುಡಿದ!

    ಸಿಇಟಿ ಪರೀಕ್ಷೆಯಿಂದ ಹಿಡಿದು ದಾಖಲಾತಿಯಾಗುವವರೆಗೂ ಕೆಇಎ ಕಣ್ಗಾವಲಿನಲ್ಲಿ ವಿದ್ಯಾರ್ಥಿಗಳು ಇರಲಿದ್ದು, ಸೀಟ್ ಬ್ಲಾಕ್ ಸೇರಿದಂತೆ ಇನ್ನಿತರ ಅಕ್ರಮ ತಡೆಗೆ ಹೊಸ ತಂತ್ರಜ್ಞಾನ ಬಳಸಲು ನಿರ್ಧರಿಸಿದೆ.

    ಏನಿದು ಕ್ಯೂಆರ್ ಸ್ಕ್ಯಾನ್?
    > ಪ್ರತಿ ಕೇಂದ್ರದಲ್ಲೂ ವಿದ್ಯಾರ್ಥಿಗಳಿಗೆ ಕ್ಯೂಆರ್ ಸ್ಕ್ಯಾನ್ ಮೂಲಕ ತಪಾಸಣೆ.
    > ಪ್ರತಿ ಕೇಂದ್ರದ ಮುಖ್ಯಸ್ಥರಿಗೆ ಕ್ಯೂಆರ್ ಸ್ಕ್ಯಾನ್ ಮಾಡಲು ಆಪ್ ವ್ಯವಸ್ಥೆ ಮಾಡಲಾಗಿರುತ್ತದೆ.
    > ಕ್ಯೂಆರ್ ಸ್ಕ್ಯಾನ್‌ನಲ್ಲಿ ಮೊದಲೇ ವಿದ್ಯಾರ್ಥಿ ಮಾಹಿತಿಯನ್ನು ಕೆಇಎ ಅಪ್‌ಲೋಡ್ ಮಾಡಿರುತ್ತದೆ.
    > ವಿದ್ಯಾರ್ಥಿಗಳನ್ನ ಸ್ಕ್ಯಾನ್ ಮಾಡಿದ ಕೂಡಲೇ ವಿದ್ಯಾರ್ಥಿಯ ಸಂಪೂರ್ಣ ಮಾಹಿತಿ ಕೆಇಎಗೆ ತಲುಪುತ್ತದೆ.
    > ಒಂದು ವೇಳೆ ಬೇರೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಮುಂದಾದರೆ ಇದರಿಂದ ಪತ್ತೆ ಹಚ್ಚಬಹುದು.
    > ಅಭ್ಯರ್ಥಿಯ ಮುಖ ಚಹರೆ ಮತ್ತು ಕ್ಯೂಆರ್ ಸ್ಕ್ಯಾನ್ ವ್ಯವಸ್ಥೆ ಮೂಲಕ ಅಭ್ಯರ್ಥಿಯ ನೈಜತೆ ಪರಿಶೀಲನೆ ಮಾಡಲಾಗುತ್ತದೆ.
    > ಯಾರದ್ದೋ ಪರೀಕ್ಷೆಯನ್ನು ಇನ್ಯಾರೋ ಬರೆಯುವುದನ್ನು ತಡೆಯುವ ಉದ್ದೇಶದಿಂದ ಈ ವ್ಯವಸ್ಥೆ ಜಾರಿ ಮಾಡಲಾಗಿದೆ.
    > ಸೀಟು ಹಂಚಿಕೆಯಾಗಿ ಕಾಲೇಜುಗಳಿಗೆ ಪ್ರವೇಶ ಆಗುವ ಸಂದರ್ಭದಲ್ಲಿ ಕೂಡ ಅಭ್ಯರ್ಥಿಯ ಭಾವಚಿತ್ರವನ್ನು ಹೋಲಿಕೆ ಮಾಡಿಯೇ ಪ್ರವೇಶ ನೀಡುವ ವ್ಯವಸ್ಥೆ.
    > ನಕಲಿ ಅಭ್ಯರ್ಥಿಗಳಿಗೆ ಸಂಪೂರ್ಣ ಕಡಿವಾಣ ಹಾಕಲು ಈ ವ್ಯವಸ್ಥೆ ಜಾರಿಗೆ ಕೆಇಎ ಕ್ರಮ.ಇದನ್ನೂ ಓದಿ: ವಕ್ಫ್‌ ಸದ್ಬಳಕೆ ಆಗಿದ್ದರೆ ಮುಸ್ಲಿಮರು ಪಂಕ್ಚರ್‌ ಹಾಕುತ್ತಿರಲಿಲ್ಲ: ಮೋದಿ

     

  • ನಾಳೆಯಿಂದ ಸಿಇಟಿ ಪರೀಕ್ಷೆ – ವಿದ್ಯಾರ್ಥಿಗಳಿಗೆ ಡ್ರೆಸ್‌ಕೋಡ್ ಬಿಡುಗಡೆ

    ನಾಳೆಯಿಂದ ಸಿಇಟಿ ಪರೀಕ್ಷೆ – ವಿದ್ಯಾರ್ಥಿಗಳಿಗೆ ಡ್ರೆಸ್‌ಕೋಡ್ ಬಿಡುಗಡೆ

    ಬೆಂಗಳೂರು: ರಾಜ್ಯದ್ಯಾಂತ ನಾಳೆಯಿಂದ ಸಿಇಟಿ (CET) ಪರೀಕ್ಷೆ ನಡೆಯಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ಡ್ರೆಸ್‌ಕೋಡ್ ಬಿಡುಗಡೆ ಮಾಡಿದೆ.

    ವಿದ್ಯಾರ್ಥಿಗಳು ಕಡ್ಡಾಯವಾಗಿ ಡ್ರೆಸ್‌ಕೋಡ್ (Dresscode) ಪಾಲನೆ ಮಾಡುವಂತೆ ಕೆಇಎ ಸೂಚನೆ ನೀಡಿದೆ. ಅಲ್ಲದೇ ಪರೀಕ್ಷಾ ಅಕ್ರಮ ತಡೆಯಲು ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆಯನ್ನು ಮಾಡಿದೆ. ಇದನ್ನೂ ಓದಿ: ಮೋದಿ ಪ್ರಧಾನಿಯಾಗಬೇಕೆಂದು ಬರಿಗಾಲಲ್ಲಿ ನಡೆದಾಡುವ ಪ್ರತಿಜ್ಞೆ – 14 ವರ್ಷದ ಕನಸು ಕೊನೆಗೂ ನನಸು

    ಸಿಇಟಿ ಎಕ್ಸಾಂ ರೂಲ್ಸ್
    * ವೆಬ್ ಕಾಸ್ಟಿಂಗ್ ಮೂಲಕ ಎಲ್ಲ 775 ಪರೀಕ್ಷಾ ಕೇಂದ್ರಗಳ ಮೇಲೆ ನಿಗಾ ಇಡುವ ವ್ಯವಸ್ಥೆ.
    * ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮೇಲುಸ್ತುವಾರಿ.
    * ಪರೀಕ್ಷೆಗೆ ಒಂದೂವರೆ ಗಂಟೆ ಮುಂಚೆ ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ಹಾಜರಾಗಬೇಕು.
    * ಪೊಲೀಸ್/ ಗೃಹ ರಕ್ಷಕ ದಳದ ಸಿಬ್ಬಂದಿ ಅಭ್ಯರ್ಥಿಗಳ ತಪಾಸಣೆ ಬಳಿಕವೇ ಪರೀಕ್ಷಾ ಕೇಂದ್ರಕ್ಕೆ ತೆರಳಲು ಅವಕಾಶ.
    * ಕನಿಷ್ಠ ಒಂದೂವರೆ ಗಂಟೆ ಮುಂಚೆಯೇ ಪರೀಕ್ಷಾ ಕೇಂದ್ರಕ್ಕೆ ಅಭ್ಯರ್ಥಿಗಳು ಬಂದು ತಪಾಸಣೆಗೆ ಒಳಗಾಗಬೇಕು.
    * ಅಭ್ಯರ್ಥಿಯ ಮುಖ ಚಹರೆ ಮತ್ತು ಕ್ಯೂಆರ್ ಕೋಡ್ ವ್ಯವಸ್ಥೆ ಮೂಲಕ ಅಭ್ಯರ್ಥಿಯ ನೈಜತೆ ಪರಿಶೀಲನೆ ಮಾಡಲಾಗುತ್ತದೆ.
    * ಯಾರದ್ದೋ ಪರೀಕ್ಷೆಯನ್ನು ಇನ್ಯಾರೋ ಬರೆಯುವುದನ್ನು ತಡೆಯುವ ಸಲುವಾಗಿ ವ್ಯವಸ್ಥೆ ಜಾರಿ. ಇದನ್ನೂ ಓದಿ: ಇಂದು ಮಧ್ಯರಾತ್ರಿಯಿಂದಲೇ ಅನಿರ್ದಿಷ್ಟಾವಧಿ ಲಾರಿ ಮುಷ್ಕರ – ರಸ್ತೆಗಿಳಿಯಲ್ಲ 6 ಲಕ್ಷ ಲಾರಿಗಳು

    ಡ್ರೆಸ್ ಕೋಡ್‌ನಲ್ಲೇನಿದೆ?
    * ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕ ವಸ್ತ್ರ ಸಂಹಿತೆ.
    * ಪುರುಷ/ಮಹಿಳಾ ಅಭ್ಯರ್ಥಿಗಳು ಅರ್ಧ ತೋಳಿನ ಬಟ್ಟೆ ಧರಿಸಬೇಕು.
    * ಸಾಧ್ಯವಾದಷ್ಟು ಕಾಲರ್ ಇಲ್ಲದಿರುವುದನ್ನು ಹಾಕಿಕೊಂಡು ಬಂದರೆ ಉತ್ತಮ.
    * ಪುರುಷರು, ಜೇಬು ಇಲ್ಲದ/ಕಡಿಮೆ ಜೇಬುಗಳಿರುವ ಸರಳ ಪ್ಯಾಂಟ್ ಧರಿಸಬೇಕು.
    * ಕುರ್ತಾ ಪೈಜಾಮ/ಜೀನ್ಸ್ ಪ್ಯಾಂಟ್‌ಗೆ ಅವಕಾಶ ಇಲ್ಲ.
    * ಶೂ ಕೂಡ ನಿಷೇಧ.
    * ಮೊಬೈಲ್, ಪೆನ್‌ಡ್ರೈವ್, ಇಯರ್ ಫೋನ್, ಮೈಕ್ರೋ ಫೋನ್ ಇತ್ಯಾದಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಸಂಪೂರ್ಣ ನಿಷೇಧ.