Tag: karnataka elections2018

  • ಬಿಜೆಪಿ ಪ್ರಚಾರ ಸಭೆಯಲ್ಲಿ ಮಾಜಿ ಸಿಎಂ ಬಿಎಸ್‍ವೈ ಕಣ್ಣೀರು!

    ಬಿಜೆಪಿ ಪ್ರಚಾರ ಸಭೆಯಲ್ಲಿ ಮಾಜಿ ಸಿಎಂ ಬಿಎಸ್‍ವೈ ಕಣ್ಣೀರು!

    ಧಾರವಾಡ: ಜಿಲ್ಲೆಯ ಉಪ್ಪಿನಬೆಟಗೇರಿ ನಡೆದ ಪ್ರಚಾರ ಸಭೆಯಲ್ಲಿ ಭಾಗಿಯಾಗಿದ್ದ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಕಣ್ಣೀರು ಹಾಕಿದ್ದಾರೆ.

    ಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ಬಿಎಸ್‍ವೈ ಅವರು ತನ್ನ ತಾಯಿಯನ್ನು ನೆನೆದು ಭಾವುಕರಾಗಿದ್ದಾರೆ. `ಬಹಳ ಚಿಕ್ಕವಯಸ್ಸಿನಲ್ಲಿದ್ದಾಗಲೇ ನಾನು ನನ್ನ ತಾಯಿಯನ್ನು ಕಳೆದುಕೊಂಡೆ. ತಾಯಿ ಪ್ರೀತಿ-ವಿಶ್ವಾಸ ನನಗೆ ಗೊತ್ತಿಲ್ಲ. ಆದರೆ ತಾಯಿಯ ಹೃದಯ ಏನು ಅಂತಾ ನನಗೆ ಗೊತ್ತಿದೆ. ನಮ್ಮ ಅಜ್ಜ-ಅಜ್ಜಿಯರು ನೆಮ್ಮದಿಯಿಂದ ಇರಬೇಕು ಅನ್ನೊದು ನಮ್ಮ ಆಸೆ. ಅದಕ್ಕಾಗಿ ತಾಯಂದಿರು, ಹೆಣ್ಣುಮಕ್ಕಳಿಗಾಗಿ ಅನೇಕ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ನೀಡಿದ್ದೇನೆ ಅಂತ ಕಣ್ಣೀರು ಸುರಿಸಿದ್ರು.

    ಬಡವರ ಮನೆಯಲ್ಲಿ ಮದುವೆಯಾದಾಗ 3ಗ್ರಾಂ ತಾಳಿ ಹಾಗೂ ಬಡವರ ಮದುವೆಗೆ 25ಸಾವಿರ ರೂಪಾಯಿ ಸಹಾಯಧನ ಕೊಡುವ ಯೋಜನೆ ಕೂಡ ಹಾಕಿಕೊಂಡಿದ್ದೇವೆ ಅಂತ ಅವರು ಹೇಳಿದ್ರು.

  • ನಾನು ಕರ್ನಾಟಕಕ್ಕೆ ಬಂದ್ರೆ ನಿಮ್ಗೇನ್ ಕಷ್ಟ- ಬೈಂದೂರಲ್ಲಿ ಸಿಎಂಗೆ ಯೋಗಿ ಆದಿತ್ಯನಾಥ್ ಪ್ರಶ್ನೆ

    ನಾನು ಕರ್ನಾಟಕಕ್ಕೆ ಬಂದ್ರೆ ನಿಮ್ಗೇನ್ ಕಷ್ಟ- ಬೈಂದೂರಲ್ಲಿ ಸಿಎಂಗೆ ಯೋಗಿ ಆದಿತ್ಯನಾಥ್ ಪ್ರಶ್ನೆ

    ಉಡುಪಿ: ನಾನು ಕರ್ನಾಟಕಕ್ಕೆ ಬಂದ್ರೆ ಸಿದ್ದರಾಮಯ್ಯ ಹರಿಹಾಯೋದ್ಯಾಕೆ? ಅವರಿಗೇನು ಕಷ್ಟ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪ್ರಶ್ನಿಸಿದ್ದಾರೆ.

    ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಬಿ.ಎಂ ಸುಕುಮಾರ್ ಶೆಟ್ಟಿ ಪರ ಪ್ರಚಾರ ನಡೆಸಲು ಬಂದಿದ್ದ ಸಂದರ್ಭ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು.

    ಇಲ್ಲಿನ ರೈತ, ಯುವಕ, ಸಂಕಷ್ಟದಲ್ಲಿದ್ದಾನೆ. ಹಿಂದೂ ಯುವಕರಿಗೆ ರಕ್ಷಣೆಯಿಲ್ಲ ಹೀಗಾಗಿ ನಾನು ಅಲ್ಲಿಂದ ಇಲ್ಲಿಗೆ ಬರಬೇಕಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ತಿಳಿಸಿ ಇಲ್ಲಿನ ಜನರಿಗೆ ಮನವರಿಕೆ ಮಾಡಲು, ನಾನು ಪದೇ ಪದೇ ಕರ್ನಾಟಕಕ್ಕೆ ಬರುತ್ತೇನೆ ಅಂತ ಯೋಗಿ ಸವಾಲೆಸೆದಿದ್ದಾರೆ.

    ಕರ್ನಾಟಕ ಸರ್ಕಾರ ಮಾಡದೇ ಇರೋದನ್ನು ಉತ್ತರ ಪ್ರದೇಶದಲ್ಲಿ ನಾನು ಸಾಧಿಸಿ ತೋರಿಸಿದ್ದೇನೆ. ಯುಪಿಯಲ್ಲಿ ರೈತರ ಸಾಲ ಮನ್ನಾ ಮಾಡಿದ್ದೇನೆ, 12 ಲಕ್ಷ ಬಡವರಿಗೆ ಉದ್ಯೋಗ ಸೃಷ್ಟಿಸಿದ್ದೇನೆ. ಎಲ್.ಪಿ.ಜಿ ಸಂಪರ್ಕ ನೀಡೋದರಲ್ಲೂ ನಾವು ಕರ್ನಾಟಕಕ್ಕಿಂತ ಮುಂದಿದ್ದೇವೆ. ವಿಕಾಸ ಸಿದ್ದರಾಮಯ್ಯ ಸರ್ಕಾರದ ಅಜೆಂಡಾ ಅಲ್ಲ. ಕರ್ನಾಟಕವನ್ನು ಕಾಂಗ್ರೆಸ್ ಪಕ್ಷದ ಎಟಿಎಂ ಮಾಡೋದೊಂದೇ ಅವರ ಅಜೆಂಡಾ ಎಂದು ವಾಗ್ದಾಳಿ ನಡೆಸಿದರು.

    ಜಿಹಾದಿ ತತ್ವ ಪ್ರೋತ್ಸಾಹಿಸೋದು, ಬಿಜೆಪಿ ಕಾರ್ಯಕರ್ತರ ಕೊಲೆ ಮಾಡೋದು ಸಿದ್ದರಾಮಯ್ಯ ಅಜೆಂಡಾ. ಕರ್ನಾಟಕದಲ್ಲಿ ಹನುಮಜಯಂತಿ, ಶಿವಾಜಿ ಜಯಂತಿಗೆ ಅವಕಾಶ ಇಲ್ಲ. ಟಿಪ್ಪು ಜಯಂತಿ ಆಚರಿಸಲು ಈ ಸರ್ಕಾರಕ್ಕೆ ಇರುವ ಉತ್ಸಾಹ ಬೇರೆ ಯಾವ ವಿಚಾರದಲ್ಲೂ ಇಲ್ಲ ಎಂದರು.

    ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಡಬ್ಬಲ್ ಎಂಜಿನ್ ಓಡಿಸಲು ಅಭಿವೃದ್ಧಿಯ ಗುರಿ ತಲುಪಲು ಬಿಜೆಪಿಯನ್ನು ಬೆಂಬಲಿಸಿ ಎಂದು ಯೋಗಿ ಕರೆ ನೀಡಿದ ಅವರು, ಮೀನುಗಾರರ, ರೈತರ ಹಿತ ಕಾಪಾಡಲು ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ ಎಂದರು.

  • ಕೋಟ್ಯಾಂತರ ರೂ. ಸಿಗುತ್ತೆ ಅಂತ 20 ಮಂದಿಯ ಪಟಾಲಂ ದಾಳಿ ಮಾಡ್ತು- ಐಟಿ ದಾಳಿಗೆ ಇಬ್ರಾಹಿಂ ವ್ಯಂಗ್ಯ

    ಕೋಟ್ಯಾಂತರ ರೂ. ಸಿಗುತ್ತೆ ಅಂತ 20 ಮಂದಿಯ ಪಟಾಲಂ ದಾಳಿ ಮಾಡ್ತು- ಐಟಿ ದಾಳಿಗೆ ಇಬ್ರಾಹಿಂ ವ್ಯಂಗ್ಯ

    ಬಾಗಲಕೋಟೆ: ಕೋಟ್ಯಾಂತರ ರೂ. ಹಣ ಸಿಗುತ್ತೆ ಎಂದು ಪಟಾಲಂ ಇಪ್ಪತ್ತು ಜನ ಅಧಿಕಾರಿಗಳು ದಾಳಿ ಮಾಡಿದ್ರು. ಆದ್ರೆ ಬಳಿಕ ಅಧಿಕಾರಿಗಳು ನಿರಾಸೆಯಾಗಿದ್ದು, ಕ್ಷಮೆ ಕೇಳಿ ಹೊರಟು ಹೋದ್ರು ಅಂತ ಕಾಂಗ್ರೆಸ್ ಮುಖಂಡ, ಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.

    ಬದಮಿಯಲ್ಲಿ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಎಷ್ಟೇ ಏನೇಯಾದ್ರೂ ಸಿದ್ದರಾಮಯ್ಯ ಸರ್ಕಾರ ಬರುತ್ತೆ. ನಾವೆಲ್ಲ ಕಂಕಣಬದ್ಧರಾಗಿ ಕೆಲಸ ಮಾಡಿದ್ದೇವೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ದಾಳಿ ವೇಳೆ ಅಧಿಕಾರಿಗಳು ಅಸಹಾಯಕರಾದ್ರು. ಏನ್ಮಾಡೋದು ನಮ್ಮ ಡ್ಯೂಟಿ ನಾವು ಮಾಡ್ತಿದ್ದೇವೆ. ಎಪ್ಪತ್ತು ವರ್ಷದಿಂದ ಚುನಾವಣೆ ನಡೀತಿವೆ. ಇಂತಹ ವಾತಾವರಣ ದೇಶದಲ್ಲಿ ಎಂದೂ ಬಂದಿದ್ದಿಲ್ಲವೆಂದು ಐಟಿ ಅಧಿಕಾರಿಗಳು ಅಸಹಾಯಕತೆ ತೋರಿಸಿದ್ರು ಅಂತ ಅವರು ಹೇಳಿದ್ರು. ಇದನ್ನೂ ಓದಿ: ಬದಾಮಿ ಕಾಂಗ್ರೆಸ್‍ಗೆ ಮಿಡ್‍ನೈಟ್ ಐಟಿ ಶಾಕ್!

    ನಮ್ಮನೇನು ವಿಚಾರಣೆ ಮಾಡಿಲ್ಲ. ನಮ್ಮ ಬಳಿ ಜುಬ್ಬಾ ಪೈಜಾಮ ಬಿಟ್ಟು ಏನಿಲ್ಲ. ಸಿದ್ದರಾಮಯ್ಯ ಕಂಪನಿಯಲ್ಲಿ ಹುಡುಕಿ ತೆಗೆದ್ರೂ ತಿನ್ನೋಕೆ ಏನೂ ಸಿಗಲ್ಲ. ದಾಳಿ ವೇಳೆ ಹಣ ಸಿಕ್ಕ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಪಾರಸ್ಮಲ್ ಜೈನ್ ಖರ್ಚಿಗೆ ಒಂದಿಷ್ಟು ಹಣ ಇಟ್ಟುಕೊಂಡಿರೋದ್ರಲ್ಲಿ ತಪ್ಪೇನಿಲ್ಲ. ಅವರು ಶ್ರೀಮಂತರಿದ್ದಾರೆ ಎರಡು ಮೂರು ಲಕ್ಷ ಖರ್ಚಿಗೆ ಇಟ್ಟುಕೊಳ್ಳುದಲ್ಲಿ ತಪ್ಪೇನಿಲ್ಲ. ಅದಕ್ಕೆ ಲೆಕ್ಕ ಕೊಡ್ತಾರೆ ಅಂತ ಅವರು ತಿಳಿಸಿದ್ರು.

    ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜಕೀಯ ನಾಯಕರುಗಳು ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದರೆ, ಇತ್ತ ಬದಾಮಿಯಲ್ಲಿ ಕಾಂಗ್ರೆಸ್ ಗೆ ಐಟಿ ಶಾಕ್ ನೀಡಿತ್ತು. ಸೋಮವಾರ ರಾತ್ರಿ ಬದಾಮಿ ಹೊರವಲಯದಲ್ಲಿರುವ ಶಾಸಕ ಆನಂದ್‍ಸಿಂಗ್‍ಗೆ ಸೇರಿದ ಕೃಷ್ಣ ಹೆರಿಟೇಜ್ ರೆಸಾರ್ಟ್ ಮೇಲೆ ರಾತ್ರಿ 11ರ ಸುಮಾರಿಗೆ 10ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡ ಲಗ್ಗೆಯಿಟ್ಟು, ದಾಖಲೆಗಳ ಪರಿಶೀಲನೆ ನಡೆಸಿತ್ತು.

     

  • ಪಕ್ಷದ ಅಭ್ಯರ್ಥಿಯ ವಿರುದ್ಧವೇ ತೊಡೆ ತಟ್ಟಿದ ಹೆಚ್‍ಡಿಕೆ- ಸೋಲಿಸುವಂತೆ ಕರೆ: ಆಡಿಯೋ ಕೇಳಿ

    ಪಕ್ಷದ ಅಭ್ಯರ್ಥಿಯ ವಿರುದ್ಧವೇ ತೊಡೆ ತಟ್ಟಿದ ಹೆಚ್‍ಡಿಕೆ- ಸೋಲಿಸುವಂತೆ ಕರೆ: ಆಡಿಯೋ ಕೇಳಿ

    ಚಿಕ್ಕಬಳ್ಳಾಪುರ: ಪಕ್ಷದ ಅಭ್ಯರ್ಥಿಯ ವಿರುದ್ಧವೇ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ತೊಡೆ ತಟ್ಟಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಶಿಡ್ಲಘಟ್ಟ ಶಾಸಕ ರಾಜಣ್ಣ ಅವರಿಗೆ ಕರೆ ಮಾಡಿರುವ ಮಾಜಿ ಸಿಎಂ, ಜೆ.ಡಿ.ಎಸ್ ಅಭ್ಯರ್ಥಿ ಮೇಲೂರು ರವಿ ಸೋಲಿಸಲು ಪಕ್ಷೇತರವಾಗಿ ನಿಲ್ಲುವಂತೆ ತಾಕೀತು ಮಾಡಿರುವ ಆಡಿಯೋವೊಂದು ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಆಡಿಯೋದಲ್ಲಿ ರವಿ ಗೆದ್ದರೆ ಕುಮಾರಸ್ವಾಮಿಗೆ ಏನೂ ಪ್ರಯೋಜನವಿಲ್ಲ. ಹೀಗಾಗಿ 10 ಕೋಟಿ ಖರ್ಚು ಮಾಡಿ ರಾಜಣ್ಣ ಗೆಲ್ಲಿಸಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ರವಿ ಹಣ ಕೊಟ್ಟು ದೊಡ್ಡಗೌಡರ ಬಳಿ ಟಿಕೆಟ್ ಗಿಟ್ಟಿಸಿದ್ದಾನೆ. ಮೇಲೂರು ರವಿ ನನ್ನ ಬಳಿ ಬಂದಿಲ್ಲ.. ನನಗೇನು ಕಿಂಚಿತ್ತು ಗೌರವ ಇಲ್ಲ ಅಂತ ರಾಜಣ್ಣ ಸಂಬಂಧಿ ಬಳಿ ಕುಮಾರಸ್ವಾಮಿ ಮಾತನಾಡಿದ್ದಾರೆ.

  • ಮೋದಿಗೆ ನನ್ನ ಕಂಡ್ರೆ ಭಯ, ಅದಕ್ಕೆ ಯಾವಾಗ್ಲೂ ನನ್ನ ಬಗ್ಗೆಯೇ ಮಾತಾಡ್ತಾರೆ: ಸಿಎಂ

    ಮೋದಿಗೆ ನನ್ನ ಕಂಡ್ರೆ ಭಯ, ಅದಕ್ಕೆ ಯಾವಾಗ್ಲೂ ನನ್ನ ಬಗ್ಗೆಯೇ ಮಾತಾಡ್ತಾರೆ: ಸಿಎಂ

    ಮೈಸೂರು: ಪ್ರಧಾನಿ ಮೋದಿ ಪದೆ ಪದೆ ನನ್ನ ಹೆಸರು ಹೇಳುತ್ತಿರುವುದಕ್ಕೆ ನನಗೆ ಸಂತೋಷ ಆಗಿದೆ. ಮೋದಿಗೆ ನನ್ನನ್ನ ಕಂಡರೆ ಭಯ ಇದೆ. ಅದಕ್ಕೆ ಅವರು ಯಾವಾಗಲೂ ನನ್ನನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಈ ಮಟ್ಟಕ್ಕೆ ಇಳಿದಿದ್ದು ಬೇಸರ ತರಿಸಿದೆ. ವಾಚ್ ಬಗ್ಗೆ ಮಾತನಾಡುವ ಮೋದಿ ಸೂಟ್ ಬಗ್ಗೆ ಮಾತನಾಡಲಿ. ಆ ಸೂಟ್ ಎಲ್ಲಿಂದ ಬಂತು ಹೇಗೆ ಬಂತು ಟ್ಯಾಕ್ಸ್ ಕಟ್ಟಿದ್ದಾರಾ ಅಂತ ಹೇಳಲಿ. ಫೋಟೋದಲ್ಲಿ ನಾನೇನು ವಾಚ್ ಕಟ್ಟಿಸಿಕೊಳ್ಳುತ್ತಿದ್ದೀನಾ? ಅದಕ್ಕೆ ದಾಖಲೆ ಇದ್ರೆ ಕೊಡಿ. ಆ ವಾಚ್ ಎಲ್ಲಿಂದ ಬಂತು ಹೇಗೆ ಬಂತು ಅಂತ ಈಗಾಗಲೇ ದಾಖಲೆ ಕೊಟ್ಟಾಗಿದೆ. ಈಗಲೂ ಅದನ್ನೆ ಮಾತನಾಡುತ್ತಾರೆ ಅಂದ್ರೆ ಅವರಿಗೆ ಯಾವುದೇ ವಿಷಯ ಇಲ್ಲ. ಅವರಿಗೆ ಚುನಾವಣೆಯಲ್ಲಿ ಸೋಲುವ ಭೀತಿ ಎದುರಾಗಿದೆ. ಅದಕ್ಕೆ ಅವರು ಹೀಗೆ ಮಾತನಾಡುತ್ತಿದ್ದಾರೆ ಅಂತ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ರು.

    ನಾನೇ ಸಿಎಂ: ನಾನೂ ಯುದ್ಧಭೂಮಿಯ ಸೇನಾಧಿಪತಿ ಇದ್ದಂತೆ. ಸೇನಾಧಿಪತಿ ಧೈರ್ಯದಿಂದ ಮುನ್ನುಗ್ಗಿದ್ದರೆ ಹಿಂದೆ ಇರುವವರು ಧೈರ್ಯದಿಂದ ಮುನ್ನುಗುತ್ತಾರೆ. ನಾನೂ ಈ ಚುನಾವಣೆಯ ಕ್ಯಾಪ್ಟನ್. ನನಗೆ ಯಾವುದೇ ಟೆನ್ಷನ್, ಆತಂಕ ಇಲ್ಲ. ಗೆಲ್ಲುವ ಕಾನ್ಫಿಡೆನ್ಸ್ ನನಗಿದೆ. ಕ್ಯಾಪ್ಟನ್ ನರ್ವಸ್ ಆದ್ರೆ, ನನ್ನ ಸೈನಿಕರು ಕೂಡ ನರ್ವಸ್ ಆಗ್ತಾರೆ. ನಾವೂ ಗೆದ್ದೆ ಗೆಲ್ಲುತ್ತೇವೆ. ಮತ್ತೇ ನಾನೂ ಮುಖ್ಯಮಂತ್ರಿ ಆಗುತ್ತೇನೆ ಅಂತ ಭವಿಷ್ಯ ನುಡಿದ್ರು.

    ಜೆಡಿಎಸ್ ಪ್ರಣಾಳಿಕೆ ಒಪ್ಪುವ ಪಕ್ಷದೊಂದಿಗೆ ಮೈತ್ರಿ ಎಂಬ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಒಹೋ… ಅವರೀಗ ಕಿಂಗ್ ಮೇಕರಾ? ಹಾಗಾದ್ರೆ ಕಿಂಗ್ ಅಲ್ವ? ಅಂತ ವ್ಯಂಗ್ಯವಾಡಿದ ಸಿಎಂ, ಮೊದಲೆಲ್ಲ ಗೆದ್ದೇ ಬಿಡುತ್ತೇವೆ ಅಂತಿದ್ದರು. ಈಗ ಏನಾಯ್ತು ಅಂತ ಪ್ರಶ್ನಿಸಿದ್ರು.

  • ಜೆಡಿಎಸ್ ಸೇರುವ ಬಗ್ಗೆ  ರೆಬೆಲ್ ಸ್ಟಾರ್ ಅಂಬರೀಶ್ ಸ್ಪಷ್ಟನೆ

    ಜೆಡಿಎಸ್ ಸೇರುವ ಬಗ್ಗೆ ರೆಬೆಲ್ ಸ್ಟಾರ್ ಅಂಬರೀಶ್ ಸ್ಪಷ್ಟನೆ

    ಬೆಂಗಳೂರು: ಚುನಾವಣೆಗೆ ನಿವೃತ್ತಿ ಘೋಷಿಸಿರುವ ಶಾಸಕ ಅಂಬರೀಶ್ ಸೆಳೆಯಲು ಜೆಡಿಎಸ್ ವಿಫಲವಾಗಿದೆ.

    ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಖುದ್ದು ಭೇಟಿಯಾಗಿ ಮಾತುಕತೆ ನಡೆಸಿದ್ರೂ ಜೆಡಿಎಸ್‍ಗೆ ಬೆಂಬಲ ನೀಡಲು ಅಂಬರೀಶ್ ನಿರಾಕರಿಸಿದ್ದಾರೆ. ಈಗ ಚುನಾವಣೆ ಸಂದರ್ಭವಾಗಿರೋದ್ರಿಂದ, ಯಾವುದೇ ನಿರ್ಧಾರ ಕೈಗೊಂಡರೂ ತಪ್ಪು ಸಂದೇಶ ರವಾನೆ ಆಗುತ್ತೆ ಅಂತ ರೆಬಲ್‍ಸ್ಟಾರ್ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ನಿಂದ ದೂರ ಉಳಿದಿರೋ ಅಂಬರೀಶ್ ಜೆಡಿಎಸ್ ಸೇರ್ತಾರಾ?

    ಈಗಿನ ವ್ಯವಸ್ಥೆ ಸರಿಪಡಿಸಲು ತಾವೇ ಮುಖ್ಯಮಂತ್ರಿಯಾಗುವಂತೆ ಅಂಬರೀಶ್ ಸಲಹೆ ನೀಡಿದ್ದಾರೆಂದು ಎಚ್‍ಡಿಕೆ ಬಹಿರಂಗ ಹೇಳಿಕೆ ನೀಡಿದ್ರು. ಇದ್ರಿಂದ ಅಂಬರೀಶ್ ಆಪ್ತರು ಜೆಡಿಎಸ್ ಕಡೆ ಮುಖ ಮಾಡಿದ್ದು, ಅವರ ಪರ ಕೆಲಸ ಮಾಡಲು ತೀರ್ಮಾನಿಸಿದ್ದಾರೆ ಎನ್ನಲಾಗ್ತಿದೆ. ಇದನ್ನೂ ಓದಿ: ರೆಬೆಲ್ ಸ್ಟಾರ್ ಅಂಬರೀಶ್ ಭೇಟಿ ಬಗ್ಗೆ ಹೆಚ್‍ಡಿಕೆ ಪ್ರತಿಕ್ರಿಯೆ

    ಇತ್ತ ಅಂಬರೀಶ್ ಕುಮಾರಸ್ವಾಮಿ ಭೇಟಿ ಬೆನ್ನಲ್ಲೆ ಮಂಡ್ಯದಲ್ಲಿ ಜೆಡಿಎಸ್ ಮುಖಂಡರು ಆಪರೇಷನ್ ಜೆಡಿಎಸ್ ಗೆ ಮುಂದಾಗಿದ್ದಾರೆ. ಅಂಬಿ ಬೆಂಬಲಿಗರು ಜೆಡಿಎಸ್ ನಾಯಕರ ಜೊತೆ ಮಾತುಕತೆ ಆರಂಭಿಸಿದ್ದಾರೆ. ನಾನು ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಲ್ಲ. ಯಾರ ಪರವಾಗಿ ಪ್ರಚಾರಕ್ಕೂ ಹೋಗಲ್ಲ ಎಂದಿದ್ದಾರೆ. ಈ ಮೂಲಕ ಸೈಲೆಂಟ್ ಆಗಿ ದಾಳ ಉರುಳಿಸಿ ತಾವು ಜೆಡಿಎಸ್ ಪರ ಒಲವು ಹೊಂದಿದ್ದೇನೆ ಎಂಬ ಮೆಸೇಜನ್ನು ತಮ್ಮ ಬೆಂಬಲಿಗರಿಗೆ ರವಾನಿಸಿದ್ದಾರೆ. ಒಟ್ಟಿನಲ್ಲಿ ಅಂಬರೀಶ್ ಮತ್ತು ಜೆಡಿಎಸ್ ನಡೆಯಿಂದ ಈಗ ಕಾಂಗ್ರೆಸ್ ನಾಯಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಎಚ್‍ಡಿಕೆ- ಅಂಬರೀಶ್ ಭೇಟಿ ವಿಷ್ಯ ನಂಗೆ ಗೊತ್ತಿಲ್ಲ: ಎಚ್.ಡಿ. ದೇವೇಗೌಡ

  • ಸಚಿವ ಅನಂತ್‍ಕುಮಾರ್ ಹೆಗ್ಡೆಯನ್ನು ನಾಯಿಬಾಲಕ್ಕೆ ಹೋಲಿಸಿದ ಮಲ್ಲಿಕಾರ್ಜುನ ಖರ್ಗೆ!

    ಸಚಿವ ಅನಂತ್‍ಕುಮಾರ್ ಹೆಗ್ಡೆಯನ್ನು ನಾಯಿಬಾಲಕ್ಕೆ ಹೋಲಿಸಿದ ಮಲ್ಲಿಕಾರ್ಜುನ ಖರ್ಗೆ!

    ಮಂಡ್ಯ: ಬಿಜೆಪಿ ಮುಖಂಡ ಅನಂತಕುಮಾರ್ ಹೆಗ್ಡೆಯನ್ನು ನಾಯಿಬಾಲಕ್ಕೆ ಹೋಲಿಸಿ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಲೇವಡಿ ಮಾಡಿದ್ದಾರೆ.

    ಮಂಡ್ಯದ ಮಳವಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನರೇಂದ್ರಸ್ವಾಮಿ ಪರ ಪ್ರಚಾರ ಭಾಷಣ ಮಾಡುತ್ತಾ, ಪ್ರಧಾನಿ ನರೇಂದ್ರಮೋದಿ ಮತ್ತು ಬಿಜೆಪಿ ಮುಖಂಡರ ವಿರುದ್ಧ ಏಕವಚನದಲ್ಲಿಯೇ ತಮ್ಮ ಆಕ್ರೋಶ ಹೊರಹಾಕಿದ್ರು.

    ಮೋದಿ ಒಬ್ಬ ಸುಳ್ಳಿನ ಸರದಾರ. ಬಿಜೆಪಿ ಮುಖಂಡರು, ಮಂತ್ರಿಗಳು ನಾವು ಆರಿಸಿ ಬಂದಿದ್ದು ಸಂವಿಧಾನ ಬದಲಾಯಿಸಲು ಅಂತಾರೆ. ಅಂನಂತಕುಮಾರ್ ಹೆಗ್ಡೆ ಅವನು ಬಾಯಿ ತೆರೆದ್ರೆ ಸಂವಿಧಾನದ ವಿರುದ್ಧ ಹೋರಾಟ ಮಾಡುತ್ತಾನೆ. ಈ ಬಗ್ಗೆ ಪಾರ್ಲಿಮೆಂಟ್ ನಲ್ಲಿ ಕ್ಷಮೆ ಕೇಳಿಸಿದ್ದೆವು. ಆದ್ರೆ ನಾಯಿ ಬಾಲ ಡೊಂಕೇ. ಎಲ್ಲಿ ಹೋದ್ರು ಅದನ್ನೆ ಮಾತನಾಡ್ತಾನೆ ಈಗ ಸ್ವಲ್ಪ ಬಿಟ್ಟಿದ್ದಾನೆ ಎಂದು ಕಿಡಿಕಾರಿದ್ರು.

    ಇದೇ ವೇಳೆ ಮೋದಿ ವಿರುದ್ಧವೂ ವಾಗ್ದಾಳಿ ನಡೆಸಿ, ಮೋದಿಯವರು ಬಂದಾಗ ನನ್ನ ಮೇಲೆ ಬಹಳ ಅನುಕಂಪ ತೋರಿಸಿದ್ರು. ಆದ್ರೆ ಇದು ರಾಜಕೀಯವಾದ ಮಾತು. ಅವರಿಗೆ ನಿಜವಾಗಿ ಪ್ರೀತಿ ಇದ್ದಿದ್ರೆ, ಪ್ರೀತಿ ಬೇಡ. ಯಾಕಂದ್ರೆ ಅವರು ಪ್ರೀತಿ ಮಾಡೋದು ಬಹಳ ಡೇಂಜರ್. ಮೋದಿಗೆ ದಲಿತರ ಬಗೆಗೆ ನಿಜವಾಗಲೂ ಕಾಳಜಿ ಇದ್ದಿದ್ದರೆ ನನ್ನನ್ನು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನನ್ನಾಗಿ ಮಾಡುತ್ತಿದ್ದರು ಅಂದ್ರು.

    ನಮ್ಮ ಪಕ್ಷದಲ್ಲಿ 48 ಜನ ಸಂಸದರಿದ್ದೇವೆ. ನಮ್ಮ ಪಕ್ಷಕ್ಕೆ ವಿರೋಧ ಪಕ್ಷದ ಸ್ಥಾನ ಮಾನ ನೀಡಿದ್ದರೆ ನನಗೂ ಸರ್ಕಾರಿ ಸೌಲಭ್ಯ ಸಿಗುತ್ತಿತ್ತು. ಸಚಿವ ಸ್ಥಾನಮಾನದ ಗೌರವ ಸಿಗುತ್ತಿತ್ತು. ಇದಕ್ಕೇನು ಕಾನೂನು ಬೇಕಿಲ್ಲ, ಸಂವಿಧಾನ ತಿದ್ದುಪಡಿ ಬೇಡ. ಆದರೆ ಇಚ್ಛಾಶಕ್ತಿ ಬೇಕು ಎಂದು ಮೋದಿ ವಿರುದ್ಧ ಖರ್ಗೆ ಆಕ್ರೋಶ ಹೊರಹಾಕಿದ್ರು.

  • ಮೋದಿ ಸಮಾವೇಶದಿಂದಾದ ಡ್ಯಾಮೇಜ್ ಕಂಟ್ರೋಲ್ ಮಾಡಲು ಸಿಎಂ ಮಾಸ್ಟರ್ ಪ್ಲಾನ್

    ಮೋದಿ ಸಮಾವೇಶದಿಂದಾದ ಡ್ಯಾಮೇಜ್ ಕಂಟ್ರೋಲ್ ಮಾಡಲು ಸಿಎಂ ಮಾಸ್ಟರ್ ಪ್ಲಾನ್

    ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ನಡೆದ ಪ್ರಧಾನಿ ಮೋದಿ ಸಮಾವೇಶದಿಂದ ಕಾಂಗ್ರೆಸ್ ಗೆ ಆಗಿರುವ ಡ್ಯಾಮೇಜನ್ನು ಕಂಟ್ರೋಲ್ ಮಾಡಲು ಇದೀಗ ಸಿಎಂ ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯಲ್ಲಿ ಮಾತ್ರ ಸಮಾವೇಶ ನಡೆಸಿದ್ರೆ, ಸಿಎಂ ಚಾಮರಾಜನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲೂ ರೋಡ್ ಶೋ ಹಾಗೂ ಸಮಾವೇಶವನ್ನು ನಡೆಸಲಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಸಿಎಂಗೆ 2+1 ಫಾರ್ಮುಲಾ, ಇತರೆ ಮಂತ್ರಿಗಳಿಗೆ 1+1 ಫಾರ್ಮುಲಾ: ಮೋದಿ ವಾಗ್ದಾಳಿ

    ಹನೂರು, ಕೊಳ್ಳೆಗಾಲ, ಚಾಮರಾಜನಗರ ಹಾಗೂ ಗುಂಡ್ಲುಪೇಟೆ ಕ್ಷೇತ್ರಗಳಿಗೆ ಸೋಮವಾರ ಭೇಟಿ ನೀಡಲಿರುವ ಸಿಎಂ, ನಾಲ್ಕು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಜೊತೆ ರೋಡ್ ಶೋ ಮತ್ತು ಸಮಾವೇಶ ಮಾಡಲಿದ್ದಾರೆ. ಈ ಮೂಲಕ ಮೋದಿ ಸಮಾವೇಶದಿಂದ ಕಾಂಗ್ರೆಸ್ ಗೆ ಆಗಿರುವ ಡ್ಯಾಮೇಜ್ ನ್ನು ಕಂಟ್ರೋಲ್ ಮಾಡಲಿದ್ದಾರೆ ಎನ್ನಲಾಗಿದೆ.

    ಈ ಚುನಾವಣಾ ಪ್ರಚಾರದಲ್ಲಿ ಮೋದಿ ಚಾಮರಾಜನಗರಕ್ಕೆ ಬರದೇ ಇರೋದನ್ನಾ ಪ್ರಮುಖ ಅಸ್ತ್ರವನ್ನಾಗಿ ಸಿಎಂ ಬಳಸಿಕೊಳ್ಳಲಿದ್ದಾರೆ. ನಾಲ್ಕು ಕ್ಷೇತ್ರಗಳಲ್ಲೂ ಮೋದಿ ಅಧಿಕಾರ ಹೋಗುತ್ತೆ ಅಂತಾ ಚಾಮರಾಜನಗರಕ್ಕೆ ಬರಲಿಲ್ಲಾ ಅಂತಾ ಪ್ರಸ್ತಾಪ ಮಾಡಲಿದ್ದಾರೆ. ಈ ಮೂಲಕ ಗಡಿ ಜಿಲ್ಲೆಯಲ್ಲಿ ಎದ್ದಿದ್ದ ಮೋದಿ ಅಲೆಯನ್ನು ಕಟ್ಟಿಹಾಕಲಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಅದಾಗಿನಿಂದ ಚಾಮರಾಜನಗರಕ್ಕೆ ಇದು 11 ನೇ ಬಾರಿಯ ಪ್ರವಾಸವಾಗಲಿದೆ.

  • ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಸಚಿವ ಆಂಜನೇಯ ಘಟನೆಗೆ ಟ್ವಿಸ್ಟ್

    ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಸಚಿವ ಆಂಜನೇಯ ಘಟನೆಗೆ ಟ್ವಿಸ್ಟ್

    ದಾವಣಗೆರೆ: ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಸಚಿವ ಆಂಜನೇಯ ಘಟನೆಗೆ ಇದೀಗ ಟ್ವಿಸ್ಟ್ ದೊರೆತಿದೆ.

    ಹೌದು. ತಮ್ಮ ಕ್ಷೇತ್ರದ ಮತದಾರರ ಸಿಟ್ಟಿನಿಂದ ತಪ್ಪಿಸಿಕೊಳ್ಳಲು ಸಚಿವರು ಹೀಗೆ ಮಾಡಿದ್ದಾರೆ ಅನ್ನೋ ಮಾತುಗಳು ಇದೀಗ ಕೇಳಿಬರುತ್ತಿದೆ. ಸಚಿವರು ಶನಿವಾರ ಹೊಳಲ್ಕೆರೆಯಲ್ಲಿ ಪ್ರಚಾರ ಮಾಡುತ್ತಿದ್ದ ಸಂದರ್ಭದಲ್ಲಿ ಭರಮಸಾಗರ ಹೋಬಳಿ ವ್ಯಾಪ್ತಿಯ ಇಸಾಮುದ್ರ, ಅರಬಗಟ್ಟ, ಹೆಗ್ಗೆರೆಯಲ್ಲಿ ಜನ ತಮ್ಮ ಸಿಟ್ಟು ಹೊರಹಾಕಿದ್ದರು.

    ಗೆದ್ದು ಸಚಿವರಾಗಿ ಹೋದ್ಮೆಲೆ ಈಗ ಬಂದಿದ್ದೀರಿ ಮತ ಕೇಳೋಕೆ?. ನಿಮಗೇಕೆ ಮತ ಹಾಕಬೇಕು?. ಅರಬಗಟ್ಟಿಯಲ್ಲಿ ಸದಾಶಿವ ಆಯೋಗದ ವರದಿ ಯಾಕ್ ಜಾರಿ ಮಾಡಿಲ್ಲ ಅಂತ ಪ್ರಶ್ನಿಸಿದ್ದರು. ಸದಾಶಿವ ಆಯೋಗದ ವರದಿ ವಿಚಾರದಲ್ಲಿ ಸ್ಪಷ್ಟ ನಿಲುವು ತೋರುತ್ತಿಲ್ಲ ಅಂತ ತರಾಟೆಗೆ ತೆಗೆದುಕೊಂಡ್ರು. ಈ ವೇಳೆ ವಾಗ್ವಾದ ನಡೆದಿದ್ದು, ಪರಿಣಾಮ ಸಚಿವರಿಗೆ ಎದೆನೋವು ಕಾಣಿಸಿಕೊಂಡು ಸ್ಥಳದಲ್ಲೇ ಕುಸಿದುಬಿದ್ದಿದ್ದರು.

    ತಕ್ಷಣವೇ ಅವ್ರನ್ನು ಇಸಾಮುದ್ರದ ಕಾಂಗ್ರೆಸ್ ಮುಖಂಡನ ಮನೆಗೆ ಕರೆದುಕೊಂಡು ಹೋಗಿ ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತ್ರ ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

  • ಜೆಡಿಎಸ್ ಪ್ರಣಾಳಿಕೆ ಬಿಡುಗಡೆ ಬಳಿಕ ಬೇರೆ ಪಕ್ಷದೊಂದಿಗೆ ಹೋಲಿಕೆ ಮಾಡಿ- ದೇವೇಗೌಡ

    ಜೆಡಿಎಸ್ ಪ್ರಣಾಳಿಕೆ ಬಿಡುಗಡೆ ಬಳಿಕ ಬೇರೆ ಪಕ್ಷದೊಂದಿಗೆ ಹೋಲಿಕೆ ಮಾಡಿ- ದೇವೇಗೌಡ

    ತುಮಕೂರು: ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಇಂದು ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ನಾಳೆ ಜೆಡಿಎಸ್ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ. ಆ ನಂತ್ರ ಬೇರೆ ಪಕ್ಷದೊಂದಿಗೆ ಹೋಲಿಕೆ ಮಾಡಿ ಅಂತ ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.

    ಜಿಲ್ಲೆಯ ಕುಣಿಗಲ್ ತಾಲೂಕಿನ ಸಂತೆಪೇಟೆಯಲ್ಲಿ ಬಿಜೆಪಿ ಪ್ರಣಾಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ರೈತರ ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾ ಮಾಡಲು ಬಿಜೆಪಿಗೆ ಈಗ ಎಚ್ಚರವಾಗಿದೆಯಾ? ಇಷ್ಟುದಿನ ಏನು ಮಾಡುತ್ತಿದ್ದರು? ಸಾಲ ಮನ್ನಾ ಮಾಡುವ ವಿಚಾರದಲ್ಲಿ ಕುಮಾರಸ್ವಾಮಿ ಹೋರಾಟ ಮಾಡ್ತಾ ಇದ್ದರು. ಅವರ ಹೋರಾಟಕ್ಕೆ ಸಿಎಂ ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್ ಅಣಕ ಮಾಡುತಿದ್ರು ಅಂತ ಕಿಡಿಕಾರಿದ್ರು.

    ಕುಮಾರಸ್ವಾಮಿಗೆ ಜನಬೆಂಬಲ ಸಿಗುತ್ತಿರುವುದನ್ನು ನೋಡಿ ಬಿಜೆಪಿಯವರು ರಾಷ್ಟ್ರಿಕೃತ ಬ್ಯಾಂಕ್ ಸಾಲ ಮನ್ನಾ ಮಾಡಲು ಹೊರಟಿದ್ದಾರೆ. ಉತ್ತಮ ಆಡಳಿತ ನೀಡಿದ್ರೆ ಉಚಿತವಾಗಿ ಮೊಬೈಲ್ ಕೊಡುವ ಅವಶ್ಯಕತೆ ಇಲ್ಲ. ಈ ಮೂಲಕ ಮಹಿಳೆಯರಿಗೆ ತಾತ್ಕಾಲಿಕ ಸಮಾಧಾನ ಮಾಡಲು ಹೊರಟಿದ್ದಾರೆ. ನಾಳೆ ಜೆಡಿಎಸ್ ಪ್ರಣಾಳಿಕೆ ಬಿಡುಗಡೆ ಆಗಲಿದೆ. ಬಡವರ ಶ್ರಮಿಕರ ರೈತರ ಪರವಾಗಿ ಪ್ರಣಾಳಿಕೆ ಹೊರಬರಲಿದೆ ಅಂತ ಅವರು ಹೇಳಿದ್ರು.