Tag: karnataka elections2018

  • ವಿಜಯೋತ್ಸವದ ವೇಳೆ ಬಿಜೆಪಿ ಕಾರ್ಯಕರ್ತರ ಮೇಲೆ ತಲವಾರು ದಾಳಿ!

    ವಿಜಯೋತ್ಸವದ ವೇಳೆ ಬಿಜೆಪಿ ಕಾರ್ಯಕರ್ತರ ಮೇಲೆ ತಲವಾರು ದಾಳಿ!

    ಮಂಗಳೂರು: ಬಿಜೆಪಿ ವಿಜಯೋತ್ಸವದ ವೇಳೆ ಕಲ್ಲುತೂರಾಟ, ತಲವಾರು ದಾಳಿ ನಡೆದ ಘಟನೆ ಕರಾವಳಿ ಜಿಲ್ಲೆಯಲ್ಲಿ ನಡೆದಿದೆ.

    ಮಂಗಳೂರು ಹೊರವಲಯದ ಅಡ್ಯಾರ್ ಪದವು ಮಸೀದಿ ಬಳಿ ಈ ಘಟನೆ ನಡೆದಿದ್ದು, ಭಿನ್ನಕೋಮಿನ ಯುವಕರಿಂದ ಬಿಜೆಪಿ ಕಾರ್ಯಕರ್ತರ ಮೇಲೆ ತಲವಾರಿನಿಂದ ದಾಳಿ ನಡೆಸಲಾಗಿದೆ ಎಂಬ ಮಾಹಿತಿಗಳು ಲಭ್ಯವಾಗುವೆ.

    ಘಟನೆಯಲ್ಲಿ ನಾಲ್ವರು ಬಿಜೆಪಿ ಕಾರ್ಯಕರ್ತರಿಗೆ ಗಂಭೀರ ಗಾಯಗಳಾಗಿದೆ. ಸದ್ಯ ಗಾಯಾಳುಗಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸುಮಾರು 50ಕ್ಕೂ ಅಧಿಕ ಯುವಕರಿಂದ ಈ ದಾಳಿ ನಡೆದಿದೆ. ಘಟನೆಯಲ್ಲಿ ಹಿಂದೂ ಧಾರ್ಮಿಕ ಕೇಂದ್ರದ ಮೇಲೆಯೂ ಕಲ್ಲು ತೂರಾಟ ಮಾಡಲಾಗಿದೆ. ಒಟ್ಟಿನಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

    ಈ ಘಟನೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಕಾಂಗ್ರೆಸ್ ಹೀನಾಯ ಸೋಲು ಕಂಡ್ರೂ ಹಿಂಬಾಗಿಲಿನಿಂದ ಅಧಿಕಾರಕ್ಕೆ ಯತ್ನ- ಬಿಎಸ್‍ವೈ

    ಕಾಂಗ್ರೆಸ್ ಹೀನಾಯ ಸೋಲು ಕಂಡ್ರೂ ಹಿಂಬಾಗಿಲಿನಿಂದ ಅಧಿಕಾರಕ್ಕೆ ಯತ್ನ- ಬಿಎಸ್‍ವೈ

    ಬೆಂಗಳೂರು: ತಮ್ಮ ಸ್ವಂತ ಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯನವರು ದಯನೀಯ ಸೋಲನ್ನು ಅನುಭವಿಸಿದ್ದಾರೆ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮುಂದಾಳತ್ವದಲ್ಲಿ ಕಾಂಗ್ರೆಸ್ ಮುಕ್ತ ಕರ್ನಾಟಕದ ಕಡೆಗೆ ಜನ ಓಗೊಟ್ಟಿದ್ದಾರೆ. ರಾಜ್ಯದ ಮತದಾರ ಬದಲಾವಣೆಗೆ ತನ್ನ ಜನಾದೇಶವನ್ನು ನೀಡಿದ್ದಾರೆ ಅಂತ ಹೇಳಿದ್ರು.

    ಕಾಂಗ್ರೆಸ್ ಕುತಂತ್ರಗಳನ್ನು ಮಾಡುತ್ತಿದೆ. ಇವುಗಳನ್ನು ತೀವ್ರವಾಗಿ ನಾವು ಖಂಡಿಸುತ್ತೇವೆ. ರಾಷ್ಟ್ರೀಯ ನಾಯಕರುಗಳ ಜೊತೆ ಸಮಾಲೋಚನೆಯನ್ನು ಮಾಡಿ ನಮ್ಮ ಮುಂದಿನ ನಿಲುವು ಏನಿರಬೇಕು ಎನ್ನುವುದನ್ನು ತೀರ್ಮಾನ ಮಾಡುತ್ತೇವೆ. ಹಗಲು-ರಾತ್ರಿ ಎನ್ನದೇ ದುಡಿದ ಲಕ್ಷಾಂತರ ಜನ ನಮ್ಮ ಕಾರ್ಯಕರ್ತ ಹಾಗೂ ರಾಜ್ಯದ ಮತದಾರರಿಗೆ ಮತ್ತೊಮ್ಮೆ ಅಭಿನಂದನೆ ಸಲ್ಲಿಸಿದ್ರು.

    ಕಾಂಗ್ರೆಸ್ ವಿರೋಧ ಅಲೆಯಿಂದಾಗಿ ಜೆಡಿಎಸ್ ಗಣನೀಯ ಪ್ರಮಾಣದಲ್ಲಿ ತನ್ನ ಸ್ಥಾನಗಳನ್ನು ಗಳಿಸಿದೆ. ಎಲ್ಲಕ್ಕೂ ಮಿಗಿಲಾಗಿ ಕರ್ನಾಟಕ ರಾಜ್ಯದ ಆರೂವರೆ ಕೋಟಿ ಜನ ಬಿಜೆಪಿಗೆ ಕೊಟ್ಟಿರುವಂತಹ ಬೆಂಬಲಕ್ಕಾಗಿ ತಲೆಬಾಗಿ ವಂದಿಸುತ್ತೇನೆ ಅಂದ್ರು.

    ಕಾಂಗ್ರೆಸ್ ದಯನೀಯ ಸೋಲನ್ನುಭವಿಸದ ಮೇಲೆಯೂ, ತಿಸ್ಕಾರಗೊಂಡ ಬಳಿಕವೂ ಹಿಂಬಾಗಿಲಿನಿಂದ ಅಧಿಕಾರ ಹಿಡಿಯೋದನ್ನು ಪ್ರಯತ್ನ ಮಾಡಿರುವುದನ್ನು ಬಿಎಸ್‍ವೈ ಮತ್ತೊಮ್ಮೆ ಖಂಡಿಸಿದ್ರು.

  • ಸ್ಟ್ರಾಂಗ್‍ ರೂಮ್‍ನಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರ- ಯಾವ ಕಾಲೇಜಿನಲ್ಲಿ ಯಾವ ಯಾವ ಕ್ಷೇತ್ರದ ಮತ ಎಣಿಕೆಯಾಗುತ್ತೆ?

    ಸ್ಟ್ರಾಂಗ್‍ ರೂಮ್‍ನಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರ- ಯಾವ ಕಾಲೇಜಿನಲ್ಲಿ ಯಾವ ಯಾವ ಕ್ಷೇತ್ರದ ಮತ ಎಣಿಕೆಯಾಗುತ್ತೆ?

    ಬೆಂಗಳೂರು: 2019ರ ಲೋಕಸಭಾ ಚುನಾವಣೆಗೆ ಸೆಮಿಫೈನಲ್ ಎಂದೇ ಕರೆಯಲಾಗಿದ್ದ ಕರ್ನಾಟಕ ಎಲೆಕ್ಷನ್ ಮುಗಿದಿದ್ದು, 2,622 ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿದೆ. ಮೇ 15 ಮಂಗಳವಾರದಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.

    ಇದೆಲ್ಲದರ ನಡುವೆ ಚುನಾವಣಾ ವೇಳೆ ದೇಶದಲ್ಲೇ ಅತೀಹೆಚ್ಚು ಹಣ, ಮದ್ಯ ಪೂರೈಕೆ ಆಗಿದ್ದು ಇಲ್ಲೇ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ. ನಗರದ ಮಹಾರಾಣಿ ಕಾಲೇಜ್, ಮೌಂಟ್ ಕಾರ್ಮಲ್ ಕಾಲೇಜ್, ಆರ್.ಸಿ ಕಾಲೇಜ್, ಆರ್.ವಿ ಕಾಲೇಜ್‍ನಲ್ಲಿ ಎಲ್ಲಾ ಕ್ಷೇತ್ರದ ಎಲ್ಲಾ ಕ್ಷೇತ್ರದ ಮತ ಪೆಟ್ಟಿಗೆಗಳನ್ನ ಭದ್ರವಾಗಿ ಇಡಲಾಗಿದೆ. ಇನ್ನು ಸ್ಟ್ರಾಂಗ್ ರೂಂ ಸುತ್ತಮತ್ತ ಖಾಕಿ ಸರ್ಪಗಾವಲು ಮಾಡಲಾಗಿದೆ.

    ಯಾವ ಕಾಲೇಜಿನಲ್ಲಿ ಯಾವ ಯಾವ ಕ್ಷೇತ್ರದ ಮತ ಎಣಿಕೆ ಆಗುತ್ತೆ ಆನ್ನೊದನ್ನ ನೋಡೊದಾದ್ರೆ..
    * ಆರ್.ಸಿ. ಕಾಲೇಜ್
    * ನೆಲಮಂಗಲ
    * ಹೊಸಕೋಟೆ
    * ದೊಡ್ಡಬಳ್ಳಾಪುರ
    * ದೇವನಹಳ್ಳಿ
    * ಮಹಾರಾಣಿ ಕಾಲೇಜ್

    * ಮಾಹದೇವಪುರ
    * ಯಲಹಂಕ
    * ಬ್ಯಾಟರಾಯನಪುರ
    * ಯಶವಂತಪುರ
    * ದಾಸರಹಳ್ಳಿ
    * ಆನೆಕಲ್ಲು

    * ಎಸ್ .ಎಸ್.ಎಂ.ಆರ್.ವಿ ಕಾಲೇಜ್ ಜಯನಗರ ಟಿ ಬ್ಲಾಕ್
    * ಬಸವನಗುಡಿ
    * ಬೊಮ್ಮನಹಳ್ಳಿ
    * ಬಿಟಿಎಂ ಲೇಔಟ್
    * ಪದ್ಮನಾಭನಗರ
    * ವಿಜಯ ನಗರ
    * ಗೋವಿಂದರಾಜ್ ನಗರ

    * ಬಿಎಂಎಸ್ ಮಹಿಳಾ ಕಾಲೇಜ್ ಬಸವನ ಗುಡಿ
    * ಶಿವಾಜಿ ನಗರ
    * ಶಾಂತಿ ನಗರ
    * ಗಾಂಧಿ ನಗರ
    * ರಾಜಾಜಿ ನಗರ
    * ಚಾಮರಾಜ ಪೇಟೆ
    * ಚಿಕ್ಕ ಪೇಟೆ

    * ಮೌಂಟ್ ಕಾರ್ಮಲ್ ಕಾಲೇಜ್
    * ಮಹಾಲಕ್ಷ್ಮಿ ಲೇಔಟ್
    * ಸರ್ವಜ್ಞ ನಗರ
    * ಹೆಬ್ಬಾಳ
    * ಕೆ.ಆರ್ ಪುರಂ
    * ಸಿವಿ ರಾಮ್ ನಗರ

    ರಾಮನಗರದಲ್ಲಿ ಅತೀ ಹೆಚ್ಚು ಮತದಾನವಾದರೆ ಬೆಂಗಳೂರಿನಲ್ಲೇ ಕಡಿಮೆ ಮತದಾನವಾಗಿದೆ. ಗ್ರಾಮೀಣ ಭಾಗಗಳಷ್ಟು ಇಲ್ಲಿ ಮತದಾನವಾಗಿಲ್ಲ. ಬೆಂಗಳೂರಿನಲ್ಲಿ ಕೇವಲ 50 ಪರ್ಸೆಂಟ್ ಮತದಾನವಾಗಿದೆ. ಐಟಿ-ಬಿಟಿಗಳಿಗೆ ಶನಿವಾರ, ಭಾನುವಾರ ರಜಾ ಹಿನ್ನೆಲೆ ಬೆಂಗಳೂರಿಗರು ಮತ ಹಾಕಲು ಮನಸು ಮಾಡಿಲ್ಲ. 2 ದಿನ ರಜಾ ಹಿನ್ನೆಲೆ ಎಲ್ಲರೂ ಟ್ರಿಪ್ ಅಂತಾ ತೆರಳಿದ್ರು. ಚುನಾವಣಾ ಆಯೋಗ, ಸಂಘ ಸಂಸ್ಥೆಗಳು ಎಷ್ಟೇ ಜಾಗೃತಿ ಮೂಡಿಸಿದ್ರೂ ಮತದಾನ ಪ್ರಮಾಣ 50ಕ್ಕಿಂತ ಹೆಚ್ಚು ದಾಟಲಿಲ್ಲ.

  • 111ರ ಇಳಿವಯಸ್ಸಿನಲ್ಲೂ ಲವಲವಿಕೆಯಿಂದಲೇ ಮತಹಾಕಿದ್ರು ಸಿದ್ದಗಂಗಾ ಶ್ರೀ!

    111ರ ಇಳಿವಯಸ್ಸಿನಲ್ಲೂ ಲವಲವಿಕೆಯಿಂದಲೇ ಮತಹಾಕಿದ್ರು ಸಿದ್ದಗಂಗಾ ಶ್ರೀ!

    ತುಮಕೂರು: ಇಂದು ರಾಜ್ಯದೆಲ್ಲೆಡೆ ಮತದಾನ ನಡೆಯುತ್ತಿದ್ದು, ತುಮಕೂರಿನಲ್ಲಿ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

    ಮಠದ ಆವರಣದಲ್ಲಿರುವ ಮತಗಟ್ಟೆ ಸಂಖ್ಯೆ 133 ರಲ್ಲಿ ಶ್ರೀಗಳು ಮತದಾನ ಮಾಡಿದ್ದಾರೆ. 111 ರ ಇಳಿವಯಸ್ಸಿನಲ್ಲೂ ಅತ್ಯಂತ ಲವಲವಿಕೆಯಿಂದಲೇ ಶ್ರೀಗಳು ವೋಟ್ ಹಾಕಿರುವುದು ವಿಶೇಷವಾಗಿದೆ.

    ನೆಲಮಂಗಲದಲ್ಲೂ ಶತಾಯುಷಿ ಮತದಾನ:
    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಎಲೇಕ್ಯಾತನಹಳ್ಳಿ ಹಾಗೂ ನಿಡವಂದ ಗಳಲ್ಲಿ ಎಲೇಕ್ಯಾತನಹಳ್ಳಿಯ 102 ವರ್ಷದ ಪುಟ್ಟ ಅರಸಯ್ಯ ಹಾಗೂ ನಿಡವಂದದಲ್ಲಿ 110 ವರ್ಷದ ಅಟ್ಟಮ್ಮ ಮತದಾನ ಮಾಡಿ ಮಾದರಿಯಾದರು.

    ಬೇರೆಯವರ ಸಹಾಯ ಪಡೆದು ಪುಟ್ಟ ಅರಸಯ್ಯ ಮತದಾನ ಮಾಡಿದರೆ ವ್ಹೀಲ್ ಚೇರ್ ಮುಖಾಂತರ ಆಗಮಿಸಿದ ಅಟ್ಟಮ್ಮ ತನ್ನ ಸಂಬಂಧಿಯ ಸಹಾಯ ಪಡೆದು ಮತ ಚಲಾಯಿಸಿದರು. ಒಟ್ಟಿನಲ್ಲಿ ತಮ್ಮ ವಯೋಮಾನ ವನ್ನು ಲೆಕ್ಕಿಸಿದೆ ಮತ ಹಾಕಿದ್ದು ವಿಶೇಷವಾಗಿತ್ತು.

    ಜಯನಗರ ಮತ್ತು ಆರ್ ಆರ್ ನಗರ ಬಿಟ್ಟು ಕರ್ನಾಟಕದ ಒಟ್ಟು 222 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಬಿರುಸಿನಿಂದ ನಡೆಯುತ್ತಿದೆ. ಹಲವೆಡೆ ಮತಯಂತ್ರಗಳು ಕೈ ಕೊಟ್ಟಿದ್ದು, ಮತದಾರರು ನಿರಾಶರಾಗಿ ಹಿಂದಿರುಗಿದ್ದಾರೆ. ಇನ್ನು ಮತದಾನ ಸಂಜೆ 6 ಗಂಟೆಯವರೆಗೆ ನಡೆಯಲಿದೆ.

  • ಕರ್ನಾಟಕ ಕುರುಕ್ಷೇತ್ರಕ್ಕೆ ಮತದಾನ – ಜಯನಗರ, ಆರ್ ಆರ್ ನಗರ ಬಿಟ್ಟು 222 ಕ್ಷೇತ್ರಗಳಿಗೆ ಚುನಾವಣೆ

    ಕರ್ನಾಟಕ ಕುರುಕ್ಷೇತ್ರಕ್ಕೆ ಮತದಾನ – ಜಯನಗರ, ಆರ್ ಆರ್ ನಗರ ಬಿಟ್ಟು 222 ಕ್ಷೇತ್ರಗಳಿಗೆ ಚುನಾವಣೆ

    ಬೆಂಗಳೂರು: ರಾಜಧಾನಿ ಬೆಂಗಳೂರಿನ 28 ಕ್ಷೇತ್ರಗಳ ಪೈಕಿ 26 ಕ್ಷೇತ್ರಗಳಿಗೆ ಚುನಾವಣೆ ನಡೀತಿದ್ದು, ಟೈಟ್ ಸೆಕ್ಯೂರಿಟಿ ಕೈಗೊಳ್ಳಲಾಗಿದೆ. 10, 500 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇನ್ನು, ಬೆಂಗಳೂರಲ್ಲಿ ಒಟ್ಟು 7,477 ಮತಗಟ್ಟೆಗಳನ್ನು ತೆರೆಯಲಾಗಿದ್ದು, 1,469 ಮತಗಟ್ಟೆಗಳನ್ನು ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಎಂದು ಪರಿಗಣಿಸಲಾಗಿದೆ.

    222 – ಕ್ಷೇತ್ರ (ಬೆಂಗಳೂರಿನ ಜಯನಗರ, ಆರ್.ನಗರ ಹೊರತು ಪಡಿಸಿ) ಕುರ್ನಾಟಕ ಕುರಕ್ಷೇತ್ರಕ್ಕೆ ಧುಮುಕಿರುವ ಕದನ ಕಲಿಗಳು ಎಷ್ಟು ಜನ ಅಂತ ನೋಡೋದಾದ್ರೆ..

    * 2,636 – ಅಭ್ಯರ್ಥಿಗಳು (ಬಿಜೆಪಿ-223(-1), ಕಾಂಗ್ರೆಸ್ -221(-1), ಜೆಡಿಎಸ್ -200 (-1), ಬಿಎಸ್‍ಪಿ( 18) (ಆರ್‍ಆರ್ ನಗರದ ಅಭ್ಯರ್ಥಿಗಳನ್ನ ಬಿಡಬೇಕು)
    * 2,419 – ಪುರುಷ ಅಭ್ಯರ್ಥಿಗಳು (ಆರ್‍ಆರ್ ನಗರದ 14 ಅಭ್ಯರ್ಥಿಗಳನ್ನ ಬಿಡಬೇಕು )
    * 217 – ಮಹಿಳಾ ಅಭ್ಯರ್ಥಿಗಳು
    * 1,146 – ಪಕ್ಷೇತರ ಅಭ್ಯರ್ಥಿಗಳು
    * 70+ – ಕಣದಲ್ಲಿರುವ ಪಕ್ಷಗಳ ಸಂಖ್ಯೆ
    * 39 – ಮುಳಬಾಗಿಲಿನಲ್ಲಿ ಗರಿಷ್ಠ ಅಭ್ಯರ್ಥಿಗಳು (23 ಕ್ಷೇತ್ರಗಳಲ್ಲಿ 15ಕ್ಕೂ ಹೆಚ್ಚು ಅಭ್ಯರ್ಥಿಗಳಿದ್ದಾರೆ)
    * 04 – ಸೇಡಂ, ಚಳ್ಳಕೆರೆಯಲ್ಲಿ ಕನಿಷ್ಠ ಅಭ್ಯರ್ಥಿಗಳು
    * ಹಿರಿಯ ಅಭ್ಯರ್ಥಿ – ಕಾಗೋಡು ತಿಮ್ಮಪ್ಪ, 87 ಕ್ಷೇತ್ರ – ಸಾಗರ (80 ದಾಟಿದವರು ಐವರು ಇದ್ದಾರೆ)
    * ಕಿರಿಯ ಅಭ್ಯರ್ಥಿ – ಎಸ್. ಅಶ್ವಿನಿ, 26 ವರ್ಷ – ಕೆಜಿಎಫ್

    ಇನ್ನು, ರಾಜ್ಯದಲ್ಲಿ ಸರಿ ಸುಮಾರು 7 ಕೋಟಿ ಜನಸಂಖ್ಯೆ ಇದೆ. ಅದರಲ್ಲಿ, ಮತದಾರರ ಸಂಖ್ಯೆ ಎಷ್ಟಿದೆ? ಸುಗಮ, ಶಾಂತ ಮತದಾನಕ್ಕಾಗಿ ಭದ್ರತಾ ಪಡೆಗಳು ಕೈಗೊಂಡಿರುವ ಭದ್ರತಾ ಕ್ರಮಗಳನ್ನು ನೋಡೋಣ..

    * 5 ಕೋಟಿ 06 ಲಕ್ಷದ 90 ಸಾವಿರದ 538 – ಒಟ್ಟು ಮತದಾರರು
    * 2 ಕೋಟಿ 56 ಲಕ್ಷದ 75 ಸಾವಿರದ 579 – ಪುರುಷ ಮತದಾರರು
    * 2 ಕೊಟಿ 50 ಲಕ್ಷದ 09 ಸಾವಿರದ 904 – ಮಹಿಳಾ ಮರದಾರರು
    * 15 ಲಕ್ಷದ 42 ಸಾವಿರ – ಮೊದಲ ಬಾರಿಗೆ ಓಟ್ ಮಾಡುತ್ತಿರುವವರು
    * 56 ಸಾವಿರದ 696 – ಒಟ್ಟು ಮತಗಟ್ಟೆಗಳು
    * 3 ಲಕ್ಷದ 56 ಸಾವಿರದ 552 – ಎಲೆಕ್ಷನ್ ಸಿಬ್ಬಂದಿ
    * 76 ಸಾವಿರದ 110 – ವಿವಿಪ್ಯಾಟ್‍ಗಳು
    * 82 ಸಾವಿರದ 157- ಭದ್ರತಾ ಸಿಬ್ಬಂದಿ

  • ಬಿಎಸ್‍ವೈ ನಿವೃತ್ತಿ ಜೀವನ ಸುಖಕರವಾಗಿ 100 ವರ್ಷ ಬಾಳಲಿ- ಸಚಿವ ಎಂಬಿ ಪಾಟೀಲ್

    ಬಿಎಸ್‍ವೈ ನಿವೃತ್ತಿ ಜೀವನ ಸುಖಕರವಾಗಿ 100 ವರ್ಷ ಬಾಳಲಿ- ಸಚಿವ ಎಂಬಿ ಪಾಟೀಲ್

    ವಿಜಯಪುರ: ಮೇ 17ರಂದು ಪ್ರಮಾಣ ವಚನ ಸ್ವೀಕಾರ ಮಾಡುತ್ತೇನೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ನಿಡಿರುವ ಹೇಳಿಕೆಗೆ ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಟಾಂಗ್ ನೀಡಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಬಿಎಸ್‍ವೈ ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಯುವಂತೆ ಮಾಡುತ್ತಿದ್ದಾರೆ. ಬಿಎಸ್‍ವೈ ಅವರನ್ನು ನೋಡಿದ್ರೆ ಪಾಪ ಕೆಟ್ರು ಅನಿಸುತ್ತದೆ ಎಂದರು.

    ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ಅವರಿಗೆ ಅರಳು ಮರಳು ಆಗಿ, ಹತಾಶರಾಗಿದ್ದಾರೆ. ಅಲ್ಲದೇ, ಅವರು ಮುಖ್ಯಮಂತ್ರಿ ಆಗುವುದಿಲ್ಲ. ಅವರ ಮುಂದಿನ ದಿನಗಳ ಬಗ್ಗೆ ದೇವರಲ್ಲಿ ಕೇಳಿಕೊಳ್ತೇನೆ. ಅವರ ನಿವೃತ್ತಿ ಜೀವನ ಸುಖಕರವಾಗಿ 100 ವರ್ಷ ಬಾಳಲಿ. ಹಾಗೇ ನನ್ನ ಹಾಗೇ ಅವರಿಗೂ ಬಿಪಿ ಜಾಸ್ತಿ ಇದೆ. ಅದಕ್ಕಾಗಿಯೇ ಬೆಳಗ್ಗೆ ಹಾಗೂ ಸಂಜೆ ವಾಕಿಂಗ್ ಮಾಡಿ ಆರಾಮಾಗಿರಲಿ ಎಂದು ಸಲಹೆ ನೀಡಿದರು.

  • ಗಮನಿಸಿ.. ನಾಳೆಯಿಂದ ಮೂರು ದಿನ ಬ್ಯಾಂಕ್‍ಗಳಿಗೆ ರಜೆ

    ಗಮನಿಸಿ.. ನಾಳೆಯಿಂದ ಮೂರು ದಿನ ಬ್ಯಾಂಕ್‍ಗಳಿಗೆ ರಜೆ

    ಬೆಂಗಳೂರು: ಬ್ಯಾಂಕ್ ಕೆಲಸ ಏನೇ ಇದ್ರೂ ಇಂದೇ ಮುಗಿಸಿಕೊಳ್ಳಿ. ಯಾಕಂದ್ರೆ ನಾಳೆಯಿಂದ ಮೂರು ದಿನ ಬ್ಯಾಂಕ್‍ಗಳಿಗೆ ರಜೆ ಇರಲಿದೆ.

    ಮೇ 12 ಚುನಾವಣೆ ನಿಮಿತ್ತ, ಬ್ಯಾಂಕ್ ಸಿಬ್ಬಂದಿಯನ್ನ ಬಳಕೆ ಮಾಡಿಕೊಳ್ಳೋದ್ರಿಂದ ಶುಕ್ರವಾರ, ಶನಿವಾರ ಬ್ಯಾಂಕ್‍ಗಳು ಓಪನ್ ಇರಲ್ಲ. ಇನ್ನು ಭಾನುವಾರ ರಜಾದಿನವಾಗಿರೋದ್ರಿಂದ ಸೋಮವಾರದ ತನಕ ಕಾಯಬೇಕಾಗುತ್ತೆ. ಹೀಗಾಗಿ ಬ್ಯಾಂಕ್ ಕೆಲಸವಿದ್ರೆ ಇಂದೇ ಮುಗಿಸಿಕೊಳ್ಳಿ.

    ಇನ್ನು ತಿಂಗಳ ಆರಂಭ ಮತ್ತು ವೀಕೆಂಡ್ ಅಂತಾ ಪಾರ್ಟಿ ಮೂಡ್‍ನಲ್ಲಿರುವ ಮದ್ಯಪ್ರಿಯರಿಗೆ ಕೂಡ ಚುನಾವಣಾ ಆಯೋಗ ಶಾಕ್ ನೀಡಿದೆ. ಇಂದು ಸಂಜೆ 5 ಗಂಟೆಯಿಂದ ಮದ್ಯದಂಗಡಿಗಳು ಬಂದ್ ಆಗಲಿವೆ. ಇಂದು ಸಂಜೆ 5 ಗಂಟೆಯಿಂದ ಮೇ 12ರ ಮಧ್ಯರಾತ್ರಿವರೆಗೆ ರಾಜ್ಯದ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚುವಂತೆ ಚುನಾವಣಾ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

    ವಿಧಾನಸಬಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಚುನಾವಣಾ ಆಯೋಗ ಎಲ್ಲ ರೀತಿಯಿಂದಲೂ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುತ್ತಿದೆ. ಇದೇ ಶನಿವಾರ ಮೇ 12ರಂದು ಮತದಾನ ನಡೆದರೆ, ಮೇ 15ರಂದು ಫಲಿತಾಂಶ ಹೊರಬರಲಿದೆ.

  • ದುರಹಂಕಾರಿ ಮನೋಭಾವ ಬದಲಿಸದಿದ್ದರೆ ಸಿಎಂ ಸೋಲ್ತಾರೆ- ಜನಾರ್ದನ ಪೂಜಾರಿ

    ದುರಹಂಕಾರಿ ಮನೋಭಾವ ಬದಲಿಸದಿದ್ದರೆ ಸಿಎಂ ಸೋಲ್ತಾರೆ- ಜನಾರ್ದನ ಪೂಜಾರಿ

    ಮಂಗಳೂರು: ಕಾಂಗ್ರೆಸ್ ನಾಯಕರ ವಿರುದ್ಧ ಪ್ರತೀ ಬಾರಿಯೂ ಗುಡುಗುತ್ತಿರುವ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅವರು ಈ ಬಾರಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

    ನಗರದ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯರಿಗೆ ಸಲಹೆಗಳನ್ನು ಕೊಟ್ಟಿದ್ದು ಹೌದು. ದುರಹಂಕಾರಿ ಮನೋಭಾವ ಬದಲಿಸದಿದ್ದರೆ ಸೋಲ್ತಾರೆ ಎಂದಿದ್ದೆ. ಪಕ್ಷಕ್ಕಿಂತ ತಾನೇ ದೊಡ್ಡವನೆಂದು ನಡೆದುಕೊಂಡರೆ ಉಳಿಗಾಲವಿಲ್ಲ. ಈಗಲೂ ಹೇಳ್ತೇನೆ, ದುರಹಂಕಾರ ಬಿಟ್ಟರೆ ಸಿದ್ದರಾಮಯ್ಯ ಉಳೀತಾರೆ. ಇಲ್ಲಾಂದ್ರೆ ಸೋಲುತ್ತಾರೆ, ಸಲಹೆ ಕೊಟ್ಟಿದ್ದು ಕಾಂಗ್ರೆಸ್ ಉಳಿವಿಗೆ. ಆದರೆ, ಸಿದ್ದರಾಮಯ್ಯ ಆಡಳಿತವನ್ನು ಒಳ್ಳೆದಾಗಿ ನಡೆಸಿದ್ದಾರೆ. ಮುಂದೇನು ಸಿದ್ರಾಮಯ್ಯರೇ ಸಿಎಂ ಆಗ್ತಾರೆ ಅಂತ ಹೇಳಿದ್ದಾರೆ.

    ಇದೇ ವೇಳೆ ಜೆ.ಆರ್ ಲೋಬೋ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಲೋಬೋ ಬಂಟ ಸಮಾಜದ ವಿರೋಧಿಯೆಂದು ಹೇಳುತ್ತಿದ್ದಾರೆ. ಅಲೋಶಿಯಸ್ ಕಾಲೇಜು ರಸ್ತೆಗೆ ಸುಂದರರಾಮ್ ಶೆಟ್ಟಿ ಹೆಸರಿಡುವ ವಿಚಾರದಲ್ಲಿ ಬಂಟರನ್ನು ಎತ್ತಿಕಟ್ಟುತ್ತಿದ್ದಾರೆ. ಬಂಟರಿಗೆ ಕಾಂಗ್ರೆಸ್ಸಿನಲ್ಲಿ ಸಾಕಷ್ಟು ಅವಕಾಶ ನೀಡಲಾಗಿದೆ. ವಿಜಯಾ ಬ್ಯಾಂಕಿನಲ್ಲಿ ಎಷ್ಟು ಮಂದಿ ಬಂಟರು ಅಧ್ಯಕ್ಷರಾಗಿಲ್ಲ. ಇಂಥ ಅಪಪ್ರಚಾರ ಏನಿದ್ದರೂ ಲೋಬೋ ಈ ಬಾರಿ ಗೆಲ್ತಾರೆ. ರಾಜ್ಯದಲ್ಲಿ ಮತ್ತೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬರುತ್ತದೆ ಅಂತ ಅವರು ತಿಳಿಸಿದ್ರು.

    ಪೂಜಾರಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದಂತೆಯೇ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಎದ್ದು ಹೋಗಿದ್ದು, ಹರೀಶ್ ಕುಮಾರ್ ವಿರುದ್ಧ ಜನಾರ್ದನ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು. ಹರೀಶ್ ಕುಮಾರ್ ಯಾಕೆ ಎದ್ದು ಹೋದ್ರು? ನನಗಿಂತ ಚಿದಂಬರಂ ಮುಖ್ಯ ಆಯ್ತಾ? ಚಿದಂಬರಂ ಚುನಾವಣಾ ಸಮಯದಲ್ಲಿ ಮಾತ್ರ ಬರ್ತಾರೆ. ಚಿದಂಬರಂ ಮಾಡಿದ್ದನ್ನು ಬಿಜೆಪಿಯವರು ಹೇಳಿದ್ರೆ ಕಾಂಗ್ರೆಸ್ ಸರ್ವನಾಶ ಆಗ್ಬಹುದು. ಚಿದಂಬರಂ ಏನೆಲ್ಲ ಮಾಡಿಟ್ಟಿದ್ದಾರೆ ನಿಮಗೆ ಗೊತ್ತಾ? ಹರೀಶ್ ಕುಮಾರ್ ಯಾಕೆ ಇಲ್ಲಿ ಆಟ ಆಡೋಕೆ ಬಂದಿದ್ದಾ ಅಂತ ತುಳು ಭಾಷೆಯಲ್ಲೇ ಕಾಂಗ್ರೆಸ್ ಮುಖಂಡರನ್ನು ಗದರಿಸಿದ್ರು.

    https://www.youtube.com/watch?v=aZPVzgALjqk

  • ಮಂಗ್ಳೂರಲ್ಲಿ ನಕಲಿ ಮತದಾರರ ಸೃಷ್ಠಿ- ಕಾಂಗ್ರೆಸ್ ವಿರುದ್ಧ ಬಿಜೆಪಿ ದೂರು

    ಮಂಗ್ಳೂರಲ್ಲಿ ನಕಲಿ ಮತದಾರರ ಸೃಷ್ಠಿ- ಕಾಂಗ್ರೆಸ್ ವಿರುದ್ಧ ಬಿಜೆಪಿ ದೂರು

    ಮಂಗಳೂರು: ಚುನಾವಣೆಯಲ್ಲಿ ಅಧಿಕಾರಿಗಳನ್ನು ವಂಚಿಸಿ ನಕಲಿ ಮತ ಹಾಕೋದನ್ನು ಕೇಳಿದ್ದೇವೆ. ಆದರೆ, ಇಲ್ಲಿ ರಾಜಾರೋಷವಾಗಿಯೇ ನಕಲಿ ಮತದಾರರನ್ನು ಸೃಷ್ಟಿಸಲಾಗಿದೆ.

    ಮಂಗಳೂರು ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಹಾಸ್ಟೆಲ್ ಗಳಲ್ಲಿ ವಾಸವಿರುವ ಹೊರರಾಜ್ಯದ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಮತಪಟ್ಟಿಗೆ ಸೇರಿಸಲಾಗಿದೆ. ಕೇರಳ ಮೂಲದ ಸಾವಿರಾರು ವಿದ್ಯಾರ್ಥಿಗಳು ಮಂಗಳೂರಿನಲ್ಲಿದ್ದು ತಾತ್ಕಾಲಿಕ ನೆಲೆಯಲ್ಲಿ ಹೊರಗಡೆ ಇದ್ದರೂ, ಅವರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ.

    ಈ ಪೈಕಿ ಕೆಲವರ ಹೆಸರು ಕೇರಳದಲ್ಲಿಯೂ ಚಾಲ್ತಿಯಲ್ಲಿರುವುದು ಕಂಡುಬಂದಿದೆ. ದೀನಾ ಶಾಜಿ ಎನ್ನುವ ವಿದ್ಯಾರ್ಥಿನಿ ಕೇರಳದಲ್ಲಿ ಇಲೆಕ್ಟೋರಲ್ ಡಿವಿಶನ್ (ಚುನಾವಣಾ ವಿಭಾಗ)ದಲ್ಲಿ ಹೆಸರು ಹೊಂದಿದ್ದರೂ, ಮಂಗಳೂರಿನಲ್ಲಿ ಮತಪಟ್ಟಿಗೆ ಹೆಸರು ನೋಂದಣಿ ಮಾಡಿಸಿದ್ದು, ಎರಡು ಕಡೆ ಮತದಾನದ ಹಕ್ಕು ಪಡೆದಿದ್ದು, ಅಪರಾಧವಾಗಿದೆ.

    ಮಂಗಳೂರಿನಲ್ಲಿ ಹೀಗೆ ಶೇ.350 ರಷ್ಟು ಕೇರಳ ಮೂಲದವರು ಎರಡು ಕಡೆ ಮತದಾನದ ಹಕ್ಕು ಹೊಂದಿರುವುದನ್ನು ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಪತ್ತೆ ಮಾಡಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿರುವ ಬಿಜೆಪಿ, ಈ ನಕಲಿ ಮತದಾರರ ಸೃಷ್ಟಿಯ ಹಿಂದೆ ಕಾಂಗ್ರೆಸ್ ಕೈವಾಡ ಇದೆ. ಹಾಲಿ ಶಾಸಕ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್ ಲೋಬೊ ಸೋಲುವ ಭೀತಿಯಿಂದ ಹೊರರಾಜ್ಯದ ವಿದ್ಯಾರ್ಥಿಗಳನ್ನು ಮತದಾನದ ಪಟ್ಟಿಗೆ ಸೇರಿಸಿದ್ದಾರೆ ಅಂತಾ ಆರೋಪಿಸಿದ್ದಾರೆ.

  • ಪ್ರಧಾನಿ ಮೋದಿಯನ್ನು ಮುಗ್ಸಿಬಿಡಿ- ಕರ್ನಾಟಕದ ಜನತೆಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕರೆ

    ಪ್ರಧಾನಿ ಮೋದಿಯನ್ನು ಮುಗ್ಸಿಬಿಡಿ- ಕರ್ನಾಟಕದ ಜನತೆಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕರೆ

    ಬೆಂಗಳೂರು: ಪ್ರಧಾನಿ ಮೋದಿಯನ್ನು ಮುಗಿಸಿಬಿಡಿ ಹೀಗಂತ ಕರ್ನಾಟಕದ ಜನರಿಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್ ಎಸ್ ದೊರೆಸ್ವಾಮಿ ಕರೆ ಕೊಟ್ಟಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತಾನಾಡಿದ ದೊರೆಸ್ವಾಮಿ ಅವರು, ಕರ್ನಾಟಕದಲ್ಲಿ ಮೋದಿ ಪಕ್ಷಕ್ಕೆ ಮತವನ್ನು ಕೊಡಬೇಡಿ, ಸರ್ವಾಧಿಕಾರಿ ಧೋರಣೆ, ನೀಚತನದ ಮಾತನ್ನಾಡುವ ಮೋದಿಯನ್ನು ಮುಗಿಸಿ, ಸೋಲುನುಣಿಸಬೇಕು. ಆತ ಮಾಡೋದೆಲ್ಲ ತಪ್ಪು ಕೆಲ್ಸ ಅಂತಾ ಏಕವಚನದಲ್ಲಿಯೇ ಅಂತಾ ಕಿಡಿಕಾರಿದ್ರು.

    ಕರ್ನಾಟಕ ಬಿಜೆಪಿಯಲ್ಲಿ ಲೀಡರ್‍ಗಳೇ ಇಲ್ಲ. ಕರ್ನಾಟಕ ವರ್ಸಸ್ ಮೋದಿ ಅನ್ನುವಂತಾಗಿದೆ. ಯಡಿಯೂರಪ್ಪ ಒಬ್ಬ ಡಮ್ಮಿ ಕ್ಯಾಂಡಿಡೇಟ್ ಅಂತಾ ಲೇವಡಿ ಮಾಡಿದ್ದಾರೆ.

    ಅತಂತ್ರ ಸರ್ಕಾರ ನಿರ್ಮಾಣವಾದ್ರೇ, ಜೆಡಿಎಸ್ ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಕೈಜೋಡಿಸಬಾರದು ಅಂತಾ ಈಗಾಗಲೇ ದೇವೇಗೌಡರಿಗೆ ಹೇಳಿದ್ದೇನೆ. ಮೂವತ್ತು ನಲವತ್ತು ಇಟ್ಕೊಂಡು ವ್ಯವಹಾರ ಮಾಡಬೇಡಿ. ಪದೇ ಪದೇ ನಿಮ್ಮ ಮಗ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕೆಂದು ಕುಡಿಕೆ ಗಂಜಿ ಆಸೆಗೆ ಬಿದ್ದು ಆತ್ಮ ಮಾರಿಕೊಳ್ಳಬೇಡಿ ಅಂತಾ ಹೇಳಿದ್ದೇನೆ. ಅವರು ನನ್ನ ಮಾತು ಕೇಳ್ತಾರೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ರು.

    ದೇಶದ ಒಳಿತಿಗಾಗಿ ಜೆಡಿಎಸ್ ಕಾಂಗ್ರೆಸ್ ಜೊತೆಗಿನ ಭಿನ್ನಾಬಿಪ್ರಾಯ ಮರೆತು ಕೈಜೋಡಿಸಬೇಕು. ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿಯಾಗಬೇಕು ಅಂದ್ರು.