Tag: karnataka elections

  • ಪೊಲೀಸ್ ಅಧಿಕಾರಿಗಳ ಮೇಲೆ ಚುನಾವಣಾ ಆಯೋಗದ ಹದ್ದಿನ ಕಣ್ಣು

    ಪೊಲೀಸ್ ಅಧಿಕಾರಿಗಳ ಮೇಲೆ ಚುನಾವಣಾ ಆಯೋಗದ ಹದ್ದಿನ ಕಣ್ಣು

    ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆಯೇ ಚುನಾವಣಾ ಅಧಿಕಾರಿಗಳು, ರಾಜಕೀಯ ನಾಯಕರು ಸೇರಿದಂತೆ ಎಲ್ಲ ವಿಭಾಗಗಳ ಮೇಲೆಯೂ ಕಣ್ಣಿಟ್ಟಿದ್ದಾರೆ. ಚೆಕ್ ಪೋಸ್ಟ್ ಗಳ ನಿರ್ಮಾಣ ಮಾಡುವ ಮೂಲಕ ದಾಖಲೆಯಿಲ್ಲದ ಅಪಾರ ಹಣವನ್ನು ಅಧಿಕಾರಿಗಳು ವಶಪಡಿಸಿಕೊಳ್ಳುತ್ತಿದ್ದಾರೆ. ಸದ್ಯ ಪೊಲೀಸ್ ಅಧಿಕಾರಿಗಳ ಮೇಲೆಯೂ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದೆ.

    ಕೆಲ ಪೊಲೀಸ್ ಅಧಿಕಾರಿಗಳು ಚುನಾವಣೆಯಲ್ಲಿ ಸ್ಪರ್ಧಿಸುವವರಿಗೆ ಸಹಕಾರ ನೀಡ್ತಾರೆ ಅಂತಾ ಆರ್‍ಟಿಐ ಕಾರ್ಯಕರ್ತ ಹನುಮೇಗೌಡ ಎಂಬವರು ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾದ ಕ್ಷಣದಿಂದ ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೂ ಪೊಲೀಸ್ ಅಧಿಕಾರಿಗಳು ಪ್ರತಿನಿತ್ಯ ದಿನಚರಿ ಬರೆಯಬೇಕು.

    ರಾಜ್ಯದ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ದಿನಚರಿ ಬಗ್ಗೆ ಎಚ್ಚರಿಸಿ ಚುನಾವಣಾ ಆಯೋಗ ಪತ್ರ ಬರೆದಿದೆ. ಚುನಾವಣಾ ನೀತಿ ಸಂಹಿತೆಯಲ್ಲಿ ಪೊಲೀಸ್ ಅಧಿಕಾರಿಗಳು ದಿನಚರಿ ಬರೆಯಬೇಕೆಂಬ ಅಂಶವಿದೆ. ಆದ್ರೆ ಇಲ್ಲಿಯವರೆಗೂ ಈ ನಿಯಮವನ್ನ ಗಂಭೀರವಾಗಿ ಪರಿಗಣಿಸಿರಲಿಲ್ಲ. ಈ ಬಾರಿ ಪೊಲೀಸ್ ಅಧಿಕಾರಿಗಳ ದಿನಚರಿ ಬಗ್ಗೆ ಚುನಾವಣಾ ಆಯೋಗ ಎಚ್ಚರಿಸಿದೆ.

  • ಬಿಜೆಪಿಯ 72 ಮಂದಿ ಅಧಿಕೃತ ಅಭ್ಯರ್ಥಿಗಳ ಪಟ್ಟಿ ರಿಲೀಸ್: ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧೆ?

    ಬಿಜೆಪಿಯ 72 ಮಂದಿ ಅಧಿಕೃತ ಅಭ್ಯರ್ಥಿಗಳ ಪಟ್ಟಿ ರಿಲೀಸ್: ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧೆ?

    ನವದೆಹಲಿ: ಬಿಜೆಪಿಯ ಗೆಲ್ಲುವ ಕುದುರೆಗಳ ಮೊದಲ ಲಿಸ್ಟ್ ಭಾನುವಾರ ರಾತ್ರಿ ಬಿಡುಗಡೆಯಾಗಿದೆ.

    ದೆಹಲಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ದೀರ್ಘ ಚರ್ಚೆ ನಡೆದಿದ್ದು, ಮೊದಲ ಲಿಸ್ಟ್ ನಲ್ಲಿ 72 ಜನರ ಹೆಸರು ಪ್ರಕಟವಾಗಿದೆ.

    ರಾಜ್ಯದಲ್ಲಿ ನಡೆಸಲಾಗಿರುವ ಸುಮಾರು 16 ರೀತಿಯ ಸಮೀಕ್ಷೆಗಳನ್ನ ಆಧರಿಸಿ ವರಿಷ್ಠರು ಟಿಕೆಟ್ ಫೈನಲ್ ಮಾಡಿದ್ದಾರೆ ಎನ್ನಲಾಗಿದೆ. ಈ ಮಧ್ಯೆ, ಕಾಂಗ್ರೆಸ್‍ಗೆ ಗುಡ್‍ಬೈ ಹೇಳಿದ್ದ ಮಾಲೀಕಯ್ಯ ಗುತ್ತೇದಾರ್ ಬಿಜೆಪಿಗೆ ಸೇರಿಕೊಂಡಿದ್ದಾರೆ.

  • ಮತದಾನ ಜಾಗೃತಿ ಮೂಡಿಸುವ ಫಲಕದಲ್ಲಿ ಚುನಾವಣಾ ಅಧಿಕಾರಿಗಳಿಂದ ಎಡವಟ್ಟು

    ಮತದಾನ ಜಾಗೃತಿ ಮೂಡಿಸುವ ಫಲಕದಲ್ಲಿ ಚುನಾವಣಾ ಅಧಿಕಾರಿಗಳಿಂದ ಎಡವಟ್ಟು

    ಚಾಮರಾಜನಗರ: ಜನರಲ್ಲಿ ವಿಧಾನಸಭಾ ಚುನಾವಣೆಯ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಚುನಾವಣಾ ಅಧಿಕಾರಿಗಳು ಚಾಮರಾಜನಗರದಲ್ಲಿ ಎಡವಟ್ಟೊಂದು ಮಾಡಿದ್ದಾರೆ.

    ಚಾಮರಾಜನಗರದಲ್ಲಿ 2014 ನೇ ಸಾಲಿನಲ್ಲಿ ನಡೆದ ಲೋಕಸಭಾ ಚುನಾವಣೆಯ ಪೋಸ್ಟರ್‍ಗಳನ್ನು ಬಳಸಿ ಕಡ್ಡಾಯ ಮತದಾನ ಮಾಡಿ ಎಂದು ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ. 2014 ರ ಲೋಕಸಭಾ ಚುನಾವಣೆಯಲ್ಲಿ ಅಬ್ದುಲ್ ಕಲಾಂ ಅವರು ಬ್ರಾಂಡ್ ಅಂಬಾಸಿಡರ್ ಆಗಿದ್ದರು. ಆ ವೇಳೆ ಅಬ್ದುಲ್ ಕಲಾಂರ ಭಾವಚಿತ್ರದೊಂದಿಗೆ ಲೋಕಸಭಾ ಚುನಾವಣೆಯಲ್ಲಿ ಭಾಗಿ ಆಗುವಂತೆ ಕೋರಲಾಗಿದ್ದ ಪೋಸ್ಟರ್ ಗಳು ಚಾಮರಾಜನಗರದಲ್ಲಿ ರಾರಾಜಿಸುತ್ತಿವೆ.

    ಈ ಬಾರಿಯ ವಿಧಾನಸಭಾ ಚುನಾವಣೆಯ ಬಗ್ಗೆ ಜನರಲ್ಲಿ ಮತದಾನ ಜಾಗೃತಿ ಮೂಡಿಸಲು ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರನ್ನು ನೇಮಕ ಮಾಡಿಕೊಂಡಿದೆ. ಹೀಗಾಗಿ ಎಲ್ಲಾ ಜಿಲ್ಲೆಗಳಲ್ಲೂ ದ್ರಾವಿಡ್ ಅವರ ಭಾವ ಚಿತ್ರವನ್ನು ಹಾಕಿ ಕಡ್ಡಾಯವಾಗಿ ಮತದಾನ ಮಾಡಿ ಎಂದು ಚುನಾವಣಾ ಅಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ.

  • ಲಿಂಗಾಯತರೆಲ್ಲ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‍ಗೆ ಮತ ಹಾಕಿ -ಮಾತೆ ಮಹಾದೇವಿ ಕರೆ

    ಲಿಂಗಾಯತರೆಲ್ಲ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‍ಗೆ ಮತ ಹಾಕಿ -ಮಾತೆ ಮಹಾದೇವಿ ಕರೆ

    ಬೆಂಗಳೂರು: ಚುನಾವಣೆ ಸನೀಹದಲ್ಲಿ ಬಸವ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಧರ್ಮ ರಾಜಕಾರಣಕ್ಕೆ ಮುನ್ನುಡಿ ಬರೆದಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಿ. ಆ ಪಕ್ಷಕ್ಕೆ ಮತ ನೀಡಿ ಎಂದು ಲಿಂಗಾಯತರಿಕೆ ಕರೆ ನೀಡಿದ್ದಾರೆ.

    ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಕ್ಷೇಪ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆದ ಜಾಗತಿಕ ಲಿಂಗಾಯತ ಮಹಾಸಭಾದ ತುರ್ತು ಸಭೆಯಲ್ಲಿ ಮಾತೆ ಮಹಾದೇವಿ ಈ ಘೋಷಣೆ ಹೊರಡಿಸಿದ್ದಾರೆ. ಸ್ವತಂತ್ರ ಧರ್ಮ ಮಾನ್ಯತೆಗೆ ಶ್ರಮಿಸೋ ಪಕ್ಷಕ್ಕೆ ಮತ. ಎಲ್ಲರು ಕಾಂಗ್ರೆಸ್ ಬೆಂಬಲಿಸಬೇಕು ಅಂತಾ ಹೇಳಿದ್ರು.

    ಅಮಿತ್ ಶಾ ರಾಜ್ಯದ ಶಿಫಾರಸ್ಸು ನಮಗೆ ತಲುಪಿಯೇ ಇಲ್ಲ ಎನ್ನುತ್ತಿದ್ದಾರೆ. ಈ ರೀತಿಯಾಗಿ ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಶಾ ವಿರುದ್ಧ ಮಾತೆ ಕಿಡಿಕಾರಿದ್ರು. ಮುಂದಿನ ಬಸವ ಜಯಂತಿಯಂದು ನಮಗೆ ಸಿಹಿ ಸುದ್ದಿ ನೀಡಬೇಕು ಅಂತಾ ಕೇಂದ್ರ ಸರ್ಕಾರಕ್ಕೆ ಡೆಡ್‍ಲೈನ್ ನೀಡಿದ್ರು. ಇದೇ ವೇಳೆ ಮಾತನಾಡಿದ ಸಾರಂಗ ಶ್ರೀಗಳು, “ಗಂಡಸು” ಅಂದ್ರ್ರೆ ಸಿದ್ದರಾಮಯ್ಯ ಅಂತಾ ಹೊಗಳಿದ್ರು. ಇನ್ನು ಶೀಘ್ರವೇ ಪ್ರಧಾನಿ ಭೇಟಿಯಾಗಲು ಲಿಂಗಾಯಿತ ಮಹಾಸಭಾ ನಿರ್ಧಾರ ಕೈಗೊಂಡಿದೆ ಅಂತಾ ಸಭೆಯಲ್ಲಿ ತಿಳಿಸಲಾಯಿತು.