Tag: karnataka elections

  • ನನ್ನ ಬಗ್ಗೆ ಮಾತಾಡಿದ್ರೆ ಹಳ್ಳಿ ಜನರು ನಿನ್ನನ್ನು ಚಪ್ಪಲಿಯಲ್ಲಿ ಹೊಡಿತಾರೆ: ಶಾಸಕ ಅನ್ಸಾರಿ ವಿರುದ್ಧ ಜೆಡಿಎಸ್ ಅಭ್ಯರ್ಥಿ ಗುಡುಗು

    ನನ್ನ ಬಗ್ಗೆ ಮಾತಾಡಿದ್ರೆ ಹಳ್ಳಿ ಜನರು ನಿನ್ನನ್ನು ಚಪ್ಪಲಿಯಲ್ಲಿ ಹೊಡಿತಾರೆ: ಶಾಸಕ ಅನ್ಸಾರಿ ವಿರುದ್ಧ ಜೆಡಿಎಸ್ ಅಭ್ಯರ್ಥಿ ಗುಡುಗು

    ಕೊಪ್ಪಳ: ಮುಂದಿನ ದಿನಗಳಲ್ಲಿ ನನ್ನ ಬಗ್ಗೆ ಮಾತಾಡಿದ್ರೆ ಹಳ್ಳಿಯ ಜನರು ನಿನ್ನನ್ನು ಚಪ್ಪಲಿ ತಗೊಂಡು ಹೊಡೀತಾರೆ ಎಂದು ಶಾಸಕ ಇಕ್ಬಾಲ್ ಅನ್ಸಾರಿ ವಿರುದ್ಧ ಜೆಡಿಎಸ್ ಅಭ್ಯರ್ಥಿ ಕರಿಯಣ್ಣ ಸಂಗಟಿ ಏಕವಚನದಲ್ಲಿಯೇ ಗುಡುಗಿದ್ದಾರೆ.

    ಕೊಪ್ಪಳದ ಗಂಗಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಇಕ್ಬಾಲ್ ಅನ್ಸಾರಿ, ಎರಡು ದಿನದ ಹಿಂದೆ ಸುದ್ದಿಗೋಷ್ಠಿ ಕರೆದು ಗಂಗಾವತಿಯ ಜೆಡಿಎಸ್ ಅಭ್ಯರ್ಥಿಯಾದ ಕರಿಯಣ್ಣ ಸಂಗಟಿ ಒಬ್ಬ ಅಮಾಯಕ, ಜೆಡಿಎಸ್ ಪಕ್ಷಕ್ಕೆ ಬಲಿಯಾಗೋಕೆ ಬಂದಿದ್ದಾನೆ ಎಂದು ಅಪಹಾಸ್ಯ ಮಾಡಿದ್ದರು. ಇಕ್ಬಾಲ್ ಅನ್ಸಾರಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಸಂಗಟಿ ಇನ್ನೊಂದು ಸಲ ನನ್ನ ಬಗ್ಗೆ ಈ ರೀತಿ ಮಾತಾಡಿದ್ರೆ ಕ್ಷೇತ್ರದ ಜನರೇ ಬುದ್ದಿ ಕಲಿಸ್ತಾರೆ ಅಂತಾ ತಿರುಗೇಟು ನೀಡಿದ್ದಾರೆ.

    ಕ್ಷೇತ್ರದಲ್ಲಿ ನನಗೆ ಜನ ಬೆಂಬಲವಿದೆ. ಮುಂದಿನ ದಿನಗಳಲ್ಲಿ ಜನರು ನನಗೆ ಆಶೀರ್ವಾದ ಮಾಡ್ತಾರೆ. ಆದ್ರೆ ನಿನ್ನ ಬಾಯಿಂದ ಬರೋ ಶಬ್ಧಗಳೇ ನಿನ್ನ ಸೋಲಿಗೆ ಕಾರಣವಾಗುತ್ತದೆ ಎಂದು ಅನ್ಸಾರಿ ಅವರಿಗೆ ಎಚ್ಚರಿಕೆ ನೀಡಿದರು.

  • ಮದ್ಯಪ್ರಿಯರ ಕನಸನ್ನ ಭಗ್ನಗೊಳಿಸಿದ ಚುನಾವಣಾ ಆಯೋಗ!

    ಮದ್ಯಪ್ರಿಯರ ಕನಸನ್ನ ಭಗ್ನಗೊಳಿಸಿದ ಚುನಾವಣಾ ಆಯೋಗ!

    ಬೆಂಗಳೂರು: ಚುನಾವಣಾ ದಿನಾಂಕ ಘೋಷಣೆ ಆಗುತ್ತಿದಂತೆ ಮುಂದಿನ ಕೆಲವು ದಿನ ಪುಕ್ಕಟ್ಟೆಯಾಗಿ ಸಾರಾಯಿ ಸಿಗುತ್ತೆ ಅಂತಾ ಖುಷಿಯಲ್ಲಿದ್ದ ಮದ್ಯ ಪ್ರಿಯರ ಕನಸನ್ನು ಚುನಾವಣಾ ಆಯೋಗ ಭಗ್ನಗೊಳಿಸಿದೆ.

    ಚುನಾವಣೆ ಸಮಯದಲ್ಲಿ ಮತದಾರರನ್ನು ಸೆಳೆಯಲು ಕೆಲ ರಾಜಕಾರಣಿಗಳು ಮದ್ಯ ಹಂಚಲು ಮುಂದಾಗುತ್ತಾರೆ. ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ ಆದಾಗಿನಿಂದ ಪ್ರತಿನಿತ್ಯ ರಾಜ್ಯಾದ್ಯಂತ ಅಧಿಕಾರಿಗಳು ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಅಕ್ರಮ ಮದ್ಯ ಸಾಗಾಟ ನಿಯಂತ್ರಿಸಲು ಚುನಾವಣಾ ಅಧಿಕಾರಿಗಳು ಬೆಂಗಳೂರು ಸೇರಿದಂತೆ ಅಕ್ರಮ ಬಾರ್ ಗಳಿಗೆ ಬೀಗ ಹಾಕಿದ್ದಾರೆ.

    ಪರವಾನಿಗೆಯನ್ನು ನವೀಕರಣ ಮಾಡಿಕೊಳ್ಳದ ಬಾರ್‍ಗಳನ್ನು ಸಹ ಮುಚ್ಚುವಂತೆ ಆದೇಶ ಹೊರಡಿಸಲಾಗಿದೆ. ಟೋಕನ್ ಗಳ ಮೂಲಕ ಮತದಾರರಿಗೆ ಮದ್ಯ ಹಂಚಲಾಗುತ್ತಿದೆ ಎಂಬ ಮಾತುಗಳು ಕೇಳಿಬರತೊಡಗಿದ್ದವು. ಈ ಹಿನ್ನೆಲೆಯಲ್ಲಿ ಲೈಸನ್ಸ್ ಪಡೆಯದೇ ತೆರೆದಿರುವ ಬಾರ್‍ಗಳನ್ನು ಗುರುತಿಸಿ, ಅವುಗಳಿಗೆ ಬೀಗ ಹಾಕಲಾಗಿದೆ.

    ಕರ್ನಾಟಕದಾದ್ಯಂತ ಒಟ್ಟು 508 ಅಕ್ರಮ ಬಾರ್ ಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 245 ಬೆಂಗಳೂರು ನಗರದಲ್ಲಿವೆ. ಮತದಾರರಿಗೆ ಮದ್ಯ ಹಂಚುವ ಮೂಲಕ ವೋಟ್ ಪಡೆಯಲು ಮುಂದಾಗಿದ್ದವರಿಗೆ ಚುನಾವಣಾ ಆಯೋಗ ಸರಿಯಾಗಿಯೇ ಬಿಸಿ ಮುಟ್ಟಿಸಿದೆ.

    ಬೆಂಗಳೂರು ನಗರದಲ್ಲಿ ಮುಚ್ಚಲ್ಪಟ್ಟ ಬಾರ್ ಗಳ ಪಟ್ಟಿ ಹೀಗಿದೆ:
    ಬೆಂಗಳೂರು ಪೂರ್ವ ವಿಭಾಗ- 123
    ಬೆಂಗಳೂರು ದಕ್ಷಿಣ ವಿಭಾಗ- 62
    ಬೆಂಗಳೂರು ಪೂರ್ವ ವಿಭಾಗ- 56
    ಬೆಂಗಳೂರು ಪಶ್ಚಿಮ ವಿಭಾಗ- 4

     

  • ಪ್ರಚಾರದ ಭರಾಟೆಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ ವಿಜಯೇಂದ್ರ

    ಪ್ರಚಾರದ ಭರಾಟೆಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ ವಿಜಯೇಂದ್ರ

    ಮೈಸೂರು: ಚುನಾವಣಾ ಪ್ರಚಾರದ ಭರದಲ್ಲಿ ಮಾಜಿ ಸಿಎಂ ಪುತ್ರ ವಿಜಯೇಂದ್ರ ಸಂಚಾರಿ ನಿಯಮವನ್ನು ಉಲ್ಲಂಘಿಸಿದ್ದಾರೆ.

    ವರುಣಾ ವಿಧಾನಸಭಾ ಕ್ಷೇತ್ರದ ಹಿರಿಯೂರು ಗ್ರಾಮದಲ್ಲಿ ಹೆಲ್ಮೆಟ್ ಇಲ್ಲದೇ ಬೈಕ್ ನಲ್ಲಿ ಪ್ರಚಾರ ನಡೆಸಿದ್ರು. ಬೈಕ್ ಸವಾರ ಹಾಗೂ ಹಿಂಬದಿ ಸವಾರ ಖಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕೆಂಬ ನಿಯಮವಿದೆ. ಆದ್ರೂ ನಿಯಮವನ್ನ ಗಾಳಿಗೆ ತೂರಿದ ವಿಜಯೇಂದ್ರ ಬೈಕ್ ನ ಹಿಂಬದಿಯಲ್ಲಿ ಕುಳಿತು ಸಾಗಿದರು.

    ಬಿಜೆಪಿ ಮೂರನೇ ಪಟ್ಟಿಯಲ್ಲೂ ವಿಜಯೇಂದ್ರ ಅವರ ಹೆಸರು ಘೋಷಣೆ ಆಗಿಲ್ಲ. ಆದ್ರೂ ಬಿ.ವೈ ವಿಜಯೇಂದ್ರ ನಾಮಪತ್ರ ಸಲ್ಲಿಕೆಗೆ ಮುಹೂರ್ತ ನಿಗದಿ ಮಾಡಲಾಗಿದೆ. ಇಂದು ವರುಣಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದಾರೆ ಅಂತಾ ಬಿಜೆಪಿ ಮೂಲಗಳು ತಿಳಿಸಿವೆ. ನಾಮಪತ್ರ ಸಲ್ಲಿಕೆ ವೇಳೆ ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಸಂಸದ ಶ್ರೀ ರಾಮುಲು, ಮಾಜಿ ಸಚಿವರುಗಳಾದ ವಿ.ಶ್ರೀನಿವಾಸ್ ಪ್ರಸಾದ್, ಗೋವಿಂದ್ ಕಾರಜೋಳ, ಶಿಕಾರಿಪುರದ ಶಾಸಕ ಬಿ.ವೈ. ರಾಘವೇಂದ್ರ, ನಿವೃತ್ತ ಪೊಲೀಸ್ ಅಧಿಕಾರಿ ಎಲ್. ರೇವಣ್ಣ ಸಿದ್ದಯ್ಯ, ಹಿಂದುಳಿದ ಮೋರ್ಚ ರಾಜ್ಯಾಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಸೇರಿದಂತೆ ಹಲವು ಮುಖಂಡರು ಸಾಥ್ ನೀಡಲಿದ್ದಾರೆ.

  • 5 ದಿನ 15 ರ‍್ಯಾಲಿಯಲ್ಲಿ ಮೋದಿ ಭಾಗಿ – ಯಾವ ದಿನ ಎಲ್ಲೆಲ್ಲಿ ಕಾರ್ಯಕ್ರಮ?

    5 ದಿನ 15 ರ‍್ಯಾಲಿಯಲ್ಲಿ ಮೋದಿ ಭಾಗಿ – ಯಾವ ದಿನ ಎಲ್ಲೆಲ್ಲಿ ಕಾರ್ಯಕ್ರಮ?

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಕೆಲ ದಿನಗಳು ಬಾಕಿ ಇದ್ದು, ರಾಜ್ಯದಲ್ಲಿ ಬಿಜೆಪಿ ಪರ ಪ್ರಚಾರ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಪ್ರವಾಸದ ಪಟ್ಟಿ ತಯಾರಾಗಿದೆ.

    ಮೇ 1 ರಂದು ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದು, 5 ದಿನ ವಿವಿಧ ಜಿಲ್ಲೆಗಳಲ್ಲಿ ನಡೆಯುವ 15 ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ. ವಿಶೇಷ ಏನೆಂದರೆ ಬೆಂಗಳೂರಿನಲ್ಲಿ ಎರಡು ಬೃಹತ್ ರ‍್ಯಾಲಿಗಳಲ್ಲಿ ಮೋದಿ ಭಾಗಿಯಾಗಲಿದ್ದಾರೆ.

    ಫೆಬ್ರವರಿ ಮೊದಲ ವಾರದಲ್ಲಿ ಮೋದಿ ಬೆಂಗಳೂರಿನಲ್ಲಿ ನಡೆದ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದಾದ ಬಳಿಕ ಫೆಬ್ರವರಿ 27 ರಂದು ದಾವಣಗೆರೆಯಲ್ಲಿ ರೈತ ಬಂಧು ಯಡಿಯೂರಪ್ಪ ಸಮಾವೇಶದಲ್ಲಿ ಭಾಗವಹಿಸಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.

    ತ್ರಿಪುರಾ ಮತ್ತು ಗುಜರಾತ್ ನಲ್ಲಿ  ಚುನಾವಣೆಯ ದಿನಾಂಕ ಹತ್ತಿರ ಬಂದಾಗ ಮೋದಿ ಹಲವು ರ‍್ಯಾಲಿಗಳಲ್ಲಿ ಭಾಗಿಯಾಗಿದ್ದರು. ಇದರ ಪರಿಣಾಮ ಫಲಿತಾಂಶದಲ್ಲಿ ಹೆಚ್ಚಿನ ಸ್ಥಾನ ಸಿಕ್ಕಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಬಿಎಸ್‍ವೈ, ಮೋದಿಯವರು ಇನ್ನು ಪ್ರಚಾರಕ್ಕೆ ಬಂದಿಲ್ಲ. ಕೇಂದ್ರ ನಾಯಕರು ಪ್ರಚಾರಕ್ಕೆ ಇಳಿದ ಬಿಜೆಪಿ ಅಲೆ ಜಾಸ್ತಿಯಾಗಿ ಬಹುಮತದೊಂದಿಗೆ ಯಾರ ಬೆಂಬಲ ಪಡೆಯದೇ ಸರ್ಕಾರ ರಚಿಸುತ್ತೇವೆ ಎಂದು ಹೇಳಿದ್ದರು.

    ಯಾವ ದಿನ? ಎಲ್ಲಿ ಕಾರ್ಯಕ್ರಮ?
    ಮೇ 01- ಚಾಮರಾಜನಗರ, ಉಡುಪಿ, ಬೆಳಗಾವಿ
    ಮೇ 03- ಕಲಬುರಗಿ, ಬಳ್ಳಾರಿ, ಬೆಂಗಳೂರು
    ಮೇ 05 – ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ
    ಮೇ 07 – ರಾಯಚೂರು, ಚಿತ್ರದುರ್ಗ, ಕೋಲಾರ
    ಮೇ 08 – ಬಿಜಾಪುರ, ಮಂಗಳೂರು, ಬೆಂಗಳೂರು

  • ಬಾದಾಮಿಯಿಂದ ಕಣಕ್ಕೆ ಇಳಿಯುತ್ತಿರೋದು ಯಾಕೆ: ರಿವೀಲ್ ಮಾಡಿದ್ರು ಸಿಎಂ

    ಬಾದಾಮಿಯಿಂದ ಕಣಕ್ಕೆ ಇಳಿಯುತ್ತಿರೋದು ಯಾಕೆ: ರಿವೀಲ್ ಮಾಡಿದ್ರು ಸಿಎಂ

    ಮೈಸೂರು: ನನಗೆ ಉತ್ತರ ಕರ್ನಾಟಕದಿಂದ ನಿಲ್ಲುವಂತೆ ಒತ್ತಡ ಇತ್ತು. ಈ ಕಾರಣಕ್ಕೆ ನಾನು ಬಾದಾಮಿ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಈ ಹಿಂದೆ ನನಗೆ ಉತ್ತರ ಕರ್ನಾಟಕದಿಂದ ನಿಲ್ಲುವಂತೆ ಇಷ್ಟೊಂದು ಒತ್ತಾಯ ಕೇಳಿಬಂದಿರಲ್ಲ. ಆದರೆ ಆರ್.ಬಿ. ತಿಮ್ಮಾಪುರ, ಎಸ್.ಆರ್. ಪಾಟೀಲ್ ಎರಡು ದಿನ ಮೈಸೂರಿನಲ್ಲಿ ಉಳಿದುಕೊಂಡು ಒತ್ತಾಯ ಮಾಡಿದ್ದಾರೆ ಈ ಕಾರಣಕ್ಕಾಗಿ ನಾನು ಆ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ.

    ಚಾಮುಂಡೇಶ್ವರಿಯಲ್ಲಿ ಸೋಲುವ ಭಯದಿಂದ ಬಾದಾಮಿಗೆ ಹೋಗುತ್ತಿದ್ದಾರೆ ಎಂಬ ಜೆಡಿಎಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಹಾಗಾದ್ರೆ ಸೋಲಿನ ಭಯದಿಂದ ಕುಮಾರಸ್ವಾಮಿ ಎರಡು ಕಡೆ ನಿಲ್ಲುತ್ತಿದ್ದಾರಾ? ಮೋದಿ ಸೋಲಿನ ಭಯದಿಂದ ಎರಡು ಕಡೆ ಸ್ಪರ್ಧೆ ಮಾಡಿದ್ರಾ? ಜೆಡಿಎಸ್‍ನವರಂತೆ ನಾನು ಕೀಳು ಮಟ್ಟದ ಟೀಕೆ ಮಾಡುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

    ಬಾದಾಮಿಯಲ್ಲಿ ಯಾರೇ ಸ್ಪರ್ಧಿಸಲಿ ನನಗೆ ಯಾವ ಭಯವಿಲ್ಲ. ಅಲ್ಲಿ ಸ್ಪರ್ಧಿಸುತ್ತೇನೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಮೇಲೆ ಪ್ರಭಾವ ಬೀರುವುದಿಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಜನ ನನ್ನ ಪರ ಮತ ಹಾಕಲು ತೀರ್ಮಾನ ಮಾಡಿದ್ದಾರೆ. ಕುಮಾರಸ್ವಾಮಿ ಒಂದು ದಿನವಲ್ಲ, ಎಲ್ಲಾ ದಿನ ಇಲ್ಲೇ ಪ್ರಚಾರ ಮಾಡಿದರೂ ನಾನೇ ಗೆಲ್ಲುತ್ತೇನೆ ಎಂದು ಸಿಎಂ ಹೇಳಿದರು.

  • ಸುಳ್ಳು ಅಫಿಡವಿಟ್ ಸಲ್ಲಿಸಿ ಸಿಕ್ಕಿ ಹಾಕಿಕೊಂಡ ಶಾಸಕ ಅರವಿಂದ್ ಪಾಟೀಲ್

    ಸುಳ್ಳು ಅಫಿಡವಿಟ್ ಸಲ್ಲಿಸಿ ಸಿಕ್ಕಿ ಹಾಕಿಕೊಂಡ ಶಾಸಕ ಅರವಿಂದ್ ಪಾಟೀಲ್

    ಬೆಳಗಾವಿ: ನಗರದಲ್ಲಿ ಮರಾಠಿಗರ ಪರ ಹೋರಾಟ ಮಾಡಿ ಪಕ್ಷೇತರರ ಅಭ್ಯರ್ಥಿಯಾಗಿ ಖಾನಾಪುರ ಕ್ಷೇತ್ರದಿಂದ ನಿಂತು ಗೆದ್ದಿದ್ದ ಶಾಸಕ ಅರವಿಂದ್ ಪಾಟೀಲ್‍ ಅವರಿಗೆ  ಈಗ ತನಿಖೆಯ ಬಿಸಿ ಕಾಣತೊಡಗಿದೆ.

    ಮರಾಠ ಪರ ಹೋರಾಟಗಾರ ಅಂತ ಹೇಳಿಕೊಂಡು ಬೆಳಗಾವಿಯನ್ನು ಮಹರಾಷ್ಟ್ರಕ್ಕೆ ಸೇರಿಸಬೇಕು ಅಂತ ಹೋರಾಟ ಮಾಡಿ ಈ ಬಾರಿ ಎಂಇಎಸ್‍ನಿಂದ ಖಾನಾಪುರ ಕ್ಷೇತ್ರಕ್ಕೆ ಮತ್ತೆ ಸ್ಪರ್ದೆ ಮಾಡಲು ಮುಂದಾಗಿದ್ದ ಅರವಿಂದ್ ಪಾಟೀಲ್‍ಗೆ 2013 ಚುನಾವಣೆಯ ಸಂದರ್ಬದಲ್ಲಿ ಸಲ್ಲಿಸಿರೋ ಅಫಿಡವಿಟ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ತನ್ನ ಪತ್ನಿ ಸುಜಾತ ಯಾವುದೇ ನೌಕರಿಯಲ್ಲಿ ಇಲ್ಲ ಮತ್ತು ಯಾವುದೇ ರೀತಿಯ ಆದಾಯ ತೆರಿಗೆ ಕಟ್ಟುತ್ತಿಲ್ಲ ಅಂತ ಘೋಷಣೆ ಮಾಡಿದ್ರು. ಆದ್ರೆ ಅರವಿಂದ್ ಪಾಟೀಲ್ ಪತ್ನಿ ರಾಜ್ಯ ಸರ್ಕಾರಿ ನೌಕರರಾಗಿದ್ದು ಹುಕ್ಕೇರಿ ತಾಲೂಕಿನ ಹಿಟ್ನಾ ಗ್ರಾಮದಲ್ಲಿರೋ ಮರಾಠಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಆರ್‍ಟಿಐ ಕಾರ್ಯಕರ್ತರು ದೂರನ್ನು ನೀಡಿದ್ದು ಇದನ್ನು ಗಂಬೀರವಾಗಿ ಪರಿಗಣಿಸಿರೋ ಚುನವಣಾ ಆಯೋಗ ಬೆಳಗಾವಿ ಚುನಾವಣಾ ಅಧಿಕಾರಿಗೆ ಅರವಿಂದ್ ಪಾಟೀಲ್ ವಿರುದ್ದ ಸೂಕ್ತ ಕ್ರಮ ಕೈಗೋಳ್ಳುವಂತೆ ನಿರ್ದೇಶನ ನೀಡಿದೆ.

    2007ರಿಂದ ಸುಜಾತ ಅವರು ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಮರಾಠಿಗರ ಪರವಾಗಿ ಹೋರಾಟ ಮಾಡಿಕೊಂಡು ಬಂದಿದ್ದ ಶಾಸಕ ಅರವಿಂದ್ ಪಾಟೀಲ್ ಪತ್ನಿ ರಾಜ್ಯ ಸರ್ಕಾರಿ ಮರಾಠಿ ಶಾಲೆಯಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದನ್ನು ಮರೆಮಾಚಿದ್ದರು. ಪತ್ನಿ ಕರ್ನಾಟಕ ರಾಜ್ಯದಲ್ಲಿ ಶಿಕ್ಷಕಿ ಆಗಿರೋದು ಗೊತ್ತಾದ್ರೆ ತಾಲೂಕಿನ ಜನ ಮತ ಹಾಕೋದಿಲ್ಲ ಅನ್ನೋ ಆತಂಕದಿಂದ ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ.

  • ವಿಧಾನಸಭೆ ಚುನಾವಣೆಗೆ ಇಂದು ಅಧಿಸೂಚನೆ – ಏಪ್ರಿಲ್ 24ರವರೆಗೂ ನಾಮಪತ್ರ ಸಲ್ಲಿಕೆಗೆ ಅವಕಾಶ

    ವಿಧಾನಸಭೆ ಚುನಾವಣೆಗೆ ಇಂದು ಅಧಿಸೂಚನೆ – ಏಪ್ರಿಲ್ 24ರವರೆಗೂ ನಾಮಪತ್ರ ಸಲ್ಲಿಕೆಗೆ ಅವಕಾಶ

    ಬೆಂಗಳೂರು: ಇಂದಿನಿಂದ ಕರ್ನಾಟಕ ಕುರುಕ್ಷೇತ್ರ ಮತ್ತಷ್ಟು ಬಿಸಿಯೇರಲಿದೆ. ಕಾರಣ ಮೇ 12 ರಂದು ನಡೆಯೋ ವಿಧಾನಸಭೆ ಚುನಾವಣೆಗೆ ಇವತ್ತು ಅಧಿಸೂಚನೆ ಹೊರಬೀಳಲಿದ್ದು, ಇಂದಿನಿಂದಲೇ ನಾಮಪತ್ರ ಸಲ್ಲಿಕೆ ಕಾರ್ಯ ಶುರುವಾಗಲಿದೆ. ಇಂದಿನಿಂದ ಏಪ್ರಿಲ್ 24ರವರೆಗೂ ವಿಧಾನಸಭೆ ಚುನಾವಣೆಗೆ ಉಮೇದುವಾರು ನಾಮಪತ್ರ ಸಲ್ಲಿಸಬಹುದಾಗಿದೆ.

    ಈಗಾಗಲೇ ಕಾಂಗ್ರೆಸ್ ಬಹುತೇಕ ಅಭ್ಯರ್ಥಿಗಳ ಲಿಸ್ಟ್ ರಿಲೀಸ್ ಮಾಡಿದ್ದು, ಬಿಜೆಪಿ ಜೆಡಿಎಸ್ ಪಕ್ಷಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಆದ್ರೂ, ಬಿ ಫಾರಂ ಹಂಚಿಕೆಯಲ್ಲಿ ಬಿಜೆಪಿ ಫಸ್ಟ್ ಇದೆ. ಗೌರಿಬಿದನೂರಿನ ಜೈಪಾಲ್ ರೆಡ್ಡಿ, ನೆಲಮಂಗಲ ನಾಗರಾಜು, ಹರಿಹರದ ಬಿ.ಪಿ. ಹರೀಶ್, ಕುಣಿಗಲ್‍ನ ಕೃಷ್ಣಕುಮಾರ್ ಬಿ.ಫಾರಂ ಪಡೆದುಕೊಂಡಿದ್ದಾರೆ. ಬಿ ಪಾರಂ ಹಂಚಿಕೆ ಪ್ರಕ್ರಿಯೆ ಇವತ್ತು ಮತ್ತಷ್ಟು ಚುರುಕು ಪಡೆದುಕೊಳ್ಳಲಿದೆ.

    ಮೊದಲ ದಿನವಾದ ಇವತ್ತು ಹಲವರು ನಾಮಪತ್ರ ಸಲ್ಲಿಸೋ ಸಾಧ್ಯತೆಗಳಿವೆ. ಸಿಎಂ ಸಿದ್ದರಾಮಯ್ಯ ಇದೇ 20ಕ್ಕೆ ನಾಮಿನೇಷನ್ ಹಾಕಲಿದ್ದಾರೆ. ಏಪ್ರಿಲ್ 25ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಏಪ್ರಿಲ್ 27ರಂದು ನಾಮಪತ್ರ ಹಿಂಪಡೆಯಲು ಕಡೇ ದಿನವಾಗಿದೆ. ಅಂದ ಹಾಗೇ, ಉಮೇದುವಾರರು ನಾಮಪತ್ರ ಸಲ್ಲಿಸಲು ಕೆಲ ಷರತ್ತುಗಳನ್ನು ಪೂರೈಸಲೇಬೇಕಾಗುತ್ತದೆ.

    ನಾಮಪತ್ರ ಸಲ್ಲಿಕೆಗೆ ಷರತ್ತುಗಳು:
    * ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಲು ಅವಕಾಶ.
    * ನಾಮಪತ್ರ ಸಲ್ಲಿಸಲು ಬರುವ ಅಭ್ಯರ್ಥಿಯ ಜೊತೆಯಲ್ಲಿ ಐವರು ಬೆಂಬಲಿಗರಿಗೆ ಅವಕಾಶ.
    * ನಾಮತ್ರ ಸಲ್ಲಿಸಲು ಒಬ್ಬ ಅಭ್ಯರ್ಥಿ ಕೇವಲ ಮೂರು ವಾಹನಗಳ ಜೊತೆ ಮಾತ್ರ ಬರಬೇಕು.
    * ನಾಮಪತ್ರ ಸಲ್ಲಿಸುವವರು ಬೇರೆ ಕ್ಷೇತ್ರದ ಅಭ್ಯರ್ಥಿ ಆಗಿದ್ದರೆ, ಎರಡು ರೀತಿಯ ಅಫಿಡವಿಟ್ ಸಲ್ಲಿಸಬೇಕು.
    * ಅರ್ಜಿಯಲ್ಲಿ ಎಲ್ಲಾ ಮಾಹಿತಿ ನೀಡೋದು ಕಡ್ಡಾಯ.. ಇಲ್ಲದಿದ್ರೆ ನಾಮಪತ್ರ ತಿರಸ್ಕøತಗೊಳ್ಳುತ್ತದೆ.
    * ನಾಮಪತ್ರ ಸಲ್ಲಿಸುವ ಎಸ್.ಸಿ, ಎಸ್.ಟಿ ಅಭ್ಯರ್ಥಿಗಳು ಐದು ಸಾವಿರ ಹಣ ಠೇವಣಿ ಇಡಬೇಕು.
    * ಇತರೆ ವರ್ಗದ ಅಭ್ಯರ್ಥಿಗಳು ಕಡ್ಡಾಯವಾಗಿ ಹತ್ತು ಸಾವಿರ ಡೆಪಾಸಿಟ್ ಹಣ ಕಟ್ಟಬೇಕು.
    * ಅಭ್ಯರ್ಥಿಗಳು ಹೊಸ ಬ್ಯಾಂಕ್ ಅಕೌಂಟ್ ತೆರೆದು, ಅಲ್ಲಿಂದಲೇ ಹಣ ಖರ್ಚು ಮಾಡಬೇಕು.

  • ಪ್ರತ್ಯೇಕ ಲಿಂಗಾಯತ ವಿವಾದದಲ್ಲಿ ಸಿಲುಕಿರುವ ಸಿದ್ದು ಸರ್ಕಾರಕ್ಕೆ ಮತ್ತೊಂದು ತಲೆನೋವು!

    ಪ್ರತ್ಯೇಕ ಲಿಂಗಾಯತ ವಿವಾದದಲ್ಲಿ ಸಿಲುಕಿರುವ ಸಿದ್ದು ಸರ್ಕಾರಕ್ಕೆ ಮತ್ತೊಂದು ತಲೆನೋವು!

    ಬೆಂಗಳೂರು: ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ರಾಷ್ಟ್ರೀಯ ಪಕ್ಷಗಳು ಎಲ್ಲ ಕೋನಗಳಿಂದಲು ಲೆಕ್ಕ ಹಾಕಿ, ವಿಮರ್ಶಿಸಿ ಅಳೆದು ತೂಗಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡ್ತಿವೆ. ಈ ನಡುವೆ ಬಿಜೆಪಿ 72 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಸಹಜವಾಗಿ ಟಿಕೆಟ್ ವಂಚಿತರು ಪಕ್ಷದ ವಿರುದ್ಧ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

    ಲಿಂಗಾಯತ ಪ್ರತ್ಯೇಕ ಧರ್ಮದ ಕ್ರೆಡಿಟ್ ಪಡೆಯಲು ಮುಂದಾದ ಸಿಎಂ ಸಿದ್ದರಾಮಯ್ಯಗೆ ಬ್ರಾಹ್ಮಣರು ಸವಾಲು ಹಾಕ್ತಾರಾ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಬೆಂಗಳೂರಿನ ರಾಜಾಜಿನಗರದಲ್ಲಿ ಲಿಂಗಾಯತರಿಗೆ ಹಾಗೂ ಬಸವನಗುಡಿಯಲ್ಲಿ ಬ್ರಾಹ್ಮಣ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ಎಂದು ಸಮುದಾಯ ಮುಖಂಡರಿಂದ ಸಿಎಂ ಹಾಗೂ ಪರಮೇಶ್ವರ್ ಮೇಲೆ ಹೆಚ್ಚಾಗಿದೆ ಎನ್ನಲಾಗಿದೆ. ಆದರೆ ಈ ಬೇಡಿಕೆಗೆ ಸಿಎಂ ಹಾಗೂ ಪರಮೇಶ್ವರ್ ರಿಂದ ಸಮರ್ಪಕ ಪ್ರತಿಕ್ರಿಯೆ ಇದೂವರೆಗೆ ಸಿಕ್ಕಿಲ್ಲವಂತೆ.

    ಈ ಬಾರಿ ಕಾಂಗ್ರೆಸ್‍ಗೆ ಗೆಲವು ಮುಖ್ಯವಾಗಿದ್ದರಿಂದ ಬೆಂಗಳೂರಿನಂತಹ ನಗರದ ಕ್ಷೇತ್ರಗಳಲ್ಲಿ ಜಾತಿ ಲೆಕ್ಕಾಚಾರ ಸಾಧ್ಯವಿಲ್ಲ. ರಾಜಾಜಿನಗರದ ಬದಲು ಮಲ್ಲೇಶ್ವರಂ ಅಥವಾ ಮಹಾಲಕ್ಷ್ಮಿ ಲೇಔಟ್‍ನಲ್ಲಿ ಲಿಂಗಾಯತ ಅಭ್ಯರ್ಥಿಗೆ ಅವಕಾಶ ನೀಡುವ ಕುರಿತು ಪರಿಶೀಲಿಸುವುದಾಗಿ ಭರವಸೆಯನ್ನು ಸಿಎಂ ನೀಡಿದ್ದಾರೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ. ಆದರೆ ಮಹಾಲಕ್ಷ್ಮಿ ಲೇಔಟ್ ಹಾಗೂ ಮಲ್ಲೇಶ್ವರಂನಲ್ಲಿ ಸಮುದಾಯದ ಮತ ಇಲ್ಲದ ಕಾರಣ ಗೆಲುವು ಕಷ್ಟ ಎಂದು ಲಿಂಗಾಯತ ಮುಖಂಡರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಬಸವನಗುಡಿಯಲ್ಲಿ ಕಳೆದ ಬಾರಿ ಸ್ಪರ್ಧಿಸಿ ಸೋತ ಪ್ರೊ.ಬಿ.ಕೆ.ಚಂದ್ರಶೇಖರ್ ಬ್ರಾಹ್ಮಣರ ಕೋಟಾದಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯಲು ಯತ್ನಿಸಿದ್ದಾರೆ. ಆದ್ರೆ ಚಂದ್ರಶೇಖರ್ ಅವರಿರೆ ಸಿಎಂ ಮತ್ತು ಪರಮೇಶ್ವರ್ ಟಿಕೆಟ್ ನೀಡಲು ಆಸಕ್ತಿ ತೋರಿಸ್ತಿಲ್ಲ ಅಂತಾ ಹೇಳಲಾಗ್ತಿದೆ. ಹೀಗಾಗಿ ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‍ಗಾಗಿ ಚಂದ್ರಶೇಖರ್ ಹಾಗೂ ಬೋರೇಗೌಡರ ನಡುವೆ ಪೈಪೋಟಿ ಏರ್ಪಡುವ ಸಾಧ್ಯತೆಗಳಿವೆ.

    ಇತ್ತ ರಾಜಾಜಿನಗರದಲ್ಲಿ ಲಿಂಗಾಯತ ಅಭ್ಯರ್ಥಿಗಳನ್ನು ಪರಿಗಣಿಸಬೇಕೆಂದು ವೀರಶೈವ ಲಿಂಗಾಯತ ಮಹಾಸಭಾದ ಬೆಂಗಳೂರು ಜಿಲ್ಲಾ ಘಟಕ ಸಿಎಂ ಹಾಗೂ ಪರಮೇಶ್ವರ್ ಗೆ ಪತ್ರ ಬರೆದು ಮನವಿ ಮಾಡಿಕೊಂಡಿದೆ ಎನ್ನಲಾಗಿದೆ.

  • ಉತ್ತರ ಕರ್ನಾಟಕದಲ್ಲಿ ಅಮಿತ್ ಶಾ- ಗದಗ, ಬಾಗಲಕೋಟೆ, ಬೆಳಗಾವಿಯಲ್ಲಿ ಸಮಾವೇಶ

    ಉತ್ತರ ಕರ್ನಾಟಕದಲ್ಲಿ ಅಮಿತ್ ಶಾ- ಗದಗ, ಬಾಗಲಕೋಟೆ, ಬೆಳಗಾವಿಯಲ್ಲಿ ಸಮಾವೇಶ

    ಧಾರವಾಡ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬುಧವಾರ ರಾತ್ರಿ 1.45ರ ಸುಮಾರಿಗೆ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಬಂದಿಳಿದಿದ್ದಾರೆ.

    ಇಂದು ಮತ್ತು ನಾಳೆ ಎರಡು ದಿನ ರಾಜ್ಯದಲ್ಲೇ ಉಳಿಯಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಚಾರ ಮಾಡಲಿದ್ದಾರೆ. ಇವತ್ತು ಹುಬ್ಬಳ್ಳಿ-ಧಾರವಾಡ, ಗದಗ, ನಾಳೆ ಬಾಗಲಕೋಟೆ, ಬೆಳಗಾವಿಯಲ್ಲಿ ಸಮಾವೇಶ ನಡೆಸಲಿದ್ದಾರೆ. ಪ್ರಚಾರ ಕಾರ್ಯಕ್ರಮಗಳ ಮಧ್ಯೆ ಮಠ ಹಾಗೂ ದೇವಾಲಯಗಳಿಗೂ ಭೇಟಿ ನೀಡಲಿದ್ದಾರೆ. ಪ್ರತಿಪಕ್ಷಗಳ ವಿರುದ್ಧ ಬಿಜೆಪಿಯವರು ನಡೆಸುತ್ತಿರುವ ಒಂದು ದಿನದ ಉಪವಾಸ ಸತ್ಯಾಗ್ರಹದಲ್ಲೂ ಅಮಿತ್ ಶಾ ಭಾಗಿಯಾಗಲಿದ್ದಾರೆ.

    ಅಮಿತ್ ಶಾ ಇವತ್ತು ಎಲ್ಲೆಲ್ಲಿ ಹೋಗ್ತಾರೆ?
    * ಬೆಳಗ್ಗೆ 9.30ಕ್ಕೆ ಹುಬ್ಬಳ್ಳಿಯ ಸಿದ್ಧಾರೂಢ ಮಠ
    * ಬೆಳಗ್ಗೆ 10.30ಕ್ಕೆ ಧಾರವಾಡದ ಸಾಧನಕೇರಿಯ ದ.ರಾ. ಬೇಂದ್ರೆ ಸ್ಮಾರಕಕ್ಕೆ ಮಾಲಾರ್ಪಣೆ
    * ಧಾರವಾಡ ಮುರುಘಾ ಮಠಕ್ಕೆ ಭೇಟಿ, ಸಮಾಲೋಚನೆ
    * ಧಾರವಾಡದ ಡಿಸಿ ಕಚೇರಿ ಎದುರು 11 ಗಂಟೆಗೆ 1 ತಾಸು ಉಪವಾಸ
    * ಮಧ್ಯಾಹ್ನ 12.30ಕ್ಕೆ ಗದಗನ ಅಬ್ಬಿಗೇರಿಯಲ್ಲಿ ಮುಷ್ಟಿ ಧಾನ್ಯ ಸಮಾರೋಪ ಕಾರ್ಯಕ್ರಮದಲ್ಲಿ ಭಾಗಿ
    * ಮಧ್ಯಾಹ್ನ 3 ಗಂಟೆಗೆ ಗದಗನ ಪುಟ್ಟರಾಜ ಗವಾಯಿಗಳ ಆಶ್ರಮಕ್ಕೆ ಭೇಟಿ
    * ಸಂಜೆ 4 ಗಂಟೆಗೆ ಗದಗನ ವೀರನಾರಾಯಣನ ದೇವಸ್ಥಾನದಲ್ಲಿ ಪೂಜೆ
    * ಸಂಜೆಗೆ ಮತ್ತೆ ಧಾರವಾಡಕ್ಕೆ ವಾಪಸ್, ಮೂರು ಸಾವಿರ ಮಠಕ್ಕೆ ಭೇಟಿ
    * ಧಾರವಾಡ ನಗರದ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ
    * ಧಾರವಾಡದ ಹೆಬ್ಬಳ್ಳಿ ಗ್ರಾಮದಲ್ಲಿ ರೈತರೊಂದಿಗೆ ಸಭೆ
    * ರಾತ್ರಿ ಹುಬ್ಬಳ್ಳಿಯಲ್ಲಿ ಉದ್ಯಮಿಗಳ ಜೊತೆ ಸಂವಾದ
    * ನಾಳೆ ಬಾಗಲಕೋಟೆ, ಬೆಳಗಾವಿಯಲ್ಲಿ ಸಮಾವೇಶ ಮುಗಿಸಿ ವಾಪಸ್

  • ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ವದಂತಿಗೆ ಸ್ಪಷ್ಟನೆ ನೀಡಿದ ಎಸ್.ಎಂ.ಕೃಷ್ಣ

    ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ವದಂತಿಗೆ ಸ್ಪಷ್ಟನೆ ನೀಡಿದ ಎಸ್.ಎಂ.ಕೃಷ್ಣ

    ಬೆಂಗಳೂರು: ಮಾಜಿ ಸಿಎಂ ಎಸ್.ಎಂ.ಕೃಷ್ಣ ಬಿಜೆಪಿ ತೊರೆದು ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿಯೊಂದು ರಾಜಕೀಯ ವಲಯದಲ್ಲಿ ಹರಿದಾಡುತ್ತಿತ್ತು. ಈ ಬಗ್ಗೆ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿರುವ ಎಸ್.ಎಂ.ಕೃಷ್ಣ ನಾನು ಬಿಜೆಪಿ ತೊರೆಯಲ್ಲ ಅಂತಾ ಹೇಳಿದ್ದಾರೆ.

    ಯಾವುದೇ ಕಾರಣಕ್ಕೂ ಈಗಿರುವ ಪಕ್ಷ ಬಿಡುವುದೂ ಇಲ್ಲ. ಕಾಂಗ್ರೆಸ್ ಸೇರಿದಂತೆ ಬೇರೆ ಪಕ್ಷವನ್ನು ಸೇರುವುದು ಇಲ್ಲ. ನಾನು ಒಂದು ವರ್ಷದ ಹಿಂದೆಯೇ ಬಿಜೆಪಿ ಸೇರಿಕೊಂಡಿದ್ದೇನೆ. ಚುನಾವಣಾ ಸನಿಹದಲ್ಲಿ ಈ ರೀತಿಯ ವದಂತಿಗಳು ಹರಡುತ್ತಿರುತ್ತವೆ ಅಂತಾ ತಿಳಿಸಿದ್ದಾರೆ.

    ರಾಜ್ಯದಲ್ಲಿ ಚುನಾವಣೆ ಕಾವು ಹೆಚ್ಚಾಗಿದ್ದು, ಬಿಜೆಪಿ ಸೇರಿದ್ದ ಎಸ್.ಎಂ.ಕೃಷ್ಣ ಉದ್ದೇಶಪೂರ್ವಕವಾಗಿಯೇ ಪ್ರಚಾರದಿಂದ ದೂರ ಉಳಿದಿದ್ದಾರೆ ಅಂತಾ ಹೇಳಲಾಗುತ್ತಿತ್ತು. ಆದ್ರೆ ಎಸ್.ಎಂ.ಕೃಷ್ಣ ಸದ್ಯ ಮುಂಬೈ ನಲ್ಲಿದ್ದು, ಮುಂದಿನ ದಿನಗಳಲ್ಲಿ ಚುನಾವಣಾ ಕೆಲಸಗಳಲ್ಲಿ ಸಕ್ರಿಯರಾಗಲಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.