https://youtu.be/0nQcgy7wPnQ
Tag: karnataka elections
-

ರಾಜಕೀಯ ಯುದ್ಧ ಕಾಲದಲ್ಲಿ ಮಾಜಿ ಸಿಎಂ ಸೈಲೆಂಟ್-ಪ್ರಚಾರಕ್ಕೂ ಹೋಗದೇ ಮನೆಯಲ್ಲಿ ಕುಳಿತ ಬಿಎಸ್‍ವೈ
ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರಚಾರಕ್ಕೂ ತೆರಳದೇ ಶಿಕಾರಿಪುರದ ಮನೆಯಲ್ಲಿ ಕುಳಿತಕೊಂಡಿರುವುದು ಪಕ್ಷದ ಆಂತರಿಕ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಪುತ್ರ ವಿಜಯೇಂದ್ರ ಅವರಿಗೆ ವರುಣಾ ಕ್ಷೇತ್ರದಿಂದ ಟಿಕೆಟ್ ತಪ್ಪಿದ್ದರಿಂದ ಅಸಮಾಧಾನಗೊಂಡ ಯಡಿಯೂರಪ್ಪ ಮನೆಯಲ್ಲಿದ್ದಾರೆ ಅಂತಾ ಹೇಳಲಾಗುತ್ತಿದೆ.
ಪುತ್ರ ವಿಜಯೇಂದ್ರ ಟಿಕೆಟ್ ತಪ್ಪಿಸಲು ಕಾರಣ ಅಂತಾ ಹೇಳಲಾಗುತ್ತಿರುವ ಕೇಂದ್ರ ಸಚಿವ ಅನಂತಕುಮಾರ್ ಮತ್ತು ಬಿಜೆಪಿ ಸಂಘಟನಾ ಕಾರ್ಯದರ್ಶಿ ಸಂತೋಷ ವಿರುದ್ಧ ಆಪ್ತರ ಜೊತೆ ಬಿಎಸ್‍ವೈ ಆಕ್ರೋಶ ಹೊರ ಹಾಕಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ವಿಜಯೇಂದ್ರಗೆ ಟಿಕೆಟ್ ತಪ್ಪಿದ ಎಫೆಕ್ಟ್-ನೋಟಾ ಚಲಾವಣೆ ಅಭಿಯಾನದ ಕರಪತ್ರ ಫುಲ್ ವೈರಲ್

ಈಗಾಗಲೇ ಯಡಿಯೂರಪ್ಪ 224 ಕ್ಷೇತ್ರದಲ್ಲಿ ಪರಿವರ್ತನಾ ಯಾತ್ರೆ ಮಾಡಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದು, ಕೇವಲ ಆಪ್ತರ 100 ಕ್ಷೇತ್ರಗಳಲ್ಲಿ ಪ್ರಚಾರ ಮಾಡಲು ಪ್ಲಾನ್ ರೂಪಿಸಿದ್ದಾರೆ ಎಂದುಪಬ್ಲಿಕ್ ಟಿವಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ವರಿಷ್ಟರು ಮುಂಚೆಯೇ ತಿಳಿಸಿದ್ದರೆ, ವಿಜಯೇಂದ್ರ ವರುಣಾಕ್ಕೆ ತೆರಳುತ್ತಿರಲಿಲ್ಲ-ಬಿಜೆಪಿ ಹೈಕಮಾಂಡ್ ವಿರುದ್ಧ ಈಶ್ವರಪ್ಪ ಗರಂ!
ಹಾಸನ, ಅರಕಲಗೂಡು, ತುಮಕೂರು, ನೆಲಮಂಗಲದಲ್ಲಿ ಪ್ರಚಾರ ಪ್ರವಾಸದ ವೇಳಾಪಟ್ಟಿ ಈಗಾಗಲೇ ಸಿದ್ಧಗೊಂಡಿದೆ. ವೇಳಾಪಟ್ಟಿಯಂತೆ ಯಡಿಯೂರಪ್ಪ ಪ್ರಚಾರದಲ್ಲಿ ಭಾಗಿಯಾಗ್ತಾರಾ ಎಂಬುವುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ನಿಮ್ಮ ಮಗನಿಗಿಂತ ನಮಗೆ ಪಕ್ಷವೇ ಮುಖ್ಯ, ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ: ಬಿಎಸ್‍ವೈಗೆ ಅಮಿತ್ ಶಾ ಸೂಚನೆ
-

ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಕಾರ್ಯಕರ್ತ ನಾಪತ್ತೆ-ಸಿಸಿಟಿವಿಯಲ್ಲಿ ಸೆರೆಯಾಯ್ತು ಹೈ ಡ್ರಾಮಾ
ಬೆಂಗಳೂರು: ಬ್ಯಾಟರಾಯನಪುರದ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತ ಭರತ್ ಭಾನುವಾರ ಕಾಂಗ್ರಸ್ ಪಕ್ಷಕ್ಕೆ ಸೇರಿದ್ದು ಸೋಮವಾರ ಸಂಜೆಯಿಂದ ನಾಪತ್ತೆಯಾಗಿದ್ದಾರೆ. ಈ ವೇಳೆ ಭರತ್ ಕಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ ಅಂತಾನೂ ಹೇಳಲಾಗುತ್ತಿತ್ತು. ಆದ್ರೆ ಸ್ವತಃ ಭರತ್ ಕಾರಿಗೆ ಬೆಂಕಿ ಹಚ್ಚುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಸೋಮವಾರ ಜಕ್ಕೂರಿನ ಕಾರ್ಪೋರೆಟರ್ ಮುನಿಂದ್ರ ಅವ್ರ ಮನೆಯ ಮುಂದೆ ತನ್ನ ಕಾರನಲ್ಲಿ ಬಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಭರತ್ ಓಡಿಹೋಗಿದ್ದಾರೆ. ಇಷ್ಟೆಲ್ಲ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಬಿಜೆಪಿಯಿಂದ ಕಾಂಗ್ರಸ್ ಪಕ್ಷಕ್ಕೆ ಸೇರಿದ್ದಕ್ಕಾಗಿ ಬಿಜೆಪಿ ಅವ್ರು ಈ ರೀತಿ ಮಾಡಿದ್ದಾರೆ ಅಂತಾ ಸುಳ್ಳು ಸುದ್ದಿ ಹಬ್ಬಿಸಲು ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ. ಅದ್ರೆ ಅಲ್ಲಿದ್ದ ಸಿಸಿಟಿವಿ ಭರತ್ ಕುತಂತ್ರ ಬಯಲಾಗಿದೆ.
ಇದೇ ರೀತಿ ಜನರಿಗೆ ಸುಳ್ಳು ಹೇಳಿಕೊಂಡೆ ಕಾಂಗ್ರೆಸ್ ನವರು ಇಲ್ಲಿ ಗೆದ್ದಿರೋದು. ಅಲಿ ಸಿಸಿಟಿವಿ ಇಲ್ಲ ಅಂದಿದ್ರೆ ನಮ್ಮ ಮೇಲೆ ಕಾಂಗ್ರಸ್ ಪಕ್ಷದವರು ಅಪಪ್ರಚಾರ ಮಾಡುತ್ತಿದ್ರು. ನಾವೇ ಪೊಲೀಸ್ ಕಂಪ್ಲೇಂಟ್ ಕೊಡಲಾಗಿದ್ದು, ಘಟನೆ ಬಳಿಕ ಭರತ್ ನಾಪತ್ತೆಯಾಗಿದ್ದನೆ.. ಇದು ಕಾಂಗ್ರೆಸ್‍ನವ್ರ ದೊಡ್ಡ ಕುತಂತ್ರ ಅಂತಾ ಬಿಜೆಪಿಯ ಅಭ್ಯರ್ಥಿ ಎ ರವಿ ಆರೋಪಿಸಿದ್ದಾರೆ.
https://youtu.be/zuqIq7lIiaM

-

ಯಡಿಯೂರಪ್ಪ ನನ್ನ ಮನೆಗೆ ಬರುವುದೇ ಬೇಡ-ಕೊನೆಗೂ ಮೌನ ಮುರಿದ ಸೊಗಡು ಶಿವಣ್ಣ
ತುಮಕೂರು: ಬಿಜೆಪಿ ಟಿಕೆಟ್ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡು ಮೌನಕ್ಕೆ ಶರಣಾಗಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಕೊನೆಗೂ ಮೌನ ಮುರಿದಿದ್ದಾರೆ. ಟಿಕೆಟ್ ಸಿಗದ ಬಳಿಕ ಬಹಿರಂಗವಾಗಿ ಯಾವುದೇ ಹೇಳಿಕೆ ನೀಡದೇ ಶಿವಣ್ಣ ದೂರ ಉಳಿದಿದ್ರು.
ಇಂದು ಸುದ್ದಿಗೋಷ್ಠಿ ಕರೆದು ಮಾತನಾಡಿದ ಸೊಗಡು ಶಿವಣ್ಣ, ಯಾವ ನಾಯಕರೂ ನನ್ನ ಮನವೊಲಿಸುವ ಪ್ರಯತ್ನ ಮಾಡೋದು ಬೇಡ. ಸದ್ಯ ನಾನು ತಟಸ್ಥನಾಗಿರುತ್ತೇನೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದಯವಿಟ್ಟು ನನ್ನ ಮನೆಗೆ ಬರುವುದು ಬೇಡ. ಚುನಾವಣೆ ಮುಗಿದ ಬಳಿಕ ನಾನೇ ಅವರ ಮನೆಗೆ ಹೋಗಿ ಮಾತಾಡುತ್ತೇನೆ ಎಂದು ಕೈ ಮುಗಿದು ಕೇಳಿಕೊಂಡರು.

ಈ ಬಾರಿಯ ಚುನಾವಣೆಯಲ್ಲಿ ತಟಸ್ಥವಾಗಿರಲು ನಿರ್ಧರಿಸಿದ್ದೇನೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿಯಲ್ಲಿ ಸಕ್ರಿಯನಾಗುತ್ತೇನೆ. ಮಾಜಿ ಸಂಸದ ಜಿ.ಎಸ್.ಬಸವರಾಜು ಹಾಗೂ ಬಿಜೆಪಿ ಅಭ್ಯರ್ಥಿ ಜ್ಯೋತಿ ಗಣೇಶ್ ಕೊಟ್ಟಿರುವ ಹಿಂಸೆಗೆ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು. ಆದ್ರೆ ಧೈರ್ಯದಿಂದ ಧೃತಿಗೆಡದೇ ಪರಿಸ್ಥಿತಿ ಎದುರಿಸಿದ್ದೇನೆ ಎಂದು ಮಾಜಿ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದರು.
ಸೊಗಡು ಶಿವಣ್ಣ ಈ ಬಾರಿ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ರು. ಆದ್ರೆ ಹೈಕಮಾಂಡ್ ಜ್ಯೋತಿ ಗಣೇಶ್ ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದರಿಂದ ಸೊಗಡು ಶಿವಣ್ಣ ಸಹಜವಾಗಿಯೆ ಅಸಮಾಧಾನಗೊಂಡಿದ್ರು.
-

ಪಾಪ ಜನರಿಗೆ ನ್ಯಾಯ ದೊರಕಿಸಿಕೊಡಲು ಆಗಲ್ಲ ಅಂತ ಹಿಂದೆ ಸರಿದಿದ್ದಾರೆ- ಅಂಬಿಯನ್ನು ಹಾಡಿಹೊಗಳಿದ ಡಿಕೆಶಿ
ಮಂಡ್ಯ: ಜನರಿಗೆ ನ್ಯಾಯ ದೊರಕಿಸಿಕೊಡಲು ಆಗಲ್ಲ ಎಂಬ ದೃಷ್ಠಿಯಿಂದ ಅಂಬರೀಶ್ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಅವರ ತ್ಯಾಗವನ್ನು ನಾವು ಎಂದಿಗೂ ಮರೆಯಲ್ಲ ಎಂದು ಇಂಧನ ಸಚಿವ ಡಿಕೆ.ಶಿವಕುಮಾರ್ ಹಾಡಿ ಹೊಗಳಿದ್ದಾರೆ.
ಮಂಡ್ಯದ ಮಳವಳ್ಳಿಯಲ್ಲಿ ಶಾಸಕ ನರೇಂದ್ರಸ್ವಾಮಿ ಪರ ಪ್ರಚಾರ ಭಾಷಣ ಮಾಡಿದ ನಂತರ ಮಾತನಾಡಿದ ಅವರು, ಅಂಬರೀಶ್ ಅವರ ಗುಣಗಾನ ಮಾಡಿದ್ದಾರೆ. ಅಂಬರೀಶ್ ಅವರಿಗೆ ಆರೋಗ್ಯ ಸರಿಯಿದ್ದಿದ್ದರೆ ಖಂಡಿತ ಚುನಾವಣೆಗೆ ಸ್ಪರ್ಧಿಸುತ್ತಿದ್ದರು. ಪಾಪ ಜನರಿಗೆ ನ್ಯಾಯ ದೊರಕಿಸಿಕೊಡಲು ಆಗಲ್ಲ ಎಂಬ ದೃಷ್ಠಿಯಿಂದ ಹಿಂದೆ ಸರಿದಿದ್ದಾರೆ. ಅವರು ಈ ರಾಜ್ಯಕ್ಕೆ ಸಾಕಷ್ಟು ಸೇವೆಮಾಡಿದ್ದಾರೆ. ನಾವೆಲ್ಲರೂ ಅವರ ಮನವೊಲಿಸುವ ಪ್ರಯತ್ನ ಮಾಡಿದೆವು. ಭಗವಂತ ಅವರನ್ನ ಆರೋಗ್ಯವಾಗಿಡಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾನು ಯಾವತ್ತಿದ್ರೂ ಸ್ಟಾರ್, ರಾಜಕೀಯ, ಚಿತ್ರರಂಗದಲ್ಲಿ ಉನ್ನತ ಸ್ಥಾನ ಕೊಟ್ಟ ಮಂಡ್ಯ ಜನತೆಗೆ ಚಿರಋಣಿ: ಅಂಬರೀಶ್

ಆರೋಗ್ಯ ಸರಿಯಾಗಿ ಮತ್ತೆ ಬಂದರೆ ಕಾಂಗ್ರೆಸ್ ಪಕ್ಷದಲ್ಲಿ ಅವಕಾಶ ಇದೆ. ಅವರ ತ್ಯಾಗವನ್ನು ನಾವು ಮರೆಯಲ್ಲ. ಅವರೊಬ್ಬ ಸ್ನೇಹ ಜೀವಿ. ಹೃದಯ ಶ್ರೀಮಂತಿಕೆ ಇರುವ ವ್ಯಕ್ತಿ ಎಂದು ಅಂಬರೀಶ್ ಅವರನ್ನು ಹಾಡಿ ಹೊಗಳಿದ್ದಾರೆ.
ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಆಗೋದಿಲ್ಲ. ಇದು ಬಿಜೆಪಿಯವರು ಮಾಡಿಸಿರುವ ಸಮೀಕ್ಷೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ ಎಂದು ಡಿಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ರು.
-

ವಿಜಯೇಂದ್ರ ಕ್ಷೇತ್ರಕ್ಕೆ ಬಂದು 20 ದಿನ ಆಯ್ತು, ನಾನು 37 ವರ್ಷಗಳಿಂದ ಬಿಜೆಪಿಗೆ ದುಡಿದಿದ್ದೇನೆ: ವರುಣಾ ಬಿಜೆಪಿ ಅಭ್ಯರ್ಥಿ ಬಸವರಾಜು
ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ವರುಣಾ ಕ್ಷೇತ್ರಕ್ಕೆ ಬಂದು ಕೇವಲ 20 ದಿನ ಆಯ್ತು. ನಾನು 37 ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದೇನೆ ಎಂದು ವರುಣಾ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಆಭ್ಯರ್ಥಿ ಬಸವರಾಜು ಹೇಳಿದ್ದಾರೆ. ಇದನ್ನೂ ಓದಿ: ಕೊನೆ ಘಳಿಗೆಯಲ್ಲಿ ಬಿಎಸ್‍ವೈಗೆ ಕರೆ ಮಾಡಿದ ಆ ನಾಯಕ ಯಾರು?
ವರುಣಾದಲ್ಲಿ ವಿಜಯೇಂದ್ರ ಅಭ್ಯರ್ಥಿಯಾಗಿ ಪ್ರಚಾರ ಮಾಡಿಲ್ಲ. ಪಕ್ಷದ ಪರವಾಗಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು ಅಷ್ಟೇ. ರಾಜ್ಯದ ಜನತೆ ನನಗೆ ಕೊನೆ ಕ್ಷಣದಲ್ಲಿ ಟಿಕೆಟ್ ಸಿಕ್ಕಿದೆ ಅಂತಾ ತಿಳಿದುಕೊಂಡಿರಬಹುದು. ಆದ್ರೆ ಹೈಕಮಾಂಡ್ ಈ ಮೊದಲೇ ನಾನೇ ವರುಣಾ ಕ್ಷೇತ್ರದ ಅಭ್ಯರ್ಥಿಯೆಂದು ಹೇಳಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ನಿಮ್ಮ ಮಗನಿಗಿಂತ ನಮಗೆ ಪಕ್ಷವೇ ಮುಖ್ಯ, ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ: ಬಿಎಸ್‍ವೈಗೆ ಅಮಿತ್ ಶಾ ಸೂಚನೆ

ಯಡಿಯೂರಪ್ಪನವರು ಶಾಸಕರಾದ ಸಂದರ್ಭದಿಂದ ನಾವು ಕೆಲಸ ಮಾಡಿದ್ದೇನೆ. ಬಿಜೆಪಿಯ ಆಶೀರ್ವಾದ ನನ್ನ ಮೇಲಿದೆ. ನನಗೆ ಟಿಕೆಟ್ ನೀಡುವುದು ಎಲ್ಲ ನಾಯಕರ ತೀರ್ಮಾನವಾಗಿದ್ದು, ಕೇವಲ ಒಬ್ಬರು, ಇಬ್ಬರ ಹೆಸರು ಹೇಳೋದಕ್ಕೆ ಆಗಲ್ಲ ಅಂತಾ ಹೇಳಿದ್ರು. ಇದನ್ನೂ ಓದಿ: ಇದೊಂದು ಧರ್ಮಯುದ್ದ ಇದ್ದಂತೆ, ಪಕ್ಷಾತೀತವಾಗಿ ವಿಜಯೇಂದ್ರ ಬೆಂಬಲಿಸಿ:ಜಿಟಿ ದೇವೇಗೌಡ
20 ದಿನಗಳಿಂದ ವರುಣಾ ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧೆ ಮಾಡ್ತಾರೆ ಅಂತಾ ಹೇಳಲಾಗುತ್ತಿತ್ತು. ಸೋಮವಾರ ವಿಜಯೇಂದ್ರ ಸಹ ನಾಮಪತ್ರ ಸಲ್ಲಿಸಲು ಮುಂದಾಗಿದ್ದ ಕೊನೆ ಕ್ಷಣದಲ್ಲಿ ನನ್ನ ಪುತ್ರ ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲ ಅಂತಾ ನಂಜನಗೂಡಿನಲ್ಲಿ ನಡೆದ ಸಮಾವೇಶದಲ್ಲಿ ಬಿಎಸ್‍ವೈ ಹೇಳಿದ್ರು. ಇದನ್ನೂ ಓದಿ: ವಿಜಯೇಂದ್ರ ಸ್ಪರ್ಧೆ ಅನಿವಾರ್ಯ, ಟಿಕೆಟ್ ನೀಡುವಂತೆ ಹೈಕಮಾಂಡ್‍ಗೆ ಒತ್ತಾಯ: ಪ್ರತಾಪ್ ಸಿಂಹ
ಸದ್ಯ ವರುಣಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆದಿರೋ ಬಸವರಾಜು ಅವರು ಕೇಂದ್ರ ಸಚಿವ ಅನಂತಕುಮಾರ್ ಮತ್ತು ಕೇಂದ್ರ ಬಿಜೆಪಿ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರ ಆಪ್ತ ಎನ್ನುವ ಮಾತು ಬಿಜೆಪಿ ವಲಯದಲ್ಲಿ ಈಗ ಹರಿದಾಡುತ್ತಿದೆ. ಇದನ್ನೂಓದಿ: ಬಿಎಸ್‍ವೈ ಪುತ್ರನಿಗೆ ವರುಣಾ ಟಿಕೆಟ್ ಕೈ ತಪ್ಪಿಸಿದ್ದು ಯಾರು?: ಕುದಿಮೌನ ತಾಳಿದ ಬಿಎಸ್‍ವೈ
-

ಪತಿಯ ನಾಮಪತ್ರದ ವೇಳೆ ಪತ್ನಿಗೆ ಗೇಟ್ ಪಾಸ್!
– ಕೊರಳಿಗೆ ಹಾರ ಬೀಳುವ ಮುಂಚೆಯೇ ಜಿಗಿದು ಜಿಗಿದು ಸೇಬು ಕಿತ್ಕೊಂಡ ಕಾರ್ಯಕರ್ತರು
ಬೆಂಗಳೂರು: ಗಾಂಧಿನಗರದ ಬಿಜೆಪಿ ಅಭ್ಯರ್ಥಿ ಸಪ್ತಗಿರಿ ಗೌಡ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಸಪ್ತಗಿರಿ ಅವರು ನಾಮಿನೇಷನ್ ಸಲ್ಲಿಸುವಾಗ ಪತ್ನಿಗೆ ಒಳಗೆ ಹೋಗಲು ಅವಕಾಶ ನೀಡಲಿಲ್ಲ.
ನಾನು ನಾಮಿನೇಷನ್ ಸಲ್ಲಿಕೆಗೆ ಬಂದಿದ್ದೆ. ನನ್ನ ಜೊತೆ ಪಿ.ಸಿ ಮೋಹನ್, ತಂದೆ ರಾಮಚಂದ್ರೇಗೌಡ ಸೇರಿದಂತೆ ಇಬ್ಬರು ಬೆಂಬಲಿಗರು ಕೇಂದ್ರದೊಳಗೆ ಬಂದಿದ್ದರು. ಆದರೆ ನನ್ನ ಪತ್ನಿ ಕೊಂಚ ತಡವಾಗಿ ಬಂದು ಒಳಹೋಗಲು ಪ್ರಯತ್ನಿಸುತ್ತಿದ್ದಂತೆ ಪೊಲೀಸರು ಗೇಟ್‍ನಲ್ಲೆ ತಡೆದಿದ್ದಾರೆ. ನಾನವರ ಪತ್ನಿ ಕಣ್ರೀ ಅಂತಾ ದುಂಬಾಲು ಬಿದ್ದರೂ `ರೂಲ್ಸ್ ಈಸ್ ರೂಲ್ಸ್’ ಅಂತಾ ಹೊರಕಳಿಸಿದ್ದಾರೆ ಎಂದು ಗಾಂಧಿನಗರದ ಬಿಜೆಪಿ ಅಭ್ಯರ್ಥಿ ಸಪ್ತಗಿರಿ ಗೌಡ ಹೇಳಿದ್ದಾರೆ.

ವಿಜಯನಗರದಲ್ಲಿ ಎಂ.ಕೃಷ್ಣಪ್ಪ ನಾಮಪತ್ರ ಸಲ್ಲಿಕೆ ವೇಳೆ ಬೆಂಬಲಿಗರು, ಕೃಷ್ಣಪ್ಪರಿಗೂ ಹಾಗೂ ಮಗ ಪ್ರಿಯಾಕೃಷ್ಣಗೂ ಸೇಬಿನ ಹಾರ ಹಾಕಿದ್ದರು. ಆದರೆ ಸೇಬಿನ ಹಾರ ಅವರ ಕೊರಳಿಗೆ ಬೀಳುವ ಮುಂಚೆ ಕಾರ್ಯಕರ್ತರು ಆಪಲ್ ಕಿತ್ತುಕೊಳ್ಳುವುದಕ್ಕೆ ಸೆಣಸಾಡಿದ್ದಾರೆ. ಅಷ್ಟೇ ಅಲ್ಲದೆ ಕೃಷ್ಣಪ್ಪ ಮತ್ತು ಪ್ರಿಯಾಕೃಷ್ಣ ಕೊರಳಿಗೆ ಎಗರಿ ಎಗರಿ ಸೇಬು ಕಿತ್ತುಕೊಂಡಿದ್ದಾರೆ.

ಚಾಮರಾಜಪೇಟೆಯ ಅಲ್ತಾಫ್ ಖಾನ್ ನಾಮಪತ್ರ ಸಲ್ಲಿಕೆ ವೇಳೆ ಜೆಡಿಎಸ್ ಬೆಂಬಲಿಗರು ಕೇಂದ್ರದೊಳಗೆ ನುಗ್ಗಲು ಪೊಲೀಸರ ಜೊತೆ ಜಟಾಪಟಿ ನಡೆಸಿದ್ದಾರೆ. ಹೆಬ್ಬಾಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೈರತಿ ಸುರೇಶ್ ನಾಮಪತ್ರ ಸಲ್ಲಿಕೆಯಲ್ಲಿ ಮಹಿಳಾಮಣಿಗಳು ಗ್ರೌಂಡ್‍ನಲ್ಲಿ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.

-

ಜೆಡಿಎಸ್ ಅಭ್ಯರ್ಥಿಗಳಿಗೆ ಪತ್ನಿಯರೇ ಪ್ರತಿಸ್ಪರ್ಧಿಗಳು
ರಾಯಚೂರು: ಜಿಲ್ಲೆಯ ಮಸ್ಕಿ ಮತ್ತು ಲಿಂಗಸಗೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳಿಗೆ ಅವರ ಪತ್ನಿಯರೇ ಪ್ರತಿಸ್ಪರ್ಧಿಗಳಾಗಿದ್ದಾರೆ.
ಮಸ್ಕಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರಾಜಾ ಸೋಮನಾಥ್ ನಾಯಕ್ ನಾಮಪತ್ರ ಸಲ್ಲಿಸಿದ್ದಾರೆ. ಜೊತೆಗೆ ತಮ್ಮ ಪತ್ನಿ ತಾರಾರಾಣಿ ಅವರಿಂದಲೂ ಜೆಡಿಎಸ್ ಪಕ್ಷದಿಂದಲೇ ನಾಮಪತ್ರ ಹಾಕಿಸಿದ್ದಾರೆ. ಲಿಂಗಸುಗೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿದ್ದಪ್ಪ ಬಂಡಿ ಹಾಗೂ ತಮ್ಮ ಪತ್ನಿ ಗಂಗಾ ಬಂಡಿ ಇಬ್ಬರೂ ನಾಮಪತ್ರಗಳನ್ನ ಸಲ್ಲಿಸಿದ್ದಾರೆ.

ಲಿಂಗಸಗೂರಿನ ಬಿಜೆಪಿ ಅಭ್ಯರ್ಥಿಗೆ ಸಹೋದರನ ಮಗನೇ ಎದುರಾಳಿಯಾಗಿದ್ದಾನೆ. ಆದ್ರೆ ಒಂದೇ ಪಕ್ಷದಿಂದ ಒಂದೇ ಮನೆಯಲ್ಲಿನ ಇಬ್ಬಿಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ಈ ರೀತಿಯಾಗಿ ಪತ್ನಿಯರು ನಾಮಪತ್ರ ಸಲ್ಲಿಸೋದಕ್ಕೆ ಜ್ಯೋತಿಷಿಗಳು ಕಾರಣ ಎನ್ನಲಾಗಿದ್ದು, ಪತ್ನಿಯರಿಂದಲೂ ನಾಮಪತ್ರ ಹಾಕಿಸಿದರೆ ಒಳ್ಳೆಯದು ಅಂತ ಈ ಇಬ್ಬರು ಅಭ್ಯರ್ಥಿಗಳು ಎರಡು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ಲಿಂಗಸಯಗೂರಿನ ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್ ತಮ್ಮ ಸಹೋದರನ ಪುತ್ರ ದೇವರಾಜ್ ದೋತ್ರೆ ಬಿಜೆಪಿ ಪಕ್ಷದಿಂದಲೇ ತಮ್ಮ ಉಮೇದುಗಾರಿಕೆ ಸಲ್ಲಿಸಿದ್ದಾರೆ. ಒಂದು ವೇಳೆ ತಮ್ಮ ನಾಮಪತ್ರ ತಿರಸ್ಕೃತವಾದ್ರೆ ಇರಲಿ ಅಂತ ಸಹೋದರನ ಪುತ್ರನಿಂದಲೂ ನಾಮಪತ್ರ ಹಾಕಿಸಿದ್ದಾರೆ ಎನ್ನಲಾಗಿದೆ.

-

ಕೊನೆ ಘಳಿಗೆಯಲ್ಲಿ ಬಿಎಸ್‍ವೈಗೆ ಕರೆ ಮಾಡಿದ ಆ ನಾಯಕ ಯಾರು?
ಮೈಸೂರು: ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಸಿಂ ಸಿದ್ದರಾಮಯ್ಯರ ಪುತ್ರ ಯತೀಂದ್ರ ವಿರುದ್ಧ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ನಿಲ್ತಾರೆ ಅಂತಾ ಹೇಳಲಾಗುತ್ತಿತ್ತು. ವಿಜಯೇಂದ್ರ ಇಂದು ವರುಣಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲು ಸಹ ಮುಂದಾಗಿದ್ದರು. ಆದ್ರೆ ಕೊನೆ ಕ್ಷಣದಲ್ಲಿ ಬಿಎಸ್‍ವೈ ಪುತ್ರನಿಗೆ ಬಿ ಫಾರಂ ತಪ್ಪಿದೆ.
ನಂಜನಗೂಡು ಕ್ಷೇತ್ರದಲ್ಲಿ ಇಂದು ಬಿಜೆಪಿ ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿತ್ತು. ಹೆಲಿಕಾಪ್ಟರ್ ನಿಂದ ಬಂದಿಳಿದ ಬಿ.ಎಸ್.ಯಡಿಯೂರಪ್ಪ ಅವರಿಗೆ ಫೋನ್ ಕಾಲ್ ಬಂದಿತ್ತು. ಹೈಕಮಾಂಡ್ ಒಪ್ಪಿಗೆ ಇಲ್ಲದೇ ವಿಜಯೇಂದ್ರ ನಾಮಪತ್ರವನ್ನು ಸಲ್ಲಿಸುವಂತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್‍ಲಾಲ್ ಬಿಎಸ್‍ವೈಗೆ ಖಡಕ್ ಸೂಚನೆ ನೀಡಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ.

ನಾವು ಪಟ್ಟಿ ಫೈನಲ್ ಮಾಡುವರೆಗೂ ನಿಮ್ಮ ಪುತ್ರ ನಾಮಪತ್ರವನ್ನು ಸಲ್ಲಿಸಬಾರದು. ಒಂದು ವೇಳೆ ನೀವು ಬಿ ಫಾರಂ ಕೊಟ್ಟರೂ, ನಾವು ಸಿ ಫಾರಂ ಕೊಡುತ್ತೇವೆ ಎಂದು ಕರೆ ಮಾಡಿ ತಿಳಿಸಿದ್ದಾರೆ.
ರಾಮ್‍ಲಾಲ್ ಅವರ ಕರೆ ಬರುತ್ತಿದ್ದಂತೆ ಸಮಾವೇಶದಲ್ಲಿ ವರುಣಾ ಕ್ಷೇತ್ರದಿಂದ ಸಾಮಾನ್ಯ ಕಾರ್ಯಕರ್ತರನ್ನು ನಿಲ್ಲಿಸಲಾಗುವುದು ಅಂತಾ ಯಡಿಯೂರಪ್ಪ ಘೋಷಣೆ ಮಾಡಿದ್ರು. ಯಡಿಯೂರಪ್ಪ ಹೇಳಿಕೆ ನೀಡುತ್ತಿದ್ದಂತೆ ಕಾರ್ಯಕರ್ತರೆಲ್ಲಾ ಆಕ್ರೋಶಗೊಂಡು ವಿಜಯೇಂದ್ರ ಅವರನ್ನು ಮುತ್ತಿಗೆ ಹಾಕಿದ್ರು.
ರಾಮ್‍ಲಾಲ್ ಕರೆ ಮಾಡಿರುವ ವಿಚಾರ ಖುದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಸಹ ತಿಳಿದಿಲ್ಲ ಎಂಬ ಮಾಹಿತಿಗಳು ಲಭ್ಯವಾಗಿದೆ. ನಂಜನಗೂಡಿನಲ್ಲಿ ಉಂಟಾದ ಕ್ಷಿಪ್ರ ಬೆಳವಣಿಗೆಗೆ ಅಮಿತ್ ಶಾ ವರದಿಯನ್ನು ಕೇಳಿದ್ದಾರೆ ಎನ್ನಲಾಗಿದೆ.

ಷಡ್ಯಂತ್ರ: ಬಿ.ಎಸ್.ಯಡಿಯೂರಪ್ಪ ಅವರನ್ನು ಕಟ್ಟಿಹಾಕಲು ಆರ್‍ಎಸ್‍ಎಸ್ ನಾಯಕರು ಹೈಕಮಾಂಡ್ ಮೂಲಕ ನಾಮಪತ್ರ ಸಲ್ಲಿಸಬಾರದೆಂದು ಹೇಳಿಸಿತಾ ಅಥವಾ ಕೇಂದ್ರ ಸಚಿವ ಅನಂತಕುಮಾರ್ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಸಹ ಕಾರ್ಯದರ್ಶಿ ಸಂತೋಷ್ ನಡೆಸಿದ ಷಡ್ಯಂತ್ರಕ್ಕೆ ವಿಜಯೇಂದ್ರ ಬಲಿಯಾದ್ರಾ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಈಗ ಹರಿದಾಡುತಿದ್ದು, ಕೊನೆ ಗಳಿಗೆಯಲ್ಲಿ ಈ ಬದಲಾವಣೆ ಮಾಡಿದ್ದು ಯಾಕೆ ಎನ್ನುವ ಪ್ರಶ್ನೆಗೆ ಈಗ ರಾಜ್ಯ ನಾಯಕರು ಉತ್ತರ ನೀಡಬೇಕಿದೆ. ಇದನ್ನೂ ಓದಿ: ಆರ್‍ಎಸ್‍ಎಸ್ ವರ್ಸಸ್ ಯಡಿಯೂರಪ್ಪ: ಆಕ್ರೋಶಕ್ಕೆ ತಿರುಗಿದ ಬಿಜೆಪಿ ಭಿನ್ನಮತ



