Tag: karnataka elections

  • ಬಾಯಾರಿದಾಗ ನೀರು ಕೊಡಲಿಲ್ಲ, ಈಗ್ಯಾಕೆ ಬಂದ್ರಿ?- ಸಚಿವೆ ಗೀತಾ ಮಹದೇವಪ್ರಸಾದ್ ವಿರುದ್ಧ ಮಹಿಳೆಯರು ಕಿಡಿ

    ಬಾಯಾರಿದಾಗ ನೀರು ಕೊಡಲಿಲ್ಲ, ಈಗ್ಯಾಕೆ ಬಂದ್ರಿ?- ಸಚಿವೆ ಗೀತಾ ಮಹದೇವಪ್ರಸಾದ್ ವಿರುದ್ಧ ಮಹಿಳೆಯರು ಕಿಡಿ

    ಚಾಮರಾಜನಗರ: ಮತ ಕೇಳಲು ಹೋದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಗೀತಾಮಹದೇವಪ್ರಸಾದ್ ಅವರು ಮಹಿಳೆಯರಿಂದಲೇ ತರಾಟೆಗೆ ಒಳಗಾದ ಘಟನೆ ಜಿಲ್ಲೆಯ ಗುಂಡ್ಲುಪೇಟೆ ಕ್ಷೇತ್ರದ ಹಿರಿಕಾಟಿ ಗ್ರಾಮದಲ್ಲಿ ಜರುಗಿದೆ.

    ಕುಡಿಯಲು ನೀರು ಕೊಡೋಕೆ ನಿಮಗೆ ಆಗಲಿಲ್ಲ. ಈಗ ನಮ್ಮ ಗ್ರಾಮಕ್ಕೆ ಮತ ಕೇಳಲು ಯಾಕೆ ಬಂದಿದ್ದೀರಾ. ನಮಗೆ ಬಾಯಾರಿಕೆ ಆದಾಗ ನೀವು ನೀರು ಕೊಡಲಿಲ್ಲ. ನಾವು ಈಗ ನಿಮಗೆ ಮತ ನೀಡಬೇಕಾ ಎಂದು ಹಿರಿಕಾಟಿ ಗ್ರಾಮದ ಮಹಿಳೆಯರು ಸಚಿವೆ ಗೀತಾಮಹದೇವಪ್ರಸಾದ್ ಅವರನ್ನು ತರಾಟೆಗೆ ತೆಗೆದುಕೊಂಡ್ರು.

    ಗ್ರಾಮದ ಪ್ರವೇಶ ದ್ವಾರದಲ್ಲೇ ಗೀತಾಮಹದೇವಪ್ರಸಾದ್ ರನ್ನು ನಿಲ್ಲಿಸಿ, ಉಪಚುನಾವಣೆಯಲ್ಲಿ ಗೆದ್ದ ನಂತರ ಇತ್ತ ನೀವು ತಲೆ ಹಾಕಿಲ್ಲ. ಇದೀಗ ಚುನಾವಣೆ ಬಂದ ಮೇಲೆ ನಮ್ಮ ಗ್ರಾಮಕ್ಕೆ ನೀವು ಬರ್ತಾ ಇದ್ದೀರಾ. ನೀರು ಕೊಡದ ನಿಮಗೆ ನಾವು ಯಾಕೆ ಮತ ಹಾಕಬೇಕು ಎಂದು ಮಹಿಳೆಯರು ಸಚಿವೆಗೆ ಪ್ರಶ್ನೆಗಳ ಸುರಿಮಳೆಗೈದರು.

    ಈ ವೇಳೆ ಮಹಿಳೆಯರನ್ನು ಮನವೊಲಿಸಲು ಮುಂದಾದ ಸಚಿವೆಯ ಹಿಂಬಾಲಕನ್ನು ಸಹ ಮಹಿಳೆಯರು ತರಾಟೆಗೆ ತೆಗೆದುಕೊಂಡಿದ್ದರು. ಅವರು ನೀರು ಕೊಡಲಿಲ್ಲ ಅಂದರೆ ನೀವ್ ಕೊಡ್ತೀರಾ..? ನಾವು ಅವರನ್ನು ಕೇಳ್ತಾ ಇರೋದು ನೀವು ಮಾತಾಡಬೇಡಿ ಎಂದು ಹಿಂಬಾಲಕರ ವಿರುದ್ಧ ಕಿಡಿ ಕಾರಿದ್ದಾರೆ.

  • ಕಾಂಗ್ರೆಸ್ ನಿಂದ ದೂರ ಉಳಿದಿರೋ ಅಂಬರೀಶ್ ಜೆಡಿಎಸ್ ಸೇರ್ತಾರಾ?

    ಕಾಂಗ್ರೆಸ್ ನಿಂದ ದೂರ ಉಳಿದಿರೋ ಅಂಬರೀಶ್ ಜೆಡಿಎಸ್ ಸೇರ್ತಾರಾ?

    ಬೆಂಗಳೂರು: ಚುನಾವಣಾ ಸನ್ಯಾಸ ಘೋಷಿಸಿರುವ ಹಿರಿಯ ನಟ ಮತ್ತು ಮಾಜಿ ಸಚಿವ ರೆಬೆಲ್ ಸ್ಟಾರ್ ಅಂಬರೀಶ್‍ರನ್ನು ಶನಿವಾರ ರಾತ್ರಿ ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ ಭೇಟಿ ಮಾಡಿದ್ದಾರೆ.

    ಬೆಂಗಳೂರಿನ ಗಾಲ್ಫ್ ಕ್ಲಬ್‍ನಲ್ಲಿರುವ ಅಂಬಿ ಮನೆಗೆ ಕುಮಾರಸ್ವಾಮಿ ತೆರಳಿ ಅವರ ಜೊತೆ ಮಾತುಕತೆ ನಡೆಸಿದ್ದಾರೆ. ಮಂಡ್ಯದಲ್ಲಿ ನಮ್ಮ ಪಕ್ಷವನ್ನು ಬೆಂಬಲಿಸಿ ಅಂತ ಕುಮಾರಸ್ವಾಮಿ ಮನವಿ ಮಾಡಿಕೊಂಡಿದ್ದಾರೆ.

    ಈ ವೇಳೆ ಅಂಬಿ ಕಾಂಗ್ರೆಸ್‍ನಲ್ಲಿ ನನಗೆ ಅವಮಾನ ಮಾಡಿದ್ದಾರೆ. ಹೇಳದೇ ಕೇಳದೇ ಸಚಿವ ಸ್ಥಾನದಿಂದ ತೆಗೆದುಹಾಕಿದ್ದಾರೆ. ಅದೇ ಕಾರಣಕ್ಕೆ ಚುನಾವಣೆಗೆ ನಿಲ್ಲುತ್ತಿಲ್ಲ ಅಂತ ತಮ್ಮ ನೋವು ತೋಡಿಕೊಂಡಿದ್ದಾರೆ. ಈ ಹಿಂದೆ ಜೆಡಿಎಸ್ ಬಗ್ಗೆ ಅಂಬಿ ಹೊಗಳಿದ್ದರು. ಆದರೆ ಈಗ ಜೆಡಿಎಸ್ ಸೇರ್ಪಡೆ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳುತ್ತೀನಿ ಎಂದು ಹೇಳಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

  • ಪ್ರಚಾರದ ವೇಳೆ ಸಚಿವ ಹೆಚ್ ಆಂಜನೇಯ ಅಸ್ವಸ್ಥ-ಆಸ್ಪತ್ರೆಗೆ ದಾಖಲು

    ಪ್ರಚಾರದ ವೇಳೆ ಸಚಿವ ಹೆಚ್ ಆಂಜನೇಯ ಅಸ್ವಸ್ಥ-ಆಸ್ಪತ್ರೆಗೆ ದಾಖಲು

    ಚಿತ್ರದುರ್ಗ: ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್. ಆಂಜನೇಯ ಅಸ್ವಸ್ಥರಾಗಿದ್ದು, ಕೂಡಲೇ ಅವರನ್ನು ಆಸ್ಪತ್ರಗೆ ದಾಖಲಿಸಲಾಗಿದೆ.

    ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಿರಂತರ ಪ್ರಚಾರದಲ್ಲಿ ತೊಡಗಿರುವ ಸಚಿವ ಆಂಜನೇಯ ಅವರು ತೀವ್ರ ಬಿಸಿಲಿನಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಆದ್ರು ಇಂದು ಚಿತ್ರದುರ್ಗದಲ್ಲಿ ಪ್ರಚಾರ ಕಾರ್ಯ ನಡೆಸಲು ಆಗಮಿಸಿದ್ದ ಅವರು ಸುಸ್ತಾಗಿ ಕುಸಿದು ಬಿದಿದ್ದಾರೆ.

    ಆಂಜನೇಯ ಅವರಿಗೆ ತಕ್ಷಣ ಸ್ಥಳದಲ್ಲಿದ್ದ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಬಳಿಕ ಪಕ್ಷದ ಕಾರ್ಯಕರ್ತರು ಅವರನ್ನು ದಾವಣಗೆರೆಯ ಎಸ್‍ಎಸ್ ನಾರಾಯಣ ಹೃದಯಾಲಯಕ್ಕೆ ದಾಖಲಿಸಿದ್ದಾರೆ.

    ಸದ್ಯ ಆಂಜನೇಯ ಅವರಿಗೆ ಚಿಕಿತ್ಸೆ ಮುಂದುವರೆದಿದೆ. 24 ಗಂಟೆಗಳ ಕಾಲ ವೈದ್ಯರ ನಿಗಾದಲ್ಲಿ ಚಿಕಿತ್ಸೆ ನೀಡಲು ಸೂಚಿಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಸಚಿವರ ಆರೋಗ್ಯ ಹದಗೆಟ್ಟ ಕಾರಣ ಆಂಜನೇಯ ಅವರ ಕುಟುಂಬ ಹಾಗೂ ಪಕ್ಷದ ಕಾರ್ಯಕರ್ತರಲ್ಲಿ ತೀವ್ರ ಆತಂಕ ಉಂಟಾಗಿದೆ.

  • ಬಿಜೆಪಿ ಗೆಲ್ಲಬೇಕು, ಯಡಿಯೂರಪ್ಪ ಸಿಎಂ ಆಗಬೇಕು- ಮಹಿಳೆಯರು ಸೇರಿದಂತೆ ಗದಗ ಬಿಜೆಪಿ ಕಾರ್ಯಕರ್ತರಿಂದ ಉರುಳು ಸೇವೆ

    ಬಿಜೆಪಿ ಗೆಲ್ಲಬೇಕು, ಯಡಿಯೂರಪ್ಪ ಸಿಎಂ ಆಗಬೇಕು- ಮಹಿಳೆಯರು ಸೇರಿದಂತೆ ಗದಗ ಬಿಜೆಪಿ ಕಾರ್ಯಕರ್ತರಿಂದ ಉರುಳು ಸೇವೆ

    ಗದಗ: ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ ಹಿನ್ನೆಲೆ, ಈ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಗದಗ ಬಿಜೆಪಿ ಕಾರ್ಯಕರ್ತರು ಉರುಳು ಸೇವೆ ಮಾಡಿದರು.

    ನಗರದ ಪಂಡಿತ ಪುಟ್ಟರಾಜ ಕವಿಗವಾಯಿಗಳ ಸರ್ಕಲ್ ನಲ್ಲಿ ಎಂಟು ಜನ ಬಿಜೆಪಿ ಕಾರ್ಯಕರ್ತರು ಒದ್ದೆ ಬಟ್ಟೆಯಲ್ಲಿ ಉರುಳು ಸೇವೆ ಮಾಡಿದರು. ಗದಗ ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಗೆಲ್ಲಬೇಕು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ಜೊತೆಗೆ ಬಿ.ಎಸ್ ಯಡಿಯೂರಪ್ಪ ನವರು ಮತ್ತೊಮ್ಮೆ ಸಿಎಂ ಆಗಬೇಕೆಂಬ ಹರಕೆಯಿಂದ ಬಿಜೆಪಿ ಭಕ್ತರು ಉರುಳು ಸೇವೆ ಮಾಡಿದರು.

    ಬಿಜೆಪಿ ಕಾರ್ಯಕರ್ತರು ಗದುಗಿನ ಪಂಡಿತ ಪುಟ್ಟರಾಜ ಕವಿಗವಾಯಿಗಳ ದೇವರ ಮೊರೆಹೋಗಿದ್ದಾರೆ. ಬಿಜೆಪಿ ಕಾರ್ಯಕರ್ತ ಬಸವಣ್ಣಯ್ಯ ನೇತೃತ್ವದಲ್ಲಿ ಮಹಿಳೆಯರು ಸೇರಿದಂತೆ ಎಂಟು ಜನರು ನಗರದ ಪ್ರಮುಖ ಬೀದಿಯಲ್ಲಿ ಉರುಳು ಸೇವೆ ಮಾಡುವ ಮೂಲಕ ದೇವರಲ್ಲಿ ಹರಕೆ ಹೊತ್ತಿದ್ದಾರೆ.

  • ಜವಾಬ್ದಾರಿಯಿಂದ ನುಣುಚಿಕೊಳ್ಳಲು ಮೋದಿ ಮಹದಾಯಿ ಹೇಳಿಕೆ ನೀಡಿದ್ದಾರೆ: ಸಿಎಂ ತಿರುಗೇಟು

    ಜವಾಬ್ದಾರಿಯಿಂದ ನುಣುಚಿಕೊಳ್ಳಲು ಮೋದಿ ಮಹದಾಯಿ ಹೇಳಿಕೆ ನೀಡಿದ್ದಾರೆ: ಸಿಎಂ ತಿರುಗೇಟು

    ಬಾಗಲಕೋಟೆ: ಇಂದು ಗದಗನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಮೋದಿ ಮಹದಾಯಿ ವಿಚಾರದಲ್ಲಿ ರಾಜಕೀಯ ಮಾಡ್ತಿದೆ ಅಂತಾ ಆರೋಪಿಸಿದ್ದರು. ಪಿಎಂ ಹೇಳಿಕೆಗೆ ತಿರುಗೇಟು ನೀಡಿರುವ ಸಿಎಂ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಈ ರೀತಿಯ ಹೇಳಿಕೆಗಳನ್ನು ಕೊಡ್ತಿದ್ದಾರೆ ಅಂತಾ ತಿರುಗೇಟು ನೀಡಿದ್ರು.

    ಜಿಲ್ಲೆಯ ಬಾದಾಮಿ ತಾಲೂಕಿನ ನಂದಕೇಶ್ವರದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರಿಗೆ ಮಹದಾಯಿ ನದಿ ಜೋಡಣೆ ಸಮಸ್ಯೆಯನ್ನ ಬಗೆಹರಿಸುವ ಮನಸ್ಸಿಲ್ಲ. ಈ ದೇಶದ ಪ್ರಧಾನಿ ಯಾರು? ರೈತರ ಹೋರಾಟ ನಡೆಯುತ್ತಿರುವುದು ನಾಲ್ಕು ವರ್ಷಗಳಿಂದ. ಆದರೆ ಈ ಸಮಸ್ಯೆ ಬಗೆಹರಿಸುವಲ್ಲಿ ಮೋದಿ ವಿಫಲರಾಗಿ ಕನ್ನಡಿಗರಿಗೆ ದ್ರೋಹ ಮಾಡಿದ್ದಾರೆ. ಜನರು ಅವರಿಗೆ ಬಯ್ಯುತ್ತಿದ್ದರು. ಆದ್ದರಿಂದ ಮೋದಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಈ ರೀತಿಯ ಹೇಳಿಕೆ ನೀಡಿದ್ದಾರೆ. ಮೋದಿಯವರು ಮಹದಾಯಿ ವಿಚಾರದಲ್ಲಿ ಮಧ್ಯಪ್ರವೇಶ ವಹಿಸದೇ ರಾಜ್ಯಕ್ಕೆ ದೊಡ್ಡ ದ್ರೋಹ ಮಾಡಿದ್ದಾರೆ ಎಂದು ಮಹಾದಾಯಿ ನದಿ ಜೋಡಣೆ ವಿಚಾರವಾಗಿ ಪ್ರಧಾನಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ನೀರು ಪ್ರತಿಯೊಬ್ಬರ ಹಕ್ಕು, ಮಹದಾಯಿ ಸಮಸ್ಯೆ ಬಗೆಹರಿಸುವ ಸಂಕಲ್ಪ ಮಾಡ್ತಿದ್ದೇನೆ: ಮೋದಿ

    ನಾನು ಎಲ್ಲ ಪ್ರಯತ್ನಗಳನ್ನು ಮಾಡಿದ್ದೀನಿ. ಪ್ರಧಾನಿ ಸೇರಿದಂತೆ ಎಲ್ಲ ರಾಜ್ಯದ ಸಿಎಂಗಳ ಜೊತೆ ಮಾತನಾಡಿದೆ. ಅವರಿದ್ದಲ್ಲೇ ಹೋಗಿ ಮಾತನಾಡಲು ಸಿದ್ದವಾಗಿದ್ದೆ. ಈ ಸಮಸ್ಯೆಯನ್ನು ಬಗೆಹರಿಸುವ ಶಕ್ತಿ ಪ್ರಧಾನಿ ಮೋದಿಗಿತ್ತು. ನಾನು ಸಾಕಷ್ಟು ಬಾರಿ ಪ್ರಧಾನಿಗೂ ಪತ್ರ ಬರೆದಿದ್ದೆ. ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಇತ್ತು. ಅಲ್ಲದೆ ಕೇಂದ್ರದಲ್ಲೂ ಅವರ ಸರ್ಕಾರ ಇತ್ತು. ಆದ್ದರಿಂದ ಈ ಸಮಸ್ಯೆಯನ್ನು ಬಗೆಹರಿಸಬಹುದಿತ್ತು. ಆದರೆ ಪ್ರಧಾನಿ ಮೋದಿ ಈ ಸಮಸ್ಯೆಯನ್ನ ಬಗೆಹರಿಸುವ ಕೆಲಸ ಮಾಡಲಿಲ್ಲ ಎಂದ್ರು.

  • ಸಚಿವ ರಾಜ್‍ನಾಥ್ ಸಿಂಗ್ ಸಮ್ಮುಖದಲ್ಲೇ ಅಡ್ಡ ಬಿದ್ದು ಬಿಜೆಪಿ ಅಭ್ಯರ್ಥಿ ಕಣ್ಣೀರು!

    ಸಚಿವ ರಾಜ್‍ನಾಥ್ ಸಿಂಗ್ ಸಮ್ಮುಖದಲ್ಲೇ ಅಡ್ಡ ಬಿದ್ದು ಬಿಜೆಪಿ ಅಭ್ಯರ್ಥಿ ಕಣ್ಣೀರು!

    ಕಲಬುರಗಿ: ನಾನು ಮೂರು ಬಾರಿ ಸೋತಿದ್ದೇನೆ. ಹೀಗಾಗಿ ಈ ಬಾರಿಯಾದ್ರೂ ನನಗೆ ಆಶೀರ್ವಾದ ಮಾಡಿ ಅಂತಾ ಕೇಂದ್ರ ಸಚಿವ ರಾಜ್‍ನಾಥ್ ಸಿಂಗ್ ಸಮ್ಮುಖದಲ್ಲೇ ಸೇಡಂ ಬಿಜೆಪಿ ಅಭ್ಯರ್ಥಿ ರಾಜಕುಮಾರ್ ಪಾಟೀಲ್ ತೆಲ್ಕೂರ್ ಕಣ್ಣೀರು ಹಾಕಿದ್ದಾರೆ.

    ಈ ಘಟನೆ ಕಲಬುರಗಿ ಜಿಲ್ಲೆ ಸೇಡಂ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಮಾತೃಛಾಯ ಶಾಲಾ ಆವರಣದಲ್ಲಿಂದು ಆಯೋಜಿಸಲಾಗಿದ್ದ ಬಿಜೆಪಿ ಬೃಹತ್ ಸಮಾವೇಶದಲ್ಲಿ ಮಾತನಾಡುವಾಗ, ನಾನು ಮೂರು ಬಾರಿ ಕಡಿಮೆ ಅಂತರ ಮತಗಳಿಂದ ಸೋತಿದ್ದೇನೆ. ಈ ಬಾರಿಯಾದರು ನನಗೆ ವಿಧಾನಸಭೆಗೆ ಕಳುಹಿಸಿಕೊಡಿ ಅಂತಾ ರಾಜ್‍ನಾಥ್ ಸಿಂಗ್ ಎದುರೇ ವೇದಿಕೆಯಲ್ಲಿ ಸಾಷ್ಟಾಂಗ ನಮಸ್ಕಾರ ಹಾಕುವ ಮೂಲಕ ಭಾವುಕರಾಗಿ, ನನ್ನ ಗೆಲ್ಲಿಸಿ ಅಂತಾ ಮನವಿ ಮಾಡಿದ್ದಾರೆ.

    ಇನ್ನು ಇದೇ ವೇಳೆ ಸಮಾವೇಶದ ನಂತರ, ಖ್ಯಾತ ಕನ್ನಡ ಚಿತ್ರ ನಟಿ ಶೃತಿ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಅಭಿಮಾನಿಗಳು, ಕಾರ್ಯಕರ್ತರಲ್ಲದೆ ಕೆಲ ಮಹಿಳಾ ಪೊಲೀಸ್ ಸಿಬ್ಬಂದಿಗಳು ಸಹ ಮುಗಿಬಿದ್ದಿದ್ದರು. ಅಭಿಮಾನಿಗಳ ಆಸೆಗೆ ಬೇಸರಗೊಳ್ಳದೆ ತಾಳ್ಮೆಯಿಂದ ಸೆಲ್ಫಿ ತೆಗೆದುಕೊಂಡು ಕೆಲ ಕಾಲ ಅವರೊಂದಿಗೆ ಶೃತಿ ಬೆರೆತರು.

  • ಮತದಾರರಿಗೆ ಹಂಚಿಕೆ ಮಾಡಲು ಸಂಗ್ರಹಿಸಿದ್ದ ಗೃಹೋಪಯೋಗಿ ವಸ್ತುಗಳು ವಶ

    ಮತದಾರರಿಗೆ ಹಂಚಿಕೆ ಮಾಡಲು ಸಂಗ್ರಹಿಸಿದ್ದ ಗೃಹೋಪಯೋಗಿ ವಸ್ತುಗಳು ವಶ

    ಬೆಂಗಳೂರು: ಮತದಾರರಿಗೆ ಹಂಚಿಕೆ ಮಾಡಲು ಸಂಗ್ರಹಿಸಿದ್ದಾರೆ ಎನ್ನಲಾಗಿದ್ದ ಗೃಹೋಪಯೋಗಿ ವಸ್ತುಗಳನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ವಿಜಯನಗರದ ರಾಘವ ನಗರದಲ್ಲಿ ನಡೆದಿದೆ.

    ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇಂದು ತಮ್ಮ ಅಭ್ಯರ್ಥಿಪರ ಪ್ರಚಾರದ ಕಾರ್ಯ ನಡೆಸುತ್ತಿದ್ದರು. ಈ ವೇಳೆ ಬಿಜೆಪಿಯ ಯುವ ಮೋರ್ಚಾ ಕಾರ್ಯಕರ್ತರ ಮನೆಯಲ್ಲಿ ಸಂಗ್ರಹಿಸಿದ್ದ ವಸ್ತುಗಳನ್ನು ಕಂಡು ಚುನಾವಣೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ವೇಳೆ ಘಟನೆ ಬೆಳಕಿಗೆ ಬಂದಿದೆ.

    ಚುನಾವಣೆ ಸಮಯದಲ್ಲಿ ಎಲ್ಲೆಡೆ ನೀತಿ ಸಂಹಿತೆ ಜಾರಿ ಇರುವುದರಿಂದ ಯಾವುದೇ ದಾಖಲೆ ಇಲ್ಲದೆ ಗೃಹೋಪಯೋಗಿ ವಸ್ತುಗಳನ್ನು ಸಂಗ್ರಹಿಸುವುದು ಹಾಗೂ ಸಾಗಾಣೆ ಮಾಡುವುದು ಕಾನೂನು ಉಲ್ಲಂಘಟನೆ ಎಂದು ದೂರಿರುವ ಕಾಂಗ್ರೆಸ್ ಕಾರ್ಯಕರ್ತರು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

    ಈ ಕುರಿತು ಮಾಹಿತಿ ಪಡೆದ ಚುನಾವಣಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ 2000 ಸಾವಿರ ನೀರಿನ ಗುಂಡಿ, 2000 ಗ್ಯಾಸ್ ಸ್ಟವ್, 1,500 ಕುಕ್ಕರ್, ಚಾಕುಗಳು, ತಟ್ಟೆಗಳು ಸೇರಿದಂತೆ ಗೃಹಬಳಕೆ ವಸ್ತುಗಳು ಪತ್ತೆ. ಸಂಗ್ರಹಿಸಿರುವ ವಸ್ತುಗಳ ಕುರಿತು ಮಾಹಿತಿ ಪಡೆದ ಅಧಿಕಾರಿಗಳು ಅಂಗನವಾಡಿ ಕೇಂದ್ರಗಳಿಗೆ ಪೂರೈಸಲು ಇವುಗಳನ್ನು ಸಂಗ್ರಹ ಮಾಡಲಾಗಿದೆ. ಈ ಸೂಕ್ತ ದಾಖಲೆಗಳನ್ನು ಸಲ್ಲಿಸಿದ್ದಾರೆ ಎನ್ನಲಾಗಿದೆ. ಆದರೆ ಸಂಗ್ರಹಣೆ ಮಾಡಲಾಗಿರುವ ವಸ್ತುಗಳ ಮೇಲೆ ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರವೀಂದ್ರ ಅವರ ಕ್ರಮ ಸಂಖ್ಯೆ ಇದ್ದು ಇವುಗಳು ಅವರಿಗೆ ಸೇರಿದ ವಸ್ತುಗಳು ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.

  • ಚಾಮುಂಡೇಶ್ವರಿಯಲ್ಲೂ ಸಿಎಂಗೆ ಎದುರಾಯ್ತು ಸಂಕಷ್ಟ!

    ಚಾಮುಂಡೇಶ್ವರಿಯಲ್ಲೂ ಸಿಎಂಗೆ ಎದುರಾಯ್ತು ಸಂಕಷ್ಟ!

    ಮೈಸೂರು: ಈ ಬಾರಿಯ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರ ಮೊರೆ ಹೋಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗಿದೆ.

    ಈಗಾಗಲೇ ಸಿದ್ದರಾಮಯ್ಯ ಅವರ ಪರ ನಟಿ ಜಯಮಾಲಾ, ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ಬಾಲಿವುಡ್ ನಟ ರಾಜ್ ಬಬ್ಬರ್ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ. ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಪ್ರಚಾರ ಕಣಕ್ಕೆ ಇಳಿಯುತ್ತಿದ್ದರು.

    ಆದ್ರೆ ಇದೀಗ ಸಿದ್ದರಾಮಯ್ಯ ಪರ ದರ್ಶನ್ ಪ್ರಚಾರಕ್ಕೆ ವಿರೋಧ ವ್ಯಕ್ತವಾಗಿದ್ದು, ನಾಗನಹಳ್ಳಿಯಲ್ಲಿ ಜೆಡಿಎಸ್ ಕಾರ್ಯಕರ್ತರು ದರ್ಶನ್ ಗೆ ಧಿಕ್ಕಾರ ಹಾಕುತ್ತಿದ್ದಾರೆ. ದರ್ಶಶ್ ಸಿದ್ದರಾಮಯ್ಯ ಪರ ಪ್ರಚಾರ ಮಾಡಲು ಗ್ರಾಮಕ್ಕೆ ಆಗಮಿಸದಂತೆ ಪ್ರತಿಭಟನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಸಿಎಂಗೆ ಬಿಗ್ ಶಾಕ್ ನೀಡಿದ ನಟ ಕಿಚ್ಚ ಸುದೀಪ್!

    ಕಳೆದ 12 ವರ್ಷದಿಂದ ಸಿಎಂ ಸಿದ್ದರಾಮಯ್ಯ ರೈತರ ಪರ ಕೆಲಸ ಮಾಡಿಲ್ಲ. 12 ವರ್ಷ ನಮ್ಮ ಕ್ಷೇತ್ರವನ್ನು ಮರೆತಿದ್ದಾರೆ. ಅಣ್ಣಾ ಅಂಬರೀಶ್ ಅವರನ್ನು ಕಾಂಗ್ರೆಸ್ ನಿಂದ ದೂರ ಮಾಡಿದ್ದಾರೆ. ಹಾಗಾಗಿ ದರ್ಶನ ಯಾವುದೇ ಕಾರಣಕ್ಕೂ ಪ್ರಚಾರ ಮಾಡಬಾರದು ಎಂದು ರೈತ ವಿರೋಧಿ ದರ್ಶನ ಎಂದು ಪ್ರತಿಭಟನಕಾರರು ಕೂಗುತ್ತಿದ್ದಾರೆ. ಆದ್ದರಿಂದ ಅನಿವಾರ್ಯವಾಗಿ ನಟ ದರ್ಶನ್ ಪ್ರಚಾರವನ್ನು ಕಳಸ್ತವಾಡಿ ಗೆ ಶಿಫ್ಟ್ ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಪ್ರಚಾರಕ್ಕೆ ಬದಾಮಿ ಕ್ಷೇತ್ರಕ್ಕೆ ಹೋಗಲ್ಲ ಅಂದ್ರು ಯಶ್!

    ಮೂಲತಃ ದರ್ಶನ್ ಮೈಸೂರಿನವರಾಗಿದ್ದು, ಅವರ ತಾಯಿ ಮೀನಾ ತೂಗುದೀಪ ಅವರು ಕಾಂಗ್ರೆಸ್ ಮುಖಂಡರು. ಹೀಗಾಗಿ ದರ್ಶನ್ ಸಿಎಂ ಪರ ಪ್ರಚಾರಕ್ಕೆ ಇಳಿಯುತ್ತಿದ್ದಾರೆ. ಕ್ಷೇತ್ರದ ಒಟ್ಟು 33 ಹಳ್ಳಿಗಳಲ್ಲಿ ದರ್ಶನ್ ರೋಡ್ ಶೋ ನಡೆಸಿ ಪ್ರಚಾರ ನಡೆಸಲಿದ್ದಾರೆ.

  • ಇಂದು ಬಾಗಲಕೋಟೆಗೆ ಮೂವರು ಪ್ರಮುಖ ನಾಯಕರು ಭೇಟಿ

    ಇಂದು ಬಾಗಲಕೋಟೆಗೆ ಮೂವರು ಪ್ರಮುಖ ನಾಯಕರು ಭೇಟಿ

    ಬಾಗಲಕೋಟೆ: ಚುನಾವಣೆಯ ಹಿನ್ನೆಲೆಯಲ್ಲಿ ಪ್ರಚಾರಕ್ಕಾಗಿ ಇಂದು ಜಿಲ್ಲೆಗೆ ಮೂರು ಜನ ಪ್ರಮುಖ ನಾಯಕರು ಭೇಟಿ ನೀಡಲಿದ್ದಾರೆ.

    ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಮುಧೋಳ ಮತ್ತು ತೇರದಾಳ ಕ್ಷೇತ್ರದ ಬನಹಟ್ಟಿಯಲ್ಲಿ ಯೋಗಿ ಆದಿತ್ಯನಾಥ್ ಪ್ರಚಾರ ನಡೆಸಲಿದ್ದಾರೆ.

    ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಆಗಮಿಸಲಿರುವ ಆದಿತ್ಯನಾಥ್, ಮಧ್ಯಾಹ್ನ ಸುಮಾರು 12.30ಕ್ಕೆ ಮುಧೋಳ ನಗರಕ್ಕೆ ಭೇಟಿ ನೀಡಲಿದ್ದಾರೆ. 12.30 ರಿಂದ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರ್.ಎಮ್.ಜೆ ಕಾಲೇಜ್ ವರೆಗೂ ರೋಡ್ ಶೋ ಮಾಡಲಿದ್ದಾರೆ. ನಂತರ 1.30 ಕ್ಕೆ ಆರ್.ಎಮ್.ಜೆ ಕಾಲೇಜು ಮೈದಾನದಲ್ಲಿ ಬಹಿರಂಗ ಪ್ರಚಾರ ಸಭೆ ನಡೆಸಲಿದ್ದು, ಮುಧೋಳ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಪರ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಮತಯಾಚನೆ ಮಾಡಲಿದ್ದಾರೆ.

    ಸಭೆಯ ಬಳಿಕ ಮಧೋಳದಿಂದ ತೇರದಾಳ ಮತಕ್ಷೇತ್ರ ಬನಹಟ್ಟಿ ಪಟ್ಟಣ ಎಸ್.ಆರ್.ಎ ಕಾಲೇಜು ಮೈದಾನದಲ್ಲಿ ಮಧ್ಯಾಹ್ನ ಸುಮಾರು 4 ಗಂಟೆಗೆ ಬಹಿರಂಗ ಪ್ರಚಾರ ಸಭೆ ನಡೆಸಲಿದ್ದಾರೆ. ತೇರದಾಳ ಬಿಜೆಪಿ ಅಭ್ಯರ್ಥಿ ಸಿದ್ದು ಸವದಿ ಪರ ಪ್ರಚಾರ ಭಾಷಣ ಮಾಡಲಿದ್ದಾರೆ.

    ಸಂಜೆ  ಕೇಂದ್ರ ಸಚಿವೆ ಸ್ಮೃತಿ ಇರಾನಿ ಬದಾಮಿ ಕ್ಷೇತ್ರದ ಗುಳೇದಗುಡ್ಡ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀ ರಾಮುಲು ಪರ ಪ್ರಚಾರ ಸಭೆ ನಡೆಸಲಿದ್ದಾರೆ. ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕೂಡ ಬಾಗಲಕೋಟೆ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಹುನಗುಂದ ಪಕ್ಷೇತರ ಅಭ್ಯರ್ಥಿ ಎಸ್.ಆರ್ ನವಲಿಹಿರೇಮಠ ಪರ ಹುನಗುಂದ ಪಟ್ಟಣದಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ. ಬಳಿಕ ಸಂಜೆ 6 ಗಂಟೆಗೆ ಬದಾಮಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಹನುಮಂತ ಮಾವಿನಮರದ ಪರ ರೋಡ್ ಶೋ ಪ್ರಚಾರ ಸಭೆ ನಡೆಸಲಿದ್ದಾರೆ.

  • ಕಾಂಗ್ರೆಸ್ ಸಭೆಗೆ ಬಂದು ಗಲಾಟೆ ಮಾಡಿದ್ರೆ ಮಾನನಷ್ಟ ಕೇಸ್ – ಬಿಜೆಪಿಗರಿಗೆ ಸಚಿವ ರಾಯರೆಡ್ಡಿ ಅವಾಜ್

    ಕಾಂಗ್ರೆಸ್ ಸಭೆಗೆ ಬಂದು ಗಲಾಟೆ ಮಾಡಿದ್ರೆ ಮಾನನಷ್ಟ ಕೇಸ್ – ಬಿಜೆಪಿಗರಿಗೆ ಸಚಿವ ರಾಯರೆಡ್ಡಿ ಅವಾಜ್

    ಕೊಪ್ಪಳ: ಬಿಜೆಪಿಯವರು ಯಾರಾದರೂ ಕಾಂಗ್ರೆಸ್ ಸಭೆಗೆ ಬಂದು ಮಾತಾಡಿದರೆ ಕೇಸ್ ಹಾಕಿಸುತ್ತೇನೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಬಿಜೆಪಿಗರಿಗೆ ಅವಾಜ್ ಹಾಕಿದ್ದಾರೆ.

    ಗುರುವಾರ ನಡೆದ ಯಲಬುರ್ಗಾ ತಾಲೂಕಿನ ಮುರುಡಿ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸಭೆಯಲ್ಲಿ ನೀವು ಮಾತಾಡಿದ್ರೆ ಕೇಸ್ ಹಾಕಬೇಕಾಗತ್ತೆ. ಅಷ್ಟೇ ಅಲ್ಲದೇ ಬಿಜೆಪಿ ಕಾರ್ಯಕರ್ತರಿಗೆ ಮಾನನಷ್ಟ ಕೇಸ್ ಹಾಕಿಸುತ್ತೇನೆ ಎಂದಿದ್ದಾರೆ.

    ಇದು ಕಾಂಗ್ರೆಸ್ ಮೀಟಿಂಗ್, ಬಿಜೆಪಿಯವರು ಹೊರಗೆ ಹೋಗಿ ಎಂದು ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿಯವರನ್ನ ಹೊರ ಹಾಕಿ ಎಂದಿದ್ದಾರೆ.  ಬಸವರಾಜ್ ರಾಯರೆಡ್ಡಿ ಸಭೆಯಲ್ಲಿ ಪ್ರಶ್ನೆ ಮಾಡಿದ್ದಕ್ಕೆ, ನೀವು ಹೋಗಿ ಬಿಜೆಪಿ ಸಭೆಯಲ್ಲಿ ಕೇಳಿ ಎಂದು ಉಡಾಫೆಯ ಮಾತನಾಡಿದ್ದಾರೆ. ಇದು ಕಾಂಗ್ರೆಸ್ ಕಾರ್ಯಕರ್ತರ ಮೀಟಿಂಗ್ ನೀವು ಇಲ್ಲಿ ಮಾತಾಡಬೇಡಿ ಎಂದಿದ್ದಾರೆ.