Tag: Karnataka Elections 2018

  • ನರೇಂದ್ರಸ್ವಾಮಿ ಬದಲು ನರೇಂದ್ರ ಮೋದಿಗೆ ವೋಟ್ ಹಾಕಿ ಎಂದ ಸಿಎಂ- ವಿಡಿಯೋ ನೋಡಿ

    ನರೇಂದ್ರಸ್ವಾಮಿ ಬದಲು ನರೇಂದ್ರ ಮೋದಿಗೆ ವೋಟ್ ಹಾಕಿ ಎಂದ ಸಿಎಂ- ವಿಡಿಯೋ ನೋಡಿ

    ಮಂಡ್ಯ: ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರದ ಭಾಷಣದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನರೇಂದ್ರ ಮೋದಿಗೆ ವೋಟ್ ಹಾಕಿ ಎಂದು ಹೇಳುವ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ.

    ಮಳವಳ್ಳಿ ಪಟ್ಟಣದಲ್ಲಿ ತಮ್ಮ ಅಭ್ಯರ್ಥಿ ನರೇಂದ್ರಸ್ವಾಮಿ ಪರ ಪ್ರಚಾರ ಮಾಡುವ ಸಂದರ್ಭದಲ್ಲಿ ಸಿದ್ದರಾಮಯ್ಯ ನರೇಂದ್ರಮೋದಿಗೆ ವೋಟ್ ಹಾಕಿ ಎಂದು ಹೇಳಿದ್ದಾರೆ. ಈ ವೇಳೆ ಅಲ್ಲಿದ್ದ ಜನ ಜೋರಾಗಿ ಕಿರುಚಿದಾಗ ಸಿಎಂಗೆ ಎಡವಟ್ಟಾದ ವಿಚಾರ ಗೊತ್ತಾಗಿದೆ. ನಂತರ ನಂತರ ನರೇಂದ್ರ ಸ್ವಾಮಿಗೆ ಮತ ನೀಡಿ ಎಂದು ಹೇಳಿದ್ದಾರೆ.

    ಭಾಷಣದುದ್ದಕ್ಕೂ ನಾಲ್ಕು ಬಾರಿ ನರೇಂದ್ರಸ್ವಾಮಿ ಎನ್ನುವ ಬದಲು ನರೇಂದ್ರ ಮೋದಿ ಎಂದಿದ್ದಾರೆ. ನರೇಂದ್ರ ಎನ್ನುವುದು ಮುಖ್ಯವಾಗಿದೆ. ನರೇಂದ್ರ ಮೋದಿ ನಿತ್ಯ, ನರೇಂದ್ರ ಸ್ವಾಮಿ ಸತ್ಯ. ಮೊದಲು ನರೇಂದ್ರ ಮೋದಿಗೆ ನೀಡುವ ವೋಟ್ ನನಗೆ ನೀಡಿದಂತೆ ಎಂದು ಹೇಳಿದ್ದಾರೆ. ನಂತರ ಮತದಾರರು ಘೋಷಣೆ ಹಾಕಿದ್ದಾರೆ. ಬಳಿಕ ನರೇಂದ್ರ ಸ್ವಾಮಿಗೆ ವೋಟ್ ಮಾಡಿದರೆ ಸಿದ್ದರಾಮಯ್ಯಗೆ ವೋಟ್ ಮಾಡಿದಂತೆ ಎಂದು ಹೇಳಿ ಎಡವಟ್ಟನ್ನು ಸರಿಪಡಿಸುವ ಪ್ರಯತ್ನ ಮಾಡಿದ್ದಾರೆ.

    ಇದೇ ವೇಳೆ ಮಳವಳ್ಳಿಯ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಿದ್ದರಾಮಯ್ಯ, ನಾನು ಹೋದ ಕಡೆಗಳಲ್ಲಿ, ಉಳಿದುಕೊಂಡ ಕಡೆಗಳಲ್ಲಿ ದಾಳಿ ಮಾಡಲಿ. ಬಿಜೆಪಿ ಅವರು ಅದೇ ಕೆಲಸ ಮಾಡಲಿ. ಅವರಿಗೆ ಇನ್ನೇನು ಕೆಲಸ ಇದೆ. ಪ್ರಧಾನಿ ಮೋದಿ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಮಾಜಿ ಮುಖ್ಯಮಂತ್ರಿ, ರಾಜ್ಯಾಧ್ಯಕ್ಷ ಯಡಿಯೂರಪ್ಪ ಉಳಿದುಕೊಂಡಿದ್ದ ಮನೆ, ಹೋಟೆಲ್ ರೇಡ್ ಮಾಡಿದ್ದಾರಾ?. ಆದಾಯ ತೆರಿಗೆ ಇಲಾಖೆಯವರು ಕಾಂಗ್ರೆಸ್ ನಾಯಕರನ್ನೇ ಟಾರ್ಗೆಟ್ ಮಾಡಿಕೊಂಡು ದಾಳಿ ಮಾಡುತ್ತಿದ್ದಾರೆ ಎಂದ್ರು.

    ಕಾಂಗ್ರಸ್ ನವರನ್ನ ಎದುರಿಸಲು, ಭಯದ ವಾತಾವರಣ ನಿರ್ಮಿಸಲು ಈ ರೀತಿ ಮಾಡುತ್ತಿದ್ದಾರೆ. ನಾನು 12 ಚುನಾವಣೆ ಮಾಡಿದ್ದೇನೆ ಆದರೆ ಚುನಾವಣೆ ವೇಳೆಯಲ್ಲೇ ಐಟಿ ದಾಳಿ ಮಾಡುತ್ತಿರುವುದನ್ನ ನಾನೆಂದು ಕಂಡಿಲ್ಲ. ಇದೇ ಮೊದಲ ಬಾರಿಗೆ ನಡೆದಿದೆ ಎಂದು ಹೇಳಿ ಕಿಡಿಕಾರಿದರು.

  • ಕಾಂಗ್ರೆಸ್‍ಗೆ ಮತ ಹಾಕುವಂತೆ ಫತ್ವಾ ಹೊರಡಿಸಿದ ಧರ್ಮ ಗುರು

    ಕಾಂಗ್ರೆಸ್‍ಗೆ ಮತ ಹಾಕುವಂತೆ ಫತ್ವಾ ಹೊರಡಿಸಿದ ಧರ್ಮ ಗುರು

    ರಾಮನಗರ: ಹಲವು ವಿಶೇಷತೆಗಳಿಂದ ಇಡೀ ರಾಜ್ಯದ ಗಮನ ಸೆಳೆದಿರುವ ಕ್ಷೇತ್ರ ಬೊಂಬೆನಗರಿ ಚನ್ನಪಟ್ಟಣ. ಈಗಾಗಲೇ ಕ್ಷೇತ್ರದಲ್ಲಿ ಮೂರು ಪಕ್ಷಗಳಿಂದ ಪ್ರಬಲ ನಾಯಕರೇ ಸ್ಪರ್ಧೆ ಮಾಡಿರೋದು ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಈ ಎಲ್ಲದರ ನಡುವೆ ಮುಸ್ಲಿಂ ಧರ್ಮಗುರು ಒಬ್ಬರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವಂತೆ ಫತ್ವಾ ಹೊರಡಿಸಿದ್ದಾರೆ.

    ಫಾರುಖ್ ಮುಲ್ಲಾ ಫತ್ವಾ ಹೊರಡಿಸಿದ ಧರ್ಮಗುರು. ಕ್ರಮ ಸಂಖ್ಯೆ 3ರ ಕಾಂಗ್ರೆಸ್ ಅಭ್ಯರ್ಥಿ ಎಚ್.ಎಂ.ರೇವಣ್ಣಗೆ ಮತ ನೀಡಬೇಕೆಂದು ತಮ್ಮ ಸಮುದಾಯದ ಜನರಿಗೆ ಸೂಚಿಸಿದ್ದಾರೆ. ಅಲ್ಲದೇ ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಸಹ ಒಂದೇ ಆಗಿವೆ. ಕೋಮುವಾದಿ ಬಿಜೆಪಿಯನ್ನ ಬೆಂಬಲಿಸದಂತೆ ಸೂಚನೆ ನೀಡಿದ್ದಾರೆ. ರೇವಣ್ಣಗೆ ಅಹಿಂದ ಮತ ಹಾಕುವ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸುವಂತೆ ತಿಳಿಸಿದ್ದಾರೆ.

    ಚನ್ನಪಟ್ಟಣದಲ್ಲಿ ಒಕ್ಕಲಿಗ ಮತದಾರರ ಬಳಿಕ ಮುಸ್ಲಿಂ ಮತದಾರರ ಪಾತ್ರ ನಿರ್ಣಾಯಕವಾಗಿದೆ. ಹೀಗಾಗಿ ಧರ್ಮಗುರುಗಳು ಹೊರಡಿಸಿರುವ ಫತ್ವಾವನ್ನು ಮುಸ್ಲಿಂ ಸಮುದಾಯದ ಜನರು ಪಾಲನೆ ಮಾಡ್ತಾರಾ ಎಂಬ ಪ್ರಶ್ನೆಯೊಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

    ಈ ಬಾರಿ ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಎಚ್.ಎಂ.ರೇವಣ್ಣ ಸ್ಪರ್ಧೆ ಮಾಡಿದ್ರೆ, ಬಿಜೆಪಿ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ ಮತ್ತು ಜೆಡಿಎಸ್ ನಿಂದ ಹೆಚ್.ಡಿ.ಕುಮಾರಸ್ವಾಮಿ ಕಣದಲ್ಲಿದ್ದಾರೆ.

  • ಮಾನ ಮರ್ಯಾದೆ ಇಲ್ಲದಿರೋರ ಬಗ್ಗೆ ಮಾನನಷ್ಟ ಎಲ್ಲಿಂದ- ಸಿಎಂ ವಿರುದ್ಧ ಬಿಎಸ್‍ವೈ ವಾಗ್ದಾಳಿ

    ಮಾನ ಮರ್ಯಾದೆ ಇಲ್ಲದಿರೋರ ಬಗ್ಗೆ ಮಾನನಷ್ಟ ಎಲ್ಲಿಂದ- ಸಿಎಂ ವಿರುದ್ಧ ಬಿಎಸ್‍ವೈ ವಾಗ್ದಾಳಿ

    ಹಾವೇರಿ: ಮೇ 15 ರ ನಂತರ ಮಾನ ಮಾನನಷ್ಟ ನಿರ್ಧಾರ ಆಗುತ್ತೆ, ಮಾನ ಮಾರ್ಯಾದೆ ಇಲ್ಲದಿರೋರ ಬಗ್ಗೆ ಮಾನನಷ್ಟ ಎಲ್ಲಿಂದ ಎಂದು ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.

    ಹಾವೇರಿಯಲ್ಲಿ ಮಾತನಾಡಿದ ಅವರು, ಮೇ 17 ಒಳ್ಳೆಯ ದಿವಸ. ಅವತ್ತೆ ಪ್ರಮಾಣ ವಚನ ಸ್ಪೀಕಾರ ಮಾಡುತ್ತೇನೆ. ಕ್ಯಾಬಿನೇಟ್ ಮೊದಲ ಸಭೆಯಲ್ಲಿ ಸಾಲಮಾನ್ನಾ ಬಗ್ಗೆ ನಿರ್ಧಾರ ಮಾಡಿದ್ದೇನೆ. ಅಲ್ಲದೆ ಜೆಡಿಎಸ್ ಇಪ್ಪತ್ತು ಸೀಟ್ ಗೆಲ್ಲಲ್ಲ. ಅವರ ಬಗ್ಗೆ ನಾನು ಮಾತನಾಡೋದಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮೋದಿ ವಿರುದ್ಧ 100 ಕೋಟಿ ರೂ. ಮಾನನಷ್ಟ ಕೇಸ್!

    ದಿನಕ್ಕೆ ಏಳೆಂಟು ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಿದ್ದು, ಪ್ರತಿ ಕ್ಷೇತ್ರದಲ್ಲಿ ಹತ್ತರಿಂದ ಇಪ್ಪತ್ತು ಸಾವಿರ ಜನ ಸೇರ್ತಿದ್ದಾರೆ. ಬಿಜೆಪಿ ಪ್ರಬಲವಾಗಿದೆ. ಎಲ್ಲರೂ ಒಂದಾಗಿ ಒಟ್ಟಾಗಿ ಕೆಲಸ ಮಾಡ್ತಿದ್ದೇವೆ ಪ್ರಧಾನಿ ಮೋದಿಯವರ ನಿರಂತರ ಪ್ರವಾಸ, ಅಮಿತ್ ಶಾರವರ ವಾಸ್ತವ್ಯ ಅನುಕೂಲವಾಗಿದೆ ಅಂದ್ರು.

    ಹಾವೇರಿ ಜಿಲ್ಲೆಯ ಹಿರೇಕೆರೂರು, ಬ್ಯಾಡಗಿ, ಹಾನಗಲ್ ಮತ್ತು ಶಿಗ್ಗಾಂವಿ ಈ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಯಡಿಯೂರಪ್ಪ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಸಭೆ ನಡೆಸಲಿದ್ದಾರೆ.  ಇದನ್ನೂ ಓದಿ: ಭಾಷಣದಲ್ಲಿ ಮಹದಾಯಿ ಪ್ರಸ್ತಾಪ: ಮೋದಿ ವಿರುದ್ಧ ಆಯೋಗಕ್ಕೆ ಕಾಂಗ್ರೆಸ್ ದೂರು

  • ಮದ್ವೆ ಇತರೆ ಕೆಲಸಗಳಿಗೆ ಹೊರಟ್ಟಿದ್ದ 20 ಕ್ರೂಸರ್ ವಶಕ್ಕೆ ಪಡೆದ RTO ಅಧಿಕಾರಿಗಳು!

    ಮದ್ವೆ ಇತರೆ ಕೆಲಸಗಳಿಗೆ ಹೊರಟ್ಟಿದ್ದ 20 ಕ್ರೂಸರ್ ವಶಕ್ಕೆ ಪಡೆದ RTO ಅಧಿಕಾರಿಗಳು!

    ಬಾಗಲಕೋಟೆ: ಮದುವೆ ಹಾಗು ಇತರೆ ಶುಭ ಸಮಾರಂಭಗಳಿಗೆ ತೆರಳುತ್ತಿದ್ದ ಖಾಸಗಿ ವಾಹನಗಳನ್ನು ಆರ್ ಟಿಓ ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ಜಿಲ್ಲೆಯ ಜಮಖಂಡಿಯಲ್ಲಿ ನಡೆದಿದೆ.

    ಜಿಲ್ಲೆಯ ಜಮಖಂಡಿ ಆರ್ ಟಿಓ ಅಧಿಕಾರಿಗಳು ಮದುವೆ ಹಾಗು ಇನ್ನಿತರ ಶುಭ ಸಮಾರಂಭಗಳಿಗೆ ತೆರಳುತ್ತಿದ್ದ 20 ಕ್ರೂಸರ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಅಧಿಕಾರಿಗಳು ವಾಹನಗಳನ್ನು ವಶಪಡಿಸಿಕೊಂಡ ಬಳಿಕ ಪೊಲೀಸ್ ಠಾಣೆಯ ಮುಂದೆ ಮಹಿಳೆಯರು ಸೇರಿದಂತೆ 150 ಜನರು ಎರಡು ಗಂಟೆಗಳ ಕಾಲ ನಿಲ್ಲುವಂತಾಯ್ತು.

    ಕೊನೆಗೆ ಅಧಿಕಾರಿಗಳು ವಾಹನಗಳು ಚುನಾವಣೆ ಉದ್ದೇಶಕ್ಕಾಗಿ ಬಳಕೆ ಆಗ್ತಿಲ್ಲ ಎಂಬುದನ್ನು ಖಚಿತ ಪಡಿಸಿಕೊಂಡ ಬಳಿಕ ಕಳುಹಿಸಲಾಯ್ತು. ಆದ್ರೆ ಅಧಿಕಾರಿಗಳು ನಮ್ಮ ವಾಹನಗಳನ್ನು ವಶಪಡಿಸಿಕೊಂಡಿದ್ದರಿಂದ ತಲುಪಬೇಕಿದ್ದ ಸ್ಥಳಕ್ಕೆ ತಡವಾಗಿದೆ ಅಂತಾ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ರು.

  • ವಿಜಯಪುರ ಜಿಲ್ಲೆಗೆ ಆಗಮಿಸ್ತಿರೋ ಮೋದಿಯನ್ನು ಸ್ವಾಗತಿಸಿದ್ರು ಸಚಿವ ಎಂ.ಬಿ.ಪಾಟೀಲ್

    ವಿಜಯಪುರ ಜಿಲ್ಲೆಗೆ ಆಗಮಿಸ್ತಿರೋ ಮೋದಿಯನ್ನು ಸ್ವಾಗತಿಸಿದ್ರು ಸಚಿವ ಎಂ.ಬಿ.ಪಾಟೀಲ್

    ಬೆಂಗಳೂರು: ಇಂದು ವಿಜಯಪುರ ಜಿಲ್ಲೆಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ, ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಟ್ವಿಟ್ಟರ್ ನಲ್ಲಿ ಸ್ವಾಗತ ಕೋರಿ ಟಾಂಗ್ ಕೊಟ್ಟಿದ್ದಾರೆ.

    `ವಿಜಯಪುರ ಜಿಲ್ಲೆಗೆ ಆಗಮಿಸುತ್ತಿರುವ ಪ್ರಧಾನಿಗಳಿಗೆ ಸ್ವಾಗತ. ನಮ್ಮ ಸರ್ಕಾರ 3,500ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸಿದ್ದು, ಲಕ್ಷಾಂತರ ಕೃಷಿ ಹೊಂಡಗಳನ್ನು ನಿರ್ಮಿಸಿದೆ. ಮಹಿಳೆಯರಿಗೆ ಸರ್ಕಾರಿ ಸಂಸ್ಥೆಗಳಲ್ಲಿ ಉಚಿತ ಶಿಕ್ಷಣ ನೀಡುತ್ತಿದೆ. ಬಸವಣ್ಣ ಅವರ ಅನುಯಾಯಿಗಳನ್ನು ಒಗ್ಗೂಡಿಸಿದೆ. ನಿಮ್ಮ 3 ಜನ ಸಿಎಂ ಏನು ಮಾಡಿದ್ದಾರೆ? ಎಂದು ಟ್ವಿಟ್ಟರ್‍ನಲ್ಲಿ ಪ್ರಧಾನಿಗೆ ಎಂ.ಬಿ.ಪಾಟೀಲ್ ಪ್ರಶ್ನೆ ಹಾಕಿದ್ದಾರೆ.

    ಜಿದ್ದಾಜಿದ್ದಿನ ಕಣವಾಗಿರುವ ಬಸವಣ್ಣನ ನಾಡು ವಿಜಯಪುರದಲ್ಲಿಂದು ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಬೃಹತ್ ಪ್ರಚಾರ ಸಮಾವೇಶ ನಡೆಸಲಿದ್ದಾರೆ. ಬಬಲೇಶ್ವರದ ಸಾರಗಾಡ ಗ್ರಾಮದಲ್ಲಿ ಬೆಳಗ್ಗೆ 10.30ಕ್ಕೆ ಪ್ರಧಾನಿ ಮೋದಿ ಅಬ್ಬರಿಸಿದ್ರೆ, ಇಲ್ಲಿಂದ ಕೇವಲ 30 ಕಿ.ಮೀ ಅಂತರದಲ್ಲಿರುವ ವಿಜಯಪುರ ನಗರದ ಬಿಎಲ್‍ಡಿಇ ಆವರಣದಲ್ಲಿ ಮಧ್ಯಾಹ್ನ 3 ಗಂಟೆಗೆ ಸೋನಿಯಾ ಗಾಂಧಿ ಆರ್ಭಟಿಸಲಿದ್ದಾರೆ.

    ಸೋನಿಯಾ ಗಾಂಧಿ ಎರಡು ವರ್ಷಗಳ ಬಳಿಕ ಚುನಾವಣಾ ಪ್ರಚಾರಕ್ಕಿಳಿಯುತ್ತಿದ್ದು, ರಾಜ್ಯ ಉಸ್ತುವಾರಿ ವೇಣುಗೋಪಾಲ್, ಗುಲಾಂ ನಬಿ ಆಜಾದ್, ಸಿಎಂ ಸಿದ್ದರಾಮಯ್ಯ ಭಾಗಿಯಾಗ್ತಿದ್ದಾರೆ. ಎರಡು ಸಮಾವೇಶದಲ್ಲೂ ಲಕ್ಷಾಂತರ ಜನ ಭಾಗಿಯಾಗುವ ನಿರೀಕ್ಷೆ ಇದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

    https://twitter.com/reachmbp/status/993450677618839552

  • ಬದಾಮಿ ಕಾಂಗ್ರೆಸ್‍ಗೆ ಮಿಡ್‍ನೈಟ್ ಐಟಿ ಶಾಕ್!

    ಬದಾಮಿ ಕಾಂಗ್ರೆಸ್‍ಗೆ ಮಿಡ್‍ನೈಟ್ ಐಟಿ ಶಾಕ್!

    ಬಾಗಲಕೋಟೆ: ಮತದಾನಕ್ಕೆ ಇರೋದು ಕೇವಲ ನಾಲ್ಕು ದಿನ ಮಾತ್ರ. ಈ ಹಂತದಲ್ಲಿ ಕಾಂಗ್ರೆಸ್‍ಗೆ ಮತ್ತೊಮ್ಮೆ ಬಿಗ್ ಶಾಕ್ ನೀಡಿದೆ ಐಟಿ ಇಲಾಖೆ.

    ಹೈವೋಲ್ಟೇಜ್ ಕಣ ಬದಾಮಿಯಲ್ಲಿ ಕಾಂಗ್ರೆಸ್ ನಾಯಕರು ಉಳಿದುಕೊಂಡಿದ್ದ ರೆಸಾರ್ಟ್ ಮೇಲೆ ರಾತ್ರೋರಾತ್ರಿ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

    ಬದಾಮಿ ಹೊರವಲಯದಲ್ಲಿರುವ ಶಾಸಕ ಆನಂದ್‍ಸಿಂಗ್‍ಗೆ ಸೇರಿದ ಕೃಷ್ಣ ಹೆರಿಟೇಜ್ ರೆಸಾರ್ಟ್ ಮೇಲೆ ರಾತ್ರಿ 11ರ ಸುಮಾರಿಗೆ 10ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡ ಲಗ್ಗೆ ಹಾಕಿದೆ. ದಾಖಲೆಗಳ ಪರಿಶೀಲನೆ ನಡೆಸಿದೆ. ದಾಳಿ ವೇಳೆ ಸಿಎಂ ಸಿದ್ದರಾಮಯ್ಯ ಆಪ್ತ ಸಿಎಂ ಇಬ್ರಾಹಿಂ ಕೂಡ ಇದ್ರು. ಆದ್ರೆ ನಸುಕಿನಜಾವ 2 ಗಂಟೆಗೆ ಸಿಎಂ ಇಬ್ರಾಹಿಂ ರೆಸಾರ್ಟ್‍ನಿಂದ ಹೊರಬಂದ್ದಿದ್ದರು.

    ಬಳಿಕ ಮಾತನಾಡಿದ ಅವರು, `ಈ ರೆಸಾರ್ಟ್‍ನಲ್ಲಿ ನಾನು ವಾಸ್ತವ್ಯ ಹೂಡಿರಲಿಲ್ಲ. ಊಟಕ್ಕೆಂದು ಈ ರೆಸಾರ್ಟ್‍ಗೆ ಬಂದಿದ್ದೆ. ನಾನು ಎಸ್.ಆರ್ ಪಾಟೀಲ್ ಇಬ್ಬರು ಊಟಕ್ಕೆಂದು ಬಂದಿದ್ವಿ ಅಷ್ಟೇ. ಐಟಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ. ಆದ್ರೆ ನನ್ನನ್ನು ಏನೂ ಪ್ರಶ್ನೆ ಮಾಡಲಿಲ್ಲ. ಒಳಗಡೆ ಏನ್ ಸಿಗುತ್ತೆ ಅಲ್ಲಿ. ಏನೂ ಇಲ್ಲ. ಐಟಿ ಅಧಿಕಾರಿಗಳು ಸುಮ್ಮನೆ ಕೂತಿದ್ದಾರೆ’ ಅಂದ್ರು.

    ಸದ್ಯ ರೆಸಾರ್ಟ್‍ನಲ್ಲಿ ಶೋಧ ಕಾರ್ಯ ಮುಂದುವರೆದಿದೆ. ರೆಸಾರ್ಟ್‍ಗೆ ಸಿಆರ್‍ಪಿಎಫ್ ಹಾಗೂ ಬದಾಮಿ ಪೊಲೀಸರು ಭದ್ರತೆ ಒದಗಿಸಿದ್ದಾರೆ. ಈ ಬೆಳವಣಿಗೆಯಿಂದಾಗಿ ಬದಾಮಿ ಕಾಂಗ್ರೆಸ್‍ನಲ್ಲಿ ತಳಮಳ ಉಂಟಾಗಿದೆ.

  • ಮತ್ತೆ ಅಪಘಾತಕ್ಕೀಡಾಯ್ತು ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗ್ಡೆ ಕಾರ್!

    ಮತ್ತೆ ಅಪಘಾತಕ್ಕೀಡಾಯ್ತು ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗ್ಡೆ ಕಾರ್!

    ಕಾರವಾರ: ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರ ಕಾರ್ ಇದೀಗ ಎರಡನೇ ಬಾರಿ ಅಪಘಾತಕ್ಕೀಡಾಗಿದೆ.

    ಈ ಘಟನೆ ಕುಮುಟಾದ ಯಾಣ ಕ್ರಾಸ್ ಬಳಿ ನಡೆದಿದ್ದು, ಸಚಿವ ಅನಂತ್ ಕುಮಾರ್ ಅವರ ಬೆಂಗಾವಲು ವಾಹನವೇ ಅವರ ಕಾರಿಗೆ ಡಿಕ್ಕಿಯಾಗಿದೆ. ಇದನ್ನೂ ಓದಿ: ಅಪಘಾತ ನಡೆದರೂ ಕಾರು ನಿಲ್ಲಿಸದೆ ಹೋದ ಸಚಿವ ಅನಂತ್ ಕುಮಾರ್ ಹೆಗ್ಡೆ!

    ಇಂದು ಸಚಿವ ಅನಂತ್ ಕುಮಾರ್ ಶಿರಸಿಯಿಂದ ಹೊನ್ನಾವರಕ್ಕೆ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 66ರ ಯಾಣ ಕ್ರಾಸ್ ಬಳಿ ಕಿರಿದಾಗ ರಸ್ತೆ ಇರುವುದರಿಂದ ಎದುರಿನಿಂದ ಬರುತ್ತಿದ್ದ ಬಸ್ ಹಾಗೂ ಆಲ್ಟೋ ಕಾರನ್ನು ತಪ್ಪಿಸಲು ಹೋಗಿ ಹೆಗ್ಡೆ ಕಾರಿಗೆ ಬೆಂಗಾವಲು ವಾಹನ ಡಿಕ್ಕಿ ಹೊಡೆದಿದೆ. ಘಟನೆಯಿಂದ ಸಚಿವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವರ ಕಾರ್ ಅಪಘಾತಕ್ಕೆ ಹಾವೇರಿ ಎಸ್‍ಪಿ ಸ್ಪಷ್ಟನೆ

    ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಕುಮಟಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಇದು ಅನಂತ್ ಕುಮಾರ್ ಅವರಿಗೆ ಎರಡನೇ ಬಾರಿ ಅಪಘಾತ ಸಂಭವಿಸಿರುವುದು.  ಇದನ್ನೂ ಓದಿ: ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆಗೆ ಜೀವ ಬೆದರಿಕೆ ಕರೆ- ಪೊಲೀಸರಿಗೆ ದೂರು

  • ಮತದಾರರ ಪಟ್ಟಿಯಿಂದ ತಾ.ಪಂ ಸದಸ್ಯೆ ಹೆಸರು ನಾಪತ್ತೆ

    ಮತದಾರರ ಪಟ್ಟಿಯಿಂದ ತಾ.ಪಂ ಸದಸ್ಯೆ ಹೆಸರು ನಾಪತ್ತೆ

    ಮೈಸೂರು: ಮತದಾರರ ಪಟ್ಟಿಯಿಂದ ತಾಲೂಕು ಪಂಚಾಯ್ತಿ ಸದಸ್ಯೆ ಹೆಸರು ನಾಪತ್ತೆಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ತಾ.ಪಂ ಸದಸ್ಯೆ ರಾಣಿ ಸತೀಶ್ ಹೆಸರು ನಾಪತ್ತೆಯಾಗಿದೆ. ಇವರು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕೂರ್ಗಳ್ಳಿ ತಾ.ಪಂ ಸದಸ್ಯೆ. ಆದರೆ ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಇವರ ಹೆಸರು ನಾಪತ್ತೆಯಾಗಿದೆ. ರಾಣಿ ಸತೀಶ್ ಕುಟುಂಬದ ಎಲ್ಲರ ಹೆಸರು ಇದೆ. ಇವರ ಹೆಸರು ಮಾತ್ರ ಇಲ್ಲ.

    ಕಾಂಗ್ರೆಸ್ ಪಕ್ಷದವರು ಉದ್ದೇಶ ಪೂರ್ವವಕವಾಗಿ ಈ ರೀತಿ ಮಾಡಿದ್ದಾರೆ. ಜಿ.ಟಿ ದೇವೇಗೌಡರು ಗೆಲ್ಲಬಾರದೆಂದು ಕುತಂತ್ರ ಮಾಡಿದ್ದಾರೆ ಎಂದು ರಾಣಿ ಸತೀಶ್ ಆರೋಪಿಸಿದ್ದಾರೆ. ಈ ಬಗ್ಗೆ ರಾಣಿ ಸತೀಶ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

  • ಖಾಸಗಿ ಬಸ್‍ನಲ್ಲಿ ಸಾಗಿಸುತ್ತಿದ್ದ 2.98 ಕೋಟಿ ರೂ. ಹಣ ಜಪ್ತಿ

    ಖಾಸಗಿ ಬಸ್‍ನಲ್ಲಿ ಸಾಗಿಸುತ್ತಿದ್ದ 2.98 ಕೋಟಿ ರೂ. ಹಣ ಜಪ್ತಿ

    ತುಮಕೂರು: ಖಾಸಗಿ ಬಸ್ಸಿನಲ್ಲಿ ಸಾಗಿಸುತ್ತಿದ್ದ ವಾರಸುದಾರರಿಲ್ಲದ 2.98 ಕೋಟಿ ರೂ. ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ತುಮಕೂರಿನ ಕ್ಯಾತಸಂದ್ರ ಟೋಲ್ ಬಳಿ ಗಜಾನನ ಖಾಸಗಿ ಬಸ್ಸಿನಲ್ಲಿ ಸಾಗಿಸುತ್ತಿದ್ದಾಗ ಜಪ್ತಿ ಮಾಡಲಾಗಿದೆ. ಕಂಟ್ರೋಲ್ ರೂಮ್ಗೆ ಬಂದ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

    ಬೆಂಗಳೂರಿನಿಂದ ಶಿವಮೊಗ್ಗ ಕಡೆಗೆ ಹೋಗುತ್ತಿದ್ದ ಬಸ್ ಇದಾಗಿದ್ದು, ಚಾಲಕನ ಪಕ್ಕದ ಸೀಟ್ ಅಡಿಯಲ್ಲಿ ಹಣ ಪತ್ತೆಯಾಗಿದೆ. ಇಷ್ಟೊಂದು ಮೊತ್ತದ ಹಣ ಯಾರಿಗೆ ಸೇರಿದ್ದು ಎಂಬ ಮಾಹಿತಿ ಇಲ್ಲ. ವಾರಸುದಾರರು ಇಲ್ಲದ ನಗದನ್ನು ಸದ್ಯ ಚುನಾವಣಾ ಅಧಿಕಾರಿಗಳ ವಶಕ್ಕೆ ವರ್ಗಾಯಿಸಲಾಗಿದೆ. ಖಾಸಗಿ ಬಸ್ಸನ್ನು ಕ್ಯಾತಸಂದ್ರ ಪೊಲೀಸರು ಜಪ್ತಿ ಮಾಡಿದ್ದಾರೆ.

  • ಬಾದಾಮಿ ಅಭಿವೃದ್ಧಿಗೆ ಬಿಜೆಪಿಯಿಂದ ಪ್ರತ್ಯೇಕ ಪ್ರಣಾಳಿಕೆ- ಯಾವೆಲ್ಲ ಭರವಸೆಗಳಿವೆ?

    ಬಾದಾಮಿ ಅಭಿವೃದ್ಧಿಗೆ ಬಿಜೆಪಿಯಿಂದ ಪ್ರತ್ಯೇಕ ಪ್ರಣಾಳಿಕೆ- ಯಾವೆಲ್ಲ ಭರವಸೆಗಳಿವೆ?

    ಬಾಗಲಕೋಟೆ: ಕಾಂಗ್ರೆಸ್‍ನಿಂದ ಬಾದಾಮಿ ಅಭಿವೃದ್ಧಿಗೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಬೆನ್ನೆಲ್ಲೇ ಬಿಜೆಪಿ ಕೂಡ ಬಾದಾಮಿಯ ಮುನ್ನೋಟ ಕೈಪಿಡಿ ಬಿಡುಗಡೆ ಮಾಡಿದೆ.

    24*7 ವಿದ್ಯುತ್ ಪೂರೈಕೆ, ಎಪಿಎಂಸಿ ಮಾರುಕಟ್ಟೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ, ಕೆಂದೂರು ಕೆರೆ ಹೂಳೆತ್ತುವುದು, ರಸ್ತೆಗಳ ಕಾಂಕ್ರಿಟೀಕರಣ, ಕೆರೂರುನಲ್ಲಿ ನೂತನ ಕಣ್ಣಿನ ಆಸ್ಪತ್ರೆ ನಿರ್ಮಾಣ, ಪ್ರವಾಸಿ ತಾಣಗಳ ಅಭಿವೃದ್ಧಿ, ಪ್ರತಿ ಬ್ಲಾಕ್‍ಗೆ ಉಚಿತ ಆಂಬುಲೆನ್ಸ್ ಸೇವೆ, ಕೈಮಗ್ಗ ಉತ್ತೇಜಿಸಲು ಕಾರ್ಖಾನೆ ನಿರ್ಮಾಣ ಸೇರಿದಂತೆ ಹಲವು ಭರವಸೆಗಳನ್ನು ನೀಡಿದ್ದಾರೆ.

    ಕೈಪಿಡಿ ಬಿಡುಗಡೆ ಬಳಿಕ ಮಾತನಾಡಿದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು, ಸಿದ್ದರಾಮಯ್ಯಗೆ ಹಣದಿಂದ ಗೆಲ್ಲುವ ಅಹಂಕಾರ ತುಂಬಿದೆ ಅಂತ ಏಕವಚನದಲ್ಲಿ ಕಿಡಿಕಾರಿದ್ದಾರೆ. ಸಿದ್ದರಾಮಯ್ಯನ ಪಾಪದ ಮೂಟೆ ಅವರನ್ನು ಬಾದಾಮಿಯಲ್ಲಿ ಸೋಲಿಸುತ್ತೆ ಅಂತ ವಾಗ್ದಾಳಿ ನಡೆಸಿದ್ದಾರೆ.