ಧಾರವಾಡ: ನಟಿ ಹಾಗು ಬಿಜೆಪಿ ವಕ್ತಾರೆ ಶೃತಿ ಧಾರವಾಡ ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರದ ವೇಳೆ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಏಕಕಾಲದಲ್ಲಿ ಎದುರುಗೊಂಡಾಗ ಒಬ್ಬರ ಮೇಲೋಬ್ಬರಂತೆ ಕಾರ್ಯಕರ್ತರು ಪಕ್ಷದ ಪರ ಘೋಷಣೆಗಳನ್ನು ಕೂಗಲು ಆರಂಭಿಸಿದ್ರು. ಪರಿಣಾಮ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕೂಡಲೇ ಎಚ್ಚೆತ್ತ ಪೊಲೀಸರು ಎರಡು ಪಕ್ಷದ ಕಾರ್ಯಕರ್ತರನ್ನು ನಿಯಂತ್ರಿಸಿ ಕಳುಹಿಸಿದ್ರು.
ಶೃತಿ ಅವರ ಪ್ರಚಾರದ ಸಮಯದಲ್ಲಿಯೇ ಸಚಿವ ವಿನಯ್ ಕುಲಕರ್ಣಿ ಪ್ರಚಾರದ ವೇಳೆ ನಿಗದಿ ಆಗಿತ್ತು. ಈ ಹಿನ್ನೆಲೆಯಲ್ಲಿ ಮುಖಾಮುಖಿಯಾದ ಎರಡು ಪಕ್ಷದ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿರತು.
ಬೆಂಗಳೂರು: ತಿಂಗಳ ಆರಂಭ ಮತ್ತು ವೀಕೆಂಡ್ ಅಂತಾ ಪಾರ್ಟಿ ಮೂಡ್‍ನಲ್ಲಿರುವ ಮದ್ಯಪ್ರಿಯರಿಗೆ ಚುನಾವಣಾ ಆಯೋಗ ಶಾಕ್ ನೀಡಿದೆ.
ಶನಿವಾರ ರಾಜ್ಯಾದ್ಯಂತ ಮತದಾನ ನಡೆಯಲಿದ್ದು, ಇಂದು ಸಂಜೆ 5 ಗಂಟೆಯಿಂದ ಮದ್ಯದಂಗಡಿಗಳು ಬಂದ್ ಆಗಲಿವೆ. ಇಂದು ಸಂಜೆ 5 ಗಂಟೆಯಿಂದ ಮೇ 12ರ ಮಧ್ಯರಾತ್ರಿವರೆಗೆ ರಾಜ್ಯದ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚುವಂತೆ ಚುನಾವಣಾ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ವಿಧಾನಸಬಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಚುನಾವಣಾ ಆಯೋಗ ಎಲ್ಲ ರೀತಿಯಿಂದಲೂ ಮುನ್ನೇಚ್ಚರಿಕಾ ಕ್ರಮಗಳನ್ನು ಅನುಸರಿಸುತ್ತಿದೆ. ಇದೇ ಶನಿವಾರ ಮೇ 12ರಂದು ಮತದಾನ ನಡೆದರೆ, ಮೇ 15ರಂದು ಫಲಿತಾಂಶ ಹೊರಬರಲಿದೆ.
ಬೀದರ್/ಚಿಕ್ಕಬಳ್ಳಾಪುರ: ಚುನಾವಣೆ ಹತ್ತಿರ ಬರುತ್ತಿದ್ದಂತೆ ಚುನಾವಣಾ ಅಧಿಕಾರಿಗಳ ಕಾರ್ಯಾಚರಣೆ ಭರ್ಜರಿಯಾಗಿ ನಡೆಯುತ್ತಿದ್ದು, ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ಹಣ ಮತ್ತು ಚಿಕನ್ ನನ್ನು ವಶಪಡಿಸಿಕೊಂಡಿದ್ದಾರೆ.
ಬೀದರ್ ನ ಗಾಂಧಿಗಂಜನ್ ನಲ್ಲಿ ಮತದಾರರಿಗೆ ಹಂಚುತ್ತಿದ್ದ ಬರೋಬ್ಬರಿ 10 ಲಕ್ಷ 50 ಸಾವಿರ ಹಣವನ್ನು ಚುನಾವಣಾ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ. ಗಾಂಧಿಗಂಜ್ ಪೊಲೀಸರು ರೆಡ್ ಹ್ಯಾಂಡ್ ಆಗಿ ಆರೋಪಿಗಳನ್ನು ಹಿಡಿದಿದ್ದು, ಒಬ್ಬ ಆರೋಪಿಯಾದ ಅಬ್ದುಲ್ ಸಮ್ಮದ್ ನನ್ನು ಬಂಧಿಸಿದ್ದಾರೆ. ಆದರೆ ಒಬ್ಬ ಆರೋಪಿ ಪರಾರಿಯಾಗಿದ್ದಾರೆ.
ಜಪ್ತಿಯಾದ ಹಣ ಕಾಂಗ್ರೆಸ್ ಅಭ್ಯರ್ಥಿ ರಹೀಂ ಖಾನ್ ಗೆ ಸೇರಿದ್ದು ಎನ್ನಲಾಗಿದೆ. ಈ ಘಟನೆ ಸಂಬಂಧ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇನ್ನು ಚಿಕ್ಕಬಳ್ಳಾಪುರದಲ್ಲಿ ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ಚಿಕನ್ ನನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಚಿಂತಾಮಣಿ ತಾಲೂಕು ಜೀಡರಹಳ್ಳಿ ಗ್ರಾಮದ ಬಳಿ ಮಾರುತಿ ಓಮ್ನಿ ಕೆಎ-40 ಎಂ-4588 ಕಾರಿನಲ್ಲಿ ಚಿಕನ್ ಸಾಗಾಟ ಮಾಡುತ್ತಿದ್ದರು.
ಈ ವೇಳೆ ಚುನಾವಣಾಧಿಕಾರಿಗಳು ಖಚಿತ ಮಾಹಿತಿ ತಿಳಿದು ದಾಳಿ ನಡೆಸಿದ್ದಾರೆ. ಆಗ ತಲಾ ಒಂದು ಕೆಜಿಯ 80 ಕೆಜಿ ಚಿಕನ್ ಪಾಕೆಟ್ ಪತ್ತೆಯಾಗಿದ್ದು, ಅಧಿಕಾರಿಗಳು ಕಾರು ಸಮೇತ ಚಿಕನ್ ಜಪ್ತಿ ಮಾಡಿದ್ದಾರೆ. ದಾಳಿಯ ವೇಳೆ ಚಾಲಕ ಹಾಗೂ ಮತ್ತೋರ್ವ ಕಾರು ಬಿಟ್ಟು ಪರಾರಿಯಾಗಿದ್ದಾರೆ.
ಮೈಸೂರು: ಆ ಮೋದಿ ಮುಧೋಳ ನಾಯಿಯಿಂದ ಕಾಂಗ್ರೆಸ್ ನಿಯತ್ತು ಕಲಿಬೇಕು ಅಂತಾನೆ, ಅವನಿಗೇ ನಿಯತ್ತಿಲ್ಲ. ಬೆಳೆಸಿದ ಅಡ್ವಾಣಿಯನ್ನೇ ಮೂಲೆ ಗುಂಪು ಮಾಡಿದ್ದಾನೆ ಎಂದು ಪ್ರಧಾನಿ ಮೋದಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನ ಚಾಮರಾಜ ಕ್ಷೇತ್ರದ ಸಮಾವೇಶದಲ್ಲಿ ಮಾತನಾಡಿದ ಸಿಎಂ, ಕಾಂಗ್ರೆಸ್ ಪಕ್ಷದ ಅಲೆಯನ್ನ ನರೇಂದ್ರ ಮೋದಿಯಾಗಲಿ, ಅಮಿತ್ ಶಾ ಆಗಲಿ ಬದಲಾವಣೆ ಮಾಡೋಕಾಗೋಲ್ಲ. ಮೋದಿ ಕರ್ನಾಟಕಕ್ಕೆ ಕೊಡುಗೆ ಏನು ನೀಡಿದ್ದಾರೆ. ಮನ್ ಕಿ ಬಾತ್ ನೀಡಿದ್ದಾರೆ. ಅದರಿಂದ ಹೊಟ್ಟೆ ತುಂಬುತ್ತಾ ಎಂದು ಪ್ರಶ್ನಿಸಿ ಕಿಡಿಕಾರಿದ್ದಾರೆ.
ಬಡವರಿಗೆ ಹೊಟ್ಟೆ ತುಂಬಿಸುವಂತಹ, ರೈತರ ಸಮಸ್ಯೆಗಳನ್ನು ಮತ್ತು ನಿರುದ್ಯೋಗಿಗಳ ಕಷ್ಟವನ್ನು ಪರಿಹರಿಸುವಂತಹ ಕಾರ್ಯಕ್ರಮವನ್ನು ಮಾಡಬೇಕು. ನನಗೆ 56 ಇಂಚಿನ ಎದೆ ಎಂದು ಹೇಳುತ್ತಾರೆ. ಅವರಿಗೆ 56 ಇಂಚಿನ ಎದೆ. ಆದರೆ ಒಳಗೆ ಬಡವರ ಪರವಾದ ಹೃದಯ, ಅವರಿಗಾಗಿ ಸ್ಪಂದಿಸುವ ಮನಸ್ಸು ಇದಿಯಾ ಎಂಬುದು ಬಹಳ ಮುಖ್ಯ ಎಂದು ಹೇಳಿ ತರಾಟಗೆ ತೆಗೆದುಕೊಂಡರು.
ಬಾಡಿ ಬಿಲ್ಡರ್ ಗಳಿಗೂ ದೊಡ್ಡ ದೊಡ್ಡ ಎದೆ ಇರುತ್ತೆ. ದೊಡ್ಡ ಪೈಲ್ವಾನ್ ಗಳಿಗೂ ಇರುತ್ತದೆ. ಏನು 56 ಇಂಚಿನ ಎದೆ ನರೇಂದ್ರ ಮೋದಿ ಒಬ್ಬರಿಗೆ ಮಾತ್ರ ಇರೋದಾ ಎಂದು ಪ್ರಶ್ನಿಸಿ ಸಮಾವೇಶದ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿಯ ದೇಹದ ಬಗ್ಗೆ ವ್ಯಂಗ್ಯ ಮಾಡಿದರು.
ಇದೇ ವೇಳೆ ಚಿತ್ರ ನಟ ಸುದೀಪ್ ಚಾಮುಂಡೇಶ್ವರಿ ಪ್ರಚಾರದಿಂದ ದೂರ ಉಳಿದ ವಿಚಾರವಾಗಿ ಪ್ರತಿಕ್ರಿಯಿಸಿ, ಸುದೀಪ್ ಪ್ರಚಾರಕ್ಕೆ ಬರಬೇಕಿತ್ತು ಅವರಿಗೆ ಬೇರೆ ಏನೇನೋ ಕೆಲಸ ಇದ್ದ ಕಾರಣಕ್ಕೆ ಪ್ರಚಾರಕ್ಕೆ ಬಂದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆಯವರನ್ನು ಟೀಕಿಸುವ ಭರದಲ್ಲಿ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಚಾಮರಾಜ ಕ್ಷೇತ್ರದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅನಂತ್‍ಕುಮಾರ್ ಹೆಗ್ಡೆ ಬಾಯಲ್ಲಿ ಕಲಗಚ್ಚು ಇದೆ. ಆತನ ನಾಲಿಗೆಯಲ್ಲಿ ಚರಂಡಿ ನೀರು ಹರಿಯುತ್ತಿದೆ. ಆ ಮೋದಿ ಮುಧೋಳ ನಾಯಿಂದ ಕಾಂಗ್ರೆಸ್ ನಿಯತ್ತು ಕಲಿಬೇಕು ಅಂತಾನೆ. ಅವನಿಗೇ ನಿಯತ್ತಿಲ್ಲ ಬೆಳೆಸಿದ ಅಡ್ವಾಣಿಯನ್ನೇ ಮೂಲೆ ಗುಂಪು ಮಾಡಿದ್ದಾನೆ. ಇವರೆಲ್ಲ ಕಾಂಗ್ರೆಸ್‍ಗೆ ಪಾಠ ಹೇಳ್ತಿದ್ದಾರೆ. ಇವರಿಬ್ಬರನ್ನ ಏನು ಮಾಡ್ಬೇಕು ಹೇಳಿ ಅಂತ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಚುನಾವಣೆಯಲ್ಲಿ ನಾಯಿ ಅಲ್ಲ, ಜನ ಮತ ಹಾಕೋದು- ಪ್ರಧಾನಿ ವಿರುದ್ಧ ಪ್ರಕಾಶ್ ರೈ ಕೆಂಡಾಮಂಡಲ
ಬೆಂಗಳೂರು: ನಗರದ ಜಾಲಹಳ್ಳಿ ಎಸ್.ಎಲ್.ವಿ ಅಪಾರ್ಟ್ ಮೆಂಟ್ ನಲ್ಲಿ ಮಂಗಳವಾರ ರಾಶಿ ರಾಶಿ ಅಸಲಿ ಮತ್ತು ನಕಲಿ ಮತದಾರರ ಫೋಟೋಗಳು ಪತ್ತೆಯಾಗಿದ್ದವು. ಸದ್ಯ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಕಾಂಗ್ರೆಸ್‍ನವರು ಕೇಸ್‍ಗೆ ಸಂಬಂಧಿಸಿದಂತೆ ಕೆಲವು ಫೋಟೋಗಳನ್ನು ಬಿಡುಗಡೆಗೊಳಿಸಿದ್ದಾರೆ.
ವೋಟರ್ ಐಡಿಗಳು ಕಾಂಗ್ರೆಸ್‍ನ ಮಂಜುಳಾ ನಂಜಮರಿ ಅವರ ಹೆಸರಿನ ಅಪಾರ್ಟ್ ಮೆಂಟ್ ನಲ್ಲಿ ಪತ್ತೆಯಾಗಿದ್ದವು. ಮಂಜುಳಾ ನಂಜಮರಿ ಈ ಹಿಂದೆ ಬಿಜೆಪಿಯಿಂದ ಒಂದು ಬಾರಿ ಕಾರ್ಪೋರೇಟರ್ ಆಗಿದ್ದರು. ಆದ್ರೆ 2013ರಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಆರ್.ಆರ್.ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕರ ಬೆಂಬಲದಿಂದ ಮಂಜುಳಾ ಈ ಕೆಲಸ ಮಾಡ್ತಿದ್ರು ಅಂತಾ ಬಿಜೆಪಿ ನೇರವಾಗಿ ಆರೋಪಿಸಿತ್ತು. ಇದನ್ನೂ ಓದಿ:ಬೆಂಗ್ಳೂರಲ್ಲಿ ಬೃಹತ್ ಮತಚೀಟಿ ಹಗರಣ ಸ್ಫೋಟ
ಈ ಸಂಬಂಧ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಮಂಜುಳಾ ನಂಜಮರಿ ಅವರ ಅಪಾರ್ಟ್ ಮೆಂಟ್‍ನ್ನು ಮಗ ರಾಕೇಶ್ ಬಾಡಿಗೆ ಪಡೆದುಕೊಂಡಿದ್ದರು. ರಾಕೇಶ್ ಆರ್.ಆರ್.ನಗರದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿರುವ ಕೆಲ ಫೋಟೋಗಳನ್ನು ಬಿಡುಗಡೆ ಮಾಡಿದೆ. ಹಾಗಾಗಿ ಈ ಸಂಬಂಧ ಸೂಕ್ತ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಲಹಳ್ಳಿ ಪೊಲೀಸರು 7 ಜನರನ್ನು ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಸ್ಥಳಕ್ಕಾಗಮಿಸಿರುವ ಚುನಾವಣಾ ಅಧಿಕಾರಿಗಳು ಪ್ಲಾಟ್ ನಲ್ಲಿ ಸಿಕ್ಕ ಟ್ರಂಕ್ ಸಮೇತ ವೋಟರ್ ಐಡಿಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
"In RR Nagar constituency, in Apartment Number 115, 9746 Voter IDs were recovered.
EC has said that the apartment belongs to Manjula Nanjamari. She is a BJP leader & ex-BJP Corporator. She has rented the flat to her son Rakesh, also a BJP leader": @rssurjewala#BJPDramaExposedpic.twitter.com/nVt4XEc4Cp
"BJP enacted this drama in an apartment belonging to their own leader, Manjula Nanjamari. She has rented the apartment to her son who contested the 2015 BBMP Elections on a BJP ticket. Apartment was not raided by police or EC but by BJP workers": @rssurjewala#BJPDramaExposedpic.twitter.com/EAQ9hoxPmE
Bengaluru: Election Commission officials seize printers from Flat No. 115 at SLV Park View Apartment in Jalahalli area. 9,746 voter ID cards were found from the apartment last night. #KarnatakaElections2018pic.twitter.com/HUxTYm3heV
It is Election Commission's job to investigate. I don't have to say anything about it: #Karnataka Chief Minister Siddaramaiah on 9,746 voter ID cards recovered from Flat No. 115 at SLV Park View Apartment in Bengaluru's Jalahalli area. #KarnatakaElections2018pic.twitter.com/GwmUJS70re
ಬೆಳಗಾವಿ: ದೇಶದಲ್ಲಿ ಪ್ರಾದೇಶಿಕ ಪಕ್ಷಗಳ ಅವಶ್ಯಕತೆ ಇದೆ. ಆದ್ದರಿಂದ ಕರ್ನಾಟಕದಲ್ಲಿ ಜೆಡಿಎಸ್ ಬೆಂಬಲಿಸಿದ್ದೇನೆ. ನಾನು ಮುಸ್ಲಿಂ ಮತಗಳನ್ನು ಒಡೆಯಲು ಬಂದಿಲ್ಲವೆಂದು ಎಐಎಂಐಎಂ ಸ್ಥಾಪಕ ಅಸಾದುದ್ದೀನ್ ಓವೈಸಿ ಸ್ಪಷ್ಟಪಡಿಸಿದ್ದಾರೆ.
ಜೆಡಿಎಸ್ ಪರ ಪ್ರಚಾರಕ್ಕೆ ನಗರಕ್ಕೆ ಬಂದಿದ್ದ ವೇಳೆ ಮಾತನಾಡಿದ ಅವರು, ಅನೇಕ ದಿನಗಳ ಹಿಂದೆಯೇ ನಾನು ಬೆಳಗಾವಿ ನಗರರಕ್ಕೆ ಬರಲು ಇಚ್ಛಿಸಿದ್ದೆ. ಆದ್ರೆ ಕರ್ನಾಟಕದ ತಾತ್ಕಾಲಿಕ ಸಿಎಂ ಸಿದ್ದರಾಮಯ್ಯ ಅವರು ಅವಕಾಶ ನೀಡಲಿಲ್ಲ. ರಾಜ್ಯದಲ್ಲಿ ಅನೇಕ ಬಾರಿ ಸಭೆ ಮತ್ತು ಸಮಾವೇಶಗಳನ್ನು ನಡೆಸಲು ಅವಕಾಶ ಕೇಳಿದ್ದೆ, ಆದ್ರೆ ಪ್ರತಿಬಾರಿಯೂ ಸರ್ಕಾರ ಪೊಲೀಸರ ಮೇಲೆ ಒತ್ತಡ ತಂದು ನಿಲ್ಲಿಸುವ ಪ್ರಯತ್ನ ಮಾಡಿತ್ತು ಅಂತಾ ಆರೋಪಿಸಿದ್ರು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಸಂಸತ್ತಿನಲ್ಲಿ ಐದು ನಿಮಿಷ ಮಾತನಾಡಲು ಬರಲ್ಲ. ಐದು ನಿಮಿಷ ನನ್ನ ಜೊತೆ ಚರ್ಚೆಗೆ ಬನ್ನಿ ಎಂದು ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಅವರಿಗೆ ಬಹಿರಂಗ ಸವಾಲು ಹಾಕಿದ್ರು. ಕಾಂಗ್ರೆಸ್‍ನವರು ಮುಸ್ಲಿಂ ನಾಯಕರನ್ನು ಬೆಳೆಸಲು ಬಿಡುತ್ತಿಲ್ಲ. ದೇಶದಲ್ಲಿ ಉತ್ತರ ಪ್ರದೇಶ ನಂತರ ಅತಿ ಹೆಚ್ಚು ಅಪರಾಧ ಪ್ರಕರಣಗಳು ಕರ್ನಾಟಕದಲ್ಲಿ ನಡೆದಿವೆ. ಇದೇನಾ ಕಾಂಗ್ರೆಸ್ ಜಾತ್ಯಾತೀತ ತತ್ವ ಎಂದು ಪ್ರಶ್ನಿಸಿದ ಅವರು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯ ಸೋಲು ಖಚಿತ ಅಂತಾ ಭವಿಷ್ಯ ನುಡಿದ್ರು.
ಕೆಲವರು ನಮ್ಮ ವಾರ್ಡ್ ನಲ್ಲಿ ಯಾವುದೇ ರೀತಿಯಲ್ಲಿ ಅಭಿವೃದ್ಧಿಯಾಗಿಲ್ಲ ಅಂತಾ ಶಾಸಕರನ್ನು ತರಾಟೆಗೆ ತೆಗೆಕೊಂಡ್ರು. ಕೂಡಲೇ ಕೆಲವರು ಸಿಎಂ ಸಿದ್ದರಾಮಯ್ಯಗೆ ಜೈ ಅಂತಾ ಘೋಷಣೆ ಕೂಗಲು ಆರಂಭಿಸಿದರು. ಇದ್ರಿಂದ ಕೋಪಗೊಂಡ ಶಾಸಕರ ಬೆಂಬಲಿಗರು ಬಿಜೆಪಿಗೆ ಜೈ ಅಂತಾ ಮರು ಘೋಷಣೆ ಕೂಗಿದ್ರು.
ಬಾಗಲಕೋಟೆ: ಸೋಮವಾರ ರಾತ್ರಿ ಸುಮಾರು 11 ಗಂಟೆಗೆ ಬದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ತಂಗಿದ್ದ ಕೃಷ್ಟಾ ಹೆರಿಟೆಜ್ ರೆಸಾರ್ಟ್ ಮೇಲೆ ನಡೆದ ಐಟಿ ದಾಳಿ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಾರಸ್ಮಲ್ ಜೈನ್‍ರನ್ನು ಟಾರ್ಗೆಟ್ ಮಾಡಿ ಐಟಿ ಅಧಿಕಾರಿಗಳು ಮೂರು ಕಡೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಬದಾಮಿ ಮತ್ತು ಬಾಗಲಕೋಟೆ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಹೊತ್ತಿರುವ ಪಾರಸ್ಮಾಲ್ ಜೈನ್ ಹುಬ್ಬಳ್ಳಿ ಮೂಲದ ಉದ್ಯಮಿಯಾಗಿದ್ದು, ಚುನಾವಣೆ ಹಿನ್ನೆಲೆ ಎಸ್.ಆರ್ ಪಾಟೀಲ್ ಮತ್ತು ಸಿ.ಎಂ ಇಬ್ರಾಹಿಂ ಜೊತೆ ಚರ್ಚೆ ನಡೆಸಲು ಆನಂದ್ ಸಿಂಗ್ ಒಡೆತನದ ಕೃಷ್ಣಾ ಹೇರಿಟೆಜ್ ರೆಸಾರ್ಟ್ ಗೆ ತೆರಳಿದ್ದರು. ಈ ವೇಳೆ ಏಕಕಾಲದಲ್ಲಿ ಹುಬ್ಬಳ್ಳಿಯಲ್ಲಿರುವ ಜೈನ್ ನಿವಾಸ, ಬದಾಮಿಯ ಕೃಷ್ಣಾ ಹೇರಿಟೆಜ್ ರೆಸಾರ್ಟ್ ಮತ್ತು ಜೈನ್ ತಂಗಿದ್ದ ಕೆಎಸ್‍ಟಿಡಿಸಿ ಹೋಟೆಲ್‍ನ ರೂಂ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ರು. ಇದನ್ನೂ ಓದಿ:ಕೋಟ್ಯಾಂತರ ರೂ. ಸಿಗುತ್ತೆ ಅಂತ 20 ಮಂದಿಯ ಪಟಾಲಂ ದಾಳಿ ಮಾಡ್ತು- ಐಟಿ ದಾಳಿಗೆ ಇಬ್ರಾಹಿಂ ವ್ಯಂಗ್ಯ
ಈ ಸಂಬಂಧ ಪ್ರತಿಕ್ರಿಯಿಸಿರುವ ಜೈನ್, ದಾಳಿ ವೇಳೆ ಎರಡ್ಮೂರು ಲಕ್ಷ ಹಣ ಸಿಕ್ಕಿದೆ. ಇದು ನಾನು ಖರ್ಚಿಗೆ ಅಂತಾ ಇಟ್ಟು ಕೊಂಡಿದ್ದ ಹಣ. ನನ್ನ ಮೇಲಿನ ಐಟಿ ದಾಳಿ ಬಿಜೆಪಿ ಸೋಲಿನ ಹತಾಷೆ ತೋರಿಸುತ್ತೆ. ಇದು ರಾಜಕೀಯ ಪ್ರೇರಿತ ದಾಳಿ ಅಂತ ಆರೋಪಿಸಿದ್ರು. ಇದನ್ನೂ ಓದಿ: ನಾನೂ ಆ ರೂಮಿನಲ್ಲಿ ದುಡ್ಡು ಮಡಚಿಟ್ಟು ಬಂದಿದ್ದೇನಾ: ಸಿಎಂ ಆಕ್ರೋಶ
ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಜೆಡಿಎಸ್ ಕಾರ್ಯಕರ್ತನಿಗೆ ಥಳಿಸಿರುವ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಜಕ್ಕನಹಳ್ಳಿಯಲ್ಲಿ ನಡೆದಿದೆ.
ಮೇಲುಕೋಟೆ ಕ್ಷೇತ್ರದ ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿ ದರ್ಶನ್ ಪರ ಸಿಎಂ ಸಿದ್ದರಾಮಯ್ಯ ಮತಯಾಚನೆ ಮಾಡುತ್ತಿದ್ರು. ಈ ವೇಳೆ ಜೆಡಿಎಸ್ ಬಾವುಟ ಹಾರಿಸಿ ಕಾರ್ಯಕರ್ತರೊಬ್ಬರು ಘೋಷಣೆ ಕೂಗಿದ್ದರು. ಇದರಿಂದ ಆಕ್ರೋಶಗೊಂದ ರೈತ ಸಂಘದ ಕಾರ್ಯಕರ್ತರು ಜೆಡಿಎಸ್ ಕಾರ್ಯಕರ್ತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ಉಂಟಾಯಿದತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ ಎಂಬುದಾಗಿ ತಿಳಿದುಬಂದಿದೆ.