Tag: Karnataka Elections 2018

  • ಚಾಮರಾಜನಗರದಲ್ಲಿ ಅಭ್ಯರ್ಥಿಗಳ ವೋಟು ಅಭ್ಯರ್ಥಿಗಳಿಗೇ ಇಲ್ಲ!

    ಚಾಮರಾಜನಗರದಲ್ಲಿ ಅಭ್ಯರ್ಥಿಗಳ ವೋಟು ಅಭ್ಯರ್ಥಿಗಳಿಗೇ ಇಲ್ಲ!

    ಚಾಮರಾಜನಗರ: ರಾಜ್ಯಾದ್ಯಂತ ಬಿರುಸಿನ ಮತದಾನ ನಡೆಯುತ್ತಿದ್ದು, ಚಾಮರಾಜನಗರದ ಅಭ್ಯರ್ಥಿಗಳ ವೋಟು ಅಭ್ಯರ್ಥಿಗಳಿಗೇ ಇಲ್ಲ.

    ಹೌದು. ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಮೂವರು ಅಭ್ಯರ್ಥಿಗಳಿಗೆ ತಮ್ಮ ವೋಟು ತಮಗೆ ಹಾಕಿಕೊಳ್ಳುವ ಭಾಗ್ಯವಿಲ್ಲದಿರುವುದು ವಿಪರ್ಯಾಸವಾಗಿದೆ.

    ಕಾಂಗ್ರೆಸ್ ನ ಸಿ.ಪುಟ್ಟರಂಗಶೆಟ್ಟಿ, ಬಿಜೆಪಿಯ ಪ್ರೊ.ಮಲ್ಲಿಕಾರ್ಜುನಪ್ಪ, ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಈ ಮೂವರಿಗೆ ವೋಟು ಹಾಕುವ ಭಾಗ್ಯವಿಲ್ಲ. ಯಾಕಂದ್ರೆ ಈ ಮೂವರು ಕ್ಷೇತ್ರ ವ್ಯಾಪ್ತಿಯಲ್ಲಿ ವಾಸಿಸಿಲ್ಲ. ಅಷ್ಟೇ ಅಲ್ಲದೇ ಕ್ಷೇತ್ರದ ಮತದಾರರ ಪಟ್ಟಿಯಲ್ಲೂ ಇವರ ಹೆಸರಿಲ್ಲ.

    ಹೀಗಾಗಿ ಮೂವರ ಹೆಸರು ಬೇರೆ ಬೇರೆ ಕ್ಷೇತ್ರಗಳ ಮತಗಟ್ಟೆಯಲ್ಲಿರುವ ಹಿನ್ನೆಲೆಯಲ್ಲಿ ತಮ್ಮ ವೋಟು ತಮಗೆ ಹಾಕಿಕೊಳ್ಳದ ಪರಿಸ್ಥಿತಿ ಎದುರಾಗಿದೆ ಎಂಬುದಾಗಿ ತಿಳಿದುಬಂದಿದೆ.

  • ಮತದಾನದ ಬಿಸಿ- ಮೆಜೆಸ್ಟಿಕ್ ನಲ್ಲಿ ಬಸ್‍ ಗಾಗಿ ಪ್ರಯಾಣಿಕರು ಗರಂ

    ಮತದಾನದ ಬಿಸಿ- ಮೆಜೆಸ್ಟಿಕ್ ನಲ್ಲಿ ಬಸ್‍ ಗಾಗಿ ಪ್ರಯಾಣಿಕರು ಗರಂ

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಆರಂಭವಾಗಿದೆ. ಆದರೆ ಪ್ರಯಾಣಿಕರು ಕೆಎಸ್‍ಆರ್ ಟಿಸಿ ಮತ್ತು ಬಿಎಂಟಿಸಿಗೆ ಹಿಡಿಶಾಪ ಹಾಕುತ್ತಿದ್ದಾರೆ.

    ಮತದಾನ ಮಾಡುವುದಕ್ಕೆ ಊರಿಗೆ ತೆರಳಲು ಬಸ್ ಇಲ್ಲದೆ ಪ್ರಯಾಣಿಕರು ಪರದಾಡಿದ ಸ್ಥಿತಿ ನಗರದ ಮೆಜೆಸ್ಟಿಕ್ ನಲ್ಲಿ ಕಂಡು ಬಂದಿದೆ. ರಾತ್ರಿಯಿಂದಲೇ ಊರಿಗೆ ತೆರಳಲು ಸಜ್ಜಾಗಿದ್ದ ಪ್ರಯಾಣಿಕರು ಸಂಜೆಯಿಂದ ಕಾದು ಕುಳಿತ್ರೂ, ಬಸ್ ವ್ಯವಸ್ಥೆ ಇಲ್ಲ ಪರಿಣಾಮವಾಗಿ ಪ್ರಯಾಣಿಕರು ಮೆಜೆಸ್ಟಿಕ್‍ ನ ಡಿಪೋದ ಮುಂದೆ ಸರ್ಕಾರಕ್ಕೆ ಧಿಕ್ಕಾರ ಕೂಗಿದ್ದಾರೆ.

    ಅಷ್ಟೇ ಅಲ್ಲದೇ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಂಚರಿಸುತ್ತಿದ್ದ ಬಸ್‍ ಗಳನ್ನ ತಡೆಯಲು ಮುಂದಾಗಿದ್ದಾರೆ. ಒಂದು ತಿಂಗಳು ಮುಂಚಿತವಾಗಿ ಬಸ್‍ಗಾಗಿ ಟಿಕೆಟ್ ಬುಕ್ ಮಾಡಿದರೂ ಬಸ್ ವ್ಯವಸ್ಥೆ ಇರಲಿಲ್ಲ.

    ಸರ್ಕಾರ ರಚನೆ ಮಾಡುವುದಕ್ಕೆ ನಮ್ಮ ವೋಟ್ ಬೇಕು. ಜನರ ಸಮಸ್ಯೆ ಪರಿಹರಿಸುವುದಕ್ಕೆ ಯಾವ ಅಧಿಕಾರಿಯೂ ಬರಲ್ಲ. ಇಂತಹವರಿಗೆ ನಾವು ಮತದಾನ ಮಾಡಬೇಕು ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ರಾಜ್ಯಾದ್ಯಂತ ಭಾರೀ ಮಳೆ – ಜನಜೀವನ ಅಸ್ತವ್ಯಸ್ತ

    ರಾಜ್ಯಾದ್ಯಂತ ಭಾರೀ ಮಳೆ – ಜನಜೀವನ ಅಸ್ತವ್ಯಸ್ತ

    ಬೆಂಗಳೂರು: ಕಳೆದ ಎರಡು ದಿನಗಳಿಂದ ಸಂಜೆ ನಗರ ಸೇರಿದಂತೆ ರಾಜ್ಯದ ಹಲವೆಡೆ ವರುಣಾ ಅಬ್ಬರಿಸುತ್ತಿದ್ದಾನೆ. ಇಂದೂ ಕೂಡ ಮಧ್ಯಾಹ್ನದ ಬಳಿಕ ಮಳೆಯಾಗುವ ಸಾಧ್ಯತೆಗಳಿವೆ.

    ಶುಕ್ರವಾರ ಸಂಜೆ ಯಶವಂತಪುರ, ರಾಜಾಜಿನಗರ, ಮೆಜೆಸ್ಟಿಕ್, ಜಾಲಹಳಿ, ನೆಲಮಂಗಲ ಸೇರಿದಂತೆ ಹಲವೆಡೆ ಮಳೆಯಾಗಿದೆ. ಬಾಗಲಕೋಟೆಯ ಜಿಲ್ಲಾ ಕ್ರೀಡಾಂಗಣದ ಸ್ಟೇಜ್‍ಗೆ ಹಾಕಲಾಗಿದ್ದ ತಗಡುಗಳು ಹಾರಿಹೋಗಿದ್ದು, ಪ್ಯಾಲೇಸ್ ಬಳಿ ಆಲದ ಮರವೊಂದು ನೆಲಕ್ಕುರುಳಿದೆ.

    ಬೆಂಗಳೂರು-ಮೈಸೂರು ಹೆದ್ದಾರಿ ಜಲಾವೃತವಾಗಿದ್ರಿಂದ ವಾಹನ ಸವಾರರು ತೀವ್ರ ಪ್ರಯಾಸಪಟ್ರು. ಚಿಕ್ಕೋಡಿಯ ಹಾರೂಗೇರಿಯಲ್ಲಿ ಆಲಿಕಲ್ಲು ಸಹಿತ ಭಾರೀ ಗಾಳಿ ಮಳೆಯಿಂದ 122ರ ಪಿಂಕ್ ಮತಗಟ್ಟೆ ಬ್ಯಾನರ್ ನಾಶವಾಗಿದೆ.

    ಮಂಗಳೂರು, ಉಡುಪಿಯಲ್ಲೂ ಗಾಳಿ ಸಹಿತ ಭಾರೀ ಮಳೆಯಾಗಿದ್ರಿಂದ, ಜನ ಕತ್ತಲಲ್ಲಿ ಕಳೆಯಬೇಕಾಯ್ತು. ಮಂಡ್ಯ ತಾಲೂಕಿನಲ್ಲಿ ರಾತ್ರಿ ಮಳೆಯಾಗಿದ್ದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಹಾಗಾಗಿ ಇಂದು ಚಿಕ್ಕ ಮಂಡ್ಯ ಗ್ರಾಮದಲ್ಲಿ ಬೆಳಗ್ಗೆ ಅಧಿಕಾರಿಗಳು ಮೇಣದ ಬತ್ತಿ ಬೆಳಕಿನಲ್ಲಿ ಮತಯಂತ್ರಗಳನ್ನು ಸಿದ್ಧಪಡಿಸಿಕೊಂಡರು.

  • ರಾತ್ರಿ ಸುರಿದ ಭಾರೀ ಮಳೆಗೆ ಮತಗಟ್ಟೆ ತುಂಬಾ ನೀರು

    ರಾತ್ರಿ ಸುರಿದ ಭಾರೀ ಮಳೆಗೆ ಮತಗಟ್ಟೆ ತುಂಬಾ ನೀರು

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಆರಂಭವಾಗಿದೆ. ಆದರೆ ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಗೆ ಜನರು ಅಸ್ತವ್ಯಸ್ಥಗೊಂಡಿದ್ದು, ರಾತ್ರಿ ಸುರಿದ ಮಳೆಯಿಂದಾಗಿ ಇಂದು ಮತದಾನಕ್ಕೂ ಅಡ್ಡಿ ಉಂಟು ಮಾಡಿದೆ.

    ಒಟ್ಟು 222 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಮೇ 15ಕ್ಕೆ ಮತ ಎಣಿಕೆ ನಡೆಯಲಿದೆ. ರಾತ್ರಿ ಸುರಿದ ಮಳೆಯ ಪರಿಣಾಮ ಸಿ.ವಿ.ರಾಮನ್ ನಗರದ ಬೂತ್ ನಂಬರ್ 122 ರ ಮತಗಟ್ಟೆ ತುಂಬ ನೀರು ತುಂಬಿದೆ. ಇದರಿಂದ ಚುನಾವಣಾ ಸಿಬ್ಬಂದಿ ನೀರು ತೆಗೆಯಲು ಹರಸಾಹಸ ಪಡುತ್ತಿದ್ದಾರೆ. ಇನ್ನು ಮತದಾನ ಮಾಡಲು ಬರುವ ಮತದಾರರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂದು ಮಧ್ಯಾಹ್ನದ ಬಳಿಕ ರಾಜ್ಯದ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇರುವ ಕಾರಣ ಬೆಳಗಿನ ಅವಧಿಯಲ್ಲೇ ಬಿರುಸಿನ ಮತದಾನ ನಡೆಯುವ ಸಾಧ್ಯತೆಯಿದೆ.

    ಇನ್ನು ಎರಡು ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆಯಿದೆ. ಲಕ್ಷದ್ವೀಪ ಮತ್ತು ತಮಿಳುನಾಡು ಭಾಗದಲ್ಲಿ ಮೇಲ್ಮೈ ಸುಳಿಗಾಳಿ ನಿರ್ಮಾಣ ಹಾಗೂ ಉತ್ತರ ಕರ್ನಾಟಕದಿಂದ ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಟ್ರಫ್ (ಮೋಡಗಳ ಸಾಲು) ನಿರ್ಮಾಣ ವಾಗಿರುವ ಹಿನ್ನೆಲೆಯಲ್ಲಿ ಮಳೆಯಾಗುತ್ತಿದೆ. ಇನ್ನೂ ಬೆಂಗಳೂರು ನಗರ ಸೇರಿ ದಕ್ಷಿಣ ಒಳನಾಡಿನ ಭಾಗ ಮತ್ತು ಉತ್ತರ ಕರ್ನಾಟಕದಲ್ಲಿ ಕೂಡ ಮಳೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

  • ಕರ್ನಾಟಕ ಕುರುಕ್ಷೇತ್ರಕ್ಕೆ ಕ್ಷಣಗಣನೆ – 222 ಕ್ಷೇತ್ರಗಳಿಗೆ ಚುನಾವಣೆ

    ಕರ್ನಾಟಕ ಕುರುಕ್ಷೇತ್ರಕ್ಕೆ ಕ್ಷಣಗಣನೆ – 222 ಕ್ಷೇತ್ರಗಳಿಗೆ ಚುನಾವಣೆ

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಆರಂಭವಾಗಿದೆ. ಒಟ್ಟು 222 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಮೇ 15ಕ್ಕೆ ಮತ ಎಣಿಕೆ ನಡೆಯಲಿದೆ. ಇಂದು ಮಧ್ಯಾಹ್ನದ ಬಳಿಕ ರಾಜ್ಯದ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇರುವ ಕಾರಣ ಬೆಳಗ್ಗಿನ ಅವಧಿಯಲ್ಲೇ ಬಿರುಸಿನ ಮತದಾನ ನಡೆಯುವ ಸಾಧ್ಯತೆಯಿದೆ.

    ರಾಜ್ಯ ವಿಧಾನಸಭೆಯ 224 ಕ್ಷೇತ್ರಗಳ ಪೈಕಿ ಜಯನಗರ, ರಾಜರಾಜೇಶ್ವರಿನಗರ ಹೊರತು ಪಡಿಸಿ 222 ಕ್ಷೇತ್ರಗಳಿಗೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಮೂರು ಪಕ್ಷಗಳ ಮುಖ್ಯಮಂತ್ರಿ ಅಭ್ಯರ್ಥಿಗಳಾದ ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಸೇರಿದಂತೆ ಎರಡೂವರೆ ಸಾವಿರ ಅಭ್ಯರ್ಥಿಗಳ ರಾಜಕೀಯ ಹಣೆಬರಹವನ್ನ ಮತದಾರರು ನಿರ್ಧರಿಸಲಿದ್ದಾರೆ.

    ಜಯನಗರ ಅಭ್ಯರ್ಥಿ ಬಿ.ಎನ್ ವಿಜಯ್‍ಕುಮಾರ್ ನಿಧನದಿಂದ ಜಯನಗರ ಹಾಗೂ ಮತಚೀಟಿ ಅಕ್ರಮದ ಹಿನ್ನೆಲೆಯಲ್ಲಿ ರಾಜಾರಾಜೇಶ್ವರಿನಗರ ಕ್ಷೇತ್ರದ ಚುನಾವಣೆ ಮುಂದೂಡಲಾಗಿದೆ. ರಾಜ್ಯದಲ್ಲಿ ಒಟ್ಟಾರೆ 56,696 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಮತದಾನದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಕ್ತ, ನ್ಯಾಯಸಮ್ಮತ, ಶಾಂತಿಯುತವಾಗಿ ನಡೆಸಲು ರಾಜ್ಯ ಪೊಲೀಸ್ ಇಲಾಖೆ ಸಕಲ ರೀತಿಯಲ್ಲೂ ಸಜ್ಜಾಗಿದೆ. ಈಗಾಗಲೇ ಎಲ್ಲಾ ಮತಗಟ್ಟೆಗಳಲ್ಲೂ ಸಿದ್ಧತೆ ಪೂರ್ಣಗೊಂಡಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಮತದಾನ ಶುರವಾಗಲಿದೆ. .

  • ಎಣ್ಣೆ ಕೊಳ್ಳಲು ವೈನ್ ಶಾಪ್‍ ಗಳ ಮುಂದೆ ಮುಗಿಬಿದ್ದ ಜನ!

    ಎಣ್ಣೆ ಕೊಳ್ಳಲು ವೈನ್ ಶಾಪ್‍ ಗಳ ಮುಂದೆ ಮುಗಿಬಿದ್ದ ಜನ!

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇನ್ನು 2 ಗಂಟೆಗಳಲ್ಲಿ ಬ್ರೇಕ್ ಬೀಳಲಿದ್ದು, ಚುನಾವಣಾ ನೀತಿ ಸಂಹಿತೆ ಪರಿಣಾಮದಿಂದ ಮದ್ಯ ಖರೀದಿಸಲು ವೈನ್ ಶಾಪ್‍ ಗಳ ಮುಂದೆ ನೂಕುನುಗ್ಗಲು ಶುರುವಾಗಿದೆ.

    ಶನಿವಾರ ರಾಜ್ಯಾದ್ಯಂತ ಮತದಾನ ನಡೆಯಲಿದ್ದು, ಇಂದು ಸಂಜೆ 5 ಗಂಟೆಯಿಂದ ಮದ್ಯದಂಗಡಿಗಳು ಬಂದ್ ಆಗಲಿವೆ. ಇಂದು ಸಂಜೆ 5 ಗಂಟೆಯಿಂದ ಮೇ 12ರ ಮಧ್ಯರಾತ್ರಿವರೆಗೆ ರಾಜ್ಯದ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚುವಂತೆ ಚುನಾವಣಾ ಅಧಿಕಾರಿಗಳು ಸೂಚನೆ ನೀಡಿದ್ದರು. ಇದನ್ನೂ ಓದಿ:  ಇಂದು ಸಂಜೆಯಿಂದ ಎರಡು ದಿನ ರಾಜ್ಯಾದ್ಯಂತ ಮದ್ಯದಂಗಡಿ ಬಂದ್

    ಚುನಾವಣಾ ಆಯೋಗದ ಸೂಚನೆಯಂತೆ ಇಂದು ಸಂಜೆ 5 ಗಂಟೆಗೆ ವೈನ್ ಶಾಪ್‍ ಗಳ ಮುಚ್ಚುವುದರಿಂದ ವೈನ್ ಶಾಪ್ ಗಳ ಮುಂದೆ ನೂಕುನುಗ್ಗಲು ಶುರುವಾಗಿದೆ. ಮದ್ಯ ಪ್ರಿಯರು ಇನ್ನು ಮತ್ತೆ ಚುನಾವಣೆ ಮುಗಿಯುವವರೆಗೂ ಮದ್ಯೆ ಸಿಗುವುದಿಲ್ಲ ಎಂದು ಎಲ್ಲರೂ ಬಾರ್, ವೈನ್ ಶಾಪ್ ಗಳಿಗೆ ಹೋಗಿ  ಮದ್ಯ ಖರೀದಿಸುತ್ತಿದ್ದಾರೆ.

    ತಿಂಗಳ ಆರಂಭ ಮತ್ತು ವೀಕೆಂಡ್ ಅಂತಾ ಪಾರ್ಟಿ ಮೂಡ್‍ನಲ್ಲಿರುವ ಮದ್ಯಪ್ರಿಯರಿಗೆ ಚುನಾವಣಾ ಆಯೋಗ ಶಾಕ್ ನೀಡಿದ್ದು, ವಿಧಾನಸಬಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಚುನಾವಣಾ ಆಯೋಗ ಎಲ್ಲ ರೀತಿಯಿಂದಲೂ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುತ್ತಿದೆ.

  • ಹೆಚ್ಚು ದಿನ ಬದುಕಲ್ಲ, ನಾನು ಬದುಕಬೇಕಂದ್ರೆ ನನ್ನನ್ನು ಗೆಲ್ಲಿಸಿ: ಹೆಚ್‍ಡಿಕೆ ಭಾವನಾತ್ಮಕ ಮಾತು

    ಹೆಚ್ಚು ದಿನ ಬದುಕಲ್ಲ, ನಾನು ಬದುಕಬೇಕಂದ್ರೆ ನನ್ನನ್ನು ಗೆಲ್ಲಿಸಿ: ಹೆಚ್‍ಡಿಕೆ ಭಾವನಾತ್ಮಕ ಮಾತು

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಕೊನೆ ಹಂತದ ಪ್ರಚಾರದಲ್ಲಿ ಎಲ್ಲ ಪಕ್ಷದ ನಾಯಕರು ಭರ್ಜರಿಯಾಗಿ ಪ್ರಚಾರದಲ್ಲಿ ತೊಡಗಿದ್ದು, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಬಹಿರಂಗ ಪ್ರಚಾರದ ಕೊನೆ ಕ್ಷಣದಲ್ಲಿ ಭಾವನಾತ್ಮಕ ಮಾತನಾಡಿದ್ದಾರೆ.

    ನಗರದ ಲಗ್ಗೆರೆಯಲ್ಲಿ ಇಂದು ತಮ್ಮ ಪಕ್ಷದ ಅಭ್ಯರ್ಥಿ ರಾಮಚಂದ್ರ ಪರ ಪ್ರಚಾರದಲ್ಲಿ ತೊಡಗಿದ್ದ ಕುಮಾರಸ್ವಾಮಿ ಅವರು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನಗೆ ಆರೋಗ್ಯದ ಸಮಸ್ಯೆ ಇದ್ದರೂ ಇವತ್ತು ಕೊನೆಯ ಹಂತದಲ್ಲೂ ನಾನು 113 ಸ್ಥಾನಗಳನ್ನು ಗೆಲ್ಲಬೇಕು ಎಂದು ಹೋರಾಟ ಮಾಡುತ್ತಿದ್ದೇನೆ. ಬಹುಶಃ ನಾಡಿನ ಜನತೆಗೆ ನನ್ನ ಬಗ್ಗೆ ಅನುಕಂಪ ವ್ಯಕ್ತಪಡಿಸುತ್ತಿರುವುದನ್ನು ನಾನು ಕಾಣುತ್ತಿದ್ದೇನೆ. ಜನತೆಯ ಆರ್ಶೀವಾದ ಇವತ್ತು ಜೆಡಿಎಸ್ ಪಕ್ಷದ ಪರವಾಗಿದ್ದು ಒಂದು ನಿಜವಾದ ಜನತಾ ಸರ್ಕಾರವನ್ನು ಆಡಳಿತಕ್ಕ ತರಲಿಕ್ಕೆ ಎಲ್ಲರೂ ಸಹಕಾರ ಕೊಡುತ್ತಾರೆ ಎಂದು ನಂಬಿದ್ದೇನೆ ಎಂದು ಹೇಳಿದರು.

    ಈ ನಿಮ್ಮ ಕುಮಾರಸ್ವಾಮಿ ಬದುಕಿರಬೇಕು ಅಂದರೆ ಈ ಬಾರಿ ಜೆಡಿಎಸ್ ಗೆಲ್ಲಿಸಿ. ನನ್ನನ್ನು ಗೆಲ್ಲಿಸಿ ಬದುಕಿಸಿದರೆ ನಿಮ್ಮನ್ನು ನಾನು ಉಳಿಸುತ್ತೇನೆ. ನನ್ನನ್ನು ಬದುಕಿಸುವ ಶಕ್ತಿ ನಿಮ್ಮಲ್ಲಿ ಮಾತ್ರ ಇದೆ. ನಿಮಗಾಗಿ ಕೆಲಸ ಮಾಡಕ್ಕೆ ಸಿದ್ದ ಇದ್ದೇನೆ. ನನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿ. ನನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ನಾನು ಗೆದ್ದಂತೆ. ಅಭ್ಯರ್ಥಿಗಳು ದುಡ್ಡು ದುಡ್ಡು ಅಂತ ಬಂದು ಕುಳಿತಿದ್ದಾರೆ. ನಾನು ಚಂದಾ ಎತ್ತಿ ಅವರಿಗೆಲ್ಲಾ ದುಡ್ಡು ಕೊಡಬೇಕಾಗಿದೆ. ನಾನೆಲ್ಲಿಂದ ತರಲಿ ಎಂದು ಪ್ರಶ್ನಿಸಿ ಕುಮಾರಸ್ವಾಮಿ ಭಾವನಾತ್ಮಕವಾಗಿ ಮಾತನಾಡಿದರು.

    ಇಂದು ಕುಮಾರಸ್ವಾಮಿ ಮಾಧ್ಯಮಗಳ ಜೊತೆ ಸಂವಾದ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಜ್ವರದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ರದ್ದಾಗಿದೆ.

  • ಅಮೆರಿಕಾದ ಪತ್ರಿಕೆಯಲ್ಲಿಯೂ ಸುದ್ದಿಯಾದ ಸಿಎಂ ಸಿದ್ದರಾಮಯ್ಯ!

    ಅಮೆರಿಕಾದ ಪತ್ರಿಕೆಯಲ್ಲಿಯೂ ಸುದ್ದಿಯಾದ ಸಿಎಂ ಸಿದ್ದರಾಮಯ್ಯ!

    ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇಶ ಮಾತ್ರವಲ್ಲ ವಿದೇಶದಲ್ಲೂ ಇದೀಗ ಸುದ್ದಿ ಆಗಿದ್ದಾರೆ.

    ಮೇ 12ರಂದು ಕರ್ನಾಟಕ ಚುನಾವಣೆ ನಡೆಯುತ್ತಿದ್ದು, ಪಕ್ಷಗಳ ಮಧ್ಯೆ ಭಾರೀ ಪೈಪೋಟಿ ಏರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಭಾರತದಲ್ಲಿ ಮೋದಿಯನ್ನು ತಡೆದು ನಿಲ್ಲಿಸುವರೇ ಕುರಿಗಾಹಿಯ ಮಗ ಎಂಬ ಲೇಖನವೊಂದು ಪತ್ರಕರ್ತೆ ಬರ್ಕಾ ದತ್ ವಾಷಿಂಗ್ಟನ್ ಪೋಸ್ಟ್‍ನಲ್ಲಿ ಬರೆದಿದ್ದಾರೆ.

    ಈ ಲೇಖನಕ್ಕೆ ಸಿಎಂ ಪ್ರತಿಕ್ರಿಯಿಸಿದ್ದು, ನಿಮ್ಮ ಪ್ರಶ್ನೆಗೆ ಕರ್ನಾಟಕದ ಜನತೆ ಮೇ 12ರಂದು ಉತ್ತರ ಕೊಡುವುದರ ಜೊತೆಗೆ ಪ್ರಜ್ಞಾಪೂವರ್ಕವಾಗಿ ನಿರ್ಣಯಿಸ್ತಾರೆ. ಹಾಲಿ ಸರ್ಕಾರಗಳು ಮರು ಆಯ್ಕೆಯಾದ ಇತಿಹಾಸವಿದೆ ಎಂದು ನಾನು ಪದೇ-ಪದೇ ಹೇಳಿದ್ದೇನೆ. ಆದ್ರೆ ನಾವು ಇರೋದು ಇತಿಹಾಸ ಸೃಷ್ಟಿಸುವುದಕ್ಕೆ, ಇತಿಹಾಸಕ್ಕೆ ಶರಣಾಗಲು ಅಲ್ಲ ಅಂತ ಹೇಳಿದ್ದಾರೆ.

  • ಬೆಂಗ್ಳೂರಿನ ಐಸ್ ಕ್ರೀಂ ಗೆ ರಾಹುಲ್ ಗಾಂಧಿ ಫಿದಾ!

    ಬೆಂಗ್ಳೂರಿನ ಐಸ್ ಕ್ರೀಂ ಗೆ ರಾಹುಲ್ ಗಾಂಧಿ ಫಿದಾ!

    ಬೆಂಗಳೂರು: ಚುನಾವಣಾ ದಿನ ಹತ್ತಿರವಾಗುತ್ತಿದ್ದಂತೆಯೇ ರಾಜ್ಯಕ್ಕೆ ಆಗಮಿಸಿ ಪ್ರಚಾರ ಮಾಡುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ನಗರದಲ್ಲಿರೋ ದೊರೆಯುವ ಐಸ್ ಕ್ರೀಂ ಗೆ ಫಿದಾ ಆಗಿದ್ದಾರೆ.

    ಚುನಾವಣಾ ಪ್ರಚಾರಕ್ಕೆ ನಗರಕ್ಕೆ ಆಗಮಿಸಿದ್ದ ರಾಹುಲ್ ಗಾಂಧಿ ಅವರು, ಶಿವಾನಂದ ಸರ್ಕಲ್ ನಲ್ಲಿರುವ ರಿಚಿ ರಿಚ್ ಗೆ ಭೇಟಿ ನೀಡಿ, ಅಲ್ಲಿ ಐಸ್ ಕ್ರೀಂ ಸವಿದಿದ್ದಾರೆ. ಈ ಕುರಿತು ತಮ್ಮ ಟ್ವಿಟ್ಟರ್ ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಮತ್ತೊಮ್ಮೆ ಬರುವುದಾಗಿ ತಿಳಿಸಿದ್ದಾರೆ.

    ಟ್ವೀಟ್ ನಲ್ಲೇನಿದೆ?: `ನನ್ನ ಇಷ್ಟು ದಿನದ ಚುನಾವಣಾ ಪ್ರಚಾರದ ಕೊನೆಯ ದಿನವನ್ನು ಕಳೆಯಲು ಬೆಂಗಳೂರಿನಲ್ಲಿರುವ ಐಸ್ ಕ್ರೀಂ ಪಾರ್ಲರ್ ಒಂದು ಒಳ್ಳೆಯ ಜಾಗವಾಗಿತ್ತು. ಇಲ್ಲಿ ದೊರೆಯುವ ಐಸ್ ಕ್ರೀಂ ತುಂಬಾನೇ ಟೇಸ್ಟಿಯಾಗಿದೆ. ಅಲ್ಲದೇ ಇಲ್ಲಿನ ಸಿಬ್ಬಂದಿ ಕೂಡ ಸ್ನೇಹ ಮನೋಭಾವದಿಂದ ಕೂಡಿದ್ದಾರೆ. ಈ ಪಾರ್ಲರ್ ನ ಮಾಲಕನನ್ನು ಮತ್ತು ಕೆಲ ಗ್ರಾಹಕರನ್ನು ಭೇಟಿ ಮಾಡಿ ಮಾಡಿದ್ದು, ಖುಷಿ ನೀಡಿದೆ. ಆದಷ್ಟು ಬೇಗ ಮತ್ತೆ ಇದೇ ಪಾರ್ಲರ್ ಗೆ ಭೇಟಿ ನೀಡುತ್ತೇನೆ ಅಂತ ಬರೆದುಕೊಂಡಿದ್ದಾರೆ.

  • ಕರ್ನಾಟಕ ಕುರುಕ್ಷೇತ್ರದಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ – ಸಂಜೆ 5 ಗಂಟೆ ನಂತ್ರ ರೋಡ್‍ಶೋ, ರ‍್ಯಾಲಿ ಇಲ್ಲ

    ಕರ್ನಾಟಕ ಕುರುಕ್ಷೇತ್ರದಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ – ಸಂಜೆ 5 ಗಂಟೆ ನಂತ್ರ ರೋಡ್‍ಶೋ, ರ‍್ಯಾಲಿ ಇಲ್ಲ

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಎರಡೇ ದಿನ ಬಾಕಿ. ಇಷ್ಟು ದಿನ ನಡೆದ ಅಬ್ಬರದ ಪ್ರಚಾರಕ್ಕೆ ಇಂದು ತೆರೆ ಬೀಳಲಿದೆ.

    ಸಂಜೆ 5 ಗಂಟೆ ನಂತರ ಯಾವುದೇ ಬಹಿರಂಗ ಸಭೆ, ಸಮಾವೇಶ, ರ‍್ಯಾಲಿಗಳನ್ನು ನಡೆಸುವಂತಿಲ್ಲ. ಹೀಗಾಗಿ ಅಂತಿಮ ಹಂತದಲ್ಲಾಗುವ ಚುನಾವಣಾ ಅಕ್ರಮ ತಡೆಗಟ್ಟಲು ಎಲ್ಲಾ ಪಕ್ಷಗಳ ಚಟುವಟಿಕೆ ಮೇಲೆ ಆಯೋಗ ಹದ್ದಿನ ಕಣ್ಣಿರಿಸಿದೆ.

    ಇನ್ನು ಕಳೆದ 15 ದಿನಗಳಿಂದ ರಾಜ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ ಹೊರ ರಾಜ್ಯದ ನಾಯಕರು, ಸ್ಟಾರ್ ಪ್ರಚಾರಕರು ಕೂಡ ಇಂದು ಸಂಜೆ ನಂತರ ತಮ್ಮ, ತಮ್ಮ ಗೂಡು ಸೇರಬೇಕು. ಹೀಗಾಗಿ ಕರ್ನಾಟಕ ಕುರುಕ್ಷೇತ್ರದ ಕದನ ಕಲಿಗಳು ಇಂದು ಇಡೀ ದಿನ ಅಂತಿಮ ಕಸರತ್ತು ನಡೆಸಲಿದ್ದಾರೆ.

    ಕ್ಷೇತ್ರಗಳಲ್ಲಿ ಹೊರಗಿನವರಿಗೆ ಉಳಿಯಲು ಅನುಮತಿ ಇಲ್ಲ. ನಾಳೆ ಒಂದು ದಿನ ಕೊನೆಯದಾಗಿ ಅಭ್ಯರ್ಥಿಗಳಿಗೆ ಮನೆ ಮನೆಗೆ ತೆರಳಿ ಪ್ರಚಾರ ಮಾಡೋದಕ್ಕೆ ಅವಕಾಶ ಇದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.