Tag: Karnataka Elections 2018

  • ವೋಟ್ ಮಾಡಿದ ಕಿಚ್ಚನಿಗೆ ಸಿಕ್ತು ಗಿಫ್ಟ್

    ವೋಟ್ ಮಾಡಿದ ಕಿಚ್ಚನಿಗೆ ಸಿಕ್ತು ಗಿಫ್ಟ್

    ಬೆಂಗಳೂರು: ಸಿನಿಮಾ ಕಲಾವಿದರು ತಮ್ಮ ಹಕ್ಕನ್ನು ಚಲಾಯಿಸಲು ಕೆಲಸದ ಮಧ್ಯೆ ಬಿಡುವು ಮಾಡಿಕೊಂಡು ಬಂದಿದ್ದು, ನಟ ಸುದೀಪ್ ಮತ್ತು ಪತ್ನಿ ಪ್ರಿಯಾ ಸುದೀಪ್ ಮತಚಲಾವಣೆ ಮಾಡಿದ್ದಾರೆ. ಬೊಮ್ಮನಹಳ್ಳಿಯ ಮತಗಟ್ಟೆ ಸಂಖ್ಯೆ 175 ಕೇಂದ್ರಕ್ಕೆ ಹೋಗಿ ಮತದಾನ ಮಾಡಿದ್ದಾರೆ.

    ಮತದಾನ ಮಾಡಿ ಮಾತನಾಡಿದ ಕಿಚ್ಚ ಎಲ್ಲೆಡೆ ಮತದಾನ ಕಡಿಮೆಯಾಗಿದೆ ಎಂದು ಕೇಳಬೇಡಿ. ನಾನು ಪತ್ನಿ ಜೊತೆ ಮತದಾನ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕೆಲಸ ಆಗಿಲ್ಲ ಎಂದು ದೂರಬೇಡಿ. ಇಂದೇ ಮತ ಚಲಾಯಿಸಿ, ಅಭಿವೃದ್ಧಿಗೆ ನಾಂದಿ ಹಾಡಿ ಎಂದು ಹೇಳಿದ್ದಾರೆ.

    ಇದೇ ವೇಳೆ ಅವರ ಅಭಿಮಾನಿಗಳ ಬಂದು ಮತದಾನ ಮಾಡಿದ ಕಿಚ್ಚನಿಗೆ ತುಳಸಿ ಗಿಡ ಕೊಟ್ಟಿದ್ದಾರೆ. ಕಳೆದ ಒಂದು ತಿಂಗಳಿನಿಂದ ಬೆಂಗಳೂರು ರಾಜಕೀಯ ಕ್ರೀಯಾ ಸಮಿತಿ(ಬಿಪ್ಯಾಕ್) ಪ್ರಥಮ ಬಾರಿಗೆ ಮತ ಚಲಾಯಿಸುವವರಿಗೂ ಹಾಗೂ ಹಿರಿಯ ನಾಗರಿಕರಿಗೆ ಗಿಡಗಳನ್ನು ನೀಡುವ ಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸಿತು.

  • ಹೆರಿಗೆ ನೋವಲ್ಲೂ ವೋಟ್ ಮಾಡಿ ಮಗುವಿಗೆ ಜನ್ಮ ನೀಡಿದ ತಾಯಿ

    ಹೆರಿಗೆ ನೋವಲ್ಲೂ ವೋಟ್ ಮಾಡಿ ಮಗುವಿಗೆ ಜನ್ಮ ನೀಡಿದ ತಾಯಿ

    ಹುಬ್ಬಳ್ಳಿ/ಯಾದಗಿರಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುವ ಸಂದರ್ಭದಲ್ಲಿ ಗರ್ಭಿಣಿಯೊಬ್ಬರು ಕುಸಿದು ಬಿದ್ದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಮತದಾನ ನಡೆಯುತ್ತಿತ್ತು. ಈ ವೇಳೆ ಸಾವಿತ್ರಿ ಕಿರೇಸೂರ ಗರ್ಭಿಣಿ ಮತದಾನ ಮಾಡಲು ಆಗಮಿಸಿದ್ದರು. ಆದರೆ ಮತ ಚಲಾಯಿಸುತ್ತಿದಂತೆ ಅಲ್ಲಿಯೇ ಕುಸಿದು ಬಿದ್ದಿದ್ದಾರೆ.

    ಮತದಾನ ಕೇಂದ್ರದಲ್ಲಿದ್ದ ಚುನಾವಣಾ ಸಿಬ್ಬಂದಿ ಸ್ಥಳದಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ನಂತರ ಸಮೀಪದ ಕುಂದಗೋಳ ತಾಲೂಕು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ.

    ಇನ್ನು ಯಾದಗಿರಿಯ ಜಿಲ್ಕೆ ಸುರಪುರ ತಾಲೂಕಿನ ಕೊಡೆಕಲ್ ವ್ಯಾಪ್ತಿಯ ಬೈಲುಕುಂಟೆ ಗ್ರಾಮದಲ್ಲಿ, ಗರ್ಭಿಣಿಯೊಬ್ಬರು ಹೆರಿಗೆ ನೋವಿನ ಮಧ್ಯೆಯೂ ಮತದಾನ ಮಾಡಿದ್ದಾರೆ. ನಂತರ ಗರ್ಭಿಣಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

  • ಸಪ್ತಪದಿ ತುಳಿದು ನವದಂಪತಿಯಿಂದ ಮತದಾನ

    ಸಪ್ತಪದಿ ತುಳಿದು ನವದಂಪತಿಯಿಂದ ಮತದಾನ

    ಧಾರವಾಡ/ಬೆಂಗಳೂರು: ರಾಜ್ಯದ ಎಲ್ಲೆಡೆ ಬಿರುಸಿನ ಮತದಾನ ನಡೆಯುತ್ತಿದ್ದು, ನಗರದ ನವ ದಂಪತಿ ನೇರವಾಗಿ ಮದುವೆ ಮಂಟಪದಿಂದ ಮತಗಟ್ಟೆಗೆ ತೆರಳಿ ತಮ್ಮ ಹಕ್ಕನ್ನ ಚಲಾಯಿಸಿದ್ದಾರೆ.

    ಧಾರವಾಡ ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿಂದು ಮಲ್ಲಿಕಾರ್ಜುನ ಮತ್ತು ನಿಖಿತಾ ಮದುವೆ ನಿಶ್ಚಯವಾಗಿತ್ತು. ಈ ದಂಪತಿ ಸಪ್ತಪದಿ ತುಳಿದ ನಂತರ ನೇರವಾಗಿ ನಗರದ ಕಾಮನಕಟ್ಟಿ ಬುತ್ ನಂಬರ್ 191 ರ ಮತಗಟ್ಟೆಗೆ ತೆರಳಿ ಮತಚಲಾಯಿಸಿದ್ದಾರೆ.

    ಈ ವೇಳೆ ವರ ಮಲ್ಲಿಕಾರ್ಜುನ ಮತ್ತು ನಿಖಿತಾಗೆ ಮತಗಟ್ಟೆ ಬಳಿ ಇದ್ದ ಮತದಾರರು ಶುಭ ಕೋರಿದ್ದಾರೆ. ಇನ್ನು ವರ ಮಲ್ಲಿಕಾರ್ಜುನ, ಎಲ್ಲರು ಮತ ಚಲಾಯಿಸಿ ಮತದಾನ ಮಾಡುವುದು ನಮ್ಮ ಹಕ್ಕು. ನಮ್ಮ ರಾಜ್ಯಕ್ಕಾಗಿ ಮತದಾನ ಮಾಡಿ ಎಂದು ಕರೆ ನೀಡಿದ್ದಾರೆ.

    ಒಟ್ಟು 222 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಮೇ 15ಕ್ಕೆ ಮತ ಎಣಿಕೆ ನಡೆಯಲಿದೆ. ರಾತ್ರಿ ಸುರಿದ ಮಳೆಯ ಪರಿಣಾಮ ಬೆಂಗಳೂರಿನ ಸಿ.ವಿ.ರಾಮನ್ ನಗರದ ಬೂತ್ ನಂಬರ್ 122 ರ ಮತಗಟ್ಟೆ ತುಂಬಾ ನೀರು ತುಂಬಿದೆ. ಇದರಿಂದ ಚುನಾವಣಾ ಸಿಬ್ಬಂದಿ ನೀರು ತೆಗೆಯಲು ಹರಸಾಹಸ ಪಡುತ್ತಿದ್ದಾರೆ. ಇನ್ನು ಮತದಾನ ಮಾಡಲು ಬರುವ ಮತದಾರರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂದು ಮಧ್ಯಾಹ್ನದ ಬಳಿಕ ರಾಜ್ಯದ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇರುವ ಕಾರಣ ಬೆಳಗಿನ ಅವಧಿಯಲ್ಲೇ ಬಿರುಸಿನ ಮತದಾನ ನಡೆದಿದೆ.

  • ವೋಟ್ ಮಾಡಿದ ಬಾರ್ಬಿ ಗರ್ಲ್ ಗೆ ಡಬಲ್ ಖುಷಿ

    ವೋಟ್ ಮಾಡಿದ ಬಾರ್ಬಿ ಗರ್ಲ್ ಗೆ ಡಬಲ್ ಖುಷಿ

    ಮೈಸೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಭರ್ಜರಿಯಿಂದ ಸಾಗುತ್ತಿದೆ. ಒಟ್ಟು 222 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಮೇ 15ಕ್ಕೆ ಮತ ಎಣಿಕೆ ನಡೆಯಲಿದೆ.

    ಬಿಗ್ ಬಾಸ್ ಸೀಸನ್ 5ನ ಕಾರ್ಯಕ್ರಮದ ಸ್ಪರ್ಧಿ ನಿವೇದಿತಾ ಗೌಡ ಇದೇ ಮೊದಲ ಬಾರಿಗೆ ಮತದಾನ ಮಾಡಿದ್ದಾರೆ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 192ರಲ್ಲಿ ಮತ ಚಲಾವಣೆ ಮಾಡಿದ್ದಾರೆ.

    ಮೈಸೂರಿನ ದಟ್ಟಗಳ್ಳಿ ಕನಕದಾಸ ನಗರದಲ್ಲಿರುವ ಮತಗಟ್ಟೆ ಕೇಂದ್ರಕ್ಕೆ ಪೋಷಕರ ಜೊತೆ ಹೋಗಿ ನಿವೇದಿತಾ ಗೌಡ ಮತದಾನ ಮಾಡಿದ್ದಾರೆ. ಇಂದು ನಿವೇದಿತಾ ಗೌಡ ಹುಟ್ಟಿದ ದಿನವಾಗಿದೆ. ಇಂದೇ ಮೊದಲ ಬಾರಿ ಮತದಾನ ಮಾಡಿದ್ದಾರೆ. ತಾನು ಹುಟ್ಟಿದ ದಿನದಂದೇ ಮೊದಲ ಮತದಾನ ಮಾಡಿದ್ದ ಖುಷಿಯಲ್ಲಿದ್ದು, ತುಂಬಾ ಸಂತಸವಾಗಿದೆ. ಇದೇ ಮೊದಲ ಬಾರಿಗೆ ನಾನು ಮತದಾನ ಮಾಡಿದ್ದೇನೆ ಎಂದು ಹೇಳಿದ್ದಾರೆ.

    ಇದೇ ವೇಳೆ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ. ಜೊತೆಗೆ ಅವರ ತಾಯಿ ಮತ್ತು ನಿವೇದಿತಾ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ತಮ್ಮ ಇನ್ಸ್ ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ.

    ರಾಜ್ಯ ವಿಧಾನಸಭೆಯ 224 ಕ್ಷೇತ್ರಗಳ ಪೈಕಿ ಜಯನಗರ, ರಾಜರಾಜೇಶ್ವರಿನಗರ ಹೊರತು ಪಡಿಸಿ 222 ಕ್ಷೇತ್ರಗಳಿಗೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಮೂರು ಪಕ್ಷಗಳ ಮುಖ್ಯಮಂತ್ರಿ ಅಭ್ಯರ್ಥಿಗಳಾದ ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಸೇರಿದಂತೆ ಎರಡೂವರೆ ಸಾವಿರ ಅಭ್ಯರ್ಥಿಗಳ ರಾಜಕೀಯ ಹಣೆಬರಹವನ್ನ ಮತದಾರರು ಇಂದು ನಿರ್ಧರಿಸಲಿದ್ದಾರೆ.

    https://www.instagram.com/p/Biqkvm8hxZN/?hl=en&taken-by=chandanshettyofficial

  • ಮತದಾರರನ್ನು ಕರೆದೊಯ್ಯುತ್ತಿದ್ದ ಆಟೋಗೆ ಲಾರಿ ಡಿಕ್ಕಿ!

    ಮತದಾರರನ್ನು ಕರೆದೊಯ್ಯುತ್ತಿದ್ದ ಆಟೋಗೆ ಲಾರಿ ಡಿಕ್ಕಿ!

    ಹಾಸನ: ವೋಟ್ ಹಾಕಲೆಂದು ಮತದಾರರನ್ನು ಕರೆದುಕೊಂಡು ಹೋಗುತ್ತಿದ್ದ ಆಟೋಗೆ ಲಾರಿ ಡಿಕ್ಕಿಯಾದ ಘಟನೆ ಸಂಭವಿಸಿದೆ.

    ಈ ಘಟನೆ ಬೇಲೂರು ರಸ್ತೆ ರಾಮೇನಹಳ್ಳಿ ಗೇಟ್ ಬಳಿ ಇಂದು ನಡೆದಿದೆ. ಘಟನೆಯಲ್ಲಿ 46 ವರ್ಷದ ಲಕ್ಷ್ಮಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಲ್ಲದೇ ಮತ್ತೋರ್ವ ಮಹಿಳೆಗೆ ಗಂಭೀರ ಗಾಯಗಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ.

    ಘಟನೆಯಿಂದಾಗಿ ಸುಮಾರು 10 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂಬುದಾಗಿ ತಿಳಿದುಬಂದಿದೆ. ಕೂಡಲೇ ಗಾಯಾಳುಗಳನ್ನು ಬೇಲೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

    ಇನ್ನೊಂದು ಪ್ರಕರಣದಲ್ಲಿ ಹೊಳೇನರಸೀಪುರ ದ ಸಂಕನಹಳ್ಳಿ ಬಳಿ 40 ವರ್ಷದ ಈರಾಜು ಮತದಾನಕ್ಕೆ ತೆರಳುತ್ತಿದ್ದ ವೇಳೆ ಬೈಕ್ ಹಸುವಿಗೆ ಡಿಕ್ಕಿಯಾಗಿ ನಂತರ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಈರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೇಲೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮತ ಚಲಾಯಿಸಲು ಬೂತ್‍ ಗೆ ಆಗಮಿಸಿದ್ದ ಮಹಿಳೆಗೆ ಬಿಗ್ ಶಾಕ್!

    ಮತ ಚಲಾಯಿಸಲು ಬೂತ್‍ ಗೆ ಆಗಮಿಸಿದ್ದ ಮಹಿಳೆಗೆ ಬಿಗ್ ಶಾಕ್!

    ಯಾದಗಿರಿ: ಕರ್ನಾಟಕ ವಿಧಾನಸಭಾ ಚುನಾವಣೆದ ಮತದಾನ ಭರ್ಜರಿಯಿಂದ ಸಾಗುತ್ತಿದ್ದು, ಒಟ್ಟು 222 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಮೇ 15ಕ್ಕೆ ಮತ ಎಣಿಕೆ ನಡೆಯಲಿದೆ.

    ಯಾದಗಿರಿಯ ಕೋಳಿವಾಡ ಮತಗಟ್ಟೆ 38ರಲ್ಲಿ ಎಡವಟ್ಟು ಆಗಿದ್ದು, ಮತ ಚಲಾಯಿಸಲು ಬಂದ ಮಹಿಳೆಗೆ ನಿಮ್ಮ ವೋಟ್ ಹಾಕಲಾಗಿದೆ ಎಂದ ಚುನಾವಣಾ ಅಧಿಕಾರಿಗಳು ಹೇಳಿದ್ದಾರೆ. ಇದರಿಂದ ಮಹಿಳೆ ಗಾಬರಿಗೊಂಡಿದ್ದಾರೆ.

    ಇಂದು ಮತದಾನ ಮಾತದಾನ ಮಾಡಲು ಬಸ್ಸಮ್ಮ ಕೊಳಿವಾಡನ ಮತಗಟ್ಟೆ 38 ರ ಕೇಂದ್ರಕ್ಕೆ ಬಂದಿದ್ದಾರೆ. ಆಗ ಚುನಾವಣಾಧಿಕಾರಿಗಳು ನಿಮ್ಮ ಮತಚಲಾಯಿಸಿದೆ ಎಂದು ಹೇಳಿದ್ದಾರೆ. ಮತದಾನದಿಂದ ವಂಚಿತಳಾದ ಬಸ್ಸಮ್ಮ ಚುನಾವಣೆ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಬಸ್ಸಮ್ಮ ಹೆಸರಿನಲ್ಲಿ ಯಾರು ಮತಚಲಾಯಿಸದ್ದಾರೆಂಬ ಅನುಮಾನ ಮೂಡಿದೆ.

    ರಾಜ್ಯ ವಿಧಾನಸಭೆಯ 224 ಕ್ಷೇತ್ರಗಳ ಪೈಕಿ ಜಯನಗರ, ರಾಜರಾಜೇಶ್ವರಿನಗರ ಹೊರತು ಪಡಿಸಿ 222 ಕ್ಷೇತ್ರಗಳಿಗೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಮೂರು ಪಕ್ಷಗಳ ಮುಖ್ಯಮಂತ್ರಿ ಅಭ್ಯರ್ಥಿಗಳಾದ ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಸೇರಿದಂತೆ ಎರಡೂವರೆ ಸಾವಿರ ಅಭ್ಯರ್ಥಿಗಳ ರಾಜಕೀಯ ಹಣೆಬರಹವನ್ನ ಮತದಾರರು ನಿರ್ಧರಿಸಲಿದ್ದಾರೆ.

  • ವಿಶ್ವಕ್ಕೆ ಗುರು ಭಾರತ, ಪ್ರಜೆಯಾಗಿ ಮತದಾನ ಮಾಡಿದ್ದೇನೆ: ನಟ ಉಪೇಂದ್ರ

    ವಿಶ್ವಕ್ಕೆ ಗುರು ಭಾರತ, ಪ್ರಜೆಯಾಗಿ ಮತದಾನ ಮಾಡಿದ್ದೇನೆ: ನಟ ಉಪೇಂದ್ರ

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಭರ್ಜರಿಯಿಂದ ಸಾಗುತ್ತಿದೆ. ಒಟ್ಟು 222 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಮೇ 15ಕ್ಕೆ ಮತ ಎಣಿಕೆ ನಡೆಯಲಿದೆ.

    ಹಿರಿಯರು, ಮಹಿಳೆಯರು, ಯುವಕರು ಹಾಗೂ ಸಿನಿಮಾ ನಟ-ನಟಿಯರು ಮತದಾನ ಮಾಡುತ್ತಿದ್ದು, ನಟ, ನಿರ್ದೇಶಕ ಉಪೇಂದ್ರ ಮತದಾನ ಮಾಡಿದ್ದಾರೆ. ಮತದಾನ ಮಾಡಿದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ಪಕ್ಷ ಮಾಡುವಾಗಲೂ ಪ್ರಜೆಯಾಗಿ ಮಾಡಿದ್ದೇನೆ. ನಾಯಕನಾಗಿ ಅಲ್ಲ. ಪ್ರಜೆಗಳಿಗೂ ನಾನು ಇದೇ ಹೇಳಿದ್ದಾನೆ.

    ಇವತ್ತು ಒಂದು ದಿನ ನಾನು ಪ್ರಜೆ. ಪ್ರತಿ 5 ವರ್ಷಗೊಮ್ಮೆ ಮತದಾನ ಮಾಡಲು ಅವಕಾಶ ಬರುತ್ತದೆ. ಆದ್ದರಿಂದ ನನಗೆ ಇಂದು ವೋಟ್ ಮಾಡಲು ತುಂಬಾ ಖುಷಿಯಾಗುತ್ತದೆ ಎಂದು ಹೇಳಿದ್ದಾರೆ. ಇನ್ನು ರಾಜಕೀಯದ ಬಗ್ಗೆ ಮಾತನಾಡಿದ ಅವರು, ನಮ್ಮ ರಾಜ್ಯ ರಾಜಕೀಯದ ಬಗ್ಗೆ ಪ್ರಜೆಗಳಿಗೆ ತಿಳಿದಿದ್ದರು. ಇಂದು 60% ಜನರು ಮತದಾನ ಮಾಡುತ್ತಾರೆ ಎಂದರೆ ಅದು ನಿಜವಾಗಿಯೂ ಗ್ರೇಟ್ ಆಗಿದೆ.

    ಈ ದೇಶದವರು ತಮ್ಮ ಭರವಸೆಯನ್ನು ಕಳೆದುಕೊಂಡಿಲ್ಲ. ಈ ದೇಶ ಗ್ರೇಟೆಸ್ಟ್ ಆಗಿದೆ. ಇಲ್ಲಿ ಎಲ್ಲಾ ವಿಚಾರಗಳಿಗೂ ಆಧರಣೆ ಇದೆ. ಆದ್ದರಿಂದ ವಿಶ್ವದ ಗುರು ಈ ದೇಶ. ಇದೊಂದು ಭರವಸೆಯ ದೇಶವಾಗಿದೆ. ಈ ದೇಶದಲ್ಲಿ ಎಷ್ಟೇ ಬಡತನ, ಕಷ್ಟ ಇದ್ದರೂ ಬೇರೆ ಶ್ರೀಮಂತ ದೇಶಕ್ಕೆ ಹೋಗಿ ಬಂದಾಗ ಬೇಸರವಾಗುತ್ತದೆ. ಆದ್ದರಿಂದ ನಿಜವಾಗಿಯೂ ಭಾರತದವರು ತುಂಬಾ ಖುಷಿಯಾಗಿದ್ದಾರೆ ಎನ್ನಿಸುತ್ತದೆ ಎಂದ್ರು.

    ರಾಜ್ಯ ವಿಧಾನಸಭೆಯ 224 ಕ್ಷೇತ್ರಗಳ ಪೈಕಿ ಜಯನಗರ, ರಾಜರಾಜೇಶ್ವರಿನಗರ ಹೊರತು ಪಡಿಸಿ 222 ಕ್ಷೇತ್ರಗಳಿಗೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಮೂರು ಪಕ್ಷಗಳ ಮುಖ್ಯಮಂತ್ರಿ ಅಭ್ಯರ್ಥಿಗಳಾದ ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಸೇರಿದಂತೆ ಎರಡೂವರೆ ಸಾವಿರ ಅಭ್ಯರ್ಥಿಗಳ ರಾಜಕೀಯ ಹಣೆಬರಹವನ್ನ ಮತದಾರರು ಇಂದು ನಿರ್ಧರಿಸಲಿದ್ದಾರೆ.

  • ಮತ ಚಲಾಯಿಸಿ ಮದುವೆಗೆ ತೆರಳಿದ ಮದುಮಗಳು!

    ಮತ ಚಲಾಯಿಸಿ ಮದುವೆಗೆ ತೆರಳಿದ ಮದುಮಗಳು!

    ಮಂಗಳೂರು: ರಾಜ್ಯಾದ್ಯಂತ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಬಿರುಸಿನಿಂದ ನಡೆಯುತ್ತಿದ್ದು, ಮದುವೆಗೂ ಮುನ್ನ ಮದುಮಗಳು ಮತದಾನ ಮಾಡಿದ ಪ್ರಸಂಗವೊಂದು ಮಂಗಳೂರಿನಲ್ಲಿ ನಡೆದಿದೆ.

    ನಗರದ ಬೋಂದೆಲ್ ಸೇಂಟ್ ಲಾರೆನ್ಸ್ ಮೀಡಿಯಂ ಶಾಲೆಯಲ್ಲಿ ಮತದಾನ ನಡೆಯುತ್ತಿದೆ. ಪಚ್ಚನಾಡಿಯ ಮದುಮಗಳು ವಿಯೋಲಾ ಮಾರಿಯಾ ಫೆರ್ನಾಂಡೀಸ್ ಮತದಾನ ಮಾಡಿದ್ದಾರೆ.

    7 ಗಂಟೆಗೆ ಮತದಾನ ಮಾಡಿ ಬಳಿಕ ಬೆಳ್ತಂಗಡಿಯಲ್ಲಿ ನಡೆಯೋ ಮದುವೆಗೆ ಮದುಮಗಳು ತೆರಳಿದ್ದಾರೆ. ಮಂಗಳೂರಿನ ಬೆಳ್ತಂಗಡಿಯ ವರ ಸಿಲ್ವೆಸ್ಟರ್ ರೋಡ್ರಿಗಸ್ ಜತೆ ಯುವತಿಯ ಮದುವೆ ಇಂದು ನಡೆಯುತ್ತಿದೆ.

    ಒಟ್ಟಿನಲ್ಲಿ ವಿಯೋಲಾ ಅವರು ಮದುವೆಗೂ ಮುನ್ನ ಮತದಾನ ಮಾಡಿ ಮಾದರಿಯಾಗಿದ್ದಾರೆ.

  • #NammaElection: ಕರ್ನಾಟಕ ಚುನಾವಣೆ LIVE ಅಪ್ಡೇಟ್

    #NammaElection: ಕರ್ನಾಟಕ ಚುನಾವಣೆ LIVE ಅಪ್ಡೇಟ್

    ಬೆಂಗಳೂರು: ಕರ್ನಾಟಕದ 222 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ಶುರುವಾಗಿದೆ. ಬೆಳಗ್ಗೆಯಿಂದಲೇ ಎಲ್ಲೆಡೆ ಮತದಾರರು ಹಕ್ಕು ಚಲಾಯಿಸಲು ಆಗಮಿಸುತ್ತಿದ್ದು, ರಾಜ್ಯದ ಹಲವೆಡೆ ಇವಿಎಂ ಯಂತ್ರಗಳು ಕೈಕೊಡುತ್ತಿವೆ. ಇದರಿಂದ ನಿರಾಶರಾಗಿ ಹಲವೆಡೆ ಮತದಾರರು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ವಾಪಸ್ ಹೋಗುತ್ತಿದ್ದಾರೆ. ಉಡುಪಿ ಜಿಲ್ಲೆಯ ಮತಗಟ್ಟೆಯೊಂದರಲ್ಲಿ ಮತಯಂತ್ರ ಕೈಕೊಟ್ಟಿದ್ದರಿಂದ ಸುಮಾರು 200ಕ್ಕೂ ಹೆಚ್ಚು ಮತದಾರರು ಬೇಸರದಿಂದ ಮತ ಚಲಾಯಿಸದೇ ಹಿಂದಿರುಗಿದ್ದಾರೆ.

    ಸಂಜೆ 5.07: ಸಂಜೆ 4 ಗಂಟೆಗೆ ಹೊತ್ತಿಗೆ ಶೇ.61.53ರಷ್ಟು ಮತದಾನ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. 68ರಷ್ಟು ಮತದಾನ

    ಸಂಜೆ 4.49: ಬೆಂಗಳೂರು ಉತ್ತರದಲ್ಲಿ ಅತೀ ಕಡಿಮೆ ಅಂದ್ರೆ ಶೇ.39ರಷ್ಟು ಮತದಾನ

    ಸಂಜೆ 4.27: ಉಡುಪಿಯಲ್ಲಿ ಸ್ಪೆಷಲ್ ವೋಟ್ ಆಫರ್, ವೋಟ್ ಹಾಕಿ, ಟೀ ಕುಡಿಯಿರಿ, ಬಟ್ಟೆ ತಗೊಳ್ಳಿ

    ಸಂಜೆ 4.15: ಮತದಾನ ಮಾಡಲು ಬಾರದ ನಟಿ ರಮ್ಯಾ ಹಾಗೂ ಸುಮಲತಾ

    ಸಂಜೆ 4.07: ಮತದಾರರಿಗೆ ಹಣ ಹಂಚಿದ ಆರೋಪ ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್ ವಿರುದ್ಧ ಎಫ್ಐಆರ್

    ಸಂಜೆ 4: ಕೋಲಾರ ಕೆಜಿಎಫ್ , ರಾಯಚೂರು ಮೊದಲಾದ ಕಡೆಗಳಲ್ಲಿ ಮತದಾನಕ್ಕೆ ವರುಣ ಅಡ್ಡಿ

    ಮಧ್ಯಾಹ್ನ:3.53: ಮದ್ದೂರಿನ ದೊಡ್ಡರಸಿಕೆರೆಯಲ್ಲಿ ಜೆಡಿಎಸ್ ಅಭ್ಯರ್ಥಿ ಡಿಸಿ ತಮ್ಮಣ್ಣ ಕಾರಿನಲ್ಲಿ ಬಂದು ಮತ ಚಲಾಯಿಸಿದ ಅಂಬರೀಶ್

    ಮಧ್ಯಾಹ್ನ:3.52: ಬೊಮ್ಮನಹಳ್ಳಿ ಮತಗಟ್ಟೆಗೆ ಪತ್ನಿ ಪ್ರಿಯಾ ಸುದೀಪ್ ಜೊತೆ ಬಂದು ನಟ ಸುದೀಪ್ ಮತ ಚಲಾವಣೆ

    ಮಧ್ಯಾಹ್ನ:3.48: ಎಲೆಕ್ಷನ್ ದಿನವೇ ಪ್ರಯಾಣಿಕರಿಂದ ದುಪ್ಪಟ್ಟು ಹಣ ಸುಲಿಗೆ ಮಾಡುತ್ತಿರುವ ಬಿಎಂಟಿಸಿ. ಮೆಜೆಸ್ಟಿಕ್ ನಿಂದ ಮಾಗಡಿರೋಡ್ ಟೋಲ್ ಗೇಟ್ ಗೆ 10 ರೂ. ಇದ್ದಿದ್ದು 20ರೂ. ಗೆ ದಿಢೀರ್ ಏರಿಕೆ. ಬಸ್ ಪಾಸ್ ಇದ್ದವರನ್ನು ಬಸ್ ಗೆ ಹತ್ತಿಸದ ಕಂಡಕ್ಟರ್ ಗಳು

    ಮಧ್ಯಾಹ್ನ:3.43: ಕಾರವಾರದಲ್ಲಿ 1390 ಮತದಾರರಿರುವ ವಾರ್ಡ್ ನಲ್ಲಿ ಕಡಿಮೆ ಪ್ರಮಾಣದ ಮತ ಚಲಾವಣೆ

    ಮಧ್ಯಾಹ್ನ:3.30: ಮಾಜಿ ಸಚಿವ ಗಣಿಧಣಿ ಜನಾರ್ದನ ರೆಡ್ಡಿ ಮತದಾನದಿಂದ ವಂಚಿತರಾದ್ರೆ, ಮಗಳು ಬ್ರಹ್ಮಿಣಿಯಿಂದ ಮೊದಲ ಬಾರಿಗೆ ಮತದಾನ

    ಮಧ್ಯಾಹ್ನ:3.23: ಕರ್ನಾಟಕದಲ್ಲಿ ಮತದಾನ ಮುಗಿದ ಬೆನ್ನಲ್ಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಸುಳಿವು

    ಮಧ್ಯಾಹ್ನ 3.11: ರಾಜ್ಯಾದ್ಯಂತ ಶೇ. 56ರಷ್ಟು ಮತದಾನ

    ಮಧ್ಯಾಹ್ನ: 3.09 – ಹಾಸನದ ಗೆಂಡೆಹಳ್ಳಿಯಲ್ಲಿ ವೋಟರ್ ಲಿಸ್ಟ್ ನಲ್ಲಿ ಬದುಕಿರುವವರು ಸತ್ತಿದ್ದಾರೆ. ಭದ್ರೇಗೌಡ ಹಾಗೂ ಇತರರನ್ನು ಸತ್ತವರ ಪಟ್ಟಿಗೆ ಸೇರಿಸಿದ ಚುನಾವಣಾ ಸಿಬ್ಬಂದಿ ಹಾಗೂ ಅಧಿಕಾರಿಗಳ ನಡೆಗೆ ಆಕ್ರೋಶ

    ಮಧ್ಯಾಹ್ನ: 3.02 – ಒಂದೇ ಕುಟುಂಬದ ಒಂದೊಂದು ವೋಟ್ ಬೇರೆ ಬೇರೆ ಬೂತ್ ಗಳಲ್ಲಿ ಸೇರ್ಪಡೆ- ಗೋವಿಂದರಾಜನಗರದ ಗಣೇಶ್ ರಾವ್ ದಂಪತಿ ಪರದಾಟ

    ಮಧ್ಯಾಹ್ನ: 29 – ಸಂಜೆ 4 ಗಂಟೆಯಿಂದ ಮಳೆ ಸಾಧ್ಯತೆ- ಹವಾಮಾನ ಇಲಾಖೆ ಮುನ್ಸೂಚನೆ

    ಮಧ್ಯಾಹ್ನ 2.50- ಬೆಣ್ಣೆನಗರಿ ದಾವಣಗೆರೆಯಲ್ಲಿ ಶೇ.40ರಷ್ಟು ಮತದಾನ

    ಮಧ್ಯಾಹ್ನ 2.24: ಸದಾಶಿವನಗರದ ಹೆಚ್ ಕೆಇಎಸ್ ಮತಕೇಂದ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಮತದಾನ

    ಮಧ್ಯಾಹ್ನ 2:18- ಶಾಂತಿನಗರದಲ್ಲಿ ಹ್ಯಾರಿಸ್ ಬೆಂಬಲಿಗರಿಂದ ಹಣ ಹಂಚಿಕೆ ಆರೋಪ, ಕಾರ್ ಡಿಕ್ಕಿಯಲ್ಲಿ ಹಣ ಮತ್ತು ಸ್ಟಿಕ್ಕರ್ ಪತ್ತೆ

    ಮಧ್ಯಾಹ್ನ 2.13: ಚಿತ್ರದುರ್ಗದಲ್ಲಿ ಚುನಾವಣಾಧಿಕಾರಿ ಅಮ್ಜದ್ ಮೇಲೆ ಬಿಜೆಪಿ ಅಭ್ಯರ್ಥಿ ತಿಪ್ಪಾರೆಡ್ಡಿ ಕಿಡಿ

    ಮಧ್ಯಾಹ್ನ 2:05:  ಉಡುಪಿಯಲ್ಲಿ ದಾಖಲೆಯ ಶೇ.50 ರಷ್ಟು ಮತದಾನ

    ಮಧ್ಯಾಹ್ನ 2:00: ಇದೂವರೆಗೂ ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು ಶೇ.47ರಷ್ಟು ಮತದಾನ-ಬೆಂಗಳೂರಿನಲ್ಲಿ ಅತಿ ಕಡಿಮೆ ಶೇ.28ರಷ್ಟು ಮತದಾನ

    ಮಧ್ಯಾಹ್ನ 1:45:  ಮತದಾನ ಮಾಡಿ ಹೊರ ಬರುತ್ತಿದ್ದಂತೆಯೇ ಮಹಿಳೆ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕು ಗೆಂಡಿಹಳ್ಳಿ ಮತಗಟ್ಟೆಯಲ್ಲಿ ನಡೆದಿದೆ. ಮಗೆಹಳ್ಳಿ ನಿವಾಸಿ 50 ವರ್ಷದ ರೇವತಿ ಸಾವನ್ನಪ್ಪಿದ ಮಹಿಳೆ.

    ಮಧ್ಯಾಹ್ನ 1:40: ರಾಜ್ಯಾದ್ಯಂತ ಇದೂವರೆಗೂ ಶೇ.39ರಷ್ಟು ಮತದಾನ

    ಮಧ್ಯಾಹ್ನ 01:30: ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿಯ ಮತಗಟ್ಟೆ ಸಂಖ್ಯೆ 240ರಲ್ಲಿ ಮತದಾನದ ಹಕ್ಕು ಚಲಾಯಿಸಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್-ಸರತಿ ಸಾಲಿನಲ್ಲಿ ನಿಂತು ಪತ್ನಿ ಉಷಾ ಶಿವಕುಮಾರ್, ಮಗಳು ಐಶ್ವರ್ಯ ಜೊತೆ ಮತದಾನ

    ಮಧ್ಯಾಹ್ನ 01: 25:  ಮಾಗಡಿಯ ಹುಲಿಕಲ್ ನಲ್ಲಿ ಸಾಲುಮರದ ತಿಮ್ಮಕ್ಕರಿಂದ ಮತದಾನ. ನಾನು ಮತದಾನ ಮಾಡಿದ್ದೇನೆ, ನೀವು ವೋಟ್ ಹಾಕಿ ಎಂದು ತಿಮ್ಮಕ್ಕರಿಂದ ಮತದಾರರಿಗೆ ಪ್ರೋತ್ಸಾಹ

    ಮಧ್ಯಾಹ್ನ 01: 20: ವರುಣಾ ಕ್ಷೇತ್ರದ ಸಿದ್ದರಾಮನ ಹುಂಡಿಯಲ್ಲಿ ಮತ ಚಲಾವಣೆ ಮಾಡಿದ ಸಿಎಂ ಸಿದ್ದರಾಮಯ್ಯ ಮತ್ತು ಪುತ್ರ ಯತೀಂದ್ರ

    ಮಧ್ಯಾಹ್ನ 01: 10: ಇವತ್ತು ಹಾಲಿ ಡೇ ಅಂತಾ ಟ್ರೀಟ್ ಮಾಡ್ಬೇಡಿ. ಬನ್ನಿ ಎಲ್ಲರೂ ನಿಮ್ಮ ಹಕ್ಕನ್ನು ಚಲಾಯಿಸಿ: ನಟಿ ರಾಧಿಕಾ ಪಂಡಿತ್

    ಮಧ್ಯಾಹ್ನ 01: 00:  ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ ನಕಲಿ ವೋಟರ್ ಐಡಿ ಹಂಚುತ್ತಿದ್ದವರ ಬಂಧನ

    ಮಧ್ಯಾಹ್ನ 12.50: ಧಾರವಾಡ: ಮದುವೆ ಮನೆಯಿಂದ ನೇರವಾಗಿ ಮತಗಟ್ಟೆಗೆ ಆಗಮಿಸಿದ ಮಲ್ಲಿಕಾರ್ಜುನ್ ಗಾಮನಗಟ್ಟಿ ಮತ್ತು ‌ನಿಖಿತಾ -ಧಾರವಾಡದ ಕಾಮನಕಟ್ಟಿ ಬಡಾವಣೆಯ ಕನ್ನಡ ಶಾಲೆಯ ಮತಗಟ್ಟೆ ಸಂಖ್ಯೆ ೧೯೧ (ಎ) ಆಗಮಿಸಿ ಮತದಾನ ಮಾಡಿದ ನವ ದಂಪತಿ

    ಮಧ್ಯಾಹ್ನ 12.30:  ಮೈಸೂರಿನ ಸಿದ್ದರಾಮನ ಹುಂಡಿಯಲ್ಲಿ ಮತ ಚಲಾಯಿಸಲಿರುವ ಸಿಎಂ ಸಿದ್ದರಾಮಯ್ಯ

    ಮಧ್ಯಾಹ್ನ 12.20: ಬಳ್ಳಾರಿಯ ದೇವಿ ನಗರದ ಬೂತ್ ೫೨ ರಲ್ಲಿ ಪತ್ನಿ ಭಾಗ್ಯಲಕ್ಷ್ಮೀ  ಯೊಂದಿಗೆ ಆಗಮಿಸಿ ಮತ ಚಲಾವಣೆ ಮಾಡಿದ ಸಂಸದ ಶ್ರೀರಾಮುಲು

    ಮಧ್ಯಾಹ್ನ 12.10:  ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ರಾಚೇನಹಳ್ಳಿ ಬೂತ್ ನಂ 326 ನಲ್ಲಿ ಮತ ಚಲಾಯಿಸಿದ ನಟ ಶಿವರಾಜ್ ಕುಮಾರ್

    ಮಧ್ಯಾಹ್ನ 12.10: ಇದೂವರೆಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.31ರಷ್ಟು ಮತದಾನ

    ಮಧ್ಯಾಹ್ನ 12.05: ಬೆಂಗಳೂರು-ತುಮಕೂರು ಹೆದ್ದಾರಿಯಲ್ಲಿ ಕಿ.ಮೀ.ಗಟ್ಟಲೇ ಟ್ರಾಫಿಕ್ ಜಾಮ್-ವೋಟ್ ಹಾಕಲು ತಮ್ಮ ಸ್ವಂತ ಊರುಗಳಿಗೆ ತೆರಳುತ್ತಿರುವ ಮತದಾರರು

    ಮಧ್ಯಾಹ್ನ 12.00: ದಾವಣಗೆರೆಯಲ್ಲಿ ಮತದಾನದ ಫೋಟೋ ವೈರಲ್-ವೋಟ್ ಹಾಕಿದ್ದನ್ನು ಫೋಟೋ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಕೊಂಡ ಬಿಜೆಪಿ ಬೆಂಬಲಿಗ

    ಬೆಳಗ್ಗೆ 11.40: ದಾವಣಗೆರೆ ಮಾಯಕೊಂಡ ಕ್ಷೇತ್ರದಲ್ಲಿ ಮತದಾನ ಬಹಿಷ್ಕಾರ-ರಾಂಪುರ ಗ್ರಾಮದ ಮತಗಟ್ಟೆಯಲ್ಲಿ ಇದೂವರೆಗೂ ಯಾರು ಮತದಾನದ ಹಕ್ಕನ್ನು ಚಲಾಯಿಸಿಲ್ಲ. ಮೂಲಭೂತ ಸೌಕರ್ಯ ಒದಗಿಸದಿರುವದರಿಂದ ಮತದಾನ ಬಹಿಷ್ಕಾರ

    ಬೆಳಗ್ಗೆ 11:30: ಮೈಸೂರು: ಅಗ್ರಹಾರದ ಶ್ರೀಕಾಂತ ಮಹಿಳಾ ಪದವಿ ಪೂರ್ವ ಕಾಲೇಜಿಗೆ ಆಗಮಿಸಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಮತದಾನ. ರಾಜ ಪ್ರಭುತ್ವದಲ್ಲಿ ಪ್ರಜೆಗಳಿಗೆ ಏನು ಬೇಕೆಂಬುದನ್ನು ರಾಜರು ನಿರ್ಧರಿಸುತ್ತಿದ್ದರು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ಏನು ಬೇಕೆಂಬುದನ್ನು ಪ್ರಜೆಗಳೇ ನಿರ್ಧರಿಸುತ್ತಾರೆ‌. ಒಳ್ಳೆಯ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಲು ಕಡ್ಡಾಯವಾಗಿ ಮತದಾನ ಮಾಡಬೇಕು ಅಂತಾ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದ್ರು.

    ಬೆಳಗ್ಗೆ 11:20: 11 ಗಂಟೆಯವರಗೆ ರಾಜ್ಯಾದ್ಯಂತ ಶೇ.24ರಷ್ಟು ಮತದಾನ

    ಬೆಳಗ್ಗೆ 11:15: ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ , ಕ್ರಿಕೆಟಿಗ  ರಾಹುಲ್ ದ್ರಾವಿಡ್  ಮತದಾನ

    ಬೆಳಗ್ಗೆ 11:10:  ಕಲಬುರಗಿಯಲ್ಲಿ ಮತ ಚಲಾಯಿಸಿದ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ

    ಬೆಳಗ್ಗೆ 11:10: ಕೋಲಾರದ ಶ್ರೀನಿವಾಸಪುರದ ಚನ್ನಯ್ಯಗಾರಪಲ್ಲಿ ಮತಗಟ್ಡೆಯಲ್ಲಿ ತಾಂತ್ರಿಕ ದೋಷದಿಂದ 2 ಗಂಟೆಯಿಂದ ಮತದಾನ ಸ್ಥಗಿತ

    ಬೆಳಗ್ಗೆ 11:00: ದಾವಣಗೆರೆಯ ಜಗಳೂರು ಕ್ಷೇತ್ರದಲ್ಲಿ ಬಿರುಸಿನ ಮತದಾನ-ಪಿಂಕ್ ಮತಗಟ್ಟೆಗೆ ಖುಷಿಯಿಂದ ಬಂದು ಮತದಾನ ಮಾಡಿ ಸೆಲ್ಫಿಗೆ ಮೊರೆ ಹೋದ ಯುವತಿಯರು

    ಬೆಳಗ್ಗೆ 10:55: ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ದಂಪತಿಯಿಂದ ಮತದಾನ-ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮತ ಚಲಾವಣೆ ಮಾಡಿದ ಹೆಗ್ಗಡೆ ದಂಪತಿ

    ಬೆಳಗ್ಗೆ 10:40:  ಕೊಡಗಿನಲ್ಲಿ ಮತದಾನ ಮಾಡಿದ ಮದುಮಗಳು. ಹಸೆ ಮಣೆ ಏರುವ ಮೊದಲು ಮತ ಚಲಾಯಿಸಿದ ಯುವತಿ.  ಮಡಿಕೇರಿ ತಾಲೂಕಿನ ಕಾಂಡನಕೊಲ್ಲಿ ಗ್ರಾಮದ ಮತಗಟ್ಟೆ ಸಂಖ್ಯೆ 131 ರಲ್ಲಿ ಮತಚಲಾವಣೆ.

    ಬೆಳಗ್ಗೆ 10:30: ಅಂಡಿಜೆ ಗ್ರಾಮದಲ್ಲಿ  ಮತಹಾಕಲು ಹೋಗುತ್ತಿದ್ದ  70 ವರ್ಷದ ಜಾರಿಗೆದಡಿ ನಿವಾಸಿ 70 ವರ್ಷದ ಅಣ್ಣಿ ಅಚಾರ್ಯಗೆ ಹೃದಯಾಘಾತ

    ಬೆಳಗ್ಗೆ 10:30: ಯಾದಗಿರಿಯ ಕೋಳಿವಾಡ ಮತಗಟ್ಟೆ 38ರಲ್ಲಿ ಎಡವಟ್ಟು-ಮತ ಚಲಾಯಿಸಲು ಬಂದ ಮಹಿಳೆಗೆ ನಿಮ್ಮ ವೋಟ್ ಹಾಕಲಾಗಿದೆ ಎಂದ ಚುನಾವಣಾ ಅಧಿಕಾರಿಗಳು

    ಬೆಳಗ್ಗೆ 10:25: ತುಮಕೂರಿನಲ್ಲಿ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳಿಂದ ಮತದಾನ

    ಬೆಳಗ್ಗೆ 10:20: ಇವಿಎಂನಲ್ಲೇ ಕಾಂಗ್ರೆಸ್ ಪ್ರಚಾರ-ಇಲ್ಲೇ ವೋಟ್ ಹಾಕುವಂತೆ ಕಾಂಗ್ರೆಸ್ ಚಿನ್ಹೆ ಅಡಿಯಲ್ಲಿ ಕಪ್ಪು ಮಸಿ-ಬೆಳಗಾವಿ ಜಿಲ್ಲೆಯ ಯಮಕನಕರಡಿ ಕ್ಷೇತ್ರದ ಭರಮನಹಟ್ಟಿ ಬೂತ್ ನಲ್ಲಿ ಘಟನೆ-ಬಿಜೆಪಿ ಪ್ರತಿಭಟನೆ ಬಳಿಕ ಮತದಾನ ಸ್ಥಗಿತ

    ಬೆಳಗ್ಗೆ 10:10: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅರಕೇರಾ ಗ್ರಾಮದ ಮತಗಟ್ಟೆಯಲ್ಲಿ ಕುಟುಂಬ ಸಮೇತ ಆಗಮಿಸಿ ಕಾಂಗ್ರೆಸ್ ಅಭ್ಯರ್ಥಿ ಎ.ರಾಜಶೇಖರ್ ನಾಯಕ್, ಬಿಜೆಪಿ ಅಭ್ಯರ್ಥಿ ಕೆ.ಶಿವನಗೌಡ ನಾಯಕ್ ಮತ್ತು ಜೆಡಿಎಸ್ ಅಭ್ಯರ್ಥಿ ವೆಂಕಟೇಶ್ ಪೂಜಾರಿ ಮತದಾನ

    ಬೆಳಗ್ಗೆ 10:05: ಬೀದರ್ ಜಿಲ್ಲೆಯದ್ಯಾಂತ ಈವರೆಗೆ ಶೇಕಡಾ 7ರಷ್ಟು ಮತದಾನ.
    ಕೊಡಗು ಜಿಲ್ಲೆಯದ್ಯಾಂತ ಈವರೆಗೆ ಶೇಕಡಾ 10ರಷ್ಟು ಮತದಾನ.
    ಧಾರವಾಡ ಜಿಲ್ಲೆಯದ್ಯಾಂತ ಈವರೆಗೆ ಶೇಕಡಾ 8.72ರಷ್ಟು ಮತದಾನ.

    ಬೆಳಗ್ಗೆ 10:00: ಚಿತ್ತಾಪುರ ತಾಲೂಕಿನ ಗುಂಡಗೂರ್ತಿ ಗ್ರಾಮದ ಮತಗಟ್ಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಮತದಾನ- ಪತ್ನಿ ಶೃತಿ ಜೊತೆ ಆಗಮಿಸಿ ಹಕ್ಕು ಚಲಾಯಿಸಿದ ಪ್ರಿಯಾಂಕ್ ಖರ್ಗೆ

    ಮಂಗಳೂರಿನ ಬೋಂದೆಲ್ ಸೇಂಟ್ ಲಾರೆನ್ಸ್ ಮೀಡಿಯಂ ಶಾಲೆಯಲ್ಲಿ ಮತ ಚಲಾಯಿಸಿ ಮದುವೆಗೆ ತೆರಳಿದ ಮದುಮಗಳು

    ಬೆಳಗ್ಗೆ 09:55: ರಾಮನಗರ ಜಿಲ್ಲೆಯದ್ಯಾಂತ ಬೆಳಗ್ಗೆ 7 ಗಂಟೆಯಿಂದ 9 ಗಂಟೆವರೆಗೆ ಶೇಕಡಾ 7ರಷ್ಟು ಮತದಾನ.

    ಬೆಳಗ್ಗೆ 09:52: ಚಿಕ್ಕಬಳ್ಳಾಪುರ: ಸರದಿ ಸಾಲಿನಲ್ಲಿ ನಿಂತು ನಗರಸಭೆಯ ಮತಗಟ್ಟೆ ಸಂಖ್ಯೆ 163 ರಲ್ಲಿ ಪತ್ನಿ ಮಾಲತಿ ಜೊತೆ ಸಂಸದ ವೀರಪ್ಪ ಮೊಯ್ಲಿ ಮತದಾನ.

    ಬೆಳಗ್ಗೆ 09:50: ಯಾದಗಿರಿ ಜಿಲ್ಲೆಯದ್ಯಾಂತ ಬೆಳಗ್ಗೆ 7 ಗಂಟೆಯಿಂದ 9 ಗಂಟೆವರೆಗೆ ಶೇಕಡಾ 11 ರಷ್ಟು ಮತದಾನ.

    ಬೆಳಗ್ಗೆ 09:40: ಚಾಮರಾಜನಗರ ಜಿಲ್ಲೆಯದ್ಯಾಂತ ಬೆಳಗ್ಗೆ 7 ಗಂಟೆಯಿಂದ 9 ಗಂಟೆವರೆಗೆ ಶೇಕಡಾ 2.37 ರಷ್ಟು ಮತದಾನ.

    ಬೆಳಗ್ಗೆ 09:40: ಉಡುಪಿಯಲ್ಲಿ ಶೇ9.24 ಮತದಾನ: ಜಿಲ್ಲೆಯಲ್ಲಿ ಬೆಳಗ್ಗೆ 7 ಗಂಟೆಯಿಂದ 9 ರವರೆಗೆ 9.24% ಮತದಾನ,ಬೈಂದೂರು 6.43%,ಕುಂದಾಪುರ 9.96%, ಉಡುಪಿ 8.65%, ಕಾಪು 10.41%, ಕಾರ್ಕಳ 11.15%

    ಬೆಳಗ್ಗೆ 09:36: ಮಾಜಿ ಸಚಿವ, ಪತಿ ಮಹದೇವಪ್ರಸಾದ್ ಸಮಾಧಿಗೆ ಪೂಜೆ ಸಲ್ಲಿಸಿ ಗುಂಡ್ಲುಪೇಟೆ ಕಾಂಗ್ರೆಸ್ ಅಭ್ಯರ್ಥಿ ಗೀತಾಮಹದೇವಪ್ರಸಾದ್ ಕುಟುಂಬ ಸಮೇತ ಮತದಾನ – ಪೂಜೆ ಸಲ್ಲಿಸುವಾಗ ಪತಿ ನೆನದು ಭಾವುಕರಾದ ಗೀತಾಮಹದೇವಪ್ರಸಾದ್

    ಬೆಳಗ್ಗೆ 09:35: ಅಫಜಲಪುರ ಬಿಜೆಪಿ ಮಾಲೀಕಯ್ಯ ಗುತ್ತೇದಾರ್ ಕುಟುಂಬ ಸಮೇತ ಮತದಾನ, ಸ್ವಗ್ರಾಮ ಸ್ಟೇಷನ್ ಗಾಣಗಾಪುರದಲ್ಲಿ ಮತದಾನ-ಜೇವರ್ಗಿ ಬಿಜೆಪಿ ಅಭ್ಯರ್ಥಿ ದೊಡ್ಡಪ್ಪಗೌಡ ಪಾಟೀಲ್ ಮತದಾನ-ಕಲಬುರಗಿ ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ್ & ಬಿಜೆಪಿ ಅಭ್ಯರ್ಥಿ ದತ್ತಾತ್ರೇಯ ಪಾಟೀಲ್ ರೇವೂರ್ ಮತದಾನ

    ಬೆಳಗ್ಗೆ 09:30: ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕಿನ ಉಜ್ಜಯಿನಿ ಗ್ರಾಮದಲ್ಲಿ ಶ್ರೀ ಜಗದ್ಗುರು ಮರುಳಸಿದ್ಧೇಶ್ವರ ಕ್ಷೇತ್ರದ ಸಮೀಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಶ್ರೀ ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳಿಂದ ಮತದಾನ

    ಬೆಳಗ್ಗೆ 09:25:  ನಗರದ ನಿಜಲಿಂಗಪ್ಪ ಬಡಾವಣೆ ಯಲ್ಲಿರುವ ಮಾಗನೂರು ಬಸಪ್ಪ ಶಾಲೆಯಲ್ಲಿ ದಾವಣಗೆರೆ ಜಿಲ್ಲೆಯ ಸಂಸದ ಜಿ.ಎಂ.ಸಿದ್ದೇಶ್ವರ್ ಮತದಾನ

    ಬೆಳಗ್ಗೆ 09:20: ಹಾಸನ: ಹೊಳೆನರಸೀಪುರ ತಾಲೂಕು ಪಡುವಲಹಿಪ್ಪೆಯಲ್ಲಿ ಮಾಜಿ‌ ಪ್ರಧಾನಿ‌ ಹೆಚ್.ಡಿ.ದೇವೇಗೌಡರಿಂದ ಮತದಾನ-ಮತಗಟ್ಟೆ ಸಂಖ್ಯೆ ೨೪೪, ಗೌಡರೊಂದಿಗೆ ಪತ್ನಿ ಚನ್ನಮ್ಮ, ಪುತ್ರ ರೇವಣ್ಣ, ಸೊಸೆ ಭವಾನಿ, ಮೊಮ್ಮಗ ಪ್ರಜ್ವಲ್ ರಿಂದಲೂ ಮತದಾನ

    ಬೆಳಗ್ಗೆ 09:15: ಧಾರವಾಡದ ಪವನ್ ಸ್ಕೂಲ್‌ನ ಮತಗಟ್ಟೆ ಸಂಖ್ಯೆ 171ರಲ್ಲಿ ಮತ ಚಲಾಯಿಸಿದ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ

    ಬೆಳಗ್ಗೆ 09:12: ರಾಯಚೂರಿನ ಲಿಂಗಸುಗೂರಿನ ಕಡದರಗಡ್ಡಿ ಗ್ರಾಮದಲ್ಲಿ ಮತದಾನ ಬಹಿಷ್ಕಾರ. ಕೃಷ್ಣನದಿಯಲ್ಲಿ ನಡುಗಡ್ಡೆಯಾಗಿರುವ  ಗ್ರಾಮಕ್ಕೆ ಸೇತುವೆ ನಿರ್ಮಾಣದ ಬೇಡಿಕೆ ಗೆ ಸ್ಪಂದಿಸದ ಹಿನ್ನೆಲೆ ಬಹಿಷ್ಕಾರ. ಚುನಾವಣಾ ಅಧಿಕಾರಿಗಳಿಂದ ಮತದಾರರನ್ನ ಒಲಿಸುವ ಕಾರ್ಯ.

    ಬೆಳಗ್ಗೆ 09:10 ಎಲ್ಲರೂ ಮತದಾನ ಮಾಡಿ, ರಾಜ್ಯದ ಅಭಿವೃದ್ಧಿ ಜನರ ಕಷ್ಟಗಳಿಗೆ ಸ್ವಂದಿಸುವಂತವರಿಗೆ ಮತಹಾಕಿ  ನಿರ್ಮಲಾನಂದನಾಥ ಸ್ವಾಮೀಜಿ

    ಬೆಳಗ್ಗೆ 09:05 ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಆಸ್ಪತ್ರೆಗೆ ದಾಖಲು-ಸ್ವತಂತ್ರ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಎಂ ರಾಜಣ್ಣ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ದಾಖಲು-ಲೋ ಬಿಪಿ ಸಮಸ್ಯೆ ಯಿಂದ ಆಸ್ಪತ್ರೆಗೆ ದಾಖಲಾದ ಎಂ ರಾಜಣ್ಣ

    ಬೆಳಗ್ಗೆ 09:00 ಮಂಗಳೂರಿನ ಬಂಟ್ವಾಳದಲ್ಲಿ ತೊಡಂಬಿಲದಲ್ಲಿ ಬೆಂಬಲಿಗರೊಂದಿಗೆ ಆಗಮಿಸಿ ಸೇಕ್ರೆಡ್ ಹಾರ್ಟ್ ಅನುದಾನಿತ ಶಾಲೆಯಲ್ಲಿ ಮತದಾನ ಮಾಡಿದ ಸಚಿವ ರಮಾನಾಥ ರೈ

    ಬೆಳಗ್ಗೆ 08: 55 ಪಾಂಡವಪುರದ ಕ್ಯಾತನಹಳ್ಳಿ ಗ್ರಾಮದಲ್ಲಿ ಮೇಲುಕೋಟೆ ಕ್ಷೇತ್ರದ ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಮತದಾನ

    ಬೆಳಗ್ಗೆ 08: 50 ಬದಾಮಿಯಲ್ಲಿ ಚುರುಕುಗೊಂಡ ಮತದಾನ -ಬಾದಾಮಿಯಲ್ಲಿ ಬೆಳಗ್ಗೆಯಿಂದಲ್ಲೇ ಮತಗಟ್ಟೆಗೆ ಬಂದು ವೋಟ್ ಹಾಕುತ್ತಿರುವ ಮತದಾರರು

    ಬೆಳಗ್ಗೆ 08: 50 ಕುಬಟೂರಿನಲ್ಲಿ ತಂದೆ ಬಂಗಾರಪ್ಪ ಹಾಗೂ ತಾಯಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಸೊರಬ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ. ಊರ ದೇವತೆ ದ್ಯಾಮವ್ವನ ಗುಡಿಯಲ್ಲಿ ಪೂಜೆ ಸಲ್ಲಿಸಿ ಮತದಾನ

    ಬೆಳಗ್ಗೆ 08: 45  ಸಾಲುಬಿಟ್ಟು  ಮುಂದೆ ಹೋಗಿ ಮತದಾನ ಮಾಡಿದ್ದಕ್ಕೆ ಜಗ್ಗೇಶ್ ಗೆ ಸಾರ್ವಜನಿಕರಿಂದ ತರಾಟೆ

    ಬೆಳಗ್ಗೆ: 08:40 ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಿಂದ ಜಗ್ಗೇಶ್ ರಿಂದ ಮತದಾನ

    ಬೆಳಗ್ಗೆ: 08: 15  ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ ಯದುವೀರ್ ಒಡೆಯರ್

     

  • ಬಸ್‍ಗಳಿಲ್ಲದೆ ಟಾಪ್ ನಲ್ಲೇ ಕುಳಿತು ಪ್ರಯಾಣಿಸ್ತಿರೋ ಮತದಾರರು!

    ಬಸ್‍ಗಳಿಲ್ಲದೆ ಟಾಪ್ ನಲ್ಲೇ ಕುಳಿತು ಪ್ರಯಾಣಿಸ್ತಿರೋ ಮತದಾರರು!

    ಬೆಂಗಳೂರು: ಇಂದು ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ಆರಂಭವಾಗಿದೆ. ನಗರದಲ್ಲಿ ನೆಲೆಸಿರುವ ಮತದಾರರು, ಮತದಾನ ಮಾಡುವುದಕ್ಕೆ ಊರಿಗೆ ತೆರಳಲು ಬಸ್ ಇಲ್ಲದೆ ಪರದಾಡುತ್ತಿದ್ದಾರೆ.

    ಸಾರಿಗೆ ಬಸ್‍ಗಳನ್ನು ಚುನಾವಣೆ ಕೆಲಸಕ್ಕಾಗಿ ಬಳಸಿಕೊಳ್ಳಲಾಗಿದೆ. ಹೀಗಾಗಿ ಸಾರಿಗೆ ಬಸ್‍ಗಳಿಲ್ಲದ ಮತದಾರರು ಖಾಸಗಿ ವಾಹನಗಳ ಮೊರೆ ಹೋಗಿದ್ದಾರೆ. ಇಂದು ಬೆಳ್ಳಂಬೆಳಗ್ಗೆಯಿಂದಲೇ ನೆಲಮಂಗಲದ ಟೋಲ್ ಗೇಟ್ ಬಳಿ ಸಖತ್ ಟ್ರಾಫಿಕ್ ಜಾಮ್ ಉಂಟಾಗಿದೆ. ಕ್ಕಿಕಿರಿದು ತುಂಬಿರುವ ಬಸ್‍ಗಳಲ್ಲಿ ಪ್ರಯಾಣಿಸಲು ಸಾಧ್ಯವಾಗದೇ ಮಹಿಳೆಯರು, ವೃದ್ಧರು ಪರದಾಡುತ್ತಿದ್ದಾರೆ.

    ರಾತ್ರಿಯಿಂದಲೇ ಊರಿಗೆ ತೆರಳಲು ಸಜ್ಜಾಗಿದ್ದ ಪ್ರಯಾಣಿಕರು ಸಂಜೆಯಿಂದ ಕಾದು ಕುಳಿತ್ರೂ, ಬಸ್ ವ್ಯವಸ್ಥೆ ಇಲ್ಲ ಪರಿಣಾಮವಾಗಿ ಪ್ರಯಾಣಿಕರು ಮೆಜೆಸ್ಟಿಕ್‍ನ ಡಿಪೋದ ಮುಂದೆ ಸರ್ಕಾರಕ್ಕೆ ಧಿಕ್ಕಾರ ಕೂಗಿದ್ದಾರೆ.

    ಅಷ್ಟೇ ಅಲ್ಲದೇ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಂಚರಿಸುತ್ತಿದ್ದ ಬಸ್‍ಗಳನ್ನ ತಡೆಯಲು ಮುಂದಾಗಿದ್ದಾರೆ. ಒಂದು ತಿಂಗಳು ಮುಂಚಿತವಾಗಿ ಬಸ್‍ಗಾಗಿ ಟಿಕೆಟ್ ಬುಕ್ ಮಾಡಿದರೂ ಬಸ್ ವ್ಯವಸ್ಥೆ ಇರಲಿಲ್ಲ. ಸರ್ಕಾರ ರಚನೆ ಮಾಡುವುದಕ್ಕೆ ನಮ್ಮ ವೋಟ್ ಬೇಕು. ಜನರ ಸಮಸ್ಯೆ ಪರಿಹರಿಸುವುದಕ್ಕೆ ಯಾವ ಅಧಿಕಾರಿಯೂ ಬರಲ್ಲ. ಇಂತಹವರಿಗೆ ನಾವು ಮತದಾನ ಮಾಡಬೇಕು ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.