Tag: Karnataka Elections 2018

  • ಉಡುಪಿಯ ಇತಿಹಾಸದಲ್ಲೇ ದಾಖಲೆ ಬರೆದ ಬಿಜೆಪಿ

    ಉಡುಪಿಯ ಇತಿಹಾಸದಲ್ಲೇ ದಾಖಲೆ ಬರೆದ ಬಿಜೆಪಿ

    ಉಡುಪಿ: ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಇತಿಹಾಸದಲ್ಲಿಯೇ ಉಡುಪಿಯಲ್ಲಿ ಈ ಬಾರಿ ಬಿಜೆಪಿ ದಾಖಲೆ ನಿರ್ಮಿಸಿದೆ.

    ಜಿಲ್ಲೆಯ 5 ಕ್ಷೇತ್ರಗಳಾದ ಬೈಂದೂರು, ಕುಂದಾಪುರ, ಉಡುಪಿ, ಕಾಪು, ಕಾರ್ಕಳದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿದೆ. ಈ ಮೂಲಕ ಬಿಜೆಪಿ ಉಡುಪಿಯ ಎಲ್ಲಾ ವಿಧಾನ ಸಭಾ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.

    2013ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಈ ಬಾರಿ ಗೆಲ್ಲಬಹುದು ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಬಿಜೆಪಿಯ ರಘುಪತಿ ಭಟ್ ಎದುರು ಸೋತಿದ್ದಾರೆ.

    ಕ್ಷೇತ್ರ, ಅಭ್ಯರ್ಥಿ ಹೆಸರು ಹಾಗೂ ಪಕ್ಷದ ವಿವರ ಇಲ್ಲಿದೆ:
    ಬೈಂದೂರು – ಬಿ.ಎಂ ಸುಕುಮಾರ ಶೆಟ್ಟಿ(ಬಿಜೆಪಿ) – ಗೋಪಾಲ ಪೂಜಾರಿ(ಕಾಂಗ್ರೆಸ್)
    ಕುಂದಾಪುರ – ಹಾಲಾಡಿ ಶ್ರೀನಿವಾಸ ಶೆಟ್ಟಿ(ಬಿಜೆಪಿ) – ರಾಕೇಶ್ ಮಲ್ಲಿ(ಕಾಂಗ್ರೆಸ್)
    ಉಡುಪಿ – ರಘುಪತಿ ಭಟ್(ಬಿಜೆಪಿ) – ಪ್ರಮೋದ್ ಮಧ್ವರಾಜ್(ಕಾಂಗ್ರೆಸ್)
    ಕಾಪು – ಲಾಲಾಜಿ ಮೆಂಡನ್(ಬಿಜೆಪಿ) – ವಿನಯ್ ಕುಮಾರ್ ಸೊರಕೆ(ಕಾಂಗ್ರೆಸ್)
    ಕಾರ್ಕಳ – ಸುನೀಲ್ ಕುಮಾರ್(ಬಿಜೆಪಿ) – ಗೋಪಾಲ ಬಂಡಾರಿ(ಕಾಂಗ್ರೆಸ್)

  • ಎರಡರಲ್ಲಿ ಎಚ್‍ಡಿಕೆ ಗೆಲುವು: ಕನಕಪುರದಲ್ಲಿ ಡಿಕೆಶಿಗೆ ಜಯ!

    ಎರಡರಲ್ಲಿ ಎಚ್‍ಡಿಕೆ ಗೆಲುವು: ಕನಕಪುರದಲ್ಲಿ ಡಿಕೆಶಿಗೆ ಜಯ!

    ರಾಮನಗರ: ಇಂದು ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಏಣಿಕೆ ನಡೆದಿದ್ದು, ರಾಮನಗರ ಕ್ಷೇತ್ರದಲ್ಲಿ ಜೆಡಿಎಸ್ ಮೂರು ಕ್ಷೇತ್ರದಲ್ಲಿ ಜಯ ಸಾಧಿಸಿದೆ.

    ಜಿಲ್ಲೆಯಲ್ಲಿ ರಾಮನಗರ, ಮಾಗಡಿ, ಚನ್ನಪಟ್ಟಣ ಮತ್ತು ಕನಕಪುರ ಒಟ್ಟು ನಾಲ್ಕು ವಿಧಾನಸಭಾ ಕ್ಷೇತ್ರಗಳಿದ್ದು, ಮಾಗಡಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ. ಬಾಲಕೃಷ್ಣ, ಬಿಜೆಪಿ ಅಭ್ಯರ್ಥಿ ಹನುಮಂತರಾಜು ಹಾಗೂ ಜೆಡಿಎಸ್ ಅಭ್ಯರ್ಥಿ ಎ. ಮಂಜುನಾಥ್ ಅವರು ಸ್ಪರ್ಧಿಸಿದ್ದರು. ಎ.ಮಂಜುನಾಥ್ 51,425 ಮತಗಳ ಅಂತರದಿಂದ ಗೆದ್ದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ. ಬಾಲಕೃಷ್ಣ- 68,065 ಮತಗಳನ್ನು ಪಡೆದರೆ, ಎ.ಮಂಜುನಾಥ್ 1,19,490 ಮತಗಳನ್ನು ಪಡೆದರು.

    ರಾಮನಗರ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಇಕ್ಬಾಲ್ ಹುಸೇನ್, ಬಿಜೆಪಿಯಿಂದ ಎಚ್. ಲೀಲಾವತಿ ಹಾಗೂ ಜೆಡಿಎಸ್ ನಿಂದ ಎಚ್.ಡಿ. ಕುಮಾರಸ್ವಾಮಿ ಅವರು ಸ್ಪರ್ಧಿಸಿದ್ದರು. ಕುಮಾರಸ್ವಾಮಿ 22,289 ಮತಗಳ ಅಂತರದಿಂದ ಗೆದ್ದುಕೊಂಡಿದ್ದಾರೆ. ಕಾಂಗ್ರೆಸ್‍ ನ ಇಕ್ಬಾಲ್ ಹುಸೇನ್ 69,788 ಮತಗಳನ್ನು ಪಡೆದರೆ ಕುಮಾರಸ್ವಾಮಿ 92,077 ಮತಗಳನ್ನು ಪಡೆಯುವ ಮೂಲಕ ಜಯಗಳಿಸಿದರು.

    ಕನಕಪುರ ಕ್ಷೇತ್ರದಿಂದ ಇಂಧನ ಸಚಿವ ಡಿ.ಕೆ. ಶಿವಕುಮಾರ್, ಬಿಜೆಪಿಯಿಂದ ನಂದಿನಿ ಗೌಡ ಹಾಗೂ ಜೆಡಿಎಸ್ ಅಭ್ಯರ್ಥಿ ನಾರಾಯಣಗೌಡ ಅವರು ಸ್ಪರ್ಧಿಸಿದ್ದರು. ಡಿಕೆ ಶಿವಕುಮಾರ್ ಬರೋಬ್ಬರಿ 79,909 ಮತಗಳ ಅಂತರದಲ್ಲಿ ಗೆಲುವನ್ನು ಸಾಧಿಸಿದ್ದಾರೆ. ಜೆಡಿಎಸ್ ನ ನಾರಾಯಣಗೌಡ 47,643 ಮತಗಳನ್ನು ಪಡೆದರೆ ಡಿ.ಕೆ. ಶಿವಕುಮಾರ್ 1,27,552 ಮತಗಳನ್ನು ಪಡೆದರು.

    ಚನ್ನಪಟ್ಟಣದಲ್ಲಿ ಕ್ಷೇತ್ರದಲ್ಲೂ ಎಚ್.ಡಿ ಕುಮಾರಸ್ವಾಮಿ 21,530 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಎಚ್‍ಡಿಕೆ 87,995 ಮತಗಳನ್ನು ಪಡೆದರೆ ಸಿಪಿ ಯೋಗೇಶ್ವರ್ 66,465 ಮತಗಳನ್ನು ಪಡೆದರು.

  • ದೇವೇಗೌಡರ ಕೋಟೆಯಲ್ಲಿ ಅರಳಿತು ಕಮಲ!

    ದೇವೇಗೌಡರ ಕೋಟೆಯಲ್ಲಿ ಅರಳಿತು ಕಮಲ!

    ಹಾಸನ: ಮಾಜಿ ಪ್ರಧಾನಿ ದೇವೇಗೌಡರ ಕೋಟೆಯಲ್ಲಿ ಈ ಬಾರಿ ಕಮಲ ಅರಳಿದೆ. ಮೊದಲ ಬಾರಿಗೆ ಹಾಸನದಿಂದ ಸ್ಪರ್ಧಿಸಿದ್ದ ಪ್ರೀತಂ ಗೌಡ ಜಯಗಳಿಸಿದ್ದಾರೆ.

    ಬಿಜೆಪಿಯ ಪ್ರೀತಮ್ ಗೌಡ 63,334 ಮತ ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ನ ಎಸ್.ಹೆಚ್.ಪ್ರಕಾಶ್ 50342 ಮತ ಮತ್ತು ಕಾಂಗ್ರೆಸ್ ನ ಹೆಚ್.ಕೆ.ಮಹೇಶ್ 38,101 ಮತಗಳನ್ನು ಪಡೆದಿದ್ದಾರೆ.

    ಹೊಳೆನರಸೀಪುರ ಜೆಡಿಎಸ್ ಅಭ್ಯರ್ಥಿ ಹೆಚ್.ಡಿ. ರೇವಣ್ಣ 1,01,104 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಬಾಗೂರು ಮಂಜೇಗೌಡ 62,316 ಮತಗಳನ್ನು ಪಡೆಯುವ ಮೂಲಕ ರೇವಣ್ಣ 38,788 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

    ಶ್ರವಣಬೆಳಗೊಳ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್ ಪುಟ್ಟೇಗೌಡ, ಬಿಜೆಪಿಯಿಂದ ಶಿವನಂಜೇಗೌಡ ಹಾಗೂ ಜೆಡಿಎಸ್ ನಿಂದ ಸಿ.ಎನ್ ಬಾಲಕೃಷ್ಣ ಸ್ಪರ್ಧಿಸಿದ್ದರು. ಜೆಡಿಎಸ್ ಅಭ್ಯರ್ಥಿ ಸಿ.ಎನ್. ಬಾಲಕೃಷ್ಣ 1,05,516 ಗೆಲುವು ಸಾಧಿಸಿದ್ದು, ಸಿ.ಎಸ್ ಪುಟ್ಟೇಗೌಡ 52,504 ಮತ ಮತ್ತು ಶಿವನಂಜೇಗೌಡ 7,506 ಮತಗಳನ್ನು ಪಡೆದಿದ್ದಾರೆ.

    ಸಕಲೇಶಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ, ಡಾ.ಸಿದ್ದಯ್ಯ, ಬಿಜೆಪಿಯಿಂದ ನಾರ್ವೆ ಸೋಮಶೇಖರ್ ಹಾಗೂ ಜೆಡಿಎಸ್ ನಿಂದ ಹೆಚ್.ಕೆ.ಕುಮಾರಸ್ವಾಮಿ ಅವರು ಸ್ಪರ್ಧಿಸಿದ್ದರು. ಹೆಚ್.ಕೆ. ಕುಮಾರಸ್ವಾಮಿ 62,262 ಮತ ಪಡೆದು ಗೆಲುವು ಸಾದಿಸಿದ್ದಾರೆ. ನಾರ್ವೆ ಸೋಮಶೇಖರ್ 57,320 ಮತ ಮತ್ತು ಕಾಂಗ್ರೆಸ್ ನ ಡಾ.ಸಿದ್ದಯ್ಯ 36,895 ಮತಗಳನ್ನು ಪಡೆದಿದ್ದಾರೆ.

    ಬೇಲೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ, ಕೀರ್ತನಾ ರುದ್ರೇಶ್ ಗೌಡ, ಬಿಜೆಪಿಯಿಂದ ಹೆಚ್.ಕೆ.ಸುರೇಶ್ ಹಾಗೂ ಜೆಡಿಎಸ್ ನಿಂದ ಲಿಂಗೇಶ್ ಅವರು ಸ್ಪರ್ಧಿಸಿದ್ದರು. ಜೆಡಿಎಸ್ ನಿಂದ ಲಿಂಗೇಶ್ 19,984 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ನ ಕೀರ್ತನಾ ರುದ್ರೇಶ್ ಗೌಡ್ 39,554 ಮತ್ತು ಬಿಜೆಪಿಯ ಹೆಚ್.ಕೆ.ಸುರೇಶ್ 44,158 ಮತಗಳನ್ನು ಪಡೆದಿದ್ದಾರೆ. ಲಿಂಗೇಶ್ ಒಟ್ಟು 64,122 ಮತಗಳನ್ನು ಪಡೆದಿದ್ದಾರೆ.

    ಅರಸೀಕೆರೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಜೆ.ಬಿ. ಶಶಿಧರ್, ಬಿಜೆಪಿ ಅಭ್ಯರ್ಥಿ ಮರಿಸ್ವಾಮಿ ಹಾಗೂ ಜೆಡಿಎಸ್ ಅಭ್ಯರ್ಥಿ ಶಿವಲಿಂಗೇಗೌಡ ಸ್ಪರ್ಧಿಸಿದ್ದರು. ಜೆಡಿಎಸ್ ಅಭ್ಯರ್ಥಿ ಶಿವಲಿಂಗೇಗೌಡ 93,986 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಇನ್ನು ಕಾಂಗ್ರೆಸ್ ನ ಶಶಿಧರ್ 50,297 ಮತಗಳನ್ನು ಪಡೆದಿದ್ದು, ಜೆಡಿಎಸ್ ಅಭ್ಯರ್ಥಿ ಶಿವಲಿಂಗೇಗೌಡ ಸುಮಾರು 43,689 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

    ಇನ್ನು ಅರಕಲಗೂಡು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ, ಎ.ಮಂಜು, ಬಿಜೆಪಿಯಿಂದ ಯೋಗರಮೇಶ್ ಹಾಗೂ ಜೆಡಿಎಸ್ ನಿಂದ ಎ.ಟಿ.ರಾಮಸ್ವಾಮಿ ಅವರು ಸ್ಪರ್ಧಿಸಿದ್ದರು. ಜೆಡಿಎಸ್ ನಿಂದ ಎ.ಟಿ.ರಾಮಸ್ವಾಮಿ 77,715 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ನ ಎ.ಮಂಜು 67,095 ಮತ ಮತ್ತು ಬಿಜೆಪಿಯ ಯೋಗಾರಮೇಶ್ 21,333 ಮತಗಳನ್ನು ಪಡೆದಿದ್ದಾರೆ.

  • ಕಾಂಗ್ರೆಸ್-ಜೆಡಿಎಸ್ ಮೊದಲೇ ಹೊಂದಾಣಿಕೆ ಆಗ್ಬೇಕಿತ್ತು: ಮಮತಾ ಬ್ಯಾನರ್ಜಿ

    ಕಾಂಗ್ರೆಸ್-ಜೆಡಿಎಸ್ ಮೊದಲೇ ಹೊಂದಾಣಿಕೆ ಆಗ್ಬೇಕಿತ್ತು: ಮಮತಾ ಬ್ಯಾನರ್ಜಿ

    ಬೆಂಗಳೂರು: ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕಮಾಡಿಕೊಳ್ಳಬೇಕಿತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

    ಟ್ವಟ್ಟರ್ ನಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಎಲ್ಲ ಅಭ್ಯರ್ಥಿಗಳಿಗೆ ಶುಭ ಕೋರಿದ್ದಾರೆ. ಈ ಮೊದಲೇ ಜೆಡಿಎಸ್ ನೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದರೆ ಅತಂತ್ರ ಪರಿಸ್ಥಿತಿ ನಿರ್ಮಾಣ ಆಗ್ತಿರಲಿಲ್ಲ ಎಂದು ಬರೆದುಕೊಂಡಿದ್ದಾರೆ.

    ಸದ್ಯದಲ್ಲಿ ಕರ್ನಾಟಕ ವಿಧಾನಸಭೆಯ ಫಲಿತಾಂಶ ಅತಂತ್ರವಾಗಿದ್ದು, ಈಗಾಗಲೇ ಕಾಂಗ್ರೆಸ್ ನಾವು ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಗೆ ಬೆಂಬಲ ನೀಡುತ್ತಿದ್ದೇವೆ ಅಂತಾ ಅಧಿಕೃತವಾಗಿ ತಿಳಿಸಿದ್ದಾರೆ. ಇನ್ನೂ ಕಾಂಗ್ರೆಸ್ ಮನವಿಗೆ ಜೆಡಿಎಸ್ ಹಾಗು ಪಕ್ಷದ ಮುಖಂಡರಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.

  • ಸೋಲಿಗೆ ಇವಿಎಂ ಮೆಷಿನ್ ಕಾರಣ ಅಂದ್ರು ಮೊಯಿದ್ದೀನ್ ಬಾವಾ!

    ಸೋಲಿಗೆ ಇವಿಎಂ ಮೆಷಿನ್ ಕಾರಣ ಅಂದ್ರು ಮೊಯಿದ್ದೀನ್ ಬಾವಾ!

    ಮಂಗಳೂರು: ಈ ಬಾರಿಯ ಚುನಾವಣೆಯಲ್ಲಿ ಸೋಲಿಗೆ ಇವಿಎಮ್ ಮಿಷನ್ ಕಾರಣ ಅಂತ ಮಂಗಳೂರು ಉತ್ತರ ಕ್ಷೇತ್ರ ದ ಕಾಂಗ್ರೆಸ್ ಅಭ್ಯರ್ಥಿ ಮೊಯಿದ್ದೀನ್ ಬಾವ ಆರೋಪಿಸಿದ್ದಾರೆ.

    ಫಲಿತಾಂಶ ಹೊರಬರುತ್ತಿದ್ದಂತೆಯೇ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವಿಎಮ್ ಮೆಷಿನ್ ನಲ್ಲಿ ಲೋಪ ಇದೆ. ಕೇವಲ 8 ಸಾವಿರ ಹಿಂದೂಗಳ ಮತಗಳು ಮಾತ್ರಾ ಇದೆ. ಮಿಷಿನ್ ನಲ್ಲಿ ಮೋಸ ಇದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಕೊಡ್ತೇನೆ ಹತ್ತು ದಿನದ ಹಿಂದೆ ಬಂದವರು ಗೆಲ್ಲುವುದರ ಹಿಂದೆ ಮೋಸ ಇದೆ ಅಂತ ಹೇಳಿದ್ದಾರೆ.

    ಬಿಜೆಪಿ ಅಭ್ಯರ್ಥಿ ಭರತ್ ಶೆಟ್ಟಿ ಎದುರು ಬಾವಾ ಸೋಲು ಕಂಡಿದ್ದಾರೆ.

     

     

  • ತೀರ್ಪಿನ ಮೊದಲೇ ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ

    ತೀರ್ಪಿನ ಮೊದಲೇ ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ

    ಮಂಗಳೂರು: ಇಂದು ಕರ್ನಾಟಕ ಕುರುಕ್ಷೇತ್ರದ ಫಲಿತಾಂಶ ಹೊರ ಬೀಳಲಿದೆ. ಈಗಾಗಲೇ ಚುನಾವಣಾ ಆಯೋಗ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಬೆಳಗ್ಗೆ 7ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ.

    ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್ ಲೋಬೋ ಬೆಂಬಲಿಗರು ಚುನಾವಣಾ ಫಲಿತಾಂಶದ ಮೊದಲೇ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಯುವ ಕಾಂಗ್ರೆಸ್ ಸದಸ್ಯರು ಮಂಗಳೂರಿನ ಫಳ್ನೀರ್ ಮಿಲಾಗ್ರಿಸ್ ವಾರ್ಡ್ ನಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಫಲಿತಾಂಶಕ್ಕೂ ಮೊದ್ಲೇ ಬಿಜೆಪಿ ಅಭ್ಯರ್ಥಿಯಿಂದ ವಿಜಯೋತ್ಸವ!

    ನಗರದ ಮಥಾಯಸ್ ಪಾರ್ಕ್ ಬಳಿಯೂ ತಡರಾತ್ರಿ ಕಾಂಗ್ರೆಸ್ ಸದಸ್ಯರು ಸಂಭ್ರಮ ಆಚರಣೆ ಮಾಡಿದ್ದಾರೆ. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‍ನಿಂದ ಜೆ.ಆರ್.ಲೋಬೋ, ಬಿಜೆಪಿಯಿಂದ ವೇದವ್ಯಾಸ ಕಾಮತ್ ಮತ್ತು ಜೆಡಿಎಸ್ ನಿಂದ ರತ್ನಾಕರ ಸುವರ್ಣ ಕಣದಲ್ಲಿದ್ದಾರೆ.

  • ಕಾಂಗ್ರೆಸ್ ನಿಯೋಗದಿಂದ ಚುನಾವಣಾ ಆಯೋಗಕ್ಕೆ ದೂರು

    ಕಾಂಗ್ರೆಸ್ ನಿಯೋಗದಿಂದ ಚುನಾವಣಾ ಆಯೋಗಕ್ಕೆ ದೂರು

    ಬೆಂಗಳೂರು: ಇವಿಎಂ ಮಶಿನ್ ಮತ್ತು ವಿವಿಪ್ಯಾಟ್ ಗಳನ್ನ ಹೊಂದಾಣಿಕೆ ಮಾಡುವಂತೆ ಕೋರಿ ಸೋಮವಾರ ತಡ ರಾತ್ರಿ ಕಾಂಗ್ರೆಸ್ ನಾಯಕರು ಮುಖ್ಯ ಚುಣಾವಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಚುಣಾವಣೆ ಮುಕ್ತಾಯವಾಗಿದ್ದು, ಇಂದು ಮತ ಎಣಿಕೆ ಇರುವ ಹಿನ್ನೆಲೆ ತಡರಾತ್ರಿ ಕಾಂಗ್ರೆಸ್ ನಾಯಕರು ಚುಣಾವಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಮನವಿ ಮಾಡಿಕೊಂಡಿದ್ದಾರೆ.

    ಕಾಂಗ್ರೆಸ್ ಮುಖಂಡ ಉಗ್ರಪ್ಪ ನೇತೃತ್ವದಲ್ಲಿ ಮನವಿ ಮಾಡಿಕೊಂಡಿದ್ದು, ಅವರಿಗೆ ಕೆಪಿಸಿಸಿ ಕಾರ್ಯದರ್ಶಿ ದಿನೇಶ್ ಗುಂಡುರಾವ್, ಕೃಷ್ಣ ಬೈರೆಗೌಡ ಹಾಗೂ ರಿಜ್ವಾನ್ ಅರ್ಷದ್ ರವರು ಸಾಥ್ ನೀಡಿದ್ದಾರೆ. ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಉಗ್ರಪ್ಪ, ಈಗಾಗಲೇ ಬಿಜೆಪಿ ಪಕ್ಷದ ನಾಯಕ ಜಗದೀಶ್ ಶೆಟ್ಟರ ಇವಿಎಂ ಮಶಿನ್ ಟ್ಯಾಂಪರಿಂಗ್ ಕುರಿತು ಹೇಳಿಕೆ ನೀಡಿದ್ದಾರೆ. ಇದು ರಾಜ್ಯದ ಜನರಲ್ಲಿ ಗೊಂದಲ ಸೃಷ್ಟಿಸಿದ್ದು, ಮಂಗಳವಾರ ನಡೆಯುವ ಮತ ಎಣಿಕೆ ಪ್ರಕ್ರಿಯೆಯಲ್ಲಿ ಇವಿಎಂ ಮಶಿನ್ ಮತ್ತು ವಿವಿಪ್ಯಾಟ್ ಗಳನ್ನ ಶೇ.100ರಷ್ಟು ಹೊಂದಾಣಿಕೆ ಮಾಡುವಂತೆ ಮನವಿ ಮಾಡಿದ್ದೇವೆ.

    ಬದಾಮಿಯಲ್ಲಿನ ಲಾಡ್ಜ್ ವೊಂದರಲ್ಲಿ ಅಂಚೆ ಮತ ಪತ್ರ ಸಿಕ್ಕಿರುವ ಕುರಿತು ಇದೀಗ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಕುರಿತು ಕೂಡ ನಿಷ್ಪಕ್ಷಪಾತ ತನಿಖೆ ಆಗುವಂತೆ ಕೋರಿದ್ದೇವೆ ಎಂದು ತಿಳಿಸಿದ್ರು.

    ಇದೇ ವೇಳೆ ಮಾತನಾಡಿದ ಚುಣಾವಣಾ ಮುಖ್ಯಾಧಿಕಾರಿ ಸಂಜೀವಕುಮಾರ್, ಬದಾಮಿಯಲ್ಲಿ ಸಿಕ್ಕಿರುವ ಅಂಚೆ ಮತ ಪತ್ರದ ಕುರಿತು ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಬದಾಮಿಯಲ್ಲಿನ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸರು ಲಾಡ್ಜ್ ನಲ್ಲಿ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಂಚೆ ಮತ ಪತ್ರ ದ ಕುರಿತು ಮಾಹಿತಿ ಇರುವ ಎರಡು ಪೇಜ್ ಗಳು ಮಾತ್ರ ಲಭ್ಯವಾಗಿದ್ದು, ಯಾವುದೇ ಅಂಚೆ ಮತ ಪತ್ರಗಳು ಲಭ್ಯವಾಗಿಲ್ಲ ಅಂದ್ರು.

    ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಬದಾಮಿ ಪೊಲೀಸರು ಸುದ್ದಿ ಪ್ರಸಾರ ಮಾಡಿದ್ದ ಪತ್ರಕರ್ತರನ್ನ ಪ್ರಶ್ನೆ ಮಾಡಲಾಗಿಯೂ ಕೂಡ ಯಾವುದೇ ಸಮರ್ಪಕ ಉತ್ತರ ಲಭಿಸಿರುವುದಿಲ್ಲ. ಹೀಗಾಗಿ ಇದು ಕೇವಲ ಗಾಳಿ ಸುದ್ದಿಯಾಗಿದ್ದು ಮಂಗಳವಾರ ಮತ ಎಣಿಕೆ ಇರುವುದರಿಂದ ಇಂತಹ ಗಾಳಿ ಸುದ್ದಿಗಳನ್ನ ಹಬ್ಬಿಸಬೇಡಿ. ಇನ್ನು ಇವಿಎಂ ಮಶಿನ್ ಮತ್ತು ವಿವಿಪ್ಯಾಟ್ ಗಳನ್ನ ಹೊಂದಾಣಿಕೆ ಮಾಡುವ ಕುರಿತು ಈಗಾಗಲೇ ಕಾಂಗ್ರೆಸ್ ನಾಯಕರು ಮನವಿ ಮಾಡಿಕೊಂಡಿದ್ದು ನಾವು ಪ್ರತಿ ಕ್ಷೇತ್ರದಲ್ಲಿ ರಾಂಡಮ್ ಆಗಿ ಹೊಂದಾಣಿಕೆ ಮಾಡುತ್ತೇವೆ ಎಂದರು.

  • ನನ್ನನ್ನು ಸೋಲಿಸಲು ಡಿಕೆಶಿ ಹಣದ ಹೊಳೆ ಹರಿಸಿದ್ದಾರೆ: ಯೋಗೇಶ್ವರ್

    ನನ್ನನ್ನು ಸೋಲಿಸಲು ಡಿಕೆಶಿ ಹಣದ ಹೊಳೆ ಹರಿಸಿದ್ದಾರೆ: ಯೋಗೇಶ್ವರ್

    ರಾಮನಗರ: ಕರ್ನಾಟಕ ವಿಧಾನ ಸಭಾ ಚುನಾವಣೆಯ ಮತದಾನ ಮುಗಿದಿದೆ. ಆದರೆ ಚುನಾವಣಾ ಫಲಿತಾಂಶಕ್ಕೆ ಒಂದು ದಿನ ಬಾಕಿ ಇರುವಾಗಲೇ ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಪಿ ಯೋಗೀಶ್ವರ್ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.

    ಫಲಿತಾಂಶದ ವಿಚಾರವಾಗಿ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮತನಾಡಿದ ಅವರು, ಸುಪಾರಿ ಕಿಲ್ಲರ್ ಎಚ್.ಎಂ ರೇವಣ್ಣ, ಸುಪಾರಿ ಕೊಟ್ಟಿದ್ದು ಡಿಕೆ ಬ್ರದರ್ಸ್, ಎಚ್‍ಡಿಕೆ ನೇರ ಎದುರಾಳಿ, ರೇವಣ್ಣ ನೆಪ ಮಾತ್ರದ ಅಭ್ಯರ್ಥಿ. ಯಾರೇ ಗೆದ್ದರೂ ಎರಡು ಸಾವಿರ ಅಥವಾ ಮೂರು ಸಾವಿರದಿಂದ ಅಷ್ಟೇ. ಚುನಾವಣೆ ಫಲಿತಾಂಶದಲ್ಲಿ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.

    ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹರಿಸಿರುವ ಹಣದ ಹೊಳೆ ನನ್ನನ್ನು ಸೋಲುಂಟು ಮಾಡುತ್ತದೆ. ಅವರು ಕೊನೆಯ ಗಳಿಗೆಯಲ್ಲಿ ಆಟವನ್ನು ಆಡಿದ್ದಾರೆ. ಮತದಾರರಿಗೆ ಹಣದ ಹೊಳೆಯನ್ನೇ ಹರಿಸಿದ್ದಾರೆ. ಅವರು ಹರಿಸಿರುವ ಕಪ್ಪು ಹಣ ಕೆಲಸವನ್ನು ಮಾಡಿದರೆ ನನ್ನ ಸೋಲು ಖಂಡಿತ. ಇದು ವ್ಯವಸ್ಥಿತವಾಗಿ ನನ್ನನ್ನು ರಾಜಕೀಯವಾಗಿ ಮುಗಿಸಬೇಕು ಎಂದು ಅವರು ತೀರ್ಮಾನ ಮಾಡಿದ್ದಾರೆ ಎಂದು ಆರೋಪಿಸಿದರು.

     

    ನಾನು ಇನ್ನು 24 ಗಂಟೆ ಕಾದು ನೋಡುತ್ತೇನೆ. ಬೂತು ಕಾಯುವ ಪಕ್ಷದ ಮುಖಂಡರನ್ನೇ ತಮ್ಮತ್ತ ಸೆಳೆದುಕೊಂಡಿದ್ದಾರೆ. ನನ್ನ ಜೊತೆಯಲ್ಲಿ ಇದ್ದ ಮುಖಂಡರು ಹಣದ ವ್ಯಾಮೋಹಕ್ಕಾಗಿ ಬೇರೆಯವರ ಜೊತೆಯಲ್ಲಿ ಹೋಗಿದ್ದಾರೆ. ನನ್ನ ಪರ ಇದ್ದ ಮತದಾರರನ್ನು ಕಾಂಗ್ರೆಸ್ ನವರು ತಮ್ಮತ್ತ ಸೆಳೆದುಕೊಂಡಿದ್ದಾರೆ. ನಾನು ಬೇರೆ ಪಕ್ಷದಲ್ಲಿ ಇದ್ದರೇ ನನ್ನ ಗೆಲುವು ನಿಶ್ಚಿತವಾಗಿರುತಿತ್ತು. ನಾನು ಅಭಿವೃದ್ಧಿಯಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಕುಮಾರಸ್ವಾಮಿ ಅವರಿಗೆ ಫೈಟ್ ಕೊಡಬಲ್ಲೆ. ಆದರೆ ಅವರ ತೋಳ್ಬಲ ಹಾಗೂ ಹಣದ ಬಲದಲ್ಲಿ ಅವರನ್ನು ನಾನು ಎದುರಿಸಲು ಆಗುವುದಿಲ್ಲ ಎಂದ್ರು.

    ಕ್ಷೇತ್ರದಲ್ಲಿ ಜಾತಿ ಬಲ, ಹಣದ ಬಲ ಕೆಲಸವನ್ನು ಮಾಡಿದೆ. ನಾನು ಜಾತಿ ರಾಜಕೀಯವನ್ನು ಯಾವತ್ತೂ ಮಾಡಿಲ್ಲ. ನಾನು ಎರಡು ಶಕ್ತಿಯ ಜೊತೆಯಲ್ಲಿ ಹೋರಾಟವನ್ನು ಮಾಡಿದ್ದೇನೆ. ಕುಮಾರಸ್ವಾಮಿ ಹಾಗೂ ರೇವಣ್ಣ ಬಂದಿದಕ್ಕೆ ನನಗೆ ನಷ್ಟವಾಗಿದೆ. ದಲಿತರ ಮತವನ್ನು ರೇವಣ್ಣ ಸೆಳೆದುಕೊಂಡಿದ್ದಾರೆ. ರೇವಣ್ಣ ಅವರು ಬಂದಿದ್ದರಿಂದ ನನಗೆ ಒಂದು ಕಡೆ ಹಿನ್ನಡೆಯಾಗಿದೆ. ಇನ್ನು ಬಿಜೆಪಿ ಎಷ್ಟು ಸೀಟು ಬರುತ್ತೇ ಅನ್ನೂ ಪ್ರಶ್ನೆಗೆ, ಅಯ್ಯೋ ಮೊದಲು ನನ್ನದು ನೋಡಣ್ಣ ಆಮೇಲೆ ನೋಡೋಣ. ಸುಪಾರಿ ರೇವಣ್ಣ, ಸುಪಾರಿ ಕಿಲ್ಲರ್ ಡಿ.ಕೆ.ಬ್ರದರ್ಸ್, ನನಗೆ ಮೈನಸ್ ಆದರೆ, ಕುಮಾರಸ್ವಾಮಿ ಅವರಿಗೆ ಪ್ಲಸ್ ಆಗುತ್ತೆ. ನನಗೆ ನನ್ನ ಮನಸ್ಥಿತಿ ಹೇಳುತ್ತಿದೆ. ನನಗೆ ಒಂದು ಕಡೆ ಈ ಬಾರಿ ಹಿನ್ನಡೆಯಾಗುತ್ತದೆ ಅಂತಾ ಹೇಳಿದ್ದಾರೆ.

    ಡಿ.ಕೆ.ಶಿವಕುಮಾರ್ ಹಾಗೂ ಕುಮಾರಸ್ವಾಮಿ ಎಷ್ಟು ಜನರನ್ನ ಬಲಿ ತೆಗೆದುಕೊಂಡಿದ್ದಾರೆ. ಈ ಬಾರಿ ಸೋಲನ್ನು ನಾನು ಒಪ್ಪಿಕೊಂಡಿದ್ದೇನೆ. ಕುಮಾರಸ್ವಾಮಿ ಅವರ ಮುಖ, ಕಾಂಗ್ರೆಸ್ ನವರ ದುಡ್ಡು ಕ್ಷೇತ್ರದ ಜನರನ್ನು ಮಂಕು ಮಾಡಿದೆ ಎಂದ ಯೋಗೇಶ್ವರ್ ಹೇಳಿದರು.

  • ಕರ್ನಾಟಕ ಮತದಾನದ ಬೆನ್ನಲ್ಲೇ ಶಾಕ್ – ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಶುರು

    ಕರ್ನಾಟಕ ಮತದಾನದ ಬೆನ್ನಲ್ಲೇ ಶಾಕ್ – ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಶುರು

    ಬೆಂಗಳೂರು: ಕರ್ನಾಟಕದಲ್ಲಿ ಮತದಾನ ಮುಗಿಯುತ್ತಿದ್ದಂತೆ ನಿರೀಕ್ಷೆಯಂತೆ ಪೆಟ್ರೋಲ್, ಡೀಸೆಲ್ ಬೆಲೆಗಳು ಹೆಚ್ಚಳವಾಗಿವೆ.

    ತೈಲ ಕಂಪನಿಗಳು ಲೀಟರ್ ಪೆಟ್ರೋಲ್‍ಗೆ 17 ಪೈಸೆ, ಡೀಸೆಲ್‍ಗೆ 21 ಪೈಸೆಯಷ್ಟು ಹೆಚ್ಚಿಸಿವೆ. ದಿನಂಪ್ರತಿ ಬೆಲೆ ಏರಿಳಿಕೆ ಮಾಡೋ ನಿಯಮವಿದ್ದರೂ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದುಬಾರಿ ಮತ್ತು ಡಾಲರ್ ಎದುರು ರೂಪಾಯಿ ದುರ್ಬಲಗೊಂಡಿದ್ದರೂ ಏಪ್ರಿಲ್ 24ರಿಂದ ಭಾನುವಾರದವರೆಗೆ ದರ ಏರಿಕೆ ಮಾಡಿರಲಿಲ್ಲ. ಇದನ್ನೂ ಓದಿ: ಎಲೆಕ್ಷನ್ ರಿಸಲ್ಟ್ ಬಿಸಿಯ ಮಧ್ಯೆ ಕರೆಂಟ್ ಶಾಕ್!

    ಗುಜರಾತ್ ಚುನಾವಣೆ ವೇಳೆಯೂ ಇದೇ ತಂತ್ರ ಅನುಸರಿಸಲಾಗಿತ್ತು. ಮೂಲಗಳ ಪ್ರಕಾರ ಪೆಟ್ರೋಲ್ ಲೀಟರ್‍ಗೆ 3 ರೂಪಾಯಿಯಷ್ಟು, ಡೀಸೆಲ್ 1 ರೂಪಾಯಿ 50 ಪೈಸೆಯಷ್ಟು ದುಬಾರಿಯಾಗಲಿದೆ. ವಿಚಿತ್ರ ಅಂದ್ರೆ ಆಗಸ್ಟ್ 1, 2013ರಂದು ಪೆಟ್ರೋಲ್ ಬೆಲೆ 74 ರೂಪಾಯಿ 10 ಪೈಸೆ, ಡೀಸೆಲ್ ಬೆಲೆ ಮೇ 13, 2014ರಂದು 56 ರೂಪಾಯಿ 71 ಪೈಸೆಯಷ್ಟಿತ್ತು. ಇಂದು ಪ್ರತಿ ಲೀಟರ್ ಗೆ 76.01 ಇದೆ.

  • ಲಾಠಿ ಹಿಡಿದ ಎಸಿ ಗಾರ್ಗಿ ಜೈನ್ – ದೃಶ್ಯ ಚಿತ್ರೀಕರಣಕ್ಕೆ ಮುಂದಾದವರಿಗೆ ಅವಾಜ್

    ಲಾಠಿ ಹಿಡಿದ ಎಸಿ ಗಾರ್ಗಿ ಜೈನ್ – ದೃಶ್ಯ ಚಿತ್ರೀಕರಣಕ್ಕೆ ಮುಂದಾದವರಿಗೆ ಅವಾಜ್

    ಬಳ್ಳಾರಿ: ಚುನಾವಣಾ ಮತಗಟ್ಟೆಯ ಮುಂಭಾಗದಲ್ಲಿ ಸೇರಿದ್ದ ಜನರನ್ನ ಚದುರಿಸಲು ಕೈಯಲ್ಲಿ ಲಾಠಿ ಹಿಡಿದಿದ್ದ ದೃಶ್ಯವನ್ನು ಚಿತ್ರೀಕರಿಸಿದ್ದಕ್ಕೆ ಮಾಧ್ಯಮದವರ ವಿರುದ್ಧ ಹೊಸಪೇಟೆ ಚುನಾವಣಾ ಅಧಿಕಾರಿ ಗಾರ್ಗಿ ಜೈನ್ ದರ್ಪ ಮೆರೆದಿದ್ದಾರೆ.

    ಮೊಬೈಲ್‍ ನಲ್ಲಿ ಸೆರೆ ಹಿಡಿದ ದೃಶ್ಯಗಳು ಚಾನೆಲ್‍ ನಲ್ಲಿ ಪ್ರಸಾರ ಮಾಡಿದರೆ ಚಾನೆಲ್ ಬಂದ್ ಮಾಡಿಸುವ ಬೆದರಿಕೆಯನ್ನ ಕೂಡ ಹಾಕಿದ್ದಾರೆ. ಶನಿವಾರ ಸಂಜೆ ಆರು ಗಂಟೆಯ ಸುಮಾರಿಗೆ ಹೊಸಪೇಟೆ ನಗರದ ರೋಟರಿ ವೃತ್ತದಲ್ಲಿನ ಪಿಂಕ್ ಮತಗಟ್ಟೆ ಸಂಖ್ಯೆ 9ರ ಮುಂಭಾಗದಲ್ಲಿ ತಡವಾಗಿ ಮತದಾನಕ್ಕೆ ಸುಮಾರು ಎರಡು ನೂರಕ್ಕೂ ಹೆಚ್ಚು ಜನ ಸೇರಿದ್ದರು.

    ಈ ವೇಳೆ ಸೇರಿದ್ದ ಜನರನ್ನು ನಿಯಂತ್ರಿಸುವುದಕ್ಕಾಗಿ ಎಸಿ ಗಾರ್ಗಿ ಜೈನ್ ಕೈಯಲ್ಲಿ ಲಾಟಿ ಹಿಡಿದು ರಸ್ತೆಯಲ್ಲಿ ನಿಂತಿದ್ದವರ ಮೇಲೆ ಲಾಟಿ ಬೀಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಖಾಸಗಿ ವಾಹಿನಿಯ ವರದಿಗಾರ ಎಸಿ ಗಾರ್ಗಿ ಜೈನ್ ಲಾಟಿದು ರಸ್ತೆಯಲ್ಲಿ ಓಡಾಡುವುದುನ್ನ ಚಿತ್ರೀಕರಿಸಿ ಸುದ್ದಿಮಾಡಲು ಮುಂದಾಗಿದ್ದಾರೆ. ಆಗ ಎಸಿ ಗಾರ್ಗಿ ಜೈನ್ ನನ್ನ ವೀಡಿಯೋ ಯಾಕೆ ಚಿತ್ರೀಕರಣ ಮಾಡುತ್ತಿದ್ದೀರಿ? ವಿಡಿಯೋ ಡಿಲೀಟ್ ಮಾಡಿ ಅಂತಾ ಧಮ್ಕಿ ಹಾಕಿದ್ದಾರೆ.

    ಚುನಾವಣೆ ಸಂದರ್ಭದಲ್ಲಿ ಪೊಲೀಸರು ಭದ್ರತೆಗೆ ನಿಯೋಜನೆಗೊಂಡಿರುವ ವೇಳೆಯಲ್ಲಿ ಎಸಿ ಗಾರ್ಗಿ ಜೈನ್ ಕೈಯಲ್ಲಿ ಲಾಠಿ ಹಿಡಿದು ದರ್ಪ ಮೆರೆದಿದ್ದು ಸರಿಯೇ ಎಂದು ಜನ ಪ್ರಶ್ನಿಸುತ್ತಿದ್ದಾರೆ.