Tag: Karnataka Elections 2018

  • ಕಾಂಗ್ರೆಸ್ ಕೊನೆಯ ಪಟ್ಟಿ ಔಟ್: ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧೆ?

    ಕಾಂಗ್ರೆಸ್ ಕೊನೆಯ ಪಟ್ಟಿ ಔಟ್: ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧೆ?

    ಬೆಂಗಳೂರು: ಕಾಂಗ್ರೆಸ್ ಕೊನೆಯ ಪಟ್ಟಿ ಬಿಡುಗಡೆಯಾಗಿದ್ದು, ಸಿಎಂ ಸಿದ್ದರಾಮಯ್ಯನವರಿಗೆ ಬಾದಾಮಿ ಟಿಕೆಟ್ ಸಿಕ್ಕಿದರೆ, ಹ್ಯಾರಿಸ್ ಅವರಿಗೆ ಶಾಂತಿನಗರದ ಟಿಕೆಟ್ ಸಿಕ್ಕಿದೆ.

    ಈ ಪಟ್ಟಿಯಲ್ಲಿ ಜಗಳೂರು, ತಿಪಟೂರು, ಮಲ್ಲೇಶ್ವರಂ, ಮಡಿಕೇರಿ, ಬೆಂಗಳೂರಿನ ಪದ್ಮನಾಭಗರದ ಅಭ್ಯರ್ಥಿಗಳು ಬದಲಾವಣೆ ಮಾಡಲಾಗಿದೆ.

    ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧೆ?
    ಕಿತ್ತೂರು -ಡಿ.ಬಿ ಇನಾಂದರ್
    ನಾಗಠಾಣ- ವಿಠಲ್ ಕಟಕದೊಂಡ
    ಸಿಂಧಗಿ – ಎಂ ಎನ್ ಸಾಲಿ

    ರಾಯಚೂರು – ಸೈಯದ್ ಯಾಸೀನ್
    ಜಗಳೂರು – ಎಚ್. ಪಿ. ರಾಜೇಶ್
    ತಿಪಟೂರು – ಷಡಕ್ಷರಿ

    ಮಲ್ಲೇಶ್ವರಂ – ಶ್ರೀ ಪಾದ ರೇಣು
    ಪದ್ಮನಾಭನಗರ – ಎಂ ಶ್ರೀನಿವಾಸ್
    ಮಡಿಕೇರಿ – ಕೆ.ಪಿ ಚಂದ್ರಕಲಾ

  • ತೆರೆಮರೆಯಲ್ಲೇ ಕಾಂಗ್ರೆಸ್‍ಗೆ ಶಾಕ್ ಕೊಟ್ಟ ಜನಾರ್ದನ ರೆಡ್ಡಿ

    ತೆರೆಮರೆಯಲ್ಲೇ ಕಾಂಗ್ರೆಸ್‍ಗೆ ಶಾಕ್ ಕೊಟ್ಟ ಜನಾರ್ದನ ರೆಡ್ಡಿ

    ಬಳ್ಳಾರಿ: ರಾಜಕೀಯ ರಣರಂಗದ ಅಖಾಡದಿಂದ ದೂರ ಉಳಿದಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಇದೀಗ ಸದ್ದಿಲ್ಲದೇ ಕಾಂಗ್ರೆಸ್‍ಗೆ ಶಾಕ್ ಕೊಟ್ಟಿದ್ದಾರೆ.

    ಕಾಂಗ್ರೆಸ್ ಟಿಕೆಟ್ ಸಿಗದೇ ಅಸಮಾಧಾನಗೊಂಡಿದ್ದ ಹಿರಿಯ ಶಾಸಕ ಎನ್‍ವೈ ಗೋಪಾಲಕೃಷ್ಣರನ್ನು ಬಿಜೆಪಿಗೆ ಸೆಳೆದಿದ್ದಾರೆ. ಕಾಂಗ್ರೆಸ್ ನಿಂದ ಟಿಕೆಟ್ ವಂಚಿತರಾದ ಬಳಿಕ ಎನ್.ವೈ.ಗೋಪಾಲಕೃಷ್ಣ ಮನೆಗೆ ಸೋಮವಾರ ರಾತ್ರಿ ಶ್ರೀರಾಮುಲು ಜೊತೆಗೆ ದಿಢೀರ್ ಧಾವಿಸಿದ ಜನಾರ್ದನ ರೆಡ್ಡಿ, ಬಿಜೆಪಿಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬುಧವಾರ ಅಧಿಕೃತವಾಗಿ ಎನ್‍ವೈ ಗೋಪಾಲಕೃಷ್ಣ ಕಮಲ ಹಿಡಿಯಲಿದ್ದಾರೆ.

    ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ನಮ್ಮ ಮನೆಗೆ ಬಂದು ಬಿಜೆಪಿ ಸೇರುವಂತೆ ಸಲಹೆ ನೀಡಿದ್ರು. ಇನ್ನು ಟಿಕೆಟ್ ನೀಡೋದು ಬಿಜೆಪಿ ಹೈಕಮಾಂಡ್ ತೀರ್ಮಾನಿಸುತ್ತದೆ ಅಂತಾ ಎನ್ ವೈ ಗೋಪಾಲಕೃಷ್ಣ ಸ್ಪಷ್ಟಪಡಿಸಿದ್ದಾರೆ.

    ಎನ್‍ವೈ ಗೋಪಾಲಕೃಷ್ಣ ಜೊತೆಗಿನ ಮಾತುಕತೆಯ ನಂತರ ಜನಾರ್ದನ ರೆಡ್ಡಿ ಯಾವುದೇ ಪ್ರತಿಕ್ರಿಯೆ ನೀಡದೇ ಹೋಗಿದ್ದಾರೆ. ಕೂಡ್ಲಗಿ ಮತ್ತು ಮೊಳಕಾಲ್ಮೂರು ಕ್ಷೇತ್ರಗಳಲ್ಲಿ ಪ್ರಾಬಲ್ಯ ಹೊಂದಿರುವ ಎನ್ ವೈ ಗೋಪಾಲಕೃಷ್ಣ ಬಿಜೆಪಿ ಸೇರ್ಪಡೆಗೊಂಡಿರುವುದು ಕಾಂಗ್ರೆಸ್‍ಗೆ ದೊಡ್ಡ ಹೊಡೆತ ಅಂತಾ ವಿಶ್ಲೇಷಣೆ ಮಾಡಲಾಗ್ತಿದೆ.

  • ವಿವಾದಕ್ಕೆ ಕಾರಣವಾಯ್ತು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಮಾಳವೀಯ ಟ್ವೀಟ್

    ವಿವಾದಕ್ಕೆ ಕಾರಣವಾಯ್ತು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಮಾಳವೀಯ ಟ್ವೀಟ್

    ನವದೆಹಲಿ: ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಚುನಾವಣೆಯ ದಿನಾಂಕನ್ನು ಆಯೋಗ ಪ್ರಕಟಿಸುವ ಮೊದಲೇ ಟ್ವೀಟ್ ಮಾಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

    ಮಾಳವೀಯ ಮೇ 12 ರಂದು ಚುನಾವಣೆ ನಡೆದರೆ, ಮೇ 18 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಇಂದು ಬೆಳಗ್ಗೆ 11 ಗಂಟೆ 8 ನಿಮಿಷಕ್ಕೆ ಟ್ವೀಟ್ ಮಾಡಿದ್ದರು. ಚುನಾವಣಾ ಆಯೋಗ ಅಧಿಕೃತವಾಗಿ ಪ್ರಕಟಿಸುವ ಮೊದಲೇ ಮಾಳವೀಯ ದಿನಾಂಕವನ್ನು ಪ್ರಕಟಿಸಿದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈಗ ಭಾರೀ ಚರ್ಚೆಯಾಗುತ್ತಿದೆ.

    ಮಾಳವೀಯ ಟ್ವೀಟ್ ವಿಚಾರವನ್ನು ಮುಂದಿಟ್ಟುಕೊಂಡು ಸುದ್ದಿಗೋಷ್ಠಿಯಲ್ಲಿ ಚುನಾವಣಾ ಆಯುಕ್ತ ರಾವತ್ ಅವರನ್ನು ವರದಿಗಾರರು ಪ್ರಶ್ನೆ ಮಾಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿರುವುದಾಗಿ ತಿಳಿಸಿದ ರಾವತ್ ಮಾಹಿತಿ ಸೋರಿಕೆ ಎಲ್ಲಿ ಆಗಿದೆ ಎನ್ನುವುದನ್ನು ಪತ್ತೆ ಹಚ್ಚುತ್ತೇವೆ ಎಂದು ತಿಳಿಸಿದರು.

    ವಿವಾದ ಜೋರಾಗುತ್ತಿದ್ದಂತೆ ಮಾಳವೀಯ ಈ ಹಿಂದೆ ಮಾಡಿದ್ದ ಟ್ವೀಟ್ ಡಿಲೀಟ್ ಮಾಡಿದ್ದಾರೆ. ಕರ್ನಾಟಕ ಚುನಾವಣೆ ಮೇ 12 ರಂದು ಒಂದೇ ಹಂತದಲ್ಲಿ ನಡೆದರೆ ಮೇ 15ರಂದು ಫಲಿತಾಂಶ ಪ್ರಕಟವಾಗಲಿದೆ.  ಇದನ್ನೂ ಓದಿ: ಮೇ 12ರಂದು ಕರ್ನಾಟಕ ಚುನಾವಣೆ- ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

  • ಚುನಾವಣೆ ಹೊತ್ತಲ್ಲಿ ಎಚ್ಚೆತ್ತ ಮತದಾರ-ಬೇಡಿಕೆ ಈಡೇರಿಕೆಗಾಗಿ ಚುನಾವಣೆ ಬಹಿಷ್ಕಾರ..!

    ಚುನಾವಣೆ ಹೊತ್ತಲ್ಲಿ ಎಚ್ಚೆತ್ತ ಮತದಾರ-ಬೇಡಿಕೆ ಈಡೇರಿಕೆಗಾಗಿ ಚುನಾವಣೆ ಬಹಿಷ್ಕಾರ..!

    ಕಾರವಾರ: ಚುನಾವಣೆ ಸಮೀಪಿಸುತಿದ್ದಂತೆ ರಾಜಕಾರಣಿಗಳ ಆಶ್ವಾಸನೆಗಳಿಗೇನೂ ಕಡಿಮೆ ಇಲ್ಲ. ಆದ್ರೆ ಈ ಹಿಂದೆ ನೀಡಿದ ಆಶ್ವಾಸನೆಗಳನ್ನು ನೆರವೇರಿಸದೇ ಮರೆತ ರಾಜಕಾರಣಿಗಳಿಗೀಗ ಚುನಾವಣೆ ಬಹಿಷ್ಕಾರ ದೊಡ್ಡ ತಲೆನೋವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಕೂರ್ವೆ ಗ್ರಾಮ ಚುನಾವಣೆಯನ್ನು ಬಹಿಷ್ಕರಿಸಿದೆ.

    ಸಾಮನ್ಯವಾಗಿ ಚುನಾವಣೆ ಹತ್ತಿರವಾಗಿದ್ದಂತೆ ರಾಜಕೀಯ ಪಕ್ಷಗಳು ಎಚ್ಚೆತ್ತುಕೊಳ್ಳೊತ್ತವೆ. ಆದ್ರೆ ಈ ಬಾರಿ ಕಾಮನ್ ಮೆನ್‍ಗಳು ಸಹ ಎಚ್ಚೆತ್ತುಕೊಂಡಿದ್ದಾರೆ. ಬೇಡಿಕೆ ಈಡೇರಿಸುವವರಿಗೂ ಚುನಾವಣೆ ಬೇಡ ಅಂತ ಕೂರ್ವೆ ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದಾರೆ. ಕೂರ್ವೆ ಗ್ರಾಮ ಗಂಗಾವಳಿ ನದಿಯ ನೀರಿನಿಂದ ಆವರಿಸಿದ್ದು ದ್ವೀಪದಂತಿದೆ. 47 ಕುಟುಂಬಗಳು ವಾಸವಿರುವ ಈ ಗ್ರಾಮಕ್ಕೆ ಹೋಗಬೇಕಾದ್ರೆ ಇಂದಿಗೂ ದೋಣಿಯಲ್ಲಿಯೇ ಸಂಚರಿಸಬೇಕು.

    ಈ ಹಿಂದೆ ಗ್ರಾಮಕ್ಕೆ ಸರ್ಕಾರದಿಂದ ಒಂದು ದೂಣಿಯನ್ನು ನೀಡಲಾಗಿತ್ತು. ಆದ್ರೆ ಕೆಲವು ಕಿಡಿಗೇಡಿಗಳು ದೋಣಿಯನ್ನು ಸುಟ್ಟುಹಾಕಿದ್ರು. ಈಗ ಈ ಗ್ರಾಮಕ್ಕೆ ಯಾವುದೇ ದೋಣಿಗಳು ಇಲ್ಲದಿದ್ರೂ ಜನರೇ ತಮ್ಮ ಸ್ವಂತ ದೋಣಿಯನ್ನು ಬಳಸಿಕೊಂಡು ದಿನನಿತ್ಯದ ವಸ್ತುಗಳನ್ನು ತರುತ್ತಾರೆ. ಇನ್ನು ಇಲ್ಲಿ ಅಂಗನವಾಡಿ ಹಾಗೂ ಕಿರಿಯ ಪ್ರಾಥಮಿಕ ಶಾಲೆ ಇದೆ. ಆದ್ರೆ ಶಿಕ್ಷಕರು ಈ ಭಾಗಕ್ಕೆ ಬರಬೇಕಿದ್ರೆ ಹಾಗೂ ಬಿಸಿಯೂಟಕ್ಕೆ ಸಾಮಗ್ರಿ ತರಬೇಕಿದ್ರೆ ಹರಸಾಹಸ ಪಡಬೇಕಿದೆ.

    ಗ್ರಾಮಕ್ಕೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ತೂಗು ಸೇತುವೆ ನಿರ್ಮಿಸಬಹುದಿತ್ತು. ಆದರೆ ಜನಪ್ರತಿನಿಧಿಗಳ ಅಸಡ್ಡೆ ಇವರನ್ನ ಕತ್ತಲಲ್ಲಿ ಇರುವಂತೆ ಮಾಡಿದೆ. ಹೀಗಾಗಿ ಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವ ತೀರ್ಮಾನವನ್ನು ಗ್ರಾಮದ ಜನರು ಕೈಗೊಂಡಿದ್ದಾರೆ.