Tag: Karnataka Elections 2018

  • ಸ್ವಪಕ್ಷಿಯರಿಂದ ತರಾಟೆ- ‘ಕೈ’ ಶಾಸಕ ರಾಘವೇಂದ್ರ ಹಿಟ್ನಾಳ್ ಗೆ ಮುಜುಗರ

    ಸ್ವಪಕ್ಷಿಯರಿಂದ ತರಾಟೆ- ‘ಕೈ’ ಶಾಸಕ ರಾಘವೇಂದ್ರ ಹಿಟ್ನಾಳ್ ಗೆ ಮುಜುಗರ

    ಕೊಪ್ಪಳ: ಸ್ವಪಕ್ಷಿಯರಿಂದಲೇ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಅವರು ತರಾಟೆಗೊಳಗಾದ ಘಟನೆ ಜಿಲ್ಲೆಯ 19ನೇ ವಾರ್ಡ್‍ನ ಹಟಗಾರ ಪೇಟೆಯಲ್ಲಿ ನಡೆದಿದೆ.

    ಹಟಗಾರ ಪೇಟೆಯಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸೈಯದ್ ಜುಬೇರ್ ಹುಸೇನಿ, ಶಾಸಕ ಹಿಟ್ನಾಳ್ ಅವರ ಕೆಲಸಗಳ ವೈಫಲ್ಯದ ಬಗ್ಗೆ ಪ್ರಶ್ನಿಸಿದ್ದಾರೆ. ಜನ ಸೂರಿಲ್ಲದೇ ಪರದಾಡಿದ್ರೂ ಮನೆ ಕೊಟ್ಟಿಲ್ಲ. ಅಮಾಯಕರ ಮೇಲೆ ಪೊಲೀಸರು ರೌಡಿ ಶೀಟರ್ ತೆರೆದಿದ್ದಾರೆ. ವಿನಾಃಕಾರಣ ಯುವಕರಿಗೆ ಕಿರಿಕಿರಿ ನೀಡಲಾಗ್ತಿದೆ. ಇಷ್ಟಾದ್ರೂ ಶಾಸಕರು ಸಹಾಯಕ್ಕೆ ಬಂದಿಲ್ಲ ಎಂದು ತರಾಟೆಗೆ ತೆಗೆದುಕೊಂಡ್ರು.

    ಸ್ವಪಕ್ಷೀಯರ ಪ್ರಶ್ನೆಗಳ ಸುರಿಮಳೆಗೆ ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ಮುಜುಗರಕ್ಕೀಡಾಗಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    https://www.youtube.com/watch?v=IkFuTozndJk

  • ಸಿಎಂ ಆಪ್ತನ ಸೊಸೆಗೆ ತಪ್ಪಿದ ಟಿಕೆಟ್ – ಪಕ್ಷೇತರವಾಗಿ ನಿಂತ ರೆಬೆಲ್ ಮಹಿಳಾ ಅಭ್ಯರ್ಥಿಗಳು

    ಸಿಎಂ ಆಪ್ತನ ಸೊಸೆಗೆ ತಪ್ಪಿದ ಟಿಕೆಟ್ – ಪಕ್ಷೇತರವಾಗಿ ನಿಂತ ರೆಬೆಲ್ ಮಹಿಳಾ ಅಭ್ಯರ್ಥಿಗಳು

    ರಾಯಚೂರು: ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಸಾಕಷ್ಟು ಜನ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಟಿಕೆಟ್ ವಂಚಿತರಿದ್ದಾರೆ. ಆದರೆ ಎರಡು ಕ್ಷೇತ್ರಗಳಲ್ಲಿ ಮಾತ್ರ ಜಿದ್ದಿಗೆ ಬಿದ್ದಿರುವ ಮಹಿಳಾ ಟಿಕೆಟ್ ಆಕಾಂಕ್ಷಿಗಳು ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ತಮ್ಮದೇ ಆದ ಓಟ್ ಬ್ಯಾಂಕ್ ಹೊಂದಿರುವ ಈ ಮಹಿಳೆಯರು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ನಿದ್ದೆಗೆಡಿಸಿದ್ದಾರೆ.

    ನಾರಿ ಮುನಿದರೆ ಮಾರಿ ಅನ್ನೋ ಹಾಗೇ ರಾಯಚೂರು ಜಿಲ್ಲೆಯ ದೇವದುರ್ಗ ಹಾಗೂ ಮಾನ್ವಿ ಕ್ಷೇತ್ರಗಳಲ್ಲಿ ಟಿಕೆಟ್ ವಂಚಿತ ಮಹಿಳಾ ಅಭ್ಯರ್ಥಿಗಳೇ ಇಲ್ಲಿ ನಿರ್ಣಾಯಕರಾಗಿದ್ದಾರೆ. ಮಾನ್ವಿ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಡಾ.ಪ್ರೀತಿ ಮೇತ್ರಿ, ಇವರು ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಎಂ.ಈರಣ್ಣ ಸೊಸೆ. ತಮ್ಮ ಸೊಸೆಗೆ ಕಾಂಗ್ರೆಸ್ ಟಿಕೆಟ್ ಕೊಡಿಸಲು ಎಂ.ಈರಣ್ಣ ಎಷ್ಟೇ ಪ್ರಯತ್ನ ಮಾಡಿದರೂ ಟಿಕೆಟ್ ಸಿಗಲಿಲ್ಲ.

    ಸತತ 2 ಬಾರಿ ಶಾಸಕರಾಗಿರುವ ಹಂಪಯ್ಯ ನಾಯಕ್‍ ಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ. ಹೀಗಾಗಿ ನಾನು ಪಕ್ಷೇತರರಾಗಿ ಕಣಕ್ಕಿಳಿದಿದ್ದೇನೆ. ಕುರುಬ ಸಮಾಜದ ಬೆಂಬಲ ಜೊತೆಗೆ 2,38,598 ಮತದಾರರಲ್ಲಿ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಾಗಿರುವುದು ನನಗೆ ವರದಾನವಾಗಿದೆ. ಅಲ್ಲದೆ ಕಾಂಗ್ರೆಸ್ ಮತಗಳು ಹೊಡೆಯುವುದರಿಂದ ಕಾಂಗ್ರೆಸ್‍ಗೂ ಹೊಡೆತ ಬೀಳಲಿದೆ ಎಂದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಡಾ.ಪ್ರೀತಿ ಮೇತ್ರಿ ಹೇಳಿದ್ದಾರೆ.

    ಕಳೆದ ಎರಡು ವರ್ಷಗಳಿಂದ ದೇವದುರ್ಗ ಕ್ಷೇತ್ರದಲ್ಲಿ ನಿರಂತರ ಓಡಾಟದಲ್ಲಿರುವ ಕರೆಮ್ಮ ನಾಯಕ್ ಜೆಡಿಎಸ್ ಟಿಕೆಟ್ ವಂಚಿತರು. ಇವರು ಕಳೆದ ದೇವದುರ್ಗ ಉಪಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ 9156 ಮತಗಳನ್ನ ಪಡೆದು ಮೂರನೇ ಸ್ಥಾನ ಪಡೆದಿದ್ದರು. ಆದರೆ ಈಗ ತಮ್ಮದೇ ಆದ ಓಟ್ ಬ್ಯಾಂಕ್ ಹೊಂದಿರುವ ಕರೆಮ್ಮ ನಾಯಕ್‍ಗೆ ಜೆಡಿಎಸ್ ವರಿಷ್ಠರು ಕೊನೆ ಗಳಿಗೆಯಲ್ಲಿ ಟಿಕೆಟ್ ನೀಡದೆ ಬಿಜೆಪಿಯಿಂದ ಬಂದ ವೆಂಕಟೇಶ್ ಪೂಜಾರಿಗೆ ಟಿಕೆಟ್ ನೀಡಿದ್ದಾರೆ. ಹೀಗಾಗಿ ಕರೆಮ್ಮ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ.

    ಕ್ಷೇತ್ರದ ಜನರ ಜೊತೆ ನಿರಂತರ ಸಂಪರ್ಕದಲ್ಲಿರುವುದು ಕರೆಮ್ಮ ನಾಯಕ್‍ ಗೆ ಪ್ಲಸ್ ಪಾಯಿಂಟ್ ಆಗಬಹುದು. ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ. ದೇವೆಗೌಡ ಅವರು ಕರೆಮ್ಮ ನಾಯಕ್ ತಮ್ಮ ಉಮೇದುವಾರಿಕೆ ಹಿಂಪಡೆಯಲು ಮನವೊಲಿಸಲು ಜಿಲ್ಲಾ ಮುಖಂಡರಿಗೆ ಸೂಚಿಸಿದ್ದರು. ಆದರೆ ಕರೆಮ್ಮ ಪಕ್ಷ ಸಂಘಟನೆಗೆ ಬೆಲೆ ಸಿಕ್ಕಲ್ಲ ಅಂತ ಪಕ್ಷೇತರರಾಗಿ ಚುನಾವಣೆ ಎದುರಿಸುತ್ತಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ವಿರೂಪಾಕ್ಷಿ ತಿಳಿಸಿದ್ದಾರೆ.

    ದೇವದುರ್ಗ ಕ್ಷೇತ್ರದಲ್ಲಿ ಬಿಜೆಪಿಯ ಶಿವನಗೌಡ ನಾಯಕ್, ಕಾಂಗ್ರೆಸ್‍ ನ ರಾಜಶೇಕರ್ ನಾಯಕ್‍ ಗೂ ಕರೆಮ್ಮ ನಾಯಕ್ ಸವಾಲಾಗಿದ್ದಾರೆ. ಇನ್ನೂ ಮಾನ್ವಿ ಕ್ಷೇತ್ರದಲ್ಲಿ ಪ್ರೀತಿ ಮೇತ್ರಿ ಪಕ್ಷೇತರರಾದರೂ ಸಾಕಷ್ಟು ಜನ ಬೆಂಬಲ ಹೊಂದಿದ್ದಾರೆ.

     

  • ಮಸೀದಿಯ ಕೆಲ್ಸ ಮಾಡಿದ್ರಿ, ದೇವಸ್ಥಾನದ ಅಭಿವೃದ್ಧಿ ಯಾಕ್ ಮಾಡಿಲ್ಲವೆಂದ ಯುವಕನಿಗೆ ಆನಂದ್ ಸಿಂಗ್ ಅವಾಜ್

    ಮಸೀದಿಯ ಕೆಲ್ಸ ಮಾಡಿದ್ರಿ, ದೇವಸ್ಥಾನದ ಅಭಿವೃದ್ಧಿ ಯಾಕ್ ಮಾಡಿಲ್ಲವೆಂದ ಯುವಕನಿಗೆ ಆನಂದ್ ಸಿಂಗ್ ಅವಾಜ್

    ಬಳ್ಳಾರಿ: ನೀವೂ ಮಸೀದಿಯ ಕೆಲಸ ಮಾಡಿದ್ರೀ. ಆದ್ರೆ ದೇವಸ್ಥಾನದ ಅಭಿವೃದ್ಧಿಯ ಕೆಲಸ ಯಾಕೆ ಮಾಡಲಿಲ್ಲ ಅಂತಾ ಪ್ರಶ್ನೆ ಮಾಡಿದ ಮತದಾರನೊಬ್ಬನಿಗೆ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಸಿಂಗ್ ಅವಾಜ್ ಹಾಕಿದ ಘಟನೆ ನಡೆದಿದೆ.

    ಆನಂದಸಿಂಗ್ ಅವರು ಚಿತ್ತವಾಡಗಿಯ ಒಂದನೇ ವಾರ್ಡ್  ನಲ್ಲಿ ಪ್ರಚಾರ ನಡೆಸುವ ವೇಳೆ ನಾಗರಾಜ ಎನ್ನುವ ಯುವಕ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಆನಂದ್  ಅವಾಜ್ ಹಾಕಿದ್ದಾರೆ.

    ಚಿತ್ತವಾಡಗಿಯ ಮಸೀದಿಯ ಕೆಲಸ ಮಾಡಿದ್ರಿ, ದೇವಸ್ಥಾನದ ಕೆಲಸ ಯಾಕೆ ಮಾಡಲಿಲ್ಲ ಅಂತಾ ಪ್ರಶ್ನೆ ಮಾಡಿದಾಗ ಆನಂದಸಿಂಗ್, ನಿನಗೆ ಅದನ್ನೆಲ್ಲಾ ಕೇಳುವ ಹಕ್ಕಿಲ್ಲ ಅಂತಾ ಜೋರಾಗಿ ಅವಾಜ್ ಹಾಕಿದ್ದಾರೆ. ಅಲ್ಲದೇ ನಿನ್ನ ಹೆಸರೇನೂ, ವಯಸ್ಸೆಷ್ಟು ಅಂತಾ ಭಯಪಡಿಸುವ ರೀತಿಯಲ್ಲಿ ನಡೆದುಕೊಂಡಿರುವುದು ಇದೀಗ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

    ವಿಶೇಷ ಅಂದ್ರೆ, ಈ ದೃಶ್ಯಾವಳಿಯನ್ನು ಮತ್ತೊಬ್ಬ ಕಾಂಗ್ರೆಸ್ ಅಭ್ಯರ್ಥಿ ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

    https://www.youtube.com/watch?v=YJ6LMh3qt2M&feature=youtu.be

  • ಪೂರ್ವದಲ್ಲಿ ಸೂರ್ಯ ಹುಟ್ಟೋದು ಎಷ್ಟು ನಿಜವೋ, ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಅಷ್ಟೇ ಸತ್ಯ: ಸಿಎಂ

    ಪೂರ್ವದಲ್ಲಿ ಸೂರ್ಯ ಹುಟ್ಟೋದು ಎಷ್ಟು ನಿಜವೋ, ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಅಷ್ಟೇ ಸತ್ಯ: ಸಿಎಂ

    ಬೆಳಗಾವಿ: ಪೂರ್ವದಲ್ಲಿ ಸೂರ್ಯ ಹುಟ್ಟೋದು ಎಷ್ಟು ನಿಜವೋ, ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಅಷ್ಟೇ ಸತ್ಯ ಅಂತಾ ಸಿಎಂ ಸಿದ್ದರಾಮಯ್ಯ ಹುಕ್ಕೇರಿಯಲ್ಲಿ ನಡೆದ ಸಮಾವೇಶದಲ್ಲಿ ಹೇಳಿದ್ದಾರೆ.

    ಹುಕ್ಕೇರಿಯ ಅಭಿವೃದ್ಧಿಗಾಗಿ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಎ.ಬಿ.ಪಾಟೀಲ್ ಅವರನ್ನು ಬೆಂಬಲಿಸಬೇಕು. ಹಾಲಿ ಶಾಸಕರಾಗಿರುವ ಉಮೇಶ್ ಕತ್ತಿ ಅವ್ರಿಗೆ ಬಡವರ ಕಾಳಜಿ ಇಲ್ಲ. ಕಾಂಗ್ರೆಸ್ ಸರ್ಕಾರ ಬಡವರಿಗಾಗಿ ಹಲವು ಕಾರ್ಯಕ್ರಮಗಳನ್ನು ಮಾಡಿದೆ. ಇಂತಹ ಜನಪರ ಕಾರ್ಯಕ್ರಮಗಳು ಮುಂದುವರೆಯ ಬೇಕಾದ್ರೆ, ಕಾಂಗ್ರೆಸ್‍ಗೆ ಬೆಂಬಲ ನೀಡಿ ಅಂತಾ ಜನರಲ್ಲಿ ಸಿಎಂ ಮನವಿ ಮಾಡಿಕೊಂಡರು. ಇದನ್ನೂ ಓದಿ: ಸೂರ್ಯ, ಚಂದ್ರ ಇರುವರೆಗೂ ಗುಂಡ್ಲುಪೇಟೆಯಲ್ಲಿ ಕುಟುಂಬ ರಾಜಕಾರಣ ಇರುತ್ತೆ: ಗೀತಾ ಮಹದೇವ ಪ್ರಸಾದ್

    ನಿಪ್ಪಾಣಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ನನಗೆ ಮರಾಠಿ ಭಾಷೆ ಬರಲ್ಲ ಕ್ಷಮಿಸಬೇಕು ಎಂದು ಕೇಳಿದ್ರು. ಯಾವಗಲೂ ನಾನು ಕನ್ನಡಿಗ ಅಂತಾ ವಿರೋಧ ಪಕ್ಷಗಳನ್ನು ಟೀಕಿಸುತ್ತಿದ್ದ ಸಿಎಂ ವೋಟ್ ಗಾಗಿ ಮರಾಠಿಗರಲ್ಲಿ ಕ್ಷಮೆ ಕೇಳಿದ್ದಾರೆ ಅಂತಾ ವಿರೋಧ ಪಕ್ಷದ ನಾಯಕರು ಟೀಕಿಸುತ್ತಿದ್ದಾರೆ.

  • ಹೈಕಮಾಂಡ್ ಸೂಚನೆ ಬೆನ್ನಲ್ಲೇ ಚುನಾವಣಾ ಪ್ರಚಾರದಿಂದ ಹಿಂದೆ ಸರಿದ ರೆಡ್ಡಿ!

    ಹೈಕಮಾಂಡ್ ಸೂಚನೆ ಬೆನ್ನಲ್ಲೇ ಚುನಾವಣಾ ಪ್ರಚಾರದಿಂದ ಹಿಂದೆ ಸರಿದ ರೆಡ್ಡಿ!

    ಚಿತ್ರದುರ್ಗ: ಬಹಿರಂಗ ಪ್ರಚಾರದಲ್ಲಿ ಭಾಗವಹಿಸದಂತೆ ಹೈಕಮಾಂಡ್ ನೀಡಿದ ಸೂಚನೆ ಹಿನ್ನೆಲೆಯಲ್ಲಿ ಮಾಜಿ ಸಚಿವ, ಗಣಿಧಣಿ ಗಾಲಿ ಜನಾರ್ದನ ರೆಡ್ಡಿಯವರು ಚುನಾವಣಾ ಪ್ರಚಾರದಿಂದ ಹಿಂದೆ ಸರಿದಿದ್ದಾರೆ.

    ಸೂಚನೆ ಸಿಕ್ಕ ಕೂಡಲೇ ತನ್ನ ಕುಚುಕು ಗೆಳೆಯ ಶ್ರೀರಾಮುಲು ಪರ ಮೊಳಕಾಲ್ಮೂರಿನ ಪ್ರಚಾರದಿಂದ ಹಿಂದೆ ಸರಿದಿದ್ದಾರೆ. ಒಂದು ವಾರದಿಂದ ರಾಮುಲು ಪರ ಭರ್ಜರಿ ಪ್ರಚಾರ ನಡೆಸಿದ್ದರು. ಅಲ್ಲದೇ ರಾಮುಲು ಗೆಲ್ಲಿಸುವಲ್ಲಿ ಮಾಸ್ಟರ್ ಪ್ಲಾನ್ ಸಹ ಮಾಡುತ್ತಿದ್ದರು. ಇದನ್ನೂ ಓದಿ: ಸ್ನೇಹಿತರ ಗೆಲುವಿಗಾಗಿ ಫೀಲ್ಡ್ ಗಿಳಿದ ಜನಾರ್ದನ ರೆಡ್ಡಿಗೆ ಬ್ರೇಕ್!

    ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಭಾನುವಾರ ಚಿತ್ರದುರ್ಗಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ನಾಯಕರಿಗೆ ಮುಜುಗರ ತಪ್ಪಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಹೀಗಾಗಿ ರೆಡ್ಡಿಯವರು ಶುಕ್ರವಾರ ಸಂಜೆಯಿಂದ ಹಾನಗಲ್ ಮನೆಯಿಂದ ಹೊರಗೆ ಕಾಣಿಸಿಕೊಂಡಿಲ್ಲ. ಆದ್ರೆ ರೆಡ್ಡಿಯವರು ಮೊಳಕಾಲ್ಮೂರು ಮನೆಯಲ್ಲಿಯೇ ಇದ್ದಾರೆ ಅಂತ ಬೆಂಬಲಿಗರು ಬಿಂಬಿಸುತ್ತಿದ್ದಾರೆ. ಇದನ್ನೂ ಓದಿ:  ಪೊಲೀಸರು ತೊಂದ್ರೆ ಕೊಟ್ರೆ ಫೋನ್ ಮಾಡಿ- ನನ್ನ ನಂಬರ್ ತಗೊಳ್ಳಿ ಅಂದ್ರು ಶಾ

    ಜನಾರ್ದನ ರೆಡ್ಡಿ ಬೆಂಗಳೂರಿಗೆ ತೆರಳಿದ್ದಾರೆ ಎಂಬ ಇನ್ನೊಂದು ಮಾಹಿತಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭಿಸಿದೆ.

  • ಬಿಜೆಪಿ ಹೈಕಮಾಂಡ್‍ನಿಂದ ಅನಂತ್‍ಕುಮಾರ್, ಅಶೋಕ್‍ಗೆ ಅಗ್ನಿಪರೀಕ್ಷೆ!

    ಬಿಜೆಪಿ ಹೈಕಮಾಂಡ್‍ನಿಂದ ಅನಂತ್‍ಕುಮಾರ್, ಅಶೋಕ್‍ಗೆ ಅಗ್ನಿಪರೀಕ್ಷೆ!

    ಬೆಂಗಳೂರು: ಬಿಜೆಪಿ ಕರ್ನಾಟಕದಲ್ಲಿ ಅಧಿಕಾರ ಹಿಡಿಯಬೇಕೆಂದು ಪ್ರಯತ್ನ ಮಾಡುತ್ತಿದೆ. ಹೀಗಾಗಿ ಅಷ್ಟೇ ಚುರುಕಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಹ ಹೊಸ ಲೆಕ್ಕಾಚಾರಗಳ ಮೂಲಕ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗ್ತಿದ್ದಾರೆ.

    ಬೆಂಗಳೂರು ಗೆಲ್ಲಲು ಅಮಿತ್ ಶಾ ಪ್ಲಾನ್ ಮಾಡಿಕೊಂಡಿದ್ದು, ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಎರಡು ಸಮಾವೇಶಗಳನ್ನು ಆಯೋಜನೆ ಮಾಡಲಾಗಿದೆ. ಮೇ 3 ಮತ್ತು 8 ರಂದು ಮೋದಿ ಬೆಂಗಳೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಎರಡು ಸಮಾವೇಶಗಳ ಮೂಲಕ ಬೆಂಗಳೂರಿನಲ್ಲಿ 20 ಕ್ಷೇತ್ರಗಳನ್ನು ಗೆಲ್ಲುವುದು ಅಮಿತ್ ಶಾ ಪ್ಲಾನ್ ಆಗಿದೆ. ಇದನ್ನೂ ಓದಿ: ಕೊಪ್ಪಳದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಅಮಿತ್ ಶಾ ಫುಲ್ ಕ್ಲಾಸ್

    ಬೆಂಗಳೂರಿನಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲಿಸುವ ಗುರಿಯನ್ನು ಕೇಂದ್ರ ಸಚಿವ ಅನಂತ್ ಕುಮಾರ್ ಮತ್ತು ಮಾಜಿ ಡಿಸಿಎಂ ಆರ್. ಅಶೋಕ್ ಅವರಿಗೆ ನೀಡಲಾಗಿದೆ. ಬೆಂಗಳೂರಿನಲ್ಲಿ 20 ಸೀಟ್ ಗಳನ್ನು ಗೆಲ್ಲಿಸುವುದಕ್ಕಾಗಿ ಅನಂತ್ ಕುಮಾರ್, ಅಶೋಕ್ ಇಬ್ಬರಿಗೂ ಅಮಿತ್ ಶಾ ಕಟ್ಟಾಜ್ಞೆ ಮಾಡಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸಮಾವೇಶ 2, ಸೀಟು 20 ಅಮಿತ್ ಶಾ ಮಾಸ್ಟರ್ ಪ್ಲಾನ್!

  • ಕಾಂಗ್ರೆಸ್ ಅಭ್ಯರ್ಥಿ ರಾಮಲಿಂಗಾರೆಡ್ಡಿಗೆ ಸಂಕಷ್ಟ!

    ಕಾಂಗ್ರೆಸ್ ಅಭ್ಯರ್ಥಿ ರಾಮಲಿಂಗಾರೆಡ್ಡಿಗೆ ಸಂಕಷ್ಟ!

    ಬೆಂಗಳೂರು: ಬಿಟಿಎಂ ಲೇಔಟ್ ಕಾಂಗ್ರೆಸ್ ಅಭ್ಯರ್ಥಿ ರಾಮಲಿಂಗಾರೆಡ್ಡಿಗೆ ಸಂಕಷ್ಟ ಎದುರಾಗಿದೆ. ರಾಮಲಿಂಗಾರೆಡ್ಡಿ ವಿರುದ್ಧ ಸಹಿ ಹಾಕದ ನಾಮಪತ್ರ ಸಲ್ಲಿಸಿದ ಆರೋಪವೊಂದು ಕೇಳಿಬಂದಿದೆ.

    ನಾಮಪತ್ರದಲ್ಲಿ ಸಲ್ಲಿಸಿರುವ ಮಾಹಿತಿಯನ್ನ ಪ್ರಮಾಣೀಕರಿಸಿದ ಮೇಲೆ ಸಹಿ ಮಾಡಬೇಕು. ಆದರೆ ರಾಮಲಿಂಗಾರೆಡ್ಡಿ ನಾಮಪತ್ರದಲ್ಲಿ ಸಹಿ ಮಾಡಿಲ್ಲ. ಅಲ್ಲದೇ ಸಹಿ ಮಾಡದ ನಾಮಪತ್ರವನ್ನ ಬಿಟಿಎಂ ಲೇಔಟ್ ಆರ್ ಓ ರಂಗಪ್ಪ ಅವರು ಚುನಾವಣಾ ಆಯೋಗಕ್ಕೂ ಕಳಿಸಿದ್ದಾರೆ.

    ಈ ಕುರಿತು ಕರ್ನಾಟಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ್ ನಾಮಪತ್ರವನ್ನ ತಿರಸ್ಕಾರ ಮಾಡಬೇಕು ಎಂದು ದೂರು ಸಲ್ಲಿಸಿದ್ದಾರೆ. ಇತ್ತ ಆಯೋಗ ಕೂಡ ತಮ್ಮ ವೆಬ್ ಸೈಟ್ ನಲ್ಲೂ ಸಹಿ ಮಾಡದ ನಾಮಪತ್ರವನ್ನೇ ಅಪ್ಲೋಡ್ ಮಾಡಿದೆ ಎಂದು ಹೇಳಲಾಗುತ್ತಿದೆ.

    ಈ ಕುರಿತು ರಾಮಲಿಂಗಾರೆಡ್ಡಿ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಒಬ್ಬರು ಮೂರು ನಾಮಪತ್ರ ಸಲ್ಲಿಸಬಹುದು. ಎರಡು ನಾಮಪತ್ರದಲ್ಲಿ ಸರಿಯಿದೆ. ಆದ್ರೆ ಒಂದರಲ್ಲಿ ಏನೋ ಮಿಸ್ಟೇಕ್ ಆಗಿರಬಹುದು. ಇದನ್ನೇ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಅಪ್ಲೋಡ್ ಮಾಡುವವರು ಇದನ್ನು ಪರಿಗಣಿಸಬೇಕಿತ್ತು ಅಂತ ಸ್ಪಷ್ಟನೆ ನೀಡಿದ್ದಾರೆ.

  • ಗೊಣ್ಣೆ ಸುರಿಸಿಕೊಂಡಿದ್ದವನು ಪ್ರಧಾನಿ ಆಗಲಿಲ್ವೆ- ಹಾಸನದಲ್ಲಿ ಎಚ್‍ಡಿಡಿ ನಗೆಚಟಾಕಿ

    ಗೊಣ್ಣೆ ಸುರಿಸಿಕೊಂಡಿದ್ದವನು ಪ್ರಧಾನಿ ಆಗಲಿಲ್ವೆ- ಹಾಸನದಲ್ಲಿ ಎಚ್‍ಡಿಡಿ ನಗೆಚಟಾಕಿ

    ಹಾಸನ: ಮೊಮ್ಮಗ ಪ್ರಜ್ವಲ್ ನನ್ನು ಹಾಸನದಲ್ಲಿಯೇ ಪ್ರಚಾರ ಮಾಡುವಂತೆ ಹೇಳಿದ್ದೇನೆ. ಅವನ ಕುರಿತು ಯಾರೂ ನಿರ್ಲಕ್ಷ್ಯ ಮಾಡಬೇಡಿ. ನಾನು ಕೂಡ ಹರದನಹಳ್ಳಿಯಲ್ಲಿ ಗೊಣ್ಣೆ ಸುರಿಸಿಕೊಂಡು ಇದ್ದವನು. ಬಳಿಕ ಪ್ರಧಾನಿ ಆಗಲಿಲ್ವೆ ಎಂದು ನಗೆ ಚಟಾಕಿ ಹಾರಿಸಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೇವೇಗೌಡರ ಮಕ್ಕಳ ಕುರಿತು ಮುಖ್ಯಮಂತ್ರಿಗೆ ಯಾಕಿಷ್ಟು ದ್ವೇಷ. ನನ್ನ ಮೊಮ್ಮಗನ ಕುರಿತು ಇಲ್ಲದ ಆರೋಪ ಮಾಡ್ತಾರೆ. ಕಾಂಗ್ರೆಸ್ ನವರು ಇಷ್ಟೊಂದು ಕೆಳಮಟ್ಟಕ್ಕೆ ಇಳಿದಿದ್ದಾರೆ. ಹಾಗಾದ್ರೆ ಕಾಂಗ್ರೆಸ್ ಮುಸ್ಲಿಂರನ್ನು ದತ್ತು ತೆಗೆದುಕೊಂಡಿದಿಯಾ?. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ? ಪ್ರಜ್ವಲ್ ಹಾಸನದಲ್ಲಿಯೇ ಪ್ರಚಾರ ಮಾಡುತ್ತಾನೆ. ಅವನ ಬಗ್ಗೆ ಯಾರೂ ನಿರ್ಲಕ್ಷ್ಯ ಮಾಡಬೇಡಿ ಅಂತ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ರು.

    ಗೌರಿಬಿದನೂರು ಘಟನೆ ಕಾಂಗ್ರೆಸ್ ನ ಹೇಯ ಕೃತ್ಯ. 40 ಕಡೆ ಕಾರ್ಯಕ್ರಮ ನಿಗಧಿ ಆಗಿದೆ. ಎಲ್ಲ ಕಡೆ ಪ್ರಚಾರಕ್ಕೆ ಹೋಗ್ತೇನೆ. ನಮ್ಮಲ್ಲಿರುವ ಎಲ್ಲ ನಾಯಕರು ಚುನಾವಣೆಯಲ್ಲಿ ಸ್ಪರ್ಧಿಸಿರೋದ್ರಿಂದ ಪ್ರಚಾರ ಕಾರ್ಯದಲ್ಲಿ ನಾನು ಮತ್ತು ಕುಮಾರಸ್ವಾಮಿ ಓಡಾಡಲೇಬೇಕು. ನಮ್ಮಲ್ಲಿ ಯಾರೂ ಸ್ಟಾರ್ ಕ್ಯಾಂಪೆನರ್ ಇಲ್ಲ. ಚಂದ್ರಶೇಖರ್ ರಾವ್ ಮತ್ತು ಮಾಯಾವತಿ ಮತ್ತೆ ಪ್ರಚಾರಕ್ಕೆ ಬರುತ್ತಾರೆ. ಓವೈಸಿ ಸಹ ರಾಜ್ಯದಲ್ಲಿ ಪ್ರವಾಸ ನಡೆಸಲಿದ್ದಾರೆ ಅಂತ ಹೇಳಿದ್ರು.

    ಕಾಂಗ್ರೆಸ್ ಪ್ರಣಾಳಿಕೆ ಕುರಿತು ಪ್ರತಿಕ್ರಿಯಿಸಿ, ಲೋಕಾಯುಕ್ತ ತಂದಿದ್ದು ನಾವು. ಅದನ್ನು ನಾಶ ಮಾಡಿದ್ದು ಕಾಂಗ್ರೆಸ್. ಜೈಲ್ ಗೆ ಹೋಗೋದನ್ನು ತಪ್ಪಿಸಿಕೊಳ್ಳಲು ಎಸಿಬಿ ಮಾಡಿಕೊಂಡ್ರು. ಅಧಿಕಾರದಲ್ಲಿ ಇದ್ದಾಗ ಮಾಡಬಾರದ್ದನ್ನು ಮಾಡಿ ಈಗ ಲೋಕಾಯುಕ್ತ ಮಾಡುತ್ತೀವಿ ಎನ್ನುತ್ತಾರೆ. ರಿಟೈರ್ಡ್ ಮುಸ್ಲಿಂ ಐಎಎಸ್ ಆಫಿಸರ್‍ಗಳನ್ನು ಕಳಿಸಿ ಜೆಡಿಎಸ್‍ಗೆ ಓಟು ನೀಡಬೇಡಿ ಎಂದು ಪ್ರಚಾರ ಮಾಡಿಸ್ತಿದ್ದಾರೆ. ಇಂತಹ ನೀಚ ಕೃತ್ಯಕ್ಕೆ ಇಳಿದಿದ್ದಾರೆ ಅಂತ ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ಟೀಕೆ ಮಾಡಿದ್ರು.

    ಮೋದಿ ಅಧಿಕಾರ ವಹಿಸಿಕೊಂಡಾಗ ಇದ್ದಾಗ ಇದ್ದ ವರ್ಚಸ್ಸು ಈಗಿಲ್ಲ. ರಾಜ್ಯದಲ್ಲಿ ಅವರ ಪ್ರವಾಸದಿಂದ ನಮ್ಮ ಪಕ್ಷಕ್ಕೆ ಅಪಾಯ ಇಲ್ಲ. ಮುಂದೆ ರಾಜ್ಯದ ಮಹಾಜನತೆ ಕೊಡುವ ತೀರ್ಪಿಗೆ ಎಲ್ಲರೂ ತಲೆ ಬಾಗಲೇಬೇಕು ಅಂದ್ರು.

    ಬದಾಮಿ ಮತ್ತು ಚಾಮುಂಡೇಶ್ವರಿ ಚುನಾವಣೆ ಕುರಿತು ಮಾತನಾಡಿದ ಅವರು, ಮುಖ್ಯಮಂತ್ರಿ ಬಳಿ ಇಂಟಲಿಜೆನ್ಸ್ ಇದೆ. ಅವರು ಹೇಳಿರುವ ಪ್ರಕಾರ ಬದಾಮಿಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಬಾಂಬೆ ಕರ್ನಾಟಕದಲ್ಲಿ ಹಲವು ಮಂದಿ ಪಕ್ಷಕ್ಕೆ ಬಂದಿದ್ದಾರೆ ಅಂದ್ರೆ ಇದರ ಅರ್ಥ ಏನು ಅಂತ ಪ್ರಶ್ನಿಸಿದ ಅವರು, ಅಂಬರೀಶ್ ಬಗ್ಗೆ ಅಭಿಮಾನ ಇದೆ. ಅವರಿಗೂ ನನ್ನ ಬಗ್ಗೆ ಅಭಿಮಾನ ಇದೆ ಅಂದ್ರು.

  • ಕರ್ನಾಟಕದಲ್ಲಿ ಹೊಸ ದಾಖಲೆ ನಿರ್ಮಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ!

    ಕರ್ನಾಟಕದಲ್ಲಿ ಹೊಸ ದಾಖಲೆ ನಿರ್ಮಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ!

    ಬೆಂಗಳೂರು: ಕರ್ನಾಟಕದ ಎಲ್ಲಾ 30 ಜಿಲ್ಲೆಗಳನ್ನು ಸುತ್ತಾಡಿದ ಅಖಿಲ ಭಾರತ ಕಾಂಗ್ರೆಸ್‍ನ ಮೊದಲ ಅಧ್ಯಕ್ಷ ಅನ್ನೋ ಹೊಸ ದಾಖಲೆಯನ್ನು ರಾಹುಲ್ ಗಾಂಧಿ ನಿರ್ಮಿಸಿದ್ದಾರೆ.

    ಮೂರು ತಿಂಗಳಲ್ಲಿ ಬರೋಬ್ಬರೀ 3,500 ಕಿಲೋ ಮೀಟರ್ ಸಂಚರಿಸಿದ್ದಾರೆ. 20ರಷ್ಟು ಮಠ-ಮಂದಿರಗಳ ದರ್ಶನ ಪಡೆದಿದ್ದಾರೆ. ಮೊದಲು ಹೈದರಾಬಾದ್ ಕರ್ನಾಟಕ, ಬಳಿಕ ಮುಂಬೈ ಕರ್ನಾಟಕ, ಕರಾವಳಿ ಕರ್ನಾಟಕ, ಹಳೆ ಮೈಸೂರು ಭಾಗದಲ್ಲಿ ಸುತ್ತಾಡಿದ್ದಾರೆ.

    ಬಳ್ಳಾರಿಯಿಂದ ಕಲಬುರಗಿವರೆಗೆ 400 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಜಾಥಾ, ರೋಡ್ ಶೋ ನಡೆಸಿದ್ದಾರೆ. ಗುಜರಾತ್‍ನಲ್ಲೂ ಇದೇ ರೀತಿಯ ನಿರಂತರ ಜಾಥಾ, ರೋಡ್ ಶೋ ನಡೆಸಿದ್ದ ರಾಹುಲ್ ಅಲ್ಲಿ ಪಕ್ಷಕ್ಕಾಗದ ಲಾಭದಿದ ಉತ್ತೇಜಿರಾಗಿ ಅದೇ ತಂತ್ರವನ್ನೇ ಕರ್ನಾಟಕದಲ್ಲೂ ಅನುಸರಿಸ್ತಿದ್ದಾರೆ ಎಂಬುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

  • ಕುಡಿಯಲು ನೀರಿಲ್ಲ ಅಂದಿದ್ದಕ್ಕೆ ಕೈ ತಿರುವಿ ರೈತನ ಮೇಲೆ ಹಲ್ಲೆಗೆ ಯತ್ನಿಸಿದ ಎಂಎಲ್‍ಸಿ!

    ಕುಡಿಯಲು ನೀರಿಲ್ಲ ಅಂದಿದ್ದಕ್ಕೆ ಕೈ ತಿರುವಿ ರೈತನ ಮೇಲೆ ಹಲ್ಲೆಗೆ ಯತ್ನಿಸಿದ ಎಂಎಲ್‍ಸಿ!

    ರಾಯಚೂರು: ಮತಯಾಚನೆ ವೇಳೆ ಯುವರೈತನೋರ್ವ ಬೆಳೆಗೆ ಹಾಗೂ ಕುಡಿಯಲು ನೀರು ಕೇಳಿದಕ್ಕೆ ಎಮ್ ಎಲ್ ಸಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಯ ಬೆಂಬಲಿಗರು ಹಲ್ಲೆಗೆ ಮುಂದಾದ ಘಟನೆ ರಾಯಚೂರಿನ ಅತ್ತನೂರು ಗ್ರಾಮದಲ್ಲಿ ನಡೆದಿದೆ.

    ಮಾನ್ವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಹಾಲಿ ಶಾಸಕ ಹಂಪಯ್ಯ ನಾಯಕ್ ರ ಬೆಂಬಲಿಗರು ಹಾಗೂ ಎಂ.ಎಲ್.ಸಿ, ಕೆಪಿಸಿಸಿ ಉಪಾಧ್ಯಕ್ಷ ಎನ್ ಎಸ್ ಬೋಸರಾಜು ದರ್ಪ ಮೆರೆದಿದ್ದಾರೆ.

    ಕಾಂಗ್ರೆಸ್ ಪರ ಮತಯಾಚನೆಗೆ ಅತ್ತನೂರು ಗ್ರಾಮಕ್ಕೆ ತೆರಳಿದ್ದ ನಾಯಕರಿಗೆ ಭತ್ತ ಬೆಳೆಗೆ ಹಾಗೂ ಕುಡಿಯಲು ನೀರಿಲ್ಲ. ಈಗ ಮತ ಯಾಚನೆಗೆ ಬಂದಿದ್ದೀರಲ್ಲ ಅಂತ ರೈತ ಮಲ್ಲಪ್ಪ ಮಡಿವಾಳ ಖಾರವಾಗಿ ಪ್ರಶ್ನಿಸಿದ್ದಕ್ಕೆ ಕೊಪಗೊಂಡ ಎಂಎಲ್ ಸಿ ಬೋಸರಾಜ, ಸ್ವತಃ ರೈತನ ಕೈತಿರುವಿ ಹಲ್ಲೆಗೆ ಮುಂದಾಗಿದ್ದಾರೆ. ಬಳಿಕ ಕಾಂಗ್ರೆಸ್ ಅಭ್ಯರ್ಥಿ ಹಂಪಯ್ಯ ಅವರ ಬೆಂಬಲಿಗರು ರೈತನಿಗೆ ಮನಸೋ ಇಚ್ಛೆ ಬೈದು ಕಳಿಸಿದ್ದಾರೆ.

    ನೀರು ಕೇಳಿದ್ದಕ್ಕೆ ನನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆಂದು ರೈತ ಮಲ್ಲಪ್ಪ ಇದೀಗ ಆರೋಪಿಸಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಪ್ರಚಾರ ಮೊಟಕುಗೊಳಿಸಿ ಶಾಸಕ ಹಂಪಯ್ಯ ನಾಯಕ್ ಹಾಗೂ ಎನ್ ಎಸ್ ಬೋಸರಾಜ್ ಗ್ರಾಮದಿಂದ ಹೊರಟು ಹೋಗಿದ್ದಾರೆ.

    ಇತ್ತೀಚೆಗಷ್ಟೇ ಮಾನ್ವಿಯ ತಡಕಲ್ ಗ್ರಾಮದಲ್ಲಿ ಮತಯಾಚನೆ ವೇಳೆ ಶಾಸಕ ಹಂಪಯ್ಯ ನಾಯಕ್ ಗೆ ಜನ ಬೆವರಿಳಿಸಿದ್ದರು. ಎರಡು ಬಾರಿ ಶಾಸಕರಾದ್ರೂ ಏನೂ ಅಭಿವೃದ್ಧಿ ಮಾಡಿಲ್ಲ ಅಂತ ತರಾಟೆಗೆ ತೆಗೆದುಕೊಂಡಿದ್ದರು.