Tag: Karnataka Elections 2018

  • ಮೈಸೂರಿನಲ್ಲಿ ಕಾರ್ಯಕರ್ತರ ಮೇಲೆಯೇ ಸಿಡಿಮಿಡಿಗೊಂಡ ಯಡಿಯೂರಪ್ಪ!

    ಮೈಸೂರಿನಲ್ಲಿ ಕಾರ್ಯಕರ್ತರ ಮೇಲೆಯೇ ಸಿಡಿಮಿಡಿಗೊಂಡ ಯಡಿಯೂರಪ್ಪ!

    ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಕಾರ್ಯರ್ತರ ಮೇಲೆ ಗರಂ ಆಗಿದ್ದಾರೆ. ಸೋಮವಾರ ಕೆ.ಆರ್.ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ವೇಳೆ ಹಾರ ಹಾಕಲು ಬಂದ ಕಾರ್ಯಕರ್ತರ ಮೇಲೆ ಯಡಿಯೂರಪ್ಪ ಹರಿಹಾಯ್ದರು.

    ಹಾರ ಹಾಕಲು ಬಂದವರನ್ನು ಬೈದು ಕಳುಹಿಸಿದ್ರು. ಬಿಎಸ್‍ವೈ ರುದ್ರಾವತಾರ ಕಂಡು ಕಮಲ ಕಾರ್ಯಕರ್ತರು ತೆಪ್ಪಗಾದ್ರು. ಹಾರ ಹಾಕುವ ಗೋಜಿಗೆ ಹೋಗ್ಲಿಲ್ಲ.

    ಬಳಿಕ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ದುರಹಂಕಾರಿ. ಚಾಮುಂಡೇಶ್ವರಿಯಲ್ಲಿ ಸೋಲಿನ ಭಯದಿಂದ ಬದಾಮಿಗೆ ಬಂದಿದ್ದಾರೆ. ಅಲ್ಲಿಯೂ ನಮ್ಮ ಶ್ರೀರಾಮುಲು ಅವರು ಸಿದ್ದರಾಮಯ್ಯರನ್ನು ಸೋಲಿಸಿ ಮನೆಗೆ ಕಳುಹಿಸುತ್ತಾರೆ. ಇಂದಿರಾಗಾಂಧಿ ಇದ್ದಾಗ ಕಾಂಗ್ರೆಸ್ 16 ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ಆದ್ರೆ ಇಂದು ಬಿಜೆಪಿ 22 ರಾಜ್ಯದಲ್ಲಿ ಅಧಿಕಾರದಲ್ಲಿದೆ. ಕಾಂಗ್ರೆಸ್ ಉಳಿದಿರುವ ಏಕೈಕ ದೊಡ್ಡ ರಾಜ್ಯ ಕರ್ನಾಟಕ. ಅದೂ ಕೂಡ ಮೇ 15 ಕ್ಕೆ ಇವರ ಕೈ ತಪ್ಪಿ ಹೋಗುತ್ತೆ. ಸಂದೇಶ್‍ಸ್ವಾಮಿ 15 ಸಾವಿರ ಮತಗಳ ಅಂತರದಲ್ಲಿ ಗೆಲ್ತಾರೆ. ನೀವು ಅವರನ್ನ ಗೆಲ್ಲಿಸಿ ಅಭಿವೃದ್ಧಿಯ ಜವಾಬ್ದಾರಿ ನಮಗೆ ಬಿಡಿ ಅಂತ ಹೇಳಿದ್ರು. ಇದನ್ನೂ ಓದಿ: ನನ್ನ ಅಭಿಮಾನಿಗಳು ಅಂತ ಹೇಳಿಕೊಂಡು ಧಕ್ಕೆ ತರಲು ಸಂಚು ರೂಪಿಸಿದ್ದಾರೆ: ವಿಜಯೇಂದ್ರ

    ನರಸಿಂಹರಾಜ ಕ್ಷೇತ್ರದಲ್ಲಿ ಪ್ರಚಾರದ ವೇಳೆ ಬಿಜೆಪಿ ಜೊತೆಗೆ ಮೈತ್ರಿಗೆ ಮುಂದಾದ್ರೆ, ಕುಮಾರಸ್ವಾಮಿಯನ್ನ ಮನೆಯಿಂದ ಹೊರಹಾಕ್ತಿನಿ ಎಂಬ ದೇವೆಗೌಡ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಈ ವಿಚಾರದ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನಮಗೆ ಸಂಪೂರ್ಣ ಬಹುಮತ ಸಿಗುವುದು ಶತ ಸಿದ್ಧ. ನಾನೂ ಮೇ.18 ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುತ್ತೇನೆ. ಇದರಲ್ಲಿ ಯಾವುದೇ ಗೊಂದಲ, ಅನುಮಾನ ಬೇಡ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮುಂದಿನ ಪ್ರಧಾನಿ ಅಂತ ಹೇಳುತ್ತಿದ್ದಾರೆ. ರಾಹುಲ್ ಗಾಂಧಿ ಪ್ರಧಾನಿ ಮಾಡೋದಕ್ಕೂ ಮುಂಚೆ ನೀವೇ ನೆಗೆದು ಬಿದ್ದು ಹೋಗುತ್ತೀರಿ. ಸಿದ್ದರಾಮಯ್ಯ ಅವರೇ ನೀವೇ ಇರೋದಿಲ್ಲ ಅಂತ ವಾಗ್ದಾಳಿ ನಡೆಸಿದ್ರು. ಇದನ್ನೂ ಓದಿ: ಬಾಯಿಗೆ ಬಂದಂಗೆ ಮಾತಾಡಿ ಕೆರಳಿಸ್ಬೇಡ, ನಾನು ಗಂಡು ಮಗನೇ- ಕಾರ್ಯಕರ್ತನಿಗೆ ಅಪ್ಪಚ್ಚುರಂಜನ್ ಅವಾಜ್

    ನಾವು ಇಡೀ ದೇಶದಲ್ಲಿ ಅಧಿಕಾರದಲ್ಲಿದ್ದೇವೆ. ಕೇಂದ್ರದಲ್ಲಿ ಮೋದಿ ಸರ್ಕಾರ, ರಾಜ್ಯದಲ್ಲಿ ನಮ್ಮ ಸರ್ಕಾರ. ಬಿಜೆಪಿಗೆ ಬಹುಮತ ಬರೋದು ನಿಶ್ಚಿತ. ನರಸಿಂಹರಾಜ ಕ್ಷೇತ್ರದಲ್ಲಿ ಅಧಿಕಾರದಿಂದ ಮದದಿಂದ ಮೆರೆಯುತ್ತಿರುವ ತನ್ವೀರ್ ಸೇಠ್ ನನ್ನು ಹೊರಗಟ್ಟಿ ಅಂತ ಸಚಿವ ತನ್ವೀರ್ ಸೇಠ್ ವಿರುದ್ಧ ಏಕವಚನದಲ್ಲಿ ಬಿಎಸ್ ವೈ ವಾಗ್ದಾಳಿ ನಡೆಸಿದ್ದಾರೆ.

  • ಬಾಯಿಗೆ ಬಂದಂಗೆ ಮಾತಾಡಿ ಕೆರಳಿಸ್ಬೇಡ, ನಾನು ಗಂಡು ಮಗನೇ- ಕಾರ್ಯಕರ್ತನಿಗೆ ಅಪ್ಪಚ್ಚುರಂಜನ್ ಅವಾಜ್

    ಬಾಯಿಗೆ ಬಂದಂಗೆ ಮಾತಾಡಿ ಕೆರಳಿಸ್ಬೇಡ, ನಾನು ಗಂಡು ಮಗನೇ- ಕಾರ್ಯಕರ್ತನಿಗೆ ಅಪ್ಪಚ್ಚುರಂಜನ್ ಅವಾಜ್

    ಮಡಿಕೇರಿ: ಶಾಸಕ ಅಪ್ಪಚ್ಚು ರಂಜನ್ ಅವರನ್ನು ಬಿಜೆಪಿ ಕಾರ್ಯಕರ್ತರೇ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡ ಘಟನೆ ನಡೆದಿದೆ.

    ಕಡಗದಾಳ್ ಗ್ರಾಮಕ್ಕೆ ಅಪ್ಪಚ್ಚುರಂಜನ್ ಚುನಾವಣಾ ಪ್ರಚಾರಕ್ಕೆ ಹೋಗಿದ್ರು. ಈ ವೇಳೆ ಆರ್‍ಎಸ್‍ಎಸ್ ಬಗ್ಗೆ ಅಪ್ಪಚ್ಚುರಂಜನ್ ಉಡಾಫೆ ವರ್ತನೆ ತೋರುತ್ತಿರುವುದಕ್ಕೆ ಬಿಜೆಪಿ ಕಾರ್ಯಕರ್ತರೊಬ್ಬರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ:  ಮಸೀದಿಯ ಕೆಲ್ಸ ಮಾಡಿದ್ರಿ, ದೇವಸ್ಥಾನದ ಅಭಿವೃದ್ಧಿ ಯಾಕ್ ಮಾಡಿಲ್ಲವೆಂದ ಯುವಕನಿಗೆ ಆನಂದ್ ಸಿಂಗ್ ಅವಾಜ್

    ನೀವು ಮಾಡ್ತಿರೋದ ಸರೀನಾ ಅಂತಾ ಪ್ರಶ್ನಿಸಿದ್ರು. ಇದ್ರಿಂದ ಕೋಪಗೊಂಡ ಶಾಸಕ ಅಪ್ಪಚ್ಚು ರಂಜನ್, ಕುಳಿತ ಸ್ಥಳದಿಂದ ಎದ್ದು ಬಂದು ಕಾರ್ಯಕರ್ತನಿಗೆ ಅವಾಜ್ ಹಾಕಿದ್ದಾರೆ. ಬಾಯಿಗೆ ಬಂದಂಗೆ ಮಾತಾಡಬೇಡ, ನನ್ನನ್ನ ಕೆರಳಿಸಬೇಡ. ನಾನು ಗಂಡು ಮಗನೇ ಅಂತಾ ಕೈ ತಟ್ಟಿ ಅಪ್ಪಚ್ಚುರಂಜನ್ ಅಬ್ಬರಿಸಿದ್ದಾರೆ. ಇದನ್ನೂ ಓದಿ: ಜಗ್ಗೇಶ್ ಗೆದ್ದರೆ ಹಿಂದು ಗೆದ್ದಂತೆ ಟ್ವೀಟ್ – ವಿಡಿಯೋ ಮೂಲಕ ಯುವತಿಯಿಂದ ಜಗ್ಗೇಶ್‍ಗೆ ತರಾಟೆ

    ಶಾಸಕರ ಈ ನಡೆಗೆ ಬಿಜೆಪಿ ವಲಯದಲ್ಲಿಯೇ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

  • ಭಾಷಣದ ಮಧ್ಯೆ ಚುನಾವಣಾಧಿಕಾರಿಗಳ ವಾಚ್ ಸರಿಯಿಲ್ಲ ಅಂದ್ರು ಸಿಎಂ!

    ಭಾಷಣದ ಮಧ್ಯೆ ಚುನಾವಣಾಧಿಕಾರಿಗಳ ವಾಚ್ ಸರಿಯಿಲ್ಲ ಅಂದ್ರು ಸಿಎಂ!

    ಕಲಬುರಗಿ: ಚುನಾವಣಾ ಆಯೋಗದ ನಿಯಮದಂತೆ ರಾತ್ರಿ ಹತ್ತು ಗಂಟೆಯೊಳಗೆ ಭಾಷಣ ಮುಗಿಸಬೇಕು ಆದ್ರೆ ಸಿಎಂ ಸಿದ್ದರಾಮಯ್ಯ ಮಾತನಾಡುತ್ತಿದ್ದಂತೆಯೇ 9.59 ನಿಮಿಷಕ್ಕೆ ಬೆಂಬಲಿಗರೊಬ್ಬರು ಭಾಷಣ ನಿಲ್ಲಿಸುವಂತೆ ಸೂಚನೆ ಕೊಟ್ಟ ಪ್ರಸಂಗ ನಡೆದಿದೆ.

    ಸೋಮವಾರ ನಗರದ ವಿರಶೈವ ಕಲ್ಯಾಣ ಮಂಟಪ ಮುಭಾಗದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ವಾಚ್ ನೋಡುತ್ತಲೇ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದರು. ಈ ವೇಳೆ ಕಾರ್ಯಕರ್ತನೋರ್ವ ಮಧ್ಯೆ ಬಂದು ಸರ್ ಟೈಮಾಗ್ತಿದೆ ಅಂತಾ ಚೀಟಿ ನೀಡಲು ಮುಂದಾದಾಗ ಸಿಎಂ ಗರಂ ಆದರು.

    ಏ ನನಗೆ ಗೊತ್ತಪ್ಪ ಟೈಮ್ ಎಷ್ಟಾಗ್ತಿದೆ ಅಂತಾ. ನನ್ನ ವಾಚ್ ಸರಿಯಾಗಿದೆ. ಚುನಾವಣಾಧಿಕಾರಿಗಳ ವಾಚ್ ಸರಿಯಿಲ್ಲ ಅಂತಾ ಅನ್ಸುತ್ತೆ ಎಂದು ಹಾಸ್ಯ ಚಟಾಕಿ ಹಾರಿಸಿ ಭಾಷಣವನ್ನ ಸರಿಯಾಗಿ ಹತ್ತು ಗಂಟೆಗೆ ಮುಗಿಸಿದರು.

  • ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ವ್ಯಕ್ತಿಯೇ ಮಿಸ್ಸಿಂಗ್!

    ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ವ್ಯಕ್ತಿಯೇ ಮಿಸ್ಸಿಂಗ್!

    ಚಿಕ್ಕಬಳ್ಳಾಪುರ: ಚುನಾವಣೆಗೆ ಸ್ವತಂತ್ರ ಅಭ್ಯರ್ಥಿ ಯಾಗಿ ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿಯೋರ್ವ ನಿಗೂಢವಾಗಿ ನಾಪತ್ತೆಯಾಗಿರೋ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದಲ್ಲಿ ನಡೆದಿದೆ.

    ಗಂಗನಹಳ್ಳಿ ಗ್ರಾಮದ ಮೋಹನ್ ನಾಪತ್ತೆಯಾದ ಅಭ್ಯರ್ಥಿ. ಮೋಹನ್ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾದ ಏಪ್ರಿಲ್ 24 ರಂದು ನಾಮಪತ್ರ ಸಲ್ಲಿಕೆ ಮಾಡಿದ್ದರು.

    ನಾಮಪತ್ರ ಪರಿಶೀಲನೆ ದಿನವಾದ ಏಪ್ರಿಲ್ 27 ರಂದು ಮನೆಯಿಂದ ಹೊರ ಹೋದ ಮೋಹನ್ ಮತ್ತೆ ಮನಗೆ ಬಂದಿಲ್ಲ. ತೋಟದ ಬಳಿ ಮೋಟಾರ್ ರಿಪೇರಿ ಮಾಡಿಸಿ ಬರ್ತೀನಿ ಅಂತ ಸ್ಕೂಟರ್ ನಲ್ಲಿ ಹೋದ ಮೋಹನ್ ಮತ್ತೆ ಮನಗೆ ವಾಪಾಸ್ಸಾಗಿಲ್ಲ.

    ಈ ಸಂಬಂಧ ಭಯಬೀತರಾದ ಮೋಹನ್ ತಂದೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಗ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ.

  • ಎಲೆಕ್ಷನ್ ಎಫೆಕ್ಟ್: ಬನಶಂಕರಿ ದೇಗುಲದ ಹುಂಡಿಯಲ್ಲಿ ಭರ್ಜರಿ ದುಡ್ಡು

    ಎಲೆಕ್ಷನ್ ಎಫೆಕ್ಟ್: ಬನಶಂಕರಿ ದೇಗುಲದ ಹುಂಡಿಯಲ್ಲಿ ಭರ್ಜರಿ ದುಡ್ಡು

    ಬೆಂಗಳೂರು: ಚುನಾವಣೆ ಬಂದಿದ್ದೇ ಬಂದಿದ್ದು, ರಾಜ್ಯದಲ್ಲಿ ಚುನಾವಣಾ ಅಭ್ಯರ್ಥಿಗಳು ದೇವರ ಮೊರೆ ಹೋಗುತ್ತಿದ್ದಾರೆ. ಇನ್ನು ಕೆಲವರು ತಮ್ಮ ನೆಚ್ಚಿನ ನಾಯಕ ಗೆಲ್ಲಲಿ ಅಂತಾ ದೇವರ ಮೊರೆ ಹೋಗ್ತಿದ್ದಾರೆ.

    ಬನಶಂಕರಿ ದೇಗುಲದ ಹುಂಡಿ ಎಲೆಕ್ಷನ್ ಕೃಪೆಯಿಂದ ತುಂಬಿ ತುಳುಕಿದ್ದು ಮಗದೊಂದು ದಾಖಲೆಯ ಮೊತ್ತ ಹುಂಡಿಯಲ್ಲಿ ಸಂಗ್ರಹವಾಗಿದೆ. ಸಾಮಾನ್ಯವಾಗಿ ಒಂದು ತಿಂಗಳಲ್ಲಿ ಹುಂಡಿ ತೆರೆದಾಗ 20 ಲಕ್ಷ ದಿಂದ 22 ಲಕ್ಷದಷ್ಟು ದುಡ್ಡು ಸಂಗ್ರಹವಾಗುತ್ತಿತ್ತು. ಒಂದೇ ತಿಂಗಳಿಗೆ ಎಂಟು ಲಕ್ಷ ಆದಾಯ ಹೆಚ್ಚಾಗಿದೆ.

    ಈ ಬಾರಿ ಬರೋಬ್ಬರಿ 30 ಲಕ್ಷದಷ್ಟು ಹಣ ಸಂಗ್ರಹವಾಗಿದ್ದು ಮುಜರಾಯಿ ಇಲಾಖೆಯವರು ಫುಲ್ ಖುಷ್ ಆಗಿದ್ದಾರೆ. ಸಚಿವ ರಾಮಲಿಂಗರೆಡ್ಡಿ ಮಗಳು ಸೌಮ್ಯ ರೆಡ್ಡಿ ಸೇರಿದಂತೆ ಜಯನಗರ, ಬಿಟಿಎಂ ಲೇಔಟ್ ಹಾಗೂ ಬೆಂಗಳೂರು ವಿಧಾನಸಭಾ ಕ್ಷೇತ್ರದ ಬಹುತೇಕ ಅಭ್ಯರ್ಥಿಗಳು, ಕಾರ್ಯಕರ್ತರು ನಾಮಪತ್ರ ಸಲ್ಲಿಕೆಗೂ ಮುನ್ನ ಬನಶಂಕರಿ ದೇವರಿಗೆ ಪೂಜೆ ಮಾಡಿಸಿದ್ದರು.

  • ವಿಜಯೇಂದ್ರಗೆ ಟಿಕೆಟ್ ನೀಡದ ನಿರ್ಧಾರ ಯಾರದ್ದು: ಚರ್ಚೆ ವೇಳೆ ಬಾಯಿಬಿಟ್ಟ ಅಮಿತ್ ಶಾ

    ವಿಜಯೇಂದ್ರಗೆ ಟಿಕೆಟ್ ನೀಡದ ನಿರ್ಧಾರ ಯಾರದ್ದು: ಚರ್ಚೆ ವೇಳೆ ಬಾಯಿಬಿಟ್ಟ ಅಮಿತ್ ಶಾ

    ಬೆಂಗಳೂರು: ಬಿಜೆಪಿ ಸಿಎಂ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ವರುಣ ಟಿಕೆಟ್ ಕೈ ತಪ್ಪಿದ್ದು ಯಾರ ನಿರ್ಣಯ ಎನ್ನುವುದನ್ನು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

    ಮಾಧ್ಯಮದವರ ಜೊತೆ ಅನೌಪಚಾರಿಕ ಚರ್ಚೆ ವೇಳೆ ಮಾತನಾಡಿದ ಶಾ, ಅದು ನನ್ನ ನಿರ್ಣಯ, ಇದರಲ್ಲಿ ಯಾರ ಪಾತ್ರವೂ ಇಲ್ಲ. ನಾನು ವರುಣಾ ಕ್ಷೇತ್ರಕ್ಕೆ ಹೋಗುತ್ತೇನೆ, ವರುಣಾದಲ್ಲಿ ನಮ್ ಅಭ್ಯರ್ಥಿ ಸ್ಟ್ರಾಂಗ್ ಇದ್ದು ಗೆಲ್ಲುತ್ತಾರೆ ಅವರು ಒಳ್ಳೆಯ ಅಭ್ಯರ್ಥಿ ಎಂದು ತಿಳಿಸಿದರು.

    ಟಿಕೆಟ್ ಫೈನಲ್ ಮಾಡಿದ್ದು, ಪ್ರಚಾರಕ್ಕಾಗಿ ಬಳ್ಳಾರಿಗೂ ಹೋಗಲಿದ್ದೇನೆ. ನಾನೇ ಅಲ್ಲಿಯೂ ಹೋಗಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡುತ್ತೇನೆ ಎಂದರು. ಇದನ್ನೂ ಓದಿ:  ವಿಶೇಷ ಕಾರಣದಿಂದ ವಿಜಯೇಂದ್ರಗೆ ಟಿಕೆಟ್ ತಪ್ಪಿದೆ: ಬಿಎಸ್‍ವೈ

    ನಾನು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ನಾನು ಭೇಟಿಯಾಗಿಲ್ಲ. ನಾನ್ಯಾಕೆ ಕುಮಾರಸ್ವಾಮಿಯನ್ನು ಮೀಟ್ ಆಗಲಿ. ಸಿಎಂ ಸಿದ್ದರಾಮಯ್ಯ ಮೂರ್ಖತನದ ಹೇಳಿಕೆ ನೀಡುತ್ತಿದ್ದಾರೆ ಅಂತಾ ಸ್ಪಷ್ಟನೆ ನೀಡಿದ್ರು. ಇದನ್ನೂ ಓದಿ: ವಿಜಯೇಂದ್ರಗೆ ಟಿಕೆಟ್ ತಪ್ಪಿದ ಎಫೆಕ್ಟ್-ನೋಟಾ ಚಲಾವಣೆ ಅಭಿಯಾನದ ಕರಪತ್ರ ಫುಲ್ ವೈರಲ್

    ಇತ್ತ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಅಮಿತ್ ಶಾ ಜೊತೆಗಿರುವ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ಅವರಿಗೆ ಜವಾಬ್ದಾರಿ ಏನಾದ್ರೂ ಇದ್ರೆ ಈ ರೀತಿ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಲಿ. ಅಲ್ಲದೇ ಅಮಿತ್ ಶಾ ಭೇಟಿ ಮಾಡಲು ನನಗೆ ಏನು ಸಂಬಂಧ ಅವರೇನೂ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾ ಪ್ರವಾಸ ಮಾಡೋಕೆ ಅವರ ಜೊತೆಗೆ ವಿಮಾನದಲ್ಲಿ ಎಲ್ಲಿಗೆ ಹೋಗಲು ಸಾಧ್ಯ ಎಂದು ಪ್ರಶ್ನಿಸಿದ್ರು. ಅಲ್ಲದೇ ಹೀಗೆ ಹೇಳಿದ್ರೆ ಸಿಎಂ ಕುಡಿದು ಮಾತನಾಡುತ್ತಿದ್ದಾರೆ ಅಂತಾ ಜನ ಕಾಮೆಂಟ್ಸ್ ಮಾಡ್ತಾರೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ:  ವಿಜಯೇಂದ್ರ ಕ್ಷೇತ್ರಕ್ಕೆ ಬಂದು 20 ದಿನ ಆಯ್ತು, ನಾನು 37 ವರ್ಷಗಳಿಂದ ಬಿಜೆಪಿಗೆ ದುಡಿದಿದ್ದೇನೆ: ವರುಣಾ ಬಿಜೆಪಿ ಅಭ್ಯರ್ಥಿ ಬಸವರಾಜು

    ವರುಣಾ ಕ್ಷೇತ್ರದಿಂದ ಸಿಎಂ ಸಿದ್ದರಾಮಯ್ಯರ ಪುತ್ರ ಯತೀಂದ್ರ ಸ್ಪರ್ಧೆ ಮಾಡಿದ್ದಾರೆ. ಯತೀಂದ್ರ ವಿರುದ್ಧ ವಿಜಯೇಂದ್ರ ಸ್ಪರ್ಧೆ ಮಾಡ್ತಾರೆ ಅಂತಾ ಹೇಳಲಾಗಿತ್ತು. ಆದ್ರೆ ನಾಮಪತ್ರ ಸಲ್ಲಿಸುವ ಕೊನೆ ಗಳಿಗೆಯಲ್ಲಿ ಬಿಜೆಪಿ ಹೈಕಮಾಂಡ್ ಬಸವರಾಜು ಎಂಬವರಿಗೆ ಟಿಕೆಟ್ ನೀಡಿದೆ. ಇದನ್ನೂ ಓದಿ: ಪಕ್ಷದ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿರೋಣ: ವಿಜಯೇಂದ್ರ

  • ಗೌರಿ ಸಂತಾನ, ಆ ಸಂತಾನ ಅಂತಾ ಹೇಳಿಕೊಳ್ಳುವ ಬಹುತೇಕ ಬುದ್ದಿ ಜೀವಿಗಳು ಮಾರಾಟವಾಗಿದ್ದಾರೆ: ಅನಂತಕುಮಾರ್ ಹೆಗ್ಡೆ

    ಗೌರಿ ಸಂತಾನ, ಆ ಸಂತಾನ ಅಂತಾ ಹೇಳಿಕೊಳ್ಳುವ ಬಹುತೇಕ ಬುದ್ದಿ ಜೀವಿಗಳು ಮಾರಾಟವಾಗಿದ್ದಾರೆ: ಅನಂತಕುಮಾರ್ ಹೆಗ್ಡೆ

    ಬೆಳಗಾವಿ: ಪ್ರಧಾನಿ ಮೋದಿ ವಿರುದ್ಧ ಪ್ರಚಾರ ನಡೆಸಲು ಕಾಂಗ್ರೆಸ್ ಕೆಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಗೆ 5 ಲಕ್ಷ ಕೋಟಿ. ರೂಪಾಯಿಗೆ ಗುತ್ತಿಗೆ ನೀಡಿದೆ. ಮೋದಿ ವಿರುದ್ಧ ಪ್ರಚಾರ ನಡೆಸಲು ಗೌರಿ ಸಂತಾನ, ಆ ಸಂತಾನ ಎಂಬ ಎಲ್ಲ ವಿಚಾರವಾದಿಗಳ ಬೆಂಬಲವಿದೆ. ರಾಜ್ಯದ ಬಹುತೇಕ ಬುದ್ದಿಜೀವಿಗಳು ತಮ್ಮನ್ನ ಹಣಕ್ಕಾಗಿ ಮಾರಾಟ ಮಾಡಿಕೊಂಡಿದ್ದಾರೆ ಅಂತಾ ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ಆರೋಪಿಸಿದ್ರು.

    ಭಾನುವಾರ ಎಂ.ಕೆ.ಹುಬ್ಬಳ್ಳಿ ಗ್ರಾಮದಲ್ಲಿ ಪ್ರಚಾರದ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅನಂತಕುಮಾರ್ ಹಗ್ಡೆ, ನಟ ಪ್ರಕಾಶ್ ರೈ ನಾಲಿಗೆ ಎರಡು ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ. ಪ್ರಕಾಶ್ ರೈ ನಾನು ಹಿಂದೂ ವಿರೋಧಿ ಅಲ್ಲ, ಆದ್ರೆ ಮೋದಿ, ಅಮಿತ್ ಶಾ ಮತ್ತು ಅನಂತಕುಮಾರ್ ಹಗ್ಡೆ ವಿರೋಧಿ ಅಂತಾ ಹೇಳ್ತಾರೆ. ನಿದ್ದೆ ಮಂಪರಿನಲ್ಲಿ ಹುಚ್ಚು ಹಿಡಿದವ್ರು ಮಾತ್ರ ಈ ರೀತಿ ಹೇಳೋದಕ್ಕೆ ಸಾಧ್ಯ ಅಂತಾ ರೈ ವಿರುದ್ಧ ಕಿಡಿಕಾರಿದ್ರು.

    ನರೇಂದ್ರ ಮೋದಿ ಕಪ್ಪು ಹಣದ ಬಾಣ ಬಿಡುತ್ತಿದ್ದಂತೆ ಒಬ್ಬೊಬ್ಬರು ದೇಶ ಬಿಟ್ಟು ಹೋಗಲು ಆರಂಭಿಸಿದ್ರು. ಇನ್ನೇನು ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಕೊಲೊಂಬಿಯಾ ಗರ್ಲ್ ಫ್ರೆಂಡ್ ಜೊತೆ ಹೋಗಲಿದ್ದಾರೆ. ಮಗನ ಜೊತೆ ಸೋನಿಯಾ ಗಾಂಧಿ ದೇಶ ಬಿಡ್ತಾರೆ ಅಂತಾ ಭವಿಷ್ಯ ನುಡಿದ್ರು.

    ಸಿದ್ದರಾಮಯ್ಯ ರಾಜ್ಯದ ದೇವಸ್ಥಾನ, ಮಠಗಳ ಮೇಲೆ ಕಣ್ಣೀಟ್ಟಿದ್ದಾರೆ. ಆದ್ರೆ ಜಕಾತ್ (ದಾನ) ಹೆಸರಲ್ಲಿ ಮಸೀದಿ, ಚರ್ಚ್ ಗಳಿಗೆ ಎಷ್ಟು ಹಣ ಬರುತ್ತೆಂದು ಲೆಕ್ಕ ಇಟ್ಟಿದ್ದಾರಾ? ಜಕಾತ್ ಹೆಸರಲ್ಲಿ ಬಂದ ಹಣದಿಂದ ಬಾಂಬ್, ತಲ್ವಾರ್ ಖರೀದಿ ಮಾಡಲಾಗುತ್ತೆ ಅಂತಾ ಆರೋಪ ಮಾಡಿದ್ರು.

  • ಬಿಜೆಪಿ ಅಭ್ಯರ್ಥಿಗೆ ಹಣ, ಭತ್ತ ನೀಡಿದ ಮತದಾರರು!

    ಬಿಜೆಪಿ ಅಭ್ಯರ್ಥಿಗೆ ಹಣ, ಭತ್ತ ನೀಡಿದ ಮತದಾರರು!

    ಕೊಪ್ಪಳ: ಚುನಾವಣೆಯಲ್ಲಿ ಮತದಾರರಿಗೆ ಹಣ ಹೆಂಡದ ಹೊಳೆಯನ್ನೇ ಅಭ್ಯರ್ಥಿಗಳು ಹರಿಸೋದು ಸಾಮಾನ್ಯ. ಆದ್ರೆ ಇಲ್ಲೊಬ್ಬ ಅಭ್ಯರ್ಥಿಗೆ ಮತದಾರರೆ ಹಣ ಭತ್ತವನ್ನು ಕೊಟ್ಟು ಚುನಾವಣೆಗೆ ಸಹಾಯ ಮಾಡುತ್ತಿರುವ ಘಟನೆ ಕೊಪ್ಪಳದಲ್ಲಿ ನೆಡದಿದೆ.

    ಕೊಪ್ಪಳದ ಕನಕಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಬಸವರಾಜ ದಡೆಸುಗುರುಗೆ ಮತದಾರರೇ ಹಣ ಮತ್ತು ಭತ್ತವನ್ನು ನೀಡುತ್ತಿದ್ದಾರೆ.

    ಇಂದಿನ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಮತದಾರರಿಗೆ ಹಣವನ್ನು ನೀಡುತ್ತಾರೆ. ಆದ್ರೆ ಇಲ್ಲಿ ಉಲ್ಟಾ ಆಗಿದ್ದು, ಅಭ್ಯರ್ಥಿಗೆ ಮತದಾರರೆ ಹಣ ಮತ್ತು ಭತ್ತವನ್ನು ಕೊಡುತ್ತಿದ್ದಾರೆ. ಅದರಂತೆ ಇಂದು ಕ್ಷೇತ್ರದ ಸಿದ್ದಾಪುರ ಗ್ರಾಮದ ರೈತರೊಬ್ಬರು 101 ಚೀಲ ಭತ್ತವನ್ನು ನೀಡುವ ಮೂಲಕ ಬಿಜೆಪಿ ಅಭ್ಯರ್ಥಿ ಗೆಲುವಿಗಾಗಿ ಸಹಾಯವನ್ನು ಮಾಡಿದ್ದಾರೆ.

  • ಅಚ್ಛೇ ದಿನ್ ಯಾರಿಗೂ ಬಂದಿಲ್ಲ- ಕೈ ಪರ ಪ್ರಚಾರಕ್ಕಿಳಿದ ಲೂಸ್ ಮಾದ ಯೋಗಿ

    ಅಚ್ಛೇ ದಿನ್ ಯಾರಿಗೂ ಬಂದಿಲ್ಲ- ಕೈ ಪರ ಪ್ರಚಾರಕ್ಕಿಳಿದ ಲೂಸ್ ಮಾದ ಯೋಗಿ

    ಬೆಂಗಳೂರು: ಲೂಸ್ ಮಾದ ಅಂತಲೇ ಖ್ಯಾತಿಗಳಿಸಿರುವ ನಟ ಯೊಗೀಶ್ ಇಂದು ಕಾಂಗ್ರೆಸ್ ಪರ ಪ್ರಚಾರಕ್ಕಿಳಿದಿದ್ದಾರೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಕೆ.ರಮೇಶ್ ಪರವಾಗಿ ಪರಪ್ಪನ ಅಗ್ರಹಾರದಲ್ಲಿ ರೋಡ್ ಶೋನಲ್ಲಿ ಲೂಸ್ ಮಾದ ಭಾಗವಹಿಸಿ ಪ್ರಚಾರ ನಡೆಸಿದರು.

    ಇದೇ ವೇಳೆ ಮಾತನಾಡಿದ ಯೋಗಿ, ಜೈಲಿಗೆ ಹೋಗಿ ಬಂದವರಿಗೆ ಮತ ಹಾಕಬೇಡಿ ಎಂದು ಹೇಳುವ ಮೂಲಕ ಯಡಿಯೂರಪ್ಪ ನವರಿಗೆ ಟಾಂಗ್ ನೀಡಿದ್ದಾರೆ.

    ಬಿಜೆಪಿ ಸರ್ಕಾರದವರು ಯಾವತ್ತೂ ಅಚ್ಛೇ ದಿನ್ ಅಚ್ಛೇ ದಿನ್ ಅಂತ ಹೇಳುತ್ತಾನೇ ಇದ್ದಾರೆ. ಅಚ್ಛೇ ದಿನ್ ಯಾರಿಗೂ ಬಂದಿಲ್ಲ. ಅದು ಏನು ಅನ್ನೋದು ಅರ್ಥನೂ ಆಗಿಲ್ಲ ನಮಗೆ. ಎಲ್ಲರೂ ಕಾಂಗ್ರೆಸ್ ಗೆ ಸಪೋರ್ಟ್ ಮಾಡಿ. ನಾನು ಇರೋವರೆಗೂ ಕಾಂಗ್ರೆಸ್ ಗೇ ಸಪೋರ್ಟ್ ಮಾಡೋದು. ನೀವೂ ಕೂಡ ಕಾಂಗ್ರೆಸ್ ಗೆ ಬೆಂಬಲ ಕೊಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಮಡಿಕೇರಿಯಲ್ಲಿ ಮಳೆ ಹುಡ್ಗಿಯಿಂದ ಜೆಡಿಎಸ್ ಪರ ಪ್ರಚಾರ- ಹಾಡಿ ಜನರ ಸಮಸ್ಯೆ ಆಲಿಸಿ ಗದ್ಗದಿತರಾದ ಪೂಜಾಗಾಂಧಿ

    ಬಿಜೆಪಿಯವರು ಯಾವ ಕೆಲಸನೂ ಮಾಡಿಕೊಟ್ಟಿಲ್ಲ. ನಿಮ್ಮಲ್ಲರನ್ನೂ ಮೆಚ್ಚಿಸಬೇಕು ಅಂತ ನಾನು ಇದನ್ನು ಹೇಳುತ್ತಿಲ್ಲ. ನನ್ನ ಸ್ವಂತ ಅನುಭವ ಇದು. ಹೀಗಾಗಿ ನಾನು ನೋಡಿರೋ ವಿಚಾರವನ್ನು ನಿಮಗೆ ಹೇಳಬೇಕು. ಅವರು ಯಾವ ಕೆಲಸನೂ ಮಾಡಲ್ಲ. ಜೈಲಿನಲ್ಲಿದ್ದವರನ್ನು ಇಂದು ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಅವರೊಬ್ಬರು ಮುಖ್ಯಮಂತ್ರಿ ಅಭ್ಯರ್ಥಿಯಂತೆ. ಕಳ್ಳರಿಗೆಲ್ಲ ನೀವು ಮತ ಹಾಕಬೇಡಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಕೊನೆಗೂ ಪ್ರಚಾರಕ್ಕಿಳಿದ ಕುರುಕ್ಷೇತ್ರದ ಅಭಿಮನ್ಯು- ತಂದೆಯ ಹಾದಿಯಲ್ಲಿಯೇ ಹೆಜ್ಜೆ ಇಡುತ್ತೇನೆ ಅಂದ್ರು ನಿಖಿಲ್

    ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿರವರ ಮನ್ ಕೀ ಬಾತ್ ಈ ಬಾರಿ ವಾಂಗಿ ಬಾತ್ ಆಗಲಿದೆ. ಬೆಂಗಳೂರು ದಕ್ಷಿಣದಲ್ಲಿ ಕಾಂಗ್ರೆಸ್ ಗೆ ಮತ ನೀಡುವಂತೆ ಕರೆ ನೀಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್‍ಗೆ ಸ್ಪಷ್ಟ ಬಹುಮತ ಸಿಗಲಿದೆಯೆಂದು ವಿಶ್ವಾಸ ವ್ಯಕ್ತಪಡಿಸಿದರು. ರೋಡ್ ಶೋನಲ್ಲಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಭಾಗವಹಿಸಿದ್ದರು.

  • ಮರಾಠಿ ಬರೋಲ್ಲ ಕ್ಷಮಿಸಿ ಅಂತ ಸಿಎಂ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ: ಪ್ರತಾಪ್ ಸಿಂಹ ಕಿಡಿ

    ಮರಾಠಿ ಬರೋಲ್ಲ ಕ್ಷಮಿಸಿ ಅಂತ ಸಿಎಂ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ: ಪ್ರತಾಪ್ ಸಿಂಹ ಕಿಡಿ

    ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕನ್ನಡದ ಅರಿವಿಲ್ಲ ಅಂತ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರಿಗೆ ಪ್ರಣಾಳಿಕೆ, ಪ್ರನಾಳಿಕೆ ಈ ಪದಗಳಿಗೆ ವ್ಯತ್ಯಾಸವೇ ಗೊತ್ತಿಲ್ಲ. ಬೆಳಗಾವಿಯಲ್ಲಿ ನನಗೆ ಮರಾಠಿ ಬರೋಲ್ಲ ಕ್ಷಮಿಸಿ ಅಂತ ಭಾಷಣ ಮಾಡಿದ್ದಾರೆ. ಇದು ಕನ್ನಡಿಗರಿಗೆ ಮಾಡಿದ ಅವಮಾನ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕನ್ನಡದ ಕಂದ ಸಿದ್ದರಾಮಯ್ಯ ಮರಾಠಿ ಜಪ – ಬೆಳಗಾವಿಯಲ್ಲಿ ಭಾಷೆ ಬರಲ್ಲ ಎಂದು ಕ್ಷಮೆಯಾಚನೆ

    ಕನ್ನಡಿಗರಿಗೆ ಅವಮಾನ ಮಾಡಿದ್ದಕ್ಕೆ ಸಿಎಂ ಅವರು ಈ ಕೂಡಲೇ ರಾಜ್ಯದ ಜನರ ಕ್ಷಮೆಯಾಚಿಸಬೇಕು. ಬೆಳಗಾವಿಯಲ್ಲಿ ನಿಂತು ಮರಾಠ ಪ್ರೇಮ ಮೆರೆಯುವ ಇವರು ಕನ್ನಡ ಅಸ್ಮಿತೆ ಬಗ್ಗೆ ಮಾತನಾಡುತ್ತಾರೆ. ಇವರದ್ದು ಕೇವಲ ರಾಜಕೀಯಕ್ಕಾಗಿ ಕನ್ನಡ ಪ್ರೇಮ. ನಿಜವಾದ ಕನ್ನಡ ಪ್ರೇಮ ಇದ್ದೀದ್ದರೆ ಬೆಳಗಾವಿಯಲ್ಲಿ ಮರಾಠಿಗರ ಕ್ಷಮೆ ಕೇಳುತ್ತಿರಲಿಲ್ಲ. ರಾಜ್ಯದ ಜನರಿಗೆ ಸಿದ್ದರಾಮಯ್ಯರ ಬೋಗಸ್ ಕನ್ನಡ ಪ್ರೇಮ ಅರ್ಥವಾಗಿದೆ. ಈ ಚುನಾವಣೆಯಲ್ಲಿ ಸಿದ್ದರಾಮಯ್ಯರಿಗೆ ಕನ್ನಡಿಗರೇ ಪಾಠ ಕಲಿಸುತ್ತಾರೆ ಅಂತ ಸಿಎಂ ವಿರುದ್ಧ ಹರಿಹಾಯ್ದರು.