Tag: Karnataka Elections 2018

  • ರಾಹುಲ್‍ಗೆ ಮೋದಿಯಿಂದ 15 ನಿಮಿಷದ ಚಾಲೆಂಜ್- ಮತ್ತೆ ಪ್ರಧಾನಿಯನ್ನು ಕಾಲೆಳೆದ ರಮ್ಯಾ

    ರಾಹುಲ್‍ಗೆ ಮೋದಿಯಿಂದ 15 ನಿಮಿಷದ ಚಾಲೆಂಜ್- ಮತ್ತೆ ಪ್ರಧಾನಿಯನ್ನು ಕಾಲೆಳೆದ ರಮ್ಯಾ

    ಬೆಂಗಳೂರು: ಕರ್ನಾಟಕ ಚುನಾವಣಾ ರಂಗಕ್ಕೆ ಪ್ರಧಾನಿ ನರೇಂದ್ರ ಮೋದಿ ಎಂಟ್ರಿ ಕೊಟ್ಟಿದ್ದು, ಮೊದಲ ದಿನವೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು.

    ಚಾಮರಾಜನಗರ ಜಿಲ್ಲೆಯ ಸಂತೇಮರಳ್ಳಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಪ್ರಧಾನಿ ಮೋದಿ ನೇರವಾಗಿ ರಾಹುಲ್ ಗಾಂಧಿ ಸವಾಲು ಹಾಕಿದ್ರು. ರಾಹುಲ್ ಗಾಂಧಿ ಚೀಟಿ ಇಲ್ಲದೇ ಕರ್ನಾಟಕ ಸರ್ಕಾರದ ಸಾಧನೆಯನ್ನು 15 ನಿಮಿಷ ಭಾಷಣ ಮಾಡಲಿಕ್ಕೆ ಆಗುತ್ತಾ? ವಿಶ್ವೇಶ್ವರಯ್ಯ ಹೆಸರನ್ನು 5 ಬಾರಿ ಸ್ಪಷ್ಟವಾಗಿ ಹೇಳಲು ಸಾಧ್ಯವೇ ಎಂದು ಮೋದಿ ಬಹಿರಂಗ ಸವಾಲು ಹಾಕಿದ್ದರು.

    ರಮ್ಯಾ ಉತ್ತರ: ಕಾಂಗ್ರೆಸ್ ಸಾಮಾಜಿಕ ಜಾಲತಾಗಳ ಮುಖ್ಯಸ್ಥೆ ರಮ್ಯಾ, ನೇರವಾಗಿ ಮೋದಿಯವರ ಭಾಷಣದ ತುಣುಕುಗಳನ್ನು ಬಳಸಿ ಕಾಲೆಳೆದಿದ್ದಾರೆ. ಈ ಹಿಂದೆ ರಾಹುಲ್ ಗಾಂಧಿ ಲೋಕಸಭೆಯಲ್ಲಿ ನನಗೆ ಮೋದಿ ಅವರ ಜೊತೆ ಮಾತನಾಡಲು 15 ನಿಮಿಷಗಳ ಕಾಲಾವಕಾಶ ನೀಡಿ ರಾಫೆಲ್ ಮತ್ತು ನೀರವ್ ಮೋದಿ ಬಗ್ಗೆ ಮಾತನಾಡ್ತೇನೆ. ನನ್ನ ಪ್ರಶ್ನೆಗಳಿಗೆ ಮೋದಿ ನನ್ನ ಮುಂದೆ ನಿಲ್ಲೋದಕ್ಕೆ ಆಗಲ್ಲ ಅಂತಾ ಹೇಳಿರುವ ಕ್ಲಿಪ್ ಜೊತೆಗೆ ಮೋದಿಯವರ ಭಾಷಣದ ವಿಡಿಯೋ ಸೇರಿಸಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

    ಕಾಂಗ್ರೆಸ್ ಟ್ವಟ್ಟರ್ ಖಾತೆಯಲ್ಲಿ ಇನ್ನೊಂದು ವಿಡಿಯೋ ಅಪ್ಲೋಡ್ ಮಾಡಲಾಗಿದ್ದು, ಇಲ್ಲಿಯೂ ಸಹ ಮೋದಿಯವರ ಭಾಷಣದ ತುಣುಕುಗಳನ್ನೇ ಬಳಸಿ ಕಾಲೆಳೆದಿದ್ದಾರೆ. ಮಂಗಳವಾರ ಮೋದಿ ತಮ್ಮ ಭಾಷಣದಲ್ಲಿ ನಾವು ಒಂದು ಒಳ್ಳೆಯ ಬಟ್ಟೆ ಸಹ ಹಾಕಲ್ಲ ಅಂದಿರುವ ಹೇಳಿಕೆಯನ್ನು ಬಳಸಲಾಗಿದೆ. ಈ ಹೇಳಿಕೆಯ ಜೊತೆಗೆ ಹೈಫೈ ಬಟ್ಟೆ ತೊಟ್ಟಿರುವ ಮೋದಿಯವರ ಫೋಟೋ ಹಾಗು ಅವುಗಳ ಬೆಲೆಯನ್ನು ತೋರಿಸಲಾಗಿದೆ. ಈ ವಿಡಿಯೋಗೆ 1974ರಲ್ಲಿ ತೆರೆಕಂಡ ‘ಸಗಿನಾ’ ಸಿನಿಮಾದ ಕಿಶೋರ್ ಕುಮಾರ್ ಹಾಡಿರುವ ದಿಲೀಪ್ ನಟನೆಯ ‘ಸಾಲಾ ಮೈ ತೋ ಸಾಬ್ ಬನ್ ಗಯಾ’ ಹಾಡನ್ನು ಬಳಸಿಕೊಳ್ಳಲಾಗಿದೆ.

    ಒಟ್ಟಿನಲ್ಲಿ ಕರ್ನಾಟಕ ರಾಜಕೀಯ ಕುರುಕ್ಷೇತ್ರ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ರಾಜಕೀಯ ನಾಯಕರು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.

  • ಕನ್ನಡಿಗ ಪ್ರಧಾನಿಯಾದ್ರೆ ಗೌರವ ಕೊಡುವ ಸಂಸ್ಕೃತಿ ಕಾಂಗ್ರೆಸ್ಸಿಗಿಲ್ಲ- ಮೋದಿಯನ್ನು ಹೊಗಳಿ ಸಿಎಂ ತೆಗಳಿದ ಮಾಜಿ ಪ್ರಧಾನಿ

    ಕನ್ನಡಿಗ ಪ್ರಧಾನಿಯಾದ್ರೆ ಗೌರವ ಕೊಡುವ ಸಂಸ್ಕೃತಿ ಕಾಂಗ್ರೆಸ್ಸಿಗಿಲ್ಲ- ಮೋದಿಯನ್ನು ಹೊಗಳಿ ಸಿಎಂ ತೆಗಳಿದ ಮಾಜಿ ಪ್ರಧಾನಿ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಒಂದೊಂದು ರಾಜ್ಯಕ್ಕೂ ಹೋದಾಗ ಆ ರಾಜ್ಯದ ಬಗ್ಗೆ ತಿಳಿದುಕೊಂಡಿರುತ್ತಾರೆ. ಎರಡು ತಿಂಗಳಿಂದ ರಾಜ್ಯದ ಬಗ್ಗೆ ಮೋದಿ ತಿಳಿದಿದ್ದಾರೆ. ಕರ್ನಾಟಕದ ಬಗ್ಗೆ ತಿಳಿದುಕೊಂಡೇ ಅವರು ಮಾತಾಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದ್ದಾರೆ.

    ನನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡುತ್ತಿದ್ದ ವೇಳೆ ಉಡುಪಿಯಲ್ಲಿ ಮೋದಿ ಹೊಗಳಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾನು ಕನ್ನಡಿಗ, ರೈತರ ಮಗ ಅನ್ನೋದನ್ನ ಅವರು ತಿಳಿದುಕೊಂಡಿದ್ದಾರೆ. ಆದ್ರೆ ಕಾಂಗ್ರೆಸ್ ಅವರು ನನ್ನ ಬಗ್ಗೆ ಮಾತಾಡಿದ್ದಾರೆ. ರಾಹುಲ್ ಗಾಂಧಿ ಬೆಳೆಯುತ್ತಿರುವವರು. ಈಗಷ್ಟೇ ಪಕ್ಷದ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದಾರೆ. ಈ ಬಗ್ಗೆ ನಾನು ಮಾತನಾಡುವುದಿಲ್ಲ. ಆದ್ರೆ ಸಿಎಂ ಸಿದ್ದರಾಮಯ್ಯ ಸಿಎಂ ಆದಾಗ ನನ್ನ ಫೋಟೋವನ್ನ ವಿಧಾನಸೌಧದಿಂದ ತೆಗೆದು ಹಾಕಿದ್ರು. ಇದು ಒಬ್ಬ ಮಾಜಿ ಪ್ರಧಾನಿಗೆ ಕೊಡೋ ಗೌರವನಾ ಎಂದು ಗರಂ ಆಗಿ ಪ್ರಶ್ನಿಸಿದರು.  ಇದನ್ನೂ ಓದಿ: ಕೃಷ್ಣನೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಗೆ `ನಮೋ’- ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಸುಳಿವು ಕೊಟ್ರಾ ಪ್ರಧಾನಿ?

    ಮೋದಿಯವರು ಸರಿಯಾಗಿ ಮಾತಾಡಿದ್ದಾರೆ. ಸಿಎಂ ವರ್ತನೆ ಬಗ್ಗೆ ಮೋದಿ ತಿಳಿದುಕೊಂಡಿದ್ದಾರೆ. ಹೀಗಾಗಿ ನಿನ್ನೆ ಅವರು ಮಾತಾಡಿದ್ದಾರೆ ಅಷ್ಟೇ ಮೋದಿ ಬದಲಾಗಿಲ್ಲ. ನಾನೂ ಬದಲಾಗಿಲ್ಲ. ಕನ್ನಡಿಗ ಪ್ರಧಾನಿ ಆದ್ರೆ ಗೌರವ ಕೊಡುವ ಸಂಸ್ಕೃತಿ ಕಾಂಗ್ರೆಸ್ ಗೆ ಇಲ್ಲ. ಆದ್ರೆ ಮೋದಿ ಗೌರವ ನೀಡಿದ್ದಾರೆ. ಇದರಲ್ಲಿ ಯಾವ ಬೇರೆ ಉದ್ದೇಶ ಇಲ್ಲ, ವಿಶೇಷ ಇಲ್ಲ ಅಂತ ಅವರು ಹೇಳಿದ್ರು. ಇದನ್ನೂ ಓದಿ: ವೃದ್ಧಾಶ್ರಮಕ್ಕೆ ಕಳಿಸೋ ಮಾತಾಡಿದ್ದ ಮೋದಿಗೆ ಎಚ್‍ಡಿಡಿ ಮೇಲೇಕೆ ಸಡನ್ ಲವ್- ಸಿಎಂ ಪ್ರಶ್ನೆ

    ಈ ಚುನಾವಣೆ ಕರ್ನಾಟಕದಲ್ಲಿ ಎರಡು ರಾಷ್ಟ್ರಯ ಪಕ್ಷ, ಒಂದು ಪ್ರಾದೇಶಿಕ ಪಕ್ಷದ ನಡುವೆ ನಡೆಯುತ್ತಿದೆ. ಹಿಂದಿನ ಅನೇಕರು ಪ್ರಾದೇಶಿಕ ಪಕ್ಷ ಉಳಿಸಲು ಕಷ್ಟ ಪಟ್ರು. ಆದ್ರೆ ಅದು ಆಗಲಿಲ್ಲ. ಆದ್ರೆ ನಾನೂ ಕಷ್ಟ ಪಟ್ಟು ಪ್ರಾದೇಶಿಕ ಪಕ್ಷ ಉಳಿಸಿದ್ದೇನೆ ಅಂತ ಹೇಳಿದ್ರು.

     

  • ಮಂತ್ರಿಯಾದ್ರೆ ಗಿನ್ನಿಸ್ ರೆಕಾರ್ಡ್ ಲೆವೆಲ್ ಗೆ ಕೆಲ್ಸ ಮಾಡ್ತೀನಿ- ಜಮೀರ್ ಅಹಮದ್

    ಮಂತ್ರಿಯಾದ್ರೆ ಗಿನ್ನಿಸ್ ರೆಕಾರ್ಡ್ ಲೆವೆಲ್ ಗೆ ಕೆಲ್ಸ ಮಾಡ್ತೀನಿ- ಜಮೀರ್ ಅಹಮದ್

    ಬೆಂಗಳೂರು: ಸಿದ್ದರಾಮಯ್ಯ ಮುಖ್ಯಮಂತ್ರಿಯಾದ್ರೆ ನಾನು ಸಚಿವನಾಗುತ್ತೇನೆ. ಆಮೇಲೆ ನಾನು ಗಿನ್ನಿಸ್ ರೆಕಾರ್ಡ್ ಲೆವೆಲ್ ಕೆಲಸ ಮಾಡುತ್ತೇನೆ ಅಂತ ಶಾಸಕ ಜಮೀರ್ ಅಹಮದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಚಾಮರಾಜಪೇಟೆಯಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಅಗೋದನ್ನ ಯಾರಿಂದಲೂ ತಡೆಯೋಕೆ ಆಗಲ್ಲ. ಸಿದ್ದರಾಮಯ್ಯ ಸಿಎಂ ಅದ್ರೇ ನಿಮ್ಮ ಬಚ್ಚಾ ಜಮೀರ್ ಮಂತ್ರಿ ಅಗೋದನ್ನ ಯಾರಿಂದಲೂ ತಡೆಯೋಕೆ ಅಗಲ್ಲ ಅಂತ ಹೇಳಿದ್ದಾರೆ.

    ಸಿದ್ದರಾಮಯ್ಯ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡೇ ಮಾಡ್ತೀವಿ. ಅವರನ್ನು ಗೆಲ್ಲಿಸುವ ಮೂಲಕ ಮತ್ತೆ ಅಧಿಕಾರ ನಡೆಸುತ್ತೇವೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ್ರೆ ನಾನು ಮಂತ್ರಿ ಆಗೇ ಆಗ್ತೀನಿ. ಆಮೇಲೆ ಇದೆ ನೋಡಿ ಆಟ. ಮಿನಿಸ್ಟರ್ ಆಗಿ ಏನೆಲ್ಲ ಕೆಲಸ ಮಾಡ್ತಿನಿ ಅಂದ್ರೆ ನನ್ನ ಹೆಸರು ಗಿನ್ನಿಸ್ ಬಕ್‍ನಲ್ಲಿ ರೆಕಾರ್ಡ್ ಆಗುತ್ತೆ ಅಂತ ಹೇಳಿದ್ರು.

    https://www.youtube.com/watch?v=x8bg1m2yIaQ

  • ರಾಜಕೀಯ ಸ್ವರೂಪ ಪಡೆದ ಆತ್ಮಹತ್ಯೆ ಪ್ರಕರಣ- ಕಾಂಗ್ರೆಸ್ ಬೆಂಬಲಿತ ವ್ಯಕ್ತಿ ನೇಣಿಗೆ ಶರಣು

    ರಾಜಕೀಯ ಸ್ವರೂಪ ಪಡೆದ ಆತ್ಮಹತ್ಯೆ ಪ್ರಕರಣ- ಕಾಂಗ್ರೆಸ್ ಬೆಂಬಲಿತ ವ್ಯಕ್ತಿ ನೇಣಿಗೆ ಶರಣು

    ಚಿಕ್ಕಬಳ್ಳಾಪುರ: ಕಾಂಗ್ರೆಸ್ ಬೆಂಬಲಿಸುವ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕು ಕೊಳವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸದ್ಯ ಈ ಆತ್ಮಹತ್ಯೆ ಪ್ರಕರಣ ರಾಜಕೀಯ ಸ್ವರೂಪವನ್ನು ಪಡೆದುಕೊಂಡಿದೆ.

    29 ವರ್ಷದ ಜಗದೀಶ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಜೆಡಿಎಸ್ ಗೆ ಮತ ನೀಡುವಂತೆ ಕೆಲ ಮುಖಂಡರು 500 ರೂಪಾಯಿ ಹಣ ನೀಡಿ ಗ್ರಾಮದ ಮುನೇಶ್ವರ ದೇವಾಲಯದಲ್ಲಿ ಪ್ರಮಾಣ ಮಾಡಿಸಿಕೊಂಡಿದ್ರಂತೆ. ಇದ್ರಿಂದ ಮನನೊಂದ ಜಗದೀಶ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕಾಂಗ್ರೆಸ್ ಕಾರ್ಯಕರ್ತರ ಆರೋಪಿಸುತ್ತಿದ್ದಾರೆ.

    ಮೃತ ಜಗದೀಶ್ ಕುಡಿತದ ಚಟ ಮೈಗೂಡಿಸಿಕೊಂಡಿದ್ದು, ಹೆಂಡತಿ ತವರು ಮನೆ ಸೇರಿದ್ದರಂತೆ. ಇದ್ರಿಂದ ಮನನೊಂದು ಜಗದೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತಾ ಪೊಲೀಸರು ಹೇಳ್ತಾರೆ.

    ಮೃತ ಜಗದೀಶ್ ಕುಟುಂಬಸ್ಥರು ಪೊಲೀಸರಿಗೆ ಯಾವುದೇ ದೂರು ನೀಡಿಲ್ಲ. ನಂದಿಗಿರಿಧಾಮ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ತೆರೆಮೆರೆಯಲ್ಲಿ ‘ಕೈ’ ಕುಲುಕಿದ್ರಾ ಬಿಜೆಪಿ ಮಾಜಿ ಸಚಿವ ಸೊಗಡು ಶಿವಣ್ಣ?

    ತೆರೆಮೆರೆಯಲ್ಲಿ ‘ಕೈ’ ಕುಲುಕಿದ್ರಾ ಬಿಜೆಪಿ ಮಾಜಿ ಸಚಿವ ಸೊಗಡು ಶಿವಣ್ಣ?

    ತುಮಕೂರು: ಬಿಜೆಪಿ ಟಿಕೆಟ್ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡ ಮಾಜಿ ಸಚಿವ ಸೊಗಡು ಶಿವಣ್ಣ ನಿಜಕ್ಕೂ ತೆರೆಮರೆಯಲ್ಲಿ ಕಾಂಗ್ರೆಸ್‍ಗೆ ಸಪೋರ್ಟ್ ಮಾಡ್ತಾ ಇದ್ದಾರಾ ಎಂಬ ಪ್ರಶ್ನೆಯೊಂದು ಜಿಲ್ಲೆಯ ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.

    ಪಕ್ಕಾ ಹಿಂದೂವಾದಿ ಆಗಿರುವ ಸೊಗಡು ಶಿವಣ್ಣ ತುಮಕೂರು ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಫಿಕ್ ಅಹಮದ್‍ಗೆ ಬೆಂಬಲ ನೀಡಿದ್ದಾರೆ ಅಂತಾ ಹೇಳಲಾಗ್ತಿದೆ. ಕ್ಯಾತಸಂದ್ರದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದ ಶಾಸಕ ರಫಿಕ್ ಅಹಮದ್ ತಮ್ಮ ಭಾಷಣದ ವೇಳೆ ಸ್ಫೋಟಕ ರಹಸ್ಯವನ್ನ ಬಿಚ್ಚಿಟ್ಟಿದ್ದಾರೆ.

    ಭಾಷಣದ ವೇಳೆ ಬಿಜೆಪಿ ಪಕ್ಷದ ಮುಖಂಡರು ನಮಗೆ ಬೆಂಬಲ ನೀಡುತ್ತಿದ್ದಾರೆ. ಕೆಲವರು ಬಹಿರಂಗವಾಗಿ ಸಪೋರ್ಟ್ ನೀಡಿದ್ರೆ, ಇನ್ನೂ ಕೆಲವರು ತೆರೆಮರೆಯಲ್ಲಿ ಸಹಕಾರ ನೀಡುತ್ತಿದ್ದಾರೆ. ಬಿಜೆಪಿ ನಾಯಕರ ಬೆಂಬಲದಿಂದ ನಾನು ಮತ್ತೊಮ್ಮೆ ಹೆಚ್ಚಿನ ಅಂತರದಿಂದ ಗೆಲುವು ಸಾಧಿಸುತ್ತೇನೆ. ಅದರಲ್ಲೂ ಮಾಜಿ ಸಚಿವ ಸೊಗಡು ಶಿವಣ್ಣರ ಆಶೀರ್ವಾದ ನನ್ನ ಮೇಲಿದೆ. ಅವರ ಮನೆಗೆ ಹೋಗಿ ನಾನು ಮತಯಾಚನೆ ಮಾಡಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪ ನನ್ನ ಮನೆಗೆ ಬರುವುದೇ ಬೇಡ-ಕೊನೆಗೂ ಮೌನ ಮುರಿದ ಸೊಗಡು ಶಿವಣ್ಣ

    ಕಾಂಗ್ರೆಸ್ ಅಭ್ಯರ್ಥಿ ರಫಿಕ್ ಅಹಮದ್ ಹೇಳಿಕೆ ತುಮಕೂರು ಬಿಜೆಪಿ ಪಾಳಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸೊಗಡು ಶಿವಣ್ಣ ಈ ಬಾರಿ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ರು. ಆದ್ರೆ ಹೈಕಮಾಂಡ್ ಜ್ಯೋತಿ ಗಣೇಶ್ ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದರಿಂದ ಸೊಗಡು ಶಿವಣ್ಣ ಸಹಜವಾಗಿಯೇ ಅಸಮಾಧಾನಗೊಂಡಿದ್ದರು.

  • ಚಾಮರಾಜನಗರಕ್ಕೆ ಮೋದಿ ಬರದೇ ಇರುವುದು ನಾಚಿಗೇಡು- ವಾಟಾಳ್ ನಾಗರಾಜ್ ವಾಗ್ದಾಳಿ

    ಚಾಮರಾಜನಗರಕ್ಕೆ ಮೋದಿ ಬರದೇ ಇರುವುದು ನಾಚಿಗೇಡು- ವಾಟಾಳ್ ನಾಗರಾಜ್ ವಾಗ್ದಾಳಿ

    ಚಾಮರಾಜನಗರ: ಮೌಢ್ಯತೆಗೆ ಜೋತು ಬಿದ್ದು ಪ್ರಧಾನಿ ನರೇಂದ್ರ ಮೋದಿ ಚಾಮರಾಜನಗರಕ್ಕೆ ಬರದೇ ಇರುವುದು ನಾಚಿಕೆ ಗೇಡಿನ ಸಂಗತಿ ಎಂದು ಕನ್ನಡ ಪರ ಹೋರಾಟಗಾರ ಹಾಗೂ ಚಾಮರಾಜನಗರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ವಾಟಾಳ್ ವಾಗ್ದಾಳಿ ನಡೆಸಿದ್ದಾರೆ.

    ಚಾಮರಾಜನಗರದ ಉಡಿಗಾಲದಲ್ಲಿ ಮತ ಪ್ರಚಾರ ನಡೆಸಿದ ಬಳಿಕ ಮಾತನಾಡಿದ ವಾಟಾಳ್ ನಾಗರಾಜ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚಾಮರಾಜನಗರದ ಬಗ್ಗೆ ಏನು ಗೊತ್ತು. ಮೋದಿಗೆ ಏನು ಗೊತ್ತು, ಅಧಿಕಾರ ಹೋಗುತ್ತೆ ಅನ್ನೋ ಮೌಢ್ಯ ಕಾರಣ ಇಟ್ಟುಕೊಂಡು ಚಾಮರಾಜನಗರಕ್ಕೆ ಅವರು ಬಂದಿಲ್ಲ ಅಂತ ಟೀಕಿಸಿದ್ರು.

    ಮೋದಿಯವರಿಗೆ ಚಾಮರಾಜನಗರಕ್ಕೆ ಬಂದ್ರೆ ಅಧಿಕಾರ ಹೋಗುತ್ತೆ ಅಂತಾ ಹೇಳಿದ್ದಾದ್ರು ಯಾರು? ಅವರ ಮೇಲೆ ನಂಗೆ ಗೌರವ ಇದೆ. ಆದರೆ ಬಿಜೆಪಿ ಮುಖಂಡರು ಮೋದಿಯನ್ನು ದಾರಿ ತಪ್ಪಿಸಿದ್ದಾರೆ ಹೀಗಾಗಿ ಚಾಮರಾಜನಗರಕ್ಕೆ ಬಂದಿಲ್ಲ. ಇದರಿಂದ ಚಾಮರಾಜನಗರಕ್ಕೆ ಕಳಂಕ ತಂದಿದ್ದಾರೆ. ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗುವ ಚಿಂತನೆ ನಡೆಸುತ್ತಿದ್ದೇನೆ ಅಂತ ವಾಟಾಳ್ ಹೇಳಿದ್ದಾರೆ.

  • ವೃದ್ಧಾಶ್ರಮಕ್ಕೆ ಕಳಿಸೋ ಮಾತಾಡಿದ್ದ ಮೋದಿಗೆ ಎಚ್‍ಡಿಡಿ ಮೇಲೇಕೆ ಸಡನ್ ಲವ್- ಸಿಎಂ ಪ್ರಶ್ನೆ

    ವೃದ್ಧಾಶ್ರಮಕ್ಕೆ ಕಳಿಸೋ ಮಾತಾಡಿದ್ದ ಮೋದಿಗೆ ಎಚ್‍ಡಿಡಿ ಮೇಲೇಕೆ ಸಡನ್ ಲವ್- ಸಿಎಂ ಪ್ರಶ್ನೆ

    ಬೆಂಗಳೂರು: ಉಡುಪಿ ಸಮಾವೇಶದಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು ಹೊಗಳಿದ ಪ್ರಧಾನಿ ಮೋದಿಗೆ ಟ್ವೀಟ್ ಮೂಲಕ ಸಿಎಂ ಸಿದ್ದರಾಮಯ್ಯ ಗುದ್ದು ನೀಡಿದ್ದಾರೆ.

    ಪ್ರಧಾನಿ ಮೋದಿಗೆ ಮಾಜಿ ಪ್ರಧಾನಿ ದೇವೇಗೌಡರ ಮೇಲೆ ಸಡನ್ ಆಗಿ ಪ್ರೀತಿ ಗೌರವ ಉಕ್ಕಿ ಬಂದಿದೆ. ನಾಲ್ಕು ವರ್ಷದ ಹಿಂದೆ ಇದೇ ಮೋದಿ, ನಾನು ಪ್ರಧಾನಿಯಾದ ಮೇಲೆ ದೇವೇಗೌಡರನ್ನು ವೃದ್ಧಾಶ್ರಮಕ್ಕೆ ಕಳಿಸ್ತೀನಿ ಅಂದಿದ್ರು.

    ಮೋದಿಗೆ ಇದೀಗ ದೇವೇಗೌಡರ ಮೇಲೆ ಉಕ್ಕಿರುವ ಲವ್, ಬಿಜೆಪಿ-ಜೆಡಿಎಸ್ ನಡುವಿನ ಒಳ ಒಪ್ಪಂದದ ಸಂಕೇತವೇ ಅಂತಾ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

    ರಾಜಕೀಯದಲ್ಲಿ ಅವರು ನಮ್ಮ ವಿರೋಧಿಯಾಗಿರಬಹುದು. ಆದರೆ ಸಾರ್ವಜನಿಕ ಜೀವನದಲ್ಲಿ ಅವರು ನಮ್ಮ ವಿರೋಧಿಯಲ್ಲ. ಆದರೆ ಕಾಂಗ್ರೆಸ್ ಅಧ್ಯಕ್ಷರು ದೇವೇಗೌಡರನ್ನು ಟೀಕಿಸಿದ್ದು ಎಷ್ಟು ಸರಿ? ಇದು ರಾಜಕೀಯ ಸಂಸ್ಕಾರವೇ ಎಂದು ಪ್ರಶ್ನಿಸಿ ಮೋದಿ ಟೀಕಿಸಿದ್ದರು.

    ದೇವೇಗೌಡರು ವರಿಷ್ಠ ನಾಯಕರಲ್ಲಿ ಒಬ್ಬರು. ಅವರ ಬಗ್ಗೆ ಕೀಳಾಗಿ ಮಾತಾಡುವ ಹಕ್ಕು ಯಾರಿಗೂ ಇಲ್ಲ. ನಮಗೆ ರಾಜಕೀಯವಾಗಿ ಅವರೊಂದಿಗೆ ವಿರೋಧ ಇರಬಹುದು. ಆದರೆ ದೇವೇಗೌಡರು ಹೇಳಿದಾಗಲೆಲ್ಲಾ ನಾನು ಭೇಟಿ ಮಾಡಿದ್ದೇನೆ. ಮನೆಗೆ ಬಂದಾಗ ನಾನೇ ಮನೆಬಾಗಿಲಿಗೆ ಬಂದು ಸ್ವಾಗತಿಸಿದ್ದೇನೆ. ರಾಹುಲ್ ಗಾಂಧಿ ತಮ್ಮ ಪ್ರಚಾರ ಭಾಷಣದಲ್ಲಿ ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಕರೆದು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈಗ ನರೇಂದ್ರ ಮೋದಿ ಉಡುಪಿಯಲ್ಲಿ ದೇವೇಗೌಡರನ್ನು ಹೊಗಳಿದ್ದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

  • ಬಡತನದಲ್ಲಿ ಉಳಿದವ್ರು ನಿಯತ್ತು ಇಲ್ದೆ ಇರೋರು, ಬಡವರು ಮೋಸಗಾರರು-ಬಿಜೆಪಿ ಕಾರ್ಪೋರೇಟರ್

    ಬಡತನದಲ್ಲಿ ಉಳಿದವ್ರು ನಿಯತ್ತು ಇಲ್ದೆ ಇರೋರು, ಬಡವರು ಮೋಸಗಾರರು-ಬಿಜೆಪಿ ಕಾರ್ಪೋರೇಟರ್

    ಬೆಂಗಳೂರು: ನೀವು ಬಡವರೆಲ್ಲ ಕಾಂಗ್ರೆಸ್‍ಗೆ ವೋಟ್ ಹಾಕ್ತೀರಾ ನಾವು ನಿಮಗೆ ಯಾಕೆ ಅಭಿವೃದ್ಧಿ ಮಾಡಬೇಕು. ನಮ್ಮ ವಾರ್ಡ್ ನಲ್ಲಿ ಮಾತ್ರ ಅಲ್ಲ ಇಡೀ ದೇಶದಲ್ಲೇ ಬಡವರೇ ಮೋಸಗಾರರು. ನಿಯತ್ತೇ ಇಲ್ದೆ ಇರೋರೆಲ್ಲ ಬಡತನದಲ್ಲೇ ಉಳಿದಿದ್ದಾರಾ ಎಂದು ದಾಸರಹಳ್ಳಿ ಕ್ಷೇತ್ರದ ಬಿಜೆಪಿ ಎಂಎಲ್‍ಎ ಮುನಿರಾಜ್ ಶಿಷ್ಯ ಮಲ್ಲಸಂದ್ರ ಕಾರ್ಪೊರೇಟರ್ ಲೊಕೇಶ್ ಹೇಳಿದ್ದಾರೆ.

    ಶ್ರೀಮಂತರಿರುವ ಬೂತ್ ಗಳಲ್ಲಿ ಬಿಜೆಪಿಗೆ ಲೀಡ್ ಬಂದಿದೆ ಅಂತ ಲೊಕೇಶ್ ಲೆಕ್ಕ ಕೊಟ್ಟಿದ್ದಾರೆ. ದಾಸರಹಳ್ಳಿ ಕ್ಷೇತ್ರದ ಕಲ್ಯಾಣ ನಗರ, ಪ್ರಶಾಂತ್ ನಗರ, ಬಿಎಚ್‍ಎಂ ಲೇಔಟ್‍ಗಳಲ್ಲಿ ಆಫೀಷಿಯಲ್‍ಗಳು ಇದ್ದಾರೆ ಯಾರಿಗೂ ದುಡ್ಡು ಕೊಟ್ಟಿಲ್ಲ ಆದ್ರೂ ಆ ಎಲ್ಲ ಬೂತ್‍ಗಳಲ್ಲಿ ಬಿಜೆಪಿ ಲೀಡ್ ಬಂದಿದೆ.

    ಫ್ರೀ ಮನೆ ಕೊಟ್ರು ಕಾಂಗ್ರೆಸ್‍ಗೆ ವೋಟ್ ಹಾಕೋ ನಿಮ್ಗೆ ನಾವ್ಯಾಕೆ ಅಭಿವೃದ್ಧಿ ಮಾಡ್ಬೇಕು ಅನ್ನೋದಾಗಿ ಮತ ನೀಡಿದ ಜನರಿಗೆ ಬಾಯಿಗೆ ಬಂದ ಹಾಗೆ ಮಾತನಾಡಿದ್ದು, ಆ ಆಡಿಯೋ ಪಬ್ಲಿಕ್‍ಟಿವಿಗೆ ಲಭ್ಯವಾಗಿದೆ. ಸ್ಥಳೀಯರು ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಪತ್ರ ಬರೆದು ದೂರು ಸಹ ನೀಡಿದ್ದು ಕ್ರಮಕ್ಕೆ ಆಗ್ರಹಿಸಿದ್ದಾರೆ.

    ಆಡಿಯೋ ಕ್ಲಿಪ್:

    ಲೋಕೇಶ್ – ನಿಮಗೆಲ್ಲ ಮನೆ ಕೊಟ್ಟಿಲ್ಲ ಅಂತಾ ಬೈಯ್ಕೋಬೇಡ ನೀವೆಲ್ಲ ಬಡವರು, ಮನೆಕೊಟ್ರೆ ಯಾರು ವೋಟ್ ಹಾಕಲ್ಲ, ನೀವೇ ಅಲ್ಲ ಯಾರು ವೋಟ್ ಹಾಕಲ್ಲ, ಮೇಲಗಡೆ ಇದ್ದಾರಲ್ಲ ಸ್ಲಂ ಅವರು ಎಲ್ಲಾ ಕಾಂಗ್ರೆಸ್‍ಗೆ ವೋಟ್ ಹಾಕ್ತಾರೆ.. ಬಡವರಿಗೆ ಹೆಲ್ಪ್ ಮಾಡಿದ್ರೆ ಯಾವುದು ಶಾಶ್ವತ ಅಲ್ಲ, ಇವತ್ತಿನ ಪರಿಸ್ಥಿತಿ ಅಲ್ಲಿ, ಮನೆ ಕೊಟ್ರಲ್ಲ ಎಂಎಲ್‍ಎ, ಎಂಎಲ್‍ಎ ಗೊತ್ತಿಟ್ಟುಕೊಂಡು ಅವರಿಗೆ ವೋಟ್ ಹಾಕ್ತಾರೆ
    ಸಾರ್ವಜನಿಕ – ವಿಜಯಲಕ್ಷ್ಮೀ ಲೇಔಟ್‍ನಲ್ಲಿ ಅಂತಾ ಕೆಲಸ ಆಗಿಲ್ಲ
    ಲೋಕೇಶ್ – ವಿಜಯಲಕ್ಷ್ಮೀ ಲೇಔಟ್ ನಿನಗೆ ಬರಲ್ಲ ಬಿಡು, ವಿಜಯಲಕ್ಷ್ಮೀ ಲೇಔಟ್ ಬರಲ್ಲ, ಅಕಡೆ ಬರೋದು, ಏಕಾ ಫ್ರೀ ಮನೆಗಳು ಯಾವುದು ವೋಟ್ ಬರಲ್ಲ,
    ಸಾರ್ವಜನಿಕ – ಬಡವರು, ಬಗ್ಗರು ವೋಟ್ ಹಾಕ್ತಾರೆ..
    ಲೋಕೇಶ್ – ಧರ್ಮಸ್ಥಳ ಮಂಜುನಾಥಸ್ವಾಮಿ ಆಣೆಗೂ ಬಡವ ವೋಟ್ ಹಾಕಲ್ಲ ತಿರುಪತಿ ವೆಂಕಟರಮಣಸ್ವಾಮಿ ಆಣೆಗೂ ಬಡವರಿಂದ ಯಾವುದೇ ವೋಟ್ ಬರಲ್ಲ, ಬಡವನೇ ದೊಡ್ಡ ಮೋಸ ಆಫ್ ಗಾಡ್… ಬಡವನೇ ಮೋಸ.. ಬಡವರು ಕಾಂಗ್ರೆಸ್ ಲೀಡ್, ಕಲ್ಯಾಣನಗರ ಅಫೀಷಿಯಲ್ ಬಿಜೆಪಿ ಲೀಡ್, ನಮ್ ಮನೆ ಮುಂದೇಗಡೆ ಅಫಿಷಿಯಲ್ ಬಿಜೆಪಿ ಲೀಡ್.. ಎಲ್ಲೆಲ್ಲಿ ಬಡವರು ಇದ್ದಾರೋ ಅಲ್ಲೆಲ್ಲ ಕಾಂಗ್ರೆಸ್‍ಗೆ ಕೊಡ್ತಾರೆ.