Tag: Karnataka Elections 2018

  • ಜಯನಗರದ ಬಿಜೆಪಿ ಶಾಸಕ ವಿಜಯ್ ಕುಮಾರ್ ಇನ್ನಿಲ್ಲ

    ಜಯನಗರದ ಬಿಜೆಪಿ ಶಾಸಕ ವಿಜಯ್ ಕುಮಾರ್ ಇನ್ನಿಲ್ಲ

    ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ವಿಜಯ್ ಕುಮಾರ್(60) ವಿಧಿವಶರಾಗಿದ್ದಾರೆ.

    ಲಘು ಹೃದಯಾಘಾತವಾಗಿ ಗುರುವಾರ ವಿಜಯ್ ಕುಮಾರ್ ಅವರನ್ನು ನಗರದ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ಕರೆತರುವಾಗಲೇ ಅವರ ಹೃದಯ ಬಡಿತ, ಬಿಪಿ ಕುಸಿತ ಕಂಡಿತು. ಹೀಗಾಗಿ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 1 ಗಂಟೆ ಸುಮಾರಿಗೆ ವಿಧಿವಶರಾಗಿದ್ದಾರೆ ಅಂತ ಆಸ್ಪತ್ರೆ ನಿರ್ದೇಶಕ ಡಾ.ಮಂಜುನಾಥ್ ಹೇಳಿದ್ದಾರೆ.

    ಹಲವು ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ ವಿಜಯ್ ಕುಮಾರ್ ಅವರು ಜಯನಗರ ಕ್ಷೇತ್ರದಿಂದ 2 ಬಾರಿ ಆಯ್ಕೆಯಾಗಿದ್ದರು. ಚುನಾವಣೆಗೆ ಕೆಲ ದಿನಗಳು ಬಾಕಿ ಇರುವ ವೇಳೆಯಲ್ಲಿ ವಿಜಯ್ ಕುಮಾರ್ ಅವರು ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದರು. ನಿನ್ನೆ ಪ್ರಚಾರದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಎದೆ ನೋವು ಕಾಣಿಸಿಕೊಂಡಿದ್ದು, ಏಕಾಏಕಿ ಕುಸಿದು ಬಿದ್ದಿದ್ದರು. ಈ ವೇಳೆ ಸ್ಥಳದಲ್ಲಿದ್ದ ಕಾರ್ಯಕರ್ತರು ಅವರನ್ನು ತಕ್ಷಣ ಜಯದೇವ ಆಸ್ಪತ್ರೆಗೆ ದಾಖಲಿಸಿದ್ದರು.

    ವಿಜಯ್ ಕುಮಾರ್ ಪಾರ್ಥೀವ ಶರೀರವನ್ನು ಜಯನಗರ ನಾಲ್ಕನೇ ಬ್ಲಾಕ್‍ನಲ್ಲಿರುವ ಅವರ ಮನೆಗೆ ತರಲಾಯ್ತು. ಇದೀಗ ಅವರ ಮನೆ ಮುಂದೆ ಅಪಾರ ಪ್ರಮಾಣದ ಬೆಂಬಲಿಗರು, ಬಿಜೆಪಿ ಕಾರ್ಯಕರ್ತರು ಸೇರಿದ್ದಾರೆ. ಕಂಬನಿ ಸುರಿಸ್ತಿದ್ದಾರೆ. ಇನ್ನು ರಾಜಕಾರಣಿಗಳು ಸಹ ಆಗಮಿಸಲಿದ್ದಾರೆ.

    ನೇತ್ರದಾನ: ಕೊನೆ ಆಸೆಯಂತೆ ವಿಜಯ್ ಕುಮಾರ್ ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ. ಮನೆ ಬಳಿಯೇ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ಮಧ್ಯಾಹ್ನದ ಬಳಿಕ ಚಾಮರಾಜಪೇಟೆ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಇನ್ನು ಬಿಜೆಪಿ ಅಭ್ಯರ್ಥಿ ಶಾಸಕ ವಿಜಯ್ ಕುಮಾರ್ ಇಹಲೋಕ ತ್ಯಜಿಸಿದ ಹಿನ್ನೆಲೆಯಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಮುಂದೂಡಿಕೆಯಾಗೋ ಸಾಧ್ಯತೆಗಳು ಹೆಚ್ಚಿವೆ. ಇಂದು ಚುನಾವಣಾ ಆಯೋಗದಿಂದ ಘೋಷಣೆ ಘೋಷಣೆ ಹೊರಡಿಸುವ ಸಂಭವ ಇದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

  • 4 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಿ: ಕರ್ನಾಟಕಕ್ಕೆ ಸುಪ್ರೀಂ ಖಡಕ್ ಸೂಚನೆ

    4 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಿ: ಕರ್ನಾಟಕಕ್ಕೆ ಸುಪ್ರೀಂ ಖಡಕ್ ಸೂಚನೆ

    ನವದೆಹಲಿ: ತಮಿಳುನಾಡಿಗೆ ಏಪ್ರಿಲ್ ಮತ್ತು ಮೇ ತಿಂಗಳ ನೀರನ್ನು ಬಿಡುಗಡೆ ಮಾಡಿ ಎಂದು ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಖಡಕ್ ಸೂಚನೆ ನೀಡಿದೆ.

    ಕಾವೇರಿ ನದಿ ನೀರಿನ ಹಂಚಿಕೆ ಸಂಬಂಧ ಸ್ಕೀಂ ರೂಪಿಸುವಂತೆ ಸುಪ್ರೀಂ ಕೋರ್ಟ್ ಈ ಹಿಂದೆ ಸೂಚಿಸಿತ್ತು. ಇಂದು ವಿಚಾರಣೆ ನಡೆಸಿದ ಕೋರ್ಟ್ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ತಮಿಳುನಾಡಿಗೆ ಬಿಡಬೇಕಾಗಿದ್ದ 4 ಟಿಎಂಸಿ ನೀರನ್ನು ಬಿಡುಗಡೆ ಮಾಡಿ ಎಂದು ಆದೇಶಿಸಿದೆ.

    ವಿಚಾರಣೆಯಲ್ಲಿ ಅಟಾರ್ನಿ ಜನರಲ್ ಸ್ಕೀಂ ಹೇಗಿರಬೇಕು ಎನ್ನುವ ಬಗ್ಗೆ ಕರಡು ಈಗಾಗಲೇ ತಯಾರಾಗಿದೆ. ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವರು ಕರ್ನಾಟಕ ಚುನಾವಣಾ ಪ್ರಚಾರದಲ್ಲಿ ಸಕ್ರೀಯರಾಗಿದ್ದರಾರೆ. ಸ್ಕೀಂಗೆ ಕ್ಯಾಬಿನೆಟ್ ಒಪ್ಪಿಗೆ ಸಿಕ್ಕಿಲ್ಲ ಎಂದು ತಿಳಿಸಿದರು. ಈ ವೇಳೆ ಎಜೆ ವಾದವನ್ನು ಆಕ್ಷೇಪಿಸಿದ ಕೋರ್ಟ್ ಮುಂದಿನ 10 ದಿನದ ಒಳಗಡೆ ಕಾವೇರಿ ಸ್ಕೀಂ ಕರಡನ್ನು ಕೋರ್ಟ್ ಗೆ ಸಲ್ಲಿಸಬೇಕು ಎಂದು ಕೇಂದ್ರಕ್ಕೆ ಸೂಚಿಸಿತು.

    ಇದೂವರೆಗೆ ತಮಿಳುನಾಡಿಗೆ ಹರಿಸಿದ ನೀರಿನ ಪ್ರಮಾಣ, ಅಣೆಕಟ್ಟುಗಳಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣದ ಮಾಹಿತಿಯನ್ನು ಸಲ್ಲಿಸಿ ಎಂದು ಕೋರ್ಟ್ ಕರ್ನಾಟಕಕ್ಕೆ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಮೆ 8 ಮಂಗಳವಾರಕ್ಕೆ ಮುಂದೂಡಿತು.

    ಅಂತಿಮ ಐತೀರ್ಪು ಪ್ರಕಾರ ಯಾರಿಗೆ ಎಷ್ಟು ನೀರು?
    ನ್ಯಾ. ಎನ್.ಪಿ.ಸಿಂಗ್, ನ್ಯಾ. ಸುಧೀರ್ ನಾರಿಯನ್, ನ್ಯಾ. ಎನ್.ಎಸ್. ರಾವ್ ಅವರನ್ನು ಒಳಗೊಂಡ ಕಾವೇರಿ ನ್ಯಾಯಾಧಿಕರಣ 2007ರ ಫೆಬ್ರವರಿ 2ರಂದು ಅಂತಿಮ ಐತೀರ್ಪು ನೀಡಿತ್ತು. ಈ ತೀರ್ಪಿನ ಅನ್ವಯ ಜೂನ್ 10, ಜುಲೈ 34, ಅಗಸ್ಟ್ 50, ಸೆಪ್ಟೆಂಬರ್ 40, ಅಕ್ಟೋಬರ್ 22, ನವೆಂಬರ್ 15, ಡಿಸೆಂಬರ್ 8, ಜನವರಿ 3, ಫೆಬ್ರವರಿ 2.5, ಮಾರ್ಚ್ 2.5, ಏಪ್ರಿಲ್ 2.5, ಮೇ 2.5 ಸೇರಿ ಒಟ್ಟು 192 ಟಿಎಂಸಿ ನೀರನ್ನು ಕನಾಟಕ ಪ್ರತಿವರ್ಷ ತಮಿಳುನಾಡಿಗೆ ಹರಿಸಬೇಕು ಎಂದು ಆದೇಶಿಸಿತ್ತು.

    ಕ್ಯೂಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?
    ಕ್ಯೂಸೆಕ್ ಎಂಬುದು Cubic feet per Second ಜನ ಹ್ರಸ್ವರೂಪ ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.

  • ಬಿಜೆಪಿ, ಜೆಡಿಎಸ್ ಪರ ಪ್ರಚಾರಕ್ಕಿಳಿದು ಮತದಾರರ ಗೊಂದಲಕ್ಕೆ ತೆರೆ ಎಳೆದ ಯಶ್

    ಬಿಜೆಪಿ, ಜೆಡಿಎಸ್ ಪರ ಪ್ರಚಾರಕ್ಕಿಳಿದು ಮತದಾರರ ಗೊಂದಲಕ್ಕೆ ತೆರೆ ಎಳೆದ ಯಶ್

    ಹಾಸನ: ಉತ್ತಮ ಕೆಲಸ ಮಾಡುವ ವ್ಯಕ್ತಿಗಳು ಮುಖ್ಯ. ಅದಕ್ಕಾಗಿ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಪ್ರಚಾರ ಮಾಡುತ್ತಿದ್ದೇನೆ. ಯಾರು ಜನಪರ ಕೆಲಸ ಮಾಡುತ್ತಾರೋ ಅವರಿಗೆ ಮತ ಹಾಕಿ ಅಂತ ನಟ ಯಶ್ ಹೇಳಿದ್ದಾರೆ.

    ನಾನು ವಿವಿಧ ಪಕ್ಷಗಳ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದರಿಂದ ಮತದಾರರಿಗೆ ಗೊಂದಲವಾಗಿರಬಹುದೆಂದು ಸಮರ್ಥನೆ ನೀಡಿದ ಅವರು, ನನ್ನ ಪ್ರಚಾರ ಯಾವುದೇ ಪಕ್ಷದ ಪರ ಅಲ್ಲ. ನನಗೆ ಇಷ್ಟವಾಗುವ ವ್ಯಕ್ತಿಗಳ ಪರ ಮತಯಾಚನೆ ಮಾಡುವೆ. ನಾನು ರಾಜ್ಯದ ಎಲ್ಲಿ ಬೇಕಾದ್ರೂ ಚುನಾವಣೆಗೆ ನಿಲ್ಲಬಹುದು. ಆದರೆ ಆ ಬಗ್ಗೆ ನಾನು ಚಿಂತಿಸಿಲ್ಲ. ರಾಜಕೀಯ ಎಂದರೇನು ಎಂದು ಮರು ಪ್ರಶ್ನೆ ಹಾಕಿದ್ರು. ಇದನ್ನೂ ಓದಿ: ಬಿಜೆಪಿ, ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಮಾಡ್ತಿರೋದು ಯಾಕೆ: ರಾಕಿಂಗ್ ಸ್ಟಾರ್ ಹೇಳ್ತಾರೆ ಓದಿ

    ನನ್ನ ಪ್ರಚಾರದಿಂದ ಅತಂತ್ರ ವಿಧಾನ ಸಭೆ ಸೃಷ್ಟಿಯಾಗದು. ಹೆಚ್ಚು ಸ್ಥಾನ ಪಡೆಯುವ ಪಕ್ಷ ಸರ್ಕಾರ ರಚನೆ ಮಾಡಲಿ. ನನಗೆ ಗೊಂದಲ, ಸಿದ್ಧಾಂತಕ್ಕಿಂತ ಜನ ಮುಖ್ಯ, ವ್ಯಕ್ತಿ ಮುಖ್ಯ. ಇಷ್ಟು ವರ್ಷವಾದ್ರೂ ಜನರು ಮೂಲಭೂತ ಸೌಕರ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಇದು ಸೇರಿ ಶಿಕ್ಷಣ, ಆರೋಗ್ಯ, ಅಭಿವೃದ್ಧಿಗೆ ಒತ್ತು ನೀಡುವವರು ಸಿಎಂ ಆಗಬೇಕು ಅಂದ್ರು. ಇದನ್ನೂ ಓದಿ: ಎರಡು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ ರಾಕಿಂಗ್ ಸ್ಟಾರ್!

    ಜಾತಿ ಎಲ್ಲಾ ಕಡೆ ಇರುವಾಗ, ರಾಜಕೀಯದಲ್ಲಿ ಜಾತಿ ರಾಜಕೀಯ ಇರುವ ಬಗ್ಗೆ ನಾನು ಏನನ್ನೂ ಹೇಳಲಾರೆ ಅಂತ ಹೇಳಿದ್ರು. ಇಂದು ಹಾಸನದ ವಿವಿಧೆಡೆ ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳ ಪರ ಯಶ್ ಕ್ಯಾಂಪೇನ್ ಮಾಡಲಿದ್ದಾರೆ.

  • ಗ್ರಾಮಸ್ಥರಿಗೆ 2ಲಕ್ಷ ಆಮಿಷ- ರೊಚ್ಚಿಗೆದ್ದವರ ಲಕ್ಷ್ಯ ತಪ್ಪಿಸಲು ಭಾರತ ಮಾತೆಗೆ ಜೈ ಅಂತ ಕಾರು ಏರಿ ಹೊರಟೇ ಬಿಟ್ಟ ಸಂತೋಷ್ ಲಾಡ್!

    ಗ್ರಾಮಸ್ಥರಿಗೆ 2ಲಕ್ಷ ಆಮಿಷ- ರೊಚ್ಚಿಗೆದ್ದವರ ಲಕ್ಷ್ಯ ತಪ್ಪಿಸಲು ಭಾರತ ಮಾತೆಗೆ ಜೈ ಅಂತ ಕಾರು ಏರಿ ಹೊರಟೇ ಬಿಟ್ಟ ಸಂತೋಷ್ ಲಾಡ್!

    ಧಾರವಾಡ: ಚುನಾವಣಾ ಪ್ರಚಾರಕ್ಕೆಂದು ಕಲಘಟಗಿ ತಾಲೂಕಿನ ಸಲಕಿನಕೊಪ್ಪ ಗ್ರಾಮಕ್ಕೆ ತೆರಳಿದ್ದ ವೇಳೆ ಸಾರ್ವಜನಿಕರೇ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಘೇರಾವ್ ಹಾಕಿದ ಘಟನೆ ನಡೆದಿದೆ.


    ಅಭಿವೃದ್ಧಿ ಕಾರ್ಯ ಮಾಡದ ಸಂತೋಷ್ ಲಾಡ್ ಅವರನ್ನು ಸಾರ್ವಜನಿಕರು ಲೆಫ್ಟ್ ರೈಟ್ ತರಾಟೆಗೆ ತೆಗೆದುಕೊಂಡಿದ್ದಾರೆ. 10 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಗರಡಿ ಮನೆ ವಿಚಾರವಾಗಿ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಗ್ರಾಮದಲ್ಲಿ ನಡೆದ ಕೆಲ ಅಭಿವೃದ್ಧಿ ಕಾಮಗಾರಿಗಳೂ ಕಳಪೆಯಾಗಿದ್ದು, ಗ್ರಾಮಸ್ಥರ ಪ್ರಶ್ನೆಗೆ ಲಾಡ್ ಕಂಗಾಲಾಗಿದ್ದಾರೆ. ಈ ವೇಳೆ ಲಾಡ್ ಅವರು ಗ್ರಾಮಸ್ಥರಿಗೆ ಎರಡು ಲಕ್ಷ ರೂಪಾಯಿಯ ಆಮಿಷ ಒಡ್ಡಿದ್ದಾರೆ. ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ರಾಜಾರೋಷವಾಗಿ ಆಮಿಷ ಒಡ್ಡಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಲಾಡ್ ಅವರನ್ನು ಮತ್ತಷ್ಟು ತರಾಟೆಗೆ ತೆಗೆದುಕೊಂಡರು. ಇದರಿಂದ ಕಕ್ಕಾಬಿಕ್ಕಿಯಾದ ಕಾರ್ಮಿಕ ಸಚಿವ ಜನರ ಲಕ್ಷ್ಯ ತಪ್ಪಿಸಲು ಭಾರತ ಮಾತೆಗೆ ಜೈ ಎಂದು ಕಾರು ಏರಿ ಅಲ್ಲಿಂದ ಕಾಲ್ಕಿತ್ತರು.

  • ಊರಿನ ಅಭಿವೃದ್ಧಿಗೆ ಏನ್ ಮಾಡಿದ್ದೀರಾ.. ಪ್ರಶ್ನಿಸಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ ಗ್ರಾಮಸ್ಥರ ಮೇಲೆ ಹಲ್ಲೆ!

    ಊರಿನ ಅಭಿವೃದ್ಧಿಗೆ ಏನ್ ಮಾಡಿದ್ದೀರಾ.. ಪ್ರಶ್ನಿಸಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ ಗ್ರಾಮಸ್ಥರ ಮೇಲೆ ಹಲ್ಲೆ!

    ಚಾಮರಾಜನಗರ: ಮತ ಕೇಳಲು ಬಂದ ಕಾಂಗ್ರೆಸ್ ಅಭ್ಯರ್ಥಿಯನ್ನು ತರಾಟೆಗೆ ತೆಗೆದುಕೊಂಡಿದ್ದಕ್ಕೆ ಕುಪಿತಗೊಂಡ ಕಾಂಗ್ರೆಸ್ ಕಾರ್ಯಕರ್ತರು ಗ್ರಾಮಸ್ಥರ ಮೇಲೆಯೇ ಹಲ್ಲೆ ನಡೆಸಿದ ಘಟನೆ ಚಾಮರಾಜನಗರದ ಜಿಲ್ಲೆಯ ಹನೂರು ಕ್ಷೇತ್ರದ ಕೌದಳ್ಳಿಯಲ್ಲಿ ನಡೆದಿದೆ.

    ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಸಕ ನರೇಂದ್ರ ಬೆಂಬಲಿಗರು ಗ್ರಾಮಕ್ಕೆ ಮತ ಕೇಳಲು ಬಂದಿದ್ದರು. ಈ ವೇಳೆ ಗ್ರಾಮಸ್ಥರು, ಅಭಿವೃದ್ಧಿ ಮಾಡದೇ ಮತ ಕೇಳಲು ಬಂದಿದ್ದೀರಾ ಎಂದು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ಇದರಿಂದ ಕುಪಿತಗೊಂಡ ಕಾಂಗ್ರೆಸ್ ಕಾರ್ಯಕರ್ತರು ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

    ಚುನಾವಣೆ ಬಂದಾಗ ಮಾತ್ರ ಬರ್ತೀರಾ ಬೇರೆ ದಿನ ಎಲ್ಲಿಗೆ ಹೋಗಿರುತ್ತೀರಾ. ಗ್ರಾಮದ ಅಭಿವೃದ್ಧಿಗೆ ಏನು ಮಾಡಿದ್ದೀರಾ? ನಾವು ಯಾಕೆ ಮತ ಹಾಕಬೇಕು? ಅಂತ ಗ್ರಾಮಸ್ಥರು ಶಾಸಕನ ಬೆಂಬಲಿಗರಿಗೆ ಪ್ರಶ್ನೆ ಹಾಕಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ನರೇಂದ್ರ ಹೋದಲ್ಲೆಲ್ಲಾ ಪ್ರಶ್ನೆಗಳನ್ನು ಕೇಳುವ ಮೂಲಕ ಗ್ರಾಮ ಪ್ರವೇಶಿಸಲು ಬಿಡಲಿಲ್ಲ. ಇದರಿಂದ ಕುಪಿತಗೊಂಡ ಶಾಸಕನ ಬೆಂಬಲಿಗರು ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಹಲ್ಲೆಯನ್ನು ಖಂಡಿಸಿ ಗ್ರಾಮಸ್ಥರು ಬೆಂಬಲಿಗರ ಕಾರಿನ ಮೇಲೆ ಕಲ್ಲು ಎಸೆಯುವ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

  • ಜಾತಿಗಣತಿಯ ಪೂರ್ಣ ಮಾಹಿತಿ ಪಡೆದೇ ಬದಾಮಿಯಲ್ಲಿ ಸಿಎಂ ಸ್ಪರ್ಧೆ- ಹಿರಿಯ ನಾಯಕರ ಬಳಿಯಿದೆ ಪಕ್ಕಾ ಲೆಕ್ಕ!

    ಜಾತಿಗಣತಿಯ ಪೂರ್ಣ ಮಾಹಿತಿ ಪಡೆದೇ ಬದಾಮಿಯಲ್ಲಿ ಸಿಎಂ ಸ್ಪರ್ಧೆ- ಹಿರಿಯ ನಾಯಕರ ಬಳಿಯಿದೆ ಪಕ್ಕಾ ಲೆಕ್ಕ!

    ಬಾಗಲಕೋಟೆ: ಸಿಎಂ ಸಿದ್ದರಾಮಯ್ಯ ಮೊದಲ ಬಾರಿಗೆ ಬಾಗಲಕೋಟೆ ಜಿಲ್ಲೆಯ ಬದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ. ಇತ್ತ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದಲೂ ಸಿಎಂ ಕಣಕ್ಕಿಳಿದಿದ್ದಾರೆ.

    ಸಿಎಂ ಬದಾಮಿಯಲ್ಲಿ ಕಣಕ್ಕಿಳಿಯಲು ಜಾತಿ ಲೆಕ್ಕಾಚಾರವೇ ಮೂಲ ಕಾರಣ ಎನ್ನಲಾಗಿದೆ. ಆದ್ರೆ ಜಾತಿ ಸಮೀಕ್ಷೆ ನಡೆಸಿದ ಕಾಂಗ್ರೆಸ್ ಸರ್ಕಾರ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿಲ್ಲ. ಬದಾಮಿ ಕ್ಷೇತ್ರದ ಹಿರಿಯ ನಾಯಕರಲ್ಲಿ ಜಾತಿ ಲೆಕ್ಕಾಚಾರದ ಪೂರ್ಣ ಮಾಹಿತಿ ಲಭ್ಯವಿದೆ ಅಂತಾ ಹೇಳಲಾಗ್ತಿದ್ದು, ಈ ಅಂಕಿ ಅಂಶಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

    ಹೊಸ ಜಾತಿ ಲೆಕ್ಕಾಚಾರ ಈ ಕೆಳಗಿನಂತಿದೆ ಎಂದು ಹೇಳಲಾಗ್ತಿದೆ:
    ಕುರುಬ-49,600, ಲಿಂಗಾಯತ-20,299, ಎಸ್‍ಸಿ-29,900, ವಾಲ್ಮೀಕಿ-19,500, ಮುಸ್ಲಿಂ-19,000, ದೇವಾಂಗ(ನೇಕಾರ)-15,500, ಗಾಣಿಗ-10,500, ಕ್ಷತ್ರೀಯ ಮರಾಠ-5,700, ವಿಶ್ವಕರ್ಮ-4,600, ರೆಡ್ಡಿ-3,800, ಉಪ್ಪಾರ-2,700, ಕಬ್ಬಲಿಗ-2,650, ಗೊಲ್ಲ-2,250, ಕ್ರಿಶ್ಚಿಯನ್-1450 ಮತ್ತು ಇತರೆ-27,000.

    ಕುರುಬ ಸಮುದಾಯದ ಅತಿ ಹೆಚ್ಚು ಮತಗಳನ್ನು ಹೊಂದಿರುವ ಬದಾಮಿ ಕ್ಷೇತ್ರದಲ್ಲಿ ಸರಳವಾಗಿ ಜಯ ಸಾಧಿಸಬಹುದು ಎಂಬುದು ಕಾಂಗ್ರೆಸ್ ಲೆಕ್ಕಾಚಾರ. ಇದೇ ಆಧಾರದ ಮೇಲೆಯೇ ಬಿಜೆಪಿ ಸಹ ದಲಿತ ನಾಯಕ, ಸಂಸದ ಶ್ರೀರಾಮುಲು ಅವರನ್ನು ಕಣಕ್ಕಿಳಿಸಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ. ಎಸ್‍ಸಿ, ಲಿಂಗಾಯತ ಮತ್ತು ವಾಲ್ಮೀಕಿ ಸಮುದಾಯದ ಮತಗಳ ಕ್ರೂಡಿಕರಣವಾದ್ರೆ ಶ್ರೀರಾಮುಲು ಸರಳ ಬಹುಮತದಿಂದ ಗೆಲುವು ಸಾಧಿಸ್ತಾರೆ ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿದೆ.

    ಈ ಹಿಂದೆ ಹೇಳಲಾಗ್ತಿದ್ದ 2011ರ ಜನಗಣತಿಯ ಆಧಾರದಲ್ಲಿ ದಾಖಲಾಗಿರುವ ಮಾಹಿತಿ ಹೀಗಿತ್ತು.

    ಮತದಾರರ ಸಂಖ್ಯೆ ಎಷ್ಟಿದೆ?
    ಕ್ಷೇತ್ರದ ಒಟ್ಟು ಮತದಾರರು- 2,12,184
    ಪುರುಷ ಮತದಾರರು -1,07,074
    ಮಹಿಳಾ ಮತದಾರರು – 1,05,110

    ಬದಾಮಿ ಕ್ಷೇತ್ರದ ಜಾತಿವಾರು ಲೆಕ್ಕಾಚಾರ
    ಕುರುಬ – 46 ಸಾವಿರ
    ಗಾಣಿಗ – 26 ಸಾವಿರ
    ಲಿಂಗಾಯತ – 32 ಸಾವಿರ (ಪಂಚಮಸಾಲಿ. ಬಣಜಿಗ)
    ನೇಕಾರ – 17 ಸಾವಿರ
    ಪ. ಜಾತಿ ಪಂಗಡ – 25 ಸಾವಿರ
    ಅಲ್ಪ ಸಂಖ್ಯಾತರು – 12 ಸಾವಿರ
    ಮರಾಠಾ ಕ್ಷತ್ರೀಯ – 9 ಸಾವಿರ
    ವಾಲ್ಮೀಕಿ – 13 ಸಾವಿರ
    ಬಂಜಾರ – 6 ಸಾವಿರ
    ರೆಡ್ಡಿ – 10 ಸಾವಿರ
    ಇತರರು – 16 ಸಾವಿರ

    2013ರ ಫಲಿತಾಂಶ ಏನಿತ್ತು?
    2013ರ ಚುನಾವಣೆಯಲ್ಲಿ ಬಿಬಿ ಚಿಮ್ಮನಕಟ್ಟಿ 15,113 ಮತಗಳ ಅಂತರದಿಂದ ಜಯಗಳಿಸಿದ್ದರು. ಚಿಮ್ಮನಕಟ್ಟಿ 57,446(41.3%) ಮತಗಳನ್ನು ಪಡೆದಿದ್ದರೆ ಜೆಡಿಎಸ್ ನ ಮಹಾಂತೇಶ್ ಗುರುಪಾದಪ್ಪ ಅವರು 42,333(30.4%) ಮತಗಳನ್ನು ಪಡೆದಿದ್ದರು. ಕಲ್ಲಪ್ಪ ಪಟ್ಟಣಶೆಟ್ಟಿ ಅವರು 30,310(21.8%) ಮತಗಳನ್ನು ಗಳಿಸಿದ್ದರು.

  • ಏಯ್ ರೆಡ್ಡಿ ಬಾರಪ್ಪ ನೀನು ಎಂದ ಸಿಎಂ – ಊಹುಂ ನಾ ಬರಕಿಲ್ಲ ಎಂದ ಮಾಜಿ ಶಾಸಕ

    ಏಯ್ ರೆಡ್ಡಿ ಬಾರಪ್ಪ ನೀನು ಎಂದ ಸಿಎಂ – ಊಹುಂ ನಾ ಬರಕಿಲ್ಲ ಎಂದ ಮಾಜಿ ಶಾಸಕ

    ಬಳ್ಳಾರಿ: ನಗರದಲ್ಲಿ ನಡೆದ ಸಮಾವೇಶದಲ್ಲಿ ಮಾಜಿ ಶಾಸಕರೊಬ್ಬರನ್ನು ವೇದಿಕೆಗೆ ತರಲು ಸಿಎಂ ಹರಸಾಹಸ ಪಟ್ಟ ಘಟನೆ ನಡೆಯಿತು.

    ಸ್ಥಳೀಯ ಮುಖಂಡರಿಗೆ ವೇದಿಕೆ ನೀಡದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ವೇದಿಕೆಯಿಂದ ದೂರ ಉಳಿದಿದ್ದರು. ವಿಷಯ ತಿಳಿದ ಸಿಎಂ ಸಿದ್ದರಾಮಯ್ಯ ಬಾ ರೆಡ್ಡಿ ಅಂತಾ ಕೂಗಿ ಕರೆದ್ರೂ ಬರಲಿಲ್ಲ. ಕೊನೆಗೆ ಸಿ.ಎಂ ಇಬ್ರಾಹಿಂ ಅವರೇ ಕೆಳಗಿಳಿದು ಸೂರ್ಯನಾರಾಯಣ ರೆಡ್ಡಿಯನ್ನು ವೇದಿಕೆಗೆ ಕರೆತಂದಿದ್ದು ವಿಶೇಷವಾಗಿತ್ತು. ಇದನ್ನು ಓದಿ: ನಿಮ್ ಜೊತೆ ಬರಲ್ಲ, ವೋಟು ಹಾಕಲ್ಲ- ಪ್ರಚಾರದ ವೇಳೆ ಸಿದ್ದು ಮರಿಸ್ವಾಮಿ ಮಾತಿನ ಜಟಾಪಟಿ

    ಇದೇ ವೇಳೆ ಮಾತನಾಡಿದ ಸಿದ್ದರಾಮಯ್ಯ, ಯಡಿಯೂರಪ್ಪ, ಹಾಗೂ ಕುಮಾರಸ್ವಾಮಿ ಎಷ್ಟೇ ತಿಪ್ಪರಲಾಗ ಹಾಕಿದ್ರೂ ಸಿಎಂ ಆಗಲ್ಲ, ನಾನೇ ಸಿಎಂ ಆಗೋದು. ಜೆಡಿಎಸ್-ಬಿಜೆಪಿ ಸರ್ಕಾರ ರಚನೆಗೆ ದಿನಾಂಕ ನಿಗದಿ ಮಾಡಿದ್ದಾರೆ. ಆದ್ರೆ ಅವರ ಕನಸು ಈಡೇರಲ್ಲ, ಬಿಜೆಪಿಯ ಅಲಿಬಾಬಾ ಮತ್ತು 40 ಮಂದಿ ಕಳ್ಳರು ಮತ್ತೆ ಒಂದಾಗಿದ್ದಾರೆ. ನಮ್ಮನ್ನು ಸೋಲಿಸಲು ಬಿಜೆಪಿ-ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿವೆ ಅಂತಾ ಗುಡುಗಿದ್ರು. ಇದನ್ನೂ ಓದಿ: ಸಿಎಂ ಜೊತೆ ಮಾತಿನ ಜಟಾಪಟಿ ನಡೆಸಿದ್ದ ಮರಿಸ್ವಾಮಿಗೆ ಎಚ್‍ಡಿಕೆಯಿಂದ ಸನ್ಮಾನ

  • ಯಾವ ಗರ್ಭಗುಡಿಯಲ್ಲಿ ಏನು ಅಡಗಿದ್ಯೋ ಚರ್ಚೆ ಮಾಡಲ್ಲ- ಎಚ್‍ಡಿಡಿ ಹೊಗಳಿದ ಮೋದಿಗೆ ಡಿಕೆಶಿ ಟಾಂಗ್

    ಯಾವ ಗರ್ಭಗುಡಿಯಲ್ಲಿ ಏನು ಅಡಗಿದ್ಯೋ ಚರ್ಚೆ ಮಾಡಲ್ಲ- ಎಚ್‍ಡಿಡಿ ಹೊಗಳಿದ ಮೋದಿಗೆ ಡಿಕೆಶಿ ಟಾಂಗ್

    ಉಡುಪಿ: ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ಇಂದು ತಮ್ಮ ಪತ್ನಿ ಉಷಾ ಅವರ ಜೊತೆ ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಮಾಡಿದ್ದಾರೆ.

    ಕೃಷ್ಣಮಠದ ಪರ್ಯಾಯ ಪಲಿಮಾರು ಶ್ರೀಗಳನ್ನು ಭೇಟಿ ಮಾಡಿ, ಆಶೀರ್ವಾದ ಪಡೆದರು. ನಂತರ ಮಠದಲ್ಲಿ ಮಾಧ್ಯಮಗಳ ಜೊತೆ ಡಿಕೆಶಿ ಮಾರ್ಮಿಕ ಮಾತನಾಡಿದರು. ಶ್ರೀಕೃಷ್ಣ ಒಬ್ಬ ಸಮರ್ಥ ರಾಜಕಾರಣಿ. ರಾಜಕಾರಣಿಯನ್ನು ದೇವರ ಹೆಸರಲ್ಲಿ ಧರ್ಮ ಸ್ಥಾಪನೆಗೆ ಪ್ರತಿಷ್ಠಾಪಿಸಲಾಗಿದೆ. ಹಾಗಾಗಿ ರಾಜಕಾರಣಿಗಳು ಹೆಚ್ಚಾಗಿ ಕೃಷ್ಣಮಠಕ್ಕೆ ಬರ್ತಾರೆ ಅಂತ ಹೇಳಿದ್ರು.

    ಮಠಕ್ಕೆ ಯಾರು ಬಂದ್ರು ಯಾರು ಬರಲಿಲ್ಲ ಮುಖ್ಯವಲ್ಲ. ನನಗೆ ಕೃಷ್ಣನ ಮೇಲೆ ಬಹಳ ನಂಬಿಕೆಯಿದೆ. ಪಕ್ಷದ ಪರವಾಗಿ, ವೈಯುಕ್ತಿಕವಾಗಿ ಸರ್ಕಾರದ ಪರವಾಗಿ ಬಂದಿದ್ದೇನೆ ಅಂತ ಹೇಳಿದ ಅವರು, ದೇವರಲ್ಲಿ ಏನು ಬೇಡಿಕೊಂಡ್ರಿ ಎಂಬ ಪ್ರಶ್ನೆಗೆ ಭಕ್ತ – ಭಗವಂತನ ವ್ಯವಹಾರ ನಮ್ಮಿಬ್ರಿಗೆ ಗೊತ್ತಿದೆ. ಪೂಜ್ಯ ಶ್ರೀಗಳೂ ಆಶೀರ್ವಾದ ಮಾಡಿದ್ದಾರೆ. ನಾನು ಬೇಡಿದನ್ನು, ಶೀಗಳು ಆಶೀರ್ವಾದ ಮಾಡಿದ್ದನ್ನೆಲ್ಲ ಬಹಿರಂಗ ಮಾಡಲ್ಲ ಅಂತ ಬೇಡಿಕೆ ಮತ್ತು ಆಶೀರ್ವಾದವನ್ನು ಗೌಪ್ಯವಾಗಿಟ್ಟರು.

    ಶ್ರೀಕೃಷ್ಣ ನನಗೆ ಮಾದರಿ ಅಂದ್ರು. ಈ ಬಾರಿ ಧರ್ಮ ಅಧರ್ಮದ ನಡುವಿನ ಚುನಾವಣೆ. ನಮ್ಮದು ಧರ್ಮ- ಬಿಜೆಪಿದ್ದು ಅಧರ್ಮ ಅಂದ್ರು. ಮಠಕ್ಕೆ ಬರುವುದು ಬಿಡುವುದು ಅವರವರ ವೈಯಕ್ತಿಕ ವಿಚಾರ. ಸಿದ್ದರಾಮಯ್ಯ ಮಠಕ್ಕೆ ಬರಲಿಲ್ಲ ಎನ್ನುವುದು ಸತ್ಯ. ಹಾಗಂತ ಸಿದ್ದರಾಮಯ್ಯನವರು ಮುಜರಾಯಿ ಇಲಾಖೆ ಮುಚ್ಚಲಿಲ್ಲವಲ್ಲ ಅಂತ ಹೇಳಿದರು.

    ಮೋದಿ, ಅಮಿತ್ ಶಾ ದೇವೇಗೌಡರನ್ನು ಹೊಗಳಲಿ. ಅಂತರಂಗದ ವಿಷಯ ಗೌಪ್ಯ. ಯಾವ ಗರ್ಭಗುಡಿಯಲ್ಲಿ ಏನು ಅಡಗಿದ್ಯೋ ನಾನು ಚರ್ಚೆ ಮಾಡಲ್ಲ ಅಂತ ಜೆಡಿಎಸ್ ಅನಿವಾರ್ಯ ಪರಿಸ್ಥಿತಿ ಬಂದ್ರೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುತ್ತೆ ಅಂತ ಹೇಳಿದ್ರು. ಐಟಿ ಕಾಂಗ್ರೆಸ್ ಮೇಲೆ ನಿರಂತರ ದಾಳಿ ಮಾಡಿದೆ. ಇದಕ್ಕೆ ಬಿಜೆಪಿ ಉತ್ತರ ಕೊಡಬೇಕು. ಡಿಕೆ ಶುದ್ಧ ನೀರು ಮಾಡಿ 5 ವರ್ಷವಾಯ್ತು. ಈಗ ವಾಟರ್ ಕ್ಯಾನ್ ಮಾಡಿದ್ದಲ್ಲ. ವಾಟರ್ ಕ್ಯಾನ್ ಹಂಚುವ ಅವಶ್ಯಕತೆ ನಮಗಿಲ್ಲ ಅಂತ ವಾಗ್ದಾಳಿ ನಡೆಸಿದ್ರು.

    ರಾಜಕಾರಣದಲ್ಲಿ ಸಾಧಿಸುವುದು ಮತ್ತಷ್ಟಿದೆ ಅನ್ನುವ ಡಿಕೆ ಶಿವಕುಮಾರ್ ಸಿಎಂ ಕುರ್ಚಿಯ ಮೇಲೆ ಕಣ್ಣಿಟ್ಟಿರುವುದು ಸುಳ್ಳಲ್ಲ. ಭಗವಾನ್ ಶ್ರೀ ಕೃಷ್ಣನಲ್ಲಿ, ಮುಖ್ಯಪ್ರಾಣನಲ್ಲಿ ಅದನ್ನು ಬೇಡಿಕೊಂಡಿದ್ದೇನೆ ಅಂತ ನೇರವಾಗಿ ಒಪ್ಪಿಕೊಳ್ಳದಿದ್ದರೂ ಮಾರ್ಮಿಕವಾಗಿ ಹೇಳಿದರು.

  • ಸವಾಲಿನಂತೆ ರಾಜೀನಾಮೆ ಕೊಟ್ಟರೂ ಮೋದಿ ಸ್ವೀಕರಿಸದೇ ವಿನಂತಿಸಿಕೊಂಡ್ರು: ಅಂದಿನ ಘಟನೆಯನ್ನು ನೆನಪಿಸಿಕೊಂಡ ಎಚ್‍ಡಿಡಿ

    ಸವಾಲಿನಂತೆ ರಾಜೀನಾಮೆ ಕೊಟ್ಟರೂ ಮೋದಿ ಸ್ವೀಕರಿಸದೇ ವಿನಂತಿಸಿಕೊಂಡ್ರು: ಅಂದಿನ ಘಟನೆಯನ್ನು ನೆನಪಿಸಿಕೊಂಡ ಎಚ್‍ಡಿಡಿ

    ಬೆಂಗಳೂರು: ಬೇರೆಯವರ ಬೆಂಬಲವಿಲ್ಲದೇ ಮೋದಿಯವರು ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬಂದ್ರೆ ಸದಸ್ಯತ್ವಕ್ಕೆ ರಾಜೀನಾಮೆ ಕೊಡುವುದಾಗಿ ಹೇಳಿದ ನಂತರದ ಘಟನೆಯನ್ನು ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರು ಮಾಧ್ಯಮಗಳ ಜೊತೆಗಿನ ಸಂವಾದದಲ್ಲಿ ಮೆಲುಕು ಹಾಕಿದ್ದಾರೆ.

    ಮೋದಿಯವರು ಚಿಕ್ಕಬಳ್ಳಾಪುರಕ್ಕೆ ಬಂದಾಗ, ನಮ್ಮ ರಾಜ್ಯಕ್ಕೆ ಬರಲಿ. ನಾನೇ ಎಚ್‍ಡಿಡಿ ಅವರನ್ನು ಕಾಪಾಡಿಕೊಳ್ಳುತ್ತೇನೆ ಅಂತ ಹೇಳಿದ್ದರು. ಆವಾಗ ನಾನು ಅವರ ಮಾತಿಗೆ ಪ್ರತಿಕ್ರಿಯೆ ನೀಡಿ, ನನಗೆ 4 ಜನ ಮಕ್ಕಳಿದ್ದಾರೆ. ಅವರು ಕಾಪಾಡುವುದು ಬೇಕಾಗಿಲ್ಲ. ಇವರಿಗೆ ಯಾಕ್ ಬೇಕು ಅಂತ ತಮಾಷೆಯಾಗಿ ಹೇಳಿದ್ದೆ.

    ಸವಾಲಿನಂತೆಯೇ ಚುನಾವಣೆಯಲ್ಲಿ ಗೆದ್ದು ಸರ್ಕಾರ ಅಧಿಕಾರಕ್ಕೆ ಬಂದ 4 ದಿನ ಆದ ಬಳಿಕ ನಾನು ಮೋದಿಯವರನ್ನು ಭೇಟಿ ಮಾಡಿದೆ. ಈ ವೇಳೆ ನಾನು ಈಗಾಗಲೇ ನನ್ನ ಸದಸ್ಯತ್ವಕ್ಕೆ ರಾಜೀನಾಮೆ ಕೊಡುವುದಾಗಿ ಮಾತು ಕೊಟ್ಟಿದ್ದೆ. ಈ ಮಾತನ್ನು 10 ಬಾರಿ ಹೇಳಿದ್ದೇನೆ. ಹೀಗಾಗಿ ಸವಾಲಿನಂತೆ ನಾನು ರಾಜೀನಾಮೆ ನೀಡಲು ಬಂದಿದ್ದೇನೆ ಅಂತ ಹೇಳಿದೆ. ಇದನ್ನೂ ಓದಿ: ಕನ್ನಡಿಗ ಪ್ರಧಾನಿಯಾದ್ರೆ ಗೌರವ ಕೊಡುವ ಸಂಸ್ಕೃತಿ ಕಾಂಗ್ರೆಸ್ಸಿಗಿಲ್ಲ- ಮೋದಿಯನ್ನು ಹೊಗಳಿ ಸಿಎಂ ತೆಗಳಿದ ಮಾಜಿ ಪ್ರಧಾನಿ

    ಆ ಸಂದರ್ಭದಲ್ಲಿ ಮೋದಿಯವರು ನೀವೊಬ್ಬರು ಅನುಭವಸ್ಥರು. ಚುನಾವಣೆ ಸಂದರ್ಭದಲ್ಲಿ ನಾನೂ ಮಾತಾಡಿದ್ದೇನೆ. ನೀವೂ ಮಾತಾಡಿದ್ದೀರಿ. ಅದನ್ನೆಲ್ಲಾ ನೀವು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ. ಚುನಾವಣೆ ಸಂದರ್ಭದಲ್ಲಿ ನೀವು ತೆಗೆದುಕೊಂಡಿರೋ ಮೃದು ನಿರ್ಧಾರ ನನಗೆ ಬೇಸರ ತಂದಿದೆ. ನಿಮಗೆ ಅನುಭವವಿದೆ. 10 ವರ್ಷ ರಾಜ್ಯವಾಳಿದ್ದೀರಿ. ಹಿರಿಯರಿದ್ದೀರಿ. ನಿಮ್ಮ ಮನಸ್ಸಿಗೆ ಬೇಸರವಾಗಿ ಆಕ್ರೋಶದ ಈ ರಾಜೀನಾಮೆಯನ್ನು ನೀಡುವ ಅವಶ್ಯಕತೆಯಿಲ್ಲ ಅಂತ ಅವರೇ ನನ್ನಲ್ಲಿ ವಿನಂತಿ ಮಾಡಿಕೊಂಡರು ಅಂತ ಹೇಳಿದ್ರು.

    ಸುಮಾರು 15-20 ನಿಮಿಷ ಮಾತುಕತೆ ನಡೆಸಿದೆವು. ಇದು ಅವರೊಂದಿಗೆ ನನ್ನ ಮೊದಲ ಮೀಟಿಂಗ್ ಆಗಿತ್ತು ಅಂತ 2014ರ ಘಟನೆಯನ್ನು ಎಚ್‍ಡಿಡಿ ನೆನಪಿಸಿಕೊಂಡರು.