Tag: Karnataka Elections 2018

  • 10 ವರ್ಷದಿಂದ ಇಲ್ಲದವರು ಈಗ್ಯಾಕೆ ಬಂದ್ರಿ- ಗ್ರಾಮಸ್ಥರ ಸಿಟ್ಟಿಗೆ ಬೆದರಿ ಕಾಂಗ್ರೆಸ್ ಅಭ್ಯರ್ಥಿ ವಾಪಸ್

    10 ವರ್ಷದಿಂದ ಇಲ್ಲದವರು ಈಗ್ಯಾಕೆ ಬಂದ್ರಿ- ಗ್ರಾಮಸ್ಥರ ಸಿಟ್ಟಿಗೆ ಬೆದರಿ ಕಾಂಗ್ರೆಸ್ ಅಭ್ಯರ್ಥಿ ವಾಪಸ್

    ಮಂಡ್ಯ: ಕಳೆದ ಹತ್ತು ವರ್ಷದಿಂದ ಇಲ್ಲದವರು ಈಗ ಯಾಕೆ ಬಂದಿದ್ದೀರಿ? ನಮ್ಮ ಮನೆಯಲ್ಲಿ ನಿಮ್ಮ ಕೊಡುಗೆ ಏನೂ ಇಲ್ಲ ಎಂದು ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಶಾಸಕ ರಮೇಶ್‍ಬಾಬು ಬಂಡಿಸಿದ್ದೇಗೌಡ ಅವರನ್ನು ಮತದಾರರು ಗದರಿಸಿ ಕಳುಹಿಸಿದ ಘಟನೆ ನಡೆದಿದೆ.

    ಶ್ರೀರಂಗಪಟ್ಟಣದ ಹದಿನೈದನೇ ವಾರ್ಡ್ ಕಾವೇರಿಪುರಕ್ಕೆ ರಮೇಶ್‍ಬಾಬು ಬಂಡಿಸಿದ್ದೇಗೌಡ ಶುಕ್ರವಾರ ಸಂಜೆ ಮತ ಕೇಳಲು ಹೋಗಿದ್ದರು. ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಸತತ ಎರಡು ಬಾರಿ ಗೆದ್ದು, ಇತ್ತೀಚೆಗಷ್ಟೇ ಜೆಡಿಎಸ್ ತೊರೆದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದ ರಮೇಶ್ ಬಂಡಿಸಿದ್ದೇಗೌಡರನ್ನು ನೋಡಿದ್ದೇ ತಡ ಮತದಾರರು ಕೆಂಡಾಮಂಡಲರಾಗಿದ್ದಾರೆ.

    ಕಳೆದ ಹತ್ತು ವರ್ಷದಿಂದ ಬರದವರು ಈಗ ಯಾಕೆ ಬಂದಿದ್ದೀರಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಮತದಾರರ ಆಕ್ರೋಶ ನೋಡುತ್ತಿದ್ದಂತೆಯೇ ರಮೇಶ್‍ಬಾಬುಗೆ ಬೆಂಬಲಿಗರು ಜೈಕಾರ ಕೂಗಲಾರಂಭಿಸಿದ್ದಾರೆ. ಜೈಕಾರದ ನಡುವೆ ರಮೇಶ್‍ಬಾಬು ಮತಹಾಕುವಂತೆ ಕೇಳಿಕೊಂಡಿದ್ದಾರೆ.

    ಇದರಿಂದ ಮತ್ತಷ್ಟು ಕೆರಳಿದ ವ್ಯಕ್ತಿಯೊಬ್ಬ ಜೋರು ಧ್ವನಿಯಲ್ಲಿ ನಾನು ಬರೋದು ಇಲ್ಲ. ನಿನಗೆ ಓಟ್ ಹಾಕೋದಿಲ್ಲ. ನಮ್ಮ ಮನೆಯಲ್ಲಿ ನಿಮ್ಮ ಕೊಡುಗೆ ಏನೂ ಇಲ್ಲ ಎಂದು ನೇರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನು ಕೇಳಿ ರಮೇಶ್ ಬಾಬು ಬೆಂಬಲಿಗರು ನಿಮ್ಮ ಓಟ್ ನೀವೇ ಇಟ್ಟುಕೊಳ್ಳಿ, ಬೇರೆಯವರ ಕೈಲಿ ಕೆಲಸ ಮಾಡಿಸಿಕೊಳ್ತೀರ ಎಂದು ಪ್ರಶ್ನೆ ಮಾಡಿದ್ದಾರೆ. ಇದ್ರಿಂದ ಮತ್ತಷ್ಟು ಕೆರಳಿದ ಮತದಾರ, ಅಯ್ಯೋ ನಮ್ಮ ಓಟ್ ನಾವೇ ಇಟ್ಟುಕೊಳ್ಳುತ್ತೇವೆ, ಬೇರೆಯವರಿಂದ ಕೆಲಸ ಮಾಡಿಸಿಕೊಳ್ಳುತ್ತೇವೋ ಬಿಡುತ್ತೇವೋ ಬೇಡ ಬಿಡಿ ಎಂದು ಖಾರವಾಗಿ ಉತ್ತರಿಸಿದ್ದಾರೆ. ಇದನ್ನು ನೋಡಿದ ಬೆಂಬಲಿಗರು ಜೋರಾಗಿ ಪ್ರಶ್ನೆ ಮಾಡುತ್ತಿದ್ದ ವ್ಯಕ್ತಿಗೆ, ಏನೋ ಕಡೀತಿದೆಯಾ ಎಂದು ಅವಾಜ್ ಹಾಕಿದ್ದಾರೆ. ಈ ವೇಳೆ ಪ್ರಶ್ನೆ ಮಾಡುತ್ತಿದ್ದ ಯುವಕನ ಬೆಂಬಲಕ್ಕೆ ಬಂದ ಮಹಿಳೆಯರು ಶಾಸಕರ ಬೆಂಬಲಿಗರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೇ ಈಗ ಬಂದಿದ್ದೀರಾ ಹೋಗಿ ಎಂದು ಅವಾಜ್ ಹಾಕಿ ಕಳುಹಿಸಿದ್ದಾರೆ.

    ಮತದಾರರ ಆಕ್ರೋಶ ನೋಡಿ ವಿಧಿಯಿಲ್ಲದೇ ರಮೇಶ್‍ಬಾಬು ಬಂಡಿಸಿದ್ದೇಗೌಡ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

  • ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ದೂರು!

    ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ದೂರು!

    ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ.

    ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ಪಿಯೂಷ್ ಗೋಯಲ್ ವಿರುದ್ಧ ವೈಯಕ್ತಿಕ ದಾಳಿ ನಡೆಸಿದ ಆರೋಪ ಮೇಲೆ ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ಸಂಸದೆ ಶೋಭಾ ಕರಂದ್ಲಾಜೆ ದೂರು ನೀಡಿದ್ದಾರೆ.

    ಅಮಿತ್ ಷಾ ಪುತ್ರ ಜಯ್‍ಷಾ 50 ಸಾವಿರ ರೂ. ಹಣವನ್ನ ಅಕ್ರಮವಾಗಿ 80 ಕೋಟಿ ಮಾಡಿದ್ದಾರೆ. ಬಿಜೆಪಿ ನಿಮ್ಮ ಬಳಿ ಹಣ ಕಿತ್ತುಕೊಂಡು ನೀರವ್ ಮೋದಿ, ರೆಡ್ಡಿ ಬ್ರದರ್ಸ್‍ಗೆ ನೀಡಿದ್ದಾರೆ. ದಲಿತರ ಮೇಲೆ ಬಿಜೆಪಿ ದೌರ್ಜನ್ಯವೆಸಗುತ್ತಿದೆ ಎಂದು ರಾಹುಲ್ ಆರೋಪ ಮಾಡಿದ್ದರು.

  • ಸಿಎಂ ನಮ್ಮನ್ನು ಒಡೀತಾನೆ, ದೇವಸ್ಥಾನ, ಮಠದ ಆದಾಯದ ಮೇಲೆ ಕಣ್ಣಾಕಿದ್ದಾನೆ- ಸಿಎಂ ವಿರುದ್ಧ ಅನಂತ್ ಕುಮಾರ್ ಹೆಗ್ಡೆ ವಾಗ್ದಾಳಿ

    ಸಿಎಂ ನಮ್ಮನ್ನು ಒಡೀತಾನೆ, ದೇವಸ್ಥಾನ, ಮಠದ ಆದಾಯದ ಮೇಲೆ ಕಣ್ಣಾಕಿದ್ದಾನೆ- ಸಿಎಂ ವಿರುದ್ಧ ಅನಂತ್ ಕುಮಾರ್ ಹೆಗ್ಡೆ ವಾಗ್ದಾಳಿ

    ಬೆಳಗಾವಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ನಾಲಗೆ ಹರಿಯಬಿಟ್ಟಿದ್ದು, ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

    ಬೆಳಗಾವಿ ಜಿಲ್ಲೆಯ ಕಿತ್ತೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಮತಯಾಚಣೆ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಿದ್ದರಾಮಯ್ಯ ನಮ್ಮನ್ನು ಒಟ್ಟಾಗಿರೋಕೆ ಬಿಡಲ್ಲ. ನಮ್ಮನ್ನು ಒಡೀತಾನೆ, ದೇಶವನ್ನು ಹಾಳು ಮಾಡ್ತಾನೆ. ದೇವಸ್ಥಾನ, ಮಠದ ಆದಾಯದ ಮೇಲೆ ಕಣ್ಣಾಕಿದ್ದಾನೆ. ನಾವೆಲ್ಲಾ ಒಟ್ಟಾಗಿ ನಿಲ್ಲಲ್ಲ ಅನ್ನೋದು ನಮ್ಮ ವೀಕ್ನೆಸ್. ದೇಶದಲ್ಲಿ ಕಾಂಗ್ರೆಸ್ ಕೇವಲ ಸೋಲಬಾರದು. ಆತ್ಮಹತ್ಯೆ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಹೀನಾಯವಾಗಿ ಸೋತು ಇನ್ನೆಂದೂ ಮತ ಕೇಳೋಕೆ ಬರಬಾರದು ಅಂತ ಕಿಡಿಕಾರಿದ್ದಾರೆ.


    ಹಿಂದೂಗಳಲ್ಲಿ ಇರೋ ಜಾತಿ ಪದ್ಧತಿಯಲ್ಲಿ ನಾವು ಒಡೆದು ಸಾಯುತ್ತಿದ್ದೇವೆ. ನಾವೆಲ್ಲ ನಮ್ಮ ದೇಶ, ಧರ್ಮ ಎಂದು ಒಟ್ಟಾದ್ರೆ ಸಿದ್ದರಾಮಯ್ಯನಂತಹ ಕುತಂತ್ರಿಗಳು ಈ ದೇಶದಲ್ಲಿ ಬದುಕಲು ಸಾಧ್ಯವಿಲ್ಲ.  70 ವರ್ಷದಿಂದ ಪಾಪ ಮಾಡಿರುವ ಕಾಂಗ್ರೆಸ್ ಗೆ ಇಲ್ಲಿ ಬದುಕಲು ಅಧಿಕಾರವಿಲ್ಲ. ನೀವೇನಾದ್ರೂ ಕಾಂಗ್ರೆಸ್ಸಿಗರನ್ನ ಒಡೆದ್ರೆ ನಿಮ್ಮ ಕೈ ಕೊಳೆಯಾಗುತ್ತೆ. ಹೀಗಾಗಿ ಅವರೇ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿ. ಕಾಂಗ್ರೆಸ್ ಗೆ ನೈತಿಕತೆ ಇದ್ರೆ, ದೇಶದ ಬಗ್ಗೆ ಕಳಕಳಿ ಇದ್ರೆ, ಇನ್ನೂ ಮುಂದೆ ಸುಳ್ಳು ಹೇಳುವುದಿಲ್ಲ ಎಂದು ಹೇಳಿ ಮುಖಕ್ಕೆ ಮಸಿ ಬಡಿದುಕೊಂಡು ಹೋಗಬೇಕು. ಕರ್ನಾಟಕದಲ್ಲಿ ಕಾಂಗ್ರೆಸ್ ನ ಆತ್ಮಹತ್ಯೆ ಸಿದ್ಧತೆ ನಡೆದಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿದೆ ಅಂತ ಹೇಳಿದ್ರು.

    ಕಾಂಗ್ರೆಸ್ ನ ದೊಡ್ಡ ದೊಡ್ಡ ನೇತಾರರು ಆ ಮನೆ ಖಾಲಿ ಮಾಡಿ ಬಿಜೆಪಿಗೆ ಬರುತ್ತಿದ್ದಾರೆ. ದೆವ್ವ ಹೊಕ್ಕಿರುವ ಮನೆಯಲ್ಲಿ ಯಾರು ಇರುವುದಿಲ್ಲ. ಸಿದ್ದರಾಮಯ್ಯ ಇರುವ ಕಡೆ ಯಾರು ನಿಲ್ಲುವುದಿಲ್ಲ. ಕರ್ನಾಟಕದ ಜನ ತೀರ್ಮಾನ ಮಾಡಿದ್ದಾರೆ. ಸಿದ್ದರಾಮಯ್ಯನ ಮನೆಗೆ ಕಳುಹಿಸಬೇಕು ಯಡಿಯೂರಪ್ಪನ ಸಿಎಂ ಮಾಡಬೇಕೆಂದು. ಮೋದಿಯವರ ಯೋಜನೆ ಇಲ್ಲಿನ ಹಳ್ಳಿಗಳಿಗೆ ಬಂದಿಲ್ಲ. ಇದಕ್ಕೆ ಕಾರಣ ಕರ್ನಾಟಕದಲ್ಲಿ ರಾವಣ ರಾಜ್ಯ ಇದೆ ಎಂದು ಕಿಡಿಕಾರಿದ್ರು.

    ಪಡಿತರ ಅಕ್ಕಿಗೆ ಮೋದಿ 29ರೂ. ಕೋಡ್ತಾರೆ. ರಾಜ್ಯ ಸರ್ಕಾರ 3ರೂ. ಕೊಡ್ತಾರೆ. ಆದ್ರೇ ಬಿಕನಾಸಿ ಸಿದ್ದರಾಮಯ್ಯ ಗೆ ಮೋದಿ ಫೋಟೋ ಹಾಕುವ ಯೋಗ್ಯತೆ ಇಲ್ಲ. ಮೋದಿ ಕರ್ನಾಟಕ ಸರ್ಕಾರಕ್ಕೆ 1.63 ಸಾವಿರ ಕೋಟಿ ಅಭಿವೃದ್ಧಿಗೆ ಕೊಟ್ಟಿದ್ದಾರೆ. ಆದ್ರೆ ಈ ಹಣವನ್ನ ಕಾಂಗ್ರೆಸ್ ನವರು ಮೊದಲನೇ ಮನೆಯಲ್ಲಿ ಇಡ್ತಾರೋ, ಎರಡನೇ ಮನೆಯಲ್ಲಿ ಇಡ್ತಾರೋ ಗೊತ್ತಾಗುವುದಿಲ್ಲ ಅಂತ ವಾಗ್ದಾಳಿ ನಡೆಸಿದ್ದಾರೆ.

  • ಏಯ್ ಶ್ರೀರಾಮುಲು.. ಯಾಕೆ ಸಿನಿಮಾ ಹೀರೋಗಳನ್ನು ಕರೆಸ್ತೀಯಾ?- ಶ್ರೀರಾಮುಲು, ಯಶ್ ವಿರುದ್ಧ ತಿಪ್ಪೇಸ್ವಾಮಿ ವಾಗ್ದಾಳಿ

    ಏಯ್ ಶ್ರೀರಾಮುಲು.. ಯಾಕೆ ಸಿನಿಮಾ ಹೀರೋಗಳನ್ನು ಕರೆಸ್ತೀಯಾ?- ಶ್ರೀರಾಮುಲು, ಯಶ್ ವಿರುದ್ಧ ತಿಪ್ಪೇಸ್ವಾಮಿ ವಾಗ್ದಾಳಿ

    ಚಿತ್ರದುರ್ಗ: ಮೊಳಕಾಲ್ಮೂರು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಹಾಗೂ ನಟ ಯಶ್ ವಿರುದ್ಧ ಪಕ್ಷೇತರ ಅಭ್ಯರ್ಥಿ ತಿಪ್ಪೇಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

    ನಾಯಕನಹಟ್ಟಿಯಲ್ಲಿ ಪ್ರಚಾರದ ವೇಳೆ ಮೊಳಕಾಲ್ಮೂರು ಕ್ಷೇತ್ರದಲ್ಲಿ ನಟ ಯಶ್ ಪ್ರಚಾರಕ್ಕೆ ಟೀಕೆ ಮಾಡಿದ ತಿಪ್ಪೇಸ್ವಾಮಿ, ಯಶ್ ನಟರಾಗುವ ಮುನ್ನವೇ ನಾನು ಬಣ್ಣ ಬಳಿದುಕೊಂಡು ನಾಟಕವಾಡಿದವನು. ಯಶ್ ಬಂದು ಓಟ್ ಕೇಳಿದ್ರೆ ರಾಮುಲುಗೆ ಇಲ್ಲಿ ಯಾರು ಓಟ್ ಹಾಕಲ್ಲ. ಏಯ್ ಶ್ರೀರಾಮುಲು ಯಾಕೆ ಸಿನಿಮಾ ಹೀರೋಗಳನ್ನು ಕರೆಸ್ತೀಯಾ.. ನಿನ್ನನ್ನು ಬಳ್ಳಾರಿಗೆ ಕಳುಹಿಸಲು ಇಲ್ಲಿನ ಜನ ತೀರ್ಮಾನಿಸಿದ್ದಾರೆ ಅಂತ ವಾಗ್ದಾಳಿ ನಡೆಸಿದ್ರು. ಇದನ್ನೂ ಓದಿ: ಮೊಳಕಾಲ್ಮೂರು ಕ್ಷೇತ್ರದಲ್ಲಿ ಶ್ರೀರಾಮುಲು ಪರ ಮತಯಾಚನೆಗೆ ಮುಂದಾದ ಯಶ್

    ಇಡೀ ಕ್ಷೇತ್ರದ ತುಂಬಾ ನನ್ನ ಕಲಾಭಿಮಾನಿಗಳು ಇದ್ದಾರೆ. ಬಣ್ಣ ಬಡಿದುಕೊಂಡು ಸ್ಟೇಜ್ ಗೆ ಹೋಗಿ ಮಾತು ಹೇಳುವವನು ನಿಜವಾದ ಕಲಾವಿದ. ಸಿನಿಮಾದವರು ನಡೆದುಕೊಂಡು ಬಂದ್ರೆ ಸರಿಯಾಗಿ ನಡೆಯಲು ಬರೋದಿಲ್ಲವೆಂದು ವಾಪಸ್ಸು ಕಳುಹಿಸುತ್ತಾರೆ. ಶ್ರೀರಾಮುಲು ಸುಮ್ಮನೇ ನಾಯಕ ನಟರನ್ನ ಯಾಕೇ ಕರೆಯಿಸುತ್ತೀಯಾ? ನಿನ್ನ ದುಡ್ಡಿಗಾಗಿ ಜನರು ಬರ್ತಾರೆ. ಮತಹಾಕಲು ಯಾರು ಬರೋದಿಲ್ಲ ಅಂತ ವ್ಯಂಗ್ಯವಾಡಿದ್ದಾರೆ.

  • ಸಿಎಂಗೆ ಬಿಗ್ ಶಾಕ್ ನೀಡಿದ ನಟ ಕಿಚ್ಚ ಸುದೀಪ್!

    ಸಿಎಂಗೆ ಬಿಗ್ ಶಾಕ್ ನೀಡಿದ ನಟ ಕಿಚ್ಚ ಸುದೀಪ್!

    ಬಾಗಲಕೋಟೆ: ಕರ್ನಾಟಕ ಕುರುಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯಗೆ ಬಿಗ್ ಶಾಕ್ ಎದುರಾಗಿದೆ. ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲು 5 ದಿನ ಇರುವಂತೆ ಸಿಎಂ ಅವರಿಗೆ ಕಹಿ ಸುದ್ದಿಯೊಂದು ಹೊರಬಿದ್ದಿದೆ.

    ಯಾವುದೇ ಕಾರಣಕ್ಕೂ ಬದಾಮಿಯಲ್ಲಿ ಶ್ರೀರಾಮುಲು ವಿರುದ್ಧ ಪ್ರಚಾರ ಮಾಡಲ್ಲ. ಬಹಳ ವರ್ಷಗಳಿಂದ ನನಗೆ ಶ್ರೀರಾಮುಲು ಗೊತ್ತು. ಅವ್ರಿಗೆ ಒಳ್ಳೆಯದಾಗಲಿ ಎಂದು ನಟ ಸುದೀಪ್ ಹೇಳಿದ್ದಾರೆ. ಇದನ್ನೂ ಓದಿ: ವಾಲ್ಮಿಕಿ ಸಮುದಾಯದ ಮತ ಸೆಳೆಯಲು ಕಿಚ್ಚನನ್ನು ಅಸ್ತ್ರವಾಗಿಸಲು ಸಿಎಂ ಪ್ಲಾನ್!

    ಸುದೀಪ್ ಬಳಸಿಕೊಂಡು ಬದಾಮಿಯಲ್ಲಿ ವಾಲ್ಮೀಕಿ ಸಮುದಾಯದ ಮತಗಳಿಸಲು ಪ್ಲಾನ್ ಮಾಡಿದ್ದ ಸಿಎಂ ಅವರಿಗೆ, ಇದೀಗ ನಟ ಕಿಚ್ಚ ಸುದೀಪ್ ನಿರ್ಧಾರ ಶಾಕ್ ನೀಡಿದೆ. ಈ ಮೂಲಕ ಬದಾಮಿ ಕ್ಯಾಂಪೇನ್ ಕಣದಿಂದ ಹಿಂದೆ ಸರಿಯಲು ಶ್ರೀರಾಮುಲು ಅವರು ಸುದೀಪ್ ಮೇಲೆ ಒತ್ತಡ ಹೇರಿದ್ರಾ ಎಂಬ ಪ್ರಶ್ನೆಯೊಂದು ಇದೀಗ ಮೂಡಿದೆ.

    ಇದೇ ವೇಳೆ ಇಬ್ಬರೂ ಆತ್ಮೀಯರು, ಬದಾಮಿಯಲ್ಲಿ ರಾಮುಲು ಪರ ಪ್ರಚಾರ ನಡೆಸಲ್ಲ ಅಂತ ನಟ ಯಶ್ ಕೂಡ ಹೇಳಿದ್ದಾರೆ. ಈ ಮಧ್ಯೆ ಚಾಮುಂಡೇಶ್ವರಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ ನಡೆಸಲಿದ್ದು, 33 ಹಳ್ಳಿಗಳನ್ನ ದರ್ಶನ್ ರೋಡ್ ಶೋ ಮಾಡಲಿದ್ದಾರೆ. ಇದನ್ನೂ ಓದಿ: ಸಿಎಂ ಪರ ನಟ ಸುದೀಪ್ ಪ್ರಚಾರಕ್ಕೆ ಶುರುವಾಯ್ತು ತೀವ್ರ ವಿರೋಧ

    ವಾಲ್ಮಿಕಿ ಸಮುದಾಯದ ಮತ ಸೆಳೆಯಲೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದೀಪ್ ಅವರನ್ನು ತನ್ನ ಪರ ಪ್ರಚಾರ ನಡೆಸುವಂತೆ ಪ್ಲಾನ್ ಮಾಡಿದ್ದರು. ಈ ಸುದ್ದಿ ಬಿತ್ತರವಾಗುತ್ತಿದ್ದಂತೆಯೇ ದಲಿತ ಸಂಘಟನೆಗಳು ಸಿಎಂ ವಿರುದ್ಧ ಕಿಡಿಕಾರಿವೆ.

    2013 ರಲ್ಲಿ ಪರಮೇಶ್ವರ ಸೋಲಿಸಿಲು ಸಿಎಂ ಒಳ ತಂತ್ರ ಮಾಡಿದ್ದಾರೆ. ಸದಾಶಿವ ವರದಿ ಮೂಲಕ ಎರಡ ಮತ್ತು ಬಲ ಸಮುದಾಯದ ನಡುವೆ ಒಡೆದಾಳುವ ನೀತಿ ಪಾಲನೆ ಮಾಡಿದ್ದಾರೆ. ಚೆಲುವಾದಿ ಅಭಿವೃದ್ಧಿ ನಿಗಮಸ್ಥಾಪಿಸದ ಹಿನ್ನೆಲೆ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪರಮೇಶ್ವರ್, ಸತೀಶ್ ಜಾರಕೀಹೋಳಿ ಅವರನ್ನ ಸಂಪುಟದಿಂದ ಅರ್ಧಕ್ಕೆ ಸಿಎಂ ಕೈ ಬಿಟ್ಟಿದ್ದಾರೆ. ಶ್ರೀನಿವಾಸ್ ಪ್ರಸಾದ್ ಅವರನ್ನ ಕಾಂಗ್ರೆಸ್ ನಿಂದ ಹೊರ ಹೋಗುವಂತೆ ಸಿದ್ದರಾಮಯ್ಯ ಮಾಡಿದ್ದಾರೆ ಅಂತಾ ಆರೋಪ ಮಾಡಿದ್ದು, ದಲಿತ ವಿರೋಧಿ ನೀತಿ ಪಾಲಿಸುವ ಸಿದ್ದರಾಮಯ್ಯಗೆ ಪಾಠ ಕಲಿಸಲು ಮುಂದಾದ ದಲಿತ ಸಂಘಟನೆ ಬದಾಮಿಯಲ್ಲಿ ದಲಿತರು ಸಿಎಂಗೆ ಮತ ಹಾಕದಂತೆ ಕರೆ ನೀಡಲಾಗಿದೆ ಎಂಬುದಾಗಿ ತಿಳಿದುಬಂದಿದೆ.

  • ನಿಮ್ಮ ಡ್ರಾಮಾ ಇಲ್ಲಿ ನಡೆಯಲ್ಲ, ಜೆಡಿಎಸ್ ದೂರೋಕೆ ದೆಹಲಿಯಿಂದ ಇಲ್ಲಿಗೆ ಬರ್ಬೇಕಿತ್ತಾ: ಮೋದಿ ವಿರುದ್ಧ ಎಚ್‍ಡಿಕೆ ಕಿಡಿ

    ನಿಮ್ಮ ಡ್ರಾಮಾ ಇಲ್ಲಿ ನಡೆಯಲ್ಲ, ಜೆಡಿಎಸ್ ದೂರೋಕೆ ದೆಹಲಿಯಿಂದ ಇಲ್ಲಿಗೆ ಬರ್ಬೇಕಿತ್ತಾ: ಮೋದಿ ವಿರುದ್ಧ ಎಚ್‍ಡಿಕೆ ಕಿಡಿ

    ವಿಜಯಪುರ: ಒಬ್ಬ ಪ್ರಧಾನಿಯಾಗಿ ಮೋದಿ ರಾಜ್ಯದ ಸಮಸ್ಯೆಯ ಕುರಿತು ಚರ್ಚಿಸೋದನ್ನು ಬಿಟ್ಟು ಜೆಡಿಎಸ್ ಬಗ್ಗೆ ಅಭಿಪ್ರಾಯ ಕೊಡೋದಕ್ಕೆ ದೆಹಲಿಯಿಂದ ಇಲ್ಲಿಗೆ ಬರಬೇಕಾಯಿತಾ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

    ಜೆಡಿಎಸ್‍ಗೆ ಮತ ಹಾಕಬೇಡಿ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ತಿರುಗೇಟು ನೀಡಿದ ಎಚ್‍ಡಿಕೆ, ಕಾಂಗ್ರೆಸ್ ನವರು ಜೆಡಿಎಸ್ ಗೆ ಮತ ನೀಡಿದ್ರೆ ಬಿಜೆಪಿ ಬರುತ್ತೆ ಅಂತಾರೆ. ಮೋದಿ ಅವರು ಜೆಡಿಎಸ್ ಗೆ ಮತ ನೀಡಿದ್ರೆ ಕಾಂಗ್ರೆಸ್ ಬರುತ್ತೆ ಅಂತಾರೆ. ಇವರಿಬ್ಬರೇ ಚುನಾವಣೆ ನಿರ್ಧಾರ ಮಾಡಿಕೊಂಡ ಹಾಗೆ ಕಾಣುತ್ತೆ. ಕಳೆದ 4 ವರ್ಷದ ಅಧಿಕಾರಾವಧಿಯಲ್ಲಿ ರಾಜ್ಯದ ಅಭಿವೃದ್ಧಿಗೆ ಮೋದಿ ರಾಜ್ಯದ ಜನರ ಬಳಿ ಮತ ಕೇಳುವ ನೈತಿಕತೆ ಉಳಿಸಿಕೊಂಡಿಲ್ಲ ಅಂತ ಕಿಡಿಕಾರಿದ್ರು. ಇದನ್ನೂ ಓದಿ: ಮೋದಿಯವರು ಹೇಳಿದಂತೆ ಸಿದ್ದರಾಮಯ್ಯ ಪಕ್ಷಾಂತರಿ ಸಿಎಂ: ಕುಮಾರಸ್ವಾಮಿ

    ನಮ್ಮ ಪಕ್ಷದ ಬಗ್ಗೆ ಮಾತನಾಡಿ ಪ್ರಚಾರ ಮಾಡುತ್ತಿದ್ದಾರೆ. ಓವೈಸಿಯಿಂದ ಪ್ರಚಾರ ಮಾಡಿಸಿದ್ದರೆ, ಉಗ್ರವಾದಿಗಳನ್ನು ರಾಜ್ಯಕ್ಕೆ ಕರೆ ತಂದು ಪ್ರಚಾರ ನಡೆಸಿದ್ದಾರೆಂದು ಪ್ರಧಾನಿ ಮೋದಿ ಆರೋಪಿಸುತ್ತಿದ್ದಾರೆ. ಮೋದಿ, ಅಮಿತ್ ಷಾ, ಯೋಗಿ ಅದಿತ್ಯಾನಾಥರಿಂದ ರಾಜ್ಯಕ್ಕೆ ಯಾವ ರೀತಿಯ ಕೊಡುಗೆಯಿದೆ. ನೀವು ಹೊರ ರಾಜ್ಯಗಳಿಂದ ಬಂದು ಪ್ರಚಾರ ನಡೆಸಿದ್ದೀರಿ. ಸಿದ್ದರಾಮಯ್ಯ ಅವರೇ ಹೇಳಿದ್ದಾರೆ ಬಿಜೆಪಿ ಅವರು ಟೆರರಿಸ್ಟ್ ಗಳೆಂದು. ರಾಜ್ಯದ ರಕ್ಷಣೆಗೆ ನಿಂತವರು ನಾವು. ಭಾಷಣದಲ್ಲಿ ರಾಜ್ಯದ ಮಹಾನುಭಾವರ ಹೆಸರು ಹೇಳಿದಾಕ್ಷಣ ಜನ ಮರಳಾಗುವುದಿಲ್ಲ. ಅವರ ಹೆಸರು ಹೇಳುವ ನೀವು ಆಯಾ ಜಿಲ್ಲೆಗಳ ಸಮಸ್ಯೆಗೆ ನಿಮ್ಮ ಸರ್ಕಾರ ಯಾವಾಗ ನೆರವಿಗೆ ಬಂದಿದೆಯೆಂದು ತರಾಟೆಗೆ ತಗೆದುಕೊಂಡರು.  ಇದನ್ನೂ ಓದಿ: ಈ ಸಲ ಕಪ್ ನಮ್ದೆ, ಸಮ್ಮಿಶ್ರ ಸರ್ಕಾರ ಇಲ್ಲ: ಎಚ್‍ಡಿಕೆ

    ಕಲಬುರಗಿ ತೊಗರಿ ರೈತರಿಗೆ ನಿಮ್ಮ ಕೊಡುಗೆಯೇನು ಎಂಬುದನ್ನು ಮೊದಲು ತಿಳಿಸಿ. ನಿಮ್ಮ ಡ್ರಾಮಾ ಕರ್ನಾಟಕ ಜನತೆ ಮುಂದೆ ನಡೆಯುವುದಿಲ್ಲ. ಜೆಡಿಎಸ್ ವಿರುದ್ಧ ಮಾತನಾಡಿ, ಹೊಗಳಿ ಮಾತನಾಡುವುದ್ರಿಂದ ಜನರ ಹಾದಿ ತಪ್ಪಿಸಲು ನಿಮ್ಮಿಂದ ಹಾಗೂ ಕಾಂಗ್ರೆಸ್ ನಿಂದಲೂ ಸಾಧ್ಯವಿಲ್ಲ. ನಮ್ಮನ್ನು ಹೊಗಳಿ ತೆಗಳಿ ನೀವು ಮತವನ್ನು ಪಕ್ಷದ ಪರ ಪಡಿತೇವೆ ಎಂದು ತಿಳಿದಿದ್ರೆ ಅದು ಆಗಲ್ಲ. ರಾಜ್ಯದ ಜನ ದಡ್ಡರಲ್ಲ. ಪ್ರತಿಯೊಂದನ್ನು ಯೋಚನೆ ಮಾಡ್ತಿದ್ದಾರೆ. ನಿಮ್ಮ ಪೊಳ್ಳು ಮಾತುಗಳಿಗೆ ವೈಯಕ್ತಿಕ ಟೀಕೆ ಮೂಲಕ ಮತ ಪಡೆಯಲು ಹೊರಟ ನೀವು ದೇಶದ ಜನರ ದಾರಿ ತಪ್ಪಿಸಿದ್ದೀರಿ. ರಾಜ್ಯದ ಜನ ನಿಮಗೆ ತಕ್ಕ ಉತ್ತರ ನೀಡ್ತಾರೆ ಅಂತ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಪ್ರಧಾನಿಯವರು ನನಗೆ ಬೌಲಿಂಗ್ ಮಾಡೋಕೆ ಆಗಲ್ಲ: ಮೋದಿಗೆ ಕುಮಾರಸ್ವಾಮಿ ಟಾಂಗ್

    ಬೆಂಗಳೂರಿನ ಕೆಂಗೇರಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ರಾಜ್ಯದಲ್ಲಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ತೆಗೆಯಬೇಕದಾರೆ ನೀವು ಬಿಜೆಪಿಗೆ ಮತ ಹಾಕಬೇಕು. ಜೆಡಿಎಸ್‍ಗೆ ಮತ ಹಾಕಿದ್ದರೆ ಕಾಂಗ್ರೆಸ್ ಸೋಲಿಸಲು ಆಗುವುದಿಲ್ಲ ಎಂದು ಮೋದಿ ಭಾಷಣ ಮಾಡಿದ್ದರು.

  • ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದ ಯುಪಿ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ

    ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದ ಯುಪಿ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ

    ವಿಜಯಪುರ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಿಯತ್ತಿನಲ್ಲಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಉತ್ತರ ಪ್ರದೇಶದ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಗಂಭೀರ ಆರೋಪ ಮಾಡಿದರು.

    ವಿಜಯಪುರ ಜಿಲ್ಲೆಯ ಇಂಡಿ ಮತಕ್ಷೇತ್ರದ ಅಭ್ಯರ್ಥಿ ದಯಾಸಾಗರ ಪಾಟೀಲ ಪರವಾಗಿ ಮತಯಾಚನೆ ನಡೆಸಿ ಮಾತನಾಡಿದ ಅವರು, ಬಿಜೆಪಿ ನಿಯತ್ತಿನಲ್ಲಿ ಸಮಾಜವನ್ನು ಜೋಡಿಸುವುದು ಹಾಗೂ ಸಮಾಜ ವಿಕಾಸ ಮಾಡುವುದು ಆಗಿದೆ. ಅಲ್ಲದೇ, ಕೇಂದ್ರ ಸರ್ಕಾರ ಸಮಾಜಕ್ಕಾಗಿ ಒಳ್ಳೆಯ ಕೆಲಸ ಮಾಡುತ್ತಿದೆ ಎಂದರು. ಇದನ್ನೂ ಓದಿ: Steel ಬ್ರಿಡ್ಜ್ ಅಲ್ಲ, ಅದು Steal ಬ್ರಿಡ್ಜ್- ಕೈ ಸರ್ಕಾರದಿಂದ ಬೆಂಗ್ಳೂರಿಗೆ 5 ಕೊಡುಗೆ: ಮೋದಿ

    ಆರ್‍ಎಸ್‍ಎಸ್ ಹಾಗೂ ಬಿಜೆಪಿ ದಲಿತರ ಮೀಸಲಾತಿ ಮುಗಿಸಲು ನಿಂತಿದೆ ಅಂತಾ ರಾಗಾ ಹೇಳತ್ತಿದ್ದಾರೆ. ಆದ್ರೆ, ರಾಗಾ ದಲಿತರ ಹೆಸರಿನಲ್ಲಿ ರಾಜನೀತಿ ಮಾಡುತ್ತಿದ್ದಾರೆ. ರಾಗಾ ಸಮಾಜ ಒಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರ ಸಮಾಜ ವಿಕಾಸಕ್ಕಾಗಿ ಕೆಲಸ ಮಾಡುತ್ತಿದೆ. ಸೀದಾ ರೂಪಾಯಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಲೂಟಿ ಮಾಡ್ತಾ ಇದೆ ಎಂದು ಹರಿಹಾಯ್ದರು.

    ಈ ಸೀದಾ ರೂಪಾಯಿಯಲ್ಲಿ ಕರ್ನಾಟಕ ಜನರು ಸಾಲಗಾರರು ಆಗಿದ್ದಾರೆ. ಆದ್ರೆ, ಸಚಿವರು ಮಾತ್ರ ಶ್ರೀಮಂತರಾಗಿದ್ದಾರೆ. ಅದಕ್ಕಾಗಿ ಇಂಥ ಸಚಿವರನ್ನು ಬರುವ ಚುನಾವಣೆಯಲ್ಲಿ ಆಯ್ಕೆ ಮಾಡಬಾರದು ಎಂದು ಮನವಿ ಮಾಡಿದರು.

    ಸಮಾಜವನ್ನು ಒಡೆದು ರಾಜನೀತಿ ಮಾಡುವ ಕಾಂಗ್ರೆಸ್ ಸರ್ಕಾರ ತೆಗೆದು ಒಗೆಯಬೇಕು. ಅಲ್ಲದೇ, ಕಾಂಗ್ರೆಸ್ ಎನ್ನುವ ಭೂತವನ್ನು ತೆಗೆದು ಹಾಕಬೇಕು. ಆ ಘಳಿಗೆ ಮೇ 12ರಂದು ಕಾಂಗ್ರೆಸ್ ಭೂತ ಬರದಂತೆ ಮಾಡಬೇಕು ಎಂದರು.

  • ಇಂದು ಬಾಗಲಕೋಟೆಗೆ ಮೂವರು ಪ್ರಮುಖ ನಾಯಕರು ಭೇಟಿ

    ಇಂದು ಬಾಗಲಕೋಟೆಗೆ ಮೂವರು ಪ್ರಮುಖ ನಾಯಕರು ಭೇಟಿ

    ಬಾಗಲಕೋಟೆ: ಚುನಾವಣೆಯ ಹಿನ್ನೆಲೆಯಲ್ಲಿ ಪ್ರಚಾರಕ್ಕಾಗಿ ಇಂದು ಜಿಲ್ಲೆಗೆ ಮೂರು ಜನ ಪ್ರಮುಖ ನಾಯಕರು ಭೇಟಿ ನೀಡಲಿದ್ದಾರೆ.

    ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಮುಧೋಳ ಮತ್ತು ತೇರದಾಳ ಕ್ಷೇತ್ರದ ಬನಹಟ್ಟಿಯಲ್ಲಿ ಯೋಗಿ ಆದಿತ್ಯನಾಥ್ ಪ್ರಚಾರ ನಡೆಸಲಿದ್ದಾರೆ.

    ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಆಗಮಿಸಲಿರುವ ಆದಿತ್ಯನಾಥ್, ಮಧ್ಯಾಹ್ನ ಸುಮಾರು 12.30ಕ್ಕೆ ಮುಧೋಳ ನಗರಕ್ಕೆ ಭೇಟಿ ನೀಡಲಿದ್ದಾರೆ. 12.30 ರಿಂದ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರ್.ಎಮ್.ಜೆ ಕಾಲೇಜ್ ವರೆಗೂ ರೋಡ್ ಶೋ ಮಾಡಲಿದ್ದಾರೆ. ನಂತರ 1.30 ಕ್ಕೆ ಆರ್.ಎಮ್.ಜೆ ಕಾಲೇಜು ಮೈದಾನದಲ್ಲಿ ಬಹಿರಂಗ ಪ್ರಚಾರ ಸಭೆ ನಡೆಸಲಿದ್ದು, ಮುಧೋಳ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಪರ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಮತಯಾಚನೆ ಮಾಡಲಿದ್ದಾರೆ.

    ಸಭೆಯ ಬಳಿಕ ಮಧೋಳದಿಂದ ತೇರದಾಳ ಮತಕ್ಷೇತ್ರ ಬನಹಟ್ಟಿ ಪಟ್ಟಣ ಎಸ್.ಆರ್.ಎ ಕಾಲೇಜು ಮೈದಾನದಲ್ಲಿ ಮಧ್ಯಾಹ್ನ ಸುಮಾರು 4 ಗಂಟೆಗೆ ಬಹಿರಂಗ ಪ್ರಚಾರ ಸಭೆ ನಡೆಸಲಿದ್ದಾರೆ. ತೇರದಾಳ ಬಿಜೆಪಿ ಅಭ್ಯರ್ಥಿ ಸಿದ್ದು ಸವದಿ ಪರ ಪ್ರಚಾರ ಭಾಷಣ ಮಾಡಲಿದ್ದಾರೆ.

    ಸಂಜೆ  ಕೇಂದ್ರ ಸಚಿವೆ ಸ್ಮೃತಿ ಇರಾನಿ ಬದಾಮಿ ಕ್ಷೇತ್ರದ ಗುಳೇದಗುಡ್ಡ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀ ರಾಮುಲು ಪರ ಪ್ರಚಾರ ಸಭೆ ನಡೆಸಲಿದ್ದಾರೆ. ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕೂಡ ಬಾಗಲಕೋಟೆ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಹುನಗುಂದ ಪಕ್ಷೇತರ ಅಭ್ಯರ್ಥಿ ಎಸ್.ಆರ್ ನವಲಿಹಿರೇಮಠ ಪರ ಹುನಗುಂದ ಪಟ್ಟಣದಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ. ಬಳಿಕ ಸಂಜೆ 6 ಗಂಟೆಗೆ ಬದಾಮಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಹನುಮಂತ ಮಾವಿನಮರದ ಪರ ರೋಡ್ ಶೋ ಪ್ರಚಾರ ಸಭೆ ನಡೆಸಲಿದ್ದಾರೆ.

  • ಮೋದಿಯವರು ಹೇಳಿದಂತೆ ಸಿದ್ದರಾಮಯ್ಯ ಪಕ್ಷಾಂತರಿ ಸಿಎಂ: ಕುಮಾರಸ್ವಾಮಿ

    ಮೋದಿಯವರು ಹೇಳಿದಂತೆ ಸಿದ್ದರಾಮಯ್ಯ ಪಕ್ಷಾಂತರಿ ಸಿಎಂ: ಕುಮಾರಸ್ವಾಮಿ

    ವಿಜಯಪುರ: ಬಳ್ಳಾರಿ ರೆಡ್ಡಿ ಬ್ರದರ್ಸ್ ಗಳ ಬಗ್ಗೆ ಸಮರ್ಥನೆ ಮಾಡಿಕೊಂಡ ಪ್ರಧಾನಿ ಮೋದಿಗೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

    ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಜೆಡಿಎಸ್ ಸಮಾವೇಶದ ಬಳಿಕ ಮಾತನಾಡಿದ ಹೆಚ್‍ಡಿಕೆ, ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ನಡೆದ ಕಳ್ಳ ಸಾಗಾಣಿಕೆ ಹಾಗೂ ಅಲ್ಲಿಯ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಪ್ರಧಾನಿ ಮೋದಿ ಅವರ ನೈತಿಕತೆ ಉಳಿಸಿಕೊಂಡಿಲ್ಲವೆಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ಇದಕ್ಕೆ ಸಿಎಂ ಸಿದ್ದರಾಮಯ್ಯ ಕೂಡ ಹೊರತಾಗಿಲ್ಲ. ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದ ಸಿದ್ದರಾಮಯ್ಯ, ಪಾದಯಾತ್ರೆ ಹೆಸರಲ್ಲಿ ಅಧಿಕಾರ ಪಡೆದಿದ್ದಾರೆ. ಆದರೆ ಬಳ್ಳಾರಿ ಜನರನ್ನು ಬಡತನದಲ್ಲಿ ಇಟ್ಟಿದ್ದಾರೆಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ಅವರ 5 ವರ್ಷದ ಆಡಳಿತದಲ್ಲಿ ಅಕ್ರಮ ಗಣಿಗಾರಿಕೆ ವಿಚಾರವಾಗಿ ಯಾರ ಮೇಲೆ ಕ್ರಮಕೈಗೊಂಡಿದೆ ತೋರಿಸಲಿ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಈ ಸಲ ಕಪ್ ನಮ್ದೆ, ಸಮ್ಮಿಶ್ರ ಸರ್ಕಾರ ಇಲ್ಲ: ಎಚ್‍ಡಿಕೆ

    ಪ್ರಧಾನಿ ಮೋದಿ ಅವರು ಹೇಳಿದ ಹಾಗೆ ಸಿದ್ದರಾಮಯ್ಯ ಪಕ್ಷಾಂತರಿ ಸಿಎಂ. ನಾಳೆ ಬಿಜೆಪಿಗೆ ಹೋದರೂ ಆಶ್ಚರ್ಯ ಪಡುವ ಹಾಗಿಲ್ಲ ಎಂದಿದ್ದಾರೆ. ಚುನಾವಣಾ ಫಲಿತಾಂಶದಲ್ಲಿ ಅತಂತ್ರ ಬಂದರೆ. ಇದೇ ಸಿದ್ದರಾಮಯ್ಯ ನೇತೃತ್ವದಲ್ಲಿ 50-60 ಜನ ಶಾಸಕರ ಜೊತೆ ಬಿಜೆಪಿ ಬಾಗಿಲು ತಟ್ಟಿದರೂ ಆಶ್ಚರ್ಯಪಡುವ ಹಾಗಿಲ್ಲವೆಂದು ಸಿದ್ದು ವಿರುದ್ಧ ಹೆಚ್‍ಡಿಕೆ ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಪ್ರಧಾನಿಯವರು ನನಗೆ ಬೌಲಿಂಗ್ ಮಾಡೋಕೆ ಆಗಲ್ಲ: ಮೋದಿಗೆ ಕುಮಾರಸ್ವಾಮಿ ಟಾಂಗ್

  • ಕ್ರೈಂ ಸಿಟಿ ಅನ್ನೋ ಮೂಲಕ ಬೆಂಗ್ಳೂರಿಗರಿಗೆ ಅವಮಾನ- ಮೋದಿಗೆ ಸಿಎಂ ಟ್ವೀಟ್

    ಕ್ರೈಂ ಸಿಟಿ ಅನ್ನೋ ಮೂಲಕ ಬೆಂಗ್ಳೂರಿಗರಿಗೆ ಅವಮಾನ- ಮೋದಿಗೆ ಸಿಎಂ ಟ್ವೀಟ್

    ಬೆಂಗಳೂರು: ರಾಜಧಾನಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಐದು ಅಂಶಗಳ ಪಂಚ್ ನೀಡಿದ್ದ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಟ್ವೀಟೇಟು ನೀಡಿದ್ದಾರೆ.

    ಮೋದಿಯವರ ಭಾಷಣದ ಕೆಲ ಅಂಶಗಳನ್ನು ಅಸ್ತ್ರವಾಗಿಸಿಕೊಂಡು ಟ್ವಿಟ್ಟರ್ ನಲ್ಲಿ ವಿಜೃಂಭಿಸಿದ್ದಾರೆ. ಪ್ರಧಾನಿ ಮೋದಿ ಪದೇ ಪದೇ ತಮ್ಮ ಹುದ್ದೆಯ ಘನತೆಯನ್ನು ಮರೆತು ಮಾತನಾಡುತ್ತಿರೋದು ನಿರಾಸೆ ಉಂಟು ಮಾಡಿದೆ. ಡೈನಾಮಿಕ್ ನಗರಿ ಬೆಂಗಳೂರನ್ನು ಅಪರಾಧಗಳ ನಗರಿ, ಪಾಪದ ಕಣಿವೆ ಅಂತಾ ಹೇಳೋ ಮೂಲಕ ಬೆಂಗಳೂರಿಗರನ್ನು ಪ್ರಧಾನಿ ಅವಮಾನಿಸಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ. ಇದನ್ನೂ ಓದಿ: Steel ಬ್ರಿಡ್ಜ್ ಅಲ್ಲ, ಅದು Steal ಬ್ರಿಡ್ಜ್- ಕೈ ಸರ್ಕಾರದಿಂದ ಬೆಂಗ್ಳೂರಿಗೆ 5 ಕೊಡುಗೆ: ಮೋದಿ

    ಈ ಮೂಲಕ ಎಲೆಕ್ಷನ್ ಸನಿಹದಲ್ಲಿ ಭಾವನಾತ್ಮಕ ದಾಳ ಉರುಳಿಸಿದ್ದಾರೆ. ಇನ್ನು ಕಳೆದ ಐದು ವರ್ಷಗಳಲ್ಲಿ ಬೆಂಗಳೂರಿಗೆ ಸಿಕ್ಕ ಗರಿಮೆಗಳು ಏನು ಅನ್ನೋದನ್ನು ಪಟ್ಟಿ ಮಾಡಿ ಪ್ರಧಾನಿ ಮೋದಿ ಸಿಎಂ ಟ್ಯಾಗ್ ಮಾಡಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ 3 ಸವಾಲೆಸೆದ ರಾಹುಲ್ ಗಾಂಧಿ!

    ಪ್ರಧಾನಿ ಮೋದಿ ಆರೋಪ
    * ಸಿಲಿಕಾನ್ ವ್ಯಾಲಿಯೀಗ ಶಾಪದ ಕಣಿವೆ
    * ಗಾರ್ಡನ್ ಸಿಟಿಯೀಗ ಗಾರ್ಬೆಜ್ ಸಿಟಿ
    * ಕಂಪ್ಯೂಟರ್ ರಾಜಧಾನಿಯೀಗ ಕ್ರೈಂ ರಾಜಧಾನಿ
    * ಐಕ್ಯತೆಯ ಮಹಾನಗರಿಯೀಗ ಗೊಂದಲದ ಗೂಡು
    * ಸ್ಟಾರ್ಟ್‍ಅಪ್ ಹಬ್ ಈಗ ಪಾಟ್‍ಹೋಲ್ ಹಬ್
    * ಹೊಸ ವರ್ಷದಲ್ಲಿ ಮಹಿಳೆಯರಿಗೆ ಇಲ್ಲಿ ರಕ್ಷಣೆ ಇಲ್ಲ
    * ಬೆಳ್ಳಂದೂರು ಕೆರೆ ಮಲೀನ.. ಬೆಂಕಿ

    ಸಿಎಂ ತಿರುಗೇಟು
    * ಜಗತ್ತಿನಲ್ಲೇ ಮೋಸ್ಟ್ ಡೈನಾಮಿಕ್ ಸಿಟಿ
    * ಗಾರ್ಬೇಜ್ ಸಿಟಿ ಆಗಿದ್ದು ಬಿಎಸ್‍ವೈ ಅವಧಿಯಲ್ಲಿ
    * ವಿಶ್ವದ ಟಾಪ್ 25 ಹೈಟೆಕ್ ಸಿಟಿಗಳಲ್ಲಿ ಒಂದು
    * ವಿಶ್ವದ ಟಾಪ್ ಐದು ಸಂಶೋಧನಾ ಹಾಟ್ ಸ್ಟಾಟ್‍ಗಳಲ್ಲಿ ಒಂದು
    * ವಿಶ್ವಸಂಸ್ಥೆ ಮೆಚ್ಚುವ ರೀತಿ ಟೆಂಡರ್‍ಶ್ಯೂರ್ ರೋಡ್‍ಗಳ ನಿರ್ಮಾಣ
    * ವೃತ್ತಿನಿರತ ಮಹಿಳೆಯರಿಗೆ ಬೆಂಗಳೂರು ಸುರಕ್ಷಿತ ತಾಣ
    * ಅತಿ ವೇಗವಾಗಿ ಬೆಳೆಯುತ್ತಿರುವ ಹೈಟೆಕ್ ಸಿಟಿಗಳ ಪೈಕಿ ಒಂದು