Tag: karnataka elections

  • ಬೆಳಗ್ಗೆಯೇ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ ಬಿಎಸ್‌ವೈ ಕುಟುಂಬ

    ಬೆಳಗ್ಗೆಯೇ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ ಬಿಎಸ್‌ವೈ ಕುಟುಂಬ

    ಶಿವಮೊಗ್ಗ: ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಶಿಕಾರಿಪುರ ತಾಲೂಕು ಕಚೇರಿಯ ಮತಗಟ್ಟೆ ಕೇಂದ್ರದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕುಟುಂಬ ಸಮೇತರಾಗಿ ಆಗಮಿಸಿ ಮಂಗಳವಾರ ಮತ ಚಲಾಯಿಸಿದರು.

    ಮತದಾನಕ್ಕೂ ಮೊದಲು ಹುಚ್ಚರಾಯಸ್ವಾಮಿ ದೇವಸ್ಥಾನಕ್ಕೆ ಆಗಮಿಸಿದ ಯಡಿಯೂರಪ್ಪ, ವಿಜಯೇಂದ್ರ, ರಾಘವೇಂದ್ರ ಅವರು ಹುಚ್ಚರಾಯಸ್ವಾಮಿ ದರ್ಶನ ಪಡೆದರು. ರಾಘವೇಂದ್ರ ಸ್ವಾಮಿ ಮಠಕ್ಕೂ ಭೇಟಿ ನೀಡಿ ರಾಯರ ದರ್ಶನ ಪಡೆದರು. ನಂತರ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಿದರು.

    ಮತದಾನದ ಬಳಿಕ ಮಾತನಾಡಿದ ಯಡಿಯೂರಪ್ಪ, ರಾಜ್ಯದಲ್ಲಿ ಉತ್ತಮ ವಾತಾವರಣ ಇದೆ. ರಾಘವೇಂದ್ರ ಎರಡೂವರೆ ಲಕ್ಷ ಲೀಡ್‌ನಲ್ಲಿ ಗೇಲ್ತಾರೆ. ಇಂದು ನಡೆಯುತ್ತಿರುವ 14 ಲೋಕಸಭಾ ಕ್ಷೇತ್ರದಲ್ಲಿ 14 ಕ್ಷೇತ್ರ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಕಳೆದ 14 ಕ್ಷೇತ್ರಗಳ ಪೈಕಿ ಒಂದೆರಡರಲ್ಲಿ ಸಮಸ್ಯೆ ಇದೆ. ಮೋದಿ ಅವರನ್ನು ಪ್ರಧಾನ ಮಂತ್ರಿ ಮಾಡಲು ರಾಜ್ಯದಿಂದ 25-26 ಸೀಟ್ ಗೆಲ್ಲಿಸಿ ಕೊಡುತ್ತೇವೆ ಎಂದು ತಿಳಿಸಿದರು.

  • ಅನುಮಾನವೇ ಇಲ್ಲ, ನಾನು ಗೆಲ್ತೀನಿ – ಹಕ್ಕು ಚಲಾಯಿಸಿದ ಬಳಿಕ ಪ್ರಜ್ವಲ್ ರೇವಣ್ಣ ಮಾತು

    ಅನುಮಾನವೇ ಇಲ್ಲ, ನಾನು ಗೆಲ್ತೀನಿ – ಹಕ್ಕು ಚಲಾಯಿಸಿದ ಬಳಿಕ ಪ್ರಜ್ವಲ್ ರೇವಣ್ಣ ಮಾತು

    – ಮತ ಚಲಾವಣೆಗೂ ಮುನ್ನ ಮನೆ ದೇವರಿಗೆ ವಿಶೇಷ ಪೂಜೆ

    ಹಾಸನ: ಹೊಳೆನರಸೀಪುರ ತಾಲ್ಲೂಕಿನ ಪಡುವಲಹಿಪ್ಪೆ ಗ್ರಾಮದಲ್ಲಿಂದು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ (Prajwal Revanna) ಮತ ಚಲಾಯಿಸಿದ್ದಾರೆ.

    ಮತ ಚಲಾವಣೆಗೂ (Voting) ಮುನ್ನ ಹರದನಹಳ್ಳಿ ಗ್ರಾಮದಲ್ಲಿರುವ ದೇವೇಶ್ವರ ದೇವಾಲಯಕ್ಕೆ ಸಹೋದರ ಸೂರಜ್‌ರೇವಣ್ಣ ಅವರೊಂದಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ವಿವಿಧ ದೇಗುಲಗಳಲ್ಲಿ ಪೂಜೆ ಸಲ್ಲಿಸಿದ ಬಳಿಕ ಹಕ್ಕು ಚಲಾಯಿಸಿದ ಮಾಜಿ ಪ್ರಧಾನಿ ಹೆಚ್‌ಡಿಡಿ 

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಜಿಲ್ಲೆಯಲ್ಲಿ ಜೆಡಿಎಸ್ (JDS) ವಾತಾವರಣ ತುಂಬಾ ಚೆನ್ನಾಗಿದೆ. ಯಾವುದೇ ಅನುಮಾನ ಇಲ್ಲ, ಖಂಡಿತಾ ಈ ಚುನಾವಣೆಯಲ್ಲಿ ನಾನು ಗೆಲ್ತೀನಿ. ನೂರಕ್ಕೆ ನೂರು ಜನರ ಮೇಲೆ ವಿಶ್ವಾಸ ಇದೆ. ಮನೆ ದೇವರು ದೇವೇಶ್ವರನಿಗೆ ಪೂಜೆ ಸಲ್ಲಿಸಿದ್ದೇನೆ. ಬಿಜೆಪಿ ಕಾರ್ಯಕರ್ತರು, ನಮ್ಮ ಮುಖಂಡರು ಒಟ್ಟಾಗಿ ಕೆಲಸ ಮಾಡಿದ್ದಾರೆ. ಏನೇ ಬಂದರೂ ಎದುರಿಸುತ್ತೇವೆ. ಮೊದಲ ಹಂತದ ಚುನಾವಣೆ ನಡೆಯುತ್ತಿರುವ 14 ಕ್ಷೇತ್ರಗಳಲ್ಲಿಯೂ ಮೈತ್ರಿ ಪಕ್ಷ ಗೆಲ್ಲಲ್ಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಬಳಿಕ ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ, ಪಡುವಲಹಿಪ್ಪೆ ಗ್ರಾಮದ ಮತಗಟ್ಟೆ ಸಂಖ್ಯೆ 251ರಲ್ಲಿ ಪ್ರಜ್ವಲ್ ಹಕ್ಕು ಚಲಾಯಿಸಿದ್ದಾರೆ. ಇದನ್ನೂ ಓದಿ: ಈ ದೇಶ ಉಳಿಸುವ ವ್ಯಕ್ತಿ ಮೋದಿ ಒಬ್ಬರೇ – ಪ್ರಧಾನಿಗಳ ಗುಣಗಾನ ಮಾಡಿದ ದೊಡ್ಡಗೌಡರು

  • ಎರಡೇ ಕುಟುಂಬಗಳಿಗೆ ಮಣೆಹಾಕುತ್ತಿರುವ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರ

    ಎರಡೇ ಕುಟುಂಬಗಳಿಗೆ ಮಣೆಹಾಕುತ್ತಿರುವ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರ

    ಧಾರವಾಡ: ಜಿಲ್ಲೆಯ 7 ಕ್ಷೇತ್ರಗಳಲ್ಲಿ ಹುಬ್ಬಳ್ಳಿ-ಧಾರವಾಡ (Hubballi-Dharwad) ಪಶ್ಚಿಮ ಕ್ಷೇತ್ರ ಬೆಲ್ಲದ್ ಹಾಗೂ ಮೋರೆ ಕುಟುಂಬಗಳಿಗೇ ಮಣೆಹಾಕುತ್ತಾ ಬಂದಿದೆ. ಈ ಪೈಕಿ ಬೆಲ್ಲದ ಕುಟುಂಬವೇ ಹೆಚ್ಚಿನ ಗೆಲುವು ಸಾಧಿಸಿದೆ.

    ಚಂದ್ರಕಾಂತ ಬೆಲ್ಲದ್ ರಾಜಕೀಯ ನಿವೃತ್ತಿ ಪಡೆದ ಮೇಲೆ ಅವರ ಮಗನೇ ಎರಡು ಬಾರಿ ಶಾಸಕರಾಗಿದ್ದಾರೆ. ಹಾಗಾದ್ರೆ ಬೆಲ್ಲದ್ ಹಾಗೂ ಮೋರೆ ಕುಟುಂಬ ಎಷ್ಟು ಬಾರಿ ಇಲ್ಲಿ ಶಾಸಕರಾಗಿ ಆಡಳಿತ ನಡೆಸಿದ್ದಾರೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

    1983 ರಲ್ಲಿ ಮಾಜಿ ಸಚಿವ ಎಸ್.ಆರ್ ಮೋರೆ (SR More) ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಗೆದ್ದು ಶಾಸಕರಾದರು. ನಂತರ 1985ರ ಚುನಾವಣೆಯಲ್ಲಿ (Elections) ಚಂದ್ರಕಾಂತ ಬೆಲ್ಲದ್ ಮೊದಲ ಬಾರಿಗೆ ಪಕ್ಷೇತರರಾಗಿ ಗೆಲುವು ಸಾಧಿಸಿದರು. ಇದೇ ಕ್ಷೇತ್ರದಲ್ಲಿ 1989ರಲ್ಲಿ ನಡೆದ ಚುನಾವಣೆಯಲ್ಲಿ ಚಂದ್ರಕಾಂತ ಬೆಲ್ಲದ್ ಅವರನ್ನ ಸೋಲಿಸಿದ ಎಸ್.ಆರ್ ಮೋರೆ ಕಾಂಗ್ರೆಸ್ ಪಕ್ಷದಿಂದ 2ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಇದರಿಂದ ಮತ್ತೆ 2ನೇ ಬಾರಿಗೆ ಮೋರೆಗೆ ಮಣಿಸಲು 1994ರಲ್ಲಿ ಚಂದ್ರಕಾಂತ ಬೆಲ್ಲದ್ ಬಿಜೆಪಿ ಸೇರಿ, ಪಕ್ಷದಿಂದ ಗೆದ್ದು ಶಾಸಕರಾದರು.

    ಹೀಗೆ ಪ್ರತಿ ಚುನಾವಣೆಯಲ್ಲಿ ಎಸ್.ಆರ್ ಮೋರೆ ಒಮ್ಮೆ ಗೆದ್ದರೆ, ಚಂದ್ರಕಾಂತ ಬೆಲ್ಲದ್ ಮತ್ತೊಮ್ಮೆ ಗೆದ್ದು ಬರುವ ಮೂಲಕ ಈ ಕ್ಷೇತ್ರ ಎರಡೇ ಕುಟುಂಬದ ಗೆಲುವಿಗೆ ಸೀಮಿತವಾಗಿದೆ. ಚಂದ್ರಕಾಂತ ಬೆಲ್ಲದ್ ಈ ಕ್ಷೇತ್ರದಲ್ಲಿ 4 ಬಾರಿ ಶಾಸಕರಾಗಿದ್ದರೆ, ಎಸ್.ಆರ್ ಮೋರೆ 3 ಬಾರಿ ಶಾಸಕರಾಗಿ ಆಡಳಿತ ನಡೆಸಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಪಕ್ಷ ನಾನು ಬಿಡ್ಲಿಲ್ಲ, ಅವರೇ ನನ್ನ ಹೊರಗೆ ಹಾಕಿದ್ರು: ಎಟಿ ರಾಮಸ್ವಾಮಿ

    ಇದಾದ ಬಳಿಕ 2013ರ ಚುನಾವಣೆಗೆ ಚಂದ್ರಕಾಂತ ಬೆಲ್ಲದ್ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ ನಂತರವೂ ಅದೇ ಕುಟುಂಬದ ಆಡಳಿತ ಮುಂದುವರಿದಿದೆ. ಏಕೆಂದರೆ 2013 ಚುನಾವಣಾ ರಾಜಕಾರಣದಿಂದ ಚಂದ್ರಕಾಂತ ಬೆಲ್ಲದ್ ಹಿಂದೆ ಸರಿದ ನಂತರ, ತನ್ನ ಮಗನಾದ ಅರವಿಂದ ಬೆಲ್ಲದ್ ಅವರಿಗೆ ಬಿಜೆಪಿಯಿಂದ ಟಿಕೆಟ್ ಕೊಡಲಾಯಿತು. ಅರವಿಂದ ಬೆಲ್ಲದ್ ಭರ್ಜರಿ ಗೆಲುವು ಸಾಧಿಸಿದರು. ಚಂದ್ರಕಾಂತ ಬೆಲ್ಲದ್ ಎದುರು ಸೋತಿದ್ದ ಎಸ್.ಆರ್ ಮೋರೆ, 2013 ರಲ್ಲಿ ಮಗ ಅರವಿಂದ ಬೆಲ್ಲದ್ (Arvind Bellad) ವಿರುದ್ಧವೂ ಸೋತರು. ಈ ಬೆಳವಣಿಗೆ ನಂತರ 2018ರಲ್ಲಿ ಕಾಂಗ್ರೆಸ್ ಎಸ್.ಆರ್ ಮೋರೆ ಅವರಿಗೆ ಟಿಕೆಟ್ ನಿರಾಕರಿಸಿತು.

    ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ರಾಜಕೀಯ ಹಿನ್ನೋಟ ನೋಡುತ್ತಾ ಹೋದರೆ, ಈ ಎರಡೇ ಕುಟುಂಬಗಳಿಗೆ ಮಣೆ ಹಾಕುತ್ತಾ ಬಂದಿರುವುದು ಕಾಣುತ್ತದೆ. ಇದನ್ನೂ ಓದಿ: ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧೆ ಫಿಕ್ಸಾ?

    2023ರ ವಿಧಾನಸಭಾ ಚುನಾವಣೆಯಲ್ಲೂ ಅರವಿಂದ ಬೆಲ್ಲದ್ ಮತ್ತೆ ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿಯಲು ಭರ್ಜರಿ ತಯಾರಿ ನಡೆಸಿದ್ದಾರೆ. ಇತ್ತ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿಯಲು ಎಸ್.ಆರ್ ಮೋರೆ ಅವರ ಮಗಳು ಕೀರ್ತಿ ಮೋರೆ ಸಿದ್ಧತೆ ನಡೆಸುತ್ತಿದ್ದು, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈ ಇಬ್ಬರಿಗೂ ಟಿಕೆಟ್ ಸಿಕ್ಕಿದ್ದೇ ಆದಲ್ಲಿ ಮತ್ತೊಮ್ಮೆ ಈ ಕ್ಷೇತ್ರ ಬೆಲ್ಲದ್ ವರ್ಸಸ್ ಮೋರೆಯಾಗಲಿದೆ.

  • ಸಿದ್ದರಾಮಯ್ಯಗೆ ಕೋಲಾರಗಿಂತ ವರುಣಾನೇ ಸೇಫೆಸ್ಟ್ ಕ್ಷೇತ್ರ: ಕೆ.ಎನ್.ರಾಜಣ್ಣ

    ಸಿದ್ದರಾಮಯ್ಯಗೆ ಕೋಲಾರಗಿಂತ ವರುಣಾನೇ ಸೇಫೆಸ್ಟ್ ಕ್ಷೇತ್ರ: ಕೆ.ಎನ್.ರಾಜಣ್ಣ

    ತುಮಕೂರು: ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ರಿಗೆ ಕೋಲಾರಗಿಂತ ವರುಣಾನೆ ಸೇಫೆಸ್ಟ್ ಕ್ಷೇತ್ರ ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ (K.N Rajanna) ಸಲಹೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಕೋಲಾರಗಿಂತ ವರುಣಾದಲ್ಲೇ ಸ್ಪರ್ಧೆ ಮಾಡಿದರೆ ಅನಾಯಸವಾಗಿ ಗೆಲ್ಲಬಹುದು ಎಂದು ರಾಜಣ್ಣ ಅಭಿಪ್ರಾಯಿಸಿದ್ದಾರೆ.

    ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ (Siddaramaiah) ರ ವಿರುದ್ಧ ಕೋಲಾರದಲ್ಲಿ ಕರಪತ್ರ ಹಂಚುತ್ತಿದ್ದಾರೆ. ಪರಮೇಶ್ವರರನ್ನು ಸಿದ್ದರಾಮಯ್ಯ ಸೋಲಿಸಿದ್ರು ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಕೋಲಾರದಲ್ಲಿ ಹಾಗೇ ಮಾಡಿದ್ರೆ ಪರಮೇಶ್ವರ್ (G. Parameshwar) ಕ್ಷೇತ್ರ ಕೊರಟಗೆರೆಯಲ್ಲೂ ಸಿದ್ದರಾಮಯ್ಯನವರ ಸಮುದಾಯ ವಿರೋಧ ವ್ಯಕ್ತಪಡಿಸಬಹುದು. ಒಬ್ಬರಿಗೊಬ್ಬರು ಈ ರೀತಿ ಮಾಡೋದು ಭೂಷಣ ಅಲ್ಲ ಎಂದು ರಾಜಣ್ಣ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: `ವಿಷಕನ್ಯೆ’ಯಿಂದ ಕಾಂಗ್ರೆಸ್ ಹಾಳಾಗ್ತಿದೆ, ಡಿಕೆಶಿ ಗರ್ಲ್‌ಫ್ರೆಂಡ್‌ ಜೊತೆ ಮಾತನಾಡಿದ ಆಡಿಯೋ ಇದೆ: ಜಾರಕಿಹೊಳಿ

    ಈ ಎಲ್ಲಾ ಬೆಳವಣಿಗೆ ನೋಡಿದರೆ ಸಿದ್ದರಾಮಯ್ಯನವರು ವರುಣಾ (Varuna Constituency) ದಲ್ಲೇ ಸ್ಪರ್ಧೆ ಮಾಡಿದರೆ ಸೂಕ್ತ ಎಂದು ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವರುಣಾ ಹಾಲಿ ಶಾಸಕ ಯತೀಂದ್ರ (Yathindra) ಗೆ ಬೇರೆ ಯಾವುದಾದರೂ ಅವಕಾಶ ಕೊಡಬಹುದು. ಸಿದ್ದರಾಮಯ್ಯನವರು ವರುಣಾದಿಂದ ಸ್ಪರ್ಧೆ ಮಾಡಿದರೆ ಅವರಿಗೆ ಸಮಯದ ಉಳಿತಾಯ ಆಗುತ್ತದೆ. ಜೊತೆಗೆ ತನ್ನ ಕ್ಷೇತ್ರ ನೋಡಿಕೊಂಡು ಬೇರೆ ಕ್ಷೇತ್ರದಲ್ಲೂ ಪ್ರಚಾರ ಮಾಡಿ ಹೆಚ್ಚಿನ ಸೀಟು ಗೆಲ್ಲಿಸಬಹುದು ಎಂದಿದ್ದಾರೆ. ಒಂದು ವೇಳೆ ಕೋಲಾರಾ-ವರುಣಾ ಎರಡೂ ಬಿಟ್ಟು ಮಧುಗಿರಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ಮಧುಗಿರಿ ಜನತೆ ಬಹುಮತದಿಂದ ಸಿದ್ದರಾಮಯ್ಯರನ್ನು ಗೆಲ್ಲಿಸುತ್ತಾರೆ ಎಂದು ರಾಜಣ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಳೆದ ಬಾರಿ ಒಬ್ಬರಿಂದ ಆದ ತಪ್ಪು, ಈ ಸಲ ಇಬ್ಬರಿಂದಲೂ ಆಗುತ್ತಾ?

    ಕಳೆದ ಬಾರಿ ಒಬ್ಬರಿಂದ ಆದ ತಪ್ಪು, ಈ ಸಲ ಇಬ್ಬರಿಂದಲೂ ಆಗುತ್ತಾ?

    ಬೆಂಗಳೂರು: ಕಳೆದ ಬಾರಿ ಜೆಡಿಎಸ್ (JDS) ವಿಚಾರದಲ್ಲಿ ಸಿದ್ದರಾಮಯ್ಯ (Siddaramaiah) ಮಾಡಿದ ತಪ್ಪನ್ನೇ ಈ ಬಾರಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ (DK Shivakumar) ಇಬ್ಬರೂ ಸೇರಿ ಮಾಡುತ್ತಾರಾ ಎನ್ನುವಂತಹ ಚರ್ಚೆ ಸ್ವತಃ ಕಾಂಗ್ರೆಸ್‌ನಲ್ಲೇ (Congress) ಶುರುವಾಗಿದೆ ಎನ್ನಲಾಗಿದೆ.

    ಕರೆದು ಕರೆದು ಕೆಣಕುತ್ತಿರುವ ಕುಮಾರಸ್ವಾಮಿ (HD Kumaraswamy) ಮಾತಿಗೆ ಇತ್ತೀಚೆಗೆ ಪದೇ ಪದೇ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ ಸಿದ್ದರಾಮಯ್ಯ. ಹೆಚ್‌ಡಿಕೆ, ಸಿದ್ದು ಫೈಟ್ ನಡುವೆ ದೇವೇಗೌಡರ ಬಗ್ಗೆಯೂ ಮಾತನಾಡಿ ಉರಿಯುವ ಬೆಂಕಿಗೆ ಡಿಕೆಶಿ ತುಪ್ಪ ಸುರಿದರು ಎನ್ನಲಾಗುತ್ತಿದೆ.

    ಸಿದ್ದರಾಮಯ್ಯ, ಡಿಕೆಶಿ ಆಡಿದ ಮಾತೇ ಈಗ ಕುಮಾರಸ್ವಾಮಿ ಪಾಲಿಗೆ ಅಸ್ತ್ರವಾಗಿದೆ. ಕಳೆದ ಬಾರಿಯ ತಪ್ಪನ್ನೇ ಈ ಬಾರಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರೂ ಸೇರಿ ಮಾಡುವ ಆತಂಕ ಕೈ ಪಾಳಯದ್ದು ಎನ್ನಲಾಗಿದೆ. ಕಳೆದ ಬಾರಿ ಮತ್ತೊಮ್ಮೆ ಸಿಎಂ ಆಗುವ ಜೋಶ್‌ನಲ್ಲಿದ್ದ ಸಿದ್ದರಾಮಯ್ಯ ಅವರು ದೇವೇಗೌಡರ ವಿರುದ್ಧ ಮಾತನಾಡಿ ಕೈ ಸುಟ್ಟುಕೊಂಡಿದ್ದರು. ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರ ಆಕ್ರೋಶ ಎದುರಿಸುವಂತಾಗಿ ಕಾಂಗ್ರೆಸ್‌ಗೆ ಹಿನ್ನಡೆ ಆಗುವಂತಾಗಿತ್ತು. ಆ ನಂತರ ಎಚ್ಚೆತ್ತ ಸಿದ್ದರಾಮಯ್ಯ ಕುಮಾರಸ್ವಾಮಿ ಎಷ್ಟೇ ಬಾರಿ ಕೆಣಕಿದರೂ ಹಾರಿಕೆಯ ಉತ್ತರವನ್ನೇ ಕೊಟ್ಟು ಅಂತರ ಕಾಯ್ದುಕೊಂಡಿದ್ದರು. ಆದರೆ ಇತ್ತೀಚೆಗೆ ಪುನಃ ಜೆಡಿಎಸ್ ವಿರುದ್ಧ ಅಗ್ರೆಸ್ಸಿವ್ ಅಟ್ಯಾಕ್ ಆರಂಭಿಸಿದಂತೆ ಕಾಣುತ್ತಿದೆ. ಇದನ್ನೂ ಓದಿ: ರಾಜ್ಯದಲ್ಲಿ 150 ಸ್ಥಾನ ಗೆದ್ದು BJP ಅಧಿಕಾರಕ್ಕೆ ಬರೋದು ಖಚಿತ – ಅರುಣ್ ಸಿಂಗ್ ವಿಶ್ವಾಸ

    ಸಮ್ಮಿಶ್ರ ಸರ್ಕಾರದ ಅವಧಿಯಿಂದ ಕುಮಾರಸ್ವಾಮಿ ವಿಚಾರದಲ್ಲಿ ಸೇಫ್ ಗೇಮ್ ಆಡುತ್ತಿದ್ದ ಡಿಕೆಶಿ ಏಕಾಏಕಿ ದೇವೇಗೌಡರ ವಿರುದ್ಧ ಮಾತನಾಡಿ ಕೆಣಕಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರೂ ದೇವೇಗೌಡರು ಹಾಗೂ ಜೆಡಿಎಸ್ ಬಗ್ಗೆ ಅಗ್ರೆಸ್ಸಿವ್ ಆದಷ್ಟು ಕಳೆದ ಬಾರಿಯಂತೆ ಬೂಮ್ ರಾಂಗ್ ಆಗುವ ಸಾಧ್ಯತೆ ಇದೆ. ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ಕುಮಾರಸ್ವಾಮಿ ಈಗ ಕೈ ಪಾಳಯದ ವಿರುದ್ಧ ತಿರುಗಿ ಬೀಳುವ ಸಾಧ್ಯತೆಯೇ ಹೆಚ್ಚಿದೆ. ಅದರ ಲಾಭ ಜೆಡಿಎಸ್‌ಗೆ ಸಿಕ್ಕರೆ ಡಿಕೆಶಿ ಹಾಗೂ ಸಿದ್ದರಾಮಯ್ಯ ಇಬ್ಬರೂ ಸೇರಿ ಜೆಡಿಎಸ್‌ಗೆ ಲಾಭ ತಂದುಕೊಟ್ಟಂತೆ ಆಗುವುದು ಗ್ಯಾರಂಟಿ. ಹೀಗಾಗಿ ಜೆಡಿಎಸ್ ವಿಚಾರದಲ್ಲಿ ಇಬ್ಬರೂ ಎಚ್ಚರಿಕೆಯ ಮಾತನಾಡಬೇಕು ಎಂಬ ಮಾತು ಕೈ ಪಾಳಯದಿಂದಲೇ ಕೇಳಿ ಬರುತ್ತಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಇರೋದು ಬಿಜೆಪಿ ‌ಬಣ ಮಾತ್ರ: ಅರುಣ್ ಸಿಂಗ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಒಕ್ಕಲಿಗರ ಭದ್ರಕೋಟೆಯಲ್ಲಿ ಮತ್ತೆ ಡಿಕೆಶಿ ಸಿಎಂ ಜಪ- ಬಸವನ ಕಿವಿಯಲ್ಲಿ ತಮ್ಮ ಕೋರಿಕೆ ಹೇಳಿದ್ರಾ ಶಿವಕುಮಾರ್?

    ಒಕ್ಕಲಿಗರ ಭದ್ರಕೋಟೆಯಲ್ಲಿ ಮತ್ತೆ ಡಿಕೆಶಿ ಸಿಎಂ ಜಪ- ಬಸವನ ಕಿವಿಯಲ್ಲಿ ತಮ್ಮ ಕೋರಿಕೆ ಹೇಳಿದ್ರಾ ಶಿವಕುಮಾರ್?

    ಮಂಡ್ಯ: ಸಕ್ಕರೆ ನಾಡು ಮಂಡ್ಯ (Mandya) ಜಿಲ್ಲೆಯ ಒಕ್ಕಲಿಗರ ಮತದಾರರನ್ನು ಸೆಳೆಯಲೋ ಅಥವಾ ಹೈಕಮಾಂಡ್‍ಗೆ ನಾನು ಸಿಎಂ ಅಭ್ಯರ್ಥಿ ಎಂದು ಪದೇ ಪದೇ ಹೇಳುವ ಉದ್ದೇಶದಿಂದಲೋ ಏನೋ ಮಂಡ್ಯದ ಜನರನ್ನು ನನ್ನ ಕೈ ಬಲ ಪಡಿಸಿ ಎಂದು ಕನಕಪುರದ ಬಂಡೆ ಶಪ ಮಾಡ್ತಾ ಇದ್ದಾರೆ. ಹಾಗಿದ್ರೆ ರಾಜ್ಯ ಕಾಂಗ್ರೆಸ್‍ನ ಟ್ರಬಲ್ ಶೂಟರ್ ಒಕ್ಕಲಿಗರ ಮೇಲೆ ಸಿಎಂ ಅಸ್ತ್ರ ಪ್ರಯೋಗ ಮಾಡ್ತಾ ಇರೋದಾದ್ರು ಯಾಕೆ ಎಂಬುದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.

    ಸಕ್ಕರೆ ನಾಡು ಮಂಡ್ಯದ ರಾಜಕೀಯ ಅಂದ್ರೆ ಕಂಪ್ಲೀಟ್ ಡಿಫರೆಂಟ್. ಮಂಡ್ಯ ಜಿಲ್ಲೆಗೆ ಯಾವ ಪಕ್ಷದ ನಾಯಕರು ಬಂದ್ರು ಸಹ ಮಂಡ್ಯ ಜಿಲ್ಲೆಯಲ್ಲಿ ಯಾವ ಪಕ್ಷಕ್ಕೆ ಅಧಿಕಾರ ಕೊಡ್ತೀರಾ ಆ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೆ ಅಂತಾ ಭಾಷಣ ಮಾಡ್ತಾರೆ. ಅದೇ ನಿಟ್ಟಿನಲ್ಲಿ ಕಳೆದ ಬಾರಿಯ ವಿಧಾನಸಭಾ ಚುನಾವಣೆ (Vidhanasabha Elections) ಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (H.D Kumaraswamy) ಮಂಡ್ಯ ಜಿಲ್ಲೆಯ 7 ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದ್ರೆ ನಿಮ್ಮ ಮನೆಯ ಮಗ ಸಿಎಂ ಆಗ್ತಾನೆ ಎಂದು ಅಬ್ಬರದ ಪ್ರಚಾರ ನಡೆಸಿದ್ರು. ಅದರಂತೆ ಮಂಡ್ಯ ಜಿಲ್ಲೆಯ ಒಕ್ಕಲಿಗರು ಜೆಡಿಎಸ್ (JDS) ಅಭ್ಯರ್ಥಿಗಳನ್ನು ಹಾಕಿ ಏಳು ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಕುಮಾರಸ್ವಾಮಿ ಅವರ ಕೈ ಬಲ ಪಡಿಸಿದ್ರು.

    ಕಳೆದ ಬಾರಿಯ ಚುನಾವಣೆಯಲ್ಲಿ ಕುಮಾರಸ್ವಾಮಿ ಮಂಡ್ಯದಲ್ಲಿ ಮಾಡಿದ ಸ್ಟಾಟರ್ಜಿಯನ್ನು ಈ ಬಾರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಮಾಡಲು ಹೊರಟಿದ್ದಾರೆ. ಮಂಡ್ಯ ಜಿಲ್ಲೆಯ ಒಕ್ಕಲಿಗರನ್ನು ಸೆಳೆಯಲು ಸಿಎಂ ಟ್ರಂಪ್ ಕಾರ್ಡ್ ಪ್ಲೇ ಮಾಡಲು ಡಿಕೆಶಿ ಮುಂದಾಗಿದ್ದಾರೆ. ಈ ಭಾಗವಾಗಿ ಮಂಡ್ಯಕ್ಕೆ ಆಗಮಿಸಿದ್ದ ಡಿಕೆಗೆ ಅಭಿಮಾನಿಗಳು ಗೂಳಿ ಗಿಫ್ಟ್ ಕೊಟ್ರು. ಈ ವೇಳೆ ಬಸವಣ್ಣನ ಕಿವಿಯಲ್ಲಿ ತಮ್ಮ ಕೋರಿಕೆ ಹೇಳಿಕೊಂಡಿದ್ದಾರೆ. ಬಸವಣ್ಣನ ಕಿವಿಯಲ್ಲಿ ಮನದಾಳವನ್ನು ಹೇಳಿಕೊಂಡಿರುವುದಾಗಿ ಫೇಸ್‍ಬುಕ್ (Facebook) ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ಬಸಣ್ಣನ ಕಿವಿಗೆ ಕೋರಿಕೆ ಹೇಳಿದ್ರೆ, ಈಡೇರಿಸುವ ಸಂಪ್ರದಾಯವಿದೆ. ಅದರಂತೆ ಬಸಣ್ಣನ ಕಿವಿಯಲ್ಲಿ ಕೋರಿಕೆ ಹೇಳಿದ್ದಾರೆ. ಆದರೆ ಆ 2 ಸೆಕೆಂಡ್‍ನಲ್ಲಿ ನಾನು ಸಿಎಂ ಆಗಬೇಕು ಅಂತ ಹೇಳಿದ್ರಾ ಅನ್ನೋ ಪ್ರಶ್ನೆ ಮೂಡಿದೆ.

    ಮೊನ್ನೆ ನಡೆದ ಕಾಂಗ್ರೆಸ್‍ನ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಸಹ ಡಿಕೆಶಿ ಭಾಷಣದ ವೇಳೆ ಕಳೆದ ಬಾರಿ ಮಂಡ್ಯದ ಜನ ಕುಮಾರಣ್ಣನ ಮೇಲೆ ನಂಬಿಕೆ ಇಟ್ಟು ಗೆಲ್ಲಿಸಿದ್ರಿ. ನಾವು ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು. ಆದರೆ ಅವರಿಗೆ ಅಧಿಕಾರ ಮಾಡಲು ಆಗಲಿಲ್ಲ. ಈ ಬಾರಿ ನಿಮ್ಮ ಮನೆಯ ಮಗ ನನ್ನನ್ನು ಬೆಂಬಲಿಸಿ, ಮಂಡ್ಯದಲ್ಲಿ 7 ಕ್ಷೇತ್ರಗಳನ್ನು ಗೆಲ್ಲಿಸಿ ನಿಮ್ಮ ಮಗನ ಕೈ ಬಲ ಪಡಿಸಿ ಎಂದು ಡಿಕೆ ಹೇಳಿದ್ದಾರೆ. ಈ ಮೂಲಕ ಡಿ.ಕೆ.ಶಿವಕುಮಾರ್ ಮಂಡ್ಯದ ಒಕ್ಕಲಿಗರಿಗೆ ಸಿಎಂ ಟ್ರಂಪ್ ಕಾರ್ಡ್ ಪ್ಲೇ ಮಾಡಿದ್ದಾರೆ. ಇದನ್ನೂ ಓದಿ: ಕುಂದಾನಗರಿಯಲ್ಲಿ ಬಿಜೆಪಿ ಚಾಣಕ್ಯ- ಪಕ್ಷದಲ್ಲಿನ ಒಳಜಗಳ ಶಮನ ಮಾಡ್ತಾರಾ ಅಮಿತ್ ಶಾ?

    ಜೆಡಿಎಸ್‍ಗೆ ವೋಟು ಹಾಕಿದರೆ ಬಿಜೆಪಿಗೆ ಹಾಕಿದಂತೆ ಅಂತ ಡಿಕೆಶಿ ಹೇಳಿಕೆಗೆ ಹೆಚ್‍ಡಿಕೆ ಕಿಡಿಕಾರಿದ್ರು. ಮಂಡ್ಯದಲ್ಲಿ ಇನ್ಯಾರಿಗೆ ವೋಟು ಹಾಕಬೇಕಂತೆ ಅಂತ ವಾಗ್ದಾಳಿ ನಡೆಸಿದ್ರು. ಅತ್ತ ಮಂಡ್ಯದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಜೆಡಿಎಸ್ ಹಾಗೂ ಬಿಜೆಪಿಯನ್ನ ನಂಬಬೇಡಿ. ಸಿದ್ದರಾಮಯ್ಯ ನಮ್ಮ ಸರ್ಕಾರ ಬೀಳಿಸಿದ್ರು ಅಂತ ಹೆಚ್‍ಡಿಕೆ ಹೇಳ್ತಾರೆ. ಹಾಗಾದ್ರೆ ನಿಮ್ಮ ಶಾಸಕರು ಯಾಕೆ ಹೋದ್ರು ಅಂತ ಪ್ರಶ್ನೆ ಮಾಡಿದ್ರು.

    ಒಟ್ಟಾರೆ ಡಿಕೆಶಿ ಮಂಡ್ಯದಲ್ಲಿ ಪ್ಲೇ ಮಾಡಿರುವ ಸಿಎಂ ಕಾರ್ಡ್ ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಹಾಗೂ ಮುಂದೆ ಸಿಎಂ ಗಾಧಿಗಾಗಿ ಸಿದ್ದು ಡಿಕೆ ನಡುವಿನ ಬಿರುಕಿಗೆ ಕಾರಣವಾಗುತ್ತಾ ಎನ್ನುವುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: ಕಾಂಪೌಂಡ್ ಕಟ್ಟೋಕೆ ಹಣ ಕೊಡೋದು ಬಿಡಿ; ಮಕ್ಕಳ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಿ – ಬೊಮ್ಮಾಯಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರಧಾನಿ ಮೋದಿಗೆ 2023ರ ನವಶಕ್ತಿ ಬಲ – ಕರ್ನಾಟಕ ಮೊದಲ ಸವಾಲು?

    ಪ್ರಧಾನಿ ಮೋದಿಗೆ 2023ರ ನವಶಕ್ತಿ ಬಲ – ಕರ್ನಾಟಕ ಮೊದಲ ಸವಾಲು?

    ಬೆಂಗಳೂರು: ಕರ್ನಾಟಕದಲ್ಲಿ (Karnataka) ಈಗಿರುವ ಅಧಿಕಾರ ಉಳಿಸಿಕೊಂಡರೆ 2024ಕ್ಕೆ ಸೇಫ್ ಎಂಬುದು ಬಿಜೆಪಿ ಹೈಕಮಾಂಡ್ (BJP High Command) ಕಾರ್ಯತಂತ್ರ. ಮೊದಲ ಸವಾಲು ಗೆಲ್ಲಲು ಅಮಿತ್ ಶಾ, ಮೋದಿ (Narendra Modi) ಮಾಸ್ಟರ್ ಪ್ಲ್ಯಾನ್ ಮಾಡಿದ್ದು, ಕರ್ನಾಟಕದ ಚುನಾವಣಾ ಮಂತ್ರ ಕುತೂಹಲ ಮೂಡಿಸಿದೆ.

    ಲೋಕಸಭೆ ಚುನಾವಣೆಯ ಹಾದಿ ಸುಗಮ ಮಾಡಿಕೊಳ್ಳಲು ಕರ್ನಾಟಕ ವಿಧಾನಸಭೆ (Assembly Elections) ಮೇಲೆ ಬಿಜೆಪಿ ಹೈಕಮಾಂಡ್ ಕಣ್ಣಿಟ್ಟಿದೆ. ಕರ್ನಾಟಕದಲ್ಲಿ ಲೋಕಲ್ ಮಾಸ್ ಲೀಡರ್‌ಶಿಪ್ ಇಲ್ಲದಿರುವ ಕಾರಣ ಹೆಚ್ಚು ಸೆಂಟ್ರಲ್ ಫೋರ್ಸ್ ಅಖಾಡಕ್ಕಿಳಿಸುವ ಪ್ಲ್ಯಾನ್ ಇದೆ ಎನ್ನಲಾಗಿದೆ. ಫೆಬ್ರವರಿ ಮೂರನೇ ವಾರದ ಬಳಿಕ ರಾಷ್ಟ್ರೀಯ ನಾಯಕರ ದಂಡು ರಾಜ್ಯಕ್ಕೆ ಶಿಫ್ಟ್ ಆಗುವ ಸಾಧ್ಯತೆ ಇದೆ. ಕರ್ನಾಟಕದ ಗೆಲುವು 4 ರಾಜ್ಯಗಳ ಗೆಲುವಿಗೆ ಮಾಸ್ಟರ್ ಸ್ಟ್ರೋಕ್ ಎಂದು ಹೈಕಮಾಂಡ್ ಸಂದೇಶ ರವಾನಿಸಿದೆ. ಇದನ್ನೂ ಓದಿ: ಜನಪ್ರಿಯ ಬಜೆಟ್ ಬ್ಲೂಪ್ರಿಂಟ್‌ಗೆ ಸಿಎಂ ಸೂಚನೆ- ಎಲೆಕ್ಷನ್ ಬಜೆಟ್‌ನಲ್ಲಿ ಬಂಪರ್ ಗಿಫ್ಟ್ ಸುರಿಮಳೆ

    ಮಂಗಳವಾರ ನಡೆದ ಕಾರ್ಯಕಾರಿಣಿಯಲ್ಲೂ ಬಿಜೆಪಿ ಹೈಕಮಾಂಡ್‌ಗೆ ಕರ್ನಾಟಕದ ಚುನಾವಣೆ ಮೇಲೆಯೇ ಹೆಚ್ಚು ಫೋಕಸ್ ಇದೆ ಎನ್ನಲಾಗಿದೆ. ಫೆಬ್ರವರಿ ಕೊನೆಯ ವಾರದಲ್ಲಿ ಕರ್ನಾಟಕಕ್ಕೆ ಬಿಜೆಪಿ ಹೈಕಮಾಂಡ್ ನಾಯಕರ ಅಸಲಿ ತಂತ್ರ ಶುರುವಾಗಲಿದೆ ಎನ್ನಲಾಗಿದೆ. ರಾಜ್ಯದ 6 ವಿಭಾಗಗಳಲ್ಲಿ ಕೇಂದ್ರ ನಾಯಕರನ್ನು ಅಖಾಡಕ್ಕಿಳಿಸಲು ಬಿಜೆಪಿ ಹೈಕಮಾಂಡ್ ಬಿಗ್ ಪ್ಲ್ಯಾನ್ ಮಾಡಿದೆ. ಒಂದೆಡೆ ಮೋದಿ, ಶಾ, ನಡ್ಡಾ, ಯೋಗಿ ಜೋಡಿ ಕಾರ್ಯಾಚರಣೆ, ಇನ್ನೊಂದೆಡೆ ಸಂಘಟನಾ ಚತುರ ನಾಯಕರ ಕಹಳೆ ಜೋರಾಗಲಿದೆ. ಇವರಿಬ್ಬರ ತಂತ್ರ ಮಂತ್ರಗಳನ್ನು ಜನರತ್ತ ತಲುಪಿಸಲು ಲೋಕಲ್ ಲೀರ‍್ಸ್ ಟೀಂಗಳ ರಚನೆಗೂ ಪ್ಲ್ಯಾನ್ ನಡೆದಿದೆ. ಕರ್ನಾಟಕ ಗೆಲ್ಲುವ ಪಣ ಬಿಜೆಪಿ ಹೈಕಮಾಂಡ್‌ನ 2023ರ ಮೆಗಾ ಟಾರ್ಗೆಟ್ ಆಗಿದ್ದು, ಸಕ್ಸಸ್ ರೇಟಿಂಗ್ ಎಷ್ಟು ಸಿಗುತ್ತದೆ ಕಾದುನೋಡಬೇಕಿದೆ. ಇದನ್ನೂ ಓದಿ: ಭಾರತ್ ಜೋಡೋ ಎಂಟ್ರಿಗೂ ಮುನ್ನ ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್‍ಗೆ ಮುಜುಗರ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹೊಸ ಪಕ್ಷ ಕಟ್ಟಿದೋರು ಉಳಿದಿಲ್ಲ, ಎಷ್ಟು ಮಂದಿ ಜನಾರ್ದನ ಬಂದ್ರೂ ಏನೂ ಆಗಲ್ಲ- ಮುನಿರತ್ನ

    ಹೊಸ ಪಕ್ಷ ಕಟ್ಟಿದೋರು ಉಳಿದಿಲ್ಲ, ಎಷ್ಟು ಮಂದಿ ಜನಾರ್ದನ ಬಂದ್ರೂ ಏನೂ ಆಗಲ್ಲ- ಮುನಿರತ್ನ

    ಕೋಲಾರ: ಹೊಸ ಪಕ್ಷ ಕಟ್ಟಿದವರು ಈಗ ಯಾರೂ ಉಳಿದಿಲ್ಲ. ಹಾಗೆಯೇ ಎಷ್ಟು ಮಂದಿ ಜನಾರ್ದನ (Janardhana Reddy) ಬಂದರೂ ಬಿಜೆಪಿಗೆ (BJP) ಯಾವುದೇ ತೊಂದರೆ ಆಗಲ್ಲ ಎಂದು ಸಚಿವ ಮುನಿರತ್ನ (Muniratna) ತಿರುಗೇಟು ನೀಡಿದ್ದಾರೆ.

    ಕೋಲಾರದಲ್ಲಿ (Kolar) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಗಾರಪ್ಪ, ದೇವರಾಜ ಅರಸು ಸೇರಿದಂತೆ ಹಲವು ನಾಯಕರು ಪಕ್ಷ ಕಟ್ಟಿದ್ರು, ಅವು ಯಾವುದೂ ಈಗ ಕಣ್ಣಿಗೆ ಕಾಣಿಸ್ತಿಲ್ಲ. ಜನಾರ್ದನ ರೆಡ್ಡಿ ಅವರು ಗಂಗಾವತಿಗೆ ಮಾತ್ರ ಅಭ್ಯರ್ಥಿ ಆಗುತ್ತೇನೆ ಅಂತಾ ಹೇಳಿಕೊಂಡು ಬಂದಿದ್ದರು. ಈಗ ಪಕ್ಷ ಕಟ್ಟುತ್ತೇನೆ ಅಂತಾರೆ. ಎಷ್ಟು ಮಂದಿ ಜನಾರ್ದನ ಬಂದ್ರೂ ಬಿಜೆಪಿಗೆ ಸಣ್ಣ ತೊಂದರೆಯೂ ಆಗೊಲ್ಲ. ಇನ್ನೂ ಇಪ್ಪತ್ತು ಮಂದಿ ಪಕ್ಷ ಕಟ್ಟಿದರೂ ನಮ್ಮ ಪಕ್ಷಕ್ಕೆ ಏನೂ ಆಗೋಲ್ಲ ಎಂದು ಬೀಗಿದ್ದಾರೆ.

    ಜನಾರ್ದನ ರೆಡ್ಡಿ ವಿಚಾರದಲ್ಲಿ ಕೇಂದ್ರದ ನಾಯಕರ ತೀರ್ಮಾನ ಇರುತ್ತದೆ. ರೆಡ್ಡಿಯವರು ಆತುರದ ತೀರ್ಮಾನ ತೆಗೆದುಕೊಂಡಿದ್ದಾರೆ. ರಾಜಕಾರಣಿಗಳಿಗೆ ತಾಳ್ಮೆ ಬಹಳ ಮುಖ್ಯ, ಕೇಂದ್ರದ ನಾಯಕರೊಂದಿಗೆ ಚರ್ಚಿಸಿ ತೀರ್ಮಾನ ಮಾಡಬೇಕಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾವು ಕೋಲಾರವನ್ನ ಗೆದ್ದೇ ಗೆಲ್ಲುತ್ತೇವೆ, ಅದರಲ್ಲಿ ಯಾವುದೇ ಅನುಮಾನವಿಲ್ಲ: ಮುನಿರತ್ನ

    ಕೆಎಂಎಫ್ ವಿಲೀನ ವಿಚಾರದಲ್ಲಿ ಕಾಂಗ್ರೆಸ್ (Congress) ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿ, ಕಾಂಗ್ರೆಸ್‌ನವರಿಗೆ ಮಾಡಲು ಕೆಲಸ ಇಲ್ಲ. ಅಮುಲ್ (Amul) ಜೊತೆ ಕೆಎಂಎಫ್ (KMF) ವಿಲೀನದ ಬಗ್ಗೆ ಈವರೆಗೆ ಯಾವುದೇ ಚರ್ಚೆ ಆಗಿಲ್ಲ. ಸಭೆ ನಡೆದಿಲ್ಲ. ಇದು ಕಾಂಗ್ರೆಸ್‌ನವರ ಪಿತೂರಿ ಎಂದಿದ್ದಾರೆ. ಇದನ್ನೂ ಓದಿ: ನಾಟಕದಲ್ಲಿ ಸಿದ್ದರಾಮಯ್ಯಗೆ ಅವಮಾನ- ರಂಗಾಯಣದ ವಿರುದ್ಧ ಅಭಿಮಾನಿಗಳ ಆಕ್ರೋಶ

    ನೋಟ್ ಬ್ಯಾನ್ (Note Ban) ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ವಿಚಾರದಲ್ಲಿ ನ್ಯಾಯಾಲಯದ ತೀರ್ಪು ಸರಿಯಾಗಿದೆ. ಜನಗಳೇನೂ ದಂಗೆ ಎದ್ದಿಲ್ಲ. ಅಂದು ಪ್ರಧಾನಿ ನರೇಂದ್ರ ಮೋದಿ (Narendra Modi) ತೆಗೆದುಕೊಂಡ ತೀರ್ಮಾನ ಸರಿ ಇದೆ. ಜನ ಅದಕ್ಕೆ ಹೊಂದಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇನ್ನೂ ಮುಂದಿನ ಸರ್ಕಾರ ನಮ್ಮ ಪಕ್ಷದ್ದೇ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕರ್ನಾಟಕ ಚುನಾವಣೆಗೆ ಹಿಂದುತ್ವ, ದೇಶಾಭಿಮಾನವೇ ಬಿಜೆಪಿ ತಂತ್ರ- ಸಚಿವರಿಗೆ ಹೈಕಮಾಂಡ್ ಟಾಸ್ಕ್ ಡೆಡ್ ಲೈನ್

    ಕರ್ನಾಟಕ ಚುನಾವಣೆಗೆ ಹಿಂದುತ್ವ, ದೇಶಾಭಿಮಾನವೇ ಬಿಜೆಪಿ ತಂತ್ರ- ಸಚಿವರಿಗೆ ಹೈಕಮಾಂಡ್ ಟಾಸ್ಕ್ ಡೆಡ್ ಲೈನ್

    ಬೆಂಗಳೂರು: ಗುಜರಾತ್ (Gujarat) ಹಾಗೂ ಹಿಮಾಚಲ ಪ್ರದೇಶದ (Himachal Pradesh) ಚುನಾವಣೆ ಮುಗಿದಿದ್ದು, ಇದೀಗ ಪ್ರತಿಷ್ಠೆಯ ಕಣವಾಗಿರುವ ಕರ್ನಾಟಕ ರಾಜಕಾರಣದತ್ತ ಬಿಜೆಪಿ (BJP) ಹದ್ದಿನ ಕಣ್ಣಿಟ್ಟಿದೆ.

    ಈ ಎರಡೂ ರಾಜ್ಯಗಳಲ್ಲಿ ಬಿಜೆಪಿ (BJP) ಗೆಲುವು ಸಾಧಿಸಿದ್ರೆ ಅದೇ ಮಾದರಿಯನ್ನ ಕರ್ನಾಟಕದಲ್ಲೂ ರೂಪಿಸಲು ಚಿಂತನೆ ನಡೆಸಿದೆ. ಒಂದು ಫಲಿತಾಂಶ ವ್ಯತಿರಿಕ್ತವಾದರೆ ಕರ್ನಾಟಕಕ್ಕೆ ಪ್ರತ್ಯೇಕ ಮಾಡೆಲ್‌ಗೆ ಹೈಕಮಾಂಡ್ ಪ್ಲ್ಯಾನ್‌ ಮಾಡಿದೆ. ಇದನ್ನೂ ಓದಿ: ಗುಜರಾತ್ ಆಯ್ತು, ಇಂದಿನಿಂದಲೇ ಕರ್ನಾಟಕ ಚುನಾವಣೆಗೆ ತಯಾರಿ

    ಗುಜರಾತ್- ಹಿಮಾಚಲ ಪ್ರದೇಶ ಮಾಡೆಲ್ ಏನಿದೆ?: ಬಿಜೆಪಿ ಕರ್ನಾಟಕ ವಿಧಾನಸಭಾ ಚುನಾವಣೆ ಶತಾಯಗತಾಯ ಗೆಲ್ಲಲೇಬೇಕು ಎಂದು ರಣತಂತ್ರ ಎಣೆದಿದ್ದು, ಎರಡು ಮಾಸ್ಟರ್ ಪ್ಲ್ಯಾನ್‌ ಪ್ರಯೋಗಕ್ಕೆ ಸಜ್ಜಾಗಿದೆ. ಎರಡು ರಾಜ್ಯದಲ್ಲಿ ಬಿಜೆಪಿ ಗೆದ್ರೆ ಗುಜರಾತ್, ಹಿಮಾಚಲ ಮಾದರಿಯಲ್ಲಿ ಚುನಾವಣೆ ತಂತ್ರ ಹೆಣೆಯೋದು. ಮೋದಿ (Narendra Modi), ಅಮಿತ್ ಶಾ (Amit Shah), ಯೋಗಿ ಆದಿತ್ಯನಾಥರಿಂದ ಅತಿ ಹೆಚ್ಚು ರಾಲಿಗಳನ್ನ ಕರ್ನಾಟಕದಲ್ಲೂ ಮಾಡೋದು. ಇದನ್ನೂ ಓದಿ: ಉಗ್ರ ಶಾರೀಕ್‍ಗೆ ಹರಿದು ಬರುತ್ತಿತ್ತು ಡಾಲರ್ ಮನಿ – ಕರೆನ್ಸಿ ವರ್ಗಾಯಿಸಿದ 40ಕ್ಕೂ ಅಧಿಕ ಜನರ ವಿಚಾರಣೆ

    ಹಿರಿಯ ತಲೆಗಳಿಗೆ ಕೊಕ್ ಕೊಟ್ಟು ಯುವಕರಿಗೆ ಚುನಾವಣೆಯಲ್ಲಿ (Election) ಆದ್ಯತೆ ಕೊಡೋದು. ಕೆಲಸ ಮಾಡದೇ ಜನ ವಿರೋಧಿ ಹೆಸರು ಇರೋ ಹಾಲಿ ಎಂಎಲ್‌ಎ ಗಳಿಗೆ ಟಿಕೆಟ್ ಕಟ್ ಮಾಡಿ ಹೊಸಬರಿಗೆ ಅವಕಾಶ ಕೊಡೋದು. ಕುಟುಂಬ ರಾಜಕೀಯ ಹೊರತಾಗಿ ಗೆಲ್ಲೋ ಕುದುರೆಗಳಿಗೆ ಮಣೆ ಹಾಕೋದು. ಗುಜರಾತ್ ನಲ್ಲಿ ಮಾಡಿದಂತೆ ಹಿರಿಯ ನಾಯಕರನ್ನ ಸ್ಪರ್ಧಾ ಕಣದಿಂದ ದೂರ ಇಟ್ಟು ಪಕ್ಷದ ಚಟುವಟಿಕೆಗಳಲ್ಲಿ, ಚುನಾವಣೆ ಪ್ರಚಾರದಲ್ಲಿ ಮಾತ್ರ ಬಳಸಿಕೊಳ್ಳೋದು. ಟಿಕೆಟ್ ಹಂಚಿಕೆಯಲ್ಲಿ ಗುಜರಾತ್, ಹಿಮಾಚಲ ಪ್ರದೇಶದ ಮಾದರಿಯನ್ನೆ ಸಂಪೂರ್ಣವಾಗಿ ಅಳವಡಿಸಿಕೊಳ್ಳೋದು ಈ ರೀತಿಯಾಗಿ ಪ್ಲ್ಯಾನ್‌ ಮಾಡಿದೆ. ಇದನ್ನೂ ಓದಿ: ಮುಲ್ಲಾಗಳಿಗೆ ಬಿಜೆಪಿಯಿಂದ ಅವಮಾನ- ಸಿದ್ದರಾಮಯ್ಯ ಬೆಂಬಲಿಸಿದ ಮುಸ್ಲಿಂ ಸಂಘಟನೆ

    ವ್ಯತಿರಿಕ್ತ ಫಲಿತಾಂಶ ಬಂದ್ರೇ ಏನ್ ಮಾಡೋದು?: ಒಂದು ವೇಳೆ ಎರಡೂ ರಾಜ್ಯಗಳಲ್ಲಿ ವ್ಯತಿರಿಕ್ತ ಫಲಿತಾಂಶ ಬಂದರೆ, ಕರ್ನಾಟಕಕ್ಕೆ ಹೊಸ ಮಾಡೆಲ್ ಪ್ರಚಾರದ ಕಾರ್ಯತಂತ್ರ ರೂಪಿಸಲು ಪ್ಲ್ಯಾನ್‌ ಮಾಡಿದೆ. ಜಾತಿ ಆಧಾರದ ಜೊತೆ ಪ್ರದೇಶವಾರು ಅಂಶಗಳನ್ನ ಪರಿಗಣಿಸಿ ಟಿಕೆಟ್ ನೀಡೋದು. ಗುಜರಾತ್ ಮಾದರಿಯಂತೆ ಹಿರಿಯರಿಗೆ ಕೊಕ್ ಕೊಡೋ ವ್ಯವಸ್ಥೆ ಬಿಟ್ಟು ಗೆಲ್ಲೋ ಮಾನದಂಡ ಮಾತ್ರ ನೋಡೋದು. ಬೂತ್ ಲೆವಲ್ ನಿಂದಲೇ ಚುನಾವಣೆಗೆ ಕಾರ್ಯತಂತ್ರ ರೂಪಿಸೋದು. ಹಿಂದುತ್ವ, ದೇಶಾಭಿಮಾನದ ಮೇಲೆ ಚುನಾವಣೆಗೆ ತಂತ್ರ ಹೆಣೆಯೋದು ಹಾಗೂ ಕುಟುಂಬ ರಾಜಕೀಯದ ಅಸ್ತ್ರವನ್ನ ಅಗತ್ಯ ಕಡೆ ಉಳಿಸಿಕೊಂಡು ಗೆಲ್ಲೋಕೆ ತಂತ್ರ ರೂಪಿಸೋದು ಎಂದು ಪ್ಲ್ಯಾನ್‌ ಮಾಡಿಕೊಂಡಿದೆ.

    ಸಚಿವರಿಗೆ ಹೈಕಮಾಂಡ್ ಟಾಸ್ಕ್ ಡೆಡ್ ಲೈನ್: ಚುನಾವಣಾ ಭರ್ಜರಿ ತಯಾರಿ ಶುರು ಮಾಡಿರುವ ಬಿಜೆಪಿ ಹೈಕಮಾಂಡ್ ರಾಜ್ಯದ ಸಚಿವರಿಗೆ ಹಲವು ಟಾಸ್ಕ್ಗಳನ್ನ ನೀಡಿದೆ. ಡಿಸೆಂಬರ್ ಅಂತ್ಯದ ಒಳಗೆ ಯಾವ ಕ್ಷೇತ್ರದ ಜವಾಬ್ದಾರಿ ತೆಗೆದುಕೊಳ್ತೀರಾ ಅನ್ನೋದರ ವಿವರವನ್ನ ಸಚಿವರು ಕೊಡಬೇಕು. ಸಚಿವರು ತೆಗೆದುಕೊಳ್ಳೋ ಕ್ಷೇತ್ರದಲ್ಲಿ ಗೆಲುವಿಗೆ ಈವರೆಗೂ ಮಾಡಿರೋ ತಯಾರಿ ಏನು ಅಂತ ಮಾಹಿತಿ ಕೊಡಬೇಕು. ಸಚಿವರು ತೆಗೆದುಕೊಳ್ಳೋ ಕ್ಷೇತ್ರ ಗೆಲುವಿಗೆ ಹೇಗೆ ಕಾರ್ಯತಂತ್ರ ರೂಪಿಸಲಾಗಿದೆ ಅನ್ನೋ ಮಾಹಿತಿ ಕೊಡಬೇಕು. ಸಚಿವರು ತೆಗೆದುಕೊಳ್ಳೋ ಕ್ಷೇತ್ರದ ಸಂಘಟನೆ, ಜಾತಿ ಸಮೀಕರಣ, ಜಾತಿ ಲೆಕ್ಕಾಚಾರದ ವಿವರ ನೀಡಬೇಕು. ಕ್ಷೇತ್ರದಲ್ಲಿನ ಸಮಸ್ಯೆ ಏನು? ಅದರ ಪರಿಹಾರಕ್ಕೆ ಶೀಘ್ರವಾಗಿ ಇರೋ ಮಾರ್ಗಗಳೇನು ಅನ್ನೋದ್ರ ಡಿಟೇಲ್ ಕೊಡಬೇಕು ಅನ್ನೋ ಟಾಸ್ಕ್ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ಸೀಟು ಹಂಚಿಕೆ ಮತ್ತಷ್ಟು ಕಗ್ಗಂಟು: ಎಚ್‍ಡಿಡಿ, ರಾಹುಲ್ ಚರ್ಚೆಯಲ್ಲಿ ಏನಾಯ್ತು?

    ಸೀಟು ಹಂಚಿಕೆ ಮತ್ತಷ್ಟು ಕಗ್ಗಂಟು: ಎಚ್‍ಡಿಡಿ, ರಾಹುಲ್ ಚರ್ಚೆಯಲ್ಲಿ ಏನಾಯ್ತು?

    ನವದೆಹಲಿ/ಬೆಂಗಳೂರು: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಇನ್ನಷ್ಟು ಕಗ್ಗಂಟಾಗಿದೆ. ಬುಧವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಒಂದೂವರೆ ತಾಸು ಮಾತುಕತೆ ನಡೆಸಿದರೂ ಫಲಪ್ರದವಾಗಿಲ್ಲ.

    ದೆಹಲಿಯ ಸಫ್ದರ್‍ಜಂಗ್ ರಸ್ತೆಯಲ್ಲಿನ ತಮ್ಮ ನಿವಾಸಕ್ಕೆ ಭೇಟಿ ಕೊಟ್ಟ ರಾಹುಲ್‍ಗಾಂಧಿಯನ್ನು ದೇವೇಗೌಡರು ಖುದ್ದು ಸ್ವಾಗತಿಸಿದರಾದರೂ, ಸೀಟು ಹಂಚಿಕೆ ಮಾತುಕತೆ ವೇಳೆ ಬಗ್ಗಲಿಲ್ಲ. ಕಾಂಗ್ರೆಸ್ 9 ಕ್ಷೇತ್ರಗಳನ್ನು ಬಿಟ್ಟು ಕೊಡಲು ಒಪ್ಪಿತು. ಆದ್ರೆ 10 ಕ್ಷೇತ್ರಗಳಿಗೆ ದೇವೇಗೌಡರು ಬಿಗಿಪಟ್ಟು ಹಿಡಿದಿದ್ದರಿಂದ ಮಾತುಕತೆ ವಿಫಲವಾಯ್ತು. ಮೈತ್ರಿ ಸರ್ಕಾರದಲ್ಲಿ ಮಂತ್ರಿ ಸ್ಥಾನ ಹಂಚಿಕೆಗೆ ಪಾಲನೆಯಾಗಿರೋ 3ನೇ 1 ಭಾಗದಂತೆ, ಸೀಟು ಕೂಡ ಹಂಚಿಕೆಯಾಗಲಿ ಎಂದು ದೇವೇಗೌಡರ ಬೇಡಿಕೆ ಇಟ್ಟಿದ್ದಾರೆ.

    ಎಚ್‍ಡಿಡಿ ಬೇಡಿಕೆ ಏನು?
    ಮೂರನೇ ಒಂದು ಭಾಗದಷ್ಟು ಸೀಟು ಹಂಚಿಕೆಯಾಗಬೇಕು. ಹೀಗಾಗಿ ಕನಿಷ್ಠ 10 ಲೋಕಸಭಾ ಕ್ಷೇತ್ರ ಬಿಟ್ಟು ಕೊಡಬೇಕು. ರಾಜ್ಯದಲ್ಲಿ ಮೈತ್ರಿಯಾಗಿ ನಾವು ದೇಶಕ್ಕೆ ಸಂದೇಶ ಕಳುಹಿಸಿದ್ದೇವೆ. ಹೀಗಾಗಿ ಚುನಾವಣೆಯಲ್ಲಿ ಬಿಜೆಪಿ ಸೋಲಿಸುವುದು ನಮಗೆ ಮುಖ್ಯವಾಗುತ್ತದೆ. ಈ ಕಾರಣಕ್ಕೆ ಹಾಲಿ ಸಂಸದ ಕ್ಷೇತ್ರಗಳನ್ನು ನಮಗೆ ಬಿಟ್ಟುಕೊಡಿ. ಮೈಸೂರು, ಮಂಡ್ಯ, ಹಾಸನ, ಶಿವಮೊಗ್ಗ, ಬೆಂಗಳೂರು ಉತ್ತರ, ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ವಿಜಯಪುರ, ಬೀದರ್ ಕ್ಷೇತ್ರವನ್ನು ನಮಗೆ ಬಿಟ್ಟಕೊಡಿ. ಚಿಕ್ಕಬಳ್ಳಾಪುರದಲ್ಲಿ ಒಕ್ಕಲಿಗರೇ ಅಭ್ಯರ್ಥಿ ಆಗಬೇಕು. ಆ ಕಾರಣಕ್ಕಾಗಿ ಆ ಕೇತ್ರವನ್ನೂ ನಮಗೆ  ಬಿಟ್ಟುಕೊಡಿ ಎಂದು ಎಚ್‍ಡಿಡಿ ಬೇಡಿಕೆ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಹೈಕಮಾಂಡಿಗೆ ಎಚ್ಚರಿಕೆ:
    ಕಾಂಗ್ರೆಸ್-ಜೆಡಿಎಸ್ ನಡುವೆ ಸೀಟು ಹಂಚಿಕೆಯ ಚೌಕಾಸಿ ನಡೆಯುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ಸಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಜೆಡಿಎಸ್‍ಗೆ ಬಿಟ್ಟು ಕೊಡದೆ ಕಾಂಗ್ರೆಸ್ ಪಕ್ಷವೇ ಉಳಿಸಿಕೊಳ್ಳಬೇಕೆಂದು ಶಾಸಕ ಡಾ. ಸುಧಾಕರ್ ಆಗ್ರಹಿಸಿದ್ದಾರೆ. ಒಂದು ವೇಳೆ, ಜೆಡಿಎಸ್‍ಗೆ ಏನಾದರೂ ಬಿಟ್ಟು ಕೊಟ್ಟರೆ ನಾವು ಪಕ್ಷದ ವಿರುದ್ಧ ಕೆಲಸ ಮಾಡಬೇಕಾಗುತ್ತದೆ ಅಂತ ಶಾಸಕ ಸುಧಾಕರ್ ಹೈಕಮಾಂಡಿಗೆ ಎಚ್ಚರಿಕೆ ನೀಡಿದ್ದಾರೆ.

    rahul gandhi devegowda

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv