Tag: Karnataka ElectionResults 2023

  • ಮೈಸೂರು ಜಿಲ್ಲೆಯ ಕ್ಷೇತ್ರಗಳ ಚುನಾವಣಾ ಫಲಿತಾಂಶ

    ಮೈಸೂರು ಜಿಲ್ಲೆಯ ಕ್ಷೇತ್ರಗಳ ಚುನಾವಣಾ ಫಲಿತಾಂಶ

    ಮೈಸೂರು: ಮೈಸೂರು ಜಿಲ್ಲೆಯ 11 ಕ್ಷೇತ್ರಗಳಲ್ಲಿ 8 ಕ್ಷೇತ್ರಗಳನ್ನು ಕಾಂಗ್ರೆಸ್ ಪಾಲಾಗಿದೆ. ಇನ್ನು 2 ಕ್ಷೇತ್ರಗಳಲ್ಲಿ ಜೆಡಿಎಸ್ ಹಾಗೂ 1 ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಗೆದ್ದಿದೆ.

    ಚಾಮರಾಜ, ಪಿರಿಯಾಪಟ್ಟಣ, ಕೆ.ಆರ್ ನಗರ, ಟಿ.ನರಸೀಪುರ, ನರಸಿಂಹರಾಜ, ನಂಜನಗೂಡು, ಎಚ್.ಡಿ ಕೋಟೆ, ವರುಣ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಇನ್ನು ಚಾಮುಂಡೇಶ್ವರಿ, ಹುಣಸೂರು ಕ್ಷೇತ್ರಗಳಲ್ಲಿ ಜೆಡಿಎಸ್‍ಗೆ ಗೆಲುವಾಗಿದೆ. ಕೃಷ್ಣರಾಜ ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಗೆಲುವು ಕಂಡಿದೆ. ಇದನ್ನೂ ಓದಿ: ಶಿವಮೊಗ್ಗ ಜಿಲ್ಲೆಯಲ್ಲಿ 4 ಕಾಂಗ್ರೆಸ್, 3 ಕಡೆ ಬಿಜೆಪಿಗೆ ಗೆಲುವು

    ಹರೀಶ್ ಗೌಡ, ತನ್ವೀರ್ ಸೇಠ್, ಕೆ.ವೆಂಕಟೇಶ್, ಡಾ.ಎಚ್.ಸಿ ಮಹದೇವಪ್ಪ, ದರ್ಶನ್ ಧ್ರುವನಾರಾಯಣ, ಅನಿಲ್ ಚಿಕ್ಕಮಾದು, ಡಿ.ರವಿ ಶಂಕರ್, ಸಿದ್ದರಾಮಯ್ಯ ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದಾರೆ. ಹಾಗೆಯ ಕೃಷ್ಣರಾಜದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಗೆಲುವು ಸಾಧಿಸಿದ್ದಾರೆ. ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ಡಿ.ಹರೀಶ್ ಗೌಡ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡ ಅವರು ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ: ಮಂಡ್ಯ ಜೆಡಿಎಸ್ ಕೋಟೆಯನ್ನು ಪುಡಿಗೈದ ಕಾಂಗ್ರೆಸ್

    ಗೆದ್ದವರು ಯಾರು?
    1. ಕೃಷ್ಣರಾಜ: ಶ್ರೀವತ್ಸ, ಬಿಜೆಪಿ – 73,670 ಮತಗಳು
    2. ಚಾಮರಾಜ: ಹರೀಶ್ ಗೌಡ, ಕಾಂಗ್ರೆಸ್ – 72,931 ಮತಗಳು
    3. ನರಸಿಂಹರಾಜ: ತನ್ವೀರ್ ಸೇಠ್, ಕಾಂಗ್ರೆಸ್ – 71,862 ಮತಗಳು
    4. ಚಾಮುಂಡೇಶ್ವರಿ: ಜಿ.ಟಿ ದೇವೇಗೌಡ, ಜೆಡಿಎಸ್- 1,34,035 ಮತಗಳು
    5. ಪಿರಿಯಾಪಟ್ಟಣ: ಕೆ.ವೆಂಕಟೇಶ್, ಕಾಂಗ್ರೆಸ್ – 85,289 ಮತಗಳು
    6 ಟಿ.ನರಸೀಪುರ: ಡಾ.ಎಚ್.ಸಿ ಮಹದೇವಪ್ಪ, ಕಾಂಗ್ರೆಸ್- 77,884 ಮತಗಳು
    7) ನಂಜನಗೂಡು: ದರ್ಶನ್ ಧ್ರುವನಾರಾಯಣ, ಕಾಂಗ್ರೆಸ್-
    8) ಎಚ್.ಡಿ ಕೋಟೆ: ಅನಿಲ್ ಚಿಕ್ಕಮಾದು, ಕಾಂಗ್ರೆಸ್ – 84,359 ಮತಗಳು
    9) ಕೆ.ಆರ್ ನಗರ: ಡಿ.ರವಿ ಶಂಕರ್, ಕಾಂಗ್ರೆಸ್ – 97,704 ಮತಗಳು
    10) ವರುಣ: ಸಿದ್ದರಾಮಯ್ಯ, ಕಾಂಗ್ರೆಸ್- 1,16,856 ಮತಗಳು
    11) ಹುಣಸೂರು : ಜಿ.ಡಿ ಹರೀಶ್ ಗೌಡ, ಜೆಡಿಎಸ್- 94,666 ಮತಗಳು

  • ಶಿವಮೊಗ್ಗ ಜಿಲ್ಲೆಯಲ್ಲಿ 4 ಕಾಂಗ್ರೆಸ್, 3 ಕಡೆ ಬಿಜೆಪಿಗೆ ಗೆಲುವು

    ಶಿವಮೊಗ್ಗ ಜಿಲ್ಲೆಯಲ್ಲಿ 4 ಕಾಂಗ್ರೆಸ್, 3 ಕಡೆ ಬಿಜೆಪಿಗೆ ಗೆಲುವು

    ಶಿವಮೊಗ್ಗ: ಬಿಎಸ್ ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗದಲ್ಲಿ (Shivamogga) 4 ಕಡೆ ಕಾಂಗ್ರೆಸ್, 3 ಕಡೆ ಬಿಜೆಪಿಗೆ ಗೆಲುವು ಸಾಧಿಸಿದೆ.

    ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ (BJP) ಅಭ್ಯರ್ಥಿ ಆರಗ ಜ್ಞಾನೇಂದ್ರ ಅವರು 84,563 ಮತಗಳನ್ನು ಪಡೆದು ಗೆದ್ದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ 72,322 ಮತ ಪಡೆದು ಸೋತಿದ್ದಾರೆ. ಅರಗ ಅವರ ಗೆಲುವಿನ ಅಂತರ 12,241 ಆಗಿದೆ. ಇದನ್ನೂ ಓದಿ: ಶಿವಣ್ಣ ಪ್ರಚಾರ ಮಾಡಿದವರಲ್ಲಿ ಸೋತಿದ್ದು ಇಬ್ಬರೇ, ಗೆಲುವು ಹೆಚ್ಚು

    ಸೊರಬ ಕ್ಷೇತ್ರದಲ್ಲಿ ಕಾಂಗ್ರೆಸ್ (Congress) ಅಭ್ಯರ್ಥಿ ಮಧು ಬಂಗಾರಪ್ಪ 98,912 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ 54,650 ಮತ ಪಡೆದು ಸೋಲು ಕಂಡಿದ್ದಾರೆ. ಕಾಂಗ್ರೆಸ್‍ನ ಗೆಲುವಿನ ಅಂತರ 44,262 ಮತಗಳಾಗಿವೆ.

    ಭದ್ರಾವತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಸಂಗಮೇಶ್ವರ 65,883 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿಗೌಡ 63,298 ಮತಗಳನ್ನು ಪಡೆದು ಸೋತಿದ್ದಾರೆ. ಗೆಲುವಿನ ಅಂತರ 2,585 ಆಗಿದೆ.

    ಸಾಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ 88,179 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ 72,263 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. ಗೆಲುವಿನ ಅಂತರ 15,916 ಆಗಿದೆ.

    ಶಿಕಾರಿಪುರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ 81,810 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ನಾಗರಾಜ್ ಗೌಡ 70,802 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. ಗೆಲುವಿನ ಅಂತರ 11,008 ಮತಗಳಾಗಿದೆ.

    ಶಿವಮೊಗ್ಗ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಅವರು 95,399 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ.ಯೋಗೀಶ್ ಅವರು 68,071 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. ಗೆಲುವಿನ ಅಂತರ 27,328 ಮತಗಳಾಗಿದೆ.

    ಶಿವಮೊಗ್ಗ ಗ್ರಾಮಾಂತರದಲ್ಲಿ ಜೆಡಿಎಸ್ (JDS) ಅಭ್ಯರ್ಥಿ ಶಾರದ ಪೂರ್ಯನಾಯ್ಕ 85,768 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಅಶೋಕ್ ನಾಯ್ಕ ಅವರು 70,610 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. ಗೆಲುವಿನ ಅಂತರ 15,158 ಮತಗಳಾಗಿವೆ. ಇದನ್ನೂ ಓದಿ: ಬಾಗಲಕೋಟೆಯಲ್ಲಿ 5 ಕಾಂಗ್ರೆಸ್, 2 ಬಿಜೆಪಿ ಗೆಲುವು

  • ಮಂಡ್ಯ ಜೆಡಿಎಸ್ ಕೋಟೆಯನ್ನು ಪುಡಿಗೈದ ಕಾಂಗ್ರೆಸ್

    ಮಂಡ್ಯ ಜೆಡಿಎಸ್ ಕೋಟೆಯನ್ನು ಪುಡಿಗೈದ ಕಾಂಗ್ರೆಸ್

    ಮಂಡ್ಯ: ಕಳೆದ ಬಾರಿ 7ಕ್ಕೆ 7 ಕ್ಷೇತ್ರಗಳನ್ನು ಗೆದ್ದಿದ್ದ ಜೆಡಿಎಸ್ ಈ ಬಾರಿ ಕೇವಲ 1 ಸ್ಥಾನವನ್ನು ಮಾತ್ರ ಗೆದ್ದುಕೊಂಡಿದೆ.

    ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ತನ್ನ ಮತಗಳನ್ನು ವೃದ್ಧಿಸಿಕೊಂಡಿದ್ದು ಕಾಂಗ್ರೆಸ್ ಗೆಲುವಿಗೆ ಸಹಕಾರವಾಗಿದೆ. ಕಾಂಗ್ರೆಸ್ಸಿನ 5 ಮಂಂದಿ ಜೊತೆ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಜಯಗಳಿಸಿದ್ದಾರೆ. ಇದನ್ನೂ ಓದಿ: ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಐದು ಗ್ಯಾರಂಟಿ ಜಾರಿ : ಸಿದ್ದರಾಮಯ್ಯ

    ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಣಿಗ ರವಿಕುಮಾರ್ ಗೌಡ 60,845 ಮತಗಳನ್ನು ಗಳಿಸಿ ಜಯಗಳಿಸಿದ್ದಾರೆ. ಜೆಡಿಎಸ್ ಬಿ.ಆರ್ ರಾಮಚಂದ್ರ ಅವರು 58,996 ಮತಗಳನ್ನು ಗಳಿಸಿ ಸೋಲು ಕಂಡರು. ಬಿಜೆಪಿ ಅಶೋಕ್ ಜಯರಾಂ 30,240 ಮತ ಗಳಿಸಿ ಪೈಪೋಟಿ ನೀಡಿದ್ದಾರೆ. ಗಣಿಗ ರವಿಕುಮಾರ್ ಅವರು 1,849 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

    ಕೆ.ಆರ್.ಪೇಟೆ ಜೆಡಿಎಸ್ ಅಭ್ಯರ್ಥಿ ಹೆಚ್.ಟಿ ಮಂಜು ಅವರು 79,844 ಮತಗಳನ್ನು ಪಡೆದು ಜಯ ಗಳಿಸಿದ್ದಾರೆ. ಕೆಆರ್ ಪೇಟೆ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್ ದೇವರಾಜ್ ಅವರು 57,939 ಮತಗಳನ್ನು ಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಕೆಸಿ ನಾರಾಯಣ ಗೌಡ 37,793 ಮತಗಳಿಸಿದ್ದಾರೆ. 21,905 ಮತಗಳ ಅಂತರದಲ್ಲಿ ಹೆಚ್ ಟಿ ಮಂಜು ಗೆಲುವು ಸಾಧಿಸಿದ್ದಾರೆ.

    ನಾಗಮಂಗಲ: ಕಾಂಗ್ರೆಸ್ ಅಭ್ಯರ್ಥಿ ಚಲುವರಾಯಸ್ವಾಮಿ 89,801 ಮತಗಳಿಸಿ ಜಯ ಸಾಧಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಸುರೇಶ್ ಗೌಡ ಅವರು 85,688 ಮತಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಸುಧಾ ಶಿವರಾಮ್ 7,683 ಮತ ಗಳಿಸಿದ್ದಾರೆ. 4,113 ಮತಗಳ ಅಂತರದಲ್ಲಿ ಚೆಲುವರಾಯಸ್ವಾಮಿ ಗೆಲುವು ಸಾಧಿಸಿದ್ದಾರೆ.

    ಮೇಲುಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ರೈತ ಸಂಘದ ದರ್ಶನ್ ಪುಟ್ಟಣ್ಣಯ್ಯ 90,387 ಮತಗಳಿಸಿ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಸಿ.ಎಸ್ ಪುಟ್ಟರಾಜು ಅವರು 79,424 ಮತಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಡಾ.ಇಂದ್ರೇಶ್ 6,378 ಮತಗಳಿಸಿದ್ದಾರೆ. 10,963 ಮತಗಳ ಅಂತರದಲ್ಲಿ ದರ್ಶನ್ ಪುಟ್ಟಣ್ಣಯ್ಯ ಗೆಲುವು ಸಾಧಿಸಿದ್ದಾರೆ.

    ಮಳವಳ್ಳಿ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಿಎಂ ನರೇಂದ್ರ ಸ್ವಾಮಿ ಗೆಲುವು ಸಾಧಿಸಿದ್ದಾರೆ. ಇವರಿಗೆ ಜೆಡಿಎಸ್ ಅಭ್ಯರ್ಥಿ ಡಾ.ಕೆ ಅನ್ನದಾನಿ ಪೈಪೋಟಿ ನೀಡಿದ್ದಾರೆ.

    ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಬಂಡಿಸಿದ್ದೇಗೌಡ 72,234 ಮತಗಳಿಸಿ ಜಯ ಗಳಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ಅವರು 61,273 ಮತಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಸಚ್ಚಿದಾನಂದ ಅವರು 42,079 ಮತಗಳಿಸಿದ್ದಾರೆ. ಕಾಂಗ್ರೆಸ್ 10,961 ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ: ಚಾಮರಾಜನಗರ ಜಿಲ್ಲೆಯಲ್ಲಿ ಯಾರಿಗೆ ಗೆಲುವು? ಯಾರಿಗೆ ಸೋಲು?